POLICE BHAVAN KALABURAGI

POLICE BHAVAN KALABURAGI

26 May 2011

GULBARGA DISTRICT REPORTED CRIMES

ಅಪಘಾತ ಪ್ರಕರಣ ;

ಗ್ರಾಮೀಣ ಠಾಣೆ ;ದಿನಾಂಕ 25-05-2011 ರಂದು ಶ್ರೀಮತಿ ಜಯಶ್ರೀ ಗಂಡ ಅಮೃತ ಪೊಲೀಸ ಪಾಟೀಲ ಸಾ: ನಿಪ್ಪಣಿ ತಾ: ಚಿತ್ತಾಪೂರ ಹಾ:ವ: ಎಸ್‌ಬಿ ಪಾಟೀಲ ಕಂಪನಿ ಕಪನೂರ ಗುಲಬರ್ಗಾ ಇವರು ತಮ್ಮ ಮಗಳಾದ ರೇಷ್ಮ ಇವಳ ಮದುವೆ ಪ್ರಯುಕ್ತ ಪಿರ್ಯಾದಿದಾರಳು ಹಾಗೂ ಅಮೃತ ಇಬ್ಬರು ಮಾಸಾಪ್ತಿ ದರ್ಗಾಕ್ಕೆ ದೀನ ನಮಸ್ಕಾರದ ಹರಕೆಯನ್ನು ಹೊತ್ತಿದ್ದು. ಅದರಂತೆ ಸಂಬಂದಿಕರೊಂದಿಗೆ ಮದ್ಯಾಹ್ನ 12:30 ಗಂಟೆಯ ಸುಮಾರಿಗೆ ದೀನ ನಮಸ್ಕಾರ ಹಾಕುತ್ತಾ ಮುಖ್ಯ ರಸ್ತೆಯ ಏರಲೈನ್ಸ್‌ ಧಾಬಾದ ಮುಂದಿನ ರಸ್ತೆಯ ಹತ್ತಿರ ಬಂದಾಗ ಹುಮನಾಬಾದ ಕಡೆಯಿಂದ ಒಂದು ಟಾಟಾ ಇಂಡಿಕಾ ಕಾರ ನಂ ಕೆಎ 32 ಎಮ್‌ 4689 ನೇದ್ದರ ಚಾಲಕನು ಅತೀವೇಗ ಹಾಗೂ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮ ಎಲ್ಲರಿಗೆ ಡಿಕ್ಕಿ ಹೊಡೆದುಕೊಂಡು ಸೈಡಿಗೆ ನಿಲ್ಲಿಸಿರುವದರಿಂದ ಪಿರ್ಯಾದಿಯ ಗಂಡ ಹಾಗೂ ಸಂಬಂದಿಕರಾದ ಶಿವಕಾಂತಮ್ಮ ತೆಲಂಗಾಣ ಹಾಗೂ ಇತರರೆಲ್ಲರಿಗೂ ಸಾದಾ & ಬಾರಿಗಾಯವಾಗಿದ್ದು ಅಮೃತ ಇತನು ಬೇಹುಷ ಆಗಿದ್ದು ಅವನನ್ನು 108 ಅಂಬುಲೈನ್ಸ್‌ದಲ್ಲಿ ಉಪಚಾರ ಕುರಿತು ತೆಗೆದುಕೊಂಡು ಹೋಗುತ್ತಿರುವಾಗ ಮದ್ಯಾಹ್ನ 1 ಗಂಟೆಯ ಸುಮಾರಿಗೆ ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಣ್ಣು ಮಗಳು ಕಾಣೆಯಾದ ಪ್ರಕರಣ ;
ಎಮ್ ಬಿ ನಗರ ಠಾಣೆ ;ಶ್ರೀ ವಾಯ.ಎಂ.ಜಯರಾಜ ಪ್ರೋಫೆಸರ ಮೈಕ್ರೋಬಯಾಲಜಿ ಗುಲಬರ್ಗಾ ವಿಶ್ವವಿದ್ಯಾಲಯ ಗುಲಬರ್ಗಾ ಸಾ; " ವಿನಾಯಕ "ಪ್ಲಾಟ ನಂ.20 ನಿಯರ ಹನುಮಾನ ಟೆಂಪಲ್ ಜಯನಗರ ಕಾಲೂನಿ ಸೇಡಂ ರೋಡ ಗುಲಬರ್ಗಾರವರ ಮಗನಾದ ಸಂತೋಷಕುಮಾರ ಇವನ ಹೆಂಡತಿ ಶ್ರೀಮತಿ ಶಿಲ್ಪಾ ಇವಳು ದಿನಾಂಕ ದಿನಾಂಕ.23-5-2011 ರಂದು 12-00 ಗಂಟೆಯಿಂದ 1-45 ಪಿ.ಎಂ.ದ ಮದ್ಯದ ಅವಧಿಯಲ್ಲಿ ಮನೆಯಿಂದ ಯಾರಿಗೂ ಏನು ಹೇಳದೆ ಕೇಳದೆ ಲಗೇಜ ತೆಗೆದುಕೊಂಡು ಹೋಗಿದ್ದು ದಿನಾಂಕ. 23-5-2011 ರಿಂದ ಇವತ್ತಿನವರೆಗೆ ಅಂದರೆ 25-5-2011 ವರೆಗೆ ಎಲ್ಲಾ ಕಡೆಗೆ ಹುಡುಕಾಡಿದರೂ ಸಿಕ್ಕಿರುವದಿಲ್ಲಾ ಕಾಣೆಯಾಗಿರುತ್ತಾಳೆ, ಕಾಣೆಯಾದ ಮಹಿಳೆಯ ಚಹರೆ ಪಟ್ಟಿ;- ಎತ್ತರ 4'8" ಗುಂಡನೆಯ ಮುಖ ,ಸದೃಡ ತೆಳ್ಳನೆಯ ಮೈಕಟ್ಟು, ಗೋಧಿ ಮೈಬಣ್ಣ , ಕಣ್ಣುಗಳ ಕೆಳ ರೆಪ್ಪೆ ಕಪ್ಪಾಗಿರುತ್ತವೆ , ಸ್ಪೀಡಾಗಿ ಮಾತನಾಡುತ್ತಾಳೆ, ಕನ್ನಡ , ಹಿಂದಿ , ಇಂಗ್ಲೀಷ ಬರೆಯಲು , ಮಾತನಾಡಲು , ಓದಲು ಬರುತ್ತದೆ. ಡಾರ್ಕ ಕಲರನ ಚುಡಿದಾರ , ಕುರತ ಸೆಲವಾರ ಬಟ್ಟೆಗಳು ಧರಿಸಿರಬಹುದು ಅಂತಾಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಎಮ್ ಬಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

25 May 2011

GULBARGA DISTRICT REPORTED CRIMES

ನಿಂದನೆ ಪ್ರಕರಣ ;

ಬ್ರಹ್ಮಪೂರ ಠಾಣೆ ;
ಶ್ರೀ ದತ್ತಾತ್ರೇಯ ತಂದೆ ರಾಮಚಂದ್ರ ಮತ್ತು ಹಣಮವ್ವ ಗಂಡ ಮಾಹಾದೇವಪ್ಪಾ ದೊಡ್ಡಮನಿ ಗೋವಾ ಹೋಟೆಲ ಹತ್ತಿರ ಹೋಟೆಲ ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುವಾಗ ಸಿಲೆದಿನಾಂಕ 24-05-2011 ರಂದು ರಾತ್ರಿ ಪಕ್ಕದ ಗ್ಯರೇಜ ನವರಾದ ಅಬ್ದುಲ ಗಫೂರ ತಂದೆ ಅಬ್ದುಲ ಜಬ್ಬಾರ ಮಹ್ಮದ ಹಮೀದ ಹುಸೇನ ಮತ್ತು ಇವರ ಅಣ್ಣನ ಮಗ ಮತ್ತು ಮುರಲಿಧರ ರತ್ನಗೀರಿ ಇವರು ಕೊಡಿಕೊಂಡು ಗ್ಯಾರೆಜನಲ್ಲಿ ಸೀಲೆಂಡರನಿಂದ ಬೇರೆ ವಾನಗಳಿಗೆ ಹಾಕುತ್ತಿದ್ದು ಗ್ಯಾಸದ ದುರ್ವಾಸನೆ ಬರುತ್ತಿದ್ದು ಇಲ್ಲಿ ಗ್ಯಾಸ ತುಂಬಬೇಡರಿ ವಾಸನೆ ಬರತ್ತಾಇದೆ ಅಂತಾ ಹೇಳಲು ಹೋದ ನಾನು ಮತ್ತು ನನ್ನ ಅತ್ತೆ ಹಣಮವ್ವ ಇಬ್ಬರ ಜೋತೆಗೆ ಜಗಳಕ್ಕೆ ಬಿದ್ದು ಹೊಡೆಬಡೆಮಾಡಿ ಅವಾಚ್ಯಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವು ಪ್ರಕರಣ ;     

ಗ್ರಾಮೀಣ ಠಾಣೆ ;ಶ್ರೀ ಮಹ್ಮದ ನಿಜಾಮೋದ್ದೀನ ತಂದೆ ಸುಲೇಮಾನಸಾಬ ತೇಲಿ ಸಾ:ಮೇ:ಪೀರ ಇಂಡಸ್ಟ್ರಿಜ್‌ ಪ್ಲಾಟನಂ 18(ಎ) 18(ಬಿ) & 17 ಕೆಐಡಿಬಿ ಇಂಡಸ್ಟ್ರಿ ಯಲ್‌ ಏರಿಯಾ 2 ನೇ ಹಂತ ಗುಲಬರ್ಗಾ ಇವರು ದಿನಾಂಕ 13-05-2011 ರಂದು ತನ್ನ ಮಗನ ಮದುವೆ ಇರುವದರಿಂದ ರಾಜಸ್ತಾನಕ್ಕೆ ಹೋಗುವಾಗ ತಮ್ಮ ಪ್ಯಾಕ್ಟರಿ ಬಂದ ಮಾಡಿಕೊಂಡು ಹೋಗಿದ್ದು ಈ ವೇಳೆಯಲ್ಲಿ ನಮ್ಮ ಮುನಿಮನಾದ ಗೌಸ ಇತನು ದಿನಾಂಕ 22-05-2011 ರಂದು ಪೋನ ಮಾಡಿ ಪ್ಯಾಕ್ಟರಿಯ ಹಿಂದಿನ ಗೋಡೆ ಸ್ವಲ್ಪ ಒಡೆದು ಪ್ಯಾಕ್ಟರಿಯಲ್ಲಿಯ ತೋಗರಿ ಬೆಳೆ ಕಳುವು ಮಾಡಿಕೊಂಡು ಹೋಗಿ ರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ರಾಜಸ್ತಾನದಿಂದ ದಿನಾಂಕ 23-05-2011 ರಂದು ಮದ್ಯಾಹ್ನ ಗುಲಬರ್ಗಾಕ್ಕೆ ಬಂದು ನನ್ನ ಪ್ಯಾಕ್ಟ್‌ರಿ ಹತ್ತಿರ ಹೋಗಿ ಮುನಿಮನಾದ ಗೌಸ ಇತನೊಂದಿಗೆ ಪ್ಯಾಕ್ಟರಿಯ ಶೆಟರ್‌ ತೆಗೆದು ನೋಡಲಾಗಿ ಪ್ಯಾಕ್ಟ್‌ರಿಯ ಹಿಂದಿನ ಗೋಡೆ ಸ್ವಲ್ಪ ಒಡೆದು ಪ್ಯಾಕ್ಟ್‌ರಿಯಲ್ಲಿಯ ಸುಮಾರು 2,24,000/- ರೂಪಾಯಿ ಕಿಮ್ಮತ್ತಿನ 50 ಕೆಜಿಯ ತೋಗರಿ ಬ್ಯಾಳಿಯ 80 ಬ್ಯಾಗಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ ;

ಆಳಂದ ಠಾಣೆ ;ಶ್ರೀಮತಿ ಪೂಜಾ ಗಂಡ ರಮೇಶ ಲೋಹರ ಸಾ; ರೇವಣಸಿದ್ದೇಶ್ವರ ಕಾಲೂನಿ ಆಳಂದ ರವರ ದಿನಾಂಕ 24-05-2011 ರಂದು ಕರ್ನಾಟಕ ಮೆಡಿಕಲದ ಆಸೀಫ ಹಾಗೂ ಆತನ ತಮ್ಮ ಯುನುಸ ಮತ್ತು ಸಂಗಡ 4-5 ಜನರು ಕುಡಿಕೊಂಡು ನಮ್ಮ ಮೆಡಿಕಲ್ ಅಂಗಡಿಗೆ ಬಂದು ವಿ:ನಾಕಾರಣ ಜಗಳ ತೆಗೆದು ಅಂಗಡಿಯಲ್ಲಿ ಕೆಲಸ ಮಾಡುವ ಕಾಸಿನಾಥ ಮತ್ತು ಹಣಮಂತ ಹಾಗು ನನ್ನ ಗಂಡನಾದ ರಮೇಶ ಇವರಿಗೆ ಕೊಲೆ ಮಾಡುವ ಉದ್ಧೇಶದಿಂದ ಚಾಕುವಿನಿಂದ ಕಬ್ಬಿಣದ ರಾಡಿನಿಂದ ಹೊಡೆದು ಗಾಯಗಳಿಸಿ ಅಂಡಿಯ ಕೌಂಟರ ಗ್ಲಾಸ ಮತ್ತು ಔಸಧ ಬಾಟಲಗಳನ್ನು ಒಡೆದು ಹಾಳುಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

24 May 2011

GULBARGA DISTRICT REPORTED CRIMES

ಕೊಲೆ ಪ್ರಕರಣ ;
ಅಫಜಲಪೂರ ಠಾಣೆ ;ಶ್ರೀಮತಿ ಮಹಾದೇವಿ ಗಂಡ ಚಂದ್ರಶಾ ಪಾಟೀಲ ಸಾ|| ಬಳೂಂಡಗಿ ಇವರ ಗಂಡನಾದ ಚಂದ್ರಶಾ ಇವನು ದಿನಾಂಕ 22-05-2011 ರಂದು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಅಫಜಲಪೂರದಲ್ಲಿರುವ ರುದ್ರಗೌಡನಿಗೆ ಹಣ ಕೇಳಿ ಬರುತ್ತೆನೆ ಅಂತಾ ಹೋಗಿದ್ದು ದಿನಾಂಕ 23-05-2011 ರಂದು ಯಾರೋ ದುಷ್ಕರ್ಮಿಗಳು ಚಂದ್ರಶಾನಿಗೆ ಗುಂಡು ಹೊಡೆದು ಕಲ್ಲಿನಿಂದ ಜಜ್ಜಿ ಶವವನ್ನು ಖಾಜಾಬಿ ಇವಳ ಹೊಲದ ಬಾವಿಯಲ್ಲಿ ಎಸೆದು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಣಕಸಿದುಕೊಂಡು ಕೊಲೆ ಮಾಡಿದ ಪ್ರಕರಣ ;
ಸುಲೇಪೆಟ ಠಾಣೆ ;
ಶ್ರೀ ಸಾಬಣ್ಣಾ ತಂದೆ ಬಸಪ್ಪಾ ಕೋಡ್ಲಿ ಇವರ ಮಗನಾದ ಸಿದ್ದಪ್ಪಾ ಕೋಡ್ಲಿ ಇವನಿಗೆ ಮಾಳಪ್ಪಾ ತಂದೆ ನರಸಪ್ಪಾ ಕೋಡ್ಲಿ ಇವನು ದಿನಾಂಕ 22-05-2011 ರಂದು ರಾತ್ರಿ ಕೋಳಿಯ ಅಡಿಗೆ ಮಾಡಿಸಿದ್ದನೆ ಊಟ ಮಾಡಿ ಅಲ್ಲಿಯೇ ಮಲಗೋಣ ಅಂತಾ ಹೇಳಿ ಸಿದ್ದಪ್ಪನಿಗೆ ಕುಡಹಳ್ಳಿ ಗ್ರಾಮದ ಮಲ್ಲಿನಾಥ ಪೊಲೀಸ ಪಾಟೀಲರವರ ಹೊಲಕ್ಕೆ ಕರೆದುಕೊಂಡು ಹೋಗಿ ಹೊಡೆಬಡೆ ಮಾಡಿ ಗಾಯಗೊಳಿಸಿ ಅವನ ಹತ್ತಿರ ಇದ್ದ ಹಣವನ್ನು ಕಸಿದುಕೊಂಡು ಹೋಗಿದ್ದು ಹೊಡೆಬಡೆ ಗಾಯದಿಂದ ನರಳುತ್ತಿದ್ದ ಸಿದ್ದಪ್ಪನನ್ನು ಉಪಚಾರ ಕುರಿತು ಗುಲಬರ್ಗಾಕ್ಕೆ ಸಾಗಿಸುತ್ತಿದ್ದಾಗ ಮಾರ್ಗಮಧ್ಯದಲ್ಲಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸುಲೇಪೆಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂರು ಕಡೆ ಪ್ರತ್ಯೇಕ ಅಪಘಾತ 3 ಜನರ ಸಾವು ;

ನಲೋಗಿ ಠಾಣೆ ;ಶ್ರೀ ಅರವಿಂದ ತಂದೆ ರುಕ್ಕಯ್ಯಾ ಗುತ್ತೇದಾರ ಸಾ; ವಿದ್ಯಾನಗರ ಗುಲಬರ್ಗಾ ಇವರು ಮನೆಯವರೊಂದಿಗೆ ಗುಡ್ಡಾಪೂರಕ್ಕೆ ಹೋಗಿ ವಾಪಸ ಬರುತ್ತಿರುವಾಗ ದಿನಾಂಕ 22-05-2011 ರಂದು ರಾತ್ರಿ 9 ಗಂಟೆಯ ಸುಮಾರಿಗೆ ಮಂದೇವಾಲ ಜೋಗುರ ಪೆಟ್ರೋಲ ಪಂಪನಲ್ಲಿ ಡಿಜೆಲ್ ಹಾಕಿಸುತ್ತಿರುವಾಗ ಹೆಣ್ಣುಮಕ್ಕಳು ನಿಸರ್ಗಕರೆಗೆ ಹೋಗಿ ರಸ್ತೆ ದಾಟುತ್ತಿರುವಾಗ ಸಿಂದಗಿ ಕಡೆಯಿಂದ ಯಾವುದೋ ಒಂದು ವಾಹನ ಚಾಲಕ ಅತೀ ವೇಗವಾಗಿ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಅಚ್ಚಮ್ಮಳಿಗೆ ಡಿಕ್ಕಿ ಪಡಿಸಿದ್ದರಿಂದ ಸ್ಠಳದಲ್ಲೆ ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಳಂದ ಠಾಣೆ ;ಶ್ರೀ ದೀಪಕ ತಂದೆ ಗುರಪ್ಪಾ ಸಾ; ಖಂಡಾಳ ಇವರ ಹೊಲಕ್ಕೆ ಖಜೂರಿಯ ಶಿವಪ್ಪ @ ಶಿವಾನಂದ ತಂದೆ ಕುಪೆಂದ್ರ ತುಪ್ಪದೊಡ್ಡಿ ಇವರಿಗೆ ಸೇರಿದ ಹೊಸ ಟ್ರ್ಯಾಕ್ಟರ ಇಂಜಿನ ನಂ ಎಸ್ ಜೆ 32714939 ಚಿಸ್ಸಿ ನಂ ಓಎ 27-gÀhÄಡ್ 512 ಸಿ 23701 ನೆದ್ದರಲ್ಲಿ ನಾನು ಮತ್ತು ನಮ್ಮ ಅಣ್ಣ ಬಾಳಾಸಾಬ ನೇಗಿಲು ಹೊಡೆಯಲು ಹೋಗಿದ್ದು ದಿನಾಂಕ 22-05-2011 ರ ರಾತ್ರಿ 11 ಗಂಟೆಯ ಸುಮಾರಿಗೆ ಬಾಲಚಂದ್ರ ಸುರ್ಯವಂಶಿ ಇವರ ಹೊಲದ ಹತ್ತಿರ ಟ್ರ್ಯಾಕ್ಟರ qÉæöÊವರನು ನಿಸ್ಕಾಳಜಿತನದಿಂದ ಹಿಂದಕ್ಕೆ ತಂದಿದು ಪಲ್ಟಿಮಾಡಿದ್ದು ಹಿಂದೆ ಇದ್ದ ನಮ್ಮ ಅಣ್ಣ ಬಾಳಾಸಾಬ ಇವನು ಟ್ರ್ಯಾಕ್ಟರನ ಅಡಿಯಲ್ಲಿ ಸಿಕ್ಕು ಸ್ಠಳದಲ್ಲೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೇವೂರ ಠಾಣೆ ;ದಿನಾಂಕ 23-05-2011 ರಂದು ಟ್ರ್ಯಾಕ್ಟರ ನಂ ಕೆ.ಎ. 38- ಟಿ- 1297 ನೇದ್ದರ ಚಾಲಕ ರವಿ ತಂದೆ ಕಲ್ಲಪ್ಪ ನಾವಿ ಸಾ; ಹಾವಿನ ಹಾಳ ತಾ; ಇಂಡಿ ಜಿ; ಬಿಜಾಪೂರ ಮತ್ತು ವಿಶ್ವನಾಥ ತಂದೆ ಶಿವಣ್ಣ ನಾಮುಜಾನೆ ಇಬ್ಬರು ಕೊಡಿಕೊಂಡು ಟ್ರ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಆಳಂದ ಕಡೆಗೆ ಹೊಗುತ್ತಿರುವಾಗ ರೇವುರದಿಂದ 1 ಕಿಲೋ ಮೀ ದೂರದಲ್ಲಿ ಟ್ರ್ಯಾಕ್ಟರ ಚಾಲಕನು ತನ್ನ ವಾಹನವನ್ನು ನಿಸ್ಕಾಳಜಿ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ರಸ್ಟೆ ಬದಿ ತೆಗ್ಗಿನಲ್ಲಿ ಪಲ್ಟಿ ಮಾಡಿ ಟ್ರ್ಯಕ್ಟರ ಅಡಿಯಲ್ಲಿ ಚಾಲಕ ಮತ್ತು ವಿಶ್ವನಾಥ ಸಿಲುಕಿ ಭಾರಿ ಗಾಯಗಳಾಗಿ ಅಫಜಲಪೂರ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ವಿಶ್ವನಾಥ ಇವನಿಗೆ ಉಪಚಾರ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಹರಣ ಪ್ರಕರಣ ;
ಶಾಹಾಬಾದ ನಗರ ಠಾಣೆ ;
ಶ್ರೀ ದತ್ತಾತ್ರೇಯ ತಂದೆ ನರಸಿಂಹ ಹೊನ್ನಾವರ ಸಾ:ಶರಣನಗರ ಶಹಾಬಾದ. ಇವರ ಮಗಳಾದ ಅರ್ಚನಾ ವ:32 ಇವಳು ನೌಕರಿ ಪಾರಂ ತುಂಬಿ ಬರುತ್ತೇನೆ ಅಂತಾ ಹೇಳಿ ನಿನ್ನ ದಿನಾಂಕ 22-05-11 ರಂದು ಮುಂಜಾನೆ 8 ಎಎಮ್ ಕ್ಕೆ ಸುಮಾರಿಗೆ ಗುಲಬರ್ಗಾಕ್ಕೆ ಹೋಗಿಬರುತ್ತೇನೆ ಅಂದವಳು ಹೊದವಳು ಇಲ್ಲಿಯವರೆಗೆ ಬಂದಿರುವುದಿಲ್ಲಾ. ನಾನು ಮತ್ತು ನನ್ನ ಹೆಂಡತಿ ನಮ್ಮ ಸಂಭಂದಿಕರ ಮನೆ ಹಾಗೂ ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ. ಮತ್ತೆ ಮರಳಿ ಶಹಾಬಾಧಕ್ಕೆ ಬಂದಾಗ ಗೊತ್ತಾಗಿದ್ದೇನೆಂದರೆ, ನನ್ನ ಮಗಳೂ ಅರ್ಚನಾ ಇವಳು ಶಹಾಭಾದ ದಿಂದ ಗುಲಬರ್ಗಾಕ್ಕೆ ಹೋಗುವ ಕುರಿಗು ನಹರು ಚೌಕ ಶಹಾಬಾಧ ದಲ್ಲಿ ಬಂದು ನಿಂತಾಗ ಶಹಾಬಾದದ ಪೀರಪ್ಪಾ @ ರಾಜು ತಂದೆ ಸಾಯಬಣ್ಣಾ ಕೂಲಿ ಸಾ: ಬಸವೇಶ್ವರ ನಗರ ಶಹಾಬಾದ. ಇವನು ನನ್ನ ಮಗಳೀಗೆ ಪುಸಲಾಯಿಸಿ ಮದುವೆ ಮಾಡಿಕೊಳ್ಳೂತ್ತೇನೆ ಅಂತಾ ಒತ್ತಾಯದಿಂದ ಅಪಹರಿಸಿಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.