POLICE BHAVAN KALABURAGI

POLICE BHAVAN KALABURAGI

14 November 2017

KALABURAGI DISTRICT REPORTED CRIMES

ಅಪಹರಣ ಪ್ರಕರಣ :
ಜೇವರಗಿ ಠಾಣೆ : ಶ್ರೀ ಕಾಶಿನಾಥ ತಂದೆ ನರಸಪ್ಪ ಜೇವರ್ಗಿ ಸಾಃ ಮಾಡಿಯಾಳ, ತಾಃ ಆಳಂದ ರವರು ಪ್ರತಿ ವರ್ಷ ನಾನು ನನ್ನ ಕುಟುಂಬದ ಉಪಜೀವನಕ್ಕಾಗಿ ಮಹಾರಾಷ್ಟ್ರದ ಕಪೊಲಿಗೆ ಹೋಗಿ ಇಟ್ಟಂಗಿ ಭಟ್ಟಿಯಲ್ಲಿ ಇಟ್ಟಂಗಿ ಭಟ್ಟಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇನೆ. ಸುಮಾರು 2 ವರ್ಷಗಳ ಹಿಂದೆ ಕಪೊಲಿಯಲ್ಲಿ ನಿರಗುಡಿ ಗ್ರಾಮದ ನಮ್ಮದೆ ಜಾತಿಯ ಧನರಾಜ ತಂದೆ ಕಾಶಿನಾಥ ಕಾಂಬಳೆ, ಸೀತಾರಾಮ ತಂದೆ ಕಾಶಿನಾಥ ಕಾಂಬಳೆ ಸಹೋದರರು ಅದೇ ಇಟ್ಟಂಗಿ ಭಟ್ಟಿಯಲ್ಲಿ ನನಗೆ ಪರಿಚಯವಾಗಿರುತ್ತಾರೆ. ನಮಗೂ ಮತ್ತು ಅವರಿಗೂ ಒಳ್ಳೆಯ ಸ್ನೇಹ ಬೆಳೆದು ಹೋದ ವರ್ಷ ಭಟ್ಟಿ ಮಾಲೀಕನಿಂದ ಮುಂಗಡ ಹಣ ತಮ್ಮ ಮುಖಾಂತರ ನನಗೆ ಕೊಡಿಸಿರುತ್ತಾರೆ. ಹೀಗಾಗಿ ಮುಂಗಡ ಹಣ ಪಡೆದ ನಾನು ಈ ವರ್ಷ ನನ್ನ ಕುಟುಂಬದೊಂದಿಗೆ ಕಪೊಲಿಗೆ ಹೋಗಿ ಇಟ್ಟಂಗಿ ಕೆಲಸ ಮಾಡಿರುತ್ತೇನೆ. ಕಪೊಲಿಯಲ್ಲಿ ಕೆಲಸ ನಿರ್ವಹಿಸುತ್ತಾ ನನ್ನ ಕುಟುಂಬ ನಿರ್ವಹಣೆಗೆ ಹಣದ ಅವಶ್ಯಕತೆ ಇದ್ದಾಗ ಮಾಲೀಕರಿಗೆ ಹಣ ಕೇಳಲು ಹೋದಾಗ ಭಟ್ಟಿ ಮಾಲೀಕನು ಯಾವುದೇ ಹಣ ಕೊಟ್ಟಿರುವದಿಲ್ಲ, ಇದರ ಬಗ್ಗೆ ನನ್ನ ಗೆಳೆಯರಾದ ಧನರಾಜ ಮತ್ತು ಸೀರಾರಾಮ ಇಬ್ಬರಿಗೆ ವಿಚಾರಿಸಲಾಗಿ ಅವರು ಕೂಡ ಯಾವುದೆ ಲೆಕ್ಕ ಪತ್ರ ವಗೈರೆ ಮಾಡಿರುವದಿಲ್ಲ. ನನಗೆ ಹಣದ ಅಡಚಣೆಯಾಗಿ ಕುಟುಂಬ ನಿರ್ವಹಣೆಗೆ ತೊಂದರೆ ಆಗಿದ್ದರಿಂದ ನಾನು ಬೇಸತ್ತು ಇನ್ನು ಒಂದು ತಿಂಗಳು ಕೆಲಸ ಬಾಕಿ ಇರುವಾಗಲೆ ನನ್ನ ಕುಟುಂಬ ಸಮೇತ ಊರಿಗೆ ಬಂದಿರುತ್ತೇನೆ. ಆ ನಂತರ ಧನರಾಜ ಮತ್ತು ಸೀತಾರಾಮ ಇಬ್ಬರೂ ನನಗೆ ಫೋನ ಮುಖಾಂತರ ನಿನ್ನಿಂದ ಇನ್ನು ನಮಗೆ ಹಣ ಬರುವದು ಬಾಕಿ ಇದೆ ಅಂತ ವಿಚಾರಿಸಿದ್ದು ಅದಕ್ಕೆ ನಾನು ಲೆಕ್ಕಾ ಪತ್ರ ಮಾಡಿ ನಾನು ಕೊಡಬೇಕಾದರೆ ಹಣ ನಿಮಗೆ ಮರಳಿಸುತ್ತೇನೆ ಇಲ್ಲವಾದಲ್ಲಿ ಇಲ್ಲ ಅಂತ ತಿಳಿಸಿದ್ದು ಅದಕ್ಕೆ ಅವರು ಇಲ್ಲಿಯತನಕ ಯಾವುದೇ ಲೆಕ್ಕ ಪತ್ರ ಮಾಡದೆ ಧನರಾಜ ತಂದೆ ಕಾಶಿನಾಥ ಕಾಂಬಳೆ, ಸೀತಾರಾಮ ತಂದೆ ಕಾಶಿನಾಥ ಕಾಂಬಳೆ ಇಬ್ಬರೂ ದಿನಾಂಕ 11/11/2017 ರಂದು ರಾತ್ರಿ 10.00 ಪಿ.ಎಮ ನಂತರ ನಮ್ಮೂರಿನ ಬಾಲಕರ ವಸತಿ ನಿಲಯದಲ್ಲಿ ಇದ್ದ ನನ್ನ ಅಪ್ರಾಪ್ತ ವಯಸ್ಸಿನ ಮಗನಾದ ಕುಮಾರ ತಂದೆ ಕಾಶಿನಾಥ ಜೇವರ್ಗಿ ವಃ 16 ವರ್ಷ, ಇತನಿಗೆ ಏನೊ ಪುಸಲಾಯಿಸಿ ಯಾವುದೊ ಒಂದು ವಾಹನದಲ್ಲಿ ಕೂಡಿಸಿಕೊಂಡು ಅಪಹರಣ ಮಾಡಿಕೊಂಡು ಮಹಾರಾಷ್ಟ್ರ ರಾಜ್ಯಕ್ಕೆ ಕರೆದುಕೊಂಡು ಹೋಗಿರುತ್ತಾರೆ. ಈ ವಿಚಾರ ನನಗೆ ದಿನಾಂಕ 12/11/2017ರಂದು ಬೆಳಿಗ್ಗೆ ಅವರೆ ಫೊನ ಮುಖಾಂತರ ತಿಳಿಸಿದ್ದೇನೆಂದರೆ ನಿನ್ನಿಂದ ಇನ್ನು ಒಂದು ಲಕ್ಷ ಹಣ ಬರುವದು ಬಾಕಿ ಇದ್ದು ಆ ಹಣ ಕೊಟ್ಟು ನಿನ್ನ ಮಗನಿಗೆ ಬಿಡಿಸಿಕೊಂಡು ಹೋಗು ಅಂತ ತಿಳಿಸಿರುತ್ತಾರೆ. ಕಾರಣ ದಿನಾಂಕ 11/11/2017 ರಂದು ರಾತ್ರಿ 10.00 ಪಿ.ಎಮ ನಂತರದ ವೇಳೆಯಲ್ಲಿ ಮಾಡಿಯಾಳ ಗ್ರಾಮದ ಬಾಲಕರ ವಸತಿ ನಿಲಯದಲ್ಲಿ ಇದ್ದ ನನ್ನ ಅಪ್ರಾಪ್ತ ವಯಸ್ಸಿನ ಮಗನಾದ ಕುಮಾರನಿಗೆ ಏನೊ ಸುಳ್ಳು ಹೇಳಿ ಪುಸಲಾಯಿಸಿ ಅಪಹರಣ ಮಾಡಿಕೊಂಡು ಹೋದ ಧನರಾಜ ಮತ್ತು ಸೀತಾರಾಮ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ನನ್ನ ಮಗನನ್ನು ನನಗೆ ಮರಳಿಸಿ ಕೊಡಲು ವಿನಂತಿ ಅದೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಹಣಮಂತ ತಂದೆ ಭೀಮರಾಯ ಸಾ: ಮಡ್ಡಿ ನಂಬರ 01 ಶಹಾಬಾದ ಇವರು ದಿನಾಂಕ: 12/11/2017 ರಂದು ಮುಂಜಾನೆ ತಮ್ಮ ಟಿ.ವಿ.ಎಸ್ ಎಕ್ಸಲ್ ಮೋಟಾರ ಸೈಕಲ ನಂಬರ ಕೆ.ಎ 32 ಇ ಎಮ್ 9557 ನೇದ್ದರ ಮೇಲೆ ನಾನು ಮತ್ತು ನನ್ನ ಹಿಂದುಗಡೆ ಗಳೆಯನಾದ ವಾಸು ತಂದೆ ಸುಬ್ರಮಣ್ಯಂ ಇಬ್ಬರು ಕೂಡಿಕೊಂಡು ಅಲಸ್ಟಾಮ ಕಾಲೋನಿಗೆ ಹಾಲು ಮಾರಲು ಮಡ್ಡಿ ನಂಬರ 01 ನಿಂದ ಅಲಸ್ಟಾಮ ಕಾಲೋನಿಗೆ ಹೋಗುತ್ತಿದ್ದಾಗ ಅಲಸ್ಟಾಮ ಕಾಲೋನಿಯ ಕ್ರಾಸ ಹತ್ತಿರ ರೋಡಿನಲ್ಲಿ ಭಂಕೂರ ಕಡೆಯಿಂದ ಕಾರ ನಂಬರ ಕೆ.ಎ. 32 ಎನ್ 1520 ನೇದ್ದರ ಚಾಲಕನ್ನು ತನ್ನ ಕಾರ ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಾವು ಅಲಸ್ಠಾಮ ಕಾಲೋನಿಯ ಒಳಗೆ ಹೋಗಲು ತಿರುವು ತೆಗೆದುಕೊಳ್ಳೂತ್ತಿದ್ದಾಗ ನಮ್ಮ ಮೋಟಾರ ಸೈಕಲ ಡಿಕ್ಕಿಪಡಿಸಿದರಿಂದ ಮೋಟಾರ ಸೈಕಲ ಸಮೇತ ಕೆಳಗೆ ಬಿದ್ದು ನನಗೆ ಮುಖದ ಮೇಲೆ ಬಲ ಮೆಲಕಿನ ಹತ್ತಿರ ಮತ್ತು ಎರಡು ಮೊಳಕಾಲಿಗೆ ರಕ್ತಗಾಯಾವಾಗಿ ಕೈಗಳಿಗೆ ಅಲ್ಲಲ್ಲಿ ತರಚಿದಂತಾಗಿರುತ್ತದೆ ಮತ್ತು ವಾಸು ಇತನಿಗೆ ನೋಡಲಾಗಿ ಎಡಗಾಲ ತೊಡೆಯ ಹತ್ತಿರ ಮತ್ತು ಮೊಳಕಾಲಿನಗೆ ಭಾರಿ ಗಾಯ ಪೆಟ್ಟಾಗಿದ್ದು ಹಾಗೂ ಎರಡು ಕೈಗಳು ಮುಂಗೈಗೆ ತರಚಿದ ರಕ್ತಗಾಯಾವಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಸ್ವಾಭಾವಿಕ ಸಾವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಮಲ್ಲಿನಾಥ ತಂದೆ ಸಂಗಣ್ಣ ಮುರುಡ ಮು|| ಬೆಳಮಗಿ ಇವರಿಗೆ ಜ್ಞಾನರಾಜ ಮತ್ತು ಶಂಭುಲಿಂಗ ಅಂತಾ ಇಬ್ಬರೂ ಗಂಡು ಮಕ್ಕಳಿದ್ದು ನಮ್ಮ ಅಣ್ಣನಾದ ಕಲ್ಯಾಣಿಯವರು ಕಲಬುರಗಿ ನಗರದ ಜೆ.ಆರ್‌ ನಗರದಲ್ಲಿ ಮನೆ ಮಾಡಿಕೊಂಡಿದ್ದು ನನ್ನ ಹಿರಿಯಮಗ ಜ್ಞಾನರಾಜ ಇತನು ನಮ್ಮ ಅಣ್ಣನ ಹತ್ತಿರ ಉಳಿದುಕೊಂಡು ಸಂತೋಷ ಕಾಲೋನಿಯಲ್ಲಿರುವ ಭೋಗೆಶ್ವರ ಫ್ರೌಡ ಶಾಲೆಯಲ್ಲಿ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಈ ಹಿಂದೆ ದಿನಾಂಕ:08/11/2017 ರಂದು ನನ್ನ ಮಗ ಶಾಲೆಗೆ ಹೋಗಿದ್ದು ಮಧ್ಯಾನ 3.30 ಗಂಟೆ ಸುಮಾರಿಗೆ 3ನೇ ಅಂತಸ್ತಿನಲ್ಲಿದ್ದ ಶಾಲೆಯಿಂದ ಕೆಳಗೆ ಬರುವ ಕುರಿತು ಸ್ಟೇರಕೆಸ ಮೇಲೆ ನಡೆದುಕೊಂಡು ಬರುತ್ತಿದ್ದಾಗ ಆಕಸ್ಮಿಕವಾಗಿ ಅವನ ಕಾಲು ಜಾರಿ ಸ್ಟೇರಕೇಸ ಮೇಲಿಂದ ಕಾಲುಜಾರಿ ಮೂರು ಅಂತಸ್ತಿನ ಕಟ್ಟಡದ ಮೇಲಿಂದ ಕೆಳಗೆ ಬಿದ್ದಿದ್ದು ಬಿದ್ದ ಪರಿಣಾಮ ನನ್ನ ಮಗನ ತಲೆಯ ಹಿಂದೆ ಭಾರಿ ರಕ್ತಗಾಯವಾಗಿದ್ದು ಮತ್ತು ಕುತ್ತಿಗೆಗೆ ಬಲಗಾಲ ಚಪ್ಪೆಗೆ ಭಾರಿ ಗುಪ್ತಗಾಯವಾಗಿದ್ದು ಇರುತ್ತದೆ. ನನ್ನ ಮಗನಿಗೆ ಉಪಚಾರ ಕುರಿತು ದಿನಾಂಕ:8/11/2017 ರಂದು ಯುನೈಟೆಡ್‌ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ. ಉಪಚಾರದಿಂದ ನನ್ನ ಮಗ ಜ್ವಾನರಾಜ ವ:16 ವರ್ಷ ಇತನು ಗುಣಮುಖ ಹೊಂದದೆ ಇಂದು ದಿನಾಂಕ:11/11/2017 ರಂದು ಯುನೈಟೆಡ್‌ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

11 November 2017

KALABURAGI DISTRICT REPORTED CRIMES

ದ್ವೀಚಕ್ರ ವಾಹನಗಳ ಕಳವು ಪ್ರಕರಣಗಳು :
ನೆಲೋಗಿ ಠಾಣೆ : ಶ್ರೀ ಸಂತೋಷ ತಂದೆ ಶಿವಶರಣಪ್ಪ ನೌಟಾಕ ಸಾ|| ಬಗಲೂರ ತಾ|| ಸಿಂದಗಿ ಜಿ|| ವಿಜಯಪೂರ ಇವರು ದಿನಾಂಕ: 09/11/2017 ರಂದು ಜೇರಟಗಿ ಗ್ರಾಮದಲ್ಲಿ ರೇವಣಾಸಿದ್ದೇಶ್ವರ ಜಾತ್ರೆ ಇದ್ದ ಪ್ರಯುಕ್ತ ನಮ್ಮ ಅಣ್ಣನಾದ ರಾಜಕುಮಾರ ಇವರ ಸೈಕಲ ಮೋಟರ ನಂ: KA28 EH 6042 ನೇದ್ದನ್ನು  ತಗೆದುಕೊಂಡು ನಾನು ನಮ್ಮ ಮಾಮಾ ಗುಪರಾಯ ಮುದ್ದಾ, ಕೂಡಿಕೊಂಡು ಜೇರಟಗಿಗೆ 2:00 ಪಿ.ಎಂಕ್ಕೆ ಬಂದು ಯು.ಕೆ.ಕ್ಯಾಂಪಿನಲ್ಲಿ ನಿಲ್ಲಿಸಿ ಜಾತ್ರೆ ನೋಡಲು ಹೋಗಿದ್ದೇವು, ನಂತರ ಜಾತ್ರೆ ಮುಗಿಸಿಕೊಂಡು ಸಾಯಂಕಾಲ 7:00 ಪಿ.ಎಂಕ್ಕೆ ಬಂದು ನೋಡಲಾಗಿ ನನ್ನ ಸೈಕಲ ಮೋಟರ ಇರಲಿಲ್ಲಾ. ಸೈಕಲ ಮೋಟರ ಅ||ಕಿ|| 30,000/- ರೂ ಆಗಬಹುದು ಯಾರೋ ಕಳ್ಳರು 2:00 ಪಿ.ಎಂ ದಿಂದ 7 :00 ಪಿ.ಎಂದ ಅವಧಿಯಲ್ಲಿ ಯು,ಕೆ.ಪಿ ಕ್ಯಾಂಪನಲ್ಲಿ ನಿಲ್ಲಿಸಿದ ನನ್ನ ಸೈಕಲ ಮೋಟರ ನಂ: KA28 EH 6042 ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಲೋಗಿ ಠಾಣೆ : ಶ್ರೀ ದೇವಪ್ಪ ತಂದೆ ಶಿವರಾಯ ಬಿರೆದಾರ ಸಾ|| ಗನಟಗಾ ತಾ|| ಜೇವರ್ಗಿ ಜಿ|| ಕಲಬುರಗಿ  ಇವರು ದಿನಾಂಕ: 09/11/2017 ರಂದು ಜೇರಟಗಿ ಗ್ರಾಮದಲ್ಲಿ ರೇವಣಾಸಿದ್ದೇಶ್ವರ ಜಾತ್ರೆ ಇದ್ದ ಪ್ರಯುಕ್ತ ನಾನು ನನ್ನ ಮಗನ ಹೆಸರಿನಲ್ಲಿರುವ ಸೈಕಲಮೋಟರ ನಂ: KA32 EC 5658 ನೇದ್ದು ತಗೆದುಕೊಂಡು ನಾನು ನನ್ನ ಹೆಂಡತಿ ಲಕ್ಷ್ಮಿಬಾಯಿ ಕೂಡಿಕೊಂಡು ಜೇರಟಗಿಗೆ 4:00 ಪಿ.ಎಂಕ್ಕೆ ಬಂದು ರಾಷ್ಟ್ರೀಯ ಹೇದ್ದಾರಿ 218 ಜೇರಟಗಿ ಬಸ ನಿಲ್ದಾಣದ ಹತ್ತಿರ ಇರುವ ದೇಸಾಯಿ ಇವರ ಅಂಗಡಿಯ ಮುಂದೆ ನನ್ನ ಸೈಕಲ ಮೋಟರ ನಿಲ್ಲಿಸಿ ಜಾತ್ರೆ ನೋಡಲು ಹೋಗಿದ್ದೇವು, ನಂತರ ಜಾತ್ರೆ ಮುಗಿಸಿಕೊಂಡು ಸಾಯಂಕಾಲ 7:00 ಪಿ.ಎಂಕ್ಕೆ ಬಂದು ನೋಡಲಾಗಿ ನನ್ನ ಸೈಕಲ ಮೋಟರ ಇರಲಿಲ್ಲಾ. ಸೈಕಲ ಮೋಟರ ಅ||ಕಿ|| 30,000/- ರೂ ಆಗಬಹುದು ಯಾರೋ ಕಳ್ಳರು 4:00 ಪಿ.ಎಂ ದಿಂದ 7 :00 ಪಿ.ಎಂದ ಅವಧಿಯಲ್ಲಿ ರಾಷ್ಟ್ರೀಯ ಹೇದ್ದಾರಿ 218 ಜೇರಟಗಿ ಬಸ ನಿಲ್ದಾಣದ ಹತ್ತಿರ ಇರುವ ದೇಸಾಯಿ ಇವರ ಅಂಗಡಿಯ ಮುಂದೆ ನಿಲ್ಲಿಸಿದ ನನ್ನ ಸೈಕಲ ಮೋಟರ ನಂ: KA32 EC 5658 ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಪ್ರಚೋದನೆ ಮಾಡಿದ ಪ್ರಕರಣ  :
ಜೇವರಗಿ ಠಾಣೆ : ಶ್ರೀ ಚಾಂದಪಾಶಾ ತಂದೆ ಖಾಜಾಲಾಲ್‌ ಜಮದಾರ ಸಾ: ಮಾರಡಗಿ ಗ್ರಾಮ ತಾ: ಜೇವರ್ಗಿ ಜಿ: ಕಲಬುರಗಿ ಇವರು 01) ಸಂಗಣ್ಣ ತಂದೆ ನಾಗಣ್ಣ ಸಾ: ಮಾರಡಗಿ ಗ್ರಾಮ 02) ದೇವಿಂದ್ರಪ್ಪಾ ತಂದೆ ನಾಗಣ್ಣ ಸಾ: ಮಾರಡಗಿ ಗ್ರಾಮ ತಾ; ಜೇವರ್ಗಿ ಇವರು ಫಿರ್ಯಾದಿ ಹೊಲದಲ್ಲಿ ಹಾದು ಹೋದ ಕ್ಯಾನಲ್‌ಗೆ ಅಡ್ಡವಾಗಿ ತಾಡಪತ್ರಿ ಕಟ್ಟಿ ಮುಂದಿನ ಹೊಲಗಳಿಗೆ ನೀರು ಹೋಗದಂತೆ ಮಾಡಿ ಅಕ್ರಮವಾಗಿ ಇಂಜಿನ್‌ ಬಳಸಿ ನೀರು ಪಡೆಯುತ್ತಿದ್ದರಿಂದ ಫಿರ್ಯಾದಿ ಮತ್ತು ಇತರರು ಕೂಡಿ ಕೇಳಿದ್ದಕ್ಕೆ ತಕರಾರು ಮಾಡಿರುತ್ತಾರೆ. ಫಿರ್ಯಾದಿದಾರರು ದಿನಾಂಕ; 30/11/2016 ರಂದು ಈ ಕುರಿತು ನಿರಾವರಿ ಇಲಾಖೆಯ ಜೆ.ಇ ಮತ್ತು ಇ.ಇ ರವರಿಗೆ ದೂರು ನೀಡಿದ್ದು, ಅವರು ಅಕ್ರಮವಾಗಿ ಕ್ಯಾನಲ್‌ ದಿಂದ ಇಂಜಿನ ಮೂಲಕ ನೀರು ಬಳಸುವವರ ವಿರುದ್ದ ಕ್ರಮ ಕೈಗೊಂಡು ಇಂಜಿನ್‌ ಬಂದ ಮಾಡಿಸಿರುತ್ತಾರೆ. ಅಲ್ಲದೆ ಅಕ್ರಮವಾಗಿ ನೀರು ಬಳಸದಂತೆ ಸೂಚಿಸಿರುತ್ತಾರೆ. ಇದರಿಂದ ಆರೋಪಿತರು ಫಿರ್ಯಾದಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಭಾರಿ ಘಾಯಗೊಳಿಸಿದ್ದರಿಂದ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: 299/2016 ಪ್ರಕರಣ ಧಾಖಲಾಗಿರುತ್ತದೆ, ನಂತರ ದಿನಾಂಕ; 11/12/2016 ರಂದು 10-30 ಘಂಟೆಗೆ ಫಿರ್ಯಾದಿ ಮನೆಯ ಮುಂದೆ ಆರೋಪಿತರು ಫಿರ್ಯಾದಿಗೆ ಕೊಲೆ ಮಾಡುವ ಉದ್ದೇಶದಿಂದ ಪದೆ ಪದೆ ಅವಾಚ್ಯವಾಗಿ ಬೈಯುವದು ಜೀವ ಭೆದರಿಕೆ ಹಾಕುವದು ಕರೆ ಮಾಡುವ ಮೂಲಕ ಕೊಲೆ ಮಾಡುವ ಬೇದರಿಕೆ ಹಾಕುವದು ಮಾಡುತ್ತಾ ಬಂದಿರುತ್ತಾರೆ. ಇದರಿಂದ ದೂರುದಾರನ ಜೀವನ ಅಪಾಯದಲ್ಲಿರುತ್ತದೆ. ಈ ಕುರಿತು ಠಾಣೆಗೆ ಅರ್ಜಿ ನೀಡಿದರು ಕೂಡ ಆಪಾದಿತರನ್ನು ಬಂದಿಸಿರುವದಿಲ್ಲ, ಗ್ರಾಮದಲ್ಲಿ ಮುಕ್ತವಾಗಿ ಭಯವಿಲ್ಲದೆ ಒಡಾಡುತ್ತಿದ್ದಾರೆ. ಮತ್ತು ಗ್ರಾಮದಲ್ಲಿ ಅವಾಚ್ಯವಾಗಿ ಬೈದು ಮುಸ್ಲಿಂ ಸುಮುಧಾಯದ ಜನರ ಧಾರ್ಮಿಕ ಬಾವನಗಳಿಗೆ ನೋವುಂಟು ಮಾಡಿ ಧಾರ್ಮಿಕ ಸಮುದಾಯದಲ್ಲಿ ಅಸಮತೋಲನವನ್ನು ಸೃಷ್ಟಿಸುತ್ತಿದ್ದಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನಧಿಕೃತವಾಗಿ ಪ್ಲೇಕ್ಸ ಬೋರ್ಡ ಹಾಕಿದ ಪ್ರಕರಣ :
ಶಾಹಾಬಾದ ನಗರ ಠಾಣೆ : ದಿನಾಂಕ: 10/11/2017 ರಂದು ಬೆಳ್ಳಿಗೆ 10-00 ಗಂಟೆಗೆ ಶ್ರೀ ಅರ್ಜುನ ಪಿಸಿ 1075 ರವರು ಮುತ್ತಾಗಾ ಗ್ರಾಮಕ್ಕೆ ಬೀಟ ಕರ್ತವ್ಯಕ್ಕೆ ಹೋದಾಗ ಮುತ್ತಾಗಾ ಗ್ರಾಮದ ಮುಖ್ಯ ರಸ್ತೆಯ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಿನ್ನೆ ದಿನಾಂಕ: 09/11/2017 ರಂದು ರಾತ್ರಿ ವೇಳೆಯಲ್ಲಿ ಗ್ರಾಮದ ಯಾರೋ ಮುಸ್ಲಿಂ ಜನಾಂಗದವರು ಒಂದು ಕಟ್ಟಿ ಕಟ್ಟಿ ಕಟ್ಟೆಯ ಮೇಲೆ ಕಬ್ಬಿಣದ  ಆಂಗಲ್ ಬೋರ್ಡ ತಯಾರಿಸಿ ಅದಕ್ಕೆ ಟಿಪ್ಪು ಸುಲ್ತಾನ ಭಾವಚಿತ್ರದ ಪ್ಲೇಕ್ಸ ಬ್ಯಾನರ್ ಅಂಟಿಸಿರುತ್ತಾರೆ ಯಾರೋ ಸಾರ್ವಜನಿಕ ಸ್ಥಳದಲ್ಲಿ ಮುತ್ತಗಾ ಗ್ರಾಮದಲ್ಲಿ ಟಿಪ್ಪು ಸುಲ್ತಾನ ಭಾವಚಿತ್ರ ಇರುವ ಪ್ಲೇಕ್ಸ ಬ್ಯಾನರ ಹಾಕಿ ಕೋಮು ಭಾವನೆ ಕೆರಳಿಸುವ ಉದ್ದೆಶದಿಂದ ಕಟ್ಟಿ ಕಟ್ಟಿ ಗ್ರಾಮದಲ್ಲಿ ಶಾಂತತಾ ಭಂಗವನುಂಟು ಮಾಡುವ ಉದ್ದೇಶದಿಂದ ಯಾರೋ ಮುಸ್ಲಿಂ ಜನಾಂಗದವರು ಕಟ್ಟೆ ಕಟ್ಟಿ ಅದರ ಮೇಲೆ ಟಿಪ್ಪು ಸುಲ್ತಾನ ಭಾವಚಿತ್ರದ ಪ್ಲೇಕ್ಸ ಬ್ಯಾನರ್ ಹಾಕಿದವರನ್ನು ಪತ್ತೆ ಮಾಡಿ ಅವರ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ನೆಲೋಗಿ ಠಾಣೆ : ದಿನಾಂಕ: 29/10/2017 ರಂದು ಶ್ರೀ ಸೈಫನಸಾಬ ತಂದೆ ಶಹಾಬುದ್ದೀನ ಮುಲ್ಲಾ ಸಾ: ಅಂಕಲಗಾ ಇವರು ಸಿದ್ನಾಳ ಸೀಮಾಂತರ ಯಮನಪ್ಪ ಗುಳ್ಯಾಳ, ಮಲ್ಕಪ್ಪ ಸಿದ್ನಾಳ ಇವರ ಹೊಲಗಳ ಬಾಂದಾರಿಯಲ್ಲಿ ಇರುವ ಕೇನಾಲ ಕಾಲುವೆಯಲ್ಲಿ ಒಂದು ಹೆಣ್ಣು ಮಗಳ ಶವ ಬೋರಲಾಗಿ ಬಿದ್ದಿದ್ದು, ಅಲ್ಲಲ್ಲಿ ಮೈ ಮೇಲಿನ ಚರ್ಮ ಸುಲಿದು ಬೆಳ್ಳಗೆ ಆಗಿರುತ್ತದೆ. ಅವಳ ವಯಸ್ಸು: 45-50 ವರ್ಷ ಇರಬಹುದು. ಅವಳ ನೀರಿನಲ್ಲಿ ಬಿದ್ದು ಸುಮಾರು 4-5 ದಿನಗಳ ಆಗಿರಬಹುದು. ಅವಳ ಮೈ ಮೇಲೆ ಯಾವುದೇ ಬಟ್ಟೆ ಬರೆ ಇರುವದಿಲ್ಲಾ. ಅವಳು ಯಾವ ಕಾರಣಕ್ಕಾಗಿ ನೀರಿನಲ್ಲಿ ಬಿದ್ದು ಸತ್ತಿರಬಹುದು ಅವಳ ಸಾವಿನಲ್ಲಿ ಸಂಶಯ ಇದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

10 November 2017

KALABURAGI DISTRICT REPORTED CRIMES

ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಪುರಮ್‌ ಶಾಂತನು ಪಿ.ಎ ಪ್ರಾದೇಶಿಕ ಆಯುಕ್ತರು ಕಲಬುರಗಿ ಇವರು ಆರ್.ಸಿ ಸಾಹೇಬರು ಮನೆಯಲ್ಲಿ ಇರುವ ಆಫೀಸನಲ್ಲಿನ ಕೆಲಸ ಮತ್ತು ದೂರವಾಣಿ ಕರೆಗಳನ್ನು ಸ್ವಿಕರಿಸುವುದು ಮಾಡುತ್ತಿದ್ದು ಎಂದಿನಂತೆ ದಿನಾಂಕ 07/11/2017 ರಂದು ಮಧ್ಯಾಹ್ನ 12:00 ಗಂಟೆ ಸುಮಾರಿಗೆ ನಾನು ಸಾಹೇಬರ ಮನೆಗೆ ಹೋದಾಗ ಆರ್.ಸಿ ಸಾಹೇಬರ ತಾಯಿಯವರಾದ ಶ್ರೀಮತಿ ಮಿತಿಲೇಶ ಗುಪ್ತಾ ರವರು  ನನಗೆ ತಿಳಿಸಿದ್ದೆನೆಂದರೆ, ಮನೆಯಲ್ಲಿನ ಎ.ಟಿ.ಎಮ್ ಕಾರ್ಡ ಕಾಣುತ್ತಿಲ್ಲಾ ಅಂತಾ ತಿಳಿಸಿ ಓರಿಯಂಟಲ್‌ ಬ್ಯಾಂಕ ಆಫ್‌ ಕಾಮರ್ಸ ಅಕೌಂಟ ನಂ.09172011006836 ಇದ್ದು ಈ ಎ.ಟಿ.ಎಮ್ ಕಾರ್ಡನಿಂದ ನನಗೆ ಗೊತ್ತಿಲ್ಲದೆ ಒಟ್ಟು ಹಣ 40,000/-ರೂಗಳು ಡ್ರಾ ಆಗಿರುತ್ತವೆ ಅಂತಾ ತಿಳಿಸಿದ್ದು ನಂತರ ನಾನು ಬ್ಯಾಂಕಿಗೆ ಹೋಗಿ ವಿಚಾರಣೆ ಮಾಡಿದಾಗ ಸಿಟಿ ಬ್ಯಾಂಕ ಎ.ಟಿ.ಎಮ್ ವಸಂತ ನಗರ ಬೆಂಗಳೂರಿನಿಂದ ಡ್ರಾ ಆಗಿರುತ್ತವೆ ಎಂದು ಗೊತ್ತಾಗಿರುತ್ತದೆ. ಈ ಹಿಂದೆ ಆರ್.ಸಿ ಸಾಹೇಬರು ಬೆಂಗಳೂರಿನಲ್ಲಿ ಕೆಲಸ ಮಾಡುವ ಸಮಯದಲ್ಲಿ ಅವರ ಮನೆಯಲ್ಲಿ ಕೆಲಸ ಮಾಡುವ ಉತ್ತಮ ಎಂಬುವವನು 15 ದಿನಗಳ ಹಿಂದೆ ಆರ್.ಸಿ ಸಾಹೇಬರ ಮನೆಯಲ್ಲಿ ಕೆಲಸ ಮಾಡುವ ಸಲುವಾಗಿ ಬಂದಿದ್ದು  ಅವನು ದಿನಾಂಕ 05/11/2017 ರಂದು ಸಂಜೆ 6:00 ಗಂಟೆ ಸುಮಾರಿಗೆ ಮನೆಯಿಂದ ಬೆಂಗಳೂರಿಗೆ ಹೋಗಿದ್ದು ಆತನು ಮನೆಯಿಂದ ಹೋಗುವಾಗ ಮನೆಯಲ್ಲಿನ ಎ.ಟಿ.ಎಮ್ ಕಾರ್ಡ ಕಳ್ಳತನ ಮಾಡಿಕೊಂಡು ಹೋಗಿ ಹಣ ಡ್ರಾ ಮಾಡಿಕೊಂಡಿರಬಹುದು ಅಂತಾ ಆರ್.ಸಿ ಸಾಹೇಬರ ತಾಯಿಯವರು ಸಂಶಯ ವ್ಯಕ್ತ ಪಡಿಸಿರುತ್ತಾರೆ. ಕಾರಣ ಆರ್.ಸಿ ಸಾಹೇಬರ ಮನೆಯಿಂದ ಎ.ಟಿ.ಎಮ್. ಕಾರ್ಡ ಕಳ್ಳತನ ಮಾಡಿಕೊಂಡು ಹೋಗಿ 40,000/- ರೂ ಡ್ರಾ ಮಾಡಿದವನನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಯಲ್ಲಪ್ಪ ತಂದೆ ಲಕ್ಕಪ್ಪ ಹಣಜಿ ಸಾ||ಅಳ್ಳಗಿ(ಬಿ) ತಾ||ಅಫಜಲಪೂರ ರವರ ಮಗ ದಿನಾಂಕ 09/11/2017 ರಂದು ಬೆಳಿಗ್ಗೆ ಎಂದಿನಂತೆ 09.00 ಗಂಟೆ ಸುಮಾರಿಗೆ ನನ್ನ ಮಗನು ಗೌಂಡಿ ಕೆಲಸಕ್ಕೆ ಮಾಶಾಳ ಗ್ರಾಮಕ್ಕೆ ಹೋಗುತ್ತೇನೆ ಅಂತ ಹೇಳಿ ನಮ್ಮ ಮೋಟಾರ ಸೈಕಲ್ ನಂ ಕೆಎ-32 ಇಎ-5056 ನೇದ್ದನ್ನು ತಗೆದುಕೊಂಡು ಮನೆಯಿಂದ ಹೋಗಿದ್ದು   07.00 ಪಿಎಮ್ ಸುಮಾರಿಗೆ ನನಗೆ ಪರಿಚಯಸ್ಥರಾದ ಮಾಶಾಳ ಗ್ರಾಮದ ಚಂದ್ರಮಾ ತಂದೆ ತುಕಾರಾಮ ಹವಳಗಾ ರವರು ಪೋನ ಮಾಡಿ ತಿಳಿಸಿದ್ದೆನೆಂದರೆ ನಾನು ಸಾಯಂಕಾಲ 6.30 ಗಂಟೆ ಸುಮಾರಿಗೆ ಕರಜಗಿ ಹಾಗು ಮಾಶಾಳ ಮದ್ಯೆ ಇರುವ ಸಾಯಿ ದಾಬಾ ಹತ್ತಿರ ಇದ್ದಾಗ .ಕರಜಗಿ ಕಡೆಯಿಂದ ಒಬ್ಬ ಲೂನಾ ಮೋಟಾರ ಸೈಕಲ್ ಸವಾರ ಹಾಗು ಮಾಶಾಳ ಕಡೆಯಿಂದ ಒಬ್ಬ ಮೋಟಾರ ಸೈಕಲ್ ಸವಾರ ಅತಿವೇಗ ಹಾಗು ನಿಸ್ಕಾಳಜಿತನದಿಂದ ತಮ್ಮ ಮೋಟಾರ ಸೈಕಲನ್ನು ಚಲಾಯಿಸಿ ಒಬ್ಬರಿಗೊಬ್ಬರು ಮುಖಾಮುಖಿಯಾಗಿ ಡಿಕ್ಕಿ ಪಡಿಸಿ ರೋಡಿನ ಎಡಬಾಗಕ್ಕೆ ಬಿದ್ದರು ಆಗ ನಾನು ಹಾಗು ಅಲ್ಲೆ ದಾಬಾ ಹತ್ತಿರ ಇದ್ದ ಜನರು ಸ್ಥಳಕ್ಕೆ ಓಡಿ ಹೋಗಿ ನೋಡಲಾಗಿ ಮೋಟಾರ ಸೈಕಲ ನಂ ಕೆ-32 ಇಎ-5056 ನೇದ್ದರ ಸವಾರ ನಿಮ್ಮ ಮಗನಾದ ದತ್ತ ಇರುತ್ತಾನೆ ತಲೆಗೆ  ಭಾರಿ ಒಳಪೆಟ್ಟುಗಳಾಗಿ ಮೂಗಿನಿಂದ ಮತ್ತು ಕಿವಿಯಿಂದ ರಕ್ತ ಸೋರಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಲೂನಾ ಮೋಟಾರ್ ಸೈಕಲ್ ಸವಾರ ಕರಜಗಿ ಗ್ರಾಮದ ಇಸ್ಮಾಯಿಲ್ ಅತ್ತಾರ ಅಂತ ಇದ್ದು ಸದರಿಯವನಿಗೆ ತಲೆಗೆ ಕಾಲಿಗೆ ಹಾಗು ಮೈ ಕೈಗಳಿಗೆ ಭಾರಿ ಸಾದಾರಕ್ತಗಾಯಗಳಾಗಿರುತ್ತವೆ ಅಂತ ತಿಳಿಸಿದನು. ನಂತರ ನಾನು ಈ ವಿಷಯವನ್ನು  ನಮ್ಮ ಗ್ರಾಮದ ರವಿ ತಂದೆ ಮಾಣಿಕ ದುದ್ದಣಗಿ, ಮಲ್ಲಪ್ಪ ತಂದೆ ಭೀಮಶ್ಯಾ ಬಂಕದ, ಬಾಬುಗೌಡ ತಂದೆ ರುದ್ರಗೌಡ ಪಾಟೀಲ ತಿಳಿಸಿ ಎಲ್ಲರು ಕೂಡಿಕೊಂಡು ಸಾಯಿ ದಾಬಾ ಹತ್ತಿರ ಘಟನೆ ಸ್ಥಳಕ್ಕೆ ಹೋಗಿ ನೋಡಲಾಗಿ ಮಾಶಾಳಯಿಂದ ಕರಜಗಿ ಕಡೆ ಬರುವ ರೋಡಿನ ಏಡಭಾಗದಲ್ಲಿ ನನ್ನ ಮಗ ಮೃತಪಟ್ಟು ಬಿದ್ದಿದ್ದು, ಆತನ ಎಡಕಾಲಿಗೆ ರಕ್ತಗಾಯ ಮತ್ತು ತಲೆಗೆ  ಭಾರಿ  ಒಳಪೆಟ್ಟುಗಳಾಗಿ  ಮೂಗಿನಿಂದ  ಮತ್ತು ಕಿವಿಯಿಂದ  ರಕ್ತ ಸೋರಿ ಮೃತ ಪಟ್ಟಿದ್ದು ಇರುತ್ತದೆ. ಲಾನಾ ಮೋಟಾರ್ ಸೈಕಲ್ ಸವಾರ ಇಸ್ಮಾಯಿಲ್ ಇತನಿಗೆ ತಲೆಗೆ ಕೈ ಕಾಲುಗಳಿಗೆ ಭಾರಿ ರಕ್ತಗಾಯಗಳಾಗಿರುತ್ತವೆ. ನಂತರ ಅಲ್ಲೆ ಇದ್ದ ಜನರು ಇಸ್ಮಾಯಿಲನಿಗೆ ಉಪಚಾರ ಕುರಿತು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಆಸ್ಪತ್ರೆ ಕರೆದುಕೊಂಡು ಹೋದರು ಲೂನಾ ಮೋಟಾರ ಸೈಕಲ್ ಸವಾರ ಇಸ್ಮಾಯಿಲ್ ಹಾಗು ನನ್ನ ಮಗ ದತ್ತ ಇಬ್ಬರು ಒಬ್ಬರಿಗೊಬ್ಬರು ಅತಿವೇಗ ಹಾಗು ನಿಸ್ಕಾಳಜಿತನದಿಂದ ಮೋಟಾರ್ ಸೈಕಲನ್ನು  ಚಲಾಯಿಸಿ ಮುಖಾಮುಖಿಯಾಗಿ ಡಿಕ್ಕಿ ಪಡಿಸಿ ಇಸ್ಮಾಯಿಲ್ ನ್ನು ಗಂಬೀರ ಗಾಯ ಹೊಂದಿದ್ದು ನನ್ನ ಮಗನು ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಸದರಿ ಘಟನೆಯ ಬಗ್ಗೆ ಕಾನೂನಿನ ಕ್ರಮ ಜರುಗಿಸಬೇಕು ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಮಾಡಿ ಜಾತಿನಿಂದನೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಗೋವಿಂದ ತಂದೆ ಗೇಮು ಚವ್ಹಾಣ ಸಾ : ವಾಡಿ ತಾ:ಚಿತ್ತಾಪುರ ಜಿ:ಕಲಬುರಗಿ ಸದ್ಯ ಸಂತೋಷ ಕಾಲೋನಿ ನ್ಯೂ ಜೇವರ್ಗಿ ರೋಡ ಕಲಬುರಗಿ ಇವರು ದಿನಾಂಕ:- 17-10-2017 ರಂದು ನನಗೆ ಮತ್ತು ಬಸ್ ನಿರ್ವಾಹಕ ಯಶ್ವಂತ ಟಿ.ಸಿ ನಂ 1412 ಇಬ್ಬರಿಗೆ ಬಸ್ ನಂ ಕೆಎ-32 ಎಪ್-2140 ನೇದ್ದು ಕಲಬರಗಿ-ಪೂನಾ ಮಾರ್ಗ ಸಂಖ್ಯೆ 5-6-5 ನೇದ್ದರ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ಕಲಬುರಗಿ ಕೇಂದ್ರ ಬಸ್ ನಿಲ್ದಾಣದಿಂದ ಸದರಿ ಬಸ್ಸಿನಲ್ಲಿ ಪ್ರಯಾಣಿಕರನ್ನು ಕೂಡಿಸಿಕೊಂಡು ಹೊರಟಾಗ ನಮ್ಮ ಬಸ ಆಳಂದ ಚೆಕ್ಕ ಪೊಸ್ಟ ಬಿಟ್ಟು ಹೋಗುತ್ತಿರುವ ಆ ಸಮಯದಲ್ಲಿ  ಮಂಜೂರ ಪಟೇಲ್ ತಂದೆ ಖಾಸಿಂ ಪಟೇಲ್ ಚಾಲಕ ಕಂ. ನಿರ್ವಾಹಕ ಬಸ ಡಿಪೊ ನಂ 03  ಕಲಬುರಗಿ ಮತ್ತು ಇತರೇ 03 ಜನರು ಬಸ್ಸಿನ ಬೈನಟ್ಟಿ  ಸೈಡ ಗ್ಲಾಸ ಕಾಣದಂತೆ ಕುಳಿತುಕೊಂಡರು ಆಗ ನಾನು ಬಸ್ಸನ್ನು ಚಾಲು ಮಾಡಿಕೊಂಡು ಹೊರಟೇನು ಸಂಜೆ 07:30 ಗಂಟೆ ಸುಮಾರಿಗೆ ಆಳಂದ ರೋಡಿಗೆ ಇರುವ ಓವರ್ ಬ್ರಿಜನ ಮೇಲೆ ಬಸ್ಸು ಹೋಗುತ್ತಿದಂತೆ ನಾನು ಬೈನಟ್ಟ ಮೇಲೆ ಕುಳಿತುಕೊಂಡಿದ್ದ ಮಂಜೂರ ಪಟೇಲ್ ಇತನಿಗೆ ಸೈಡ್ ಗ್ಲಾಸ ಕಾಣುತ್ತಿಲ್ಲಾ ಸ್ವಲ್ಪ ಸರಿದು ಕುಳಿತುಕೊಳ್ಳಿ ಅಂತಾ ಅಂದಾಗ ಆಗ ಮಂಜೂರ ಪಟೇಲ್ ಇತನು ನನಗೆ ಆಚೆ ಸರಿ ಎಂದು ಹೇಳುತ್ತಿಯಾ ಮಗನೇ ನಾನು ಘಟಕ ನಂ 03 ರಲ್ಲಿ ಬಸ್ ಚಾಲಕನಿರುತ್ತೇನೆ ಅಂತಾ ಅಂದಾಗ ಆಗ ನೀವು ಬಸ್ ಚಾಲಕರಿರಬಹುದು ಆದರೇ ನನಗೆ ಸೈಡ್ ಗ್ಲಾಸ್ ಕಾಣುತ್ತಿಲ್ಲಾ ನೀವು ಬಸ್ ಚಾಲಕರಿರುತ್ತಿರಿ ಸೈಡ್ ಗ್ಲಾಸ್ ಕಾಣದೇ ಇದ್ದರೇ ಬಸ ಹೇಗೆ ಚಾಲನೆ ಮಾಡಿಬೇಕು ನೀವೇ ಹೇಳಿ ಅಂತಾ ಅಂದಾಗ ಆಗ ಮಂಜೂರ ಪಟೇಲ್ ಇತನು ಏ ಲಂಬಾಣಿ ಸೂಳೇ ಮಗನೇ ನಾನು ಯಾರು ಏನು ಅಂತಾ ನಿನಗೆ ಗೊತ್ತಿಲ್ಲಾ ನಿನಗೆ ಈಗಲೇ ಏನು ಮಾಡುತ್ತೇನೆ ನೋಡು ಎಂದು ಅವಾಚ್ಯವಾಗಿ ಬೈಯ್ದು ಬಸ್ಸು ನಡೆಸುತ್ತಿದ್ದ ಸ್ಟೇರಿಂಗ ಹಿಡಿದಾಗ ಆಗ ನಾನು ಬಸ್ಸು ಸೈಡಿಗೆ ನಿಲ್ಲಿಸಿದಾಗ ಆಗ ಮಂಜೂರ ಪಟೇಲ್ ಇತನು ಕೈಯಿಂದ ಎಡ ಕಪಾಳದ ಮೇಲೆ ಹೊಡೆದು ನಂತರ ಚಪ್ಪಲಿಯಿಂದ ನನ್ನ ಎದೆಯ ಮೇಲಿನ ಅಂಗಿ ಹಿಡಿದು ಬಗ್ಗಿಸಿ ಬೆನ್ನಿನ ಮೇಲೆ ಒಂದೇ ಸವನೇ ಹೊಡೆಯುತ್ತಿದ್ದಾಗ ಆಗ ಬಸ್ ನಿರ್ವಾಹಕ ಯಶ್ವಂತ ಮತ್ತು ಇತರೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಬಂದು ನನಗೆ ಹೊಡೆವುದನ್ನು ಬೀಡಿಸಿಕೊಂಡು ಮಂಜೂರ ಪಟೇಲ್ ಇತನಿಗೆ ಹಿಡಿವಷ್ಟರಲ್ಲಿ ಆತನು ಅಲ್ಲಿಂದ ಹೋಲದಲ್ಲಿ ಓಡಿ ಹೋದನು. ನನಗೆ ಹೊಡೆವುದನ್ನು ಬೀಡಿಸಿದ್ದ ಬಸ್ಸಿನಲ್ಲಿದ್ದ ಪ್ರಯಾಣಿಕರ ಹೆಸರು ಮತ್ತು ವಿಳಾಸ ಗೊತ್ತಿಲ್ಲಾ ನೋಡಿದರೇ ಗುರ್ತಿಸುತ್ತೇನೆ. ನಂತರ ನಾನು ಅದೇ ನೋವಿನಲ್ಲಿ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಆಳಂದವರೆಗೆ ಒಯ್ದು ಅವರನ್ನು ಆಳಂದದಲ್ಲಿ ಬಿಟ್ಟು ನಮ್ಮ ಮೇಲಾಧಿಕಾರಿಗಳಿಗೆ ಈ ವಿಷಯ ತಿಳಿಸಿ ಮರಳಿ ಕಲಬುರಗಿ ಬಂದಿರುತ್ತೇನೆ. ನಂತರ ಮರು ದಿವಸ ದಿನಾಂಕ:-18/10/2017 ರಂದು ನನಗೆ ಬಹಳ ನೋವು ಆಗುತ್ತಿದ್ದರಿಂದ್ದ ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ಹೋಗಿ ಹೊರ ರೋಗಿ ಅಂತಾ ಉಪಚಾರ ಪಡೆಕೊಂಡಿರುತ್ತೇನೆ.ನಾನು ಮತ್ತು ಮಂಜೂರ ಅಲಿ ಒಂದೇ ಇಲಾಖೆ ಇದ್ದು ಕೆಲಸ ಮಾಡುತ್ತಿದ್ದರಿಂದ್ದ ಈ ವಿಷಯದ ಬಗ್ಗೆ ನಮ್ಮ ಮೇಲಾಧಿಕಾರಿಗಳಲ್ಲಿ ವಿಚಾರಣೆ ಮಾಡಿ ಇಂದು ಪೊಲೀಸ ಠಾಣೆಗೆ ದೂರು ದಾಖಲಿಸಿರುತ್ತೆನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.