POLICE BHAVAN KALABURAGI

POLICE BHAVAN KALABURAGI

20 January 2017

Kalaburagi District Reported Crimes

ಅತ್ಯಾಚಾರ  ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಇವರಿಗೆ ತಾಜಸುಲ್ತಾನಪೂರ ಗ್ರಾಮದ ಶಿವಶರಣಪ್ಪ @ ಶರಣಪ್ಪ ಬೆಡಜರ್ಗಿ  ಆಟೋಚಾಲಕನು ದಿನಾಲು ನಮ್ಮ ಮನೆಯ ಎದರುಗಡೆಯಿಂದ ಹೋಗುವದು ಬರುವದು ಮಾಡುತ್ತಿದ್ದಾಗ ನನಗೆ ದಿಟ್ಟಿಸಿ ನೋಡುವದು ನಮ್ಮ ಬಟ್ಟೆ ಅಂಗಡಿಗೆ ಬಂದು ಮಾತಾಡುವದು ಮಾಡುವದಲ್ಲದೆ ನನ್ನ ಫೋನ ನಂಬರ ಕೇಳುವುದು  ಚಿಡಾಯಿಸುವದು ಮಾಡುತ್ತಿದ್ದನು , ನನ್ನ ಗಂಡ ಅತ್ತೆಗೆ ಹೇಳಿದರೆ ತಪ್ಪಾಗಿ ಭಾವಿಸಿ ತೊಂದರೆಯಾಗ ಬಹುದೆಂದು ಯಾರಿಗೂ ಹೇಳಿರುವದಿಲ್ಲಾ. ಕಳೆದ 3-4 ದಿವಸಗಳಿಂದ ನನಗೆ ಫೋನ ಮಾಡಿ ಮನೆಗೆ ಬರುತ್ತೇನೆ ಬಾಗಿಲು ತೆರೆಯಬೇಕು ಇಲ್ಲದಿದ್ದರೆ  ರಸ್ತೆ ಮೇಲೆ ಹೋಗುವಾಗ ನಿನ್ನ ಮಕ್ಕಳ ಮೇಲೆ ಆಟೋ ಹಾಯಿಸಿಕೊಂಡು ಹೋಗುತ್ತೆನೆ ಅಂತಾ ಬೆದರಿಕೆ ಹಾಕುತಿದ್ದನು  ಅದಕ್ಕೆ ನಾನು ನನ್ನ ಮದುವೆಯಾಗಿದೆ ಇಬ್ಬರು ಮಕ್ಕಳು ಇರುತ್ತಾರೆ ದಯವಿಟ್ಟು ಸತಾಯಿಸಬೇಡಾ ತೊಂದರೆ ಕೋಡಬೇಡಾ ಅಂತಾ ಪರಿಪರಿಯಾಗಿ ಬೇಡಿಕೊಂಡರು ಸತಾಯಿಸುತಿದ್ದನು. ದಿನಾಂಕ. 18-1-2017 ರಂದು ಸಂಜೆ 8-00 ಗಂಟೆಯಸುಮಾರಿಗೆ ಸದರಿ ಶಿವಶರಣಪ್ಪಾ @ ಶರಣಪ್ಪ ಬೆಡಜಿರಗಿ ಇತನು ನಮ್ಮ ಮನೆಯ ಮುಂದಿನಿಂದ ಆಟೋ ತೆಗೆದುಕೊಂಡು ಹೋಗುತ್ತಿರುವಾಗ ನಮ್ಮ ಮನೆಯ ಎದರುಗಡೆ ಆಟೋನಿಲ್ಲಿಸಿ ನಮ್ಮ ಅಂಗಡಿಯ ಹತ್ತಿರ ಬಂದು  ಇಂದು ಮದ್ಯರಾತ್ರಿ 2-00 ಗಂಟೆಯ ಸುಮಾರಿಗೆ  ಮನೆಗೆ ಬರುತ್ತೇನೆ ಎದ್ದು ಬಾಗಿಲು ತೆರೆಯ ಬೇಕು  ತೆಗೆಯದಿದ್ದರೆ  ಬೆಳಗ್ಗೆ ನಿಮ್ಮ ಮನೆಗೆ ಬಂದು ಗಲಾಟೆ ಮಾಡಿ ದಿನಾಲು ಫೋನ ಮಾಡಿತಿದ್ದಾಳೆ ಎಂದು ನಿನ್ನ ಗಂಡ  ಮತ್ತು ಮನೆಯವರೆಲ್ಲರಿಗೂ ಹೇಳುತ್ತೇನೆ ಅಂತಾ ಹೇಳಿ ಹೋದನು . ದಿನಾಂಕ. 19-01-2017 ರಂದು ಮದ್ಯ ರಾತ್ರಿ 01:30 ಎ.ಎಂ.ದ ಸುಮಾರಿಗೆ ನಮ್ಮ ಬಾಗಿಲು ಬಡಿದ ಸಪ್ಪಳ ಬಂತು  ಆಗ ಮನೆಯಲ್ಲಿ ನನ್ನ ಗಂಡ ನನ್ನ ಮಗು ಹಾಗೂ ಇನ್ನೊಂದು ಕಡೆ ನಮ್ಮ ನದನಿಯ ಮಗಳಾದ ಅರ್ಚನಾ ಮಲಗಿರುವದನ್ನು ನೋಡಿ ಎದ್ದು ಹೋಗಿ ಬಾಗಿಲ ಮರೆಯಲ್ಲಿ ನಿಂತು ನೋಡಲು ಶಿವಶರಣಪ್ಪಾ @ ಶರಣಪ್ಪ ಇತನು ಇದ್ದನು  ಮನೆಗೆ ಬರಬೇಡಾ ತೊಂದರೆಯಾಗುತ್ತದೆ ನಿನ್ನ ಕೈ ಮುಗಿಯುತ್ತೆನೆ ಅಂತಾ ಹೇಳಿದರು ಆತನು ಸ್ವಲ್ಪ ಮಾತನಾಡಿ ಹೋಗುತ್ತೇನೆ ನೀನು ಬಾಗಿಲು ತೆಗೆಯ ಬೇಕು ಇಲ್ಲ ಅಂದರೆ ನಾನು ಚೀರುತ್ತೇನೆ ರಂಡಿ , ಭೋಸಡಿ ಅಂತಾ ಹೆದರಿಸಿ ಜಬರದಸ್ತಿಯಿಂದ ಬಾಗಿಲನ್ನು ತೆರೆಯಿಸಿ ಮನೆಯ ಒಳಗಡೆ ಬಂದು ನನಗೆ ಕೈಹಿಡಿದು ಜಬರದಸ್ತಿಯಿಂದ ಎಳೆದುಕೊಂಡು ಬಟ್ಟೆ ಅಂಗಡಿಯ ಒಳಗೆ ಕರೆದುಕೊಂಡು ಹೋಗಿ ನನಗೆ ಜಬರದಸ್ತಿಯಿಂದ  ನನ್ನ ಬಟ್ಟೆಗಳನ್ನು ತೆಗೆದು ಬೇಡವೆಂದರೂ ಒತ್ತಾಯ ಪೂರ್ವಕವಾಗಿ  ನನ್ನ ಬಾಯಿ ಒತ್ತಿ ಹಿಡಿದು ನನ್ನನ್ನು ಕೆಳಗೆ ಕೆಡವಿ ಜಬರಿಯಿಂದ ಹಠಸಂಭೋಗ ಮಾಡಿರುತ್ತಿರುವಾಗ ಒತ್ತಿ ಹಿಡಿದ ಬಾಯಿಯನ್ನು ಬಿಡಿಸಿಕೊಂಡು ಚೀರಾಡುವಾಗ ನನ್ನ ಗಂಡ ಮಲ್ಲಯ್ಯಾ ಮಠಪತಿ ಮತ್ತು ನನ್ನ ನಾದನಿಯ ಮಗಳಾದ ಅರ್ಚನಾ ಇವರು ಬಂದು ಘಟನೆಯನ್ನು ನೋಡಿದರು ಹಾಗೆ ಚೀರಾಡುತ್ತಿರುವಾಗ ಪಕ್ಕದ ಮನೆಯ ಶರಣಯ್ಯ ತಂದೆ ಉಗರಯ್ಯ ಅವರ ಹೆಂಡತಿ ಸವಿತಾ ಹಾಗೂ ಸಂತೋಷ ಅಂಬಲಗಿ ಹಾಗೂ ಇವರ ತಾಯಿ ಶರಣಮ್ಮ ಮತ್ತು ಚಂದ್ರಶೇಟ್ಟಿ ಅಂಬಲಗಿ ಇವರು ಓಡಿ ಬಂದಿದ್ದು ಆಗ ಶಿವಶರಣಪ್ಪಾ @ ಶರಣಪ್ಪ ಈತನು ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದು ಆತನನ್ನು ನನ್ನ ಗಂಡನವರು ಹಿಡಿದುಕೊಂಡಿದ್ದು, ಆದರು ಆತನು ತಪ್ಪಿಸಿಕೊಂಡು ಓಡಿ ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀನ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಬಸವರಾಜ ತಂದೆ ಅಣ್ಣರಾವ ಖ್ಯಾಡಗಿ  ಸಾ : ಬಸನಾಳ  ತಾ : ಜಿ : ಕಲಬುರಗಿ  ರವರಿಗೆ ದಿನಾಂಕ 18-01-2017 ರಮದು ರಾತ್ರಿ ಲಕ್ಷ್ಮಣ ತಂದೆ ಅಣ್ಣರಾವ ಖೆಡಗಿ  ಸಂಗಡ ಇನ್ನು ಮೂರು ಜನರು ಸಾ : ಎಲ್ಲರೂ ಬಸನಾಳ ಕುಡಿಕೊಂಡು ನಿನ್ನೆ ನೀನು ವಿನಾಕರಣ ನಮ್ಮ ಮಗನಿಗೆ ಹೊಡೆದಿದಿ ಮಗನೆ ಅಂತಾ ತಡೆದು ನಿಲ್ಲಿಸಿ ಕೈಯಿಂದ ಮತ್ತು ಬಡಿಗಡಯಿಂದ ಹೊಡೆ,ಬಡೆ ಮಾಡಿ ತಲೆಗೆ ರಕ್ತಗಾಯ ಗೋಳಿಸಿ  ಜೀವದ ಬೆದರಿಕೆ ಹಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಸ್ವಾಭಾವಿಕ ಸಾವು ಪ್ರಕರಣ :
ಫರತಾಬಾದ ಠಾಣೆ : ಶ್ರೀಮತಿ ಶಬಿನಾ ಗಂಡ ನಬಿ ಪಟೇಲ ಕೂಡಿ ಸಾ : ಕೋಳ್ಳುರ ತಾ:ಜಿ: ಕಲಬುರಗಿ ಇವರ  ಗಂಡ ನಬಿಪಟೇಲ ತಂದೆ ಚಾಂದ ಪಟೆಲ ಕಕೂಡಿ ಸಾ : ಕೋಳ್ಲುರ ಇತನಿಗೆ ಈಗ 2 ವರ್ಷಗಳಿಮದ ಹೊಟ್ಟೆ ಕಡಿತದ ಬೇನೆ ಇದ್ದು ಅದರ ತ್ರಾಸ ತಾಳದೆ  ದಿನಾಮಕ 02-01-2017 ರಂದು ತನ್ನ ಮನೆಯಲ್ಲಿ ವಿಷ ಸೇವನೆ ಮಡಿದ್ದು ಚಿಕಿತ್ಸೆಯಲ್ಲಿ ಗುಣಮುಖನಾಗದೆ ದಿನಾಂಕ 19-01-2017 ರಂದು ರಾತ್ರಿ 1 ಗಂಟೆಗೆ  ಸರ್ಕರಿ ಅಸ್ಪತ್ರೆ ಕಲಬುರಗಿಯಲ್ಲಿ ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

19 January 2017

KALABURAGI DISTRICT POLICE PRESS NOTE


ಪತ್ರಿಕಾ ಪ್ರಕಟಣೆ
ಅಶೋಕ ನಗರ ಪೊಲೀಸ್ ಠಾಣೆ ಕೊಲೆ ಆರೋಪಿತರ ಬಂಧನ

     ದಿನಾಂಕ 18/01/2017 ರಂದು ಶ್ರೀ ಮಹ್ಮದ ಹನೀಫ್ ಇವರು ತಮ್ಮ ಫಿಯಾದಿಯಲ್ಲಿ ದಿನಾಂಕ:18.01.2017 ರಂದು ರಾತ್ರಿ 10:00 ಗಂಟೆ ಸುಮಾರಿಗೆ ನಮ್ಮ ತಮ್ಮ ನನಗೆ ತಿಳಿಸಿದ್ದೆನೆಂದರೆ, ಸಾಯಂಕಾಲ 07:30 ಗಂಟೆ ಸುಮಾರಿಗೆ ನನ್ನ ಮಗ ಮೊಹ್ಮದ ಮೊಸೀನ ಇತನಿಗೆ  7-8 ಜನರು ಬಂದು ಚಾಕುವಿನಿಂದ ಹೊಡೆದಿದ್ದು, ಉಪಚಾರಕ್ಕಾಗಿ ಯುನೈಟೆಡ್ ಆಸ್ಪತ್ರೆಗೆ ಸೇರಿಕೆ  ಮಾಡಿದಾಗ ಚಿಕಿತ್ಸೆ ಫಲಕಾರಿ ಆಗದೆ ರಾತ್ರಿ 8:30 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾನೆ. ನಂತರ ನನಗೆ ತಿಳಿದಿದ್ದೆನೆಂದರೆ, ನನ್ನ ಮಗ ಮೊಹ್ಮದ ಮೊಸೀನ ಈತನ ಕುಮ್ಮಕ್ಕಿನಿಂದಲೆ ಆತನ ಗೆಳೆಯರು ಈಗ ಸುಮಾರು 5-6 ದಿವಸಗಳ ಹಿಂದೆ  ಶಿವಶರಣ ತಂದೆ ಕೆಂಚಪ್ಪಾ ಹದಗಲ ಸಾ: ಬ್ರಹ್ಮಪೂರ ಕಲಬುರಗಿ ಈತನಿಗೆ ಹೊಡೆಬಡೆ ಮಾಡಿದ್ದು ಅದೇ ವೈಷಮ್ಯದಿಂದ ಇಂದು ದಿನಾಂಕ:18.01.2017 ರಂದು 07:30 ಪಿ.ಎಂ.ಕ್ಕೆ ನಮ್ಮ ಮಗ ಮೊಹ್ಮದ ಮೊಸೀನ ಈತನು ಸಜ್ಜನ ಬಿಲ್ಡಿಂಗ ಹತ್ತಿರ ತನ್ನ ಗೆಳೆಯರೊಂದಿಗೆ ಇದ್ದಾಗ ಶಿವಶರಣ ಹದಗಲ ಇವರ ತಮ್ಮನಾದ 1) ಅಮರ ತಂದೆ ಕೆಂಚಪ್ಪ ಹಡಗಲ ಮತ್ತು ಅವನ ಗೆಳೆಯರಾದ 2) ಯೋಗಿ ತಂದೆ ಮಲ್ಲಿಕಾರ್ಜುನ ದೊಡ್ಡಮನಿ   3) ಪ್ರಮೋದ @ ಗುಂಡ್ಯಾ ತಂದೆ ಲಿಂಗರಾಜ ಪೂಜಾರಿ  4) ಸಾಗರ ತಂದೆ ಮಲ್ಲೇಶಿ ಬೆಳಕೋಟೆ 5) ಶಾಂತು ತಂದೆ ಹಣಮಂತ ನಾಯ್ಕೋಡಿ  6) ಪ್ರಮೋದ ತಂದೆ ಬಸವರಾಜ 7) ವಿಠಲ ಹಾಗೂ ಇತರರು ಗುಂಪು ಕಟ್ಟಿಕೊಂಡುಬಂದು ನನ್ನ ಮಗ ಮೊಹ್ಮದ ಮೊಸೀನ ಈತನ ಹೊಟ್ಟೆಗೆ ಹಾಗೂ ದೇಹದ ಇತರ ಕಡೆಗೆ ಚಾಕುವಿನಿಂದ ಹೊಡೆದು ಕೊಲೆ ಮಾಡಿದ್ದು ಇರುತ್ತದೆ. ಫಿರ್ಯಾದಿಯ ಅರ್ಜಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 02/2017 ಕಲಂ 143, 147, 148, 302, ಸಂಗಡ 149 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
             ಈ ಪ್ರಕರಣವನ್ನು  ಮಾನ್ಯ ಎಸ್.ಪಿ ಸಾಹೇಬರು ಗಂಭಿರವಾಗಿ ಪರಿಗಣಿಸಿ ಕೊಲೆಗಾರರ ಪತ್ತೆಮಾಡುವ ಸಲುವಾಗಿ ಮಾನ್ಯ ಆರಕ್ಷಕ ಅಧೀಕ್ಷಕು ಕಲಬುರಗಿ ಮತ್ತು ಮಾನ್ಯ ಅಪರ ಎಸ್.ಪಿ. ಕಲಬುರಗಿ ರವರ ಮಾರ್ಗದರ್ಶನದಲ್ಲಿ, ಮಾನ್ಯ ಡಿ.ಎಸ್.ಪಿ. ಉಪ ವಿಭಾಗ ಕಲಬುರಗಿ ಪಿ.ಐ. ಅಶೋಕ ನಗರ, ಪಿ.ಐ.  ಚೌಕ, ಪಿ.ಐ ಸ್ಟೇಷನ ಬಜಾರ, ಪಿ.ಐ. ಬ್ರಹ್ಮಪೂರ, ಮತ್ತು ಸಿಬ್ಬಂದಿ ಜನರನ್ನು ಕೂಡಿ  ತಂಡವನ್ನು ರಚಿಸಿದ್ದು, ತನಿಖಾ ತಂಡ ಅಧಿಕಾರಿಗಳು ಮತ್ತು ಸಿಬ್ಬಂದಿ ಜನರು ಸಾರ್ವಜನಿಕರಿಂದ ಹಾಗೂ ಪೊಲೀಸ ಬಾತ್ಮಿದಾರರಿಂದ ಅಪರಾಧಿಗಳ ಬಗ್ಗೆ ನೀಡಿದ ಮಾಹಿತಿಯನ್ನು ಆಧರಿಸಿ  ದಿನಾಂಕ:19.01.2017 ರಂದು ಮದ್ಯಾನ್ಹ 12:30 ಗಂಟೆಗೆ ಪ್ರಕರಣದ ಆರೋಪಿತರು ಪಟ್ಟಣ ಟೋಲ್ ನಾಕಾದ ಹತ್ತಿರ ಇರುವ ಬಗ್ಗೆ ಖಚಿತ ಪಡಿಸಿಕೊಂಡು ಸ್ಥಳಕ್ಕೆ ಹೋದಾಗ ಪೊಲೀಸರನ್ನು ನೋಡಿ   ಮಹ್ಮದ ಮೊಸೀನ ಈತನಿಗೆ ಕೊಲೆ ಮಾಡಿದ 9 ಜನ ಆರೋಪಿತರು ಓಡಿ ಹೋಗುತ್ತಿದ್ದಾಗ ಅವರನ್ನು ಬೆನ್ನಟ್ಟಿ ಹಿಡಿದು ವಶಕ್ಕೆ ತೆಗೆದುಕೊಂಡು ಕೊಲೆಗಾರರಾದ 1) ಅಮರ ತಂದೆ ಕೆಂಚಪ್ಪ ಹದಗಲ ಉ: ವಿದ್ಯಾರ್ಥಿ ಸಾ: ಕನಕ ನಗರ ಬ್ರಹ್ಮಪೂರ ಕಲಬುರಗಿ 2) ವಿಠಲ ತಂದೆ ಅಂಬಣ್ಣಾ ಪರಿಟ್ ಉ: ಖಾಸಗಿ ಕೆಲಸ ಸಾ: ಧನಗರ ಗಲ್ಲಿ ಬ್ರಹ್ಮಪೂರ ಕಲಬುರಗಿ. 3) ಸಾಗರ ತಂದೆ ಮಲ್ಲೇಶಿ ಬಾಳೆ ಉ: ಅಡುಗೆ ಕೆಲಸ ಸಾ: ಕನಕ ನಗರ ಕಲಬುರಗಿ. 4) ಶಾಂತು @ ಶಾಂತಲಿಂಗ ತಂದೆ ಹಣಮಂತ ನಾಯ್ಕೋಡಿ ಉ: ಗೌಂಡಿ ಕೆಲಸ ಸಾ: ಸಮತಾ ಕಾಲೋನಿ ಬ್ರಹ್ಮಪೂರ ಕಲಬುರಗಿ 5) ಯೋಗಿ @ ಯೋಗಿರಾಜ ತಂದೆ ಮಲ್ಲಿಕಾರ್ಜುನ ದೊಡ್ಡಮನಿ ಉ: ವಿದ್ಯಾರ್ಥಿ ಸಾ: ಧನಗರ ಗಲ್ಲಿ ಬ್ರಹ್ಮಪೂರ ಕಲಬುರಗಿ 6) ಪ್ರಮೋದ @ ಗುಂಡ್ಯಾ ತಂದೆ ಲಿಂಗರಾಜ ಪೂಜಾರಿ ಉ: ವಿದ್ಯಾರ್ಥಿ ಸಾ: ಸಮತಾ ಕಾಲೋನಿ ಕಲಬುರಗಿ  7) ಪ್ರಮೋದ ತಂದೆ ಬಸವರಾಜ ದಾಳಿಂಬ ಉ: ವಿದ್ಯಾರ್ಥಿ ಸಾ: ಸಮತಾ ಕಾಲೋನಿ ಕಲಬುರಗಿ 8) ಶರಣು @ ಶರಣಪ್ಪ ತಂದೆ ಬಂಡಪ್ಪ ದಣ್ಣೂರ ಉ: ವಾಟರ ಸಪ್ಲಾಯ್ ಕೆಲಸ ಸಾ: ಸಮತಾ ಕಾಲೋನಿ ಕಲಬುರಗಿ ಮತ್ತು 9) ಶಿವಪ್ರಸಾದ ತಂದೆ ಶರಣಬಸಪ್ಪ ಕುಂಬಾರ ಉ: ವಿದ್ಯಾರ್ಥಿ ಸಾ: ಕುಂಬಾರಗಲ್ಲಿ ಬ್ರಹ್ಮಪೂರ ಕಲಬುರಗಿ ಇವರನ್ನು  ಹಿಡಿಯುವಲ್ಲಿ ಪೊಲೀಸ ತಂಡವು ಯಶಶ್ವಿಯಾಗಿದ್ದು ಇರುತ್ತದೆ.
          Cದರಂತೆ ಸದರಿ ಘಟನೆಗೆ ಸಂಬಂಧಿಸಿದ ರಾಘವೇಂದ್ರ ನಗರ ಪೊಲೀಸ್ ಠಾಣೆ ಗುನ್ನೆ. ನಂ. 05/17 ಕಲಂ. 143,147,148,323,324,504,506 ಮತ್ತು 149 .ಪಿ.ಸಿ. ಪ್ರಕರಣದಲ್ಲಿ ಬಾತ್ಮಿದಾರರ ಮಾಹಿತಿಯಂತೆ ಆರೋಪಿಗಳಾದ 1) ಮುvÀÄðಜಾ ಅಲಿ ಉ: ವಿದ್ಯಾರ್ಥಿ ಸಾ: ಕಲಬುರಗಿ, 2) ಶ್ಯಾಂಡಿ ಸಂತು ಉ: ವಿದ್ಯಾರ್ಥಿ ಸಾ: ಕಲಬುರಗಿ, 3) ಸಾಗರ ಎಂ.ಬಿ. : ವಿದ್ಯಾರ್ಥಿ ಸಾ: ಕಲಬುರಗಿ, 4) ¥sÁð: ವಿದ್ಯಾರ್ಥಿ ಸಾ: ಕಲಬುರಗಿ, 5) ಸೂಫಿಯಾನ ಉ: ವಿದ್ಯಾರ್ಥಿ ಸಾ: ಕಲಬುರಗಿ. ಇವರುಗಳನ್ನು ತನಿಖಾ ತಂಡವು ವಶಕ್ಕೆ ಪಡೆದಿರುತ್ತಾರೆ
                       ಈ ಪ್ರಕರಣಗಳ ಆರೋಪಿತರನ್ನು ಹಿಡಿಯುವಲ್ಲಿ ಸಾರ್ವಜನಿಕರು, ಪೊಲೀಸ ಬಾತ್ಮಿದಾರರು ಮತ್ತು ಮಾದ್ಯಮದವರುಯ ಸಹಕರಿಸಿದಕ್ಕೆ ಅವರನ್ನು ಮಾನ್ಯ ಎಸ್.ಪಿ ಸಾಹೇಬರು ಕಲಬುರಗಿ ರವರು ಶ್ಲಾಘಿಸಿ  ಧನ್ಯವಾದಗಳನ್ನು  ತಿಳಿಸಿರುತ್ತಾರೆ ಮತ್ತು ತನಿಖಾ ತಂಡದ  ಅಧಿಕಾರಿ ಸಿಬ್ಬಂದಿಯವರಿಗೆ  ಪ್ರಸಂಶಿಸಿರುತ್ತಾರೆ. 

KALABURAGI DISTRICT REPORTED CRIMES

ಕೊಲೆ ಯತ್ನ ಪ್ರಕರಣ:
ವಾಡಿ ಪೊಲೀಸ್ ಠಾಣೆ: ಶ್ರೀ ಮೊಹ್ಮದ ಜಿಲಾನಿ ಸಾ: ನಾಲವಾರ ಮತ್ತು ಆತನ ತಮ್ಮಂದಿರರು ನಾಲವಾರದ ಶ್ರೀ ಶಾಫಿರಲಿ ದರ್ಗಾದ ಜಾತ್ರೆಯಲ್ಲಿ ಮೌಂಸದ ಅಂಗಡಿ ಹಾಕಿದ್ದು. ಅವರ ಅಂಗಡಿಯ ಪಕ್ಕದಲ್ಲಿ ಅವರ ಸಹೋದರ ಸಂಬಂಧಿಯಾದ ಫಾರೂಕ ತಂದೆ ಖಾಜಾ ಹುಸೇನ ಖುರೇಷಿ ಸಹ ಮೌಂಸದ ಅಂಗಡಿ ಇಟ್ಟಿದ್ದು . ದಿ: 18-01-2017 ರಂದು ಶ್ರೀ ಮೊಹ್ಮದ ಜಿಲಾನಿ ರವರು ದರ್ಗಾದ ಹಿಂದುಗಡೆ ಇರುವ ಹೊಟೇಲದಲ್ಲಿ ಚಹಾ ಕುಡಿಯುತ್ತಿರುವಾಗ ಅಲ್ಲಿಗೆ ಬಂದ ಫಾರೂಕನು ಜಿಲಾನಿಗೆ ಅವಾಚ್ಯವಾಗಿ ಬೈಯುತ್ತಿರುವಾಗ ಯಾಕೆ ಸುಮ್ಮನೇ ಬೈಯುತ್ತಿ ಎಂದು ಕೇಳಿದ್ದಕ್ಕೆ ಅತನು ತನ್ನ ಅಂಗಡಿಗೆ ಹೋಗಿ ಮರಳಿ ಬಂದ  1) ಫಾರೂಕ ತಂದೆ ಖಾಜಾ ಹುಸೇನ, 2) ಮಕ್ಬೂಲ, 3) ಆಸೀಪ ತಂದೆ ಖಾಜಾ ಹುಸೇನ ಸಾ: ಎಲ್ಲರೂ ನಾವಾಲಾರ ರವರು ಕೂಡಿ ಬಂದವರೇ ಮತ್ತೆ ಅವಾಚ್ಯ ಶಬ್ದಗಳಿಂಧ ಬಯ್ಯುತ್ತಾ ಕೈಯಿಂದ ಹೊಡೆಯತ್ತಿರುವಾಗ ಜಿಲಾನಿ ತಮ್ಮನಾದ ದಸ್ತಗಿನು ಜಗಳ ಬಿಡಿಸಲು ಬಂದಾಗ ಆಸೀಪ ಎಂಬುವವನು ದಸ್ತಗೀರನಿಗೆ ಗಟ್ಟಿಯಾಗಿ ಹಿಡಿದು . ಮಕ್ಬೂಲನು  ಇವರನ್ನು ಖತಮ್ ಕರೇಂಗೆ ಎನ್ನುತ್ತಾ ಕೊಲೆ ಮಾಡುವ ಉದ್ದೇಶದಿಂದ  ಎಡ ಹೊಟ್ಟೆಯ ಮೇಲೆ ಮತ್ತು ಎಡ ಹಣೆಯ ಮೇಲೆ ಚಾಕುವಿನಿಂದ ಚುಚ್ಚಿ ಬಾರಿ ರಕ್ತಗಾಯ ಮಾಡಿದ್ದು. ಆಗ ಅಲ್ಲಿಯೇ ಇದ್ದ ಮಲ್ಲು ತಂದೆ ದೇವಿಂದ್ರ , ಶಾಂತಮಲ್ಲಪ್ಪಾ ತಂದೆ ಸಾಬಣ್ಣಾ ಮಾಳಗಿ , ಚಂದ್ರಶೇಖರ ಗೌಡ ನೀಲಗಲ್ಲಾ ರವರು ಬಂದು ಬಿಡಿಸಿದ್ದು. ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ಹೊಡೆ ಗಾಯ ಮಾಡಿದ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸುವಂಥೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ : ದಿನಾಂಕ 17/01/2017 ರಂದು ರಾತ್ರಿ 8 ಗಂಟೆಯ ಸುಮಾರಿಗೆ ಲಾರಿ ನಂ ಕೆಎ-32 ಎ-4123 ನೇದ್ದರ ಲಾರಿ ಚಾಲಕನು ತನ್ನ ಲಾರಿಯನ್ನು ಅತೀ ವೇಗ ಮತ್ತು ಅಜಾಗುರಕತೆಯಿಂದ ಚಲಾಯಿಸಿಕೊಂಡು ಬಂದು ಶಹಬಾದ ರೋಡಿನ ನಡುವಿನಹಳ್ಳಿ ಕ್ರಾಸ್ ಹತ್ತೀರ ಶ್ರೀ ದೇವಪ್ಪಾ ತಂದೆ ಭಿಮರಾಯ ಪೂಜಾರಿ ಸಾ: ಹೊನಗುಂಟಾ ಇವರ ಮೋಟಾರ ಸೈಕಲ್ಗೆ  ಹಿಂದಿನಿಂದ ಅಪಘಾತಪಡಿಸಿದ್ದರಿಂದ ತನಗೆ ಗಾಯಗಳಾಗಿದ್ದು ಇನ್ನೊಬ್ಬ ಮೃತ ಪಟ್ಟಿದ್ದು ಸದರಿ ಲಾರಿ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಹಿಳೆಗೆ ಕಿರುಕುಳ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ: ಶ್ರೀಮತಿ ಲಕ್ಷ್ಮೀ ಗಂಡ ಶರಣಪ್ಪ ಕೋಬಾಳ ಸಾ: ಹೋನ್ನಕಿರಣಗಿ ಇವಳಿಗೆ  ಅವಳ ಗಂಡ ಮತ್ತು ಅತ್ತೆ ಕಿರುಕುಳ ನೀಡಿ ಹೊಡೆ ಬಡೆ ಮಾಡಿದ ಬ್ಗಗೆ ಶೀಲದ ಮೇಲೆ ಸಂಶಯ ಮಾಡುತ್ತಿದ್ದ ಬಗ್ಗೆ ಸಲ್ಲಿಸಿದ ಫೀರ್ಯಾದಿ ಸಾರಾಂಶದ ಮೇಲಿಂಧ ಆ್ರೀಮತಿ ಲಕ್ಷ್ಮಿಯ ಗಂಡ 1) ಶರಣಪ್ಪಾ ತಂದೆ ಧೂಳಪ್ಪಾ ಕೋಬಾಳ ಲಕ್ಷ್ಮಿಯ ಅತ್ತೆ 2) ಮಹಾದೇವಿ  ಗಂಡ ಧೂಳಪ್ಪಾ ಕೋಬಾಳ ಇವರ ವಿರುದ್ದ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.