POLICE BHAVAN KALABURAGI

POLICE BHAVAN KALABURAGI

10 July 2011

GULBARGA DIST REPORTED CRIMES

ಅಪಘಾತ ಪ್ರಕರಣ :
ಮಾಡಬೂಳ ಠಾಣೆ :
ಶ್ರೀಮತಿ ರಮೀತಾಬಾಯಿ ಗಂಡ ಹಣಮಂತ ಚವ್ಹಾಣ ಸ|| ಮಲಘಾಣ ತಾಂಡಾ ರವರ ರವರು ನಾಣು ಮತ್ತು ಮೃತ್ತ ಸುಧಾಕುಮಾರ ತಂದೆ ಶ್ಯಾಮರಾವ ಹಡಪದ ಮತ್ತು ಹಾಗು ಇನ್ನೂ ತಾಂಡಾದ ಕೆಲವು ಜನರು ಭೀಮಾಶಂಕರ ಗುತ್ತೆದಾರ ಇವರ ಹತ್ತಿರ ಕೆಲಸಕ್ಕೆ ಅಂತಾ ಹೋಗಿ ಕೆಲಸ ಮುಗಿಸಿಕೊಂಡು ಟ್ರಾಕ್ಟರ ನಂ: ಕಎ 32 ಟಿ- 5277 ನೇದ್ದರಲ್ಲಿ ಕಲಗುರ್ತಿ ದಾಟಿ ಬರುತ್ತಿರುವಾಗ ಟ್ರಾಕ್ಟರ ಚಾಲಕ ರವಿ ಇತನು ಟ್ರಾಕ್ಟರನ್ನು ಅತೀ ವೇಗ ಹಾಗೂ ನಿಸ್ಕಾಳಜಿತನದಿಂದ ಚಲಾಯಿಸಿ ಒಮ್ಮಲೇ ಕಟ್ಟ ಮಾಡಿದರಿಂದ ರೊಡಿನ ಎಡ ಬಾಜು ತೆಗ್ಗೆಗೆ ಬಿದ್ದು ಸುಧಾಕುಮಾರ ಇತನ ತೆಲೆಗೆ ಭಾರಿ ರಕ್ತಗಾಯ ಎದೆ ಹೊಟ್ಟೆ ಬೆನ್ನಿಗೆ ಭಾರಿ ಗುಪ್ತಗಾಯ ವಾಗಿ ಸ್ಥಳದಲ್ಲಿ ಮೃತ ಪಟ್ಟಿರುತ್ತಾನೆ ಉಳಿದ ಜನರಿಗೆ ಸಣ್ಣಪುಟ್ಟ ರಕ್ತಗಾಯ ಗುಪ್ತಗಾಯ ವಾಗಿರುತ್ತವೆ. ಟ್ರಾಕ್ಟರ ಚಾಲಕನು ತನ್ನ ವಾಹನವನ್ನು ಅಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಫರಹತಾಬಾದ ಠಾಣೆ
: ಶ್ರೀ ರಾಘವೇಂದ್ರರಾವ ತಂದೆ ಬಲಬೀಮರಾವ ಆಲಬಾಳ ಸಾ:ಲಕ್ಷ್ಮೀ ಚೌಕ ಜೇವರ್ಗಿ ರವರು ನಾನು ಖಾಸಗಿ ಕೆಲಸ ನಿಮಿತ್ಯ ಕಾರ ನಂ: ಕೆಎ 04 ಎಮ್.ಎಫ್ 2562 ನೇದ್ದರಲ್ಲಿ ನನ್ನ ಗೆಳೆಯರೊಂದಿಗೆ ಕಾರಿನಲ್ಲಿ ಗುಲಬರ್ಗಾದ ಕಡೆಯಿಂದ ಜೇವರ್ಗಿಗೆ ಬರುವಾಗ ರಾಷ್ಟ್ರೀಯ ಹೆದ್ದಾರಿಯ ಗೀತಾಂಜಲಿ ಪ್ಯಾಕ್ಟರಿ ಹತ್ತಿರ ಬರುತ್ತಿದ್ದಾಗ ರಾತ್ರಿ 9-15 ರ ಸುಮಾರಿಗೆ ಎದುರುಗಡೆಯಿಂದ ಒಬ್ಬ ಮೊಟಾರ ಮೊಟಾರ ಸೈಕಲ ನಂ: ಕೆಎ 32 ಆರ್ 1485 ನೇದ್ದರ ಚಾಲಕನು ತನ್ನ ಮೊಟಾರ ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ರಸ್ತೆಯ ಎಡಬದಿಗೆ ಬಂದು ಕಾರಿಗೆ ಡಿಕ್ಕಿ ಪಡಿಸಿದ್ದರಿಂದ ಸದರಿ ಮೊಟಾರ ಸೈಕಲ ಚಾಲಕನಿಗೆ ಕೈ ಹತ್ತಿರ ಭಾರಿ ರಕ್ತಗಾಯವಾಗಿದ್ದು, ಸದರಿ ಗಾಯಾಳುಗೆ 108 ಅಂಬ್ಯುಲೇನ್ಸ್ ಕರೆಯಿಸಿ ಉಪಚಾರ ಕುರಿತು ಗುಲಬರ್ಗಾಕ್ಕೆ ಕಳುಹಿಸಿ ಕೊಟ್ಟಿರುತ್ತೇವೆ. ಸದರಿ ಮೊಟಾರ ಸೈಕಲ ಸವಾರನ ಹೆಸರು ಮತ್ತು ವಿಳಾಸ ಗೊತ್ತಾಗಿರುವುದಿಲ್ಲ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಮತ್ತು ಮಾನಭಂಗ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಲಿಂಗರಾಜ್ ತಂದೆ ಬಸಣ್ಣ ಬಿರಾದಾರ್ ಸಾ|| ಶರಣ ನಗರ ಗುಲಬರ್ಗಾ ರವರು ನಾನು ಮತ್ತು ನನ್ನ ಹೆಂಡತಿ ಸರೋಜಾ ಇಬ್ಬರೂ ಸುಪರ ಮಾರ್ಕಟಿಗೆ ಹೋಗಲು ಗೋವಾ ಹೋಟೆಲ್ ಎದುರಿನ ಚೌದರಿ ಹೋಟೆಲ್ ಹತ್ತಿರ ನಿಂತಾಗ, ಆದಿಶಕ್ತಿ ಫೈನಾನ್ಸದಲ್ಲಿ ಕೆಲಸ ಮಾಡುವ ಶರಣು ಹಾಗು ಶಿವಕುಮಾರ ಗೊಟೂರ ಮತ್ತು ಅವರ ಸಂಗಡ 5 ಜನರು ಸೇರಿಕೊಂಡು
ಬಂದು, ನನಗೆ ತಡೆದು ನಿಲ್ಲಿಸಿ ಹಲ್ಲೆ ಮಾಡಿ, ಹೆಂಡತಿ ಸರೋಜಾ ಇವಳಿಗೆ ಶಿವಕುಮಾರ ಈತನು ಜಗ್ಗಾಡಿ ಮಾನಭಂಗ ಮಾಡಿರುತ್ತಾನೆ ಹಾಗು ಅವರ ಸಂಗಡ ಇದ್ದ 5 ಜನರು ಕೈಯಿಂದ ಹೊಟ್ಟೆಗೆ, ಕಾಲಿನಿಂದ ಮೈಗೆ ಒದ್ದು ಗಾಯಗೊಳಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ:

ಚೌಕ ಠಾಣೆ :
ಶ್ರೀ ಆಸೀಫ ತಂದೆ ಅಬ್ದುಲ ಖಲಿಮುದ್ದಿನ ವಯಃ 16 ವರ್ಷ ಸಾಃ ಪಾರಜಿ ಕಾಂಪ್ಲೇಕ್ಸ ಮುಸ್ಲಿಂ ಚೌಕ ಗುಲಬರ್ಗಾ ರವರು ನಾನು ಮನೆಯಲ್ಲಿದ್ದಾಗ ರಿಯು @ ರಿಜಾಜ, ಫೈಯಾಜ, ಅಜ್ಜು ನನ್ನ ಮನೆಯೊಳಗೆ ಬಂದು ನಮ್ಮ ಹುಡಗರಿಗೆ ಯಾಕೆ ಹೊಡೆದಿದ್ದಿ ಅಂತ ಸೂಳೆ ಮಗನೆ ಅಂತ ಅವಾಚ್ಯವಾಗಿ ಬೈದು ಕೈಯಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆ ಪ್ರಯತ್ನ ಪ್ರಕರಣ :

ಚೌಕ ಠಾಣೆ : ಕು|| ಮಹಮದ ತಬರೇಝ ತಂದೆ ಮಹಮದ ನಜರೋದ್ದಿನ ಅಡ್ಡೆವಾಲೆ ಸಾ|| ಖೂನಿ ಅಲಾವಾ ಮೋಮಿನಪೂರ ಗುಲಬರ್ಗಾ ರವರು ನನ್ನ ಸ್ನೇಹಿತ ಅನ್ನು @ ಅನ್ವರ ತಂದೆ ಮಹಮದ ಯೂಸುಪ್ ಖುರೇಸಿ ಇತನು ನೀನು ನನ್ನ ಸಂಗಡ ಯಾಕೆ ತಿರುಗಾಡುವದಕ್ಕೆ ಬರುತ್ತಿಲ್ಲ ಅಂತಾ ತಕರಾರು ಮಾಡಿದ್ದು ಈ ಬಗ್ಗೆ ನನ್ನ ಅಣ್ನ ಮತ್ತು ತಂದೆಯವರ ಹತ್ತಿದ್ದ ಹೇಳಿದ್ದು ಅವರೆಲ್ಲರೂ ಅವನಿಗೆ ಬುದ್ದಿವಾದ ಹೇಳಿದ್ದರು . ಪುನಾಃ ಇವತ್ತು ನಾನು ಮತ್ತು ನನ್ನ ಗೆಳೆಯರಾದ ಮಹಮದ ಆರೀಪ್ , ಮಹಮದ ಅಷರ್, ಮತ್ತು ನೂರ ನಾವೇಲ್ಲರೂ ಆಯುಭ ಹೊಟೆಲ್ ಮುಂದೆ ನಿಂತಾಗ ಅನ್ವರ ಇತನು ಬಂದನವೇ ಅವಾಚ್ಯವಾಗಿ ಬೈದು ಎದೆಯ ಮೇಲಿನ ಆಂಗಿ ಹಿಡಿದು ತನ್ನ ಕಿಸೆಯಲ್ಲಿದ್ದ ಚಾಕುವಿನಂದ ಎರಡು ಕೈಗಳಿಗೆ ಹೊಡೆದಿರುತ್ತಾನೆ ಹೊಟ್ಟೆಯಲ್ಲಿ ಹೊಡೆಯುದಕ್ಕೆ ಬಂದಾಗ ನಾನು ತಪ್ಪಿಕೊಂಡಿರುತ್ತೆನೆ ಇಲ್ಲವಾದರೆ ನನ್ನನ್ನು ಕೊಲೆ ಮಾಡುತ್ತಿದನ್ನು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

09 July 2011

GULBARGA DIST REPORTED CRIME


ಕೊಲೆ ಪ್ರಕರಣದ ಆರೋಪಿಗಳ ಬಂದನ :

ಮಾಡಬೂಳ ಠಾಣೆ :ಶ್ರೀಶಾಂತ ಗೌಡ ತಂದೆ ಅಮೃತ್ ರಾವ ಪೊಲೀಸ್ ಪಾಟೀಲ್ ಸಾ|| ಹದನೂರ ರವರು ಹದನೂರ –ಮತ್ತಿಮೂಡ ರಸ್ತೆಯ ಪೂಲಿನ ಹತ್ತಿರ ನಡೆದುಕೊಂಡು ಹೊಗುತ್ತಿದ್ದಾಗ ಅಪರಿಚಿತ ಮನುಷ್ಯನ ಶವ ನೋಡಿದ್ದು ಯಾರೋ ಮೃತನಿಗೆ ಕೊರಳಿಗೆ ಹಗ್ಗ ಬಿಗಿದು ನಾಲಾದಲ್ಲಿ ಹಾಕಿ ಕಲ್ಲುಗಳಿಂದ ತಲೆಗೆ ಜಜ್ಜಿ ಗುರುತು ಸಿಗಲಾರದ ಹಾಗೆ ಕೊಲೆ ಮಾಡಿ ಬಿಸಾಕಿರುತ್ತಾರೆ ಅಂತಾ ದಿನಾಂಕ: 07-07-2011 ರಂದು ಠಾಣೆಗೆ ದೂರು ಸಲ್ಲಿಸಿದ್ದು, ದೂರು ಸ್ವೀಕರಿಸಿಕೊಂಡು ಕೊಲೆಯಾದ ಮನುಷ್ಯನ ವಿಳಾಸ ಪತ್ತೆ ಮಾಡಿ ಆತನ ತಾಯಿಗೆ ವಿಚಾರಿಸಲಾಗಿ ನನ್ನ ಮಗ ಅಣವೀರ ಹದಗಲ್ ಇತನ ಜೋತೆ ಆಗಾಗ ತಕರಾರು ಮಾಡುತ್ತಿದ್ದು ಸದರಿಯವರ ಹೆಸರು ತಿಳಿಸಲಾಗಿ ಅವರನ್ನು ವಿಚಾರಣೆಗೆ ಒಳಪಡಿಸಿ ಕೊಲೆ ಮಾಡಿದವರನ್ನು ವಿಚಾರಿಸಲಾಗಿ ಅನೀಲಕುಮಾರ ತಂದೆ ಹಣಮಂತರಾವ ಕುಂಬಾರ ಸಾ|| ಸುಂಟನೂರ ಹಾ||ವ|| ಶಹಾಬಜಾರ, ಶರಣು @ ಶರಣಬಸಪ್ಪಾ ತಂದೆ ಗದಗೆಪ್ಪಾ ತಡಕಲ್ ಸಾ|| ಶಹಾಬಜಾರ , ಶರಣು @ ಶರಣಬಸಪ್ಪಾ ತಂದೆ ಚೋಕುಬಾ ಹೊಸಮನಿ ಸಾ|| ತಾರಪೈಲ್ ಗುಲಬರ್ಗಾ ರವರನ್ನು ದಸ್ತಗಿರಿ ಮಾಡಲಾಗಿದೆ.

GULBARGA DIST REPORTED CRIMES


ಆಳಂದ ಪೊಲೀಸ್ ರ ಕಾರ್ಯಚರಣೆ ಘಟೆನ ನಡೆದ 6 ಗಂಟೆಗಳಲ್ಲಿ ದರೋಡೆ ಯತ್ನ ಮತ್ತು ಅಕ್ರಮ ಪಿಸ್ತೂಲ್‌ ಸಾಗಾಣಿಕೆದಾರರ ಬಂಧನ - 5 ಪಿಸ್ತೂಲ್‌ ವಶ

ಆಳಂದ ಮತ್ತು ಅಫಜಲಪೂರ ತಾಲ್ಲೂಕಗಳಲ್ಲಿ ಹಲವು ಕೊಲೆ, ಅಪಹರಣ, ಮತ್ತು ಅನಧೀಕೃತ ಪಿಸ್ತೂಲ್‌ಗಳ ಮಾರಾಟದಲ್ಲಿ ಭಾಗಿಯಾಗಿ, ತಾಲ್ಲೂಕಿನಲ್ಲಿ ಭಯಗ್ರಸ್ಥ ವಾತಾವರಣಕ್ಕೆ ಕಾರಣಕೃತನಾದ ಹಂತಕ ಚಂದಪ್ಪ ಹರಿಜನ ಈತನ ಸಹಚರ ಖಜೂರಿ ಕರೀಮ್‌ನನ್ನು ದರೋಡೆ ಯತ್ನ ನಡೆದ 6 ಗಂಟೆಗಳಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಆಳಂದ ಪೊಲೀಸ್‌‌ರು ಯಶಸ್ವಿಯಾಗಿದ್ದಾರೆ,

ಇಂದು ಬೆಳಗಿನ ಜಾವಾ ಆಳಂದ - ಉಮರ್ಗಾ ರಸ್ತೆಯಲ್ಲಿ ಖಜೂರಿ ಕರೀಮ ಈತನು ತನ್ನ ಸಹಚರರೊಂದಿಗೆ ಶಸ್ತ್ರ ಸಜ್ಜಿತನಾಗಿ ರಸ್ತೆ ದರೋಡೆಗೆ ಪ್ರಯತ್ನಿಸುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಆಳಂದ ಪೊಲೀಸ್‌ರು ಮಿಂಚಿನ ಕಾರ್ಯಾಚರಣೆ ನಡೆಸಿ ಸ್ಥಳ್ಕಕ್ಕೆ ಧಾಮಿಸಿ 3 ಜನ ಆರೋಪಿತರಾದ 1) ಅಬು ಉಮಮ್ ತಂದೆ ಅಬ್ದುಲ ಸಮದ್‌ ತುರ್ಕಿ, ಸಾ:ಬಿಜಾಪೂರ, 2) ಶಂಕರ ತಂದೆ ಶಿವಶರಣಪ್ಪ ಹಡಪದ, ಸಾ:ಆಳಂದ, 3) ಲಕ್ಷ್ಮಣ @ ಪಪ್ಪು ಜಮಾದಾರ ಸಾ:ಮುಸ್ತಿ, ಜಿ:ಸೋಲ್ಲಾಪೂರ ಇವರನ್ನು ದಸ್ತಗಿರಿ ಮಾಡಿ 2 ಪಿಸ್ತೂಲ್‌, 4 ಜೀವಂತ ಗುಂಡುಗಳು, ಒಂದು ಕಬ್ಬಿಣದ ರಾಡು ಮತ್ತು ಕೃತ್ಯಕ್ಕೆ ಬಳಸಿದ ಒಂದು ಇಂಡಿಕಾ ಕಾರನ್ನು ವಶಪಡಿಸಿಕೊಂಡಿರುತ್ತಾರೆ.

ಈ ವೇಳೆಯಲ್ಲಿ ಇನ್ನೂಳಿದ 2 ಆರೋಪಿತರು 1) ಅಬ್ದುಲ ಕರೀಂ ತಂದೆ ಹಮೀದಸಾಬ ಮುರೋಳ್ಳಿ @ ಖಜೂರಿ ಕರೀಂ, 2) ಮೂಸಾ ತಂದೆ ಅಬ್ದುಲ ಶಕೂರ ಶಾಣೂರಕರ, ಸಾ:ಸೊಲ್ಲಾಪೂರ, ಇವರು ಪರಾರಿಯಾಗಿ ಓಡಿ ಹೋಗಿದ್ದು, ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸ್‌ರು ಚಾಣಾಕ್ಷತನದಿಂದ ಕೇವಲ 6 ಗಂಟೆ ಅವಧಿಯಲ್ಲಿ ಆಳಂದ-ಉಮರ್ಗಾ ಬಾರ್ಡರ ಸಮೀಪ ಅವರನ್ನು ಹಿಡಿದು ಇನ್ನೂ 3 ಅಕ್ರಮ ಪಿಸ್ತೂಲು ಮತ್ತು ಗುಂಡುಗಳನ್ನು ವಶಪಡಿಸಿಕೊಂಡಿರುತ್ತಾರೆ.

ಈ ಪ್ರಕರಣದಲ್ಲಿ ಭಾಗಿಯಾದ ಮುಖ್ಯ ಆರೋಪಿ ಅಬ್ದುಲ ಕರೀಂ @ ಖಜೂರಿ ಕರೀಂ ಈತನು ಹಲವು ಕೊಲೆ, ಅಪಹರಣ, ಮತ್ತು ಅ್ರಕಮ ಶಸ್ತ್ರಾಸ್ತಗಳನ್ನು ಕೊಲೆ ಮತ್ತು ದರೋಡೆ ಮಾಡುವುದಕ್ಕೆ ಸರಬರಾಜು ಮಾಡುವ ಕುಖ್ಯಾತಿ ಹೊಂದಿದ್ದಾನೆ. ಈತನು ಈ ಹಿಂದೆ ಭೀಮಾ ತೀರದ ಹಂತಕ ಚಂದಪ್ಪ ಹರಿಜನನ ಸಹಚರನೂ ಆಗಿದ್ದನು. ಹಾಗು ಗುಲಬರ್ಗಾ ಜಿಲ್ಲೆಯ ಆಳಂದ, ಅಫಜಲಪೂರ ಮತ್ತು ಬಿಜಾಪೂರ ಜಿಲ್ಲೆಯ ಇಂಡಿ ತಾಲ್ಲೂಕಾ ಹಾಗು ಸೊಲ್ಲಾಪೂರ ಜಿಲ್ಲೆಯ ಉಮರ್ಗಾ, ಅಕ್ಕಲಕೋಟ, ತಾಲ್ಲೂಕುಗಳಲ್ಲಿ ಅಕ್ರಮವಾಗಿ ಮದ್ದು ಗಂಡು ಮತ್ತು ಆಯುಧ ಸರಬರಾಜು ಮಾಡುವವನಾಗಿದ್ದು, ಈತನ ಮೇಲೆ ಈ ಕೆಳಗಿನಂತೆ ಪ್ರಕರಣಗಳು ಇರುತ್ತವೆ.

1) ನರೋಣಾ ಪೊಲೀಸ್‌ ಠಾಣೆ ಗುನ್ನೆ ನಂ. 25/11 ರಲ್ಲಿ ಕಡಗಂಚಿ ಆರೋಪಿತರಿಗೆ 3 ಅಕ್ರಮ ಪಿಸ್ತೂಲ್‌ ಮತ್ತು ಮದ್ದು ಗುಂಡುಗಳನ್ನು ಒದಗಿಸಿರುವುದು.

2) ನರೋಣಾ ಪೊಲೀಸ್‌ ಠಾಣೆ ಗುನ್ನೆ ನಂ.64/11 ರಲ್ಲಿ ಆರೋಪಿ ಶ್ರೀಶೈಲ್‌ ಅಲ್ದಿ ಈತನಿಗೆ 1 ಪಿಸ್ತೂಲ್‌, ಮತ್ತು ಗುಂಡುಗಳನ್ನು ಒದಗಸಿರುವುದು.

3) ಆಳಂದ ಪೊಲೀಸ್‌ ಠಾಣೆ ಗುನ್ನೆ ನಂ.61/2003 ರಲ್ಲಿ ಶ್ರೀ ಬಾಬುಲಾಲ ಸಾ:ಮಡಕಿ ಈತನನ್ನು ವೈಯಕ್ತಿಕ ದ್ವೇಷದಲ್ಲಿ ಅಪಹರಣ.

4) ಆಳಂದ ಪೊಲೀಸ್‌ ಠಾಣೆ ಗುನ್ನೆ ನಂ. 39/2006 ರಲ್ಲಿ ಆಳಂದ ತಾಲ್ಲೂಕಾ ಪಂಚಾಯತ ಆವರಣದಲ್ಲಿ ಅಂದಿನ ಅಧ್ಯಕ್ಷ ಅಶೋಕ ಸಾವಳೇಶ್ವರ ಈತನ ಮೇಲೆ ಗುಂಡು ಹಾರಿಸಿ ಕೊಲೆಗೆ ಪ್ರಯತ್ನ.

5) ಮಹಾರಾಷ್ಟ್ರದ ಉಮರ್ಗಾ ಪೊಲೀಸ್‌ ಠಾಣೆ ಗುನ್ನೆ ನಂ. 194/2005 ರಲ್ಲಿ ಖಸಗಿ ಗ್ರಾಮದಲ್ಲಿ ಜೊಡಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುತ್ತಾನೆ.

6) ಬಿಜಾಪೂರ ಜಿಲ್ಲೆಯ ಹೊರ್ತಿ ಪೊಲೀಸ್‌ ಠಾಣೆಯ ಗುನ್ನೆ ನಂ.72/2007 ರಲ್ಲಿ ಭಾಗಪ್ಪ ಹರಿಜನ ನೊಂದಿಗೆ ಕೊಲೆಯಲ್ಲಿ ಭಾಗಿಯಾಗಿರುತ್ತಾನೆ.

ಖಜೂರಿ ಕರೀಂ ಈತನು ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಅನಧೀಕೃತ ಪಿಸ್ತೂಲ್‌ಗಳ ಸಾಗಾಣಿಕೆಯಲ್ಲೂ ಭಾಗಿಯಾಗಿರುತ್ತಾನೆ. ಈತನ ಇನ್ನೊಬ್ಬ ಸಹಚರ ಮೂಸಾ ತಂದೆ ಅಬ್ದುಲ ಶೂಕುರ ಈತನು ಸೋಲ್ಲಾಪೂರ ಹಾಗು ಸಾತಾರ ಜಿಲ್ಲೆಗಳಲ್ಲಿ ಕೊಲೆ ಮತ್ತು ಆಯುಧ ಕಾಯ್ದೆ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ.

ಗುಲಬರ್ಗಾ ಜಿಲ್ಲೆಯ ಎಸ್‌.ಪಿ. ಶ್ರೀ ಪ್ರವೀಣ ಪವಾರ ಇವರ ಆದೇಶದಂತೆ ನಾಪತ್ತೆ ಇರುವ ಕೊಲೆ ಮತ್ತು ದರೋಡೆ ಕೇಸುಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದು, ಆಳಂದ ಡಿವೈಎಸ್‌ಪಿ ಶ್ರೀ ಎಸ್‌.ಬಿ. ಸಾಂಭಾ, ಸಿಪಿಐ ಶ್ರೀ ಶರಣಬಸವೇಶ್ವರ, ಪಿಎಸ್‌ಐಗಳಾದ ಶ್ರೀ ಅಸ್ಲಂಬಾಷಾ, ಶ್ರೀ ಜಗದೀಶ ಹಂಚನಾಳ, ಶ್ರೀ ವಿಜಯಕುಮಾರ, ಶ್ರೀ ಎಸ್‌.ಎಸ್‌.ದೊಡ್ಡಮನಿ, ಹಾಗು ಎಎಸ್‌ಐಗಳಾದ ಶ್ರೀ ವಿಶ್ವನಾಥ, ಶ್ರೀ ರಾಮಯ್ಯ ಮತ್ತು ಸಿಬ್ಬಂದಿ ಜನರಾದ ಮೈನೋದ್ದಿನ, ಶಾಂತಪ್ಪ, ರಾಜಕುಮಾರ, ಶಿವರಾಯ, ಮಶಾಕ, ಸುನೀಲ ಇವರುಗಳು ಆರೋಪಿತರನ್ನು ಚಾಣಾಕ್ಷತನದಿಂದ ಬೇಗನೆ ಬಂಧಿಸಿದ್ದಕ್ಕೆ ಮತ್ತು ಮುಂದೆ ಆಗಬಹುದಾದ ದರೋಡೆ, ಕೊಲೆ ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದಕ್ಕೆ ಶ್ರೀ ಪ್ರವೀಣ ಪವಾರ ಎಸ್‌.ಪಿ. ಗುಲಬರ್ಗಾ ರವರು ಕಾರ್ಯವನ್ನು ಪ್ರಶಂಶಿಸಿ ರೂ. 10,000/- ನಗದು ಬಹುಮಾನ ಘೋಷಿಸಿರುತ್ತಾರೆ. ಇನ್ನೂ ಹೆಚ್ಚಿನ ತನಿಖೆ ಕುರಿತು ಅಪರ್‌ ಎಸ್‌.ಪಿ. ಶ್ರೀ ಕಾಶಿನಾಥ ತಳಕೇರಿ ರವರ ಮಾರ್ಗದರ್ಶನದಲ್ಲಿ ವ್ಯಾಪಕ ತನಿಖೆ ಮುಂದುವರೆದಿರುತ್ತದೆ.