POLICE BHAVAN KALABURAGI

POLICE BHAVAN KALABURAGI

01 September 2018

KALABURAGI DISTRICT REPORTED CRIMES

ವರದಕ್ಷಣೆ  ಆಸೆಗಾಗಿ ಕಿರುಕಳ ನೀಡಿ ಕೊಲೆ ಮಾಡಿದ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಅಶೋಕ ತಂದೆ ನರಸಪ್ಪ ಸಗರಿ ಹಾ:ವ: ಹೌಸಿಂಗ ಬೋರ್ಡ ಕಾಲೋನಿ ಹಳೆ ಜೇವರ್ಗಿ ರಸ್ತೆ ಕಲಬುರಗಿ ಇವರ ಮಗಳಾದ ಪುಷ್ಪಾ ತಂದೆ ಆಶೋಕ ಇವಳ ಮದುವೆಯು ದಿನಾಂಕ 6-7-2018 ರಂದು ಕಮಲಾಪೂರ ಗ್ರಾಮದ ಬಾಬುರಾವ (ಬಾಬು) ತಂದೆ ಗಿರಿಮಲ್ಲಪ್ಪ ಇವರ ಜೋತೆಗೆ ಗ್ರಾಮದ ಮಂಗಲ ಕಾರ್ಯಲಯದಲ್ಲಿ ಮದುವೆ ಜರುಗಿರುತ್ತದೆ. ನಾನು ಮದುವೆಯ ಸಮಯದಲ್ಲಿ ನನ್ನ ಮಗಳ ಗಂಡನ ಮನೆಯವರ ಬೇಡಿಕೆಯಂತೆ ನಗದು ಹಣ 1,11.000/- ಹಾಗೂ 9 ತೋಲೆ ಬಂಗಾರ ಹಾಗೂ ಹಂಡ್ಯಾ ಬಾಂಡ್ಯಾ ಇತರೆ ಮನೆಯ ಬೆಲೆಬಾಳುವ ಸಾಮಗ್ರಿಗಳನ್ನು ಹಾಗೂ ಬೆಲೆಯುಳ್ಳ ಬಟ್ಟೆ ಹಾಗೂ ಕೈ ಗಡಿಯಾರ ಹಾಗೂ ಈತರೆ ಎಲ್ಲಾ ಸಾಮಗ್ರಿ ಕೂಡಿ ಒಟ್ಟು ರೂ 10,0000/- ರೂಪಾಯಿ ಖರ್ಚು  ಮಾಡಿ ಮಗಳ ಗಂಡನ ಬೇಡಿಕೆಯಂತೆ ನೇರವೆರಿಸಿ ಕೋಡಲಾಯಿತ್ತು. ಲಗ್ನದ ನಂತರ ನಮ್ಮ ಮಗಳು ಗಂಡನ ಮನೆಯಲ್ಲಿ ಕೆಲವು ದಿನಗಳು ಮಾತ್ರ ನೆಮ್ಮದಿಯಿಂದ ಬಾಳೆ ಮಾಡಿದು, ತದನಂತರ ನಮ್ಮ ಮಗಳಿಂದ ತಿಳಿದು ಬಂದಿದೆನೆಂದರೆ ಗಂಡನ ಮನೆಯಲ್ಲಿ ಇವಳಿಗೆ ಮಗಳ ಗಂಡ , ಅತ್ತೆಯಾದ ಕಮಲಾಬಾಯಿ ಹಾಗೂ ಗಂಡನ ತಂಗಿ ಜಗದೇವಿ ಮತ್ತು ಜಗದೇವಿ ಗಂಡನಾದ ರಾಘವೇಂದ್ರ  ಹಾಗೂ ಮಗಳ ಗಂಡನ ತಮ್ಮನಾದ ಶರಣಬಸಪ್ಪಾ ಇವರೆಲ್ಲರೂ ಒಂದುಗೂಡಿ ರಚನಾತ್ಮಕವಾಗಿ ಒಂದಿಲ್ಲ ಒಂದು ನೆಪದಿಂದ ಮಾನಸಿಕ ಹಾಗೂ ದೈಹಿಕ ವರದಕ್ಷಿಣೆಗಾಗಿ ಕಿರುಕುಳ ಕೊಡುತ್ತಿದು.  ವರದಕ್ಷಿಣೆ ಪೊರೈಸದಿದ್ದರೆ ನಮ್ಮ ಮನೆಯಲ್ಲಿ ನಿನ್ನ ಸಂಸಾರ ಮಾಡುವದು ಕಷ್ಟವಾಗುತ್ತದೆ ಎಂದು ಕಿರುಕುಳ ಕೊಡಲು ಪ್ರಾರಂಬಿಸಿದರು. ಈ ವಿಷಯ ನಮ್ಮ ಮಗಳು ಕಲಬುರಗಿಗೆ ಬಂದಾಗ ನಮ್ಮ ಹಾಗೂ ನಮ್ಮ ಮನೆಯವರ ಮುಂದೆ  ಹೇಳುತ್ತಿದ್ದಳು, ಮಗಳಿಗೆ ಸಮಜಾಯಿಸಿ ಗಂಡನ ಮನೆಗೆ ಕಳುಹಿಸಿರುತ್ತೇವೆ ಈಷ್ಟಾದರು ಸಹ ನಮ್ಮ ಮಗಳ ಗಂಡನಾದ ಬಾಬುರಾವ ಈತನು ನಾನು ರಾಜಕೀಯವಾಗಿ ದೊಡ್ಡವನಿದ್ದು ಹಾಗೂ ನಮ್ಮ ತಮ್ಮ ಶರಣಬಸಪ್ಪ ಜಾಲಹಳ್ಳಿ ದೊಡ್ಡ ಸರಕಾರಿ ಹುದ್ದೆಯಲ್ಲಿದ್ದು  ನೀವು ಎನು ಮಾಡಿಕೊಳ್ಳುವ ಸಾಧ್ಯತೆ ಇಲ್ಲಾ ಎಂದು ಮನಸ್ಸಿಗೆ ಬಂದ ಹಾಗೆ ಅವಾಚ್ಯ ಶಭ್ದಗಳಿಂದ ಹಿಯಾಳಿಸುತ್ತಿದರು, ಹಾಗೂ ಮೇಲಿಂದ ಮೇಲೆ ಮೇಲೆ ನಮೂದಿಸಿದ  ಐದು ಜನರು ಒಟ್ಟುಗೂಡಿ ಮಾನಸಿಕ ಹಾಗೂ ದೈಹಿಕ ಕಿರುಕುಳು ಕೊಟ್ಟು ಬೇಡಿಕೆ ಈಡೆರಿಸಿದಿದರೆ ನಿನ್ನನ್ನು ನೇಣಿಗೆ ಹಾಕಿಕೊಳ್ಳುವದೊಂದೆ ಮಾರ್ಗ ಉಳಿದಿರುತ್ತದೆ ಎಂದು ಹೆದರಿಸುತ್ತಿದ್ದರು ಹಾಗೂ ಮಗಳ ಗಂಡನಾದ ಬಾಬುರಾವ ಇತನು ನನ್ನಗೆ ಐದು ಲಕ್ಷ ರೂಪಾಯಿ ಕಾರು ತೆಗೆದಕೊಳ್ಳಲು ವರದಕ್ಷಿಣೆ ಕೇಳಿದಾಗ ನಾನ್ನು ಅಷ್ಟು ರೂಪಾಯಿಯನ್ನು ಕೊಡಲು ಆಗುವದಿಲ್ಲ ಎಂದು ಹೇಳಿ ಬೆರೆಯವರಿಂದ ಕೈಗಡ ತೆಗೆದುಕೊಂಡು ಬಾಬುರಾವ ಇವನಿಗೆ ರಾಖಿ ಹಬ್ಬದಂದು ಮಗಳು ನಮ್ಮ ಮನೆಗೆ ಬಂದಾಗ ತಿಳಿಸಿ ಸಮಜಾಯಿಸಿ 2 ಲಕ್ಷ ರೂಪಾಯಿ ಕೊಟಿರುತ್ತೇನೆ. ಉಳಿದ ಹಣದ ಸಲುವಾಗಿ ಕಿರಿಕಿರಿ ಮಾಡಲು ಪ್ರಾರಂಬಿಸಿದಾಗ 2 ತಿಂಗಳ ನಂತರ ಉಳಿದ ಹಣ ಕೊಡುವದಾಗಿ ಹೇಳಿ ನನ್ನ ಹಿರಿಯ ಮಗನಾದ ಶಿವಕುಮಾರ ಇವನ ಜೋತೆಗೆ ಕಮಲಾಪೂರ ಗ್ರಾಮಕ್ಕೆ ಹೋಗಿ ಮಗಳನ್ನು ಬಿಟ್ಟು ಬಂದಿರುತ್ತಾನೆ. ಇದಲ್ಲದೆ ನನ್ನ ಮಗಳಾದ ಪುಷ್ಪಾ ಇವಳು ಬಾಬುರಾವ ಜಾಲಹಳ್ಳಿ ಇವನ ಜೊತೆ ಮದುವೆ ನಿಶ್ಚಯ ಆಗದೆ ಮುಂಚೆ ಸರಕಾರಿ ಆಸ್ಪತ್ರೆ ಲಿಂಗಸೂರ ಅಲ್ಲಿ ನೌಕರಿ ಮಾಡುತ್ತಿದು. ಮದುವೆ ನಿಶ್ಚಯ ಆದ ನಂತರ ಬಾಬುರಾವ ಹಾಗೂ ಅವರ ತಾಯಿ. ತಂಗಿ ಗಂಡ ಹಾಗೂ ಗಂಡನ ತಮ್ಮನಾದ ಶರಣಬಸಪ್ಪಾ ಇವರ ಒತ್ತಾಯದ ಮೇರೆಗೆ ನಾನು ಮಗಳಿಗೆ ಸಮಜಾಯಿಸಿ ಆಕೆಗೆ ನೌಕರಿ ಬಡಿಸಿರುತ್ತೇನೆ ಈ ಘಟನೆಯಿಂದ ನನಗೆ ಹಾಗೂ ನನ್ನ ಮನೆಯಲ್ಲಿ ಹಾಗೂ ಮಗಳಿಗೆ ಬೇಜಾರಾದರು ಮಗಳು ಭವಿಷ್ಯದ ಸಲುವಾಗಿ ತಾಳ್ಮೆಯಿಂದ ಸಹಿಸಿಕೊಂಡಿರುತ್ತೇನೆ. ಮಾನ್ಯರೆ ನನ್ನ ಮಗಳಾದ ಪುಷ್ಪಾ ಇವಳು ರಾಖಿ ಹಬ್ಬಕ್ಕೆ ನನ್ನ ಮಗಳನ್ನು ಮನೆಗೆ ಕರೆದುಕೊಂಡು ಬಂದು ಗಂಡನ ಮನೆಗೆ ಕಳುಹಿಸಿದ ನಂತರ ಗಂಡನ ಮನೆಯವರು ಕಾರಿಗಾಗಿ ಉಳಿದ 3 ಲಕ್ಷ ವರದಕ್ಷಿಣೆ ಕೊಡಬೇಕೆಂದು ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ಹೆಚ್ಚಿಸಿದರು. ಮಗಳ ಅತ್ತೆ ಹಾಗೂ ನಾದನಿ ಮೈದುನ ಮತ್ತು ಮೇಲೆ ನಮೂದಿಸಿದ ಎಲ್ಲರೂ ಒಟ್ಟುಗೂಡಿ ಮಗಳನ್ನು ವರದಕ್ಷಿಣೆಗಾಗಿ ಮಗಳನ್ನು ಮುಗಿಸಿ ಬಿಡುವ ಉದ್ದೇಶದಿಂದ ಕಿರುಕುಳದಲ್ಲಿ ಉಗ್ರತೆ ಹೆಚ್ಚಿಸಿರುತ್ತಾರೆ ಮತ್ತು ನಮ್ಮೊಂದಿಗೆ ಮಾತನಾಡಬಾರದೆಂದು ಮೋಬೈಲ ಕೂಡ ಮದುವೆಯಾದ 3 ದಿನದಲ್ಲಿ ಕಸಿದುಕೊಂಡಿರುತ್ತಾರೆ. ಇಂದು ದಿನಾಂಕ 31-08-2018 ರಂದು ಮುಂಜಾನೆ ಬೆಳಗ್ಗೆ 9 ಗಂಟೆಗೆ ಮನೆಯಲ್ಲಿ ಲಕ್ಷ್ಮಿ ಪೂಜೆ ಪ್ರಯುಕ್ತ  ನಾನು ಹಾಗೂ ನಮ್ಮ ಮನೆಯವರು ಮಗಳಾದ ಪುಷ್ಪಾ ಹಾಗೂ ಆಕೆಯ ಗಂಡನ ಜೋತೆ ಹಾಗೂ ಗಂಡನ ತಾಯಿ ಇವರಿಗೆ ಮೋಬೈಲ ಮೂಲಕ ಮಾತ್ತಾಡುತ್ತಿದ್ದಾಗ ನನ್ನ ಮಗಳು ಮಾನಸಿಕ ಸ್ಥಿತಿ ಹಾಗೂ ಗಂಡಾತರಕ್ಕೆ ಒಳ ಬಿಳದಂತೆ ಅನಿಸಿ ನಾನು ನಿಜ ಸಂಗತಿ ಅರಿಯಲು ಮತ್ತೆ ಮತ್ತೆ ಪ್ರಯತ್ನಿಸಿದಾಗ ಗಂಡನ ಮನೆಯವರು ಯಾವುದೇ ಮಾತು ಕೇಳದೆ ಮೋಬೈಲ ಬಂದ ಮಾಡಿ ಬಿಟ್ಟಿರುತ್ತಾರೆ.  ಇಂದು ಮಧ್ಯಾಹ್ನ 12-30 ಗಂಟೆ ಸುಮಾರಿಗೆ ನನ್ನ ಮಗಳ ಗಂಡನಾದ ಬಾಬುರಾವ ಈತನು ನನಗೆ ಮೋಬೈಲ ಮುಖಾಂತರ ಮೂಲಕ ಕರೆ ಮಾಡಿ ಪುಷ್ಪಾ ಇವಳಿಗೆ ನಾವು ಕಲಬುರಗಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದು. ಆಕೆಗೆ ಪ್ರಗ್ನೆ ತಪ್ಪಿತು ಚಿಕ್ಸತೆಗಾಗಿ ಕಲಬುರಗಿಗೆ ತರುತ್ತಿಸ್ಸೆವೆ ಎಂದು ಹೇಳಿದಾಗ ನನಗೆ ಸಂಶಯ ಬಂದು ಎನಾಗಿದೆ ಎಂದು ಮೇಲೆ ಮೇಲೆ ಕೇಳಿದಾಗ ಪುಷ್ಪಾ ಇವಳು ತಿರಿಕೊಂಡಿರುತ್ತಾರೆ ಎಂದು ಹೇಳಿದಾಗ ಈ ವಿಷಯ ತಿಳಿದು ನನ್ನ ಮನೆಯವರು ದಿಗಬ್ರಮೆಗೊಂಡು ಯುವನಿಟೇಡ್ ಆಸ್ಪತ್ರೆಗೆ ಬಂದು ಅವರನ್ನು ಕಾಯಿಯುತ್ತಿದ್ದಾಗ ಖಾಸಗಿ ವಾಹನದಲ್ಲಿ ಮೇಲೆ ನಮೂದಿಸಿದ ಒಬ್ಬನು ಬಂದು ಪುಷ್ಪಾ ಇವಳನ್ನು ಬಿಟ್ಟು ಓಡಿ ಹೋಗಿರುತ್ತಾರೆ. ನಾನು ಆಸ್ಪತ್ರೆಯ ವೈಧ್ಯಾಧಿಕಾರಿಗಳಿಗೆ ವಿಚಾರಿಸಿದಾಗ ಅವರು ನನಗೆ ತಿಳಿಸಿದೆನೆಂದರೆ ನಿಮ್ಮ ಮಗಳು ಸುಮಾರು 2 ಗಂಟೆ ಮುಂಚಿತವಾಗಿ ಸಾವನಪ್ಪಿರುತ್ತಾರೆ ಎಂದು ಹೇಳಿರುತ್ತಾರೆ ಹಾಗೂ ಮಗಳ ಶವವನ್ನು ಸರ್ಕಾರಿ ಆಸ್ಪತ್ರೆ ಕಲಬುರಗಿಗೆ ರವಾನಿಸುತ್ತಾರೆ. ಮಾನ್ಯರೆ ಮೇಲೆ ನಮೂದಿಸಿದ ನನ್ನ ಮಗಳ ಗಂಡನಾದ ಬಾಬುರಾವ , ಅತ್ತೆ ಕಮಲಾಬಾಯಿ , ನಾದನಿ ಜಗದೇವ, ಹಾಗೂ ಆಕೆಯ ಗಂಡ ರಾಘವೇಂದ್ರ  ಮತ್ತು ಮೈದುನನಾದ ಶರಣಬಸಪ್ಪ (ಉಪ-ತಹಶಿಲದಾರ) ಇವರೆಲ್ಲರೂ ಒಂದಾಗಿ ಉದ್ದೇಶ ಪೂರ್ವಕ ಪುಷ್ಪಾ ಇವಳನ್ನು ವರದಕ್ಷಿಣೆಗೋಸ್ಕರ ಮಾನಸಿಕ ಹಾಗೂ ದೈಹಿಕ ತೊಂದರೆ ಕೊಟ್ಟು ಸಾಯಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ದಿನಾಂಕ 31/08/2018 ರಂದು ನಾನು ನಮ್ಮ ಮನೆಯಲಿದ್ದಾಗ ನಮಗೆ ಪರಿಚಯದವರಾದ ಗೌರ(ಬಿ) ಗ್ರಾಮದ ಅರ್ಜುನ ತಂದೆ ಸಂತ್ರಾಮಸಿಂಗ್ ರಜಪುತ ರವರು ನನ್ನ ಮೋಬೈಲಗೆ ಕರೆ ಮಾಡಿ ತಿಳಿಸಿದ್ದೆನೆಂದರೆ ನಾನು ಹಾಗು ಭಗತಸಿಂಗ್ ತಂದೆ ರಾಮಸಿಂಗ್ ರಜಪುತ ಇಬ್ಬರು ನಮ್ಮ ಮೋಟಾರ್ ಸೈಕಲ್ ಮೇಲೆ ಅಫಜಲಪೂರಕ್ಕೆ ಹೋಗುತಿದ್ದಾಗ ಶಿರವಾಳ ಸಮೀಪ ಭೀರಪ್ಪಾ ಪೂಜಾರಿ ರವರ ಹೊಲದ ಹತ್ತಿರ ನಮ್ಮ ಮುಂದೆ ನಿಮ್ಮ ತಮ್ಮನಾದ ಸೀತಾರಾಮ ರವರು ನಡೆದುಕೊಂಡು ರೋಡಿನ ಎಡಬಾಜು ಬರುತಿದ್ದರು ನಿಮ್ಮ ತಮ್ಮನ ಹಿಂದಿನಿಂದ ಒಬ್ಬ ಮೋಟಾರ ಸೈಕಲ್ ಸವಾರನು ತನ್ನ ಮೋಟಾರ್ ಸೈಕಲ್ ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮುಂದೆ ನಡೆದುಕೊಂಡು ಬರುತಿದ್ದ ನಿಮ್ಮ ತಮ್ಮನಿಗೆ ಮೋಟಾರ ಸೈಕಲ್  ಡಿಕ್ಕಿ ಪಡಿಸಿದ್ದರಿಂದ ನಿಮ್ಮ ತಮ್ಮ ರೋಡಿನ ಬಾಜು ಬಿದ್ದು ಎಡಗಾಲಿಗೆ ಭಾರಿ ರಕ್ತಗಾಯ ತಲೆಗೆ, ಎದೆಗೆ ಭಾರಿ ಗುಪ್ತ ಗಾಯವಾಗಿರುತ್ತವೆ ಸದರಿ ಮೋಟಾರ್ ಸೈಕಲ್ ಸವಾರನು ಗಾಯ ಹೊಂದಿದ್ದು ಅವನ ಹೆಸರು ಅಭಿಷೇಕ ತಂದೆ ಮೋಹನದಾಸ ಪಾಟೀಲ ಸಾ||ಗೌರ(ಬಿ) ಅಂತ ಇದ್ದು ಸದರಿಯವನ ಮೋಟಾರ್ ಸೈಕಲ್ ನಂಬರ ನೋಡಲಾಗಿ ಹಿರೋ ಹೊಂಡಾ ಸ್ಟ್ಯಾಂಡರ ಪ್ಲಸ್ ಇದ್ದು ಅದರ ನಂ ಕೆಎ-32 ವ್ಹಿ-8380 ಅಂತ ಇರುತ್ತದೆ  ನಾವು ಸಧ್ಯ ಒಂದು ಖಾಸಗಿ ವಾಹನದಲ್ಲಿ ನಿಮ್ಮ ತಮ್ಮನಿಗೆ ಹಾಕಿಕೊಂಡು ಸರಕಾರಿ ಆಸ್ಪತ್ರೆ ಅಫಜಲಪೂರಕ್ಕೆ ಸೇರಿಕೆ ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೇ ನಿಮ್ಮ ತಮ್ಮ ಮೃತ ಪಟ್ಟಿರುತ್ತಾನೆ ನೀವು ಬನ್ನಿ ಅಂತ ತಿಳಿಸಿದ ಬಳಿಕ ನಾನು ಹಾಗು ನನ್ನ ಹೆಂಡತಿ ರಾಜುಬಾಯಿ ಇಬ್ಬರು ಸರಕಾರಿ ಆಸ್ಪತ್ರೆ ಅಫಜಲಪೂರಕ್ಕೆ ಬಂದು ನೋಡಲಾಗಿ ನಮ್ಮ ತಮ್ಮನ ಎಡಗಾಲಿಗೆ ಭಾರಿ ರಕ್ತಗಾಯ ಎದೆಗೆ, ತಲೆಗೆ ಗುಪ್ತಗಾಯವಾಗಿ ಚಿಕಿತ್ಸೆ ಫಲಕಾರಿಯಾಗಿದೇ ಮೃತಪಟ್ಟಿದ್ದು ಇರುತ್ತದೆ. ಅಂತಾ  ಶ್ರೀ ಶಂಕರಸಿಂಗ್ ತಂದೆ ಶಿವಲಾಲಸಿಂಗ್ ರಜಪುತ ಸಾ||ದುದನಿ ಹಾ||||ಗೊಬ್ಬುರ(ಬಿ) ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 30/08/18 ರಂದು ಕಲಬುರಗಿ -ಅಫಜಲಪೂರ ರೋಡಿನ ನಾಗಾಲಿಂಗೇಶ್ವರ ಗುಡಿ ದಾಟಿ ಸ್ವಲ್ಪ ಮುಂದೆ ರೋಡಿನ ಮೇಲೆ ಮೋಟಾರ ಸೈಕಲ ನಂ ಕೆಎ-32 ಕೆ-8248 ನೇದ್ದರ ಚಾಲಕನು ತನ್ನ ಮೋಟಾರ ಸೈಕಲನ್ನು ಅತೀ ವೆಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಶ್ರೀ ಆನಂದ ತಂದೆ ಪೂಲಚಂದ ಚವ್ಹಾಣ ಸಾಃ ಗೊಬ್ಬೂರವಾಡಿ ತಾಂಡಾ ತಾಃ ಅಫಜಲಪೂರ ಜಿಃ ಕಲಬುರಗಿ ರವರು  ಚಲಾಯಿಸುತ್ತಿದ್ದ ಮೋಟಾರ ಸೈಕಲ ನಂ ಕೆಎ-2 ಎಕ್ಸ-3621 ನೇದ್ದಕ್ಕೆ ಡಿಕ್ಕಿಪಡಿಸಿದ ಹಾಗೆಯೇ ತನ್ನ ಮೋಟಾರ ಸೈಕಲನ್ನು ಚಲಾಯಿಸಿಕೊಂಡು ಹೋಗಿರುತ್ತನೆ ಅಪಘಾತದಿಂದ ನನಗೆ ರಕ್ತಗಾಯ ಗುಪ್ತಗಾಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

31 August 2018

KALABURAGI DISTRICT REPORTED CRIMES

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ರಾಘಬೇಂದ್ರ ನಗರ ಠಾಣೆ : ದಿನಾಂಕ 30.08.2018 ರಂದು ಸಾಯಂಕಾಲ ರಂದು ರಾಘವೇಂದ್ರ ನಗರ , ಠಾಣಾ ವ್ಯಾಪ್ತಿಯ  ಗಂಗಾ ನಗರ ಸ್ಮಶಾನದ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಗುಂಪಾಗಿ ಕುಳಿತು ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಮೇರೆಗೆ ಶ್ರೀ . ಮೌಲಾ .ಎಸ್.. ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಗಂಗಾ ನಗರದ  ಸ್ಮಶಾನ ಹತ್ತಿರ ಹೋಗಿ ನೋಡಲು ಸ್ಮಶಾನ ಕಂಪೌಂಡ ಪಕ್ಕದ ಸಾರ್ವಜನಿಕ ಸ್ಥಳಲ್ಲಿ 8 ಜನರು ಗುಂಪಾಗಿ ಕುಳಿತು ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿದ್ದು ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಿ ಜೂಜಾಟ ನಿರತರನ್ನು ವಶಕ್ಕೆ ಪಡೆದುಕೊಂಡು ನಂತರ ಸದರಿಯವರ ಹೆಸರು ವಿಳಾಸ ವಿಚಾರಿಸಲು 1) ಬಸವರಾಜ ತಂದೆ ಜಟ್ಟೆಪ್ಪ ಗಣಘಾಪುರ ಸಾ|| ಗಂಗಾ ನಗರ ಕಲಬುರಗಿ. 2) ಶರಣಬಸಪ್ಪ ತಂದೆ ಹಣವಂತರಾಯ ಪಾಟೀಲ್ ಸಾ|| ಗ್ರೀಕಲ್ಚರ್ ಲೇಔಟ ಬ್ರಹ್ಮಪೂರ ಕಲಬುರಗಿ 3) ಮಹ್ಮದ್ ಖದೀರ ತಂದೆ ಮಹ್ಮದ್ ಹಿರುದ್ದಿನ ಸಾ|| ಲಾಲಗೇರಿ ಮಜ್ಜೀದ್ ಹತ್ತಿರ ಬ್ರಹ್ಮಪೂರ ಕಲಬುರಗಿ 4) ಬಾಬುರಾವ್ ತಂದೆ ಗನಪತಿರಾವ್ ಇಂಗಳಗಿ ಸಾ|| ಜಾಧವ್ ಶಾಲೆ ಹತ್ತಿರ ನ್ಯುರಾಘವೇಂದ್ರ ಕಾಲೋನಿ ಕಲಬುರಗಿ 5) ಶಿವಕುಮಾರ ತಂದೆ ಪ್ರಭು ಡೋಣ್ಣೂರ ಸಾ|| ವೆಂಕಟೇಶ್ವರ ಗುಡಿಯ ಕಮಾನ್ ಮುಂಬಾಗ ನ್ಯೂ ರಾಘವೇಂದ್ರ ಕಾಲೋನಿ ಕಲಬುರಗಿ 6) ಪರಮೇಶ್ವರ ತಂದೆ ಸಯದಪ್ಪ ಗಡೇದ ಸಾ|| ಹನುಮಾನ ಗುಡಿ ಹತ್ತಿರ ಗಂಗಾನಗರ ಬ್ರಹ್ಮಪೂರ ಕಲಬುರಗಿ  7) ಬಸವರಾಜ ತಂದೆ ಚಂದ್ರಶ್ಯಾ ಜಮಾದಾರ ಸಾ|| ಯಲ್ಲಮ್ಮ ಗುಡಿಯ ಹತ್ತಿರ ಗಂಗಾ ನಗರ ಬ್ರಹ್ಮಪುರ ಕಲಬುರಗಿ 8) ರೇವನಸಿದ್ದಪ್ಪ ಶರಣಬಸಪ್ಪ ಮದರಿ ಸಾ|| ಮೋರೆಕಾಂಪ್ಲೇಕ್ಸ ಹತ್ತಿರ ನ್ಯೂ ರಾಘವೇಂದ್ರ ಕಾಲೋನಿ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 10750/- ರೂ ಮತ್ತು 52 ಇಸ್ಪೇಟ ಎಲೆಗಳು ದೊರೆತಿದ್ದು  ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಜೇವರಗಿ ಠಾಣೆ : ದಿನಾಂಕ 19.08.2018 ರಂದು ನನ್ನ ಮೈದುನನಾದ ಶಿವಪುತ್ರ ಕೇರೂರ ಇವರ ಅತ್ತೆ ಕಲಬುರಗಿ ತಾಲೂಕಿನ ಶರಣಶಿರಸಗಿ ಗ್ರಾಮದಲ್ಲಿ ಮರಣ ಹೊಂದಿದ್ದರಿಂದ ಅವಳ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ನಮ್ಮೂರಿನಿಂದ ನಾನು, ನನ್ನ ಭಾವನ ಹೆಂಡತಿ ಶಾಂತಮ್ಮ ಗಂಡ ಬಸವರಾಜ ಹಾಗೂ ನನ್ನ ಮೈದುನ ಶಿವಪುತ್ರ ಕೇರೂರ ಮೂವರೂ ಕೂಡಿಕೊಂಡು ನಮ್ಮೂರಿನ ಶ್ರೀಶೈಲ ತಂದೆ ರಾಜಶೇಖರ ಗರೂರು ಇತನು ಚಲಾಯಿಸುವ ಆಟೋ ನಂ ಕೆಎ 33 ,4972 ನೇದ್ದನ್ನು ಬಾಡಿಗೆ ಮಾಡಿಕೊಂಡು ಅದರಲ್ಲಿ ಕುಳಿತಕೊಂಡು ನಾವು ಮೂರು ಜನ ಶರಣಶಿರಸಗಿ ಗ್ರಾಮಕ್ಕೆ ಹೋಗಿ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿ ನಂತರ ನಮ್ಮೂರಿಗೆ ಹೋಗುವ ಕುರಿತು ಸದರಿ ಮೇಲೆ ನಮೂದಿಸಿದ ಆಟೋದಲ್ಲಿ ಕುಳಿತುಕೊಂಡು ಹೋಗುತ್ತೀರುವಾಗ ರಾತ್ರಿ 07.30 ಪಿಎಮ್ ಸುಮಾರಿಗೆ ನಮ್ಮ ಆಟೋ ಚಾಲಕ ಜೇವರಗಿ ನಗರ ದಾಟಿ ಶಹಾಪೂರ ಕಡೆಗೆ ಆಟೋ ಚಲಾಯಿಸಿಕೊಂಡು ಹೋಗುತ್ತಿದ್ದಂತೆ ಜೇವರಗಿ ನಗರದ ಹೋರ ವಲಯದಲ್ಲಿರು ಸತ್ತಾರ ಸಾಬ ಪೇಟ್ರೋಲ್ ಬಂಕ ಎದುರುಗಡೆ ರೋಡಿನ ಮೇಲೆ ಎದುರಿನಿಂದ ಒಂದು ಕಾರ ನಂ ಕೆಎ 25 ಪಿ 1579 ನೇದ್ದರ ಚಾಲಕನು ತನ್ನ ಕಾರನ್ನು ಅತೀ ವೇಗ ಮತ್ತು ಅಜಾಗುರುಕತೆಯಿಂದ ಚಲಾಯಿಸಿಕೊಂಡು ಬಂದು ನಮ್ಮ ಆಟೋಕ್ಕೆ ಬಲಬಾಗದಲ್ಲಿ ಡಿಕ್ಕಿ ಹೋಡೆದ ಪರಣಾಮವಾಗಿ ನಮ್ಮ ಆಟೋದ ಬಲ ಬದಿಯ ಸೀಟಿನಲ್ಲಿ ಕುಳಿತಿರುವ ನನ್ನ ನೆಗೇಣಿ ಶಾಂತಮ್ಮ ಗಂಡ ಬಸವರಾಜ ಕೇರೂರ ಇವಳಿಗೆ ಬಲಗೈ ಮುಂಗೈಯ ಹತ್ತೀರ ಭಾರಿ ರಕ್ತ ಗಾಯವಾಗಿರುತ್ತದೆ. ಘಟನೆ ನಂತರ ಸದರಿ ಕಾರ ಚಾಲಕ ತನ್ನ ಕಾರ ಸ್ವಲ್ಪ ಮುಂದಕ್ಕೆ ಹೋಗಿ ನಿಲ್ಲಿಸಿ ಶಾಂತಮ್ಮಳಿಗೆ ಆದ ಗಾಯ ನೋಡಿ ಅಲ್ಲಿಂದ ತನ್ನ ಕಾರ ಸೇಮೆತ ಓಡಿ ಹೋಗಿರುತ್ತಾನೆ. ನಮಗೆ ಸದರಿ ಕಾರ ಚಾಲಕನ ಹೆಸರು ಮತ್ತು ವಿಳಾಸ ಗೊತ್ತಾಗಿರುವುದಿಲ್ಲಾ ಮುಂದೆ ನೋಡಿದರೆ ಗುರುತಿಸುತ್ತೇನೆ, ನಂತರ ಶಾಂತಮ್ಮ ಇವಳಿಗೆ ಸರ್ಕಾರಿ ಆಸ್ಪತ್ರೆ ಜೇವರಗಿಗೆ ತಂದು ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಯುನೈಟೆಡ ಆಸ್ಪತ್ರೆ ಕಲಬುರಗಿಗೆ ತಂದು  ಸೇರಿಕೆ ಮಾಡಿರುತ್ತೇವೆ, ಕಾರಣ ಮಾನ್ಯರು ಕಾರ ನಂ ಕೆಎ 25 ಪಿ 1579 ನೇದ್ದರ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೆಕಂತಾ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸದರ ಪ್ರಕರಣದಲ್ಲಿನ ಗಾಯಾಳು ಶ್ರೀಮತಿ ಶಾಂತಮ್ಮ ಗಂಡ ಬಸವರಾಜ ಕೆರೂರ ಇವಳು; ದಿನಾಂಕ; 19/08/2018 ರಂದು ರಸ್ತೆ ಅಪಘಾತದಲ್ಲಿ ಗಾಯಹೊಂದಿ ಚಿಕಿತ್ಸೆ ಕುರಿತು ಯುನೈಟೆಡ್ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆ ಮಾಡಿದ್ದು ಅಲ್ಲಿ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆ ಕುರಿತು ದಿನಾಂಕ; 29/08/2018 ರಂದು ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆ ಮಾಡಿದ್ದು ನಮ್ಮ ಅತ್ತಿಗೆ ಶಾಂತಮ್ಮ ಇವಳು ಚಿಕಿತ್ಸೆ ಪಡೆಯುತ್ತಾ ಚಿಕಿತ್ಸೆ ಫಲಕಾರಿಯಾಗದೆ. ಇಂದು ದಿನಾಂಕ; 30/08/2018 ರಂದು ಬೆಳಿಗ್ಗೆ 7-00 ಗಂಟೆಗೆ ಮೃತಪಟ್ಟಿರುತ್ತಾಳೆ ಮೃತಪಟ್ಟಿರುತ್ತಾಳೆ ಅಂತಾ ಶ್ರೀ ಶಿವಪುತ್ರ ತಂದೆ ಸಿದ್ದರಾಮಪ್ಪ ಕೆರೂರ ಸಾ; ಮುಡಬೂಳ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.