POLICE BHAVAN KALABURAGI

POLICE BHAVAN KALABURAGI

13 June 2019

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಮುಧೋಳ ಠಾಣೆ : ಶ್ರೀಮತಿ ಲಕ್ಷ್ಮೀ ಗಂಡ ಶಂಕ್ರೆಪ್ಪ ಯಂಗಿನಮನೆ  ಸಾ|| ಮೇದಕ ತಾ|| ಸೇಡಂ ರವರ ಮಾವ ಮಲ್ಕಪ್ಪ ಮತ್ತು ಆತನ ಅಣ್ಣತಮ್ಮಂದಿರ ಮದ್ಯ ಹೊಲ ಹಂಚಿಕೆ ಮಾಡಿಕೊಳ್ಳುವ ವಿಷಯದಲ್ಲಿ ತಕರಾರಿದ್ದು ದಿನಾಂಕ 12-06-2019 ರಂದು 09-30 ಎ.ಎಂಕ್ಕೆ ನಮ್ಮ ಮಾವ ಮಲ್ಕಪ್ಪ, ಗಂಡ ಶಂಕ್ರೆಪ್ಪ ಮತ್ತು ಭಾವ ಚನ್ನಪ್ಪ ಮೇದಕ ಗ್ರಾಮದ ತಮ್ಮ ಹೊದಲ್ಲಿರುವಾಗ ಹಣಮಂತ ತಂದೆ ಆಶಪ್ಪ ಸಂಗಡ 07 ಜನರು ಸಾ|| ಎಲ್ಲರೂ ಮೇದಕ ತಾ|| ಸೇಡಂ ರವರು ಕುಡಿಕೊಂಡು  ಕೂಡಿ ಕೊಲೆ ಮಾಡುವ ಉದ್ದೇಶದಿಂದ ಕೊಡಲಿ, ಬಿಡಿಗೆ ಹಿಡಿದುಕೊಂಡು ಬಂದು ಮಲ್ಕಪ್ಪ, ಶಂಕ್ರೆಪ್ಪ ಮತ್ತು ಚನ್ನಪ್ಪ ಇವರೊಂದಿಗೆ ಜಗಳ ತೆಗೆದು ಕೊಡಲಿ ಬಡಿಗೆಯಿಂದ ಮೂವರಿಗೂ ಹೊಡೆದು ಕೊಲೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆ  ಗುನ್ನೆ ನಂ.77/2019 ಕಲಂ.143,147,148,302 ಸಂ.149 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 12-06-2019 ರಂದು ಬನ್ನೆಟ್ಟಿ ಗ್ರಾಮದ ಭೀಮಾ ನದಿಯಲ್ಲಿ ಟಿಪ್ಪರದಲ್ಲಿ ಕಳ್ಳತನದಿಂದ ಮರಳು ತುಂಬಿಕೊಂಡು ಅಫಜಲಪೂರ ಪಟ್ಟಣ ಕಡೆ ಬರುತ್ತಿದೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬನ್ನೆಟ್ಟಿ ಗ್ರಾಮಕ್ಕೆ ಹೋಗುತ್ತಿರುವಾಗ ಮಾರ್ಗ ಮದ್ಯದಲ್ಲಿ ಅಫಜಲಪೂರ ಘತ್ತರಗಾ ಗ್ರಾಮಕ್ಕೆ ಹೋಗುವ ರೋಡಿಗಿರುವ ಬನ್ನೆಟ್ಟಿ ಕ್ರಾಸ್ ಹತ್ತಿರ 6-20 ,ಎಮ್.ಕ್ಕೆ ಹೋಗುತ್ತಿದ್ದಂತೆ, ಒಂದು ಮರಳು ತುಂಬಿದ ಟಿಪ್ಪರ ನಮ್ಮ ಎದುರುಗಡೆ ಬರುತ್ತಿದ್ದು ಟಿಪ್ಪರನ್ನು ನಿಲ್ಲಿಸಲು ಸೂಚನೆ ಕೊಟ್ಟಾಗ ಅದರ ಚಾಲಕನು ನಮ್ಮನ್ನು ನೋಡಿ ಟಿಪ್ಪರ ನಿಲ್ಲಿಸಿ ಓಡಿ ಹೋದನು  ಆಗ ನಾವು ಪಂಚರ ಸಮಕ್ಷಮ ಸದರಿ ಟಿಪ್ಪರನ್ನು ಚೆಕ್ಕ ಮಾಡಲು 1) ಭಾರತ ಬೆಂಜ್ ಕಂಪನಿಯ ಟಿಪ್ಪರ ಇದ್ದು ಅದರಲ್ಲಿ ಮರಳು ತುಂಬಿದ್ದು ಇತ್ತು ಮತ್ತು ಅದರ ನೊಂದಣಿ ಸಂಖ್ಯೆ ನೋಡಲು ಕೆಎ-32 ಡಿ-1624 ಇದ್ದು  ಸದರಿ ಟಿಪ್ಪರ ಅ.ಕಿ 10,00,000/-ರೂ  ಇರಬಹುದು ಮತ್ತು ಸದರಿ ಟಿಪ್ಪರದಲ್ಲಿದ್ದ ಮರಳಿನ ಅ.ಕಿ 10.000/- ರೂ ಇರಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟಿಪ್ಪರನ್ನು ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಠಾಣೆ ಗುನ್ನೆ ನಂ 85/2019 ಕಲಂ 379 ಐಪಿಸಿ ಮತ್ತು ಕಲಂ 21(1) ಎಮ್ ಎಮ್ ಡಿ ಆರ್ ಆಕ್ಟ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ 01 : ದಿನಾಂಕ 12.06.2019 ರಂದು ಸಾಯಂಕಾಲ 5-30 ಗಂಟೆ ಸುಮಾರಿಗೆ ಮೃತ ಗಿರೀಶ ಇತನು ತಾನೂ ಕೆಲಸ ಮಾಡುವ ಚೌಡಾಪೂರ ಗ್ರಾಮದ ಪೆಟ್ರೊಲ ಪಂಪದಿಂದ ಕಲಬುರಗಿ ಕಡೆಗೆ ಬರುವ ಕುರಿತು ತನ್ನ ಮೋಟಾರ ಸೈಕಲ ನಂ ಕೆಎ-32/ಇಯು-4149 ನೇದ್ದನ್ನು ಅತಿವೇಗವಾಗಿ ಮತ್ತು ನಿಷ್ಕಾಳಿಜಿತನದಿಂದ ರೋಡ ಎಡ ಬಲ ಕಟ್ ಹೊಡೆಯುತ್ತಾ ಚಲಾಯಿಸಿಕೊಂಡು ಹೋಗಿ ಹಡಗಿಲ ಹಾರುತಿ ಗ್ರಾಮದ ಕ್ರಾಸ ಹತ್ತೀರ ರೋಡ ಮೇಲೆ ರೋಡ ಪಕ್ಕದಲ್ಲಿರುವ ರೋಡಿಗೆ ಸಂಬಂದಿಸಿದ ಒಂದು ಕಲ್ಲಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ತನ್ನಿಂದ ತಾನೆ ಮೋಟಾರ ಸೈಕಲ ಮೇಲಿಂದ ಕೆಳಗಡೆ ಬಿದ್ದು ಭಾರಿಗಾಯ ಹೊಂದಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಜಗದೇವಿ ಗಂಡ ಗಿರೀಶ ರೆಡ್ಡಿ  ಸಾ: ಫಾರೆಸ್ಟ  ಐಬಿ ಹತ್ತೀರ ಲಂಗಾರ ಹನುಮಾನ ನಗರ ನಿಜಾಮಪೂರ ರಿಂಗ ರೋಡ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರ ಠಾಣೆ ಗುನ್ನೆ ನಂ 72/2019  ಕಲಂ 279, 304 (ಎ) ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಲಾಗಿದೆ. 
ಸಂಚಾರಿ ಠಾಣೆ 02 : ದಿನಾಂಕ 12.06.2019 ರಂದು ಸಾಯಂಕಾಲ ಶ್ರೀ ಲಕ್ಷ್ಮಣ ತಂದೆ ಮರೆಪ್ಪಾ ಸೇಡಂಕರ ಸಾ : ಕುರಕುಂಟಾ ತಾ : ಸೇಡಂ ರವರ ಮಗ ಶ್ಯಾಮಕುಮಾರ ಇತನು ಮೋಟಾರ ಸೈಕಲ್ ನಂ KA32 W 4359 ನೇದ್ದನ್ನು ಸೇಡಂ ರೋಡದಿಂದ ಕಲಬುರಗಿ ರೋಡನಲ್ಲಿ ಬರುವ ಮದಿಹಾಳ ತಾಂಡಾ ಕ್ರಾಸ್ ಹತ್ತಿರ ರೋಡ ಮೇಲೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಎದುರುಗಡೆಯಿಂದ ಒಂದು ಬಸ್ ನಂ KA32 F 2069ನೇದ್ದರ ಚಾಲಕ ನಾಗಪ್ಪ ಈತನು ತನ್ನ ಬಸ್ಸನ್ನು ಅತೀ ವೇಗ & ಅಲಕ್ಷತನದಿಂದ ಚಲಾಯಿಸಕೊಂಡು ಬಂದು ಶ್ಯಾಮಕುಮಾರ ಇತನು ಚಲಾಯಿಸುತ್ತಿದ್ದ ಮೋಟಾರ ಸೈಕಲಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಶ್ಯಾಮಕುಮಾರ ಈತನ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 02 ರ ಗುನ್ನೆ ನಂ 95/2019 ಕಲಂ 279, 304(ಎ) ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ದಿನಾಂಕ 12-06-2019 ರಂದು  08-00 ಎ.ಎಂಕ್ಕೆ ಶ್ರೀಮತಿ ರಾಮಲಮ್ಮ ಗಂಡ ಸಾಯಪ್ಪ ಬಿಚಲ್ ಸಾ|| ದಮಗಾನಪೂರ (ತೆಲಂಗಾಣ) ಮತ್ತು  ಗಂಡ ಸಾಯಪ್ಪ, ಮಕ್ಕಳಾದ ಸಂಧ್ಯಾ, ಲಾವಣ್ಯ, ಸ್ವಾತಿ ಕೂಡಿ ಕಾರ ನಂ.ಎಂಹೆಚ್-04 ಹೆಚ್ಎಕ್ಸ್-4594 ನೇದ್ದರಲ್ಲಿ ಕಲಬುರಗಿ-ಆಳಂದ ರೋಡಿನ ಕಡಗಂಚಿ ಕೇಂದ್ರಿಯ ವಿಶ್ವವಿದ್ಯಾಲಯದ ಹತ್ತಿರ  ಹೋಗುತ್ತಿರುವಾಗ ಸಾಯಪ್ಪ ಇತನು ಕಾರನ್ನು ಅತಿವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿ ಪಲ್ಟಿ ಮಾಡಿದ್ದರಿಂದ ಸಾಯಪ್ಪ ಮತ್ತು ಸಂಧ್ಯಾ ಇಬ್ಬರಿಗೂ ಭಾರಿಗಾಯವಾಗಿ ಮೃತಪಟ್ಟಿದ್ದು  ನನಗು  ಮತ್ತು ಲಾವಣ್ಯ, ಸ್ವಾತಿಗೆ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆ ಗುನ್ನೆ ನಂ . 85/2019 ಕಲಂ.279,337,338,304(ಎ) ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ನಿಂಬರ್ಗಾ ಠಾಣೆ : ದಿನಾಂಕ 12-06-2019 ರಂದು 04-00 ಪಿ.ಎಂಕ್ಕೆ ಶ್ರೀಮತಿ ಪ್ರಭಾವತಿ ಗಂಡ ಸಂಗಣ್ಣ ತಳವಾಡ ಸಾ|| ಭಟ್ಟರ್ಗಾ ತಾ|| ಆಳಂದ ರವರ  ಅಕ್ಕ ಕಸ್ತೂರಬಾಯಿ ಇವಳು ಹಿತ್ತಲಶಿರೂರ ಗ್ರಾಮದ ಕನಕದಾಸ ಚೌಕ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ ಮೋಟಾರ ಸೈಕಲ್ ನಂ.ಕೆಎ-32 ಜಿಎ-9537 ನೇದ್ದರ ಸವಾರ ಸಿದ್ದಾರಾಮ ತಂದೆ ಶಿವಪುತ್ರ ಮೇತ್ರಿ ಸಾ|| ಯಳಸಂಗಿ ಅತಿವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿ ಡಿಕಿಪಡಿಸಿದ್ದರಿಂದ ಕಸ್ತೂರಬಾಯಿಗೆ ಭಾರಿಗಾಯವಾಗಿ ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆ ಗುನ್ನೆ ನಂ.51/2019 ಕಲಂ.279,337,338,304(ಎ) ಐಪಿಸಿ ಸಂ.187 ಐ.ಎಂ.ವಿ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಲಾಗಿದೆ

12 June 2019

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಸಂಚಾರಿ  ಠಾಣೆ 01 : ದಿನಾಂಕ 11.06.2019 ರಂದು ರಾತ್ರಿ ಮೃತ ಜಾವೀದ ಇತನು ಕಲಬುರಗಿಯಲ್ಲಿರುವ ತನ್ನ ಹೆಂಡತಿ ಮನೆಗೆ ಹೋಗುವ ಕುರಿತು ಜೇವರಗಿಯಿಂದ ಮೋಟಾರ ಸೈಕಲ ನಂಬರ ಕೆಎ-32/ಇಹೆಚ್-6770 ನೇದ್ದನ್ನು ಚಲಾಯಿಸಿಕೊಂಡು ಕಲಬುರಗಿಗೆ ಹೋಗುವ ಕುರಿತು ರೋಡ ಎಡಗಡೆಯಿಂದ ತನ್ನ ಮೋಟಾರ ಸೈಕಲ ಚಲಾಯಿಸಿಕೊಂಡು ಹೋಗುವಾಗ ಜೈಲ ಸಮೀಪ ಬರುವ ಇಂದುಮತಿ ಲೇಔಟ ಎದರು ರೋಡ ಮೇಲೆ ಎದುರನಿಂದ ಮೋಟಾರ ಸೈಕಲ ನಂ ಕೆಎ-32/ಇಯು-3831 ನೇದ್ದರ ಸವಾರನು ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಜಾವೀದ ಇತನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ಜಾವೀದ ಇತನು ಭಾರಿಗಾಯ ಹೊಂದಿ ಸ್ಥಳದಲ್ಲಯೇ ಮೃತಪಟ್ಟಿದ್ದು ಅಪಘಾತ ಮಾಡಿದ ಮೋಟಾರ ಸೈಕಲ ಸವಾರನಿಗೂ ಸಣ್ಣ ಪುಟ್ಟಗಾಯಗಳಾಗಿದ್ದು ಆತನು ತನ್ನ ಮೋಟಾರ ಸೈಕಲ ಅಲ್ಲಿ ಬಿಟ್ಟು ಹೋಗಿರುತ್ತಾನೆ ಅಂತಾ ಶ್ರೀ ಮಹ್ಮದ ವಾಜೀದ ತಂದೆ ಲಾಲ ಅಹ್ಮದ ಖುರೇಷಿ ಸಾ: ಖಾಜಾ ಕಾಲೋನಿ ಜೇವರಗಿ ಜಿ: ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರ ಗುನ್ನೆ ನಂ 71/2019 ಕಲಂ 279, 304 (ಎ) ಐ.ಪಿ.ಸಿ ಸಂ 187 ಐಎಮವಿ ಆಕ್ಟ ಪ್ರಕರಣ ಪ್ರಕರಣ ದಾಖಲಿಸಲಾಗಿದೆ.
ಸಂಚಾರಿ ಠಾಣೆ 01 : ದಿನಾಂಕ 11.06.2019 ರಂದು ರಾತ್ರಿ ಮೃತ ವಿಜಯಕುಮಾರ ಇತನು ತಾನೂ ಚಲಾಯಿಸುತ್ತಿರುವ ಮೋಟಾರ ಸೈಕಲ ನಂ ಕೆಎ-32/ಇಯು-5652 ನೇದ್ದರ ಹಿಂದುಗಡೆ ಸಂಜೀವ ಇವರನ್ನು ಕೂಡಿಸಿಕೊಂಡು ಹೊನ್ನಕಿರಣಗಿ ಗ್ರಾಮದಿಂದ ತೋನಸಳ್ಳಿ (ಎಸ್) ಗ್ರಾಮ ಶಹಾಬಾದ ಕ್ರಾಸ ಮುಖಾಂತರವಾಗಿ ಜೇವರಗಿ  ಕಡೆಗೆ ಹೋಗುವ ಕುರಿತು ತನ್ನ ಮೋಟಾರ ಸೈಕಲ ಅತೀವಾಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಹೊನ್ನಕಿರಣಗಿ ಗ್ರಾಮದ ಸಿಮಾಂತರ ಹತ್ತೀರ ರೋಡ ಮೇಲೆ ತನ್ನ ಮುಂದುಗಡೆ ಹೋಗುತ್ತಿರುವ ಯಾವದೋ ಒಂದು ಟ್ರ್ಯಾಕ್ಟರ ವಾಹನದ ಟ್ರ್ಯಾಲಿಗೆ ಹಿಂದಿನಿಂದ ಡಿಕ್ಕಿಪಡಿಸಿ ಅಪಘಾತ ಮಾಡಿ ಭಾರಿಗಾಯಹೊಂದಿ ಸ್ಥಳದಲ್ಲಿಯೇ ಮೃತಪಟಟ್ಟಿರುತ್ತಾನೆ ಅಂತಾ ಶ್ರೀ ಸಂಜೀವ ತಂದೆ ಶರಣಪ್ಪಾ ಅಡವಿ ಸಾ: ನೆಲೋಗಿ ಗ್ರಾಮ ತಾ: ಜೇವರಗಿ ಜಿ: ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರ ಗುನ್ನೆ ನಂ 70/2019 ಕಲಂ 279, 304 (ಎ) ಐ.ಪಿ.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.

11 June 2019

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಕುಂಚಾವಂ ಠಾಣೆ : ದಿನಾಂಕ 09-06-2019 ರಂದು 10-00 ಎ.ಎಂಕ್ಕೆ ಶ್ರೀ ಮಹೇಶ ತಂದೆ ಶರಣಪ್ಪ ಬೋಯಾ ಸಾ : ಇಂದಿರಾ ನಗರ ತಾಂಡೂರ ರವರ  ಅಣ್ಣ ಹಣಮಂತ ತಂದೆ ಶರಣಪ್ಪ ಇತನು ಮೋಟಾರ ಸೈಕಲ್ ನಂ. ಎಪಿ-09 ಎಜಿ-3899 ನೇದ್ದನ್ನು ಕುಂಚಾವರಂ-ಚಿಂಚೋಳಿ ರೋಡಿನ ಪೆದ್ದಮ್ಮ ಗುಡಿಯ ಹತ್ತಿರ ಅತಿವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿ ಸ್ಕ್ರೀಡ್ ಆಗಿ ಬಿದ್ದಿದ್ದರಿಂದ ಹಣಮಂತುಗೆ ಭಾರಿಗಾಯವಾಗಿ ಮೃತಪಟ್ಟಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕೊಂಚಾವರಂ ಠಾಣೆ ಗುನ್ನೆ ನಂ 28/2019 ಕಲಂ 279, 304(ಎ) ಐಪಿಸಿನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ನರೋಣಾ ಠಾಣೆ : ದಿನಾಂಕ 09-06-2019 ರಂದು 09-00 ಎ.ಎಂಕ್ಕೆ ಶ್ರೀ ಭೀಮಾಶಂಕರ ತಂದೆ ಶಿವಶರಣಪ್ಪ ಕಲಶೆಟ್ಟಿ ಸಾ : ಹೆಬಳಿ ತಾ : ಆಳಂದರವರ  ತಮ್ಮ ಮಲ್ಲಿಕಾರ್ಜುನ  ಇತನು ಮೋಟಾರ ಸೈಕಲ್ ನಂ. ಕೆಎ-32 ಇಎಫ್-9604 ನೇದ್ದರ ಮೇಲೆ ಆಳಂದ-ಕಲಬುರಗಿ ರೋಡಿನ ಲಾಡಚಿಂಚೋಳಿ ಕ್ರಾಸ್ ಹತ್ತಿರ ಹೋಗುತ್ತಿರುವಾಗ ಕ್ರೂಜರ್ ಜೀಪ ನಂ.ಕೆಎ-14 ಎ-3276 ನೇದ್ದರ ಚಾಲಕ ಅತಿವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿ ಮೋಟಾರ ಸೈಕಲಗೆ ಡಿಕ್ಕಿಪಡಿಸಿದ್ದರಿಂದ ಮಲ್ಲಿಕಾರ್ಜುನನಿಗೆ ಭಾರಿಗಾಯವಾಗಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ನರೋಣಾ ಠಾಣೆ ಗುನ್ನೆ ನಂ 83/2019 ಕಲಂ 279, 304(ಎ) ಈಪಿಸಿ 187 ಐ.ಎಂ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.  
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ಶ್ರೀ ಸಿದ್ದಪ್ಪ ವಿ. ಹೊದಲೂರ ಕಂದಾಯ ನಿರೀಕ್ಷಕರು ಕರಜಗಿ ರವರು ದಿನಾಂಕ 10/06/2019 ರಂದು ರಾತ್ರಿ ಮಾನ್ಯ ತಹಸಿಲ್ದಾರರು ಅಫಜಲಪೂರ ರವರೊಂದಿಗೆ ನಾನು ಮತ್ತು ಬಿರಪ್ಪ  ಗ್ರಾಮ ಲೇಕ್ಕಾಧಿಕಾರಿ ಹಾಗೂ ಪ್ರಭಾರಿ ಕಂದಾಯ ನಿರೀಕ್ಷಕರು ಅಫಜಲಪೂರ ಇಬ್ಬರೂ ಗಸ್ತು ತಿರುಗುತ್ತಾ ಸೊನ್ನ ಗ್ರಾಮದಿಂದ ಅಫಜಲಪೂರ ಪಟ್ಟಣಕ್ಕೆ ಬರುವ ಮುಖ್ಯ ರಸ್ತೆ ಮೇಲೆ ಕರಜಗಿ ಕ್ರಾಸ್ ಹತ್ತೀರ ಇದ್ದಾಗ ಒಂದು ಅಕ್ರಮವಾಗಿ ಮರಳು ತುಂಬಿದ್ದ ಟ್ಯಾಕ್ಟರ ಸಿಕ್ಕಿದ್ದು ಅದನ್ನು ನಿಲ್ಲಿಸಲು ಅದರ ಚಾಲಕನಿಗೆ ಸೂಚನೆ ಕೊಟ್ಟಾಗ ಸದರಿ ಚಾಲಕನು ಟ್ರ್ಯಾಕ್ಟರ ನಿಲ್ಲಿಸಿ ನಮ್ಮನ್ನು ನೋಡಿ ಓಡಿ ಹೋಗಿದ್ದು ನಂತರ ನಾವು ಟ್ರ್ಯಾಕ್ಟರ ನಂಬರ ನೋಡಲು ಅದರ ನೊಂದಣಿ ಸಂಖ್ಯೆ ಕೆಎ-28 ಟಿಸಿ-0982 ಇರುತ್ತದೆ ಸದರಿ ಜಪ್ತಿ ಮಾಡಲಾಗಿ ಟ್ರ್ಯಾಕ್ಟರ ಅಂದಾಜು ಕಿಮ್ಮತ್ತು 500000/- ರೂ ಮತ್ತು ಟ್ರ್ಯಾಕ್ಟರದಲ್ಲಿದ್ದ ಮರಳಿನ ಕಿಮ್ಮತ್ತು ಅಂದಾಜು 3000/- ರೂ ಇರುತ್ತದೆ. ಸದರಿ ಟ್ಯಾಕ್ಟರ ಚಾಲಕ ಟ್ಯಾಕ್ಟರನ್ನು ಸ್ಥಳದಲ್ಲಿಯೆ ಬಿಟ್ಟು ಪರಾರಿಯಾಗಿದ್ದರಿಂದ ಟ್ರ್ಯಾಕ್ಟರನ್ನು ಠಾಣೆಗೆ ತಂದು ನಿಲ್ಲಿಸಿದ್ದು ಕಾರಣ ಸದರಿ ಟ್ರ್ಯಾಕ್ಟರ ಚಾಲಕ ಮತ್ತು ಮಾಲಿಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆ ಗುನ್ನೆ ನಂ 84/2019 ಕಲಂ 379 ಐಪಿಸಿ & 21(1) ಎಮ್ ಎಮ್ ಡಿ ಆರ್ ಆಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ .
ವರದಕ್ಷಣೆ ಕಿರುಕಳ ನೀಡಿ ಕೊಲೆ ಮಾಡಿದ ಪ್ರಕರಣ :
ಮಹಿಳಾ ಠಾಣೆ : ದಿನಾಂಕ 08-12-2015 ರಂದು ಶ್ರೀಮತಿ ಭವಾನಿಬಾಯಿ ಗಂಡ ನಾರಾಯಣಸಿಂಗ ಠಾಕೂರ ಸಾ : ಕೊಂಡೆದಗಲ್ಲಿ ಬ್ರಹ್ಮಪೂರ ಕಲಬುರಗಿ ರವರ  ಮಗಳು ರೀನಾ ಇವಳಿಗೆ ಬಹದ್ದೂರಸಿಂಗ ಇತನೊಂದಿಗೆ ಮದುವೆ ಮಾಡಿದ್ದು ಮದುವೆ ಕಾಲಕ್ಕೆ 50 ಗ್ರಾಂ ಬಂಗಾರ ನೀಡಿದ್ದು ನಂತರ ಕೆಲದಿನಗಳ ನಂತರ ಬಹದ್ದೂರಸಿಂಗ ಸಂಗಡ ಒಬ್ಬಳು ಸಾ : ಸೋಲಾಪೂರ ಹಾ : ವ : ಕೊಂಡೆದಗಲ್ಲಿ ಬ್ರಹ್ಮಪೂರ ಕಲಬುರಗಿ ರವರು  ಕೂಡಿ ನಿನ್ನ ತವರು ಮನೆಯಿಂದಒಂದು ಕಾರು ಹಾಗೂ ಮನೆ ಕಟ್ಟಲು ಹಣ ತೆಗೆದುಕೊಂಡು ಬಾ ಅಂತ ದೈಹಿಕ ಮಾನಸಿಕ ಕಿರುಕುಳ ನೀಡುತ್ತಿದ್ದು ದಿನಾಂಕ 03-06-2019 ರಂದು 11-30 ಪಿ.ಎಂದಿಂದ 04-06-201912-00 ಎ.ಎಂ ಅವಧಿಯಲ್ಲಿ ಆರೋಪಿ ಬಹದ್ದೂರಸಿಂಗ ಇತನು ಕಲಬುರಗಿಯ ಕೊಂಡೆದಗಲ್ಲಿಯಲ್ಲಿರುವ ಮನೆಯಲ್ಲಿ ರೀನಾಳಿಗೆ ದೈಹಿಕ ಮಾನಸಿಕ ಕಿರುಕುಳ ನೀಡಿ ಕಾಲಿನಿಂದ ಹೊಟ್ಟೆಗೆ ಒದ್ದಿದ್ದು ಉಪಚಾರ ಕುರಿತು ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಉಪಚಾರ ಫಲಕಾರಿಯಾಗದೆ ದಿನಾಂಕ 07-06-2019 ರಂದು 04-00 ಪಿ.ಎಂಕ್ಕೆ ರೀನಾ ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆ ಗುನ್ನೆ ನಂ 72/2019 ಕಲಂ 498(ಎ) 302, 304(ಬಿ) ಸಂಗಡ 34 ಐಪಿಸಿ ಮತ್ತು 3, 4 ಡಿ.ಪಿ. ಆಕ್ಟ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.