POLICE BHAVAN KALABURAGI

POLICE BHAVAN KALABURAGI

27 November 2018

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಯಡ್ರಾಮಿ ಠಾಣೆ : ದಿನಾಂಕ 24-11-2018 ರಂದು ನಮ್ಮೂರ ದಯಾನಂದ ತಂದೆ ಸಿದ್ರಾಮಯ್ಯಾ ಹಿರೇಮಠ ರವರು ನನಗೆ ಫೋನ ಮಾಡಿ ಹೇಳಿದ್ದೇನೆಂದರೆ, ನಾನು ಮತ್ತು ನಮ್ಮೂರ ಕಾಶಿಮ ಕುಕ್ಕನೂರ ರವರು ಕೂಡಿ ಸಿಂದಗಿಯಿಂದ ಬರುವಾಗ ಅಲ್ಲಾಪೂರ ದಾಟಿ ನಿಮ್ಮ ಅಣ್ಣತಮ್ಮಕಿಯ ಅನೀಲ ತಂದೆ ಮರೆಪ್ಪ ದೇವರಮನಿ ಈತನು ತನ್ನ ಮೋಟರಸೈಕಲನ್ನು ನಮ್ಮ ವಾಹನಕ್ಕೆ ಸೈಡ ಹೊಡೆದು ಜೋರಾಗಿ ಹೋದನು, ನಮ್ಮ ಮುಂದೆ ಹೋಗುತ್ತಿದ್ದಂತೆ, ದಸದ್ತಗೀರಸಾಬ ಗಡಾಗಂಜ ರವರ ಹೊಲದ ಹತ್ತಿರ ಎದುರುಗಡೆ ರೋಡಿನ ಎಡಗಡೆ ಒಂದು ಟ್ರಾಲಿ ನಿಂತಿದ್ದು, ಅದಕ್ಕೆ ನೋಡದೇ ಅತೀವೇಗವಾಗಿ ಮತ್ತು ನಿಸ್ಕಾಳಜಿತನಿಂದ  ಮೋಟರ ಸೈಕಲನ್ನು ಚಲಾಯಿಸಿ ಟ್ರಾಲಿ ಹಿಂದೆ ಡಿಕ್ಕಿಹೊಡೆದನು, ನಂತರ ನಾವು ಹೋಗಿ ನೋಡಲಾಗಿ ಅನೀಲ ಈತನಿಗೆ ಹಣೆಗೆ, ಮತ್ತು ಬಾಯಿಗೆ ಭಾರಿ ರಕ್ತಗಾಯವಾಗಿದ್ದು, ಎಡರಟ್ಟೆಗೆ ಭಾರಿ ಒಳಪೆಟ್ಟಾಗಿ ಮುರದಿರುತ್ತದೆ ಹಾಗು ಎರಡು  ಮೊಳಕಾಲಿಗೆ ರಕ್ತಗಾಯವಾಗಿದ್ದು, ಸ್ಥಳದಲ್ಲೆ ಮೃತ ಪಟ್ಟಿದ್ದನು, ಮೋಟರ ಸೈಕಲ್ ಹಿಂದೆ ಕುಳಿತ ಸಲೀಮ ತಂದೆ ಕಮಲಸಾಬ ಅಸ್ಕಿ ಈತನಿಗೆ ತಲೆಗೆ  ರಕ್ತಗಾಯವಾಗಿದ್ದು, ಮೈ ಕೈಗೆ ಭಾರಿ ಒಳಪೆಟ್ಟಾಗಿರುತ್ತದೆ, ಬೇಗನೆ ಸ್ಥಳಕ್ಕೆ ಬರಲು ಹೇಳಿದ್ದರಿಂದ ನಾವು ಹಾಗು ಇತರರು ಕೂಡಿ ಸ್ಥಳಕ್ಕೆ ಹೋಗಿ ನೋಡಿದಾಗ ಅನೀಲ ಈತನು ಸ್ಥಳದಲ್ಲೆ ಮೃತ ಪಟ್ಟಿ ಬಿದ್ದಿದ್ದನು, ಸಲೀಮನಿಗೆ ಉಪಚಾರ ಕುರಿತು ಆಸ್ಪತ್ರೆಗೆ ತೆಗೆದುಕೊಂಡು ಹೊಗಿರುತ್ತಾರೆ, ನಂತರ ಟ್ರಾಯಲಿ ನೋಡಲಾಗಿ ಅದನ್ನು ಕಬ್ಬಿನ ಟ್ರಾಯಲಿ ಇದ್ದು, ಅದು ಮೊದಲು ರೋಡಿನ ಎಡಗಡೆ ಪಲ್ಟಿಯಾಗಿ ಬಿದ್ದಿತ್ತು ನಂತರ ಅದನ್ನು ಅದರ ಚಾಲಕ ಮತ್ತು ಮಾಲಿಕರು ಸೇರಿಕೊಂಡು ಟ್ರಾಯಲಿಯನ್ನು ಎತ್ತಿ ರೋಡಿನ ಮೇಲೆ ಯಾವುದೇ ಮುಂಜಾಗ್ರತ ಕ್ರಮಕೈಗೊಳ್ಳದೆ ಅಪಾಯಕಾರಿಯಾಗಿ ನಿಲ್ಲಿಸಿದ್ದರು, ಮೋಟರ ಸೈಕಲ್ ನೋಡಲಾಗಿ ಹೋಂಡಾ ಶೈನ ಮೋಟರ ಸೈಕಲ ನಂ ಕೆ.-28/.ಹೆಚ್-4535 ಅಂತಾ ಇದ್ದು ಸದರಿ ಮೋಟರ ಸೈಕಲ ಸಲೀಮ ಅಸ್ಕಿ ಈತನಿಗೆ ಸೇರಿದ್ದು ಇರುತ್ತದೆ. ಟ್ರಾಯಲಿ ಮಾಲಿಕ ಮತ್ತು ಚಾಲಕ ಸೇರಿಕೊಂಡು ತಮ್ಮ ಟ್ರಾಯಲಿಯನ್ನು ಅಪಾಯಕಾರಿಯಾಗಿ ರೋಡಿನ ಮೇಲೆ ನಿಲ್ಲಿಸಿದ್ದರಿಂದ ಮತ್ತು ಅನೀಲ ಈತನು ಮೋಟರ ಸೈಕಲನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತದಿಂದ ಚಲಾಯಿಸಿದ್ದರಿಂದ ರಸ್ತೆ ಅಪಘಾತ ಸಂಭವಿಸಿರುತ್ತದೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ಶ್ರೀಮತಿ ಮಲ್ಲಮ್ಮಾ ಗಂಡ ವಿಶ್ವನಾಥ ಮುಗಳಿ ವಿಳಾಸ; ಮರಗುತ್ತಿ  ತಾ;ಜಿ;ಕಲಬುರಗಿ ರವರ ಗಂಡನಾಧ ವಿಶ್ವನಾಥ ಮುಗಳಿ ಇವರು ಒಕ್ಕಲುತನ ಮಾಡಿಕೊಂಡಿದ್ದು ನನ್ನ  ತವರೂರಾದ ಗುಂಡಗುರ್ತಿಯಲ್ಲಿ ನಮ್ಮ ಅಜ್ಜಿಯಾದ ನಾಗಮ್ಮ ಹಿಟ್ಟಿನ ಇವರಿಗೆ ಆರೋಗ್ಯ ಸರಿ ಇಲ್ಲದಕಾರಣ ಅವರನ್ನು ವಿಚಾರಿಸಿಕೊಂಡು ಬರಲು ಕಳೆದ ಹದಿನೈದು ದಿವಸಗಳಿಂದ ನಾನು ಗುಂಡಗುರ್ತಿ ಗ್ರಾಮದಲ್ಲಿ ಇರುತ್ತೇನೆ. ನನ್ನ ಅಜ್ಜಿ ನಾಗಮ್ಮ ಹಿಟ್ಟಿನ ಇವಳಿಗೆ ಹೆಚ್ಚಿನ ಉಪಚಾರ ಕುರಿತು  ಸೋಲಾಪೂರ ಆಸ್ಪತ್ರೆಗೆ ಕರೆದುಕೊಂಡು ಹೋಗುವದಿತ್ತು ಅದಕ್ಕಾಗಿ ನನ್ನ ಗಂಡ ವಿಶ್ವನಾಥ ಮುಗಳಿ ಇವರಿಗೆ ಗುಂಡಗುರ್ತಿಗೆ ಬರಲು ತಿಳಿಸಿದ್ದೆ.  ದಿನಾಂಕ. 25-11-2018 ರಂದು ಸಮಯ ಸಂಜೆ. 7-00 ಗಂಟೆ ಸುಮಾರಿಗೆ ನನ್ನ ಗಂಡ ವಿಶ್ವನಾಥ ಇವರು ನನಗೆ ಫೋನ ಮಾಡಿ ಮರಗುತ್ತಿಯಿಂದ ನನ್ನ ಮಗ ಸಮರ್ಥಗೆ ಕರೆದುಕೊಂಡು ನಮ್ಮ ಮೋಟಾರ ಸೈಕಲ್ ಹೀರ ಸ್ಪ್ಲೆಂಡರ ನಂ.ಕೆ.ಎ.32.ಕ್ಯೂ.4459 ಇದರೆ ಮೇಲೆ ಗುಂಡಗುರ್ತಿಗೆ ಬರುತ್ತೇವೆ ಎಂದು ತಿಳಿಸಿದರು. ರಾತ್ರಿ 8-45 ಗಂಟೆ ಸುಮಾರಿಗೆ ಯಾರೋ ನನ್ನ ಗಂಡನ  ಮೋಬಾಯಿಲ್ ದಿಂದ ನನ್ನ ತಮ್ಮ ನಾಗರಾಜ  ಹಿಟ್ಟಿನ ಇವರಿಗೆ ಫೋನ ಮಾಡಿ ತಾವರಗೇರಾ ಕ್ರಾಸ ಹತ್ತಿರ ಹುಮನಾಬಾದ ರೋಡಿಗೆ ನನ್ನ ಗಂಡ ವಿಶ್ವನಾಥ ಮುಗಳಿ ಇವರ ಮೊಟಾರ ಸೈಕಲಕ್ಕೆ ಒಂದು ಟ್ರ್ಯಾಕ್ಟರ ಅಪಘಾತ ಪಡಿಸಿರುತ್ತದೆ . ವಿಶ್ವನಾಥ ಮತ್ತು ನನ್ನ ಮಗ ಸಮರ್ಥ ಇವರಿಗೆ ಗಾಯಗಳಾಗಿರುತ್ತವೆ. ಉಪಚಾರ ಕುರಿತು 108 ಅಂಬುಲೆನ್ಸನಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಹೋಗುತಿದ್ದೇವೆ ಸರಕಾರಿ ಆಸ್ಪತ್ರೆಗೆ ಬರಲು ತಿಳಿಸಿದರು . ಆಗ  ಗಾಬರಿಗೊಂಡು ನಾನು ಮತ್ತು ನನ್ನ ತಮ್ಮ ನಾಗರಾಜ ಇಬ್ಬರು ಕೂಡಿಕೊಂಡು ಮೋಟಾರ ಸೈಕಲ ಮೇಲೆ ಕಲಬುರಗಿ ಸರಕಾರಿ ಆಸ್ಪತ್ರೆಗೆ ಬಂದು  ಸ್ಟೇಚ್ಚರ ಮೇಲೆ ನೋಡಲಾಗಿ ನನ್ನ ಗಂಡನಿಗೆ ತಲೆಗೆ ಗುಪ್ತಪೆಟು, ಎದೆಗೆ ,ಹೊಟ್ಟೆಗೆ ಹಾಗೂ ಎರಡು ಪಕ್ಕೆಗಳಿಗೆ ಭಾರಿಗುಪ್ತ ಪೆಟ್ಟಾಗಿದ್ದು ಹಾಗೂ ಎಡಕಿವಿಯಿಂದ ರಕ್ತಸ್ರಾವವಾಗುತಿತ್ತು ಹಾಗೂ ಎಡಗಾಲು ಹಿಮ್ಮಡಿ ಪಾದದ ಹತ್ತಿರ ಭಾರಿ ಪೆಟ್ಟಾಗಿ ರಕ್ತ ಸ್ರಾವವಾಗುತಿತ್ತು  ನನ್ನ ಗಂಡ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ. ಹಾಗೂ ನನ್ನ ಮಗ ಸಮರ್ಥನಿಗೆ ನೋಡಲು ಆತನಿಗೆ ಮೂಗಿಗೆ ಬಾಯಿಗೆ ಭಾರಿ ಪೆಟ್ಟಾಗಿ ರಕ್ತಸ್ರಾವವಾಗಿರುತ್ತದೆ ಹಾಗೂ ಎದೆಗೆ ಹಾಗೂ ಮಗ್ಗಲಿಗೆ ಗುಪ್ತಪೆಟ್ಟಾಗಿರುತ್ತದೆ. ನಂತರ ಅಷ್ಟರಲ್ಲಿ ನಮ್ಮ ಅತ್ತೆ ಜಯಮ್ಮಾ ಹಾಗೂ ಮಲ್ಲಣ್ಣಾ ಹಲಚೇರಿ ಇವರು ಕೂಡಾ ಸರಕಾರಿ ಆಸ್ಪತ್ರೆಗೆ ಬಂದಿದ್ದು ಆಗ ಎಲ್ಲರೂ ಕೂಡಿಕೊಂಡು ನನ್ನ ಗಂಡ ಮತ್ತು ನನ್ನ ಮಗ ಇವರಿಗೆ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಯುನೈಟೆಡ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತವೆ. ಆಗ ಮಲ್ಲಣ್ಣ ಹಲಚೇರಿ ತಿಳಿಸಿದ್ದೇನೆಂದರೆ ನನ್ನ ಗಂಡ ವಿಶ್ವನಾಥ ಇವರು ಮೋಟಾರ ಸೈಕಲ ಮೇಲೆ ಬರುತ್ತಿರುವಾಗ ರಾತ್ರಿ 8-30 ಗಂಟೆ ಸುಮಾರಿಗೆ ಹುಮನಾಬಾದ ರೋಡಿನ ತಾವರಗೇರಾ ಕ್ರಾಸ ಹತ್ತಿರ ಇವರ ಎದರುಗಡೆಯಿಂದ ಅಂದರೆ ಕಲಬುರಗಿ ಕಡೆಯಿಂದ ಒಂದು ಟ್ಯಾಕ್ಟರ ನಂ.ಕೆ.ಎ.32. ಟಿ-777 ಇದರ ಚಾಲಕನು ಅತೀವೇಗವಾಗಿ ಹಾಗೂ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಅಪಘಾತ ಮಾಡಿ ಹಾಗೆ ಓಡಿಸಿಕೊಂಡು ಹೋಗಿರುತ್ತಾನೆ. ಅಂತಾ ಘಟನಾ ಸ್ಥಳದಲ್ಲಿ ಜನರು ಹೇಳಿದ್ದು ಗೊತ್ತಾಗಿರುತ್ತದೆ ಅಂತಾ ತಿಳಿಸಿರುತ್ತಾನೆ. ನನ್ನ ಗಂಡ ವಿಶ್ವನಾಥ ಇವರು ಮಾತನಾಡುವ ಸ್ಥಿತಿಯಲ್ಲಿ ಇರುವದಿಲ್ಲಾ  ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಪರಮೇಶ್ವರ ತಂದೆ ಮೌನೇಶ ಸುತಾರ ಸಾ|| ಘತ್ತರಗಾ ಗ್ರಾಮ ತಾ|| ಅಫಜಲಪೂರ ಇವರು ದಿನಾಂಕ 24/11/2018 ರಂದು ಸಾಯಂಕಾಲ 5.00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ತಾಯಿ ಹಾಗೂ ತಮ್ಮ ತಂಗಿ ಎಲ್ಲರೂ ಕೂಡಿ ನಮ್ಮೂರಿಗೆ ಹೊಗಬೇಕೆಂದು ಸೊಲ್ಲಾಪೂರದಿಂದ ನೇರವಾಗಿ ಅಫಜಲಪೂರಕ್ಕೆ ಬಸ್ಸು ಇಲ್ಲದ ಕಾರಣ ಅಕ್ಕಲಕೋಟ ವರೆಗೆ ಬಸ್ಸಿನಲ್ಲಿ ಬಂದು, ಅಕ್ಕಲಕೋಟದಿಂದ ಅಫಜಲಪೂರಕ್ಕೆ ಹೋಗುತ್ತಿದ್ದ ಒಂದು ಅಶೋಕ ಲೈಲೆಂಡ್ ಮಿನಿ ಗೂಡ್ಸ ಹಾಲಿನ ವಾಹನ ನಂ ಎಮ್.ಹೆಚ್-13 ಸಿಯು-1154 ನೇದ್ದರಲ್ಲಿ ನಾನು ಮತ್ತು ನನ್ನ ತಾಯಿಯಾದ ವಿಜಯಲಕ್ಷ್ಮೀ, ನನ್ನ ತಂಗಿಯಾದ ಮಾಲಾಶ್ರೀ, ನನ್ನ ತಮ್ಮನಾದ ಸಿದ್ದಾರಾಮ  ಮತ್ತು ನಮ್ಮಂತೆ ದೇವಣಗಾಂವ ಗ್ರಾಮದ ಶಿವಪ್ಪ ತಂದೆ ನಿಂಗಪ್ಪ ಪೂಜಾರಿ ಹಾಗೂ ಅವನ ಹೆಂಡತಿಯಾದ ಶಾಂತಾಬಾಯಿ ಗಂಡ ಶಿವಪ್ಪ ಪೂಜಾರಿ ಎಲ್ಲರೂ ಕುಳಿತು ಅಫಜಲಪೂರಕ್ಕೆ ಹೊರಟಿರುತ್ತೇವೆ. ವಾಹನದಲ್ಲಿ ಮುಂದಿನ ಸಿಟಿನ ಡ್ರೈವರ ಪಕ್ಕದಲ್ಲಿ ನಾನು ಕುಳಿತಿರುತ್ತೇನೆ. ವಾಹನದಲ್ಲಿ ಹಿಂದೆ ಉಳಿದವರೆಲ್ಲರೂ ಕುಳಿತಿದ್ದು  ನಾವು ಸದರಿ ವಾಹನದಲ್ಲಿ ಕುಳಿತು ಹೋಗುತ್ತಿದ್ದಾಗ ಅಫಜಲಪೂರದುಧನಿ ರೋಡಿಗೆ ಇರುವ ಮಾದಾಬಾಳ ತಾಂಡಾ ಹತ್ತಿರ ಹೋಗುತ್ತಿದ್ದಾಗ ಸದರಿ ನಾವು ಕುಳಿತ ವಾಹನದ ಚಾಲಕ ವಾಹನವನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ ಮುಂದೆ ಹೋಗುತ್ತಿದ್ದ ಒಂದು ಟ್ಯಾಕ್ಟರಕ್ಕೆ ಡಿಕ್ಕಿ ಪಡಿಸಿದನು. ಸದರಿ ಡಿಕ್ಕಿಯಿಂದ ವಾಹನದಲ್ಲಿದ್ದ ನನಗೆ ಎಡ ಹೆಡಕಿಗೆ ಹಾಗೂ ಮೈ ಕೈಗೆ ಗುಪ್ತಗಾಯಗಳು ಆಗಿದ್ದವು. ನನ್ನ ತಾಯಿಯಾದ ವಿಜಯಲಕ್ಷ್ಮೀಗೆ ಸೊಂಟಕ್ಕೆ ಮತ್ತು ಎರಡು ಕಾಲುಗಳಿಗೆ ಭಾರಿ ಗುಪ್ತಗಾಯ ವಾಗಿರುತ್ತದೆ. ನನ್ನ ತಂಗಿಯಾದ ಮಾಲಾಶ್ರೀಗೆ ಎರಡು ಕಾಲುಗಳಿಗೆ ಭಾರಿ ಗುಪ್ತಗಾಯ ಆಗಿರುತ್ತದೆ. ನನ್ನ ತಮ್ಮ ಸಿದ್ದಾರಾಮನಿಗೆ ಬಲಗೈ ಮುಂಗೈಗೆ ಹಾಗೂ ಬಲಗಡೆ ಪಕ್ಕೆಲುಬಿನ ಮೇಲೆ ತರಚಿದ ರಕ್ತಗಾಯಗಳು ಆಗಿರುತ್ತವೆ. ಹಾಗೂ ದೇವಣಗಾಂವ ಗ್ರಾಮದ ಶಿವಪ್ಪ ಪೂಜಾರಿಗೆ ಎರಡು ಕಾಲುಗಳಿಗೆ ಹಾಗೂ ಮೈ ಕೈಗೆ ಗುಪ್ತಗಾಯಗಳು ಆಗಿರುತ್ತವೆ. ಶಾಂತಾಬಾಯಿ ಪೂಜಾರಿ ಇವರಿಗೆ ಎದೆಗೆ ಹಾಗೂ ಮೈ ಕೈಗೆ ಒಳಪೆಟ್ಟುಗಳು ಆಗಿರುತ್ತವೆ. ಘಟನೆ ನಂತರ ಸದರಿ ವಾಹನದ ಚಾಲಕ ಓಡಿ ಹೋಗಿದ್ದು ಅವನ ಹೆಸರು ವಿಳಾಸ ಗೊತ್ತಿರುವುದಿಲ್ಲ. ಸದರಿ ನಾವು ಬರುತ್ತಿದ್ದ ವಾಹನದ ಚಾಲಕ ವಾಹನವನ್ನು ಟ್ಯಾಕ್ಟರಗೆ ಡಿಕ್ಕಿ ಪಡಿಸಿದ್ದು, ಸದರಿ ಟ್ಯಾಕ್ಟರಗೆ ಯಾವುದೆ ಡ್ಯಾಮೇಜ ಹಾಗೂ ಯಾರಿಗೂ ಏನು ಆಗದ ಕಾರಣ ಸದರಿ ಟ್ಯಾಕ್ಟರ ಚಾಲಕ ಘಟನೆ ನಂತರ ಟ್ಯಾಕ್ಟರನ್ನು ತಗೆದುಕೊಂಡು ಹೋಗಿರುತ್ತಾನೆ. ಘಟನೆ ನಂತರ ನಾವೆಲ್ಲರೂ ಅಫಜಲಪೂರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತೇವೆ. ನನ್ನ ತಾಯಿ ಮತ್ತು ನನ್ನ ತಂಗಿಗೆ ಹೆಚ್ಚಿನ ಗಾಯಗಳು ಆಗಿದ್ದರಿಂದ ಅವರನ್ನು ಕಲಬುರಗಿಯ ಕಾಮರೇಡ್ಡಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತೆವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

24 November 2018

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಫರತಾಬಾದ ಠಾಣೆ : ದಿನಾಂಕ 23/11/2018 ರಂದು ರಾಷ್ಟ್ರೀಯ ಹೇದ್ದಾರಿ 218ರ ಶಹಾಬಾದ ಕ್ರಾಸ ದಾಟಿ ರೋಡಿನ ಮೇಲೆ ಕಾರ ನಂ ಕೆಎ-04 ಎಮ.ಎನ್-5558 ನೇದ್ದರ ಚಾಲಕನು ತನ್ನ ಕಾರನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಚಲಾಯಿಸುತ್ತಿದ್ದ ಮೋಟಾರ ಸೈಕಲ ನಂ ಕೆಎ-32 ಇ.ಜಿ-3507 ನೇದ್ದಕ್ಕೆ ಡಿಕ್ಕಿಪಡಿಸಿದ್ದರಿಂದ ಫಿರ್ಯಾದಿ & ಮೋಟಾರ ಸೈಕಲ ಹಿಂದೆ ಕುಳಿತ್ತಿದ್ದ ಫಿರ್ಯಾದಿದಾರರ ಅಕ್ಕಳ ಮಗನಾದ ಶಿವು @ ಶಿವರಾಜ ತಂದೆ ಕೊತಲಪ್ಪ ಇಬ್ಬರು ರೋಡಿನ ಮೇಲೆ ಬಿದ್ದಿದ್ದು, ಇದ್ದರಿಂದ ಫಿರ್ಯಾದಿಯ ಬಲಗಾಲಿಗೆ ಭಾರಿ ರಕ್ತಗಾಯ & ಗುಪ್ತಗಾಯ ಹಾಗೂ ಎಡಗೈ ಮೊಳಕೈಗೆ ಭಾರಿ ಗುಪ್ತಗಾಯ, ಅಲಲ್ಲಿ ತರಚಿದ ಗಾಯಗಳಾಗಿದ್ದು, ಶಿವು @ ಶಿವರಾಜ ಇತನಿಗೆ ತಲೆಗೆ ಭಾರಿ ರಕ್ತಗಾಯ, ಎಡಮುಖಕ್ಕೆ ಭಾರಿ ರಕ್ತಗಾಯ, ಎರಡು ಕಾಲುಗಳಿಗೆ ಭಾರಿ ಗುಪ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಸದರಿ ಕಾರ ಚಾಲಕನು ಅಪಘಾತಪಡಿಸಿದ ನಂತರ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಹೊಗಿದ್ದು, ಸದರಿ ಕಾರ ನಂ ಕೆಎ-04 ಎಮ.ಎನ್-5558 ನೇದ್ದರ ಚಾಲಕನ ವಿರುದ್ದ ಸೂಕ್ತ ಕಾನೂನು ರೀತಿ ಕ್ರಮ ಜರೂಗಿಸಬೆಕು ಅಂತಾ ಶ್ರೀ ಶರಣಬಸಪ್ಪ ತಂದೆ ತಿಪ್ಪಣ್ಣ ಹೋಸಮನಿ ಸಾಃ ಕಾಖಂಡಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 23-11-2018 ರಂದು ಮಧ್ಯಾಹ್ನ ನನ್ನ ಮಗನಾದ ಜಾವೀದ ಇತನು ಮತ್ತು  ನಮ್ಮ ಮನೆಯ ಹತ್ತಿರ ಇರುವ ಅವನ ಸ್ನೇಹಿತನಾದ ಶಿವರಾಜ ತಂದೆ ಸಿದ್ದಪ್ಪ ತೆನ್ನಳ್ಳಿ ಇಬ್ಬರು ಕೂಡಿಕೊಂಡು ನಮ್ಮ ಹೋಸ ಬಜಾಜ ಪ್ಲ್ಯಾಟಿನಂ ಮೋಟಾರ ಸೈಕಲ್ ಚಸ್ಸಿ ನಂ MD2A18AY1JWD17365  ನೇದ್ದರ ಮೇಲೆ ಅಫಜಲಪೂರಕ್ಕೆ ಸಂತೆ ಮಾಡಿಕೊಂಡು ಬರುತ್ತೇವೆಂದು ಹೇಳಿ ಹೋಗಿರುತ್ತಾರೆ. ಸಾಯಂಕಾಲ ನಾನು ಮತ್ತು ನನ್ನ ಹೆಂಡತಿ ಮಕ್ಕಳು ನಮ್ಮ ಮನೆಯಲ್ಲಿದ್ದಾಗ, ನಮ್ಮ ಗ್ರಾಮದ ರುಕ್ಮುದ್ದಿನ್ ತಂದೆ ಚುನ್ನುಮಿಯಾ ಶೇಖ ಇತನು ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ ನಾನು ಖಾಸಗಿ ಕೆಲಸ ನಿಮೀತ್ಯ ನನ್ನ ಮೋಟಾರ ಸೈಕಲ್ ನಂ ಕೆಎ-32-ಎಲ್-6021 ನೇದ್ದರ ಮೇಲೆ ಅಫಜಲಪೂರಕ್ಕೆ ಹೋಗುತ್ತಿರುವಾಗ ಘತ್ತರಗಿ ದಿಂದ ಅಫಜಲಪೂರ ರಸ್ತೆಯ ಹಳೆ ಕಡಿ ಮೀಶಿನ್ ಹತ್ತಿರ ನಿಮ್ಮ ಮಗ ಜಾವೀದ ಇತನು ಮೋಟಾರ ಸೈಕಲ ಚಲಾಯಿಸುತ್ತಿದ್ದು, ಶಿವರಾಜ ಇತನು ಹಿಂದೆ ಕುಳಿತ್ತಿದ್ದು ಇರುತ್ತದೆ. ಇಬ್ಬರು ನಮ್ಮ ಮೋಟಾರ ಸೈಕಲ್ ಮುಂದೆ ಹೋಗುತ್ತಿದ್ದು ನಾವು ಅವರ ಹಿಂದೆ ಹೋಗುತ್ತಿದ್ದೇನು. ಅದೆ ಸಮಯಕ್ಕೆ ನಮ್ಮ  ಹಿಂದಿನಿಂದ ಮೋಟಾರ ಸೈಕಲ್ ನಂ ಕೆಎ-32-ಇಹೆಚ್-9490 ನೇದ್ದರ ಚಾಲಕನು ತನ್ನ ಮೋಟಾರ ಸೈಕಲ್ ಅನ್ನು ಅತೀ ವೇಗ ಮತ್ತು ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ನಮ್ಮ ಮೋಟಾರ ಸೈಕಲಗೆ ಓವರ ಟೇಕ ಮಾಡುವಾಗ ಎದುರುಗಡೆ ಕಬ್ಬು ತುಂಬಿದ ಒಂದು ಟ್ರ್ಯಾಕ್ಟರ ಬಂದಿದ್ದರಿಂದ ಸದರಿ ಮೋಟಾರ ಸೈಕಲ ಸವಾರನು ನಿಮ್ಮ ಮಗನ ಮೋಟಾರ ಸೈಕಲಗೆ ಹಿಂದಿ ನಿಂದ ಡಿಕ್ಕಿ ಡೆಸಿ ಅಫಘಾತ ಪಡೆಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋದನು. ಆಗ ನಾನು ನಿಮ್ಮ ಮಗ ಮತ್ತು ಶಿವರಾಜ ಇವರ ಹತ್ತಿರ ಹೋಗಿ ನೋಡಲು ನಿಮ್ಮ ಮಗ ಜಾಮೀದ ಇತನಿಗೆ ತಲೆಗೆ, ಎದೆಗೆ, ಎಡ ಕಣ್ಣಿಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯ ವಾಗಿದ್ದು ಮತ್ತು ಶಿವರಾಜ ಇತನಿಗೆ ತಲೆಗೆ ರಕ್ತಗಾಯವಾಗಿ, ಬಲಗಾಲು ಮುರಿದಿರುತ್ತದೆ ಅಂತಾ ತಿಳಿಸಿದ ಮೇರೆಗೆ ಘಾಬರಿಯಾಗಿ ನಾನು ನನ್ನ ಮತ್ತು ನನ್ನ ಮಕ್ಕಳಾದ ಮಜೀದ, ಸಾಜೀದ ಹಾಗೂ ಗ್ರಾಮದವರಾದ ಸಾತವೀರಪ್ಪ ತಂದೆ ಮಾಹಾದೇವಪ್ಪ, ಸಿದ್ದು ತಂದೆ ಕೆಂಚಪ್ಪ ಹಾಗೂ ಇನ್ನು ಇತರರು ಸೇರಿಕೊಂಡು  ಒಂದು ಖಾಸಗಿ ವಾನದಲ್ಲಿ ಘಟನಾ ಸ್ಥಳಕ್ಕೆ ಬಂದು ನನ್ನ ಮಗ ಮತ್ತು ಶಿವರಾಜನಿಗೆ ಆಗಿರುವ ಗಾಯಗಳನ್ನು ನೋಡಿ ನಾವು ತಂದಿರುವ ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆಗಾಗಿ ಅಫಜಲಪೂರಕ್ಕೆ ಕರೆದುಕೊಂಡು ಬರುತ್ತಿದ್ದಾಗ ಸಾಯಂಕಾಲ 5:45 ಗಂಟೆಯ ಸುಮಾರಿಗೆ ನನ್ನ ಮಗನು ಅಫಜಲಪೂರದ ಘತ್ತರಗಿ ರಸ್ತೆಗೆ ಇರುವ ಲಕ್ಷ್ಮಿ ಗುಡಿಯ ಹತ್ತಿರ ಮೃತಪಟ್ಟಿರುತ್ತಾನೆ. ನಂತರ ನನ್ನ ಮಗನ ಶವವನ್ನು ಅಫಜಲಪೂರ ಸರಕಾರಿ ಆಸ್ಪತ್ರೆಯಲ್ಲಿ ಹಾಕಿಸಿರುತ್ತೇನೆ. ಶಿವರಾಜನಿಗೆ ಅಫಜಲಪೂರ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸಿ  ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ಕಳುಹಿಸಿಕೊಟ್ಟಿರುತ್ತೆವೆ ಅಂತಾ ಶ್ರೀ ಮೈನೊದ್ದಿನ್ ತಂದೆ ಬಾಷಾಸಾಸ ಶೇಖ @ ಮುಲ್ಲಾ ಸಾ: ಕೊಳ್ಳುರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 19-11-2018 ರಂದು ಬೆಳಿಗ್ಗೆ ಮೃತ ಸೋಮನಾಥ ರೆಡ್ಡಿ ಇತನು ಜಿಲ್ಲಾ ಸರಕಾರಿ  ಆಸ್ಪತ್ರೆ  ಎದುರುಗಡೆ ಬರುವ ಬಂಡಿ ಹೊಟೇಲನಲ್ಲಿ ಚಹಾ ಕುಡಿಯುವ ಸಂಬಂದ ಹೋಗಿ ಚಹಾ ಕುಡಿದು ವಾಪಸ್ಸ ಸರಕಾರಿ ಆಸ್ಪತ್ರೆ ಒಳಗಡೆ ಉಪಚಾರ ಪಡೆಯುವ ಕುರಿತು ನಡೆದುಕೊಂಡು ಆಸ್ಪತ್ರೆ ಎದುರಿನ ರೋಡ ದಾಟುತ್ತೀರುವಾಗ ಆರೋಪಿ ಡಾ|| ರಾಹುಲ ಇವರು ಜಿ.ಜಿ.ಹೆಚ್ ಸರ್ಕಲ ಕಡೆಯಿಂದ ಆರ.ಟಿ.ಓ ಕ್ರಾಸ ಕಡೆಗೆ ಹೋಗುವ ಕುರಿತು ತನ್ನ ಕಾರ ನಂ ಕೆಎ-32/ಎನ್-6611 ನೇದ್ದನ್ನು ಅತಿವೆಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೃತ ಸೋಮನಾಥ ರೆಡ್ಡಿ ಇತನಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಆತನಿಗೆ ಭಾರಿಗಾಯಗೊಳಿಸಿ ಜಿಲ್ಲಾ ಸರಕಾರಿ  ಆಸ್ಪತ್ರೆಗೆ ಉಪಚಾರ ಕುರಿತು ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಸೋಮನಾಥ ರೆಡ್ಡಿ ಇತನು ಅಪಘಾತದಲ್ಲಿ ಆದ ಗಾಯದ ಉಪಚಾರ ಫಲಕಾರಿಯಾಗದೆ ದಿನಾಂಕ 23-11-2018 ರಂದು ಮದ್ಯಾಹ್ನ 1-45 ಗಂಟೆ ಸುಮಾರಿಗೆ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇರುತ್ತದೆ. ಅಂತಾ   ಶ್ರೀ ಸೋಮನಾಥ ರೆಡ್ಡಿ ತಂದೆ ಬಸವರಾಜ ರೆಡ್ಡಿ  ಸಾ: ಆಶ್ರಯ ಕಾಲೋನಿ ಶಹಾಬಜಾರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.