POLICE BHAVAN KALABURAGI

POLICE BHAVAN KALABURAGI

16 February 2020

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ: 15-02-2020 ರಂದು ಅಫಜಲಪೂರ ಠಾಣಾ ವ್ಯಾಪ್ತಿಯ  ಮಣೂರ ಗ್ರಾಮದ ಯಲ್ಲಮ್ಮ ಧೇವಿಯ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯೆಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು ಮಟಕಾ ಬರೆದುಕೊಳ್ಳುತ್ತಿದ್ದಾನೆ. ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಣೂರ ಗ್ರಾಮಕ್ಕೆ ಹೋಗಿ ಯಲ್ಲಮ್ಮ ಧೇವಿಯ ಗುಡಿಯಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಗುಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯೆಕ್ತಿ ನಿಂತುಕೊಂಡು ಹೋಗಿ ಬರುವ ಜನಗಳಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನು. ಅದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಿ ಅಂಗ ಶೋದನೆ ಮಾಡಲಾಗಿ  ಆತನು ತನ್ನ ಹೆಸರು ಗಡ್ಡೆಪ್ಪ ತಂದೆ ಶ್ರೀಮಂತ ಬುಂಯಾರ ಸಾ|| ಮಣೂರ ಗ್ರಾಮ ತಾ|| ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1) 1410/-  ರೂಪಾಯಿ ನಗದು ಹಣ ಹಾಗೂ 2) ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಹಾಗೂ 3) ಒಂದು ಪೆನ್ನ ದೊರೆತವು, ಸದರಿಯವುಗಳನ್ನು ಪಂಚರ ಸಮಕ್ಷಮ ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಕಳ್ಳತನದಿಂದಿಂದ ಮರಳು ಸಾಗಿಸುತ್ತಿದ್ದ ಟಿಪ್ಪರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ:15-02-2020 ರಂದು ಅಫಜಲಪೂರ ಠಾಣಾ ವ್ಯಾಪ್ತಿಯ  ಸೊನ್ನ ಗ್ರಾಮದ ಭಿಮಾ ನದಿಯಿಂದ ಟಿಪ್ಪರದಲ್ಲಿ ಕಳ್ಳತನದಿಂದ ಮರಳು ತುಂಬಿಕೊಂಡು ಅಫಜಲಪೂರ ಪಟ್ಟಣದ ಕಡೆ ಬರುತ್ತಿದೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ, ಪಿ.ಎಸ್.. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸೋನ್ನ ಗ್ರಾಮಕ್ಕೆ ಹೋಗುತ್ತಿರುವಾಗ ಮಾರ್ಗ ಮಧ್ಯದಲ್ಲಿ ಸೋನ್ನ ಕ್ರಾಸ್ ಹತ್ತೀರ ನಮ್ಮ ಎದುರುಗಡೆಯಿಂದ ಒಂದು ಮರಳು ತುಂಬಿದ ಟಿಪ್ಪರ ಬಂದಿದ್ದು ಆಗ ಸದರಿ ಟಿಪ್ಪರನ್ನು ನಿಲ್ಲಿಸುವಂತೆ ಅದರ ಚಾಲಕನಿಗೆ ಸೂಚನೆ ಕೊಟ್ಟಾಗ ಸದರಿ ಚಾಲಕನು ಟಿಪ್ಪರ ನಿಲ್ಲಿಸಿ ನಮ್ಮನ್ನು ನೋಡಿ ಓಡಿ ಹೊದನು ನಾವು ಅವನನ್ನು ಹಿಡಿಯಬೆಕೆಂದು ಬೆನ್ನು ಹತ್ತೀದರು ನಮಗೆ ಸಿಗಲಿಲ್ಲ ನಂತರ ಸದರಿ ಟಿಪ್ಪರನ್ನು ಪಂಚರ ಸಮಕ್ಷಮ ಚೆಕ್ ಮಾಡಿ ನೊಡಲಾಗಿ 1) ಭಾರತ ಬೆಂಜ್ ಕಂಪನಿಯದು ಇದ್ದು ಅದರ ನೊಂದಣೀ ಸಂಖ್ಯೆ ಕೆ.-32 ಸಿ-3580 ಇದ್ದು ಅದರಲ್ಲಿ ಮರಳು ತುಂಬಿದ್ದು ಇತ್ತು ಮತ್ತು ಸದರಿ ಟಿಪ್ಪರ .ಕಿ 10,00,000/-ರೂ  ಇರಬಹುದು ಮತ್ತು  ಟಿಪ್ಪರದಲ್ಲಿದ್ದ ಮರಳಿನ .ಕಿ 10.000/- ರೂ ಇರಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟಿಪ್ಪರನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತಗೆದುಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

15 February 2020

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ವಾಡಿ ಠಾಣೆ : ದಿನಾಂಕ:14/02/2020 ರಂದು ಮದ್ಯಾಹ್ನ ವಾಡಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಬರುವ ಇಂಗಳಗಿ ಗ್ರಾಮದ ಬಸವೇಶ್ವರ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ರೊಡಿಗೆ ಒಬ್ಬ ವ್ಯಕ್ತಿ ನಿಂತುಕೊಂಡು ಜನರಿಂದ ಹಣ ಪಡೆದು ಒಂದು ರೂಪಾಯಿಗೆ 80/- ರೂಪಾಯಿ ಗೆಲ್ಲಿರಿ ಅಂತಾ ಕೂಗಾಡುತ್ತಾ ಮಟಕಾ ಅಂಕಿ ಸಂಖ್ಯೆ ಬರೆದು ಚೀಟಿ ಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಿಗಿರುತ್ತಾನೆ ಅಂತಾ ಬಂದ ಬಾತ್ಮಿ ಮೇರೆಗೆ ಪಿ.ಎಸ್.ಐ. ವಾಡಿ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ.ಪಿ ಸಾಹೇಬರು ಶಹಾಬಾದ ಮತ್ತು ಸಿ.ಪಿ.ಐ ಸಾಹೇಬರು ಚಿತ್ತಾಪೂರ ವೃತ್ತ ರವರ ಮಾರ್ಗದರ್ಶನದಲ್ಲಿ ಇಂಗಳಗಿ ಗ್ರಾಮಕ್ಕೆ ಹೋಗಿ  ಮರೆಯಲ್ಲಿ ನಿಂತು ನಿರೀಕ್ಷಣೆ ಮಾಡಿ ನೋಡಿ ಮಟಕಾ ಅಂಕಿ ಸಂಖ್ಯೆ ಬರೆದುಕೊಳ್ಳುತ್ತಿದ್ದನ್ನು ಖಚಿತ ಪಡಿಸಿಕೊಂಡು ಸದರಿಯವನ ಮೇಲೆ ದಾಳಿ ಮಾಡುವಷ್ಟರಲ್ಲಿ ಪೊಲೀಸ ಸಮವಸ್ತ್ರ ನೋಡಿ ಮಟಕಾ ಅಂಕಿ ಸಂಖ್ಯೆ ಬರೆಸುತ್ತಿದ್ದವರು ಓಡಿ ಹೋಗಿದ್ದು ಮಟಕಾ ಅಂಕಿ ಸಂಖ್ಯೆ ಬರೆದುಕೊಳ್ಳುತ್ತಿದ್ದ ವ್ಯಕ್ತಿಯನ್ನು ಸಿಬ್ಬಂದಿ ಸಹಾಯದಿಂದ ಹಿಡಿದು ಆತನಿಗೆ ವಿಚಾರಿಸಲು ತನ್ನ ಹೆಸರು ಸುರೇಶ ತಂದೆ ಈರಣ್ಣಾ ಹೊಳಕುಂದಿ ಸಾ:ಇಂಗಳಗಿ ಅಂತಾ ತಿಳಿಸಿದನು. ಸದರಿಯವನ ಅಂಗ ಶೋಧನೆ ಮಾಡಲಾಗಿ ಆತನ ವಶದಿಂದ 1140 /- ರೂ ನಗದು ಹಣ ಮತ್ತು 02 ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿ ಹಾಗೂ ಒಂದು ಬಾಲ ಪೆನ್ನು ದೊರೆತಿದ್ದು ಮಟಕಾ ನಂಬರ ಬರೆದ ಚೀಟಿಗಳನ್ನು ಯಾರಿಗೆ ಕೊಡುತ್ತಿಯಾ ಅಂತಾ ವಿಚಾರಿಸಲಾಗಿ ತಾನೇ ಇಟ್ಟುಕೊಳ್ಳುತ್ತೆನೆ ಅಂತಾ ತಿಳಿಸಿದನು. ಅವುಗಳನ್ನು ಜಪ್ತಿ ಪಡಿಸಿಕೊಂಡು ಸದರಿಯವನೊಂದಿಗೆ ವಾಡಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ವಾಡಿ ಠಾಣೆ : ಶ್ರೀಮತಿ  ಚಂದ್ರಕಲಾ ಗಂಡ ಭೀಮರಾಯ ಬೇಳಗೆರಿ ಮು:ತುನ್ನೂರ ಗ್ರಾಮ ರವರ ಗಂಡ ಭೀಮರಾಯ ತಂದೆ ಬಂಡಪ್ಪ ಬೇಳಗೆರಿ ಇವರು ದಿನಾಂಕ 08/02/2020 ರಂದು ಮದ್ಯಾಹ್ನ 02-00 ಗಂಟೆ ಸುಮಾರು ನನ್ನ ಗಂಡ ಭೀಮರಾಯ ಇವರು ಹೊಲಕ್ಕೆ ಹೋಗಿ ಬರುತ್ತೆನೆ ಅಂತಾ ಹೇಳಿ ಹೊರಟು ಹೋದರು. ನಂತರ ಮದ್ಯಾಹ್ನ 03-15 ಗಂಟೆ ಸುಮಾರು ನಮ್ಮ ಗ್ರಾಮದ ಚಂದರಡ್ಡಿ ಮೂಲಿಮನಿ ಎನ್ನುವರು ನಮಗೆ ಫೋನ ಮಾಡಿ ನಿನ್ನ ಗಂಡ ಮೊಟರ ಸೈಕಲ ಮೇಲೆ ತುನ್ನೂರ ಗ್ರಾಮದಿಂದ ಹೊಲದ ಕಡೆಗೆ ಹೊರಟಾಗ ಸಾಹೇಬಗೌಡ ರವರ ಹೊಲದ ಹತ್ತಿರ ಮೊಟರ ಸೈಕಲ ಮೇಲಿಂದ ಬಿದ್ದಿರುತ್ತಾನೆ. ಅಂತಾ ವಿಷಯ ತಿಳಿಸಿದಾಗ ನಾನು ಮತ್ತು ನಮ್ಮ ಭಾವ ಸಿದ್ದಣ್ಣಾ ಕೂಡಿಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ಚಂದರಡ್ಡಿ ರವರು ಸ್ಥಳದಲ್ಲಿ ಇರಲಿಲ್ಲ. ನೋಡಲಾಗಿ ನನ್ನ ಗಂಡನ ತಲೆಯ ಹಿಂದೆ ಭಾರಿ ರಕ್ತಗಾಯವಾಗಿದ್ದು ಆತನು ಮಾತನಾಡುವ ಸ್ಥಿತಿಯಲ್ಲಿ  ಇರಲಿಲ್ಲ. ನಂತರ ನನ್ನ ಗಂಡನಿಗೆ ಖಾಸಗಿ ವಾಹನದಲ್ಲಿ ಹಾಕಿಕೊಂಡು ಕಲಬುರಗಿಯ ವಾತ್ಸಲ್ಯ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ. ನಂತರ ವಾಡಿ ಪೊಲೀಸರು ಸಹ ಬಂದಾಗ ನನ್ನ ಗಂಡ ಹೇಗೆ ಬಿದ್ದ ಎನ್ನುವ ಬಗ್ಗೆ ಹೆಚ್ಚು ವಿಷಯ ಗೊತ್ತಿರುವದಿಲ್ಲ ಅಂತಾ ತಿಳಿಸಿರುತ್ತೆನೆ. ಆದರೆ ದಿನಾಂಕ 12/02/2020 ರಂದು ಚಂದರಡ್ಡಿ ಇತನು ಆಸ್ಪತ್ರೆಗೆ ಬಂದಾಗ ಅವರಿಗೆ ಘಟನೆಯ ಬಗ್ಗೆ ವಿಚಾರಿಸಲಾಗಿ ನಿನ್ನ ಗಂಡ ವಾಡಿ ಪಟ್ಟಣದ ಮಹ್ಮದ ಹುಸೇನ ಎನ್ನುವರ ಮೊಟರ ಸೈಕಲ ನಂಬರ ಕೆಎ-32 ಇಎಸ್-7216 ನೇದ್ದರ ಮೇಲೆ ಕುಳಿತುಕೊಂಡು ತುನ್ನೂರದಿಂದ ಬರುವ ಕಾಲಕ್ಕೆ ಮೊಟರ ಸೈಕಲ ಅತಿವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಹೊರಟಿದ್ದು ಆಗ ರೊಡಿನ ಜಂಪದಲ್ಲಿ ಒಮ್ಮೇಲೆ ಹಿಂದೆ ಕುಳಿತ ನಿನ್ನ ಗಂಡ ಭೀಮರಾಯ ಇತನು ಕೆಳಗಡೆ ಬಿದ್ದನು. ಆಗ ನಾನು  ನನ್ನ ಮೊಟರ ಸೈಕಲ ನಿಲ್ಲಿಸಿ ಆತನ ಹತ್ತಿರ ಹೋಗಿ ನೋಡಲಾಗಿ ನಿನ್ನ ಗಂಡ ಭೀಮರಾಯ ಇತನು ಇದ್ದ ಬಗ್ಗೆ ನೋಡಿ ಗುರ್ತಿಸಿ ನಿಮಗೆ ಫೋನ ಮಾಡಿ ವಿಷಯ ತಿಳಿಸಿದೆನು. ಮಹ್ಮದ ಹುಸೇನ ಇತನು ತನ್ನ ಮೊಟರ ಸೈಕಲ ತೆಗೆದುಕೊಂಡು ನಾಲವಾರ ಕಡೆಗೆ ಹೊರಟು ಹೋದನು. ನಂತರ ನಮ್ಮೂರಿನ ಒಬ್ಬಿಬ್ಬೊರು ಅಲ್ಲಿ ಬಂದಿದ್ದರಿಂದ ನಾನು ಅಲ್ಲಿಂದ ಹೊರಟು ಹೋಗಿರುತ್ತೆನೆ.ಅಂತಾ ತಿಳಿಸಿರುತ್ತರೆ ನನ್ನ ಗಂಡನಿಗೆ ತಲೆಗೆ ಗಾಯವಾಗಿದ್ದು ಮಾತನಾಡುವ ಸ್ಥಿತಿಯಲ್ಲಿ ಇರದೇ ಇರುವದರಿಂದ ನಾನು ಈ ಬಗ್ಗೆ ಕೇಸು ವಗೈರೆ ಮಾಡಿಸಿರುವದಿಲ್ಲ. ಈ ಬಗ್ಗೆ ಕೇಸು ಆಗುತ್ತದೆ ಅಂತಾ ಹಿರಿಯರಿಂದ ಗೊತ್ತಾಗಿ ಮತ್ತೆ ವೈದ್ಯರಿಗೆ ನಾನು ನನ್ನ ಹೇಳಿಕೆಯನ್ನು ಕೊಟ್ಟು MLC ಕೇಸು ಮಾಡಿಸಿರುತ್ತೆನೆ. ನನ್ನ ಗಂಡನಿಗೆ ಮಹ್ಮದ ಹುಸೇನ ಎನ್ನುವರು ಮೊಟರ ಸೈಕಲ ನಂಬರ ಕೆಎ-32 ಇಎಸ್-7216 ನೇದ್ದರ ಮೇಲೆ ಕೂಡಿಸಿಕೊಂಡು ಅತಿವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಹೊರಟಾಗ ರೊಡ ಜಂಪದಲ್ಲಿ ಹಿಂದೆ ಕುಳಿತ ನನ್ನ ಗಂಡ ಮೊಟರ ಸೈಕಲ ಮೇಲಿಂದ  ರೊಡ ಮೇಲೆ ಬಿದ್ದ ಪರಿಣಾಮ ಈ ಘಟನೆ ಸಂಭವಿಸಿದ್ದು ಈ ಬಗ್ಗೆ ಮೊಟರ ಸೈಕಲ ಚಾಲಕನಿಗೆ ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 10-02-2020 ರಂದು ಮದ್ಯಾಹ್ನ ನನ್ನ ಮಗನಾದ ಮಂತ್ರೇಶನು ಅಫಜಲಪೂರಕ್ಕೆ ಹೋಗಿ ಸಂತೆ ಮಾಡಿಕೊಂಡು ಬರುತ್ತೇನೆ ಎಂದು ಹೇಳಿ ನಮ್ಮ ಹೊಲದಲ್ಲಿನ ಮನೆಯಿಂದ ಅಫಜಲಪೂರಕ್ಕೆ ಹೋಗಿರುತ್ತಾನೆ. ನನ್ನ ಮಗ ಮಂತ್ರೇಶನು ಸಂಜೆ ಎಷ್ಟೋತ್ತಾದರೂ ಮನೆಗೆ ಬರದೆ ಇದ್ದುದರಿಂದ ನನ್ನ ಮಗನನ್ನು ಅಂದಿನಿಂದ ಇಂದಿನ ವರೆಗೆ ನಾನು ಮತ್ತು ನನ್ನ ಮಗನಾದ ರಮೇಶ ಹಾಗೂ ನಮ್ಮ ಅಣ್ಣ ತಮ್ಮಕಿಯ ಮಾಳಪ್ಪ ಜಗಲಗೊಂಡ ಮೂರು ಜನರು ಕೂಡಿ ಅಫಜಲಪೂರ, ಕಲಬುರಗಿ, ಜೇವರ್ಗಿ, ಸಿಂದಗಿ, ಆಲಮೇಲ್ ಪಟ್ಟಣಗಳಿಗೆ ಹೋಗಿ ಹುಡುಕಾಡಿದ್ದು ನನ್ನ ಮಗ ಎಲ್ಲಿಯೂ ಸಿಕ್ಕಿರುವುದಿಲ್ಲ. ನನ್ನ ಮಗನಾದ ಮಂತ್ರೇಶ ವಯ|| 27 ವರ್ಷ ಈತನು ದಿನಾಂಕ 10-02-2020 ರಂದು ಮದ್ಯಾಹ್ನ 12:15 ಗಂಟೆಗೆ ಅಫಜಲಪೂರಕ್ಕೆ ಹೋಗಿ ಸಂತೆ ಮಾಡಿಕೊಂಡು ಬರುತ್ತೇನೆ ಎಂದು ಹೇಳಿ ಹವಳಗಾ ಸೀಮೆಯ ನನ್ನ ಹೊಲ ಸರ್ವೆ ನಂ 78 ನೇದ್ದರಲ್ಲಿನ ಹೊಲದಲ್ಲಿನ ಮನೆಯಿಂದ ಹೋಗಿ ಕಾಣೆಯಾಗಿರುತ್ತಾನೆ. ನನ್ನ ಮಗನು ಎಷ್ಟು ಹುಡುಕಾಡಿದರೂ ಸಿಕ್ಕಿರುವುದಿಲ್ಲಾ ಕಾಣೆಯಾದ ವ್ಯೆಕ್ತಿಯ  ಚಹರಾಪಟ್ಟಿ ಹೆಸರು ಮತ್ತು ವಿಳಾಸ ಮಂತ್ರೇಶ ತಂದೆ ಸಾಯಬಣ್ದಣ ಜಗಲಗೊಂಡ ವಯ|| 27 ವರ್ಷ ಸಾ|| ಹವಳಗಾ ಗ್ರಾಮ ತಾ|| ಅಫಜಲಪೂರ ಜಿ|| ಕಲಬುರಗಿ  ಎತ್ತರ    ಅಂದಾಜು 5.8 ಪೀಟ್ ಮುಖ  ಚಹರೆ ಕೋಲು ಮುಖ, ಗೋದಿ ಬಣ್ಣ, ಸಾದಾರಣ ಮೈಕಟ್ಟು ಇರುತ್ತದೆ ಕಾಣೆಯಾದ ದಿನದಂದು ದರಸಿದ ಉಡುಪುಗಳು ಹಳದಿ ಬಣ್ಣದ ಶರ್ಟ, ಚಾಕಲೇಟ ಬಣ್ಣದ ಪ್ಯಾಂಟ್ ಮಾತನಾಡುವ ಬಾಷೆಗಳು  ಕನ್ನಡ ಅಂತಾ ಶ್ರೀ ಸಾಯಬಣ್ಣ ತಂದೆ ಸಿದ್ದಪ್ಪ ಜಗಲಗೊಂಡ ಸಾ|| ಹವಳಗಾ ಗ್ರಾಮ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.