POLICE BHAVAN KALABURAGI

POLICE BHAVAN KALABURAGI

05 August 2011

GULBARGA DISTRICT REPORTED CRIMES

ಕಳ್ಳತನ ಪ್ರಕರಣ:

ಸ್ಟೇಷನ ಬಜಾರ ಠಾಣೆ : ಶ್ರೀ ರುಕ್ಮೊದ್ದಿನ ತಂದೆ ಉಸ್ಮಾನ ಸಾಬ ಗುತ್ತೆದಾರ ಸಾ|| ರೆಹಮತ ನಗರ ಗುಲಬರ್ಗಾ ರವರು ನಾನು ದಿನಾಂಕ: 03.08.2011 ರಂದು ಸಾಯಂಕಾಲಕ್ಕೆ ನಮಗೆ ಸೇರಿದ 6 ಟಿಪ್ಪರಗಳನ್ನು ಶಕ್ತಿ ಪೇಟ್ರೊ ಪಂಪನಲ್ಲಿ ನಿಲ್ಲಿಸಿದ್ದು ಮರು ದಿವಸ ಬೆಳಗ್ಗೆ ಲಾರಿಯ ಮೊದಲನೆ ಚಾಲಕ ಎಕ್ಬಾಲ ಸಿತನೂರ ಇತನು ಫೋನ ಮೂಲಕ ಕೆಎ 32 ಬಿ 1244 ಕೆಂಪು ಬಣ್ಣದು ನಿಮ್ಮ ಟಿಪ್ಪರ ಕೇಂದ್ರ ಕಾರಗೃಹ ಹಿಂದುಗಡೆ ಸಿತನೂರ ಗ್ರಾಮದ ರಸ್ತೆ ಮೇಲೆ ನಾಲ್ಕು ಕಡೆಯ ಗಾಲಿಗಳು ಯಾರೋ ಬಿಚ್ಚಿಕೊಂಡು ಹೋಗಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಹೋಗಿ ನೋಡಲಾಗಿ 7 ಡಿಸ್ಕ, 7 ಟೈಯರ, 1 ಬ್ಯಾಟ್ರಿ, 2 ಜಾಕ, ಮತ್ತು ಪಾನ ಸೆಟ್ ಒಟ್ಟು ಅಕಿ 2,09,5000/-ರೂ ಬೆಲೆ ಬಾಳವುಗಳು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DISTRICT REPORTED CRIMES

ಕಳ್ಳತನ ಪ್ರಕರಣ:

ಸ್ಟೇಶನ ಬಜಾರ ಠಾಣೆ : ಶ್ರೀ. ಪಿ.ಕೆ. ಹರವಾಳಕರ್ ಸಾ|| ಎನ.ಜಿ.ಓ ಕಾಲೋನಿ ಗುಲಬರ್ಗಾ ರವರು ನಾನು ದಿನಾಂಕ 29.06.2011 ರಂದು ಮಧ್ಯಾನ 1400 ಗಂಟೆಯಿಂದ 1600 ಗಂಟೆ ಅವಧಿಯಲ್ಲಿ ನಮ್ಮ ಮನೆಯ ಕೃಷ್ಣಾ ಕುಂಜ ಪ್ಲಾಟ ನಂ 5/1 ನೇದ್ದರಲ್ಲಿ ಸ್ಕೂಟಿ ನಂ ಕೆ ಎ 32 ಎಲ್. 3378 ನೇದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದರೋಡೆ ಪ್ರಕರಣ:
ಅಶೋಕ ನಗರ ಠಾಣೆ :
ಶ್ರೀ ಅಪ್ಪಾರಾಯ ತಂದೆ ಗುರುಸಿದ್ದ ಸಾ: ಆಳಂದ ಚೆಕ್ಕಪೋಸ್ಟ ರವರು ನಾನು ದಿನಾಂಕ 01/08/2011 ರಂದು ರಾತ್ರಿ 9 ಗಂಟೆಗೆ ಸಾಯಿ ಶಿವಶಕ್ತಿ ಪೈನಾನ್ಸದಿಂದ ಕೆಳಗಡೆ ಇಳಿದು ಬರುತ್ತಿದ್ದಾಗ ಅಪರಿಚಿತ ವ್ಯಕ್ತಿಗಳು ಅಂದಾಜು ಸುಮಾರು 25 ರಿಂದ 30 ವರ್ಷ ವಯಸ್ಸಿನವರು ನನಗೆ ಚಾಕುವಿನಿಂದ ಹೊಡೆದು ಗಾಯಗೊಳಿಸಿ ನನ್ನಲಿದ್ದ ಒಟ್ಟು 7 ರಿಂದ 8 ಸಾವಿರ ಬ್ಯಾಗನ್ನು ಕಸಿದುಕೊಂಡು ಓಡಿ ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ:

ಚಿಂಚೋಳಿ ಪೊಲೀಸ ಠಾಣೆ: ಶ್ರೀಮತಿ ಸೇವಂತಾಬಾಯಿ ಗಂಡ ಸುರೇಶ ರಾಠೋಡ ಸಾ: ಇದ್ದಲ್ ಮೂಕತಾಂಡಾ ರವರು ನನ್ನ ಗಂಡನಾದ ಸುರೇಶ ರಾಠೋಡನಿಗು ನಮ್ಮ ಓಣಿಯ ಸರಸ್ವತಿ ಗಂಡ ಚಿಂಯ್ಯಾ @ ಕುಮಾರಸಿಂಗ್ ಎಂಬೂವವಳಿಗೂ ಅನೈತಿಕ ಸಂಬಂದವಿತ್ತು. ಆಗ ನಾನು ಅವರಿಬ್ಬರಿಗೂ ಬುದ್ದಿವಾದ ಹೇಳಿದ ಮೇಲೆ ಇಬ್ಬರೂ ಪ್ರತ್ಯೆಕವಾಗಿ ಅಂತಾ ಗೋಜಿಗೆ ಮತ್ತೆ ಹೋಗಿರಲಿಲ್ಲಾ ದಿನಾಂಕ: 02-08-2011 ರಂದು ಮದ್ಯಾಹ್ನ ಸುಮಾರಿಗೆ ಧನಕರುಗಳಿಗೆ ಉಲ್ಲು ತರಲೆಂದು ನಮ್ಮ ಓಣಿಯವರೆಯಾದ ತಾವರೂ ನಾಯಕ ಹೋಲಕ್ಕೆ ಹೋಗಿದ್ದೆನು ನಾನು ಹುಲ್ಲು ಮಾಡಿತ್ತಿರುವಾಗ ನನ್ನ ಗಂಡನಾದ ಸುರೇಶ ರಾಠೋಡ ಮತ್ತು ಸರಸ್ವತಿ ಗಂಡ ಚಿಂಯ್ಯಾ @ ಕುಮಾರಸಿಂಗ್ ಇಬ್ಬರೂ ಮಾತನಾಡುವುದನ್ನು ನೋಡಿ ಅವರಲ್ಲಿಗೆ ಹೋಗಿ ಅವರಿಗೆ ಎನು ಮಾತನಾಡುತ್ತಿರುವಿರಿ ಅಂತಾ ಕೇಳಿದ್ದಕ್ಕೆ  ಸರಸ್ವತಿಯು ಅವಾಚ್ಯವಾಗಿ ಬೈದು ಹೊಡೆದು ಗುಪ್ತ ಗಾಯ ಪಡಿಸಿದಳು ಆಗ ಅಲ್ಲಿಯೇ ಇದ್ದ ನನ್ನ ಗಂಡನೂ ಜಗಳ ಬಿಡುಸುತ್ತಿದ್ದನು. ಅಲ್ಲಯೇ ಬಾಜು ಹೋಲದಲ್ಲಿದ್ದ ಸರಸ್ವತಿಯ ಗಂಡನು ಬಂದು ಕಟ್ಟಿಗೆಯಿಂದ ನನ್ನ ಹಣೆಯ ಮೆಲೆ ಹೊಡೆದು ರಕ್ತ ಗಾಯ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ:
ಮಾಡಬೂಳ ಠಾಣೆ
: ಬಸವರಾಜ ತಂದೆ ಹಣಮಂತರಾವ್ ಬಿರಾದರ ಸಾ|| ಸಂಗಾವಿ ರವರು ನಾನು ನನ್ನ ಮನೆಯ ಮುಂದೆ ಹಾಸಿಸುವದಕ್ಕೆ ಪರ್ಸಿ ತಂದು ಇಟ್ಟಿದ್ದು. ಇಂದು ಸಂಜೆ 6.30 ಗಂಟೆ ಸುಮಾರಿಗೆ ಫಿರ್ಯಾದಿ ಮನೆಯಲ್ಲಿರುವಾಗ ಸೈಯದ ಪಟೇಲ್ ತಂದೆ ವಜೀರ ಪಟೇಲ್ ಮತ್ತು ಇನ್ನೊಬ್ಬ ಸಾ:ಇಬ್ಬರು ಸಂಗಾವಿ ಗ್ರಾಮ, ತಾ:ಚಿತ್ತಾಪೂರ ರವರು ಬಂದು ಫರ್ಸಿ ಕಲ್ಲು ತೆಗೆದುಕೊಂಡು ಹೋಗುವಾಗ ಯ್ಯಾಕೆ ನಮ್ಮ ಫರ್ಸಿಗಳು ತೆಗೆದುಕೊಂಡು ಹೋಗುತ್ತಿರಿ ಅಂತ ಕೇಳಿದ್ದಕ್ಕೆ ಅವಾಚ್ಯವಾಗಿ ಬೈದು ಕೈಯಿಂದ ಹಾಗೂ ಕಲ್ಲಿನಿಂದ ಹೊಡೆದು ರಕ್ತಗಾಯ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ:

ಗ್ರಾಮೀಣ ಠಾಣೆ: ಶ್ರೀ ಮಲ್ಲಿಕಾರ್ಜುನ ತಂದೆ ರುಕ್ಕಯ್ಯ ತಾಂಡೂರಕರ ಸಾ:ಭೋವಿ ಗಲ್ಲಿ ಗುಲಬರ್ಗಾ ರವರು ನಾನು ದಿನಾಂಕ 4-8-11ರಂದು ನನ್ನ ವೈಯಕ್ತಿಕ ಕೆಲಸ ಕುರಿತು ಹೊಂಡಾ ಆಕ್ಷೀವ್ ಕೆಎ 32 ಅರ್ 6608 ಮೇಲೆ ಕುಳಿತು ಆಳಂದ ಚೆಕ್ಕ ಪೋಸ್ಟ ಹತ್ತಿರ ಹೋಗಿ ಕೆಲಸ ಮುಗಿಸಿ ಕೊಂಡು ಆಳಂದ ಚೆಕ್ಕ ಪೋಸ್ಟದಿಂದ ಮನೆಗೆ ಬರುತ್ತಿರುವಾಗ ಕಾಕಡೆ ಚೌಕ ರಿಂಗ ರೋಡ ಸರ್ಕಲದಲ್ಲಿ ಹಿಂದಿನಿಂದ ಮೋಟಾರ ಸೈಕಲ ನಂ ಕೆಎ 32 ಇ 1804 ನೇದ್ದರ ಸವಾರ ಅತೀ ವೇಗ ಮತ್ತು ನಿರ್ಲಕ್ಷತನದಿಂದ ನಡೆಸುತ್ತಾ ಬಂದು ಡಿಕ್ಕಿ ಹೊಡೆದು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

04 August 2011

GULBARGA DISTRICT REPORTED CRIMES


ಮಹಿಳೆ ಮತ್ತು 3 ವರ್ಷದ ಮಗು ಕಾಣೆಯಾದ ಬಗ್ಗೆ :

ಯಡ್ರಾಮಿ ಠಾಣೆ :ದೇವಿಂದ್ರಪ್ಪಾ ತಂದೆ ದೊಡ್ಡ ಶಂಕರಗೌಡ ಬಿರಾದಾರ ಸಾ|| ನಾಗರಳ್ಲಿ ತಾ|| ಜೇವರ್ಗಿ ರವರು ದಿನಾಂಕ: 28-07-2011 ರಂದು ಮಧ್ಯಾಹ್ನ ಶ್ರೀಮತಿ ಬಸಮ್ಮ @ ಭಾಗ್ಯ ಗಂಡ ಶರಣಗೌಡ ಹುಂಡೆಕಾರ ಮತ್ತು 3 ವರ್ಷದ ಮಗು ವಿನೋದ ಸಾ| ಆಲೂರ ಹಾ||ವ|| ನಾಗರಳ್ಳಿ ತಾ|| ಜೇವಗಿ ರವರು ಮನೆಯಿಂದ ಹೆಳದೇ ಕೇಳದೇ ಮನೆ ಬಿಟ್ಟು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದ ಮಹಿಳೆಯು 5.1 ಇಂಚ್ ಎತ್ತರ ಸಾದರಣ ಮೈಕಟ್ಟು, ಕಪ್ಪು ಮುಖ, ಕೆಂಪು ಬಣ್ನದ ಸೀರೆ ಮತ್ತು ಕೆಂಪು ಬೌಜ್ಲ ಉಟ್ಟುಕೊಂಡಿದ್ದು ಕನ್ನಡ ಭಾಷೆ ಬಲ್ಲವಳಾಗಿರುತ್ತಾಳೆ ಹಾಗೆ ಜೋತೆಯಲ್ಲಿ 3 ವರ್ಷದ ಮಗು ವಿನೋದ ಇತನು 2.5 ಅಡಿ ಎತ್ತರ, ಉದ್ದನೆಯ ಮುಖ, ಸಾದರಣ ಮೈಕಟ್ಟು ಇರುತ್ತದೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಯಡ್ರಾಮಿ ಠಾಣೆ 08442- 226233 ಅಥವಾ ಗುಲಬರ್ಗಾ ಕಂಟ್ರೊಲ್ ರೂಮ್ ಗೆ 100 ಅಥವಾ 08472-263604 ಗೆ ಸಂಪರ್ಕಿಸಲು ಕೋರಲಾಗಿದೆ .

ಕಳ್ಳತನ ಪ್ರಕರಣ:

ಆಳಂದ ಠಾಣೆ :ಶ್ರೀ ಗುಂಡೆರಾವ ತಂದೆ ನರಹರಿರಾವ ಕುಲಕರ್ಣಿ ಸಾ|| ಬಿ.ಎಸ.ಎನ್.ಎಲ್ ಕಛೇರಿ ಆಳಂದ ರವರು ನಮ್ಮ ಕೊಡಲ್ ಹಂಗರಗಾ ಗ್ರಾಮದ ಸಮೀಪದಲ್ಲಿ ಇದ್ದ ಬಿ.ಎಸ.ಎನಲ್ ಎಲ್ ಇಲಾಖೆಗೆ ಸೇರಿದ ಬಿ.ಎಸ.ಎನ. ಎಲ್ ಟವರ ಕೇಬಲ ವೈರ್ 40 ಮೀಟರ ಉದ್ದದ 6 ಪೀಸಗಳು ಅ|| ಕಿ|| 1,08000-00 ರೂಪಾಯಿಗಳದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣ:

ಕಮಲಾಪೂರ ಪೊಲೀಸ ಠಾಣೆ:ಶ್ರೀ ರವಿ ತಂದೆ ಶಂಕರ ತಳವಾರ ಸಾಃ ಡೊಂಗರಗಾಂವ ತಾಃಜಿಃ ಗುಲಬರ್ಗಾ ಹಾ:ವ:ಪುಣೆ ರವರು ನಾನು, ಮೋಹನಚಂದ್ರ ಮತ್ತು ಶಿವಕುಮಾರ ಎಲ್ಲರೂ ಕೂಡಿಕೊಂಡು ನಮ್ಮ ಓಣಿ ಅಂಬೇಡ್ಕರ ಕಟ್ಟೆಯ ಮೇಲೆ ಮಾತನಾಡುತ್ತಾ ಕುಳಿತಾಗ ಗುಟ್ಕಾ ಬೇಕಾಗಿದೆ ತೆಗೆದುಕೊಂಡು ಬರೋಣಾ ಅಂತಾ ಮಾತನಾಡುತ್ತಾ ನಮ್ಮೂರಿನ ಡೊಂಗರದೇವಿ ಗುಡಿ ಹತ್ತಿರ ಇರುವ ಸಂಗಪ್ಪಾ ಇತನ ಕಿರಾಣಿ ಅಂಗಡಿಗೆ ಹೋಗಿ ನಾವು ಗುಟ್ಕಾ ಕೇಳುತ್ತಿರುವಾಗ ಅಂಗಡಿಯಲ್ಲಿದ್ದ ಸೂರ್ಯಕಾಂತ, ಕೇದಾರ ವಡ್ಡನಕೇರಿ, ಇಬ್ಬರು ಕೂಡಿ, ವಿನಾಃಕಾರಣ ಜಾತಿ ಎತ್ತಿ ಅವಾಚ್ಯವಾಗಿ ಬೈದು ಮಲ್ಲಿಕಾರ್ಜುನ ತಂದೆ ಸಂಗಪ್ಪಾ ಇತನು ತನ್ನ ಅಂಗಡಿಯಿಂದ ಹೊರಗೆ ಬಂದು ನನ್ನ ಎಡ ಭುಜದ ಮೇಲೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ ಮೋಹನ ಮತ್ತು ಶಿವಕುಮಾರ ಇವರು ಬಿಡಿಸಲು ಬಂದಾಗ ಸಂತೋಷ ತಂದೆ ಕಾಶಪ್ಪಾ ಒಡ್ಡನಕೇರಿ ಮತ್ತು ರಾಜಕುಮಾರ ತಂದೆ ಅಪ್ಪಣ್ಣಾ ಇಬ್ಬರು ಕೂಡಿ ಜ್ಯಾತಿ ನಿಂದನೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು ಕಟ್ಟಿಗೆಯಿಂದ ಹೊಡೆದು ರಕ್ತಗಾಯ ಗುಪ್ತಗಾಯ ಪಡಿಸಿದನು. ಶಿವಕುಮಾರ ಇತನಿಗೆ ಸಂಗಪ್ಪಾ ತಂದೆ ನಾಗಶೆಟ್ಟೆಪ್ಪಾ ಮತ್ತು ಸೂರ್ಯಕಾಂತ ಇತನು ರಕ್ತಗಾಯ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.