POLICE BHAVAN KALABURAGI

POLICE BHAVAN KALABURAGI

23 September 2019

KALABURAGI DISTRICT REPORTED CRIMES

ಮದುವೆ ಮಾಡಿಕೊಳ್ಳುತ್ತೆನೆಂದು ನಂಬಿಸಿ ಅತ್ಯಾಚಾರ  ಮಾಡಿದ ಪ್ರಕರಣ :
ವಾಡಿ ಠಾಣೆ : ಕುಮಾರಿ ರವರು ವಿದ್ಯಾಬ್ಯಾಸ ಮಾಡುವ ಕಾಲಕ್ಕೆ ನಮ್ಮ ಮನೆಯ ಪಕ್ಕದಲ್ಲಿರುವ ರಾಮು ಚವ್ಹಾಣ ಎನ್ನುವರ ಮಗ ವಿಶಾಲ ಇತನು ಸೆಂಟ್ ಅಂಬ್ರೋಸ ಶಾಲೆಯಲ್ಲಿ ವಿದ್ಯಾಬ್ಯಾಸ ಮಾಡಿಕೊಂಡಿದ್ದು ಇಬ್ಬರ ಮನೆ ಅಕ್ಕ ಪಕ್ಕದಲ್ಲಿ ಇರುವದರಿಂದ ಒಬ್ಬರಿಗೊಬ್ಬರು ಮಾತನಾಡುವದು ಮಾಡುತ್ತಿದ್ದೆವು. ನಂತರ ಶಹಾಬಾದದಲ್ಲಿ ಪಿ.ಯು.ಸಿ ಕಾಮರ್ಸ ಓದುತ್ತಿದ್ದೆ ವಿಶಾಲ ಇತನು ಗುಲಬರ್ಗಾದ ಸರ್ಕಾರಿ ಪದವಿ ಪೂರ್ವ ಕಾಲೇಜದಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದು ಆಗಲು ಸಹ ಇಬ್ಬರೂ ರೇಲ್ವೇದಲ್ಲಿ ಹೋಗಿ ಬರುವಾಗ ಮಾತನಾಡುವದು ಅಲ್ಲದೇ ಇಬ್ಬರಿಗೆ ಸ್ನೇಹ ಬೆಳೆದು ಸಲಿಗೆಯಿಂದ ಮಾತನಾಡುತ್ತಿದ್ದೆವು. ನಂತರ ನಾನು ಗುಲಬರ್ಗಾದ ಗೋದುತಾಯಿ ಕಾಲೇಜದಲ್ಲಿ ಬಿ.ಕಾಮ್ ಓದುತ್ತಿದ್ದು ವಿಶಾಲ ಇತನು ಎಸ್.ಬಿ.ಅರ ಕಾಲೇಜದಲ್ಲಿ ಬಿಬಿಎಮ್ ಓದುತ್ತಿದ್ದನು. ಅಲ್ಲಿಂದ ನಾನು ಬೆಂಗಳೂರಿನ ಬಿಎಮಎಸಐಟಿ ಕಾಲೇಜದಲ್ಲಿ ಎಮ್.ಬಿ.ಎ ಪದವಿ ಯನ್ನು 2013 ನೇ ಸಾಲಿನಲ್ಲಿ ಓದುತ್ತಿದ್ದೆನು. ಆಗ 2012 ನೇ ಸಾಲಿನಿಂದ 2014 ನೇ ಸಾಲಿನ ವರೆಗೆ ವಿಶಾಲ ತಂದೆ ರಾಮು ಚವ್ಹಾಣ ಇತನು ಬೆಂಗಳೂರಿನ ಆರ್.ವಿ ಕಾಲೇಜದಲ್ಲಿ ಎಮ್.ಬಿ.ಎ ಪದವಿ ಓದುತ್ತಿದ್ದನು. ನಾವಿಬ್ಬರೂ ಬೆಂಗಳೂರದಲ್ಲಿ ರಜೆ ಇದ್ದಾಗ ಆಗಾಗ ಒಬ್ಬರಿಗೊಬ್ಬರು ಬೇಟಿ ಆಗುತ್ತಿದ್ದೆವು. ಆಗ ವಿಶಾಲ ಇತನು ನಿನಗೆ ಪ್ರೀತಿ ಮಾಡುತ್ತೆನೆ ಅಲ್ಲದೇ ಮದುವೆ ಸಹ ಮಾಡಿಕೊಳ್ಳುತ್ತೆನೆ ಅಂತಾ ಅನ್ನುತ್ತಿದ್ದನು. ನಂತರ 2018 ನೇ ವರ್ಷದಲ್ಲಿ ದಸರಾ ಹಬ್ಬಕ್ಕೆ ನಾನು ನಮ್ಮೂರಿಗೆ ಬಂದ್ದಿದ್ದೆ ವಿಶಾಲ ಇತನು ಸಹ ಊರಿಗೆ ಬಂದಿದ್ದನು. ದಿನಾಂಕ 08/10/2018 ರಂದು ವಿಶಾಲ ಇತನು ದಸರಾ ಹಬ್ಬದ ದಿವಸ ನನಗೆ ನಮ್ಮ ಮನೆಗೆ ಬಾ ಅಂತಾ ಹೇಳಿದಾಗ ನಾನು ಅವರ ಮನೆಗೆ ಹೋದೆನು. ಆಗ ಅವರ ಮನೆಯವರು ದೇವಿಯ ಮೆರವಣಿಗೆಯನ್ನು ನೋಡಲು ಹೋಗಿದ್ದರು. ಆಗ ವಿಶಾಲ ಇತನು ನನ್ನೊಂದಿಗೆ ಅನುಚಿತವಾಗಿ ನಡೆದುಕೊಂಡು ನಿನಗೆ ಮದುವೆ ಮಾಡಿಕೊಳ್ಳುತ್ತೆನೆ ಅಂತಾ ಹೇಳಿ ನನ್ನ ಇಷ್ಟಕ್ಕೆ ವಿರುದ್ದವಾಗಿ ಜಬರಿ ಸಂಭೋಗ ಮಾಡಿ ಈ ವಿಷಯ ಯಾರಿಗೆ ಹೇಳಬೇಡಾ ಅಂತಾ ನನಗೆ ಬೆದರಿಕೆ ಹಾಕಿದನು. ನಂತರ ನಾನು ಈ ವಿಷಯ ನಮ್ಮ ಮನೆಯವರಿಗೆ ಹೇಳಲಿಲ್ಲ. ನಂತರ ನಾನು ಬೆಂಗಳೂರಿನಲ್ಲಿ ನೌಕರಿ ಮಾಡುತ್ತಿದ್ದಾಗ ದಿನಾಂಕ 05/01/2019 ರಂದು ವಿಶಾಲ ಇತನು ಕಲಬುರಗಿದಿಂದ ಬೆಂಗಳೂರಿಗೆ ಬಂದು ನನಗೆ ಬೇಟಿಯಾಗಿ ಬೆಂಗಳೂರ ಸುತ್ತಾಡಿಕೊಂಡು ಬರೋಣ ಅಂತಾ ಹೇಳಿ ಕೊರಮಂಗಲ ಏರಿಯಾದಲ್ಲಿ ಕರೆದುಕೊಂಡು ಹೋಗಿ ಸಾಯಂಕಾಲ ಕೊರಮಂಗಲದಲ್ಲಿರುವ ಎಂಪೈರ್ ಎಂಬ ಹೊಟೇಲಗೆ ಕರೆದುಕೊಂಡು ಹೋಗಿ ಆತನು ತನ್ನ ಹೆಸರಿನಲ್ಲಿ ಮುಂಚೆನೆ ರೂಮ್ ಬುಕ್ ಮಾಡಿದ್ದನು. ರಾತ್ರಿಯಾಗಿದ್ದರಿಂದ ನಾವು ಅಲ್ಲೇ ಉಳಿದುಕೊಂಡಿದ್ದು ಮತ್ತೆ ವಿಶಾಲ ಇತನು ನನಗೆ ಮದುವೆ ಮಾಡಿಕೊಳ್ಳುತ್ತೆನೆ ಅಂತಾ ನಂಬಿಸಿ ಮೋಸ ಮಾಡಿ ಅಲ್ಲಿಯು ಸಹ ನನ್ನ ಇಷ್ಟಕ್ಕೆ ವಿರುದ್ದವಾಗಿ ಜಬರಿ ಸಂಭೋಗ ಮಾಡಿರುತ್ತಾನೆ. ನಂತರ ದಿನಾಂಕ 06/01/2019 ರಂದು ಹೊಟೇಲದಿಂದ ಹೊರಟು ಬಂದಿರುತ್ತೆವೆ. ಹೀಗೆ ಆತನ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ನನಗೆ ಮನೆಗೆ ಕರೆಸಿ ಅನೇಕ ಸಲ ನಾನು ಬೇಡ ಅಂದರು ನನ್ನೊಂದಿಗೆ ದೈಹಿಕ ಸಂಪರ್ಕ ಮಾಡಿರುತ್ತಾನೆ.  ನಂತರ ನಾನು ಪುನಾಕ್ಕೆ ಹೋಗಿ ನೌಕರಿ ಮಾಡಿಕೊಂಡಿದ್ದು ವಿಶಾಲ ಇತನು ಗುಲಬರ್ಗಾದಲ್ಲಿ ನೌಕರಿ ಮಾಡುತ್ತಿದ್ದು ಆಗಾಗ ನನ್ನೊಂದಿಗೆ ಪೋನದಲ್ಲಿ ಮಾತನಾಡುತ್ತಿದ್ದನು. ನಾನು ಮದುವೆ ಮಾಡಿಕೊಳ್ಳುವ ವಿಷಯ ಕೇಳಿದಾಗ ಸ್ವಲ್ಪ ದಿನ ಹೋಗಲಿ ನಮ್ಮ ತಂದೆ ತಾಯಿಗೆ ತಿಳಿಸಿ ಮದುವೆ ಮಾಡಿಕೊಳ್ಳುತ್ತೆನೆ ಹೇಳುತ್ತ ಬಂದಿದ್ದು ಅಲ್ಲದೇ ಕಳೆದ ಜುಲೈ ತಿಂಗಳ 19 ನೇ ತಾರಿಖದಂದು ನಾನು ನಮ್ಮೂರಿಗೆ ಬಂದು ವಿಶಾಲ ಇತನಿಗೆ ಫೋನ ಮಾಡಿ ನಮ್ಮ ಮದುವೆಯ ವಿಷಯದ ಬಗ್ಗೆ ಕೇಳಿದಾಗ ಆತನು ನಾನು ನಿನಗೆ ಮದುವೆ ಮಾಡಿಕೊಳ್ಳುವದಿಲ್ಲ , ಕೇವಲ ನಿನ್ನೊಂದಿಗೆ ಎಂಜೋಯ್ ಮಾಡಿರುತ್ತೆನೆ ಮುಂದೆ ನನಗೆ ಫೋನ ಮಾಡಬೇಡಾ ಅಂತಾ ಪೋನ ಕಟ್ ಮಾಡಿದನು. ನಂತರ ನನ್ನ ಮನಸ್ಸಿಗೆ ನೋವಾಗಿ ನಾನು ನಮ್ಮ ತಮ್ಮನೊಂದಿಗೆ ದಿನಾಂಕ 28/08/2018 ರಂದು 12-30 ಪಿ.ಎಮ್ ಸುಮಾರಿಗೆ ಬಲರಾಮಚೌಕದಲ್ಲಿರುವ ವಿಶಾಲ ಇತನ ಮನೆಗೆ ಹೋದಾಗ ವಿಶಾಲ ಮತ್ತು ಆತನ ತಂದೆ ರಾಮು ಮತ್ತು ತಾಯಿ ಸುನೀತಾ ಮನೆಯಲ್ಲಿದ್ದರು. ವಿಶಾಲ ಇತನಿಗೆ ನನಗೆ ಮದುವೆ ಮಾಡಿಕೊಳ್ಳುತ್ತೆನೆ ಅಂತಾ ಹೇಳುತ್ತ ಬಂದಿದ್ದು ಈಗ ಏಕೆ ನಿರಾಕರಿಸುತ್ತಿದ್ದಿ ಅಂತಾ ಕೇಳಿದಾಗ ನಾನು ನಿನ್ನನ್ನು ಮದುವೆ ಮಾಡಿಕೊಳ್ಳುವ ಬಗ್ಗೆ ಮಾತನಾಡಿರುವದಿಲ್ಲ ಅಂತಾ ಅಂದನು ಹಾಗೂ ಅವರ ತಂದೆ ತಾಯಿ ನೀನು ಯಾರು ನನಗೆ ಗೊತ್ತಿಲ್ಲ ವಿನಾಕಾರಣ ನನ್ನ ಮಗನಿಗೆ ತ್ರಾಸ ಕೊಡುತ್ತಿ ರಂಡಿ ನನ್ನ ಮಗನು ಗಂಡಸು ಇದ್ದಾನೆ ನಿನ್ನ ಜೊತೆ ಮಲಗಿದ್ದಾನೆ ಅದಕ್ಕೆ ನಾವೆನು ಮಡಬೇಕು ನೀನು ಏನು ಮಾಡಕೋತಿ ಮಾಡಕೋ ನಾವು ಮದುವೆ ಮಾಡಿಕೊಳ್ಳಲು ಬಿಡುವದಿಲ್ಲ ಅಂತಾ ಹೆದರಿಸಿ ಇನ್ನೊಮ್ಮೆ ನನ್ನ ಮಗನ ತಂಟೆಗೆ ಬಂದರೆ ಅಥವಾ ನಮ್ಮ ಮನೆಗೆ ಬಂದರೆ ನಿನಗೆ ಖಲಾಸ  ಮಾಡುತ್ತೆವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಅಲ್ಲದೇ ವಿಶಾಲ ಇತನಿಗೆ ಇವಳ ತಂಟೆಗೆ ಹೋಗಬೇಡಾ ಮತ್ತು ಅವಳನ್ನು ಮದುವೆ ಮಾಡಿಕೊಳ್ಳುವದು ಬೇಡ ಅಂತಾ ಪ್ರಚೋದನೆ ನೀಡಿದ್ದು ಇರುತ್ತದೆ. ನಂತರ ನಾನು ನಮ್ಮ ಮನೆಗೆ ಬಂದೆನು. ವಿಶಾಲ ಇತನು ಬೇರೆ ಮದುವೆ ಮಾಡಿಕೊಳ್ಳುತ್ತೆನೆ ಅಂತಾ ಹೇಳುತ್ತಿದ್ದ ಬಗ್ಗೆ ನನಗೆ ಗೊತ್ತಾಗಿರುತ್ತದೆ. ಕಾರಣ ವಿಶಾಲ ಇತನು ನನಗೆ ನಂಬಿಸಿ ಮೋಸ ಮಾಡಿ ನನ್ನ ಇಷ್ಟಕ್ಕೆ ವಿರುದ್ದವಾಗಿ ದೈಹಿಕ ಸಂಬಂಧ ಬೆಳೆಸಿದ್ದು ಅಲ್ಲದೇ ಆತನ ಮನೆಗೆ ಹೋಗಿ ವಿಚಾರಿಸಿದ್ದಕ್ಕೆ ಅವರ ತಂದೆ ತಾಯಿ ನನಗೆ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ್ದು ಅವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 06-02-19 ರಂದು ಶ್ರೀ ಯಲ್ಲಪ್ಪ ತಂದೆ ಸಾತಪ್ಪ ಸಿಂಘೆ ಸಾ||ಉಡಚಾಣ ಮತ್ತು ನಮ್ಮ ಗ್ರಾಮದ ಯೋಗಿರಾಜ ತಂದೆ ಸಿದ್ದಪ್ಪ ಗಿರಣಿ ರವರು ಕೂಡಿಕೊಂಡು ಯೋಗಿರಾಜ ರವರ ಮೋಟಾರ ಸೈಕಲ ನಂ ಎಮೆ.ಹೆಚ್.14-ಎವೈ-9747 ನೇದ್ದರ ಮೇಲೆ ಅಫಜಲಪೂರ ದಿಂದ ಉಡಚಾಣಕ್ಕೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಶೀರವಾಳ ಕ್ರಾಸ್ ಹತ್ತಿರ ಎದುರುಗಡೆಯಿಂದ ಅಶೋಕ ಲೈಲಾಂಡ ಕಂಪನಿಯ ವಾಹನ ಚಾಲಕ ಕೆ.ಎ-28-ಸಿ-3033 ನೇದ್ದರ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲಗೆ ಡಿಕ್ಕಿ ಪಡೆಸಿದ್ದು ಇದರಿಂದ ಯೋಗಿರಾಜ ಗೆ ತಲೆಗೆ ಭಾರಿ ರಕ್ತಗಾಯ ಮತ್ತು ಬಲಗೈ ಮುರಿದಂತತಾಗಿದೆ ಮತ್ತು ಬಲಗಾಲ ಮತ್ತು ಎಡಗಾಲು ಮುರಿದ್ದು ಇರುತ್ತದೆ. ನನಗೆ ಎಡಗಾಲಿಗೆ ಪೆಟ್ಟು ಮತ್ತು ಬಲಗೈ ಮುರಿದಿರುತ್ತದೆ. ಅಂತಾ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿದ್ದು ಯೋಗಿರಾಜ ತಂದೆ ಸಿದ್ದಪ್ಪ ಗಿರನಿ ಸಾ||ಉಡಚಾಣ ಈತನು ಅಪಘಾತದಲ್ಲಿ ಆದ ಗಾಯದಿಂದ ಸೆಪ್ಟಿಕ್ ಆಗಿ ಉಪಚಾರ ಕುರಿತು pios ಆಸ್ಪತ್ರೇ ಜಯಸಿಂಗಪೂರದಲ್ಲಿ ದಿನಾಂಕ:16/07/19 ರಂದು ದಾಕಲಾಗಿ ಉಪಚಾರ ಪಡೆಯುತ್ತಾ ಉಪಚಾರ ಫಲಿಸದೆ ದಿನಾಂಕ:19/07/19 ರಂದು ಮೃತಪಟ್ಟಿರುತ್ತಾನೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

21 September 2019

KALABURAGI DISTRICT REPORTED CRIMES

ಸುಲಿಗೆ ಪ್ರಕರಣ :
ಜೇವರಗಿ ಠಾಣೆ : ಶ್ರೀ  ಪಂಚಾಕ್ಷರಯ್ಯಾ ತಂದೆ ಶಿವಯ್ಯಾ ಮಠ ಸಾಃ ರಮೇಶ ಕುಲಕರ್ಣಿ ಲೇಔಟ ಜೇವರಗಿ ರವರು ದಿನಾಂಕ; 19/09/2019 ರಂದು  ಸಾಯಂಕಾಲ 5.00 ಘಂಟೆಯ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಗುರಮ್ಮ ಇಬ್ಬರೂ ಮನೆಯಲ್ಲಿ ಇದ್ದಾಗ  ಒಬ್ಬ ಅಪರಿತ ವ್ಯಕ್ತಿ ನಮ್ಮ ಮನೆಗೆ ಬಂದು ಕುಡಿಯಲು ನೀರು ಕೊಡಿರಿ ಎಂದು ಹೇಳಿದಾಗ ನಾನು ನೀರು ಕೊಟ್ಟೆನು ಅವನು ನೀರು  ಕುಡಿದು ಹೊದ ನಂತರ  ಸಾಯಂಕಾಲ  7.30  ಗಂಟೆಯ ಸುಮಾರಿಗೆ  ಇಬ್ಬರೂ ಅಪರಿತ ಮನುಷ್ಯರು ನಮ್ಮ ಮನೆಯೋಳಗೆ ಪ್ರವೇಶ ಮಾಡಿ ತಮ್ಮ ಕೈಯಿಂದ ನನಗೆ ಹಿಡಿದು ಹೊರಗೆ ಎಳೆದಾಡಿಕೊಂಡು ತಂದು   ಕೈ,  ಕಾಲು,  ಕಟ್ಟಿ  ಮನೆಯಲ್ಲಿ ಹಣ ಬಂಗಾರ ಎಲ್ಲಿವೆ ಹೆಳು ಎಂದು ಕೈಯಿಂದ ನನಗೆ ಹೊಡೆದು ಕಾಲಿನಿಂದ ಒದ್ದು ಕೇಳುತ್ತಿದ್ದಾಗ  ನಾನು ಅವರಿಗೆ ನಮ್ಮ ಹತ್ತಿರ ಹಣ ಇಲ್ಲಾ ನನನ್ನು ಬಿಟ್ಟು ಬಿಡಿರಿ ಎಂದು ಪರಿಪರಿಯಾಗಿ ಕೇಳಿಕೊಂಡರು ಅವರು  ನನಗೆ ಬಿಡದೆ ಕೈಯಿಂದ ಹೊಡೆ ಬಡೆ ಮಾಡಿ ನನ್ನ ಬಾಯಿಯಲ್ಲಿ ಬಟ್ಟೆ ತುರುಕಿ  ನನ್ನನು ಅಲ್ಲಿಯೇಕೇಡುವಿ ನಮ್ಮ ಮನೆಯೊಳಗೆ ಹೋಗಿ ಮನೆಯಲ್ಲಿದ್ದ  ನನ್ನ ಹೆಂಡತಿ ಗುರಮ್ಮ ಇವಳ ಮೈಮೇಲಿದ್ದ  ಬಂಗಾರದ ಆಭರಣಳನ್ನು ಮತ್ತು ಜಬರದಸ್ತಿಯಿಂದ ಕಿತ್ತುಕೊಂಡಿರುತ್ತಾರೆ. ಅಲ್ಲದೆ  ಕಬ್ಬಿಣದ ಅಲಮಾರಿ ಬಾಗೀಲು ತೆರೆದು  ಅದರಲ್ಲಿದ್ದ ಬಂಗಾರದ ಮತ್ತು ಬೆಳ್ಳಿಯ ಆಭರಣಗಳು ಹೀಗೆ ಎಲ್ಲಾ ಸೇರಿ 87,500/- ಕಿಮ್ಮತಿನಷ್ಟು ದೊಚಿಕೊಂಡು ಹೋಗಿರುತ್ತಾರೆ. ಅವರು ನೋಡಲು ಸುಮಾರು ಐದರಿಂದ ಐದುವರೆ ಪೀಟ್ ಎತ್ತರ ಹೊಂದಿದ್ದು, ತಳ್ಳನೆ ಮೈಕಟ್ಟಿನವರಿದ್ದು, ಅಂದಾಜು ವಯಸ್ಸು 22 ರಿಂದ 26 ವರ್ಷ ವಯಸ್ಸಿನವರಾಗಿದ್ದರು. ಅವರು ಕನ್ನಡ ಬಾಷೆಯಲ್ಲಿ ಮಾತನಾಡುತ್ತಿದ್ದರು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರುಕಳ ನೀಡಿ ಹೊಡೆ ಬಡೆ ಮಾಡಿದ ಪ್ರಕರಣ :
ವಾಡಿ ಠಾಣೆ : ಶ್ರೀಮತಿ ಮಾಲಿನಿ ಗಂಡ ಸಂತೋಷ ಡೋಲಾರೆ ಸಾ:ಸೋನಾಬಾಯಿ ಏರಿಯಾ ವಾಡಿ ರವರು 10/02/2019 ರಂದು ಸಂತೋಷ ಇತನೊಂದಿಗೆ ಮದುವೆಯಾಗಿರುತ್ತದೆ.ನಮ್ಮ ತಂದೆ ತಾಯಿ ಅಕಾಲಿಕ ಮರಣ ಹೊಂದಿರುತ್ತಾರೆ. ಮದುವೆಯಾದ ನಂತರ ನಾನು ನನ್ನ ಗಂಡ ಕೂಡಿ ಬಾಂಬೆಯ ಪನವೇಲದಲ್ಲಿ ವಾಸವಾಗಿದ್ದು ಅಲ್ಲಿ ನನ್ನ ಗಂಡನಿಗೆ ನಮ್ಮ ಅತ್ತೆ ವಿಜಯಲಕ್ಷ್ಮೀ ಇವಳು ಫೋನ ಮಾಡಿ ನಿನ್ನ ಹೆಂಡತಿಗೆ ಹೊಡಿ, ಬಡಿ ಮಾಡು ತ್ರಾಸ ಕೊಡು ರಂಡಿಗೆ ಭೋಸಡಿಗೆ ಅಂತಾ ಹೇಳುತ್ತಿದ್ದನ್ನು ನನ್ನ ಗಂಡನು ಕೇಳಿಸಿಕೊಂಡು ನನಗೆ ಕಿರಕುಳ ಕೊಡಲು ಪ್ರಾರಂಭಿಸಿದನು ಮತ್ತು ನಮ್ಮ ಅತ್ತೆಯ ಮಾತು ಕೇಳಿ ನನಗೆ ನನ್ನ ಗಂಡನು ಬಾಂಬೆಯಿಂದ ಕರೆದುಕೊಂಡು ವಾಡಿ ಪಟ್ಟಣದ ಸೋನಾಬಾಯಿ ಏರಿಯಾದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದು ನನ್ನ ಗಂಡನು ಎಸಿಸಿ ಕಂಪನಿಯಲ್ಲಿ ಕೂಲಿಕೆಲಸಕ್ಕೆ ಹೋಗುತ್ತಿದ್ದನು.ನನಗೆ ವಿನಾಕಾರಣ ನೀನು ಕಪ್ಪಾಗಿದ್ದಿ, ನಿನಗೆ ಮನೆಕೆಲಸ ಮಾಡಲು ಬರುವದಿಲ್ಲ, ನೀನು ನೋಡಲು ಸರಿಯಾಗಿಲ್ಲ ಅಂತಾ ದಿನಾಲೂ ನನಗೆ ಹೊಡೆ ಬಡೆ ಮಾಡುತ್ತಿದ್ದನು. ಆಗ ನಾನು ನಮ್ಮ ಅತ್ತೆ ವಿಜಯಲಕ್ಷ್ಮೀ ಮತ್ತು ಭಾವ ಖಂಡು ಇವರಿಗೆ ನಮ್ಮ ಮನೆಗೆ ಕರೆಯಿಸಿ ನನ್ನ ಗಂಡನಿಗೆ ಬುದ್ದಿ ಹೇಳಲು ಹೇಳಿದಾಗ ಅವರು ಸಹ ನನಗೆ ರಂಡಿ ಬೋಸಡಿ, ನೀನು ಛೀನಾಲಿ ಇದ್ದಿ, ಬೇಡುಕೊಂಡು ತಿನ್ನುತ್ತಿ ಅಂತಾ ಬೈಯ್ದು ನನಗೆ ತ್ರಾಸ ಕೊಡುವಂತೆ ನನ್ನ ಗಂಡನಿಗೆ ಹೇಳಿ ಹೋಗುತ್ತಿದ್ದರು.ಇಂದಿಲ್ಲಾ ನಾಳೆ ನನ್ನ ಗಂಡ ಸರಿ ದಾರಿಗೆ ಬರಬಹುದು ಅಂತಾ ನಾನು ನನ್ನ ಗಂಡ ಕೊಟ್ಟ ತ್ರಾಸನ್ನು ಸಹಿಸಿಕೊಂಡು ನನ್ನ ಗಂಡನೊಂದಿಗೆ ವಾಸವಾಗಿದ್ದೆ. ಈ ವಿಷಯದಲ್ಲಿ ಬಳ್ಳಾರಿಯಲ್ಲಿರುವ ನನ್ನ ಅಜ್ಜಿ ಮೀನಾಕ್ಷಿ ಇವರಿಗೆ ವಿಷಯ ತಿಳಿಸಿದಾಗ ಫೋನ ಮೂಲಕ ನನ್ನ ಗಂಡನಿಗೆ ಬುದ್ದಿವಾದ ಹೇಳಿದರು ಸಹ ನನಗೆ ತ್ರಾಸ ಕೊಡುವದು ಮಾಡುತ್ತಿದ್ದನು. ನಂತರ ದಿನಾಂಕ 29/08/2019 ರಂದು ಬೆಳಗ್ಗೆ 10-00 ಗಂಟೆ ಸುಮಾರು ನಾನು ಮನೆಯಲ್ಲಿ ಅಡುಗೆ ಮಾಡುತ್ತ ಇದ್ದಾಗ ನನ್ನ ಗಂಡ ಮನೆಯ ಹೊರಗಡೆ ಹೋದವನು ನಮ್ಮ ಅತ್ತೆ ವಿಜಯಲಕ್ಷ್ಮೀ ಗಂಡ ರಾಮಲಿಂಗ, ಭಾವ ಖಂಡು ತಂದೆ ರಾಮಲಿಂಗ ರವರಿಗೆ ಕರೆದುಕೊಂಡು ಮನೆಗೆ ಬಂದು ನನ್ನ ಗಂಡನು ನನ್ನೊಂದಿಗೆ ಜಗಳ ತೆಗೆದು ‘’ರಂಡಿ ನೀನು ಈ ಮನೆಯಲ್ಲಿ ಇರಬೇಡಾ ಅಂತಾ ಜಗಳಕ್ಕೆ ಬಿದ್ದು ಕೈಯಿಂದ ಹೊಡೆ ಬಡೆ ಮಾಡ ಹತ್ತಿದನು ಮತ್ತು ನಮ್ಮ ಅತ್ತೆ ಭಾವ ಖಂಡು ಇವರು ‘’ ಈ ರಂಡಿಗೆ ಬೀಡಬೇಡಾ ಹೊಡೆದು ಮನೆಯ ಹೊರಗಡೆ ಹಾಕು ಅಂತಾ ಬೈಯುತ್ತಿದ್ದಾಗ ನಾನು ನನಗೆ ಏಕೆ ತ್ರಾಸ ಕೊಡುತ್ತಿರಿ ನಾನೇನು ಮಾಡಿದ್ದೆನೆ ಅಂತಾ ಕೇಳಿದ್ದಕ್ಕೆ ನನ್ನ ಗಂಡನು ರಂಡಿ ನಿನ್ನ ಸೊಕ್ಕು ಹೆಚ್ಚಾಗಿದೆ ಅಂತಾ ತಲೆ ಕೂದಲು ಹಿಡಿದು ನನಗೆ ಮನೆಯ ಹೊರಗೆ ಹಾಕಿ ಇನ್ನೊಮ್ಮೆ ಈ ಮನೆಗೆ ಬಂದರೆ ನಿನಗೆ ಖಲಾಸ ಮಾಡುತ್ತೆನೆ ಅಂತಾ ಜೀವದ ಬೆದರಿಕೆ ಹಾಕಿದ್ದು ಆಗ ದಾರಿಗೆ ಹೊರಟ ನನ್ನ ಪರಿಚಯದ ರಾಜು ಎನ್ನುವವರು ನೋಡಿ ಜಗಳವನ್ನು ಬಿಡಿಸಿದರು. ಆಗ ಸಮಯ ಬೆಳಗ್ಗೆ 10-30 ಗಂಟೆಯಾಗಿತ್ತು. ನಂತರ ನಾನು ವಿಷಯ ನನ್ನ ಅಜ್ಜಿಗೆ ತಿಳಿಸಿ ನಾನು ಬಳ್ಳಾರಿಯ ನಮ್ಮ ಅಜ್ಜಿಯ ಮನೆಗೆ ಹೋಗಿ ಅಲ್ಲಿ ಉಳಿದುಕೊಂಡೆನು. ನಂತರ ನನ್ನ ಗಂಡ ಸಂತೋಷ ಇತನು ಇಂದಿಲ್ಲಾ ನಾಳೆ ನನಗೆ ಕರೆದುಕೊಂಡು ಹೋಗಲು ಬರಬಹುದು ಅಂತಾ ನಾನು ಅಜ್ಜಿಯ ಮನೆಯಲ್ಲಿ ಉಳಿದುಕೊಂಡೆನು. ನನ್ನ ಗಂಡನು ನನಗೆ ಕರೆದುಕೊಂಡು ಹೋಗಲು ಬರಲಿಲ್ಲ. ನನ್ನ ಗಂಡ ಸಂತೋಷ,ಅತ್ತೆ ವಿಜಯಲಕ್ಷ್ಮೀ, ಭಾವ ಖಂಡು ರವರು ನನಗೆ ಹೊಡೆ ಬಡೆ ಮಾಡಿ ಮಾನಸಿಕ ಹಾಗೂ ದೈಹಿಕ ಕಿರಕುಳ ನೀಡಿ ಜೀವದ ಬೆದರಿಕೆ ಹಾಕಿ ಮನೆಯ ಹೊರಗಡೆ ಹಾಕಿದ್ದು ಅವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಿ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

20 September 2019

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಆಳಂದ ಠಾಣೆ : ದಿನಾಂಕ 19/09/2019 ರಂದು ಶ್ರೀ ತುಕಾರಾಮ ತಂದೆ ನಾರಾಯಣ ಘಾಳೆ ಸಾ|| ಪಡಸಾವಳಿ ತಾ|| ಆಳಂದ ರವರ  ತಂದೆಯವರು ಇಂಡಿಯಲ್ಲಿರುವ ನನ್ನ ತಂಗಿಯ ಮನೆಗೆ ಹೋಗಿ ಬರುತ್ತೆನೆ ಅಂತಾ ಹೇಳಿದಾಗ ನಾನು ಹಾಗೂ ನನ್ನ ಹೆಂಡತಿ ವಿದ್ಯಾ  ಇಬ್ಬರು ಕೂಡಿ ತಂದೆಯವರಿಗೆ ಬಸ್ಸಿಗೆ ಹತ್ತಿಸಿ ಬರಬೇಕೆಂದು ಕರೆದುಕೊಂಡು ಬಂದು ಜಿಡಗಾ ಕ್ರಾಸ್ ಹತ್ತಿರದ ಕಮಾನ ಹತ್ತಿರ ಬಸ್ಸಿಗಾಗಿ ಕಾಯುತ್ತಾ ನಿಂತಿರುವಾಗ ಜಿಡಗಾ ಕಡೆಯಿಂದ ಒಬ್ಬ 407 ಟೆಂಪೊದ ಚಾಲಕ ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ರೋಡಿನ ಪಕ್ಕದಲ್ಲಿ  ನಿಂತಿದ್ದ ನನ್ನ ತಂದೆಗೆ ಜೋರಾಗಿ ಡಿಕ್ಕಿ ಪಡಿಸಿದ್ದರಿಂದ ತಂದೆಯವರು ರೋಡಿನ ಮೇಲೆ ಬಿದ್ದಾಗ ವಾಹನದಲ್ಲಿ ಸಿಕ್ಕಿಕೊಂಡು ಸ್ವಲ್ಪ ಮುಂದೆ ಹೋಗಿದ್ದು ನಾನು ಹಾಗೂ ನನ್ನ ಹೆಂಡತಿ ತಂದೆಯವರಿಗೆ ಎಬ್ಬಿಸಿ ನೋಡಲಾಗಿ ತಂದೆಯವರ ಹೊಟ್ಟೆಯ ಭಾಗದಲ್ಲಿ ಭಾರಿ ಗುಪ್ತ ಗಾಯ, ಬಲಗಾಲ ತೊಡೆ, ಬಲಗಾಲ ಪಾದದ ಹತ್ತಿರ ಭಾರಿ ರಕ್ತ ಗಾಯ ಹಾಗೂ ಅಲ್ಲಲ್ಲಿ ತರಚಿದ ರಕ್ತಗಾಯವಾಗಿದ್ದು 407 ಟೆಂಪೊ ಚಾಲಕ ತನ್ನ ವಾಹನ ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿದ್ದು ನಂಬರ ನೋಡಲಾಗಿ ಕೆಎ 28-3870 ಅಂತಾ ಇದ್ದು ಚಾಲಕ ತನ್ನ ವಾಹನದಲ್ಲಿದ್ದು ಆತನ ಹೆಸರು ವಿಚಾರಿಸಲಾಗಿ ಶರಣಬಸಪ್ಪಾ ತಂದೆ ಕಾಂತು ಬಳಕೋಟೆ ಸಾ|| ಮಾದನ ಹಿಪ್ಪರಗಾ ತಾ|| ಆಳಂದ ಅಂತಾ ಹೇಳಿ ತನ್ನ ಟೆಂಪೋ ಸಮೇತ ಅಲ್ಲಿಂದ ಓಡಿ ಹೋಗಿದ್ದು ಇರುತ್ತದೆ, ನಂತರ ನಾನು ನನ್ನ ಗೆಳೆಯ ಮುಬಾರಕ ತಂದೆ ರಾಜಾಭಾಯಿ ಇತನಿಗೆ ಫೋನ ಮಾಡಿ ಕರೆಯಿಸಿ ಆತನು ಬಂದ ನಂತರ 108 ವಾಹನಕ್ಕೆ ಫೋನ್ ಮಾಡಿ ಕರೆಯಿಸಿ ನಾವು ಅದರಲ್ಲಿ ನನ್ನ ತಂದೆಯವರಿಗೆ ಕೂಡಿಸಿಕೊಂಡು ಕಲಬುರಗಿಯ ಚಿರಾಯು ಆಸ್ಪತ್ರೆಗೆ ಕರೆದುಕೊಂಡು ತಂದು ಸೇರಿಕೆ ಮಾಡಿರುತ್ತೆವೆ, ಉಪಚಾರ ಫಲಕಾರಿಯಾಗದೆ ನನ್ನ ತಂದೆಯವರು ಇಂದು ಮಧ್ಯಾಹ್ನ 01-30 ಗಂಟೆ ಸುಮಾರಿಗೆ ಮೃತಪಟ್ಟರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.                                                                                                              
ನರೋಣಾ ಠಾಣೆ : ದಿನಾಂಕ:19/08/2019 ರಂದು ಕೋಗನೂರ ಗ್ರಾಮದಲ್ಲಿ ನಮ್ಮ ಸಂಬಂಧಿಕರು ತೀರಿಕೊಂಡ ಕಾರಣ ನಾನು ಕಾರ್ ನಂಬರ್ ಕೆಎ20-ಡಿ5800 ನೇದ್ದನ್ನು ಬಾಡಿಗೆ ಮಾಡಿಕೊಂಡು ಅದರಲ್ಲಿ ಕುಳಿತುಕೊಂಡು ಕೋಗನೂರ ಗ್ರಾಮಕ್ಕೆ ಬಂದು ದಿನಾಂಕ:20/08/2019 ರಂದು ಬೆಳಿಗ್ಗೆ ಕೊಗನೂರ ಗ್ರಾಮದಿಂದ ಗೋಳಾ(ಬಿ) ಗ್ರಾಮಕ್ಕೆ ನನ್ನ ತಂದೆ ತಾಯಿಯವರಿಗೆ ಕರೆದುಕೊಂಡು ಬರಲು ಅದೇ ಕಾರಿನಲ್ಲಿ ಕಡಗಂಚಿ ಮಾರ್ಗವಾಗಿ ಹೊರಟಾಗ ಬೆಳಿಗ್ಗೆ 10-00 ಗಂಟೆ ಸುಮಾರಿಗೆ ಕಾರ್ ಚಾಲಕನು ಕಾರನ್ನು ಅತೀವೇಗ ಮತ್ತು ನಿಷ್ಕಾಳಜಿತನಿಂದ ಚಲಾಯಿಸುತ್ತಿದ್ದನು. ನಾನು ಆತನ ಪಕ್ಕದ ಸೀಟಿನಲ್ಲಿ ಕುಳಿತಿದ್ದು. ಗೋಳಾ(ಬಿ) ಗ್ರಾಮ ಇನ್ನು 2 ಕಿ.ಮೀ ಇರುವಾಗ ಕಾರ ಚಾಲಕನು ಕಾರನ್ನು ಅತೀವೇಗ ಮತ್ತು ನಿಷ್ಕಾಳಜಿತನಿಂದ ಚಲಾಯಿಸಿದ್ದರಿಂದ ಕಾರ್ ಪಲ್ಟಿಯಾಗಿ ಅಪಘಾತವಾಗಿರುತ್ತದೆ. ಅಪಘಾತದಲ್ಲಿ ನಾನು ನನ್ನ ತಲೆಗೆ, ಹಣೆಗೆ ಹಾಗೂ ಎದೆಗೆ ಗಂಬೀರ ರಕ್ತಗಾಯ ಮತ್ತು ಗುಪ್ತಗಾಯಗಳಾಗಿ ಒದ್ದಾಡುತ್ತಿದ್ದಾಗ ಕಾರಿನ ಡ್ರೈವರ್ ಹಾಗೂ ನಮ್ಮೂರಿನ ರೇವಪ್ಪಾ ತಂದೆ ಗುರುಲಿಂಗಪ್ಪಾ ಉಪ್ಪಿನ, ಕಾಶಿನಾಥ ತಂದೆ ಶರಣಪ್ಪಾ ಬಿರಾದಾರ, ತಮ್ಮಣ್ಣಾ ತಂದೆ ಶಿವಾಜಿ ಪವಾರ್ ಎಲ್ಲರೂ ಸದರಿ ಘಟನೆಯನ್ನು ನೋಡಿ ನನಗೆ ಕಾರಿನಿಂದ ಹೊರಗೆ ತಗೆದು ಅಲ್ಲಿಂದ ನನ್ನ ಸಹೋದರನಾದ ಶಿವಪ್ಪಾ ಈತನಿಗೆ ಸುದ್ದಿ ತಿಳಿಸಿದ್ದು. ನನ್ನ ಸಹೋದರನು ಒಂದು ಖಾಸಗಿ ವಾಹನದೊಂದಿಗೆ ಸ್ಥಳಕ್ಕೆ ಬಂದು ನನಗೆ ಅದರಲ್ಲಿ ಹಾಕಿಕೊಂಡು ಉಪಚಾರಕ್ಕಾಗಿ ಕಲಬುರಗಿಯ ಡೆಕ್ಕನ್ ಕೇರ ಆಸ್ಪತ್ರೆಗೆ ಉಪಚಾರಕ್ಕಾಗಿ ಸೇರಿಕೆ ಮಾಡಿ ಅಲ್ಲಿಂದ ಹೆಚ್ಚಿನ ಉಪಚಾರಕ್ಕಾಗಿ ಸೋಲಾಪೂರದ ಬಲವಂತ ಆಸ್ಪತ್ರೆಗೆ ಸೇರಿಕೆಮಾಡಿರುತ್ತಾರೆ ಅಂತಾ ಶ್ರೀ ಶ್ರೀಕಾಂತ ತಂದೆ ಲಕ್ಷ್ಮಣ ಸೇರಿಕಾರ ಸಾ : ಗೋಳಾ (ಬಿ) ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.