POLICE BHAVAN KALABURAGI

POLICE BHAVAN KALABURAGI

01 June 2017

Kalaburagi District Press Note

ನಿವೃತ್ತ ಪೊಲೀಸ ಅಧಿಕಾರಯ ಪುತ್ರ  ಯು.ಪಿ.ಎಸ್.ಸಿ. ಅಧಿಕಾರಿ  
ಕಲಬುರಗಿ ನಗರದ ಎಕ್ಬಾಲ ಕಾಲೋನಿಯ ನಿವಾಸಿಯಾಗಿರುವ  ನಿವೃತ್ತ ಎ.ಎಸ್.ಐ. ಶ್ರೀ ಶೇಖ ಯುಸೂಫ ರವರ ಪುತ್ರ ಶ್ರೀ ಶೇಖ ತನ್ವೀರ ಆಸೀಫ ರವರು ತಮ್ಮ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಕಲಬುರಗಿ ನಗರದ ನೊಬೆಲ್ ಶಾಲೆಯಲ್ಲಿ  ಪಡೆದುಕೊಂಡು ಪಿ.ಯು.ಸಿ. ವ್ಯಾಸಂಗವನ್ನು ಶ್ರೀ ಶರಣಬಸವೇಶ್ವರ  ರೆಸಿಡೆನ್ಸಿಯಲ್ ಕಾಲೇಜನಲ್ಲಿ ಮುಗಿಸಿ  ಉನ್ನತ ವ್ಯಾಸಂಗವನ್ನು ಎಮ್.ಎಸ್. ರಾಮಯ್ಯಾ ಇಂಜನೀಯರಿಂಗ ಕಾಲೇಜ ಬೆಂಗಳೂರಲ್ಲಿ  ಎಲೆಕ್ಟ್ರಾನಿಕ್ಸ & ಕಮ್ಯುನಿಕೇಶನ ವಿಭಾಗದಲ್ಲಿ ಪದವಿ ಪಡೆದುಕೊಂಡು 2016 ನೇ ಸಾಲಿನಲ್ಲಿ  ಕೇಂದ್ರ ಲೋಕಸೇವಾ ಆಯೋಗದಿಂದ ನಡೆಸಿದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ದೇಶದ 25 ನೇ  gÁåAPÀ ಪಡೆದುಕೊಂಡವರಾಗಿರುತ್ತಾರೆ.  ಶ್ರೀ ಶೇಖ ತನ್ವೀರ ಆಸೀಫ ತಂದೆ ಶ್ರೀ  ಶೇಖ ಯುಸೂಫ ರವರ ಸಾಧನೆಯನ್ನು ಮಾನ್ಯ ಶ್ರೀ ಆಲೋಕ ಕುಮಾರ ಐ.ಪಿ.ಎಸ್. ಐ.ಜಿ.ಪಿ. ಈಶಾನ್ಯ ವಲಯ ಕಲಬುರಗಿ ಹಾಗೂ ಶ್ರೀ ಎನ್. ಶಶಿಕುಮಾರ. ಐ.ಪಿ.ಎಸ್. ಪೊಲೀಸ ಅಧೀಕ್ಷಕರು ಕಲಬುರಗಿ ರವರು ಶ್ಲಾಘೀಸಿರುತ್ತಾರೆ.   

Kalaburagi District Reported Crimes

ಕೊಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಜಯಶ್ರೀ ಗಂಡ ಸಂಜೀವಕುಮಾರ ಬಾಬಾಜಿ ಸಾ|| ಮಹಾಲಕ್ಷ್ಮಿ ಲೇಔಟ ಕಲಬುರಗಿ ರವರು ಈ ಮೊದಲು ನಾನು ಬ್ರಹ್ಮಪೂರ ಬಡಾವಣೆಯ ಇಠಾಬಾಯಿ ಹೂಗಾರ ಇವರ ಮನೆಯಲ್ಲಿ ಬಾಡಿಗೆಯಿಂದ ವಾಸವಾಗಿದ್ದು ಈಗ  ಒಂದು ತಿಂಗಳಿಂದ ಮಹಾಲಕ್ಷ್ಮಿ ಲೇಔಟ ವಿವೇಕಾನಂದ ಶಾಲೆ ಹತ್ತಿರ ಬಾಡಿಗೆಯಿಂದ ವಾಸವಾಗಿರುತ್ತೆನೆ. ನನ್ನ ಗಂಡನು ನನ್ನೊಂದಿಗೆ ತಕರಾರು ಮಾಡಿಕೊಂಡಿದ್ದು ಸುಮಾರು 9 ವರ್ಷಗಳಿಂದ ನನ್ನಿಂದ ದೂರ ಇದ್ದು ಚನ್ನವೀರ ನಗರ ಅಂಬಾಭವಾನಿ ಗುಡಿ ಹತ್ತಿರ ನಮ್ಮ ಸ್ವಂತ ಮನೆಯಲ್ಲಿ ಇರುತ್ತಾನೆ. ನಮಗೆ 1) ಶಂಕರ ಬಾಬಾಜಿ ವಯ||18 ವರ್ಷ, 2) ಶರಣು ಬಾಬಾಜಿ ವಯ||15 ವರ್ಷ ಹೀಗೆ ಇಬ್ಬರು ಗಂಡು ಮಕ್ಕಳು ಇದ್ದು ಹಿರಿಯ ಮಗನಾದ ಶಂಕರ ಇವನು ಬ್ರಹ್ಮಪೂರ ಬಡಾವಣೆಯ ಪ್ರಶಾಂತ ಸ್ಕೂಲನಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದು, 2ನೇ ಮಗ ಶರಣು ಇವನು ಎನ್.ವಿ ಸ್ಕೂಲದಲ್ಲಿ ವಿದ್ಯಾಭ್ಯಾಸ ಮಾಡಿಕೊಂಡು ಇರುತ್ತಾನೆ. ಈಗ ರಜೆ ಇರುವುದರಿಂದ ಇಬ್ಬರು ಮಕ್ಕಳು ನನ್ನ ಜೊತೆ ಮನೆಯಲ್ಲಿ ಇರುತ್ತಿದ್ದರು. ದಿನಾಂಕ: 30/05/17 ರಂದು ಮದ್ಯಾಹ್ನ 1-00 ಗಂಟೆಯ ಸುಮಾರಿಗೆ ನನ್ನ ಮಗನಾದ ಶಂಕರ ಬಾಬಾಜಿ ಇವನಿಗೆ ಆರಾಮ ಇಲ್ಲದ ಪ್ರಯುಕ್ತ ನಾನು ಮತ್ತು ನನ್ನ ಮಗ ಇಬ್ಬರು ಕೂಡಿಕೊಂಡು ಇ.ಎಸ್.ಐ ಆಸ್ಪತ್ರೆಗೆ ಉಪಚಾರಕೆಂದು ಹೋಗಿ ಆಸ್ಪತ್ರೆಯಲ್ಲಿ ಉಪಚಾರ ಮಾಡಿಸಿಕೊಂಡು ಸಾಯಾಂಕಾಲ 6-00 ಗಂಟೆಗೆ ಮನೆಗೆ ಬಂದಿರುತ್ತೆವೆ. ರಾತ್ರಿ 8-00 ಗಂಟೆಯ ವರೆಗೆ ಮಗ ಶಂಕರ ಮನೆಯಲ್ಲಿ ಇದ್ದ 8-00 ಗಂಟೆಯ ನಂತರ ಮನೆಯಿಂದ ಹೊರೆಗೆ ಹೋಗಿ ಬರುತ್ತೆನೆ ಎಂದು ಹೋದವನು ರಾತ್ರಿ 11-00 ಗಂಟೆಯಾದರೂ ಮರಳಿ ಮನೆಗೆ ಬರಲ್ಲಿಲ್ಲ. ಮಗ ಬರದೆ ಇರುವುದರಿಂದ ನಾನು ಮತ್ತು ನನ್ನ ತಮ್ಮನಾದ ನಾಗು ತಂದೆ ಶಂಕರ ನಂದಗಾಂವ ಇಬ್ಬರು ಕೂಡಿ ನಾವು ವಾಸವಿರುವ ಬಡಾವಣೆಯಲ್ಲಿ ಅಲ್ಲಿ ಇಲ್ಲಿ ಹುಡುಕಾಡಿದೆವು. ಆದರೂ ನಮ್ಮ ಮಗನ ಬಗ್ಗೆ ಯಾವುದೆ ಮಾಹಿತಿ ಸಿಗದ ಕಾರಣ ರಾತ್ರಿ ಮನೆಯಲ್ಲಿ ಮಲಗಿಕೊಂಡೆವು. ದಿನಾಂಕ: 31/05/17 ರಂದು ಬೆಳಗ್ಗೆ ಎದ್ದು ನನ್ನ ಮಗನ ಬಗ್ಗೆ ಹುಡುಕಾಡುತ್ತಿರುವಾಗ ಬೆಳಗ್ಗೆ 11-00 ಗಂಟೆ ಸುಮಾರಿಗೆ ನಮ್ಮ ತಮ್ಮನಾದ ನಾಗು ನಂದಗಾಂವಿ ಇವನು ಬಂದೇನವಾಜ ಖಾನಗಿ ದರ್ಗಾದ ಹಿಂದುಗಡೆ ಇರುವ ಖಬರಸ್ಥಾನದಲ್ಲಿ ಮಲವಿಶರ್ಜನೆ ಮಾಡಲು ಹೋದಾಗ ಅಲ್ಲಿ ನಮ್ಮ ಮಗ ಸತ್ತು ಬಿದ್ದಿರುವುದನ್ನು ನೋಡಿ ಮನೆಗೆ ಬಂದು ನನಗೆ ತಿಳಿಸಿದಾಗ ನಾನು ಮತ್ತು ನನ್ನ ತಮ್ಮ ಇಬ್ಬರು ಹೋಗಿ ನೋಡಲಾಗಿ ನನ್ನ ಮಗ ಸತ್ತು ಬಿದ್ದಿದ್ದು ನಿಜವಿತ್ತು. ಅವನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿದ ಬಾರಿ ರಕ್ತಗಾಯ ಮತ್ತು ಮೈ ಮೇಲೆ ಅಲ್ಲಿ ಇಲ್ಲಿ ತರುಚಿದ ರಕ್ತಗಾಯವಾಗಿರುತ್ತದೆ. ನನ್ನ ಮಗನ ಶವದ ಪಕ್ಕದಲ್ಲಿ ಒಂದು ಗಾಂಜಾ ಚುಲಮಿ, ಒಂದು ಸಿಗರೆಟ್, ಒಂದು ಗೋವಾ ಗುಟಕಾ, ಒಂದು ಬೀಡಿ ಇವುಗಳು ಬಿದ್ದಿದವು.ನಾವು ಬ್ರಹ್ಮಪೂರ ಬಡಾವಣೆಯಲ್ಲಿ ಬಾಡಿಗೆಯಿಂದ ಇದ್ದಾಗ ನನ್ನ ಮಗನಿಗೆ ಶರಣಬಸವೇಶ್ವರ ದೇವಾಸ್ಥಾನದಲ್ಲಿ ಸಂಗಡ ಅವನ ಗೆಳೆಯರು ಕೂಡಿ ನನ್ನ ಮಗನ ಜೊತೆ ಗೆಳೆತನ ಮಾಡಿಕೊಂಡು ಆಗಾಗ ನಮ್ಮ ಮನೆಗೆ ಬರುತ್ತಿದ್ದರು. ನಾವು ಬ್ರಹ್ಮಪೂರ ಬಡವಾನೆಯಲ್ಲಿಯ ಬಾಡಿಗೆ ಮನೆ ಬಿಟ್ಟು ಮಹಾಲಕ್ಷ್ಮಿ ಲೇಔಟಕ್ಕೆ ಬಂದು ಮನೆ ಮಾಡಿಕೊಂಡು ಇದ್ದಾಗ ಕೂಡ ನಮ್ಮ ಮನೆಗೆ ಒಂದೆರಡು ಸಲ ಬಂದು ನಮ್ಮ ಮನೆಯಲ್ಲಿ ಗಲಾಟೆ ಮಾಡಿ ನಮ್ಮ ಮಗನಿಗೆ ಮನೆಯಿಂದ ಕರೆದುಕೊಂಡು ಹೋಗಿ ಹೊಡೆದು ಮೊಬೈಲ್ ಕಸಿದುಕೊಂಡ ಬಗ್ಗೆ ಮನೆಗೆ ಬಂದಾಗ ತಿಳಿಸಿರುತ್ತಾನೆ. ಸದರಿ ಅವರು ನನ್ನ ಮಗನಿಗೆ ಆಗಾಗ ತೊಂದರೆ ನೀಡಿ ಗಾಂಜಾ, ಸಿಗರೇಟ, ಬೀಡಿ ಸೇದಲು ಮತ್ತು ಗುಟಕಾ ತಿನ್ನಲು ಹಣ ಕೊಡು ಅಂತಾ ಪಿಡಿಸುತ್ತಾ ಇದ್ದರು ಹಣ ಕೊಡದೆ ಇದ್ದಲ್ಲಿ  ನಿನಗೆ ಖಲಾಸ ಮಾಡುತ್ತೆವೆ ಅಂತಾ ಹೆದರಿಸಿ ಜೀವದ ಬೇದರಿಕೆ ಹಾಕುತ್ತಿದ್ದ ಬಗ್ಗೆ ನನ್ನ ಮಗ ನನಗೆ ಆಗಾಗ ಮನೆಯಲ್ಲಿ ಹೇಳುತ್ತಿದ್ದ. ಪೊಲೀಸ ಠಾಣೆಗೆ ದೂರು ಕೊಟ್ಟರೆ ನನ್ನ ಮಗನಿಗೆ ಕೊಲೆ  ಮಾಡುತ್ತೆವೆ ಅಂತಾ ಜೀವ ಬೆದರಿಕೆ ಹಾಕಿದ್ದರಿಂದ ನನ್ನ ಮಗ ಅವರಿಗೆ ಅಂಜಿ ಯಾವುದೇ ದೂರು ವಗೈರೆ ನೀಡಿರುವುದಿಲ್ಲ. ಈ ಮೇಲಿನ ಕಾರಣಕ್ಕೆ ನನ್ನ ಮಗನಿಗೆ ಶರಣಬಸವೇಶ್ವರ ದೇವಾಸ್ಥಾನದಲ್ಲಿ ಹೂ ಮಾರುವ ಹುಡುಗ ಮತ್ತು ಅವನ ಗೆಳೆಯರು ಸೇರಿ ನನ್ನ ಮಗ ಶಂಕರನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಭಾರಿ ರಕ್ತಗಾಯ ಪಡಿಸಿ ಕೊಲೆ ಮಾಡಿದ್ದು ಅವರ ಮೇಲೆ ನಮಗೆ ಬಲವಾದ ಸಂಶಯ ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 30/05/2017 ರಂದು ರಾತ್ರಿ ಅಪರಿಚಿತ ಗಂಡು ಮನುಷ್ಯ ಅಂದಾಜು 70-75 ವರ್ಷದವನು ಕಲಬುರಗಿ ನಗರದ ಹೊರವಲಯದ ಏರಲೈನ್ಸ ದಾಬಾದಲ್ಲಿ ಊಟ ಮಾಡಿ ಮಲಗುವ ಸಲುವಾಗಿ ಅವಿನಾಶ ಪೆಟ್ರೋಲ್ ಪಂಪ ಕಡೆಗೆ ರೋಡ ಸೈಡ ಹಿಡಿದುಕೊಂಡು ನಡೆದುಕೊಂಡು ಹೋಗುತ್ತಿದ್ದಾಗ ಆಗ ಹಿಂದಿನಿಂದ ಅಂದರೇ ಕಲಬುರಗಿ ಹುಮನಾಬಾದ ರಿಂಗ ರೋಡ ಕಡೆಯಿಂದ  ಮೋಟಾರ ಸೈಕಲ್ ನಂ ಕೆಎ-32 ವ್ಹಿ-6592 ನೇದ್ದರ ಚಾಲಕ ಶಿವಾಕ್ಷರಯ್ಯಾ ತಂದೆ ಧಯಾಸಾಗರ್ ಕಂತಿ ಸಾ:ಹರಸೂರ ಹಾವ: ಆರ್.ಎಸ್. ಕಾಲೋನಿ ಕಲಬುರಗಿ ಇತನು ತನ್ನ ಮೋಟಾರ ಸೈಕಲನ್ನು ಅತೀವೇಗ ಮತ್ತು ನಿಸ್ಕಾಜಿತನದಿಂದ ನಡೆಸಿಕೊಂಡು ಬಂದು ಅಪರಿಚಿತ ಗಂಡು ಮನುಷ್ಯನಿಗೆ ಅಪಘಾತ ಪಡಿಸಿದ್ದರಿಂದ್ದ ಆತನಿಗೆ ತಲೆಯ ಹಿಂದುಗಡೆ ಹಾಗು ಇತರೇ ಕಡೆ ಭಾರಿ ರಕ್ತಗಾಯಗಳಾಗಿದ್ದು ಆತನಿಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ತಂದು ಸೇರಿಕೆ ಮಾಡಿದಾಗ ಸದರಿಯವನು ಉಪಚಾರ ಪಡೆಯುತ್ತಾ ಉಪಚಾರದಲ್ಲಿ ಗುಣಮುಖ ಹೊಂದದೇ ರಸ್ತೆ ಅಪಘಾತದಿಂದ ಆದ ಗಾಯಗಳಿಂದ ಇಂದು ದಿನಾಂಕ:- 31/05/2017 ರಂದು ಬೆಳಿಗ್ಗೆ 01:30 ಗಂಟೆಗೆ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಅಬ್ದುಲ್ ಲತೀಫ ತಂದೆ ಅಬ್ದುಲ್ ಗನಿ ಶೇಖ ಸಾ:ರೆಹಮತ ನಗರ ಪಿ.ಎನ್.ಟಿ ಕಾಲೋನಿ ಹಿಂದುಗಡೆ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

31 May 2017

Kalaburagi District Reported Crimes

ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಗುಣವಂತ ತಂದೆ ಶಂಕರ ಬಿಸೆ ಸಾ: ಮಣೂರ ಇವರು ಶ್ರೀ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜಾರಿಕೆ ಸೇವೆ ಮಾಡುತ್ತಿದ್ದು  ನಮ್ಮಂತೆ ನಮ್ಮೂರಿನ ತಮ್ಮಣ್ಣ ತಂದೆ ಶಿವಪ್ಪ ಪೂಜಾರಿ ಇವರ ಕುಟುಂಬಕ್ಕು ಸಹ ಪೂಜಾರಿಕೆಯ ಪಾಲು ಇರುತ್ತದೆ, ಈಗ ಕೆಲವು ವರ್ಷಗಳಿಂದ ಸದರಿ ತಮ್ಮಣ್ಣ ಪೂಜಾರಿ ಮತ್ತು ಅವನ ಕಡೆಯವರು ನಮಗೆ ಶ್ರೀ ಯಲ್ಲಮ್ಮ ದೇವಸ್ಥಾನದ ಪೂಜಾರಿಕೆ ಪೂರ್ತಿ ನಮ್ಮದು ಇರುತ್ತದೆ ನೀವು ಇನ್ನುಮುಂದೆ ಪೂಜಾರಿಕೆ ಮಾಡಬೇಡಿ ಅಂತಾ ಹೇಳಿದ್ದರಿಂದ ನಮಗೂ ಅವರಿಗೂ ತಕರಾರು ಆಗಿರುತ್ತದೆ. ಅಂದಿನಿಂದ ಸದರಿ ತಮ್ಮಣ್ಣ ಪೂಜಾರಿ ಮತ್ತು ಅವನ ಕಡೆಯವರು ನಮ್ಮ ಮೇಲೆ ದ್ವೇಷ ಸಾದಿಸುತ್ತಾ ಬಂದಿರುತ್ತಾರೆ, ದಿನಾಂಕ 30-05-2017 ರಂದು ಸದರಿ ಶ್ರೀ ಯಲ್ಲಮ್ಮ ದೇವಸ್ಥಾನದ ಪೂಜಾರಿಕೆ ವಿಷಯವಾಗಿ ಇದ್ದ ತಕಾರಿನ ಬಗ್ಗೆ ನ್ಯಾಯ ಪಂಚಾಯತಿ ಮಾಡಿ ಬಗೆ ಹರಿಸಿಕೊಳ್ಳೊಣ ಎಂದು ಗ್ರಾಮದ ಮುಖಂಡರು ಹೇಳಿದ ಮೇರೆಗೆ ಇಂದು ಮದ್ಯಾಹ್ನ 2:00 ಗಂಟೆ ಸುಮಾರಿಗೆ ಭೀಮಾ ನದಿಯ ಹತ್ತಿರ ಇರುವ ಶ್ರೀ ಅಂಬಾ ಭವಾನಿ ಗುಡಿಯ ಹತ್ತಿರ ಎಲ್ಲರಿಗೂ ಬರಲು ತಿಳಿಸಿದ ಮೇರೆಗೆ ನಾನು ಮತ್ತು ನಮ್ಮ ಸಮಾಜದ ಎಲ್ಲಾ ಮುಖಂಡರು ಕೂಡಿಕೊಂಡು ಶ್ರೀ ಅಂಬಾ ಭವಾನಿ ಗುಡಿಯ ಹತ್ತಿರ ಹೋಗಿ ಮಾತುಕತೆ ಮಾಡುತ್ತಿದ್ದಾಗ ನಮ್ಮೂರಿನ 1)  ಬಸಪ್ಪ ತಂದೆ ಮಾಹಾದೇವಪ್ಪ ಕರೂಟಿ 2) ಬಸು ಅಳ್ಳಗಿ  3) ಯಶವಂತ ಕರೂಟಿ 4) ಚನ್ನು ಕರೂಟಿ 5) ಮಾಹಾದೇವ ಸಾಲುಟಗಿ 6) ಮಾಹಾದೇವ ಅಲ್ಲಾಪೂರ 7) ಮಾಹಾದೇವ ಜಾನಕರ್ 8) ಧಾನು ಧಾನಶೇಟ್ಟಿ ಮತ್ತು ಇವರ ಕಡೆಯವರು 9) ಭೀಮಣ್ಣ ಹತ್ತರಕಿ 10) ಮುದಕಪ್ಪ ತಂದೆ ಬಸಪ್ಪ ಹಿರೋಳ್ಳಿ 11) ಶಿರಕೂ ಕರೂಟಿ 12) ತಮ್ಮಣ್ಣ ತಂದೆ ಶಿವಪ್ಪ ಪೂಜಾರಿ 13) ಭಿಮಾಶಂಕರ ತಂದೆ ಗಡ್ಡೆಪ್ಪ ಪೂಜಾರಿ 14) ಶೇಖರ ತಂದೆ ತಮ್ಮಣ್ಣ ಪೂಜಾರಿ 15) ಧಾನಪ್ಪ ತಂದೆ ತಮ್ಮಣ್ಣ ಪೂಜಾರಿ 16) ಶಿವಪ್ಪ ತಂದೆ ಗಡ್ಡೆಪ್ಪ ಪೂಜಾರಿ 17) ಪ್ರಕಾಶ ತಂಣದೆ ಗಡ್ಡೆಪ್ಪ ಪೂಜಾರಿ 18) ಮಲ್ಲು ತಂದೆ ಗಡ್ಡೆಪ್ಪ ಪೂಜಾರಿ 19) ಶಿವಪ್ಪ ತಂದೆ ಪರಮೇಶ್ವರಪೂಜಾರಿ 20) ಬಸವರಾಜ ತಂದೆ ಪರಮೇಶ್ವರ ಪೂಜಾರಿ 21) ಸಚಿನ ತಂದೆ ಸಿದ್ದಪ್ಪ ಪೂಜಾರಿ 22) ರಾಹುಲ್ ತಂದೆ ಶಾಂತಪ್ಪ ಪೂಜಾರಿ ಹಾಗೂ ಇತರರೂ ಕೂಡಿಕೊಂಡು ಒಳಸಂಚು ಮಾಡಿ ಬಸಪ್ಪ ತಂದೆ ಮಾಹಾದೇವಪ್ಪ ಕರೂಟಿ ಇವರ ಕಾರ ನಂ ಎಮ್.ಹೆಚ್-13 9555 ಕಾರಿನಲ್ಲಿದ್ದ ಬಡಿಗೆಗಳನ್ನು ಹಾಗೂ ಕಲ್ಲುಗಳನ್ನು ಮತ್ತು ತಲವಾರನ್ನು ತಗೆದುಕೊಂಡು ಬಂದು ಏಕಾ ಏಕಿ ನನಗೆ ಮತ್ತು ನನ್ನ ಮಕ್ಕಳಾದ ಆಕಾಶ ತಂದೆ ಗುಣವಂತ ಬಿಸೆ (ಗೊಂದಳಿ), ಲಕನ್ ತಂದೆ ಗುಣವಂತ ಬಿಸೆ (ಗೊಂದಳಿ), ನನ್ನ ಹೆಂಡತಿ ಇಂದುಬಾಯಿ ಗಂಡ ಗುಣವಂತ ಬಿಸೆ (ಗೊಂದಳಿ), ಹಾಗೂ ನಮ್ಮ ಅಣ್ಣ ತಮ್ಮಕಿಯ ಕಿರಣ ತಂದೆ ಸಹದೇವ ಬಿಸೆ (ಗೊಂದಳಿ), ಮಹಾದೇವ ತಂದೆ ಮೋತಿರಾಮ ಬಿಸೆ (ಗೊಂದಳಿ), ವಿಷ್ಣು ತಂದೆ ಶಂಕರ ಬಿಸೆ (ಗೊಂದಳಿ), ಅಂಬಾದಾಸ್ ತಂದೆ ಅರ್ಜುನ ಬಿಸೆ (ಗೊಂದಳಿ), ವಿಜಯ ತಂದೆ ಗುಂಡಪ್ಪ ಬಿಸೆ (ಗೊಂದಳಿ), ಮನೋಹರ್ ತಂದೆ ದೊಂಡಿಬಾ ಪಾಚಂಗೆ ನಮಗೆಲ್ಲರಿಗೂ ಮಾರಕಾಸ್ತ್ರಗಳಿಂದ ನಮ್ಮ ಮೇಲೆ ಹಲ್ಲೆ ಮಾಡಿರುತ್ತಾರೆ, ಸದರಿಯವರು ನಮಗೆ ಹಲ್ಲೆ ಮಾಡುತ್ತಿದ್ದಾಗ ನ್ಯಾಯ ಪಂಚಾಯತಿಗೆ ಬಂದವರು ನಮಗೆ ಹೊಡೆಯುವದನ್ನು ಬಿಡಿಸಿರುತ್ತಾರೆ. ಸದರಿಯವರು ಹೊಡೆದರಿಂದ ನಮಗೆಲ್ಲರಿಗೂ ಬಾರಿ ರಕ್ತಗಾಯಗಳು ಮತ್ತು ಒಳಪೆಟ್ಟುಗಳು ಆಗಿರುತ್ತವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಜೇವರಗಿ ಠಾಣೆ : ಶ್ರೀ ದೇವಿಂದ್ರ ತಂದೆ ತಿಪ್ಪಣ್ಣ ಜಾನ ಸಾಃ ಜೀವಣಗಿ ತಾಃ ಜಿಃ ಕಲಬುರಗಿ ಹಾಃವಃ ಗಂಗಾಮಯಿ ಮಠ ಹತ್ತಿರ ಜೇವರಗಿ ಇವರು ಜೇವರಗಿ ಪಟ್ಟಣದ ಗಂಗಾಮಯಿ ಮಠದ ಹತ್ತಿರ ಸ್ವಂತ ಮನೆ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತೆನೆ. ನಮ್ಮ ಮನೆಯ ಎರಡು ಕೊಣೆಗಳು ಪರಸಪ್ಪ ತಂದೆ  ಯಲ್ಲಪ್ಪ ಮಾದರ  ಶಿಕ್ಷಕರಿಗೆ ಬಾಡಿಗೆ ಕೊಟ್ಟಿದ್ದು ಅವರು ತನ್ನ ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತಾರೆ.  ದಿನಾಂಕ 28.05.2017 ರಂದು ರಾತ್ರಿ ಮನೆಯಲ್ಲಿ  ಎಲ್ಲರೂ ಊಟಮಾಡಿಕೊಂಡು ರಾತ್ರಿ 10.00 ಗಂಟೆಯ ಸುಮಾರಿಗೆ ನಮ್ಮ ಮನೆಯ ಬಾಗೀಲ ಮುಚ್ಚಿ ಕೀಲಿ ಹಾಕಿ ನಾವು ಮನೆಯವರೆಲ್ಲರೂ ಮತ್ತು ಪರಸಪ್ಪ ಮಾದರ ಎಲ್ಲರೂ ನಮ್ಮ ಮನೆಯ ಛತ್ತಿನ ಮೇಲೆ ಹೋಗಿ ಮಲಗಿಕೊಂಡಿರುತ್ತೆವೆ. ದಿ. 29.05.2017 ರಂದು ಮುಂಜಾನೆ 6.00 ಗಂಟೆಯ ಸುಮಾರಿಗೆ ಪರಸಪ್ಪ ಮಾದರ ಇವರು ಎದ್ದು ಕೇಳಗೆ ಬಂದು ನಮ್ಮ ಮನೆಯ ಬಾಗೀಲ ತೆರೆದಿದ್ದು ನೋಡಿ ಬಂದು ಹೇಳಿದಾಗ ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಮನೆಯ ಮೇಲಿಂದ ಎದ್ದು ಬಂದು ನೋಡಲಾಗಿ ನಮ್ಮ ಮನೆಯ ಬಾಗೀಲ ಕೀಲಿ ಮುರಿದಿದ್ದು ಮತ್ತು ಬಾಗೀಲ ತೆರೆದಿದ್ದು ಇತ್ತು ಅಲ್ಲದೆ ಬಾಡಿಗೆ ಇದ್ದ ಪರಸಪ್ಪ ಇವರ ಮನೆಯ  ಬಾಗೀಲ ಸಹ ತೆರೆದಿದ್ದು ಇತ್ತು. ನಂತರ ನಾವು ನಮ್ಮ ಮನೆಯೊಳಗೆ ಹೋಗಿ ನೋಡಲಾಗಿ ನಮ್ಮ ಮನೆಯಲ್ಲಿ ಸಾಮಾನುಗಳು ಚಲ್ಲಾ ಪಿಲ್ಲಿಯಾಗಿ ಬಿದ್ದಿದ್ದವು. ನಮ್ಮ ಮನೆಯೊಳಗಿನ ಕಬ್ಬಿಣದ ಕಪಾಟ ತೆರದು ನೋಡಲು ಅರದಲ್ಲಿ ಇಟ್ಟ ಬಂಗಾರದ ಆಭರಣಗಳು  83 ಗ್ರಾಂ ಬಂಗಾರದ ಆಭರಣಗಳು ಅ.ಕಿ. 2,34,000/- ರೂ ಕಿಮ್ಮತ್ತಿನವು ಕಳ್ಳತನವಾಗಿದ್ದವು ನಂತರ ನಮ್ಮ ಮನೆಯಲ್ಲಿ ಬಾಡಿಗೆ ಇದ್ದ ಪರಸಪ್ಪ ಮಾದರ ಇವರ ಮನೆಯ ಬಾಗಿಲ ಕೀಲಿ ಮುರಿದು ಅವರ ಮನೆಯಲ್ಲಿನ 1) ನಗದು ಗಣ 24,200/- ರೂ 2) 5 ಗ್ರಾಂ ಬೆಳ್ಳಿಯ ಒಂದು ಜೊತೆ ಕಾಲು ಚೈನಗಳು ಅ.ಕಿ. 3,000/- ರೂ ಕಿಮ್ಮತ್ತಿನವು ಕಳುವಾದ ಬಗ್ಗೆ ಮತ್ತು ಅವರ ಎಸ್.ಬಿ.ಹೆಚ್. ಬ್ಯಾಂಕ ಜೇವರಗಿಯಲ್ಲಿ ಡಿಪೊಜೀಟ್ ಇಟ್ಟ ಹಣ ಬಾಂಡ್ ಕಳುವಾಗಿರುತ್ತದೆ ಒಟ್ಟು 83 ಗ್ರಾಂ ಬಂಗಾರದ ಅಭರಣಗಳು 5 ಗ್ರಾಂ ಬೆಳ್ಳಿಯ ಆಭರಣಗಳು & ನಗದು ಹಣ ಸೇರಿ ಒಟ್ಟು 2,61,200/- ರೂಪಾಯಿ ಕಿಮ್ಮತ್ತಿನಷ್ಟು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.