POLICE BHAVAN KALABURAGI

POLICE BHAVAN KALABURAGI

11 July 2011

GULBARGA DIST REPORTED CRIME

ಜೂಜಾಟ ಪ್ರಕರಣ :

ಬ್ರಹ್ಮಪೂರ ಠಾಣೆ :
ಸರ್ಕಾರ ತರ್ಪೆಯಾಗಿ ಶ್ರೀ ಸತ್ಯನಾರಾಯಣ ಪಿ.ಎಸ್.ಐ (ಕಾ&ಸು) ಬ್ರಹ್ಮಪೂರ ಪೊಲೀಸ್ ಠಾಣೆ ರವರು ನಾನು ದಿನಾಂಕ: 10/07/2011 ರಂದು ರಾತ್ರಿ 2200 ಗಂಟೆಗೆ ಕರ್ತವ್ಯದಲ್ಲಿದ್ದಾಗ ನಗರದ ಸಿ.ಟಿ ಬಸ ನಿಲ್ದಾಣದ ಹತ್ತಿರ ಇರುವ ಎನ್.ಜಿ.ಓ ಕ್ಲಬ್ ರೂಮಿನ ಎದರುಗಡೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಲೈಟಿನ ಬೆಳಕಿನಲ್ಲಿ ಅಂದರ ಬಾಹರ ಜೂಜಾಟ ಆಡುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ನಾನು ಮತ್ತು ಮಾನ್ಯ ರವಿ ಐ.ಪಿ.ಎಸ್ ಪ್ರೋಪೇಷನರ್ . ವೀರೇಶ ಪಿ.ಐ, ಸುಧಾಕರ ಪಿ.ಎಸ್.ಐ, ಗುರುಶರಣ ಹೆಚ್.ಸಿ, ಭದ್ರಪ್ಪಾ ಹೆಚ್.ಸಿ ಚೌಕ ಠಾಣೆ ಹಾಗು ನಮ್ಮ ಬ್ರಹ್ಮಪೂರ ಠಾಣೆಯ ಸಿಬ್ಬಂದಿಯವರಾದ ತುಕಾರಾಮ ಸಿಪಿಸಿ, ಶ್ರೀಕಾಂತ ಸಿಪಿಸಿ, ಶಿವಶರಣಪ್ಪ ಸಿಪಿಸಿ, ಸುಭಾಷ ಸಿಪಿಸಿ ಮಹಾಂತೇಶ ಸಿಪಿಸಿ, ರವರು ಬ್ರಹ್ಮಪೂರ ಠಾಣೆ ರವರು ಹಾಗು ಇಬ್ಬರು ಪಂಚರನ್ನು ಕರೆದುಕೊಂಡು ಸದರಿ ಸ್ಥಳಕ್ಕೆ ಬಂದು ನೋಡಲಾಗಿ ಸದರಿ ಸ್ಥಳದಲ್ಲಿ ಜೂಜಾಡುತ್ತಿದ್ದ 1)ಅಮೃತ ತಂದೆ ಕಾಳಪ್ಪ ಮಳ್ಳೆನವರ ಸಾ|| ಜಗತ್ ಗುಲಬರ್ಗಾ 2) ಮಹ್ಮದ ಪಾಷಾ ತಂದೆ ಮಹ್ಮದ ಅಬ್ಬಾಸ ಅಲಿ ಸಾ|| ಫೀಲ್ಟರಬೇಡ ಗುಲಬರ್ಗಾ 3) ಮಾಣಿಕರಾವ ತಂದೆ ನಾಗಪ್ಪ ಕಣಜಿ ಸಾ|| ಹೌಸಿಂಗಬೋರ್ಡ ಕಾಲೋನಿ ಗುಲಬರ್ಗಾ 4) ಶಿವಶರಣಪ್ಪ ತಂದೆ ದೌಲತರಾಯ ಕಕ್ಕಳಬೆಲಿಸಾ|| ಶಾಂತಿ ನಗರ ಗುಲಬರ್ಗಾ 5) ಹಣಮಂತ ತಂದೆ ಸೈಬಣ್ಣ ಮಟ್ಟಿಸಾ|| ಜಯನಗರ ಗುಲಬರ್ಗಾ 6) ರಾಜಶೇಖರ ತಂದೆ ಬಸಲಿಂಗಪ್ಪ ಪಾಟೀಲಸಾ|| ಜೇವರ್ಗಿ ಕಾಲೋನಿ ಗುಲಬರ್ಗಾ 7) ಸುರೇಶ ತಂದೆ ರಾಮಚಂದ್ರ ಕುಲಕರ್ಣಿನ್ಯೂರಾಘವೇಂದ್ರ ಕಾಲೋನಿ ಗುಲಬರ್ಗಾ 8) ರೇವಣಸಿದ್ದಯ್ಯಾ ತಂದೆ ಬಸವಣಯ್ಯಾ ಪುರಾಣಿಕಸಾ|| ಬ್ರಹ್ಮಪೂರ ಗುಲಬರ್ಗಾ 9) ಪ್ರಕಾಶ ತಂದೆ ಅಯ್ಯಣ್ಣ ಬೇಕನಾಳ ಸಾ|| ಜಯ ನಗರ ಗುಲಬರ್ಗಾ 10) ಸಿದ್ದಣ್ಣ ತಂದೆ ಮರೆಪ್ಪ ಹಾಲಭಾವಿ ಸಾ|| ಸಿ.ಐ.ಬಿ. ಕಾಲೋನಿ ಗುಲಬರ್ಗಾ 11) ಶಿವಶರಣಪ್ಪ ತಂದೆ ಕಾಶಪ್ಪ ರಾಜೆ ಸಾ|| ಆರ್ದಶನಗರ ಗುಲಬರ್ಗಾ 12) ಸಿದ್ರಾಮಯ್ಯಾ ತಂದೆ ರೇವಣಸಿದಯ್ಯಾ ಮಠಪತಿ ಸಾ|| ಬೆಟ್ಟಜೇವರ್ಗಿತಾ|| ಆಳಂದ 13) ಪ್ರಕಾಶ ತಂದೆ ಶರಣಪ್ಪ ಜಾಂತಿ ಸಾ|| ಶಾಹಾ ಬಜಾರ ಗುಲಬರ್ಗಾ 14) ಭಾಗಣ್ಣ ತಂದೆ ಸಿದ್ದಣ್ಣ ಯಳಮೇಲ್ ಸಾ|| ಬ್ರಹ್ಮಪೂರ ಗುಲಬರ್ಗಾ 15) ಮಲ್ಲಪ್ಪ ತಂದೆ ಬಸಪ್ಪ ಪಾಟೀಲಸಾ|| ಶಾಸ್ತ್ರಿನಗರ ಗುಲಬರ್ಗಾ 16) ಸಿದ್ರಾಮಪ್ಪ ತಂದೆ ಅಯ್ಯಪ್ಪ ನಡುವಿನಮನಿ ಸಾ|| ಸಿ.ಐ.ಬಿ ಕಾಲೋನಿ ಗುಲಬರ್ಗಾ 17) ಪ್ರಕಾಶ ತಂದೆ ಭೀಮರಾಯ ಬಿರಾದಾರಸಾ|| ಪ್ರಶಾಂತ ನಗರ ಗುಲಬರ್ಗಾ 18) ಚಂದ್ರಶೇಖರ ತಂದೆ ಬಸವರಾಜ ಪಾಟೀಲ ಸಾ|| ಶಾಹಾ ಬಜಾರ ಗುಲಬರ್ಗಾ 19) ಶರಣಪ್ಪ ತಂದೆ ಹಣಮಂತ ಅಂತರಗಂಗೆ ಸಾ|| ಜಗತ್ ಗುಲಬರ್ಗಾ
20) ಶರಣಪ್ಪ ತಂದೆ ತಿಪ್ಪಣ್ಣ ಅಚಕನೂರ ಸಾ|| ವಸಂತ ನಗರ ಗುಲಬರ್ಗಾ ರವರೆಲ್ಲರನ್ನು ವಶಕ್ಕೆ ತೆಗೆದುಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಿಕೊಳ್ಳಲಾಗಿದೆ.

GULBARGA DIST REPORTED CRIMES

ಕಳ್ಳತನ ಪ್ರಕರಣ :

ಅಶೋಕ ನಗರ ಠಾಣೆ : ಶ್ರೀ ಅಮೀತ ತಂದೆ ಅಂಬಣ್ಣ ಕೋಳ್ಳುರ ಸಾ: ಅಶೋಕ ನಗರ ಗುಲಬರ್ಗಾ ರವರು ದಿನಾಂಕ: 26,27/06/2011 ರಂದು ರಾತ್ರಿ ಮನೆ ನಂ. ಇ-11- 360 ನೇದ್ದರ ಮುಂದೆ ತಮ್ಮ ಹಿರೋ ಹೋಂಡಾ ನಂ. ಕೆ.ಎ-32 ಎಲ್- 2197 ನೇದ್ದರ ಕಪ್ಪು ಬಣ್ಣದ್ದು ಅ.ಕಿ. 28,000/- ರೂ ಬೇಲೆವುಳ್ಳದನ್ನು ಮನೆ ಮುಂದೆ ನಿಲ್ಲಿಸಿ ಮಲಗಿಕೊಂಡಿದ್ದು ಬೆಳಿಗ್ಗೆ ಎದ್ದು ನೋಡಲಾಗಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೃಹಿಣಿಗೆ ಕಿರುಕುಳ ಪ್ರಕರಣ:

ಶಹಾಬಾದ ನಗರ ಠಾಣೆ: ಶ್ರೀಮತಿ ಜೀನತ ಬೇಗಂ ಗಂಡ ಸೈಯದ ಜಲೀಲ ಸಾ:ಮಿಲ್ಲತ ನಗರ ಶಹಾಬಾದ ತಾ:ಚಿತ್ತಾಪುರ ಜಿ:ಗುಲಬರ್ಗಾ ರವರು ನಾನು ಮನೆಯಲ್ಲಿದ್ದಾಗ ನನ್ನ ಗಂಡ ಸೈಯದ ಜಾಲಿಲ ತಂದೆ ಮೌಲಸಾಬ ,ಮಾವ ಮೌಲಾಸಾಬ, ಅತ್ತೆ ಮಹೇಬೂಬಿ, ನಾದಿನಿ ಹೈಯದಾ, ಹಾಗೂ ನಾದಿಯ ಗಂಡ ದಾವಲಸಾಬ ಹಾಗೂ ಸೈಯದಾ ಇವರೆಲ್ಲರೂ ಕೂಡಿ ಅವ್ಯಾಚವಾಗಿ ಬೈದು ಕೈಯಿಂದ ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ :
ಬ್ರಹ್ಮಪೂರ ಠಾಣೆ :

ಶ್ರೀ.ಶರಣು ತಂದೆ ಸುಭಾಶ್ಚಂದ್ರ ಗಡ್ಡೆ, ಸಾ|| ಪೊಲೀಸ್ ವಸತಿ ಗ್ರಹ ಗುಲಬರ್ಗಾ ರವರು ನನಗೆ ದಿನಾಂಕ 09/07/11 ರಂದು ಸಾಯಂಕಾಲ 6:30 ಗಂಟೆಯ ಸುಮಾರಿಗೆ ಗೋವಾ ಹೊಟೇಲ ಹತ್ತಿರ ದತ್ತು, ಅಂಬರೀಶ, ಈರಪ್ಪ, ಸುರೇಖಾ, ಮಹಾದೇವಿ, ಶಿಲ್ಪಾ ಎಲ್ಲರೂ ಸಾ|| ಗುಲಬರ್ಗಾ ರವರು ಪೈನಾನ್ಸ ವಿಷಯಕ್ಕೆ ಸಂಬಂಧಿಸಿದಂತೆ ತಕರಾರು ಮಾಡಿ ಕೈಯಿಂದ, ಚಾಕುವಿನಿಂದ, ಕಲ್ಲಿನಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ:

ಬ್ರಹ್ಮಪೂರ ಠಾಣೆ :
ಸತೀಶ ತಂದೆ ರೇವಣಸಿದ್ದಪ್ಪಾ ಘಂಟಿ ಸಾ|| ಚಿಂಚನಸೂರ ತಾ|| ಆಳಂದ ರವರು ನಾನು ದಿನಾಂಕ: 17-06-2011 ರಂದು ರಾತ್ರಿ ನಗರದ ಸುಪರ್ ಮಾರ್ಕೆಟದ ನೂಲಾ ಆಸ್ಪತ್ರೆಯ ಹತ್ತಿರ ನಿಲ್ಲಿಸಿದ ನನ್ನ ಹಿರೋ ಹೊಂಡ ಮೋಟಾರ ಸೈಕಲ್ ನಂ: ಕೆಎ 32 ಅರ್ 2820 ನೇದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ :

ರೋಜಾ ಠಾಣೆ :
ಶ್ರೀ ಮೆಹಮೂದ ತಂದೆ ಮೆಹಬೂಬ ಸಾಬ ಸಾ:ನೂರಾನಿ ಮೊಹಲ್ಲಾ ಗುಲಬರ್ಗಾ ರವರು ನಾನು ದಿನಾಂಕ:10/07/2011 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ ದರ್ಗಾದಿಂದ ಮನೆಯ ಕಡೆಗೆ ಹೋಗುತ್ತಿರುವಾಗ ಖಾಜಾ ಬಜಾರದಲ್ಲಿ ನನ್ನ ಎದುರಿಗೆ ಅಜೀಜ ಮತ್ತು ಸಂಗಡ 2 ಜನರು ಬಂದು ನನಗೆ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಚಾಕುದಿಂದ ಎದೆಯ ಮೇಲೆ ಹೊಡೆದು ರಕ್ತಗಾಯ ಮಾಡಿದ್ದು ಮತ್ತು ಅವನ ಜೊತೆಯಲ್ಲಿದ್ದವರು ಕೂಡಾ ನನಗೆ ಕೈಯಿಂದ ಹೊಡೆಯ ಹತ್ತಿದರು ಅವರಿಂದ ತಪ್ಪಿಸಿಕೊಂಡು ಬಂದು ಆಸ್ಪತ್ರೆಗೆ ಸೇರಿಕೆ ಯಾಗಿರುತ್ತೇನೆ. ನನಗೆ ಹೊಡೆದವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕೆಂದು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

10 July 2011

GULBARGA DIST REPORTED CRIMES

ಅಪಘಾತ ಪ್ರಕರಣ :
ಮಾಡಬೂಳ ಠಾಣೆ :
ಶ್ರೀಮತಿ ರಮೀತಾಬಾಯಿ ಗಂಡ ಹಣಮಂತ ಚವ್ಹಾಣ ಸ|| ಮಲಘಾಣ ತಾಂಡಾ ರವರ ರವರು ನಾಣು ಮತ್ತು ಮೃತ್ತ ಸುಧಾಕುಮಾರ ತಂದೆ ಶ್ಯಾಮರಾವ ಹಡಪದ ಮತ್ತು ಹಾಗು ಇನ್ನೂ ತಾಂಡಾದ ಕೆಲವು ಜನರು ಭೀಮಾಶಂಕರ ಗುತ್ತೆದಾರ ಇವರ ಹತ್ತಿರ ಕೆಲಸಕ್ಕೆ ಅಂತಾ ಹೋಗಿ ಕೆಲಸ ಮುಗಿಸಿಕೊಂಡು ಟ್ರಾಕ್ಟರ ನಂ: ಕಎ 32 ಟಿ- 5277 ನೇದ್ದರಲ್ಲಿ ಕಲಗುರ್ತಿ ದಾಟಿ ಬರುತ್ತಿರುವಾಗ ಟ್ರಾಕ್ಟರ ಚಾಲಕ ರವಿ ಇತನು ಟ್ರಾಕ್ಟರನ್ನು ಅತೀ ವೇಗ ಹಾಗೂ ನಿಸ್ಕಾಳಜಿತನದಿಂದ ಚಲಾಯಿಸಿ ಒಮ್ಮಲೇ ಕಟ್ಟ ಮಾಡಿದರಿಂದ ರೊಡಿನ ಎಡ ಬಾಜು ತೆಗ್ಗೆಗೆ ಬಿದ್ದು ಸುಧಾಕುಮಾರ ಇತನ ತೆಲೆಗೆ ಭಾರಿ ರಕ್ತಗಾಯ ಎದೆ ಹೊಟ್ಟೆ ಬೆನ್ನಿಗೆ ಭಾರಿ ಗುಪ್ತಗಾಯ ವಾಗಿ ಸ್ಥಳದಲ್ಲಿ ಮೃತ ಪಟ್ಟಿರುತ್ತಾನೆ ಉಳಿದ ಜನರಿಗೆ ಸಣ್ಣಪುಟ್ಟ ರಕ್ತಗಾಯ ಗುಪ್ತಗಾಯ ವಾಗಿರುತ್ತವೆ. ಟ್ರಾಕ್ಟರ ಚಾಲಕನು ತನ್ನ ವಾಹನವನ್ನು ಅಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಫರಹತಾಬಾದ ಠಾಣೆ
: ಶ್ರೀ ರಾಘವೇಂದ್ರರಾವ ತಂದೆ ಬಲಬೀಮರಾವ ಆಲಬಾಳ ಸಾ:ಲಕ್ಷ್ಮೀ ಚೌಕ ಜೇವರ್ಗಿ ರವರು ನಾನು ಖಾಸಗಿ ಕೆಲಸ ನಿಮಿತ್ಯ ಕಾರ ನಂ: ಕೆಎ 04 ಎಮ್.ಎಫ್ 2562 ನೇದ್ದರಲ್ಲಿ ನನ್ನ ಗೆಳೆಯರೊಂದಿಗೆ ಕಾರಿನಲ್ಲಿ ಗುಲಬರ್ಗಾದ ಕಡೆಯಿಂದ ಜೇವರ್ಗಿಗೆ ಬರುವಾಗ ರಾಷ್ಟ್ರೀಯ ಹೆದ್ದಾರಿಯ ಗೀತಾಂಜಲಿ ಪ್ಯಾಕ್ಟರಿ ಹತ್ತಿರ ಬರುತ್ತಿದ್ದಾಗ ರಾತ್ರಿ 9-15 ರ ಸುಮಾರಿಗೆ ಎದುರುಗಡೆಯಿಂದ ಒಬ್ಬ ಮೊಟಾರ ಮೊಟಾರ ಸೈಕಲ ನಂ: ಕೆಎ 32 ಆರ್ 1485 ನೇದ್ದರ ಚಾಲಕನು ತನ್ನ ಮೊಟಾರ ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ರಸ್ತೆಯ ಎಡಬದಿಗೆ ಬಂದು ಕಾರಿಗೆ ಡಿಕ್ಕಿ ಪಡಿಸಿದ್ದರಿಂದ ಸದರಿ ಮೊಟಾರ ಸೈಕಲ ಚಾಲಕನಿಗೆ ಕೈ ಹತ್ತಿರ ಭಾರಿ ರಕ್ತಗಾಯವಾಗಿದ್ದು, ಸದರಿ ಗಾಯಾಳುಗೆ 108 ಅಂಬ್ಯುಲೇನ್ಸ್ ಕರೆಯಿಸಿ ಉಪಚಾರ ಕುರಿತು ಗುಲಬರ್ಗಾಕ್ಕೆ ಕಳುಹಿಸಿ ಕೊಟ್ಟಿರುತ್ತೇವೆ. ಸದರಿ ಮೊಟಾರ ಸೈಕಲ ಸವಾರನ ಹೆಸರು ಮತ್ತು ವಿಳಾಸ ಗೊತ್ತಾಗಿರುವುದಿಲ್ಲ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಮತ್ತು ಮಾನಭಂಗ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಲಿಂಗರಾಜ್ ತಂದೆ ಬಸಣ್ಣ ಬಿರಾದಾರ್ ಸಾ|| ಶರಣ ನಗರ ಗುಲಬರ್ಗಾ ರವರು ನಾನು ಮತ್ತು ನನ್ನ ಹೆಂಡತಿ ಸರೋಜಾ ಇಬ್ಬರೂ ಸುಪರ ಮಾರ್ಕಟಿಗೆ ಹೋಗಲು ಗೋವಾ ಹೋಟೆಲ್ ಎದುರಿನ ಚೌದರಿ ಹೋಟೆಲ್ ಹತ್ತಿರ ನಿಂತಾಗ, ಆದಿಶಕ್ತಿ ಫೈನಾನ್ಸದಲ್ಲಿ ಕೆಲಸ ಮಾಡುವ ಶರಣು ಹಾಗು ಶಿವಕುಮಾರ ಗೊಟೂರ ಮತ್ತು ಅವರ ಸಂಗಡ 5 ಜನರು ಸೇರಿಕೊಂಡು
ಬಂದು, ನನಗೆ ತಡೆದು ನಿಲ್ಲಿಸಿ ಹಲ್ಲೆ ಮಾಡಿ, ಹೆಂಡತಿ ಸರೋಜಾ ಇವಳಿಗೆ ಶಿವಕುಮಾರ ಈತನು ಜಗ್ಗಾಡಿ ಮಾನಭಂಗ ಮಾಡಿರುತ್ತಾನೆ ಹಾಗು ಅವರ ಸಂಗಡ ಇದ್ದ 5 ಜನರು ಕೈಯಿಂದ ಹೊಟ್ಟೆಗೆ, ಕಾಲಿನಿಂದ ಮೈಗೆ ಒದ್ದು ಗಾಯಗೊಳಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ:

ಚೌಕ ಠಾಣೆ :
ಶ್ರೀ ಆಸೀಫ ತಂದೆ ಅಬ್ದುಲ ಖಲಿಮುದ್ದಿನ ವಯಃ 16 ವರ್ಷ ಸಾಃ ಪಾರಜಿ ಕಾಂಪ್ಲೇಕ್ಸ ಮುಸ್ಲಿಂ ಚೌಕ ಗುಲಬರ್ಗಾ ರವರು ನಾನು ಮನೆಯಲ್ಲಿದ್ದಾಗ ರಿಯು @ ರಿಜಾಜ, ಫೈಯಾಜ, ಅಜ್ಜು ನನ್ನ ಮನೆಯೊಳಗೆ ಬಂದು ನಮ್ಮ ಹುಡಗರಿಗೆ ಯಾಕೆ ಹೊಡೆದಿದ್ದಿ ಅಂತ ಸೂಳೆ ಮಗನೆ ಅಂತ ಅವಾಚ್ಯವಾಗಿ ಬೈದು ಕೈಯಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆ ಪ್ರಯತ್ನ ಪ್ರಕರಣ :

ಚೌಕ ಠಾಣೆ : ಕು|| ಮಹಮದ ತಬರೇಝ ತಂದೆ ಮಹಮದ ನಜರೋದ್ದಿನ ಅಡ್ಡೆವಾಲೆ ಸಾ|| ಖೂನಿ ಅಲಾವಾ ಮೋಮಿನಪೂರ ಗುಲಬರ್ಗಾ ರವರು ನನ್ನ ಸ್ನೇಹಿತ ಅನ್ನು @ ಅನ್ವರ ತಂದೆ ಮಹಮದ ಯೂಸುಪ್ ಖುರೇಸಿ ಇತನು ನೀನು ನನ್ನ ಸಂಗಡ ಯಾಕೆ ತಿರುಗಾಡುವದಕ್ಕೆ ಬರುತ್ತಿಲ್ಲ ಅಂತಾ ತಕರಾರು ಮಾಡಿದ್ದು ಈ ಬಗ್ಗೆ ನನ್ನ ಅಣ್ನ ಮತ್ತು ತಂದೆಯವರ ಹತ್ತಿದ್ದ ಹೇಳಿದ್ದು ಅವರೆಲ್ಲರೂ ಅವನಿಗೆ ಬುದ್ದಿವಾದ ಹೇಳಿದ್ದರು . ಪುನಾಃ ಇವತ್ತು ನಾನು ಮತ್ತು ನನ್ನ ಗೆಳೆಯರಾದ ಮಹಮದ ಆರೀಪ್ , ಮಹಮದ ಅಷರ್, ಮತ್ತು ನೂರ ನಾವೇಲ್ಲರೂ ಆಯುಭ ಹೊಟೆಲ್ ಮುಂದೆ ನಿಂತಾಗ ಅನ್ವರ ಇತನು ಬಂದನವೇ ಅವಾಚ್ಯವಾಗಿ ಬೈದು ಎದೆಯ ಮೇಲಿನ ಆಂಗಿ ಹಿಡಿದು ತನ್ನ ಕಿಸೆಯಲ್ಲಿದ್ದ ಚಾಕುವಿನಂದ ಎರಡು ಕೈಗಳಿಗೆ ಹೊಡೆದಿರುತ್ತಾನೆ ಹೊಟ್ಟೆಯಲ್ಲಿ ಹೊಡೆಯುದಕ್ಕೆ ಬಂದಾಗ ನಾನು ತಪ್ಪಿಕೊಂಡಿರುತ್ತೆನೆ ಇಲ್ಲವಾದರೆ ನನ್ನನ್ನು ಕೊಲೆ ಮಾಡುತ್ತಿದನ್ನು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.