POLICE BHAVAN KALABURAGI

POLICE BHAVAN KALABURAGI

19 November 2017

KALABURAGI DISTRICT REPORTED CRIMES

ಕೊಲೆ ಪ್ರಕರಣಗಳು :
ಅಫಜಲಪೂರ ಠಾಣೆ :  ಶ್ರೀಮತಿ ನರಸಮ್ಮ ಗಂಡ ದೇವಿಂದ್ರ @ ಪಾಂಡು ಭಜಂತ್ರಿ (ಪಂಡಿತ) ಸಾ||ಆಶ್ರಯ ಕಾಲೋನಿ ಡಿಗ್ರಿ ಕಾಲೇಜ ಹತ್ತಿರ  ಅಫಜಲಪೂರ ರವರ ದೊಡ್ಡಮಗನಾದ ಅರ್ಜುನನ ಕಾಲೇಜ ರಜೆ ಇದ್ದುದ್ದರಿಂದ ಅಫಜಲಪೂರಕ್ಕೆ ಬಂದಿದ್ದು ನನ್ನ ಎಲ್ಲಾ ಮಕ್ಕಳ ಆದಾಯ ಪ್ರಮಾಣ ಪತ್ರಗಳು ಕೊಟ್ಟು ಬರಲು ದಿನಾಂಕ 12/11/2017 ರಂದು ಸಾಯಂಕಾಲ 5.30 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ದೊಡ್ಡಮಗ ಅರ್ಜುನ ಇಬ್ಬರು ಕಲಬುರಗಿಗೆ ಹೋಗಿ ರೈಲ್ವೆ ನಿಲ್ದಾಣದಲಿದ್ದಾಗ ನನ್ನ ಗಂಡನು ನನ್ನ ಮೊಬೈಲ ಪೋನಿಗೆ ಕರೆ ಮಾಡಿ ರೈಲು ಸಿಕ್ಕಿರುತ್ತದೆ ಹೇಗೆ ಅಂತ ಕೇಳಿದನು ಆಗ ನಾನು ರೈಲು ಸ್ಟೇಷನನಲ್ಲಿ  ಬರುತ್ತಿರುವ ಬಗ್ಗೆ ಧ್ವನಿ ವರ್ಧಕದಲ್ಲಿ ಸೂಚನೆ ನೀಡುತಿದ್ದಾರೆ ಸ್ವಲ್ಪ ಸಮಯದಲ್ಲಿ ರೈಲು ಬರಬಹುದು ಅಂತ ತಿಳಿಸಿದೆನು ನಂತರ ರಾತ್ರಿ 9.00 ಗಂಟೆಗೆ ಸೋಲಾಪೂರ-ಯಶ್ವಂತಪೂರ ರೈಲು ಬಂದ ನಂತರ ಸದರಿ ರೈಲಿನಲ್ಲಿ ಹತ್ತಿಕೊಂಡು ಬೆಂಗಳೂರಿಗೆ ಹೋಗಿರುತ್ತೇವೆ. ದಿನಾಂಕ 14/11/2017 ರಂದು ರಾತ್ರಿ ಯಶ್ವಂತಪೂರ- ಸೋಲಾಪೂರ ರೈಲಿನಲ್ಲಿ ಬೆಂಗಳೂರಿನಿಂದ ನಾನು ಮತ್ತು ನನ್ನ ದೊಡ್ಡಮಗ ಅರ್ಜುನ ಇಬ್ಬರು ಹೊರಟು ದಿನಾಂಕ 15/11/2017 ರಂದು ಬೆಳಿಗ್ಗೆ ಕಲಬುರಗಿಗೆ ಬಂದು ಮದ್ಯಾಹ್ನ 12.00 ಗಂಟೆ ಸುಮಾರಿಗೆ ಮರಳಿ ಅಫಜಲಪೂರ ಪಟ್ಟಣದಲ್ಲಿರುವ ನಮ್ಮ ಮನೆಗೆ ಬಂದಿರುತ್ತೇವೆ. ನಮ್ಮ ಮನೆಗೆ ಹಾಕುವ ಕೀಲಿಗೆ ಎರಡು ಚಾವಿಗಳಿದ್ದು ಒಂದು ನನ್ನ ಹತ್ತಿರ ಇನೊಂದು ನನ್ನ ಗಂಡನ ಹತ್ತಿರ ಇರುತ್ತದೆ. ನಾನು ಬೆಂಗಳೂರಿನಿಂದ ನಮ್ಮ ಮನೆಗೆ ಬಂದಾಗ ನಮ್ಮ ಮನೆಯ ಬಾಗಿಲಿಗೆ  ಕೀಲಿ ಹಾಕಿದ್ದು ನಾನು ಮತ್ತು ನನ್ನ ಮಗ ಇಬ್ಬರು ಕೀಲಿ ತಗೆದು ಮನೆಯ ಒಳಗೆ ಹೋಗಿ ನೋಡಲು ಬಟ್ಟೆ ಹೊಲೆಯುವ ಮಶಿನ್ ಮೇಲೆ ನನ್ನ ಗಂಡನ ಒಂದು ಮೊಬೈಲ್ ಪೋನ್  ಮತ್ತು ಪರ್ಸ ಇತ್ತು. ಇನ್ನೊಂದು ಮೋಬೈಲ ಪೋನ ಇದ್ದಿರಲಿಲ್ಲ ನಂತರ ನಾನು ನನ್ನ ಗಂಡನಿಗಾಗಿ ಓಣಿಯಲ್ಲಿ ಮತ್ತು ನನ್ನ ಗಂಡನು ಕೆಲಸ ಮಾಡುವ ಹೊಟೇಲಗಳಲ್ಲಿ ವಿಚಾರಿಸಿದರು ನನ್ನ ಗಂಡನ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ ಎಲ್ಲಿಗಾದರು ಹೋಗಿರಬಹುದು ನಂತರ ತಾನೇ ಮರಳಿ ಮನೆಗೆ ಬರಬಹುದೆಂದು ಸುಮ್ಮನಿದ್ದೆನು.ದಿನಾಂಕ 18/11/2017 ರಂದು ಬೆಳಿಗ್ಗೆ 10.00 ಗಂಟೆ ಸುಮಾರಿಗೆ ನಮ್ಮ ಓಣಿಯಲ್ಲಿ ಜನರು ಅಫಜಲಪೂರದಿಂದ ಘತ್ತರಗಾ ಕಡೆಗೆ ಹೋಗುವ ರೋಡಿನ ಹತ್ತಿರ ಇರುವ ಹಮೀದ ಅಫ್ಜಲ್ ತಂದೆ ಅಲಿ ಅಫ್ಜಲ್ ಜಹಾಗೀರದಾರ ರವರ ಹೊಲದಲ್ಲಿ ಒಬ್ಬ ಗಂಡು ವ್ಯಕ್ತಿಯ ಶವ ಬಿದ್ದಿದೆ ಅಂತ ಮಾತಾಡುವದನ್ನು ಕೇಳಿ ನಾನು ಮತ್ತು ನನ್ನ ಮಗ ಅರ್ಜುನ ಇಬ್ಬರು ಹೋಗಿ ನೋಡಲು ಕೊಲೆಯಾಗಿ ಬಿದ್ದಿರುವ ವ್ಯಕ್ತಿ ಶವ ಪೂರ್ತಿ ಕೊಳೆತಿದ್ದು ಶವದ ಮೇಲಿನ ಬಟ್ಟೆಗಳು ಮತ್ತು ಕೊಲೆಯಾದ ಸ್ಥಳದಲ್ಲಿ  ಬಿದ್ದಿರುವ ಚಪ್ಪಲಿಗಳು ಹಾಗು  ಪ್ಯಾಂಟಿಗೆ ಕಟ್ಟುವ ಬೆಲ್ಟನೇದ್ದವುಗಳನ್ನು ನೋಡಿ ಗುರುತಿಸಿದ್ದು ಕೊಲೆಯಾಗಿ ಬಿದ್ದ ವ್ಯಕ್ತಿ ನನ್ನ ಗಂಡ ದೇವಿಂದ್ರ@ ಪಾಂಡು ತಂದೆ ಶಂಕರ ಪಂಡಿತ(ಭಜಂತ್ರಿ) ಇರುತ್ತಾನೆ. ನನ್ನ ಗಂಡನಿಗೆ ದಿನಾಂಕ 12/11/2017 ರಿಂದ ದಿನಾಂಕ 18/11/2017 ರ ಬೆಳಗ್ಗಿನ 10.00 ಗಂಟೆಯ ಮದ್ಯದ ಅವದಿಯಲ್ಲಿ ಯಾರೋ ದುಷ್ಕರ್ಮಿಗಳು ಯಾವುದೋ ದುರುದ್ದೇಶದಿಂದ ಹಮೀದ ಅಫ್ಜಲ್ ತಂದೆ ಅಲಿ ಅಫ್ಜಲ್ ಜಹಾಗೀರದಾರ ರವರ ಹೊಲದಲ್ಲಿನ ತೊಗರಿ ಬೆಳೆ ಇದ್ದ ಹೊಲದ ಬಾಂದಾರಿ ಮೇಲೆ ಇರುವ ಬೇವಿನ ಗಿಡದ ಪಕ್ಕದಲ್ಲಿ ತಲೆಯ ಮೇಲೆ ದೊಡ್ಡ ಬಂಡೆಗಲ್ಲು ಎತ್ತಿ ಹಾಕಿ ಕೊಲೆ ಮಾಡಿ ಸಾಕ್ಷಿ ಪುರಾವೆಗಳು ನಾಶಪಡಿಸುವ ಉದ್ದೇಶದಿಂದ ಶವವನ್ನು ಕೊಲೆ ಮಾಡಿದ ಸ್ಥಳದಿಂದ ಎಳೆದುಕೊಂಡು ಹೋಗಿ ತೊಗರಿ ಬೆಳೆಯ ಪಕ್ಕದಲ್ಲಿರುವ ಕಬ್ಬಿನ ಗದ್ದೆಯಲ್ಲಿ ಹಾಕಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಲೋಗಿ ಠಾಣೆ : ಶ್ರೀ ಭಗವಂತ್ರಾಯ ತಂದೆ ಸಿದ್ದಪ್ಪ ಗುಜಗೊಂಡ ಸಾ : ನೆಲೋಗಿ ತಾ : ಜೇವರಗಿ ರವರು ದಿನಾಂಕ:18/11/2017 ರಂದು ಸಾಯಂಕಾಲ 4:30 ಘಂಟೆ ಸುಮಾರಿಗೆ ನಮ್ಮ ಹೊಲ ಸರ್ವೇ ನಂ: 165 ನೇದ್ದರಲ್ಲಿ ಕೆಲಸ ಮಾಡುತ್ತಿದ್ದ ಎಂ.ವೀರಾಂಜನೇಯ ಯವರು ನನಗೆ ತಿಳಿಸಿದ್ದೇನೆಂದರೆ. ನೇಲೋಗಿಯಿಂದ ಸೋನ್ನ ಕ್ರಾಸ ಕಡೆಗೆ ಹೋಗುವ ಮಾರ್ಗದಲ್ಲಿ ನಮ್ಮ ಹೋಲದ ಬದಿಗೆ ಯಾವದೋ ಒಂದು ಅಪರಿಚಿತ ಶವ ಕಂಡು ಬಂದಿರುತ್ತದೆ ಅಂತ ತಿಳಿಸಿದ ಮೇರೆಗೆ ನಾನು ಹೋಲಕ್ಕೆ ಹೋಗಿ ನೋಡಲಾಗಿ ಒಂದು ಅಪರಚಿತ ಶವ ಸುಮಾರು ಅಂದಾಜು 25-30 ವರ್ಷದ ಗಂಡು ವ್ಯೆಕ್ತಿಯ ಶವ ಇತ್ತು . ನಾನು ಹಾಗೂ ಅಲ್ಲಿ ಕೆಲಸ ಮಾಡುತ್ತಿರುವ ವ್ಯೆಕ್ತಿಗಳು ಕೂಡಿ ಶವವನ್ನು ನೋಡಲಾಗಿ ದೇಹದ ಮೇಲೆ ಸಣ್ಣ ಪುಟ್ಟಗಾಯಗಳು ಕಂಡು ಬಂದಿರುತ್ತದೆ. ಬಲಗಣ್ಣಿನ ಮೇಲೆ ಬಲವಾಗಿ ಹೋಡೆದು ಗಾಯ ಮಾಡಿದ್ದು ಕಂಡು ಬಂದಿರುತ್ತದೆ. ಯಾವದೋ ಒಂದು ವಸ್ತುವಿನಿಂದ ಕುತ್ತಿಗೆಗೆ ಬಿಗಿದ್ದಿದ್ದು ಕುತ್ತಿಗೆ ಮೇಲೆ ಕಂದು ಬಣ್ಣದ ಗುರುತು ಕಂಡು ಬಂದಿರುತ್ತದೆ, ಮೈಮೇಲೆ ಅಲ್ಲಲ್ಲಿ ತರಚಿದ ಗಾಯಗಳು ಹಾಗೂ ಕಂದುಗಟ್ಟಿದ ಗಾಯಗಳು ಕಂಡು ಬಂದಿರುತ್ತದೆ, ಬಲ ಭುಜದ ಮೇಲೆ ಸೂರ್ಯನ ಆಕಾರಮಚ್ಚೆ ಗುರುತು ಇದ್ದು ಮದ್ಯದಲ್ಲಿ ಓಂ ಅಂತ ಹಣಚೆ ಬಟ್ಟು ಹಾಕಿದ್ದು ಇರುತ್ತದೆ. ಬಲಗೈ ಮೇಲೆ ಬಿರಾದಾರ ಅಂತ ಇಂಗ್ಲೀಷನಲ್ಲಿ ಹಣಚೆ ಬೋಟ್ಟು ಹಾಕಿದ್ದು ಅದೆ. ಎಡ ಭೂಜದ ಮೇಲೆ ಓಂ ಅದರ ಮೇಲೆ ಡಮರುಗದ ಹಣಚೆ ಬೋಟ್ಟು ಹಾಕಿದ್ದು ಇರುತ್ತದೆ. ಮೈಮೇಲೆ ಹಳದಿ ಬಣ್ಣದ ಟೀ ಶರ್ಟ ಹಾಗೂ ಭೂದಿ ಬಣ್ಣದ 1.4 ಭೋರ್ಮಡಾ ಧರಸಿದ್ದು ಇರುತ್ತದೆ,  ಮೃತ ದೇಹವನ್ನು ನೋಡಿದವರು ಯಾರೂ ಕೂಡಾ ಶವವನ್ನು ಗುರುತಿಸಿರುವದಿಲ್ಲಾ. ಯಾರೋ ದುಷ್ಕರ್ಮಿಗಳು ಯಾವದೋ ದುರುದ್ವೇಶದಿಂದ ಕೋಲೆ ಮಾಡಿ ಸಾಕ್ಷಿ ನಾಶ ಮಾಡುವ ಸಲುವಾಗಿ ಈ ಸ್ಥಳದಲ್ಲಿ ಮೃತ ದೇಹವನ್ನು ಎಸೆದು ಹೋಗಿರುತ್ತಾರೆ.ಸದರಿ ಘಟನೆಯು ದಿನಾಂಕ:18/11/2017 ಮದ್ಯ ರಾತ್ರಿಯಿಂದ ಇಲ್ಲಿಯವರೆಗೆ ಜರಗಿರಬಹುದು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಆಳಂದ ಠಾಣೆ : ಶ್ರೀಮತಿ ಪ್ರಭಾವತಿ ಗಂಡ ಶಂಕರ ಕಜಾಳೆ ಸಾ : ಪಡಸಾವಳಿ ತಾ : ಆಳಂದ ರವರ ಗಂಡ ಶಂಕರ ತಂದೆ ಬಾಬು ಕಾಜಳೆ ಇವರು ಇಂದು ದಿನಾಂಕ 18/11/2017 ರಂದು ಬೆಳಿಗ್ಗೆ ಉಮರ್ಗಾ ತಾಲೂಕಿನ ಸಾವಳೇಶ್ವರ್ ಗ್ರಾಮದಲ್ಲಿರುವ ಅಕ್ಕಳಾದ ಸುಭಾಬಾಯಿ ಹತ್ತಿರ ಹೋಗಿ ಬರುತ್ತೆನೆ ಅಂತಾ ಹೇಳಿ ನಮ್ಮ ಮೋಟಾರ ಸೈಕಲ್ ನಂಬರ ಕೆಎ 32 ಇಜಿ 2069 ನೆದ್ದರ ಮೇಲೆ ಕುಳಿತು ಚಾಲು ಮಾಡಿಕೊಂಡು ಮನೆಯಿಂದ ಹೋದರು ಬೆಳಿಗ್ಗೆ 9.30 ಗಂಟೆಯ ಸುಮಾರಿಗೆ ನಮ್ಮ ಅಳಿಯ ಶ್ರೀಶೈಲ್ ಘಾಳೆ ಇವರು ಬಂದು ನನಗೆ ವಿಷಯ ತಿಳಿಸಿದ್ದೆನೆಂದರೆ ತಡೋಳಾ ಗ್ರಾಮದ ಪರಿಚಯದ ಬಾಬುರಾವ ತಂದೆ ಉದ್ದರವರಾವ ಪಾಟೀಲ್ ಇವರು ನನಗೆ ಫೋನ್ ಮಾಡಿ ಮಾಮನಾದ ಶಂಕರ ಕಾಜಳೆ ಇವರು ಮೋಟಾರ ಸೈಕಲ್ ಮೇಲೆ ತಡೋಲಾ ಗ್ರಾಮದ ಸರಕಾರಿ ಪ್ರೌಢ ಶಾಲೆ ಹತ್ತಿರ ರೋಡಿನಲ್ಲಿ ಅವರ ಎದುರುಗಡೆಯಿಂದ ಖಜೂರಿ ಬಾರಡರ ಕಡೆಯಿಂದ ಒಂದು ಮೋಟಾರ ಸೈಕಲ್ ನಂ ಎಮ್‌ಹೆಚ್‌ 06 ಎಜೆ 4269 ನೇದ್ದರ ಸವಾರನು ತನ್ನ ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಮಾಮಾನ ಮೋಟರ ಸೈಕಲಗೆ ಡಿಕ್ಕಿ ಪಡಿಸಿದ್ದರಿಂದ ಕೆಳಗೆ ಬಿದ್ದು ಮಾಮಾನ ಹಣೆಗೆ ತಲೆಗೆ ಗದ್ದಕ್ಕೆ ಮತ್ತು ಎಡಗೈ ಮುಂಗೈಗೆ ಭಾರಿ ರಕ್ತ ಮತ್ತು ಗುಪ್ತ ಗಾಯಗಳಾಗಿರುತ್ತವೆ, ಡಿಕ್ಕಿ ಪಡಿಸಿದವನಿಗೆ ಸಣ್ಣ ಪುಟ್ಟ ಗಾಯಗಳಾಗಿರುತ್ತವೆ, ಡಿಕ್ಕಿಪಡಿಸಿದವನ ಹೆಸರು ವಿಚಾರಿಸಲಾಗಿ ನಾರಾಯಣ ತಂದೆ ರಾಮ ವಾಗಮೋಡೆ ಸಾ : ಕುನ್ನಳ್ಳಿ ತಾ : ಉಮರಗಾ ಜಿ : ಉಸ್ಮಾನಾಬಾದ ಅಂತಾ ತಿಳಿದು ಬಂದಿರುತ್ತದೆ, ಅಂತಾ ತಿಳಿಸಿದ್ದು ಆಗ ನಾನು ಗಾಬರಿಯಾಗಿ ನಮ್ಮ ಅಳಿಯ ಶ್ರೀಶೈಲ್ ಘಾಳೆ ಹಾಗೂ ನಮ್ಮೂರಿನ ಮಹಿಬೂಬ ಗುಂಜೋಟಿ, ಮತ್ತು ಇಮಾಮ ಶೇಕ್, ಹಾಗೂ ಇತರರೊಂದಿಗೆ ಒಂದು ಖಾಸಗಿ ವಾಹನದಲ್ಲಿ ಅಪಘಾತ ನಡೆದ ಸ್ಥಳಕ್ಕೆ ಹೋಗಿ ನೋಡಲಾಗಿ ವಿಷಯ ನಿಜವಿದ್ದು ನನ್ನ ಗಂಡನಿಗೆ ಹಣೆಗೆ ತಲೆಗೆ ಗದ್ದಕ್ಕೆ ಮತ್ತು ಎಡಗೈ ಮುಂಗೈಗೆ ಹಾಗೂ ಇತರ ಕಡೆಗೆ ಭಾರಿ ರಕ್ತ ಮತ್ತು  ಗುಪ್ತ ಗಾಯಗಳಾಗಿದ್ದು ನಾವೆಲ್ಲರೂ ಕೂಡಿ ನನ್ನ ಗಂಡನಿಗೆ ಎತ್ತಿ ನಮ್ಮ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಉಮರ್ಗಾ ದವಾಖಾನೆಗೆ ತೆಗೆದುಕೊಂಡು ಹೋಗುತ್ತಿರುವಾಗ ಉಮರ್ಗಾ ಹತ್ತಿರ ನನ್ನ ಗಂಡ ಶಂಕರ ಕಾಜಳೆ ಇವರು ಅಪಘಾತದಲ್ಲಿ ಹೊಂದಿದ ಗಾಯದಿಂದ ಮೃತಪಟ್ಟಿದ್ದು ಇರುತ್ತದೆ,  ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಲಿಗೆ ಪ್ರಕರಣ :
ಜೇವರಗಿ ಠಾಣೆ :  ಶ್ರೀ ಸಿದ್ದನಗೌಡ ತಂದೆ ಬಸವಂತರಾಯ ಮಾಲಿ ಪಾಟೀಲ ಸಾ|| ಚನ್ನೂರ ಹಾ:ವ: ಓಂ ನಗರ ಜೇವರಗಿ ಇವರು ಠಾಣೆಗೆ ಜೇವರಗಿ ಎಸ್.ಬಿ.ಹೆಚ್ (ಎಸ್.ಬಿ.ಐ) ಬ್ಯಾಂಕನಲ್ಲಿ ನನ್ನ ಹೆಸರಿನಿಂದ ಬ್ಯಾಂಕ ಖಾತೆ ನಂ 62291009973 ನೇದ್ದು ಇರುತ್ತದೆ.  ನಾನು ಇಂದು ದಿನಾಂಕ 18.11.2017 ರಂದು ಮುಂಜಾನೆ ಮನೆಯಿಂದ ಹಣ ಡ್ರಾಮಾಡಿಕೊಂಡು ಬರಲು ಬ್ಯಾಂಕಿಗೆ  ಬಂದು ಜೇವರಗಿ ಎಸ್.ಬಿ.ಹೆಚ್ (ಎಸ್.ಬಿ.ಐ) ಬ್ಯಾಂಕನಲ್ಲಿ ಮೇಲೆ ನಮೂದಿಸಿದ ನನ್ನ ಖಾತೆಯಿಂದ ಒಟ್ಟು 80,000/- ( ಎಂಭತ್ತು ಸಾವಿರ ರೂಪಾಯಿ) ಹಣ ಡ್ರಾ ಮಾಡಿಕೊಂಡು ಹಣವನ್ನು ಒಂದು ಪ್ಲಾಸ್ಟೀಕ್ ಕೈ ಚೀಲದಲ್ಲಿ ಹಾಕಿಕೊಂಡು ನನ್ನ ಕೈಯಲ್ಲಿ ಹಿಡಿದುಕೊಂಡು ಬ್ಯಾಂಕಿನಿಂದ ಹೊರಗೆ ಬಂದು,  ಮನೆಗೆ ಹೋಗಲು ನಡೆದುಕೊಂಡು ರೊಡಿನಲ್ಲಿ ಬರುತ್ತಿದ್ದೆನು, ಮುಂಜಾನೆ 11.45 ಗಂಟೆಯ ಸುಮಾರಿಗೆ ಜೇವರಗಿ ಪಟ್ಟಣದ ಹಳೆಯ ಬಿ.ಇ.ಓ ಕಚೇರಿಯ ಹತ್ತಿರ ರೋಡಿನಲ್ಲಿ ನಡೆದುಕೊಂಡು ಬರುತ್ತಿದ್ದಾಗ ಅದೇ ವೇಳೆಗೆ ನನ್ನ ಎದುರಿನಿಂದ ಒಂದು ಕಪ್ಪು ಬಣ್ಣದ ಅಪ್ಪಾಚಿ ಮೊಟಾರ್ ಸೈಕಲ ಮೇಲೆ ಇಬ್ಬರು ಅಪರಿಚಿತ ವ್ಯಕ್ತಿಗಳು ಅಂದಾಜು 25-30 ವರ್ಷ ವಯಸ್ಸಿನವರು ಕುಳಿತುಕೊಂಡು ಬಂದು ನನ್ನ ಕೈಯಲ್ಲಿನ ಹಣ ಇದ್ದ ಪ್ಲಾಷ್ಟೀಕ ಕೈ ಚೀಲ ಹಣ ಸಮೇತ ಜಬರದಸ್ತಿಯಿಂದ ಕಸಿದುಕೊಂಡು ಹೋದರು, ನಾನು ಚಿರ್ಯಾಡುತ್ತಾ ಅವರ ಹಿಂದೆ ಬೇನ್ನು ಹತ್ತಿದ್ದರು ಅವರು ಸಿಕ್ಕಿರುವುದಿಲ್ಲಾ, ಅವರು ತಮ್ಮ ಮೊಟಾರ್ ಸೈಕಲನ್ನು ಜೊರಾಗಿ ನಡೆಯಿಸಿಕೊಂಡು ಹೋದರು ಮೊಟಾರ್ ಸೈಕಲ್ ನಂಬರ ಗುರುತು ಸಿಕ್ಕಿರುವುದಿಲ್ಲಾ. &  ಮೊಟಾರ್ ಸೈಕಲ ನಡೆಯಿಸುತ್ತಿದ್ದವನ ಬಟ್ಟೆಗಳು ಸರಿಯಾಗಿ ಕಂಡಿರುವುದಿಲ್ಲಾ ಅವನು ಕನ್ನಡಕ ಹಾಕಿಕೊಂಡಿದನು,  ಹಿಂದೆ ಕುಳಿತವನು ಬಿಳಿ ಬಣ್ಣದ ಪೂಲ್ ಶರ್ಟ, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದನು. ನಂತರ ನಾನು ನನ್ನ ಗೆಳೆಯರಾದ ನಾಡಗೌಡ ತಂದೆ ಅಪ್ಪಾಸಾಹೇಬಗೌಡ ಮಾಲಿ ಪಾಟೀಲ, ಭೀಮರಾಯ ತಂದೆ ಮಲ್ಲಪ್ಪ ಸೂರಪೂರ ಇವರನ್ನು ಬರಮಾಡಿಕೊಂಡು ಜೇವರಗಿ ಪಟ್ಟಣದಲ್ಲಿ ಹುಡುಕಾಡಿದರು ಸಿಕ್ಕಿರುವುದಿಲ್ಲಾ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

18 November 2017

KALABURAGI DISTRICT REPORTED CRIMES

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಶಾಹಾಬಾದ ನಗರ ಠಾಣೆ : ದಿನಾಂಕ: 17/11/2017 ರಂದು ಮುತ್ತಾಗಾ ಸೀಮಾಂತರದ ಕಾಗಿಣಾ ನದಿಯಿಂದ ಮರಳು ಕಳ್ಳತನದಿಂದ ಟ್ರಾಕ್ಟರನಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಪಿ ಐ ಶಹಾಬಾದ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ದಾರಿಯಲ್ಲಿ ಹೋಗುತ್ತಿರುವಾಗ ಅನುಸೂಬಾಯಿ ಇವರ ಹೊಲದ ಹತ್ತಿರ ರೋಡಿನಲ್ಲಿ ಮುತ್ತಾಗಾ ಕಡೆಯಿಂದ ಮರಳು ತುಂಬಿದ ನಂಬರ ಇಲ್ಲದ ಟ್ರಾಕ್ಟರ ಬರುತ್ತಿದ್ದು ಅದರ ಟ್ರಾಕ್ಟರ ಚಾಲಕ ತನ್ನ ಟ್ರಾಕ್ಟರ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ  ಟ್ರಾಕ್ಟರ ಪರೀಶಿಲಿಸಿ ನೋಡಲಾಗಿ ಅದು ಮಶಿ ಫರಗೂಷನ ಕಂಪನಿಯ ಟ್ರಾಕ್ಟರ ಇರುತ್ತದೆ. ಅದರಲ್ಲಿ ಮರಳು ತುಂಬಿದ್ದು ಮರಳು ತುಂಬಿದ ಟ್ರಾಕ್ಟರ ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಮರಳಿ ಠಾಣೆಗೆ ಬಂದಿದ್ದು  ಟ್ರಾಕ್ಟರ ಚಾಲಕ ಮತ್ತು ಮಾಲಿಕ ಇಬ್ಬರು ಸೇರಿ ಸರಕಾರಕ್ಕೆ ಯಾವುದೇ ರಾಜಧನ ತುಂಬದೆ ಟ್ರಾಕ್ಟರನಲ್ಲಿ ಮರಳು ಕಳ್ಳತನದಿಂದ ತುಂಬಿಕೊಂಡು ಸಾಗಿಸುತ್ತಿದ್ದರಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 17-11-2017 ರಂದು, ಸುಧಾರಿತ ಗಸ್ತು ಸಂ 26 ಉಡಚಣ ಗ್ರಾಮದ ಬೀಟ್ ಸಿಬ್ಬಂದಿಯಾದ ಪಂಡಿತ ಸಿಪಿಸಿ-1119 ರವರು ಮಾಹಿತಿ ತಿಳಿಸಿದ್ದೆನೆಂದರೆ ಉಡಚಣ ಗ್ರಾಮದ ಬಸವಣ್ಣ ದೇವರ ಗುಡಿಯ ಮುಂದೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಬಾತ್ಮಿದಾರರಿಂದ ಮಾಹಿತಿ ಬಂದಿದೆ ಅಂತ ತಿಳಿಸಿದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಉಡಚಣ ಗ್ರಾಮದ ಬಸವಣ್ಣ ದೇವರ ಗುಡಿಯ ಹತ್ತಿರ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಬಸವಣ್ಣ ದೇವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಫೈಗಂಬರ ತಂದೆ ಶೇಖಬಾಬು ಮುಲ್ಲಾ ಸಾ||ಉಡಚಣ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 2590/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು  ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಅಸ್ಲಾಂ ತಂದೆ ಅಬ್ದುಲರಸೀದ್ ಕಸಾಬ ಸಾ|| ಶಿವಪೂರಗಲ್ಲಿ ಹುಮನಾಬಾದ ಜಿ|| ಬಿದರ ಇವರು ಕುರಿ ವ್ಯಾಪಾರ ಮಾಡುತ್ತಿದ್ದು. ನಾವು ಕುರಿಗಳನ್ನು ವಿಜಯಪೂರ ಜಿಲ್ಲೆಯ ಆಲಮೇಲ್ ಸಂತೆಯಲ್ಲಿ ಖರೀದಿ ಮಾಡಿ ಹುಮನಾಬಾದಕ್ಕೆ ತಗೆದುಕೊಂಡು ಹೋಗಿ ಮಾರಾಟ ಮಾಡುವ ವ್ಯಾಪಾರ ಮಾಡುತ್ತಿರುತ್ತೇವೆ. ದಿನಾಂಕ 17-11-2017 ರಂದು ಆಲಮೇಲ್ ಸಂತೆಯಲ್ಲಿ ಕುರಿಗಳನ್ನು ಖರಿದಿ ಮಾಡಿಕೊಂಡು ಬರಬೆಕೆಂದು ನಾನು ಮತ್ತು ನನ್ನ ಅಣ್ಣನಾದ ಅಲ್ತಾಫ ತಂದೆ ಅಬ್ದುಲರಸೀದ್ ಕಸಾಬ ಇಬ್ಬರು ಕೂಡಿ ನಿನ್ನ ದಿನಾಂಕ 16-11-2017 ರಂದು ರಾತ್ರಿ ಹುಮನಾಬಾದದಿಂದ  ಕಲಬುರಗಿಗೆ ಬಂದು, ಕಲಬುರಗಿಯಲ್ಲಿ ನಾವು ಪ್ರತಿ ಸಲ ಬಾಡಿಗೆ ತಗೆದುಕೊಂಡು ಹೊಗುವ ಅಬುಬಕರ್ ರವರ ಪಿಕಪ್ ನಂಬರ ಕೆಎ-32 ಬಿ-2528 ನೇದ್ದನ್ನು ಬಾಡಿಗೆ ತಗೆದುಕೊಂಡು, ಸದರಿ ಪಿಕಪ್ ವಾಹನದಲ್ಲಿ ನಾನು ಮತ್ತು ನನ್ನ ಅಣ್ಣ ಹಾಗೂ ಪೀಕಪ್ ಚಾಲಕನಾದ ಸೈಯದ ಖಾಸಿಂ ಅಲಿ ತಂದೆ ಸೈಯದ್ ಹುಸೇನಸಾಬ ಮೂರು ಜನರು ಕೂಡಿ ಕಲಬುರಗಿಯಿಂದ ಅಫಜಲಪೂರ ಮಾರ್ಗವಾಗಿ ಆಲಮೇಲಕ್ಕೆ ಹೋರಟಿದ್ದು. ಸದರಿ ಪೀಕಪ ವಾಹನದಲ್ಲಿ ಮುಂದೆ ಕಿನ್ನರ ಸೈಡಿನಲ್ಲಿ ನನ್ನ ಅಣ್ಣ ಅಲ್ತಾಫ ಕುಳಿತಿದ್ದನು, ನಾನು ಅವನ ಪಕ್ಕದಲ್ಲಿ ಕುಳಿತಿದ್ದೆನು, ಮದ್ಯ ರಾತ್ರಿ 01:30 ಗಂಟೆ ಸುಮಾರಿಗೆ ಅಫಜಲಪೂರ ಇನ್ನು ಅಂದಾಜು 3-4 ಕೀ ಮಿ ದೂರವಿದ್ದಾಗ, ಸದರಿ ಪೀಕಪ್ ವಾಹನದ ಚಾಲಕ ತನ್ನ ಪಿಕಪ್ ವಾಹನವನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು, ರೋಡಿನ ಪಕ್ಕದಲ್ಲಿ ನಿಂತಿದ್ದ ಕಬ್ಬು ತುಂಬಿದ ಲಾರಿಗೆ ಪೀಕಪನ ಎಡಭಾಗ ಡಿಕ್ಕಿ ಪಡಿಸಿದನು. ಸದರಿ ಡಿಕ್ಕಿಯಿಂದ ನನ್ನ ಪಕ್ಕದಲ್ಲಿ ಕುಳಿತಿದ್ದ ನನ್ನ ಅಣ್ಣ ಅಲ್ತಾಫನ ತಲೆಗೆ ಹಾಗೂ ಕುತ್ತಿಗೆಗೆ ಭಾರಿ ರಕ್ತಗಾಯ ಹಾಗೂ ಭಾರಿ ಗುಪ್ತಗಾಯವಾಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ. ಸದರಿ ಘಟನೆಯಲ್ಲಿ ನನಗೂ ಸಹ ಮುಖಕ್ಕೆ ಗದ್ದಕ್ಕೆ ರಕ್ತಗಾಯಗಳು ಹಾಗೂ ಮೈ ಕೈಗೆ ಗುಪ್ತಗಾಯಗಳು ಆಗಿರುತ್ತವೆ. ಘಟನೆ ಆದ ನಂತರ ಪೀಕಪ್ ವಾಹನದ ಚಾಲಕ ವಾಹನವನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೊಗಿರುತ್ತಾನೆ. ರೋಡಿನ ಸೈಡಿನಲ್ಲಿ ನಿಂತಿದ್ದ ಲಾರಿ ನಂಬರ ನೊಡಿದ್ದು ಅದರ ನಂಬರ ಎಮ್.ಹೆಚ್-31 ಎಪಿ-7402 ಇರುತ್ತದೆ. ಘಟನೆ ಆದ ಸ್ವಲ್ಪ ಸಮಯಕ್ಕೆ ರೋಡಿಗೆ ಹೋಗಿ ಬರುವ ವಾಹನದವರು ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಪೊಲೀಸರು ಬಂದು ನನ್ನ ಅಣ್ಣನ ಶವವನ್ನು ಅಫಜಲಪೂರ ಸರ್ಕಾರಿ ಆಸ್ಪತ್ರೆ ಅಫಜಲಪೂರದ ಶವಗಾರದಲ್ಲಿ ಹಾಕಿ ನನಗೆ ಚಿಕಿತ್ಸೆ ಕೊಡಿಸಿರುತ್ತಾರೆ.ಪೀಕಪ್ದ ನಂಬರ ಕೆಎ-32 ಬಿ-2528 ನೇದ್ದರ ಚಾಲಕನಾದ ಸೈಯದ ಖಾಸಿಂ ಅಲಿ ತಂದೆ ಸೈಯದ್ ಹುಸೇನಸಾಬ ಸಾ|| ಜೋಶಿ ಗಲ್ಲಿ ಹುಮನಾಬಾದ ಜಿ|| ಬಿದರ ಈತನು ತನ್ನ ಪೀಕಪ್ ವಾಹನವನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಚಾಲಾಯಿಸಿಕೊಂಡು ಹೋಗಿ, ರೋಡಿನ ಪಕ್ಕದಲ್ಲಿ ನಿಲ್ಲಿಸಿದ ಲಾರಿ ನಂಬರ ಎಮ್.ಹೆಚ್-31 ಎಪಿ-7402 ನೇದ್ದರ ಹಿಂದೆ ಡಿಕ್ಕಿ ಪಡಿಸಿದ್ದರಿಂದ, ನನ್ನ ಅಣ್ಣ ಅಲ್ತಾಫನ ತಲೆಗೆ ಹಾಗೂ ಕುತ್ತಿಗೆಗೆ ಭಾರಿ ರಕ್ತಗಾಯ ಹಾಗೂ ಗುಪ್ತಗಾಯಗಳು ಆಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ನೆಲೋಗಿ ಠಾಣೆ : ಶ್ರೀ ವೈಜನಾಥ ತಂದೆ ಭೂತಾಳಿಸಿದ್ದ ನರಸಕ್ಕಿ  ಸಾ|| ನೆಲೋಗಿ ರವರು ತಮ್ಮ ಮನೆಯ ಮುಂದೆ ಕಟ್ಟಿ ಕಟ್ಟಿದ್ದೇವೆ ನಮ್ಮತಾಯಿಯವರು ಮುಂಜಾನೆ ಎದ್ದು ಮನೆಯ ಕಸ ತಗೆಯುತ್ತಿರುವಾಗ ನಮ್ಮ ಮನೆಯ ಮುಂದೆ ಬಸಪ್ಪ ತಂದೆ ಭೀಮರಾಯ ಇವನು KA32EH-2959 ನೇದ್ದರ ಗಾಡಿ ತಗೆದುಕೊಂಡು ಬಂದು ಜೋರಾಗಿ ಅವಾಚ್ಯ ಶಬ್ದಗಳಿಂದ ಬೈವಾಗ ನಾನು ಮನೆಯಿಂದ ಹೋರಗೆ ಬಂದು ನಮ್ಮತಾಯಿಗೆ ಏಕೆ ಬೈಯುತ್ತಿ ಎಂದು ಕೇಳಿದಾಗ ಬಾಬು ತಂದೆ ಭೀಮರಾಯ ನರಸಕ್ಕಿ, ಬಸವರಾಜ ತಂದೆ ಭೀಮರಾಯ ನರಸಕ್ಕಿ ಇವರು ಅಲ್ಲೆ ಬಿದ್ದ ಬಡಿಗೆ ತಗೆದುಕೊಂಡು ನನ್ನ ತಲೆಗೆ ಮತ್ತು ಬೆನ್ನಿಗೆ ಹೋಡೆದು ರಕ್ತಗಾಯ ಮಾಡಿದ್ದಾರೆ ಮತ್ತು ಶರಣು ತಂದೆ ಭೀಮರಾಯ ನರಸಕ್ಕಿ, ಮಲ್ಲು ತಂದೆ ಭೀಮರಾಯ ನರಸಕ್ಕಿ, ಸಂಗಮ್ಮಾ ಗಂಡ ಸೋಮನಾಥ ಇವರೆಲ್ಲರೂ ಈ ಭೋಸಡಿ ಮಕ್ಕಳದು ಬಹಳ ಆಗಿದೆ ಇವರಿಗೆ ಖಲಾಸ ಮಾಡಿರಿ ಎಂದು ನನಗೆ ನನ್ನ ತಾಯಿಗೆ ಕಾಲಿನಿಂದ ಒದ್ದರು ಆಗ ಅಲ್ಲೇ ಇದ್ದ ಭೂತಣ್ಣ ತಂದೆ ಲಕ್ಕಣ್ಣ ಮುದ್ದಾ, ಭೀಮ ತಂದೆ ದೇವಪ್ಪ ನರಸಕ್ಕಿ ಇವರು ಬಂದು ಜಗಳ ಬಿಡಿಸಿರುತ್ತಾರೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

17 November 2017

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಜೇವರಗಿ ಠಾಣೆ : ಶ್ರೀ ಬಾಗಣ್ಣಾ ತಂದೆ ಹಣಮಂತರಾಯ ಕಾಖಂಡಕಿ ಸಾಃ ನರಿಬೊಳ ಗ್ರಾಮ ತಾಃ ಜೇವರಗಿ ಇವರ ಮಗನಾದ ನಾಗರಾಜ ಈತನು ಎರಡು ದಿನಗಳ ಹಿಂದೆ ಗೋಗಿ ಗ್ರಾಮದಲ್ಲಿರುವ ನನ್ನ ಹಿರಿಯ ಮಗಳಾದ ದೇವಕ್ಕೆಮ್ಮ ಇವಳ ಹತ್ತಿರ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದನು.ದಿನಾಂಕ 16/11/2017 ರಂದು ಬೆಳಗ್ಗೆ 10-00 ಘಂಟೆಯ ಸುಮಾರಿಗೆ ನಾನು ನಮ್ಮ ಊರಲ್ಲಿದ್ದಾಗ ನನಗೆ ಪರಿಚಯದ ಮುಡಬೂಳ ಗ್ರಾಮದ ಮಲ್ಲಿಕಾರ್ಜುನ್‌ ಈತನು ಪೋನ ಮಾಡಿ ವಿಷಯ ತಿಳಿಸಿದ್ದೇನೆಂದರೆ; ನಿಮ್ಮ ಮಗ ನಾಗರಾಜ ಈತನು ಮುದಬಾಳ (ಕೆ) ಕ್ರಾಸ ದಾಟಿ ಜೇವರ್ಗಿ – ಶಹಾಪೂರ ರೋಡಿನ ಪಕ್ಕದಲ್ಲಿ ಸತ್ತು ಬಿದ್ದಿರುತ್ತಾನೆ ಎಂದು ತಿಳಿಸಿದನು. ನಂತರ ನಾನು ಗಾಬರಿಬಿದ್ದು ವಿಷಯ ಗೊತ್ತಾದ ಕೂಡಲೆ ನಾನು ಮತ್ತು ನಮ್ಮೂರ ನಿಂಗಣ್ಣ ತಂದೆ ಅಂತಪ್ಪಾ ರಾವೂರ, ಬಸವರಾಜ ತಂದೆ ಬೀಮರಾಯ ಮುದ್ದಾ, ಇವರು ಕೂಡಿ ಕೊಂಡು ನನ್ನ ಮಗ ಸತ್ತು ಬಿದ್ದ ಸ್ಥಳಕ್ಕೆ ಹೋಗಿ ನೋಡಲು ಜೇವರ್ಗಿ ಶಹಾಪೂರ ರೋಡ ಗುರಣ್ಣಗೌಡ ಮುದುಬಾಳ (ಕೆ) ಇವರ ಹೊಲದ ಹತ್ತಿರ ರೋಡಿನ ಪಕ್ಕದಲ್ಲಿ ನನ್ನ ಮಗ ನಾಗರಾಜ ಈತನು ಸತ್ತು ಬಿದ್ದಿದ್ದನು. ನಾನು ನೋಡಲಾಗಿ ಅವನ ಮೂಗಿನಿಂದ ರಕ್ತಸ್ರಾವವಾಗಿದ್ದು ಬಲಗಾಲಿನ ಮೊಳಕಾಲಿನ ಹತ್ತಿರ ಮುರಿದ ಭಾರಿ ರಕ್ತ ಘಾಯವಾಗಿದ್ದು, ಮತ್ತು ಬಲಗಾಲಿನ ತೊಡೆಗೆ ರಕ್ತ ಘಾಯವಾಗಿದ್ದು ಇದೆ. ಅಲ್ಲಿ ರೋಡಿನ ತಗ್ಗಿನಲ್ಲಿ ಒಂದು ಕಪ್ಪು ಬಣ್ಣದ ಪ್ಯಾಶನ್‌ ಮೋಟಾರ ಸೈಕಲ್ ನಂಬರ ಕೆ.ಎ-37-ಜೆ-4571 ನೇದ್ದು ಬಿದ್ದಿದ್ದು, ಇದನ್ನು ನೋಡಿದರೆ ನನ್ನ ಮಗ ನಾಗರಾಜ ಈತನು ದಿನಾಂಕ; 15/11/2017 ರಂದು ರಾತ್ರಿ 11-00 ಘಂಟೆಯಿಂದ ದಿನಾಂಕ; 16/11/2017 ರಂದು ಬೆಳಗಿನ ಜಾವ 06-00 ಘಂಟೆಯ ಮದ್ಯದ ಅವಧಿಯಲ್ಲಿ ಶಹಾಪೂರ ಕಡೆಯಿಂದ ಮೇಲೆ ನಮೂದಿಸಿದ ಮೋಟಾರ ಸೈಕಲ್‌ ಮೇಲೆ ಕುಳಿತುಕೊಂಡು ಜೇವರ್ಗಿ ಕಡೆಗೆ ಬರುವಾಗ ಯಾವುದೋ ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮಗ ಕುಳಿತು ಬರುತ್ತಿದ್ದ ಮೋಟಾರ ಸೈಕಲಕ್ಕೆ ಡಿಕ್ಕಿ ಹೊಡೆದ ಪರಿಣಾಮ ನನ್ನ ಮಗನಿಗೆ ಭಾರಿ ರಕ್ತಘಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಫರತಾಬಾದ ಠಾಣೆ : ಶ್ರೀಮತಿ ಸಾವಿತ್ರಿ ಗಂಡ ಸಿದ್ದು ಉದನೂರ ವ:20 ವರ್ಷ ಜಾ:ಲಿಂಗಾಯತ ಉ:ಮನೆಗೆಲಸ ಮು:ಹಡಗಿಲ ಹಾರುತಿ ತಾ:ಜಿ: ಕಲಬುರಗಿ ರವರು ಕೊಟ್ಟ ಲಿಖಿತ ದೂರಿನ ಸಾರಾಂ ಶ ವೆನೆಂದರೆ. ನನ್ನ ತವರೂ ಮನೆ ಹತಗುಂದಾ ಗ್ರಾಮವಿದ್ದು, ನಮ್ಮ ತಂದೆ ಬಾಬು ಸಲಗರ ತಾಯಿ ಪುತಳಾಬಾಯಿ ಇವರು ಗಳು ನನಗೆ ದಿನಾಂಕ 15/03/2016 ರಂದು ಹಡಗಿಲ ಹಾರುತಿ ಗ್ರಾಮದ ಸಿದ್ದು ತಂದೆ ಧರ್ಮಣ್ಣಾ ಉದನೂರ ಇವರೊಂದಿಗೆ ಧಾರ್ಮಿಕ ಪದ್ಧತಿಯಂತೆ  ಹಡಗಿಲ ಹಾರುತಿ ಗ್ರಾಮದ ಬಸವಣ್ಣ ದೇವರ ಗುಡಿಯಲ್ಲಿ ಲಗ್ನ ಮಾಡಿಕೊಟ್ಟಿರುತ್ತಾರೆ. ಮದುವೆಯ ಕಾಲಕ್ಕೆ ನನ್ನ ತಂದೆ ವರೋಪಚಾರವಾಗಿ ನನ್ನ ಗಂಡನಿಗೆ ಮೂರು ತೋಲೆ ಬಂಗಾರ, 51 ಸಾವಿರ ರೂಪಾಯಿ ಹಣ ಕೊಟ್ಟು ಮದುವೆ ಮಾಡಿರುತ್ತಾರೆ. ಲಗ್ನವಾದ ಬಳಿಕ ಮೂರು ತಿಂಗಳು ನನ್ನ ಗಂಡ ಮಾವ ಧರ್ಮಣ್ಣಾ, ಅತ್ತೆ ಬಸಮ್ಮ ಇವರುಗಳು ನನಗೆ ಸರಿಯಾಗಿ ಇಟ್ಟುಕೊಂಡು ಬರಬರುತ್ತಾ ನನ್ನೊಂದಿಗೆ ನಿನಗೆ ಅಡುಗೆ ಸರಿಯಾಗಿ ಬರುವುದಿಲ್ಲಾ ನೀನು ಅವರ ಇವರಿಗೆ ನೋಡುತ್ತಾ ಸೂಳೇಗಾರಿಕೆ ಮಾಡಿ ಬಂದಿದ್ದಿ ರಂಡಿ ಅಂತಾ ಬೈಯುವದು ಮಾಡುತ್ತಿರುವದರಿಂದ ಈ ವಿಷಯ ನಮ್ಮ ತಂದೆ ತಾಯಿಗೆ ತವರೂ ಮನೆಯವರಿಗೆ ತಿಳಿಸಿರುತ್ತೇನೆ. ನನ್ನ ತವರೂ ಮನೆಯವರು ಬಡವರಾಗಿದ್ದು, ತವರೂ ಮನೆಯಲ್ಲಿ ಇರುವುದು ಸರಿಯಲ್ಲಾ ಎಷ್ಟೆ ಕಷ್ಟ ಕೊಟ್ಟರು ಗಂಡನ ಮನೆಯಲ್ಲಿ ಬಾಳಬೇಕು ಅಂತಾ ನಾನು ನಿರ್ಧಾರ ಮಾಡಿಕೊಂಡಿರುತ್ತೇನೆ. ಈ ವಿಷಯದಲ್ಲಿ ನನ್ನ ತಂದೆ ತಾಯಿ ಗಂಡನ ಮನೆಗೆ ಬಂದು ಗಂಡ, ಅತ್ತೆ ಮಾವ ಇವರಿಗೆ ಸರಿಯಾಗಿ ಇಟ್ಟುಕೊಳ್ಳು ವಂತೆ ಬುದ್ದಿಮಾತು ಹೇಳಿ ಹೋಗಿರುತ್ತಾರೆ.  ಕೆಲವು ದಿವಸ ಸರಿಯಾಗಿ ಇಟ್ಟುಕೊಂಡು ನಂತರ ಈ ಮೇಲಿನ ಮೂರು ಜನರು ನನ್ನ ಶೀಲವನ್ನು ಶಂಕಿಸಿ ನೀನು ಅವರಿವರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಅಂತಾ ಹೊಡೆ ಬಡೆ ಮಾಡುತ್ತಿದ್ದ ರಿಂದ ನಮ್ಮ ತಂದೆ ತಾಯಿಗೆ ತಿಳಿಸಿದಾಗ  ನನ್ನ ತವರೂ ಮನೆಯ ಕಡೆಯಿಂದ ಪಂಚಾಯತಿ ಸಲುವಾಗಿ ನಮ್ಮ ತಂದೆ, ತಾಯಿ ಹಾಗು ಶಾಂತಯ್ಯ ಗುತ್ತೇದಾರ, ಸುಭಾಷ ಕುಂಬಾರ, ನಮ್ಮ ಕಾಕ ಶಾಂತಪ್ಪಾ ಭತ್ತನಾಳ, ಚಿಕ್ಕಮ್ಮ ಸಿದ್ದಮ್ಮ ಬತ್ತನಾಳ ಇವರು ಗಳ ಬಂದು ನನ್ನದೇನಾದರು ತಪ್ಪು ಇದ್ದರೆ ಹೈದ್ರಿ ಖಾಜಾ ದರ್ಗಾಕ್ಕೆ ಹೋಗಿ ಪ್ರಮಾಣ ಮಾಡು ತ್ತೇನೆ ಇಲ್ಲದಿದ್ದರೇ ನೀವು ಮಾಡಿರಿ ಅಂತಾ ಹೇಳಿದಾಗ ನಡೆಯಿರಿ ಎಂದು ಅಲ್ಲಿಗೆ ನಾನು ಹಾಗೂ ನನ್ನ ತಂದೆ ತಾಯಿಯೊಂದಿಗೆ ಬಂದವರು ನನ್ನ ಗಂಡ, ಅತ್ತೆ, ಮಾವ ರವರೊಂದಿಗೆ ಹೋಗಿ ಅಲ್ಲಿ ನನ್ನದು ಯಾವುದೇ ದೋಷ ಇರುವುದಿಲ್ಲಾ ಅಂತಾ ಪ್ರಮಾಣ ಮಾಡಿ ದಾಗ 15 ದಿವಸ ಸರಿ ಇಟ್ಟುಕೊಂಡು ಮತ್ತೆ ನನಗೆ ನಮ್ಮ ಮಾವ ನನ್ನ ಮಗನಿಗೆ ಇನ್ನೊಂದು ಮದುವೆ ಮಾಡುತ್ತೇನೆ ಬೇಕಾದಷ್ಟು ವರದಕ್ಷಿಣೆ ಕೊಡುತ್ತಾರೆ ನೀನು ಹೋಗು ರಂಡಿ ಅಂತಾ ಬೈದು ಇಲ್ಲಿದ್ದರಿ ಜೀವ ಹೊಡೆಯುತ್ತೇವೆ ಅಂತಾ ನನ್ನ ಅಂತಾ ಭಯ ಹಾಕುತ್ತಿದ್ದು, ನಿಮ್ಮ ತಂದೆ ಹೊಲ ಮಾರಿದ್ದಾರೆ ಎರಡು ಲಕ್ಷ ರೂಪಾಯಿ 10 ತೋಲಿ ಬಂಗಾರ ನನಗೆ ಕೊಟ್ಟರೇ ಸರಿ, ಇಲ್ಲದಿದ್ದರೇ ನಿನಗೆ ಡೈವೂರ್ಸ ಮಾಡುತ್ತೇನೆ ಅಂತಾ ಕಿರುಕುಳ ನೀಡುತ್ತಿದ್ದಾಗ ನಮ್ಮ ತಂದೆಯವರು ಈವಾಗಲೇ ಬೇಕಾದಷ್ಟು ಖರ್ಚು ಮಾಡಿದ್ದಾರೆ ಅವರು ಎಲ್ಲಿಂದ ತರಬೇಕು ಅಂತಾ ಅಂದಿದ್ದಕ್ಕೆ ಮೂರು ಜನರು ನನಗೆ ಹೊಡೆ ಬಡೆ ಮಾಡಿ, ದಿನಾಂಕ 15/10/2017 ರಂದು  ರಾತ್ರಿ ನನ್ನ ಗಂಡನು ನನ್ನ ಎದೆಯ ಮೇಲೆ ಕುಳಿತು ಕುತ್ತಿಗೆ ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ. ನಂತರ ನಾನು ದೀಪಾಳಿ ಹಬ್ಬಕ್ಕೆ ತವರೂ ಮನೆಗೆ ಬಂದಾಗ ಈ ವಿಷಯ ನನ್ನ ತಂದೆ ತಾಯಿಗೆ ಹಬ್ಬಕ್ಕೆ ಬಂದಾಗ ತಿಳಿಸಿರುತ್ತೇನೆ. ಕಾರಣ ನನ್ನ ಗಂಡ, ಅತ್ತೆ, ಮಾವ ರವರುಗಳು ವರದಕ್ಷಿಣೆ ತರುವಂತೆ ಹೊಡೆಬಡೆ ಮಾಡಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ ಜೀವ ಭಯ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನೆಲೋಗಿ ಠಾಣೆ : ಶ್ರೀ ಶಿವಶರಣ ಹಡಪದ ಇವರಿಗು  ನಮ್ಮ ಅಣ್ಣತಮ್ಮಕಿಯ ಶ್ರೀಮಂತ ಹಡಪದ ಇವರಿಗೂ ಬಾಂದಾರಿಯ ಬಗ್ಗೆ ನೀರಿನ ಬಗ್ಗೆ ತಕರಾರು ಇದ್ದು ಆಗಾಗ ನಮ್ಮ ಸಂಗಡ ಜಗಳ ಮಾಡುತ್ತಾ ಬಂದಿರುತ್ತಾರೆ. ನಿನ್ನೆ ದಿನಾ ನಮ್ಮ ಭಾವಿಯ ನೀರು ಬೇರೆಯವರಿಗೆ ಕೋಟ್ಟಿದ್ದು ಇಂದು ದಿನಾಂಕ:16/11/2017 ರಂದು 8:00 ಎ.ಎಂಕ್ಕೆ ನಾನು ನನ್ನ ಮನೆಯ ಮುಂದೆ ಕುಳಿತ್ತಿದ್ದೆ ಆಗ ಶ್ರೀಮಂತನು ನಮ್ಮ ಮನೆಯ ಹತ್ತಿರ ಬಂದಾಗ ನೀನು ಭಾವಿ ನೀರು ಬೇರೆಯವರಿಗೆ ಕೊಟ್ಟಿದ್ದಿ ನಾವು ಏನು ಮಾಡಬೇಕು ಅಂತ ಅಂದೇ ಆಗ ಅವನು ನನ್ನ ಪಾಲಿನ ನೀರು ಯಾರಿಗಾದರೂ ಕೋಡುತ್ತೇನೆ ನೀನು ಯಾವ ಕೇಳವಾ ಅಂದು ತನ್ನ ಕಾಲಲ್ಲಿಯ ಚಪ್ಪಲ ತಗೆದುಕೊಂಡು ನನ್ನ ಹಣೆಯ ಮೇಲೆ ಹೋಡೆದನು ಆಗ ಭಾಗಮ್ಮಾ ಗಂಡ ಶ್ರೀಮಂತ, ಶಿವಯೋಗಪ್ಪ ತಂದೆ ದತ್ತಪ್ಪ, ಈರಪ್ಪ ತಂದೆ ದತ್ತಪ್ಪ, ಭಾಗಪ್ಪ ತಂದೆ ದತ್ತಪ್ಪ ಇವರು ಕೈಯಲ್ಲಿ ಬಡಿಗೆ ಹಿಡಿದುಕೊಂಡು ಬಂದು ಭೋಸಡಿ ಮಗನೆ ನಮ್ಮ ನೀರು ಕೇಳವಾ ಯಾರು ಅಂದವರೇ ಶಿವಯೋಗಪ್ಪನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಬೇನ್ನ ಮೇಲೆ ಹೋಡೆದನು ಆಗ ನನ್ನ ಹೆಂಡತಿ ಸಾಂಬಾಯಿ ಇವಳು ಜಗಳ ಬಿಡಿಸಲು ಬಂದಳು ಆಗ ಅವಳಿಗೆ ಭಾಗಮ್ಮಾ ಇವಳು ಕೈಮುಷ್ಠಿ ಮಾಡಿ ಕೈಯಿಂದ ಬಾಯಿ ಮೇಲೆ ಹೋಡೆದಳು ಆಗ ಕೆಳಗಿನ ಎರಡು ಹಲ್ಲುಗಳು ಮುರಿದು ಬಿದ್ದವು ಆಗ ಶಿವಯೋಗಪ್ಪ ಈರಪ್ಪ ಭಾಗಪ್ಪ ಇವರು ನೀಮಗೆ ಇಷ್ಟಕ್ಕೆ ಬಿಡುವದಿಲ್ಲಾ ಇನ್ನೋಮ್ಮೆ ಹೋಲಕ್ಕೆ ಬಂದರೆ ನಿಮಗೆ ಖಲಾಸ ಮಾಡಿ ಬಿಡುತ್ತೇವೆ ಅಂತ ಜೀವ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಜೈನೊದಿನ್ ಪಟೇಲ ತಂದೆ ಮೀರಾ ಪಟೇಲ ಸಾ: ಅಂಬೆವಾಡ ತಾ: ಆಳಂದ ಜಿ: ಕಲಬುರಗಿ ಹಾ:ವ: ಮದೀನಾ ಕಾಲೋನಿ ಶಹಾ ಜೀಲಾನ ದರ್ಗಾ ಹತ್ತಿರ ಕಲಬುರಗಿ ಇವರ ಮಗನಾದ ದಾದಾ ಪಟೇಲ ಇತನು ಕಲಬುರಗಿ ನಗರದ ಮದೀನಾ ಕಾಲೋನಿ ಶಹಾ ಜೀಲಾನ ದರ್ಗಾ ಹತ್ತಿರ ಸ್ವಂತ ಮನೆ ಮಾಡಿಕೊಂಡು ಉಳಿದಿದ್ದು. ನನ್ನ ಮಗ ದಾದಾ ಪಟೇಲ ಇತನು ಸೌದಿ ದೇಶಕ್ಕೆ ಹೋಗಿದ್ದು ಅವನ ಹೆಂಡತಿಯಾದ ಸಕೀನಾ ಪಟೇಲ ಇವಳು ರಾಜಕಾರಣದಲ್ಲಿ ಒಡಾಡುತ್ತಾ ಬಂದಿದ್ದು ಇರುತ್ತದೆ. ನಾನು ಆಗಾ ನನ್ನ ಸೊಸೆಯ ಹತ್ತಿರ ಮದೀನಾ ಕಾಲೋನಿಯಲ್ಲಿ ಉಳಿದುಕೊಳ್ಳುತ್ತಾ ಬಂದಿದ್ದು ಇರುತ್ತದೆ. ಅದರಂತೆ ಈಗ ಕೆಲವು ದಿವಸಗಳ ಹಿಂದೆ ಸಕೀನಾ ಪಟೇಲ ಇವಳ ಮಗಳಾದ ಸುಮೇರಾ ಇವಳಿಗೆ ಆರಾಮ ಇಲ್ಲದಕ್ಕೆ ಅವಳಿಗೆ ಉಪಚಾರ ಕೊಡಿಸಿದ್ದು ಅವಳನ್ನು ನೋಡಿಕೊಳ್ಳು ನಾನು ಕಲಬುರಗಿಗೆ ಬಂದಿದ್ದು ಇರುತ್ತದೆ. ಈಗ ಸುಮಾರು ಒಂದು ತಿಂಗಳ ಹಿಂದ ಸುಮೇರಾ ಇವಳಿಗೆ ಆರಾಮ ಇಲ್ಲದಕ್ಕೆ ಸಕೀನಾ ಇವಳು ಸುಮೇರಾ ಇವಳನ್ನು ಕರೆದುಕೊಂಡು ಉಪಚಾರ ಕುರಿತು ಬೆಂಗಳೂರಕ್ಕೆ ಕರೆದುಕೊಂಡು ಹೋಗಿ ಉಪಚಾರ ಕುರಿತು ಆಸ್ಪತ್ರೇಯಲ್ಲಿ ಸೇರಿಕೆ ಮಾಡಿದ್ದು ಇರುತ್ತದೆ. ಈಗ 15-20 ದಿವಸಗಳ ಹಿಂದೆ ನಮ್ಮ ಗ್ರಾಮದಲ್ಲಿ ಕೆಲಸ ಇದ್ದ ಪ್ರಯುಕ್ತ ಕಲಬುರಗಿಯಲ್ಲಿದ್ದ ಸಕೀನಾಳ ಮನೆಗೆ ಕೀಲಿ ಹಾಕಿಕೊಂಡು ನಾನು ಕಲಬುರಗಿಯಿಂದ ಅಂಬೇವಾಡಕ್ಕೆ ಹೋಗಿದ್ದು ನಂತರ ಬಾಂಬೆಯಲ್ಲಿ ಇರುವ ನಮ್ಮ ಸಂಬಂದಿಕರಿಗೆ ಆರಾಮ ಇಲ್ಲ ಅಂತ ಗೊತ್ತಾಗಿ ನಾನು ಬಾಂಬೆಕ್ಕೆ ಹೋಗಿದ್ದು ಇರುತ್ತದೆ. ಮೊನ್ನೆ ದಿನಾಂಕ 14.11.2017 ರಂದು ನನ್ನ ಸೊಸೆ ಸಕೀನಾ ಇವಳು ನನಗೆ ಪೋನ ಮಾಡಿ ವಿಷಯ ತಿಳಿಸಿದ್ದೆನೆಂದರೆ ಕಲಬುರಗಿಯಲ್ಲಿರು ತನ್ನ ಮನೆ ಕಳ್ಳತನವಾಗಿದೆ ಅಂತ ಮನೆ ಪಕ್ಕದವನು ಪೋನ ಮಾಡಿ ತಿಳಿಸಿದ್ದಾರೆ ಕಲಬುರಗಿಗೆ ಹೋಗಿ ಮನೆ ನೋಡಲು ತಿಳಿಸಿದ್ದು. ಮತ್ತು ಮನೆಯಲ್ಲಿ ಬಂಗಾರ ಮತ್ತು ಹಣ ಇಟ್ಟಿದ್ದು ಕಳ್ಳತನವಾಗಿದೆ ಹೇಗೆ ಎಂದು ನೋಡಲು ಹೇಳಿದ್ದು ಅದರಂತೆ ನಾನು ಬಾಂಬೆಯಿಂದ ನಿನ್ನೆ ದಿನಾಂಕ 15.11.2017 ರಂದು ರಾತ್ರಿ ಕಲಬುರಗಿಗೆ ಬಂದು ಮನೆಗೆ ಹೋಗಿ ನೋಡಲು ಮನೆಯ ಬಾಗಿಲು ತೆರೆದಿದ್ದು, ಮನೆಯಲ್ಲಿ ಸಾಮಾನುಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು. ಮನೆಯಲ್ಲಿ ಯಾವುದೆ ಬಂಗಾರ ಮತ್ತು ಹಣ ಇದ್ದಿರುವದಿಲ್ಲ ನಂತರ ನಾನು ಸಕೀನಾ ಪಟೇಲ ಇವಳಿಗೆ ಪೋನ ಮಾಡಿದ್ದು ಪೋನನಲ್ಲಿ ಯಾವುದೆ ಮಾಹಿತಿ ಸರಿಯಾಗಿ ತಿಳಿಸಿರುವದಿಲ್ಲ. ಸದರಿಯವಳ ಮನೆಯಲ್ಲಿದ್ದ ಬಂಗಾರ ಮತ್ತು ಹಣ ಕಳ್ಳತನ ವಾಗಿದ್ದು ಇರುತ್ತದೆ. ಎಷ್ಟು ಬಂಗಾರ ಮತ್ತು ಹಣ ಕಳ್ಳತನವಾಗಿದೆ ಎನ್ನುವ ಬಗ್ಗೆ ಸಧ್ಯ ನನಗೆ ಗೊತ್ತಾಗುತ್ತಿಲ್ಲ. ಸುಮಾರು 20 ದಿವಸಗಳಿಂದ ನಿನ್ನೆ ದಿನಾಂಕ 14.11.2017 ರ ಮಧ್ಯದಲ್ಲಿ ಯಾರೊ ಕಳ್ಳರು ನನ್ನ ಸೊಸೆ ಸಕೀನಾ ಪಟೇಲ ಇವರ ಮನೆಗೆ ಪ್ರವೇಶ ಮಾಡಿ ಅವಳ ಮನೆಯಲ್ಲಿದ್ದ ಹಣ ಮತ್ತು ಬಂಗಾರ ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ದಯಾನಂದ ತಂದೆ ದೇವಿಂದ್ರಪ್ಪ ಗೌಳಿ ಸಾ: ಸಮತಾ ಕಾಲೊನಿ ಕಲಬುರಗಿ ಇವರು ದಿನಾಂಕ 13.11.2017 ರಂದು ರಾತ್ರಿ 10 ಗಂಟೆಯ ಸುಮಾರಿಗೆ ನಾನು ನನ್ನ ಕೆಲಸ ಸಂಬಂದ ಖಾದ್ರಿ ಚೌಕ ಹತ್ತಿರ ಹೋಗಿದ್ದು ಅಲ್ಲಿ ನನ್ನ ಗೆಳೆಯನಾದ ಉಮೇಶ ಮತ್ತು ಚನ್ನಮಲ್ಲಪ್ಪ ಯಂಪಳ್ಳಿ ಇವರು ಇದ್ದು ಅವರ ಸಂಗಡ ಮಾತನಾಡಿ ನಂತರು ನಾನು ಅವರಿಗೆ ಜೆ. ಆರ್ ನಗರದಲ್ಲಿ ಬಿಟ್ಟು ಬರುವ ಸಂಬಂದ ನಾನು ನನ್ನ ಮೋಟಾರ ಸೈಕಲ ಮೇಲೆ ಇಬ್ಬರಿಗು ಕೂಡಿಸೊಂಡು ರಾತ್ರಿ 11:00 ಗಂಟೆಯ ಸುಮಾರಿಗೆ ಜೆ.ಆರ್. ನಗರದ ಹನುಮಾನ ದೇವರ ಗುಡಿಯ ಹತ್ತಿರ ಹೋಗಿ ನನ್ನ ಮೊಟಾರ ಸೈಕಲನ್ನು ಹನುಮಾನ ಗುಡಿಯ ಹತ್ತಿರ ನಿಲ್ಲಿಸಿ ನಾನು ಅವರು ಕೂಡಿಕೊಂಡು ಅವರ ಮನೆಗೆ ಹೋಗಿ ಸ್ವಲ್ಪ ಸಮಯದ ನಂತರ ಅಂದರೆ ರಾತ್ರಿ 11:30 ಗಂಟೆಯ ಸುಮಾರಿಗೆ ಹನುಮಾನ ದೇವರ ಗುಡಿಯ ಹತ್ತಿರ ಬಂದು ನೋಡಲು ನನ್ನ ಮೋಟಾರ ಸೈಕಲ ಇರಲಿಲ್ಲ ಎಲ್ಲಾ ಕಡೆಗೆ ಹುಡುಕಾಡಿದ್ದು ನನ್ನ ಮೋಟಾರ ಸೈಕಲ ಪತ್ತೆಯಾಗಿರುವದಿಲ್ಲ ಸದರಿ ನನ್ನ ಮೋಟಾರ ಸೈಕಲ ಟ್ಯಾಂಕಿನ ಕವರದಲ್ಲಿ ನನ್ನ ಶಾಮಸಂಗ ಮೊಬೈಲ ಸಿಮ್ ನಂ 9880823653 ನೇದ್ದು ಮತ್ತು ನಗದು ಹಣ 3 ಸಾವೀರ ರೂಪಾಯಿ ಇಟ್ಟಿದ್ದು ಯಾರೊ ಕಳ್ಳರು ನನ್ನ ಮೋಟಾರ ಸೈಕಲ ನಂ ಕೆಎ 32 ಎಸ್.0370 ನೇದ್ದು ಅ:ಕಿ: 25,000/-ರೂ ಮತ್ತು ಶಾಮಸಂಗ ಮೊಬೈಲ ಅ:ಕಿ: 500/- ರೂ ಮತ್ತು 3 ಸಾವೀರ ರೂಪಾಯಿ ನಗದು ಹಣ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣು ಮಗಳು ಕಾಣೆಯಾದ ಪ್ರಕರಣ :
ಫರತಾಬಾದ ಠಾಣೆ : ಶ್ರೀಮತಿ ಜಗದೇವಿ  ಗಂಡ ನಾಗೇಂದ್ರಪ್ಪಾ ಸಂಕುನ ಸಾ: ಮೇಳಕುಂದಾ (ಬಿ) ತಾ: ಜಿ: ಕಲಬುರಗಿ ಇವರ ಮಗಳಾದ ಶಶಿಕಲಾ ಇವಳಿಗೆ 5 ವರ್ಷದ  ಹಿಂದೆ ಮಾಡ್ಯಾಳ ಗ್ರಾಮದ ಜಗನ್ನಾಥ ತಂದೆ ಪಂಚಪ್ಪ ಮುಂದಿನಕೇರಿ ಈತನೊಂದಿಗೆ ಮದುವೆ ಮಾಡಿಕೊಟ್ಟಿದ್ದು ಇದೆ. ಇನ್ನೂ ಮಕ್ಕಳಾಗಿರುವುದಿಲ್ಲಾ. ಹೀಗಿದ್ದು ದಿನಾಂಕ 24/10/2017 ರಂದು ನಮ್ಮೂರಾದ ಮೇಳ ಕುಂದಾ(ಬಿ) ಗ್ರಾಮದ ಸಿದ್ದೇಶ್ವರ ದೀಪೋತ್ಸ್‌ ವ ಕಾರ್ಯಕ್ರಮ ಹಾಗೂ ಜಾತ್ರೆ ಪ್ರಯುಕ್ತ ಮಗಳಾದ ಶಶಿಕಲಾ ಇವಳಿಗೆ ನಾನು ಮಾಡ್ಯಾಳದಿಂದ  ನಮ್ಮೂರಿಗೆ  ಕರೆದುಕೊಂಡು ಬಂದಿರುತ್ತೇನೆ. ಮದ್ಯಾಹ್ನ 2 ಗಂಟೆಗೆ ಮನೆಗೆ ಬಂದು ನಮ್ಮ ತಂಗಿಯ ಮನೆಯಾದ ಶಾಮಬಾಯಿ ಗಂಡ ಶರಣಪ್ಪ ಕ್ಯಾಸನ್‌  ರವರ ಮನೆಯಲ್ಲಿ  ಊಟ ಮಾಡಿ ಮನೆಗೆ ಬಂದಳು ನಂತರ ರಾತ್ರಿ 10-00 ಗಂಟೆ ಸುಮಾರಿಗೆ  ಮನೆಯಿಂದ ದೀಪೊತ್ಸ್‌ವ  ಕಾರ್ಯಕ್ರಮ ನೋಡಲು ಹೋಗಿ ಮರಳ ಮನೆಗೆ ಬಂದಿರುವುದಿಲ್ಲಾ ರಾತ್ರಿ ವೇಳೆ ಮತ್ತು ದಿನಾಂಕ 25/10/17 ರಂದು ಎಲ್ಲಾ ಕಡೆಗೆ ಹುಡುಕಾಡಿದರು ಅವಳ ಸುಳಿವು ಸಿಕ್ಕಿಲ್ಲಾ  ಆಕೆಯ ಹತ್ತಿರ ಇದ್ದ ಮೋಬೈಲದ ಸಂಖ್ಯೆ 7760852372 ನೇದ್ದರಿಂದ  ನಮ್ಮ ಮನೆಯಲ್ಲಿದ ಮೋಬಾಯಿಲ ನಂಬರ 9902201320 ನೇದ್ದಕ್ಕೆ  ಕರೆ ಮಾಡಿ  ನಾನು ಬೆಂಗಳೂರಿನಲ್ಲಿದೆನೆಂದು  ಹೇಳಿ ನನಗೆ  ಹುಡುಕ ಬೇಡಿರಿ ಎಂದು ಹೇಳಿ ಸ್ವೀಚ್‌ ಆಪ್‌ ಮಾಡಿರುತ್ತಾಳೆ ನಾವು ಎಲ್ಲರೂ  ಎಲ್ಲಾ ಕಡೆ ಹುಡುಕಾಡಿ ಬೆಂಗಳೂರಿಗೆ ಹೋಗಿ ಈ ಮೊದಲು ಆಕೆ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ  ಹೋಗಿ ವಿಚಾರಿಸಿದರು ನನ್ನ ಮಗಳ ಪತ್ತೆಯಾಗಿಲ್ಲ ಸದರಿ ನನ್ನ ಮಗಳ ಚಹರಾ ಪಟ್ಟಿ ಈ ರೀತಿ ಇರುತ್ತದೆ.  ಕೋಲು ಮುಖ, ಸಾದಾ ಗೋಧಿ ಬಣ್ಣ, ವ: 21 ವರ್ಷ ಎತ್ತರ 5 ಪೀಟ ಸದೃಡ ಶರೀರ, 5 ನೇ ತರಗತಿವರೆಗೆ ವಿದ್ಯಾ ಬ್ಯಾಸ ಮಾಡಿದ್ದು, ಕನ್ನಡ, ಹಿಂದಿ ಮಾತಾಡುತ್ತಾಳೆ ನೀಲಿ ಹಸಿರು ಹೂವುಳ್ಳ ನೈಟಿ ಹಾಕಿದ್ದು. ಕಪ್ಪು ಬಣ್ಣದ ಶರ್ಟ ಧರಿಸಿರುತ್ತಾಳೆ ಕಪ್ಪು ಕೂದಲು ಹೊಂದಿದ್ದು ಇದೆ ಕಾರಣ ಸದರಿ ನನ್ನ ಮಗಳು ಕಾಣೆಯಾಗಿದ್ದು ಪತ್ತೆ ಮಾಡಿ ಕೊಡಬೇಕೆಂದು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ