POLICE BHAVAN KALABURAGI

POLICE BHAVAN KALABURAGI

16 April 2019

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಸಂಚಾರಿ ಠಾಣೆ 1 : ದಿನಾಂಕ 15.04.2019 ರಂದು ಸಾಯಂಕಾಲ 7-45 ಗಂಟೆ ಸುಮಾರಿಗೆ ಮೃತ ಮಲ್ಲಣ್ಣಾ ಇತನು ಕಲಬುರಗಿ ಜಿಲ್ಲಾ ಸರ್ಕಾರಿ  ಆಸ್ಪತ್ರೆಯಿಂದ ಆಸ್ಪತ್ರೆ ಎದುರುಗಡೆ ಬರುವ ಚಹಾ ಬಂಡಿ ಹೊಟೇಲನಲ್ಲಿ ಚಹಾ ಕುಡಿಯವ ಸಂಬಂದ ನಡೆದುಕೊಂಡು ಬಂದು ಚಹಾ ನೀರು ಕೂಡಿದು ನಡೆದುಕೊಂಡು ವಾಪಸ್ಸ ಜಿಲ್ಲಾ ಸಕರ್ಾರಿ ಆಸ್ಪತ್ರೆ ಕಡೆಗೆ ನಡೆದುಕೊಂಡು ರಸ್ತೆ ದಾಟುತ್ತೀರುವಾಗ ಕಾರ ನಂಬರ ಕೆಎ-32/ಎನ್-3994 ನೇದ್ದರ ಸವಾರಳು ಜಿ.ಜಿ.ಹೆಚ್. ಸರ್ಕಲ ಕ್ರಾಸ ಕಡೆಯಿಂದ  ಆರ.ಟಿ.ಓ ಕ್ರಾಸ ಕಡೆಗೆ ಹೋಗುವ ಕುರಿತು ತನ್ನ ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೃತ ಮಲ್ಲಣ್ಣಾ ಇವರಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಅವರಿಗೆ ಭಾರಿಗಾಯಗೊಳಿಸಿ ತನ್ನ ಕಾರ ಸಮೇತ ಓಡಿ ಹೋಗಿದ್ದು ಮಲ್ಲಣ್ಣಾ ಇವರಿಗೆ ಉಪಚಾರ ಕುರಿತು ಒಂದು ಅಂಬುಲೇನ್ಸ ವಾಹನದಲ್ಲಿ ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ರಾತ್ರಿ 8-30 ಗಂಟೆಗೆ ವೈದ್ಯರಿಗೆ ತೊರಿಸಲು ವೈದ್ಯರು ಆಸ್ಪತ್ರೆಗೆ ಬರುವದಕ್ಕಿಂತ ಮುಂಚಿತವಾಗಿ ಮೃತಪಟ್ಟಿದ್ದು ಇರುತ್ತದೆ ಅಂತಾ ತಿಳಿಸಿದ್ದು ರಸ್ತೆ ಅಪಘಾತದಲ್ಲಿ ಭಾರಿಗಾಯ ಹೊಂದಿದ್ದ ಮಲ್ಲಣ್ಣಾ ಇವರು ಸಾಯಂಕಾಲ 7-45 ಗಂಟೆಯಿಂದ ರಾತ್ರಿ 8-30 ಗಂಟೆಯ ಮದ್ಯದ ಅವಧಿಯಲ್ಲಿ ಅಪಘಾತ ಸ್ಥಳದಿಂದ ಬಸವೇಶ್ವರ ಆಸ್ಪತ್ರೆಗೆ ಹೋಗುವಾಗ ದಾರಿ ಮದ್ಯ ಅಂಬುಲೇನ್ಸ ವಾಹನದಲ್ಲಿ ಮೃತಪಟ್ಟಿದ್ದು ಇರುತ್ತದೆ.  ಅಂತಾ ಶ್ರೀ ಬಾಬುರಾವ ತಂದೆ ಸಿದ್ದಣ್ಣ ಪೂಜಾರಿ  ಸಾ: ಮಂದರವಾಡ  ತಾ: ಜೇವರಗಿ ಹಾ.ವ. ಗುಮ್ಮಜ ಹತ್ತೀರ ಬಸವೇಶ್ವರ ಕಾಲನಿ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 1 ರಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಚೌಕ ಠಾಣೆ : ಶ್ರೀ ಮಹ್ಮದ ಆವೇಜ ತಂದೆ ಮಹ್ಮದ ಮಗದುಮ್ ಜುನೈದಿ ಸಾ: ಶೇಖರೋಜಾ ಕಲಬುರಗಿ ರವರು ದಿನಾಂಕ 14-04-2019 ರಂದು ರಾತ್ರಿ ನಮ್ಮ ಓಣಿಯ ಶಹಾದಾಬ ತಂದೆ ಸೈಯ್ಯದ ಜಾಫರ ಈತನಿಗೆ ಸಮಾಜದಲ್ಲಿ ಸರಿಯಾಗಿ ಇರಬೇಕು ಕೆಟ್ಟವರ ಸಂಗಡ ರಾತ್ರಿ ವೇಳೆಯಲ್ಲಿ ತಿರುಗಾಡ ಬಾರದು ಎಂದು ಬುದ್ದಿ ವಾದ ಹೇಳಿದ್ದು ಆಗ ಅವನು ಎಲ್ಲಿಯೂ ತಿರುಗಾಡುವುದಿಲ್ಲ ಮತ್ತು ಕೆಟ್ಟವರ ಸಂಗಡ ಮಾತಾಡುವುದಿಲ್ಲ ಅಂತಾ ಹೇಳಿದ್ದು ಆಗ ನಾನು ಅವನಲ್ಲಿದ್ದ ಚಿಕ್ಕದಾದ ಮೊಬೈಲ ಫೋನ ತೆಗೆದುಕೊಂಡು ಪರಿಶೀಲಿಸಿ ನೋಡಕಲಾಗಿ ಅದರಲ್ಲಿ ಕೆಲವು ದುಶ್ಚಟ ಉಳ್ಳ ಹುಡುಗನೊಂದಿಗೆ ಮಾತಾಡಿದ್ದು ಕಂಡು ಬಂದಿರುವುದರಿಂದ ನನಗೆ ಸುಳ್ಳು ಹೇಳುತ್ತಿಯಾ ಅಂತಾ ಸಿಟ್ಟು ಬಂದಿರುವುದರಿಂದ ಅವನ ಮೊಬೈಲ ಫೋನನ್ನು ಗೋಡೆಗೆ ಹೊಡೆದಿರುತ್ತೇನೆ ನಂತರ ಅವನಿಗೆ ಹೊಸ ಮೊಬೈಲ ಕೊಡಿಸುತ್ತೇನೆ ಅಂತಾ ಹೇಳಿರುತ್ತೇನೆ ಅವನು ನನ್ನ ಮೇಲೆ ಸಿಟ್ಟಿಗೆ ಬಂದು ಮಗನೇ ನಿನಗೆ ಒಂದು ದಿವಸ ನೋಡಿಯೇ ಬಿಡುತ್ತೇನೆ ಅಂತಾ ಹೇಳಿ ಸಿಟ್ಟಿನಿಂದ ಅವನ ತನ್ನ ಮನೆಗೆ ಹೋಗಿದ್ದು ನಾನು ಸಹ ನಮ್ಮ ಮನೆಗೆ ಹೋಗಿರುತ್ತೇನೆ. ದಿನಾಂಕ 15.04.2019 ರಂದು ಸಾಯಂಕಾಲ ನಾನು ಖಾದ್ರಿ ಚೌಕ ಹತ್ತಿರದಲ್ಲಿರುವ ಬಾಬಾ ಪಾನಶಾಪ ಹತ್ತಿರ ಇದ್ದಾಗ 1) ಶಹಾದಾಬ ತಂದೆ ಸೈಯ್ಯದ ಜಾಫರ 2) ಶಾರೂಖ ತಂದೆ ಸೈಯ್ಯದ ಜಾಫರ 3) ಸೋಹೇಲ ತಂದೆ ಸೈಯ್ಯದ ಜಾಫರ 4) ಸೈಯ್ಯದ ಜಾಫರ ತಂದೆ ಹಮ್ಮೀದ 5) ಹಮ್ಮೀದ ಸಾ: ಎಲ್ಲರೂ ಶೇಖ ರೋಜಾ ಕಲಬುರಗಿ ಇವರೆಲ್ಲರೂ ಕೈಯಲ್ಲಿ ಚಾಕೂಗಳನ್ನು ಹಿಡಿದುಕೊಂಡು ನನಗೆ ಕೊಲೆ ಮಾಡುವ ಉದ್ದೇಶದಿಂದ ನನ್ನ ಹತ್ತಿರದಲ್ಲಿ ಬಂದವರೆ ನನಗೆ ಏ ಬೋಸಡಿ ಮಗನೆ ಈ ಬೋಸಡಿ ಮಗನಿಗೆ ಬಹಳ ಸೊಕ್ಕು ಬಂದಿದೆ ಇವನು ವಿನಾಃ ಕಾರಣವಾಗಿ ನಮ್ಮ ಫೋನ ಒಡೆದಿರುತ್ತಾನೆ ಇವತ್ತು ಇವನಿಗೆ ಮುಗಿಸಿಯೇ ಬಿಡೋಣಾ ಅಂತಾ ಅವರಲ್ಲಿ ಶಾರೂಖ ಮತ್ತು ಸೊಹೇಲ ಇವರು ನನಗೆ ಒತ್ತಿ ಹಿಡಿದುಕೊಂಡರು ಶಹಾದಾಬ ತಂದೆ ಸೈಯ್ಯದ ಜಾಫರ ಈತನು ತನ್ನ ಕೈಯಲ್ಲಿ ಇದ್ದ ಚಾಕುವಿನಿಂದ ಒಮ್ಮೇಲೆ ನನ್ನ ಬಲ ಎದೆಗೆ ಜೋರಾಗಿ ತಿವಿದು ಭಾರಿ ರಕ್ತಗಾಯ ಪಡಿಸಿದನು ಆಗನಾನು ಸತ್ತೆನೆಪ್ಪ ಅಂತಾ ಕುಸಿದು ಕೆಳಗೆ ಬಿದ್ದಾಗ ಶಾರುಖ ಮತ್ತು ಸೋಹೆಲ ಇವರು ಕೈಯಿಂದ ಮತ್ತು ಕಾಲಿನಿಂದ ಬೆನ್ನಿಗೆ ಮತ್ತು ಹೊಟ್ಟೆಗೆ ಹೋಡೆದು ಗುಪ್ತಗಾಯಗಳು ಮಾಡಿರುತ್ತಾರೆ ಇದೇ ಸಮಯದಲ್ಲಿ ಸೈಯ್ಯದ ಜಾಫರ ಮತ್ತು ಹಮ್ಮೀದ ಇವರುಗಳು ಹೊಡೆಯಿರಿ ರಂಡಿ ಮಗನಿಗೆ ಖಲ್ಲಾಸ ಮಾಡಿರಿ ಅಂತಾ ಕುಮ್ಮಕ್ಕು ನೀಡುತ್ತಿದ್ದರು ಆಗ ಅಲ್ಲಿಯೇ ಹಾಜರಿದ್ದ ಪರಿಚಯದ ಅರ್ಶದ ತಂದೆ ಮೈನುದ್ದೀನ ಮತ್ತು ಅಕಬರ ತಂದೆ ಮೋದಿನ ಮುಲ್ಲಾ ಇವರು ನನಗೆ ಹೊಡೆಯುವುದನ್ನು ಬಿಡಿಸಿರುತ್ತಾರೆ ಇದೇ ಸಮಯದಲ್ಲಿ ನಜೀಬ ಬಾಬಾ ಅವರು ನನಗೆ ಅವರ ಮೋಟರ ಸೈಕಲ ಮೇಲೆ ಡೆಕ್ಕನ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ ಸಧ್ಯ ನಾನು ಉಪಚಾರ ಪಡೆಯುತ್ತಿದ್ದೆನೆ .ಕಾರಣ ನನಗೆ ಶಹಾದಾಬ ತಂದೆ ಸೈಯ್ಯದ ಜಾಪರ ಹಾಗೂ ಇತರರು ಕೂಡಿಕೊಂಡು ಕೊಲೆ ಮಾಡುವ ಉದ್ದೇಶದಿಂದ ಚಾಕುಗಳನ್ನು ಹಿಡಿದುಕೊಂಡು ಬಂದು ನನಗೆ ಚಾಕುವಿನಿಂದ ತಿವಿದು ಕೊಲೆಮಾಡಲು ಪ್ರಯತ್ನ ಮಾಡಿದವರ ವಿರುಧ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಡ್ರಾಮಿ ಠಾಣೆ : ಶ್ರೀಮತಿ ಮಾನಮ್ಮ ಗಂಡ ಸದಾಶಿವ ಚಿಗರಾಳ ಸಾ|| ಹಂಗರಗಾ(ಕೆ) ತಾ|| ಜೇವರ್ಗಿ ರವರು ರವರ ಮಗ ಭೀಮರಾಯನಿಗೆ ನಮ್ಮೂರ ಬಸವಂತ್ರಾಯ ನಡುವಿನಮನಿ ರವರ ಮಗಳಾದ ಪಾರ್ವತಿ ಇವಳೊಂದಿಗೆ ಮದುವೆಮಾಡಿರುತ್ತೇವೆ, ಸದ್ಯ ನನ್ನ ಮಗನಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಇರುತ್ತದೆ, ನಮ್ಮೂರ ಸಿಮಾಂತರದಲ್ಲಿ ನಮ್ಮ ಹಿರಿಯರ 11 ಎಕರೆ ಜಮೀನು ಇರುತ್ತದೆ, ನನ್ನ ಮಗ ಸದ್ಯ ನಮ್ಮೊಂದಿಗೆ ಬೇರೆಯಾಗಿ ನಮ್ಮೂರಲ್ಲೇ ಮನೆ ಕಟ್ಟಿಕೊಂಡು ಸಂಸಾರ ಮಾಡುತ್ತಿರುತ್ತಾನೆ, ಅವನ ಉಪಜೀವನ ಸಲುವಾಗಿ 3 ಎಕರೆ ಜಮೀನು ಕೊಟ್ಟಿರುತ್ತೇನೆ, ನನ್ನ ಸೊಸೆ ಪಾರ್ವತಿ ಇವಳು ಸುಮಾರು ಸಲ ನಮಗೆ ಇನ್ನು 3 ಎಕರೆ ಜಮೀನು ಬರುತ್ತದೆ ಅಂತಾ ನನ್ನೊಂದಿಗೆ ಜಗಳ ಮಾಡುತ್ತಾ ಬಂದಿರುತ್ತಾಳೆ, ಅದರಂತೆ ನನ್ನ ಮಗ ಭೀಮರಾಯನಿಗು ಸಹ ಆಸ್ತಿ ಸಲುವಾಗಿ ದಿನಾಲು ಕಿರುಕುಳ ಕೊಡುತ್ತಾ ಬಂದಿರುತ್ತಾಳೆ, ಈ ಬಗ್ಗೆ ನನ್ನ ಮಗ ಆಗಾಗಾ ನನ್ನ ಮುಂದೆ ಹೇಳುತ್ತಿದ್ದನು, ದಿನಾಂಕ; 12-04-2019 ರಂದು ಬೆಳಿಗ್ಗೆ 09;00 ಗಂಟೆಗೆ ನನ್ನ ಸೊಸೆ ಪಾರ್ವತಿ ಇವಳು ಮನೆಗೆ ಬಂದು ನನ್ನ ಗಂಡನಿಗೆ ಬರಬೇಕಾದ ಇನ್ನು 3 ಎಕರೆ ಜಮೀನು ನನಗೆ ಬಿಟ್ಟುಕೊಡು ಇಲ್ಲಾ ಅಂದರೆ ನಿನಗೆ ಮತ್ತು ನನ್ನ ಗಂಡನಿಗೆ ಖಲಾಸ ಮಾಡಿ ಆಸ್ತಿ ತೆಗೆದುಕೊಳ್ಳುತ್ತೇನೆ ಅಂತಾ ಹೇಳಿ ಹೋದಳು, ನಂತರ ರಾತ್ರಿ ನನ್ನ ಮಗ ಭೀಮರಾಯನಿಗೆ ಅವಳ ಹೆಂಡತಿ ಮತ್ತು ಅವರ ಮನೆಯವರು ಹೊಡೆಯುತ್ತಿದ್ದಾರೆ ಅಂತಾ ವಿಷಯ ಗೊತ್ತಾಗಿ ನಾನು ನಮ್ಮ ಮಗನ ಮನೆಗೆ ಹೋಗಿ ನೋಡಿದಾಗ ಮನೆಯ ಮುಂದೆ ನನ್ನ ಸೊಸೆ ಪಾರ್ವತಿ ಮತ್ತು ಅವರ ತಾಯಿ ಮಹಾದೇವಿ ಗಂಡ ಬಸವಂತ್ರಾಯ ಹಾಗು ಅವರ ಅಣ್ಣ ಸುಬ್ಬಣ್ಣ ತಂದೆ ಬಸವಂತ್ರಾಯ ಹಿಗೆಲ್ಲರೂ ಕೂಡಿ ನನ್ನ ಮಗನಿಗೆ ಸುತ್ತುಗಟ್ಟಿ ತಡೆದು ಏ ರಂಡಿ ಮಗನೆ ನಿಮ್ಮ ತಾಯಿ ಕಡೆಯಿಂದ ಇನ್ನು 3 ಎಕರೆ ಆಸ್ತಿ ತೆಗೆದುಕೊಂಡು ಬಾ ಅಂತಾ ಅಂದು ಸುಬ್ಬಣ್ಣ ಇವನು ಬಡಿಗೆಯಿಂದ ನನ್ನ ಮಗನ ಬಲಗಾಲಿನ ಮೇಲೆ ಹೊಡೆದನು, ಆಗ ನನ್ನ ಮಗ ಕೆಳಗೆ ಬಿದ್ದಾಗ ಮತ್ತೆ ಅದೇ ಬಡಿಗೆಯಿಂದ ಎರಡು ಮೊಳಕೈಗಳಿಗೆ ಹೊಡೆದನು, ನಂತರ  ಪಾರ್ವತಿ ಇವಳು ಇವತ್ತ ನನ್ನ ಹಾಟ್ಯಾನ ಮಗನಿಗಿ ಹೊಡೆದು ಖಲಾಸೆ ಮಾಡುತ್ತೇನೆ ಅಂತಾ ಅಂದು ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಿಲ್ಲಿದ್ದ ಕಬ್ಬಿಣದ ಊದಗೊಳದಿಂದ ನನ್ನ ಮಗನ ಎಡ ಮೆಲಕಿನ ಹತ್ತಿರ ಜೋರಾಗಿ ಹೊಡೆದು ಭಾರಿ ಗುಪ್ತ ಪೆಟ್ಟು ಪಡಿಸಿದಳು, ಮಹಾದೇವಿ ಇವಳು ಇವನಿಗೆ ಹೊಡೆದು ಖಲಾಸ ಮಾಡಿದರೆ ಎಲ್ಲಾ ಆಸ್ತಿ ನಮಗೆ ಬರುತ್ತದೆ ಅಂತಾ ಅನ್ನುತ್ತಿದ್ದಾಗ ನಾನು ಮತ್ತು ನಮ್ಮೂರ  ರೆಹಮಾನ ತಂದೆ ಮಾಬುಸಾಬ ಚೌದರಿ, ರಾಜಶೇಖರ ತಂದೆ ಹಣಮಂತ್ರಾಯ ಪೂಜಾರಿ ರವರೆಲ್ಲರೂ ಕೂಡಿ ಬಿಡಿಸಿಕೊಂಡು ನನ್ನ ಮಗನಿಗೆ ನಮ್ಮ ಮನೆಗೆ ಕರೆದುಕೊಂಡು ಹೋಗಿರುತ್ತೇವೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 27/03/2019 ರಿಂದ 04/04/2019 ರ ಮದ್ಯದ ಅವಧಿಯಲ್ಲಿ ಸೈಯದ್ ಚಿಂಚೋಳ್ಳಿ ಗ್ರಾಮ ಸರ್ವೇ ನಂ 50/02 ರಲ್ಲಿ ಹಾಕಿರುವ 11 ಲೈಟಿನ ಕಂಬಗಳ ಕರೆಂಟ್ ವಾಯರ್ ಅ.ಕಿ.1,25,000/-ರೂ ನೆದ್ದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ರಾಹುಲದೇವ ಭಗವಾಲೆ  ಜೂನಿಯರ ಇಂಜನೀಯರ ಜಸ್ಕಾಂ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಶರಣಬಸವಾ ಕಾಂಟೆಪ್ಪಾಪೂಜಾರಿ ಸಾ : ಬೀಮಳ್ಳಿ ತಾ : ಕಲಬುರಗಿ  ರವರ ತಂದೆಯಾದ ಕಂಟೆಪ್ಪಾ ವಯಾ : 45 ವರ್ಷ ರವರು ದಿನಾಂಕ ಮೇ 2015 ರಂದು ನಮ್ಮ  ಮನೆಯಿಂದ ಹೋದವನು ಮರಳಿ ಮನೆಗೆ ಬಂದಿರುವುದಿಲ್ಲ ಇಷ್ಟು ದಿನ ಎಲ್ಲಾ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

14 April 2019

KALABURAGI DISTRICT REPORTED CRIMES

ಹಲ್ಲೆ ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀ ಮಹ್ಮದ ಉಸ್ಮಾನ ತಂದೆ ಹುಸೇನಸಾಬ ಮುಜಾವರ ಸಾ: ಮಹೀಬೂಬಸುಬಾನಿ ಚಿಲ್ಲಾ ಝಂಡಾಗಲ್ಲಿ ಎಮ್.ಎಸ್.ಕೆ.ಮೀಲ್ ಕಲಬುರಗಿ ರವರು  ದಿನಾಂಕ 11.04.2019 ರಂದು ಕಲಬುರಗಿ ಲೊಕಸಭಾ ಕ್ಷೇತ್ರ-5 ನೇದ್ದರ ಕಾಂಗ್ರೇಸ ಪಕ್ಷದ ಅಭ್ಯರ್ಥಿಯಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೇ ರವರ ಪರವಾಗಿ ಚುನಾವಣೆ ಪ್ರಚಾರ ಕುರಿತು ನನ್ನ ಅಟೊ ನಂ ಕೆಎ 32 ಸಿ 2486 ನೇದ್ದಕ್ಕೆ ಮೈಕ ಸಟ್ ಮುಂಖಾತ ಪ್ರಚಾರ ಮಾಡಲು ಚುನಾವಣಾಧಿಕಾರಿಗಳು ಪರವಾನಿಗೆ ನೀಡಿದ್ದು ಅದರಂತೆ ಇಂದು ದಿನಾಂಕ 13.04.2019 ರಂದು ಬೆಳ್ಳಿಗ್ಗೆ 11:00 ಗಂಟೆಯಿಂದ ಕಲಬುರಗಿ ಲೊಕಸಭಾ ಕ್ಷೇತ್ರ-5 ನೇದ್ದರ ಕಾಂಗ್ರೇಸ್ಸ ಪಕ್ಷದ ಅಭ್ಯರ್ಥಿಯಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೇ ರವರ ಪರವಾಗಿ ಚುನಾವಣೆ ಪ್ರಚಾರ ಕುರಿತು ನನ್ನ ಅಟೊ ನಂ ಕೆಎ 32 ಸಿ 2486 ನೇದಕ್ಕೆ ಮೈನ ಸಟ್ ಅಳವಡಿಸಿ ಕಾಂಗ್ರೇಸ್ ಪಕ್ಷದ ದ್ವಜವನ್ನು ಅಟೊಕ್ಕೆ ಕಟ್ಟಿ, ಕಾಂಗ್ರೇಸ್ ಪಕ್ಷದ ಬ್ಯಾನರನ್ನು ಅಟೊಕ್ಕೆ ಸುತ್ತುವರೆದು ಕಟ್ಟಿ ಬೆಳ್ಳಿಗ್ಗೆ 11:00 ಗಂಟಗೆ ಯಿಂದ ಆಡಿಯೋ ಮುಖಾಂತರ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕಬೇಕು ಅಂತ ಪ್ರಚಾರ ಮಾಡುತ್ತಾ ಸುಪರ ಮಾರ್ಕೇಟ, ಖರ್ಗೇ ಪೆಟ್ರೋಲ ಪಂಪ, ಮಹೀಬೂಬ ನಗರ, ಹುಮನಾಬಾದ ರಿಂಗ್ ರೋಡ, ಮುಸ್ಲಿಂ ಸಂಘ, ಆಳಂದ ಚೆಕ್ಕ ಪೊಸ್ಟ ಮಾರ್ಗವಾಗಿ ಮಧ್ಯಾನ 3:00 ಗಂಟೆಯ ಸುಮಾರಿಗೆ ದೇವಿ ನಗರ ಕಮಾನ ಹತ್ತಿರ ಬಂದಾಗ ಅಲ್ಲಿ ಸಂಚಾರಿ ದಟ್ಟಣೆಯಾಗಿದ್ದು ಸಂಚಾರಿ ದಟ್ಟಣೆಯಿಂದ, ಸಂಚಾರಿ ದಟ್ಟಣೆ ಇದ್ದ ಪ್ರಯುಕ್ತ ದೇವಿ ನಗರ ಕಮಾನದಿಂದ ಖಾದ್ರಿ ಚೌಕ ಕಡೆಗೆ ಹೋಗುವ ಕುರಿತು ಜಬ್ಬಾರ ಪೇಟ್ರೋಲ ಪಂಪ ಹತ್ತಿರ ರಸ್ತೆಯ ಮೇಲೆ ಮಧ್ಯಾನ 3:15 ಗಂಟೆಯ ಸುಮಾರಿಗೆ ನನ್ನ ಅಟೊ ತೆಗೆದುಕೊಂಡು ಆಡಿಯೋ ಮುಖಾಂತರ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕಬೇಕು ಅಂತ ಪ್ರಚಾರ ಮಾಡುತ್ತಾ ಮುಂದೆ ಹೊಗುತ್ತಿದ್ದಾಗ ಜಬ್ಬಾರ ಪೇಟ್ರೊಲ ಪಂಪ ಎದರುಗಡೆ ರಸ್ತೆಯ ಮೇಲೆ ಸುಮಾರು 15-20 ಜನರು ಮೊದಿ, ಮೊದಿ ಅಂತ ಕೂಗುತ್ತಾ ನನ್ನ ಅಟೊದ ಹತ್ತಿರ ಬಂದು ಕಾಂಗ್ರೇಸ ಪಕ್ಷದ ಪ್ರಚಾರ ಬಂದು ಮಾಡು ಅಂತ ಹೇಳಿ ನನ್ನ ಅಟೊದ ಗ್ಲಾಸ ಒಡೆದು, ಅದರಲ್ಲಿ ಕೆಲವರು ನನಗೆ ಅಟೊದಿಂದ ಹೊರಗೆ ಎಳೆದುಕೊಂಡು ತಮ್ಮ ಕೈಗಳಿಂದ ನನ್ನ ಮುಖದ ಮೇಲೆ ಮೈ ಮೇಲೆ ಹೊಡೆದು ಗುಪ್ತಗಾಯ ಪಡಿಸಿದ್ದು, ನಂತರ ಸದರಿಯವರು ನನ್ನ ಅಟೊಕ್ಕೆ ಕಟ್ಟಿದ ಕಾಂಗ್ರೇಸ್ ಪಕ್ಷದ ಬ್ಯಾನರ ಹರಿದು ಹಾಕಿದ್ದು, ಅಟೊಕ್ಕೆ ಕಟ್ಟಿದ ಕಾಂಗ್ರೇಸ್ ಪಕ್ಷದ ದ್ವಜಾ ಕಿತ್ತು ಹಾಕಿದ್ದು, ಮತ್ತು ಪ್ರಚಾರ ಕುರಿತು ಅಟೊಕ್ಕೆ ಕಟ್ಟಿದ ಬುಂಗಾ (ಸ್ಪೀಕರ) ಕಿತ್ತು ಹಾಕಿ ಬುಂಗಾ ನೇಲಕ್ಕೆ ಹೊಡೆದು ಅದರ ಯುನಿಟ ಮುರಿದು ಅಟೊದ ಗ್ಲಾಸ, ಸ್ಪೀಕರ ಬುಂಗಾ ಒಡೆದು ಅಂದಾಜ 9,000/-ರೂ ನನಗೆ ಹಾನಿ ಮಾಡಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀ ಮಹ್ಮದ ಮೌಲಾ ತಂದೆ ಗುಡುಸಾಬ ಮುತಾವಲ್ಲಿ ಸಾ: ಮೌಲಾಲಿ ದರ್ಗಾ ಶೇಟ್ಟಿ ಕಾಂಪ್ಲೇಕ್ಸ್ ಹತ್ತಿರ ಆಳಂದ ರೋಡ ಕಲಬುರಗಿ ರವರು ದಿನಾಂಕ: 13/04/2019 ರಂದು 4-00 ಪಿ.ಎಂ ಸುಮಾರಿಗೆ ನಾನು ಶೇಟ್ಟೆ ಕಾಂಪ್ಲೇಕ್ಸ್ ಹತ್ತಿರ ನಿಂತಿರುವಾಗ ನನ್ನ ಗೆಳೆಯನಾದ ಸೈಯದ ತಂದೆ ಮಹ್ಮದ ಸಲೀಂ ಮಗರಿಬಸಾಬ ಇತನು ತನ್ನ ಮೋಟಾರ ಸೈಕಲ ನಂ. ಕೆಎ-39 ಕ್ಯೂ-7309 ನೇದ್ದನ್ನು ತೆಗೆದುಕೊಂಡು ನನ್ನ ಹತ್ತಿರ ಬಂದನು. ಆಗ ನಾನು ಸೈಯದ ಇತನಿಗೆ ನನ್ನ ಗೆಳೆಯನಾದ ವೇಂಕಟ ಇತನು ಗದಲೇಗಾಂವ ಕಲ್ಯಾಣ ಮಂಟಪದ ಹತ್ತಿರ ಇರುತ್ತಾನೆ. ಅವನ ಹತ್ತಿರ ಹೋಗಿ ಬರೋಣ ಅಂತಾ ಹೇಳಿದೆನು. ಆಗ ಸೈಯದ ಮೋಟಾರ ಸೈಕಲ ಚಾಲು ಮಾಡಿದಾಗ ಅವನ ಹಿಂದೆ ನಾನು ಕುಳಿಕೊಂಡು ಗದಲೇಗಾಂವ ಕಲ್ಯಾಣ ಮಂಟಪ ಹತ್ತಿರ ಹೋದೆವು. ಅಲ್ಲಿ ಹೋಗಿ ನೊಡಲು ವೇಂಕಟ ಇತನು ಇರಲಿಲ್ಲ. ಕಲ್ಯಾಣ ಮಂಟಪದ ಹಿಂದಿನ ಗೇಟ ಹತ್ತಿರ 4-15 ಪಿ.ಎಂ ಸುಮಾರಿಗೆ ಹೋಗಿ ನೊಡಲು ಸುಮಾರು 15-20 ಜನರು ಅಲ್ಲಿ ಕುಳಿತುಕೊಂಡಿದ್ದರು. ಆಗ ನಾವು ಅವರಲ್ಲಿ ವೇಕಂಟ ಇತನು  ಕುಳಿತುಕೊಂಡಿರಬಹುದು ಅಂತಾ ಅವರ ಹತ್ತಿರ ಹೋಗಿ ನೊಡಲು ಅಲ್ಲಿ ವೇಂಕಟ ಇರಲಿಲ್ಲ. ಆಗ ಆ ಗುಂಪಿನಲ್ಲಿದ್ದ ಒಬ್ಬನು  ಏ ಬೊಸಡಿ ಮಕ್ಕಳಾ ನಮಗೇನು ದುರುಗುಟ್ಟಿ ನೋಡುತ್ತಿದ್ದಿರಿ  ಅಂತಾ ಅಂದನು. ಆಗ ನಾನು ಯಾಕೆ ಬೈಯುದ್ದಿರಿ ನಮ್ಮ ಸ್ನೇಹಿತ ವೇಂಕಟ ಇತನು ಇದ್ದಾನೆನೋ ಅಂತಾ ನೋಡುತ್ತಿದ್ದೇವೆ ಅಂತಾ ಅಂದಾಗ ಆತನು ನಮಗೆ ಎದುರು ಮಾತನಾಡುತ್ತಿಯಾ ಬೋಸಡಿಕೆ ಅಂತಾ ಅಂದವನೇ ತನ್ನ ಕೈಯಲ್ಲಿದ್ದ ಬಿಯರ್ ಬಾಟಲಿ ತೆಗೆದುಕೊಂಡು ನನ್ನ ತಲೆಯ ಹಿಂಬಾಗಕ್ಕೆ ಹೊಡೆದು ಭಾರಿ ರಕ್ತಗಾಯಗೊಳಿಸಿದನು. ಅವರಲ್ಲಿದ್ದ ಇನ್ನೊಬ್ಬನು ಜಾಸ್ತಿ ಎದುರು ಮಾತಾಡುತ್ತಿಯಾ ಅಂತಾ ಅಂದು ಕಲ್ಲಿನಿಂದ ನನ್ನ ಬಲಗಾಲ ಮೊಳಕಾಲ ಮೇಲೆ ಹೊಡೆದು ರಕ್ತಗಾಯ ಗೊಳಿಸಿದನು. ಉಳಿದವರೆಲ್ಲ ಬೈಯುತ್ತಾ ಕೈಯಿಂದ ನನ್ನ ಮೈಕೈಗೆ ಹೊಡೆದು ಗುಪ್ತಗಾಯ ಪಡಿಸಿದರು. ನನಗೆ ಹೊಡೆಯುದನ್ನು ಬಿಡಿಸಿಕೊಳ್ಳಲು ಬಂದ ನನ್ನ ಗೆಳೆಯನಾದ ಸೈಯದ ತಂದೆ ಮಹ್ಮದ ಸಲೀಂ ಇತನಿಗೂ ಸಹ ಅವರೆಲ್ಲರೂ ಕೂಡಿ ಕೈಯಿಂದ ಹೊಡೆಬಡೆ ಮಾಡಿದರು. ಆಗ ನಾವು ಚಿರಾಡ ಹತ್ತಿದ್ದಾಗ ನಮಗೆ ಹೊಡೆಯುವುದನ್ನು ಬಿಟ್ಟು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂಚಾವರಂ ಠಾಣೆ : ದಿನಾಂಕ 13-04-2019 ರಂದು 12.30 ಪಿ.ಎಮ್ ಗಂಟೆಗೆ ಶ್ರೀಮತಿ ಶೋಭಾರಾಣಿ ಗಂಡ ಶೇಖರ ಮಂಗಲಿ ಸಾ : ಕುಂಚಾಚರಂ ರವರು  ನೀರನ್ನು ತುಂಬಿಕೊಂಡು ಮನೆಗೆ ಬರುತ್ತಿರುವಾಗ  ರಾಮಲು ತಂದೆ ಪಪಾಯ ಸಂಗಡ ಇನ್ಒಬ್ಬ ಸಾ : ಕೊಂಚಾವರಂ ಕುಡಿಕೊಂಡು ಫಿರ್ಯಾದಿಗೆ  ತಡೆದು ನಿಲ್ಲಿಸಿ ಅವಾಚ್ಯವಾಗಿ ರಂಡಿ ಬೋಸಡಿ ಅಂತಾ ಬೈದು ಕೈಯಿಂದ ಮತ್ತು ಕಾಲಿನ ಚಪ್ಪಲಿಯಿಂದ ಕಪಾಳಕ್ಕೆ ಹೊಡೆದನು ಮತ್ತು ಸದರಿಯವಳ ಹೊಟ್ಟೆಗೆ ಹೊಡೆದು ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕೊಂಚಾವರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

13 April 2019

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ 2: ದಿನಾಂಕ-12/04/2019 ರಂದು ಬೆಳ್ಳಿಗೆ 8-30 ಗಂಟೆ ಸುಮಾರಿಗೆ ರಾಮ ಮಂದಿರ ದಿಂದ ನಾಗನಹಳ್ಳಿ ಕ್ರಾಸ್ ರಸ್ತೆಯಲ್ಲಿ ಬರುವ ಓಜಾ ಲೇಔಟ್ ಕ್ರಾಸ್ ಹತ್ತಿರ ರೋಡ ಮೇಲೆ ಆರೋಪಿ ಮಹೆಬೂಬ ಈತನು ತನ್ನ ಸೈಕಲ ಮೇಲೆ ಬಿದರಿನ ಬಡಿಗಿಗೆ  ಕೊಯಿತ್ತಾ ಕಟ್ಟಿಕೊಂಡು ನಿರ್ಲಕ್ಷತನದಿಂದ ನಾಗಹಳ್ಳಿ ರೋಡ ಕಡೆಗೆ ಸೈಕಲ್  ತಿರುಗಿಸಿ ರಾಮ ಮಂದಿರ ಕಡೆಯಿಂದ ಮೋಟಾರ ಸೈಕಲ ನಂ ಕೆಎ-32 ಇವ್ಹಿ-0724 ನೇದ್ದನ್ನು ಚಲಾಯಿಸಿಕೊಂಡು ಬರುತ್ತಿದ್ದ ಮೇಘಾ ಇವಳ ಕುತ್ತಿಗೆಗೆ ಕೊಯಿತ್ತಾ ಹತ್ತಿ ಭಾರಿ ರಕ್ತಗಾಯವಾಗಿದ್ದು ಸದರಿಯವಳಿಗೆ ಉಪಚಾರ ಕುರಿತು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮದ್ಯದಲ್ಲಿ 8-45 ಗಂಟೆ ಸುಮಾರಿಗೆ ಮೃತಪಟ್ಟಿ ರುತ್ತಾಳೆ. ಸದರ ಘಟನೆಗೆ ಕಾರಣನಾದ ಮಹೆಬೂಬ ಈತನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕೆಂದು ಶ್ರೀ ವರೇಶ ತಂದೆ ಚಂದ್ರಕಾಂತ ಪಡಶೆಟ್ಟಿ ಸಾ : ಕರುಣೇಶ್ವರ ಕಾಲೂನಿ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 2 ರಲ್ಲಿ ಪ್ರಕರಣ ದಾಖಲಾಗಿದೆ.  
ಸಂಚಾರಿ ಠಾಣೆ 1: ಶ್ರೀಮತಿ ಭಾಗ್ಯಶ್ರೀ @ ಭಾಗ್ಯಲಕ್ಷ್ಮಿ ರವರು ದಿನಾಂಕ 12-04-2019 ರಂದು ಬೆಳಿಗ್ಗೆ 9-15 ಗಂಟೆ ಸುಮಾರಿಗೆ ನನ್ನ ಪರೀಕ್ಷೆಗಳು ಇರುವದರಿಂದ ನನ್ನ ತಂದೆಯಾದ ಮಲ್ಲಿಕಾರ್ಜುನ ಇವರು ನನಗೆ ವಿ.ಜಿ.ವುಮೇನ್ಸ ಕಾಲೇಜಕ್ಕೆ ಬಿಡುವ ಸಲುವಾಗಿ ಮೋಟಾರ ಸೈಕಲ ನಂ ಕೆಎ-32/ಎಕ್ಸ-5758 ನೇದ್ದರ ಹಿಂದುಗಡ ನನಗೆ ಕೂಡಿಸಿಕೊಂಡು ಲಾಲಗೆರಿ ಕ್ರಾಸ ಮುಖಾಂತರವಾಗಿ ಕೋರ್ಟ ಕ್ರಾಸ ಕಡೆಗೆ ಮೋಟಾರ ಸೈಕಲ ಚಲಾಯಿಸಿಕೊಂಡು ಹೋಗುವಾಗ ದಾರಿ ಮದ್ಯ ಆನಂದ ಹೊಟೇಲ ಕ್ರಾಸ ಹತ್ತೀರ ರೋಡ ಮೇಲೆ ಮೋಟಾರ ಸೈಕಲ ನಂಬರ ಕೆಎ-32/ಇಎಮ್-9417 ನೇದ್ದರ ಸವಾರಳಾದ ಅಕ್ಷತಾ ಇವಳು ರಂಗ ಮಂದಿರ ಕಡೆಯಿಂದ ಎಸ.ಬಿ ಕಾಲೇಜ್ ಕಡೆಗೆ ಹೋಗುವ ಕುರಿತು ತನ್ನ ಮೋಟಾರ ಸೈಕಲ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಅಡ್ಡವಾಗಿ ಬಂದು ನಮ್ಮ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನ್ನ ತಂದೆಗೆ ಭಾರಿಗಾಯ ಹಾಗೂ ನನಗೆ ಗಾಯಗೊಳಿಸಿ ತಾನೂ ಗಾಯ ಹೊಂದಿದ್ದು ಸದರಿಯವಳ ಮೇಲೆ ಕಾನುನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 1 ರಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ಶ್ರೀ ಸಿದ್ದಾರೂಡ ತಂದೆ ಶಾಮರಾವ ಪರಸ್ತಿ ಸಾ : ಪಟ್ಟಣ ತಾ:ಜಿ: ಕಲಬುರಗಿ  ರವರು ಹಾಗು ನನ್ನ ಅಕ್ಕಳಾದ ಅಂಬಿಕಾ ಗಂಡ ಶಿವಲಿಂಗಪ್ಪಾ ಬಿರಾದಾರ ಇಬ್ಬರೂ ಕೂಡಿಕೊಂಡು ಮೊಟರ ಸೈಕಲ ನಂಬರ್ ಕೆಎ-16, ಇಇ-5673  ನೆದ್ದರ ಮೇಲೆ ಲಾಡಚಿಂಚೊಳಿ ಜಾತ್ರೆಯ ನಿಮಿತ್ಯ ದಿನಾಂಕ 11/04/2019 ರಂದು ಲಾಡಚಿಂಚೊಳಿ ಗ್ರಾಮಕ್ಕೆ ಹೋಗಿ ದೇವರಿಗೆ ಕಾಯಿ-ಕರ್ಪುರ ಮಾಡಿಕೊಂಡು ಅದೇ ಮೊಟರ್ ಸೈಕಲ ಮೇಲೆ ಲಾಡಚಿಂಚೋಳಿ ಗ್ರಾಮದಿಂದ ನಮ್ಮೂರಿಗೆ ಬರುವಾಗ ಸಾಯಂಕಾಲ ಅಂದಾಜು 0700 ಗಂಟೆಯ ಸುಮಾರಿಗೆ ಲಾಡಚಿಂಚೋಳಿ ಗ್ರಾಮದ ನೀರಿನ ಟ್ಯಾಂಕ ಹತ್ತಿರ ರೋಡಿನ ಮೇಲೆ ಕ್ರೂಸರ್ ನಂ ಕೆಎ-27, ಎಮ್-1655 ನೆದ್ದರ ಚಾಲಕನು ಲಾಡಚಿಂಚೋಳಿ ಕ್ರಾಸ್ ಕಡೆಯಿಂದ ತನ್ನ ವಶದಲ್ಲಿರುವ ಕ್ರೂಜರ್ ವಾಹನವನ್ನು ಅತೀವೇಗ ಹಾಗು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ನನ್ನ ಮೊಟರ್ ಸೈಕಲಗೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತಪಡಿಸಿ ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿಹೋದನು. ಸದರಿ ಅಪಘಾತದಲ್ಲಿ ನನಗೆ ಬಲಗಾಲಿನ ತೊಡೆ, ಮೋಳಕಾಲಿನ ಹತ್ತಿರ ಹಾಗು ಹಿಂಬಡಿಗೆ ಭಾರಿ ರಕ್ತಗಾಯ ಹಾಗು ಭಾರಿ ಗುಪ್ತಗಾಯಗಳಾಗಿರುತ್ತದೆ. ನನ್ನ ಸಂಗಡ ಇದ್ದ ನನ್ನ ಅಕ್ಕಳಾದ ಅಂಬಿಕಾ ಇವಳಿಗೆ ಬಲಗೈ ಮೊಣಕೈ ಹತ್ತಿರ ಗುಪ್ತಗಾಯ ಹಾಗು ತುಟಿಗೆ ರಕ್ತಗಾಯಗಳಾಗಿರುತ್ತವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಚುಣಾವಣೆ ನೀತಿಸಂಹಿತೆ ಉಲ್ಲಂಘನೆ ಪ್ರಕರಣ :
ನರೋಣಾ ಠಾಣೆ : ದಿನಾಂಕ:12/04/2019 ರಂದು ಬೆಳಿಗ್ಗೆ ಶ್ರೀ.ಪ್ರವೀಣ್ ತಂದೆ ಅಶೋಕ ಕುಮಾರ ಹೇರೂರ, ಸಾ||ಮನೆ ನಂ:2-631 ಸುಂದರ ನಗರ ಸೇಡಂ ರೋಡ್ ಕಲಬುರಗಿ, ಎಫ್.ಎಸ್.ಟಿ ಮುಖ್ಯಸ್ಥರು ಕಮಲಾಪೂರ, ಮಹಾಗಾಂವ ಮತ್ತು ನರೋಣಾ ಹೊಬಳಿ ರವರ 43-ಗುಲಬರ್ಗಾ ಗ್ರಾಮೀಣ ಮತಕ್ಷೇತ್ರದ ವ್ಯಾಪ್ತಿಗೆ ಬರುವ ನರೋಣಾ ಗ್ರಾಮದಲ್ಲಿ ದಿನಾಂಕ: 09.04.2019 ರಂದು ನಡೆದ ಬಿ.ಜೆ.ಪಿ ಪಕ್ಷದ ರಾಜಕೀಯ ಪ್ರಚಾರ ಸಭೆಗೆ ಉಲ್ಲೇಖಿತ (1) ರಂತೆ ಷರತ್ತುಗಳಿಗೆ ಒಳಪಟ್ಟು ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗಿರುತ್ತದೆ.      ಅದರಂತೆ ತಂಡದ ಮುಖ್ಯಸ್ಥರಾದ ಶ್ರೀ ತಿಪ್ಪಣ್ಣ ಸಿರಸಗಿ, ಶ್ರೀ ಶಿವಲಿಂಗಪ್ಪ ದ್ವಿ.ದ.ಸ, ಶ್ರೀ ರಾಜು ಡಿ.ಇ.ಓ ಗ್ರಾಮ ಪಂಚಾಯತ ಸಣ್ಣೂರ, ಬಸಲಿಂಗಪ್ಪ ಪಿ.ಸಿ ಶಹಾಬಾದ ಪೋಲಿಸ್ ಠಾಣೆ ಇವರುಗಳು ಸದರಿ ಕಾರ್ಯಕ್ರಮದಲ್ಲಿ ನಿಗದಿಪಡಿಸಿರುವಂತೆ ಚಿತ್ರಿಕರಣ ಮಾಡುತ್ತಿರುವ ಸಮಯದಲ್ಲಿ ಸಭೆಗೆ ಹಾಜರಾದ ಜನರಿಗೆ ಊಟದ ವ್ಯವಸ್ಥೆ ಮಾಡುವುದು ಚಿತ್ರಿಕರಣದಲ್ಲಿ ಕಂಡುಬಂದಿರುತ್ತದೆಂದು ಜಿಲ್ಲಾ ಸಮಿತಿಯು ವೀಕ್ಷಿಸಿ ಇದು ನೀತಿ ಸಂಹಿತೆ ಉಲ್ಲಂಘನೆ ಯಾಗಿರುತ್ತದೆಂದು, ಉಲ್ಲೇಖೀತ (2) ರಂತೆ ಕಾರ್ಯಕ್ರಮ ಆಯೋಜಕರಾದ ಶ್ರೀ ಗುರುಸಿದ್ದಯ್ಯ ತಂ. ಛತ್ರಯ್ಯ ಇವರ ಮೇಲೆ ದೂರು ದಾಖಲಿಸಲು ಸೂಚಿಸಿರುವುದರಿಂದ ಕಮಲಾಪೂರ ಮಹಾಗಾಂವ ಮತ್ತು ನರೋಣಾ ಹೊಬಳಿ ಮುಖ್ಯಸ್ಥರಾದ ನಾನು ಶ್ರೀ ಪ್ರವೀಣ ಹೇರೂರ ಮುಖ್ಯಸ್ಥರು ಹಾಗೂ ತಂಡದ  ಶ್ರೀ ಪ್ರೇಮಾನಂದ ಚಿಂಚೋಳಿಕರ ಪ್ರ.ದ.ಸ, ಶ್ರೀ ನಾಗೇಂದ್ರ ಸಿಪಿಸಿ 86 ಗ್ರಾಮೀಣ ಪೋಲಿಸ್ ಠಾಣೆ  ಶ್ರೀ ಅಲಿಮೊದ್ದಿನ ಅವರಾದ ಗ್ರಾಮ ಪಂಚಾಯತ ಆಗಿದ್ದು ದಿನಾಂಕ: 09.04.2019 ರಂದು ನಮ್ಮ ತಂಡದ ಸಮಯ 02:00 ರಿಂದ ರಾತ್ರಿ 10:00 ಗಂಟೆ ಆಗಿದ್ದು ಅಂದು ಏಕ ಕಾಲಕ್ಕೆ 4-5 ಕಡೆ ಬಿ.ಜೆ.ಪಿ ಪಕ್ಷದ ರಾಜಕೀಯ ಪ್ರಚಾರ ಸಭೆಗಳು ಇದ್ದು, ಆ ಸಂದರ್ಭದಲ್ಲಿ ಬೆಳಮಗಿ ಗ್ರಾಮದಲ್ಲಿ ನಡೆಯುವ ಸಭೆಗೆ ಕಾರ್ಯ ನಿರ್ವಹಿಸಲು ಮೇಲಾಧಿಕಾರಿಗಳ ಆದೇಶದ ಮೇಲೆ ಕೆಲಸ ನಿರ್ವಹಿಸಿದ್ದೇವೆ. ದಿನಾಂಕ: 09.04.2019 ರಂದು ನರೋಣಾ ಗ್ರಾಮದ ಕಾರ್ಯಕ್ರಮ ವಿ.ಎಸ್.ಟಿ. ತಂಡ ಚಿತ್ರೀಕರಣ ಮಾಡಿದ್ದು, ಜಿಲ್ಲಾ ಸಮಿತಿಯಲ್ಲಿ ಪರಿಶೀಲಿಸಿದಾಗ ಚಿತ್ರೀಕರಣದಲ್ಲಿ ಸಭೆಗೆ ಹಾಜರಾದ ಜನರಿಗೆ ಊಟ ವ್ಯವಸ್ಥೆ ಮಾಡಿರುವುದು ಕಂಡು ಬಂದಿರುವುದರಿಂದ ದಿನಾಂಕ: 10.04.2019 ರಂದು ಕಾರ್ಯಕ್ರಮ ಆಯೋಜಕರ ಮೇಲೆ ದೂರು ದಾಖಲಿಸಲು ಸೂಚಿಸಿರುವುದರಿಂದ ಶ್ರೀ ಗುರುಸಿದ್ದಯ್ಯ ತಂ. ಛತ್ರಯ್ಯ ಮು||ನರೋಣ ಮೋ.ಸಂ:9844811147, ಆಯೋಜಕರು ಬಿ.ಜೆ.ಪಿ ಪಕ್ಷ ಇವರ ಮೇಲೆ ಭಾರತ ದಂಡ ಸಂಹಿತೆ ಕಾಯ್ದೆ (ಕಅ) ನಿಯಮ 171 (ಇ) ಹಾಗೂ ಪ್ರಜಾ ಪ್ರತಿನಿಧಿ ಕಾಯ್ದೆ 1951  ರ ನಿಯಮ 123(1) ರ ಅಡಿಯಲ್ಲಿ ದೂರು ದಾಖಲಿಸಿಕೊಂಡು ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.