POLICE BHAVAN KALABURAGI

POLICE BHAVAN KALABURAGI

01 October 2017

KALABURAGI DISTRICT REPORTED CRIMES

ಫರಹತಾಬಾದ
ಅಪಘಾತ ಪ್ರಕರಣ:- ದಿನಾಂಕ 23/09/2017 ರಂದು 8.30 ಪಿ.ಎಮಕ್ಕೆ ಹುಣಸಿ ಹಡಗಿಲ- ಕಲಬುರಗಿ ರೋಡಿನ ಮಾರ್ಗ ಮದ್ಯದಲ್ಲಿರುವ ಪ್ರಭು ದುದ್ದಗಿ ಇವರ ಹೊಲದ ಪಕ್ಕದ ರೋಡಿನ ಮೇಲೆ ಮೋಟಾರ ಸೈಕಲ ನಂ ಕೆಎ-32 ಇಪಿ-8300 ನೇದ್ದರ ಚಾಲಕ ಮಲ್ಲಿಕಾಜರ್ುನ ಧನ್ನೂರ ಸಾಃ ಹುಣಸಿ ಹಡಗಿಲ ತನ್ನ ಮೋಟಾರ ಸೈಕಲ ನಂ ಕೆಎ-32 ಇಪಿ-8300 ನೇದ್ದನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿ ಒಮ್ಮೇಲೆ ಬ್ರೇಕ ಹಾಕಿದ್ದರಿಂದ ಸ್ಕೀಡಾಗಿ ಬಿದಿದ್ದು, ಶ್ರೀ ಶ್ಯಾಮಸುಂದರ ತಂದೆ ಪ್ರಭುಲಿಂಗ ಮಾಲಿ ಪಾಟೀಲ ವಃ 24 ವರ್ಷ ಜಾಃ ಲಿಂಗಾಯತ ಉಃ ಖಾಸಗಿ ಚಾಲಕ ಸಾಃ ಹುಣಸಿ ಹಡಗಿಲ ತಾ.ಜಿಃ ಕಲಬುರಗಿ ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಪರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ
ಮುಧೋಳ ಪೊಲೀಸ ಠಾಣೆ:

ಅಪಘಾತ ಪ್ರಕರಣ: ದಿನಾಂಕ: 28-09-2017 ರಂದು ಮಹ್ಮದ ಮೌಲಾನಾ ತಂದೆ ಶೇಖ ಅಹೇಮದ ಸಾಬ ಹಾಜಿವಲೆ ಸಾ: ಕೊಂತನಪಲ್ಲಿ ಗ್ರಾಮ ಹೇಳಿಕೆ ಫಿರ್ಯಾದಿ ಸಲ್ಲಿಸಿದ್ದು ಅದರಲ್ಲಿ ದಿ: 28-09-17 ರಂದು ನಾನು ಹಾಗು ನಮ್ಮ ತಮ್ಮನಾದ ಚಾಂದಪಾಶಾ ತಂದೆ ಶೇಖ ಅಹೇಮದ ಸಾಬ ಹಾಜಿವಾಲೆ ಮತ್ತು ಲೇಬರ ಜನರಾದ ಚುಕ್ಕುಬೆಗಂ, ವೆಂಕಟಮ್ಮ & ನಾಗಪ್ಪ ಇಂಟನಕಿ ಸಾ: ಎಲ್ಲರೂ ಕೊಂತನಪಲ್ಲಿ ಗ್ರಾಮ ಹೀಗೆ ಎಲ್ಲರೂ ಕೂಡಿ ನಮ್ಮ ಟ್ಯಾಕ್ಟರ ನಂ ಕೆಎ32ಟಿಎ1351-52 ನೇದ್ದರಲ್ಲಿ ಖಣಿಯಿಂದ ನಮ್ಮ ಹೊಲದಲ್ಲಿ ಏತ್ತಿನ ಕೊಟ್ಟಿಗೆ ಕಟ್ಟುವ ಸಲುವಾಗಿ ಕಲ್ಲುಗಳು ತುಂಬಿಕೊಂಡು ಬರಲು ಹೋಗಿದ್ದು, ಅಲ್ಲಿ ಖಣಿಯಲ್ಲಿ ಟ್ಯಾಕ್ಟರಲ್ಲಿ ಟ್ರಾಲಿಯಲ್ಲಿ ಫರ್ಸಿ ಕಲ್ಲುಗಳು ತುಂಬಿಕೊಂಡು ವಾಸಪ ಖಣಿಯಿಂದ ನಮ್ಮ ಹೊಲಕ್ಕೆ ಬರುತ್ತಿದ್ದಾಗ ಸದರಿ ಟ್ಯಾಕ್ಟರದಲ್ಲಿ ಮುಂದುಗಡೆ ಡ್ರೈವರ್ ಹತ್ತಿರ ನಮ್ಮ ತಮ್ಮ ಚಾಂದಪಾಶಾ ಕುಳಿತುಕೊಂಡಿದ್ದು, ನಾನು ಹಾಗು ಲೇಬರ ಜನರು ಕೆಳಗಡೆ ಇದ್ದು, ಸದರಿ ಟ್ಯಾಕ್ಟರ ಚಾಲಕನಾದ ಮಹ್ಮದ ಏಕ್ಬಲ್ ತಂದೆ ಅಬ್ದುಲ ಮಜೀದ ಇನಾಮ್ದಾರ ಇತನು ಟ್ಯಾಕ್ಟರನ್ನು ಅತಿವೇಗ ಹಾಗು ನಿಷ್ಳಾಜಿತನಿಂದ ನಡೆಯಿಸುತ್ತಾ ರಸ್ತೆಯ ಎಡ ಬದಿಯ ತೆಗ್ಗಿನಲ್ಲಿ ಪಲ್ಟಿ ಮಾಡಿ ಅಪಘಾತ ಮಾಡಿದ್ದು ಇದರಿಂದ ಟ್ಯಾಕ್ಟರದಲ್ಲಿ ಕುಳಿತಿದ್ದ ನಮ್ಮ ತಮ್ಮ ಚಾಂದಪಾಶ ಇತನು ಕೆಳಗೆ ಬಿದ್ದು, ಆತನ ಮೇಲೆ ಟ್ಯಾಕ್ಟರದಲ್ಲಿದ್ದ ಫರ್ಸಿಕಲ್ಲುಗಳು ಬಿದಿದ್ದರಿಂದ ಇತನು ತಲೆಗೆ ಭಾರಿ ಗಾಯಹೊಂದಿ ಸ್ಥಳದಲ್ಲೇ ಮೃತ ಪಟ್ಟಿದ್ದು ಟ್ಯಾಕ್ಟರ ಚಾಲಕನು ಅಪಘಾತ ಪಡಿಸಿ ಓಡಿ ಹೋಗಿದ್ದು, ಈ ಬಗ್ಗೆ ಟ್ಯಾಕ್ಟರ ಚಾಲಕನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ಹೇಳಿಕೆ ಸಾರಂಶದ ಮೇಲಿಂದ ಮುಧೋಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

27 September 2017

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ನರೋಣಾ ಠಾಣೆ : ಶ್ರೀ.ಕಾಶಿನಾಥ ತಂದೆ ಮಾನಸಿಂಗ್ ಪವಾರ ಇವರ ತಮ್ಮನಾದ ಶಿವಾಜಿ ಇತನು ತನ್ನ ಉಪಯೋಗಕ್ಕಾಗಿ ಎರಡು ವರ್ಷಗಳ ಹಿಂದೆ ಹೀರೋ ಕಂಪನಿಯ ಮೋಟಾರ ಸೈಕಲ್ ನಂಬರ: ಕೆ..32.ಇಸಿ.6831 ಖರೀದಿ ಮಾಡಿದ್ದು ದಿನಾಂಕ 26-09-2017 ರಂದು ಸಾಯಂಕಾಲ ನನ್ನ ತಮ್ಮನಾದ ಶಿವಾಜಿಯು ತನ್ನ ಮೋಟಾರ ಸೈಕಲ್ ನಂಬರ: ಕೆ..32.ಇಸಿ.6831 ನೇದ್ದನ್ನು ತೆಗೆದುಕೊಂಡು ಕಲಬುರಗಿಯಲ್ಲಿ ಇರುವ ತನ್ನ ಮಕ್ಕಳಾದ ನೇಹಾ : 08 ವರ್ಷ, ಹಾಗೂ ಚಂದ್ರಶೇಖರ : 06 ವರ್ಷ, ಇವರುಗಳನ್ನು ಭೇಟಿಯಾಗಿ ಬರುತ್ತೇನೆ ಎಂದು ಹೇಳಿ ನಮ್ಮ ತಾಂಡಾದಿಂದ ಹೋಗಿರುತ್ತಾನೆ. ನಂತರ ಸಂಜೆ 7 ಗಂಟೆ 10 ನಿಮಿಷಕ್ಕೆ ಗುಳ್ಳೊಳ್ಳಿ ಗ್ರಾಮದ ಸಿದ್ದು ತಂದೆ ಕಾಶಿನಾಥ ಪಾಟೀಲ ಇವರು ನನಗೆ ಫೋನ ಮಾಡಿ ನನ್ನ ತಮ್ಮನಾದ ಶಿವಾಜಿಯು ಮೋಟಾರ ಸೈಕಲ್ ಮೇಲೆ ಕಲಬುರಗಿ ಕಡೆಗೆ ಹೋಗುವಾಗ ಲಾಡಚಿಂಚೋಳಿ ತಾಂಡಾ ಕ್ರಾಸ ದಾಟಿ ಲಾಡ ಚಿಂಚೋಳಿ ಕ್ರಾಸದ ಕಡೆಗೆ ಹೋಗುವಾಗ ತನ್ನ ಮೋಟಾರ ಸೈಕಲ್ ನಂ. ಕೆ..32.ಇಸಿ.6831 ನೇದ್ದನ್ನು ಅತೀವೇಗ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿ ಮುಂದೆ ಹೋಗುತ್ತಿದ್ದ ಎತ್ತಿನ ಬಂಡೆಗೆ ಜೋರಾಗಿ ಡಿಕ್ಕಿ ಪಡಿಸಿದ್ದರಿಂದ ಅವನ ಎಡಗೈ ಮುಂಗೈಗೆ ಭಾರಿ ಪೆಟ್ಟಾಗಿ ಮತ್ತು ತೆಲೆಗೆ ಹಾಗೂ ಎದೆಗೆ ಭಾರಿ ಒಳಪೆಟ್ಟಾಗಿದ್ದರಿಂದ ಸ್ಥಳದಲ್ಲಿಯೆ ಮೃತ ಪಟ್ಟಿರುತ್ತಾನೆ. ಎಂದು ತಿಳಿಸಿದ್ದ ಮೇರೆಗೆ ನಾನು ಮತ್ತು ನಮ್ಮ ತಾಂಡಾದ ವಿಜಯ ತಂದೆ ದೇಶು ಪವಾರ ಇಬ್ಬರೂ ಕೂಡಿ ಘಟನೆ ಸ್ಥಳಕ್ಕೆ ಹೋಗಿ ನೋಡಲಾಗಿ ವಿಷಯ ನಿಜವಿದ್ದು ನನ್ನ ತಮ್ಮನ್ನು ಭಾರಿ ಗಾಯಹೊಂದಿ ಮೃತ ಪಟ್ಟಿದ್ದು ನಿಜವಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ : ದಿನಾಂಕ:26/09/2017 ರಂದು ಕಲ್ಲು ಒಡೆಯುವ ಕೆಲಸಕ್ಕಾಗಿ  ಜಿಡಗಾ ಗ್ರಾಮಕ್ಕೆ ಹೋಗಬೇಕೆಂದು ಶ್ರೀ ನಾಗೇಶ ತಂದೆ ಕುಲಪ್ಪಾ ವಡ್ಡರ  ಸಾ: ವಡ್ಡರ ಗಲ್ಲಿ ಆಳಂದ ಮತ್ತು ಸುಭಾಷ ಇಬ್ಬರೂ ಕೂಡಿಕೊಂಡು ಸುಭಾಷ ಇತನ ಹೊಸ ನಂಬರ್ ಇಲ್ಲದ TVS XL  ಮೋಟರ್ ಸೈಕಲ ಮೇಲೆ ಹೋಗುವಾಗ ಮೋಟರ್ ಸೈಕಲವನ್ನು ಸುಭಾಷ ಚಲಾಯಿಸುತ್ತಿದ್ದು ನಾನು ಹಿಂದೆ ಕುಳಿತಿದ್ದು ಮೋಟರ್ ಸೈಕಲ ಶಕಾಪೂರ ಕ್ರಾಸ್ ಹತ್ತಿರದ ಬಸ್ ನಿಲ್ದಾಣ ಸಮೀಪ ಬಂದಾಗ ನಮ್ಮ ಹಿಂದಿನಿಂದ ಅಂದರೆ ಆಳಂದ ಕಡೆಯಿಂದ ಒಬ್ಬ ಟವರಸ್ ಲಾರಿ ಚಾಲಕ ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸುತ್ತಾ ಬಂದು ನಮ್ಮ ಮೋಟರ್ ಸೈಕಲಿಗೆ ಹಿಂದಿನಿಂದ ಡಿಕ್ಕಿಪಡಿಸಿದರಿಂದ ಹಿಂದೆ ಕುಳಿತ ನಾನು ಕೆಳಗಡೆ ಬಿದ್ದಾಗ ನನಗೆ ಬಲಗಾಲಿನ ಪಾದದ ಹತ್ತಿರ ಮತ್ತು ಎಡಗಾಲಿನ ಮೊಳಕಾಲ ಹತ್ತಿರ ಗಾಯವಾಗಿದ್ದು ಮೋಟರ್ ಸೈಕಲ ಚಲಾಯಿಸುತ್ತಿದ್ದ ಸುಭಾಷ ಇತನಿಗೆ ಬಲಗಾಲಿನ ಛಪ್ಪೆಗೆ ತೊಡೆಗೆ ಭಾರಿಗಾಯವಾಗಿದ್ದು ಮತ್ತು ಎಡಗಾಲಿನ ಮೊಳಲಾಲ ಹತ್ತಿರ ಮುರಿದು ಭಾರಿಗಾಯವಾಗಿ ರಕ್ತ ಬಂದಿದ್ದು ಇರುತ್ತದೆ. ನಮಗೆ ಡಿಕ್ಕಿಪಡಿಸಿದ ಟವರಸ್ ಲಾರಿ ನಂಬರ್ ನೋಡಲಾಗಿ MH-12 LT-9620 ಇದ್ದು ಅದರ ಚಾಲಕನ ಹೆಷರು ವಿಚಾರಿಸಿಲಾಗಿ ಶಿವಾಜಿ ತಂದೆ ವಿಲಾಸ ವಾಮಂಗ ಸಾ:ವಾಗ್ದರ್ಗಿ ತಾ|| ಅಕ್ಕಲಕೋಟ ಅಂತಾ ಗೊತ್ತಾಗಿದ್ದು. ಲಾರಿ ಚಾಲಕ ಲಾರಿ ಸ್ಥಳದಲ್ಲಿಯೇ ಬಿಟ್ಟು ಓಡಿಹೋಗಿದ್ದು ಇರುತ್ತದೆ. ನಂತರ ನಮಗೆ 108 ಅಂಬುಲೆನ್ಸ್ ನಲ್ಲಿ ಹಾಕಿಕೊಂಡು ಆಳಂದದ ಸರ್ಕಾರಿ ಆಸ್ಪತ್ರೆ ತಂದಾಗ ಅಲ್ಲಿನ ವೈದ್ಯಾಧಿಕಾರಿಗಳು ಇಬ್ಬರಿಗೂ ಚಿಕಿತ್ಸೆ ನೀಡಿ ಸುಭಾಷನಿಗೆ ಭಾರಿಗಾಯವಾಗಿದ್ದರಿಂದ ಹೆಚ್ಚಿನ ಚಿಕಿತ್ದೆ ಕುರಿತು ತಗೆದುಕೊಂಡು ಹೋಗಲು ತಿಳಿಸಿದಾಗ ಸುಭಾಷ ಇತನಿಗೆ ಅವರ ಮನೆಯವರು 108 ಅಂಬುಲೆನ್ಸ್ ನಲ್ಲಿ ಉಮರ್ಗಾದ ಆಸ್ಪತ್ರೆಗೆ ತಗೆದುಕೊಂಡು ಹೋಗುವಾಗ ರಾತ್ರಿ ಖಜೂರಿ ಹತ್ತಿರ ಇದ್ದಾಗ ಮೃತಪಟ್ಟಿರುತ್ತಾನೆ ಅಂತಾ ಗೊತ್ತಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

26 September 2017

KALABURAGI DISTRICT REPORTED CRIMES

                                                                             
ಅಪಘಾತ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಶೇಖ ಜಾವೀದ ತಂದೆ ನೂರ ಅಹ್ಮೇದ ಸಾ: ಶಾಂತ ನಗರ ಭಂಕೂರ ಇವರ ತಂದೆ  ದಿನಾಂಕ: 24/09/2017 ರಂದು ಮುಂಜಾನೆ ತಮ್ಮ ಹೊಂಡಾ ಆಕ್ಟೀವ ಮೊಟಾರ ಸೈಕಲ ನಂಬರ ಕೆ.ಎ. 03 ಹೆಚ್.ವಿ 9969  ತೆಗೆದುಕೊಂಡು ವಾಡಿ ಕ್ರಾಸಗೆ ನಾಷ್ಟ ಮಾಡಲು ಹೋಗುತ್ತಿದ್ದಾಗ ವಾಡಿ ಕ್ರಾಸ ಹತ್ತಿರ ರೋಡಿನಲ್ಲಿ  ದಿನಾಂಕ: 24/09/25017 ರಂದು ಮುಂಜಾನೆ 10-00 ಗಂಟೆಗೆ ಭಂಕೂರ ಕ್ರಾಸ ಕಡೆಯಿಂದ ಟಂ ಟಂ ಅಟೋ ನಂಬರ ಕೆ.ಎ. 32 ಸಿ 1859 ನೇದ್ದರ ಚಾಲಕ ತನ್ನ ಟಂ ಟಂ ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ತಂದೆ ನಡೆಯಿಸಿಕೊಂಡು ಹೋಗುತ್ತಿದ್ದ ಹೊಂಡಾ ಆಕ್ಟೀವಾ ಮೊಟಾರ ಸೈಕಲಕ್ಕೆ ಹಿಂದಿನಿ ಡಿಕ್ಕಿ ಪಡಿಸಿದರಿಂದ ನಮ್ಮ ತಂದೆ ಮೋಟಾರ ಸೈಕಲ ಸಮೇತ ಕೆಳಗೆ ಬಿದ್ದು ತಲೆಗೆ ಒಳ ಪೆಟ್ಟು ಮತ್ತು ಹಣೆಗೆ ಹಾಗೂ ಬಲಗಾಲಿಗೆ , ಎಡಗೈಗೆ ತರುಚಿದ ರಕ್ತಗಾಯಾವಾಗಿ ಬೇಹುಷಾ ಆಗಿ ಬಿದ್ದರಿಂದ ನಮ್ಮ ತಂದೆಗೆ ಉಪಚಾರ ಕುರಿತು ಸರಕಾರಿ  ಆಸ್ಪತ್ರೆ ಶಹಾಬಾದಕ್ಕೆ ತೆಗೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಯುನೈಟೆಡ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ಇಂದು ದಿನಾಂಕ: 25-09-2017 ರಂದು ಬೆಳಗಿನಜಾವ ನಮ್ಮ ತಂದೆ ನೂರ ಅಹ್ಮೇದ ಇವರು ಮೃತ ಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಭಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮ ಹತ್ಯಮಾಡಿಕೊಂಡ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ ಕಸ್ತೂರಬಾಯಿ ಗಂಡ ಬಸಂತ್ರಾಯ ಸಲದಳ್ಳಿ ಸಾ|| ಗಾಂದಿನಗರ ಮಳ್ಳಿ ತಾ|| ಜೇವರ್ಗಿ ರವರದು ನಮ್ಮೂರ ಸಿಮಾಂತರದಲ್ಲಿ ಸರ್ವೆ ನಂ 222 ನೇದ್ದರಲ್ಲಿ 5 ಎಕರೆ 16 ಗುಂಟೆ ಜಮೀನು ನನ್ನ ಹೆಸರಿಗೆ ಇರುತ್ತದೆ, ನನ್ನ ಹಿರಿ ಮಗ ಬಾಬುಗೌಡ ಈತನು ಮಾನಸಿಕ ಅಸ್ವಸ್ಥನಿದ್ದು, ನಮ್ಮ ಹೊಲವನ್ನು ನನ್ನ ಕಿರಿ ಮಗ ಶಂಕರಗೌಡ ಈತನು ನೋಡಿಕೊಳ್ಳುತ್ತಿರುತ್ತಾನೆ, ಹೊಲದ ಸಲುವಾಗಿ ನನ್ನ ಮಗ ಮಳ್ಳಿ ಕೆ.ಜಿ.ಬಿ ಬ್ಯಾಂಕನಲ್ಲಿ 60,000/- ರೂ ಸಾಲ ಪಡೆದುಕೊಂಡಿರುತ್ತಾನೆ, ಅದರಂತೆ ಖಾಸಗಿಯಾಗಿ ಸುಮಾರು 4 ಲಕ್ಷ ಸಾಲ ಮಾಡಿಕೊಂಡಿದ್ದು ಇರುತ್ತದೆ, ನನ್ನ ಮಗ ಆಗಾಗ ನಮಗೆ ಸಾಲ ಬಹಳ ಆಗಿದೆ ಅದನ್ನು ತೀರಿಸುವುದು ಹೇಗೆ, ಹೊಲದಲ್ಲಿ ಬೆಳೆನು ಸರಿಯಾಗಿ ಬೆಳೆಯುತ್ತಿಲ್ಲಾ, ಉರಲ್ಲಿ ನಾನು ಮುಖ ಎತ್ತಿ ತಿರುಗಾಡಲು ಆಗುತ್ತಿಲ್ಲಾ, ನಾನು ಇರುವುದಕ್ಕಿಂತಾ ಸಾಯುವದೇ ಮೇಲು ಅಂತಾ ಹೇಳುತ್ತಾ ಚಿಂತೆ ಮಾಡುತ್ತಿದ್ದನು, ಆಗ ನಾವು ಅವನಿಗೆ ಸಮಾಧಾನ ಹೇಳುತ್ತೇದ್ದೇವು, ನಮ್ಮ ಮನೆ ಎರಡು ಅಂತಸ್ತಿನದು ಇರುತ್ತದೆ, ನನ್ನ ಮಗ ಮತ್ತು ಸೊಸೆ ಮೇಲಿರುವ ಕೋಣೆಲ್ಲಿ ಮಲಗುತ್ತಿದ್ದರು, ದಿನಾಂಕ 25-09-2017 ರಂದು ಬೆಳಿಗ್ಗೆ ನಾನು ಮತ್ತು ನನ್ನ ಸೊಸೆ ಇಬ್ಬರು ಕೂಡಿ ಮೇಲೆ ಹೋಗಿ ನೋಡಿದಾಗ ನನ್ನ ಮಗ ಶಂಕರಗೌಡ ಈತನು ನೇಣು ಹಾಕಿ ಕೋಂಡಿದ್ದನು, ನಂತರ ನಾನು ಚಿರಾಡುತ್ತಿದ್ದಾಗ ನಮ್ಮ ಮನೆ ಹತ್ತಿರ ಇದ್ದ ಗುತ್ತಪ್ಪಗೌಡ ಸಾಸನೂ, ಅಪ್ಪಣ್ಣ ಹಾದಿಮನಿ ರವರು ಬಂದು ನನ್ನ ಮಗನಿಗೆ ಕೆಳಗೆ ಇಳಿಸಿ ನೋಡಿದಾಗ ನನ್ನ ಮಗ ಮೃತ ಪಟ್ಟಿದ್ದನು,          ನನ್ನ ಮಗ ಹೊಲದ ಸಲುವಾಗಿ ಮಳ್ಳಿ ಗ್ರಾಮದ ಕೆ.ಜಿ.ಬಿ ಬ್ಯಾಂಕನಲ್ಲಿ 60,000/- ರೂ ಮತ್ತು ಖಾಸಗಿಯಾದ ಸುಮಾರು 4,00,000/- ರೂ ಸಾಲ ಮಾಡಿಕೊಂಡಿದ್ದು, ಈ ಸಾಲ ಹೇಗೆ ತೀರಿಸಬೇಕು ಅಂತಾ ಚಿಂತೆ ಮಾಡುತ್ತಾ ಜಿಗುಪ್ಸೆಗೊಂಡು ಇಂದು ದಿನಾಂಕ 25-09-2017 ರಂದು ಬೆಳಿಗ್ಗೆ 06;30 ಗಂಟೆಯಿಂದ 07;00 ಗಂಟೆ ಮದ್ಯದಲ್ಲಿ ನಮ್ಮ ಮನೆಯ ಮೇಲಿನ ಕೋಣೆಯಲ್ಲಿ ಪೈಪಿನ ಅಡ್ಡಿಗೆ ನೂಲಿನ ಹಗ್ಗದಿಂದ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾನೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ ಜಪ್ತಿ :
ಶಾಹಾಬಾದ ನಗರ ಠಾಣೆ : ದಿನಾಂಕ: 25/09/2017 ರಂದು ಭಂಕೂರ ಸೀಮಾಂತರದ ಕಾಗಿನಾ ನದಿಯಿಂದ ಮರಳು ಕಳ್ಳತನದಿಂದ ಟಿಪ್ಪರನಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಮೇರೆಗೆ ಶ್ರೀ ಎಸ್ ಅಸ್ಲಾಂ ಭಾಷ ಪಿ ಐ ಶಹಾಬಾದ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಆನಂದ ದಾಬಾ ಹತ್ತಿರ ಭಂಕೂರ ಕಡೆಯಿಂದ ಒಂದು ಮರಳು ತುಂಬಿದ ಟಿಪ್ಪರ ಲಾರಿ ನಂಬರ ಕೆ.ಎ. 34 9330 ಬರುತ್ತಿದ್ದು ಅದರ ಚಾಲಕ ಮತ್ತು ಅದರಲ್ಲಿದ್ದ ಇನ್ನೋಬ್ಬ ವ್ಯಕ್ತಿ ಪೊಲೀಸ ಜೀಪ ನೋಡಿ ಟಿಪ್ಪರ ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋಗಿದ್ದು ಸದರಿ ಮರಳು ತುಂಬಿದ ಟಿಪ್ಪರ ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಮರಳಿ ಠಾಣೆಗೆ ಬಂದು ಸದರಿ ಟಿಪ್ಪರ ಲಾರಿ ಚಾಲಕ ಮತ್ತು ಮಾಲಿಕ ಸರಕಾರಕ್ಕೆ ಯಾವುದೆ ರಾಜಧನ ತುಂಬದೆ ಆಕ್ರಮವಾಗಿ ಮರಳು ಕಾಗಿನಾ ನದಿಯಿಂದ ಕಳ್ಳತನದಿಂದ ತುಂಬಿಕೊಂಡು ಸಾಗಿಸುತ್ತಿದ್ದರಿಂದ ಸದರಿಯವರ ವಿರುದ್ದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವಾಹನ ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಅಲ್ತಾಫ ಅನ್ವರ ಬೇಗ ತಂದೆ ಮಿರ್ಜಾ ರುಸ್ತುಮ ಬೇಗ ಸಾ : ಸಾದಿಕ ಕಾಲನಿ ಎಮ್.ಎಸ್.ಕೆ. ಮಿಲ್ಲ ರೋಡ ಕಲಬುರಗಿ ರವರು ಮತ್ತು ಆತನ ಚಾಲಕ  ಮಶಾಕ ಇಬ್ಬರು   ಅಂಗಡಿ ಮುಚ್ಚಿ ಮನೆಗೆ ಹೋಗುವಾಗ ನಮ್ಮ ಅಂಗಡಿ ಎದುರು ಇರುವ ರಸ್ತೆ ಬದಿಯಲ್ಲಿ ಚಾಲಕ ಮಶಾಕ ಇತನು ಬುಲೋರೋ ಪಿಕ್ಕಪ್ಪ ಗೂಡ್ಸ್ KA 36  9158  ನೇದ್ದು ಲಾಕ ಮಾಡಿದ ನಂತರ ವಾಹನದ ಕೀಲಿ ಅಂಗಡಿಯಲ್ಲಿ ಇಟ್ಟು ಇಬ್ಬರು ಮನೆಗೆ ಹೋದೇವು.  ಮರುದಿನ ದಿನಾಂಕ 24-09-2017 ರಂದು ಬೆಳಿಗ್ಗೆ 09-00 ಗಂಟೆಗೆ ಅಂಗಡಿಗೆ ನಾನು ಮತ್ತು ಮಶಾಕ ಇಬ್ಬರು ಬಂದು ನೋಡಲಾಗಿ ಅಂಗಡಿಯ ಎದುರು ಇರುವ ರಸ್ತೆ ಬದಿಯಲ್ಲಿ ರಾತ್ರಿ ನಿಲ್ಲಿಸಿ ಹೋದ ನಮ್ಮ ಬುಲೋರೋ ವಾಹನ ಕಾಣಿಸಲಿಲ್ಲಾ. ಯಾರೋ ಕಳ್ಳರು ನಮ್ಮ ಬುಲೋರೋ ಪಿಕ್ಕಪ್ಪ ಗೂಡ್ಸ್ ವಾಹನ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನನ್ನ ಕಳ್ಳತವಾದ ಬುಲೋರೋ ಪಿಕ್ಕಪ್ಪ ಗೂಡ್ಸ್ KA 36  9158 ವಿವರ ರೀತಿ ಇದೆ.  Chassi No. MA1ZN2GGA91D28894   Engine No. GG91D49527  Make BOLERO CAMPER DX2WD, Model -2009, Colour White , ಬಣ್ಣದ್ದು ಇರುತ್ತದೆ. ವಾಹನ ಕಿಮ್ಮತ್ತು ಅ:ಕಿ:  1,40,000/-  ರೂ. ಆಗುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.