POLICE BHAVAN KALABURAGI

POLICE BHAVAN KALABURAGI

11 January 2019

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಫರತಾಬಾದ ಠಾಣೆ : ದಿನಾಂಕ 10/01/19 ರಂದು ಜೋಗುರ ಗ್ರಾಮದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ  ಸಾರ್ವ ಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ಆಡುತ್ತಿದ್ದ ಬಗ್ಗೆ ಬಾತ್ಮ ಬಂದ ಮೇರೆಗೆ ಪಿ.ಎಸ್.ಐ. ಫರತಾಬಾದ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಜೋಗುರು ಗ್ರಾಮಕ್ಕೆ ಹೋಗಿ ಬಾತ್ಮ ಸ್ತಳದ ಮರೆಯಲ್ಲಿ ನಿಂತು ನೋಡಲು ಒಬ್ಬ ವ್ಯಕ್ತಿ ಒಂದು ರೂಪಾಯಿಗೆ 80/- ರೂಪಾಯಿ ಕೊಡುವ ಕರಾರಿನಲ್ಲಿ ಮಟಕಾ ಜೂಜಾಟ ಆಡುತ್ತಿದ್ದುದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವನ ಹೆಸರಿ ವಿಳಾಸ ವಿಚಾರಿಸಲು ಶಿವಶರಣಪ್ಪ ತಂದೆ ಕರಿವೀರಪ್ಪಾ ಮಾಲಿಪಾಟೀಲ ಸಾ; ಜೋಗುರ  ಅಂತಾ ತಿಳಿಸಿದ್ದು ಸದರಿಯವನಿಂದ ಮಟಕಾ ಜೂಜಾಕ್ಕೆ ಬಳಸಿದ ನಗದು ಹಣ 520/-ರೂ,  ಒಂದು ಬಾಲ ಪೇನ್ನ್ ಅ.ಕಿಃ 00=0, ಎರಡು ಮಟಕಾ ಚೀಟಿಗಳು ಅ.ಕಿ 00=00 ಜಪ್ತಿ ಪಡಿಸಿ ಕೊಂಡು ಸದರಿಯವನೊಂದಿಗೆ ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ  ಅತ್ತರ ಪಾಶಾ ತಂದೆ ಸೈಯ್ಯದ ಗುಲಾಮ ಹುಸೇನ್ ಸಾ|| ಕಲಬುರಗಿ ರವರದು  ಕಮಲಾಪೂರದಲ್ಲಿನ ಸರ್ವೆ ನಂ: 393, 394 ಆಗಿದ್ದು ಇದರಲ್ಲಿ ನಮ್ಮ ಮನೆಗಳಿದ್ದು ಮತ್ತು ಸದರಿ ಹೊಲಗಳು ಸುಮಾರು 50 ವರ್ಷಗಳ ಮೇಲ್ಪಟ್ಟು ಕಬ್ಜೆದಾರರಿದ್ದು ಅದರ ಪಟ್ಟೆದಾರರು ನಮ್ಮ ತಂದೆಯವರಿದ್ದು , ಅವರ ನಿಧನದ ನಂತರ ನಾವೂ 06 ಜನ ಅಣ್ಣ-ತಮ್ಮಂದಿರ ಹೆಸರಿಗೆ ಪಟ್ಟಾ ಆಗಿರುತ್ತದೆ.  ದಿನಾಂಕ: 09/01/2019 ರಂದು ಸಾಯಂಕಾಲ 06:00 ಗಂಟೆಯ ಸುಮಾರಿಗೆ ಕಮಲಾಪೂರದಲ್ಲಿ ದಿನದಂತೆ ನಮ್ಮ ಹೊಲಕ್ಕೆ ನಮ್ಮ ಕಾರ್ ನಂ: ಎಮ್ ಹೆಚ್ 02 ಎ ವಾಯ್ 6359 ಇದರಲ್ಲಿ ಹೋಗಿ ನಮ್ಮ ಹೊಲದಲ್ಲಿ ನಿಲ್ಲಿಸಿ ನಾನು ನಮ್ಮ ತಮ್ಮಂದಿರಾದ 1) ತಾಹೇರ್ ಪಾಷಾ , 2) ಅಮೀರ ಖೂಸ್ರೂ 3) ಅಮೀರ ಪಾಷಾ ಮತ್ತು ನನ್ನ ಮಗ ತಾಲಿಬ ಖತೀಬ ತಂದೆ ಅಥರಪಾಶಾ ಎಲ್ಲರೂ ಹೊಲದಲ್ಲಿ ಹೋಗಿ ಒಂದು ಬೋರ್ಡ ನೋಡುತ್ತಾ ನಿಂತಾಗ ಒಮ್ಮೇಲೆ 15 ರಿಂದ 20 ಜನರು ತಮ್ಮ ಕೈಗಳಲ್ಲಿ , ರಾಡು ತಲ್ವಾರುಗಳು & ಬಡಿಗೆಗಳನ್ನು ಹಿಡಿದುಕೊಂಡು ನಮಗೆ ಬೈಯುತ್ತಾ ಅದರಲ್ಲಿದ್ದ 1) ಮೈನೋದ್ದಿನ್ ಗೂಳಿ ಎಂಬುವವನು ರಾಡಿನಿಂದ ನಮ್ಮ ತಮ್ಮ ಅಮೀರ ಖೂಸ್ರೂನ ತಲೆಯ ಹಿಂಭಾಗಕ್ಕೆ ಜೋರಾಗಿ ಹೊಡೆದನು, 2) ಸತ್ತಾರ ಇವನು ತಲ್ವಾರದಿಂದ ಅಮೀರ ಖೂಸ್ರೂ ಇವನ ಕುತ್ತಿಗೆಗೆ ಖಲ್ಲಾಸ್ ಮಾಡುವ ಉದ್ದೇಶದಿಂದ ಹೊಡೆಯುವಾಗ ತಪ್ಪಿಸಿಕೊಂಡಿರುವುದರಿಂದ ಅವನ ಬೆನ್ನಿಗೆ ತಲ್ವಾರ ಹಿಂದಿನ ಭಾಗದಿಂದ ಗಾಯಗೊಂಡಿರುತ್ತಾನೆ. 3) ಲತೀಫ್ ಎಂಬುವವನು ಅಮೀರ ಖೂಸ್ರೋಗೆ , ನನಗೆ & ತಾಹೇರ ಪಾಷಾನಿಗೆ ಕೈಯಿಂದ ಮುಷ್ಠಿ ಮಾಡಿ ಮತ್ತು ಕಾಲಿನಿಂದ ಹೊಡೆದಿರುತ್ತಾನೆ, 4) ರಶೀದ ಎಂಬುವವನು ತಾಹೇರ ಪಾಷಾನಿಗೆ ರಾಡಿನಿಂದ & ಬಡಿಗೆಯಿಂದ ಮತ್ತು 5) ಸಲೀಮ & 6) ಖಾಜಿ ಎಂಬುವ ಇವರೀಬ್ಬರೂ  ತಾಹೇರ್ ಪಾಷಾನಿಗೆ ತಲೆಗೆ, ಎದೆಗೆ, ಕಾಲಿಗೆ & ಹೊಟ್ಟೆಗೆ ಹೊಡೆದಿರುತ್ತಾರೆ. 7) ಇಬ್ರಾಹೀಮ್ 8) ಮುನ್ನಾ ಸೌದಾಗರ್ 9) ಮಸ್ತಾನ ಟೀಚರ್ 10) ಮುಕ್ರಂ ಧಾಬಾ & ಇನ್ನು 8-10 ಜನರು ಸದರಿಯವರ ಜೊತೆಗೆ ಇದ್ದು ಇವರನ್ನು ಇವತ್ತು ಖಲ್ಲಾಸ್ ಮಾಡಿರಿ ಎಂದು ಮೇಲಿನವರಿಗೆ ಚೀರುತ್ತಾ ಹೇಳಿ ಅವರು ಕೂಡ ನಾವೂ ಕೆಳಗೆ ಬಿದ್ದಾಗ ಕಾಲಿನಿಂದ ಮತ್ತು ರಾಡಿನಿಂದ ಹೊಡೆದಿರುತ್ತಾರೆ. ಮತ್ತು 11) ಖದೀರ ಚೊಂಗೆ ಇವರು , ಇವರಿಗೆ ಖಲ್ಲಾಸ್ ಮಾಡಿರಿ ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾನೆ ಎಂದು ಚಿರಾಡುತ್ತಿದ್ದರು , ಸದರಿ ಇದರಲ್ಲಿ ನನ್ನ ತಮ್ಮ ತಾಹೇರ್ ಪಾಶಾ ಇವರ ಮೊ.ನಂ: 9739748728 & ಕಿಶೆಯಲ್ಲಿನ 50,000/- ರೂ ಜಗಳದಲ್ಲಿ ಬಿದ್ದು ಕಳೆದು ಹೋಗಿರುತ್ತವೆ, ಅಷ್ಟರಲ್ಲಿಯೆ ಕಮಲಾಪೂರ ಗ್ರಾಮದವರಾದ 1) ಈರಣ್ಣ 2) ಡಾ|| ಫಾರುಖ ಬೇಗ ಮತ್ತು ಇತರರು ಜಗಳ ಬಿಡಿಸಲು ಬಂದಾಗ ನಾನು ನನ್ನ ಮಕ್ಕಳು ಅಲ್ಲಿಂದ ತಪ್ಪಿಸಿಕೊಂಡು ಕಾರಿನಲ್ಲಿ ಪೊಲೀಸ್ ಠಾಣೆಗೆ ಹೋಗುವಷ್ಟರಲ್ಲಿ ಆ ಗುಂಪಿನ 5-6 ಜನರು ನಮ್ಮ ಕಾರ್ ತಡೆದು ನನಗೆ ಕುತ್ತಿಗೆಗೆ ಹಿಡಿದು ಎಳೆದಾಡಿ  ಕಾರು ಕಸಿದುಕೊಂಡಿರುತ್ತಾರೆ.  ನಾವು ಪೊಲೀಸ್ ಠಾಣೆಗೆ ಹೋದರು ಇವರೇಲ್ಲರೂ ಠಾಣೆಯಲ್ಲಿ ಬಂದು ನಮಗೆ ಖಲ್ಲಾಸ್ ಮಾಡುತ್ತೇವೆ , ಮತ್ತು ನೀವು ಇಲ್ಲಿಂದ ಹೇಗೆ ಹೋಗುತ್ತಿರಿ ಮಕ್ಕಳೆ ಎಂದು ಹೇಳಿ ಠಾಣೆಯಲ್ಲಿ ನಮಗೆ ಬೆದರಿಕೆ ಹಾಕಿ ಮುಂದೆ ಕೇಸ್ ಮಾಡಬಾರದೆಂದು ಅಂಜಿಸಿ ಬಿಳಿ ಹಾಳೆಯ ಮೇಲೆ ಸಹಿಯನ್ನು ಒತ್ತಾಯ ಪೂರ್ವಕವಾಗಿ ಪಡೆದಿರುತ್ತಾರೆ. ಆದುದರಿಂದ ದಯಾಳುಗಳಾದ ತಾವೂ ನಮ್ಮ ಪ್ರಾಣಗಳಿಗೆ ರಕ್ಷಣೆ ನೀಡಿ ಸದರಿಯವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಕೊಳ್ಳಲು ವಿನಂತಿ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

10 January 2019

KALABURAGI DISTRICT REPORTED CRIMES

ಆಕ್ರಮವಾಗಿ ಗಾಂಜಾ ಬೆಳೆಸಿದವನ ಬಂಧನ :
ಯಡ್ರಾಮಿ ಠಾಣೆ : ದಿನಾಂಕ 09-01-2019 ರಂದು ಮಾಗಣಗೇರಿ ಗ್ರಾಮದ ಮಲ್ಲಪ್ಪ ತಂದೆ ಸಿದ್ದಪ್ಪ ದನಶೇಟ್ಟಿ  ಇತನು ತನ್ನ ಹೊಲ ಸರ್ವೆ ನಂ 214 ನೇದ್ದರಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಸಿರುತ್ತಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ನಾಗಪ್ಪ ಪಿ.ಎಸ್.. ಯಡ್ರಾಮಿ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಎಸ್.ಎಸ್.ಹುಲ್ಲೂರ ಡಿ.ವ್ಹಾಯ್.ಎಸ್.ಪಿ. ಸಾಹೇಬರು ಗ್ರಾಮಾಂತರ ಉಪ ವಿಭಾಗ ಕಲುಬರಗಿ ರವರಿಗೆ ಬರಮಾಡಿಕೊಂಡು ಪತ್ರಾಂಕಿತ ಅಧಿಕಾರಿಗಳಾದ ಶ್ರೀ ರಾಜಕುಮಾರ ಜಾಧವ ತಹಸೀಲ್ದಾರರು ಯಡ್ರಾಮಿ ರವರಿಗೆ ಮಾಗಣಗೇರಿ ಗ್ರಾಮಕ್ಕೆ ಬರಮಾಡಿಕೊಂಡು ವಿಷಯ ತಿಳಿಸಿ ದಾಳಿ ಕಾಲಕ್ಕೆ ಹಾಜರಿದ್ದು ಪಂಚನಾಮೆಯನ್ನು ಜರುಗಿಸಿ ಕೊಡಲು ಕೋರಿಕೋಂಡೆನು, ನಂತರ ನಾನು ಮತ್ತು ಡಿ.ವ್ಹಾಯ್.ಎಸ್.ಪಿ. ಸಾಹೇಬರು,ತಹಸೀಲ್ದಾರ ಸಾಹೇಬರು ಯಡ್ರಾಮಿ ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ಇಲಾಖಾ ವಾಹನದಲ್ಲಿ ಹೊರಟು ನಂತರ ಪಂಚರ ಸಹಾಯದಿಂದ ಆರೋಪಿತರ ಹೊಲಕ್ಕೆ ಹೋಗಿ ನೋಡಿದಾಗ ಆ ಹೊಲದಲ್ಲಿ ಒಬ್ಬ ವ್ಯಕ್ತಿ ಕೆಲಸ ಮಾಡುತ್ತಿದ್ದನು, ಅವನು ನಮ್ಮನ್ನು ನೋಡಿ ಓಡಲು ಪ್ರಾರಂಭಿಸಿದರು, ನಂತರ ಸಿಬ್ಬಂದಿಯವರೊಂದಿಗೆ ಆ ವ್ಯಕ್ತಿಯನ್ನು ಹಿಡಿದು ವಿಚಾರಿಸಲಾಗಿ ತನ್ನ ಹೆಸರು ಮಲ್ಲಪ್ಪ ತಂದೆ ಸಿದ್ದಪ್ಪ ದನಶೇಟ್ಟಿ ಸಾ|| ಮಾಗಣಗೇರಿ ಅಂತಾ ತಿಳಿಸಿದನು ಆಗ ನಾವು ಯಾಕೆ ನಮ್ಮನ್ನು ನೋಡಿ ಓಡುತ್ತಿದ್ದಿಯಾ ಅಂತಾ ಕೇಳಲಾಗಿ ಅವನು  ನಾನು ನನ್ನ ತಮ್ಮನಾದ ಜಗ್ಗು ಇವನ ಹೊಲವನ್ನು ಗುತ್ತಿಗೆಗೆ ಹಾಕಿಕೊಂಡಿದ್ದು ಸದರಿ  ಹೊಲದಲ್ಲಿ ನಾನು ಯಾವುದೆ ಪರವಾನಿಗೆ ಇಲ್ಲದೆ ಗಾಂಜಾ ಗಿಡಗಳನ್ನು ಬೆಳೆದಿರುತ್ತೇನೆ, ಇದರಿಂದ ಭಯಗೊಂಡು ನಾನು ಓಡುತ್ತಿದ್ದೆನು ಅಂತಾ ಹೇಳಿ ಹೊಲದಲ್ಲಿಯೇ ಬೆಳೆದ ಗಾಂಜಾ ಗಿಡಗಳನ್ನು ತೋರಿಸಿದನು, ನಂತರ ಪಂಚರು ಹಾಗು ತಹಸೀಲ್ದಾರ ಸಾಹೇಬರ ಸಮಕ್ಷಮ ನೋಡಲಾಗಿ ಅಂದಾಜು 100 ಆಸು ಪಾಸು ಹಸಿ ಗಾಂಜಾ ಗಿಡಗಳು ಇದ್ದವು, ಅಲ್ಲದೆ ಅಲ್ಲಿಯೇ ಒಂದು ಬಿಳಿ ಪ್ಲಾಸ್ಟಿಕ ಚೀಲದಲ್ಲಿ ಹಸಿ ಗಾಂಜಾವನ್ನು ಸಂಗ್ರಹಿಸಿ ಇಟ್ಟಿದ್ದನು. ನಂತರ ಮಾಗಣಗೇರಿ ಗ್ರಾಮದ ವ್ಯಾಪಾರಿಯಾದ ಚನ್ನಪ್ಪ ತಂದೆ ಮೇಲಪ್ಪಗೌಡ ಮಾಲಿಪಾಟೀಲ ರವರಿಗೆ ಸದರಿ ವಿಷಯವನ್ನು ತಿಳಿಸಿ ಪಂಚನಾಮೆ ಜರುಗಿಸಲು ಸ್ಥಳಕ್ಕೆ ಬರಮಾಡಿಕೊಂಡೆನು, ನಂತರ ಪಂಚರ ಸಮಕ್ಷಮ 1] ಹಸೀ ಗಾಂಜಾ ಗಿಡಗಳನ್ನು ಬುಡ ಸಮೇತ ಕಿತ್ತಿ ಎಣಿಸಿದಾಗ 100 ಗಿಡಗಳಾಗಿದ್ದು, ಅದನ್ನು ಬುಡ ಸಮೇತ ತೂಕ ಮಾಡಿಸಲಾಗಿ 154 ಕೇ.ಜಿ  ಅದರ ಕಿಮ್ಮತ್ತು 6,16,000/- ಸಾವಿರ ರೂ 2] ಒಂದು ಬಿಳಿ ಪ್ಲಾಸ್ಟಿಕ ಚೀಲದಲ್ಲಿ ಹಸಿ ಗಾಂಜಾ ಅದರ  ಅಂದಾಜು ತೂಕ 4 ಕೇ.ಜಿ ಅದರ ಅ.ಕಿ 16000/- ರೂ ಹೀಗೆ ಒಟ್ಟು ಮೊತ್ತ 6,32,000/- ರೂ, ನೇದ್ದನ್ನು ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡೆನು, ಆರೋಪಿತನೊಂದಿಗೆ ಯಡ್ರಾಮಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪರಿಚಿತ ವ್ಯಕ್ತಿ ಬಾವಿಯಲ್ಲಿ ಬಿದ್ದು ಸಾವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಸೂರ್ಯಕಾಂತ ತಂದೆ ಶಿವಯ್ಯ ಗುತ್ತೇದಾರ ಸಾ|| ಚಿಂಚೋಳಿ ಗ್ರಾಮ ರವರದು ಚಿಂಚೋಳಿ ಸೀಮಾಂತರದಲ್ಲಿ ಹೊಲ ಸರ್ವೆ ನಂಬರ 206 ರಲ್ಲಿ 4 ಎಕರೆ 9 ಗುಂಟೆ ಜಮೀನು ಇರುತ್ತದೆ. ಸದರಿ ಹೊಲದಲ್ಲಿ ಅಂದಾಜು 65 ರಿಂದ 70 ಪೀಟ್ ಆಳವಾದ ಬಾವಿ ಇದ್ದು, ಭಾವಿಯಲ್ಲಿ ಸದ್ಯ ಅಂದಾಜು 3 ಪೀಟದಷ್ಟು ನೀರು ಇರುತ್ತವೆ, ನಾನು ಆಗಾಗ ಹೊಲಕ್ಕೆ ಹೋಗಿ ಬರುವುದು ಮಾಡುತ್ತೇನೆ. ದಿನಾಂಕ 08-01-2019 ರಂದು ಸಾಯಂಕಾಲ 6:00 ಗಂಟೆ ಸುಮಾರಿಗೆ ನಾನು ನಮ್ಮ ಮನೆಯಲ್ಲಿದ್ದಾಗ ನಮ್ಮೂರಿನ ಪ್ರಕಾಶ ತಂದೆ ಹಣಮಂತ ಭಜಂತ್ರಿ ಈತನು ನಮ್ಮ ಮನೆಗೆ ಬಂದು ನಿಮ್ಮ ಹೊಲದಲ್ಲಿನ ಭಾವಿಯಲ್ಲಿ ಮುಖ ಕೆಳಗೆ ಮಾಡಿ ಒಬ್ಬ ವ್ಯೆಕ್ತಿಯ ಶವ ಬಿದ್ದಿದೆ ನಾನು ಸಾಯಂಕಾಲ 4:30 ಗಂಟೆ ಸುಮಾರಿಗೆ ಕುರಿ ಮೇಯಿಸುತ್ತಾ ನಿಮ್ಮ ಭಾವಿಯ ಕಡೆಗೆ ಹೋದಾಗ ನೋಡಿರುತ್ತೇನೆ ಎಂದು ತಿಳಿಸಿದ ಮೇರೆಗೆ. ನಾನು ಮತ್ತು ನಮ್ಮೂರಿನವರಾದ ಮಡಿವಾಳ ಲೋಣಿ, ಶ್ರೀಶೈಲ ಗುತ್ತೇದಾರ, ಸಂತೋಷ ಯಳಸಂಗಿ, ನಾಗಯ್ಯ ಗುತ್ತೇದಾರ, ಅಪ್ಪಾಶಾ ಜಗದಿ ಇನ್ನಿತರರೂ ಕೂಡಿ ನಮ್ಮ ಹೊಲಕ್ಕೆ ಹೋಗಿ ಬಾವಿಯಲ್ಲಿ ನೋಡಲು, ನಮ್ಮ ಭಾವಿಯಲ್ಲಿ ಒಬ್ಬ ಗಂಡು ವ್ಯೆಕ್ತಿಯ ಶವ ಬೋರಲಾಗಿ ಬಿದ್ದಿದ್ದು ಇತ್ತು. ನಮ್ಮ ಭಾವಿಯಲ್ಲಿ ಕೆಳಗೆ ಇಳಿಯಲು ಸರಿಯಾದ ಸಿಡಿಗಳು ಇಲ್ಲದೆ ಇರುವುದರಿಂದ ಹಾಗೂ ಕತ್ತಲಾಗಿದ್ದರಿಂದ, ಬಾವಿಯಿಂದ ಶವವನ್ನು ತಗೆಯಲು ದಿನಾಂಕ 09-01-2019 ರಂದು ಬೆಳಿಗ್ಗೆ 08:00 ಗಂಟೆಗೆ ಮೇಲೆ ತಿಳಿಸಿದವರೆಲ್ಲರೂ ಕೂಡಿ ಅಫಜಲಪೂರದ ಅಗ್ನಿ ಶಾಮಕ ಇಲಾಖೆಯವರಿಂದ ಹಾಗೂ ನಮ್ಮೂರಿನ ಮಲ್ಲಿಕಾರ್ಜುನ ತಡಲಗಿ, ಗುಂಡಯ್ಯ ಹಿರೇಮಠ, ಶ್ರೀಮಂತ ಗೌರ, ಬಾಬು ಕಾಳೆ ರವರಿಂದ ಬಾವಿಯಲ್ಲಿದ್ದ ಶವವನ್ನು ಮೇಲೆ ತಗೆಸಿ ನೋಡಲಾಗಿ ಅಂದಾಜು 35-40 ವಯಸ್ಸಿನ ಗಂಡು ವ್ಯೆಕ್ತಿಯ ಶವ ಇದ್ದು, ಶವದ ಮೈ ಮೇಲಿನ ಬಟ್ಟೆಗಳನ್ನು ನೋಡಲಾಗಿ ಬಿಳಿಯ ಬಣ್ಣದ ಕಪ್ಪು ಗೆರೆ ಗಳಿರುವ ಹಾಪ್ ಶರ್ಟ್, ನೀಲಿ ಬಣ್ಣದ ಜೀನ್ಸ ಪ್ಯಾಂಟ್, ಚಾಕಲೇಟ್ ಬಣ್ಣಾದ ಅಂಡರವೇರ್ ಇರುತ್ತದೆ. ಶವವನ್ನು ಪರಿಶೀಲಿಸಿ ನೋಡಲಾಗಿ ತಲೆಯ ಹಿಂದೆ ರಕ್ತಗಾಯ ಹಾಗೂ ಬಲ ಹುಬ್ಬಿನ ಮೇಲೆ ರಕ್ತಗಾಯ, ಹಾಗೂ ಎಡಗೈ ಮುಂಗೈಗೆ ರಕ್ತಗಾಯ ಮೈಮೇಲೆ ಅಲ್ಲಲ್ಲಿ ತರಚಿದ ಗಾಯಗಳು ಇದ್ದಿರುತ್ತವೆ. ಸದರಿ ವ್ಯೆಕ್ತಿ ಅಂದಾಜು ದಿನಾಂಕ 07-01-2019 ರಿಂದ ದಿನಾಂಕ 08-1-2019 ರ ಸಾಯಂಕಾಲ 4:30 ಗಂಟೆಯ ಮದ್ಯದ ಅವದಿಯಲ್ಲಿ ನಮ್ಮ ಹೋಲದಲ್ಲಿನ ಬಾವಿಯಲ್ಲಿ ಬಿದ್ದು ಮೃತ ಪಟ್ಟಿರುತ್ತಾನೆ. ಸದರಿ ವ್ಯೆಕ್ತಿಯ ಮೈ ಮೇಲೆ ಇದ್ದ ಗಾಯಗಳು, ಸದರಿ ಮೃತ ವ್ಯೆಕ್ತಿ ಬಾವಿಯಲ್ಲಿ ಬೀಳುವಾಗ ಆದ ಗಾಯಗಳೊ ಅಥವಾ ಅದಕ್ಕಿಂತಲು ಮುಂಚೆ ಆದ ಗಾಯಗಳು ಎಂಬ ಬಗ್ಗೆ ಗೊತ್ತಿರುವುದಿಲ್ಲ. ಆದ್ದರಿಂದ ಸದರಿ ವ್ಯೆಕ್ತಿಯ ಸಾವಿನಲ್ಲಿ ನಮಗೆ ಅನುಮಾನ ಇರುತ್ತದೆ. ಕಾರಣ ಸದರಿ ಅಪರಿಚತ ವ್ಯೆಕ್ತಿ ಮೃತಪಟ್ಟ ಬಗ್ಗೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಚನ್ನಬಸಪ್ಪ ತಂದೆ ವೀರಪ್ಪ ಬಟಗೇರಿ ಸಾ|| ಬರದ್ವಾಡ ತಾ|| ಕುಂದಗೋಳ ಜಿ|| ಧಾರವಾಡ ರವರ ಮಗನಾದ ಪರಶುರಾಮನು ಕಲಬುರಗಿ ಜಿಲ್ಲೆಯ ಅಫಜಲಪೂರ ತಹಹಸಿಲ ಕಾರ್ಯಾಲಯದಲ್ಲಿ ಗ್ರಾಮ ಲೆಕ್ಕಾಧಿಕಾರಿ ಅಂತಾ ಸುಮಾರು 9 ವರ್ಷಗಳಿಂದ ಸರ್ಕಾರಿ ನೌಕರಿ ಮಾಡಿಕೊಂಡಿದ್ದು, ಸದ್ಯ ರೇವೂರ (ಬಿ) ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಅಂತ ಕರ್ತವ್ಯ ನಿರ್ವಹಿಸಿಕೊಂಡಿರುತ್ತಾನೆ. ದಿನಾಂಕ 09-01-2019 ರಂದು ರಾತ್ರಿ 10:00 ಗಂಟೆಗೆ ಅಫಜಲಪೂರದಲ್ಲಿ ನನ್ನ ಮಗನಾದ ಪರಶುರಾಮನ ಜೋತೆಗೆ ಕೆಲಸ ಮಾಡುವ ಶರಣಪ್ಪ ನಡಗಟ್ಟಿ (ವಿಎ) ಇವರು ನನಗೆ ಪೋನ್ ಮಾಡಿ ನಿಮ್ಮ ಮಗನಾದ ಪರಶುರಾಮನಿಗೆ ಎಕ್ಸಿಡೆಂಟ್ ಆಗಿದೆ ನೀವು ಅಫಜಲಪೂರಕ್ಕೆ ಬನ್ನಿ ಎಂದು ತಿಳಿಸಿದ ಮೇರೆಗೆ  ನಾನು ಮತ್ತು ನನ್ನ ಹಿರಿಯ ಮಗನಾದ ಶರಣಪ್ಪ ಹಾಗೂ ನಮ್ಮೂರಿನವರಾದ ಶೋಕತ್ತಅಲಿ ಮುಲ್ಲಾ, ಮಾರುತಿ ಕಲ್ಲೂರ, ಮಾಹಾದೇವಪ್ಪ ಮಾಡಳ್ಳಿ ಇನ್ನಿತರರೂ ಕೂಡಿ ಒಂದು ಖಾಸಗಿ ವಾಹನ ಮಾಡಿಕೊಂಡು ಬೆಳಗಿನ ಜಾವ ಅಫಜಲಪೂರಕ್ಕೆ ಬಂದು ಅಫಜಲಪೂರದ ಶವಗಾರದಲ್ಲಿದ್ದ ನನ್ನ ಮಗನ ಮೃತ ದೇಹವನ್ನು ನೋಡಲಾಗಿ ನನ್ನ ಮಗನ ಎದೆಗೆ ಭಾರಿ ಗುಪ್ತಗಾಯವಾಗಿ ಕಂದುಗಟ್ಟಿರುತ್ತದೆ ಹಾಗೂ ಮುಖಕ್ಕೆ ಭಾರಿ ಗುಪ್ತಗಾಯ ಹಾಗೂ ತರಚಿದ ಗಾಯಗಳು ಆಗಿರುತ್ತವೆ. ನಂತರ ಅಲ್ಲೆ ಇದ್ದ ನನ್ನ ಮಗನ ಸಹದ್ದೋಗಿಗಳಿಗೆ ವಿಚಾರಿಸಿದಾಗ, ನನ್ನ ಮಗನ ಜೋತೆಗೆ ಕೆಲಸ ಮಾಡುವ ಸಿದ್ರಾಮ ಕುಂಬಾರ ಗ್ರಾಮ ಲೆಕ್ಕಾಧಿಕಾರಿ ಇವರು ತಿಳಿಸಿದ್ದೆನೆಂದರೆ, ನಿಮ್ಮ ಮಗನಾದ ಪರಶುರಾಮ ಹಾಗೂ ನಾನು ಮತ್ತು ಗಿರೀಶ ಸರ್ಕಾರಿ ಕೆಲಸದ ಮೇಲೆ ನಾವು ಮೂರು ಜನರು ನಮ್ಮ ನಮ್ಮ ಗ್ರಾಮಗಳ ಸಾಲ ಮನ್ನಾದ ಸರ್ವೆ ಮಾಡಿಕೊಂಡು ಮರಳಿ ಎಲ್ಲರೂ ಮಲ್ಲಾಬಾದ ಗ್ರಾಮಕ್ಕೆ ಬಂದು ರಾತ್ರಿ 8:30 ಗಂಟೆಗೆ ಚಹಾ ಕುಡಿದು ಮಲ್ಲಾಬಾದ ಗ್ರಾಮದಿಂದ ನಾನು ಮತ್ತು ಗಿರೀಶ ಇಬ್ಬರು ನನ್ನ ಮೋಟರ ಸೈಕಲ ಮೇಲೆ ಹಾಗೂ ನಿಮ್ಮ ಮಗ ಅವನ ಮೋಟರ ಸೈಕಲ ಮೇಲೆ ಕುಳಿತು ಅಫಜಲಪೂರಕ್ಕೆ ಹೊರಟಿರುತ್ತೇವೆ. ರಾತ್ರಿ 8:45 ಗಂಟೆ ಸುಮಾರಿಗೆ ಕಲಬುರಗಿ – ಅಫಜಲಪೂರ ರೋಡಿಗೆ ಇರುವ ನಿರಾವರಿ ಆಫೀಸ್ ಹತ್ತಿರ ನಿಮ್ಮ ಮಗ ಮೋಟರ ಸೈಕಲ ಮೇಲೆ ನಮ್ಮ ಮುಂದೆ ಹೋಗುತ್ತಿದ್ದನು. ಅವನ ಮುಂದೆ ಒಂದು ಕಬ್ಬಿನ ಟ್ಯಾಕ್ಟರ ಹೋಗುತ್ತಿತ್ತು. ಆಗ ಸದರಿ ಕಬ್ಬಿನ ಟ್ಯಾಕ್ಟರ ಚಾಲಕ ಯಾವುದೆ ಸೂಚನೆಗಳನ್ನು ನೀಡದೆ ಹಾಗೂ ಟ್ಯಾಕ್ಟರ ನಿಲ್ಲಿಸುವಂತಹ ಸೂಚನೆಗಳನ್ನು ಸಹ ಇಂಡಿಕೇಟರ ಲೈಟಗಳನ್ನು ಸಹ ಹಾಕದೆ ಟ್ಯಾಕ್ಟರನ್ನು ನಿರ್ಲಕ್ಷತನದಿಂದ ಒಮ್ಮೆಲೆ ಬ್ರೇಕ್ ಹಾಕಿದಾಗ ನಿಮ್ಮ ಮಗನ ಮೋಟರ ಸೈಕಲ ಟ್ಯಾಕ್ಟರ ಹಿಂದಿನ ಟ್ರೈಲಿಗೆ ಡಿಕ್ಕಿಯಾಗಿ ನಿಮ್ಮ ಮಗನ ಮುಖಕ್ಕೆ ಹಾಗೂ ಎದೆಗೆ ಭಾರಿ ಗುಪ್ತಗಾಯ ಹಾಗೂ ರಕ್ತಗಾಯಗಳು ಆಗಿ ಸ್ಥಳದಲ್ಲೆ ಮೃತ ಪಟ್ಟಿರುತ್ತಾನೆ. ಟ್ಯಾಕ್ಟರ ಚಾಲಕ ಟ್ಯಾಕ್ಟರಗೆ ಯಾವುದೆ ರೀತಿ ಗುರುತು ಪಟ್ಟಿಗಳು ಹಾಗೂ ಸಿಗ್ನಲ್ ಲೈಟಗಳು ಹಾಕಿರುವುದಿಲ್ಲ, ಘಟನೆಯ ನಂತರ ಸದರಿ ಟ್ಯಾಕ್ಟರ ಚಾಲಕ ಟ್ಯಾಕ್ಟರ ನಿಲ್ಲಿಸಿ ಓಡಿ ಹೋಗಿರುತ್ತಾನೆ ಎಂದು ತಿಳಿಸಿದರು. ನಂತರ ನಾವು ಅಪಘಾತವಾದ ಸ್ಥಳಕ್ಕೆ ಹೋಗಿ ಟ್ಯಾಕ್ಟರ ನೋಡಲಾಗಿ ಸೋನಾಲಿಕಾ ಕಂಪನಿಯ ಟ್ಯಾಕ್ಟರ ಇದ್ದು ಪಾಸಿಂಗ್ ನಂಬರ ಇರುವುದಿಲ್ಲ ಹಾಗೂ ಟ್ರೈಲಿಗಳಿಗೂ ಸಹ ನಂಬರ ಇರುವುದಿಲ್ಲ. ನನ್ನ ಮಗನ ಮೋಟರ ಸೈಕಲ ನೋಡಲು ಹೊಂಡಾ ಶೈನ್ ಕಂಪನಿಯ ಹೊಸ ಮೋಟರ ಸೈಕಲ ಇದ್ದು ಅದರ ನಂ CH NO:- ME4JC65VCJT026174   ENG NO:- JC65E-T-2070143 ಅಂತಾ ಇರುತ್ತದೆ. ದಿನಾಂಕ 09-01-2019 ರಂದು 8:45 ಪಿ ಎಮ್ ಕ್ಕೆ ನನ್ನ ಮಗನಾದ ಪರಶುರಾಮ ತಂದೆ ಚನ್ನಬಸಪ್ಪ ಬಟಗೇರಿ ಸಾ|| ಬರದ್ವಾಡ ತಾ|| ಕುಂದಗೋಳ ಜಿ|| ಧಾರವಾಡ ಹಾ|| ವ|| ಅಫಜಲಪೂರ ಈತನು ಸರ್ಕಾರಿ ಕೆಲಸದ ಮೇಲೆ ಕಲಬುರಗಿ – ಅಫಜಲಪೂರ ರೋಡಿಗೆ ಇರುವ ನೀರಾವರಿ ಆಫೀಸ್ ಹತ್ತಿರ ಮೋಟರ ಸೈಕಲ ಮೇಲೆ ಅಫಜಲಪೂರಕ್ಕೆ ಬರುತ್ತಿದ್ದಾಗ, ಕಬ್ಬು ಸಾಗಾಟ ಮಾಡುವ ಸೋನಾಲಿಕಾ ಕಂಪನಿಯ ಟ್ಯಾಕ್ಟರ ನೇದ್ದರ ಚಾಲಕ ಟ್ಯಾಕ್ಟರನ್ನು ನಿರ್ಲಕ್ಷತನದಿಂದ ಚಲಾಯಿಸಿ ಒಮ್ಮೆಲೆ ಬ್ರೇಕ್ ಹೊಡೆದರಿಂದ ನನ್ನ ಮಗನ ಮೋಟರ ಸೈಕಲ ಟ್ಯಾಕ್ಟರಕ್ಕೆ ಡಿಕ್ಕಿಯಾಗಿ ಅವನ ಮುಖಕ್ಕೆ ಹಾಗೂ ಎದೆಗೆ ಭಾರಿ ಗುಪ್ತಗಾಯ ಹಾಗೂ ರಕ್ತಗಾಯವಾಗಿ ಸ್ಥಳದಲ್ಲೆ ಮೃತ ಪಟ್ಟಿರುತ್ತಾನೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

09 January 2019

KALABURAGI DISTRICT REPORTED CRIMES

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 08-01-2019 ರಂದು ಸೊನ್ನ ಗ್ರಾಮದ ಕಡೆಯಿಂದ ಒಬ್ಬ ವ್ಯಕ್ತಿ ಟ್ರ್ಯಾಕ್ಟರನಲ್ಲಿ ಮರಳು ತುಂಬಿಕೊಂಡು ಅಫಜಲಪೂರ ಕಡೆಗೆ ಬರುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ, ಪಿ.ಎಸ್.ಐ, ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸೊನ್ನ ಹೊಸ ಬಡಾವಣೆಗೆ ಹೋಗುವ ಕ್ರಾಸ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಒಂದು ಟ್ರ್ಯಾಕ್ಟರ ಬರುತ್ತಿತ್ತು, ಆಗ ಸದರಿ ಟ್ರ್ಯಾಕ್ಟರನ್ನು ನಿಲ್ಲಿಸಲು ಕೈ ಸೂಚನೆ ಕೊಟ್ಟಾಗ, ಟ್ರ್ಯಾಕ್ಟರ ಚಾಲಕ ನಮ್ಮ ಪೊಲೀಸ್ ಜೀಪನ್ನು ನೋಡಿ ಟ್ರ್ಯಾಕ್ಟರನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋಗುತ್ತಿದ್ದನು, ಆಗ ನಾವು ಸದರಿಯವನನ್ನು ಬೆನ್ನಟ್ಟಿ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಸಾತಲಿಂಗಪ್ಪ ತಂದೆ ಭೀಮಶ್ಯಾ ದೇವರನಾವದಗಿ ಸಾ||ಸೊನ್ನ ತಾ|| ಅಫಜಲಪೂರ ಅಂತ ತಿಳಿಸಿದ್ದು, ಸದರಿಯವನಿಗೆ ಮರಳು ಸಾಗಾಣಿಕೆ ಮಾಡಲು ಪರವಾನಿಗೆ ಪಡೆದುಕೊಂಡ ಬಗ್ಗೆ ವಿಚಾರಿಸಲಾಗಿ ತನ್ನ ಹತ್ತಿರ ಯಾವುದೆ ದಾಖಲಾತಿಗಳು ಇರುವುದಿಲ್ಲ ಅಂತ ತಿಳಿಸಿದನು. ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರನ್ನು ಚೆಕ್ಕ ಮಾಡಲು SWARAJ ಕಂಪನಿಯದಿದ್ದು, ಅದರ ಟ್ರ್ಯಾಕ್ಟರ ಟ್ರೈಲಿಯಲ್ಲಿ ಮರಳು ತುಂಬಿತ್ತು, ಟ್ಯಾಕ್ಟರ ಮೇಲೆ ಎಲ್ಲಿಯೂ ನಂಬರ ಬರೆದಿರುವುದಿಲ್ಲ. ನಂತರ ಇಂಜೆನ್ ನಂಬರ ಚೆಕ್ ಮಾಡಲಾಗಿ ಅದರ Engine NO 47.5013/SZDo4456 CHASSIS NO WZCD61930952916 ಅಂತಾ ಇದ್ದು ಸದರಿ ಟ್ರ್ಯಾಕ್ಟರ ಅ.ಕಿ 5,00,000/-ರೂ  ಇರಬಹುದು. ಟ್ರ್ಯಾಕ್ಟರ ಟ್ರೈಲಿಯಲಿದ್ದ ಮರಳಿನ ಅ.ಕಿ 3000/- ರೂ ಇರಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರನ್ನು ಪಂಚರ ಸಮಕ್ಷಮ  ಜಪ್ತಿಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 08-01-2019 ರಂದು ಮಲ್ಲಾಬಾದ ಗ್ರಾಮದ ಕನಕದಾಸ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಸಿ.ಪಿ.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಬಾತ್ಮಿ ಸ್ಥಳಕ್ಕೆ ಹೋಗಿ ಮಲ್ಲಾಬಾದ ಗ್ರಾಮದ ಕನಕದಾಸ ಚೌಕದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಕನಕದಾಸ ಚೌಕ ಹತ್ತಿರ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನು. ಆಗ ನಾವು  ದಾಳಿ ಮಾಡಿದಾಗ ಮಟಕಾ ಬರೆಸಲು ಬಂದಂತಹ ಜನರು ಓಡಿ ಹೊದರು. ಮಟಕಾ ಬರೆದುಕೊಳ್ಳುತ್ತಿದ್ದ ವ್ಯೆಕ್ತಿಯನ್ನು ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ಅಡಿವೆಪ್ಪ ತಂದೆ ಶಿವಶರಣಪ್ಪ ಪಾಟೀಲ ಸಾ|| ಅತನೂರ ಹಾ|| || ಮಲ್ಲಾಬಾದ ಗ್ರಾಮ ತಾ|| ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 3670/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಪೆನ್ನ ದೊರೆತವು, ಸದರಿಯವುಗಳನ್ನು ವಶಕ್ಕೆ ತೆಗೆದುಕೊಂಡು  ಸದರಿ ಆರೋಪಿತನೊಂದಿಗೆ ಮರಳಿ ಅಫಜಲಪೂರ ಪೊಲೀಸ್ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಹರಣ ಪ್ರಕರಣ :
ರೇವೂರ ಠಾಣೆ : ಶ್ರೀ ಮಲ್ಲಪ್ಪ ತಂದೆ ರಾಮಚಂದ್ರ ಕಡಗಂಚಿ ಸಾ:ಭೈರಾಮಡಗಿ ತಾ:ಅಫಜಲಪೂರ ರವರ ಮಗಳಾದ ಅಂಜನಾ ಇವಳು 10 ತರಗಿತಿಯವರೆಗೆ ನಮ್ಮ ಗ್ರಾಮದಲ್ಲಿ ವಿದ್ಯೆಭ್ಯಾಸ ಮುಗಿಸಿದ್ದು ದಿನಾಂಕ:20-12-2018 ರಂದು ನಾನು ಮತ್ತು ನನ್ನ ಹೆಂಡತಿ ಪ್ರತಿ ದಿನದಂತೆ ಬೆಳಿಗ್ಗೆ 10,ಎಮ್,ಕ್ಕೆ ನಮ್ಮ ಹೋಲಕ್ಕೆ ಹೋಗಿರುತ್ತೇವೆ ನಾವ ಹೋಲಕ್ಕೆ ಹೋಗುವಾಗ ನನ್ನ ಮಗಳು ಅಂಜನಾ ಮನೆಯಲ್ಲಿಯೆ ಇದ್ದಳು ಮತ್ತು ಕೋಮಲ ಹಾಗೂ ಖ್ಯಾಮಲಿಂಗ ಇಬ್ಬರು ಶಾಲೆಗೆ ಹೋಗಿದ್ದರು ನಾವು ಹೋಲ್ಕಕೆ ಹೋಗಿ ನಮ್ಮ ಕೇಲಸ ಮುಗಿಸಿಕೊಂಡು ಮರಳಿ 6 ಪಿ,ಎಮ್.ಕ್ಕೆ ಮನೆಗೆ ಬಂದಿದ್ದು ಮನೆಗೆ ಬಂದಾಗ ನನ್ನ ಮಗಳು ಅಂಜನಾ ಮನೆಯಲ್ಲಿ ಇದ್ದಿರಲಿಲ್ಲ ಸ್ವಲ್ಪ ಹೋತ್ತು ಕಾದು ನೋಡಿದರು ಅವಳು ಬರಲಿಲ್ಲ ಆಗ ಗಾಬರಿಯಿಂದ ನಾನು ಮತ್ತು ನನ್ನ ಹೆಂಡತಿ ಇಬ್ಬರು ಕುಡಿ ಹುಡುಕಾಡಲು ಸುರುಮಾಡಿದೆವು ಮತ್ತು ಅಕ್ಕ ಪಕ್ಕದ ಮನೆಯವರಿಗೆ ವಿಚಾರಿಸಲು ಸುರುಮಾಡಿದಾಗ ನಮ್ಮ ಪಕ್ಕದ ಮನೆಯವರಾದ ಬಿರಣ್ಣ ತಂದೆ ನ್ಯಾಮಣ್ಣ ಜಮಾದಾರ ಇವರು ತಿಳಿಸಿದ್ದೆನಂದರೆ ನಾನು ಮಧ್ಯಾಹ್ನ 2 ಪಿ,ಎಮ್. ಸುಮಾರಿಗೆ ಬಿರಲಿಂಗೆಶ್ವರ ಗುಡು ಹತ್ತೀರ ಕುಳಿತಿದ್ದಾಗ ಮಲ್ಲಿಕಾರ್ಜುನ @ ಮಲ್ಲಪ್ಪ ತಂದೆ ಸಿದ್ದಮಾಳಪ್ಪ ನಿಂಬರ್ಗಾ ಈತನು ಟಂಟಂ ತಗೆದುಕೊಂಡು ಬಂದು ನಿಮ್ಮ ಮನೆ ಹತ್ತೀರ ನಿಂತು ನಿನ್ನ ಮಗಳಾದ ಅಂಜನಾ ಈವಳಿಗೆ ಹೆದರಿಸಿ ಟಂಟಂ ನಲ್ಲಿ ಕೂಡಿಸಿಕೊಂಡು ಹೋಗಿರುತ್ತಾನೆ ಅಂತಾ ತಿಳಿಸಿದನು. ಆಗ ನಾನು ಕಲಬುರಗಿ ಯಲ್ಲಿರುವ ನನ್ನ ಮಗನಾದ ಶರಣು ಈತನಿಗೆ ನಮ್ಮ ಗ್ರಾಮಕ್ಕೆ ಕರೆಯಿಸಿ ಈ ಬಗ್ಗೆ  ವಿಷಯ ತಿಳಿಸಿ ನಾನು ಮತ್ತು ನನ್ನ ಹೆಂಡತಿ ನನ್ನ ಸಂಬಂಧಿಕರೊಂದಿಗೆ ಚರ್ಚಿಸಿ  ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸುತ್ತೀದ್ದು ಕಾರಣ ಅಪ್ರಾಪ್ತ ವಯಸ್ಸಿನ ನನ್ನ ಮಗಳಾದ ಅಂಜನಾ ಈವಳಿಗೆ ಹೆದರಿಸಿ ಅಪಹರಿಸಿಕೊಂಡು ಹೋದ ನಮ್ಮ ಗ್ರಾಮದ ಮಲ್ಲಿಕಾರ್ಜುನ  @ ಮಲ್ಲಪ್ಪ ತಂದೆ ಸಿದ್ದಮಾಳಪ್ಪ ನಿಂಬರ್ಗಾ ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸಂಚಾರಿ ಠಾಣೆ : ದಿನಾಂಕ 06/01/2019 ರಂದು ರಾತ್ರಿ  ಶ್ರೀ ಶಿವಾನಂದ ಈತನು ತನ್ನ ಅಟೋರಿಕ್ಷಾ ನಂ ಕೆಎ-32 ಬಿ-6333 ನೇದ್ದರಲ್ಲಿ ತನ್ನ ಮಕ್ಕಳಾದ ಶಿವರಾಜ ಮತ್ತು ಬಸವರಾಜ ಹಾಗೂ ಅಳಿಯನಾದ ಸಂಜುಕುಮಾರ ಇವರಿಗೆ ಕೂಡಿಸಿಕೊಂಡು ಯಕ್ಕಂಚಿ ದಿಂದ ಸಿಂದಗಿ ಕಡೆಗೆ ಅಟೋ ಚಾಲಾಯಿಸಿಕೊಂಡು ಹೋಗುತ್ತಿದ್ದಾಗ ಎದುರುಗಡೆಯಿಂದ ಒಂದು ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಾಲಯಿಸಿಕೊಂಡು ಬಂದು ಅಟೋರಿಕ್ಷಾಕ್ಕೆ ಡಿಕ್ಕಿ ಪಡಿಸಿ ಅಟೋ ಪಲ್ಟಿಗೊಳಿಸಿ ಫೀರ್ಯಾದಿಯ ಮಗನಾದ ಬಸವರಾಜ ಈತನು ಎಡಗಾಲು ಮೊಳಕಾಲಿಗೆ, ಬಲಗೈ ರಟ್ಟೆಗೆ , ತರಚಿದಗಾಯ ಬಾಯಿಗೆ ಪೆಟ್ಟಾಗಿದ್ದು ತಲೆಗೆ ಭಾರಿಗಾಯಗೊಳಿಸಿ ಟ್ರ್ಯಾಕ್ಟರ ಸಮೇತ ಚಾಲಕ ಓಡಿಹೋಗಿದ್ದು ಬಸವರಾಜ ಈತನಿಗೆ ಉಪಚಾರ ಕುರಿತು ವಿಜಯಪೂರ ವಾಸುದೇವ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಹಣದ ಅಡಚಣೆ ಇದ್ದ ಪ್ರಯುಕ್ತ ಆತನ ತಂದೆ ಮತ್ತು ತಾಯಿ ಕೂಡಿ ಬಸವರಾಜ ಈತನಿಗೆ ನಿನ್ನೆ ವಿಜಯಪೂರದಿಂದ ಕಲಬುರಗಿ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಬಸವರಾಜ ಈತನು ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ಉಪಚಾರ ಫಲಕಾರಿ ಆಗದೆ ಇಂದು ದಿನಾಂಕ 08/01/2019 ರಂದು ಬೆಳಿಗ್ಗೆ 10-30 ಎ.ಎಂ.ಕ್ಕೆ ಮೃತ ಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.