POLICE BHAVAN KALABURAGI

POLICE BHAVAN KALABURAGI

03 June 2019

KALABURAGI DISTRICT REPORTED CRIMES

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 02.06.2019 ರಂದು ಮದ್ಯಾಹ್ನ ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಕೆಹೆಚ್ಬಿ ಕಾಲೋನಿ ಹತ್ತಿರ ಎಕ್ಸ್ ಬಿಲ್ಡಿಂಗ್ ಹತ್ತಿರ ಇರುವ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಗುಂಪಾಗಿ ಕುಳಿತು ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ  ಪಿ.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿಯಂತೆ ಕೆಹೆಚ್ಬಿ ಕಾಲೋನಿ ಹತ್ತಿರ ಎಕ್ಸ್ ಬಿಲ್ಡಿಂಗ್ ಹತ್ತಿರ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ನಾವು ಎಲ್ಲರು ಜೀಪಿನಿಂದ ಕೆಳೆಗೆ ಇಳಿದು ನಡೆದುಕೊಂಡು ಹೋಗಿ ಕಂಪೌಂಡ ಮರೆಯಲ್ಲಿ ನಿಂತು ನೋಡಲು ಕೆಹೆಚ್ಬಿ ಕಾಲೋನಿ ಹತ್ತಿರ ಎಕ್ಸ್ ಬಿಲ್ಡಿಂಗ್ ಹತ್ತಿರ ಇರುವ ಖುಲ್ಲಾ ಜಾಗೆಯಲ್ಲಿ  ಸಾರ್ವಜನಿಕ ಸ್ಥಳಲ್ಲಿ 9-10 ಜನರು ಗುಂಪಾಗಿ ಕುಳಿತು ಹಣ ಪಣಕ್ಕೆ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿದ್ದು ಅವರಲ್ಲಿ ಒಬ್ಬನು ಎಲೆಗಳನ್ನು ಹಾಕಿದ್ದು, ಒಬ್ಬನು ಅಂದರಕ್ಕೆ 100 ರೂಪಾಯಿ ಮತ್ತು ಇನ್ನೂಬ್ಬನು ಬಾಹರಕ್ಕೆ 150 ರೂಪಾಯಿ ಅಂತ ಕೂಗುತ್ತಾ ಕಣದಲ್ಲಿ ಹಣ ಹಾಕುತ್ತಿದ್ದು ಸದರಿಯವರು ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಜೂಜಾಟ ನಿರತರನ್ನು ವಶಕ್ಕೆ ಪಡೆದುಕೊಂಡು ನಂತರ ಸದರಿಯವರ ಹೆಸರು ವಿಳಾಸ ವಿಚಾರಿಸಲು 1) ಶಿವಾನಂದ ತಂದೆ ವರಶಂಕರ ಪಾಟೀಲ ಸಾಃ ಸಂತೋಷ ಕಾಲೋನಿ ಕಲಬುರಗಿ  2) ವೈಜನಾಥ ತಂದೆ ಸೋಮನಾಥ @ ಸೋಮಶೇಖರ ಪಾಟೀಲ ಸಾಃ ಪ್ರಭುದೇವ ನಗರ ಸಂತೋಷ ಕಾಲೋನಿ ಕಲಬುರಗಿ 3) ಬಸವರಾಜ ತಂದೆ ಚನ್ನಬಸಪ್ಪ ಕೋರಳ್ಳಿ ಸಾಃ ಪ್ರಭುದೇವ ನಗರ ಡಬರಬಾದ ರೋಡ ಕಲಬುರಗಿ 4) ಅರುಣಕುಮಾರ ತಂದೆ ಶಾಂತಪ್ಪ ದೋಣಿ ಸಾಃ ಶಹಾಬಜಾರ ನಾಕ ಆಳಂದ ರೋಡ ಕಲಬುರಗಿ 5) ಶಮಸಾ ಆಲಮ್ ತಂದೆ ಖಾಜಾ ಮೈನೋದ್ದಿನ ಸಾಃ ಖಾದ್ರಿ ಚೌಕ ಹತ್ತಿರ ಕಲಬುರಗಿ 6)  ಹುಸೇನಿ ತಂದೆ ಗೌಸೋದ್ದಿನ ಪಟೇಲ ಸಾಃ ಎಮ್ಎಸ್.ಕೆ ಮೀಲ್ ಹತ್ತಿರ ಕಲಬುರಗಿ 7) ಜಗದೀಶ ತಂದೆ ಭೀಮಶ್ಯಾ ವಾಡಿ ಸಾಃ ಶಹಾಬಜಾರ ನಾಕ ಹತ್ತಿರ ಕಲಬುರಗಿ 8) ನಾಗೇಶ ತಂದೆ ಕಲ್ಯಾಣಪ್ಪ ಆಳಂಗೆ ಸಾಃ ಸಂತೋಷ ಕಾಲೋನಿ ಕಲಬುರಗಿ 9) ಪ್ರಭಾಕರ ತಂದೆ ಗುರಪ್ಪಾ ಬಾಳಿ ಸಾಃ ರಾಣೆಜ ಪೀರ ದರ್ಗಾ ರೋಡ ಕಲಬುರಗಿ  ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ  ಒಟ್ಟು 2850/- ರೂ ಮತ್ತು 52 ಇಸ್ಪೇಟ ಎಲೆಗಳನ್ನು ವಶಕ್ಕೆ ಪಡೆದು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಪಘಾತ ಪ್ರಕರಣ :
ಸಂಚಾರಿ ಠಾಣೆ 01 : ದಿನಾಂಕ 02.06.2019 ರಂದು ಸಾಯಂಕಾಲ 7-30 ಗಂಟೆ ಸುಮಾರಿಗೆ ಮೃತ ಸಂತೋಷ ಇತನು ಸರಡಗಿ (ಬಿ) ಗ್ರಾಮದಲ್ಲಿದ ತನ್ನ ಹೆಂಡತಿಯನ್ನು ಕರೆದುಕೊಂಡು ಬರುವ ಸಲುವಾಗಿ ಪಾಳಾ ಗ್ರಾಮದಿಂದ ಕಲಬುರಗಿ ಮುಖಾಂತರವಾಗಿ ಸರಡಗಿ (ಬಿ) ಗ್ರಾಮಕ್ಕೆ ಮೋಟಾರ ಸೈಕಲ ನಂಬರ ಕೆಎ-32/ಇಕೆ-9105 ನೇದ್ದನ್ನು ಚಲಾಯಿಸಿಕೊಂಡು ಹೋಗುವಾಗ ಕಲಬುರಗಿ ಜೇವರಗಿ  ಮುಖ್ಯ ರಸ್ತೆಯಲ್ಲಿ ಬರುವ ಜೈಲ ಹತ್ತೀರ ಬರುವ ಸಿತನೂರ ಗ್ರಾಮದ ಕ್ರಾಸ ಹತ್ತೀರ ರೋಡ ಮೇಲೆ ಎದುರಿನಿಂದ ಟಿಪ್ಪರ ನಂಬರ ಕೆಎ-32/ಡಿ-2512 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಸಂತೋಷ ಇತನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಸಂತೋಷ ಇತನಿಗೆ ಭಾರಿಗಾಯಗೊಳಿಸಿ ತನ್ನ ವಾಹನ ಅಲ್ಲೇ ಬಿಟ್ಟು ಓಡಿ ಹೋಗಿದ್ದು ಸಂತೋಷ ಇತನು ಕಲಬುರಗಿ ಸರ್ಕಾರಿ ಆಪತ್ರೆಯಲ್ಲಿ ಉಪಚಾರ ಕುರಿತು ಸೇರಿಕೆಯಾಗಿ ಉಪಚಾರ ಫಲಕಾರಿಯಾಗದೆ ದಿನಾಂಕ 02-06-2019 ರಂದು ರಾತ್ರಿ 11-15 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ ಅಂತಾ ಶ್ರೀ ಭದ್ರಪ್ಪಾ ತಂದೆ ಹಣಮಂತಪ್ಪಾ ಕಾಳನೂರ ಸಾ: ಪಾಳಾ  ಗ್ರಾಮ ತಾ:ಜಿ: ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರಲ್ಲಿ ಪ್ರಕರಣ ದಾಖಲಾಗಿದೆ.

02 June 2019

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಸಂಚಾರಿ ಠಾಣೆ 01 : ದಿನಾಂಕ 02.06.2019 ರಂದು ಮೃತ ಮಹ್ಮದ ಖಲೀಲ ಇತನು ತಾನು ಚಲಾಯಿಸುತ್ತೀರುವ ಮೋಟಾರ ಸೈಕಲ ನಂ ಕೆಎ-14/ಇಎಮ್-8942 ನೇದ್ದರ ಹಿಂದುಗಡೆ ಫಿರೋಜ್ ಇತನನ್ನು ಕೂಡಿಸಿಕೊಂಡು ರೈಮಾನೀಯಾ ಮಜೀದನಿಂದ ರೈಲ್ವೆ ಸ್ಟೇಷನಲ್ಲಿ ಚಹಾ ಕುಡಿಯುವ ಸಲುವಾಗಿ ಜಿ.ಜಿ.ಹೆಚ್ ಸರ್ಕಲ ಮುಖಾಂತರವಾಗಿ ಮೋಟಾರ ಸೈಕಲ ಚಲಾಯಿಸಿಕೊಂಡು ರೈಲ್ವೆ ಸ್ಠೆಷನಕ್ಕೆ ಹೋಗುವಾಗ ದಾರಿ ಮದ್ಯ ಟೌನಹಾಲ ಕ್ರಾಸ ಹತ್ತೀರ ರೋಡ ಮೇಲೆ ಟಾಟಾ ಎಸ ಗೂಡ್ಸ ನಂ ಕೆಎ-32/ಬಿ-3325 ನೇದ್ದರ ಚಾಲಕ ದೇವಿಂದ್ರ ಇತನು ಎಸ.ವಿ.ಪಿ ಸರ್ಕಲ ಕಡೆಯಿಂದ ಜಿ.ಜಿ.ಹೆಚ್ ಸರ್ಕಲ ಕಡೆಗೆ ಹೋಗುವ ಕುರಿತು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಎಡ ರೋಡಿಗೆ ಹೋಗದೆ ಬಲ ರೋಡಿಗೆ ಒಮ್ಮಲೇ ತಿರುಗಿಸಿ ಎದುರಿನಿಂದ ಚಲಾಯಿಸಿಕೊಂಡು ಹೋಗಿ ಮಹ್ಮದ ಖಲೀಲ ಇತನು ಚಲಾಯಿಸುತ್ತೀರುವ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಮಹ್ಮದ ಖಲೀಲ ಇತನಿಗೆ ಭಾರಿಗಾಯಗೊಳಿಸಿದ್ದರಿಂದ ಮಹ್ಮದ ಖಲೀಲ ಇತನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ  ಅಂತಾ ಶ್ರೀ ಫಿರೋಜ್ ತಂದೆ ಹಾಜಿಮಿಯಾ ಸಾ: ಬಿ.ಶ್ಯಾಮಸುಂದರ ನಗರ ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರಲ್ಲಿ ಪ್ರಕರಣ ದಾಖಲಾಗಿದೆ.
ಲಾರಿ ಕಳವು ಪ್ರಕರಣ :
ಚೌಕ ಠಾಣೆ : ಶ್ರೀ ಭುಮಣ್ಣ ತಂದೆ ಸೊಮಣ್ಣ ಸಲಗರೆ ಸಾ: ಜಿರೋಳ್ಳಿ ಹಾಲಿವಾಸ: ಶಿವಾಜಿ ನಗರ ಕಲಬುರಗಿ  ರವರ  ಹತ್ತಿರ 2 ಲಾರಿಗಳು ಇರುತ್ತವೆ ಅವುಗಳ ನಂ 1. KA 39 5094 ಇದನ್ನು  ನಾನು ಸುಮಾರು 05 ವರ್ಷಗಳ ಹಿಂದೆ ಖರಿಧಿ ಮಾಡಿದ್ದು ಇದನ್ನು ನಮ್ಮ (ಸಡಕ) ತಮ್ಮನಾದ ಪ್ರಕಾಶ ತಂದೆ ರಾಜಪ್ಪ ಸಾ: ಮುಗನೂರ ಇವರು ನಡೆಸಿಕೊಂಡು ಬರುತ್ತಿದ್ದರು ಇನ್ನೊಂದು ಲಾರಿನಂ KA 56  0131 ಇದನ್ನು ಒಂದುವರೆ ವರ್ಷದ ಹಿಂದೆ ಖರೀಧಿಸಿದ್ದು ಇದನ್ನು  ನಾನೇ ಸ್ವತಃ ಡ್ರೈವಿಂಗ ಮಾಡಿಕೊಂಡು ಬಾಡಿಗೆ ಹೊಡೆಯುತ್ತಾ ಉಪಜೀವಿಸುತ್ತೇನೆ. ಯಾವಾಗಲು ನನ್ನ ಲಾರಿಗಳನ್ನು ಬಾಡಿಗೆಯಿಂದ ಮರಳಿ ಬಂದಾಗ ನಮ್ಮ ಮನೆಯ ಹತ್ತಿರ ಪಾರ್ಕಿಂಗಗಾಗಿ ಸ್ಥಳ ಇಲ್ಲದೆ ಇದ್ದುದ್ದರಿಂದ ಕಲಬುರಗಿಯ ಆಟೋನಗರದ ಲಾರಿ ತಂಗುದಾಣದಲ್ಲಿ ನಮ್ಮ ಲಾರಿಗಳನ್ನು  ನಿಲ್ಲಿಸುತ್ತಾ ಬಂದಿರುತ್ತೇನೆ. ಈಗ ಸುಮಾರು ಎರಡೂವರೆ ತಿಗಂಳ ಹಿಂದೆ ನನ್ನ ಇನ್ನೊಂದು ಲಾರಿಯನ್ನು ನಡೆಯಿಸಿಕೊಂಡು ಬರುತ್ತಿದ್ದ ನಮ್ಮ ಸಡಕನ ತಮ್ಮನು ಲಾರಿ ನಡೆಯಿಸಿಕೊಂಡು ಬರುವುದು ಆಗುವುದಿಲ್ಲ ಅಂತಾ ಹೇಳಿದ್ದರಿಂದ ಅದಕ್ಕೆ ಯಾರೂ ಚಾಲಕರು ಇರದೇ ಇದ್ದುದ್ದರಿಂದ ಅದನ್ನು ಸುಮಾರು ಎರಡೂವರೆ ತಿಂಗಳಿಂದ ಕಲಬುರಗಿಯ ಆಟೋನಗರದ ಲಾರಿ ತಂಗುದಾಣದಲ್ಲಿಯೇ ನಿಲ್ಲಿಸಿದ್ದು ಇತ್ತು ಅದನ್ನು ನಾನು ಆಗಾಗ ಲಾರಿ ತಂಗುದಾಣಕ್ಕೆ ಹೋಗಿ ಸುಸ್ಥಿಯಲ್ಲಿ ಇರುವಂತೆ ನೋಡಿಕೊಳ್ಳುತ್ತಾ ಬಂದಿದ್ದು ಇರುತ್ತದೆ. ಅದರಂತೆ ನಾನು ದಿನಾಂಕ 06.05.2019 ರಂದು ಮುಂಜಾನೆ 10.00 ಗಂಟೆಯ ಸುಮಾರಿಗೆ ನನ್ನ ಇನ್ನೊಂದು ಲಾರಿಯನ್ನು ಬಾಡಿಗೆಗೆ ತೆಗೆದುಕೊಂಡು ಹೋಗುವ ಮುಂಚೆ ನನ್ನ ಲಾರಿ ನಂ. KA 39 5094 ನೆದ್ದನ್ನು ಕಲಬುರಗಿಯ ಆಟೋನಗರ ಲಾರಿ ತಂಗುದಾಣದಲ್ಲಿ ಇರುವುದನ್ನು ನೋಡಿ ನನ್ನ ಇನ್ನೊಂದು ಲಾರಿ ವಾಹನದ ಮೇಲೆ ಬಾಡಿಗೆ ತಗೆದುಕೊಂಡು ನಾನು ಮೈಸೂರಿಗೆ ಹೋಗಿದ್ದು ಇರುತ್ತದೆ. ಮೈಸೂರದಿಂದ ಮರಳಿ ದಿನಾಂಕ.11.05.2019 ರಂದು ನಾನು ಬಾಡಿಗೆಗೆ ತೆಗೆದುಕೊಂಡು ಹೋಗಿದ್ದ ಇನ್ನೊಂದು ಲಾರಿಯನ್ನು ವಾಡಿಯಲ್ಲಿ ಅನಲೋಡ ಮಾಡಲು ಬಿಟ್ಟು ರಾತ್ರಿ 11.00 ಗಂಟೆ ಸುಮಾರಿಗೆ ಕಲಬುರಗಿಗೆ ಬಂದಿದ್ದು ರಾತ್ರಿ ಮನೆಯಲ್ಲಿದ್ದು ಮರುದಿನ ದಿನಾಂಕ.12.05.2019 ರಂದು ಬೆಳಿಗ್ಗೆ 8.00 ಗಂಟೆ ಸುಮಾರಿಗೆ ಆಟೋನಗರ ಲಾರಿ ತಂಗುದಾಣಕ್ಕೆ ಹೋಗಿ ಅಲ್ಲಿ ನಿಲ್ಲಿಸಿದ ನನ್ನ ಲಾರಿ ನಂ. KA 39 5094 ನೆದ್ದು ನೋಡಲಾಗಿ ಅದು ನಿಲ್ಲಿಸಿದ ಸ್ಥಳದಲ್ಲಿ ಇರಲಿಲ್ಲ. ನಾನು ಅಲ್ಲಿರುವ ಲಾರಿ ಗ್ಯಾರೇಜಿನವರಿಗೆ ಹಾಗೂ ಲಾರಿ ಆಫೀಸನವರಿಗೆ, ಹಾಗೂ ನನ್ನ ಲಾರಿಯನ್ನು ಈ ಮೊದಲು ನಡೆಸಿಕೊಂಡು ಬರುತ್ತಿದ್ದ ನಮ್ಮ (ಸಡಕ) ತಮ್ಮನಿಗೆ ವಿಚಾರಿಸಲಾಗಿ ಅವರು ನಮಗೆನು ಗೊತ್ತಿಲ್ಲ ಅಂತಾ ತಿಳಿಸಿರುತ್ತಾರೆ. ನಾನು ಇಂದಿನವರೆಗೆ ಎಲ್ಲಾ ಕಡೆಗೆ ಹುಡುಕಾಡಲಾಗಿ ನನ್ನ ಲಾರಿ ಎಲ್ಲಿಯೂ ಪತ್ತೆಯಾಗಲಿಲ್ಲ. ನನ್ನ ಲಾರಿಯನ್ನು ಯಾರೋ ಕಳ್ಳರು ದಿನಾಂಕ-06.05.2019ರ ಬೆಳಗಿನ 10.00 ಗಂಟೆಯಿಂದ ದಿನಾಂಕ-12.05.2019 ರ ಬೆಳಿಗ್ಗೆ 8.00 ಗಂಟೆಯ ಮದ್ಯದ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.  ಸದರಿ ಕಳುವಾದ ನನ್ನ ಅಶೋಕ ಲೈಲಾಂಡ ಲಾರಿ ವಾಹನದ ವಿವರ ಈ ಕೆಳಗಿನಂತಿದೆ. ಲಾರಿ ವಿವರ  ASHOK LAYLAND , ಲಾರಿ ನಂ  KA 39 5094, ಲಾರಿ ಚೆಸ್ಸಿ ನಂ VFR234228, ಲಾರಿ ಇಂಜನ ನಂ VFH399784, ಲಾರಿ ಮಾದರಿ :2006, ಅಂದಾಜ ಕಿಮ್ಮತ್ತು  - 3,50,000/- ರೂಪಾಯಿ ಆಗಬಹುದು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

01 June 2019

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 31-05-2019 ರಂದು ಬಡದಾಳ ಗ್ರಾಮದ ಶರಣಪ್ಪ ತಂದೆ ಶಿವಪ್ಪ ಮಾಶಾಳ ಎಂಬುವವರು ಮಣೂರ ಯಲ್ಲಮ್ಮ ಧೇವಿಗೆ ದೇವರ ಕಾರ್ಯಕ್ರಮ ಮಾಡಿರುತ್ತಾರೆ. ಸದರಿ ಕಾರ್ಯಕ್ರಮಕ್ಕೆ ನನ್ನ ತಮ್ಮನು ಸಹ ಹೋಗಿರುತ್ತಾನೆ. ಇಂದು ಸಾಯಂಕಾಲ 4:45 ಗಂಟೆಗೆ ನಾನು ನಮ್ಮೂರಿನಲ್ಲಿದ್ದಾಗ ನಮ್ಮ ಸೋದರ ಮಾವನಾದ ಸಿದ್ದಪ್ಪ ತಂದೆ ಸಂಗಪ್ಪ ನಾಟಿಕಾರ ಸಾ|| ಬಡದಾಳ ಈತನು ನನಗೆ ಪೋನ ಮಾಡಿ ನಿಮ್ಮ ತಮ್ಮನಾದ ಬಸವರಾಜ ಅವನ ಗೆಳೆಯನಾದ ಹೋನ್ನಪ್ಪ ತಂದೆ ಬಸಣ್ಣ ಪರೀಟ್ ಇಬ್ಬರು ಕೂಡಿ ಯಲ್ಲಪ್ಪ ತಂದೆ ಭೀಮಶಾ ತಳವಾರ ಸಾ|| ಸಿಂದಗಿ ಇವರ ಹಿರೊ ಸಿಡಿ ಡಿಲೆಕ್ಸ ಕಂಪನಿಯ ಮೋಟರ ಸೈಕಲ ನಂ ಕೆಎ-28 ಇಬಿ-8506 ನೇದ್ದರ ಮೇಲೆ ಮಣೂರ ಯಲ್ಲಮ್ಮ ಧೇವಿಯ ದೇವರ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಬಡದಾಳಕ್ಕೆ ಹೋಗುತ್ತಿದ್ದಾಗ ಈಗ ಸಾಯಂಕಾಲ 4:30 ಗಂಟೆ ಸುಮಾರಿಗೆ ಕರಜಗಿ ಗ್ರಾಮದ ಹೈದ್ರಾ ಕ್ರಾಸಿನಲ್ಲಿರುವ ಪೆಟ್ರೋಲ ಬಂಕ ಹತ್ತಿರ ನಿನ್ನ ತಮ್ಮನು ನಡೆಸುತ್ತಿದ್ದ ಮೋಟರ ಸೈಕಲಕ್ಕೆ ಟಂ ಟಂ ನಂ ಕೆಎ-32 -5467 ನೇದ್ದರ ಚಾಲಕ ಟಂ ಟಂ ನ್ನು ಎದುರಿನಿಂದ ಅತಿ ವೇಗವಾಗಿ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಡಿಕ್ಕಿ ಪಡಿಸಿರುತ್ತಾನೆ ಇದರಿಂದ ನಿನ್ನ ತಮ್ಮನಿಗೆ ಮತ್ತು ಮೋಟರ ಸೈಕಲ ಮೇಲೆ ಹಿಂದೆ ಕುಳಿತಿದ್ದ ಹೊನ್ನಪ್ಪ ಪರೀಟ್ ಇಬ್ಬರಿಗೂ ಭಾರಿ ಗಾಯಗಳಾಗಿರುತ್ತವೆ. ನಿನ್ನ ತಮ್ಮನನ್ನು ಕಲಬುರಗಿಗೆ ಕರೆದುಕೊಂಡು ಹೋಗುತ್ತಿದ್ದೇವೆ ನೀವು ಬನ್ನಿ ಅಂತಾ ತಿಳಿಸಿರುತ್ತಾರೆ. ಸದರಿ ಸುದ್ದಿ ಕೇಳಿ ನಾನು ಮತ್ತು ನನ್ನ ತಂದೆಯ ಅಣ್ಣ ತಮ್ಮರಾದ ಸಂಜೀವ ವಾಲಿಕಾರ, ಶ್ರೀಶೈಲ ವಾಲಿಕಾರ, ಶಿವಪ್ಪ ವಾಲಿಕಾರ ನಾಲ್ಕು ಜನರು ಕೂಡಿ ಅಫಜಲಪೂರಕ್ಕೆ ಹೊರಟಿರುತ್ತೇವೆ. ನಂತರ 6:00 ಗಂಟೆ ಸುಮಾರಿಗೆ ನನ್ನ ಮಾವನಾದ ಸಿದ್ದಪ್ಪ ನಾಟಿಕಾರ ಈತನು ನನಗೆ ಪೋನ ಮಾಡಿ ನಿನ್ನ ತಮ್ಮನು ಕಲಬುರಗಿಯ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಗೋಬ್ಬುರ (ಬಿ) ಹತ್ತಿರ ಮೃತ ಪಟ್ಟಿರುತ್ತಾನೆ. ನೀವು ಅಫಜಲಪೂರಕ್ಕೆ ಬನ್ನಿ ಅಂತ ತಿಳಿಸಿದ ಮೇರೆಗೆ ನಾವು ಅಫಜಲಪೂರಕ್ಕೆ ಬಂದಿದ್ದು, ಸ್ವಲ್ಪ ಸಮಯದ ನಂತರ ನನ್ನ ತಮ್ಮನ ಶವವು ಅಫಜಲಪೂರಕ್ಕೆ ಬಂದಿದ್ದು, ನನ್ನ ತಮ್ಮನ ಶವವನ್ನು ಅಫಜಲಪೂರದ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ತಂದು ಹಾಕಿರುತ್ತೇವೆ. ಅಂತಾ ಶ್ರೀ ಸಿದ್ದಾರಾಮ ತಂದೆ ಬುದ್ದಪ್ಪ ವಾಲಿಕಾರ ಸಾ|| ಚಿಕ್ ಬೇನೂರ ತಾ|| ಇಂಡಿ ಜಿ|| ವಿಜಯಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಅಸ್ವಾಭಾವಿಕ ಸಾವು ಪ್ರಕರಣಗಳು :
ಚೌಕ ಠಾಣೆ : ಶ್ರೀಮತಿ ಪ್ರಭಾವತಿ ಗಂಡ ಸಿದ್ರಾಮಪ್ಪ ಕಣ್ಣಿ, ಸಾ: ಸಂಜಯಗಾಂಧಿನಗರ ದುಬೈಕಾಲೂನಿ ಕಲಬುರಗಿ ರವರ ಮದುವೆಯು ಕಳೆದ ಆರು ವರ್ಷಗಳ ಹಿಂದೆ ಕಲಬುರಗಿಯ ಸಂಜಯಗಾಂಧಿ ನಗರ ದುಬೈ ಕಾಲೂನಿಯ ಸಿದ್ರಾಮಪ್ಪ ತಂದೆ ಸುಭಾಶ ಕಣ್ಣಿ ಇವರೊಂದಿಗೆ ಆಗಿದ್ದು ಇರುತ್ತದೆ. ನಮಗೆ ಸೃಷ್ಠಿ ಅಂತಾ ಐದು ತಿಂಗಳ ಹೆಣ್ಣುಮಗಳು ಇರುತ್ತಾಳೆ. ನನ್ನ ಗಂಡ ಸಿದ್ರಾಮಪ್ಪ ತಂದೆ ಸುಭಾಶ ಕಣ್ಣಿ, ಇವರ ಎಡಗಾಲು ಅಂಗವಿಕಲಾಗಿ ಕುಂಟುತ್ತಾ ನಡೆಯುತ್ತಿದ್ದರು. ಆದರೂ ಸಹ ಒಂದು ಟಾಟಾ ಎಸಿ ವಾಹನ ಇಟ್ಟುಕೊಂಡು ಅದರ ಮೇಲೆ ಡ್ರೈವರ ಕೆಲಸ ಮಾಡಿಕೊಂಡಿದ್ದರು. ಈಗ 2-3 ದಿವಸಗಳ ಹಿಂದೆ ನನ್ನ ಗಂಡನಿಗೆ ಆರಾಮ ತಪ್ಪಿದ್ದರಿಂದ ಖಾಸಗಿಯಾಗಿ ವೈದ್ಯರ ಹತ್ತಿರ ಉಪಚಾರ ಪಡೆದುಕೊಂಡಿದ್ದು ವೈದ್ಯರು ಅವರಿಗೆ ಗೊಳಿ, ಔಷದ ತಗೆದುಕೊಳ್ಳುವಂತೆ ತಿಳಿಸಿದ ಮೇರೆಗೆ ಮನೆಯಲ್ಲಿಯೇ ಗೊಳಿ, ಔಷದ ತಗೆದುಕೊಳ್ಳುತ್ತಿದ್ದರು. ದಿನಾಂಕ.30.05.2019 ರಂದು ಬೆಳಿಗ್ಗೆ 8.30 ಗಂಟೆಗೆ ನನ್ನ ಗಂಡ ಮನೆಯಿಂದ ಹೊರಗೆ ಹೋಗಿ ಮರಳಿ ರಾತ್ರಿ 9.00 ಗಂಟೆಗೆ ಮನೆಗೆ ಬಂದಿದ್ದು ಆಗ ನಾನು ನಮ್ಮ ಅತ್ತೆ ಮಹಾದೇವಿ, ನೆಗೆಣಿ ಸರೋಜಾ, ಮೈದುನ ಶರಣಕುಮಾರ ಕೂಡಿ ಮನೆಯಲ್ಲಿ ಊಟ ಮಾಡುತ್ತಿದ್ದೇವು. ನನ್ನ ಗಂಡನಿಗೂ ಸಹ ಊಟ ಮಾಡಲು ಕರೆದಿದ್ದು ಆಗ ಅವರು ಊಟ ಮಾಡುವುದಿಲ್ಲ ಅಂತಾ ಹೇಳಿ ನೀರು ಕುಡಿದು ಮಲಗಿಕೊಂಡರು. ಬೆಳಿಗ್ಗೆ 4.00 ಗಂಟೆ ಸುಮಾರಿಗೆ ನನ್ನ ಗಂಡ ನನಗೆ ಎಬ್ಬಿಸಿ ರಾತ್ರಿ ದವಖಾನಿ ಗೊಳಿ ತಗೆದುಕೊಳ್ಳಲು ಹೋಗಿ ಪಕ್ಕದಲ್ಲಿದ್ದ ಇಲಿ ಸಾಯುವ ಔಷದ ಗೊಳಿ ತಪ್ಪಾಗಿ ತಗೆದುಕೊಂಡಿರುತ್ತೇನೆ ನನಗೆ ಕಸಿವಿಸಿಯಾಗಿ ಉಲ್ಟಿ ಬರುತ್ತಾಯಿದೆ ಅಂತಾ ಹೇಳಿದ್ದರಿಂದ ನಮ್ಮ ಅತ್ತೆ ಮತ್ತು ನಮ್ಮ ಮೈದುನ ಕುಡಿ ನನ್ನ ಗಂಡನಿಗೆ ಉಪಚಾರ ಕುರಿತು ಸರ್ಕಾರಿ ಆಸ್ಪತ್ರೆಗೆ ಒಂದು ಆಟೋದಲ್ಲಿ ಕೂಡಿಸಿಕೊಂಡು ಹೋದರು. ನಂತರ ನಾನು ಸಹ ಸರ್ಕಾರಿ ಆಸ್ಪತ್ರೆಗೆ ಹೋಗಿರುತ್ತೇನೆ. ಅಲ್ಲಿಯ ವೈದ್ಯರು ನನ್ನ ಗಂಡನಿಗೆ ಹೆಚ್ಚಿನ ಉಪಚಾರಕ್ಕಾಗಿ ಸನರೈಸ್ ಆಸ್ಪತ್ರೆಗೆ  ತಗೆದುಕೊಂಡು ಹೋಗಲು ತಿಳಿಸಿದ್ದರಿಂದ ನನ್ನ ಗಂಡನಿಗೆ ಸರ್ಕಾರಿ ಆಸ್ಪತ್ರೆಯಿಂದ ಸನರೈಸ್ ಆಸ್ಪತ್ರೆಗೆ ಒಯ್ದು ಸೇರಿಕೆ ಮಾಡಿದ್ದು, ನನ್ನ ಗಂಡ ಸನರೈಸ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ಚಿಕಿತ್ಸೆ ಪಲಕಾರಿಯಾಗದೇ ಇಲಿ ಸಾಯುವ ಔಷದಿ ಗೊಳಿಗಳನ್ನು ನುಂಗಿದ್ದರಿಂದ ಇಂದು ದಿನಾಂಕ.31.05.2019 ರಂದು ಬೆಳಗಿನ ಜಾವ 5.06 ಗಂಟೆ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.