POLICE BHAVAN KALABURAGI

POLICE BHAVAN KALABURAGI

17 February 2018

KALABURAGI DISTRICT REPORTED CRIMES

ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಬಸವರಾಜ ತಂದೆ ಮಲಕಪ್ಪ ಹರಸೂರ ಸಾ||ಗ್ರಾಮೀಣ ಠಾಣೆ : ಶ್ರೀ ಬಸವರಾಜ ತಂದೆ ಮಲಕಪ್ಪ ಹರಸೂರ ಸಾ- ಮನೆ ನಂ ಎಲ್.ಐ.ಜಿ 248/9 ಅಕ್ಕಮಾಹಾದೇವಿ ಕಾಲೋನಿ ಕಲಬುರಗಿ ರವರು ದಿನಾಂಕ 12-02-2018 ರಂದು ತಮ್ಮ ಮಗನ ಮದುವೆ ಕಾರ್ಯಕ್ರಮ ಹಾಗೂ ರಾತ್ರಿಯೆಲ್ಲಾ  ಮೆರವಣಿಗೆ  ಮುಗಿಸಿಕೊಂಡು ಮನೆಗೆ ಬಂದು ದಿನಾಂಕ 13-02-2018 ರಂದು 2 -00 ಎ.ಎಮ್.ಕ್ಕೆ  ಬಂದು ಮಲಗಿಕೊಂಡಿದ್ದು ಬೆಳಿಗ್ಗೆ 08-00 ಎ.ಎಮ ಕ್ಕೆ ಎದ್ದು ನೋಡಲು ಫಿರ್ಯಾಧಿಯವರ ಮನೆಯಿಂದ ಎರಡು ಮೊಮೈಲಗಳು ಹಾಗೂ ನಗದು ಹಣ 3500/- ಮತ್ತು ಲೇಡಿಜ್ ಹ್ಯಾಂಡ ಬ್ಯಾಗ್  ಮತ್ತು ಅದರಲ್ಲಿದ್ದ ಡೆಬಿಟ್  ಕ್ರೆಡಿಟ್ ಕಾರ್ಡಗಳು ಮತ್ತು ಮನೆಯಲ್ಲಿಟ್ಟಿದ್ದ 310.511 ಗ್ರಾಂ  ಬಂಗಾರದ ಆಭರಣಗಳು ಒಟ್ಟು ಎಲ್ಲಾ ಸೇರಿ 9,95,887=00 ರೂಗಳ ಕಿಮ್ಮತ್ತಿನ ಆಭರಣಗಳು ಮನೆಯಿಂದ ಕಳ್ಳತನವಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ನರೋಣಾ ಠಾಣೆ : ಶ್ರೀ ಅವಿನಾಶ ತಂದೆ ಪರಮೇಶ್ವರ ಬಿರಾದರ ಸಾ : ಕಮಲಾನಗರ  ರವರು  ದಿನಾಂಕ:15-02-2018 ರಂದು ಗುರುವಾರ ದಿವಸ ಶಿವರಾತ್ರಿ ಅಮವಾಸೆ ಇದ್ದುದ್ದರಿಂದ ನಮ್ಮ ಮನೆಯ ದೇವರಾದ ಬಸವನ ಸಂಗೋಳಗಿ ಗ್ರಾಮದ ಬಸವಣ್ಣನ ದೇವಸ್ಥಾನಕ್ಕೆ ಹೋಗಿ ದರ್ಶನ ಮಾಡಿಕೊಂಡು ಬರಬೇಕೆಂದು ನಾನು ಮತ್ತು ನನ್ನ ತಾಯಿಯಾದ ಸಾವಿತ್ರಿ ಇಬ್ಬರು ಕೂಡಿ ನಮ್ಮ ಮೊಟಾರ್ ಸೈಕಲ್ ನಂ ಕೆಎ38-ಕೆ0564 ನೇದ್ದರ ಮೇಲೆ ಹೋಗುತ್ತಿರುವಾಗ ಕಡಗಂಚಿ ಕ್ರಾಸ ದಾಟಿ ನೆಲ್ಲೂರ ಕ್ರಾಸಿನಲ್ಲಿ ನಾನು ಮೋಟಾರ್ ಸೈಕಲ್ ಟರ್ನ ಮಾಡುತ್ತಿರುವಾಗ ಹಿಂದಿನಿಂದ ಒಬ್ಬ ಕಾರ್ ಚಾಲಕನು ತನ್ನ ಅಧಿನದಲ್ಲಿಯ ಕಾರನ್ನು ಅತೀವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಾನು ನನ್ನ ತಾಯಿಗೆ ಕೂಡಿಸಿಕೊಂಡು ಹೋಗುತ್ತಿದ್ದ ನಮ್ಮ ಮೊಟಾರ್ ಸೈಕಲಗೆ ಡಿಕ್ಕಿ ಪಡಿಸಿದನು. ಆದ್ದರಿಂದ ನಾನು ಮತ್ತು ನನ್ನ ತಾಯಿ ಇಬ್ಬರು ಮೋಟಾರ್ ಸೈಕಲ್ ಸಮೇತವಾಗಿ ಕೇಳಗೆ ಬಿದ್ದಿದ್ದು ಇದರಿಂದ ನನಗೆ ಹಣೆಯ ಎಡಗಡೆ ರಕ್ತಗಾಯ ಎಡಗಡೆ ಕಪಾಳಕ್ಕೆ, ಎರಡು ಮೊಳಕಾಲಿಗೆ, ಬಲಗಾಲು ಹೆಬ್ಬರಳಿಗೆ ತರಚಿದ ಗಾಯಗಳು ಆಗಿರುತ್ತವೆ. ನಮ್ಮ ತಾಯಿ ತಲೆಗೆ ಕೈಗೆ ಹಾಗೂ ಬಲಗಾಲಿಗೆ ತರಚಿದ ಗಾಯಗಳಾಗಿ ಬೇಹುಶ ಆಗಿದ್ದರು ಸದರಿ ಕಾರ್ ಚಾಲಕನು ಕಾರನ್ನು ಅಲ್ಲಿಯೇ ಬಿಟ್ಟಿ ಓಡಿಹೋಗಿದ್ದು ಸದರಿ ಕಾರು ಗ್ರೇ ಕಲರದಾಗಿದ್ದು ಹೊಸಕಾರ ಆಗಿತ್ತು ಅದರ ಟಿಪಿ ನಂ ಎಂಹೆಚ್14-ಟಿಸಿ72/ಎಫ್ ಅಂತಾ ಇತ್ತು ಅಸ್ಟೊತ್ತಿಗೆ ಲಾಡಚಿಂಚೋಳಿ ಕ್ರಾಸ ಕಡೆಯಿಂದ ಜನ ಬಂದು ಸೇರಿದ್ದು ಅವರಲ್ಲಿ ಯಾರೋ ಅಂಬ್ಯೂಲೆನ್ಸಗೆ ಫೋನಮಾಡಿ ಕರೆಸಿದ್ದು ಅದರಲ್ಲಿ ನಾನು ಮತ್ತು ನನ್ನ ತಾಯಿ ಉಪಚಾರ ಕುರಿತು ಕಲಬುರಗಿಯ ಎ.ಎಸ್.ಎಂ ಆಸ್ಪತ್ರೆಗೆ ಬಂದು ಸೇರಿಕೆಯಾಗಿದ್ದು ಈಗ ಸದ್ಯ ಉಪಚಾರ ಪಡೆಯುತ್ತಿದ್ದೇವೆ. ಸದರಿ ಕಾರ್ ಚಾಲಕನ ಹೆಸರು ವಿಳಾಸ ಗೊತ್ತಿರುವುದಿಲ್ಲ. ನಾನು ಅವನನ್ನು ನೋಡಿದಲ್ಲಿ ಗುರುತ್ತಿಸುತ್ತೇನೆ. ಸದರಿ ಕಾರ್ ಚಾಲಕನ ಮೇಲೆ ಸೂಕ್ತ ಕಾನೂನು ರಿತಿ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

15 February 2018

KALABURAGI DISTRICT REPORTED CRIMES

ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರಗಳ ಜಪ್ತಿ  :
ಅಫಜಲಪೂರ ಠಾಣೆ : ದಿನಾಂಕ 14-02-2018 ರಂದು  ಸೋನ್ನ  ಗ್ರಾಮದ ಬೀಮಾ ನದಿಯಲ್ಲಿ ಟ್ರಾಕ್ಟರಗಳಲ್ಲಿ ಅಕ್ರಮವಾಗಿ ಮರಳು ತುಂಬಿ ಕೊಂಡು ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಃಆಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸೊನ್ನ ಗ್ರಾಮದ ಹೊಸ ಬಡಾವಣೆ ಹತ್ತಿರ ಇದ್ದಾಗ  ನಮ್ಮ ಎದುರಿನಿಂದ ಟ್ಯಾಕ್ಟರಗಳು ಬರುತ್ತಿದ್ದರು, ಸದರಿ ಟ್ರಾಕ್ಟರ ಚಾಲಕರು ನಮ್ಮ ಪೊಲೀಸ್ ಜೀಪ ನೋಡಿ ತಮ್ಮ ಟ್ರಾಕ್ಟರಗಳನ್ನು  ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋದರು. ನಂತರ ನಾವು ಪಂಚರ ಸಮಕ್ಷಮ ಸದರಿ ಟ್ಯಾಕ್ಟರಗಳ ಹತ್ತಿರ ಹೋಗಿ ನೋಡಲಾಗಿ ಒಟ್ಟು ಐದು ಟ್ರಾಕ್ಟರಗಳಿದ್ದು   ಚೆಕ್ ಮಾಡಿ ನೋಡಲು ಎರಡು ಟ್ಯಾಕ್ಟರ ಟ್ರೈಲಿಗಳಲ್ಲಿ ಮರಳು ತುಂಬಿದ್ದು ಇದ್ದು ಮೂರು ಖಾಲಿ ಟ್ರ್ಯಾಕ್ಟರಗಳಿದ್ದು ಅವುಗಳ ನಂಬರ 1)ಅರ್ಜುನ ಮಹೇಂದ್ರ ಕಂಪನಿಯ ಟ್ರಾಕ್ಟರ ನಂಬರ ಕೆಎ-32 ಟಿಎ-5946 2) ಅರ್ಜುನ ಮಹೇಂದ್ರ ಕಂಪನಿಯ ಟ್ರಾಕ್ಟರ ಇಂಜಿನ ನಂ JU5429 DB 3) ಅರ್ಜುನ ಮಹೇಂದ್ರ ಕಂಪನಿಯ ಟ್ರಾಕ್ಟರ ಇಂಜಿನ ನಂ RJCU2448 ನೇದ್ದರ ಟ್ರೈಲಿಯಲ್ಲಿ ಮರಳು ತುಂಬಿದ್ದು 4) ಅರ್ಜುನ ಮಹೇಂದ್ರ ಕಂಪನಿಯ ಟ್ರಾಕ್ಟರ ಮಾಡೇಲ್ ನಂ NAPU638 D9 5) ಅರ್ಜುನ ಮಹೇಂದ್ರ ಕಂಪನಿಯ ಟ್ರಾಕ್ಟರ ಮಾಡೇಲ್ ನಂ NJCU3835 CB ನೇದ್ದರ ಟ್ರೈಲಿಯಲ್ಲಿ ಮರಳು ತುಂಬಿದ್ದು ರೀತಿ ಇರುತ್ತವೆ. ಸದರಿ ಮರಳಿನ ಒಟ್ಟು ಅಂದಾಜು ಕಿಮ್ಮತ್ತು 3,600/- ರೂ ಆಗಬಹುದು. ನಂತರ ಏರಡು ಟ್ರ್ಯಾಕ್ಟರ ಟ್ರೈಲಿಗಳಲ್ಲಿ ಕಳ್ಳತನದಿಂದ ಅಕ್ರಮವಾಗಿ ಮರಳು ತುಂಬಿದ ಹಾಗು ಮೂರು ಖಾಲಿ ಟ್ರ್ಯಾಕ್ಟರಗಳನ್ನು ವಶಕ್ಕೆ ತೆಗೆದುಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 12-02-2018 ರಂದು ಮದ್ಯಾಹ್ನ ನನ್ನ ಮಗ ಪ್ರಕಾಶನು ತನ್ನ ಮಗಳಾದ ಕಾವೇರಿ ಮಗಳಿಗೆ ಮೈಯಲ್ಲಿ ಹುಷಾರ ಇರದ ಕಾರಣ ಚಿಕಿತ್ಸೆಗಾಗಿ ನಮ್ಮ ಮೋಟಾರ್ ಸೈಕಲ್ ನಂಬರ ಕೆಎ-42 -781 ನೇದ್ದರ ಮೇಲೆ ಕರೆದುಕೊಂಡು ಅಫಜಲಪೂರಕ್ಕೆ ಹೋಗುತ್ತೇನೆ ಅಂತ ಹೇಳಿ ಮನೆಯಿಂದ ಹೋಗಿರುತ್ತಾನೆ ಮದ್ಯಾಹ್ನ 4.00 ಗಂಟೆ ಸುಮಾರಿಗೆ ನಮ್ಮ ಸಂಭಂದಿಕನಾದ ಅಂಬಣ್ಣ ತಂದೆ ಪುಂಡಲಿಕ ನಾವಿ ಎಂಬಾತನು ಪೋನ ಮಾಡಿ ತಿಳಿಸಿದ್ದೆನೆಂದರೆ ಅಫಜಲಪೂರ ದೇವಣಗಾಂವ ರೋಡಿನ ಮೇಲೆ  ಸೊನ್ನ ಕ್ರಾಸ ದಾಟಿ ಇಟ್ಟಂಗಿ ಬಟ್ಟಿ ಹತ್ತಿರ ಪ್ರಕಾಶನ ಮೋಟಾರ ಸೈಕಲ್ ನಂಬರ ಕೆಎ-42 -781 ನೇದ್ದಕ್ಕೆ ಮತ್ತು ಎದುರುಗಡೆಯಿಂದ ಬರುತಿದ್ದ ಮೋಟಾರ್ ಸೈಕಲ್ ನಂ ಎಮ್ ಹೆಚ್ 12 ಎಸ್-7763 ನೆದ್ದಕ್ಕೆ ಮದ್ಯಾಹ್ನ 3.30 ಗಂಟೆ ಸುಮಾರಿಗೆ ಮುಖಾಮುಖಿ ಡಿಕ್ಕಿ ಹೊಡೆದು ಅಫಘಾತ ಸಂಬವಿಸಿರುತ್ತದೆ ಸದರಿ ಘಟನೆಯಲ್ಲಿ ಪ್ರಕಾಶನಿಗೆ ತಲೆಯ ಬಲಭಾಗಕ್ಕೆ, ಮುಖಕ್ಕೆ, ಭುಜಕ್ಕೆ  ಭಾರಿ ರಕ್ತಗಾಯ ಮತ್ತು ಒಳಪೆಟ್ಟುಗಳು ಸಂಬವಿಸಿರುತ್ತವೆ ಕಾವೇರಿಗೆ ಮುಖಕ್ಕೆ ರಕ್ತಗಾಯವಾಗಿ ಮೈಕೈಗೆ ತರಚಿದ ಗಾಯಗಳು ಆಗಿರುತ್ತವೆ ಮೋಟಾರ್ ಸೈಕಲ್ ನಂ ಎಮ್ ಹೆಚ್ 12 ಎಸ್-7763 ನೆದ್ದರ ಮೇಲೆ ಒಬ್ಬ ಪುರುಷ ಮತ್ತು ಒಬ್ಬಳು ಮಹಿಳೆ ಹಾಗು ಒಂದು ಚಿಕ್ಕ ಹೆಣ್ಣು ಮಗು ಇದ್ದು ಅವರೇಲ್ಲರಿಗು ಭಾರಿ ರಕ್ತಗಾಯ ಮತ್ತು ಒಳಪೆಟ್ಟುಗಳಾಗಿದ್ದರಿಂದ ಗಾಯ ಹೊಂದಿದವರೇಲ್ಲರಿಗೂ ನಾನು ಮತ್ತು ನನ್ನ ಗೆಳೆಯ ವಿಠ್ಠಲ ತಂದೆ ಫಕೀರಪ್ಪ ತೇಗೂರ ಇಬ್ಬರು 108 ವಾಹನದಲ್ಲಿ ಚಿಕಿತ್ಸೆಗಾಗಿ ಅಫಜಲಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿರುತ್ತೇವೆ ಅಫಜಲಪೂರ ಸರಕಾರಿ ಆಸ್ಪತ್ರೆಯ ವೈದ್ಯರು ಪ್ರಕಾಶನಿಗು ಮತ್ತು ಕಾವೇರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ 108 ವಾಹನದಲ್ಲಿ ಕಲಬುರಗಿಗೆ ಕರೆದುಕೊಂಡು ಹೋಗುತ್ತಿದ್ದೆವೆ ಅಂತ ತಿಳಿಸಿದನು. ನಂತರ ಸಾಯಂಕಾಲ 5.35 ಗಂಟೆ ಸುಮಾರಿಗೆ ಅಂಬಣ್ಣನು ಮತ್ತೆ ಪೊನ ಮಾಡಿ ತಿಳಿಸಿದ್ದೆನೆಂದರೆ ಸಾಯಂಕಾಲ 5.30 ಗಂಟೆಯ ಸುಮಾರಿಗೆ ಕಲಬುರಗಿಯ ಗಂಗಾ ಆಸ್ಪತ್ರೆಗೆ ತಲುಪುತಿದ್ದಂತೆ ಪ್ರಕಾಶನು ಮೃತಪಟ್ಟಿದ್ದು ಕಾವೇರಿಗೆ ಚಿಕಿತ್ಸೆಗಾಗಿ ಗಂಗಾ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ಪ್ರಕಾಶನ ಶವವನ್ನು ಅಫಜಲಪೂರದ ಸರಕಾರಿ ಆಸ್ಪತ್ರೆಗೆ ತಗೆದುಕೊಂಡು ಬರುತಿದ್ದೇವೆ ಅಂತ ತಿಳಿಸಿದನು. ನಂತರ ನಾನು ಮತ್ತು ನಮ್ಮ ಗ್ರಾಮದ ವೀರುಪಾಕ್ಷಿ ಗಂಗನಳ್ಳಿ, ಸುಭಾಷ ಭುಸನೂರ, ಅಂಬಣ್ಣ ನಾವಿ ಮತ್ತಿತರರು ಸಾಯಂಕಾಲ 7.00 ಸುಮಾರಿಗೆ ಅಫಜಲಪೂರ ಸರಕಾರಿ ಆಸ್ಪತ್ರೆಗೆ ಬಂದು ಪ್ರಕಾಶನ ಶವವನ್ನು ಮತ್ತು ಆತನಿಗೆ ಆಗಿರುವ ಗಾಯಗಳನ್ನು ನೋಡಿರುತ್ತೇವೆ. ನನ್ನ ಮಗ ಪ್ರಕಾಶನ ಮೋಟಾರ್ ಸೈಕಲಗೆ ಎದುರಿನಿಂದ ಬಂದು ಡಿಕ್ಕಿ ಹೊಡೆದ ಮೋಟಾರ ಸೈಕಲನ ಸವಾರನ ಹೆಸರು ಮತ್ತು ಆತನ ಹಿಂದಿನ ಶಿಟನಲ್ಲಿ ಕುಳಿತಿದ್ದವಳ ಹೆಸರು ಕೇಳಿ ತಿಳಿದುಕೊಂಡಿದ್ದು ಸಿದ್ದರೂಡ ಸಾ||ಪಡಸಲಗಾ ಮತ್ತು  ಹೆಣ್ಣುಮಗಳ ಹೆಸರು ಸಿದ್ದರೂಡನ ಹೆಂಡತಿ ಗೀತಾ ಅಂತ ಗೊತ್ತಾಗಿರುತ್ತದೆ. ಅಂತಾ ಶ್ರೀ ಚಂದ್ರಕಾಂತ ತಂದೆ ಶರಣಪ್ಪ ನಾವಿ ಸಾ||ದೇವಣಗಾಂವ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

12 February 2018

KALABURAGI DISTRICT REPORTED CRIMES


ಅಪಘಾತ ಪ್ರಕರಣಗಳು  :
ಆಳಂದ ಠಾಣೆ : ದಿನಾಂಕ: 11/02/2018 ರಂದು ನಾನು ನನ್ನ ಹೆಂಡತಿ ಹೊಲಕ್ಕೆ ಹೋಗಿ ಮರಳಿ ಮನೆಗೆ ಬಂದು ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ನಮ್ಮ ಮಗ ಶಶಿಧರ ಇತನು ಆಟ ಆಡುತ್ತಾ ನಮ್ಮ ಮನೆ ಮುಂದಿನ ಚಾವಡಿ ಕಟ್ಟಿಯ ಹತ್ತಿರ ರೋಡಿನ ಪಕ್ಕದಲ್ಲಿ ಆಟವಾಡುತ್ತಿದ್ದಾಗ ರುದ್ರವಾಡಿ ಗ್ರಾಮದ ವಿಜಯಕುಮಾರ ತಂದೆ ಶಿವರುದ್ರಪ್ಪಾ ಹತ್ತರಕಿ ಇತನು ಗ್ರಾಮದ ಶಾಲೆಯ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಾ ಬಂದು ನಮ್ಮ ಮಗನಿಗೆ ಡಿಕ್ಕಿಪಡಿಸಿದರಿಂದ ನಮ್ಮ ಮಗು ಮೂರ್ಛೆ ಹೋಗಿ ಬಿದ್ದಾಗ ನಾನು ಮತ್ತು ನನ್ನ ಹೆಂಡತಿ ಗಾಬರಿ ಬಿದ್ದು ಹೋಗಿ ನೋಡಿ ನಮ್ಮ ಮಗುವನ್ನು ಅದೇ ಜೀಪಿನಲ್ಲಿ ಹಾಕಿಕೊಂಡು ಸರ್ಕಾರಿ ಆಸ್ಪತ್ರೆ ಆಳಂದಕ್ಕೆ ತಂದಾಗ ಅಲ್ಲಿನ ವೈದ್ಯಾಧಿಕಾರಿಗಳು ಮಗು ಮೃತಪಟ್ಟಿದೆ ಎಂದು ತಿಳಿಸಿರುತ್ತಾರೆ. ನನ್ನ ಮಗನಿಗೆ ಡಿಕ್ಕಿಪಡಿಸಿ ಭಾರಿ ಘಾಯ ಹೊಂದಿ ಮರಣ ಹೊಂದಲು ಕಾರಣನಾದ ಜೀಪ್ ನಂಬರ್ MH:12 CK-4470 ನೇದ್ದರ ಚಾಲಕ ವಿಜಯಕುಮಾರ ಹತ್ತರಕಿ ಇತನ ಮೇಲೆ ಕಾನೂನಿನ ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಶ್ರೀ.ರಾಜಶೇಖರ ತಂದೆ ಮಲ್ಲೇಶಪ್ಪಾ ಜಮಾದಾರ ಸಾ|| ಜಮಗಾ(ಆರ್) ತಾ|| ಆಳಂದ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಂಚೋಳಿ ಠಾಣೆ : ಶ್ರೀ ರಾಜೇಂದ್ರ ತಂದೆ ಅಮೃತ ಹಸುರಗುಂಡಗಿ ಸಾ || ಚಿಮ್ಮಚೋಡ ತಾ|| ಚಿಂಚೋಳಿಜಿ|| ಕಲಬುರ್ಗಿ ರವರ  ತಂದೆಯಾದ ಅಮೃತ ತಂದೆ ಯಲ್ಲಪ್ಪಾ ಹಸರಗುಂಡಗಿ ಸಾ|| ಚಿಮ್ಮನಚೋಡ ಆಗಿದ್ದು; ನನ್ನ ತಂದೆಯವರು ಇಂದು ಮದ್ಯಾನ್ಹ ಮನೆಯಿಂದ ಹೊರಗಡೆ ಹೋಗುತ್ತಿರುವಾಗ ಅವರ ಹಿಂದೆ ಬಂದ ಟ್ರ್ಯಾಕ್ಟರ ನಂ. ಕೆ..ಎ- 32 ಟಿ.ಬಿ- 3103 ನ ಟ್ರ್ಯಾಕ್ಟರ ಹಿಂದುಗಡೆಯಿಂದ ಬಂದು ನನ್ನ ತಂದೆಯವರಿಗೆ ಗುದ್ದಿದಾಗ ನನ್ನ ತಂದೆಯವರ ಎರಡು ಕಾಲುಗಳು ಪುಡಿಯಾಗಿದ್ದವು. ಇದನ್ನೂ ಕಂಡ ನನ್ನ ಓಣಿಯ ಜನರು ನನ್ನ ತಂದೆಯವರನ್ನೂ ಆಸ್ಪತ್ರೆಗೆ ಕರೆದುಕೊಂಡು ಹೋದರು. ಕಲಬುರ್ಗಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮದ್ಯದಲ್ಲಿ ನನ್ನ ತಂದೆಯವರು ಸಾವನ್ನಪ್ಪಿರುತ್ತಾರೆ. ಅಪಘಾತಮಾಡಿದ ಟ್ರ್ಯಾಕ್ಟರನ ಚಾಲಕನು ಅಪಘಾತವಾದ ತಕ್ಷಣ ಓಡಿ ಹೋಗಿರುತ್ತಾನೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಪೂರ್ಣಿಮಾ ಗಂಡ ಶಿವಾನಂದ ಸಿನ್ನೂರ ಸಾ : ಕೆ.ಎಚ್.ಬಿ ಅಕ್ಕಮಾಹಾದೇವಿ ಕಾಲನಿ ಕಲಬುರಗಿ ರವರಿಗೆ 2016 ನೇ ಸಾಲಿನಲ್ಲಿ ಕೆ.ಹೆಚ.ಬಿ. ಅಕ್ಕ ಮಾಹಾದೇವಿ ಕಾಲನಿಯಲ್ಲಿ ವಾಸವಾಗಿರುವ ಶಿವಾನಂದ ತಂದೆ ಸಿದ್ಧಣ್ಣಾ ಸಿನ್ನೂರ ಇವರೊಂದಿಗೆ ಲಗ್ನದ ವಿಷಯ ಮಾತುಕತೆ ಆಡುವ ಕಾಲಕ್ಕೆ ನಮ್ಮ ತಂದೆ ಬಸವರಾಜ. ತಾಯಿ ಮಲ್ಲಮ್ಮಾ ಹಾಗೂ ನಮ್ಮ ಹಿರಿಯರಾದ ಹಿರಗಪ್ಪ ಚಂಡರಕಿ, ರಾಣಪ್ಪ ಓಗೆ, ಶಾಂತಮಲ್ಲಪ್ಪ ಶಿವಕೇರಿ  ಅವರೆಲ್ಲರೂ ಸೇರಿಕೊಂಡು ಹುಡುಗನ ಕಡೆಯವರಾದ ರಾಮಚಂದ್ರ ಎಲ್ಲರೂ ಮಾತುಕತೆ ಆಡುವಾಗ  ಹುಡುಗ ಮತ್ತು ಅವರ ತಾಯಿ, ತಮ್ಮ ಹಾಗೂ ತಂಗಿ ಇವರೆಲ್ಲರು ಕೂಡಿ ವರದಕ್ಷಿಣೆ ರೂಪದಲ್ಲಿ ಬೇಡಿಕೆಯಂತೆ ಲಗ್ನ ಕಾಲಕ್ಕೆ ಒಟ್ಟು ಎರಡು ಲಕ್ಷ  ನಗದು ಹಣ, ಐದು ತೊಲಿ ಬಂಗಾರ, ಒಂದು ಮೋಟಾರ ಸೈಕಲ ಬದಲಾಗಿ 55000/- ರೂ. ಅಲ್ಲದೇ ಹಾಂಡೆ ಬಾಂಡೆ ಮತ್ತು ಎಲ್ಲಾ ಸಾಮಾನುಗಳನ್ನು ಕೊಡುವ ಮಾತುಕತೆ ಆಡಿ, ಇದರಲ್ಲಿ 01 ಲಕ್ಷ ರೂ.ಯನ್ನು  ಮುಂದಿನ ಒಂದು ವರ್ಷದೊಳೆಗೆ ಕೊಡುವ ಮಾತುಕತೆ ಆಡಿ ಲಗ್ನ ನಿಶ್ಚಯ ಮಾಡಿ ದಿನಾಂಕ 05/12/2016 ರಂದು ಎಂ.ಎಸ್.ಕೆ.ಮಿಲ್ಲ ಹತ್ತಿರ ಇರುವ ಮೂನಸ್ಟಾರ ಫಂಕ್ಷನ ಹಾಲದಲ್ಲಿ  ಮಾತನಾಡಿದ ಈ ಮೇಲಿನ ಎಲ್ಲಾ ವಸ್ತುಗಳನ್ನು ವರದಕ್ಷಿಣೆ ರೂಪದಲ್ಲಿ ಕೊಟ್ಟು  ನಮ್ಮ ಹಿಂದು ಸಂಪ್ರದಾಯದಂತೆ ಲಗ್ನವನ್ನು ಸುಮಾರು 06 ಲಕ್ಷ ರೂ. ಖರ್ಚು ಮಾಡಿ ನಮ್ಮ ತಂದೆ, ತಾಯಿಯವರು ಲಗ್ನ ಮಾಡಿಕೊಟ್ಟಿರುತ್ತಾರೆ. ಮದುವೆಯಾದ ನಂತರ ನಾನು ಗಂಡನ ಮನೆಗೆ ನಡೆಯಲು ಕೆ.ಹೆಚ.ಬಿ. ಕಾಲನಿಗೆ ಹೋದಾಗ ಗಂಡ ಶಿವಾನಂದ, ಅತ್ತೆ ನಾಗಮ್ಮಾ, ಮೈದನ ಆನಂದ, ನಾದಿನಿ ಶಿಲ್ಪಾ ಇವರೆಲ್ಲರೂ 08 ದಿವಸಗಳ ವರೆಗೆ ನನಗೆ ಚನ್ನಾಗಿ ನೋಡಿಕೊಂಡು ಮುಂದೆ ಇವರೆಲ್ಲರೂ ಕೂಡಿಕೊಂಡು ನಿಮ್ಮ ತಂದೆ, ತಾಯಿಯವರು  ಮದುವೆ ಕಾಲಕ್ಕೆ ಮಾತಾಡಿದಂತೆ ಉಳಿದ ಬಾಕಿ ಒಂದು ಲಕ್ಷ ರೂ. ವರದಕ್ಷಿಣೆ ಸೇರಿಸಿ ಒಟ್ಟು 10 ಲಕ್ಷ ರೂ. ತೆಗೆದುಕೊಂಡು ಬಾ ಅಂತಾ ದಿನಾಲೂ ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ತೊಂದರೆ ಕೊಡುತ್ತಾ ಬಂದಿರುತ್ತಾರೆ. ಅಲ್ಲದೇ ದಿನಾಂಕ 16/05/17 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ 14/11/17 ರ ವರೆಗೆ ವರದಕ್ಷಿಣೆ ತೆಗೆದುಕೊಂಡು ಬಾ ಕಿರುಕುಳ ಕೊಡುತ್ತಿದ್ದು, ಈ ಬಗ್ಗೆ ರಾಜಿ ಪಂಚಾಯತಿ ಜೂನ್ 2017 ನೇ ತಿಂಗಳಲ್ಲಿ ಮತ್ತು ದಿನಾಂಕ 20/01/18 ರಂದು ಘಾಟಗೆ ಲೇಔಟದಲ್ಲಿ ಮಾಡಿದಾಗ ಆರೋಪಿತರು ಫಿರ್ಯಾದಿದಾರಳಿಗೆ ವರದಕ್ಷಿಣೆ ತರದೇ ಇದ್ದರೆ ಮನೆಗೆ ಕರೆದುಕೊಳ್ಳುವುದಿಲ್ಲಾ ಎಂದು ಹೇಳಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಸೇಡಂ ಠಾಣೆ  : ಶ್ರೀ ದೇವಿಂದ್ರಮ್ಮ ಗಂಡ ಶೇಖಪ್ಪ ನಿಂಗಪ್ಪೋರ ಸಾ : ಹಂದರಕಿ ತಾ : ಸೇಡಂ ರವರ ಮಗಳಾದ ಚನ್ನಮ್ಮ ತಂದೆ ಶೇಖಪ್ಪ  ಇವಳು ದಿನಾಂಕ 10-02-2018 ರಂದು ಋತುಮತಿ ಆದಾಗ ಹೊಟ್ಟೆ ಬೇನೆ ಆಗಿದ್ದರಿಂದ ಹೊಟ್ಟೆ ಬೇನೆ ತಾಳಲಾರದೆ ಮನೆಯಲ್ಲಿದ್ದ ಹತ್ತಿಬೆಳೆಗೆ ಹೊಡೆಯುವ ಎಣ್ಣೆ ಕುಡಿದು ವಾಂತಿ ಮಾಡಿಕೊಳ್ಳುತ್ತಿರುವಾಗ ನಾನು ನೋಡಿ ಮಗಳನ್ನು ಸರಕಾರಿ ಆಸ್ಪತ್ರೆ ಸೇಡಂಗೆ ತಂದು ಉಪಚಾರ ಕುರಿತು ತೋರಿಸಿದ್ದು ಹೆಚ್ಚಿನ ಉಪಚಾರ ಕುರಿತು ಕಲಬುರಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಮಾರ್ಗ ಮದ್ಯದಲ್ಲಿ ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.