POLICE BHAVAN KALABURAGI

POLICE BHAVAN KALABURAGI

08 June 2019

KALABURAGI DISTRICT REPORTED CRIMES

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 07-06-2019 ರಂದು ಮಣ್ಣೂರ ಗ್ರಾಮದ ಭೀಮಾ ನದಿಯಲ್ಲಿ ಟಿಪ್ಪರದಲ್ಲಿ ಕಳ್ಳತನದಿಂದ ಮರಳು ತುಂಬತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ, ಸಿ.ಪಿ. ಅಫಜಲಪೂರ ವೃತ್ತ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಣ್ಣೂರ ಗ್ರಾಮದಿಂದ ಶೇ಼ಷಗಿರಿ ಗ್ರಾಮಕ್ಕೆ ಹೋಗುವ ಶೇ಼ಷಗಿರಿ ಕ್ರಾಸ್ ಹತ್ತಿರ ಹೋಗುತ್ತಿದ್ದಂತೆ, ಒಂದು ಮರಳು ತುಂಬಿದ ಟಿಪ್ಪರ ನಮ್ಮ ಎದುರುಗಡೆ ಬರುತ್ತಿದ್ದು ಟಿಪ್ಪರನ್ನು ನಿಲ್ಲಿಸಿ  ಆಗ ನಾವು ಪಂಚರ ಸಮಕ್ಷಮ ಸದರಿ ಟಿಪ್ಪರನ್ನು ಚೆಕ್ಕ ಮಾಡಲು 1) ಭಾರತ ಬೆಂಜ್ ಕಂಪನಿಯ ಟಿಪ್ಪರ ಇದ್ದು ಅದರಲ್ಲಿ ಮರಳು ತುಂಬಿದ್ದು ಇತ್ತು ಮತ್ತು ಅದರ ನಂ ಕೆಎ-32 ಡಿ-3193, ಸದರಿ ಟಿಪ್ಪರ .ಕಿ 10,00,000/-ರೂ  ಇರಬಹುದು. ಸದರಿ ಟಿಪ್ಪರದಲ್ಲಿದ್ದ ಮರಳಿನ .ಕಿ 10.000/- ರೂ ಇರಬಹುದು. ಸದರಿ ಟಿಪ್ಪರ ಚಾಲಕನಿಗೆ ಹಿಡಿದಿದ್ದು ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು  ರಾಜಶೇಖರ ತಂದೆ ಕಲ್ಲಪ್ಪ ಭಾಸಗಿ ಸಾ|| ಮಣ್ಣೂರ ತಾ|| ಅಫಜಲಪೂರ ಅಂತ ತಿಳಿಸಿದ್ದು, ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟಿಪ್ಪರನ್ನು ಪಂಚರ ಸಮಕ್ಷಮ 08:10 ಎಎಮ್ ದಿಂದ 09:10 ಎಮ್ ವರೆಗೆ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತಗೆದುಕೊಂಡು ಅಫಜಲಪೂರ ಠಾಣೆಗೆ ಬಂದು ಠಾಣೆ ಗುನ್ನೆ ನಂ 81/2019 ಕಲಂ 379 ಐಪಿಸಿ ಮತ್ತು ಕಲಂ 21(1) ಎಮ್ ಎಮ್ ಡಿ ಆರ್ ಆಕ್ಟ ಪ್ರಕಾರ ಪ್ರಕರಣ ದಾಖಲಿಸಲಾಗಿದೆ
ಮಟಜಾ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 07.06.2019 ರಂದು ಸಾಯಂಕಾಲ ರಾಘವೇಂದ್ರ ನಗರ  ಠಾಣಾ ವ್ಯಾಪ್ತಿಯ ಕೊಂಡೇದಗಲ್ಲಿಯಲ್ಲಿ ರಸ್ತೆಯ ಪಕ್ಕದಲ್ಲಿ ಇಬ್ಬರು ವ್ಯಕ್ತಿಗಳು ಕೂಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಕೊಂಡೇದ ಗಲ್ಲಿಯಲ್ಲಿ ಹೋಗಿ ಮರೆಯಲ್ಲಿ ನಿಂತುಕೊಂಡು ನೋಡಲಾಗಿ ಕೊಂಡೇದಗಲ್ಲಿಯ ರಸ್ತೆಯ ಪಕ್ಕದಲ್ಲಿ ಇಬ್ಬರು  ವ್ಯಕ್ತಿಗಳು ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಲು, ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವರನ್ನು ಹಿಡಿದುಕೊಂಡು ಅವರ ಹೆಸರು ವಿಳಾಸ ವಿಚಾರಿಸಲು ಸದರಿಯವರು ತಮ್ಮ ಹೆಸರು 1) ಪ್ರಭುಲಿಂಗ ತಂದೆ ಶಿವಪ್ಪ ಕಣ್ಣಿ ಸಾ|| ದೇವಿನಗರ ಕಲಬುರಗಿ ಸದರಿಯವನ ಹತ್ತಿರ 1) ನಗದು ಹಣ 700/-ರೂ 2) 1 ಮಟಕಾ ಬರೇದ ಚೀಟಿ ಅ:ಕಿ: 00 ಮತ್ತು 3) ಒಂದು ಬಾಲ ಪೇನ್ ಅ:ಕಿ: 00 ದೊರೆತಿದ್ದು ಇನ್ನೂಬ್ಬನಿಗೆ ವಿಚಾರಿಸಲಾಗಿ ತನ್ನ ಹೇಸರು 2) ಶರಣು ತಂದೆ ಮಾಳಪ್ಪ ಪೂಜಾರಿ ಸಾ|| ಬೀಮಳ್ಳಿ ತಾ|| ಜಿ|| ಕಲಬುರಗಿ ಅಂತ ತಿಳಿಸಿದ್ದು ನಂತರ ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ 1) ನಗದು ಹಣ 610/-ರೂ 2) 1 ಮಟಕಾ ಬರೇದ ಚೀಟಿ ಅ:ಕಿ: 00 ಮತ್ತು 3) ಒಂದು ಬಾಲ ಪೇನ್ ಅ:ಕಿ: 00 ದೊರೆತಿದ್ದು ಸದರಿಯವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಪಂಚರು ಸಹಿ ಮಾಡಿದ ಚೀಟಿಯನ್ನು ಅಂಟಿಸಿಕೊಂಡು ಮುಂದಿನ ಪುರಾವೇಗಾಗಿ ನನ್ನ ತಾಬಾಕ್ಕೆ ತೆಗೆದುಕೊಂಡು ಆರೋಪಿತರೋಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಠಾಣೆ  ಗುನ್ನೆ ನಂ.61/2019 ಕಲಂ:78(3) ಕೆ.ಪಿ ಆಕ್ಟ್‌ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಸಂಚಾರಿ ಠಾಣೆ 01 : ದಿನಾಂಕ 07.06.2019 ರಂದು ರಾತ್ರಿ ಮೃತ ಶರಣಪ್ಪ ಮತ್ತು ದತ್ತು ಇಬ್ಬರೂ ಶರಣಪ್ಪ ಇತನು ಚಲಾಯಿಸುತ್ತಿರುವ ಶ್ರೀಗುರು ಕಾಲೇಜಗೆ ಸಂಬಂದಿಸಿದ ಟ್ರ್ಯಾಕ್ಟರ ನಂ ಕೆಎ-32/ಬಿ-0634 ನೇದ್ದರಲ್ಲಿ ಶ್ರೀಗುರು ಕಾಲೇಜನಲ್ಲಿ ಕೆಲಸ ಮಾಡುವ ಖಣದಾಳ ಗ್ರಾಮದ ಜನರನ್ನು ಕೂಡಿಸಿಕೊಂಡು ಕಾಲೇಜನಿಂದ ಖಣದಾಳ ಗ್ರಾಮಕ್ಕೆ ಹೋಗಿ ಅವರನ್ನು ಬಿಟ್ಟು ವಾಪಸ್ಸ ಕಾಲೇಜ ಕಡೆಗೆ ಹೋಗುವ ಕುರಿತು ಟ್ರ್ಯಾಕ್ಟರ ಚಾಲಕ ಮೃತ ಶರಣಪ್ಪ ಇತನು ಟ್ರ್ಯಾಕ್ಟರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಖಣದಾಳ ಗ್ರಾಮದ ಹತ್ತೀರ ಬರುವ ಮಲ್ಲಿನಾಥ ಹುಗಾರ ಇವರ ಜಮೀನಿನ ಹತ್ತೀರ ರೋಡ ಮೇಲೆ ರೋಡ ತೆಗ್ಗಿನಲ್ಲಿ ಟ್ರ್ಯಾಕ್ಟರ ಚಲಾಯಿಸಿ ಟ್ರ್ಯಾಕ್ಟರ ಪಲ್ಟಿ ಮಾಡಿ ಅಪಘಾತ ಮಾಡಿ ದತ್ತು ಇತನಿಗೆ ಭಾರಿಗಾಯಗೊಳಿಸಿದ್ದರಿಂದ ಆತನು ಸ್ಥಳದಲ್ಲಿಯೇ ಮೃತಪಟಿದ್ದು ಮತ್ತು ಟ್ರ್ಯಾಕ್ಟರ ಚಾಲಕ ಶರಣಪ್ಪ ಇತನು ಕೂಡಾ ಭಾರಿಗಾಯ ಹೊಂದಿ ಸ್ಥಳದಲ್ಲಿಯೇ ಮೃತಪಟಿದ್ದು ಇರುತ್ತದೆ. ಅಂತಾ ಶ್ರೀ ಶಿವಶರಣ ತಂದೆ ಹಣಮಂತರಾಯ ಹೂಗಾರ ಸಾ: ಕೋಳಕೂರ ಗ್ರಾಮ ತಾ: ಜೇವಗರಗಿ ಜಿ: ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರಲ್ಲಿ ಗುನ್ನೆ ನಂ 67/2019 ಕಲಂ 279, 304 (ಎ) ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ಚೌಕ ಠಾಣೆ : ಶ್ರೀಮತಿ ರೇಣುಕಾ ಗಂಡ ಮಲ್ಲಿಕಾರ್ಜುನ ಮುಸ್ತಾರಿ @ ಸ್ವಂತ ಸಾ:ಸ್ಮಶಾನ ಹತ್ತಿರ ಸಂಜೀವ ನಗರ ಕಲಬುರಗಿ  ರವರ ಗಂಡ ಮಲ್ಲಿಕಾರ್ಜುನ ಇವರೂ ತೀರಿಕೊಂಡಿರುತ್ತಾರೆ. ನನಗೆ ಒಟ್ಟು 2 ಜನ ಗಂಡು ಮಕ್ಕಳು ಒಬ್ಬಳೆ ಹೆಣ್ಣು ಮಗಳು ಇದ್ದು, ಹೆಣ್ಣು ಮಗಳಿಗೆ ಮದುವೆ ಮಾಡಿಕೊಟ್ಟಿರುತ್ತೇನೆ. ಅವಳು ತನ್ನ ಗಂಡನ ಮನೆ ಕಮಲಾಪೂರದಲ್ಲಿ ಇರುತ್ತಾಳೆ. 2 ಗಂಡು ಮಕ್ಕಳು ಅದರಲ್ಲಿ ಹಿರಿಯ ಮಗ ಗೌತಮ 2ನೇ ಮಗ ರಾಹುಲ ಇವನು ಪಿಯುಸಿ ದ್ವಿತೀಯ ವರ್ಷದಲ್ಲಿ ಫೇಲಾಗಿದ್ದು ಅವನು ಸಹ ಆಟೋ ನಡೆಸಿಕೊಂಡಿರುತ್ತಾನೆ. ನನ್ನ ಹಿರಿಯ ಮಗ ಗೌತಮ ಇತನು ಕಳೆದ 8-10 ತಿಂಗಳ ಹಿಂದೆ ನಮ್ಮ ಓಣಿಯಲ್ಲಿಯೇ ಇರುವ ಶಿವಶರಣಪ್ಪಾ ಮುಡಬಿ ಇವರ ಮಗಳಾದ ಶೃತಿ ಇವಳೊಂದಿಗೆ ಓಡಿ ಹೋಗಿ ರಜಿಸ್ಟರ ಮದುವೆ ಮಾಡಿಕೊಂಡಿದ್ದು ನಂತರ ನಾನು ಸಮಾಜದ ಮುಖಂಡರಿಗೆ ವಿನಂತಿಸಿಕೊಂಡು ನನ್ನ ಮಗ ಗೌತಮ ಇತನಿಗೆ ಸೊಸೆ ಶೃತಿಗೆ ಮನೆಗೆ ಕರೆಯಿಸಿಕೊಂಡು ಸಮಾಜದಲ್ಲಿ ಮತ್ತೊಮ್ಮೆ ಮದುವೆ ಮಾಡಿಕೊಂಡಿದ್ದು ಇರುತ್ತದೆ. ಸದ್ಯ ನನ್ನ ಮಗ ಗೌತಮ ಮತ್ತು ಸೊಸೆ ಶೃತಿ ಇವರೊಂದಿಗೆ ಇಬ್ಬರೂ ಮಕ್ಕಳೊಂದಿಗೆ ನಮ್ಮ ಮನೆಯಲ್ಲಿಯೇ ಇರುತ್ತೇನೆ. ನನ್ನ ಸೊಸೆಯ ಅಣ್ಣ ಈಶ್ವರ ತಂದೆ ಶಿವಶರಣಪ್ಪಾ ಮುಡಬಿ ಇತನು ಅನಾವಶ್ಯಕವಾಗಿ ತನ್ನ ತಂಗಿಯೊಂದಿಗೆ ನನ್ನ ಮಗ ಗೌತಮ ಇತನೂ ಏನಾದರೂ ಅವಳಿಗೆ ಹೇಳಿದರೆ ಅವಳು ತನ್ನ ಅಣ್ಣ ಈಶ್ವರ ಇತನಿಗೆ ಕರೆಯಿಸಿ ಜಗಳ ಮಾಡುವುದು ಅವನಿಗೆ ಕರೆಯಿಸಿ ಅವನು ನನಗೆ ಹಾಗೂ ನನ್ನ 2 ಮಕ್ಕಳಿಗೆ ಈಶ್ವರ ಇತನು ಧಮ್ಮಕಿ ಹಾಕುತ್ತಾ ಬಂದಿದ್ದು, ಅಲ್ಲದೇ ನನಗೆ ಮತ್ತು ನನ್ನ ಮಗನಿಗೆ ತೊಂದರೆ ಕೊಟ್ಟರೂ ಸಹ ನಾನು ಇಲ್ಲಿಯವರೆಗೆ ಸಹನೆ ಮಾಡಿಕೊಂಡು ಬಂದಿರುತ್ತೇನೆ. ದಿಃ 06.06.2019 ರಂದು ಸಾಯಂಕಾಲ ನಾನು ನನ್ನ ಮನೆಯಲ್ಲಿ  ಇದ್ದಾಗ ನನ್ನ ಮಗ ಗೌತಮ ಹಾಗೂ ಸೊಸೆ ಶೃತಿ ಇಬ್ಬರೂ ಕೂಡಿಕೊಂಡು ಮನೆಯಲ್ಲಿಯೇ ತನ್ನ ಗಂಡನೊಂದಿಗೆ ತಕರಾರು ಮಾಡುತ್ತಿದ್ದಾಗ ನಾನು ನನ್ನ ಸೊಸೆ ಶೃತಿಗೆ ನೀನು ಯ್ಯಾಕೆ ಗಂಡನೊಂದಿಗೆ ಅನಾವಶಕವಾಗಿ ಜಗಳ ತೆಗೆಯುತ್ತಿದ್ದೀ ನಿನಗೆ ತಿಳಿಯುವುದಿಲ್ಲ ಏನು ಅಂತ ಹೇಳಿದಕ್ಕೆ ನನ್ನ ಸೊಸೆ ಶೃತಿ ಇವಳು ನನ್ನೊಂದಿಗೆ ಮತ್ತು ನನ್ನ ಮಗನೊಂದಿಗೆ ತಕರಾರು ಮಾಡಿ ನಿಮ್ಮಿಬ್ಬರದು ಬಹಳ ಆಗಿದೆ ನನ್ನ ಅಣ್ಣನಿಗೆ ಕರೆಯಿಸಿ ನಿನಗೆ ಮತ್ತು ನನ್ನ ಗಂಡನಿಗೆ ಸರಿಯಾಗಿ ಮಾಡಿಸ್ತಿನಿ ಅಂತ ಹೇಳಿ ಕೂಡಲೇ ತನ್ನ ಅಣ್ಣ ಈಶ್ವರ ಇತನಿಗೆ ಫೋನ ಮಾಡಲು ಅವನು ಅಷ್ಟರಲ್ಲಿಯೇ ಈಶ್ವರ ತಂದೆ ಶಿವಶರಣಪ್ಪಾ ಮುಡಬಿ ಇತನು ನನ್ನ ಮನೆಯಲ್ಲಿ ಬಂದವನೇ  ಏನೇ ರಂಡಿ ನಿನ್ನವನ್ ತುಲ್ಲು ನಿಮ್ಮದು ಬಹಳಾ ಆಗಿದೇ ಅಂತ ಅವಾಚ್ಯವಾಗಿ ಬೈಯ್ಯುತಾ ನನ್ನ ತಲೆಯ ಕೂದಲು ಹಿಡಿದು ಎಳೆದಾಡಿ ಕೈಯಿಂದ ಮುಷ್ಠಿ ಮಾಡಿ ಮುಖದ ಮೇಲೆ, ತುಟಿಯ ಮೇಲೆ ಹೊಡೆದು ರಕ್ತಗಾಯ ಮಾಡಿದನು. ಮತ್ತು ಕೂದಲು ಹಿಡಿದು ತಲೆಗೆ ಗೋಡೆಗೆ ಹೊಡೆದಿದ್ದು ಗುಪ್ತಗಾಯ ಪಡಿಸಿದ್ದು, ಕೆಳಗಡೆ ಬಿದ್ದಾಗಲು ಹೊಟ್ಟೆಯಲ್ಲಿ ಕಾಲಿನಿಂದ ಒದ್ದು ಗುಪ್ತಗಾಯ ಪಡಿಸಿದನು. ಮತ್ತು ತನ್ನ ಹತ್ತಿರ ಇದ್ದ ಚಾಕು ತೆಗೆದು ನನಗೆ ಹೊಟ್ಟೆಗೆ ಹೊಡೆಯಲು ಬಂದಾಗ ತಪ್ಪಿಸಿಕೊಂಡಿದ್ದು ಆ ಚಾಕುದ ಎಟು ಎಡಗೈ ಮೇಲೆ ಹತ್ತಿ ತೆರಚಿದ ರಕ್ತಗಾಯವಾಯಿತು. ಇದನ್ನು ಕಂಡು ಅಲ್ಲೆ ಪಕ್ಕದ ಮನೆಯಲ್ಲಯೇ ಇದ್ದ ನನ್ನ ನೆಗೇಣಿ ಕಸ್ತೂರಿಬಾಯಿ ಗಂಡ ಕಲ್ಯಾಣಿ ಹಾಗೂ ಮಗ ಗೌತಮ ಇವರೂ ಬಂದು ಜಗಳ ಬಿಡಿಸಿದ್ದು ನಾನು ಅವರಿಂದ ತಪ್ಪಿಸಿಕೊಂಡು ಓಡಿ ಹೋಗಿ ನನಗೆ ಆದ ಗಾಯದಿಂದ ಉಪಚಾರಕ್ಕಾಗಿ ಆಸ್ಪತ್ರೆಗೆ ದಾಖಲಾಗಿರುತ್ತೇನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

07 June 2019

KALABURAGI DISTRICT REPORTED CRIMES

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರಗಳ ಜಪ್ತಿ  :
ಅಫಜಲಪೂರ ಠಾಣೆ : ದಿನಾಂಕ 06-06-2019 ರಂದು ಬೆಳಗಿನ ಜಾವ ಹಿಂಚಗೇರಾ ಗ್ರಾಮದ ಭೀಮಾ ನದಿಯಿಂದ ಟ್ಯಾಕ್ಟರದಲ್ಲಿ ಕಳ್ಳತನದಿಂದ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ ಸಿಪಿಐ ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಹಿಂಚಗೇರಾ ಗ್ರಾಮದ ಭೀಮಾನದಿಯ ಹತ್ತಿರ ಹೋಗಿ ಟಾರ್ಚ ಬೆಳಕಿನಲ್ಲಿ ನೊಡಲಾಗಿ ನದಿಯಲ್ಲಿ ಟ್ಯಾಕ್ಟರದಲ್ಲಿ ಮರಳು ತುಂಬುತ್ತಿದ್ದರು. ಆಗ ನಾವು ಟ್ಯಾಕ್ಟರ ಹತ್ತಿರ ಹೋಗುತ್ತಿದ್ದಂತೆ ಟ್ಯಾಕ್ಟರ ಚಾಲಕ ನಮ್ಮನ್ನು ನೋಡಿ ಟ್ಯಾಕ್ಟರ ಟ್ರೈಲಿಯ ಡಂಪ ಎತ್ತಿ ಓಡಿಹೊದನು. ನಾವು ಟ್ಯಾಕ್ಟರ ಹತ್ತಿರ ಹೋಗುವಷ್ಟರಲ್ಲಿ ಟ್ಯಾಕ್ಟರದಲ್ಲಿದ್ದ ಮರಳು ನದಿಯಲ್ಲಿ ಕೆಳಗೆ ಬಿದ್ದಿತು. ನಂತರ ನಾವು ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರನ್ನು ಚೆಕ್ಕ ಮಾಡಲು ಜಾನಡಿಯರ ಕಂಪನಿಯ ಟ್ಯಾಕ್ಟರ ಇದ್ದು ಪಾಸಿಂಗ್ ನಂಬರ ಕೆಎ-35 ಎಮ್-7684 ಸದರಿ ಟ್ಯಾಕ್ಟರ CH NO :- PY5310S037904 ENG NO:- PY3029D195662 ಅಂತಾ ಇರುತ್ತದೆ. ಸದರಿ ಟ್ಯಾಕ್ಟರ ಟ್ರೈಲಿಗೆ ಎಲ್ಲಿಯು ನಂಬರ ಇದ್ದಿರುವುದಿಲ್ಲ. ಸದರಿ ಟ್ರ್ಯಾಕ್ಟರ .ಕಿ 5,00,000/-ರೂ  ಇರಬಹುದು. ನಂತರ ಸದರಿ ಟ್ರ್ಯಾಕ್ಟರನ್ನು ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತಗೆದುಕೊಂಡು ಅಫಜಲಪೂರ ಠಾಣೆಗೆ ಬಂದು ಠಾಣಾ ಗುನ್ನೆ ನಂ 79/2019 ಕಲಂ 379 ಐಪಿಸಿ ಮತ್ತು 21(1) ಎಮ್ ಎಮ್ ಡಿ ಆರ್ ಆಕ್ಟ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 06-06-2019 ರಂದು ಆಳಂದ  ಉಪ ವಿಭಾಗ ವ್ಯಾಪ್ತಿಯಲ್ಲಿ ಬರುವ ಅಫಜಲಪೂರ ಪೊಲೀಸ್ ಠಾಣೆಗೆ ಬೇಟಿ ನೀಡುವ ಕುರಿತು ಹೋಗುತ್ತಿದ್ದಾಗ ಹಿಂಚಗೇರಾ ಗ್ರಾಮದ ಭೀಮಾ ನದಿಯಲ್ಲಿ ಅನದಿಕೃತವಾಗಿ ಟ್ರ್ಯಾಕ್ಟರದಲ್ಲಿ ಮರಳು ತುಂಬುತ್ತಿದ್ದಾರೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ ಡಿ.ವಾಯ್.ಎಸ್.ಪಿ  ಆಳಮದ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಹಿಂಚಗೇರಾ ಗ್ರಾಮದ ಭೀಮಾ ನದಿಯ ಹತ್ತಿರ ಹೋಗುತ್ತಿದ್ದಾಗ ಭೀಮಾ ನದಿಯಲ್ಲಿ  ಒಂದು ಟ್ರ್ಯಾಕ್ಟರದಲ್ಲಿ ಮರಳು ತುಂಬುತ್ತಿದ್ದರು, ನಾವು ಟ್ಯಾಕ್ಟರ ಹತ್ತಿರ ಹೋಗುವಷ್ಟರಲ್ಲಿ ಟ್ಯಾಕ್ಟರ ಚಾಲಕನು ನಮ್ಮ ಪೊಲೀಸ್ ಜೀಪನ್ನು ನೋಡಿ ತನ್ನ ಟ್ರಾಕ್ಟರ ಟ್ರೈಲಿಯ ಡಂಪ ಎತ್ತಿ ಓಡಿ ಹೋದನು. ನಾವು ನದಿಯಲ್ಲಿ ನಡೆದುಕೊಂಡು ಟ್ಯಾಕ್ಟರ ಹತ್ತಿರ ಹೋಗುವಷ್ಟರಲ್ಲಿ ಟ್ಯಾಕ್ಟರದಲ್ಲಿದ್ದ ಮರಳು ಡಂಪ ಆಗಿ ಕೆಳಗೆ ನದಿಯಲ್ಲಿ ಬಿದ್ದಿತು. ನಂತರ ನಾವು ಪಂಚರ ಸಮಕ್ಷಮ ಸದರಿ ಟ್ಯಾಕ್ಟರ ಚೆಕ್ ಮಾಡಿ ನೋಡಲು ಜಾನಡಿಯರ ಕಂಪನಿಯ ಟ್ಯಾಕ್ಟರ ಇದ್ದು ಅದರ ಪಾಸಿಂಗ್ ನಬರ ಇರಲಿಲ್ಲ. ಅದರ ಚೆಸ್ಸಿ ನಂ PY5310S073977 ಇಂಜೆನ್ ನಂ PY3029D285287 ಅಂತ ಇರುತ್ತದೆ. ಟ್ಯಾಕ್ಟರ ಟ್ರೈಲಿಗೆ ನಂಬರ ಹಾಕಿರುವುದಿಲ್ಲ. ಟ್ರ್ಯಾಕ್ಟರ ಅಂದಾಜು ಕಿಮ್ಮತ್ತು 500000/- ರೂ ಆಗಬಹುದು. ನಂತರ ಸದರಿ ಟ್ರ್ಯಾಕ್ಟರನ್ನು ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಠಾಣಾ  ಗುನ್ನೆ ನಂ 80/2019 ಕಲಂ 379 ಐಪಿಸಿ ಮತ್ತು 21(1) ಎಮ್.ಎಮ್.ಡಿ.ಆರ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 06.06.2019 ರಂದು ಬೆಳ್ಳಿಗ್ಗೆ ರಾಘವೇಂದ್ರ ನಗರ  ಠಾಣಾ ವ್ಯಾಪ್ತಿಯ ಕುಂಬಾರ ಗಲ್ಲಿಯ ನಾಗರ ಕಟ್ಟಿ ಹತ್ತಿರ ಒಬ್ಬ ವ್ಯಕ್ತಿ ಸರಕಾರದ ಯಾವುದೆ ಪರವಾನಿಗೆ ಇಲ್ಲದೆ ಅನಧೀಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಮೇರೆಗೆ ಪಿ.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಬಾತ್ಮಿಯಂತೆ ಸ್ಥಳಕ್ಕೆ ಹೋಗಿ ನೋಡಲು ಕುಂಬಾರ ಗಲ್ಲಿಯ ನಾಗರ ಕಟ್ಟಿ ಹತ್ತಿರ ಪಾನ ಶಾಪನಲ್ಲಿ ಉತ್ತರ ಮುಖ ಮಾಡಿಕೊಂಡಿರುವ ಒಂದು ಪಾನ ಶಾಪನಲ್ಲಿ ಒಬ್ಬ ವ್ಯಕ್ತಿ ಪ್ಲಾಸ್ಟಿಕ ಚೀಲದಲ್ಲಿ ಮಧ್ಯದ ಟೇಟ್ರಾ ಪಾಕೇಟಗಳನ್ನು ಇಟ್ಟುಕೊಂಡು ಮಧ್ಯ ಮಾರಾಟ ಮಾಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಮಧ್ಯ ಮಾರಾಟ ಮಾಡುತ್ತಿದ್ದವರನ್ನು ವಶಕ್ಕೆ ಪಡೆದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಹೆಸರು ಆನಂದ ತಂದೆ ಸುಭಾಷ ಗುತ್ತೇದಾರ ಸಾಃ ಕುಂಬಾರ ಗಲ್ಲಿಯ ನಾಗರ ಕಟ್ಟಿ ಬ್ರಹ್ಮಪೂರ ಕಲಬುರಗಿ ಅಂತ ತಿಳಿಸಿದ್ದು, ಸದರಿಯವನ ಅಂಗಶೋಧನೆ ಮಾಡಲು ಸದರಿಯವನ ಹತ್ತಿರ ನಗದು ಹಣ 200/- ರೂ ದೊರೆತಿದ್ದು ಸ್ಥಳದಲ್ಲಿ ಪರಿಶೀಲಿಸಿ ನೋಡಲು ಮಾರಾಟ ಕುರಿತು ಇಟ್ಟಿದ್ದ  90 ಎಮ್.ಎಲ್.ದ ಓರಿಜಿನಲ್ ಚ್ವಾಯಿಸ್ ವಿಸ್ಕಿ 125 ಟೇಟ್ರಾ ಪಾಕೇಟಗಳು ಸಿಕ್ಕಿದ್ದು  ಒಂದು ಟೇಟ್ರಾ ಪಾಕೇಟ ಬೇಲೆ 30.ರೂ 32 ಪೈಸೆ. ಇದ್ದು ನಂತರ ಸದರಿಯವನಿಗೆ ಮಧ್ಯ ಮಾರಾಟ ಮಾಡುತ್ತಿರುವ ಬಗ್ಗೆ ಲೈಸನ್ಸ ಹಾಗೂ ಎಲ್ಲಿಂದ ಯಾವಾಗ ತಂದು ಮಾರಾಟ ಮಾಡುತ್ತಿರುವೆ ಅಂತ ವಿಚಾರಿಸಿದಾಗ ಸದರಿಯವನು ತಿಳಿಸಿದೆನೆಂದರೆ ನನ್ನ ಹತ್ತಿರ ಯಾವುದೇ ಲೈಸನ್ಸ ಪತ್ರ ಇರುವದಿಲ್ಲ. ನಾನು ಕಲಬುರಗಿ ನಗರದಲ್ಲಿರುವ ಬೇರೆ ಬೇರೆ ವೈನ್ಸ್ ಶಾಫಗಳಿಂದ ಕುಡಿಯುವದಕ್ಕೆಂದು ತೆಗೆದುಕೊಂಡು ಬಂದು ಸಂಗ್ರಹ ಮಾಡಿ ಇಟ್ಟಿದ್ದು ಇಂದು ಬೆಳಿಗ್ಗೆ 6.30 ಗಂಟೆಯಿಂದ ಮಾರಾಟ ಮಾಡುವದಕ್ಕೆ ಪ್ರಾರಂಬಿಸಿರುತ್ತೇನೆ. ಅದರಲ್ಲಿ  ಕೆಲವು ಪಾಕೀಟಗಳು ಮಾರಾಟ ಮಾಡಿದ್ದು ಆ ಮಾರಾಟ ಮಾಡಿದರಿಂದ 200 ನಗದು ಹಣ ಬಂದಿರುತ್ತವೆ ಅಂತಾ ತಿಳಿಸಿದ್ದು ಉಳಿದ 124 ಮಧ್ಯ ಟೇಟ್ರಾ ಪಾಕೇಟಗಳನ್ನು ಅ:ಕಿ: 3,759. ರೂ 60 ಪೈಸಾ ನೇದ್ದು ಒಂದು ರಟ್ಟಿನ ಡಬ್ಬಿಯಲ್ಲಿ ಹಾಕಿ ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು  ಠಾಣೆ ಗುನ್ನೆ ನಂ 60/2019 ಕಲಂ 32,34 ಕೆ.ಇ ಆಕ್ಟ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಸಂಚಾರಿ ಠಾಣೆ 01 : ದಿನಾಂಕ 06.06.2019 ರಂದು ಮದ್ಯಾಹ್ನ ಮೃತ ನಯೀಮ ಇತನು ತನ್ನ ಮೋಟಾರ ಸೈಕಲ ನಂ ಟಿ.ಎಸ್-34/ಎ-0263 ನೇದ್ದರ ಹಿಂದುಗಡೆ ಮಹ್ಮದ ಜಾಕೀರ ಮತ್ತು ಉಮರ ಇವರನ್ನು ಕೂಡಿಸಿಕೊಂಡು ಜೇವರಗಿಯಿಂದ ಶಹಾಬಾದನಲ್ಲಿರುವ ಸ್ವಿಮ್ಮಿಂಗ ಪೂಲಗೆ ಹೋಗಿ ಈಜಾಡಿ ವಾಪಸ್ಸ ಜೇವರಗಿ ಕಡೆಗೆ ಹೋಗುವಾಗ ಕಲಬುರಗಿ ಜೇವರಗಿ ಮುಖ್ಯ ರಸ್ತೆಯ ಮೇಲೆ ಬರುವ ಸೋಮನಾಥ ಹಳ್ಳಿ ಕ್ರಾಸ ಸಮೀಪ ರೋಡ ಮೇಲೆ ಖಾಜಾ ಹುಸೆನ ಇತನು ತನ್ನ ಮೋಟಾರ ಸೈಕಲ ನಂ ಕೆಎ-28/ಇಬಿ-8368 ನೇದ್ದರ ಹಿಂದುಗಡೆ ಮುಜೀಬ, ಮುಜಾಮೀಲ್,ಹಾಗು ಸೊಹೇಲ ರವರನ್ನು ಕೂಡಿಸಿಕೊಂಡು ಜೇವರಗಿ ಕಡೆಯಿಂದ ಕಲಬುರಗಿ ಕಡೆಗೆ ಹೋಗುವ ಕುರಿತು ತನ್ನ ಮೋಟರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ನಯಿಮ ಇತನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಉಮರ, ಮಹ್ಮದ ಜಾಕೀರ್ ಇವರಿಗೆ ಸಾದಾಗಾಯ ಹಾಗೂ ಮುಜೀಬ, ಮುಜಾಮೀಲ್, ಸೊಹೇಲ ಹಾಗೂ ನಯೀಮ ಇವರಿಗೆ ಭಾರಿಗಾಯಗೊಳಿಸಿದ್ದರಿಂದ ನಯೀಮ ಇತನು ಅಪಘಾತ ಸ್ಥಳದಲ್ಲಿ ಮೃತಪಟ್ಟಿದ್ದು ಆರೋಪಿ ಖಾಜಾ ಹುಸೇನ ಇತನು ಕೂಡಾ ಭಾರಿಗಾಯ ಹೊಂದಿ ಸ್ಥಳದಲ್ಲಿ ಮೃತಪಟ್ಟಿದ್ದು ಇರುತ್ತದೆ.  ಅಂತಾ ಶ್ರೀ ಉಮರ ತಂದೆ ಇಸ್ಮಾಯಿಲ್ ಶೇಖ ಸಾ: ಖಾಜಾ ಕಾಲೋನಿ ಜೇವರಗಿ ಜಿ: ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರಲ್ಲಿ ಗುನ್ನೆ ನಂ 66/2019  ಕಲಂ  279, 337, 338, 304 (ಎ) ಐ.ಪಿ.ಸಿ ಬೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.