POLICE BHAVAN KALABURAGI

POLICE BHAVAN KALABURAGI

02 April 2018

KALABURAGI DISTRICT REPORTED CRIMES

ಅನಧೀಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 01-04-2018 ರಂದು ಚಿಂಚೋಳಿ ಗ್ರಾಮದ  ಸರಕಾರಿ ಶಾಲೆಯ ಹತ್ತಿರ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಅನದಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ  ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಚಿಂಚೋಳಿ ಗ್ರಾಮದ ಸರಕಾರಿ ಶಾಲೆಯಿಂದ ಸ್ವಲ್ಪ ದೂರ ನಮ್ಮ ವಾಹನವನ್ನು ನಿಲ್ಲಿಸಿ, ನಡೆದುಕೊಂಡು ಹೋಗಿ ಮರೆಯಾಗಿ ನಿಂತುಕೊಂಡು ನೋಡಲಾಗಿ, ಸರಕಾರಿ ಶಾಲೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಒಂದು ಚೀಲವನ್ನು ಹಿಡಿದುಕೊಂಡು ನಿಂತಿದ್ದನು. ಆಗ ನಾವು ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ಸದರಿ ವ್ಯೆಕ್ತಿಯ ಮೇಲೆ ದಾಳಿ ಮಾಡಿ, ಅವನ ಹತ್ತಿರ ಇದ್ದ ಚೀಲವನ್ನು ಚೆಕ್ ಮಾಡಲಾಗಿ, ಸದರಿ ಚೀಲದಲ್ಲಿ 96 Original Choice ಕಂಪನಿಯ 90 ML ಅಳತೆಯ ಮದ್ಯ ತುಂಬಿದ ರಟ್ಟಿನ ಪೌಚಗಳು ಅಕಿ- 2688/- ರೂ ಕಿಮ್ಮತ್ತಿನವುಗಳು ಇದ್ದವು. ಸದರಿಯವನಿಗೆ ಮದ್ಯ ಮಾರಾಟ ಮಾಡಲು  ಹಾಗೂ ಸಾಗಾಟ ಮಾಡಲು ಅನುಮತಿ ಪಡೆದುಕೊಂಡ ಬಗ್ಗೆ ವಿಚಾರಿಸಲು ತನ್ನ ಹತ್ತಿರ ಮಾರಾಟ ಮಾಡಲು ಯಾವುದೆ ಪರವಾನಿಗೆ ಇರುವುದಿಲ್ಲ ಎಂದು ತಿಳಿಸಿದನು. ಸದರಿ ವ್ಯೆಕ್ತಿಯ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಮಲ್ಲಯ್ಯ ತಂದೆ ರುಕುಮಯ್ಯ ಗುತ್ತೆದಾರ ಸಾ|| ಚಿಂಚೋಳಿ ತಾ|| ಅಫಜಲಪೂರ ಎಂದು ತಿಳಿಸಿದನು. ನಂತರ ಸದರಿಯವನ ವಶದಿಂದ 96 Original Choice ಕಂಪನಿಯ 90 ML ಮದ್ಯ ತುಂಬಿದ ರಟ್ಟಿನ ಪೌಚಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ  ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಫರತಾಬಾದ ಠಾಣೆ : ಶ್ರೀ ವಿಠಲ ತಂದೆ ಬಂಡೆಪ್ಪಾ ಜಮಾದಾರ ಸಾ: ಹೋಳಕುಂದಾ ತಾ; ಜಿ: ಕಲಬುರಗಿ ರವರ  ಮಗನಾದ ಉಮೇಶ ಇತನು ನಮ್ಮೂರಿನ ಬಸವರಾಜ ಬುಯ್ಯಾರ ಇವರ ಲಾರಿ ನಂ ಕೆಎ 56 0038 ನೇದ್ದರ ಮೇಲೆ ಈಗ ಸುಮಾರು 3 ತಿಂಗಳಿಂದ ಕ್ಲೀನರ್ ಅಂತಾ ಕೆಲಸ ಮಾಡಿಕೊಂಡಿರುತ್ತಾನೆ. ಹೀಗಿದ್ದು ಇಂದು ದಿನಾಂಕ 1/4/2018 ರಂದು ಮದ್ಯರಾತ್ರಿ 2-00 ಗಂಟೆಯ ಸುಮಾರಿಗೆ ನಮ್ಮೂರಿನ ಬಸವರಾಜ ಬುಯ್ಯಾರ ಇವರು ನಮ್ಮ ಮನೆಗೆ ಬಂದು ನನ್ನ ಮಗನಾದ ಉಮೇಶ ಇತನಿಗೆ ಕರೆದು ಲಾರಿಯಲ್ಲಿ ಹಿಂಡಿ ಲೋಡ ಮಾಡಿದ್ದು ಅಥಣಿಗೆ ಹೋಗಿ ಖಾಲಿ ಮಾಡಿಕೊಂಡು ಬರುವದು ಇದೇ ಸಂಗಡ ಬರುವಂತೆ ಹೇಳಿದ ಪ್ರಕಾರ ನನ್ನ ಮಗ ಉಮೇಶ ಇತನು ಬಸವರಾಜ ಬುಯ್ಯಾರ ಇವರ ಮಗನಾದ ಘಾಳಪ್ಪ ಇತನ ಜೊತೆಯಲ್ಲಿ ಲಾರಿ ಮೇಲೆ ಹೋಗಿರುತ್ತಾನೆ. ಇಂದು ದಿನಾಂಕ 1/4/2018 ರಂದು ಬೆಳಿಗ್ಗೆ 8-00 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮೂರಿನ ಬಸವರಾಜ ಬುಯ್ಯಾರ ಇವರು ನನಗೆ ಪೊನ್ ಮಾಡಿ ತಿಳಿಸಿದ್ದೇನೆಂದರೆ, ನಿಮ್ಮ ಮಗನಾದ ಉಮೇಶ ಇತನು ಲಾರಿ ನಂ ಕೆಎ 56 0038 ನೇದ್ದರಲ್ಲಿ ಕುಳಿತುಕೊಂಡು ಕಲಬುರಗಿಯಿಂದ ಜೇವರಗಿ ಕಡೆಗೆ ಹೋಗುತ್ತಿರುವಾಗ ನನ್ನ ಮಗ ಘಾಳಪ್ಪ ಇತನು ಲಾರಿಯನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಕೊಂಡು ಹೋಗಿ ರಾಷ್ಟ್ರಿಯ ಹೆದ್ದಾರಿ 218 ರ ಸೋಮನಾಥ ಹಳ್ಳಿ ಮತ್ತು ಹಸನಾಪುರ ಕ್ರಾಸ ಮದ್ಯದಲ್ಲಿ ಲಾರಿ ಪಲ್ಟಿ ಮಾಡಿದ್ದರಿಂದ ನಿಮ್ಮ ಮಗನಿಗೆ ತಲೆಗೆ ಹಾಗು ಇತರೆ ಕಡೆಗೆ ಭಾರಿ ಗುಪ್ತಗಾಯಗಳು ಮತ್ತು ತರಚಿದ ಗಾಯಗಳು ಆಗಿರುತ್ತವೆ ಆತನಿಗೆ ಅಂಬುಲೇನ್ಸದಲ್ಲಿ ಹಾಕಿಕೊಂಡು ಆಸ್ಪತ್ರೆಗೆ ತೆಗೆದುಕೊಂಡು ಬರುವಾಗ ಮಾರ್ಗಮದ್ಯದಲ್ಲಿ ಮೃತ ಪಟ್ಟಿರುತ್ತಾನೆ ಮೃತ ದೇಹ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಇರುವ ಬಗ್ಗೆ ತಿಳಿಸಿದ್ದರಿಂದ ನಾನು ಮತ್ತು ನನ್ನ ಅಣ್ಣನ ಮಗನಾದ ಶರಣಪ್ಪ, ಮಗ ಮಹೇಶ ಮತ್ತು ನಮ್ಮ ಸಂಬಂಧಿ ಶ್ರೀಶೈಲ ಜಮಾದಾರ ಎಲ್ಲರೂ ಕೂಡಿಕೊಂಡು ಜಿಲ್ಲಾ ಸರಕಾರಿ ಆಸ್ಪತ್ರೆಯ ಶವಗಾರ ಕೊಣೆಗೆ ಬಂದು ನೋಡಲಾಗಿ ನನ್ನ ಮಗ ಉಮೇಶ ಇತನಿಗೆ ತಲೆಗೆ ಭಾರಿ ಗುಪ್ತಗಾಯವಾಗಿ ಕಿವಿಯಿಂದ ರಕ್ತ ಮತ್ತು ಬಾಯಿಯಿಂದ ನೊರೆ ಬಂದು ದೇಹದ ಇತರೆ ಕಡೆಗೆ ತರಚಿದ ಗಾಯಗಳಾಗಿ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಡ್ರಾಮಿ ಠಾಣೆ : ದಿನಾಂಕ:-31/03/2018 ರಂದು ಮಧ್ಯಾಹ್ನ  ನಮಗೆ ಪರಿಚಯದವರಾದ ದೇವಿಂದ್ರ ತಂದೆ ಭೀಮರಾಯ ಅಳ್ಳೊಳ್ಳಿ ಸಾ: ಕಡಕೊಳ ಇವರ ಇಂಡಿಕಾ ಕಾರ ನಂಬರ ಕೆ ಎ 01 ಎ ಜಿ- 1486 ನೇದರಲ್ಲಿ ನನ್ನ ಹೆಂಡತಿ ಶರಣಮ್ಮ ಳನ್ನೂ ಕೂಡಿಸಿಕೂಂಡು ಉಪಚಾರ ಕುರಿತು ಯಡ್ರಾಮಿಗೆ ನನ್ನ ಮಕ್ಕಳಾದ ಶಾಂತಮ್ಮ ಭಾಗಮ್ಮ ಬಸವರಾಜ ಹಾಗೂ ನಮ್ಮೂರು ಸಿದ್ದಲಿಂಗ ಬಿಳವಾರ ರವರು ಕೂಡಿಕೂಂಡು ಕಾರಿನಲ್ಲಿ ಹೂಗಿರುತ್ತಾರೆ ಕಾರನ್ನು ದೇವಿಂದ್ರ ನಡಿಸುತ್ತಿದ್ದನು ನಂತರ 4:15 ಪಿ ಎಮ ಸುಮಾರಿಗೆ ನನ್ನ ಮಗ ಬಸವರಾಜ ಇವನು ಮನೆಗೆ ಪೋನ ಮಾಡಿ ತಿಳಿಸಿದ್ದೇನೆಂದರೆ ಇದಿಗ ನಮ್ಮ ತಾಯಿಗೆ ಯಡ್ರಾಮಿ ಚಾಯಾಗಳು ದವಾಖಾನೆ ಉಪಚಾರ ಪಡಿಸಿಕೂಂಡು ಮರಳಿ ಅದೆ ಕಾರಿನಲ್ಲಿ ಊರಿಗೆ ಬರುವಾಗ ಕಾರು ಯಡ್ರಾಮಿ ಗ್ರಾಮ ದಾಟಿ ಕಲ್ಯಾಣಿರಾಯ ಸಾಹು ರವರ ಹೂಲದ ಹತ್ತಿರ ಕಾರಿನ ಚಾಲಕ ದೇವಿಂದ್ರನ್ನು ತನ್ನ ಕಾರನ್ನು ಅತಿ ವೆಗವಾಗಿ & ನಿಷ್ಕಾಳಜಿ ತನದಿಂದ ಚಲಾಯಿಸಿ ಒಮ್ಮೆಲೆ ಬಲಗಡೆ ಕಟ್ಟ ಮಾಡಿರುವುದರಿಂದ ಕಾರನ್ನು ಬೇವನ ಗಿಡಕ್ಕೆ ಡಿಕ್ಕಿ ಹೂಡೆದು ಪಲ್ಟಿ ಯಾಗಿರುತ್ತದೆ ಬೆಗನೆ ಬರಿ ಯಂತ ಎಂದಾಗ ನಾನು & ನನ್ನ ಕಿರಿ ಮಗ ಪರುಶುರಾಮ ಹಾಗೂ ಗ್ರಾಮಸ್ಥರು ಕೂಡಿ ಸ್ಥಳಕ್ಕೆ ಹೂಗಿ ನೂಡಿದಾಗ ನನ್ನ ಹೆಂಡತಿ ಶರಣಮ್ಮ ಇವಳ ಹಣೆಯ ಮೆಲೆ ಬಾರಿ ರಕ್ತ ಗಾಯವಾಗಿ ರಕ್ತ ಸೂರುತ್ತಿತ್ತು ಭಾಗಮ್ಮ ಇವಳಿಗೆ ಬಲ ಮೆಲಕಿನ ಹತ್ತಿನ ಬಾರಿ ರಕ್ತ ಗಾಯ ವಾಗಿದ್ದು ಬಲಗೈ ರಟ್ಟಿಯಲ್ಲಿ ಬಾರಿ ಒಳ ಪೆಟ್ಟವಾಗಿ ಮುರದಿರುತ್ತದೆ ಮುಖದ ಮೇಲೆ ದರಿಚಿದ ಗಾಯ ವಾಗಿರುತ್ತದೆ ಶಾಂತಮ್ಮಗೆ ಹಣೆಯ ಮೆಲೆ ರಕ್ತ ಗಾಯ ವಾಗಿದ್ದು ಎದೆಗೆ ಟೂಂಕಕ್ಕೆ ಒಳ ಪೆಟ್ಟು ಯಾಗಿರುತ್ತದೆ ಬಸವರಾಜು ಗೆ ಕೈ & ಕಾಲಿಗೆ ತೆರಚಿದ ಗಾಯಗಳು ಯಾಗಿರುತ್ತದೆ ಸಿದ್ದಲಿಂಗನಿಗೆ ಟೂಂಕಕ್ಕೆ ಒಳ ಪೆಟ್ಟಾಗಿ & ಗದ್ದದ ಮೇಲೆ ರಕ್ತದ ಗಾಯ ವಾಗಿರುತ್ತದೆ ಅದರಂತೆ ಕಾರು ಚಾಲಕ ದೇವಿಂದ್ರ ಗೆ ಕೂಡಾ ಒಳ ಪೆಟ್ಟ ವಾಗಿರುತ್ತದೆ ನಂತರ ನನ್ನ ಹೆಂಡತಿಗೆ & ಮಕ್ಕಳಾದ ಭಾಗಮ್ಮ , ಶಾಂತಮ್ಮ , ಬಸವರಾಜ ರವರಿಗೆ ಉಪಚಾರ ಕುರಿತು 108 ವಾಹನದಲ್ಲಿ ಹಾಕಿ ಕೂಂಡು ಜೇವರ್ಗಿ ಸರಕಾರ ದವಾಖಾನಗೆ ತಂದು ಹೇಚ್ಚಿನ ಉಪಚಾರ ಕುರಿತು ಕಲಬುರಗಿಗೆ ಹೂಗುವಾಗ ಕಟ್ಟಿ ಸಂಗಾವಿ ಹತ್ತಿರ ಅಂದಾಜು 6:30 ಪಿ ಎಮ ಸುಮಾರಿಗೆ ನನ್ನ ಹೆಂಡತಿ ಶರಣಮ್ಮ & ಮಗಳು ಭಾಗಮ್ಮ ಮಾರ್ಗ ಮದ್ಯದಲ್ಲಿ ಮೃತ ಪಟ್ಟಿರುತ್ತಾರೆ  ಅಂತಾ ಶ್ರೀ ಮಾನಯ್ಯ ತಂದೆ ಯಮನಯ್ಯ ಗುತ್ತೆದಾರ ಸಾ ಆಲೂರು ಗ್ರಾಮ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರರಕರಣ ದಾಖಲಾಗಿದೆ.

31 March 2018

KALABURAGI DISTRICT REPORTED CRIMES

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ :  ದಿನಾಂಕ 30-03-2018 ರಂದು ಚಿಂಚೋಳಿ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಕಂಪೊಂಡ್ ಹತ್ತಿರ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ  ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಸಿಪಿಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಸ್ಥಳಕ್ಕೆ ಹೋಗಿ ಸರಕಾರಿ ಪ್ರೌಢ ಶಾಲೆಯ ಕಂಪೋಂಡ ಪಕ್ಕ ಸಾರ್ವಜನಿಕ ಖುಲ್ಲಾ ಜಾಗದಲ್ಲಿ 6 ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು  ಖಚಿತ ಪಡಿಸಿಕೊಂಡು  ದಾಳಿ ಮಾಡಿ ಜೂಜಾಡುತಿದ್ದ 6 ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ವಿವೇಕಾನಂದ ತಂದೆ ಗುರುಲಿಂಗಪ್ಪ ಬಿರಾದಾರ ಸಾ||ಚಿಂಚೋಳಿ  2) ಕುಮಾರ ತಂದೆ ಶಿವಶರಣ ಅಗಸಿ ಸಾ|| ಸೊನ್ನ 3) ಬಸವರಾಜ ತಂದೆ ಮಲ್ಕಪ್ಪ ಜಮಾದಾರ ಸಾ||ಚಿಂಚೋಳಿ 4) ಸಾಗರ ತಂದೆ ಬಸವರಾಜ ತೇಲಿ ಸಾ||ಚಿಂಚೋಳಿ  5) ಮಲ್ಲಪ್ಪ ತಂದೆ ಜಗದೇವಪ್ಪ ಜಮಾದಾರ ಸಾ||ಹಳ್ಯಾಳ 6) ಅಂಬರೀಶ ತಂದೆ ಶರಣಪ್ಪ ಮಾಂಗ ಸಾ||ಹಳ್ಯಾಳ ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ  ಒಟ್ಟು 2100/- ರೂ ಮತ್ತು 52 ಇಸ್ಪೆಟ ಎಲೆಗಳನ್ನು ಜಪ್ತಿಪಡಿಸಿಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ವಾಹನ ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಬಸವರಾಜ ತಡಕಲ ಸಾ:ಸಂತೋಷ ಕಾಲೋನಿ ಕಲಬುರಗಿ ಇವರು ದಿನಾಂಕ 29/03/2018 ರ ರಾತ್ರಿ 9.00 ಗಂಟೆಗೆ ನನ್ನ ಮನೆಯ ಕೌಂಪಡಗೆ ಹಚ್ಚಿ ನಿಲ್ಲಿಸಿದ ಕಾರು ದಿ:30/03/18 ರ ರಾತ್ರಿ 1.00 ಗಂಟೆಯವರೆಗೆ ಅಲ್ಲಿಯೇ ಇತ್ತು ನಂತರ ಬೆಳಗ್ಗೆ 6.00 ಗಂಟೆಗೆ ನೋಡಿದಾಗ ಅಲ್ಲಿರಲಿಲ್ಲ ಕಳ್ಳತನವಾದ ಬಗ್ಗೆ ಗಮನಕ್ಕೆ ಬಂದಿದೆ ಕಾರಣ ನನ್ನ ಕಾರನ್ನು ತಾವು ದಯವಿಟ್ಟು ಹುಡುಕಿಕೊಡಲು ವಿನಂತಿಸುತ್ತೇನೆ. CAR MODEL-2006 TATA INDICADLS E-II ಆಗಿದ್ದು ಬಣ್ಣ   SILVER COLOUR   ಕಾರಿನ ಸಂಖ್ಯೆ KA32M4960 ಆಗಿರುತ್ತದೆ. ಕಾರಿನ ಅಂದಾಜು ಮೊತ್ತ 1 ಲಕ್ಷ 25 ಸಾವಿರ ರೂಪಾಯಿ ಆಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

30 March 2018

KALABURAGI DISTRICT REPORTED CRIMES

ದ್ವೀಚಕ್ರ ವಾಹನ ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ರಾಜಕುಮಾರ ತಂದೆ ಗರಮುಸಿಂಗ ಪವಾರ ಸಾ: ಸಿಂಧೋಲ್ ತಾಂಡಾ ತಾ:ಜಿ: ಬೀದರ  ಹಾ.ವ: ಬಿರಜು ಗೋಪಾಲ ಡಾಗಾ ರವರ ಮನೆಯಲ್ಲಿ ಬಾಡಿಗೆ ವಿಠಲ ಮಂದಿರ ಸ್ಟೇಷನ ಏರಿಯಾ ಕಲಬುರಗಿ ರವರು ದಿನಾಂಕ. 28/03/2018 ರಂದು 11 ಪಿ.ಎಂ ಸುಮಾರಿಗೆ ನಾನು ನನ್ನ ಸ್ಲೆಂಡರ ಪ್ಲಸ್ ಮೋಟಾರ ಸೈಕಲ್ ನಂ. KA-32 EE- 5860 ಚೆಸ್ಸಿನಂ. MBLHA10AMDHJ81028, ಇ.ನಂ. HA10EJDHJ49206 ಅ,ಕಿ|| 25,000/- ರೂ ನೇದ್ದು ಡಾಗಾ ರವರ ಮನೆ ಮುಂದಿನ ರೋಡಿನ ಬದಿಯಲ್ಲಿ ನಿಲ್ಲಿಸಿ ಮನೆಯಲ್ಲಿ ಮಲಗಿಕೊಂಡು ನಂತರ ದಿನಾಂಕ 29/03/2018 ರಂದು 6-00 ಎ.ಎಮ್ ಸುಮಾರಿಗೆ ಬಂದು ನೋಡಲಾಗಿ ನನ್ನ ಸ್ಲೆಂಡರ ಪ್ಲಸ್ ಮೋಟಾರ ಸೈಕಲ್ ಇರಲಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.  ಇಲ್ಲಿಯವರೆಗೆ ಎಲ್ಲಾ ಕಡೆಗೆ ಹುಡುಕಾಡಿದರು ಸಿಕ್ಕಿರುವುದಿಲ್ಲ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಶರಣಬಸಪ್ಪ ತಂದೆ ತುಕ್ಕಣ್ಣ ಕಲಶೇಟ್ಟಿ ಸಾ|| ಹಿರೋಳ್ಳಿ ತಾ|| ಆಳಂದ ಹಾ|||| ಗೋಳಾ ದೇಶಮುಖ ರವರ ಮನೆಯಲ್ಲಿ ಬಾಡಿಗೆ ಶಿವ ಮಂದಿರ ಹತ್ತಿರ ಅಗ್ರೀಕಲ್ಚರ ಲೇ ಔಟ ಕಲಬುರಗಿ ಇವರ ಸೋದರಮಾವನವರಾದ ಮಲ್ಲಣ್ಣ ತಂದೆ ಈರಣ್ಣ ಕಲಶೇಟ್ಟಿ ಸಾ|| ಕೋರವಾರ ತಾ|| ಚಿತ್ತಾಪೂರ ಜಿ|| ಕಲಬುರಗಿ ಇತನು ನನ್ನ ಕಡೆಯಿಂದ ಎರಡು ವರ್ಷಗಳ ಹಿಂದೆ 80,000/- ರೂ ನಗದು ಕೈಗಡ ತೆಗೆದು ಕೊಂಡಿದ್ದು ನನ್ನ ಹಣ ಮರಳಿ ಕೋಡುವಂತೆ ಕೇಳಿದರೆ ನನಗೆ ಹಣಕೋಡದೆ ನನಗೆ ಬೆದರಿಸುತ್ತಾ ಬಂದಿರುತ್ತಾನೆ.  ದಿನಾಂಕ; 28/03/2018 ರಂದು 10;15 ಎಎಮ್ ಸುಮಾರಿಗೆ ನಾನು ಆರ್‌‌.ಟಿ.ಐ ಅರ್ಜಿ ಸಲ್ಲಿಸುವ ಸಲುವಾಗಿ ಅಪ್ಪನಗುಡಿಕಡೆಗೆ ಹೊರಟಿದ್ದಾಗ ಕುಂಬಾರಗಲ್ಲಿಯ ಹಣಮಂತ ದೇವರ ಗುಡಿ ಹತ್ತಿರ ಬರುತ್ತಿರುವಾಗ ಎದರುಗಡೆಯಿಂದ ನಮ್ಮ ಸೋದರಮಾವನಾದ ಮಲ್ಲಣ್ಣ ತಂದೆ ಈರಣ್ಣ ಕಲಶೇಟ್ಟಿ ಹಾಗು ಪ್ರಭು ತಂದೆ ಶಿವಲಿಂಗಪ್ಪ ಕಲಶೇಟ್ಟಿ ಇವರುಗಳು ಬೈಕ್ ಮೇಲೆ ಬಂದು ನನಗೆ ತಡೆದು ಅವಾಚ್ಯವಾಗಿ ಬೈಯ ಹತ್ತಿದರು ಆಗ ನನಗೆ 80,000/- ರೂ ಹಣ ಕೋಡಬೇಕು, ನೀವೇ ಬಂದು ನನಗೆ ಬೈಯುತ್ತಿರಲ್ಲಾ ಅಂದಾಗ ಮಲ್ಲಣ್ಣ ತಂದೆ ಈರಣ್ಣ ಕಲಶೇಟ್ಟಿ ಇತನು ಯಾವ ಹಣಕೊಡ ಬೇಕು ಮಗನೆ ಅಂತಾ ಅಂದವನೆ ಕೈಯಿಂದ ನನ್ನ ಬಾಯಿಯ ಮೇಲೆ ಹೋಡೆದನುಪ್ರಭು ತಂದೆ ಶಿವಲಿಂಗಪ್ಪ ಕಲಶೇಟ್ಟಿ  ಇತನು ನನ್ನ ಹೆಡಕಿನ ಮೇಲೆ ಕೈಯಿಂದ ಹೊಡೆದು ಎದೆಯ ಮೇಲಿನ ಅಂಗಿ ಹಿಡದು ಎಳೇದುಕೊಂಡು ಹೊರಟನು ಆಗ  ಅಲ್ಲೆ ಇದ್ದ ಸಿದ್ದು ತಂದೆ ಶಿವಲಿಂಗಪ್ಪ ಕಲಶೇಟ್ಟಿ ಹಾಗು ನಮ್ಮ ಅಳಿಯನಾದ ಶರಣಬಸಪ್ಪ ತಂದೆ ನಾಗೇಂದ್ರಪ್ಪ ಕಲಶೇಟ್ಟಿ ಇವರುಗಳು ನನಗೆ ಹೊಡೆಯುತ್ತಿರುವದನ್ನು ನೋಡಿ ಬಿಡಿಸಿಕೊಂಡರು ಇಲ್ಲದಿದ್ದರೆ ನನಗೆ ಇನ್ನೂ ಹೊಡೆಬಡಿ ಮಾಡುತ್ತಿದ್ದರು.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.