POLICE BHAVAN KALABURAGI

POLICE BHAVAN KALABURAGI

01 April 2017

Kalaburagi District Reported Crimes

ಕೊಲೆ ಪ್ರಕರಣ :
ಸೇಡಂ ಠಾಣೆ : ಶ್ರೀ ಹಣಮಂತ ತಂದೆ ಯಂಕಪ್ಪ ವಡ್ಡರ ಸಾ|| ಬಟಗೇರಾ(ಕೆ) ಗ್ರಾಮ, ತಾ|| ಸೇಡಂ ಇವರ ಅಣ್ಣನಾದ ನಾಗಪ್ಪ ಮರಣಹೊಂದಿದ್ದರಿಂದ, ಅವನ ಹೊಲ ನಾವೆ ನೋಡಿಕೊಳ್ಳುತ್ತಿದ್ದು, ಅದರ ಸಂಬಂಧ ನಮ್ಮ ಅಣ್ಣನಾದ ಬಸಪ್ಪ ತಂದೆ ಯಂಕಪ್ಪ ಇವನಿಗೂ ನನಗೂ ಆಗಾಗ ಬಾಯಿ ಮಾತಿನ ಜಗಳವಾಗಿರುತ್ತದೆ. ಹೀಗಿದ್ದು, ದಿನಾಂಕ: 28-03-2017 ರಂದು ರಾತ್ರಿ 08:30 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿಯಾದ ದ್ರೌಪತಿ ಮನೆಯಲ್ಲಿದ್ದಾಗ, ನಮ್ಮ ಅಣ್ಣನಾದ ಬಸಪ್ಪ ಹಾಗು ಅವನ ಹೆಂಡತಿ ನಾಗೆಂದ್ರಮ್ಮ ಇಬ್ಬರೂ ಕೂಡಿಕೊಂಡು ಬಂದು ನಮ್ಮ ಮನೆಯ ಎದುರುಗಡೆ ನಿಂತು ಏ ರಂಡಿ ಮಗನೆ ಹಣಮ್ಯಾ ಚೋದಿ ಮಗನೆ ಮನೆಯ ಹೊರಗಡೆ ಬಾ ನಾಗಪ್ಪನ ಆಸ್ತಿ ನೀವೆ ತಿನ್ನುತ್ತಿರುವಿರಾ ಭೋಸಡಿ ಮಕ್ಕಳೆ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಿರುವಾಗ ನಾನು ಮತ್ತು ನನ್ನ ಹೆಂಡತಿ ಮನೆಯಿಂದ ಹೊರಗಡೆ ಬಂದೆವು. ನಾನು ಯಾಕೆ ಈ ತರಹ ಬೈಯುತ್ತಿದ್ದಿ ಅಂತಾ ಅಂದಿದ್ದಕ್ಕೆ ನನಗೆ ತಡೆದು ನಿಲ್ಲಿಸಿ ಏ ರಂಡಿ ಮಗನೆ ಅಂತಾ ಬೈಯ್ದು ತನ್ನ ಹತ್ತಿರ ಇದ್ದ ಚಾಕುವಿನಿಂದ ಹೊಟ್ಟೆಗೆ ಹಾಗು ಎಡಗೈಯ ರಟ್ಟೆಗೆ ಮತ್ತು ಎದೆಗೆ ಚುಚ್ಚಿದನು ಮತ್ತು ಅದೆ ಚಾಕುವಿನಿಂದ ನನ್ನ ಹೆಂಡತಿಯ ಎಡ ಎದೆಗೆ ಚುಚ್ಚಿದನು. ಅದೆ ವೇಳೆಗೆ ನನ್ನ ಹೆಂಡತಿಗೆ ನಾಗೆಂದ್ರಮ್ಮ ಇವಳು ಕೂಡ ಕೈಯಿಂದ ಹೊಡೆದಿರುತ್ತಾಳೆ. ಸದರ ಘಟನೆಯಿಂದ ತಿವ್ರ ಗಾಯಗೊಂಡು ನಾನು ಮೂರ್ಛೆ ಹೋದೆನು. ನನಗೆ ಎಚ್ಚರವಾದಾಗ ಆಸ್ಪತ್ರೆಯಲ್ಲಿದ್ದು, ನನಗೆ ಹೊಟ್ಟೆಗೆ, ಎಡಗೈಗೆ, ಎದೆಗೆ ನೋಡಿಕೊಳ್ಳಲಾಗಿ ತಿವ್ರ ಹಾಗು ಬಲವಾದ ಗಾಯಗಳಾಗಿದ್ದವು. ನನ್ನ ಹೆಂಡತಿಗೆ ನೋಡಲಾಗಿ ಆಕೆಗು ಕೂಡ ಎದೆಗೆ ಚಾಕುವಿನಿಂದ ಇರಿದರಿಂದ ಬಲವಾದ ಗಾಯವಾಗಿತ್ತು. ಸದರ ಜಗಳವಾದ ಬಗ್ಗೆ ನಮ್ಮ ಅಣ್ಣನಾದ ತಿರುಮಲ, ಮಲ್ಲಣ್ಣ ದೊಡ್ಡಮನಿ, ಮಹಾದೇವಿ ಹಾಗು ವೆಂಕಟಪ್ಪ ನೋಡಿದ್ದು, ಇವರೆ ನನಗೆ ಹಾಗು ನನ್ನ ಹೆಂಡತಿಗೆ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಸೇಡಂಕ್ಕೆ ತಂದು ಸೇರಿಕೆ ಮಾಡಿ ಅಲ್ಲಿನ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಉಪಚಾರ ಕುರಿತು ಇಲ್ಲಿಗೆ ತಂದು ಸೇರಿಕೆ ಮಾಡಿದ ಬಗ್ಗೆ ತಿಳಿಸಿದರು. ದಿನಾಂಕ:01-04-2017 ರಂದು ಸದರಿ ಪ್ರಕರಣದಲ್ಲಿ ಭಾರಿ ಗಾಯಹೊಂದಿ ಉಪಚಾರದಲ್ಲಿ ಇದ್ದ ಗಾಯಾಳು ಹಣಮಂತ ತಂದೆ ಯಂಕಪ್ಪ ವಡ್ಡರ, ಸಾ:ಬಟಗೆರಾ(ಕೆ) ಗ್ರಾಮ, ಈತನು ಉಪಚಾರ ಹೊಂದುತ್ತಾ ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅಪಘಾತ ಪ್ರಕರಣಗಳು:
ಫರತಾಬಾದ ಠಾಣೆ : ದಿನಾಂಕ 30/03/2017 ರಂದು ರಾತ್ರಿ ಮೋ/ಸೈ ನಂ ಕೆಎ-32  ಇಡಿ 9813 ನ್ಭೆದ್ದರ ಸವಾರ ತನ್ನ ಮೋ/ಸೈ ಅತೀ ವೇಗ ಮತ್ತು ಅಜಾಗುರಕತೆಯಿಂದ ಚಲಾಯಿಸಿ ಶ್ರೀ ನಿಂಗನಗೌಡ ತಂದೆ ಸಿದ್ದನಗೌಡ ಪಾಟೀಲ  ಸಾ : ಮಲ್ಲಾ(ಬಿ) ತಾ: ಸುರಪ್ರರ ಹಾ :ವ : ಪೋಲಿಸ್ ವಸತಿ  ಗೃಹ ಜೇವರ್ಗಿ ರವರ ಮೋಟಾರ ಸೈಕಲಗೆ ಕೇಂದ್ರ ಕಾರಗೃಹ ಕಲಬುರಗಿ ಹತ್ತೀರ ಡಿಕ್ಕಿ ಪಡಿಸಿ ಫಿರ್ಯದಿಗೆ ಮತ್ತು ಇನ್ನೋಬ್ಬನಿಗೆ ಡಿಕ್ಕಿ ಪಡಿಸಿ   ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರಾತಬಾದ ಠಾಣೆ :  ದಿನಾಂಕ 30/03/2017 ರಂದು ಟಂ,ಟಂ ನಂ ಕೆಎ32 ಎ-5789 ನ್ಭೆದ್ದರ ಚಾಲಕ ತನ್ನ  ಟಂ.ಟಂ ಅತೀ ವೇಗ ಮತ್ತು ಅಜಾಗುರಕತೆಯಿಂದ ಚಲಾಯಿಸಿ ಶ್ರೀ ಶರಣಪ್ಪ ತಂದೆ ಬಸಣಗೌಡ ಹಾಲಗಡಲಿ ಸಾ : ಹಾಗರಗುಂಡಗಿ  ರವರ ಸ್ಕೂಟರಗೆ ಎನ್.ಹೆದ್. 218 ರೋಡಿನ ಮೆಲೆ ಫರಹತಾಬಾದ ಗ್ರಾಮದ   ಬೈಪಾಸ್ ಹತ್ತೀರ ಡಿಕ್ಕಿ ಪಡಿಸಿ ಫಿರ್ಯಾದಿಗೆ ಗಾಯ ಗೋಳಿಸಿ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

31 March 2017

Kalaburagi District Reported Crimes

ಕಳವು ಪ್ರಕರಣ :
ಜೇವರಗಿ ಠಾಣೆ : ಡಾ : ರಾಜಶೇಖರ ತಂದೆ ಚಂದ್ರಶೇಖರ ಸುಲೇಪೆಟಕರ್ ಸಾಃ (ರವಿ ಕುಂಜ) ಮೊಹನ ನಗರ ಹಳೆ ಜೇವರಗಿ ರಸ್ತೆ ಕಲಬುರಗಿ ಹಾಃವಃ ಬಸವೇಶ್ವರ ನಗರ ಜೇವರಗಿ ] ಮತ್ತು ನನ್ನ ಹೆಂಡತಿ ಸ್ವಪ್ನಾ ಸುಲೇಪೇಟಕರ್ ಇಬ್ಬರೂ ಡಾಕ್ಟರ್ ಕೆಲಸ ಮಾಡಿಕೊಂಡಿರುತ್ತೇವೆ. ನಮ್ಮದೊಂದು ಜೇವರಗಿ ಪಟ್ಟಣದ ಹೊಸ ಬಸ್ ನಿಲ್ದಾಣ ಹತ್ತಿರ ನಿರ್ಮಲಾ ದೇವಿ ಚೈಲ್ಡ್ & ಮೇಟರನೇಟಿ ಆಸ್ಪತ್ರೆ ಇರುತ್ತದೆ. ಅಸ್ಪತ್ರೆಯಲ್ಲಿ ನಾನು ಮತ್ತು ನನ್ನ ಹೆಂಡತಿ ಇಬ್ಬರು ಕೆಲಸ ಮಾಡುತ್ತೇವೆ ಅಲ್ಲದೇ ನಮ್ಮ ಮನೆ ಜೇವರಗಿ ಪಟ್ಟಣದ ಬಸವೇಶ್ವರ ನಗರದಲ್ಲಿರುವ ಮಲ್ಲಣಗೌಡ ತಂದೆ ಭೀಮರಾಯಗೌಡ ಪಾಟೀಲ ಸಾಃ ನೇದಲಗಿ ಇವರ ಮನೆಯಲ್ಲಿ ಬಾಡಿಗೆಯಿಂದ ಇರುತ್ತೇವೆ. ದಿನಾಂಕ 30.03.2017 ರಂದು ಮುಂಜಾನೆ 10.00 ಗಂಟೆಯ ಸುಮಾರಿಗೆ ನಾನು ಮನೆಯಿಂದ ಆಸ್ಪತ್ರೆಗೆ ಹೋದೆನು. ನಂತರ ಮುಂಜಾನೆ 11.00 ಗಂಟೆಯ ಸುಮಾರಿಗೆ ನನ್ನ ಹೆಂಡತಿ ಡಾಃ ಸ್ವಪ್ನಾ ಇವಳು ನಮ್ಮ ಮನೆಯ ಬಾಗಿಲ  ಕೀಲಿ ಹಾಕಿ ಆಸ್ಪತ್ರೆಗೆ ಬಂದಿರುತ್ತಾಳೆ. ಮದ್ಯಾಹ್ನ  3.00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಆಸ್ಪತ್ರೆಯಿಂದ ಮರಳಿ ನಮ್ಮ ಮನೆಗೆ ಬಂದು ನೋಡಲು ನಮ್ಮ ಮನೆಯ ಬಾಗೀಲ ಕೀಲಿ ಮುರಿದು ಬಾಗಿಲು ಕೊಂಡಿ ಹಾಕಿದ್ದು ಇತ್ತು. ನಂತರ ನಾವಿಬ್ಬರೂ ಮನೆಯೊಳಗೆ ಹೋಗಿ ನೋಡಲಾಗಿ ಮನೆಯಲ್ಲಿನ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು, ಅಲ್ಲದೇ ಅಲಮಾರಿ ಬಾಗಿಲ ತೆರೆದಿತ್ತು. ನೋಡಲಾಗಿ ಅದರಲ್ಲಿ ಇಟ್ಟ ಒಟ್ಟು ಇಪ್ಪತ್ತೈದುವರೆ ತೊಲೆ ಬಂಗಾರ & ಡೈಮಂಡ್ ಆಭರಣಗಳು ಒಟ್ಟು .ಕಿ. 7,42,500/-ರೂ  ನೇದ್ದವುಗಳು ಯಾರೊ ಕಳ್ಳರು ದಿನಾಂಕ 30.03.2017 ಮುಂಜಾನೆ 11.30 ಗಂಟೆಯಿಂದ ಮದ್ಯಾಹ್ನ 3.00 ಗಂಟೆಯ ಮದ್ಯದ ಅವದಿಯಲ್ಲಿ ನಮ್ಮ ಮನೆಯ ಬಾಗಿಲ ಕೀಲಿ ಮುರಿದು ಬಾಗಿಲ ತೆರೆದು ಮನೆಯಲ್ಲಿನ ಕಬ್ಬಿಣದ ಅಲಮಾರದಲ್ಲಿ ಇಟ್ಟ  ಬಂಗಾರ  & ಡೈಮಂಡ್ ಆಭರಣಗಳುನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಸ್ವಾಭಾವಿಕ ಸಾವು ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 30/03/2017 ರಂದು  ಸಾಯಂಕಾಲ ಸರಡಗಿ ಗ್ರಾಮದ ಹತ್ತೀರ ಭೀಮಾ ನದಿಯಲ್ಲಿ ಒಬ್ಬ ಅಪರಿಚಿತ ಗಂಡು ಮನುಷ್ಯ ವಯಸ್ಕ  ಸುಮಾರು 35 ರಿಂದ 40 ವರ್ಷ ಇತನ ಶವ ಇದ್ದು ಇತನ ಸಾವಿನಲ್ಲಿ ಸಂಶಯ ಇರುತ್ತದೆ ಮುಂದಿನ ಕಾನೂನಿನ ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಶ್ರೀ ಬಸವರಾಜ ಡೆಂಗಿ ಸಾ : ಫರಹತಾಬಾದ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

28 March 2017

Kalaburagi District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಫರತಾಬಾದ ಠಾಣೆ : ದಿನಾಂಕ 27/03/2017 ರಂದು  ಸಾಯಂಕಾಲ  ಫರಥಾಬಾದ ಠಾಣಾ ವ್ಯಾಪ್ತಿಯ  ಸೀತನೂರ ಗ್ರಾಮದ ಅಮೃತ ಬಂಕೂರ ಇವರ ಮನೆಚಿು ಮುಂದಿನ ಸಾರ್ವಜನಿಕ ಕಟ್ಟೆ ಮೇಲೆ ಅಂದರ -ಬಹಾರ ಎಂಬ ಇಸ್ಪೀಟ ಜೂಜಾಟವಾಡುತ್ತಿದ್ದ ಬಗ್ಗೆ ಬಾತ್ಮಿ ಮೇರೆಗೆ ಶ್ರೀ ಪಿ.ಎಸ್. ವನಚಿಜಕರ ಪಿ.ಎಸ್.ಐ ಫರಹತಾಬಾದ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ  ದಾಳಿ ಮಾಡಿ ಅಂಬಾರಾಯ ತಂದೆ ಮಹಾದೇವಪ್ಪ ಕಣ್ಣಿ  ಸಂಗಡ ಇನ್ಮ್ನ 3 ಜನರು ಸಾ// ಸೀತನ್ರರ ,ಕಲ್ಲೂರ(ಕೆ) ಹಾಗೂ ಆಂದೋಲ ರವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಜೂಜಾಟಕ್ಕೆ ಬಳಸಿದ 4040/-  ರೂಪಾಯಿ  ನಗದು ಹಣ ಮತ್ತು 52 ಇಸ್ಪೀಟದ ಎಲೆಗಳು ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ
ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ವೈಜನಾಥ ತಂದೆ ಮಹಾರುದ್ರಪ್ಪಾ ಕುಲಕರ್ಣೀ ಸಾ:ಸ್ವಾಮಿ ವಿವೇಕಾನಂದ ನಗರ ಮಾಳೆವಾಡಿ ಕಲಬುರಗಿ ಇವರು ದಿನಾಂಕ:23/03/2017 ರಂದು ನನ್ನ ಹೆಂಡತಿ ಕಾಂಚನಾ ಇವಳು ತನ್ನ ತವರು ಮನೆಗೆ ಹೋಗಿದ್ದು ನಾನು ದಿನಾಂಕ:25/03/2017 ರಂದು ಬೆಳಗ್ಗೆ 8.30 ಗಂಟೆಗೆ ನಮ್ಮ ಮನೆಯ ಕೀಲಿ ಹಾಕಿಕೊಂಡು ನನ್ನ ಕೆಲಸದ ನಿಮೀತ್ಯವಾಗಿ ಹೋಗಿರುತ್ತೇನೆ ನಂತರ ಇಂದು ದಿನಾಂಕ:27/03/2017 ರಂದು ಸಾಯಂಕಾಲ 5.00 ಗಂಟೆಗೆ ಮರಳಿ ನಮ್ಮ ಮನೆಗೆ ಬಂದು ನೋಡಲು ನಮ್ಮ ಮನೆಯ ಬಾಗಿಲಿನ ಕೀಲಿ ಮುರಿದು ಒಳಗೆ ಹೋಗಿ ಮನೆಯಲ್ಲಿ  ಅಲಮಾರಿಯಲ್ಲಿಟ್ಟಿದ್ದ 3 ಗ್ರಾಂ  ಬಂಗಾರದ ಒಂದು  ಉಂಗುರ .ಕಿ.10000/-ರೂ ಮತ್ತು 02 ಗ್ರಾಂ ಬಂಗಾರದ ಕಿವಿಯ ಬೆಂಡೋಲಿ .ಕಿ.6800/-ರೂ ಹಾಗೂ ಹಾಲ್‌‌‌ನಲ್ಲಿ ಹಾಕಿದ 01 ಎಲ್‌‌.ಜಿ ಕಂಪನಿಯ ಎಲ್‌‌.ಸಿ.ಡಿ ಟಿ.ವಿ .ಕಿ.8000/-ರೂ ಹಿಂಗೆ ಒಟ್ಟು 24800/-ರೂ ಬೆಲೆವುಳ್ಳ ಸಾಮಾನುಗಳನ್ನು ಯಾರೋ ಕಳ್ಳರು ದಿನಾಂಕ:25/03/2017 ರಂದು ಬೆಳಗ್ಗೆ 8.30 ಗಂಟೆಯಿಂದ ಇಂದು ದಿನಾಂಕ:27/03/2017 ಸಾಯಂಕಾಲ 5.00 ಗಂಟೆಯ ಅವದಿಯೊಳಗೆ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.