POLICE BHAVAN KALABURAGI

POLICE BHAVAN KALABURAGI

20 July 2017

Kalaburagi District Reported Crimes

ಅಪಹರಣ ಮಾಡಿ ಗನ್ನದಿಂದ ಅಂಜಿಸಿ ಸಹಿ ಮಾಡಿಸಿಕೊಂಡ ಪ್ರಕರಣ  :
ಮಹಿಳಾ ಠಾಣೆ : ಕುಮಾರಿ ಶ್ವೇತಾ ತಂದೆ ಶೇಶಿಕುಮಾರ ಮೈನಾಳಕರ್ ಸಾ; ಮನೆ ನಂ 15 ಡಿ-ಬ್ಲಾಕ್ ಪೊಲೀಸ ಕ್ವಾಟರ್ಸ ಶಾಂತಿ ನಗರ ಕಲಬುರಗಿ ಇವರು ದಿನಾಂಕ 01.07.2016 ರಂದು ಬೆಳಗ್ಗೆ 10-30 ಗಂಟೆ ಸುಮಾರಿಗೆ ನಾನು ನನ್ನ ಮನೆಯಿಂದ ಗಾಜಿಪೂರದಲ್ಲಿನ ಬಿಗ್ ಬಜಾರಗೆ ಹೋಗಿ ಬಟ್ಟೆ ಖರೀದಿ ಮಾಡಿಕೊಂಡು ಮದ್ಯಾಹ್ನ 1-30 ಸುಮಾರಿಗೆ ಕೇಂದ್ರ ಬಸ್ಸ್ ನಿಲ್ದಾಣ ಎದುರುಗಡೆ ಆಟೋದಲ್ಲಿ ಬಂದು ಇಳಿದು ಮನೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕಮಲ್ ಹೋಟಲ್ ಎದುರುಗಡೆ ಒಂದು ಗಾಡಿಯಿಂದ ಹಾರ್ನ ಕೇಳಿ ಬಂದು ತಿರುಗಿ ನೋಡಲಾಗಿ ಒಂದು ಸ್ಕಾರ್ಪಿಯೋ ಗಾಡಿಯಿಂದ ಪರಸಪ್ಪ ತಂದೆ ಪೀರಪ್ಪ ಕರಮಲ್ಲೆ ಸಾ; ದೇವಣಗಾಂವ ಎಂಬಾತ “ ಏ ಶ್ವೇತಾ ಎಲ್ಲಗೆ ಹೋಗ್ತಾ ಇದ್ದೀ” ಎಂದು ಕೇಳಿದ ನನಗೆ ಪರಿಚಿತನಾದುದರಿಂದ ಆಗ ನಾನು ಮನೆಗೆ ಹೋಗುತ್ತಿದ್ದೆನೆ ಎಂದು ಹೇಳಿದೆ. ಈ ಗಾಡಿಯಲ್ಲಿ ಕೂಡು ಮನೆಯವರೆಗೆ ಬೀಡುತ್ತೇವೆ ಅಂತಾ ನನ್ನನ್ನು ನಂಬಿಸಿ ಗಾಡಿಯಲ್ಲಿ ಕೂಡಿಸಿಕೊಂಡನು. ಗಾಡಿಯನ್ನು ತಿರುಗಿಸಿಕೊಂಡು ಎಂ.ಎಸ್.ಕೆ.ಮಿಲ್ ಕಡೆಗೆ ತೀವ್ರ ವೇಗದಲ್ಲಿ ಹೋರಟಾಗ ನನ್ನ ಮನೆ ಶಾಂತಿ ನಗರದಲ್ಲಿದೆ ಈ ಕಡೆ ಎಲ್ಲಿಗೆ ಹೋಗುತ್ತಿದ್ದಿರಿ? ಅಂತಾ ಚಿರಲಾರಂಬಿಸಿದೆ ಆಗ ಪರಸಪ್ಪ ಇತನು ತನ್ನ ಬಳಿ ಇದ್ದ ಗನ್ ತೆಗೆದು ನಿಮ್ಮ ತಂದೆ ದೊಡ್ಡಪ್ಪ ಮತ್ತು ನಿಮ್ಮ ಅತ್ತೆ ನಡುವಿನ ಆಸ್ತಿ ವ್ಯಾಜ್ಯದ ಬಗ್ಗೆ ಕಾಂಫ್ರಮೈಜ ಮಾಡಿಕೋ ಅಂತಾ ನಿಮ್ಮ ತಂದೆಗೆ ಹಲವಾರು ಬಾರಿ ಹೇಳಿದರೂ ಕೇಳಲಿಲ್ಲ.ನಿನ್ನ ಜೀವನ ಹಾಳು ಮಾಡುವದಕ್ಕಾಗಿ ನಾನು ಅಫಜಲಪೂರ ಸಬ್ ರಜಿಸ್ಟರ ಆಫೀಸಿನಲ್ಲಿ ನಿನ್ನನ್ನು ಮದುವೆ ಆಗುತ್ತೇನೆ ಸುಮ್ಮನೆ ಇದ್ದರೆ ಸರಿ ಇಲ್ಲ ಅಂದರೆ ನಿನ್ನನ್ನು ಸಾಯಿಸಿ ಬೀಡುತ್ತೇನೆ ಅಂತಾ ಹೆದರಿಸಿ ನನ್ನ ಬಳಿ ಇದ್ದ ಮೊಬೈಲ ಪೋನ ಕಿತ್ತುಕೊಂಡನು. ಅಫಜಲಪೂರ  ತಹಸಿಲ್ದಾರ ಕಛೇರಿ ಕಂಪೌಂಡ ಓಳಗೆ ಗಾಡಿ ನಿಲ್ಲಿಸಿ ಗಾಡಿಯಿಂದ ಇಬ್ಬರು ಇಳಿದು ಹೋಗಿ ಒಬ್ಬ ವ್ಯಕ್ತಿಯನ್ನು  ಕರೆದುಕೊಂಡು ಬಂದು ಕೆಲವು ಕಾಗದ ಪತ್ರಗಳ ಮೇಲೆ ಬಲವಂತವಾಗಿ ನನ್ನ ಸಹಿ ಪಡೆದರು. 1) ಪರಸಪ್ಪ ತಂದೆ ಪೀರಪ್ಪಾ ಕುರುಮಲ್ಲೆ 2) ಶಿವಾನಂದ ತಂದೆ ಪೀರಪ್ಪಾ ಕುರುಮಲ್ಲೆ 3) ಸುರೇಶ ತಂದೆ ಪೀರಪ್ಪಾ ಕುರುಮಲ್ಲೆ 4) ಪ್ರಥ್ವಿರಾಜ ತಂದೆ ನಿಂಗಪ್ಪ 5) ಶಿವಪುತ್ರ ತಂದೆ ಪೀರನಾಯಕ ಹಾಗೂ 6) ಬಸವರಾಜ ತಂದೆ ಚಂದ್ರಶಾ ಅಂಗಡಿ ನನ್ನನ್ನು ಅದೇ ದಿನ ಸಂಜೆ 5-30 ಗಂಟೆಗೆ ಕಲಬುರಗಿ ಬಸ್ಸ ನಿಲ್ದಾಣ ಎದುರಿನ ಕಮಲ್ ಹೋಟಲ್ ಎದುರು ಇಳಿಸಿ “ಮದುವೆ ವಿಷಯ ನಿಮ್ಮ ತಂದೆ ತಾಯಿಯವರಿಗೆ ತಿಳಿಸಿದರೆ ಹುಷಾರ್ ಅಂತಾ ಅವಾಜ್ ಹಾಕಿ ನಿಮ್ಮ ತಂದೆ ತಾಯಿ ಹಾಗೂ ಅಣ್ಣ ತಮ್ಮಂದಿರನ್ನು ಖಲ್ಲಾಸ ಮಾಡುತ್ತೇನೆ” ಎಂದು ಹೇಳಿ ಗಾಡಿ ತಿರುಗಿಸಿಕೊಂಡು ಹೋದರು. ನಾನು ನನ್ನ ತಂದೆ ಶಶಿಕುಮಾರ, ತಾಯಿ ನೀತಾ @ ಗುಂಡಮ್ಮಾ ಸೇರಿಕೊಂಡು ದೆಹಲಿಗೆ ಹೋಗಿ ವಾಜೀರಾಂ ಮತ್ತು ರವಿ ಐ.ಎ.ಎಸ್. ಸ್ಟಡಿ ಸೆಂಟರ್ ಎಲ್.ಎಲ್.ಪಿ ದೆಹಲಿ  ಇಲ್ಲಿ ನನ್ನ ಐಎಎಸ್ ಕೋಚಿಂಗ್ ಸುಲುವಾಗಿ ದಿನಾಂಕ: 07/07/2016 ರಂದು ಅಡ್ಮಿಶನ ಮಾಡಿಕೊಂಡು ಅಲ್ಲಿಯೇ ತರಬೇತಿ ಪಡೆಯುತ್ತಿದ್ದಾಗ ಪರಸಪ್ಪ ತಂದೆ ಪೀರಪ್ಪ ಕುರಮಲ್ಲೆ ಇವರು ದೆಹಲಿಗೆ ಬಂದು 9205065461 ನನ್ನ ನಂಬರಿಗೆ ಕರೆ ಮಾಡಿ ನಾನಿದ್ದ ಪಿ.ಜಿ ಗೆ ಬಂದು ಐ.ಎ.ಎಸ್. ಕನಸು ಬಿಡು ನನ್ನ ಜೊತೆ ಬಾ ಅಂತಾ ಅಸಿಡ್ ಬಾಡಲ್ ತೋರಿಸಿ ಹೆದರಿಸಿದಾಗ ನಾನು ಪಿ.ಜಿ ಒಳಗೆ ಓಡಿ ಹೋದೇನು. ನನ್ನ ಐಎಎಸ್ ಪ್ರಿಲಿಮಿನರಿ ಪರೀಕ್ಷೆ ಬರೆದು ಪಾಸಾಗಿ ದಿನಾಂಕ: 24/06/2017 ರಂದು ಕಲಬುರಗಿಯ ನನ್ನ ಮನೆಗೆ ಬಂದಿದ್ದೇನು. ಈಗ ನಾನು ನನ್ನ  ತಂದೆ ತಾಯಿಯವರಿಗೆ ನಡೆದ ಎಲ್ಲಾ ವಿಷಯಗಳನ್ನು ತಿಳಿಸಿದ್ದೇನೆ. ಅಫಜಲಪೂರದ ನ್ಯಾಶನಲ್ ಫಂಕ್ಷನ ಹಾಲ್ನಲ್ಲಿ ನನ್ನ ಮದವೆ ಶ್ವೇತಾಳೊಂದಿಗೆ ಆಗಿದೆ ಅಂತಾ ಸುಳ್ಳು ವೆಡ್ಡಿಂಗ ಕಾರ್ಡ ಪ್ರಕಟಿಸಿ ಒತ್ತಾಯಪೂರ್ವಕವಾಗಿ ನನಗೆ ಹೆದರಿಸಿ ಸಹಿ ಪಡೆದು ರಜಿಸ್ಟಾರ ಮ್ಯಾರೇಜ ಆಗಿದೆ ನನ್ನ ಜೊತೆಗೆ ಬಾಳುವೆ ಮಾಡು ಬಾ ಅಂತಾ ದಿನನಿತ್ಯ ಫೋನ ಮಾಡುವುದು ಮತ್ತು ಮೆಸೆಜ್ ಮಾಡುವುದು ಮಾಡುತ್ತಾ  ಪರಸಪ್ಪ ತಂದೆ ಪೀರಪ್ಪಾ ಕುರಮಲ್ಲೆ ಇತನು ಮಾಡುತ್ತಿದ್ದಾನೆ ಸದರಿ ಘಟನೆಯಲ್ಲಿ 1)ಪರಸಪ್ಪ ತಂದೆ ಪೀರಪ್ಪಾ ಕುರುಮಲ್ಲೆ 2) ಶಿವಾನಂದ ತಂದೆ ಪೀರಪ್ಪಾ ಕುರುಮಲ್ಲೆ 3) ಸುರೇಶ ತಂದೆ ಪೀರಪ್ಪ ಕುರುಮಲ್ಲೆ 4) ಪೃಥ್ವಿರಾಜ ತಂದೆ ನಿಂಗಪ್ಪ 5) ಶಿವಪುತ್ರ ತಂದೆ ಪೀರನಾಯಕ ಹಾಗೂ 6) ದಿ|| ಬಸವರಾಜ ತಂದೆ ಚಂದ್ರಶಾ ಅಂಗಡಿ (ಮೃತಪಟ್ಟಿರುತ್ತಾರೆ) ಇವರು ಸೇರಿಕೊಂಡು ಈ ಕೃತ್ಯವೆಸಗಿದ್ದಾರೆ  ಆದ್ದರಿಂದ ಸದರಿಯವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ಶರಣಬಸಪ್ಪ ತಂದೆ ಕಾಶಪ್ಪ ಶ್ರೀಚಂದ  ಸಾ: ಕಪನೂರ  ತಾ:ಜಿ:ಕಲಬುರಗಿ ರವರು ಕಲಬುರಗಿ ನಗರದ ರೇವಣಸಿದ್ದೇಶ್ವರ ಕಾಲೋನಿ ಕ್ರಾಸ ಹತ್ತೀರ ಇರುವ ಭೀಮಶ್ಯಾ ಇವರ ಕಟ್ಟೀಗೆ ಅಡ್ಡದಲ್ಲಿ ಕೂಲಿಕೆಲಸ್ ಮಾಡಿರುತ್ತೇನೆ. ನನ್ನಂತೆ ಸದರಿ ಅಡ್ಡಾದಲ್ಲಿ ನಮ್ಮ ತಂದೆ ಕಾಶಪ್ಪ ತಂದೆ ಪೀರಪ್ಪ ಶ್ರೀಚಂದ ಇವರು ವಾಚಮ್ಯಾನ ಕೆಲಸ ಮಾಡಿಕೊಂಡಿಕೊಂಡಿರುತ್ತಾರೆ. ದಿನಾಂಕ 18072017 ರಂದು ಸಾಯಂಕಾಲ 04.00 ಗಂಟೆ ಸುಮಾರಿಗೆ ನನ್ನ ತಂದೆ ಕಾಶಪ್ಪ ಇವರು ಕೆಲಸ ಕುರಿತು ಮನೆಯಿಂದ ಹೋದರು.  ನಂತರ ಇಂದು ದಿನಾಂಕ  19/07/2017 ರಂದು ಬೆಳಿಗ್ಗೆ 07.15 ಗಂಟೆ ಸುಮಾರಿಗೆ ನಾನು ಮತ್ತು ನನ್ನ ತಾಯಿ ಸರಸ್ವತಿ ಇಬ್ಬರೂ ಮನೆಯಲ್ಲಿದ್ದಾಗ ಆಗ ನಮಗೆ ಪರಿಚಯದ ಅರುಣಕುಮಾರ ತಂದೆ ಮಲ್ಲಿಕಾರ್ಜುನ ಸಾಗರ ಇವರು ನನಗೆ ಪೋನ ಮಾಡಿ ತೀಳಿಸಿದ್ದೇನೆಂದರೇ, ನಿಮ್ಮ ತಂದೆಯವರಾದ ಕಾಶಪ್ಪ ಇವರು ಇಂದು ದಿನಾಂಕ 19/07/2017 ರಂದು ಬೇಳಿಗ್ಗೆ 06.45 ಗಂಟೆ ಸುಮಾರಿಗೆ ಚಹಾ ಕುಡಿಯಲು ಹೋದ ಮರಳಿ  ಅಡ್ಡಾದ ಕಡೆಗೆ ರೋಡಸೈಡ ಹಿಡಿದುಕೊಂಡು ನಡೆದುಕೊಂಡು ಬರುವಾಗ ಎಮಆರಎಪ್  ಟೈಯರ್ ಶೋರೂಮ್ ಎದುರುಗಡೆ ಬರುವಾಗ, ಅದೇ ವೇಳೆಗೆ ಹುಮನಾಬಾದ ಹಿಂದಿನಿಂದ ಅಂದರೇ, ಕಲಬುರಗಿ-ಹುಮನಾಬಾದ ರಿಂಗರೋಡ ಕಡೆಯಿಂದ ಒಬ್ಬ ಹೀರೋ ಹೊಂಡಾ ಸ್ಪ್ಲೇಂಡರ್  ಮೋಟಾರ್ ಸೈಕಲ್ ಸವಾರನು ಅಡ್ಡಾ-ತಿಡ್ಡಿಯಾಗಿ ಅತಿವೇಗ ಮತ್ತು ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬದವನೇ ನಡೆದುಕೊಂಡು ಹೋಗುತ್ತಿದ್ದ ನಿಮ್ಮ ತಂದೆ ಕಾಶಪ್ಪ ಇವರಿಗೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಇದರಿಂದ ನಿಮ್ಮ ತಂದೆಯವರು ರೋಡಿನ ಮೇಲೆ ಬಿದ್ದರು. ಆಗ ನಾನು ಮತ್ತು ಕಪನೂರ ಗ್ರಾಮದ ರಾಹುಲ್ ತಂದೆ ಚಂದ್ರಕಾಂತ ಮರತೂರ ಹಾಗೂ ದೇವಿಂದ್ರ ಡೋಣಿ ಎಲ್ಲರೂ ಕೂಡಿ ಎಬ್ಬಸಿ ನೋಡಲಾಗಿ ನಿಮ್ಮ ತಂದೆಯವರ ತಲೆಯ ಹಿಂದುಗಡೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯವಾಗಿ ಬಾಯಿಯಿಂದ ರಕ್ತ ಸ್ರಾವವಾಗುತ್ತಿತ್ತು ಅವರಿಗೆ ಮಾತನಾಡಿಸಲು ಬೇಹುಸೆ ಆಗಿದ್ದನು .  ನಂತರ ಅಪಘಾತಪಡಿಸಿದ ಮೋಟರ್ ಸೈಕಲ್ ನಂ. ನೋಡಲಾಗಿ ಅದರ ನಂ.ಕೆಎ 32-ಇಎಚ್-1351  ಅಂತಾ ಇದ್ದು ಅದರ ಚಾಲಕನು ಅಲ್ಲಿ ಜನರು ನೆರೆಯುವದನ್ನು ನೋಡಿ ಮೋಟರ್ ಸೈಕಲ್ ನಿಲ್ಲಿಸಿದಂತೆ ಮಾಡಿ ನಿಲ್ಲಿಸದೆ ಹಾಗೇಯೇ ಓಡಿಸಿಕೊಂಡು ಹೋಗಿರುತ್ತಾನೆ.  ನಿಮ್ಮ ತಂದೆಯವರಿಗೆ 108 ಅಂಬುಲೇನ್ಸದಲ್ಲಿ ಹಾಕಿಕೊಂಡು ಉಪಚಾರ ಕುರಿತು ಕಲಬುರಗಿ ಎಎಸ್ಎಮ ಆಸ್ಪತ್ರೆಗೆ ತಂದು  ಸೇರಿಕೆ ಮಾಡಿರುತ್ತೇವೆ ಕೂಡಲೇ ಬರುವಂತೆ ತಿಳಿಸಿದ ಮೇರೆಗೆ ಗಾಭರಿಗೊಂಡು ನಾನು ನನ್ನ ತಾಯಿ ಸರಸ್ವತಿ ಇಬ್ಬರೂ ಕೂಡಿಕೊಂಡು ಎಎಸ್ಎಮ್ ಆಸ್ಪತ್ರೆಗೆ ಬಂದು ನನ್ನ ತಂದೆಗೆ ನೋಡಲಾಗಿ ಹಾಕಿಹತ್ತ ನಿಜವಿತ್ತು. ಅವರಿಗೆ ನೋಡಲಾಗಿ ಅವರ ತಲೆಯ ಹಿಂದೆ ಭಾರಿ ರಕ್ತ & ಗುಪ್ತಗಾಯವವಾಗಿ ಬಾಯಿಯಿಂದ ರಕ್ತಸ್ರಾವವಾಗುತ್ತಿತ್ತು. ನಂತರ ನನ್ನ ತಂದೆ ಕಾಶಪ್ಪ ಇವರಿಗೆ ಹೆಚ್ಚಿನ ಉಪಚಾರ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ತಂದು ಸೇರಿಕೆ ಮಾಡಿದ್ದು ನನ್ನ ತಂದೆ ರಸ್ತೆ ಅಪಘಾತದಲ್ಲಿ ಆದ ಗಾಯಗಳ ಉಪಚಾರ ಪಡೆಯುತ್ತಾ ಉಪಚಾರದಲ್ಲಿ ಗುಣಮುಖ ಹೊಂದದೆ ಬೆಳಿಗ್ಗೆ ಮೃತಪಟ್ಟಿರುತ್ತಾನೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವಲಗಾಣಗಾಪೂರ ಠಾಣೆ : ದಿನಾಂಕ 18-07-2017 ರಂದು ಬೆಳಿಗ್ಗೆ ತನ್ನ ತಾಯಿ ಮಲ್ಲಮ್ಮ ಗಂಡ ಭೀಮಶಾ ಇವಳು ಕೂಲಿ ಕೆಲಸಕ್ಕೆ ಹೋಗಿ ಮರಳಿ ಮನೆಗೆ ಬರುವಾಗ ಇಬ್ರಾಹಿಂ ಸಾ|ಕಲಬುರಗಿ ಇವರ ಹೊಲದ ಹತ್ತಿರ ನಡೆದುಕೊಂಡು ಬರುವಾಗ ಯಾವುದೋ ಒಂದು ವಾಹನ ಚಾಲಕ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ನನ್ನ ತಾಯಿ ರೋಡಿನ ಮೇಲೆ ಬಿದ್ದಾಗ ಮಾಹಿತಿ ತಿಳಿದು ಸ್ಥಳಕ್ಕೆ ಬಂದು ನೋಡಲಾಗಿ ನನ್ನ ತಾಯಿ ಬಲಗಣ್ಣಿನ ಬಲಭಾಗದ ಕೊನೆಗೆ ರಕ್ತಗಾಯದ ಪೆಟ್ಟು ಮತ್ತು ಎಡತಲೆಯ ಹಿಂಬದಿಗೆ ಭಾರ ರಕ್ತಗಾಯದ ಪೆಟ್ಟಾಗಿ ಎರಡು ಗಾಯಗಳಿಂದ ರಕ್ತ ಸೋರುತ್ತಿತ್ತು ನಂತರ ಖಾಸಗಿ ವಾಹನದಲ್ಲಿ ಹಾಕಿಕೊಂಡು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕಲಬುರಗಿಗೆ ಕರೆದುಕೊಂಡು ಹೋಗುವಾಗ ಮಾರ್ಗ ಮದ್ಯ ಮೃತ ಪಟ್ಟಿರುತ್ತಾಳೆ ಅಂತಾ  ಕಾರಣ ಅಪಘಾತದ ಪಡಿಸಿದ ವಾಹನ ಪತ್ತೆ ಮಾಡಿ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ ಶರಣಪ್ಪ ಪೂಜಾರಿ ಸಾ||ಗೊಬ್ಬುರ (ಬಿ) ಇವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

17 July 2017

Kalaburagi District Reported Crimes

ಕೊಲೆ ಪ್ರಕರಣ :
ಸೇಡಂ ಠಾಣೆ : ಶ್ರೀ ಅಡೆವೆಪ್ಪ ತಂದೆ ದೇವರಾಯ ಕೊಳ್ಳಿ, ಸಾ:ಮುಗನೂರ ಗ್ರಾಮ, ತಾ:ಸೇಡಂ. ರವರು ಮುಗನೂರ ಗ್ರಾಮದ ಹೊಲ ಸರ್ವೆನಂ-73/1 ನೇದ್ದರಲ್ಲಿ ನಮ್ಮದು ಒಟ್ಟು 27 ಎಕರೇ ಜಮೀನು ಇರುತ್ತದೆ. ಸದರಿ ಜಮೀನಿನಲ್ಲಿ ನನ್ನತಂದೆ ದೇವರಾಯ ಇವರಿಗೆ ‘9’ ಎಕರೇ, ನನ್ನ ಚಿಕ್ಕಪ್ಪ ಬಸವರಾಜ ಇವರಿಗೆ ‘9’ ಎಕರೇ ಬಂದಿದ್ದು ಉಳಿದ ‘9’ ಎಕರೇ ನಮ್ಮ ಅಣ್ಣ ತಮ್ಮಕ್ಕಿ ಭೀಮರಾಯ ಇವರ ಪಾಲಿಗೆ ಬಂದಿರುತ್ತದೆ. ಸದರಿ ಭೀಮರಾಯಇತನು ತನ್ನ ಪಾಲಿಗೆ ಬಂದ ‘9’ ಎಕರೇ ಜಮೀನನ್ನು ನಮ್ಮೂರಿನ ಚಂದ್ರಮ್ಮ ಗಂಡ ಚಂದ್ರಕಾಂತ ಕಲಾಲಇವರಿಗೆ ಮಾರಾಟ ಮಾಡಿರುತ್ತಾರೆ. ಸದರಿ ಜಮೀನು ಖರೀದಿ ಮಾಡಿದ ಚಂದ್ರಮ್ಮ ಇವಳು ಜಮೀನಿಗೆ ಬಂದಾಗನಮ್ಮ ತಂದೆಯಾದ ದೇವರಾಯ ಇವರು ಚಂದ್ರಮ್ಮ ಇವರಿಗೆ ನಿಮಗೆ ಮಾರಿದ ಜಮೀನು ನಮ್ಮದು ಇದೆ. ನೀವುಖರೀದಿಸಿದ ಜಮೀನು ಬೇರೆ ಕಡೆ ಇರುತ್ತದೆ ಅಂತ ಹೇಳಿದಾಗ ಸದರಿ ಚಂದ್ರಮ್ಮ ಗಂಡ ಚಂದ್ರಕಾಂತ ಕಲಾಲಹಾಗೂ ಅವರ ಮನೆಯವರು ಮತ್ತು ನಮ್ಮ ಮಧ್ಯ ಬಾಯಿ ಮಾತಿನ ತಕರಾರು ಆಗಿದ್ದು ಈಗ ಸುಮಾರು 5-6 ವರ್ಷಗಳಿಂದ ಸದರಿ ಜಮೀನು ಬೀಳುಬಿದ್ದಿರುತ್ತದೆ. ಈ ಬಗ್ಗೆ ನ್ಯಾಯಾಲಯದಲ್ಲಿ ನಮ್ಮ ಮಧ್ಯೆಸಿವಿಲ್ ಕೇಸ್ ಕೂಡಾ ನಡೆದಿರುತ್ತದೆ. ನಾನು ಹೊಲಕ್ಕೆ ಹೋದಾಗ ಚಂದ್ರಕಾಂತ ಕಲಾಲ ಹಾಗೂ ಅವನಮನೆಯವರು ನಮಗೆ ನೀವು ಆ ಹೊಲಕ್ಕೆ ಹೋದರೆ ನಿಮ್ಮ ವಂಶನೇ ಸರ್ವನಾಶ ಮಾಡುತ್ತೇವೆ ಅಂತ ಆಗಾಗಹೆದರಿಸುತ್ತಿದ್ದನು. ಇತ್ತೀಚೆಗೆ ಮಾನ್ಯ ಡಿ.ಸಿ. ಸಾಹೇಬರು ಕಲಬುರಗಿರವರಲ್ಲಿ ತೀರ್ಪು ನಮ್ಮಪರವಾಗಿ ಬಂದಿರುತ್ತದೆ. ಅಂತ ನಮ್ಮ ತಂದೆಯವರು ನನ್ನ ಮುಂದೆ ಹೇಳಿದ್ದರು. ದಿ:16-07-2017 ರಂದುಮುಂಜಾನೆ 11-00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ತಂದೆ ದೇವರಾಯ, ತಾಯಿ ಕಾಳಮ್ಮ, ಚಿಕ್ಕಮ್ಮಳಾದ ಜಗದೇವಿ, ಚಿಕ್ಕಪ್ಪನ ಮಗನಾದ ದೆವರಾಯ ಮತ್ತು ರಾಜಶೇಖರ, ನಾವೆಲ್ಲರೂ ಕೂಡಿಕೊಂಡುಸದರಿ ಜಮೀನಿನಲ್ಲಿ ಗಳೆ ಹೊಡೆಯಬೇಕೆಂದು ಜಮೀನಿಗೆ ಹೋದೇವು. ಸದರಿ ಜಮೀನಿನಲ್ಲಿ ನಾವೆಲ್ಲರೂಗಳೆ ಹೊಡೆಯುತ್ತಿದ್ದೇವು. ಅಂದಾಜು ಮುಂಜಾನೆ 11-30 ಗಂಟೆ ಸುಮಾರಿಗೆ ಸದರಿ ಜಮೀನಿನ ಬಗ್ಗೆತಕರಾರು ಮಾಡುತ್ತಿರುವ, 1] ಚಂದ್ರಕಾಂತ ಕಲಾಲ, ಆತನ ಹೆಂಡತಿ 2] ಚಂದ್ರಮ್ಮ ಮತ್ತು ಆತನಮಕ್ಕಳಾದ 3] ಮಲ್ಲು, 4] ನಾರಾಯಣ ಹಾಗೂ ಚಂದ್ರಕಾಂತನ ಅಳೆಯನಾದ 5] ಲಕ್ಷ್ಮಯ್ಯಸಾ:ಗಡಿಕೇಶ್ವರ, ತಾ:ಚಿಂಚೋಳಿ. ಹೀಗೆ ‘5’ ಜನರು ನಾವಿದ್ದಲಿಗೆ ಕೈಯಲ್ಲಿ ಬಡಿಗೆಗಳು ಮತ್ತುಕೊಡಲಿ ಹಿಡಿದುಕೊಂಡು ಬಂದರು ಅವರಲ್ಲಿ ಚಂದ್ರಕಾಂತ ಕಲಾಲ ಇತನು ನನ್ನ ತಂದೆ ದೇವರಾಯ ಕೊಳ್ಳಿಇವರಿಗೆ “ ಏ ಭೋಸಡಿ ಮಗನೇ ದೇವ್ಯಾ, ರಂಡಿ ಮಗನೇ ನಮ್ಮ ಹೊಲಕ್ಕೆ ಹ್ಯಾಂಗ ಗಳೆ ಹೊಡೆಯುತ್ತಿರೊಭೋಸಡಿ ಮಕ್ಕಳೇ ನಿಮ್ಮೆಲ್ಲರಿಗ ಹೊಡೆದು ನಿಮ್ಮ ವಂಶಾನೆ ಸರ್ವನಾಶ ಮಾಡುತ್ತೇವೆ” ಅಂತ ಅಂದವನೇತನ್ನ ಕೈಯಲ್ಲಿಯ ಬಡಿಗೆಯಿಂದ ಹೊಡೆಯಲು ಹೋದಾಗ ನನ್ನ ತಂದೆ ಎರಡೂ ಕೈಗಳು ಅಡ್ಡ ತಂದಾಗ ಅವರಎರಡೂ ಕೈಗಳು ಮುರಿದವು. ಸದರಿ ಚಂದ್ರಕಾಂತನೊಂದಿಗೆ ಇದ್ದ ಆತನ ಮಗ ಮಲ್ಲು ಇತನು ನಮ್ಮೆಲ್ಲರಿಗೆ “ ಭೋಸಡಿ ಮಕ್ಕಳೇ ನಿಮ್ಮದು ಬಹಾಳ ಆಗಿದೆ ನಾವ ಈ ಹೊಲ ಖರಿದಿ ಮಾಡಿದರು ನಮಗೆ ಹೊಲ ಕೊಡದೇ ಬೀಳುಹಾಕಿದ್ದಿರಿ ರಂಡಿ ಮಕ್ಕಳೇ” ಅಂತ ಒದರಾಡುತ್ತಿರುವಾಗ ಮಲ್ಲುವಿನ ತಾಯಿ ಚಂದ್ರಮ್ಮ ಇವಳು ಒಂದುಕಾಗದದಲ್ಲಿ ಕಟ್ಟಿಕೊಂಡು ತಂದ ಖಾರದ ಪುಡಿ ನಮ್ಮೆಲ್ಲರ ಕಣ್ಣಿಗೆ ಎರಚಿದಳು ನಾವೆಲ್ಲರೂಕಣ್ಣಲ್ಲಿ ಬಿದ್ದ ಖಾರದ ಪುಡಿ ಒರೆಸಿಕೊಳ್ಳುವಾಗ ಮಲ್ಲು ಇತನು ತನ್ನ ಕೈಯಲ್ಲಿದ್ದ ಕೊಡಲಿಯಿಂದನಮ್ಮ ಕಾಕನ ಮಗನಾದ ರಾಜಶೇಖರನ ಕಾಲುಗಳಿಗೆ ಜೋರಾಗಿ ಹೊಡೆದನು ಅದರಿಂದ ಅವನ ಎಡಗಾಲಿನ ಮೊಳಕಾಲಿನಕೆಳಗೆ ಭಾರಿ ರಕ್ತಗಾಯವಾಗಿ ರಕ್ತ ಸೋರಹತ್ತಿತ್ತು. ಅಲ್ಲದೇ ಆತನ ಬಲಗೈ ಮುಂಗೈಗೆ ಸಾಹ ಹೊಡೆದುರಕ್ತಗಾಯ ಪಡಿಸಿದನು. ಇದನ್ನು ನೋಡಿ ಜಗಳ ಬಿಡಿಸಲು ಬಂದ ನನ್ನ ತಾಯಿ ಕಾಳಮ್ಮ ಚಿಕ್ಕಮ್ಮಳಾದಜಗದೇವಿ ಮತ್ತು ಚಿಕ್ಕಪ್ಪನ ಮಗನಾದ ಭೀಮರಾಯ ಮತ್ತು ನಾನು ಎಲ್ಲರೂ ಸೇರಿ ಜಗಳ ಬಿಡಿಸಲು ಹೋದಾಗಚಂದ್ರಕಾಂತನ ಇನ್ನೊಬ್ಬನ ಮಗನಾದ ನಾರಾಯಣ ಮತ್ತು ಆತನ ಅಳೆಯ ಲಕ್ಷ್ಮಯ್ಯ ಇವರಿಬ್ಬರೂ ಬಡಿಗೆಗಳಿಂದನನಗೆ ಮತ್ತು ನನ್ನ ತಾಯಿ ಕಾಳಮ್ಮ ಹಾಗೂ ತಮ್ಮನಾದ ಭೀಮರಾಯ ಹಾಗೂ ಚಿಕ್ಕಮ್ಮಳಾದ ಜಗದೇವಿಇವಳಿಗೆ ಬಡಿಗೆಗಳಿಂದ ಸಿಕ್ಕಾಪಟ್ಟೆ ಹೊಡೆಯ ಹತ್ತಿದರು. ಜಗಳದಲ್ಲಿ ಚಂದ್ರಕಾಂತ ಹೆಂಡತಿಯಾದಚಂದ್ರಮ್ಮ ಇವಳು “ ಈ ರಂಡಿ ಮಕ್ಕಳದು ಬಹಾಳ ಆಗಿದೆ ಇವರಿಗೆ ಇವತ್ತು ಜೀವ ಸಹಿತ ಬಿಡಬ್ಯಾಡರಿಹೊಡೆದು ಖಲಾಸ ಮಾಡರಿ” ಅಂತ ಒದರಾಡುತ್ತ ಅವಳು ಸಹಾ ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ತಾಯಿಕಾಳಮ್ಮ ಮತ್ತು ಚಿಕ್ಕಮ್ಮ ಜಗದೇವಿ ಇವರಿಗೆ ಹೊಡೆಬಡೆ ಮಾಡಹತ್ತಿದರು. ಹೀಗೆ ಹೊಡೆಬಡೆಮಾಡಿದ್ದರಿಂದ ನನ್ನ ತಾಯಿ ಕಾಳಮ್ಮ ಇವರ ಬಲಗಾಲ ಮೊಳಕಾಲಿನ ಕೆಳಗೆ ಕಾಲು ಮುರಿದು ಭಾರಿರಕ್ತಗಾಯವಾಯಿತು ಮತ್ತು ಅವರ ಬಲಗೈ ಮುಂಗೈಗೆ ರಕ್ತಗಾಯವಾಗಿ ಅವರು ಕುಸಿದು ಬಿದ್ದರು. ನನಗೂಸಹಾ ಹೊಡೆಬಡೆ ಮಾಡಿದ್ದರಿಂದ ನನ್ನ ಎಡಗೈ ಮೊಳಕೈ, ಬಲಗೈ ಮೊಳಕೈ ಕೆಳಗೆ ಬಲಗಡೆ ತಲೆಗೆ ಕಿವಿಯಹಿಂದೆ ಮತ್ತು ಬಲಗಾಲ ಮೊಳಕಾಲು ಕೆಳಗೆ ಭಾರಿ ರಕ್ತಗಾಯವಾಯಿತು. ನನ್ನ ಚಿಕ್ಕಮ್ಮ ಜಗದೇವಿ ಇವರಎರಡು ಕಾಲುಗಳಿಗೆ ಭಾರಿ ರಕ್ತಗಾಯ, ಎಡಗೈ ಮೊಳಕೈಗೆ ಮತ್ತು ಹಸ್ತದ ಮೇಲೆ ರಕ್ತಗಾಯಗಳಾದವು, ಚಿಕ್ಕಪ್ಪನ ಮಗನಾದ ಭೀಮರಾಯನಿಗೆ ಬಲಗೈ ಮೊಳಕೈಗೆ, ಮೊಳಕಾಲಿನ ಕೆಳಗೆ ಎಡಗೈ ಭುಜದಿಂದಮೊಳಕೈವರೆಗೆ ಮತ್ತು ತಲೆಯ ಬಲಗಡೆ ಮೆಲಕಿನ ಮೇಲೆ ಗಾಯಗಳಾದವು. ಸದರಿ ಚಂದ್ರಕಾಂತ ಕಲಾಲ ಮತ್ತಅವನೊಂದಿಗೆ ಇದ್ದ ನಾಲ್ಕು ಜನರು ಕೂಡಿಕೊಂಡು ನಮ್ಮೆಲ್ಲರಿಗೆ ಕೊಡಲಿ ಮತ್ತು ಬಡಿಗೆಗಳಿಂದಹೊಡೆದು ಭಾರಿ ರಕ್ತಗಾಯಪಡಿಸಿದ್ದರಿಂದ ನಾವೆಲ್ಲರೂ ಜಮೀನಿನ ಸ್ಥಳದಲ್ಲಿಯೇ ಬಿದ್ದುನರಳಾಡುತ್ತಿದ್ದೇವು. ಸದರಿ ಘಟನೆಯನ್ನು ನಮ್ಮ ಜಮೀನಿನ ಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿರುವನಮ್ಮೂರ ದೇವಿಂದ್ರಪ್ಪ ಆಂದೇಲಿ, ಶರಣಪ್ಪ ಹೂಗಾರ ಮತ್ತು ನಿರ್ಮಲಾ ಗಂಡ ದೇವಿಂದ್ರಪ್ಪ ಮತ್ತುಅವರೊಂದಿಗೆ ಕೂಲಿ ಕೆಲಸ ಮಾಡುತ್ತಿದ್ದ ಹೆಣ್ಣು ಮಕ್ಕಳು ನೋಡಿದ್ದು. ನಮ್ಮ ಎದುರಾಳಿಗಳಕೈಯಲ್ಲಿ ಕೊಡಲಿ ಮತ್ತ ಬಡಿಗೆಗಳು ಇದ್ದುದ್ದರಿಂದ ಅವರು ಅಂಜಿಕೊಂಡು ಜಗಳ ಬಿಡಿಸಲುಬಂದಿರುವದಿಲ್ಲ. ನಾವು ಹೊಲದಲ್ಲಿ ಬಿದ್ದು ನರಳಾಡುತ್ತಿರುವ ಸುದ್ದಿ ಕೇಳಿ ನಮ್ಮೂರಿನ ಕೆಲವುಜನರು ನೋಡುತ್ತಾ ನಾವಿದ್ದಲಿಗೆ ಬಂದು, ಅಷ್ಟರಲ್ಲಿ ಅಂಬೂಲೆನ್ಸ ಬಂದಿದ್ದು ಅದರಲ್ಲಿನಮ್ಮೆಲ್ಲರಿಗೆ ಕರೆದುಕೊಂಡು ಬಂದು ಸರಕಾರಿ ಆಸ್ಪತ್ರೆ ಸೇಡಂಕ್ಕೆ ನಂತರ ಕಲಬುರಗಿ ಜಿಲ್ಲಾಆಸ್ಪತ್ರೆಗೆ ಉಪಚಾರ ಕುರಿತು ತಂದರು ನಮ್ಮೆಲ್ಲರನ್ನು ಆಸ್ಪತ್ರೆಯಲ್ಲಿ ಪರೀಕ್ಷಿಸಿದ ಡಾಕ್ಟರ್ಸಾಹೇಬರು ನಾವು ಆರು ಜನರ ಪೈಕಿ ನಮ್ಮ ತಂದೆ ದೇವರಾಯ, ತಾಯಿ ಕಾಳಮ್ಮ ಮತ್ತು ನಮ್ಮ ಚಿಕ್ಕಪ್ಪನಮಗನಾದ ರಾಜಶೇಖರ ಈ ಮೂರು ಜನರು ಮೃತಪಟ್ಟಿರುತ್ತಾರೆ ಎಂದು ತಿಳಿಸಿದರು. ನಂತರ ಸುದ್ದಿ ಕೇಳಿಸರಕಾರಿ ಆಸ್ಪತ್ರೆಗೆ ಬಂದ ನಮ್ಮ ಸಂಭಂದಿಕ ಕಾಶಿನಾಥ ತಂದ ಸುಭಾಶ್ಚಂದ್ರ ಎಳ್ಳಿ, ಸಾ:ಸಿಂಧನಮಡುಹಾಗೂ ಇತರರು ನನಗೆ ಮತ್ತು ನಮ್ಮ ಚಿಕ್ಕಮ್ಮಳಾದ ಜಗದೇವಿ, ಚಿಕ್ಕಪ್ಪನ ಮಗ ಭೀಮರಾಯ ಮೂರುಜನರಿಗೆ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ, ಕೆ.ಎಸ್.ಎಮ್ ಆಸ್ಪತ್ರೆಗೆ ತಂದು ಸೇರಿಕೆಮಾಡಿರುತ್ತಾರೆ.
ಅಪಘಾತ ಪ್ರಕರಣ :
ಶಾಹಾಬಾದ ನಗರ ಠಾಣೆ : ದಿನಾಂಕ: 13/07/2017 ರಂದು ಮುಂಜಾನೆ ನಮ್ಮ  ಕಾಕನ ಮಗನಾದ ರವಿಚಂದ್ರ ತಂದೆ ಸಾಬಣ್ಣ ಇತನು ಮರತೂರ ಗ್ರಾಮದ ಕಲಬುರಗಿ ರಸ್ತೆಯ ಹಳ್ಳದ ಹತ್ತಿರ ಇರುವ ಕುತಿ ದೊಡ್ಡಿಕಡೆಯಿಂದ ರಸ್ತೆಯ ಬದಿಯಿಂದ  ನಡೆದುಕೊಂಡು ಹೋಗುವಾಗ ಹಿಂದಿನಿಂದ ಒಬ್ಬ ಮೋಟಾರ ಸೈಕಲ ನಂಬರ ಕೆ.ಎ. 32 ಇ ಎಲ್ 5978 ನೇದ್ದರ ಚಾಲಕನು ತನ್ನ ಮೋಟಾರ ಸೈಕಲ ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ಬಂದು ಪಿರ್ಯಾದಿ ಕಾಕನ ಮಗನಾದ ರವಿಚಂದ್ರ ಇತನಿಗೆ ಹಿದಿನಿಂದ ಡಿಕ್ಕಿ ಪಡಿಸಿದ್ದರಿಂದ ಅವನಿ ಎಡಕಾಲಿನ ಹತ್ತಿರ ಮತ್ತು ಎಡಕಾಲಿನ ಕಪಗಂಡನ ಹತ್ತಿರ ಭಾರಿ ಗುಪ್ತ ಪೆಟ್ಟಾಗಿ ಮತ್ತು ಬಲಕೈಗೆ ತರಚಿದ ಗಾಯಾವಾಗಿ ಬೇಹೋಷಾಗಿದ್ದರಿಂದ ಮೋಟಾರ ಸೈಕಲ ಚಾಲಕನು ತನ್ನ ಮೋಟಾರ ಸೈಕಲ ಸ್ಥಳದಲ್ಲಿಯೇ ಬೀಟ್ಟು ಓಡಿ ಹೋಗಿರುತ್ತಾನೆ. ಅವನಿಗೆ ಉಪಚಾರ ಕುರಿತು ಕಲಬುರಗಿ ಬಾವಗಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ ಅಂತಾ ಶ್ರೀ ರವಿ ತಂದೆ ಸೂರ್ಯಕಾಂತ ಚಮನಗೋಳ ಸಾ: ಮರತೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಆಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಫರತಾಬಾದ ಠಾಣೆ : ಸಿದ್ದಣ್ಣಾ ತಂದೆ ಬಾಬುರಾವ ಈತನು ಸರಕಾರದಿಂದ ತೊಗರಿ ಖರಿದಿಸುವ ಸಮಯದಲ್ಲಿ ತನ್ನ ತೊಗರಿಯನ್ನು ಷಣ್ಮಖಮ್ಮಳ  ಹೆಸರಿಗೆ ಹಾಕಿದ್ದು ತೊಗರಿ  ಹಣ ಆಕೆಯ ಭ್ಯಾಂಕ ಖಾತೆಗೆ ಜಮಾ ಆಗಿದ್ದು ನಾನು ದಿನಾಂಕ 14-07-2017 ರಂದು ನಾನು ಹಣ ಕೇಳಲು ಹೋದಾಗ ಸಿದ್ದಣ್ಣಾ ತಂದೆ ಬಾಬುರಾವ ರೇವಣ ಸಂಗಡ ಇನ್ನೂ 4 ಜನರು ಸಾಃ ಎಲ್ಲರೂ ಹಾಗರಗುಂಡಗಿ  ಗ್ರಾಮದವರು ನನ್ನೊಂದಿಗೆ ಜಗಳ ತೆಗೆದು ಹೊಡೆ ಬಡೆ ಮಾಡುತ್ತಿರುವಾಗ ಬಿಡಿಸಲು ಬಂದ ಷಣ್ಮಖಮ್ಮ ಹಾಗೂ ಅವಳ ಮಗ ಸಚೀನ ಜಗಳ ಬೀಡಿಸಲು ಬಂದಾಗ ಸಿದ್ದಣ್ಣಾ ಇತನು ಷಣ್ಮಖಮ್ಮಳಿಗೆ ಸೀರೆ ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನ ಮಾಡಿ ಅವರಿಗೂ ಸಹ ಹೋಡೆ ಮಾಡಿ ಜೀವದ ಭಯ ಹಾಕಿರುತ್ತಾರೆ. ಅಂತಾ ಶ್ರೀ ಗೌರಿಶಂಕರ ತಂದೆ ಕಲ್ಯಾಣರಾವ ರಾವೂರ  ಸಾ : ಹಾಗರಗುಂಡಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 14-07-2017 ರಂದು ನಾನು ಹಾಗು ನನ್ನ ತಮ್ಮಂದಿರು ಮಾತನಾಡುತ್ತಾ ಕುಳಿತಿರುವಾಗ ಅದೆ ಸಮಯಕ್ಕೆ ಷಣ್ಂಉಖಮ್ಮ ಹಾಗು ಆಕೆಯ ಮಕ್ಕಳಾದ ಸಚೀನ ಶರಣು ಮತ್ತು ಸಂಭಂಧಿಕರಾದ ಗೌರಿಶಂಕರ ತಂದೆ ಕಲ್ಯಾಣರಾವ ಇವರು ಬಂದು ತಕರಾರುಮಾಡುತ್ತಾ ಸೈಕಲ ಕೊಡು ಅಂತಾ ತಂಟೆ ತಕರಾರು ಮಾಡಿ ಹೊಡೆ ಬಡೆ ಮಾಡುತ್ತಿರುವಾಗ ನನ್ನ ಹೆಂಡತಿ ಜಗಳ ಬಿಡಿಸಲು ಬಂದಾಗ ಆಕೆಗೆ ಹಿಡಿದು ಎಳೆದಾಡಿ ಸೀರೆ ಹಿಡಿದು ಎಳೆದಾಡಿ ಮಾನಭಂಗ ಮಾಡು ಪ್ರಯತ್ನಿಸಿ ಜೀವದ ಭಯ ಹಾಕಿರುತ್ತಾರೆ ಅಂತಾ ಶ್ರೀ ಸಿದ್ದಣ್ಣಾ ತಂದೆ ಬಾಬುರಾವ ರೇವಣ ಸಾಃ ಹಾಗರಗುಂಡಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಕಾರಿ ಕರ್ತವ್ಯಕ್ಕೆ ಅಡೆತಡೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 15-07-2017 ರಂದು ರೂಟ್ ನಂ 25-26 ಅಫಜಲಪೂರದಿಂದ ಜೆವರ್ಗಿ(ಕೆ) ಮಾರ್ಗವಾಗಿ ಕೆಎಸ್ ಆರ್ ಟಿ ಬಸ್ಸ ನಂ ಕೆ-32 ಎಫ್-1531 ನೇದ್ದರ ಮೇಲೆ ಕರ್ತವ್ಯ ಕುರಿತು ನಾನು ಹಾಗು ಬಸ್ಸ ಚಾಲಕನಾದ ಸಿದ್ದಲಿಂಗ ಜಿಡ್ಡಿಮನಿ ಇಬ್ಬರು ಅಫಜಲಪೂರ ಬಸ್ಸ ನಿಲ್ದಾಣದಿಂದ ಜೇವರ್ಗಿ(ಕೆ) ಗ್ರಾಮಕ್ಕೆ ಹೊರಟಾಗ ನಮ್ಮ ಬಸ್ಸಿನಲಿದ್ದ ಪ್ರಯಾಣಿಕನಾದ ಗೌರ(ಬಿ) ಗ್ರಾಮದ ಮಲ್ಲಣ್ಣಗೌಡ ಈತನು ಗೌರ(ಕೆ) ಗ್ರಾಮದೊರೆಗೆ ಟಿಕೇಟ್  ತಗೆದುಕೊಂಡಿದ್ದು ಇರುತ್ತದೆ ಗೌರ(ಕೆ) ಗ್ರಾಮಕ್ಕೆ ನಾವು ಹೊದಾಗ ಗೌರ(ಕೆ) ಗ್ರಾಮದ ಪ್ರಯಾಣಿಕರು ಬಸ್ಸಿನಿಂದ ಇಳಿದು ಹೋದರು ನಾನು ಮಲ್ಲಣ್ಣಗೌಡ ರವರಿಗೆ ನಿಮ್ಮ ಟಿಕೇಟ್ ಗೌರ(ಕೆ) ಗ್ರಾಮದೊರೆಗೆ ಇದೆ ಇಲ್ಲೆ ಇಳಿದುಕೊಳ್ಳಿ ಅಂತ ಹೇಳಿಕೆ ಬಳಿಕ ಸದರಿ ಮಲ್ಲಣ್ಣಗೌಡ ಈತನು ನನಗೆ ಎದೆಯ ಮೇಲಿನ ಅಂಗಿ ಹಿಡಿದು  ರಂಡಿ ಮಗನೆ ಈ ಏರಿಯಾ ನಮ್ದು ಇದೆ ನನ್ನ ಮನಸ್ಸಿಗೆ ಬಂದಲ್ಲಿ ನಾ ಇಳಿತಿನಿ ನಿ ಏನು ಕೇಳ್ತಿ ಅಂತ ಅನ್ನುತಿದ್ದಾಗ ಬಸ್ಸಿನಲಿದ್ದ ನಮ್ಮ ಚಾಲಕ ಹಾಗು ಪ್ರಯಾಣಿಕರು ಸದರಿಯವನಿಗೆ ತಿಳುವಳಿಕೆ ಹೇಳಿ ಬಿಡಿಸಿರುತ್ತಾರೆ ಆಗ ಮಲ್ಲಣ್ಣಗೌಡ ಇತನು ನನಗೆ ರಂಡಿ ಮಗನೇ ಮರಳಿ ಯಾಂಗ್ ಈ ರೂಟಿಗೆ ಬರ್ತಿ ನೋಡ್ತಿನಿ ಅಂತ ಅಂದು ದಿಕ್ಸಂಗಾ ಗ್ರಾಮದ ಸಮೀಪ ಇಳಿದುಕೊಂಡಿರುತ್ತಾನೆ. ನಾವು ಮರಳಿ 3.30 ಪಿಎಮ್ ಸುಮಾರಿಗೆ ಅಫಜಲಪೂರಕ್ಕೆ ಬರುವಾಗ ದಿಕ್ಸಂಗಾ ಹತ್ತಿರ ಮಲ್ಲಣ್ಣಗೌಡ ಈತನು ತನ್ನ ಸಂಗಡ 7-8 ಜನರಿಗೆ ಕರೆದುಕೊಂಡು ಬಂದು ನಮ್ಮ ಬಸ್ಸ ತಡೆದು ನಿಲ್ಲಿಸಿ ನನಗೆ ಬಸ್ಸಿನಿಂದ ಕೆಳಗೆ ಎಳೆದನು ಆಗ ಅವನ ಸಂಗಡ ಇದ್ದ 7-8 ಜನರು ನಮ್ಮ ಚಾಲಕನಿಗೆ ಎದೆಯ ಮೇಲಿನ ಅಂಗಿ ಹಿಡಿದು ರಂಡಿ ಮಕ್ಕಳೆ ನಮ್ಮ ಗೌಡ್ರಗೆ ಎದುರು ವಾದ ಮಾಡ್ತಿರಿ ಅಂತ ಅಂದು ಚಾಲಕ ಸಿದ್ದಲಿಂಗಪ್ಪನಿಗೆ  ಹಾಗು ನನಗೆ ತಮ್ಮ ಕೈ ಮುಷ್ಠಿ ಮಾಡಿ ಅಡ್ಡಾತಿಡ್ಡಿ ಹೊಡೆ ಬಡಿ ಮಾಡುತಿದ್ದಾಗ ಬಸ್ಸಿನಲಿದ್ದ ಪ್ರಯಾಣಿಕರಾದ ಖಾಜಪ್ಪ ತಳಕೇರಿ, ಅಶೋಕ  ತಳಕೇರ  ಇವರು ನಮಗೆ ಹೊಡೆಯುವದನ್ನು ಬಿಡಿಸಿರುತ್ತಾರೆ ಸದರಿಯವರು ನಮಗೆ ಹೊಡೆಬಡೆ ಮಾಡಿದ್ದರಿಂದ ನನಗೆ ಕುತ್ತಿಗೆ ಬಲಭಾಗಕ್ಕೆ ತರಚಿದ ಗಾಯ ಮೈಕೈಗೆ ಗುಪ್ತಗಾಯ ಹಾಗು ಚಾಲಕನಿಗೆ ತುಟಿಗೆ ರಕ್ತಗಾಯ ಹೊಟ್ಟೆ ಬೆನ್ನಿಗೆ ಮುಖಕ್ಕೆ ಗುಪ್ತಗಾಯ ವಾಗಿರುತ್ತದೆ ಚಾಲಕನ ಕೈಯಲಿದ್ದ ಅರ್ಧ ತೊಲೆಯ ಬಂಗಾರದ ಉಂಗುರ ಹಾಗು ನನ್ನ ಹತ್ತಿರ ಇದ್ದ 6,000/-ರೂ ಅಲ್ಲೆ ಎಲ್ಲೋ ಬಿದ್ದಿರುತ್ತವೆ ಸದರಿ ಯವರು ಅಲ್ಲಿಂದ  ಹೋಗುವಾಗ ನಮಗೆ ಜೀವ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆಕ್ರಮವಾಗಿ ಮರಳು ದಾಸ್ತಾನು ಮಾಡಿದವರ ವಿರುದ್ಧ ಕ್ರಮ :
ಅಫಜಲಪೂರ ಠಾಣೆ : ಶ್ರೀ ಸಂಜಯಕುಮಾರ ಶಿರಸ್ಥೆದಾರ ಪ್ರಭಾರ ತಹಸಿಲ್ದಾರರು ಅಫಜಲಪೂರ ರವರು ದಿನಾಂಕ 13-07-2017 ರಂದು ಬೆಳಿಗ್ಗೆ ಮಾನ್ಯ ಸಹಾಯಕ ಆಯುಕ್ತರು ಕಲಬುರಗಿ ರವರು ತಾಲೂಕಿನ ಬನ್ನೆಟ್ಟಿ ಗ್ರಾಮಕ್ಕೆ ಬೇಟಿ ನಿಡಿದಾಗ ಸದರಿ ಗ್ರಾಮದಲ್ಲಿ ಟ್ರ್ಯಾಕ್ಟರ ಮೂಲಕ ಸರ್ವೇ ನಂ 30 ರ ಜಮೀನಿನ ಪಟ್ಟೇದಾರರಾದ 1) ಶ್ರೀ ಶರಣಪ್ಪ ತಂದೆ ಜೇಟ್ಟೆಪ್ಪ ಜಮಾದಾರ ಇವರ ಜಮೀನಿನಲ್ಲಿ ಅಂದಾಜು 40 ಟ್ರೀಪ್, ಸರ್ವೇ ನಂ 02 ಪ ಪಟ್ಟೇದಾರರಾದ 2) ಸೋಮನಾಥ ತಂದೆ ವಿಠ್ಠಲ ಪ್ಯಾಟಿ ಇವರ ಜಮೀನಿನಲ್ಲಿ ಅಂದಾಜು 45 ಟ್ರೀಪ್,  ಸರ್ವೇ ನಂ 01 ರ ಪಟ್ಟೇದಾರರರಾದ 3) ಅರ್ಜುನ ತಂದೆ ಫಕೀರಪ್ಪ ಇವರ ಜಮೀನಿನಲ್ಲಿ ಅಂದಾಜು 30 ಟ್ರೀಪ್, ಸರ್ವೇ ನಂ 02 ರ ಪಟ್ಟೇದಾರರರಾದ 4) ಶರಣಪ್ಪ ತಂದೆ ಕಲ್ಲಪ್ಪ ಇವರ ಜಮೀನಿನಲ್ಲಿ 30 ಟ್ರೀಪ್, ಸರ್ವೇ ನಂ 01 ರ ಪಟ್ಟೇದಾರರರಾದ ಶ್ರೀಮತಿ ಅರ್ಚಣ ಗಂಡ ದಾದಾರಾವ ಇವರ ಜಮೀನಿಲ್ಲಿ 25 ಟ್ರೀಪ್ ಅನಧೀಕೃತವಾಗಿ ಮರಳು ಸಂಗ್ರಹಿಸಿದ್ದನ್ನು ಜಪ್ತಿ ಮಾಡಲಾಗಿದ್ದು ಅದರಂತೆ ಸದರಿ ಮರಳು ಲೋಕೊಪಯೋಗಿ ಇಲಾಖೆ ಇವರಿಗೆ ಹಸ್ತಾಂತರಿಸಲಾಗಿರುತ್ತದೆ. ಸದರಿ ಮರಳು ಸಂಗ್ರಹಣೆ ಮಾಡಿರುವ ಜಮೀನ ಮಾಲಿಕರ ಮತ್ತು ಪಟ್ಟೆದಾರರ ವಿರುದ್ದ ಕಾನೂನು ರೀತಿ  ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಸಂಜಯಕುಮಾರ ಶಿರಸ್ಥೆದಾರರು ಪ್ರಭಾರ ತಹಸಿಲ್ದಾರರು ಅಫಜಲಪೂರ ಹಾಗು  ಸಹಾಯಕ ಆಯುಕ್ತರು ಕಲಬುರಗಿ ರವರ ತಾಲೂಕಿನ ಶಿವಪೂರ ಗ್ರಾಮಕ್ಕೆ ಬೇಟಿ ನೀಡಿದಾಗ ಸದರಿ ಗ್ರಾಮದಲ್ಲಿ ಟ್ರ್ಯಾಕ್ಟರ ಮೂಕಲ ಶ್ರೀ ಖಾಜಪ್ಪ ತಂದೆ ಕಲ್ಲಪ್ಪ  ರವರು ತಮ್ಮ ಮನೆಯ ಮುಂದೆ 06 ಟ್ರೀಪ್, ಶ್ರೀ ಪರಮೇಶ್ವರ ತಂದೆ ಕಲ್ಲಪ್ಪ ಬನ್ನೆಟ್ಟಿ ಇವರ ಮನೆಯ ಮುಂದೆ 07 ಟ್ರೀಪ್, ಶ್ರೀ ಮಹಾದೇವಪ್ಪ ತಂದೆ ದಾದಪ್ಪ ರವರ ಮನೆಯ ಮುಂದೆ 05 ಟ್ರೀಪ್ ಅನಧಿಕೃತವಾಗಿ ಮರಳು ಸಂಗ್ರಹಿಸಿದ್ದನ್ನು ಜಪ್ತಿ ಮಾಡಲಾಗಿದ್ದು , ಅದರಂತೆ ಸದರಿ ಮರಳು ಲೋಕೋಪಯೋಗಿ ಇಲಾಖೆ ಇವರಿಗೆ ಹಸ್ತಾಂತರಿಸಲಾಗಿರುತ್ತದೆ. ಸದರಿ ಮರಳು ಸಂಗ್ರಹಣೆ ಮಾಡಿರು ಜಮೀನಿನ ಮಾಲಿಕರ ಮತ್ತು ಪಟ್ಟೇದಾರರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಸಂಜಯಕುಮಾರ ಶಿರಸ್ಥೆದಾರರು ಪ್ರಭಾರ ತಹಸಿಲ್ದಾರರು ಅಫಜಲಪೂರ ರವರು ದಿನಾಂಕ 09-07-2017 ರಂದು ತಾಲೂಕಿನ ದೇಸಾಯಿ ಕಲ್ಲೂರ ಗ್ರಾಮಕ್ಕೆ ಬೇಟಿ ನೀಡಿದಾಗ ಸದರಿ ಗ್ರಾಮದಲ್ಲಿ ಟ್ರ್ಯಾಕ್ಟರಗಳ ಮೂಲಕ  ಗ್ರಾಮದಲ್ಲಿ ಸರ್ವೇ ನಂ 44/ಎ ಪಟ್ಟೆದಾರರರಾದ ಶ್ರೀ ಚಂದ್ರಶೇಖರ ತಂದೆ ಶಿವಣ್ಣ ಭಾಸಗಿ ಇವರು  ಅಂದಾಜು 50 ಟ್ರೀಪ್, ಸರ್ವೇ ನಂ 61/7ರ ಪಟ್ಟೆದಾರರರಾದ  ಶ್ರೀ ಬಮ್ಮರಾಯ ತಂದೆ ಸಾಯಬಣ್ಣ ವರ್ಗಿ ಇವರ ಜಮೀನಿನಲ್ಲಿ 100 ಟ್ರೀಪ್, ಸರ್ವೇ ನಂ 60 ಪಟ್ಟೆದಾರರರಾದ ಶ್ರೀ ಯಲ್ಲಪ್ಪ ತಂದೆ ಜೇಟ್ಟೆಪ್ಪ ಉಕ್ಕಲಿ ( ಸದರಿ ಪಟ್ಟೆದಾರರು ಮರಣ ಹೊಂದಿದ್ದು ಇವರ ಮಗನಾದ ಶ್ರೀ ಜೇಟ್ಟಿ ಇವರು ಸಾಗುವಳಿ ಮಾಡುತ್ತಿರುತ್ತಾರೆ.) ಇವರ ಜಮೀನಿನಲ್ಲಿ ಅಂದಾಜು 30 ಟ್ರೀಪ್, ಸರ್ವೇ ನಂ 60 ಪಟ್ಟೆದಾರರರಾದ ಶ್ರೀ ಯಲ್ಲಪ್ಪ ತಂದೆ ಚಂದ್ರಾಮ ಇವರ ಜಮೀನಿನಲ್ಲಿ ಅಂದಾಜು 40 ಟ್ರೀಪ್, ಸರ್ವೇ ನಂ 43/2 ರ ಪಟ್ಟೆದಾರರರಾದ ಶ್ರೀ ಅಮೀತ ತಂದೆ ಬಸವರಾಜ ಇವರ ಜಮೀನಿನಲ್ಲಿ 20 ಟ್ರೀಪ್ ಅನಧೀಕೃತವಾಗಿ ಮರಳು ಸಂಗ್ರಹಿಸಿದನ್ನು ಜಪ್ತಿ ಮಾಡಲಾಗಿದ್ದು ಅದರಂತೆ ಸದರಿ ಮರಳು ಲೋಕೋಪಯೋಗಿ ಇಲಾಖೆ ಇವರಿಗೆ ಹಸ್ತಾಂತರಿಸಲಾಗಿದೆ ಸದರಿ ಮರಳು ಸಂಗ್ರಹಣೆ ಮಾಡಿದ  ಜಮೀನ ಮಾಲಿಕ/ಪಟ್ಟೇದಾರರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

15 July 2017

Kalaburagi District Reported Crimes

ಅಪಘಾತ ಪ್ರಕರಣ :
ಮಳಖೇಡ ಠಾಣೆ : ಶ್ರೀ ನಿಸಾರ ಮೈನುದ್ಧಿನ  ತಂದೆ ಮಹ್ಮದ ಮಶಾಖ,  ಸಾ: ಮೋಮಿನಪೂರ ಮಳಖೇಡ ಗ್ರಾಮ, ತಾ: ಸೇಡಂ. ರವರ ತಮ್ಮ ಮಹ್ಮದ ಖಾಲೀದ ತಂದೆ ಮಹ್ಮದ ಮಶಾಖ ಈತನು ಕೆಲವು ವರ್ಷ ಇಂಜಿನೀಯರಿಂಗ ವಿದ್ಯಾಭ್ಯಾಸ ಮಾಡಿದ್ದು ಸದರಿಯವನು ಮಾನಸಿಕ ಅಸ್ವಸ್ಥಗೊಂಡಿದ್ದು ದಿನಾಂಕ 10-07-2017 ರಂದು ಸಾಯಂಕಾಲ ಮನೆಯಿಂದ ಹೊರಗೆ ಹೋಗಿದ್ದು ರಾತ್ಇ ನಮಗೆ ಪರಿಚಯದವರಾದ ಅಶೋಕ ಬಂಡಿ ಇವರು ಪೋನ  ಮಾಡಿ ತಿಳಿಸಿದ್ದೇನೆಂದರೆ ನಿಮ್ಮ ತಮ್ಮ ಸಾಯಂಕಾಲ ಮಳಖೇಡ ಮೇನ ರೋಡ ದಾಟುತ್ತಿರುವಾಗ  ಒಂದು ಗೂಡ್ಸ ಟಂಟಂ ನಂ ಕೆಎ 32 ಎ 9448 ನೇದ್ದರ ಚಾಲಕನು ತನ್ನ ವಶದಲ್ಲಿದ್ದ ಗೂಡ್ಸ ಟಂಟಂ ವಾಹನವನ್ನು ಅತೀ ವೇಗ ಅಲಕ್ಷತನದಿಂದ ನಡೆಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ನಿಮ್ಮ ತಮ್ಮ  ಮಹ್ಮದ ಖಾಲೀದ ಇವನಿಗೆ ಅಪಘಾತಪಡಿಸಿದ್ದು ಸದರಿ ಅಪಘಾತದಿಂದ ನಿಮ್ಮ ತಮ್ಮನಿಗೆ ಭಾರಿಗಾಯಗಳಾಗಿದ್ದು ಭೇಹೊಶ ಆಗಿರುತ್ತಾನೆ ಅಂತಾ ತಿಳಿಸಿದ್ದರ ಮೇರೆಗೆ ನಾನು ಬಂದು ನೋಡಲು ನಿಜವಿರುತ್ತದೆ. ಸದರ  ಗುಡ್ಸ ಟಂ ಟಂ ನಂ ಕೆಎ 32 ಎ 9448 ಇರುತ್ತದೆ. ನನ್ನ ತಮ್ಮ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ ಅವನನ್ನು ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು  ಗಾಯಾಳು ಮಹ್ಮದ ಖಾಲೀದ ತಂದೆ ಮಹ್ಮದ ಸಾ: ಮೋಮಿನಪೂರ ಮಳಖೇಡ ಗ್ರಾಮ, ತಾ:ಸೇಡಂ ಇತನು ಉಪಚಾರ ಹೊಂದುತ್ತಾ, ಗುಣಮುಖ ಹೊಂದದೆ  ಇಂದು  ದಿನಾಂಕ 14-07-2017 ರಂದು ಬೆಳಿಗ್ಗೆ 11-05 ಗಂಟೆಯ ಸುಮಾರಿಗೆ ಮಹ್ಮದ ಖಾಲೀದ ಇತನು ಮೃತ ಪಟ್ಟಿರುತ್ತಾನೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಗೃಹಿಣಿಗೆ ಕಿರುಕಳ ನೀಡಿ ಹಲ್ಲೆ ಮಾಡಿದ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಪ್ರೇಮಾ ಗಂಡ ಚಂದ್ರಕಾಂತ ಸಾ: ಕಾಂತಾ ಕಾಲೋನಿ ಕಲಬುರಗಿ  ರವರು ಚಂದ್ರಕಾಂತ ಅವರೊಂದಿಗೆ 16 ವರ್ಷಗಳ ಹಿಂದೆ ಮದುವೆಯಾಗಿದ್ದು ,4 ಜನ ಮಕ್ಕಳಿದ್ದು 8 ವರ್ಷಗಳ ಹಿಂದೆ ನನಗೆ ಮತ್ತು ನನ್ನ 4 ಜನ ಮಕ್ಕಳಿಗೆ ಊಟ ಬಟ್ಟೆ  ಕೋಡದೇ ನನಗೂ ಕೂಡಾ ನೋಡಲಾರದೇ ಮನೆಯಿಂದ ಹೊರ ಹಾಕಿದ್ದು   8 ವರ್ಷಗಳಿಂದ  ನಾನು ನನ್ನ ತಾಯಿ ಆಸರೆಯಿಂದ  ಬೇರೆ ಮನೆ ಮಾಡಿ ನಾನು 4 ಜನ ನನ್ನ ಮಕ್ಕಳನ್ನು ಕೂಲಿಕೆಲಸ ಮಾಡಿ ಸಾಕುತ್ತಿದ್ದು ಹೀಗಿದ್ದು ದಿನಾಂಕ 27-8-2016 ರಂದು ನನ್ನ ಮಕ್ಕಳ ಜೀವನಾವಶ್ಯಕ್ಕಾಗಿ ಕೌಟುಂಬಿಕ ಜಲ್ಲಾ ನ್ಯಾಯಾಲಯ ಕಲಬುರಗಿಯಲ್ಲಿ ದಾವೆ ನಡೆದಿದ್ದು ದಿನಾಂಕ 12-7-2017 ರಂದು ದಾವೆಯ ದಾಖಲು ಮಾಡಿರುವ  ದಾವೆಯ ದಿನಾಂಕ ವಿದ್ದು ಕೊರ್ಟಿಗೆ ಹಾಜರಾಗಲು ಅಂದಿನ ಸಾಕ್ಷಿ ನಡೆಯುವ ದಿನವಿದ್ದು ದಿನಾಂಕ 08-07-2017 ರಂದು ಸಮಯ ಬೆಳಗ್ಗೆ 9-30 ಗಂಟೆಯ ಚಂದ್ರಕಾಂತ ಸೂರನ  ನಾನು ವಾಸವಿರುವ ಮನೆಗೆ ಬಂದು ನಮ್ಮ ಮನೆಯಲ್ಲಿ ನನ್ನ ಮಕ್ಕಳು ಶಾಲೆಗೆ ಹೋಗಿದ್ದ ಸಮಯವನ್ನು ನೋಡಿ ಮನೆಗೆ ನುಗ್ಗಿ ಒಳಗಿನಿಂದ ಬಾಗಿಲ ಚಿಲಕಾ ಹಾಕಿ ನನ್ನ ಬಾಯಿ ಮುಚ್ಚಿ ನನ್ನ ಕೆಳಗಡೆ ಹಾಕಿ ಕುತ್ತಿಗೆ ಒತ್ತಿ ಕೊಲೆ ಮಾಡಲು ಯತ್ನಿಸಿದ್ದನು ನಾನು ಚಿರಾಡುತ್ತಿಯಿದರು ಕೂಡಾ ಕೇಳದೆ ಬಾಯಿ ಮುಚ್ಚಿ ಉಸಿರುಗಟ್ಟಿಸಿ ಇವತ್ತು ನಿನಗೆ ಖಲಾಸ ಮಾಡಿಯೇ ಬಿಡುತ್ತೇನೆ  ಇಲ್ಲದಿದ್ದರೆ ನನ್ನ  ಮೇಲೆ ಹಾಕಿರುವ ದಾವೆ ಹಿಂತೆಗೆಯಬೇಕು  ಅಂತಹ ಒದರಾಡುತ್ತಿದ್ದನು ನನ್ನ ಚೀರಾಡವುದನ್ನು ಕೇಳಿ ನಮ್ಮ ಮನೆಯ ಅಕ್ಕಪಕ್ಕದವರು ಬಂದು ನಮ್ಮ ಬಾಗಿಲು ಮುರಿದು  ನನ್ನನ್ನು ಹೊರಗೆ ತಂದರು ನನಗೆ ಉಪಚಾರ ಕುರಿತು ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು   ನಾನು . ಉಪಚಾರ ಹೊಂದಿದ್ದು ಇರುತ್ತದೆ  ಸದರಿ ನನ್ನ ಗಂಡನಾದ ಚಂದ್ರಕಾಂತ ಸೂರನ  ಕೊಲೆ ಮಾಡಲು ಯತ್ನ ಮಾಡಿರುವುದರಿಂದ ಸದರಿ ಚಂದ್ರಕಾಂತ ಸೂರನ  ಇತನ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ  : ಶ್ರೀ ಮಹ್ಮದ ಹುಸೇನ ತಂದೆ ಅಲ್ಲಾಪಟೇಲ ವಾಡಿ ಸಾ: ಕೋಳಕುರ ತಾ: ಜಿ: ಕಲಬುರಗಿ ರವರು ದಿನಾಂಕ  13/07/17 ರಂದು 6 ಪಿಎಮ ಸುಮಾರಿಗೆ ನಾನು ಮತ್ತು ನಮ್ಮ  ತಮ್ಮ ರಶೀದ ಇಬ್ಬರೂ ತಮ್ಮ ಹೊಲದಿಂದ ಆಪಾದಿತರ ಹೊಲದ ಬಂದಾರಿಯಿಂದ ನಡೆದುಕೊಂಡು ಹೋಗುವಾಗ ಶರಣಪ್ಪ ತಂದೆ ಚಂದಪ್ಪ ಜಮಾದಾರ  ಸಂಗಡ ಇನ್ನೂ ಮೂರು ಜನರು ಕೊಳ್ಳುರ ಗ್ರಾಮ ರವರು ಬಂದು ನಮ್ಮ ಬಂದಾರಿಯಿಂದ ಹೋಗಬೇಡಿ ಅಂತಾ ಜಗಳ ತೆಗೆದು  ಅವ್ಯಾಚ್ಛವಾಗಿ ಬೈದು ಹೊಡೆ ಬಡೆ ಮಾಡಿ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ.