POLICE BHAVAN KALABURAGI

POLICE BHAVAN KALABURAGI

02 December 2019

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ವಾಡಿ ಠಾಣೆ : ದಿನಾಂಕ:30/11/2019 ರಂದು ಬೆಳಗ್ಗೆ ವಾಡಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಬರುವ  ಸನ್ನತಿ ಗ್ರಾಮದ  ಬಸಸ್ಟ್ಯಾಂಡ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಜನರಿಂದ ಹಣ ಪಡೆದು ಒಂದು ರೂಪಾಯಿಗೆ 80/- ರೂಪಾಯಿ ಗೆಲ್ಲಿರಿ ಅಂತಾ ಕೂಗಾಡುತ್ತಾ ಮಟಕಾ ಅಂಕಿ ಸಂಖ್ಯೆ ಬರೆದು ಚೀಟಿ ಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಿಗಿರುತ್ತಾನೆ ಅಂತಾ ಬಂದ ಬಾತ್ಮಿ ಮೇರೆಗೆ ಪಿ.ಎಸ್.ಐ. ವಾಡಿ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ.ಪಿ ಸಾಹೇಬರು ಶಹಾಬಾದ ಮತ್ತು ಸಿ.ಪಿ.ಐ ಸಾಹೇಬರು ಚಿತ್ತಾಪೂರ ವೃತ್ತ ರವರ ಮಾರ್ಗದರ್ಶನದಲ್ಲಿ ಸನ್ನತಿ ಗ್ರಾಮದ ಸಮೀಪ ಹೋಗಿ ಬಸಸ್ಟ್ಯಾಂಡ ಸಮೀಪ ರೊಡಿಗೆ ಜೀಪ ನಿಲ್ಲಿಸಿ ಜೀಪನಿಂದ ಇಳಿದು ಸ್ವಲ್ಪ ಮುಂದೆ ಹೋಗಿ ಮರೆಯಲ್ಲಿ ನಿಂತು ನಿರೀಕ್ಷಣೆ ಮಾಡಿ ನೋಡಿ ಮಟಕಾ ಅಂಕಿ ಸಂಖ್ಯೆ ಬರೆದುಕೊಳ್ಳುತ್ತಿದ್ದನ್ನು ಖಚಿತ ಪಡಿಸಿಕೊಂಡು ಸದರಿಯವನ ಮೇಲೆ ದಾಳಿ ಮಾಡುವಷ್ಟರಲ್ಲಿ ಪೊಲೀಸ ಸಮವಸ್ತ್ರ ನೋಡಿ ಮಟಕಾ ಅಂಕಿ ಸಂಖ್ಯೆ ಬರೆಸುತ್ತಿದ್ದವರು ಓಡಿ ಹೋಗಿದ್ದು ಮಟಕಾ ಅಂಕಿ ಸಂಖ್ಯೆ ಬರೆದುಕೊಳ್ಳುತ್ತಿದ್ದ ವ್ಯಕ್ತಿಯನ್ನು ಸಿಬ್ಬಂದಿ ಸಹಾಯದಿಂದ ಹಿಡಿದು ಆತನಿಗೆ ವಿಚಾರಿಸಲು ತನ್ನ ಹೆಸರು  ವಿಜಯಕುಮಾರ ತಂದೆ ಮಲ್ಲಣ್ಣಾ ನಾಟೀಕರ ಸಾ:ಸನ್ನತಿ ಅಂತಾ ತಿಳಿಸಿದನು. ಸದರಿಯವನ ಅಂಗ ಶೋಧನೆ ಮಾಡಲಾಗಿ ಆತನ ವಶದಿಂದ 750 /- ರೂ ನಗದು ಹಣ ಮತ್ತು 02 ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿ ಹಾಗೂ ಒಂದು ಬಾಲ ಪೆನ್ನು ದೊರೆತಿದ್ದು ಮಟಕಾ ನಂಬರ ಬರೆದ ಚೀಟಿಗಳನ್ನು ಯಾರಿಗೆ ಕೊಡುತ್ತಿಯಾ ಅಂತಾ ವಿಚಾರಿಸಲಾಗಿ ತಾನೇ ಇಟ್ಟುಕೊಳ್ಳುತ್ತೆನೆ ಅಂತಾ ತಿಳಿಸಿದ್ದು ಸದರಿಯವನೊಂದಿಗೆ ವಾಡಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅನಧೀಕೃತವಾಗಿ ಮರಳು ಸಾಗಿಸುತ್ತಿದ್ದ ವಾಹನಗಳ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 29-11-2019 ರಂದು ಕ್ಕೆ ಶ್ರೀ ಶಬ್ಬಿರ ಅಹ್ಮದ ದಿಡಗೂರ ಭೂ ವಿಜ್ಞಾನಿ ಗಣಿ ಮತ್ತು ಭೂ ವಿಜ್ಞಾನಿ ಇಲಾಖೆ ಕಲಬುರಗಿ ರವರು ಅನದಿಕೃತ ಸಾದಾ ಮರಳು ಸಾಗಾಣಿಕೆ ಮಾಡುತ್ತಿರುವ ವಾಹನ ಸಂಖ್ಯೆ ಕೆಎ-32-ಡಿ-0944 ದ ಮೇಲೆ ಕಾನೂನು ಕ್ರಮ ಕೈಕೊಳ್ಳುವ ಬಗ್ಗೆ. ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಹಾಗೂ ಸಹಾಯಕ ಆಯುಕ್ತರು ಕಲಬುರಗಿ ರವರು ಉಪ ನಿದೇರ್ಶಕರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಲಬುರಗಿ ರವರಿಗೆ ದೂರವಾಣಿ ಮೂಲಕ ಸೂಚಿಸಿರುವ ಮೇರೆಗೆ ಉಪ ನಿರ್ದೇಶಕರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ರವರು ಮೌಖಿಕವಾದ ಆದೇಶದ ಮೇರೆಗೆ ನಾನು ಶಬ್ಬಿರ ಅಹ್ಮದ ದಿಡಗೂರ ಭೂ ವಿಜ್ಞಾನಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ರವರು ಅಫಜಲಪೂರ ತಾಲೂಕೀನ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರವೀಣ ಭೂ ವಿಜ್ಞಾನಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಹಾಯಕ ಆಯುಕ್ತರು ಕಲಬುರಗಿ ಹಾಗೂ ತನಿಶಿಲ್ದಾರರು ಅಫಜಲಪೂರ ರವರು ಸೇರಿಕೊಂಡು ತಪಾಸಣೆ ನಡೆಸುತ್ತಿರುವಾಗ ಬಳೂರ್ಗಿ ಹೋಗುವ ರಸ್ತೆಯಲ್ಲಿ ಅಂದಾಜು ಅಫಜಲಪೂರ ದಿಂದ 8 ಕಿ.ಎಮ್ ಅಂತರದಲ್ಲಿ ಒಂದು ಮರಳು ತುಂಬಿದ ವಾಹನ ನಿಂತಿರುತ್ತದೆ ವಾಹನದಲ್ಲಿ ಯಾವುದೇ ಚಾಲಕರು ಇರುವುದಿಲ್ಲಾ ಹಾಗೂ ವಾಹನವನ್ನು ಸದರಿ ಪ್ರದೇಶದಲ್ಲಿ ಬಿಟ್ಟು ಚಾಲಕನು ಹೋಗಿರುತ್ತಾನೆ ವಾಹದಲ್ಲಿ ತಪಾಸಣೆ ನಡೆಸಿದಾಗ ಯಾವುದೇ ಮರಳು ರವಾನೆ ಪರವಾನಿಗೆ ಇರುವುದಿಲ್ಲ ಇದರಿಂದ ವಾಹನದಲ್ಲಿರುವ ಮರಳನ್ನು ಅನದಿಕೃತವಾಗಿ ಸಾಗಿಸುತ್ತಿರುವುದು ದೃಡಪಟ್ಟಿರುತ್ತದೆ. ವಾಹನದಲ್ಲಿ ಅಂದಾಜು 20 ಮೇಟ್ರೀಕ್ ಟನ್ ರಷ್ಟು ಮರಳು ಇರುವುದು ಕಂಡು ಬಂದಿರುತ್ತದೆ ಇದರ ಮಾರುಕಟ್ಟೆಯ ಬೆಲೆಯ ರೂ 15000/- ರೂ ಇರುತ್ತದೆ ಸದರಿ ವಾಹನದ ಅಂದಾಜು ಬೆಲೆಯು 8,00000/- (8 ಲಕ್ಷ) ರೂ ಇರುತ್ತದೆ ನಂತರ ವಾಹನವನ್ನು ಪರಿಶೀಲಿಸಿದಾಗ ಸದರಿ ವಾಹನದ ಸಂಖ್ಯೆ ಕೆಎ-32-ಡಿ-0944 ಇರುವುದು ಕಂಡು ಬಂದಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಫಜಲಪೂರ ಠಾಣೆ : ಶ್ರೀ ಮದುರಾಜ ತಹಸಿಲ್ದಾರ ಮತ್ತು ತಾಲೂಕ ದಂಡಾಧಿಕಾರಿ ಅಫಜಲಪೂರ ತಾಲೂಕ  ರವರು ದಿನಾಂಕ 29/11/2019 ರಂದು 8:00 ಪಿ ಎಮ್ ಕ್ಕೆ  ಮಾನ್ಯ ಸಹಾಯಕ ಆಯುಕ್ತರು ಕಲಬುರಗಿ ರವರು ಮತ್ತು ನಾನು ಹಾಗೂ ವಿಠ್ಠಲ ತಂದೆ ಹಣಮಂತ ಭೋವಿ ಇಂಗಳಗಿ (ಕೆ) ಗ್ರಾಮ ಲೇಕ್ಕಾಧಿಕಾರಿ ಮತ್ತು ಮಲ್ಲಿಕಾರ್ಜುನ ತಂದೆ ಲಕ್ಕಪ್ಪ ಚಂಗಿನ್ ಮತ್ತು ಶೀವಪುತ್ರ ತಂದೆ ಅವ್ವಣ್ಣ ಜಮಾದಾರ ಗ್ರಾಮ ಸಹಾಯಕ  ಇಂಗಳಗಿ (ಕೆ) ಗ್ರಾಮ ಇದ್ದು ಇಂಗಳಗಿ (ಕೆ) ಗ್ರಾಮಕ್ಕೆ ಹೋಗುತ್ತಿದ್ದಾಗ ಎದುರುಗಡೆಯಿಂದ ಒಂದು ಟಿಪ್ಪರದಲ್ಲಿ ಕಳ್ಳತನದಿಂದ ಅಕ್ರಮವಾಗಿ ಮರಳು ಬರುತ್ತಿರುವದನ್ನು ಕಂಡು ಸದರಿ ಟಿಪ್ಪರ ಚಾಲಕನಿಗೆ ಟಿಪ್ಪರ ನಿಲ್ಲಿಸಲು ಕೈ ಸೂಚನೆ ಕೊಟ್ಟಿದ್ದು ಆಗ ನಾವು ಟಿಪ್ಪರ ಹತ್ತಿರ ಹೋಗಿ ಸದರಿ ಚಾಲಕನಿಗೆ ದಾಖಲಾತಿಗಳನ್ನು ವಿಚಾರಿಸಿದಾಗ ತಪ್ಪು ದಾಖಲಾತಿಗಳನ್ನು ನೀಡಿ ವಾಹನ ಚಾಲಕನು ಪರಾರಿಯಾಗಿರುತ್ತಾನೆ. ನಾವು ಟಿಪ್ಪರ ಹತ್ತಿರ ಹೋಗಿ ನೋಡಲಾಗಿ ಭಾರತ ಬೆಂಜ್ ಕಂಪನಿಯದು ಇದ್ದು ಅದರ ನೊಂದಣೀ ಸಂಖ್ಯೆ ಕೆಎ-28-ಸಿ-3125 ಇದ್ದು ಅದರಲ್ಲಿ ಮರಳು ತುಂಬಿದ್ದು ಇತ್ತು ಮತ್ತು ಸದರಿ ಟಿಪ್ಪರ ಅ.ಕಿ 10,00,000/-ರೂ  ಇರಬಹುದು ಮತ್ತು  ಟಿಪ್ಪರದಲ್ಲಿದ್ದ ಮರಳಿನ ಅ.ಕಿ 10.000/- ರೂ ಇರಬಹುದು ಕಾರಣ ಸದರಿ ಟಿಪ್ಪರನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ನಮ್ಮ ಕಂದಾಯ ಇಲಾಖೆಯ ಸಿಬ್ಬಂದಿರವರ ಸಹಾಯದಿಂದ ಠಾಣೆಗೆ ತಂದಿದ್ದು ಕಾರಣ ಸದರಿ ಟಿಪ್ಪರ ವಾಹನದಲ್ಲಿ ಅಕ್ರಮವಾಗಿ ಅನಧಿಕೃತವಾಗಿ ಮರಳು ಸಾಗಿಸುತ್ತಿದ್ದರಿಂದ ಸದರಿ ಟಿಪ್ಪರ ಚಾಲಕ ಮತ್ತು ಮಾಲಿಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ನರೋಣಾ ಠಾಣೆ : ದಿನಾಂಕ 29/11/2019 ರಂದು ಮದ್ಯಾಹ್ನ ನಾನು ನಮ್ಮೂರಿನಲ್ಲಿದ್ದಾಗ ನನ್ನ ಮೊಬೈಲಿಗೆ ನಮ್ಮೂರಿನ ವಿಠ್ಠಲ ತಂದೆ ಚಂದಪ್ಪಾ ಕೊಣೆಕರ ಇವರು ಫೊನಮಾಡಿ ಗೊಳಾ(ಬಿ) ಕ್ರಾಸ್ ದಾಟಿ ನರೋಣಾ ಕಡೆಗೆ ಹೊಗುವ ಡಾಂಬರ ರೊಡಿನ ಮೇಲೆ ಒಬ್ಬ ಕಾರ ಚಾಲಕನು ರಾಚಣ್ಣಾ ಮತ್ತು ರಾಜಕುಮಾರ @ ರಾಜಶೇಖರ ತಂದೆ ಅಪ್ಪಾರಾವ ಮಾಲೀಪಾಟಿಲ ಸಾ: ಬಟ್ಟರ್ಗಾ ಇವರು ಹೊರಟಂತಹ ಮೊಟರ ಸೈಕಲಿಗೆ ಅಪಘಾತಪಡಿಸಿರುತ್ತಾನೆ. ಹೀಗಾಗಿ ಇಬ್ಬರಿಗೂ ಗಂಭೀರ ರಕ್ತಗಾಯ ಗುಪ್ತ ಗಾಯಗಳಾಗಿವೆ ಅವರಿಗೆ ಉಪಚಾರಕ್ಕಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಒಯ್ಯುತ್ತಿದ್ದೆವೆ ಅಂತಾ ತಿಳಿಸಿದ ಮೆರೆಗೆ ಗಾಬರಿಯಾಗಿ ನಾನು ಹಾಗು ನಮ್ಮೂರಿನ ಕಲ್ಲಯ್ಯಾ ತಂದೆ ಶಂಕ್ರಯ್ಯಾ ಮಠಪತಿ, ಸೂರ್ಯಕಾಂತ ಚಿಂಚನಸೂರ, ಹಾಲಣ್ಣಾ ಸನಗುಂದಿ ಎಲ್ಲರೂ ಸೇರಿ ಒಂದು ವಾಹನ ಬಾಡಿಗೆ ಮಾಡಿಕೊಂಡು ನೇರವಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆ ಕಲಬುರ್ಗಿಗೆ ಬಂದು ನೊಡಿದಾಗ ನನ್ನ ತಮ್ಮ ರಾಚಣ್ಣಾ ಈತನಿಗೆ ತಲೆಗೆ ಹಾಗು ಮುಖಕ್ಕೆ ಗಂಭೀರ ರಕ್ತಗಾಯ, ಕೈಕಾಲುಗಳಿಗೆ ರಕ್ತಗಾಯ, ಗುಪ್ತಗಾಯಗಳಾಗಿ ಭಾರಿ ರಕ್ತ ಹೋಗಿ ಮೃತಪಟ್ಟಿದ್ದು ಇದರ ಬಗ್ಗೆ ಆಸ್ಪತ್ರೆಯಲ್ಲಿದ್ದ ವಿಠ್ಠಲ ತಂದೆ ಚಂದಪ್ಪಾ ಕೊಣೆಕರ ಇವರಿಗೆ ವಿಚಾರ ಮಾಡಿದಾಗ ಅವರು ನನಗೆ ತಿಳಿಸಿದ್ದೆನೆಂದರೆ ನರೊಣಾ ಗ್ರಾಮದಲ್ಲಿ ಕೆಲಸವಿದ್ದ ಪ್ರಯುಕ್ತ ನಾನು ಹಾಗು ರಾಚಣ್ಣಾ, ರಾಜಶೇಖರ ತಂದೆ ಅಪ್ಪಾರಾವ ಮಾಲೀಪಾಟಿಲ ಸಾ: ಬಟ್ಟರ್ಗಾ ಎಲ್ಲರೂ ಸೇರಿ ಕಡಗಂಚಿ ವರೆಗೆ ರಾಚಣ್ಣಾ ಹಾಗು ರಾಜಶೇಖರ ಮೊಟರ ಸೈಕಲ ನಂ ಕೆಎ-32, ಎಸ್-8848 ನೆದ್ದರ ಮೇಲೆ ನಾನು ನನ್ನ ಮೊಟರ ಸೈಕಲ ಮೇಲೆ ಹೊಗಿರುತ್ತೆವೆ. ಕಡಗಂಚಿಯಲ್ಲಿ ನಮ್ಮ ಪರಿಚಯದವರಾದ ಸತೀಶಕುಮಾರ ತಂದೆ ಚನ್ನಪ್ಪಾ ಪನಶೇಟ್ಟಿ ಇವರು ನನ್ನ ಮೊಟರ ಸೈಕಲ ಮೇಲೆ ಹತ್ತಿದ್ದು, ಕೆಎ-32, ಎಸ್-8848 ನೆದ್ದನ್ನು ರಾಜಶೇಖರನು ಚಲಾಯಿಸುತ್ತಿದ್ದು ಆತನ ಹಿಂದುಗಡೆ ರಾಚಣ್ಣಾ ಇವರು ಕುಳಿತಿದ್ದರು ನನ್ನ ಮೊಟರ ಸೈಕಲನ್ನು ನಾನು ಚಲಾಯಿಸುತ್ತಿದ್ದು ನನ್ನ ಹಿಂದೆ ಸತೀಶಕುಮಾರ ಇವರು ಕುಳಿತಿದ್ದು ಗೊಳಾ(ಬಿ) ಕ್ರಾಸ ದಾಟಿ ಅರ್ಧ ಕಿಲೊ ಮಿಟರ್ ಅಂತರದಲ್ಲಿ ನರೋಣಾ ಕಡೆಗೆ ಹೊಗುವ ರೋಡಿನ ಮೇಲೆ ನನ್ನ ಮೊಟರ ಸೈಕಲ ಮುಂದೆ ಸ್ವಲ್ಪ ಅಂತರದಲ್ಲಿ ಇರುವ ಮೊಟರ ಸೈಕಲ ನಂ ಕೆಎ-32, ಎಸ್-8848 ನೆದ್ದಕ್ಕೆ 2-00 ಪಿ,ಎಮ್,ಕ್ಕೆ ಎದುರಿನಿಂದ ಒಬ್ಬ ಕಾರ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದವನೆ ಒಮ್ಮಿದೊಮ್ಮೆಲೆ ಕಟ್ ಹೊಡೆದಿದ್ದರಿಂದ ಆತನ ವಾಹನದ ಬಲಭಾಗ ಮೊಟರ ಸೈಕಲಿಗೆ ತೆರಚಿ ಕೆಎ-32, ಎಸ್-8848 ನೆದ್ದರ ಮೇಲಿಂದ ರಾಚಣ್ಣಾ ಹಾಗು ರಾಜಶೇಖರ ಇಬ್ಬರು ಒಮ್ಮೆಲೆ ನೆಲಕ್ಕೆ ಬಿದ್ದಿದ್ದರಿಂದ ನಾನು ನನ್ನ ಮೊಟರ ಸೈಕಲನ್ನು ಪಕ್ಕಕ್ಕೆ ನಿಲ್ಲಿಸಿ ನಾನು ಹಾಗು ಸತೀಶಕುಮಾರ ಇಬ್ಬರು ರಾಚಣ್ಣಾ ಹಾಗು ರಾಜಶೇಖರ ಇವರಿಗೆ ಎತ್ತಿ ರೊಡಿನ ಪಕ್ಕಕ್ಕೆ ಹಾಕುವಾಗ ಕಾರ ಚಾಲಕನು ತನ್ನ ಕಾರನ್ನು ರೊಡಿನ ಪಕ್ಕಕ್ಕೆ ನಿಲ್ಲಿಸಿದ್ದು ಅದರ ನಂಬರ ಪರಿಶೀಲಿಸಲಾಗಿ ಕೆಎ-02, ಎಮ್,ಕೆ-3420 ಇರುತ್ತದೆ. ಕಾರ ಚಾಲಕನು ನಾವು ಗಾಯಾಳುದಾರರಿಗೆ ಎತ್ತಿ ಹಾಕುವಾಗ ತನ್ನ ಕಾರನ್ನು ಮತ್ತೆ ಚಾಲು ಮಾಡಿಕೊಂಡು ವೇಗವಾಗಿ ಕಡಗಂಚಿ ಕಡೆಗೆ ಹೊಗಿರುತ್ತಾನೆ. ಅಂಥಾ ತೀಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಫಜಲಪೂರ ಠಾಣೆ : ಶ್ರೀ ವೈಜನಾಥ ತಂದೆ ಮಲಕಾಜಪ್ಪ ಕಲಶೇಟ್ಟಿ ಸಾ: ಆನೂರ ರವರು ಅಫಜಲಪೂರ ಪಶು ಆಸ್ಪತ್ರೆಯಲ್ಲಿ ಪಶು ವೈದ್ಯ ಪರಿಕ್ಷಕರು ಅಂತ ಕರ್ತವ್ಯ ನಿರ್ವಹಿಸಿಕೊಂಡಿರುತ್ತೇನೆ.ನಮ್ಮ ಆಸ್ಪತ್ರೇಗೆ ನಮ್ಮ ಇಲಾಖೆ ವತಿಯಿಂದ ಒಂದು ಟಾಟಾ ಸುಮಾ ಕೊಟ್ಟಿದ್ದು ಅದರ ನೊಂದಣಿ ಸಂಖ್ಯೆ ಕೆ,ಎ-32 ಜಿ-0848 ಅಂತ ಇರುತ್ತದೆ ಸದರಿ ಟಾಟಾ ಸುಮೊದ ಮೇಲೆ ಶಬ್ಬಿರ ತಂದೆ ಗಾಲಿಬಸಾಬ ಸವಾರ ಸಾ||ದೇಸಾಯಿ ಕಲ್ಲೂರ ಎಂಬಾತನು ತಾತ್ಕಾಲಿಕವಾಗಿ ಇಲಾಖೆ ವತಿಯಂದ ನೇಮಕಗೊಂಡು ಚಾಲಕ ಅಂತ ಕರ್ತವ್ಯ ನಿರ್ವಹಿಸಿಕೊಂಡಿರುತ್ತಾನೆ. ದಿನಾಂಕ:30/11/2019 ರಂದು ಅಫಜಲಪೂರ ಪಟ್ಟಣದ ಶ್ರೀ ಶೈಲ ಬಳೂರ್ಗಿ ರವರ ಹೊಲದಲ್ಲಿ ಇರುವ ಆಕಳಿಗೆ ಕೆಚ್ಚಲುಬಾವು ಬಂದಿದ್ದರಿಂದ ತಾಲೂಕ ಪಶು ವೈಧ್ಯಾಧಿಕಾರಿಗಳಾದ ಎಮ್,ಎಸ್,ಗಂಗನಳ್ಳಿ ರವರ ಆದೇಶದ ಮೇರೆಗೆ ನಾನು ಮತ್ತು ಚಾಲಕ ಶಬ್ಬಿರ ಇಬ್ಬರು ಕೂಡಿ ಇಲಾಖಾ ಜೀಪ ನಂಬರ ಕೆ,ಎ-32 ಜಿ-0848 ನೇದ್ದನ್ನು ತಗೆದುಕೊಂಡು ಶ್ರೀಶೈಲ ಬಳೂರ್ಗಿರವರ ಹೊಲಕ್ಕೆ ಹೋಗಿ ಅವರ ಆಕಳಿಗೆ ಉಪಚಾರ ಮಾಡಿ ಮರಳಿ ಅಫಜಲಪೂರಕ್ಕೆ ಬರುತ್ತಿರುವಾಗ ಮಾರ್ಗ ಮಧ್ಯದಲ್ಲಿ ಸಿದ್ರಾಮಪ್ಪ ಮನ್ಮಿ ರವರ ಹೊಲದ ಹತ್ತಿರ ಆನೂರ ಅಫಜಲಪೂರ ರೊಡಿನ ಮೇಲೆ ಶಬ್ಬಿರನು ಟಾಟಾ ಸುಮೊವನ್ನು ಅತೀ ವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿದ್ದರಿಂದ ಟಾಟಾ ಸುಮೊದ ಬಲಗಡೆಯ ಹಿಂದಿನ ಟೈರ ಬ್ಲಾಸ್ಟ ಆಗಿ ಟಾಟಾ ಸುಮೊ ಚಾಲಕನ ಬಲಗಡೆ ಪಲ್ಟಿ ಆಗಿರುತ್ತದೆ ಆಗ ರೊಡ ಮೇಲೆ ಹೊಗುತ್ತಿದ್ದ ನಮ್ಮ ಗ್ರಾಮದ ಪುಂಡಲಿಕ ತಳವಾರ ಈತನು ಬಂದು ನಮಗೆ ಟಾಟಾ ಸುಮೊದಿಂದ ಹೊರಗಡೆ ತಗೆದಿರುತ್ತಾನೆ ಸದರಿ ಅಪಘಾತದಲ್ಲಿ ನನಗೆ ಯಾವುದೆ ರಿತಿಯ ಗಾಯಗಳಾಗಿರುವದಿಲ್ಲ ಚಾಲಕ ಶಬ್ಬಿರ ಈತನಿಗೆ  ಎಡಗಾಲ ಮೊಳಕಾಲಿಗೆ ಸಾಧಾಗಾಯ ವಾಗಿರುತ್ತದೆ ನಂತರ ನಾನು ಮತ್ತು ಪುಂಡಲಿಕ ಇಬ್ಬರು ಕೂಡಿ ಒಂದು ಖಾಸಗಿ ವಾಹನದಲ್ಲಿ ಶಬ್ಬಿರನಿಗೆ ಹಾಕಿಕೊಂಡು ಬಂದು ಅಫಜಲಪೂರ ಸರಕಾರಿ ಆಸ್ಪತ್ರೇಗೆ ಸೇರಿಸಿರುತ್ತೆವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ನರೋಣಾ ಠಾಣೆ : ಜಗದೇವಿ ತಂದೆ ಸೈಬಣ್ಣಾ ಚಿಮ್ಮಾಯಿ ಸಾ : ನರೋಣಾ  ರವರು ದಿನಾಂಕ :29/11/2019 ರಂದು 4-30 ಪಿ.ಎಂ ಗಂಟೆಗೆ ನಮ್ಮ  ಹೊಲ ಸರ್ವೇ ನಂ  436 ನೇದ್ದರಿನ ಬಂದಾರಿ ಬದುವನಲ್ಲಿ ಹುಲ್ಲು ಕೊಯುತ್ತಿದ್ದಾಗ ಆಕಸ್ಮಿಕವಾಗಿ ಹಾವು ಕಚ್ಚಿದ್ದರಿಂದ ಆಕೆಯನ್ನು ನಾಟಿ ವೈದಲ್ಲಿ ತೋರಿಸಿ ನಾಟಿ ಔಷದಿ ಕೊಡಿಸಿದ್ದು. ದಿನಾಂಕ:30/11/19 ರಂದು ಮನೆಯಲ್ಲಿ ಮೃತಪಟ್ಟಿರುತ್ತಾಳೆ ಅಂತಾ ಗುಂಡಪ್ಪಾ ತಂದೆ ಸೈಬಣ್ಣಾ ಚಿಮ್ಮಾಯಿ ಸಾ : ನರೋಣಾ ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಮಿಟ್ಟುಸಾಬ ತಂದೆ ಇಮಾಮಸಾಬ ಜೇರಟಗಿ ಸಾ: ಆನೂರ ರವರು ದಿನಾಂಕ 29-11-2019 ರಂದು  ನಮ್ಮ ಮನೆಯ ಮುಂದೆ ಕುಳಿತಿರುವಾಗ ನಮ್ಮ ಮನೆಯ ಹಿಂದಿನ ಹೊಲದವರು ತಮ್ಮ ಹೊಲದಲ್ಲಿ ಏರಟೇಲ್ ಕಂಪನಿಯ ಟವರ ಕೂಡಿಸಲು ಕೆಲಸ ಪ್ರಾರಂಬಿಸಿದಾಗ ಸದರಿ ಏರಟೇಲ್ ಟವರ ನಮ್ಮ ಮನೆಯ ಹಿಂದು ಗಡೆ ಕೂಡಿಸುವ ಸಲುವಾಗಿ ಗಾರೆ ಹೊಡೆಯುತ್ತಿದ್ದಾಗ ಅದಕ್ಕೆ ನಾನು ನಮ್ಮ ಮನೆಯ ಹತ್ತಿರ ಕೂಡಿಸಬೇಡಿ ಅಂತಾ ನಮ್ಮೂರಿನ ಬಲಭೀಮ ತಂದೆ ಮೈಲಪ್ಪ ಬಳೂಂಡಗಿ ಇವರಿಗೆ ನಾನು ಹೇಳುತ್ತಿದ್ದಾಗ ಅಶೋಕ ತಂದೆ ಮೈಲಪ್ಪ ಬಳೂಂಡಗಿ, ಮಲ್ಲು ತಂದೆ ಮೈಲಪ್ಪ ಬಳೂಂಡಗಿ, ಸಚೀನ ತಂದೆ ಬಲಭೀಮ ಬಳೂಂಡಗಿ ಇವರೆಲ್ಲರೂ ಸೇರಿಕೊಂಡು ನಮ್ಮ ಮನಗೆ ಬಂದು ಏರಟೇಲ ಟವರ ನಮ್ಮ ಹೊಲದಲ್ಲಿ ಕೂಡಿಸುತ್ತೇವೆ ನೀನು ಏನು ಕೇಳುತ್ತಿಯಾ ಭೋಸಡಿ ಮಗನೆ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಾಗ ನಾನು ಏಕೆ ಹೊಲಸು ಶಬ್ದಗಳಿಂದ ಬೈಯುತ್ತಿರಿ ಅಂತಾ ಕೇಳಿದಕ್ಕೆ ನನ್ನ ಹಿಡೆದು ನಮ್ಮ ಹೊಲದಲ್ಲಿ ಟವರ ಕೂಡಿಸಿದಕ್ಕೆ ನಿನಗೆ ಏನು ತೊಂದರೆ ಆಗುತ್ತಿದೆ ಸುಮ್ಮನೆ ಹೋಗು ಸುಳೆ ಮಗನೆ ಅಂತಾ ಮಲ್ಲು ಇತನು ನನಗೆ ಕೇಳಗೆ ಕೆಡವಿ ಹೊಟ್ಟೆಯ ಮೇಲೆ ಒದ್ದಿರುತ್ತಾನೆ. ಬೆನ್ನಿನ ಮೇಲೆ, ಕಪಾಳ ಮೇಲೆ ಹೊಡೆದಿರುತ್ತಾನೆ. ಮತ್ತು ಬಲಭೀಮ ಇತನು ಕೈಯಿಂದ ಕಪಾಳ ಮೇಲೆ ಹೊಡೆದಿರುತ್ತಾನೆ. ಅಶೋಕ ಬಡಿಯಿಗೆಯಿಂದ ಬೆನ್ನಿನ ಮೇಲೆ ಹೊಡೆದು ಸಚೀನ ಇತನು ರಾಡಿನಿಂದ ನನ್ನ ಎಡಗಾಲಿನ ಪಾದದ ಮೇಲೆ ಹೊಡೆದು ಗುಪ್ತಗಾಯ ಪಡೆಸಿರುತ್ತಾನೆ ಎಲ್ಲರೂ ಕೂಡಿ ಕೇಳಗೆ ಕೆಡವಿ ಹೊಡೆಯುತ್ತಿರುವಾಗ ನಾನು ಚೀರಾಡುವುದನ್ನು ಕೇಳಿ ನನ್ನ ಹೆಂಡತಿ ಹನ್ನುಮಾ ಓಡಿ ಬಂದು ಜಗಳ ಬಿಡಿಸಲು ಬಂದಾಗ ನನ್ನ ಹೆಂಡತಿಗೆ ಸಚೀನ ಇತನು ಬಲಕಿನ ಕೈ ಹಿಡೆದು ಒಡ್ಡಮುರಿದಿರುತ್ತಾನೆ. ಮತ್ತು ಬಲಭೀಮ ಇತನು ನನ್ನ ಹೆಂಡತಿಗೆ ಬೆನ್ನಿನ ಮೇಲೆ ಹೊಡೆದಿರುತ್ತಾನೆ. ಬಲಭೀಮ ಇತನು ನನಗೆ ಇವತ್ತು ನೀನು ಉಳಿದಿಕೊಂಡಿದ್ದಿಯಾ ಮಗನೇ ಇಲ್ಲವಾದರೆ ನೀನ್ನ ಜೀವ ಸಹಿತ ಬಿಡುತ್ತಿರಲಿಲ್ಲ ಅಂತಾ ಜೀವದ ಭಯ ಹಾಕಿ ಅಲ್ಲಿಂದ ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

25 November 2019

KALABURAGI DISTRICT PRESS NOTE


ಪತ್ರಿಕಾ ಪ್ರಕಟಣೆ
                                                                                                         ದಿನಾಂಕ:-25-11-2019

           ಕಲಬುರಗಿ ನಗರದಲ್ಲಿ ಪೊಲೀಸ ಆಯುಕ್ತಾಲಯವು ಅಸ್ತಿತ್ವಕ್ಕೆ ಬಂದಿದ್ದು, ಕಲಬುರಗಿ ನಗರಕ್ಕೆ ಸಂಭಂದಿಸಿದಂತೆ ಅಂದರೆ ಪೊಲೀಸ ಆಯುಕ್ತಾಲಯದ ವ್ಯಾಪ್ತಿಗೊಳಪಡುವ 13 ಪೊಲೀಸ ಠಾಣೆಗಳಾದ 1) ಅಶೋಕ ನಗರ 2) ಸ್ಟೇಶನ ಬಜಾರ 3) ಬ್ರಹ್ಮಪೂರ 4) ರಾಘವೇಂದ್ರ ನಗರ ಠಾಣೆ 5) ಚೌಕ ಪೊಲೀಸ ಠಾಣೆ 6) ರೋಜಾ ಠಾಣೆ 7) ಎಂ.ಬಿ.ನಗರ ಠಾಣೆ 8) ವಿಶ್ವವಿದ್ಯಾಲಯ ಠಾಣೆ 9) ಗ್ರಾಮೀಣ ಠಾಣೆ 10) ಫರಹತಾಬಾದ ಠಾಣೆ ಮತ್ತು 11) ನಗರ ಮಹಿಳಾ ಪೊಲೀಸ ಠಾಣೆ 12) ಸಂಚಾರಿ ಪೊಲೀಸ ಠಾಣೆ ನಂ:1 ಮತ್ತು 13)  ಸಂಚಾರಿ ಪೊಲೀಸ ಠಾಣೆ ನಂ:2  ವ್ಯಾಪ್ತಿಯಲ್ಲಿ ಯಾವುದೆ ವಿಷಯಕ್ಕೆ ಸಂಭಂದಿಸಿದಂತೆ ಸಾರ್ವಜನಿಕರು ಕಲಬುರಗಿ ನಗರ ಪೊಲೀಸ ಆಯುಕ್ತಾಲಯಕ್ಕೆ ಸಂಪರ್ಕಿಸುವುದು. (ಪೊಲೀಸ ಉಪ-ಆಯುಕ್ತರು  (ಕಾನೂನು & ಸುವ್ಯವಸ್ಥೆ) ಮೊಬೈಲ ಸಂಖ್ಯೆ 9480803612) ಮತ್ತು ಕಲಬುರಗಿ ನಗರ ಕಂಟ್ರೋಲ ರೂಂ: ಸಂಖ್ಯೆ: 08472-228112)

         ಕಲಬುರಗಿ ಜಿಲ್ಲೆಯ ಆಳಂದ, ಅಫಜಲಪೂರ, ಜೇವರ್ಗಿ, ಚಿತ್ತಾಪೂರ, ಸೇಡಂ ಮತ್ತು ಚಿಂಚೋಳಿ ತಾಲ್ಲೂಕಾಗಳಿಗೆ ಸಂಭಂದಿಸಿದಂತೆ ಪೊಲೀಸ ಇಲಾಖೆಗೆ ಸಂಭಂದಿಸಿದಂತೆ ಯಾವುದೆ ವಿಷಯದಲ್ಲಿ ಜಿಲ್ಲಾ ಪೊಲೀಸ ಅಧೀಕ್ಷಕರು ಕಲಬುರಗಿರವರ ಕಾರ್ಯಾಲಯಕ್ಕೆ ಸಂಪರ್ಕಿಸುವುದು.
                                                                                          ಸಹಿ/-
                                                                                  ಪೊಲೀಸ ಅಧೀಕ್ಷಕರು,
                                                                                        ಕಲಬುರಗಿ
ಇವರಿಗೆ,
ಕಲಬುರಗಿ ನಗರದ ಎಲ್ಲಾ ಮಾದ್ಯಮ ಮತ್ತು ಪತ್ರಿಕಾ ವರದಿಗಾರರಿಗೆ.


KALABURAGI DISTRICT REPORTED CRIMES

ಅಪಘಾತ ಪ್ರಕರಣ :
ನೆಲೋಗಿ ಠಾಣೆ : ಶ್ರೀ ಸುರೇಶ ತಂದೆ ತಿಮ್ಮಯ್ಯ ದೊಡಮನಿ ಸಾ; ಬೇಲೂರ ಗ್ರಾಮ ತಾ; ಜೇವರ್ಗಿ  ರವರ ಮಾವನಾದ ಮಲ್ಲಪ್ಪ ಮಂದೇವಾಲ ಇವರು ದಿನಾಂಕ; 23/11/2019 ರಂದು ಸಾಯಂಕಾಲ ತನ್ನ ಮಗಳಾದ ಕಾವೇರಿ ಇವಳನ್ನು ಆಸ್ಪತ್ರೆಗೆ ತೋರಿಸಿಕೊಂಡು ಬರುತ್ತೇನೆ ತಮ್ಮ ಬಜಾಜ್ ಡಿಸ್ಕವರಿ ಮೋಟಾರ ಸೈಕಲ್ ನಂ; ಕೆ.ಎ-32-ಇ.ಬಿ-3735 ನೇದ್ದರ ಮೇಲೆ ಬೇಲೂರದಿಂದ ಜೇರಟಗಿ ಕಡೆಗೆ ಹೋದರು. ನಂತರ ನನಗೆ ಸಾಯಂಕಾಲ 7-30 ಘಂಟೆ ಸುಮಾರಿಗೆ ವಿಷಯ ಗೊತ್ತಾಗಿದ್ಧೇನೆಂದರೆ ಜೇರಟಗಿ - ಯಾತನೂರ ರೋಡಿನ ಮೇಲೆ ನಮ್ಮ ಮಾವನವರಿಗೆ ಕಾರ್ ಅಪಘಾತ ಆಗಿರುತ್ತದೆ ಅವರಿಗೆ 108 ಅಂಬುಲೆನ್ಸದಲ್ಲಿ ಜೇವರಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುತ್ತಾರೆ. ಎಂದು ವಿಷಯ ಕೇಳಿ ನಾನು ಮತ್ತು ನಮ್ಮ ಅಣ್ಣನಾದ ಯಂಕಪ್ಪ ದೊಡಮನಿ, ಹಾಗು ವಿಕ್ರಮ ತಂದೆ ಪೀರಪ್ಪ ದೊಡಮನಿ ಇವರು ಕೂಡಿ ಘಟನಾ ಸ್ಥಳಕ್ಕೆ ಬಂದು ನೋಡಲಾಗಿ ಅಲ್ಲಿ ನಮ್ಮ ಮಾವನವರ ಮೋಟಾರ ಸೈಕಲ್ ನಂ; ಕೆ.ಎ-32-ಇ.ಬಿ-3735 ಇದ್ದು ಹೊಲದಲ್ಲಿ ಒಂದು ಬಿಳಿ ಬಣ್ಣದ ಕಾರ್ ಇದ್ದು ಅದರ ನಂ; ಎಮ್ ಹೆಚ್.-06-ಎ.ಯು-9779 ಇತ್ತು ನಂತರ ನಮ್ಮ ಮಾವ ಮತ್ತು ಸೊಸೆ ಇವರಿಗೆ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುತ್ತಾರೆ ಎಂದು ವಿಷಯ ಕೇಳಿ ನಾವು ಜೇವರಗಿ ಸರಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ಅಲ್ಲಿ ನಮ್ಮ ಮಾವ ಮಲ್ಲಪ್ಪ ಮಂದೇವಾಲ ಇವರಿಗೆ ಬಲ ಕಾಲಿನ ತೊಡೆಯ ಮೇಲೆ ಭಾರಿ ರಕ್ತ ಘಾಯವಾಗಿ ಮೂಳೆ ಮುರಿದು ಮೂಳೆ ಹೊರ ಬಂದಿದ್ದು ಮತ್ತು ಗುಪ್ತಾಂಗಕ್ಕೆ ತಲೆಯ ಮೇಲೆ ರಕ್ತ ಘಾಯ ಮತ್ತು ಭಾರಿ ಗುಪ್ತಗಾಯವಾಗಿ ಮೃತಪಟ್ಟಿದ್ದರು.   ನಂತರ ಅಲ್ಲಿಯೇ ಇದ್ದ ನಮ್ಮ ಸೊಸೆ ಕಾವೇರಿ ಇವಳಿಗೆ ವಿಚಾರಿಸಲು ವಿಷಯ ತಿಳಿಸಿದ್ದೇನೆಂದರೆ., ಇಂದು ದಿನಾಂಕ; 23/11/2019 ರಂದು ಸಾಯಂಕಾಲ 6-00 ಘಂಟೆಯ ಸುಮಾರಿಗೆ ನನಗೆ ಜ್ವರ ಬರುತ್ತಿದ್ದರಿಂದ ಇಂಜೀಕ್ಷನ್ ಮಾಡಿಸಿಕೊಳ್ಳುವ ಸಲುವಾಗಿ ನಾನು ಮತ್ತು ನನ್ನ ತಂದೆ ಕೂಡಿ ನಮ್ಮ ಮೋಟಾರ ಸೈಕಲ್ ನಂ; ಕೆ.ಎ-32-ಇ.ಬಿ-3735 ನೇದ್ದರಲ್ಲಿ ಕುಳಿತುಕೊಂಡು ಜೇರಟಗಿಗೆ ಬಂದಿರುತ್ತೇವೆ. ನಂತರ ಆಸ್ಪತ್ರೆಗೆ ತೋರಿಸಿಕೊಂಡು ಇಬ್ಬರು ಕೂಡಿ ಮತ್ತೆ ಅದೇ ಮೋಟಾರ ಸೈಕಲ್ ಮೇಲೆ ನಾನು ಹಿಂದೆ ಕುಳಿತು ನಮ್ಮ ತಂದೆಯವರು ಮೋಟಾರ ಸೈಕಲ್ ಚಲಾಯಿಸಿಕೊಂಡು ಬೆಲೂರ ಕಡೆಗೆ ಹೋಗುತ್ತಿರುವಾಗ ಸಾಯಂಕಾಲ 7-00 ಘಂಟೆಯ ಸುಮಾರಿಗೆ ಜೇರಟಗಿ-ಯಾತನೂರ ಮದ್ಯದಲ್ಲಿ ರೊಡಿನ ಮೇಲೆ ಮೆಣಸಿಗಿಡದ ಹೊಲದ ಹತ್ತಿರ ಹೋಗುತ್ತಿದ್ದಾಗ ಎದುರಿನಿಂದ ಅಂದರೆ ಗಾಣಗಾಪೂರ ಕಡೆಯಿಂದ ಒಂದು ಬಿಳಿ ಬಣ್ಣದ ಕಾರ್ ಚಾಲಕನು ಕಾರನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಾಲಾಯಿಸಿಕೊಂಡು ಬಂದವನೆ ರೋಡಿನ ಪಕ್ಕದಲ್ಲಿ ಹೋಗುತ್ತಿದ್ದ ನಮ್ಮ ಮೋಟಾರ ಸೈಕಲಕ್ಕೆ ಎದುರಿನಿಂದ ಡಿಕ್ಕಿ ಪಡಿಸಿದನು. ಆಗ ನಾವು ಕೆಳಗಡೆ ಬಿದ್ದಿದ್ದು.ಕಾರ್ ಕೂಡ ಸ್ವಲ್ಪ ಮುಂದೆ ಹೋಗಿ ಒಂದು ಹೊಲದಲ್ಲಿ ನಿಂತಿರುತ್ತದೆ. ಇದರಿಂದ ನನಗೆ ಬಲ ಕಾಲಿನ ತೊಡೆ ಮೇಲೆ ಸೊಂಟಕ್ಕೆ ಭಾರಿ ಗುಪ್ತಘಾಯ ಮತ್ತು ರಕ್ತ ಘಾಯವಾಗಿದ್ದು ನಮ್ಮ ತಂದೆಯವರಿಗೆ ತೊಡೆಯ ಮೇಲೆ ಭಾರಿ ರಕ್ತಘಾಯವಾಗಿ ತೊಡೆಯ ಮೂಳೆ ಮುರಿದು ಹೊರ ಬಂದಿರುತ್ತದೆ. ಮತ್ತು ತಲೆಗೆ ಎದೆಗೆ ಗುಪ್ತಾಂಗಕ್ಕೆ ರಕ್ತಘಾಯ ಮತ್ತು ಗುಪ್ತ ಘಾಯವಾಗಿ ಬೇಹೋಸ್ ಆಗಿ ಬಿದ್ದಿದ್ದರು.ನಾನು ಅಲ್ಲಿಯೇ ಹೊಲದಲ್ಲಿ ಹೋಗಿ ನಿಂತಿದ್ದ ಬಿಳಿ ಬಣ್ಣದ ಕಾರ್ ಇದ್ದು ನಂಬರ್ ನೋಡಲಾಗಿ ಎಮ್ ಹೆಚ್.-06-ಎ.ಯು-9779 ಇದ್ದು ಅದರ ಚಾಲಕನು ಅಲ್ಲಿಂದ ಓಡಿ ಹೋಗಿದ್ದನು. ನಂತರ ಯಾರೋ 108 ಅಂಬುಲೆನ್ಸಗೆ ಪೋನ್ ಮಾಡಿದ್ದರಿಂದ ಅಂಬುಲೆನ್ಸ ಬಂದು ನಮಗೆ ಚಿಕಿತ್ಸೆ ಕುರಿತು ಸರಕಾರಿ ಆಸ್ಪತ್ರೆ ಜೇವರಗಿ ಕರದುಕೊಂಡು ಬರುವಾಗ ಮಾರ್ಗ ಮದ್ಯದಲ್ಲಿ ಜೇವರಗಿ ಸಮೀಪ ಓಂ ನಗರ ಹತ್ತಿರ ಬಂದಾಗ ಸಾಯಂಕಾ; 7-30 ಘಂಟೆಯ ಸುಮಾರಿಗೆ ನಮ್ಮ ತಂದೆಯವರು ಮೃತಪಟ್ಟಿರುತ್ತಾರೆ. ಅಂತಾ ತಿಳಿಸಿದ್ದರ ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಭಾಳಪ್ಪ ತಂದೆ ರಾಮಗೊಂಡ ಸಂಬಾಳೆ ಸಾ: ಮಣೂರ ರವರು ಗ್ರಾಮದಲ್ಲಿರುವ ಯಲ್ಲಮ್ಮ ದೇವಸ್ಥಾನದ ಕಾರ್ಯಾಲಯದಲ್ಲಿದ್ದಾಗ ಶಂಕರ ತಂದೆ ಮುತ್ತಪ್ಪ ಸಿನ್ನೂರ ಇವರು ಕರೆ ಮಾಡಿ ನದಿಯಲ್ಲಿರುವ ಗುಡಿಯ ಹತ್ತಿರ ಬ್ರೀಡ್ಜ ಸಮೀಪ ನದಿಯ ದಡದಲ್ಲಿ ಒಂದು ಯಾವುದೋ ಪ್ರಾಣಿ ಸತ್ತು ಬಿದ್ದು ವಾಸನೆ ಬರುತ್ತಿದೆ ಅದು ಮನುಷ್ಯನದೋ ಯಾವ ಪ್ರಾಣಿದೋ ಗೋತ್ತಾಗುತ್ತಿಲ್ಲ ಅಂತಾ ತಿಳಿಸಿದ ಮೇರೆಗೆ ನಾನು ನದಿಯಲ್ಲಿದ್ದ ದೇವಸ್ಥಾನದ ಹತ್ತಿರ ಹೋಗಿ ನಾನು ಮತ್ತು ಶಂಕರ ಕೂಡಿಕೊಂಡು ಶವದ ಹತ್ತಿರ ಹೋಗಿ ನೋಡಲಾಗಿ ಅಂದಾಜು 10 ರಿಂದ 15 ವಯಸ್ಸಿನ ಮನುಷ್ಯನ ಶವ ಇತ್ತು ಸದರಿ ಶವವು ಯಲ್ಲಿಯೋ ಸುಟ್ಟು ನದಿ ನೀರಿನಲ್ಲಿ ಹರಿದುಕೊಂಡು ನದಿಯಲ್ಲಿರುವ ಯಲ್ಲಮ್ಮ ದೇವಸ್ಥಾನದ ಬ್ರೀಡ್ಜ್ ಪಕ್ಕ ನದಿಯ ದಡದಲ್ಲಿ ಬಿದ್ದಿದ್ದು ಇರುತ್ತದೆ. ಸದರಿ ಶವದ ಎರಡು ಕೈಗಳು ಮುಂಗೈದವರೆಗೆ ಮತ್ತು ಒಂದು ಕಾಲು ಇರುವುದಿಲ್ಲಾ ಇನ್ನೊಂದು ಕಾಲಿನ ಅರ್ಧ ಭಾಗ ಮತ್ತು ಹೊಟ್ಟೆಯ ಭಾಗ ಪೂರ್ತಿ ಸುಟ್ಟಿದ್ದು ಸ್ವಲ್ಪ ಮಾಂಸ ಕಂಡಗಳು ಉಳಿದಿರುತ್ತವೆ. ದೇಹದ ಮೇಲಿನ ಚರ್ಮ ಮತ್ತು ಮಾಂಸ ಹಾಗೂ ತಲೆಯ ಮೇಲಿನ ಕೂದಲು ಇರುವುದಿಲ್ಲಾ ತಲೆ ಡೋಗಿ ಮಾತ್ರ ಇರುತ್ತದೆ ಸದರಿ ಶವವು ಹೆಣ್ಣೊ ಅಥವಾ ಗಂಡೊ ಅಂತಾ ಗೊತ್ತಾಗಿರುವುದಿಲ್ಲಾ ಮತ್ತು ವಯಸ್ಸು ನಿಖರವಾಗಿ ಗೊತ್ತಾಗಿರುವುದಿಲ್ಲಾ ಸದರಿ ಶವವು ಸುಮಾರು 15-20 ದಿನಗಳ ಹಿಂದ ಸತ್ತಿದ್ದು ಇರಬಹುದು ಅಂತಾ ಕಂಡು ಬಂದಿರುತ್ತದೆ.       ಸಾಮಾನ್ಯವಾಗಿ ನನ್ನ ಗ್ರಾಮದ ಸುತ್ತಮುತ್ತಲಿನ ನದಿ ದಡದಲ್ಲಿರುವ ಗ್ರಾಮಗಳಲ್ಲಿ ಯಾವುದಾದರೂ ಊರಲ್ಲಿ ಮೃತಪಟ್ಟರೆ ನದಿಯ ಪಕ್ಕದಲ್ಲು ಸುಡುವುದು ರೂಡಿ ಇರುತ್ತದೆ ಹೀಗಾಗಿ ಸದರಿ ಶವ ಎಲ್ಲೋ ಸುಟ್ಟಿರುವುದು ನೀರಿನಲ್ಲಿ ತೇಲಿ ಬಂದಿರುವುದು ಕಂಡು ಬಂದಿರುತ್ತದೆ. ಕಾರಣ ಸದರಿ ಶವದ ಸಾವಿನ ಬಗ್ಗೆ ಸಂಶಯ ಸದರಿ ಘಟನೆ ಬಗ್ಗೆ ದೇವಸ್ಥಾನದ ಮಂಡಳಿಯವರೊಂದಿಗೆ ಚರ್ಚಿಸಿ ತಡವಾಗಿ ದೂರು ಸಲ್ಲಿಸಿದ್ದು ಇರುತ್ತದೆ.  ತಾವು ಮುಂದಿನ ಕ್ರಮ ಕೈಕೊಳ್ಳಬೇಕೆಂದು  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಿಸಿ ಅತ್ಯಾಚಾರವೆಸಗಿದ ಪ್ರಕರಣ :
ಜೇವರಗಿ ಠಾಣೆ : ದಿನಾಂಕ;13.11.2019 ರಂದು ಸಾಯಂಕಾಲ ಫಿರ್ಯಾದಿ ನೀಡಿದ ದೂರಿನ ಸಾರಂಶವೇನೆಂದರೆ;“ನನ್ನ ಮಗಳಾದ ಕುಮಾರಿ ಇವಳನ್ನು ಅವಳ ಅಜ್ಜ ಅಜ್ಜಿಯ ಹತ್ತಿರ ಬಿಟ್ಟಿದ್ದು, ಅವಳು ಶಹಾಪೂರದ ಚರ ಬಸವೇಶ್ವರ ಕಾಲೇಜಿನಲ್ಲಿ ಪಿ.ಯು.ಸಿ ಯಲ್ಲಿ ವ್ಯಾಸಂಗ ಮಾಡುತ್ತಿದ್ದು ಪ್ರತಿದಿನ ಬಿಳವಾರದಿಂದ ಶಹಾಪೂರಕ್ಕೆ ಕಾಲೇಜಿಗೆ ಹೋಗಿ ಬಂದು ಮಾಡುತ್ತಾಳೆ. ಆಗಾಗ ನಮ್ಮ ಊರಿಗೆ ಬಂದು ಹೋಗುತ್ತಿದ್ದಳು. ಇತ್ತೀಚೆಗೆ ಕೆಲವು ದಿನಗಳಿಂದ ಬಿಳವಾರ ಗ್ರಾಮದ ಭೀಮಾಶಂಕರ್‌ ತಂದೆ ಮಲ್ಕಾಜಪ್ಪ ಕೂಡಿ ಈತನು ನಾನು ಹೋದಲೆಲ್ಲ ನನ್ನ ಹಿಂದೆ ಬಂದು ನನಗೆ ಕಣ್ಣು ಹೊಡೆಯುವದು, ಹುಬ್ಬು ಹಾರಿಸುವದು, ಕೈ ಸನ್ನೆ ಮಾಡಿ ಕರೆಯುವದು, ಮತ್ತು ನಿನಗೆ ಪ್ರೀತಿಸುತ್ತೇನೆ, ಮದುವೆ ಮಾಡಿಕೊಳ್ಳುತ್ತೇನೆ ಎಂದು ಹೇಳಿ ನನಗೆ ಚುಡಾಯಿಸುತ್ತಾ ಬಂದು ತೊಂದರೆ ಕೊಡುತ್ತಿದ್ದಾನೆ ಎಂದು ಊರಿಗೆ ಬಂದಾಗ ನಮ್ಮ ಮಗಳು ನನಗೆ ತಿಳಿಸಿರುತ್ತಾಳೆ. ನಂತರ ನಾನು ಮತ್ತು ನನ್ನ ಅಣ್ಣ , ತಮ್ಮ  ಕೂಡಿ ಬಿಳವಾರ ಗ್ರಾಮದಲ್ಲಿ ಭೀಮಾಶಂಕರ್‌ ತಂದೆ ಮಲ್ಕಾಜಪ್ಪ ಕೂಡಿ ಈತನಿಗೆ ಭೇಟಿಯಾಗಿ ನಮ್ಮ ಮಗಳ ತಂಟೆಗೆ ಬರಬೇಡ, ಅವಳಿಗೆ ತೊಂದರೆ ಕೊಡಬೇಡ ಎಂದು ಬುದ್ದಿವಾದ ಹೇಳಿ ಬಂದಿರುತ್ತೇವೆ. ಆದರು ಕೂಡ ಅವನು ಅದೇ ಚಾಳಿ ಮುಂದುವರೆಯಿಸಿರುತ್ತಾನೆ. ಆಗ ನಾವು ಕೊಡು-ತಗೊ ಮಗಳು ಇದ್ದಾಳೆ ,ಅಲ್ಲಿರುವದು ಸರಿ ಇರುವದಿಲ್ಲ ಎಂದು ಮರ್ಯಾದೆಗೆ ಅಂಜಿ ಇತ್ತೀಚೆಗೆ ದೀಪಾವಳಿ ಹಬ್ಬದ ಸಲುವಾಗಿ ಆಂದೋಲಾಕ್ಕೆ ಕರೆದುಕೊಂಡು ಬಂದಿರುತ್ತೇವೆ. ದಿನಾಂಕ; 09/11/2019 ರಂದು ಬೆಳಿಗ್ಗೆ ನಮ್ಮ ಮನೆಯಲ್ಲಿ ನಮ್ಮ ಮಾವನವರು ಅನಾರೋಗ್ಯದಿಂದ ನಿಧನವಾಗಿರುತ್ತಾರೆ. ನಾವೆಲ್ಲರು ಅವರ ಅಂತ್ಯ ಕ್ರಿಯೆ ಕುರಿತು ಭಾಗವಹಿಸಿದ್ದು ನಮ್ಮ ಮಗಳು ಮತ್ತು ಇತರ ಮಕ್ಕಳೆಲ್ಲರು ಮನೆಯಲ್ಲಿಯೇ ಇದ್ದರು, ಬಿಳವಾರದ ಭೀಮಾಶಂಕರ್‌ ತಂದೆ ಮಲ್ಕಾಜಪ್ಪ ಕೂಡಿ ಅನ್ನುವವನು ಕೂಡ ಅಲ್ಲಿಗೆ ಬಂದು ಅಂತ್ಯಕ್ರಿಯೆಯಲ್ಲಿ ಓಡಾಡುತ್ತಿದ್ದನು. ಅವನಿಗೆ ನೋಡಿ ನಮ್ಮ ಅಣ್ಣ ಇವರು ಖೂನ (ಗುರುತು) ಹಿಡಿದಿರುತ್ತಾರೆ. ನಾವು ನಮ್ಮ ಮಾವನ ಅಂತ್ಯ ಕ್ರಿಯೆ ಮಾಡಿ ಸಾಯಂಕಾಲ  5-30 ಘಂಟೆಗೆ ಮನೆಗೆ ಬಂದಾಗ ಮನೆಯಲ್ಲಿ ನಮ್ಮ ಮಗಳು ಮಲ್ಲಮ್ಮ ಇರಲಿಲ್ಲ. ಅಲ್ಲಿಯೇ ಇದ್ದ ಚಿಕ್ಕ ಮಳಿಗೆ ವಿಚಾರಿಸಲು ಅವಳು ತಿಳಿಸಿದ್ದೇನೆಂದರೆ; ಇಂದು ಮದ್ಯಾಹ್ನ 3-00 ಘಂಟೆಯ ಸುಮಾರಿಗೆ ನಮ್ಮ ಮನೆಯ ಹಿಂದೆ ದಾರಿಯಲ್ಲಿ ಬಿಳವಾರದ ನಮ್ಮಅಜ್ಜಿಯ ಮನೆಯ ಹತ್ತಿರ ಇರುವ ಭೀಮಾಶಂಕರ್‌ ತಂದೆ ಮಲ್ಕಾಜಪ್ಪ ಕೂಡಿ ಈತನು ಬಂದು ಅಕ್ಕ ಮಲ್ಲಮ್ಮಳಿಗೆ ಕೈ ಮಾಡಿ ಕರೆಯುತ್ತಿದ್ದನು.  ಮತ್ತು ಅವಳು ಅಲ್ಲಿ ಹೋದಾಗ ಅವಳಿಗೆ ತನ್ನ ಮೋಟಾರ ಸೈಕಲ್ ಮೇಲೆ ಕೂಡಿಸಿಕೊಂಡು ಹೋಗಿರುತ್ತಾನೆ. ಎಂದು ತಿಳಿಸಿದಳು ದಿ; 09.11.19 ರಂದುಮದ್ಯಾಹ್ನ 3-00 ಘಂಟೆಯ ಸುಮಾರಿಗೆ ಬಿಳವಾರದ ಭೀಮಾಶಂಕರ್‌ ತಂದೆ ಮಲ್ಕಾಜಪ್ಪ ಕೂಡಿ ಈತನು ಆಂದೋಲಾ ಗ್ರಾಮಕ್ಕೆ ಬಂದು ನಮ್ಮ ಅಪ್ರಾಪ್ತ ವಯಸ್ಸಿನ ಮಗಳನ್ನು ಪುಸಲಾಯಿಸಿ ಅವಳ ತೆಲೆ ಕೆಡಿಸಿ ಪ್ರೀತಿಸುತ್ತೇನೆ, ಮದುವೆ ಮಾಡಿಕೊಳ್ಳುತ್ತೇನೆ ಎಂದು ಹೇಳಿ ಅವಳಿಗೆ ನಂಬಿಸಿ ಒತ್ತಾಯ ಪೂರ್ವಕವಾಗಿ ಮೋಟಾರ ಸೈಕಲ್ ಮೇಲೆ ಕೂಡಿಸಿಕೊಂಡು ಅಪಹರಿಸಿಕೊಂಡು ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ದಿನಾಂಕ 21.11.2019 ರಂದು ಸದರಿ ಪ್ರಕರಣದ ತನಿಖೆ ಮುಂದುವರೆಯಿಸಿ ಸದರಿ ಪ್ರಕರಣದಲ್ಲಿ ಅಪಹರಣಕ್ಕೊಳಗಾದ ಕುಮಾರಿ ಇವಳಿಗೆ ಮತ್ತು  ಮತ್ತು ಆರೋಪಿ ಭೀಮಾಶಂಕರ ತಂದೆ ಮಲ್ಕಾಜಪ್ಪ ಕೂಡಿ ಸಾಃ ಬಿಳವಾರ   ಇವರ ಪತ್ತೆ ಕುರಿತು ನಾನು ಮತ್ತು ನಮ್ಮ ಠಾಣೆಯ ಶ್ರೀಮತಿ ನಿರ್ಮಲಾ ಮ.ಹೆಚ್.ಸಿ. 443, ಶ್ರೀ ಪರಮೇಶ್ವರ ಹೆಚ್.ಸಿ. 36  ಶ್ರೀ ವಿಜಯಕುಮಾರ ಸಿಪಿಸಿ 691 ರವರಿಗೆ ನೇಮಿಸಿ ಕೊಟ್ಟು ಕಳಿಸಿದ್ದು ಇರುತ್ತದೆ. ದಿನಾಂಕ 23/11/2019 ರಂದು ಮದ್ಯಾಹ್ನ 2.00 ಗಂಟೆಗೆ  ಸದರಿ ಪ್ರಕರಣದಲ್ಲಿ ಪತ್ತೆ ಕುರಿತು ಹೋದ ನಮ್ಮ ಠಾಣೆಯ ಸಿಬ್ಬಂದಿಯವರು ಠಾಣೆಗೆ ಬಂದು  ಸದರಿ ಪ್ರಕರಣದಲ್ಲಿನ  ಅಪಹರಣಕ್ಕೋಳಗಾದ ಬಾಲಕಿ ಮತ್ತು ಆರೋಪಿತನ ಬಗ್ಗೆ ಮಾಹಿತಿ ಸಂಗ್ರಹಿಸಿ  ಬೆಂಗಳೂರಕ್ಕೆ ಹೋಗಿ ದೇವನಹಳ್ಳಿ ಬೆಂಗಳೂರದಲ್ಲಿ ಸದರಿ ಪ್ರಕರಣದಲ್ಲಿನ ಮತ್ತು ಅಪಹರಣಕ್ಕೊಳಗಾದ ಬಾಲಕಿ ಇವಳಿಗೆ ದಿ. 22/11/2019 ರಂದು ರಾತ್ರಿ 10 ಗಂಟೆಗೆ ವಶಕ್ಕೆ ಪಡೆದುಕೊಂಡು ಇಂದು ದಿ. 23/11/2019  ರಂದು ಮದ್ಯಾಹ್ನ  2.00  ಗಂಟೆಗೆ ಠಾಣೆಗೆ ಬಂದಿದ್ದು  ನಂತರ ಸದರಿ ಪ್ರಕರಣದಲ್ಲಿ ನೊಂದ ಬಾಲಕಿ ಇವಳಿಗೆ ವಿಚಾರಿಸಿ ನಮ್ಮ ಠಾಣೆಯ ಶ್ರೀಮತಿ ನಿರ್ಮಲಾ  ಮ.ಹೆಚ್.ಸಿ. 443 ರವರ ಸಮಕ್ಷಮದಲ್ಲಿ ಹೇಳಿಕೆ ಪಡೆಯಲಾಗಿ ನಾನು ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗೆ ಆಂದೋಲಾದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡಿರುತ್ತೇನೆ. ನಂತರ ನಾನು ಬಿಳವಾರಕ್ಕೆ ಹೋಗಿ ಅಲ್ಲಿ ನಮ್ಮ ಆಯಿ ಮುತ್ಯಾ ರವರ ಹತ್ತಿರ ವಾಸವಾಗಿದ್ದುಕೊಂಡು ಐದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಸರಕಾರಿ ಪ್ರೌಢ ಶಾಲೆ ಬಿಳವಾರದಲ್ಲಿ ವ್ಯಾಸಂಗ ಮಾಡಿರುತ್ತೇನೆ. ನಾನು ಶಹಾಪೂರದ ಸಿ.ಬಿ (ಚರ ಬಸವೇಶ್ವರ) ಕಾಲೇಜಿನಲ್ಲಿ ಪಿ.ಯು.ಸಿ ಎರಡನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ನಾನು ಶಹಾಪೂರದ ಬಿ.ಸಿ.ಎಮ್ ವಸತಿ ನಿಲಯದಲ್ಲಿ ಕೆಲವು ದಿನಗಳು ಇದ್ದು ಆಗಾಗ ಬಿಳವಾರದಿಂದ ಕಾಲೇಜಿಗೆ ಹೋಗಿ ಬಂದು ಮಾಡುತ್ತೇನೆ. ನಾನು ಬಿಳವಾರ ಗ್ರಾಮದಲ್ಲಿ ಓದುತ್ತಿದ್ದಾಗ ನಮ್ಮ ಅಜ್ಜಿಯ ಮನೆಯ ಹತ್ತಿರ ಇರುವ ಬಿಳವಾರ ಗ್ರಾಮದ ಭೀಮಾಶಂಕರ್‌ ತಂದೆ ಮಲ್ಕಾಜಪ್ಪ ಕೂಡಿ ಈತನು ಅವನು ಆಗಿನಿಂದ ನನಗೆ ನೋಡಿ ನಗುವದು, ನನ್ನ ಹಿಂದೆ ಬರುವದು, ನನಗೆ ಕಣ್ಣು ಹೊಡೆಯುವದು, ಹುಬ್ಬು ಹಾರಿಸುವದು, ಮಾಡುತ್ತಿದ್ದನು. ನಾನು ಈ ವಿಷಯ ಮನೆಯಲ್ಲಿ ಹೇಳಿದರೆ ನನಗೆ ಶಾಲೆ ಬಿಡಿಸುತ್ತಾರೆ ಎಂದು ನಾನು ಯಾರಿಗೂ ಹೇಳಿರುವದಿಲ್ಲ.  ನಂತರ ನಾನು ಶಹಾಪೂರದಲ್ಲಿ ಕಾಲೇಜು ಮಾಡಿರುತ್ತೇನೆ. ಆಗಾಗ ನಾನು ಕಾಲೇಜಿಗೆ ಹೋಗುವಾಗ ನನ್ನ ಹಿಂದೆ ಬಂದು ನನಗೆ ಕೈ ಸನ್ನೆ ಮಾಡಿ ಕರೆಯುವದು, ಮತ್ತು ನಿನಗೆ ಪ್ರೀತಿಸುತ್ತೇನೆ, ಮದುವೆ ಮಾಡಿಕೊಳ್ಳುತ್ತೇನೆ ನೀನು ನನಗೆ ತುಂಬಾ ಇಷ್ಟವಾಗಿದ್ದಿ ಎಂದು ಹೇಳಿ ನನಗೆ ಚುಡಾಯಿಸುತ್ತಾ ಬಂದು ತೊಂದರೆ ಕೊಡುತ್ತಿದ್ದನು. ಅವನ ಕಾಟ ತಾಳಲಾರದೆ ನಾನು ಈ ವಿಷಯವನ್ನು ನಮ್ಮ ತಂದೆ ತಾಯಿಗೆ ಮತ್ತು ಮಾವನವರಿಗೆ  ತಿಳಿಸಿರುತ್ತೇನೆ. ನಂತರ ಅವರು ಬೀಮಾಶಂಕರ್ ಈತನಿಗೆ ಬುದ್ದಿವಾದ ಹೇಳಿರುತ್ತಾರೆ. ಆದರು ಕೂಡ ಅವನು ಅದೇ ಚಾಳಿ ಮುಂದುವರೆಯಿಸಿ ನನ್ನ ಹಿಂದೆ ಬಿದ್ದು ಅವನು ನಿನಗೆ ಮದುವೆ ಮಾಡಿಕೊಳ್ಳುತ್ತೇನೆ ನಿನಗೆ ಬಿಟ್ಟು ಇರಲು ಆಗುತ್ತಿಲ್ಲ ನೀ ಸಿಗದಿದ್ದರೆ ನಾನು ಸತ್ತೆ ಹೋಗುತ್ತೇನೆ ನಿನಗೆ ಕೈ ಬಿಡುವದಿಲ್ಲ ಎಂದು ಹೇಳಿ ನನಗೆ ತಲೆ ಕೆಡಿಸಿರುತ್ತಾನೆ. ನಂತರ ನಮ್ಮ ಮನೆಯವರು ನನಗೆ ಕಾಲೇಜು ಬಿಡಿಸಿ ಆಂದೋಲಾ ಗ್ರಾಮಕ್ಕೆ ಕರೆದುಕೊಂಡು ಬಂದಿರುತ್ತಾರೆ. ನಾನು ಆಂದೋಲಾದಲ್ಲಿಯೇ ನಮ್ಮ ತಂದೆ ತಾಯಿಯ ಹತ್ತಿರ ವಾಸವಾಗಿರುತ್ತೇನೆ. ದಿನಾಂಕ; 09/11/2019 ರಂದು ಬೆಳಿಗ್ಗೆ ನಮ್ಮ ಮನೆಯಲ್ಲಿ ನಮ್ಮ ಮುತ್ಯಾ ಅನಾರೋಗ್ಯದಿಂದ ನಿಧನವಾಗಿರುತ್ತಾರೆ. ಮನೆಯವರೆಲ್ಲರು ಅವರ ಅಂತ್ಯ ಕ್ರಿಯೆಯಲ್ಲಿ ಭಾಗವಹಿಸಿದ್ದು ಅದೇ ವೇಳೆಗೆ ಅಲ್ಲಿಗೆ ಬಿಳವಾರ ಗ್ರಾಮದ ಭೀಮಾಶಂಕರ್‌ ತಂದೆ ಮಲ್ಕಾಜಪ್ಪ ಕೂಡಿ ಅನ್ನುವವನು ಕೂಡ ಅಲ್ಲಿಗೆ ಬಂದಿದ್ದನು. ಮದ್ಯಾಹ್ನ 3-00 ಘಂಟೆಯ ಸುಮಾರಿಗೆ ಭೀಮಾಶಂಕರ್ ಕೂಡಿ ಇತನು ನಮ್ಮ ಮನೆಯ ಹಿಂದೆ ಬಂದು ನನಗೆ ಕೈ ಮಾಡಿ ಕರೆಯುತ್ತಿದ್ದನು. ಅವನು ಮೊದಲೆ ಪರಿಚಯವಿರುವದರಿಂದ ಯಾಕೆ ಕರೆಯುತ್ತಾನೆ ಎಂದು ನಾನು ಹತ್ತಿರ ಹೋದಾಗ ಅವನು ನಿನಗೆ ಕಾಲೇಜು ಬಿಡಿಸಿರುತ್ತಾರೆ, ನಿನಗೆ ಕೂಲಿ ಕೆಲಸಕ್ಕೆ ಹಚ್ಚಿರುತ್ತಾರೆ, ನೀನು ನನ್ನೊಂದಿಗೆ ಬಾ, ನಿನಗೆ ಚೆನ್ನಾಗಿ ನೋಡಿಕೊಳ್ಳುತ್ತೇನೆ. ನಿನ್ನ ಬಿಟ್ಟು ನನಗೆ ಇರಲು ಆಗುತ್ತಿಲ್ಲ ನನ್ನೊಂದಿಗೆ ನಡೆ ಹೋಗೋಣ ಎಂದು ಹೇಳಿ ನನ್ನ ತಲೆ ಕೆಡಿಸಿದನು. ಆಗ ನಾನು ಇನ್ನು ಚಿಕ್ಕವಳಿದ್ದೇನೆ ನನಗೆ ವಯಸ್ಸಾಗಿರುವದಿಲ್ಲ ಇನ್ನು ಸ್ವಲ್ಪ ದಿನ ತಾಳು ಎಂದು ಹೇಳಿದಾಗ ಅವನು ನನಗೆ ಸ್ವಲ್ಪ ಮೋಟಾರ ಸೈಕಲ್ ಮೇಲೆ ಕೂಡು ನಿನಗೆ ಎಲ್ಲಾ ಹೇಳುತ್ತೇನೆ ಎಂದು ನನಗೆ ಮೋಟಾರ ಸೈಕಲ್ ಮೇಲೆ ಕೂಡಿಸಿಕೊಂಡು ಕೆಂಬಾವಿಯವರೆಗೆ ಕರೆದುಕೊಂಡು ಹೋದನು. ಅಲ್ಲಿಯೇ ಬಸ್ ನಿಲ್ದಾಣದಲ್ಲಿ ಮೋಟಾರ ಸೈಕಲ್ ನಿಲ್ಲಿಸಿ ಯಾರಿಗೋ ಪೋನ್ ಮಾಡಿ ಮೋಟಾರ ಸೈಕಲ್ ತೆಗೆದುಕೊಂಡು ಹೋಗಲು ತಿಳಿಸಿದನು. ನಂತರ ಅಲ್ಲಿಂದ ನನಗೆ ಒಂದು ಬಸ್ಸಿನಲ್ಲಿ ಕೂಡಿಸಿಕೊಂಡು ಸುರಪೂರಕ್ಕೆ ಕರೆದುಕೊಂಡು ಹೋಗಿ ಅಲ್ಲಿಂದ ಬೆಂಗಳೂರಿಗೆ ಹೋಗುವ ಬಸ್ಸಿನಲ್ಲಿ ಕೂಡಿಸಿಕೊಂಡು ಬೆಂಗಳೂರಕ್ಕೆ ಹೋಗಿರುತ್ತಾನೆ. ಬೆಂಗಳೂರದ ದೇವನಹಳ್ಳಿಯ ಏರಿಯಾದಲ್ಲಿ ಕೆಲಸ ಮಾಡುವ ಅವನ ಗೆಳೆಯ ಮಾಳಪ್ಪ ನೇರಡಗಿ ಈತನು ವಾಸವಾಗಿರುವ ಒಂದು ಮನೆಯಲ್ಲಿ ನನಗೆ ಇಟ್ಟನು. ಅವನು ಕೂಲಿ ಕೆಲಸಕ್ಕೆ ಹೋಗುತ್ತಿದ್ದನು. ದಿ; 10/11/2019 ರಂದು ಬೆಂಗಳೂರದಲ್ಲಿ ಇದ್ದಾಗ ರಾತ್ರಿ 11-00 ಘಂಟೆಯ ಸುಮಾರಿಗೆ ನನಗೆ ಮಲಗಲು ಬಾ ಎಂದು ಕರೆದು ನಾನು ಬೇಡ ಎಂದರು ಕೂಡ ಜಬರದಸ್ತಿಯಿಂದ ನನಗೆ ಸಂಬೋಗ ಮಾಡಿರುತ್ತಾನೆ. ನಂತರ ಅಲ್ಲಿಯೇ ದಿನಾಲು ರಾತ್ರಿ ವೇಳೆಯಲ್ಲಿ ಹಲವು ಬಾರಿ ನನಗೆ ಜಬರದಸ್ತಿಯಿಂದ ಸಂಭೋಗ ಮಾಡಿರುತ್ತಾನೆ. ಈ ಮೊದಲು ಒಂದು ವರ್ಷದ ಹಿಂದೆ ನಾನು ಬಿಳವಾರ ಗ್ರಾಮದ ನಮ್ಮ ಅಜ್ಜಿಯ ಮನೆಯಲ್ಲಿ ಇದ್ದಾಗ ಒಂದು ದಿನ ಮದ್ಯಾಹ್ನ ಮನೆಯಲ್ಲಿ ಯಾರು ಇಲ್ಲದೆ ಸಮಯದಲ್ಲಿ ಬೀಮಾಶಂಕರ್ ಈತನು ನಮ್ಮ ಮನೆಗೆ ಬಂದು ನನಗೆ ಜಬರದಸ್ತಿಯಿಂದ ಸಂಭೋಗ ಮಾಡಿರುತ್ತಾನೆ. ಮತ್ತು ಈ ವಿಷಯ ಯಾರಿಗಾದರು ಹೇಳಿದರೆ ನಿನಗೆ ಜೀವ ಸಹಿತ ಬಿಡುವದಿಲ್ಲ ನಿನ್ನ ಮರ್ಯಾದೆ ಹಾಳು ಮಾಡುತ್ತೇನೆ ಎಂದು ಹೆದರಿಸಿ ಹೀಗೆ 2-3 ಬಾರಿ ಸಂಬೋಗ ಮಾಡಿರುತ್ತಾನೆ. ಆದ್ದರಿಂದ ನಾನು ಮರ್ಯಾದೆಗೆ ಅಂಜಿ ಈ ವಿಷಯ ಯಾರಿಗು ಹೇಳಿರುವದಿಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.