POLICE BHAVAN KALABURAGI

POLICE BHAVAN KALABURAGI

24 January 2019

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ರುಬಿನಾ ಬೇಗಂ ಗಂಡ ಅಬ್ದುಲ ಸತ್ತಾರ ಸಾ; ಬೇಲೂರ (ಕೆ) ತಾ;ಕಮಲಾಪೂರ ಜಿ; ಕಲಬುರಗಿ ಸದ್ಯ ಜವರಹಿಂದ ಸ್ಕೂಲ್ ಹತ್ತಿರ ನಯಾಮೊಹಲ್ಲಾ ಕಲಬುರಗಿ ರವರ ಗಂಡ ಹೊರಗಡೆ ಕೆಲಸಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋದನು ರಾತ್ರಿಯಾದರು ನನ್ನ ಗಂಡ ಮನೆಗೆ ಬರಲಿಲ್ಲಾ ದಿನಾಂಕ.16-01-2019 ರಂದು ಸಾಯಂಕಾಲ 4-30 ಗಂಟೆಯ ಸುಮಾರಿಗೆ ಕಮಲಾಪೂರದ ನಮ್ಮ ಸಂಭಂದಿಕನಾದ ಅಬ್ದುಲ ಸತ್ತಾರ  ತಂದೆ ರೆಹಮಾನ ಚೇರಮನ  ಇತನು ನನಗೆ ಫೋನ ಮಾಡಿ ತಿಳಿಸಿದ್ದು ಏನೆಂದರೆ ನನ್ನ ಗಂಡ ಅಬ್ದುಲ ಸತ್ತಾರ ಇವರು ಅಪಘಾತದಲ್ಲಿ ಗಾಯಗೊಂಡಿದ್ದು ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಐ.ಸಿ.ಯು.ವಾರ್ಡನಲ್ಲಿ ಉಪಚಾರ ಪಡೆಯುತಿದ್ದಾನೆ ಬೇಗನೆ ಬರುವಂತೆ ತಿಳಿಸಿದನು ಆಗ ನನು ಮತ್ತು ನನ್ನ ಅಕ್ಕ ರಿಹಾನ ಬೇಗಂ ಇಬ್ಬರು ಕೂಡಿಕೊಂಡು ಕಲಬುರಗಿ ಸರಕಾರಿ ಆಸ್ಪತ್ರೆಯ ಐ.ಸಿ.ಯು. ವಾರ್ಡಗೆ ಹೋಗಿ ನೋಡಲಾಗಿ ನನ್ನ ಗಂಡನಿಗೆ ಗುರುತಿಸಿದ್ದು ಮಾತಾಡುವ ಸ್ಥಿತಿಯಲ್ಲಿ ಇರಲಿಲ್ಲಾ ಅವನಿಗೆ ಹಣೆಯ ಬಲಭಾಗದಲ್ಲಿ ಚರಚಿದ ಕಂದು ಗಟ್ಟಿದಗಾಯ,ಬಲಗಣ್ಣಿನ ಪಕ್ಕದಲ್ಲಿ ಮೆಲಕಿನ ಪಕ್ಕದಲ್ಲಿ ಚರಚಿ ರಕ್ತಗಾಯವಾಗಿದ್ದು , ಬಲಕಿವಿಯ ಕೆಳಭಾಗದಲ್ಲಿ ಗುಪ್ತ ಪೆಟ್ಟಾಗಿದ್ದು ಎದೆಯ ಭಲಭಾಗದಲ್ಲಿ ಅಲ್ಲಲ್ಲಿ ಚರ್ಚಿದ ಕಂದು ಗಂಟಿದ ಗಾಯಗಳಾಗಿರುತ್ತವೆ, ಎಡಬುಜಕ್ಕೆ ಅಲಲ್ಲಿ ಚರಚಿದಗಾಯ, ಬಲಗಾಲು ಮೊಳಕಾಲು ಕೆಳಗೆ ಕಂದುಗಟ್ಟಿದ ಚರಚಿದ ಗಾಯಗಳಾಗಿರುತ್ತವೆ.ಆಗ ನನ್ನಗಂಡ ಅಬ್ದುಲಸತ್ತಾರೆನಿಗೆ ಅಂಬುಲೆನ್ಸನಲ್ಲಿ ಹಾಕಿ ಆಸ್ಪತ್ರೆಗೆ ಕಳುಹಿಸಿದವರು ಹಾಜರಿದ್ದು ಅವನ ಹೆಸರು ಅಬ್ದುಲರಶೀದ ತಂದೆ ಸೈಯದ ಇಮಾಮ ಅಂತಾ ಗೊತ್ತಾಗಿದ್ದು ಅವನಿಗೆ ವಿಚಾರಿಸಲು ದಿನಾಂಕ. 15-01-2019 ರಂದು.ಲಂಗಾರಹನುಮಾನ ನಗರ ಕ್ರಾಸ ರಿಂಗ ರೋಡ ಮೇಲೆ ಯಾವುದೋ ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ಓಡಿಸಿಕೊಂಡು ಬಂದು ನನ್ನ ಗಂಡನಿಗೆ ಡಿಕ್ಕಿಹೊಡೆದು ಭಾರಿ ಗಾಯಗೊಳಿಸಿ ತನ್ನ ವಾಹನ ಹಾಗೆ ಓಡಿಸಿಕೊಂಡು ಹೊಗಿರುತ್ತಾನೆ ಅಂತಾ ತಿಳಿಸಿದ್ದು  ಅದು ನಿಜವಿದ್ದು  ದಿನಾಂಕ. 22-02-2019 ರಂದು ಮಧ್ಯಾಹ್ನ 2-00 ಪಿ.ಎಂ.ದ ಸುಮಾರಿಗೆ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ಉಪಚಾರ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ
ಅಫಜಲಪೂರ ಠಾಣೆ : ಶ್ರೀ ಹಣಮಂತ ತಂದೆ ಲಕ್ಕಪ್ಪ ಜಮಾದಾರ ಸಾ||ಶಿವಪೂರ ತಾ||ಅಫಜಲಪೂರ ರವರು ತಮ್ಮ  ಗ್ರಾಮದ ಸಿದ್ದಪ್ಪ ತಂದೆ ಗುರಪ್ಪಾ ಜಮಾದಾರ ರವರ ಹೋಲ ಪಾಲದಿಂದ ಮಾಡಿದ್ದು ಇರುತ್ತದೆ ಸಧ್ಯ ಸದರಿ ಹೊಲದಲ್ಲಿ ಕಬ್ಬಿನ ಬೆಳೆ ಇರುತ್ತದೆ ನಿನ್ನೆ ದಿನಾಂಕ 21/01/2019 ರಂದು ರಾತ್ರಿ 9.00 ಗಂಟೆ ಸುಮಾರಿಗೆ ನಾನು ನಮ್ಮ ಮನೆಯಲ್ಲಿ ಊಟ ಮಾಡಿ ಕಬ್ಬಿಗೆ ನೀರು ಬಿಡಲು ನನ್ನ ಸಂಗಡ ನನ್ನ ಗೆಳೆಯರಾದ ಮಲ್ಕಪ್ಪ ತಂದೆ ಶಂಕರ ಜಮಾದಾರ, ಪ್ರಕಾಶ ತಂದೆ ಶರಣಪ್ಪ ಜಮಾದಾರ, ರಾಮಣ್ಣ ತಂದೆ ಸಿದ್ದಪ್ಪ ಜಮಾದಾರ ಹಾಗು ಲಕ್ಷಣ ತಂದೆ ಕುಪ್ಪಣ್ಣ ಜಮಾದಾರ ರವರೇಲ್ಲರು ಕೂಡಿ   ಹೊಲಕ್ಕೆ ಹೋಗುತಿದ್ದಾಗ  ಹೊಳೆಯ ಹತ್ತಿರ ಮರಳು ಟೆಂಡರ ಪಾಯಿಂಟ್ ಆಫಿಸ್ ಹತ್ತಿರ ರಾತ್ರಿ 10.00 ಗಂಟೆ ಸುಮಾರಿಗೆ ಹೋದಾಗ 6 ಜನರು ನಾವು ಹೋಗುವ ದಾರಿಗೆ ಟಿಪ್ಪರ ಅಡ್ಡವಾಗಿ ನಿಲ್ಲಿಸಿದರು ನಾವು ಸದರಿಯವರ ಹತ್ತಿರ ಹೋಗಿ ನೋಡಲಾಗಿ ಅವರು ನಮಗೆ ಪರಿಚಯದವರೇಯಾದ ದೇವಣಗಾಂವ ಗ್ರಾಮ ರವಿ ಗಂಗನಳ್ಳಿ, ಮಲ್ಲು ಮೇತ್ರೆ, ಶರಣು ಹಾಳಕಿ, ಸದ್ದಾಮ್ ಅವಟೆ  ಹಾಗು ಇನ್ನೂ ಇಬ್ಬರ ಹೆಸರು ನನಗೆ ಗೋತ್ತಿರುವುದಿಲ್ಲ ನಾವು ಸದರಿಯವರಿಗೆ ನಾವು ಹೊಲಕ್ಕೆ ಹೋಗುವದಿದೆ ನೀವು ಈ ರೀತಿಯಾಗಿ ಟಿಪ್ಪರ ಅಡ್ಡಲಾಗಿ ನಿಲ್ಲಿಸಿದರೆ ನಾವು ಹೇಗೆ ಹೋಗುವದು ಅಂತ ಹೇಳುತಿದ್ದಾಗ ಮಲ್ಲು ಈತನು ನನ್ನ ಎದೆಯ ಮೇಲಿನ ಅಂಗಿ ಹಿಡಿದು ನನಗೆ ತಡೆದು ನಿಲ್ಲಿಸಿ ರಂಡಿ ಮಗನೆ ನಮಗೆ ಎದುರ ಮಾತಾಡ್ತಿ ಅಂತ ಅಂದಾಗ ರವಿ ಈತನು ತನ್ನ ಟೊಂಕದ ಬೆಲ್ಟನಿಂದ ಪಿಸ್ತೂಲ ತಗೆದು ನನ್ನ ಎಡ ಮೆಲಕಿನ ಹತ್ತಿರ ಹಿಡಿದನು ಮಲ್ಲು ಈತನು ತನ್ನ ಪ್ಯಾಂಟಿನ ಜೆಬಿನಿಂದ ಪಿಸ್ತೂಲ ತಗೆದು  ನನ್ನ ಎಡ ಮಗ್ಗಲಿನ ಹೊಟ್ಟೆಯ ಹತ್ತಿರ ಹಿಡಿದನು  ಶರಣು ಈತನು ನನ್ನ ಬೆನ್ನ ಹಿಂದೆ ತನ್ನ ಹತ್ತಿರ ಇದ್ದ ಪಿಸ್ತೂಲನ್ನು ತಗೆದು ನನ್ನ ತಲೆಯ ಹತ್ತಿರ ಹಿಡಿದನು ಆಗ ಅಲ್ಲೆ ಇದ್ದ  ಮಲ್ಕಪ್ಪ ಜಮಾದಾರ, ಪ್ರಕಾಶ ಜಮಾದಾರ, ರಾಮಣ್ಣ ಜಮಾದಾರ ಹಾಗು ಲಕ್ಷಣ ಜಮಾದಾರ ರವರು ಬಂದು ಸದರಿಯರಿಗೆ ತಿಳುವಳಿಕೆ ಹೇಳುತಿದ್ದಾಗ ಸದ್ದಾಮ್ ಈತನು ಅಲ್ಲೆ ಇದ್ದ ಒಂದು ಬಡಿಗೆಯಿಂದ ನನ್ನ ಎಡಗಣ್ಣಿನ ಪಕ್ಕ ಹೊಡೆದು ರಕ್ತಗಾಯ ಪಡಿಸಿದ ಆಗ ನಾನು ಕೆಳಗೆ ಬಿದ್ದಾಗ ಎಲ್ಲರು ಮನ ಬಂದಂತೆ ನನ್ನ ಹೊಟ್ಟೆಗೆ ಎದೆಗೆ ತಮ್ಮ ಕೈಯಿಂದ ಹೊಡೆದು  ಕಾಲಿನಿಂದ ಒದ್ದು ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಧಾನಮ್ಮಾ ಗಂಡ ಶಿವಶರಣಪ್ಪ ಕುಮಸಗಿ ಸಾ||ಅಳ್ಳಗಿ(ಬಿ) ರವರ ಗಂಡನಾದ ಶಿವಶರಣಪ್ಪ ರವರ ಹೆಸರಿನಲ್ಲಿ ಅಳ್ಳಗಿ (ಬಿ) ಸಿಮಾಂತರ ಹೊಲ ಸರ್ವೆ ನಂ 259 ರಲ್ಲಿ  10 ಏಕರೆ ಹೊಲ ಇರುತ್ತದೆ   ನನ್ನ ಗಂಡ ಒಕ್ಕಲುತನ ಕೆಲಸಕ್ಕೆಂದು ಅಫಜಲಪೂರ Corporation Bank  ದಲ್ಲಿ 4,00,000/-ರೂಪಾಯಿ ಸಾಲ ಹಾಗು ಖಾಸಗಿಯಾಗಿ 6,00,000/-ರೂಪಾಯಿ ಸಾಲ ಮಾಡಿಕೋಂಡಿದ್ದು ಇರುತ್ತದೆ ಈ ವರ್ಷ ಮಳೆ ಸರಿಯಾಗಿ ಇಲ್ಲದ ಕಾರಣ ಹೊಲದಲ್ಲಿ ಬೆಳೆ ಬೆಳೆದಿರುವುದಿಲ್ಲ ನನ್ನ ಗಂಡ ಈ ಸಲ ಮಳೆ ಬಂದಿಲ್ಲ ಸಾಲ ಹೇಗೆ ಮರಳಿಸುವದು ಅಂತ ನನ್ನ ಮುಂದೆ ಆಗಾಗ ಹೇಳುತಿದ್ದರು ನಾನು ಹೇಗಾದರು ಮಾಡಿ ಸಾಲ ಮುಟ್ಟಿಸಿದರಾಯಿತು ಅಂತ ಹೇಳಿದರು ನನ್ನ ಗಂಡ ಹೇಳದೆ ಅದೆ ಚಿಂತೆಯಲ್ಲಿ ಇರುತಿದ್ದರು  ದಿನಾಂಕ 22/01/2019 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ನಾನು ನನ್ನ ಗಂಡ ಇಬ್ಬರು ಮನೆಯಲಿದ್ದಾಗ ನನ್ನ ಗಂಡ ಸಾಲ ಹೇಗೆ ಮುಟ್ಟಿಸಲಿ ನನಗೆ ಜೀವನ ಸಾಕಾಗಿದೆ ಅಂತ ಹೇಳಿದರು ನಾನು ಚಿಂತೆ ಮಾಡಬೇಡಿ ಅಂತ ಹೇಳಿದ್ದು ನನ್ನ ಗಂಡ ಹೊಲಕ್ಕೆ ಹೋಗಿ ಬರುತ್ತೇನೆ ಅಂತ ಹೇಳಿ ಹೋಗಿರುತ್ತಾರೆ. ಇಂದು 1.00 ಪಿಎಮ್ ಸುಮಾರಿಗೆ ನಮ್ಮ ಗ್ರಾಮದ ಮಂಜುನಾಥ ತಂದೆ ಶಿವಶಂಕರ ನಿಂಬಾಳ ರವರು ನಮ್ಮ ಮನೆಗೆ ಬಂದು ನನಗೆ ತಿಳಿಸಿದ್ದೆನೆಂದರೆ ನಾನು ಬೋರಿ ಹಳ್ಳದ ಹತ್ತಿರ ನಮ್ಮ  ಮೋಟಾರ ಚಾಲು ಮಾಡಲು ಹೋದಾಗ ಬೋರಿ ಹಳ್ಳದ ಹತ್ತಿರ ನಿಮ್ಮ ವಿದ್ಯೂತ್ ಮೋಟಾರ ಹತ್ತಿರ ಯಾರೋ ಬಿದ್ದಿದ್ದರು ನಾನು ಸಮೀಪ ಹೋಗಿ ನೋಡಲಾಗಿ ಸದರಿ ವ್ಯಕ್ತಿ ನಿಮ್ಮ ಗಂಡ ಶಿವಶರಣಪ್ಪ ರವರಿದ್ದು ವಿದ್ಯೂತ್ ತಗುಲಿ ಮೃತ ಪಟ್ಟಿರುತ್ತಾರೆ ಅಂತ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

22 January 2019

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ 21/01/2019 ರಂದು  ಶ್ರೀ ಮಂಜುನಾಥ ತಂದೆ ಕಲ್ಯಾಣರಾವ ಬರುಡೆ ಸಾ : ರಾಮತೀರ್ಥ ನಗರ ಆಳಂದ ಚಕ್ಕಪೋಸ್ಟ ಕಲಬುರಗಿ  ರವರು ಆಳಂದ ಪಟ್ಟಣದ ಅಕ್ಕ ಮಾಹಾದೇವಿ ಕಾಲೇಜನಲ್ಲಿ ಡಿಗ್ರಿ ಪರಿಕ್ಷೇ ಸಂಬಂಧವಾಗಿ ಮೀಟಿಂಗ ಹಾಜರಾಗಲು ತನ್ನ ಹೊಂಡಾ ಸೈನ  KA 32 EG 4334 ರ ಹಿಂದೆ ತಮ್ಮ ಕಾಲೇಜನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಬಿ.ಎ.ಎರಡನೇ ವರ್ಷದ ಹುಡುಗ ಶರಣಪ್ಪ ತಂದೆ ಜಗದೇವಪ್ಪ ಅಂಕಲಗಿ ಸಾ: ಕಲ್ಲಬೇನೂರ ಗ್ರಾಮ ಇತನನ್ನು  ಕೂಡಿಸಿಕೊಂಡು ಆಳಂದಕ್ಕೆ ಹೋಗಿ ಮೀಟಿಂಗ ಮುಗಿದ ನಂತರ ವಾಪಸ್ಸು ಕಲಬುರಗಿ ಕಡೆ ತನ್ನ ಮೋಟಾರ ಸೈಕಲ ಹಿಂದೆ ಶರಣಪ್ಪ ಅಂಕಲಗಿ ಇತನನ್ನು  ಕೂಡಿಸಿಕೊಂಡು  ತನ್ನ ಸೈಡ ಹಿಡಿದುಕೊಂಡು ರೋಡ ಬದಿಯಿಂದ ನಡೆಸುತ್ತಾ ಸುಂಟನೂರ ಕ್ರಾಸ ದಾಟಿ  ಅರ್ಧ ಕಿ.ಮೀ. ದೂರ ಶಿವಶರಣಪ್ಪ ಬುಳ್ಳಾ ಇವರ ಹೊಲದ ಹತ್ತಿರ ಬಂದಾಗ ಎದುರುನಿಂದ  ಯಾವುದೋ ಒಬ್ಬ ವಾಹನ ಚಾಲಕ  ತನ್ನ ವಶದಲ್ಲಿದ್ದ ವಾಹನವನ್ನು  ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ಹಾಗೂ ಅಡ್ಡಾತಿಡ್ಡಿಯಾಗಿ ನಡೆಸುತ್ತಾ ತನ್ನ ಸೈಡಿಗೆ ಹೋಗದೇ ನನ್ನ ಸೈಡಿಗೆ ಬಂದು ನನ್ನ ಮೋಟಾರ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದಾಗ ಇಬ್ಬರು ಮೋಟಾರ ಸೈಕಲದೊಂದಿಗೆ ರೋಡಿನ ಮೇಲೆ ಬಿದ್ದೇವು. ಅಪಘಾತ ಪಡಿಸಿದ ಯಾವುದೋ ವಾಹನ ಚಾಲಕ  ಸ್ವಲ್ಪ ಮುಂದೆ ಹೋಗಿ ವಾಹನ ನಿಲ್ಲಿಸಿದನು. ಅಪಘಾತಪಡಿಸಿದ ವಾಹನ ನಂಬರ ನೋಡಬೇಕುನ್ನುಷ್ಟರಲ್ಲಿ ವಾಹನ ಚಾಲು ಮಾಡಿಕೊಂಡು ಆಳಂದ ಕಡೆಗೆ ಓಡಿಸಿಕೊಂಡು ಹೋದನು. ಇದರಿಂದಾಗಿ ನನಗೆ ಅಪಘಾತಪಡಿಸಿದ ವಾಹನ ಮತ್ತು ಅದರ ನಂಬರ ನೋಡಲು ಆಗಿರುವುದಿಲ್ಲಾ. ಈ ಅಪಘಾತದಿಂದಾಗಿ ನನಗೆ ಮತ್ತು ಶರಣಪ್ಪ ಅಂಕಲಗಿ ಇಬ್ಬರಿಗೂ ಭಾರಿ ರಕ್ತಗಾಯಗಳಾಗಿದ್ದು. ಶರಣಪ್ಪ ಅಂಕಲಗಿ ಇತನಿಗೆ ಅವನ ಬಲತಲೆಗೆ, ಬಲಗಣ್ಣಿನ ಹತ್ತಿರ, ಗದ್ದಕ್ಕೆ ಮತ್ತು ಬಲಗಾಲ ತೊಡೆ ಮೂಳೆ ಮುರಿದು ಮಾಂಸ ಖಂಡ ಹೊರ ಬಂದು  ಭಾರಿ ರಕ್ತಗಾಯವಾಗಿ ಬೇಹುಷ ಸ್ಥಿತಿಯಲ್ಲಿ ಬಿದ್ದಿದ್ದನು. ಈ ವಿಷಯ ಕಾರಿನಲ್ಲಿ ಹೊರಟ ನಮ್ಮ ಪ್ರಿನ್ಸಿಪಾಲ ಅಂಬಾರಾವ ಹಾಗರಗಿ ಇವರಿಗೆ ಪೋನ ಮಾಡಿ ತಿಳಿಸಿದಾಗ ಅವರು ಸ್ಥಳಕ್ಕೆ ಬಂದು ನಮಗೆ ಆದ ಗಾಯಗಳು ನೋಡಿ  108 ಅಂಬುಲೈನ್ಸ ಗಾಡಿಗೆ ಪೋನ ಮಾಡಿ  ವಿಷಯ ತಿಳಿಸಿದಾಗ ಸ್ವಲ್ಪ ಸಮಯದಲ್ಲಿ 108 ಅಂಬುಲೈನ್ಸ ಗಾಡಿ ಬರಲು ಅದರಲ್ಲಿ ನನಗೆ ಮತ್ತು ಶರಣಪ್ಪ ಅಂಕಲಗಿ ಇಬ್ಬರಿಗೂ ಹಾಕಿಕೊಂಡು  ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿ ರಾತ್ರಿ 08-30 ಗಂಟೆಗೆ ತಂದಿದ್ದು ವೈದ್ಯರು ಶರಣಪ್ಪ ಇತನಿಗೆ ನೋಡಿ ಈಗಾಗಲೇ ಮೃತಪಟ್ಟಿದ್ದಾನೆ ಅಂತಾ ತಿಳಿಸಿರುತ್ತಾರೆ. ಕಾರಣ ಈ ಮೇಲೆ ಹೇಳಿದಂತೆ ನನಗೆ ಮತ್ತು ಶರಣಪ್ಪ ಇಬ್ಬರಿಗೂ ಅಪಘಾತಪಡಿಸಿ ನನಗೆ ಭಾರಿ ರಕ್ತಗಾಯ ಮತ್ತು ಶರಣಪ್ಪ ಇತನಿಗೆ  ಮರಣವನ್ನುಂಟು ಮಾಡಿ ಹಾಗೇ ಓಡಿಸಿಕೊಂಡು ಹೋದ ಯಾವುದೋ ವಾಹನ ಮತ್ತು ಅದರ ಚಾಲಕನನ್ನು ಪತ್ತೆ ಹಚ್ಚಿ ಅವನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 21.01.2019 ರಂದು ಸಾಯಂಕಾಲ 4-00 ಗಂಟೆ  ಸುಮಾರಿಗೆ  ಬಬ್ಲೂ ಇತನು ಹಳೆ  ಅರ.ಟಿ.ಓ ಅಪೀಸ್ ಹತ್ತಿರ ಬರುವ ವಾತ್ಸಲ್ಯ ಆಸ್ಪತ್ರೆ  ಎದುರುಗಡೆ ಪುಟ್ ಪಾತ್ ಪಕ್ಕದಲ್ಲಿ ವಾಹನಗಳ ಸಿಟ್ ಕವರ್ ಮಾರಾಟ ಮಾಡುವ ಕೆಲಸದ ಮೇಲೆ  ಇದ್ದು ವಾತ್ಸಲ್ಯ ಆಸ್ಪತ್ರೆಯ ಪಕ್ಕದಲ್ಲಿ ಇರುವ ಬಂಡಿ ಹೋಟೆಲನಲ್ಲಿ ನೀರು ಮತ್ತು ಚಹಾ ಕುಡಿಯುವ ಸಲುವಾಗಿ ನಡೆದುಕೊಂಡು ಹೋಗುತ್ತಿರುವಾಗ ಸೇಡಂ ರಿಂಗ್ ರೋಡ ಕಡೆಯಿಂದ ಜಿಜಿಹೆಚ. ಸರ್ಕಲ್ ಕಡೆಗೆ ಹೋಗುವ ಕುರಿತು ಚಂದ್ರಕಾಂತ ಪಾಟೀಲ ಶಾಲೆಯ ಬಸ್ಸ ನಂಬರ ಕೆಎ32/ಡಿ-6764 ನೇದ್ದರ ಚಾಲಕನು ತನ್ನ ಬಸ್ಸನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು  ಬಬ್ಲೂ ಇತನಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿ ಗಾಯಗೊಳಿಸಿದ್ದರಿಂದ ಬಬ್ಲೂ ಇತನಿಗೆ ಎದುರಿನ  ವಾತ್ಸಲ್ಯ ಆಸ್ಪತ್ರೆಗೆ  ಕರೆದುಕೊಂಡು ಹೋದಾಗ ವಾತ್ಸಲ್ಯ ಆಸ್ಪತ್ರೆ ವೈದ್ಯರು ಬಬ್ಲೂ ಇತನಿಗೆ ನೋಡಿ ಅಪಘಾತ ಸ್ಥಳದಲ್ಲಿ ಮೃತ ಪಟ್ಟಿರುತ್ತಾರೆ  ಅಂತಾ ತಿಳಿಸಿದ್ದು  ಬಬ್ಲೂ ಇತನಿಗೆ  ಬಸ್ಸ ಚಾಲಕ ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿ ಗಾಯಗೊಳಸಿದ್ದರಿಂದ  ಬಬ್ಲೂ ಇತನು  ಸ್ಥಳದಲ್ಲಿ ಮೃತ ಪಟ್ಟಿದ್ದು ಬಸ್ಸ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀಮತಿ ಕಮಲಾ ಗಂಡ ಸಹದೇವ ಪಾಸೋಡಿ ಸಾ ಬಬಲಾದ ಐಕೆ  ಹಾಲ ವಸತಿ ಆಶ್ರಯ ಕಾಲೂನಿ ಸೈಯದ ಚಿಂಚೂಳಿ ರೋಡ ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ರೇವೂರ ಠಾಣೆ : ಶ್ರೀ ಗುರಪ್ಪ ತಂದೆ ಸಂಗಪ್ಪ ಮೇತ್ರಿ ಸಾ||ಉಡಚಣ ತಾ||ಅಫಜಲಪೂರ ರವರು  ಕಳೆದ ವರ್ಷ ಅಂದರೆ 2018 ನೇ ಸಾಲಿನಲ್ಲಿ ಹೀರೋ ಸ್ಪ್ಲೇಂಡರ ಪ್ಲಸ್ ಕಂಪನಿಯ ಮೋಟರ ಸೈಕಲ್ ಖರಿದಿ ಮಾಡಿರುತ್ತೇನೆ. ಸದರಿ ಮೋಟರ ಸೈಕಲ ನಂ-ಕೆಎ-32 ಈಎಸ್ 0785 ಅಂತಾ ಮತ್ತು ಚೆಸ್ಸಿ ನಂ-MBLHAR077JHC49063, ಹಾಗೂ ಇಂಜಿನ ನಂ-HA10AGJHC56922 ಅಂತಾ ಇರುತ್ತದೆ. ನನ್ನ ಮಗ ಆಕಾಶನಿಗೆ ಭಾರತಿ ವಿಧ್ಯಾಕೇಂದ್ರ ಶಿರನೂರದಲ್ಲಿ ವಿಧ್ಯಾಭ್ಯಾಸಕ್ಕಾಗಿ ಸೇರಿಕೆ ಮಾಡಿರುತ್ತೇನೆ. ಕಲಬುರಗಿಯಲ್ಲಿ ನನ್ನ ಕೆಲಸ ಇದ್ದ ನಿಮೀತ್ಯ ಮತ್ತು ನನ್ನ ಮಗನಿಗೆ ಮಾತನಾಡಿಸಲು ಬರಲು ನಾನು ದಿನಾಂಕ-14/01/2019 ರಂದು ಸಾಯಂಕಾಲ ನನ್ನ ಮೋಟರ ಸೈಕಲ ನಂ-ಕೆಎ-32 ಈಎಸ್ 0785 ನೇದ್ದರ ಮೇಲೆ ನಮ್ಮೂರಿನಿಂದ ಬಿಟ್ಟಿರುತ್ತೇನೆ. ಭೋಗನಳ್ಳಿ ಕ್ರಾಸ್ ಹತ್ತಿರ ಬಂದಾಗ ದಾಬಾದಲ್ಲಿ ಊಟ ಮಾಡಲು 7-30 ಪಿಎಮ್ ಸುಮಾರಿಗೆ ರಸ್ತೆಯ ಪಕ್ಕದಲ್ಲಿರುವ ಮತ್ತು ದಾಬಾದ ಮುಂದಿರುವ ಜಾಗದಲ್ಲಿ ಮೋಟರ ಸೈಕಲ ನಿಲ್ಲಿಸಿ ಊಟಕ್ಕೆ ದಾಬಾದಲ್ಲಿ ಹೋಗಿರುತ್ತೇನೆ. ಊಟ ಮುಗಿಸಿಕೊಂಡು ಮರಳಿ 8-10 ಪಿಎಮ್ ಕ್ಕೆ ಹೋರಗೆ ಬಂದು ನೋಡಲು ನನ್ನ ಮೋಟರ ಸೈಕಲ ಇರಲಿಲ್ಲಾ, ಅಲ್ಲಿರುವ ಜನರಿಗೂ ಮತ್ತು ದಾಬಾದಲ್ಲಿರುವ ಜನರಿಗೂ ವಿಚಾರಿಸಿದರು ಅವರು ತಮಗೆ ಗೊತ್ತಿರುವುದಿಲ್ಲಾ ಅಂತಾ ತಿಳಿಸಿದರು. ನಾನು ಊಟಕ್ಕೆ ಹೋದ ಸಮಯದಲ್ಲಿ ಯಾರೋ ಕಳ್ಳರು ನನ್ನ ಮೋಟರ ಸೈಕಲ ನಂ-ಕೆಎ-32 ಈಎಸ್ 0785 ನೇದ್ದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಾನು ಮತ್ತು ನನ್ನ ಗೆಳೆಯ ಯಾಗಪ್ಪ ತಂದೆ ಮಹಾದೇವಪ್ಪಾ ಹಲಸಂಗಿ ಇಬ್ಬರೂ ದಿನಾಂಕ-14/01/2019 ರಿಂದ ಇಲ್ಲಿಯವರೆಗೆ ಎಲ್ಲಾ ಕಡೆಗೆ ಹುಡುಕಿದರು ಎಲ್ಲಿಯು ಸಿಕ್ಕಿರುವುದಿಲ್ಲಾ. ಸದರಿ ಹೀರೋ ಸ್ಪ್ಲೇಂಡರ ಪ್ಲಸ್ ಕಂಪನಿಯ ಮೋಟರ ಸೈಕಲ ನಂ-ಕೆಎ-32 ಈಎಸ್ 0785 ನೇದ್ದರ  ಅಂ||ಕಿ|| 45,000 ರೂಪಾಯಿ ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

19 January 2019

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ರೇವೂರ ಠಾಣೆ : ಶ್ರೀಮತಿ ಸೂಚಿತಾ ಗಂಡ ಗೋಪಾಲ ಭೋಸ್ಲೆ ಸಾವಂತ ಸಾ||ಮನೆ ನಂ-407 ರೂಪೇಶ ಸೋಸೈಟಿ, ಕಳವಾ ವೆಸ್ಟ, ಜಿಲ್ಲಾ-ಠಾಣಾ. ಮಹಾರಾಷ್ಟ ರಾಜ್ಯ ರವರ ಠಾಣೆಗೆ ಹಾಜರಾಗಿ ನಾನು ಈ ಮೇಲ್ಕಂಡ ಹೆಸರು ಮತ್ತು ವಿಳಾಸದ ನಿವಾಸಿತಳಿದ್ದು ಮನೆಕೆಲಸ ಮಾಡಿಕೊಂಡು ಪರಿವಾರ ದೊಂದಿಗೆ ಉಪಜೀವನ ಸಾಗಿಸುತ್ತಿದ್ದೇನೆ. ನನ್ನ ತಾಯಿಯಾದ ಜಯಶ್ರೀ ಗಂಡ ದಿ||ವಸಂತ ಸಾವಂತ ವಯ||75 ಜಾ|| ಮರಾಠ ಉ|| ಮನೆಕೆಲಸ ಸಾ||ನಾಟಲ ಗ್ರಾಮ ತಾ||ಕನಕೌಲಿ ಜಿಲ್ಲಾ||ಸಿಂಧದುರ್ಗ ಮಹಾರಾಷ್ಟ್ರ. ಇವರು ಒಂದು ವಾರದ ಹಿಂದೆ ನಮ್ಮ ಮನೆಗೆ ಬಂದಿರುತ್ತಾಳೆ. ದೇವಲಗಾಣಗಾಪೂರ ದತ್ತ ಮಹಾರಾಜ ದರ್ಶನಕ್ಕೆ ಹೋಗಲು  ನಾನು ನನ್ನ ತಾಯಿ ಮತ್ತು  ನನ್ನ ಅಕ್ಕಳ  ಮಗನಾದ ಪ್ರಸಾದ ತಂದೆ  ಪ್ರದೀಪ ರಾಸಮ ವಯ||20 ಜಾ|| ಮರಾಠ ಉ|| ವಿಧ್ಯಾರ್ಥಿ  ಸಾ||ಮನೆ ನಂ-170 ಕಂದಮವಾರ ನಗರ ವಿಕೋಳಿ ಈಸ್ಟ ಜಿ|| ಠಾಣಾ ಮತ್ತು ನಮಗೆ ಪರಿಚಯಿಸ್ಥರು ಮತ್ತು ಗುರುಜಿಗಳಾದ ಮಹೇಶ ತಂದೆ ರಾಮಚಂದ್ರ  ದೇವಧರ ಸಾ|| ಮನೆ ನಂ-1/8 ಶ್ರೀಚಿಂತಾಮಣಿ, ವಿಟ ಬಂದರ ರಸ್ತೆ ಠಾಣೆಈಸ್ಟ, ಎಲ್ಲರೂ ದಿನಾಂಕ-15/01/2019 ರಂದು  ರಾತ್ರಿ ಠಾಣೆಯಿಂದ  ರೈಲಿನ ಮೂಲಕ ಬಿಟ್ಟು ದಿನಾಂಕ-16/01/2019 ರಂದು ಸೋಲಾಪೂರಕ್ಕೆ ಬಂದಿರುತ್ತೇವೆ. ಸೋಲಾಪೂರದಲ್ಲಿ ಮೊದಲಿನಿಂದಲು ನಮಗೆ ಪರಿಚಯ ಇರುವ ಶ್ರೀ ಚಂದ್ರಕಾಂತ ತಂದೆ ವಿಠಲರಾವ ಭಾಲೆಕಾರ ಸಾ||ಮನೆ ನಂ-18/14 ಮಾಧವನಗರ ಎಮ್,ಐ,ಡಿ,ಸಿ ರೋಡ  ಸೋಲಾಪೂರ  ರವರ ಓಮಿನಿ ಕಾರ ನಂ-ಎಮ್,ಹೆಚ್-13 ಎಸಿ-3977 ನೇದ್ದನ್ನು ಬಾಡಿಗೆಗೆ ತೆಗೆದುಕೊಂಡು ಸೋಲಾಪೂರದಿಂದ ಎಲ್ಲರೂ  ಓಮಿನಿ ಕಾರನಲ್ಲಿ ಅಕ್ಕಲಕೋಟಾದ ಸ್ವಾಮಿ ಸಮರ್ಥಕ್ಕೆ ಬಂದಿರುತ್ತೇವೆ. ಸದರಿ ಓಮಿನಿ ಕಾರ ಚಂದ್ರಕಾಂತ ರವರೆ ಚಲಾಯಿಸುತ್ತಿದ್ದರು ದಿನಾಂಕ 17/01/2019 ಮುಂಜಾನೆ 09-00 ಎಎಮ್ ಕ್ಕೆ ದೇವಲಗಾಣಗಾಪೂರಕ್ಕೆ ಹೋಗಲು  ಎಲ್ಲರೂ ಚಂದ್ರಕಾಂತ ರವರ ಓಮಿನಿ ಕಾರ ನಂ-ಎಮ್,ಹೆಚ್-13 ಎಸಿ-3977 ನೇದ್ದರಲ್ಲಿ ಅಕ್ಕಲಕೋಟದಿಂದ ಬಿಟ್ಟು ದೇವಲಗಾಣಗಾಪೂರಕ್ಕೆ ಹೋಗಿ ದೇವರ ದರ್ಶನ ಮಾಡಿಕೊಂಡು ಮರಳಿ ಅಕ್ಕಲಕೋಟಕ್ಕೆ ಹೋಗಲು ಅದೆ ಓಮಿನಿ ಕಾರನಲ್ಲಿ ಅತನೂರ  ಗ್ರಾಮ ದಾಟಿ ಸುಮಾರು 02 ಕೀ,ಮೀಟರ ಅಂತರದಲ್ಲಿ ಹೋಗುತ್ತಿದ್ದಾಗ 4-15 ಪಿಎಮ್ ಕ್ಕೆ ಓಮಿನಿ ಚಲಾಯಿಸುತ್ತಿದ್ದ ಚಂದ್ರಕಾಂತ ರವರು ಓಮಿನಿಯನ್ನು ಅತಿವೇಗ ಹಾಗೂ ನಿಷ್ಕಾಳಜಿತದಿಂದ ಚಲಾಯಿಸಿ ದ್ದರಿಂದ ಅವರಿಗೆ ನಿಯಂತ್ರಿಸಲು ಆಗದೆ ನಿಯಂತ್ರಣ ತಪ್ಪಿ ಓಮಿನಿ ಪಲ್ಟಿಯಾಗಿ ಬಿದ್ದಿತು. ಪಲ್ಟಿಯಾದಾಗ ಬಾಗಿಲು  ತೆರೆದಿದ್ದರಿಂದ ನನ್ನ ತಾಯಿ ಜಯಶ್ರೀ ಓಮನಿ ವಾಹನದಿಂದ ರಸ್ತೆಯ ಮೇಲೆ ಕೆಳಗೆ ಬಿದ್ದಿರುತ್ತಾಳೆ. ನಾನು, ಪ್ರಸಾದ ಮಹೇಶ ಗುರುಜಿ ಎಲ್ಲರೂ ಓಮಿನಿಂದ ಕೆಳಗೆ ಇಳಿದೇವು. ಆಗ ಅಲ್ಲೆ ಇದ್ದ ಸಂತೋಷ ಹುಲಿ ಎಂಬ ವ್ಯಕ್ತಿಯು ಬಂದಿದ್ದು ಎಲ್ಲರೂ ಕೂಡಿ ಓಮಿನಿ ಚಲಾಯಿಸುತ್ತಿದ್ದ ಚಂದ್ರಕಾಂತ ರವರಿಗೆ ಹೋರಗೆ ತೆಗೆದು ಕೂಡಿಸಿ, ನನ್ನ ತಾಯಿಗೆ ಎತ್ತಿ ರಸ್ತೆಯ ಪಕ್ಕಕ್ಕೆ ಹಾಕಿರುತ್ತೇವೆ. ಸಂತೋಷ  ಹುಲಿ ಎಂಬುವರು ಅಂಬುಲೇನ್ಸ ವಾಹನಕ್ಕೆ  ಪೋನ ಮಾಡಿ ಬರಲು ಹೇಳಿದರು. ಸದರಿ ಅಪಘಾತದಿಂದ  ನನ್ನ ತಾಯಿ ಜಯಶ್ರೀ ಹಣೆಯ ಬಲಭಾಗಕ್ಕೆ  ಮತ್ತು ತಲೆಗೆ  ಭಾರಿ ರಕ್ತಗಾಯ ಮತ್ತು ಒಳಪೆಟ್ಟಾಗಿ ಪ್ರಜ್ಞಾಹಿನಳಾಗಿದ್ದಳು. ಓಮಿನಿ ಚಲಾಯಿಸುತ್ತಿದ್ದ ಚಂದ್ರಕಾಂತ ರವರ ತಲೆಯ ಹಿಂಭಾಗದಲ್ಲಿ ರಕ್ತಗಾಯ ಮತ್ತು ಬೆನ್ನಿಗೆ ಗುಪ್ತಗಾಯ ವಾಗಿರುತ್ತವೆ. ಮತ್ತು ನನ್ನ ಗಲ್ಲಕೆ ಮತ್ತು ಬಲಭಾಗದ ಭುಜಕ್ಕೆ ಒಳ ಪೆಟ್ಟಾಗಿರುತ್ತದೆ. ಮತ್ತು ಪ್ರಸಾದ ಮತ್ತು ಮಹೇಶ ಗುರುಜಿಗೆ ರವರಿಗೆ ಸಣ್ಣ ಪುಟ್ಟ ತೆರೆಚಿದ ಗಾಯಗಳಾಗಿರುತ್ತದೆ. ಅಂಬುಲೇನ್ಸ ವಾಹನ ಬಂದ ನಂತರ ನನ್ನ ತಾಯಿಗೆ ಮತ್ತು ಚಂದ್ರಕಾಂತ ರವರಿಗೆ ಅದರಲ್ಲಿ ಹಾಕಿಕೊಂಡು ನಾನು ಮಹೇಶ ಗುರುಜಿ, ಪ್ರಸಾದ ಕಲಬುರಗಿಯ ಗಂಗಾ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ನನ್ನ ತಾಯಿಗೆ ಪರೀಕ್ಷೆ ಮಾಡಿ ಮೃತಪಟ್ಟಿರುತ್ತಾಳೆ ಅಂತಾ ಹೇಳಿದರು. ಚಂದ್ರಕಾಂತ ರವರಿಗೆ ಗಂಗಾ ಆಸ್ಪತ್ರೆಯಲ್ಲಿ ಉಪಚಾರ ಕುರಿತು ದಾಖಲು ಮಾಡಿ ನನ್ನ ತಾಯಿಯ ಮೃತದೇಹವನ್ನು ಅಫಜಲಪೂರ ಸರಕಾರಿ ಆಸ್ಪತ್ರೆಯ ಶವಗಾರ ಕೋಣೆಯಲ್ಲಿ  ತಂದು ಹಾಕಿರುತ್ತೇವೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 18/01/2019 ರಂದು ಕೊಳ್ಳೂರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ರೋಡಿನ ಮೇಲೆ ಬುಲೆರೋ ನಂ ಕೆಎ-28 ಎನ್ 4712 ನೇದ್ದರ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೊಗುತ್ತಿದ್ದ ಶ್ರೀ ಕಾಮಣ್ಣ ತಂದೆ ನಾಗಪ್ಪ ಪೂಜಾರಿ ಸಾಃ ಕೊಳ್ಳೂರ ಗ್ರಾಮ ರವರ  ಮಗನಾದ ದೇವಪ್ಪ ಇತನಿಗೆ ಡಿಕ್ಕಿಪಡಿಸಿ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ  ರಾಜಾಪಟೇಲ ತಂದೆ ದಾವಲಸಾಬ ಹಚ್ಚಡದ ಸಾ|| ಕಣಮೇಶ್ವರ ತಾ|| ಜೇವರ್ಗಿ ರವರು ದಿನಾಂಕ 15-01-2019 ರಂದು ನಮ್ಮೂರ ಹಜರತ ಶಾಹುಸೇನಿ ಜಾತ್ರಾ ಪ್ರಯುಕ್ತ ಸಮುದಾಯ ಭವನದ ಹತ್ತಿರ ಇದ್ದ ಟಾವರ ಕಂಭಕ್ಕೆ ನಾನು ಹಸೀರು ಬಣ್ಣದ ಝಂಡಾವನ್ನು ಕಟ್ಟಿದ್ದು ಇರುತ್ತದೆ, ಅದನ್ನು ನೋಡಿ ನಮ್ಮೂರಿನ ಹಿಂದು ಸಮಾಜದ ಕೆಲವರು ಅದೇ ಟಾವರ ಮೇಲೆ ಕೇಸರಿ ಬಣ್ಣದ ಝಂಡಾವನ್ನು ಕಟ್ಟಿರುತ್ತಾರೆ. ಈ ಬಗ್ಗ ನಮ್ಮ ಹಿರಿಯವರು ಉರಲ್ಲಿ ವಿನಾಕಾರಣ ಜಗಳಾಗುತ್ತವೆ, ನೀನು ಕಟ್ಟಿದ ಝಂಡಾವನ್ನು ಬಿಚ್ಚುಕೊಂಡು ಬಾ ಅಂತಾ ನನಗೆ ಹೇಳಿದ್ದರಿಂದ ನಾನು ಕಟ್ಟಿದ ಹಸೀರು ಬಣ್ಣದ ಝಂಡಾವನ್ನು ಬಿಚ್ಚಿರುತ್ತೇನೆ, ದಿನಾಂಕ 17-01-2019 ರಂದು ಮದ್ಯಾಹ್ನ ನಾನು ಸಂಡಾಸಕ್ಕೆ ಅಲ್ಲೆ ನಮ್ಮೂರ ಪಕ್ಕದಲ್ಲಿರುವ ಬಂದಗಿಸಾಬ ಹಚ್ಚಡದ ರವರ ಹೊಲಕ್ಕೆ ಹೋಗಿದ್ದು, ಮರಳಿ ಬರುವಾಗ ಅಲ್ಲೆ ಹೊಲದಲ್ಲೆ ನಮ್ಮೂರ 1] ರಾಜು ತಂದೆ ಬಸವರಾಜ ನಾಟೀಕಾರ, 2] ರಮೇಶ ತಂದೆ ಬಸವರಾಜ ನಾಟೀಕಾರ, 3] ಸುನೀಲ ತಂದೆ ಶಂಕ್ರೆಪ್ಪ ಜೇರಟಗಿ, 4] ಮಾಳಪ್ಪ ತಂದೆ ಸಾಯಬಣ್ಣ ನಾಟೀಕಾರ, 5] ಬಸವರಾಜ ತಂದೆ ಚಂದ್ರಾಮ ನಾಗಾವಿ, 6] ಸಂತೋಷ ತಂದೆ ಶಂಕ್ರೆಪ್ಪಾ ನಾಟೀಕಾರ, 7] ದಯಾನಂದ ತಂದೆ ಬಲಭೀಮ ನಾಗಾವಿ, 8] ದತ್ತಪ್ಪ ನಾಟೀಕಾರ, 9] ಸಂತೋಷ ತಂದೆ ಮಲ್ಕಪ್ಪ ನಾಟೀಕಾರ, 10] ಪರಸಪ್ಪ ತಂದೆ ಬಸಪ್ಪ ಮುದಬಾವಿ, 11] ರಾವುತಪ್ಪ ತಂದೆ ಮಲ್ಕಪ್ಪ ನಾಟೀಕಾರ, 12] ಜಯವಂತ ತಂದೆ ರಾಮಣ್ಣ ಕೆಲೋಜಿ, 13] ಸಿದ್ದಪ್ಪ ತಂದೆ ನಾಗಪ್ಪ ನಾಟೀಕಾರ, 14] ಸಂತೋಷ ಗುಬ್ಬೇವಾಡ, 15] ವಿಶ್ವರಾದ್ಯ ತಂದೆ ಗೋಪಾಲ ಬೋರಗಿ, 16] ಸಾಯಬಣ್ಣ ತಂದೆ ಲಕ್ಷ್ಮಣ ನಾಟೀಕಾರ, 17] ಸುರೇಶ ತಂದೆ ಬಲಭೀಮ ನಾಗಾವಿ, 18] ಪರಸಪ್ಪ ತಂದೆ ಅಡವೆಪ್ಪ ಕೊಂಡಗೂಳಿ, 19] ದೇವಪ್ಪ ಮಲ್ಕಪ್ಪ ನಾಟೀಕಾರ, 20] ದೇವಪ್ಪ ಚಟ್ಟರಕಿ, 21] ಶಿವರಾಜ ತಂದೆ ಮಲ್ಲಪ್ಪ ನಾಗಾವಿ ಸಾ|| ಎಲ್ಲರೂ ಕಣಮೇಶ್ವರ ಗ್ರಾಮ ಹಿಗೆಲ್ಲರು ಗುಂಪು ಕಟ್ಟಿಕೊಂಡು ನನ್ನ ಹತ್ತಿರ ಬಂದು ನನಗೆ ತಡೆದು ನಿಲ್ಲಿಸಿ ಏ ರಂಡಿ ಮಗನೆ ಮೊನ್ನೆ ಜಾತ್ರಿಯಲ್ಲಿ ಬಹಳ ಹಾರಾಡಿದಿ, ಉರಾಗ ನಿವೂ ಮುಸಲರು ಕಡಿಮಿ ಇದ್ದಿರಿ, ಇವತ್ತ ನಿನಗ ಖಲಾಸೆ ಮಾಡುತ್ತೇವೆ  ಅಂತಾ ಅಂದು ಹೊಡೆ ಬಡೆ ಮಾಡಿ ಬಿಡಿಸಲು ಬಂದ ನನ್ನ ತಾಯು ಮತ್ತು ಅತ್ಎಯಂದಿರಿಗೆ ಹೊಡೆದು ಅವಮಾನ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.