POLICE BHAVAN KALABURAGI

POLICE BHAVAN KALABURAGI

19 December 2017

KALABURAGI DISTRICT REPORTED CRIMES

ಅಪಹರಿಸಿ ಅತ್ಯಾಚಾರ ಮಾಡಿದ ಪ್ರಕರಣ :
ನೆಲೋಗಿ ಠಾಣೆ : ಶ್ರೀ ರವರ ಮಗಳು ಕುಮಾರಿ ಇವಳು ದಿನಾಂಕ: 6/12/2017 ರಂದು ಶಾಲೆಗೆ ಹೋಗಿ ಸಾಯಂಕಾಲ ಮನೆಗೆ ಬಂದಿದ್ದು ರಾತ್ರಿ 9:00 ಗಂಟೆ ಸುಮಾರಿಗೆ ನಾವೆಲ್ಲರೂ ಊಟ ಮಾಡಿ ಮಲಗಿಕೊಂಡಿದ್ದು  ದಿನಾಂಕ: 7/12/2017 ರಂದು ಬೆಳಿಗ್ಗೆ 3:00 ಗಂಟೆಗೆ ಎದ್ದು ನೋಡಲಾಗಿ ನನ್ನ ಮಗಳು ಹಾಸಿಗೆಯಲ್ಲಿ ಇರಲಿಲ್ಲಾ ನಂತರ ನಾನು ನನ್ನ ಹೆಂಡತಿ ಕೂಡಿ ನನ್ನ ಗಂಡು ಮಕ್ಕಳ ಹತ್ತಿರ ಹೋಗಿರಬೇಕೆಂದು ಗಾಬರಿಯಾಗಿ ಅಲ್ಲಿಗೆ ಹೋಗಿ ನೋಡಲಾಗಿ ಅಲ್ಲಿಯು ಕೂಡಾ ಇರಲ್ಲಿಲ್ಲಾ ನಂತರ ನಾವೆಲ್ಲರೂ ಗಾಬರಿಯಾಗಿ ಊರಲ್ಲಿ ಹುಡಕಾಡಿದರು ಸಿಗಲಿಲ್ಲಾ. ನಂತರ ನಮಗೆ ತಿಳಿದು ಬಂದಿದೆನೆಂದರೆ ನನ್ನ ಮಗಳು ಶಾಲೆಯಿಂದ ಬರುವಾಗ ನನ್ನ ಮಗಳಿಗೆ ಚಂದ್ರಕಾಂತ ತಂದೆ ಮಾನಸಪ್ಪ ಮಾದರ ಇವನು ಚೂಡಾಯಿಸಿದ್ದಾನೆ ಅಂತ ನನ್ನ ಮಗಳು ನನಗೆ ಹೇಳಿದ್ದು ಅವನೆ ನನ್ನ ಅಪ್ರಾಪ್ತ ವಯಸ್ಸಿನ ಮಗಳನ್ನು ಅಪಹರಿಸಿಕೊಂಡು ಹೋಗಿರುತ್ತಾನೆ ಅಂತ ಅವನ ಮೇಲೆ ಸಂಶೆಯದ ಮೇಲೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದಿನಾಂಕ 18-12-2017 ರಂದು  ಅಪಹರಣಕ್ಕೊಳಗಾದ ಬಾಲಕಿ ಕುಮಾರಿ ಇವಳು ಸೊನ್ನ ಕ್ರಾಸ ಹತ್ತಿರ ಆರೋಪಿ ಫಿಚಂದ್ರಕಾಂತ @ ಕಾಂತು ಮಾದರ ಇವನೊಂದಿಗೆ ಪತ್ತೆ ಆಗಿದ್ದು, ಕುಮಾರಿ ಇವಳಿಗೆ  ಚಂದ್ರಕಾಂತ @ ಕಾಂತು ತಂದೆ ಮಾನಶೆಪ್ಪ ಮಾದರ ಸಾ|| ಬೆಣ್ಣೂರ ಇವನು ದಿ:07-12-2017 ರಂದು ಅಪಹರಿಸಿಕೊಂಡು ಹೋಗುವಾಗ ಅವಳು ನಾನು ಚಿಕ್ಕವಳು ಇದ್ದೆನೆ ಬೇಡ ಅಂದರು ಕೇಳದೆ ವಸ್ತಾರಿ ಸೀಮಾಂತರದ ಒಂದು ಹೊಲದಲ್ಲಿ ಬೆಳಿಗ್ಗೆ 2-3 ಸಲ ಜಬರಿ ಸಂಭೋಗ ಮಾಡಿ ನಂತರ ತನಗೆ ಬೆಂಗಳೂರಿಗೆ ಕರೆದುಕೊಂಡು ಹೋಗಿರುತ್ತಾನೆ ಅಲ್ಲಿ ಗುಡಿ ಗುಂಡಾರಗಳಲ್ಲಿ ಮಲಗಿಸಿ ನಂತರ ನಾವು ಇಬ್ಬರೂ ಊರಿಗೆ ಹೋಗಿ ಮದುವೆ ಮಾಡಿಕೊಳ್ಳೊಣ ಅಂತಾ ಕರೆದುಕೊಂಡು ಬೆಣ್ಣೂರಿಗೆ ಬರುತ್ತಿರುವಾಗ ಸೊನ್ನ ಕ್ರಾಸ ಹತ್ತಿರ ಪೊಲೀಸರು ನಮಗೆ ಹಿಡಿದುಕೊಂಡಿರುತ್ತಾರೆ ಚಂದ್ರಕಾಂತ ಇವನು ನಾನು ಬೇಡ ಅಂತಾ ಹೇಳಿದರು ಕೇಳದೆ ನನಗೆ ಮದುವೆ ಆಗುತ್ತೇನೆ ಅಂತಾ ರಂಬಿಸಿ ನನ್ನೊಂದಿಗೆ ಜಬರಿಸಂಭೋಗ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.      
ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ : ದಿನಾಂಕ-18/12/2017 ರಂದು ಬೆಳಿಗ್ಗೆ  ಸಾತ ಗುಮ್ಮಜದಿಂದ ಎಸ್.ಟಿ.ಬಿ.ಟಿ ಕ್ರಾಸ್ ರಸ್ತೆಯಲ್ಲಿ ಬರುವ ಬಸವೇಶ್ವರ ಕಾಲೋನಿ ಕ್ರಾಸ್ ಹತ್ತಿರದ ಆರ್ಟ ರಾಗಜಿನ್ ಅಂಗಡಿ ಎದುರಿನ ರಸ್ತೆಯ ಮೇಲೆ ಚನ್ನಮ್ಮ ಗಂಡ ಮಲ್ಲಿಕಾರ್ಜುನ ಬಿರಾದರ ಸಾ ತಾಜ ನಗರ ಕಲಬುರಗಿ ರವರ  ಗಂಡನಾದ ಮಲ್ಲಿಕಾರ್ಜುನ ಬಿರಾದಾರ ಈತನು ತನ್ನ ಮೋಟಾರ ಸೈಕಲ ನಂ ಕೆಎ-32 ಇಕೆ-0050 ನೇದ್ದನ್ನು ಸಾತ ಗುಮ್ಮಜ ರೋಡ ಕಡೆಯಿಂದ ಅತೀವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೆ ಮೋಟಾರ ಸೈಕಲ ಬ್ರೇಕ್ ಹಿಡಿದು ತನ್ನಿಂದ ತಾನೆ ಮೋಟಾರ ಸೈಕಲ ಸಮೇತ ಕೆಳಗೆ ಬಿದ್ದಾಗ   ಮಲ್ಲಿಕಾರ್ಜುನ ಈತನ ತೆಲೆಗೆ ರೋಡ ಡಿವೈಡರ್ ಬಡೆದು ತೆಲೆಗೆ ಭಾರಿಗಾಯ ಆಗಿ ಕಿವಿಯಿಂದ್ ಮತ್ತು ಮೂಗಿನಿಂದ ರಕ್ತಸ್ರಾವ ಆಗಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಆತನಿಗೆ ಪರಿಕ್ಷಿಸಿ  ದಾರಿ ಮದ್ಯದಲ್ಲಿ  ಮೃತ ಪಟ್ಟಿರುತ್ತಾನೆ. ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಪಕೀರಪ್ಪ ತಂದೆ ಬಲವಂತಪ್ಪ ಬಿರಾದಾರ ಸಾ|| ಬಂಕಲಗಾ ಇವರು ಹೆಂಡತಿ ಮಕ್ಕಳೊಂದಿಗೆ ನಮ್ಮ ಹೊಲದಲ್ಲಿಯೆ ಮನೆ ಮಾಡಿಕೊಂಡು ವಾಸವಾಗಿದ್ದೆನೆ. ನಮ್ಮಅಣ್ಣನಾದ ಸಿದ್ರಾಮಪ್ಪ ಈತನು ಸಹ ನಮ್ಮ ಹೊಲದ ಪಕ್ಕದಲ್ಲಿಯೆ ಇದ್ದ ತನ್ನ ಹೊಲದಲ್ಲಿ ಮನೆ ಕಟ್ಟಿಕೊಂಡು ತನ್ನ ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತಾನೆ. ದಿನಾಂಕ 16-12-2017 ರಂದು 11:15 ಗಂಟೆ ಸುಮಾರಿಗೆ ನಾನು ನನ್ನ ಹೊಲದಲ್ಲಿ  ಮನೆಯಲ್ಲಿದ್ದಾಗ, ನಮ್ಮೂರಿನ ವಿಠ್ಠಲ ಜಾಮಗೊಂಡ ಇವರು ನನಗೆ ಪೋನ ಮಾಡಿ, ಅಫಜಲಪೂರ ಕರಜಗಿ ರೋಡಿಗೆ ಇರುವ ಭವಾನಿ ದಾಬಾದ ಮುಂದೆ ನಿನ್ನ ಅಣ್ಣನಾದ ಸಿದ್ರಾಮಪ್ಪನು ನಡೆದುಕೊಂಡು ಹೊಗುತ್ತಿದ್ದಾಗ ಪೀಕಪ್ ವಾಹನ ಡಿಕ್ಕಿಯಾಗಿ  ಎಕ್ಸಿಡೆಂಟ ಆಗಿದೆ ಜಲ್ದಿ ಬಾ ಅಂತಾ ತಿಳಿಸಿದ ಮೇರೆಗೆ, ನಮ್ಮ ಹೊಲ ಸಹ ಅಲ್ಲೆ ಹತ್ತಿರದಲ್ಲೆ ಇದ್ದರಿಂದ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಅಣ್ಣನಾದ ಸಿದ್ರಾಮನಿಗೆ ತಲೆಗೆ ರಕ್ತಗಾಯ, ಏಡ ಪಕ್ಕೇಲುಬಿಗೆ ಭಾರಿ ಒಳಪೆಟ್ಟು, ಏಡಗಾಲು ಮೊಳಕಾಲಿನ ಕೆಳಗೆ ಕಾಲು ಮುರಿದಂತೆ ಆಗಿ ಮೈಕೈಗೆ ತರಚಿದ ರಕ್ತಗಾಯಗಳು ಮತ್ತು ಅಲ್ಲಿಲ್ಲಿ ಗುಪ್ತಗಾಯಗಳು ಆಗಿದ್ದವು, ನನ್ನ ಅಣ್ಣನಿಗೆ ಡಿಕ್ಕಿಪಡಿಸಿದ ಪಿಕಪ್ ವಾಹನ ನಂಬರ ನೋಡಿದ್ದು ಅದರ ನಂಬರ ಕೆಎ-32 ಬಿ-7855 ಅಂತ ಇದ್ದು, ಡಿಕ್ಕಿಪಡಿಸಿದ ಚಾಲಕ ಘಟನೆ ನಂತರ ವಾಹನವನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೊಗಿದ್ದು, ಸದರಿ ಚಾಲಕನ ಹೆಸರು ಮಡಿವಾಳಪ್ಪ ತಂದೆ ಗುರುಲಿಂಗಪ್ಪ ಪದಕಿ ಸಾ|| ಅಫಜಲಪೂರ ಅಂತ ಗೊತ್ತಾಗಿರುತ್ತದೆ. ನಂತರ ನನ್ನ ಅಣ್ಣನನ್ನು ಘಟನೆಯನ್ನು ಪ್ರತ್ಯಕ್ಷವಾಗಿ ನೋಡಿದ ಸದಾಶಿವ ಪ್ಯಾಟಿ, ವಿಠ್ಠಲ ಜಾಮಗೊಂಡ, ಬಸವರಾಜ ಬಿರಾದಾರ ಇವರ ಸಹಾಯದಿಂದ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಕಲಬುರಗಿಯ ಯುನೈಟೇಡ್ ಆಸ್ಪತ್ರೆಗೆ ಕರೆದುಕೊಂಡು ಸೇರಿಕೆ ಮಾಡಿರುತ್ತೆವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.     
ಆಳಂದ ಠಾಣೆ : ಶ್ರೀ ಶರಣಬಸಪ್ಪಾ ತಂದೆ ಗುಂಡಪ್ಪಾ ಕೆರಮಗಿ ಸಾ|| ಸಾವಳೇಶ್ವರ  ತಾ|| ಆಳಂದ.  ರವರು ತಮ್ಮ ಓಣಿಯ ಕವಿತಾ ಗಂಡ ಅಶೋಕ ಸಿಂಗೆ ಇವರು ನಿರ್ಗುಡಿ ಬ್ಯಾಂಕಿಗೆ ಹೋಗಿ ಬರೋಣಾ ಅಂತಾ ನಮ್ಮ ಮನೆಯ ಪಕ್ಕದ ಅಶೋಕ ನಿಲೂರೆ ರವರ ಮೋಟರ ಸೈಕಲ್ ನಂ ಕೆಎ 32 ಕ್ಯೂ 1292 ನೇದ್ದರ ಮೇಲೆ ಮಧ್ಯಾಹ್ನ 01.00 ಗಂಟೆಗೆ ಹೊರಟು ನಾನು ಮೋಟರ್ ಸೈಕಲ್ ಚಲಾಯಿಸುತಿದ್ದು ನನ್ನ ಹಿಂದೆ ಕವಿತಾ ಸಿಂಗೆರವರು ಕುಳಿತು ಸಾವಳೇಶ್ವರ್ ಕ್ರಾಸ್ ಹತ್ತಿರದಿಂದ ಪಡಸಾವಳಗಿ ಮಾರ್ಗವಾಗಿ ಹೋಗುವಾಗ ಸರಸಂಬಾ ಕಡೆಯಿಂದ ಒಬ್ಬ ಕಾರ್ ಚಾಲಕ ಅತಿವೇಗದಿಂದ ಮತ್ತು ಅಲಕ್ಷತನದಿಂದ ಚಲಾಯಿಸುತ್ತಾ ಬಂದು ನಮ್ಮ ಮೋಟಾರ್ ಸೈಕಲಿಗೆ ಡಿಕ್ಕಿ ಪಡಿಸಿದ್ದರಿಂದ ಮೋಟಾರ ಸೈಕಲದಿಂದ ಕೆಳಗಡೆ ಬಿದ್ದು ನನಗೆ ತಲೆಗೆ ರಕ್ತಗಾಯ ಹಾಗೂ ಬಲಭುಜಕ್ಕೆ ರಕ್ತಗಾಯವಾಗಿದ್ದು ನನ್ನ ಹಿಂದೆ ಕುಳಿತ ಕವಿತಾ ಇವರಿಗೆ ಮುಖಕ್ಕೆ ಭಾರಿಗಾಯವಾಗಿ ಹಲ್ಲುಗಳು ಬಿದ್ದಿದ್ದು ಗದ್ದಕ್ಕೆ ಭಾರಿಗಾಯ & ಬಲಗಾಲ ಮುರಿದಿದ್ದು ಕೈಗೆ ರಕ್ತಗಾಯವಾಗಿದ್ದು ನಂತರ ನಮಗೆ ಡಿಕ್ಕಿ ಪಡಿಸಿದ ಕಾರ್ ನಂ ನೋಡಲಾಗಿ ಎಮ್‌ಹೆಚ್‌ 05 ಎಜೆ 4460 ಇದ್ದು ಅದರ ಚಾಲಕನ ಹೆಸರು ವಿಚಾರಿಸಲು ಮಹೇಶ ತಂದೆ ಬಸಯ್ಯಾ ಗುತ್ತೇದಾರ ಸಾ|| ತಡಕಲ್ ಅಂತಾ ಗೊತ್ತಾಗಿದ್ದು ನಂತರ ನಮಗೆ ಯಾವುದೋ ಒಂದು ವಾಹನದಲ್ಲಿ ಹಾಕಿಕೊಂಡು ಯುನೈಟೆಡ್ ಆಸ್ಪತ್ರೆ ಗುಲ್ಬರ್ಗಾದಲ್ಲಿ ತಂದು ಸೇರಿಕೆ ಮಾಡಿದ್ದು ನನಗೆ ಸಾದ ಗಾಯಗಳಾಗಿದ್ದು ಹಾಗೂ ಕವಿತಾ ಸಿಂಗೆ ಇವರಿಗೆ ಭಾರಿಗಾಯಗೊಳಿಸಿ ವಾಹನ ಸ್ಥಳದಲ್ಲೆ ಬಿಟ್ಟು ಓಡಿಹೋದ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ಯುನೈಟೆಡ್ ಆಸ್ಪತ್ರೆಯಲ್ಲಿ  ಅಪಘಾತದಲ್ಲಿ ಗಾಯ ಹೊಂದಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಶ್ರೀಮತಿ ಕವಿತಾ ಗಂಡ ಅಶೋಕ ಸಿಂಗೆ  (ಹೊಸಮನಿ) ಸಾ|| ಸಾವಳೇಶ್ವರ್ ಇವಳು ಉಪಚಾರ ಹೊಂದುತ್ತಾ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 16-12-2017 ಮೃತಪಟ್ಟಿರುತ್ತಾಳೆ, ಅಂತಾ ಸಲ್ಲಿಸಿದ ದೂರುಇ ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಅಫಜಲಪೂರ ಠಾಣೆ : ದಿನಾಂಕ 18-12-2017 ರಂದು ಬೆಳಿಗ್ಗೆ ನಮ್ಮ ಟ್ರ್ಯಾಕ್ಟರ ಚಾಲಕನಾದ ಈರಣ್ಣ ನಾಗಲಗಾಂವ ಎಂಬಾತನು ನನ್ನ ಮಗನಾದ ದರ್ಶನನಿಗೆ ಕರೆದುಕೊಂಡು ಎಳ್ಳ ಅಮವಾಸೆ ಹಬ್ಬದ ಪ್ರಯುಕ್ತ ತಮ್ಮ ಊರಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ನಮ್ಮೂರಿನ ದತ್ತಾತ್ರೇಯ ತಂದೆ ಶಿವಲಿಂಗ ಭೂಶೆಟ್ಟಿ ರವರ ಮೋಟರ ಸೈಕಲ ನಂ ಕೆಎ-28 ಇಪಿ-0986 ನೇದ್ದನ್ನು ತಗೆದುಕೊಂಡು ಹೋಗಿರುತ್ತಾನೆ. ಸಾಯಂಕಾಲ 4:15 ಗಂಟೆಯ ಸುಮಾರಿಗೆ ನಮ್ಮೂರಿನ ನಾಗರಾಜ ತಂದೆ ಮಲಕಪ್ಪ ಹತ್ತರಕಿ ಎಂಬುವವರು ನನಗೆ ಪೋನ ಮಾಡಿ ತಿಳಿಸಿದ್ದೆನೆಂದರೆ ಸಾಯಂಕಾಲ 4:00 ಗಂಟೆ ಸುಮಾರಿಗೆ ನಾನು ನನ್ನ ಮೋಟರ ಸೈಕಲ ಮೇಲೆ ಕರಜಗಿಯಿಂದ ಅಫಜಲಪೂರಕ್ಕೆ ಹೋಗುತ್ತಿದ್ದೆನು. ಅದೆ ಸಮಯಕ್ಕೆ ನಿಮ್ಮ ಟ್ಯಾಕ್ಟರ ಚಾಲಕನಾದ ಈರಣ್ಣ ನಾಗಲಗಾಂವ ಎಂಬಾತನು ಮೋಟರ ಸೈಕಲ ಕೆಎ-28 ಇಪಿ-0986 ನೇದ್ದರ ಮೇಲೆ ನಿಮ್ಮ ಮಗ ದರ್ಶನ ಎಂಬಾತನಿಗೆ ಕೂಡಿಸಿಕೊಂಡು ಕರಜಗಿ ಕಡೆಯಿಂದ ಅಫಜಲಪೂರದ ಕಡೆಗೆ ತನ್ನ ಮೋಟರ ಸೈಕಲನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿಯಿಂದ ಚಲಾಯಿಸಿಕೊಂಡು ನನ್ನ ಮೋಟರ ಸೈಕಲಗೆ ಓವರಟೇಕ್ ಮಾಡಿ ಮುಂದೆ ಹೋಗಿ ಭೀಮರಾಯ ಮಂಟಗಿ ರವರ ಹೊಲದ ಹತ್ತಿರ ರೋಡಿನ ಪಕ್ಕದ ಬಸರಿಗಿಡಕ್ಕೆ ಡಿಕ್ಕಿ ಹೊಡೆಸಿ ಅಫಘಾತ ಪಡಿಸಿರುತ್ತಾನೆ. ಸದರಿ ಘಟನೆಯಲ್ಲಿ ನಿಮ್ಮ ಮಗ ದರ್ಶನನ ಮುಖಕ್ಕೆ ಮತ್ತು ಹಣೆಗೆ ಹಾಗೂ ತಲೆಗೆ ಭಾರಿ ರಕ್ತಗಾಯಗಳು ಮತ್ತು ಒಳಪೆಟ್ಟುಗಳಾಗಿ ಸ್ಥಳದಲ್ಲಿಯೆ ಮೃತ ಪಟ್ಟಿರುತ್ತಾನೆ. ಮೋಟರ ಸೈಕಲ ನಡೆಸುತ್ತಿದ್ದ ಈರಣ್ಣನ ಎಡಕೈ ಎಲಬು ಮುರಿದು ಭಾರಿ ಒಳಪೆಟ್ಟಾಗಿರುತ್ತದೆ. ನಿಮ್ಮ ಮಗ ದರ್ಶನನ ಶವವನ್ನು 108 ವಾಹನದಲ್ಲಿ ಹಾಕಿಕೊಂಡು ಅಫಜಲಪೂರದಲ್ಲಿ ಬಂದು ಅಫಜಲಪೂರ ಸರ್ಕಾರಿ ಆಸ್ಪತ್ರೆಯಲ್ಲಿ ನಿಮ್ಮ ಮಗನ ಶವ ಹಾಕಿಸಿ, ಈರಣ್ಣನನ್ನು ಚಿಕಿತ್ಸೆಗಾಗಿ 108 ವಾಹನದಲ್ಲಿ ಕಲಬುರಿಗೆ ಕಳುಹಿಸಿಕೊಟ್ಟಿರುತ್ತೆನೆ ಅಂತ ತಿಳಿಸಿದ್ದು ನಾನು ಮತ್ತು ನನ್ನ ಚಿಕ್ಕಪ್ಪನ ಮಗನಾದ ಮಲಕಣ್ಣ ತಂದೆ ಷಣ್ಮುಕಪ್ಪ ಮಾಲಗಾರ ಇಬ್ಬರು ಮೋಟಾರ ಸೈಕಲ ಮೇಲೆ ಅಫಜಲಪೂರ ಸರ್ಕಾರಿ ಆಸ್ಪತ್ರೆಗೆ ಬಂದು ನನ್ನ ಮಗ ದರ್ಶನನ ಶವ ನೋಡಿರುತ್ತೇವೆ. ದಿನಾಂಕ 18-12-2017 ರಂದು ಸಾಯಂಕಾಲ 4:00  ಗಂಟೆ ಸುಮಾರಿಗೆ ಕರಜಗಿ - ಅಫಜಲಪೂರ ರೋಡಿಗೆ ಭೀಮರಾಯ ಮಂಟಗಿ ರವರ ಹೊಲದ ಹತ್ತಿರ ಮೋಟರ ಸೈಕಲ ನಂ ಕೆಎ-28 ಇಪಿ-0986 ನೇದ್ದನ್ನು ಅತಿವೇಗವಾಗಿ ಮತ್ತು ನಿರ್ಲಕ್ಷಯತನದಿಂದ ನಡೆಸಿ ರೋಡಿನ ಪಕ್ಕದ ಗಿಡಕ್ಕೆ ಡಿಕ್ಕಿ ಹೊಡೆಸಿ ಈರಣ್ಣ ನಾಗಲಗಾಂವ ಎಂಬಾತನ ಮೇಲೆ ಕಾನೂನಿನ ಪ್ರಕಾರ ಸೂಕ್ತ ಕ್ರಮ ಜರೂಗಿಸಲು ವಿನಂತಿ ಅಂತಾ ಶ್ರೀ ಈರಪ್ಪ ತಂದೆ ಮುರಗೆಪ್ಪ ಮಾಲಗಾರ ಸಾ|| ಗೋಳಸಾರ ತಾ|| ಇಂಡಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಶರಣಬಸಪ್ಪ ತಂದೆ ಅಂಬಾರಾಯ ವಾಡಿ ಸಾ: ವಸತಿ ಗೃಹ ಸಂಖ್ಯೆ 36/ಎ ಡಿ.ಎ.ಅರ್. ಲೈನ ಪೊಲೀಸ ಕಾಲೋನಿ ಕಲಬುರಗಿ ರವರು ದಿನಾಂಕ 16-12-2017  ರಂದು ಸಾಯಂಕಾಲ ಎಳ್ಳ ಅಮವಾಸೆ ಇದ್ದ ಪ್ರಯುಕ್ತ ಡಿ.ಎ.ಅರ್. ವಸತಿ ಗೃಹದಲ್ಲಿ ನನ್ನ ಮನೆಗೆ ಬೀಗ ಹಾಕಿಕೊಂಡು ನಾನು ಮತ್ತು ನನ್ನ ಹೆಂಡತಿ ಶ್ರೀಮತಿ ರಾಜಲಕ್ಷ್ಮೀ ಮಗಳಾದ ಸನ್ನಿಧಿ ಇವರೊಂದಿಗೆ  ಸರದಾರ ವಲ್ಲಭಾಯಿ ಪಟೇಲ್  ಜಿ.ಡಿ.ಎ. ಬಡಾವಣೆ ಕಲಬುರಗಿಯಲ್ಲಿ ಇರುವ ನಮ್ಮ ಅಣ್ಣ ಶ್ರೀ ಶಂಭುಲಿಂಗ ವಾಡಿ ಇವರ ಮನೆಗೆ ಹೋಗಿ ರಾತ್ರಿ ಅವರ ಮನೆಯಲ್ಲಿ ಇದ್ದೆನು. ಇಂದು ದಿನಾಂಕ 17-12-2017 ರಂದು ಮಧ್ಯಾಹ್ನ ಡಿ.ಎ.ಅರ್. ಪೊಲೀಸ ವಸತಿ ಗೃಹದಲ್ಲಿ ಇರುವ ಮನೆಯಿಂದ ಬ್ಲೋ ಟೂಥ ಸ್ಪೀಕರ ತರಬೇಕೆಂದು ನಾನು ಮತ್ತು ನನ್ನ ತಂದೆ ಅಂಬಾರಾಯ ವಾಡಿ ಇಬ್ಬರು ಕೂಡಿಕೊಂಡು ಮೋಟಾರ ಸೈಕಲ ಮೇಲೆ ಮನೆಗೆ ಹೋದಾಗ ಮನೆಯ ಮುಖ್ಯ ಬಾಗಿಲ ಕೀಲಿ ಕೊಂಡಿ ಮುರಿದಿದ್ದು ಕಂಡು ಬಂತು ಆಗ ಗಾಬರಿಯಾಗಿ ಮನೆಯೊಳಗಿ ಹೋಗಿ ನೋಡಲಾಗಿ ನಮ್ಮ ಮನೆಯ ದೇವರ ಕೋಣೆಯಲ್ಲಿ ಇರುವ ಕಬ್ಬಿಣದ ಅಲಮಾರಿ ಲಾಕ ಮುರಿದಿದ್ದು ಕಂಡು ಬಂತು ಅಲ್ಲದೇ ಅಲಮಾರಿಯಲ್ಲಿದ್ದ ಲಾಕರ ಮುರಿದಿದ್ದು ನೋಡಲಾಗಿ ಒಳಗೆ ಇಟ್ಟ ಬಂಗಾರದ ಮತ್ತು ಬೆಳ್ಳಿಯ ಆಭರಣಗಳು ಮತ್ತು ನಗದು ಹಣ ಹೀಗೆ ಒಟ್ಟು 1,64,000/- ರೂ. ಬಂಗಾರ, ಬೆಳ್ಳಿ , ಹಣ ಯಾರೋ ಕಳ್ಳರು ದಿನಾಂಕ 16-12-2017 ರಂದು ಸಂಜೆ 05-30 ಗಂಟೆಯಿಂದ ದಿನಾಂಕ 17-12-2017  ರಂದು ಮಧ್ಯಾಹ್ನ 12-30 ಗಂಟೆಯ ಮಧ್ಯದ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.     
ಅಸ್ವಾಭಾವಿಕ ಸಾವು ಪ್ರಕರಣಗಳು :
ಚೌಕ ಠಾಣೆ : ಶ್ರೀಮತಿ ಭಾಗಿರಥಿ ಗಂಡ ಶ್ರೀಮಂತ ಕಾಂಬಳೆ (ಹೊಡೆಲ್) ಸಾಃ ಹೊಡೆಲ್ ಗ್ರಾಮ ತಾಃ ಆಳಂದ ಜಿಃ ಕಲಬುರಗಿ ಹಾಃವಾಃ ಬ್ಲಾಕ್ ನಂ 10 ಮನೆ.ನಂ ಜಿ-2 ಪೊಲೀಸ್ ಕಾಲೋನಿ ಡಿ.ಎ.ಆರ್ ಕೇಂದ್ರ ಸ್ಥಾನ ಕಲಬುರಗಿ ರವರು ತನ್ನ ಕುಟುಂಬದೊಂದಿಗೆ ವಾಸವಾಗಿದ್ದು ನನ್ನ ಗಂಡನಾದ ಶ್ರೀಮಂತ ತಂದೆ ಗಿರೆಪ್ಪಾ ಕಾಂಬಳೆ (ಹೊಡೆಲ್) ಇವರು ಪೊಲೀಸ್ ಇಲಾಖೆಯಲ್ಲಿ ಕಳೆದ 26 ವರ್ಷದಿಂದ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಾ ಬಂದಿರುತ್ತಾರೆ. ದಿನಾಂಕ 17-12-2017 ರಂದು ಮದ್ಯಾಹ್ನ 3.00 ಗಂಟೆಗೆ ನಾನು ಮನೆಯಲ್ಲಿದ್ದಾಗ ನನ್ನ ಗಂಡನವರು ನನಗೆ ಹೇಳಿದ್ದೆನೆಂದರೆ 'ನಾಳೆ ಯಳ್ಳ ಅಮವಾಸ್ಸೆ ಇರುವ ನಿಮಿತ್ತ ಸೂಪರ್ ಮಾರ್ಕೆಟಗೆ  ಹೋಗಿ ತರಕಾರಿ, ಹಾಗೂ ಗಂಜದಿಂದ ಅಕ್ಕಿ ತೆಗೆದುಕೊಂಡು ಬರೋಣ' ಅಂತಾ ಹೇಳಿದ್ದಕ್ಕೆ ನಾನು ನನ್ನ ಗಂಡ ಇಬ್ಬರೂ ಸೇರಿ ತರಕಾರಿ ಖರಿದಿ ಮಾಡುವ ಕುರಿತು ನಮ್ಮ ಮನೆಯಿಂದ ಮಾರ್ಕೆಟಗೆ  ಬಂದು ತರಕಾರಿ ಖರಿದಿ ಮಾಡುತ್ತಿದ್ದಾಗ ಅದೆ ಸಮಯಕ್ಕೆ ಒಮ್ಮಿಂದೊಮ್ಮೇಲೆ ನನ್ನ ಗಂಡ ಶ್ರೀಮಂತ ಇವರಿಗೆ ಎದೆ ನೋವು ಶುರುಆಗಿ ಎದೆ ನೋವು ಎದೆ ನೋವು ಎಂದು ಎದೆಯನ್ನು ಒತ್ತಿ ಹಿಡಿದು ಕೆಳೆಗೆ ಕುಸಿದು ಬಿಳುವಷ್ಠರಲ್ಲಿ ನಾನು ನನ್ನ ಗಂಡನಿಗೆ ಹಿಡಿದುಕೊಂಡು ತರಕಾರಿ ಮಾರ್ಕೆಟದಿಂದ ಹೊರೆಗೆ ತಂದು ಜನತಾ ಬಜಾರ ಕ್ರಾಸ ಹತ್ತಿರ ಇರುವ ಒಂದು ಆಟೋದಲ್ಲಿ ನನ್ನ ಗಂಡ ಶ್ರೀಮಂತ ಇವರಿಗೆ ಉಪಚಾರಕ್ಕಾಗಿ ಸರಕಾರಿ ಆಸ್ಪತ್ರೆಗೆ 5.00 ಪಿ.ಎಂ ಸುಮಾರಿಗೆ ತರಲು ಆಸ್ಪತ್ರೆಯ ವೈಧ್ಯಾಧಿಕಾರಿಗಳು ನನ್ನ ಗಂಡನಿಗೆ ಪರಿಶೀಲಿಸಿ ನೋಡುವಷ್ಠರಲ್ಲಿ ನನ್ನ ಗಂಡ ಈಗಾಗಲೆ ಮೃತಪಟ್ಟಿರುತ್ತಾನೆಂದು ತಿಳಿಸಿರುತ್ತಾರೆ. ನನ್ನ ಗಂಡನಿಗೆ ಹೃದಯಾಘಾತವಾಗಿ ಸಾವು ಸಂಭವಿಸಿದ್ದು ಸದರಿ ವಿಷಯದಲ್ಲಿ ಯಾರ ಮೇಲೆಯು ಫಿರ್ಯಾಧಿ ಸಂಶಯ ದೂರು ಇರುವುದಿಲ್ಲ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಯಡ್ರಾಮಿ ಠಾಣೆ : ಶ್ರೀಮತಿ ಭೌರಮ್ಮ ಗಂಡ ಶಿವಯೋಗೆಪ್ಪ ಪೂಜಾರಿ@ಮೇಲಿನಮನಿ ಸಾ|| ಸುಂಗಠಾಣ ತಾ|| ಸಿಂದಗಿ ಇವರಿಗೆ, ರಮೇಶ ಮತ್ತು ಲಕ್ಷ್ಮೀ ಅಂತಾ ಇಬ್ಬರು ಮಕ್ಕಳಿರುತ್ತಾರೆ, ನಮ್ಮೂರ ಸಿಮಾಂತರದಲ್ಲಿ ನನ್ನ ಗಂಡ ಶಿವಯೋಗೆಪ್ಪ ಇವರ ಹೆಸರಿಗೆ ಹೊಲಗಳಿದ್ದು ಅದರ ಸರ್ವೆ ನಂ 06 ನೇದ್ದರಲ್ಲಿ 2 ಎಕರೆ ಮತ್ತು ಸರ್ವೆ ನಂ 192 ನೇದ್ದರಲ್ಲಿ 2 ಎಕರೆ ಜಮೀನು ಇರುತ್ತದೆ, ನನ್ನ ಗಂಡ ಹೊಲಗಳ ಸಲುವಾಗಿ ಯಂಕಂಚಿ ಗ್ರಾಮಿಣ ಬ್ಯಾಂಕ ಶಾಖೆ ಸುಂಗಠಾಣ ನೇದ್ದರಲ್ಲಿ ಸುಮಾರು 60,000/- ರೂ, ನಮ್ಮೂರ ಸೊಸೈಟಿಯಲ್ಲಿ ಸುಮಾರು 40,000/- ರೂ ಹಾಗು ಖಾಸಗಿಯಾಗಿ ಸುಮಾರು 3,00,000/- ರೂ ಸಾಲ ಮಾಡಿಕೊಂಡಿದ್ದು ಇರುತ್ತದೆ. ನನ್ನ ಗಂಡ ನಮಗೆ ಸಾಲ ಬಹಳಾಗಿದೆ ಇದನ್ನು ನನ್ನಿಂದ ತೀರಿಸುವುದು ಆಗುವುದಿಲ್ಲಾ, ನಾನು ಸತ್ತರೆ ಎಲ್ಲಾ ಸರಿ ಹೋಗುತ್ತೇ ಅಂತಾ ಅನ್ನುತ್ತಿದ್ದರು, ಆಗ ನಾನು ಅವರಿಗೆ ಸಮಾದಾನ ಹೇಳುತ್ತಾ ಬಂದಿದ್ದು ದಿನಾಂಕ 09-12-2017 ರಂದು ಬೆಳಿಗ್ಗೆ 5;00 ಗಂಟೆ ಸುಮಾರಿಗೆ ನನ್ನ ಗಂಡ ಎದ್ದು ಬೈಹಿರ ದೇಸೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದನು, ನಂತರ ನನ್ನ ಗಂಡ ಮರಳಿ ಮನೆಗೆ ಬರಲಿಲ್ಲಾ, ಅಂದಿನಿಂದ ನಾನು ಮತ್ತು ನಮ್ಮ ಭಾವ ಸಂಗಪ್ಪ ಮತ್ತು ಸಂಬಂಧಿಕರಾದ ಶಂಕ್ರೆಪ್ಪ ಪೂಜಾರಿ, ಉಮೇಶ ಪೂಜಾರಿ ರವರು ಕೂಡಿ ನನ್ನ ಗಂಡನಿಗೆ ಎಲ್ಲಾ ಕಡೆ ಹುಡಕಾಡಿದರು ಸಿಗಲಿಲ್ಲಾ. ಇಂದು ದಿನಾಂಕ 17-12-2017 ರಂದು 12;00 ಪಿ.ಎಂ ಸುಮಾರಿಗೆ ಮಾನಶಿವಣಗಿ ಗ್ರಾಮದ ರಮೇಶ ಚೌಧರಿ ಎಂಬುವರ ಹೊಲದ ಭಾವಿಯಲ್ಲಿ ಒಂದು ಅಪರಿಚಿತ ಶವ ದೊರೆತಿದೆ ಅಂತಾ ಗೊತ್ತಾಗಿ ನಾನು ಮತ್ತು ನಮ್ಮ ಭಾವ ಸಂಗಪ್ಪ ಹಾಗು ನಮ್ಮ ಸಂಬಂಧಿಕರಾದ ಶಂಕ್ರೆಪ್ಪ ಪೂಜಾರಿ, ಉಮೇಶ ಪೂಜಾರಿ, ಸಿದ್ದಣ್ಣ ಪೂಜಾರಿ ರವರು ಕೂಡಿ ಮಾನಶಿವಣಗಿ ಸಿಮಾಂತರದಲ್ಲಿರುವ ಹೊಲಕ್ಕೆ ಹೋಗಿ ಬಾವಿಯಲ್ಲಿ ನೋಡಲಾಗಿ ಒಂದು ಶವ ಬೋರಲಾಗಿ ತೇಲುತ್ತಿತ್ತು, ನಂತರ ನಮ್ಮೂರ ಸಿದ್ದಪ್ಪ ತಂದೆ ಹಿರಗೆಪ್ಪ ಕಾಂಬಳೆ, ನಿಂಗಪ್ಪ ತಂದೆ ದುಂಡಪ್ಪ ಪೂಜಾರಿ ರವರು ಬಾವಿಯಲ್ಲಿ ಇಳಿದು ಶವ ಹೊರಗೆ ತೆಗೆದು ಹಾಕಿದಾಗ ನೋಡಲಾಗಿ ಶವವು ನನ್ನ ಗಂಡನದೆ ಇದ್ದು, ಅದನ್ನು ನಾವು ಗುರುತಿಸಿದ್ದು ಇರುತ್ತದೆ. ನನ್ನ ಗಂಡ ಹೊಲದ ಸಲುವಾಗಿ ಸಾಲ ಮಾಡಿಕೊಂಡಿದ್ದು, ಸಾಲ ತೀರಿಸಲಾಗದೆ ಚಿಂತೆ ಮಾಡುತ್ತಾ ಜಿಗುಪ್ಸೆಗೊಂಡು ನಾನು ಸತ್ತರೆ ಎಲ್ಲಾ ಸರಿ ಹೋಗುತ್ತೆ ಅಂತಾ ತಿಳಿದು ದಿನಾಂಕ 09-12-2017 ರಂದು ಬೆಳಿಗ್ಗೆ 10;00 ಗಂಟೆಯಿಂದ ದಿನಾಂಕ 17-12-2017 ರಂದು ಬೆಳಿಗ್ಗೆ 10;00 ಗಂಟೆ ಮದ್ಯದಲ್ಲಿ ಮಾನಶಿವಣಗಿ ಗ್ರಾಮ ಸಿಮಾಂತರದ ರಮೇಶ ಚೌಧರಿ ಎಂಬುವರ ಹೊಲದ ಬಾವಿಯ ನೀರಲ್ಲಿ ಬಿದ್ದಿದ್ದರಿಂದ ಈಜು ಬರದ ಕಾರಣ ನೀರಲ್ಲಿ ಮುಳಗಿ ಉಸಿರುಗಟ್ಟಿ ಮೃತ ಪಟ್ಟಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಯಡ್ರಾಮಿ ಠಾಣೆ : ಶ್ರೀ ಮಲ್ಕಣಗೌಡ ತಂದೆ ಸಿದ್ದನಗೌಡ ಪೊಲೀಸ ಬಿರಾದಾರ ಸಾ|| ಹಂಗರಗಾ(ಬಿ) ಗ್ರಾಮ ಇವರು ತಮ್ಮೂರ ಸಿಮಾಂತರದಲ್ಲಿ ನಮ್ಮ ತಂದೆ ಹೆಸರಿನಲ್ಲಿ ಸರ್ವೆ ನಂ 54 ನೇದ್ದರಲ್ಲಿ 4 ಎಕರೆ 15 ಗುಂಟೆ ಜಮೀನು ಇರುತ್ತದೆ. ನಾನು ಹೋಟೇಲ ಕೆಲಸ ಮಾಡಿಕೊಂಡಿರುತ್ತೇನೆ, ನನಗೆ 3 ಜನ ಅಕ್ಕ ತಂಗಿಯವರಿದ್ದು ಅವರಲ್ಲರ ಮದುವೆ ಮಾಡಿದ್ದು, ಸದ್ಯ ಅವರೆಲ್ಲರು ತಮ್ಮ ಗಂಡನ ಮನೆಯಲ್ಲಿವಾಸವಾಗಿರುತ್ತಾರೆ, ನಮ್ಮ ತಂದೆಯವರು ಹೊಲದ ಸಲುವಾಗಿ ಯಡ್ರಾಮಿ ಸಿಂಡಿಕೇಟ ಬ್ಯಾಂಕಿನಲ್ಲಿ 01 ಲಕ್ಷ ಮತ್ತು ಹಂಗರಗಾ(ಕೆ) ಗ್ರಾಮದ ಸೋಸೈಟಿಯಲ್ಲಿ 25,000/- ರೂ ಹಾಗು ಖಾಸಗಿಯಾಗಿ ಸುಮಾರು 2 ಲಕ್ಷ ಸಾಲ ಮಾಡಿಕೊಂಡಿರುತ್ತಾರೆ, ಸಾಲ ಬಹಳಾಗಿದೆ ಅದನ್ನು ತೀರಿಸುವುದು ಹೇಗೆ ಅಂತಾ ಅನ್ನುತ್ತಾ ಚಿಂತೆ ಮಾಡುತ್ತಿದ್ದರು, ನಾನು ನಮ್ಮ ತಾಯಿ ಅವರಿಗೆ ಸಾಮಾದಾನ ಹೇಳುತ್ತದ್ದೇವು. ನಿನ್ನೆ ದಿನಾಂಕ 15-12-2017 ರಂದು ರಾತ್ರಿ 10;00 ಗಂಟೆಗೆ ನಾವೆಲ್ಲರು ಊಟ ಮಾಡಿಕೊಂಡು ಮಲಗಿಕೊಂಡೆವು, ಬೆಳಿಗ್ಗೆ 04;00 ಗಂಟೆಗೆ ನಾನು ಎದ್ದು ನೋಡಿದಾಗ ನಮ್ಮ ತಂದೆ ಬಾಯಿಂದ ಬುರುಗ ಬಂದು ವಿಷದ ತರಹ ವಾಸನೆ ಬರುತ್ತಿತ್ತು. ಆಗ ನಮ್ಮ ತಾಯಿಗೆ ಎಬ್ಬಿಸಿ ನಮ್ಮ ತಂದೆಯನ್ನು ನೋಡಲಾಗಿ ನಮ್ಮ ತಂದೆ ಮೃತ ಪಟ್ಟಿದ್ದರು. ನಮ್ಮ ತಂದೆ ಹೊಲದ ಸಲುವಾಗಿ ಸಾಲ ಮಾಡಿಕೊಂಡಿದ್ದು, ಸಾಲ ತೀರಿಸಲಾಗದೆ ಚಿಂತೆ ಮಾಡುತ್ತಾ ಜಿಗುಪ್ಸೆಗೊಂಡು ನಿನ್ನೆ ದಿನಾಂಕ 15-12-2017 ರಂದು ರಾತ್ರಿ 11;00 ಗಂಟೆಯಿಂದ ದಿನಾಂಕ 16-12-2017 ರಂದು ಬೆಳಗಿನ ಜಾವ 04;00 ಗಂಟೆ ಮದ್ಯದಲ್ಲಿ ಮನೆಯಲ್ಲಿ ಯಾವುದೋ ಕ್ರಿಮಿನಾಷಕ ಔಷಧಿ ಸೇವಿಸಿ ಮೃತ ಪಟ್ಟಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ಶ್ರೀಮತಿ ಕನಿಸಬೇಗಂ ಗಂಡ ರುಸ್ತುಂಪಟೇಲ ಬಿರಾದಾರ ಸಾ; ಪಿರೋಜಾಬಾದ ರವರದು ತಮ್ಮೂರ ಸೀಮಾಂತರ ದಲ್ಲಿ  ಹೊಲ ಸರ್ವೇ ನಂ 80  ರಲ್ಲಿ 9 ಎಕರೆ 7 ಗುಂಟೆ ಜಮೀನು ಇದ್ದು. ಅದನ್ನು ಅದು ಸುಮಾರು ವರ್ಷಗಳಿಂದ  ನನ್ನ ಮಾವ ಮಹಿಮೂದ ಪಟೇಲ ಬಿರಾದಾರ ಉಳುಮೆ ಮಾಡುತ್ತಾ ಬಂದಿರುತ್ತಾರೆ. ಈ ಹೊಲ ಸಂಬಂಧ ಮಹೇಶ ತಂದೆ ರಾಮಯ್ಯ  ಯರಗೋಳ ಇತನು ತಮ್ಮ  ಹೊಲ ಇದೆ ಬಿಟ್ಟು ಹೋಗಿರಿ ಎಂದು ತಕರಾರು ಜಗಳ ಮಾಡುತ್ತಾ ಬಂದಿರುತ್ತಾರೆ  ಸದ್ಯ ಈ ವರ್ಷ ಹೊಲದಲ್ಲಿ  7 ಎಕರೆ ತೋಗರಿ ಬೆಳೆಸಿದ್ದು 2 ಎಕರೆ  7 ಗುಂಟೆ ಜೋಳದ ಬೆಳೆ ಇರುತ್ತದೆ. ದಿನಾಂಕ 17/12/2017 ರಂದು ಮದ್ಯಾಹ್ನ 2:30 ಗಂಟೆ ಸುಮಾರಿಗೆ  ಸರ್ವೇ ನಂ 80 ರಲ್ಲಿ ನಾನು ಹಾಗೂ ನಮ್ಮ ಅತ್ತೆ  ಹನೀಫಾ ಬೀ ಗಂಡ ಮಹೇಮೂದ ಪಟೇಲ ಬಿರಾದಾರ  ಕೂಡಿ ಹೊಲದಲ್ಲಿ ಇದ್ದಾಗ ಅಲ್ಲಿಗೆ ಈ ಮೊದಲು ಹೊಲದ ಸಂಭಂದ ನಮ್ಮೊಂದಿಗೆ ತಕರಾರು ಜಗಳ ಮಾಡುತ್ತಾ ಬಂದಿದ್ದ ಮಹೇಶ ತಂದೆ ರಾಮಯ್ಯ ಯರಗೋಳ ಇತನು ತನ್ನೊಂದಿಗೆ 18/20 ಜನರೊಂದಿಗೆ  ಬಂದು ತೋಗರಿ ರಾಶಿಯನ್ನು  ಮಷೀನನಿಂದ ಕೊಯಿದ್ದಾ ಮಾಡುವಾಗ ನಾನು ಹಾಗೂ ನಮ್ಮ ಅತ್ತೆ ಹನೀಫಾ ಕೂಡಿ ರಾಶಿ ಮಾಡುವುದನ್ನು ತಡೆಯಲು ಹೋದಾಗ ಮಹೇಶ  ಇತನು ಇದು ನಮ್ಮ ಹೊಲ ಇದ್ದು ಇಲ್ಲಿಂದ ನೀವು ಬಿಟ್ಟು ಹೋದರೆ ಸರಿ ಇಲ್ಲದಿದ್ದರೇ ನಿಮಗೆ ಖಲ್ಲಾಸ ಮಾಡುತ್ತೇವೆ ಅಂತಾ ಬೆದರಿಸಿದಾಗ  ನಾನು ನಮ್ಮ ಅತ್ತೆ ರಾಶಿಯನ್ನು  ತೆಗೆದುಕೊಂಡು ಹೋಗದಂತೆ ತಡೆದಾಗ  ಅವರು ನಮಗೆ ನೂಕಿಸಿ ಕೊಟ್ಟು ಕೈ ಹಿಡಿದು ಎಳಾದಾಡಿರುತ್ತಾರೆ ಇನ್ನೂ ಮುಂದೆ ಈ ಹೊಲದಲ್ಲಿ ಕಾಲು ಇಟ್ಟರೆ ಇದೆ ಚಾಕುವಿ ನಿಂದ ಖಲ್ಲಾಸ ಮಾಡುತ್ತೇನೆ ಅಂತಾ ಬೆದರಿಸಿದಾಗ  ನಾವು ಚೀರಾಡುವ ಸಪ್ಪಳ ಕೇಳಿ ಪಕ್ಕದ ಹೊಲದ ಸಾಬವ್ವ ಗಂಡ ಶ್ರೀಮಂತ ಸುಂಬಳವಾಲೆ ಹಾಗೂ ಅಲ್ಲಾವುದ್ದಿನ  ರವರುಗಳು ಬಿಡಿಸಲು ಬಂದಾಗ  ಅವರಿಗೆ ಮಹೇಶ ಹಾಗೂ ಇತರರು ಕೂಡಿ ಬೈಯ್ದು  ಅಲ್ಲಿಂದ ಕಳಿಸಿರುತ್ತಾರೆ ನಂತರ ನನಗೆ ಹಾಗೂ ನನ್ನ ಅತ್ತೆಗೆ ಗುಪ್ತಗಾಯವಳಾಗಿದ್ದು ಉಪ ಚಾರ ಕುರಿತು ಅಂಬುಲೈನ್ಸ್‌‌‌ದಲ್ಲಿ ಬಂದು ಸೇರಿಕೆಯಾಗಿರುತ್ತೇವೆ.  ಕಾರಣ ಅಕ್ರಮ ಕೂಟ ಮಾಡಿಕೊಂಡು ಬಂದು ನನಗೆ ನನ್ನ ಅತ್ತೆಗೆ ಹೊಲದಲ್ಲಿ ಬರದಂತೆ ಹೊಲಸು ಬೈಯಿದ್ದು  ಕೈಯಿಂದ ಹೊಡೆದು ಜೀವದ ಭಯ ಹಾಕಿ ಎಳೆದಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

17 December 2017

KALABURAGI DISTRICT REPORTED CRIMES

ಹುಡುಗ ಕಾಣೆಯಾದ ಪ್ರಕರಣ :
ಅಶೋಕ ನಗರ ಠಾಣೆ : ದಿನಾಂಕ:12.12.2017 ರಂದು ರಾತ್ರಿ 09:00 ಗಂಟೆ ಸುಮಾರಿಗೆ ನಾನು, ನನ್ನ ಗಂಡ ಮತ್ತು ನನ್ನ ಮಗ ನಾಗಸೇನ್ ಎಲ್ಲರೂ ಮನೆಯಲ್ಲಿದ್ದಾಗ, ಮಗನು ಹೊರಗಡೆ ಅಂಗಡಿಗೆ ಹೋಗಿ ಬರುತ್ತೇನೆ ಅಂತ ಹೇಳಿ ಮನೆಯಿಂದ ಹೋಗಿರುತ್ತಾನೆ. ನಂತರ ನಾವು ರಾತ್ರಿ 09:30 ಗಂಟೆಯ ವರೆಗೆ ದಾರಿ ನೋಡಿ ಮಗನು ಬರದೆ ಇದ್ದಾಗ ಅವನ ಮೊಬೈಲ್ ನಂ. 9972860036 ಮತ್ತು 8660177036 ನೇದ್ದವುಗಳಿಗೆ ಕರೆಮಾಡಿದಾಗ ಎರಡು ನಂಬರಗಳು ಸ್ವೀಚ್ ಆಫ್ ಆಗಿರುತ್ತವೆ. ನಂತರ ನಾನು ನನ್ನ ಗಂಡ ತುಕಾರಾಮ ಇಬ್ಬರು ಕೂಡಿ ಎಲ್ಲಾ ಕಡೆಗೆ ಹುಡುಕಾಡಿದರು ನಮ್ಮ ಮಗನು ಪತ್ತೆಯಾಗಿರುವುದಿಲ್ಲ. ನಾವು ಇಲ್ಲಿಯ ವರೆಗೆ ನಮ್ಮ ಎಲ್ಲಾ ಸಂಬಂಧಿಕರಲ್ಲಿ ಮತ್ತು ಅವನ ಸ್ನೇಹಿತರಲ್ಲಿ ವಿಚಾರಿಸಲಾಗಿ ನಮ್ಮ ಮಗನ ಬಗ್ಗೆ ಯಾವುದೇ ಸುಳಿವು ಸಿಕ್ಕಿರುವುದಿಲ್ಲ. ನಮ್ಮ ಮಗ ನಾಗಸೇನ್ ಇತನು ಮನೆಯಿಂದ ಹೋಗುವಾಗ ನೀಲಿ ಕಲರ ಲೈನಿಂಗ್ ಶರ್ಟ ಮತ್ತು ಕಪ್ಪು ಬಣ್ಣದ ಪ್ಯಾಂಟ ಧರಿಸಿರುತ್ತಾನೆ. ನನ್ನ ಮಗನು ಸದೃಡ ಮೈ ಕಟ್ಟು, ಕೆಂಪು ಮೈ ಬಣ್ಣ ಹೊಂದಿದ್ದು, ಕನ್ನಡ ಮತ್ತು ಹಿಂದಿ ಭಾಷೆಗಳನ್ನು ಮಾತನಾಡುತ್ತಾನೆ. ಕಾರಣ ದಿನಾಂಕ:12.12.2017 ರಂದು ಮನೆ ಬಿಟ್ಟು ಹೋಗಿ ಇಲ್ಲಿಯ ವರೆಗೆ ಮರಳಿ ಮನೆಗೆ ಬಂದಿರುವುದಿಲ್ಲಾ ಅಂತಾ ಶ್ರೀಮತಿ ಸರೋಜಾ ಗಂಡ ತುಕಾರಾಮ ವರ್ಮಾ  ಸಾ|| ಅರುಣ ಕಿಣ್ಣಿ ವಕೀಲರು ಇವರ ಮನೆಯಲ್ಲಿ ಬಾಡಿಗೆ ಸಿ.ಐ.ಬಿ. ಕಾಲೋನಿ ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಮಾಡಬೂಳ ಠಾಣೆ :  ಶ್ರೀಮತಿ ಶಾಂತಬಾಯಿ ಗಂಡ ಮಲ್ಲಿಕಾರ್ಜುನ  ಶಿವಗೋಳೆ ಸಾ:ಹೊಸ ಹೆಬ್ಬಾಳ ತಾ:ಚಿತ್ತಾಪೂರ  ರವರು ದಿನಾಂಕ:-08/12/2017 ರಂದು ರಾತ್ರಿ 8.030 ಪಿ.ಎಮ್. ಸುಮಾರಿಗೆ ನಾನು ಮನೆಯಲ್ಲಿ ಒಬ್ಬಳೆ ಊಟ ಮಾಡಿಕೊಂಡು ಮನೆಯ ಒಂದು ಕೋಣೆಗೆ ಭೀಗ ಹಾಕಿ ಅದಕ್ಕೆ ಹೊಂದಿಕೊಂಡಿರುವ ಕೋಣೆಯಲ್ಲಿ ನಾನು ಹೋಗಿ ಮಲಗಿಕೊಂಡೇನು. ಎಂದಿನಂತೆ ಬೆಳ್ಳಿಗೆ 6:00 ಗಂಟೆ ಸುಮಾರಿಗೆ ಕೋಣೆಯಿಂದ ಎದ್ದು  ಬೀಗ ಹಾಕಿದ ಕೋಣೆಯ ಹತ್ತಿರ ಹೋಗಿ ನೋಡಲು ಕೋಣೆಯ ಬಾಗೀಲು ತೆರೆದಿದ್ದು. ಕೋಣೆಯ ಒಳಗಡೆ ಹೋಗಿ ನೋಡಲು ಅಲಮಾರಿ ತೇರಿದ್ದಿದ್ದು ಅಲಮಾರಿಯಲಿಟ್ಟ ಎಲ್ಲ ಬಟ್ಟೆಗಳನ್ನು ಚಿಲ್ಲಾಪಿಲ್ಲಿಯಾಗಿ ಬಿದ್ದಿರುತ್ತವೆ.ಇದನ್ನು ಕಂಡು ಗಾಬರಿಯಾಗಿ ನಾನು ನಮ್ಮ ಮನೆಯ ಅಕ್ಕ ಪಕ್ಕದಲ್ಲಿ ವಾಸವಾಗಿರುವ 1] ಬಸಮ್ಮ ಗಂಡ ವೈಜನಾಥ ಮೆಂಚಾನೊರ 2] ಸಿದ್ದಮ್ಮ ಗಂಡ ರಾಮಲಿಂಗ  ಇವರ  ಮನೆಗೆ ಓಡಿ ಹೋಗಿ ವಿಷಯ ತಿಳಿಸಿ ಇವರಿಬ್ಬರಿಗೆ ಕರೆದುಕೊಂಡು  ನನ್ನ ಮನೆಯ ಒಳಗಡೆ ಹೋಗಿ ಅಲಮಾರಿಯನ್ನು ಪರಿಶೀಲಿಸಿ ನೋಡಲಾಗಿ ಅಲಮಾರಿಯ ಲಾಕರನಲ್ಲಿಟ್ಟ ಈ ಕೆಳಕಂಡ ನಮೂದು ಮಾಡಿದ ಬಂಗಾರ ಮತ್ತು  ಬೆಳ್ಳಿ ಆಭರಣ ಹಾಗೂ ನಗದು ಹಣ  ಹೀಗೆ ಒಟ್ಟು ಅ:ಕಿ:18500/- ರೂ ಬೆಲೆಬಾಳುವ ಬಂಗಾರ ಮತ್ತು ಬೆಳ್ಳಿ ಆಭರಣಗಳು ಹಾಗೂ ನಗದು ಹಣ ಇರಲಿಲ್ಲ ದಿನಾಂಕ:08/12/2017 ರಂದು ರಾತ್ರಿ 8.30 ಪಿ.ಎಮ್ ದಿಂದ ದಿನಾಂಕ:09/12/2017 ರಂದು ಬೆಳಿಗ್ಗೆ 6.00 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ನನ್ನ ಮನೆಯ ಕೋಣೆಯ ಬಾಗಿಲ ಕೀಲಿ ಮುರಿದು ಒಳಗಡೆ ಹೋಗಿ ಅಲಮಾರಿಯ ಲಾಕರನಲ್ಲಿಟ್ಟ ಬಂಗಾರ ಮತ್ತು ಬೆಳ್ಳಿ ಆಭರಣಗಳು ಹಾಗೂ ನಗದು ಹಣ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಶಾರುಖ ತಂದೆ ಮೌಲಾಸಾಬ @ ಮೌಲಾಶೇಖ ಶೇಖ ಸಾ: ಮದಿನಾ ಕಾಲೋನಿ ಕಲಬುರಗಿ ರವರು ಈ ಹಿಂದೆ ಲಾಲಗೇರಿ ಬಡಾವಣೆಯಲ್ಲಿ ವಾಸವಾಗಿದ್ದು ಈಗ ಕೆಲವು ದಿವಸಗಳಿಂದ ನಾವು ಮದಿನಾ ಕಾಲೋನಿಗೆ ಬಂದಿದ್ದು ಇರುತ್ತದೆ. ಲಾಲಗೇರಿ ಬಡಾವಣೆಯಲ್ಲಿ ಇರುವ ಸಮಯದಲ್ಲಿ ಲಾಲಗೇರಿ ಬಡಾವಣೆಯಲ್ಲಿರುವ ನಾನಾ ಹಜರತ ದರ್ಗಾದ ಪ್ರತಿ ವರ್ಷ ದೀಪ (ಚಿರಾಗ) ಕಾರ್ಯಕ್ರಮ ನಡೆಯುತ್ತಿದ್ದು. ಅದರಂತೆ ನಿನ್ನೆ ದಿನಾಂಕ 15.12.2017 ರಂದು ರಾತ್ರಿ 11:00 ಗಂಟೆಯ ಸುಮಾರಿಗೆ ನಾನಾ ಹರಜತ ದರ್ಗಾದ ದೀಪ ಇದ್ದ ಪ್ರಯುಕ್ತ ಸದರಿ ದೀಪದ ಕಾರ್ಯಕ್ರಮದಲ್ಲಿ ಭಾಗ ವಹಿಸುವ ಸಂಬಂದ ನಾನು ನನ್ನ ತಮ್ಮ ಸೊಹೇಲ ಕೂಡಿಕೊಂಡು ದರ್ಗಾಕ್ಕೆ ಹೋಗಿದ್ದು ಮೇರವಣಿಗೆ ಕಾಲದಲ್ಲಿ ಡ್ಯಾನ್ಸ ಮಾಡುತ್ತಿದ್ದು. ಇಂದು ದಿನಾಂಕ 16.12.2017 ರಂದು ಬೆಳ್ಳಿಗ್ಗೆ 00:30 ಗಂಟೆಯ ಸುಮಾರಿಗೆ ಹರಜತ ದರ್ಗಾದ ದೀಪ ನಾನಾ ಚೌಕ ಹತ್ತಿರ ಬಂದಿದ್ದು, ಆಗ ನನ್ನ ತಮ್ಮ ಸೊಹೇಲ ಇತನು ಡ್ಯಾನ್ಸ ಮಾಡುತ್ತಿದ್ದ ಕಾಲಕ್ಕೆ ಸದರಿ ಬಡವಾಣೆಯ ಮಹೀಬ ತಂದೆ ಗಫೂರ ಇತನ ಕಾಲು ತುಳಿಸಿದ್ದು ಆಗ ಸದರಿ ಮಹೀಬ ಇತನು ನನ್ನ ತಮ್ಮನಿಗೆ ಎ ರಂಡಿ ಮಗನೆ ನೀನು ನನ್ನ ಕಾಲು ತುಳಿಯುತ್ತಿ ಅಂತ ಬೈಯುತ್ತಿದ್ದು ಆಗ ನಾನು ಸದರಿ ಮಹೀಬ ಇತನಿಗೆ ಡ್ಯಾನ್ಸ ಮಾಡುವ ಕಾಲಕ್ಕೆ ಆಕಸ್ಮಿಕವಾಗಿ ಕಾಲು ತಗುಲಿದೆ ಅದಕ್ಕೆ ಏಕೆ ಬೈಯುತ್ತಿ ಅಂತ ಕೇಳಿದ್ದು ಆಗ ಅಲ್ಲೆ ಇದ್ದ ಅದೆ ಬಡಾವಣೆಯ 1. ಅಖೀಲ ಬಾಗವಾನ, 2. ಮೂನಿರ ತಂದೆ ಅಬ್ದಲ ರಸೀದ 3. ಮುಜ್ಜಿದ ತಂದೆ ಅಬ್ದುಲ ರಸೀದ 4. ಸದ್ದಾಂ ತಂದೆ ಅಬ್ದುಲ ರಸೀದ 5. ಸಾಧಿಕ 6. ಕಲಿಂ ತಂದೆ ಅಬ್ದುಲ ರಹಿಂಸಾಬ, 7. ರಬ್ಬು ತಂದೆ ಅಬ್ದುಲ ರಸೀದ  ಮತ್ತು ಅವರ ಸಂಗಡ 8. ಮೊಹೀಬ ತಂದೆ ಗಫೂರ ಕೂಡಿಕೊಂಡು ಬಂದವರೆ ಏ ರಂಡಿ ಮಕ್ಕಳೆ ನಿಮ್ಮ ಸೊಕ್ಕು ಬಹಳ ಆಗಿದೆ ನೀವು ಇಲ್ಲಿಂದ ಬೇರೆ ಕಡೆಗೆ ಹೋದರು ಕೂಡ ಮತ್ತೆ ನಮ್ಮ ಬಡಾವಣೆ ಬಂದು ಸೊಕ್ಕು ತೋರಿಸುತ್ತಿರು ಸೂಳಿ ಮಕ್ಕಳೆ ಅಂತ ಬೈಯುತ್ತಾ ಎಲ್ಲರು ಕೂಡಿಕೊಂಡು ನನಗೆ ಮತ್ತು ನನ್ನ ತಮ್ಮನಿಗೆ ಹಿಡಿದುಕೊಂಡು ನೇಲದ ಮೇಲೆ ಹಾಕಿ ತಮ್ಮ ಕೈಗಳಿಂದ ಮತ್ತು ಕಾಲಿನಿಂದ ನನ್ನ ಎರಡು ಮಳಕಾಲ ಮೇಲೆ ಹೊಟ್ಟೆಗೆ, ಟೊಂಕಿಗೆ, ಗುಪ್ತಗಾಯ ಪಡಿಸಿದ್ದು ಮತ್ತು ನನ್ನ ಎಡಗೈ ಹೆಬ್ಬೆರಳಿಗೆ ರಕ್ತಗಾಯ ಪಡಿಸಿದ್ದು ಇರುತ್ತದೆ. ನನ್ನ ತಮ್ಮನಿಗೆ ಬಲ ಕಪಾಳ ಮೇಲೆ ಗುಪ್ತಗಾಯ ಪಡಿಸಿದ್ದು ಮತ್ತು ದೇಹದ ಮೇಲೆ ಅಲಲ್ಲಿ ಗುಪ್ತಗಾಯ ಪಡಿಸಿದ್ದು ಇರುತ್ತದೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಮಾಹಾಗಾಂವ ಠಾಣೆ : ದಿನಾಂಕ: 14/12/17 ರಂದು ಶ್ರೀ ಶೇಖ ಖಾಜಾಮಿಯ್ಯ ತಂದೆ ಶೇಖ ಮೌಲಾಮಿಯ್ಯ ಶೇಖ ಸಾ: ಬಿಕ್ಲಿ ಮಂಡಲ್|| ಮಾಕಲೂರ ಜಿ|| ನಿಜಾಮಬಾದ (ತೆಲಂಗಾಣಾ)  ಮತ್ತು ಮಲಬಿಂದ್ರ ಸಿಂಗ್ ಇಬ್ಬರು ಕೂಡಿಕೊಂಡು ಅಗ್ರಿಕಲ್ಚರ ಆರವೆಷ್ಟರ ಮಶಿನ್ (ರಾಶಿ ಮಾಡುವ ಮಶಿನ್) ಟಿ.ಎಸ್.- 16 ಇಇ-1258 ಮತ್ತು ಟಿ.ಎಸ್.- 16 ಇಕೆ-4573 ನೇದ್ದವುಗಳನ್ನು ಹುಮನಾಬಾದ ಕಡೆಯಿಂದ  ಕಲಬುರಗಿ ಕಡೆಗೆ ಬರುತ್ತಿದ್ದಾಗ ಕಗ್ಗನಮಡ್ಡಿ ಕ್ರಾಸ ಹತ್ತಿರ ಎದುರುಗಡೆಯಿಂದ ಅಪಾದಿತನು ತನ್ನ ಟ್ಯಾಂಕರ ನಂ ಎಂ.ಹೆಚ್- 45 ಟಿ-6210 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪ್ರಯುಕ್ತ ಎರಡು ವಾಹನಗಳು ಜಖಂಗೊಂಡಿದ್ದು ಅಲ್ಲದೇ ಮಲಬಿಂದ್ರ ಸಿಂಗ್ ಈತನಿಗೆ ಗಾಯಗೋಳಿಸಿ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

11 December 2017

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಸೇಡಂ ಠಾಣೆ : ದಿನಾಂಕ 10/12/2017 ರಂದು ಎಂದಿನಂತೆ ನನ್ನ ತಮ್ಮ ವಿನೋದ ಈತನು ಮುಂಜಾನೆ 8 ಗಂಟೆ ಸುಮಾರಿಗೆ ಬೆನಕನಹಳ್ಳಿ ಶ್ರೀ ಸಿಮೆಂಟ ಪ್ಯಾಕ್ಟರಿಗೆ ಟ್ರಾಕ್ಟರ ನಡೆಸುವ ಕುರಿತು ಮೋಟರ್ ಸೈಕಲ ನಂಬರ ಕೆಎ-32 ಇಎಪ್-1116 ನೇದ್ದರ ಮೇಲೆ ಹೋದನು. ಮತ್ತು ಇಂದು ರವಿವಾರ ಇದೆ ಬೇಗನೆ ಮನೆಗೆ ಬರುತ್ತೇನೆ ಅಂತಾ ಹೇಳಿ ಹೋದನು.  ನಂತರ ಸಾಯಂಕಾಲ 7.00 ಗಂಟೆಯಾದರೂ ನನ್ನ ತಮ್ಮ ವಿನೋದ ಈತನು  ಮನೆಗೆ ಬರದ ಕಾರಣ ನಾನು ಅವನ ಮೋಬೈಲ ಫೋನಿಗೆ ಪೋನ ಹಚ್ಚಲಾರಂಭಿಸಿದಾಗ ಫೋನ ರಿಂಗ ಆಗುತ್ತಿದ್ದು ಎತ್ತಲಿಲ್ಲ. ನಂತರ ಸ್ವಲ್ಪ ಸಮಯದ ನಂತರ ನನಗೆ ಯಾರೋ ಒಬ್ಬರು ಫೋನ ಎತ್ತಿ ಈ ಫೋನನವರು ದಾರಿಯಲ್ಲಿ ಮೋಟಾರ ಸೈಕಲ ಹಾಕಿಕೊಂಡು ಬಿದ್ದಿದ್ದು ಅವರಿಗೆ ತಲೆಗೆ ಮುಖಕ್ಕೆ ಭಾರಿ ರಕ್ತ ಗಾಯಗಳಾಗಿದ್ದು ಅವನು ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದರು. ನಂತರ ನಾನು ಮತ್ತು ನನ್ನ ತಮ್ಮನಾದ ಮಿಧುನ ಹಾಗು ನಮ್ಮ ಸಂಬಂಧಿಕನಾದ ಗಂಗಾರಾಮ ಕೂಡಿಕೊಂಡು ಹೋಗಿ ನೋಡಲಾಗಿ ನನ್ನ ತಮ್ಮನು ಬೆನಕನಳ್ಳಿ ದಿಗ್ಗಾಂವ ರೋಡಿನಲ್ಲಿ ಮೊಟಾರ ಸೈಕಲ ಹಾಕಿಕೊಂಡು ಬಿದ್ದಿದ್ದು ಅವನಿಗೆ ಹಣೆಗೆ, ಬಾಯಿಗೆ ಭಾರಿ ರಕ್ತಗಾಯಗಳಾಗಿ, ರಕ್ತ ಸೋರುತ್ತಿತ್ತು. ಮತ್ತು ಎಡಕಿವಿಗೆ ಸಹ ಭಾರಿ ರಕ್ತಗಾಯವಾಗಿ ರಕ್ತ ಸೋರುತ್ತಿತ್ತು, ಬಲಗೈ ಮುರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದನು. ನನ್ನ ತಮ್ಮನಾದ ವಿನೋದ ಈತನು ಇಂದು ದಿನಾಂಕ 10-12-2017 ರಂದು ಸಾಯಂಕಾಲ 6-00 ಗಂಟೆಯಿಂದ 7-00 ಗಂಟೆಯ ಮಧ್ಯದ ಅವಧಿಯಲ್ಲಿ ತನ್ನ ಮೋಟಾರ ಸೈಕಲ ನಂಬರ ಕೆಎ-32ಇಎಫ-1116 ನೇದ್ದನ್ನು ಅತೀವೇಗದಿಂದ ಮತ್ತು ಅಲಕ್ಷ್ಯತನದಿಂದ ನಡೆಸುತ್ತಾ ಮೋಟಾರ ಸೈಕಲ ಅಪಘಾತಪಡಿಸಿಕೊಂಡು ಮೃತಪಟ್ಟಿರುತ್ತಾನೆ. ಅಂತಾ ಶ್ರೀ ಗೋವಿಂದ ತಂದೆ ಲಕ್ಷ್ಮಣ ಚವ್ಹಾಣ ಸಾ|| ಲಕ್ಷ್ಮಣ ತಾಂಡಾ ಮಳಖೇಡ ತಾ|| ಸೇಡಂ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 09-12-2017 ರಂದು ಅಫಜಲಪೂರ ಪಟ್ಟಣದ ಲಕ್ಮೀ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ  ಪಿ.ಎದ್.ಐ. ಅಫಜಲಪೂರ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಲಕ್ಮಿಗುಡಿಯ ಹತ್ತಿರ ಹೋಗಿ ಸ್ವಲ್ಪ ದೂರು ನಮ್ಮ ಇಲಾಖಾ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು ಲಕ್ಮೀಗುಡಿಯ ಮುಂದಿನ ರೋಡಿನ ಪಕ್ಕ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಶೇಟ್ಟೆಪ್ಪಾ ತಂದೆ ಹಣಮಂತ ಗಾಡಿವಡ್ಡರ ಸಾ|| ವೇಂಕಟೇಶ್ವರ ನಗರ ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1010/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ
ಗೃಹಿಣಿಗೆ  ಕಿರುಕಳ ಕೊಟ್ಟ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಸುಜತಾ ಗಂಡ ಸಂತೋಷ ಜಮಾದಾರ ಸಾ||ಚಿಂಚೋಳಿ ರವರನ್ನು ಈಗ 5 ವರ್ಷದ ಹಿಂದೆ ಚಿಂಚೋಳಿ ಗ್ರಾಮದ ಸಂತೋಷ ತಂದೆ ಬಸಪ್ಪ ಜಮಾದಾರ ಈತನೋಂದಿಗೆ ಮದುವೆಮಾಡಿಕೊಟ್ಟಿದ್ದು ಇರುತ್ತದೆ ನನಗೆ ಸದ್ಯ 4 ವರ್ಷದ ತನು ಅಂತ ಹೆಣ್ಣು ಮಗಳಿರುತ್ತಾಳೆ ನನ್ನ ಗಂಡ ಹಾಗು ಅತ್ತೆ ಯಾದ ಶಾಂತಾಬಾಯಿ ಮಾವನಾದ ಬಸಪ್ಪ ನನ್ನ ಸಣ್ಣತ್ತೆಯಾದ ಜಗುಬಾಯಿ ಈವರೇಲ್ಲರು ಇವರೇಲ್ಲರು ನನಗೆ ನೀನು ಸರಿಯಾಗಿಲ್ಲ ನಿನಗೆ ಅಡಿಗೆ ಮಾಡಲು ಬರುವುದಿಲ್ಲ ಅಂತ ನನಗೆ ಮಾನಸಿಕ ಹಾಗು ದೈಹಿಕ ಕಿರುಕುಳ ನೀಡಿ ನನ್ನ ಗಂಡನಿಗೆ ಮಾಲಾಶ್ರೀ ಎಂಬುವರೊಂದಿಗೆ ಈಗ ಕೆಲವು ತಿಂಗಳಿಂದೆ ಎರಡನೇ ಮದುವೆ ಮಾಡಿರುತ್ತಾರೆ  ಈ ವಿಷಯದ ಸಂಬಂಧ ನಮ್ಮ ತಂದೆಯಾದ ಹಣಮಂತ ನಮ್ಮ ತಾಯಿಯಾದ ಶಾರದಾಬಾಯಿ ಹಾಗು ನಮ್ಮ ಸಂಬಂಧಿಕರಾದ ಅಫಜಲಪೂರ ಪಟ್ಟಣದ ಲಚ್ಚಪ್ಪ ತಂದೆ ಸಿದ್ರಾಮ ಜಮಾದಾರ, ಸಿದ್ದಪ್ಪ ತಂದೆ ಕಲ್ಲಪ್ಪ ಸಿನ್ನೂರ ಇವರೇಲ್ಲರು ಕೂಡಿ ನನ್ನ ಗಂಡನ ಮನೆಗೆ ಬಂದು ನನ್ನ ಗಂಡ ಹಾಗು ಗಂಡನ ಮನೆಯವರಿಗೆ ತಿಳುವಳಿಕೆ ಹೇಳಿ ಬಂದಿರುತ್ತಾರೆ. ದಿನಾಂಕ 09/12/2017 ರಂದು ಬೆಳಿಗ್ಗೆ ನನ್ನ ಗಂಡ ಹಾಗು ಅತ್ತೆಯರಾದ ಶಾಂತಾಬಾಯಿ, ಜಗುಬಾಯಿ ಮಾವನಾದ ಬಸಪ್ಪ ಮತ್ತು ನನ್ನ ಗಂಡನ ಎರಡನೇ ಹೆಂಡತಿಯಾದ ಮಾಲಾಶ್ರೀ ಹಾಗು ಮಲ್ಲಪ್ಪ ತಂದೆ ಚನ್ನಮಲ್ಲಪ್ಪ ಆನೂರ ಈವರೆಲ್ಲರು ನನಗೆ ಮಾನಸಿಕವಾಗಿ ಹೈಹಿಕವಾಗಿ ಕಿರುಕುಳ ನೀಡಿದ್ದರಿಂದ ಸದರಿಯವರ ಕಿರುಕುಳ ತಾಳಲಾರದೆ ನನ್ನ ಮಗಳೊಂದಿಗೆ ಬಡದಾಳ ಗ್ರಾಮದ ನನ್ನ ತವರು ಮನೆಗೆ ಬಂದಿದ್ದು ನನ್ನ ತವರು ಮನೆಯಲ್ಲಿ ನಮ್ಮ ತಾಯಿ ಹಾಗು ತಂದೆ ನನಗೆ ವಿಚಾರಿಸಿದ್ದು ನಾನು ನನ್ನ ಗಂಡನ ಮನೆಯವರು ನನಗೆ ನೀಡಿದ ಕಿರುಕುಳ ಬಗ್ಗೆ ತಿಳಿಸಿರುತ್ತೇನೆ ನಮ್ಮ ತಂದೆ ತಾಯಿ ಇಬ್ಬರು ನನಗೆ ನೀನು ಸಮದಾನವಾಗಿರು ನಾವು ಇನ್ನೊಮ್ಮೆ ನಿನ್ನ ಗಂಡ ಹಾಗು ಗಂಡನ ಮನೆಯವರಿಗೆ ಬುದ್ದಿವಾದ ಹೇಳುತ್ತೇವೆ.ಅಂತ ಹೇಳಿರುತ್ತಾರೆ. ಮದ್ಯಾಹ್ನ 2.00 ಗಂಟೆ ಸುಮಾರಿಗೆ ನಾನು ನನ್ನ ಗಂಡ ಹಾಗು ಗಂಡನ ಮನೆಯವ ಕಿರುಕುಳ ತಾಳಲಾರದೇ ನನ್ನ ತವರು ಮನೆಯ ಕೊಣೆಯಲಿಟ್ಟಿದ್ದ ಬೆಳೆಗೆ ಹೊಡೆಯುವ ಕ್ರಿಮಿನಾಶಕ ಔಷದಿ ಸೇವನೆ ಮಾಡಿ ಕೊಣೆಯಲ್ಲಿ ಒದ್ದಾಡುತಿದ್ದಾಗ ಅಲ್ಲೆ ಮನೆಯ ಇನ್ನೊಂದು ಕೊಣೆಯಲಿದ್ದ ನಮ್ಮ ತಾಯಿ ಹಾಗು ತಂದೆ ನನಗೆ ನೋಡಿ ಚಿರಾಡಿ ಅಲ್ಲೆ ನಮ್ಮ ಕೋಣೆಯ ಜನರನ್ನು ಕರೆದು ನನಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಅಫಜಲಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿರುತ್ತಾರೆ. ಕಾರಣ ನನ್ನ ಗಂಡನಾದ ಸಂತೋಷ ಮಾವನಾದ ಬಸಪ್ಪ ಅತ್ತೆಯಂದಿರಾದ ಶಾಂತಾಬಾಯಿ, ಜಗುಬಾಯಿ ನನ್ನ ಗಂಡನ ಎರಡನೇಯ ಹೆಂಡತಿಯಾದ ಮಾಲಾಶ್ರೀ ಮತ್ತು ಮಲ್ಲಪ್ಪ ತಂದೆ ಚನ್ನಮಲ್ಲಪ್ಪ ಆನೂರ ರವರೇಲ್ಲರು ನನಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದವರ ಮೇಲೆ ಕಾನೂನಿನ ಕ್ರಮ ಜರುಗಿಸ ಬೇಕು ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.