POLICE BHAVAN KALABURAGI

POLICE BHAVAN KALABURAGI

01 August 2019

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 31-07-2019 ರಂದು  ಅಫಜಲಪೂರ ಠಾಣಾ ವ್ಯಾಪ್ತಿಯ  ಮಣ್ಣೂರ ಗ್ರಾಮದ ಊರೊಳಗಿನ ಯಲ್ಲಮ್ಮ ದೇವಸ್ಥಾನದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯೆಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದಾನೆ  ಅಂತ ಮಾಹಿತಿ ಬಂದ ಮೇರೆಗೆ  ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಣ್ಣೂರ ಗ್ರಾಮಕ್ಕೆ ಹೋಗಿ ಗುಡಿಯಿಂದ ಸ್ವಲ್ಪ ದೂರದಲ್ಲಿ ನಮ್ಮ ವಾಹನವನ್ನು ನಿಲ್ಲಿಸಿ ಅಲ್ಲಿಂದ ನಡೆದುಕೊಂಡು ಹೋಗಿ ಯಲ್ಲಮ್ಮ ಗುಡಿಯ ದೇವಸ್ಥಾನದ ಮರೆಯಲ್ಲಿ ನಿಂತು  ನೋಡಲು, ದೇವಸ್ಥಾನದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯೆಕ್ತಿ ನಿಂತುಕೊಂಡು ಹೋಗಿ ಬರುವ ಜನಗಳಿಗೆ ಇದು ಕಲ್ಯಾಣ ಮಟಕಾ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನು . ಆಗ ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಿ ಅಂಗ ಶೋದನೆ ಮಾಡಲಾಗಿ  ಅಂಬ್ರಪ್ಪ ತಂದೆ ಚಂದಪ್ಪ ಡೊಂಬರ ಸಾ||ಮಣ್ಣೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 720/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಹಾಗೂ ಒಂದು ಪೆನ್ನ ದೊರೆತವು, ಸದರಿಯವುಗಳನ್ನು  ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಠಾಣೆಯ ಗುನ್ನೆ ನಂ 134/2019 ಕಲಂ 78 (3) ಕೆ.ಪಿ ಆಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಲಾಗಿದೆ.

30 July 2019

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ವಾಡಿ ಠಾಣೆ : ದಿನಾಂಕ :29/07/2019 ರಂದು ವಾಡಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಬರುವ ಲಕ್ಷ್ಮೀಪೂರ ವಾಡಿ ಗ್ರಾಮದ ಹನುಮಾನ ದೇವರ ಗುಡಿಯ ಮುಂದಿನ ಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಕೊಂಡು ಜನರಿಂದ ಹಣ ಪಡೆದು ಒಂದು ರೂಪಾಯಿಗೆ 80/- ರೂ ಗೆಲ್ಲಿರಿ ಅಂತಾ ಕೂಗಾಡುತ್ತಾ ಜನರಿಗೆ ಮೋಸ ಮಾಡಿ ಮಟಕಾ ಅಂಕಿ ಸಂಖ್ಯೆ ಬರೆದು ಚೀಟಿ ಕೊಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ವಾಡಿ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿಎಸ್.ಪಿ ಸಾಹೇಬರು ಶಹಾಬಾದ ಉಪ ವಿಭಾಗ ಹಾಗೂ ಮಾನ್ಯ ಸಿಪಿಐ ಸಾಹೇಬರು ಚಿತ್ತಾಪೂರ ವೃತ್ತ ರವರ ಮಾರ್ಗದರ್ಶನದಲ್ಲಿ  ಲಕ್ಷ್ಮೀಪೂರವಾಡಿ ಗ್ರಾಮದ ಸಮೀಪ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ಜೀಪನಿಂದ ಕೆಳಗಡೆ ಇಳಿದು ಮರೆಯಲ್ಲಿ ನಿಂತು ನಿರೀಕ್ಷಣೆ ಮಾಡಿ ನೋಡಿ ಸದರಿಯವನು ಮಟಕಾ ಅಂಕಿ ಚೀಟಿ ಬರೆದುಕೊಳ್ಳುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಲಾಗಿ ಮಟಾಕಾ ನಂಬರ ಬರೆಸುತ್ತಿದ್ದವರು ನಮ್ಮ ಪೊಲೀಸ ಸಮವಸ್ತ್ರ ನೋಡಿ ಓಡಿ ಹೋಗಿದ್ದು  ಸಿಬ್ಬಂದಿಯವರ ಸಹಾಯದಿಂದ ಮಟಕಾ ನಂಬರ ಬರೆದುಕೊಳ್ಳುತ್ತಿದ್ದವನನ್ನು ಹಿಡಿದು ಆತನ ಹೆಸರು ವಿಚಾರಿಸಲಾಗಿ ತನ್ನ ಹೆಸರು ಆನಂದ ತಂದೆ ಭೀಮಯ್ಯಾ ಆಂದೇಲಿ ಸಾ:ಲಕ್ಷ್ಮೀಪೂರ ವಾಡಿ ಅಂತಾ ತಿಳಿಸಿದ್ದು ಆತನ ಅಂಗಶೋಧನೆ ಮಾಡಲಾಗಿ ಆತನ ಹತ್ತಿರ ನಗದು ಹಣ 1640/- ರೂಪಾಯಿ, ಎರಡು ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿ ಹಾಗೂ ಒಂದು ಬಾಲ ಪೆನ್ನು ದೊರೆತಿದ್ದು ಅವುಗಳು ಜಪ್ತು ಪಡಿಸಿಕೊಂಡು ಸದರಿಯವನೊಂದಿಗೆ ಷಾಡಿ ಠಾಣೆಗೆ ಬಂದು ಠಾಣೆಯ ಗುನ್ನೆ ನಂಬರ 85/2019 ಕಲಂ:78(3) ಕೆ.ಪಿ ಕಾಯ್ದೆ ಸಂಗಡ 420 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಗೃಹಿಣಿಗೆ ಅತ್ಯಾಚಾರ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ ರವರ ತಂದೆಯವರು ಈಗ 7-8 ವರ್ಷಗಳ ಹಿಂದೆ ತೀರಿಕೊಂಡಿರುತ್ತಾರೆ, ನನಗೆ ಮದುವೆ ಮಾಡಿ ಕೊಟ್ಟಿರುತ್ತಾರೆ, ನಾನು ಬಾಣೆತನಕ್ಕೆ ನನ್ನ ತವರು ಮನೆಗೆ ಬಂದು ನಮ್ಮ ತಾಯಿಯೊಂದಿಗೆ ವಾಸವಾಗಿರುತ್ತೇನೆ, ನನಗೆ ಈಗ ಎರಡು ತಿಂಗಳ ಹಿಂದೆ ಬಾಣೆತನವಾಗಿ ಒಂದು ಗಂಡು ಮಗು ಜನಿಸಿರುತ್ತದೆ. ನಮ್ಮ ಮನೆಯಲ್ಲಿ ನಾನು ನನ್ನ ತಾಯಿ ಹಾಗು ನನ್ನ ಅಣ್ಣ, ತಮ್ಮ ಇದ್ದಿರುತ್ತೇವೆ, ನನ್ನ ಮದುವೆಯ ಮುಂಚೆ ನಮ್ಮ ಅಣ್ಣತಮ್ಮಕಿಯ ಮಹಾಂತೇಶ ತಂದೆ ದೊಡ್ಡಪ್ಪ ತಳವಾರ ರವರು ನನಗೆ ಚುಡಾಯಿಸುತ್ತಾ ನನಗೆ ಹಿಂಬಾಲಿಸುತ್ತಾ ನಾನು ನಿನಗ ಮದುವೆಯಾಗುತ್ತೇನೆ ಅಂತಾ ಹೇಳುತ್ತಾ ನನಗೆ ಕಿರುಕುಳ ಕೊಡುತ್ತಾ ಬಂದಿರುತ್ತಾನೆ. ಬಗ್ಗೆ ನಾನು ನಮ್ಮ ತಾಯಿಗೆ ಮತ್ತು ನಮ್ಮ ಚಿಕ್ಕಪ್ಪ ರವರಿಗೆ ತಿಳಿಸಿರುತ್ತೇನೆ, ಆಗ ನಮ್ಮ ತಾಯಿ ಮತ್ತು ನಮ್ಮ ಚಿಕ್ಕಪ್ಪ ರವರು ಕೂಡಿ ಮಹಾಂತೇಶನಿಗೆ ತಿಳವಳಿಕೆ ಹೇಳಿರುತ್ತಾರೆ, ಈಗ ಕೆಲವು ದಿನಗಳಿಂದ ನಾನು ಬೈಹಿರದೇಸೆಗೆ ಹೋದಾಗಲೆಲ್ಲಾ ಮಹಾಂತೇಶ ಇವನು ನನಗೆ ಹಿಂಬಾಲಿಸುತ್ತಾ ಬಂದು ನೀನು ನಿನ್ನ ಗಂಡನಿಗೆ ಬಿಟ್ಟು ನನ್ನೊಂದಿಗೆ ಬಾ ಅಂತಾ ಅನ್ನುತ್ತಾ ನನ್ನ ಕೈಹಿಡಿದು ಎಳೆದಾಡುತ್ತಿದ್ದನು, ಆಗ ನಾನು ಅವನಿಂದ ತಪ್ಪಿಸಿಕೋಂಡು ಓಡಿ ಮನೆಗೆ ಹೋಗುತ್ತಿದ್ದೇ, ಎಲ್ಲಾ ವಿಚಾರ ನಾನು ನನ್ನ ಮರಿಯಾದಿಗೆ ಅಂಜಿ ಯಾರ ಮುಂದೆಯು  ಹೇಳಿರುವದಿಲ್ಲಾ.  ನಂತರ ದಿನಾಂಕ 07-07-2019 ರಂದು ರಾತ್ರಿ 8;00 ಗಂಟೆ ಸುಮಾರಿಗೆ ನಾನೊಬ್ಬಳೆ ಬೈಹಿರದೇಸೆಗೆ ಹೋಗುತ್ತಿದ್ದಾಗ  ಮಹಾಂತೇಶ ಇವನು ಯಾರು ಇರದ ಸಮಯ ನೋಡಿ ನನ್ನ ಹಿಂದೆ ಬಂದು ನನಗೆ ಏ ಸಿದ್ದಮ್ಮ ನಿಲ್ಲು ಅಂತಾ ಹೇಳಿ ಒಮ್ಮೇಲೆ ನನ್ನ ಬಾಯಿ ಒತ್ತಿ ಹಿಡಿದನು, ನಂತರ ಅಲ್ಲೆ ಮರಿಯಲ್ಲಿ ಎಳೆದುಕೋಂಡು ಹೋಗಿ ನನಗೆ ಚೀರಾಡಿದರೆ ಖಲಾಸೆ ಮಾಡುತ್ತೇನೆ ಅಂತಾ ಅಂದು ನನ್ನ ಬಾಯಿ ಒತ್ತಿ ಹಿಡಿದು ನನಗೆ ನೆಲದ ಮೇಲೆ ಕೆಡವಿ ಒತ್ತಾಯಪೂರ್ವಕವಾಗಿ ಲೈಂಗಿಕ ಸಂಭೋಗ ಮಾಡಿದನು, ನಂತರ ಮಹಾಂತೇಶ ಇವನು ಈ ವಿಷಯ ಯಾರಿಗಾದರು ಹೇಳಿದರೆ ನಿನಗ ಜೀವ ಸಹಿತ ಬಿಡುವುದಿಲ್ಲಾ ರಂಡಿ ಅಂತಾ ಅಂದು ಅಲ್ಲಿಂದ ಹೋದನು, ನಂತರ ನಾನು ನನ್ನ ಮರಿಯಾದಿಗೆ ಅಂಜಿ ಸುಮ್ಮನಿದ್ದೆ. ನಿನ್ನೆ ದಿನಾಂಕ 28-07-2019 ರಂದು ಮಹಾಂತೇಶ ಇವನು ನನ್ನ ಗಂಡನ ಮೋಬೈಲಿಗೆ ಫೋನ ಮಾಡಿ ಅವಾಚ್ಯವಾಗಿ ಬೈದು ನಾನು ನಿನ್ನ ಹೆಂಡತಿಗೆ ಕೆಡಸಿನಿ ರಂಡಿ ಮಗನೆ ಏನ ಕಿತಗೋತಿ ಕಿತಗೊ ಅಂತಾ ಅವಾಚ್ಯವಾಗಿ ಬೈದಿರುತ್ತಾನೆ, ನಂತರ ಇಂದು ನಾನು ನಮ್ಮ ತಾಯಿ ಮತ್ತು ನಮ್ಮ ಚಿಕ್ಕಪ್ಪ ಮಹಾಂತೇಶ ಇವನು ನನಗೆ ಲೈಂಗಿಕ ಸಂಭೋಗ ಮಾಡಿದ ಬಗ್ಗೆ ತಿಳಿಸಿ ನಮ್ಮ ತಾಯಿ ಮತ್ತು ನಮ್ಮ ಚಿಕ್ಕಪ್ಪನೊಂದಿಗೆ ಠಾಣೆಗೆ ಬಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯ ಗುನ್ನೆ ನಂ: 82/2019 ಕಲಂ 376 341,504,506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

25 July 2019

KALABURAGI DISTRICT REPORTED CRIMES

ಅಪಹರಣ ಮಾಡಿಕೊಂಡು ಹೋಗಿ ಅತ್ಯಾಚಾರವೆಸಗಿದ ಪ್ರಕರಣ :
ನರೋಣಾ ಠಾಣೆ : ದಿನಾಂಕ:17/07/2019 ರಂದು ಮಧ್ಯಾಹ್ನ 1-00 ಗಂಟೆಗೆ ಶಾಲೆಯಿಂದ ಮನೆಗೆ ಬಂದು ಮನೆಯಲ್ಲಿ ಊಟಮಾಡಿಕೊಂಡು ವಾಪಸ್ಸು 2-00 ಪಿ.ಎಂ ಗಂಟೆಗೆ ಶಾಲೆಗೆ ಹೋಗುವುದಾಗಿ ಹೇಳಿ ಹೋಗಿರುತ್ತಾಳೆ. ಸಾಯಂಕಾಲ 5-00 ಗಂಟೆಗೆ ಶಾಲೆಯಿಂದ ವಾಪಸ್ಸು ಮನೆಗೆ ಬರಬೇಕಾಗಿದ್ದು, ಸದರಿಯವಳು ಮನೆಗೆ ಬಂದಿರುವುದಿಲ್ಲ. ಮನೆಗೆ ಬರದೆ ಇದ್ದುದ್ದರಿಂದ ನಾನು ಮತ್ತು ನನ್ನ ಹೆಂಡತಿ ನನ್ನ ಮಗ ಎಲ್ಲರೂ ಸೇರಿ ನಮ್ಮೂರು ಪ್ರೌಢ ಶಾಲೆಯ ಹತ್ತಿರ ಹೋಗಿ ಶಾಲಾ ಮುಖ್ಯಾಉಪಾಧ್ಯಯರಿಗೆ ಹಾಗೂ ಶಿಕ್ಷಕರಿಗೆ ವಿಚಾರಿಸಿದಾಗ ಮಧ್ಯಾಹ್ನದ ಶಾಲೆಗೆ ಬಂದಿರುವುದಿಲ್ಲ ಅಂತಾ ತಿಳಿಸಿರುತ್ತಾರೆ. ನಾವೆಲ್ಲರೂ ಗಾಭರಿಯಾಗಿ ಊರ ತುಂಬ ಹುಡುಕಾಡುವಾಗ ನಮ್ಮ ಅಣತಮಕಿಯವರಾದ ತಾನು ಚಿಂಚನಸೂರ ದಿಂದ ಊರಿಗೆ ಬರುವಾಗ ಮಧ್ಯಾಹ್ನ 2-30 ಗಂಟೆ ಸುಮರಿಗೆ ಸಂಗೋಳಗಿ(ಸಿ) ಕ್ರಾಸ್ ಹತ್ತಿರ ಇದ್ದಾಗ ನಮ್ಮೂರಿನ ಸಚಿನ ತಂದೆ ಮರೇಪ್ಪಾ ಮದನಕರ ಇತನು ತನ್ನ ಮೊಟಾರ್ ಸೈಕಲ್ ಮೇಲೆ ನಿಮ್ಮ ಮಗಳಿಗೆ ಕೂಡಿಸಿಕೊಂಡು ನರೋಣಾ ಗ್ರಾಮದ ಕಡೆಗೆ ಹೋಗಿರುತ್ತಾನೆ ಅಂತಾ ತಿಳಿಸಿದ್ದು ನಾವು ಸಚಿನನ ಮನೆಗೆ ಹೋಗಿ ಸಚಿನನ ಆಯಿಯಾದ ಮಲ್ಲಮ್ಮ ಗಂಡ ಹುಸನಪ್ಪಾ ಮದನಕರ, ಸಚಿನನ ತಾಯಿಯಾದ ಗಂಗಮ್ಮ ಗಂಡ ಮರೇಪ್ಪಾ ಮದನಕರ, ಸಚಿನನ ಸೋದರಮಾವನ ಹೆಂಡತಿಯಾದ ಸುಜಾತಾ ಗಂಡ ಸಂಜುಕುಮಾರ ಮದನಕರ ಇವರಿಗೆ ವಿಚಾರಿಸಿದಾಗ ಅವರೆಲ್ಲರೂ ಸೇರಿ ಇದರ ಬಗ್ಗೆ ನಮಗೆ ಏನು ಗೊತ್ತಿಲ್ಲಾ ಅಂತಾ ತಿಳಿಸಿರುತ್ತಾರೆ. ಅವರೂ ಕೂಡ ಆತನ ಮೊಬೈಲಗೆ ಕರೆಮಾಡಿ ವಿಚಾರಿಸಲು ಪ್ರಯತ್ನಿಸಿದ್ದು ಆತನು ತನ್ನ ಮೊಬೈಲ್ ಬಂದ ಇಟ್ಟಿರುತ್ತಾನೆ. ನಾವು ಕೂಡ ಆತನ ಮೊಬೈಲ್ ನಂಬರ್ ಪಡೆದುಕೊಂಡು ಆತನಿಗೆ ಸಂಪರ್ಕಿಸಲು ಪ್ರಯತ್ನಿಸಿದ್ದು. ಸದರಿಯವನು ಫೋನ್ ಬಂದ ಮಾಡಿ ಇಟ್ಟಿರುತ್ತಾನೆ.  ಸಚಿನನ ಸ್ವಂತೂರು ಚಿಂಚನಸೂರ ಗ್ರಾಮ ಇದ್ದು, ಕಳೆದ ಒಂದು ತಿಂಗಳಿಂದ ಸಚಿನ ಹಾಗೂ ಆತನ ಕುಟುಂಬದವರು ನಮ್ಮೂರಿನಲ್ಲಿ ಬಂದು ವಾಸವಾಗಿರುತ್ತಾರೆ. ಸಚಿನನು ನನ್ನ ಅಪ್ರಾಪ್ತ ವಯಸ್ಸಿನ ಮಗಳಾದ ಕುಮಾರಿ  ಇವಳಿಗೆ ಯಾವುದೋ ದುರುದ್ದೇಶದಿಂದ ದಿನಾಂಕ:17/07/2019 ರಂದು ಮಧ್ಯಾಹ್ನ 2-30 ಗಂಟೆ ಸುಮಾರಿಗೆ ತನ್ನ ಮೊಟಾರ್ ಸೈಕಲ್ ನಂ ಕೆಎ32 ಇಬಿ 4474  ನೇದ್ದರ ಮೇಲೆ ಅಪಹರಣ ಮಾಡಿಕೊಂಡು ಹೋದ ಬಗ್ಗೆ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ನಂತರ ಸದರಿ ಪ್ರಕರಣದ ತನಿಕೆ ಮುಂದುವರೆಯಿಸಿ ಅಪಹರಣವಾದ ಕುಮಾರಿ ಇವರು ದಿನಾಂಕ ;24/07/2019 ರಂದು ಠಾಣೆಗೆ ಹಾಜರಾಗಿದ್ದು ಸದರಿಯವಳಿಗೆ ವಿಚಾರಿಸಲಾಗಿ ತನಗೆ ಒತ್ತಾಯ ಪೂರ್ವಕವಾಗಿ ಅಪಹರಣ ಮಾಡಿಕೊಂಡು ಹೋಗಿ ಜಭರಿ ಸಂಭೋಗ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಚಿಂಚೋಳಿ ಠಾಣೆ : ಶ್ರೀ ಧರ್ಮರಾಜ ತಂದೆ ಭೀಮಶೆಟ್ಟಿ ಗೌನಳ್ಳಿ ಸಾ|| ಐನೋಳ್ಳಿ ಗ್ರಾಮ ತಾ|| ಚಿಂಚೋಳಿ ರವರು ಹೆಣ್ಣು ಮಗಳ ಮದುವೆಗೆಂದು 1,50,000 /- ರೂ. ಗಳನ್ನೂ ನನ್ನ ಮನೆಯಲ್ಲಿರುವ ಅಲ್ಮಾರಿಯಲ್ಲಿ ಜೋಪಾನವಾಗಿಇಟ್ಟಿದ್ದೆನು. ನನಗೆ, ಆರಾಮ ವಿರದ ಕಾರಣ ದಿನಾಂಕ 27.06.2019 ರಂದುನಾನು, ಬೆಂಗಳೂರಿಗೆ ಹೋಗಿದ್ದೆನು. ನಾನು, ಊರಲ್ಲಿ ಇರದ ಸಮಯನೋಡಿಕೊಂಡು ದಿನಾಂಕ 16.07.2019 ರಂದು ರಾತ್ರಿ 00.20 .ಎಂ.ಕ್ಕೆ ನನ್ನ ಮಗನಾದ ಉದಯಕುಮಾರವ ಈತನು ಬೀದರನಿಂದ ಐನೋಳ್ಳಿ ಗ್ರಾಮದಲ್ಲಿರುವ ನಮ್ಮ ಮನೆಗೆ ಬಂದು,ಮೇಲ್ ಅಂತಸ್ತಿನ ಕೋಣೆಯ ಬಾಗಿಲಿಗೆ ಹಾಕಿದ ಕೀಲಿಯನ್ನೂ ಮುರಿದು, ಒಳಗೆಹೋಗಿ, ಅಲ್ಮಾರಿಯನ್ನು ಮುರಿದು, ನನ್ನಮಗಳಮದುವೆಗೆಂದುಜೋಪಾನವಾಗಿಟ್ಟಿರುವ ಒಟ್ಟು 1,50,000 ರೂ. ಗಳನ್ನು ಕಳವುಮಾಡಿಕೊಂಡು ಹೋಗಿರುತ್ತಾನೆ. ಅವನು ಕಳುವುಮಾಡಿಕೊಂಡು ಹೋಗುವುದನ್ನು ನನ್ನ ಹೆಂಡತಿಯಾದ ಶ್ರೀಮತಿ ಪಾರ್ವತಿ ಇವರು ನೋಡಿರುತ್ತಾರೆ .ಅದೇ ರಾತ್ರಿ ಫೋನ ಮಾಡಿ ನನ್ನ ಹೆಂಡತಿಯು ವಿಷಯವನ್ನು ತಿಳಿಸಿದಳು. ಮರುದಿವಸ ದಿನಾಂಕ 18.07.2019 ರ ಬೆಳಿಗ್ಗೆ ಬೆಂಗಳೂರಿನಿಂದ ಐನೊಳ್ಳಿ ಗ್ರಾಮದಲ್ಲಿರುವ ನಮ್ಮ ಮನೆಗೆ ಬಂದು ನೋಡಲು, ನನ್ನಮಗನು, ನನ್ನ ಮನೆಯ ಬಾಗಿಲುಕೀಲಿಯನ್ನು ಮುರಿದು, ಒಳಗೆ ಹೋಗಿ ಅಲ್ಮಾರಿ ಮುರಿದು, ಅದರಲ್ಲಿದ್ದ ಒಟ್ಟು 1,50,000 /- ರೂ. ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯ ಗುನ್ನೆ ನಂಬರ 84/2019 ಕಲಂ 457, 380 .ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ,