POLICE BHAVAN KALABURAGI

POLICE BHAVAN KALABURAGI

28 August 2011

GULBARGA DISTRICT REPORTED CRIMES

ಅಪಘಾತ ಪ್ರಕರಣ :-

ಜೇವರ್ಗಿ ಠಾಣೆ :ಶ್ರೀ ಮಲ್ಲಣ್ಣಗೌಡ ತಂದೆ ಗುರಣ್ಣಗೌಡ ಮಾಲಿ ಪಾಟೀಲ ಸಾ: ಸಾಥಖೇಡ ರವರು, ನಾನು ಮತ್ತು ಇತರರೂ ಕೂಡಿ ಜೇವರ್ಗಿಯಿಂದ ಬಸ್ ನಂಬರ ಕೆ.ಎ. 32 ಎಫ 1310 ನೇದ್ದರಲ್ಲಿ ನಮ್ಮೂರಿಗೆ ಹೋಗುತ್ತಿರುವಾಗ 3-00 ಪಿಎಂಕ್ಕೆ ಕೇಲ್ಲೂರ ದಾಟಿ ಬ್ರಡ್ಸ ಹೀಲ್ ಶಾಲೆಯ ಕ್ರಾಸ ಹತ್ತಿರ ಎದುರುನಿಂದ ಇನ್ನೋಂದು ಬಸ ನಂಬರ ಕೆ.ಎ. 32 ಎಫ 1382 ನೇದ್ದರ ಚಾಲಕ ಈರಪ್ಪ ತಂದೆ ಬಸಪ್ಪನು ತನ್ನ ಬಸ್ಸನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಾವು ಹೊರಟ್ಟಿದ ಬಸ್ಸಿಗೆ ಜೊರಾಗಿ ಅಪಘಾತ ಪಡಿಸಿದ ಪರಿಣಾಮ ಬಸ್ಸಿನಲ್ಲಿದ್ದ ನನಗೆ ಮತ್ತು ಇನ್ನೂ ಅನೇಕ ಜನರಿಗೆ ಹಾಗೂ ಎರಡು ಬಸ್ಸಿನ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಸಾದಾ ಮತ್ತು ಭಾರಿಗಾಯಗಳಾಗಿದ್ದು ನಮ್ಮ ಬಸ್ಸಿನಲ್ಲಿಯೇ ಇದ್ದ ನಮ್ಮೂರ ಗೌರಮ್ಮ ಇವಳೂ ಭಾರಿ ಗಾಯ ಹೊಂದಿ ಸ್ಥಳದಲ್ಲಿಯೇ ಸತ್ತಿದ್ದು ನಮ್ಮ ಬಸ್ಸಿಗೆ ಡಿಕ್ಕಿ ಹೊಡೆದ ಬಸ್ಸಿನ ಚಾಲಕ ಈರಪ್ಪನಿಗೆ ಹೆಚ್ಚಿನ ಉಪಚಾರಕ್ಕಾಗಿ ಗುಲಬರ್ಗಾ ಸರಕಾರಿ ಅಸ್ಪತ್ತೆಗೆ ಒಯ್ಯದಾಗ ಆಸ್ಪತ್ರೆಯಲ್ಲಿ ಸತ್ತಿರುತ್ತಾನೆ. ಕಾರಣ ಆತನ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

27 August 2011

GULBARGA DIST REPORTED CRIME

ಯು.ಡಿ.,ಅರ್. ಪ್ರಕರಣ :

ಗ್ರಾಮೀಣ ಠಾಣೆ : ಶ್ರೀ ಬಾಬುರಾವ ತಂದೆ ಬಂಡೆಪ್ಪ ಚೌಡಶೆಟ್ಟಿ ಸಾ: ಅವರಾದ (ಬಿ) ತಾ: ಗುಲಬರ್ಗಾ ರವರು ನಮ್ಮ ಊರಿನ ಬಸ ನಿಲ್ದಾಣದಲ್ಲಿ ಅಪರಿಚಿತ ಮನುಷ್ಯ ವಯಸ್ಸು ಸುಮಾರು 50 ರಿಂದ 55, ಎತ್ತರ 5,6 ಇಂಚ ಸಾದಾಗಪ್ಪು ಬಣ್ಣ ಕೋಲು ಮುಖ, ಉದ್ದ ಮೂಗು ಬಡಕಲು ಶರೀರ, ಮುಖದ ಮೇಲೆ ಬಿಳಿ ದಾಡಿ ಹಾಗು ಕಪ್ಪು ಮಿಶ್ರಿತ ಕೂದಲು, ಒಂದು ನೀಲಿ ಬಣ್ಣದ್ದು ಶರ್ಟ, ಬಿಳಿ ಬಣ್ಣದ ಪೈಜಾಮ್ ಒಂದು ಕೆಂಪು ಬಣ್ಣದ ಬ್ಯಾಗ್ ಅದರ ಮೇಲೆ ಪಿಒಮೊ ಅಂತಾ ಇಂಗ್ಲೀಷನಲ್ಲಿ ಬರೆದಿರುತ್ತದೆ. ಈ ವ್ಯಕ್ತಿಯು ಮಲಗಿದ್ದಲ್ಲಿಯೆ ಆತನಿಗೆ ಇದ್ದ ಅಸ್ತಮಾ ಕಾಯಿಲೆಯೋ ಅಥವಾ ಇನ್ನಾವುದೂ ಕಾಯಿಲೆಯಿಂದ ಬಳಲುತ್ತಾ ಮಲಗಿದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

26 August 2011

GULBARGA DIST REPORTED CRIME

ಮಟಾಕ ಪ್ರಕರಣ :

ಫರಹತಾಬಾದ ಠಾಣೆ: ದಿನಾಂಕ: 26/8/2011 ರಂದು ಬೆಳಗ್ಗೆ  ಸುಮಾರಿಗೆ ಪಿರೋಜಾಬಾದ ಗ್ರಾಮದಲ್ಲಿ ಮಟಕಾ ಬರೆದುಕೊಳ್ಳುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಶ್ರೀ ಪವನ ನೆಜ್ಜೂರ ಡಿ.ಎಸ್.ಪಿ (ಪ್ರೋ) ರವರು ಹಾಗೂ ಸಿಬ್ಬಂದಿಯವರಾದ ಬಿ. ಆರ್ ರಾಠೋಡ ಪಿ,ಎಸ್,ಐ,  ದೇವಿಂದ್ರಪ್ಪಾ, ಜಮೀಲ ಅಹ್ಮದ ಪಿಸಿ ರವರು ಕೂಡಿಕೊಂಡು ಫಿರೋಜಾಬಾದ ಗ್ರಾಮಕ್ಕೆ ಹೋಗಿ ರಾಮಲಿಂಗ ದೇವರ ಗುಡಿಯ ಪಕ್ಕದಲ್ಲಿರುವ ಸಾಹೇಬಗೌಡ ಇವರ ಕಿರಾಣಿ ಅಂಗಡಿಯ ಮುಂದೆ ಸಾಹೇಬಗೌಡ ತಂದೆ ಶಿವಲಿಂಗಪ್ಪಾ ಮಮ್ಮಾಣಿ ಮತ್ತು ಗುಂಡಪ್ಪಾ ತಂದೆ ಬಸವರಾಜ ಶಿರೂರ ರವರು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನು ದೃಡಪಡಿಸಿಕೊಂಡು ಅವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ನಗದು ಹಣ 8225=00 ರೂ,  ಎರಡು ಕಾಲ್ಯೂಕೇಟರ,   ಮಟಕಾ ಚೀಟಿಗಳು, ಮೊಬೈಯಲ್,  ಜಪ್ತಿ ಪಡಿಸಿಕೊಂಡಿದ್ದರಿಂದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .