POLICE BHAVAN KALABURAGI

POLICE BHAVAN KALABURAGI

10 August 2017

Kalaburagi District Reported Crimes

ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ  : ಶ್ರೀ ಸಂಪತ ಕುಮಾರ ತಂದೆ ಪ್ರಕಾಶ ಸಾ|| ಹನುಮಾನ ಗುಡಿಯ ಹತ್ತಿರ ಗಂಗಾನಗರ ಕಲಬುರಗಿ ಇವರ ಮನೆಯ ಬಲಕ್ಕೆ ಮಾಣಿಕ ಮತ್ತು ಎಡಕ್ಕೆ ರೇವಣಸಿದ್ದ ಇವರ ಮನೆಯಿದ್ದು ಮಾಣಿಕ ಇವರು ಎಮ್ಮೆಗಳನ್ನು ಸಾಕಿರುತ್ತಾರೆ. ಎಮ್ಮೆಗಳು ಮೂತ್ರ ವಿಸರ್ಜನೆ ಮಾಡಿದಾಗ ಅವು ನಮ್ಮ ಅಂಗಡಿ ಮುಂದಿನಿಂದ ಹರಿದು ರೇವಣಸಿದ್ದ ಇವರ ಮನೆಯ ಮುಂದೆ ರಸ್ತೆಯ ಮೇಲೆ ಹರಿದು ಹೋಗಿ ನಾಲೆಗೆ ಸೇರುತ್ತವೆ. ಈಗ ಸುಮಾರು 8-10 ದಿನಗಳ ಹಿಂದೆ ರೇವಣಸಿದ್ದ ಈತನು ತಮ್ಮ ಮನೆಯ ಮುಂದೆ ಮೂತ್ರ ಹರಿದು ಬರದ ಹಾಗೆ ಒಡ್ಡಿಹಾಕಿದ್ದು ಆಗ ಮಳೆ ಬಂದಾಗ ನಮ್ಮ ಕಾಕಾ ಹರಿದು ಹೋಗಲೆಂದು ಒಡ್ಡಿಯನ್ನು ತಗೆದಾಗ ನಮ್ಮೊಂದಿಗೆ ಬಾಯಿ ಮಾತಿನ ತಕರಾರನ್ನು ರೇವಣಸಿದ್ದನು ಮಾಡಿಕೊಂಡು ನಮ್ಮ ಮಗ ಬರಲಿ ನಿಮಗೆ ನೋಡಿಕೊಳ್ಳುತ್ತೇವೆ ಅಂತಾ ಹೇಳಿದ್ದು  ದಿನಾಂಕ:08/08/17 ರಂದು ರಾತ್ರಿ ನಾನು ಮತ್ತು ನಮ್ಮ ಕಾಕಾ ಮಹೇಶ ಅಂಗಡಿ ಬಂದ ಮಾಡಿ ನಾನು ಗಾಡಿಗಳನ್ನು ಮನೆ ಒಳಗೆ ಹಚ್ಚುತ್ತಿದ್ದಾಗ ರೇವಣಸಿದ್ದ ಮತ್ತು ಅವನ ಸುರೇಶ ಇಬ್ಬರೂ ಕೂಡಿ ಬಂದು ಸುರೇಶನು ನನಗೆ ರಂಡಿ ಮಗನೆ ನಮ್ಮ ತಂದೆಗೆ ನಾನು ಇಲ್ಲದಾಗ ಜಗಳ ತೆಗೆದು ಬೈಯುತ್ತಿರಿ ಅಂತಾ ಬೈದು ಅಲ್ಲೇ ಬಿದ್ದಿದ್ದ ಒಂದು ಗಾಜಿನ ಬಾಟಲಿಯಿಂದ ನನ್ನ ತಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿದನು. ರೇವಣಸಿದ್ದನು ಸೂಳೆಮಗಂದು ಬಹಳ ಆಗ್ಯಾದ ಅಂತಾ ಬೈದು ಕೈಯಿಂದ ಕಣ್ಣಿನ ಮೇಲೆ ಹೊಡೆದಿರುತ್ತಾನೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ  ವ್ಯೆಕತ್ತಿಯ ಬಂಧನ  :
ಶಾಹಾಬಾದ ನಗರ ಠಾಣೆ : ದಿನಾಂಕ: 09/08/2017 ರಂದು ಬೆಳಗಿನ ಜಾವ ಶ್ರೀ ಎಸ್ ಅಸ್ಲಾಂ ಭಾಷ ಪಿ ಐ ಶಹಾಬಾದ ರವರು  ಮತ್ತು ಸಿಬ್ಬಂದಿಯೊಂದಿಗೆ ವಿಶೇಷ ಗಸ್ತು  ಮಾಡುತ್ತಾ ಲಕ್ಷ್ಮಿ ಗಂಜದಲ್ಲಿರುವ  ಇಂಗಿನ ಶೇಟ್ಟಿ ಇವರ ಆಡತ ಅಂಗಡಿಯ ಕಡೆಗೆ ಹೋದಾಗ ಅರವಿಂದ ತಂದೆ ತಾರಾಸಿಂಗ ಪವಾರ ಸಾ: ರಾರಪೈಲ ತಾಂಡಾ ಕಲಬುರಗಿ ಇತನು ಕತ್ತಲಲ್ಲಿ ಮರೆಯಾಗಿ ನಿಂತಿದ್ದು ನಮ್ಮ ನೋಡಿ ಓಡಿ ಹೋಗಲು ಪ್ರಯತ್ನಿಸಿದ್ದಾಗ ಅವನಿಗೆ ಹಿಡಿದು ವಿಚಾರಿಸಲು ತನ್ನ ಹೆಸರು ವಿಧ ವಿಧವಾಗಿ ತಿಳಿಸಿದನು ಮತ್ತು ಅವನಿಗೆ ಅಂಗ ಶೋಧನೆ ಮಾಡಲು ಅವನ ಹತ್ತಿರ ಒಂದು ಕಬ್ಬಿಣದ ರಾಡ ಸಿಕ್ಕಿದ್ದು . ಸದರಿಯವರನು ರಾತ್ರಿ ವೇಳೆಯಲ್ಲಿ ರಾಡು ಹಿಡಿದುಕೊಂಡು ಯಾವುದಾರು ಸ್ವತ್ತಿನ ಅಪರಾಧ ಮಾಡುವ ಉದ್ದೇಶ ರಾಡು ಇಟ್ಟುಕೊಂಡು ತಿರುಗಾಡುತ್ತಿದ್ದು ಅವನಿಗೆ ಹೀಗೆ ಬಿಟ್ಟಲ್ಲಿ ಸ್ವತ್ತಿನ ಅಪರಾಧ ಮಾಡುವ ಸಂಭವ ಕಂಡು ಬಂದಿರುವುದರಿಂದ ಸದರಿಯವನಿಗೆ ಹಿಡಿದುಕೊಂಡು  ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮರಳು ಸಂಗ್ರಹಿಸಿದ ಮರಳು ಜಪ್ತಿ :
ಶಾಹಾಬಾದ ನಗರ ಠಾಣೆ : ದಿನಾಂಕ:09.08.2017 ರಂದು ಹೋನಗುಂಟಾ ಸೀಮಾಂತರದ ವಿವಿದ ಸರ್ವೆ ನಂಬರ್ ಜಮೀನುಗಳಲ್ಲಿ ಆಕ್ರಮವಾಗಿ ಕಾಗಿಣಾ ನದಿಯಿಂದ ಮರಳು ಹೊರತೆಗೆದು ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿ ಇಟ್ಟಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪಿಐ ಶಹಾಬಾದ ಮತ್ತು ಸಿಬ್ಬಂದಿಯವರು ಹಾಗೂ ಕಂದಾಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಜನರು ಮತ್ತು ಪಿಡಬ್ಲೂಡಿ ಅಧಿಕಾರಿಗಳೊಂದಿಗೆ ಹೊನಗುಂಟಾ ಸೀಮಾಂತರದ ಸರ್ವೆ ನಂ.164/06 134 ಹಾಗೂ ಸರಿಕಾರಿ ಗಾಯರಾಣ ಸರ್ವೆ ನಂ.141 ಹೀಗೆ ವಿವಿದ ಸರ್ವೆ ನಂಬರಗಳಲ್ಲಿ  ಮರಳು ದಾಸ್ತಾನು ಮಾಡಿದ್ದು ನೋಡಿ ಖಚಿತ ಪಡಿಸಿಕೊಂಡು ಪಂಚರೊಂದಿಗೆ ಜಪ್ತಿ ಪಂಚನಾಮೆ ಕೈಕೊಂಡು ಪಿಡಬ್ಲೂಡಿ ಅಧಿಕಾರಿಯಿಂದ ಅಳತೆ ಮಾಡಿಸಲಾಗಿ  ಒಟ್ಟು 39 ಕ್ಯೂಬಿಕ್ ಮೀಟರ್ ಅಂ.ಕಿ 27300/- ನೇದ್ದು ಮರಳು ಜಪ್ತಿ ಪಡಿಸಿಕೊಂಡು ಭೂಮಾಲಿಕರು ಆಕ್ರಮ ಮರಳು ದಾಸ್ತಾನು ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ 4.30 ಪಿಎಂ ಕ್ಕೆ ಶ್ರೀ ಮಲ್ಲಿಕಾರ್ಜುನ ಶಿವಪೂರ ಉಪ ತಹಸೀಲ್ದಾರರು ನಾಡ ಕಾರ್ಯಲಯ ಶಹಾಬಾದ ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರವಾಹನ ಕಳವು ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ದಸ್ತಗಿರಿ ತಂದೆ ಬುರಾನಸಾಬ ಸಾ:ಮರತೂರ ರವರು ತನ್ನ ದಿನ ನಿತ್ಯದ ಕೆಲಸಕ್ಕಾಗಿ ನನ್ನ ಹೆಸರಿನಲ್ಲಿರುವ ಹೀರೊ ಹೊಂಡಾ ಮೊ ಸೈ ನಂ ಕೆಎ 37 ಕ್ಯೂ 2100 ನ್ನದ್ದು  ನಡೆಸಿಕೊಂಡು ಹೆಂಡತಿ ಮಕ್ಕಳೊಂದಿಗೆ ಇರುತ್ತೇನೆ. ಹೀಗಿದ್ದು ಇಂದು ದಿನಾಂಕ 09/08/2017  ಬೆಳಗ್ಗೆ  10.30 ಕ್ಕೆ ನನ್ನ ಮೋ ಸೈ ತೆಗೆದುಕೊಂಡು ನಮ್ಮೂರ ವಿಜ್ಞಾನೇಶ್ವರ ಗುಡಿಯ ಹತ್ತಿರದ ಹೊಲಕ್ಕೆ ಹೋಗಿ ಹೊಲದ ಹತ್ತಿರ ಮೋ ಸೈ ನಿಲ್ಲಿಸಿ ಕೆಲಸಕ್ಕೆ ಹೋಗಿದ್ದೇನು ಹೊಲದಲ್ಲಿ ಕೆಲಸ ಮುಗಿಸಿಕೊಂಡು  ಮರಳಿ 1 ಪಿಎಂ ಕ್ಕೆ ಬಂದಾಗ ನನ್ನ  ಮೋ ಸೈ ಕಾಣಲಿಲ್ಲ ಗಾಬರಿಯಾಗಿ ಆಜು ಬಾಜು & ಇತರೆ ಕಡೆಗೆ ಹುಡುಕಾಡಿದ್ದು ಸಿಗಲಿಲ್ಲಾ. ನಂತರ ನನ್ನ ಮೋ ಸೈ ಕಾಣೆಯಾದ ಬಗ್ಗೆ ನಮ್ಮೂರ ಶಾಮರಾಯ ತಂ ಶಿವಶರಣಪ್ಪಾ & ದೇವಾನಂದ  ತಂದೆ ಚಂದಪ್ಪಾ ಇವರಿಗೆ ತಿಳಿಸಿದ್ದರಿಂ ದ ಅವರೊಂದಿಗೆ ನಾನು  & ಎಲ್ಲರೂ ಕೂಡಿ ಮರತೂರ ಹಾಗೂ ಇತರೆ ಕಡೆಗಳಲ್ಲಿ ಹುಡುಕಾಡಿದರು ಮೋ ಸೈ  ಸಿಕ್ಕಿರುವುದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಫಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಸಿದ್ರಾಮಪ್ಪ ತಂದೆ ಶ್ರೀಮಂತರಾವ ಐರೋಡಗಿ ಸಾ: ರೌರ (ಬಿ) ರವರ ಹೇಳಿಕೆ ಪಡೆದುಕೊಂಡು ಹಾಜರ ಪಡಿಸಿದ್ದು ಸದರಿ ಕೇಳಿಕೆಯ ಸಾರಾಂಶವೇನೆಂದರೆ  ನಿನ್ನೆ ದಿನಾಂಕ 07-08-2017 ರಂದು ಎಂದಿನಂತೆ ಅಫಜಲಪೂರದಲ್ಲಿರುವ ಮನೆಯಿಂದ ಕರಜಗಿ ಕರ್ತವ್ಯಕ್ಕೆಂದು ನನ್ನ ಮೋಟಾರ ಸೈಕಲ್ ನಂ ಎಮ್.ಹೆಚ್-13-2051 ನೇದ್ದರ ಮೇಲೆ ಕುಳಿತುಕೊಂಡು ನಾನೊಬ್ಬನೆ ಹೋಗುತ್ತಿದ್ದು ರೌರ ಕ್ರಾಸ್ ಸಮೀಪ ಸಮಯ 09:40 ಎ.ಎಮ್ ದ ಸುಮಾರಿಗೆ ಎದುರುಗಡೆಯಿಂದ ಒಬ್ಬ ಮೋಟಾರ ಸೈಕಲ ಸವಾರನು ತನ್ನ ವಾಹನವನ್ನು ಅತೀ ವೇಗ ಹಾಗೂ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಪಡೆಸಿದ್ದು ನಾನು ಹಾಗೂ ಸದರಿ ವಾಹನದ ಮೇಲೆ ಕುಳಿತ ಮೂರು ಜನರು ಕೂಡಾ ಕೇಳಗೆ ಬಿದ್ದೇವು. ಅವರಿಗೆ ಯಾವುದೇ ಗಾಯ ಪೆಟ್ಟು ಆಗಿರುವುದಿಲ್ಲಾ ನನಗೆ ಎಡಗಾಲು ಮೋಳಕಾಲ ಕೇಳಗೆ ಎಲುಬು ಮುರಿದಿದ್ದು ಎಡಗೈಯ ಕೀರುಬೇರಳು ಮಧ್ಯ ಬೇರಳಿಗೆ ರಕ್ತ ಗಾಯವಾಗಿದ್ದು ಇರುತ್ತದೆ. ಸದರಿ ಮೋಟಾರ ಸೈಕಲ್ ನಂ ಎಮ್.ಹೆಚ್-12-ಸಿ.ಜಿ-6510 ಇತ್ತು ಸದರಿ ಮೂರು ಜನರು ನನಗೆ ಅಪಘಾತವಾದುದನ್ನು ನೋಡಿ ಮಾಡಾಡಿಸದೇ ಓಡಿ ಹೋಗಿರುತ್ತಾರೆ ಸದರಿ ಯವರಿಗೆ ನೋಡಿದಲ್ಲಿ ಗುರುತಿಸುತ್ತೇನೆ  ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

07 August 2017

Kalaburagi District Reported Crimes

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಯಶ್ವಂತರಾಯ ತಂದೆ ಹಣಮಂತರಾಯ ಬಿಸಗೊಂಡ ಸಾ : ಪಟ್ಟಣ ರವರು  ದಿನಾಂಕ:-06-08-2017 ರಂದು ನಮ್ಮ ಹುಣಸಿಗಿಡದ ಹೊಲದಲ್ಲಿ ತೊಗರಿ ಬೆಳೆಯಲ್ಲಿ ಸದಿ ಹೊಡೆಯುವ ಸಲುವಾಗಿ ಕೂಲಿ ಆಳುಗಳಿಗೆ ಹಚ್ಚಿದ್ದು, ಅದಕ್ಕೆ ನಮ್ಮ ಹೊಲಕ್ಕೆ ಹೋಗಿ ನೋಡಿಕೊಂಡು ಬರುವ ಸಲುವಾಗಿ ಸಾಯಾಂಕಾಲ 04.30 ಗಂಟೆ ಸುಮಾರಿಗೆ  ನಾನು ಮತ್ತು ಭೀಮಶ್ಯಾ ಇಬ್ಬರು ನಮ್ಮ ಗ್ರಾಮದಿಂದ ನನ್ನ ಟಿವಿಎಸ್ ಎಕ್ಷೆಲ್ ಮೋಟರ್  ಸೈಕಲ್ ನಂ.ಕೆಎ-32-ಇಎಪ್-5572 ನೇದ್ದರ ಮೇಲೆ  ಇಬ್ಬರೂ ಕೂಡಿ ನಮ್ಮ ಹೊಲಕ್ಕೆ ಹೊರಟೇವು . ಸದರಿ ಮೋಟರ್ ಸೈಕಲ್ ನಾನು ಚಲಾಯಿಸುತ್ತಿದ್ದೇನು. ಹಿಂದುಗಡೆ ಸ್ನೇಹಿತ ಭೀಮಶ್ಯಾ ರಾಯಗೊಂಡ ಇತನು ಕುಳಿತುಕೊಂಡಿದ್ದನು. ನಾವಿಬ್ಬರೂ ಕೂಡಿಕೊಂಡು ಸಾಯಾಂಕಾಲ್ 05.30 ಗಂಟೆ ಸುಮಾರಿಗೆ ಸುಂಟನೂರ ಕ್ರಾಸ್ ಇನ್ನು ಮುಂದೆ ಇರುವಾಗಲೇ ನಮ್ಮ ಗ್ರಾಮದ ಶರಣಪ್ಪ ಬಸಗೊಂಡರ ಸೈಕಲ್ ಮೇಲೆ ಹೊರಟಾಗ, ಅದೇ ವೇಳೇಗೆ ಎದುರುಗಡೆಯಿಂದ ಅಂದರೇ, ಆಳಂದ ರೋಡ ಕಡೆಯಿಂದ ಒಬ್ಬ ಲಾರಿ ಕೆಎ 32 ಎ 5085 ಚಾಲಕನು ತನ್ನ ವಶದಲ್ಲಿದ್ದ ಲಾರಿಯನ್ನು ಅಡ್ಡಾ-ದಿಡ್ಡಿಯಾಗಿ ಅತಿವೇಗ ಮತ್ತು ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ನಾವಿಬ್ಬರೂ ಕುಳಿತುಕೊಂಡು ಬರುತ್ತಿದ್ದ ಮೋಟರ್ ಸೈಕಲ್ ಎದುರಿನಿಂದ ಜೋರಾಗಿ ಡಿಕ್ಕಿ ಹೊಡೆದು ಅಪಘಾತಪಡಿಸಿ ತನ್ನ ಲಾರಿಯನ್ನು ಸ್ವಲ್ಪ ಮುಂದೆ ಒಯ್ದು ನಿಲ್ಲಿಸಿದನು.ಆಗ ಈ ವಿಷಯವನ್ನು ನೋಡಿ ಅಲ್ಲಿಯೇ ಹೊಲದಲ್ಲಿ ಕೆಲಸ್ ಮಾಡುತ್ತಿದ್ದ ನಮ್ಮ ಗ್ರಾಮದ ಭೀಮಾಶಂಕರ ಕಲಶಟ್ಟಿ ಹಾಗೂ ನಮ್ಮ ಹಿಂದೆ ಮೋಟರ್ ಸೈಕಲ್ ಮೇಲೆ ಬುರತ್ತಿದ್ದ ನಮ್ಮ ಗ್ರಾಮದ ಮಲ್ಲೇಶಪ್ಪ ಬಸಗೊಂಡ, ಭೀಮಣ್ಣ ದೇವಗೊಂಡ ಇವರೆಲ್ಲರೂ ಬಂದು ನನಗೆ ಎಬ್ಬಿಸಿದರು.  ಆಗ ನಾನು ನೋಡಿಕೊಳ್ಳಲು ನನಗೆ ಎಡ ಎದೆಗೆ ಎಡ ಸೊಂಟಕ್ಕೆ ಗುಪ್ತಗಾಯಗಳಾಗಿದ್ದವು. ನನ್ನ ಸ್ನೇಹಿತ ಭೀಮಶ್ಯಾ ರಾಯಗೊಂಡ ಇತನಿಗೆ ನೋಡಲಾಗಿ, ತಲೆಯ ಹಿಂದುಗಡೆ, ಎಡಗಾಲು ಮುಂಗಾಲಿಗೆ, ಎಡ ಹೆಬ್ಬರಳಿಗೆ ಭಾರಿ ರಕ್ತಗಾಯವಾಗಿ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದನು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಮಾಣಿಕೇಶ್ವರಿ ಗಂಡ ಮಹೇಶ ನಾವದಗಿ ಸಾಃ ಸಾಯಿರಾಮ ನಗರ ಜೇವರ್ಗಿ ರೋಡ ಕಲಬುರಗಿ ಇವರು ದಿನಾಂಕ 12-02-2014 ರಂದು ಮಹೇಶ ತಂದೆ ಶಿವರಾಯ ನಾವದಗಿ ಇವರೊಂದಿಗೆ ಸಂಪ್ರದಾಯದಂತೆ ಮದುವೆ ಆಗಿದ್ದು ಮದುವೆ ಕಾಲಕ್ಕೆ ವರದಕ್ಷಿಣೆಯಾಗಿ  5 ಲಕ್ಷ ಹಣ, 10 ತೋಲೆ ಬಂಗಾರ , ಮನೆ ಬಳಕೆ ಸಾಮಾನುಗಳ ಸಲುವಾಗಿ 1 ಲಕ್ಷ 80 ಸಾವಿರ ರೂಪಾಯಿ ಹಣವನ್ನು ಕೊಟ್ಟಿದ್ದೆವೆ ಹೀಗಿದ್ದು ಮದುವೆಯಾದ 2 ತಿಂಗಳ ನಂತರ ನನ್ನ ಗಂಡ ಮಹೇಶ ,ಅತ್ತೆ ಮಹಾದೇವಿ , ಮಾವ ಶಿವರಾಯ , ನಾದನಿಯರಾದ  ಸವಿತಾ ಮತ್ತು ಮಾಣಿಕೇಶ್ವರಿ @ ಮಧು ಇವರೆಲ್ಲರೂ ಸೇರಿ ನನಗೆ ವಿನಾ ಕಾರಣ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈಯುವುದು ಮಾಡುತ್ತಾ ಬಂದಿದ್ದು ಹಾಗೂ ಎಲ್ಲರೂ ಸೇರಿ 3 ಲಕ್ಷ ರೂಪಾಯಿ ಹಣ ತವರು ಮನೆಯಿಂದ ತರುವಂತೆ ಕಿರಿಕುಳ ನೀಡಲು ಪ್ರಾರಂಭಿಸಿದರು ಹಣ ತಂದರೆ ಮಾತ್ರ ಬಾ ಅಂತಾ ಹೇಳಿದರು ಇದನ್ನು ನಾನು ನನ್ನ ತಂದೆಯವರಿಗೆ ತಿಳಿಸಿದ್ದು ನನ್ನ ತಂದೆಯವರು ಮನೆಯಲ್ಲಿ ಇದ್ದ ಬಂಗಾರ ಹಾಗೂ ತಮ್ಮ ಮನೆ ಅಡವಿಟ್ಟು 3 ಲಕ್ಷ ರೂಪಾಯಿ ಹೊಂದಿಸಿ ನನ್ನ ಗಂಡನಿಗೆ ಕೊಟ್ಟಿದ್ದು ನನ್ನ ಗಂಡ ಇನ್ನೂ 2 ಲಕ್ಷ ಹಣ ತೆಗೆದುಕೊಂಡು ಬರಬೇಕು ಅಂತಾ ನನಗೆ ನನ್ನ ತವರು ಮನೆಯಲ್ಲಿಯೆ ಬಿಟ್ಟಿದ್ದರು ನಂತರ ನನ್ನ ತಂದೆ-ತಾಯಿಯವರು ದಿನಾಂಕ 29-05-2017 ರಂದು ಬೆಳ್ಳಿಗೆ 11 ಗಂಟೆಗೆ ನನಗೆ ಕಲಬುರಗಿಯ ಶಹಬಜಾರದಲ್ಲಿ ಇರುವ ನನ್ನ ಗಂಡನ ಮನೆಯಲ್ಲಿ ಬಿಡಬೇಕು ಅಂತಾ ಕರೆದುಕೊಂಡು ಹೋದಾಗ ನನ್ನ ಗಂಡ,ಅತ್ತೆ, ಮಾವ, ನಾದಿನಿಯರು ಎಲ್ಲರೂ ಸೇರಿ ನಮಗೆ ಅವಾಚ್ಯ ಶಬ್ದಗಳಿಂದ ಬೈದು ನಿನು 5 ಲಕ್ಷ ಹಣ ತಂದರೆ ಮಾತ್ರ ನಮ್ಮ ಮನೆಯಲ್ಲಿ ಇಟ್ಟುಕೊಳ್ಳುತ್ತೆವೆ ಇಲ್ಲವಾದರೆ ನಿನಗೆ ಖಲಾಸ ಮಾಡುತ್ತೆವೆಂದು ನನ್ನ ಗಂಡ ನನಗೆ ಕೈಯಿಂದ ಹೊಡೆದನು ಉಳಿದವರೆಲ್ಲರೂ ಕೂಡಿ ಜೀವದ ಬೇದರಿಕೆ ಹಾಕಿ ಮನೆಯಿಂದ ಹೊರಗೆ ಹಾಕಿದರು ಆದ ಕಾರಣ ನನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

06 August 2017

Kalaburagi District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ಜೇವರಗಿ ಠಾಣೆ : ಶ್ರೀಮತಿ ಪಾತೀಮಾ ಗಂಡ ಅಬ್ದುಲ್ ಪಟೇಲ ಮದ್ದರಕಿ ಸಾಃ ಮಾರಡಗಿ (ಎ.ಎಸ್.) ತಾಃ ಜೇವರಗಿ ರವರನ್ನು   ಸುಮಾರು 5 ವರ್ಷಗಳ ಹಿಂದೆ ಮಾರಡಗಿ (ಎಸ್.ಎ) ಗ್ರಾಮದ ಅಬ್ದುಲ್ ಪಟೇಲ ಇತನ್ನೊಂದಿಗೆ ನನ್ನ ಮದುವೆಯಾಗಿರುತ್ತದೆ. ಮದುವೆಯಾದ ನಂತರ ನಾನು ನನ್ನ ಗಂಡನ್ನೊಂದಿಗೆ ಗಂಡನ ಮನೆಯಲ್ಲಿಯೇ ಇದ್ದು ಸಂಸಾರ ಮಾಡುತ್ತಾ ಬಂದಿರುತ್ತೆನೆ ನಮಗೆ ಲಾಲಬೀ ಎಂಬುವ ಒಂದು ಹೆಣ್ಣು ಮಗು ಇರುತ್ತದೆ. ಮದುವೆಯ ಕಾಲಕ್ಕೆ ನನ್ನ ತವರು ಮನೆಯರು ನನ್ನ ಗಂಡನಿಗೆ ಬೆಲೆ ಬಾಳುವ 1) ಮಂಚ, ಗಾದಿ, 2) ಏರಕೂಲರ್, 3) ಪ್ರೀಜ 4) ಅಲಮಾರಿ ( ಟಿಜೋರಿ) 5) ಎರಡು ಹಾಂಡೆಗಳು 6) ಎರಡು ನಳ ಪಾತ್ರೆಗಳು, 7) ಎರಡು ತಾಮ್ರದ ಕೊಡಗಳು, ಹಾಗೂ ಮನೆಯ ಬಳಕೆ ಇತರೆ ಸಾಮಾನು ಕೊಟ್ಟಿದ್ದು ಇರುತ್ತದೆ. ಮದುವೆಯಾದ ನಂತರ ಸುಮಾರು 3 ವರ್ಷಗಳವರೆಗೆ ನನ್ನ ಗಂಡನು ನನಗೆ ಸರಿಯಾಗಿಯೇ ನೊಡಿಕೊಂಡಿರುತ್ತಾನೆನಂತರ ನನ್ನ ಗಂಡನು ಮದುವೆಯಲ್ಲಿ ನನಗೆ ವರದಕ್ಷೀಣೆ ಹಣ ಕೊಟ್ಟಿರುವುದಿಲ್ಲಾ ನೀನು ತವರು ಮನೆಯಿಂದ 5,00,000/- ( ಐದು ಲಕ್ಷ) ರೂಪಾಯಿ ವರದಕ್ಷೀಣೆ ಹಣ ತೆಗೆದುಕೊಂಡು ಬರುವಂತೆ  ದಿನಾಲು ಮನೆಯಲ್ಲಿ  ಅವಾಚ್ಯವಾಗಿ ಬೈಯುವುದು ಹೊಡೆಯುವುದು ಮಾಡುತ್ತಾ ಬಂದಿರುತ್ತಾನೆಅಲ್ಲದೆ ನನ್ನ ಮಾವ ಅಮೀರಪಟೇಲ  ಅತ್ತೆ ಜೈನಾಬೀ ಗಂಡ ಅಮೀರಪಟೇಲ ಮದ್ದರಕಿ, ನನ್ನ ಗಂಡ ಅಕ್ಕ ಮಾಬಣ್ಣಿ ಗಂಡ ಜಾಫರ ಅಲಿ ಸಾಃ ಗಂವ್ಹಾರಮತ್ತು ಅವಳ ಗಂಡ ಜಾಪರ್ ಅಲಿ ಇವರೆಲ್ಲರೂ ಕೂಡಿ ನನಗೆ ವರದಕ್ಷಣೆ ಹಣ ತೆಗೆದುಕೊಂಡು ಬರುವಂತೆ ಅವಾಚ್ಯವಾಗಿ ಬೈಯುವುದು ಹೊಡೆಯುವುದು ಮಾಡುತ್ತಾ ಬಂದಿರುತ್ತಾರೆಅವರು ಕೊಡುವ ತ್ರಾಸ್ ತಾಳಲಾರದೆ  ನಾನು ನನ್ನ ತವರು ಮನೆಯವರಿಗೆ ಹೇಳಿದಾಗ  ನನ್ನ ತಂದೆ ಮತ್ತು ತಾಯಿ ಹಾಗೂ  ನಮ್ಮೂರ ಪ್ರಮುಖರು ಕೂಡಿಕೊಂಡು ನನ್ನ ಗಂಡನ ಮನೆಗೆ ಬಂದು ನನ್ನ ಗಂಡನಿಗೆ ಮತ್ತು ನನ್ನ ಗಂಡನ ಮನೆಯವರಿಗೆ ಬುದ್ದಿ ಮಾತು ಹೇಳಿ ನನ್ನ ಗಂಡನಿಗೆ 50 ಗ್ರಾಮ ಚಿನ್ನದ ಆಭರಣಗಳು, ಮತ್ತು 25,000/- (ಇಪ್ಪತ್ತೈದು ಸಾವಿರ ರೂಪಾಯಿಗಳು) ನನ್ನ ತಂದೆ  ಕೊಟ್ಟಿರುತ್ತಾರೆಆದರೂ ಸಹ ನನ್ನ ಗಂಡ ಮತ್ತು ನನ್ನ ಗಂಡನ ಮನೆಯವರು ನನಗೆ ಬಹಳ ತ್ರಾಸ್ ಕೊಡುತ್ತಿದ್ದರುನಾನು ಮನೆಯ ಮರ್ಯಾದೆಗೆ ಅಂಜಿ ಮತ್ತು ನನ್ನ ಮುಂದಿನ ಭವಿಷ್ಯದ ಬಗ್ಗೆ ಯೋಚನೆ ಮಾಡಿ ಸುಮ್ಮನಿದ್ದೆನು, ಆದರೂ ಅವರು ನನಗೆ ಹಣ ತವರುಂತೆ ಬಹಳ ತ್ರಾಸ್ ಕೊಡುತ್ತಿದ್ದಾಗ ನಾನು ಈಗ 6 ತಿಂಗಳ ಹಿಂದೆ ನನ್ನ ಮಗಳೊಂದಿಗೆ ನನ್ನ ತವರು ಮನೆ ಯಲಗೊಡ ಗ್ರಾಮಕ್ಕೆ ಬಂದು ನನ್ನ ತಂದೆ ತಾಯಿಯವರ ಹತ್ತಿರ ಇದ್ದೆನು. ನನ್ನ ಗಂಡನು ಮತ್ತು ಅವರ ಮನೆಯವರು ನನಗೆ ಕರೆಯಲು ಬರಲಾರದಕ್ಕೆ ನಾನು ದಿ.  01-08-2017 ರಂದು ಮುಂಜಾನೆ ನನ್ನ ತಂದೆ ಹಾಗೂ ನನ್ನ ಅಣ್ಣನಾದ ಮೈಹಿಬೂಬ ಪಟೇಲ ಮತ್ತು ನಮ್ಮೂರ ಮೈಹಿಬೂಬ ಪಟೇಲ ಪೊಲೀಸ್ ಬಿರಾದಾರ, ಭೀಮಣ್ಣ ನಾಯ್ಕೊಡಿ ಇವರೊಂದಿಗೆ ನನ್ನ ಗಂಡನ ಮನೆಗೆ ಮುಂಜಾನೆ 11.00 ಗಂಟೆಯ ಸುಮಾರಿಗೆ ಹೋದಾಗ, ಅಲ್ಲಿ ನನ್ನ ಗಂಡನಾದ 1) ಅಬ್ದುಲ್ ಪಟೇಲ ತಂದೆ ಅಮೀರ ಪಟೇಲ ಮಾವ 2) ಅಮೀರಪಟೇಲ  ಅತ್ತೆಯಾದ 3) ಜೈನಾಬೀ ಗಂಡ ಅಮೀರಪಟೇಲ ಮದ್ದರಕಿ, ನನ್ನ ಗಂಡ ಅಕ್ಕ 4) ಮಾಬಣ್ಣಿ ಗಂಡ ಜಾಫರ ಅಲಿ ಸಾಃ ಗಂವ್ಹಾರಮತ್ತು ಅವಳ ಗಂಡ 5) ಜಾಪರ್ ಅಲಿ ಇವರೆಲ್ಲರೂ ಕೂಡಿಕೊಂಡು ಬಂದು ನನಗೆ ಅವಾಚ್ಯವಾಗಿ ಬೈಯುತ್ತಿದ್ದಾಗ ನಾನು ಅವರಿಗೆ ನನಗೆ ಯಾಕೇ ಬೈಯುವುತ್ತಿದ್ದಿರಿ ಎಂದು ಕೇಳಿದಕ್ಕೆ ನನ್ನ ಗಂಡನು ನನಗೆ ಏ ರಂಡಿ ಇಷ್ಟು ದಿವಸ ತವರು ಮನೆಯಲ್ಲಿ ಇದ್ದು ಇವತ್ತು ಬಂದಿದಿ ನಿನಗೆ ಐದು ಲಕ್ಷ ವರದಕ್ಷಣಿ ಹಣ ತೆಗೆದುಕೊಂಡು ಬಾ ಎಂದು ಹೇಳಿದರೆ ತವರು ಮನೆಗೆ ಹೋಗಿದ್ದಿ ಬೊಸಡಿ ಎಂದು ಕೈಯಿಂದ ಕಪಾಳದ ಮೇಲೆ ಹೊಡೆದಿರುತ್ತಾನೆ, ಅತ್ತೆಯಾದ ಜೈನಾಬೀ ಇವಳು ಈ ರಂಡಿಗೆ ಹೊಡೆದು ಸಾಯಿಸಿ ಬಿಡು ನಿನಗೆ ಬೇರೆ ಮದುವೆ ಮಾಡಿಸುತ್ತೆನೆ ಎಂದು ಬೈಯ್ದು ಕೈಯಿಂದ ಬೇನ್ನು ಮೇಲೆ ಹೊಡೆದಿರುತ್ತಾಳೆ, ಮಾಬಣ್ಣಿ ಇವಳು ಈ ರಂಡಿ ವರದಕ್ಷಿಣೆ ಹಣ ತರುವವರೆಗೆ ಅವಳು ತವರು ಮನೆಯಲ್ಲಿಯೇ ಬಿಡು ಎಂದು ನನ್ನ ಗಂಡನಿಗೆ ಹೇಳುತ್ತಾ ನನ್ನ ತಲೆಯ ಮೇಲಿನ ಕೂದಲು ಹಿಡಿದು ಜಗ್ಗಿರುತ್ತಾಳೆ, ಜಾಫರ ಅಲಿ ಇತನು ನನ್ನ ಮೈ ಮೇಲಿನ ಬಟ್ಟೆ ಹಿಡಿದು ಜಗ್ಗಿ ಕಾಲಿನಿಂದ ಸೊಂಟದ ಮೇಲೆ ಒದ್ದಿರುತ್ತಾನೆನಾನು ಚೀರಾಡುತ್ತಿದ್ದಾಗ ನನ್ನ ಮಾವ ಅಮೀರ ಪಟೇಲ ಇತನು ಇವಳಿಗೆ ಮನೆಯಲ್ಲಿ ಹಾಕಿರಿ ಒಂದು ಗತಿ ಕಾಣಿಸೊಣ ಎಂದು ಹೇಳಿದಾಗ ನನ್ನ ತಂದೆ ಹಾಗೂ ನನ್ನ ಅಣ್ಣ ಮತ್ತು ನನ್ನ ಜೊತೆ ಬಂದ ಮೈಹಿಬೂಬ ಪಟೇಲ ಪೊಲೀಸ್ ಬಿರಾದಾರ, ಭೀಮಣ್ಣ ನಾಯ್ಕೊಡಿ ಇವರು ಬಂದು ನನಗೆ ಹೊಡೆಯುವುದು ಬಿಡಿಸಿಕೊಂಡಿರುತ್ತಾರೆ, ಮತ್ತು ಅವರೆಲ್ಲರೂ ವರದಕ್ಷಣೆ ಹಣ ತೆಗೆದುಕೊಂಡು ಬರದಿದ್ದರೆ ನೀನ್ನ ಜೀವ ಸಹಿತ ಬಿಡುವುದಿಲ್ಲಾ ಎಂದು ಜೀವದ ಬೇದರಿಕೆ ಹಾಕಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಸಕೀನಾ ಪಟೆಲ ಗಂಡ ದಾದಾ ಪಟೆಲ್ಸಾ:ಮನೆ ನಂ. 11-1041/120 ಎಮ್ಎಸ್ಕೆ ಮಿಲ್ಮದಿನಾ ಕಾಲೋನಿ ಕಲಬುರಗಿ ಇವರ ಹತ್ತಿರ ಸುಮಾರು ದಿನಗಳ ಹಿಂದೆ ಹಣದ ಅಡಚಣೆ ಇದ್ದಾಗ ತಮಗೆ ಪರಿಚಯದವರಾದ 1) ಉಸ್ಮಾನ ಡಾಂಗೆ 2) ಸಾದೀಕ್ಫರೀದ ಇವರು ತಲಾ 10,00,000/- ರೂಗಳು ಪಡೆದುಕೊಂಡಿದ್ದು, ಅದನ್ನು ಕೇಳಲು ಹೋದಾಗ ಅವರಿಬ್ಬರು ತಮಗೆ ಪರಿಚಯದವನಾದ ಚಿದಾನಂದ ತಂದೆ ದೌಲಪ್ಪಾ ಕೊಳ್ಳಿ ಇವರ ಹತ್ತಿರ ಕರೆದುಕೊಂಡು ಹೋಗಿ ನನಗೆ 15,42,000/-ರೂಗಳು ಕೊಡಿಸಿರುತ್ತಾರೆ. ನಂತರ ನನಗೆ, ನೀವು ನಿಮ್ಮ ಮನೆಯನ್ನು ಚಿದಾನಂದ ಇವರಿಗೆ ಮಾರ್ಟಗೆಜ ಮಾಡಿಸಿಕೊಡು ನಿಮ್ಮ 20,00,000/- ರೂಗಳು ನಮ್ಮ ಹತ್ತಿರ ಇರುತ್ತವೆಯಲ್ಲ ನಾವು ಬಿಡಿಸಿ ಕೊಡುತ್ತೆವೆ ಅಂತ ಹೇಳಿ ನನ್ನ ಮನೆ ನಂ. 11-1041/120 ಎಮ್ಎಸ್ಕೆ ಮಿಲ್ಮದಿನಾ ಕಾಲೋನಿ ಕಲಬುರಗಿ ನೇದ್ದನು ಮಾರ್ಟಗೇಜ ಮಾಡಿಕೊಟ್ಟಿದ್ದು ಇರುತ್ತದೆ. ಆದ್ದರಿಂದ ಕಲಬುರಗಿಯ ಸಬ್ರಜೀಸ್ಟರರ ಕಛೆರಿಯಲ್ಲಿ ಮಾರ್ಟಗೇಜ ಮಾಡಿಕೊಟ್ಟಿರುತ್ತನೆ. ಉಸ್ಮಾನ ಡಾಂಗೆ ಇವರು ನನಗೆ ನಿಮಗೆ ಕೊಡಬೇಕಾದ ಹಣವನ್ನು ಚಿದಾನಂದ ಇವರಿಗೆ ಕೊಟ್ಟು ನಿಮ್ಮ ಮನೆಯ ಸೆಲ್ಡೀಡ್ನ್ನು ಕ್ಯಾನ್ಸಲ್ಮಾಡಿಕೊಡುತ್ತೆವೆ ಅಂತ ಹೇಳಿರುತ್ತಾರೆ.ದಿನಾಂಕ:31/07/2017 ರಂದು ಸಾಯಂಕಾಲ 7:30 ಗಂಟೆಗೆ ನಾನು ಮನೆಯಲ್ಲಿದ್ದಾಗ ಚಿದಾನಂದ ಕೊಳ್ಳಿ , ಉಸ್ಮಾನ ಡಾಂಗೆ, ಸಾದೀಕ ಫರೀದ ಸುಂಬಡ, ಮಹಾರಾಜ ಜಮಾದಾರ, ಮಹ್ಮದ ಇಕ್ಬಾಲ್‌, ಮಾರುತಿ ತಂದೆ ಅಂಬಾಜಿ ಸಂಗಡ 15 ಜನರು ಕೂಡಿಕೊಂಡು ಬಂದು ನಮ್ಮ ಮನೆಯಲ್ಲಿ ಅಕ್ರಮ ಪ್ರವೇಶ ಮಾಡಿ ಮನೆಯಲ್ಲಿನ ಸಾಮಾನುಗಳನ್ನು ಬಿಸಾಕುತ್ತಿದ್ದಾಗ ನಾನು ಅವರಿಗೆ ಇದು ನೀವು ಮಾಡುವದು ಸರಿಯಲ್ಲ ಅಂತ ಹೇಳುತ್ತಿದಾಗ ಅವರೆಲ್ಲರೂ ನನಗೆ ಅವಾಚ್ಯವಾಗಿ ಬೈಯುತ್ತಾ ಅವರಲ್ಲಿ ಉಸ್ಮಾನ ಡಾಂಗೆ, ಚಿದಾನಂದ, ಮಹಾರಾಜ ಜಮಾದಾರ ಇವರು ನನ್ನ ಕೈಹಿಡಿದು ಕಪಾಳ ಮೇಲೆ ಹೊಡೆದು ಗುಪ್ತಗಾಯ ಮಾಡಿರುತ್ತಾರೆ. ನಂತರ ಅವರೆಲ್ಲರೂ ನನಗೆ ನೀನು ನಮಗೆ ಹಣ ಕೊಡದೆಯಿದ್ದರೆ ನಿನ್ನ ಮನೆಯನ್ನು ಕಬ್ಜಾ ಮಾಡಿತ್ತೆವೆ. ಇಲ್ಲವಾದರೆ ಇತ್ತಿಚೆಗೆ ಆದ ಮುದಾಸ್ಸಿರ ಇತನ ಕೊಲೆ ಆದ ಹಾಗೆ ನಿನಗೆ ಬಿಡುವದಿಲ್ಲ ಅಂತ ಜೀವದ ಭಯ ಹಾಕಿರುತ್ತಾರೆ. ಇಲ್ಲ ನಮ್ಮ ಹಣ ಕೊಡು ಅಂತ ಹೇಳಿರುತ್ತಾರೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :.
ಅಫಜಲಪೂರ ಠಾಣೆ : ದಿನಾಂಕ 28-07-2017 ರಂದು ರಾತ್ರಿ 12:30 ಗಂಟೆಗೆ ನಾನು ಶೌಚಕ್ಕೆಹೋದಾಗ ಮೋಹನ ತಂದೆ ನಾಗು ಜಾಧವ ಹಾಗೂ ವಿಜಯತಂದೆ ನಾಮದೇವ ರಾಠೋಡ ಇಬ್ಬರು ಕರಜಗಿ ತಾಂಡಾ ಇದ್ದು, ನನ್ನನ್ನು ಅನಾಮತ್ತಾಗಿ ಎತ್ತಿ ಟಾಟಾ ಇಂಡಿಕಾ ವಾಹನದಲ್ಲಿ ತೂರಿ ಹಾಕಿ ಅಫರಿಚಿತ ಸ್ಥಳಗಳಿಗೆ ಕರೆದುಕೊಂಡು ಹೋಗಿ, ನನಗೆ ಕೈ ಹಿಡಿದು ಏಳೆದು ನಮ್ಮ  ಜೋತೆ ಸಹಕರಿಸು ಇಲ್ಲದಿದ್ದರೆ ನಿನಗೆ ಜೀವಸಹಿತ ಬಿಡುವುದಿಲ್ಲ ಎಂದು ಹಾಗೂ ವಿಷುಯ ಎಲ್ಲಿಯೂ ಯಾರಿಗೂ ಹೇಳಬೇಡ ಒಂದು ವೇಳೆ ಹೇಳೀದರೆ ನಿನ್ನನ್ನು ಹೊಡೆದು ಎಸೆದು ಹೋಗುವುದಾಗಿ ಬೇದರಿಸಿದ್ದಾರೆ. ನೀನು ನಿನ್ನ ತಂದೆ ತಾಯಿಗೆ ತಿಳಿಸಬೇಡ, ತಿಳಿಸಿದರೆ ನಿನ್ನ ಸ್ಥೀತಿ ಕೇಡುತ್ತದೆ ಎಂದು ಹಾಗೂ ಪೊಲೀಸರೇದರೂ ಕೂಡಾ ಏನು ಹೇಳಬೇಡ ಎಂದು. ಒಂದು ವೇಳೆ ಹೇಳೀದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಎಂದು ಬೇದರಿಸಿರುತ್ತಾರೆ.  ಅಂತಾ  ಶ್ರೀಮತಿ ಗೀತಾ ಗಂಡ ಸುನೀಲ ರಾಠೋಡ ಸಾ|| ಕರಜಗಿ ತಾಂಡಾ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ