POLICE BHAVAN KALABURAGI

POLICE BHAVAN KALABURAGI

05 September 2017

KALABURAGI DISRTICT REPORTED CRIMES

ಅಪಘಾತ ಪ್ರಕರಣ :
ಆಳಂದ ಠಾಣೆ : ದಿನಾಂಕ; 25/08/2017 ರಂದು ಆಳಂದದಲ್ಲಿ ಗಣೇಶ ಬಂದೋಬಸ್ತ ಸಲುವಾಗಿ ಕೆ.ಎಸ್‌.ಆರ್‌.ಪಿ, ಸಿ-1 ಪ್ಲಟೂನ್‌ ಆನಂದ ಎ.ಆರ್‌.ಎಸ್‌.ಐ  ಪ್ರಭು ಭೀಮಶ್ಯಾ ಎ.ಆರ್‌.ಎಸ್‌.ಐ , ಜಯಪ್ರಕಾಶ ಎ.ಆರ್‌.ಎಸ್‌.ಐ, ಹೊಸಗೌಡ ಎ.ಆರ್‌.ಎಸ್‌.ಐ, ಮತ್ತು ಪ್ರಭು ಧನಂಜಯ ಎ.ಆರ್‌.ಎಸ್‌.ಐ ಮತ್ತು ಇತರರೊಂದಿಗೆ ಕರ್ತವ್ಯಕ್ಕೆ ಬಂದಿರುತ್ತಾನೆ. ದಿನಾಂಕ: 04/09/2017 ರಂದು ರಾತ್ರಿ 9-15 ಸುಮಾರಿಗೆ ಅನಿಲ್‌ ಈತನು ತನ್ನ ಸಹವರ್ತಿಗಳೊಂದಿಗೆ ಕರ್ತವ್ಯದ ಮೇಲೆ ಜಿಡಗಾ ಓ.ಪಿ ಠಾಣೆಗೆ ಊಟಕ್ಕೆ ಹೋಗಿದ್ದನು. ನಂತರ ದಿನಾಂಕ: 05/09/2017 ರಂದು 12-30 ಘಂಟೆಗೆ ನನ್ನ ಮೈದುನನ ಮಗನಾದ ಶ್ರೀ.ಶಿವಪುತ್ರ ನಡಗೇರಿ ಈತನು ಪೋನ್‌ ಮಾಢಿ ವಿಷಯ ತಿಳಿಸಿದ್ದೇನೆಂದರೆ ದಿನಾಂಕ; 04/09/2017 ರಂದು ರಾತ್ರಿ 10-15 ಪಿಎಮ್‌ ದಿಂದ 10-30 ಪಿಎಮ್‌ ಮದ್ಯದ ಅವಧಿಯಲ್ಲಿ ಅನಿಲ್‌ ಈತನು ಮೋಟಾರ್‌ ಸೈಕಲ್‌ ನಂ: ಕೆ.ಎ-04-ಹೆಚ್‌.ಪಿ-9509 ನೇದ್ದರ ಮೇಲೆ ಜಿಡಗಾ ಕಡೆಯಿಂದ ಆಳಂದ ಕಡೆಗೆ ಬರುವಾಗ ವಾಘ್ದರಿ ರೋಡಿನ ಜಿಡಗಾ ಕಮಾನ ಹತ್ತಿರ ಮೋಟಾರ್‌ ಸೈಕಲ್‌ ಮೇಲಿಂದ ಬಿದ್ದು ತಲೆಗೆ, ಎದೆಗೆ ಬಾಯಿಗೆ ಮೂಗಿಗೆ ಭಾರಿ ರಕ್ತ ಗಾಯ ಮತ್ತು ಗುಪ್ತಗಾಯವಾಗಿ ಬೇಹೋಷ್‌ ಆಗಿ ರೋಡಿನ ಪಕ್ಕದಲ್ಲಿ ಬಿದ್ದಿದ್ದನು. ಅದನ್ನು ಜಿಡಗಾ ಒ.ಪಿ ಠಾಣೆಯ ಕರ್ತವ್ಯ ಮುಗಿಸಿಕೊಂಡು  ಆಳಂದ ಕಡೆಗೆ ಬರುತ್ತಿದ್ದ ನಾಗೇಂದ್ರಪ್ಪ ಹೆಚ್‌ಸಿ ರವರು ನೋಡಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಆಳಂದಕ್ಕೆ ತಂದಿರುತ್ತಾರೆ. ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುತ್ತಾನೆ ಎಂದು ತಿಳಿಸಿರುತ್ತಾರೆ. ಎಂದು ನನಗೆ ತಿಳಿಸಿದ್ದು ನಾನು ಕೂಡ ಬಂದು ನೋಡಲಾಗಿ ಘಟನೆ ನಿಜವಿರುತ್ತದೆ ಎಂದು ತಿಳಿಸಿದ ಮೇರೆಗೆ ನಾನು ಗಾಬರಿ ಬಿದ್ದು ಆಸ್ಪತ್ರೆಗೆ ಬಂದು ನೋಡಲು ನನ್ನ ಮಗನ ಎಡ ಕೈ ಮುರಿದು ಭಾರಿ ಗಾಯವಾಗಿ ಎದೆಗೆ, ಬಾಯಿಗೆ ಮತ್ತು ತಲೆಗೆ ಭಾರಿಗಾಯವಾಗಿ ಮೃತಪಟ್ಟಿದ್ದನು. ನಂತರ ವಿಷಯ ಗೊತ್ತಾಗಿದ್ದೇನೆಂದರೆ ಆನಂದ ಎ.ಆರ್‌.ಎಸ್‌.ಐ ರವರು ನನ್ನ ಮಗ ಅನಿಲ್‌ ಈತನಿಗೆ ದಿನಾಂಕ: 04/09/2017 ರಂದು ರಾತ್ರಿ 10-00 ಘಂಟೆಗೆ ಆಳಂದ ಪೊಲೀಸ್ ಠಾಣೆಗೆ ಹೋಗಿ ಆಳಂದ ಪಟ್ಟಣದಲ್ಲಿ ನಾಳೆಯ ಗಣೇಶ ಬಂದೋಬಸ್ತ ಕರ್ತವ್ಯದ ಕುರಿತು ಮಾಹಿತಿ ತಿಳಿದುಕೊಂಡು ಬರಲು ಕಳುಹಿಸಿದ್ದರಿಂದ ಅನಿಲ್‌ ಈತನು ಪಲ್ಸರ್‌ ಮೋಟಾರ್‌ ಸೈಕಲ್‌ ನಂ; ಕೆ.ಎ-04-ಹೆಚ್‌ಪಿ-9509 ಇದರ ಮೇಲೆ ಆಳಂದ ಕಡೆಗೆ ಬರುವಾಗ ವಾಗದರಿ ರೋಡಿನ ಜಿಡಗಾ ಕಮಾನ ಹತ್ತಿರ ಬರುವಾಗ ತನ್ನ ವಶದಲ್ಲಿದ್ದ ಮೋಟಾರ್ ಸೈಕಲ್‌ನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬರುವಾಗ ನಿಯಂತ್ರಣ ತಪ್ಪಿ ರೋಡಿನ ಪಕ್ಕ ತಗ್ಗಿನಲ್ಲಿ ಮೋಟಾರ್‌ ಸೈಕಲ್‌ ಸಮೇತ ಬಿದ್ದು ಬಾರಿ ಗಾಯ ಹೋಂದಿ ಮೃತಪಟ್ಟಿರುತ್ತಾನೆ. ಎಂದು ವಿಷಯ ಗೊತ್ತಾಗಿರುತ್ತದೆ. ಅಂತಾ ಶ್ರೀಮತಿ.ಕಳಸಾಬಾಯಿ ಗಂಡ ಪರಮೇಶ್ವರ ನಡಗೇರಿ ಸಾ; ಭೀಮನಗರ ಆಳಂದ. ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಹಲ್ಲೆ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಅಬ್ದುಲ ಲತೀಫ್ ಪಟೇಲ ತಂದೆ ಅಬ್ದುಲ ಹಮ್ಮಿದ ಪಟೇಲ ಸಾ: ಅಫಜಲಪೂರ ರವರ ದಿನಾಂಕ 03-09-2017 ರಂದು ಮಧ್ಯಾಹ್ನ ಅಫಜಲಪೂರ ಸೀಮಾಂತರದ ಮಹಿಬೂಬ ಪಟೇಲ ತಂದೆ ಸತ್ತಾರ ಪಟೇಲ  ಇವರ ಹೊಲದ ಮನೆಯಲ್ಲಿ ಬಕ್ರೀದ ಹಬ್ಬದ ನಿಮಿತ್ಯ ಶಾಂತಿ ಸೌಹಾರ್ದತೆ ಸಭೆ ನಡೆಯುತ್ತಿತ್ತು ರೌಫಫಟೇಲ ತಂದೆ ಫಪ್ಜರಪಟೇಲ ಅಧ್ಯಕ್ಷತೆ ವಹಿಸಿದ್ದರು. ನಾನು ಸಭೆಯ ಗೌರವ ಅಧ್ಯಕ್ಷ ಸ್ಥಾನ ವಹಿಸಿದ್ದೆ ಸಮಯದಲ್ಲಿ ಎಲ್ಲಾ ನಮ್ಮ ಜನಾಂಗದ ಸಲಹೆ ಸೂಚನೆ ಹಾಗೂ ತೊಂದರೆಗಳ ಬಗ್ಗೆ ಚರ್ಚಿಸಲಾಗುತ್ತಿತ್ತು. ಸಮಯದಲ್ಲಿ ಅಲ್ತಾಫ್ ಪಟೇಲ ತಂದೆ ಅಬ್ದುಲ ರಜಾಕ ಪಟೇಲ, ಪಪ್ಪು ಪಟೇಲ  ತಂದೆ ಅಬ್ದುಲ ರಜಾಕ ಪಟೇಲ, ಚಿಂಟು ಪಟೇಲ @ ಅಶ್ರಾಫ್ ಪಟೇಲ ತಂದೆ ಅಬ್ದುಲ ರಜಾಕ ಪಟೇಲ ಹಾಗೂ ಇತರರು ಸಾ: ಎಲ್ಲರೂ ಅಫಜಲಪೂರ ಇವರು ಕೂಡಿಕೊಂಡು ನನ್ನ ಮೇಲೆ ಬಡಿಗೆ, ಹಾಗೂ ಬಾಟಲಿಗಳಿಂದ ಎರಡು ಮುಂಡಿಗೆ, ಹೊಟ್ಟೆಯ ಮೇಲೆ, ಮೋಣಕಾಲು ಮೇಲೆ ಹೊಡೆದು ಹಾಗೂ ಬಾಯಿ ಮೇಲೆ ಹೊಡೆದಿದ್ದು ಹಲ್ಲು ಅಳುಗಾಡುತ್ತಿದ್ದು ಗುಪ್ತಗಾಯ ಪಡೆಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಅಲ್ಲದೇ ಪಪ್ಪುಪಟೇಲ ಹಾಗೂ ಅಲ್ತಾಫ್ ಪಟೇಲ ಕೂಡಿಕೊಂಡು ಅವರಲ್ಲಿದ್ದ ರೀವಾಲ್ ವಾರ ತಗೆದು ನನಗೆ ತೋರಿಸಿ ನಿನ್ನ ಜೀವ ತಗೆಯುತ್ತೇವೆಂದು ಬದರಿಸಿದರು ಹಾಗೂ ಅಲ್ಲಿಯೇ ಇದ್ದ ನನ್ನ ಮಗ ಮಾಜೀದ ಪಟೇಲ, ಮೋಸಿನ್ ಪಟೇಲ, ಮತೀನ ಪಟೇಲ, ರೌಫ್ ಪಟೇಲ ಹಾಗೂ ಸಂತೋಷ ಬಳೂರ್ಗಿ ಹಾಗೂ ಅಸ್ಪಾಕ್ ಪಟೇಲ ಇವರೆಲ್ಲರೂ ಬಂದು ಬಿಡಿಸಿದರು ಇಲ್ಲದಿದ್ದರೆ ಅವರೆಲ್ಲರೂ ಕೂಡಿ ನನ್ನನ್ನು ಕೊಲೆ ಮಾಡಿಯೇ ಬಿಡುತ್ತಿದ್ದರು.  ಆರೋಪಿಗಳ ಬೀಗರಾದ ಶೀರಾಜ್ ಪಟೇಲ ಇವರು ಬನ್ನೆಟ್ಟಿಯಲ್ಲಿ ಮರಳಿನ ಟೆಂಡರ ತಗೆದುಕೊಂಡಿದ್ದು ಅವರು ಮರಳು ಸಾಗಾಣಿಕೆ ಮಾಡುವ ವಾಹನಗಳು ನಮ್ಮ ಹೊಲದಲ್ಲಿಯೇ ಹಾದು ಹೋಗುತ್ತಿದ್ದವು ನಮ್ಮ ಹೊಲದಲ್ಲಿಯ ಬೆಳೆಗಳು ಹಾಳಾಗುವುದರಿಂದ ನನಗೆ ಪರಿಹಾರವಾಗಿ ನನ್ನಗೆ ತಿಂಗಳಿಗೆ ಇಂತಿಷ್ಟು ಹಣ ಕೊಡುತ್ತೇವೆಂದು ಹೇಳಿದ್ದರು ಅದರ ಪ್ರಕಾರ ಅವರು ಮಾತನಾಡಿದಂತೆ ನನಗೆ ಕೊಡಬೇಕಾದ ಹಣ ಕೊಟ್ಟಿರಲಿಲ್ಲ ಅದನ್ನು ಕೇಳಿದಕ್ಕೆ ರೀತಿಯಾಗಿ ನನ್ನ ಮೇಲೆ ಹಲ್ಲೆ ಮಾಡಿ ಗುಪ್ತಗಾಯ ಪಡೆಸಿ ಕೊಲೆ ಮಾಡಲು ಪ್ರಯತ್ನಿಸಿದ್ದವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಿ ಹಾಗೂ ಘಟನೆಗೂ ಮುಂಚೆ ಬೆಳಿಗ್ಗೆ 10:30 ರಿಂದ 11:00 ಗಂಟೆಯವರೆಗೆ ನಾನು ಮನೆಯಲ್ಲಿ ಇಲ್ಲದ ಸಮಯದಲ್ಲಿ ನನ್ನ ಹೆಂಡತಿ ಶಕೀರಾ ಬಾಬು ಹಾಗೂ ಮಗಳು ಶೀಪಾ ಇವರಿಗೆ ಅವಾಚ್ಯ ಶಬ್ದಗಳಿಂದ ಬೈದು ನಿನ್ನ ಗಂಡ ಎಲ್ಲಿದ್ದಾನೆ ನಮಗೆ ದುಡ್ಡು ಕೇಳಿದರೆ ಜೀವ ಸಹಿತ ಖಲಾಸ ಮಾಡುತ್ತೇವೆಂದು ರಂಡಿ, ಭೋಸಡಿ  ಎಂದು ಅವರಿಗೆ ಬೈದು ಅವರಿಗೆ ಜೀವ ಭಯ ಹಾಕಿ ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಫಜಲಪೂರ ಠಾಣೆ : ದಿನಾಂಕ 06-08-2017ಗ ರಂದು ಶ್ರೀ ಬಸವರಾಜ ತಂದೆ ವಿಠಲಗೌಡಾ ಪಾಟೀಲ ಸಾ : ಅಫಜಲಪೂರ ರವರ ಹೆಂಡತಿಯ ಹೆಸರಲ್ಲಿಯ ಸರ್ವೇ ನಂ 126/2 ಕ್ಕೆ ಹೋದಾಗ ಶರಣಗೌಡ ತಂದೆ ವಿಠಲಗೌಡಾ ಪಾಟೀಲ ಸಂಗಡ 6 ಜನರು ಸಾ : ಎಲ್ಲರು ಆರೋಪಿ 1 ರಿಂದ 7 ರವರು ಹೊಲದಲ್ಲಿ ಅತೀಕ್ರಮ ಪ್ರವೇಶಸಿ ಈಗಾಗಲೇ ದಾಖಲಿಸಿರುವ ಗುನ್ನೆ ನಂ 109/2017 ನ್ನು ಮರಳಿ ಪಡೆಯಲು ಜೀವ ಬೇದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ  ಹಲ್ಲೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

04 September 2017

Kalaburagi District Reported Crimes

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ಶ್ರೀ ಸಂಗಪ್ಪ ಬಗಲಿ ಕಂದಾಯ ನಿರೀಕ್ಷಕ ಅಫಜಲಪೂರ ರವರು ಮಾನ್ಯ ತಹಸಿಲ್ದಾರರು ಅಫಜಲಪೂರ ರವರ ಆದೇಶದಂತೆ  ದಿನಾಂಕ 02/09/2017 ರಂದು ಅಫಜಲಪೂರ ದಿಂದ ಬಳೂರ್ಗಿಗೆ ಹೋಗುವ ರೋಡಿಗೆ ಅಫಜಲಪೂರ ದಿಂದ ಅಂದಾಜ 2.ಕೀ ಮಿ ಅಂತರದಲ್ಲಿ ಅಕ್ರಮವಾಗಿ ಕಳ್ಳತದಿಂದ ಮರಳು ಸಾಗಾಣಿಕೆ ಮಾಡುತಿದ್ದ ಟ್ರ್ಯಾಕ್ಟರ SL NO NNHY03784 K E ನೇದ್ದರ ಮೇಲೆ ದಾಳಿ ಮಾಡಿದಾಗ ಟ್ರ್ಯಾಕ್ಟರ ಚಾಲಕ ಓಡಿಹೋಗಿದ್ದು ಸದರಿ ಟ್ರ್ಯಾಕ್ಟರ ಚಕ ಮಾಡಿದಾಗ ಅದರ ಟ್ರೈಲಿಯಲ್ಲಿ ಅಂದಾಜ 3000/-ರೂ ಕಿಮ್ಮತ್ತಿನ ಮರಳು ತುಂಬಿದ್ದು ಇದ್ದು ನಂತರ ಸದರಿ ಟ್ರ್ಯಾಕ್ಟರನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಅಫಜಲಪೂರ ಪೊಲೀಸ್ ಠಾಣೆಗೆ ತಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ  :
ಫರತಾಬಾದ ಠಾಣೆ : ಶ್ರೀ ಅಪ್ಪಸಾಬ ತಂದೆ ಮಲ್ಲಿಕಾರ್ಜುನ ಬಿರಾದಾರ ಇವರು ದಿನಾಂಕ 02/09/2017 ರಂದು ಮುಂಜಾನೆ ತನ್ನ  ಮೋಟಾರ ಸೈಕಲ ನಂ ಕೆಎ-32 ಆರ್- 8128 ನೆದ್ದರ ಮೇಲೆ ತಮ್ಮೂರಾದ ಕೌವಲಗಾ(ಕೆ) ಗ್ರಾಮಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಮರಳಿ ಅದೇ ಮೋಟಾರ ಸೈಕಲ ಮೇಲೆ ಕಲಬುರಗಿಗೆ ಬರುತ್ತಿರುವಾಗ ರಾಷ್ಟ್ರಿಯ ಹೇದ್ದಾರಿ 218 ರ ನಂದಿಕೂರ ಬಸ್ ನಿಲ್ದಾಣ ದಾಟಿ ಸ್ವಲ್ಪ ಮುಂದೆ ರೋಡಿನ ಮೇಲೆ ಬರುತ್ತಿರುವಾಗ ಎದುರುಗಡೆಯಿಂದ ಅಂದರೆ ಕಲಬುರಗಿ ಕಡೆಯಿಂದ ಒಬ್ಬ ಆಟೋ ರೀಕ್ಷಾ ಚಾಲಕನು ತನ್ನ ಆಟೋ ರೀಕ್ಷಾವನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ತಾನು ಚಲಾಯಿಸುತ್ತಿದ್ದ ಮೋಟಾರ ಸೈಕಲ ನಂ ಕೆಎ-32 ಆರ್-8128 ನೇದ್ದಕ್ಕೆ ಡಿಕ್ಕಿಪಡಿಸಿದ ಪರಿಣಾಮ ತಾನು ರೋಡಿನ ಮೇಲೆ ಬಿದಿದ್ದು, ಇದ್ದರಿಂದ ಬಲಭಾಗದ ತಲೆಗೆ ಭಾರಿ ರಕ್ತಗಾಯ, ಬಲ ಹುಬ್ಬಿನ ಹತ್ತಿರ ರಕ್ತಗಾಯ, ಮೇಲ್ತುಟಿಗೆ ರಕ್ತಗಾಯ, ಗದ್ದಕ್ಕೆ ರಕ್ತಗಾಯಗಳಾಗಿರುತ್ತವೆ.  ಅಪಘಾತ ಪಡಿಸಿದ ಆಟೋ ರೀಕ್ಷಾ ಚಾಲಕನು ತನ್ನ ಆಟೋರಿಕ್ಷಾವನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿರುತ್ತಾನೆ. ಅಪಘಾತಪಡಿಸಿದ ಆಟೋ ರೀಕ್ಷಾ ನಂ ಕೆಎ-32 ಬಿ-4105 ನೇದ್ದರ ಚಾಲಕನು ವಿರುದ್ದ ಸೂಕ್ತ ಕಾನೂನು ರೀತಿ ಕ್ರಮ ಜರೂಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾವಿಯಲ್ಲಿ ಕ್ರಿಮಿನಾಶಕ ಬೆರೆಸಿ ನಿಂದನೆ ಮಾಡಿದ ಪ್ರಕರಣ :
ಜೇವರಗಿ ಠಾಣೆ : ಶ್ರೀಮತಿ ಮರೆಮ್ಮ ಗಂಡ ದೇವಪ್ಪ ಹಾಲಗಡ್ಲಾ ಸಾಃ ಚನ್ನೂರ ತಾಃ ಜೇವರಗಿ ಇವರು ಆಂದೊಲಾ ಗ್ರಾಮಕ್ಕೆ ಹೋಗುವ ರೋಡಿನ ಪಕ್ಕದ ನಮ್ಮೂರ ಅಮಲಪ್ಪ ಇವರ ಹೊಲದಲ್ಲಿ ರೋಡಿನ ಪಕ್ಕದಲ್ಲಿಯೇ  ಒಂದು ಸಾರ್ವಜನಿಕ ಸರಕಾರಿ ಬಾವಿ ಇರುತ್ತದೆ ಹಿಂದಿನಿಂದಲೂ ಆ ಬಾವಿಯ ನೀರು ನಾವು ಓಣಿಯವರೆಲ್ಲರೂ ಕುಡಿಯಲು ಬಳಸುತ್ತಾ ಬಂದಿರುತ್ತವೆ. 2014 ನೇ ವರ್ಷದಲ್ಲಿ ಈ ಬಾವಿಯಲ್ಲಿ ಯಾರೊ ಕಿಡಿಗೇಡಿಗಳು ಸತ್ತ ನಾಯಿ, ಸತ್ತ ಹಾವು  ಹಾಕಿದ್ದರು, ಮತ್ತು ಚಪ್ಪಲಿ,ಸಹ ಹಾಕಿ ನೀರು ಕಲೂಷಿತ ಮಾಡಿದ್ದರು. ಬಾವಿ ಇದ್ದ ಹೊಲ ನಮ್ಮೂರಿನ ಗೊಲ್ಲಾಳಪ್ಪಗೌಡ ಇತನು ಪಾಲಿಗೆ ಮಾಡಿದ್ದಾಗಿನಿಂದ ಈತನು ನಮ್ಮ ಜಾತಿಯವರಿಗೆ ಈ ಬಾವಿಯ ನೀರು ಕುಡಿಯಲು ತೆಗೆದುಕೊಂಡು ಹೋಗಬಾರದೆಂದು ನಮ್ಮ ಸಂಗಡ ತಕರಾರು ಮಾಡಿದ್ದನು.  ಒಂದು ದಿವಸ  ನಮ್ಮ ಜಾತಿಯವರೆ ಆದ  ಮಹಾಂತಮ್ಮ ಗಂಡ ಭೀಮಾಶಂಕರ ಮತ್ತು ಬಸ್ಸಮ್ಮ ಗಂಡ ಮರೆಪ್ಪ ಹೊಸಮನಿ ಇವರು ಬಾವಿಗೆ ನೀರು ತರಲು ಹೋದಾಗ ಅವರ ಕೊಡ ಮತ್ತು ಹಗ್ಗ ಬಾವಿ ನೀರಿನಲ್ಲಿ ಹಾಕಿರುತ್ತಾನೆ, ಏ ಹೊಲೆಯ ಸೂಳೆ ಮಕ್ಕಳೆ ನೀರಿಗೆ ಬರಬೇಡವೆಂದು ಎಷ್ಟು ಸಲ ಹೇಳಬೇಕು ಎಂದು ಹೊಲಸು ರೀತಿಯಲ್ಲಿ ಬೈದಿರುತ್ತಾನೆ ಅಲ್ಲದೆ ಬಾವಿಯ ಸುತ್ತಲು ಹಾಕಿದ  ಬೇಡ್ ಕೂಡಾ ಕಿತ್ತಿರುತ್ತಾನೆ. ನಮ್ಮ ಜಾತಿಯವರಿಗೆ ನೀರು ಒಂದೆ ಮೂಲ ಇರುವುದರಿಂದ  ತೊಂದರೆಯಾಗಿರುತ್ತದೆ.  ದಿ. 30.08.2017 ರಂದು ಮುಂಜಾನೆ 6.30 ಗಂಟೆಯ ಸುಮಾರಿಗೆ ನಾನು ಮತ್ತು ಮಹಾಂತಮ್ಮ ಗಂಡ ಭೀಮಾಶಂಕರ ಇಬ್ಬರೂ ಕೂಡಿಕೊಂಡು ಬಾವಿಗೆ ನೀರು ತರಲು ಹೋಗಿದ್ದೆವುಬಾವಿಯಿಂದ ಕೊಡದಲ್ಲಿ ನೀರು ತುಂಬಿಕೊಂಡಾಗ ನೀರಿನಲ್ಲಿ ಕೆಟ್ಟ ಎಣ್ಣೆ ವಾಸನೆ ಬರುತ್ತಿತು. ಅದನ್ನು  ನೊಡಲಾಗಿ ನೀರಿನಲ್ಲಿ  ಎಂಡೊಸಲ್ಫಾನ ಅಥವಾ ಯಾವುದೊ ಕ್ರೀಮಿನಶಕ ವಿಷದ ಎಣ್ಣೆ ಹಾಕಿರುವುದು ಕಂಡು ಬಂದಿರುತ್ತದೆ, ಅಷ್ಟರಲ್ಲಿಯೇ ನಮ್ಮೂರ ಮರೆಪ್ಪ ಹೊಸಮನಿ ಇವರು ಸಹ ಬಂದು ನೋಡಿ ಊರಲ್ಲಿ ತಿಳಿಸಿದರು. ಊರಿನವರಾದ ಮರೆಪ್ಪ ಕೊಟಗಿ, ನಾಗಪ್ಪ ಗುಬಚಿ,ಮಾನಪ್ಪ ಕಟ್ಟಿಮನಿ, ಭೀಮರಾಯ ಕಟ್ಟಿಮನಿ ತಿಪ್ಪಣ್ಣ ಜಾನಕರ, ಶಂಕರೇಪ್ಪ ಜಾನಕರ, ರವರು ಬಂದು ನೋಡಿರುತ್ತಾರೆಈ ಬಾವಿ ನೀರು ಕೂಡಿದವರು ಸಾಯಿತ್ತಾರೆ ಎಂದು ನಮ್ಮನ್ನು ಕೊಲೆ ಮಾಡುವ ಉದ್ದೇಶದಿಂದ ದಿ 29.08.2017 ರ & 30.09.2017 ರ ರಾತ್ರಿ ವೇಳೆಯಲ್ಲಿ  ಎಂಡೊಸಲ್ಫಾನ ಅಥವಾ ಯಾವುದೋ ಕ್ರೀಮಿನಶಕ  ಎಣ್ಣ ಔಷದ ಹಾಕಿದ್ದು  ಇರುತ್ತದೆ. ನಮ್ಮೂರಿನಲ್ಲಿ ನಾವು ಕುಡಿಯಲು ನೀರು ಬಳಸುವ ಬಾವಿ ಇದ ಹೊಲ ಲೀಜಿಗೆ ಹಾಕಿಕೊಂಡ ಗೊಲ್ಲಾಳಪ್ಪಗೌಡ ತಂದೆ ಕಲ್ಲಪ್ಪಗೌಡ ಕೂಕನೂರ ಈ ಹಿಂದೆಯೂ ನಮಗೆ ತೊಂದರೆ ಕೊಟ್ಟಿದ್ದು, ಅವನೇ  ಈಗ ಕೂಡಾ ಈ ಕೃತ್ಯ ಮಾಡಿರುತ್ತಾನೆಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು :
ಶಾಹಾಬಾದ ನಗರ ಠಾಣೆ : ಶ್ರೀ ರಾಜು ತಂದೆ ಲಕ್ಷ್ಮಣ ಗೋಟೆಕರ ಸಾ: ಮೇಸ್ತ್ರಿ ನಗರ ಶಹಾಬಾದ ಇವರು ದಿನಾಂಕ: 02/09/2017 ರಂದು ಮುಂಜಾನೆ ತನ್ನ ಮನೆಯಿಂದ ಹೊರಗೆ ನಡೆದಾಗ ಅದೇ ವೇಳೆಗೆ ಅರೋಪಿತರಾದ ಗೊವಿಂದ ತಂದೆ ಹಣಮಂತ , ರಾಜು ತಂದೆ ಹಣಮಂತ , ಹಣಮಂತ ತಂದೆ ತಿಮ್ಮಣ್ಣ ಮತ್ತು ಅಸಾಓಕ ತಂದೆ ಯಲ್ಲಪ್ಪ ಇವರೆಲ್ಲಾರೂ ನಮ್ಮ ಮನೆಯ ಮುಂದೆ ಬಂದು ನನಗೆ ಎಲೇ ರಾಜ ಎಲ್ಲಗೆ ನಡೆದಿದ್ದಿ ನಿಂದ್ರಲೇ ಅಂತಾ ಆಕ್ರಮ ತಡೆದು ನಿಲ್ಲಿಸಿ ಅಂಗಿ ಹಿಡಿದು ಕಳೆದಾಡಿ ಅವಾಚ್ಯವಾಗಿ ಬೈದು ಕೈಯಿಂದ ಮತ್ತು ನಳದ ಪೈಪಿನಿಂದ ತಲೆಗೆ ಹೊಡೆದು ರಕ್ತಗಾಯಾ ಪಡಿಸಿ ಇನ್ನೋಂದು ಸಲ ಗೋಡೆಯ ವಿಷಯದಲ್ಲಿ ಮಾತೆತ್ತಿದ್ದರೆ ಸುಮ್ಮನೆಗೆ ಬಿಡುವುದಿಲ್ಲಾ ಅಂತಾ ಕಬ್ಬಿಣದ ರಾಡು ತೋರಿಸಿ ಜೀವದ ಭಯ ಹಾಕಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

03 September 2017

Kalaburagi District Reported Crimes

ಸಾಕ್ಷಿ ಹೇಳಿದ್ದಕ್ಕೆ ಹಲ್ಲೆ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಸಿದ್ದಪ್ಪ ತಂದೆ ಶಿವಪ್ಪ ಪೂಜಾರಿ ಸಾ||ಹಾವಳಗಾ  ತಾ||ಅಫಜಲಪೂರ ರವರು ಸುಮಾರು 10 ವರ್ಷದ ಹಿಂದೆ ನಮ್ಮ ಗ್ರಾಮದ ಗುರಪ್ಪ ತಂದೆ ಶಿವರಾಯ ನಾಟೀಕರ ಹಾಗು ಘತ್ತರಗಾ ಗ್ರಾಮದ ಭಗವಂತ ತಂದೆ ಮಲ್ಲಪ್ಪ ಹಂಚನಾಳ  ಇವರ ಮೇಲೆ ಅಫಜಲಪೂರ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ ದಾಖಲಾಗಿದ್ದು, ನಾನು ಸದರಿ ಕೇಸದಲ್ಲಿ ಸಾಕ್ಷಿ ನುಡಿದಿರುತ್ತೇನೆ ಸದರಿಯವರು ಕೇಸಗೆ ಸಂಬಂಧಿಸಿದಂತೆ ಶಿಕ್ಷೆ ಅನುಭವಿಸಿ ಈಗ ಜೈಲಿನಿಂದ ಬಿಡುಗಡೆಯಾಗಿ ಬಂದಿರುತ್ತಾರೆ. ದಿನಾಂಕ 01/09/2017 ರಂದು ಸಾಯಂಕಾಲ 5.00 ಗಂಟೆ ಸುಮಾರಿಗೆ ಸಕ್ಕರೆ ಕಾರ್ಖಾನೆ ಹತ್ತಿರ  ಹವಳಾಗಾ ಕ್ರಾಸಿನಿಂದ ನಾನು ಹಾಗು ನಮ್ಮ ಗ್ರಾಮದ ನಿಂಗಪ್ಪ ತಂದೆ ಬುದ್ದಪ್ಪ ಪೂಜಾರಿ ಮಾತನಾಡುತ್ತಾ ನಡೆದುಕಕೊಂಡು ನಮ್ಮ ಊರಿಗೆ ಹೋಗುತಿದ್ದಾಗ ಅದೇ ಸಮಯಕ್ಕೆ  ಸಾತಪ್ಪ ತಂದೆ ಮಾಹದೇವಪ್ಪ ಕುಂಬಾರ ಇತನ ಮೋಟಾರ್ ಸೈಕಲ್ ಮೇಲೆ ಸಾತಪ್ಪನೊಂದಿಗೆ ಭಗವಂತ ತಂದೆ ಮಲ್ಲಪ್ಪ ಹಂಚನಾಳ ಹಾಗು ಗುರಪ್ಪ ತಂದೆ ಶಿವರಾಯ ನಾಟೀಕರ ಇಬ್ಬರು ಬಂದು ಮೋಟಾರ ಸೈಕಲ್ ಮೇಲಿಂದ ಕೆಳಗೆ ಇಳಿದು ನನ್ನ ಹತ್ತಿರ ಬಂದು ಭಗವಂತ ಈತನು ನನ್ನ ಎದೆಯ ಮೇಲಿನ ಅಂಗಿ ಹಿಡಿದು ತಡೆದು ನಿಲ್ಲಿಸಿ ರಂಡಿ ಮಗನೇ ನೀನು ನಮ್ಮ ವಿರುದ್ದವಾಗಿ ಕೊರ್ಟದಾಗ ಸಾಕ್ಷಿ ಹೇಳಿದಕ್ಕೆ ನಾವು ಇಷ್ಟುದಿನ ಜೈಲಿನಲ್ಲಿ ಇದ್ದಿವಿ ಅಂತ ಅನ್ನುತಿದ್ದಾಗ ಗುರಪ್ಪ ಇತನು ತನ್ನ ಕೈ ಮುಷ್ಠಿ ಮಾಡಿ ಈ ಬೋಸಗಿ ಮಗನಿಗೆ ಇಲ್ಲೆ ಖಲಾಸ ಮಾಡೋಣ ಅಂತ ಅಂದು ನನ್ನ ಹೊಟ್ಟೆಗೆ ಬೇನ್ನಿಗೆ ಹೊಡೆದು ನೆಲಕ್ಕೆ ಕೆಡವಿದಾಗ ಭಗವಂತ ಹಾಗು ಗುರಪ್ಪ ಇಬ್ಬರು ಕೂಡಿ ತಮ್ಮ ಕಾಲಿನಿಂದ ಒದ್ದಿರುತ್ತಾರೆ ಆಗ ಅಲ್ಲೆ ಇದ್ದ ನಿಂಗಪ್ಪ ಪೂಜಾರಿ, ಸಾತಪ್ಪ ಕುಂಬಾರ ಇಬ್ಬರು ಕೂಡಿ ನನಗೆ ಹೊಡೆಯುವದನ್ನು ಬಿಡಿಸಿರುತ್ತಾರೆ. ಘತ್ತರಗಾ ಗ್ರಾಮದ ಭಗವಂತ ತಂದೆ ಮಲ್ಲಪ್ಪ ಹಂಚನಾಳ ಹಾಗು ನಮ್ಮ ಗ್ರಾಮದ ಗುರಪ್ಪ ತಂದೆ ಶಿವರಾಯ ನಾಟೀಕರ ಇಬ್ಬರ ವಿರುದ್ದ ನಾನು ಕೊರ್ಟದಲ್ಲಿ ಸಾಕ್ಷಿ ನುಡಿದಿದಕ್ಕೆ ಇಬ್ಬರು ಕೂಡಿ ನನಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ಕಾಲಿನಿಂದ ಒದ್ದು ಜೀವ ಬೇದರಿಕೆ ಹಾಕಿದವರ ಮೇಲೆ ಕಾನೂನಿನ ಕ್ರಮ ಜರೂಗಿಸಬೇಕು ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.