POLICE BHAVAN KALABURAGI

POLICE BHAVAN KALABURAGI

27 December 2016

Kalaburagi District Reported Crimes

ಅಪಘಾತ ಪ್ರಕರಣ :
ಜೇವರಗಿ ಪೊಲೀಸ್ ಠಾಣೆ.: ದಿನಾಂಕ: 17.09.2016 ರಂದು ಸಾಯಂಕಾಲ 5.00 ಗಂಟೆ ಶ್ರೀ ದೇವಿಂದ್ರಪ್ಪ ತಂದೆ ಮಹಾಂತಪ್ಪ ಮುದ್ದಾ ಸಾ: ಕಡಕೋಳ ಇವರು ದಿನಾಂಕ: 16.09.16 ರಂದು ಸಾಯಂಕಾಲ ತನ್ನ  ತಾಯಿ ಶಂಕರೆಮ್ಮ ಮತ್ತು ನಮ್ಮೂರ ಪಾರ್ವತಿ ಗಂಡ ಹಣಮಂತರಾಯ ದೋರಿ ಇಬ್ಬರು ಕೂಡಿ ಜೇವರಗಿ ಪಟ್ಟಣದ ಅಂಬೇಡ್ಕರ ಸರ್ಕಲ ಹತ್ತಿರ ರೋಡಿನಲ್ಲಿ ಬರುತ್ತಿದ್ದಾಗ ಆ ಸಮಯಕ್ಕೆ ಮಿನಿ ವಿಧಾನ ಸೌದ ರೋಡಿನ ಕಡೆಯಿಂದ ನಂಬರ ಇಲ್ಲದ ಆಟೋ ರೀಕ್ಷಾ ಚಾಲಕ ಸುರೇಶ ತಂದೆ ಸಿದ್ದಪ್ಪ ಹಳ್ಳಿ ಸಾ: ಜೇವರಗಿ ಇತನು ತನ್ನ ಆಟೋ ರೀಕ್ಷಾವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮ ತಾಯಿ ಶಂಕರಮ್ಮ ಮತ್ತು ಪಾರ್ವತಿ ದೋರಿ ಇವರಿಗೆ ಜೋರಾಗಿ ಡಿಕ್ಕಿ  ಪಡಿಸಿ ಬಾರಿ ಗಾಯಗೊಳಿಸಿ ತನ್ನ ಆಟೋ ರೀಕ್ಷಾದೊಂದಿಗೆ ಓಡಿ ಹೋಗಿದ್ದು ಶ್ರೀಮತಿ ಶಂಕರೆಮ್ಮ ಗಂಡ ಮಹಾಂತಪ್ಪ ಮುದ್ದಾ ಸಾ: ಕಡಕೊಳ ತಾ: ಜೇವರಗಿ, ಇವರಿಗೆ ಹಚ್ಚಿನ ಉಪಚಾರ ಕುರಿತು ವಾನಲೆಸ್ ಆಸ್ಪತ್ರೆ ಮಿರಜ್ ದಲ್ಲಿ ಸೇರಿಕೆಯಾಗಿದ್ದು, ಅವಳಿಗೆ ಉಪಚಾರ ಫಲಕಾರಿಯಾಗದೆ ದಿನಾಂಕ: 22.10.16 ರಂದು ಬೆಳಗಿನ ಜಾವ 05.45 ಗಂಟೆಗೆ ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

26 December 2016

Kalaburagi District Reported Crimes

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಗಂಗಾರಾಮ ಮತ್ತು ತಿಮ್ಮಯ್ಯಾ ಇಬ್ಬರು ಕೂಡಿ ಹೊಂಡಾ ಶೈನ್ ಮೋಟಾರ ಸೈಕಲ್ ನಂ ಕೆಎ-01 ಇಎಮ್-0016 ನೇದ್ದರ ಮೇಲೆ ಕುಳಿತುಕೊಂಡು ಮಹಾಗಾಂವದಿಂದ ಕೆಲಸದ ಕುರಿತು ಕಲಬುರಗಿಗೆ ಬಂದು ಕೆಲಸ ಮುಗಿಸಿಕೊಂಡು ಮರಳಿ ಮಹಾಗಾಂವ ಹುಮನಾಬಾದ ರೋಡ ಇರುವ ಸಫಾರಿ ದಾಬಾ ಎದುರಗಡೆ  ಹೊರಟಿದ್ದು ಅದೇ ವೇಳೆಗೆ ಹಿಂದಿನಿಂದ ಅಂದರೇ ಕಲಬುರಗಿ ಕಡೆಯಿಂದ ಒಬ್ಬ ಕ್ರೋಜರ್ ಜೀಪ ನಂ ಕೆಎ-32 ಎಂ-7005 ನೇದ್ದರ ಚಾಲಕನು ತನ್ನ ವಶದಲ್ಲಿದ್ದ ಕ್ರೋಜರನ್ನು ಯಾವುದೇ ಹಾರ್ನ ವಗೈರೇ ಹಾಕದೇ ಅತೀವೇಗ ಮತ್ತು ನಿಸ್ಕಾಜಿತನದಿಂದ ನಡೆಸಿಕೊಂಡು ಬಂದವನೇ ಸದರಿಯವರಿಬ್ಬರು ಕುಳಿತುಕೊಂಡು ಹೋಗುತ್ತಿದ್ದ ಮೋಟಾರ ಸೈಕಲಕ್ಕೆ ಜೋರಾಗಿ ಡಿಕ್ಕಿ ಕೊಟ್ಟು ಅಪಘಾತ ಪಡಿಸಿದ್ದು ಇದರಿಂದ ಫಿರ್ಯಾದಿ ಗಂಗಾರಾಮ ಮತ್ತು ತಿಮ್ಮಯ್ಯಾ ಇಬ್ಬರಿಗೆ ಭಾರಿ ಸ್ವರೂಪದ ಗಂಭೀರ ರಕ್ತಗಾಯ ಮತ್ತು ಗುಪ್ತಗಾಯಳಾಗಿದ್ದು ಅದರ ಉಪಚಾರ ಕುರಿತು ಕಲಬುರಗಿ ನಗರದ ಎ.ಎಸ್.ಎಂ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಸದರ ಪ್ರಕರಣದಲ್ಲಿ ಗಾಯಾಳುದಾರನಾದ ಶ್ರೀ ತಿಮ್ಮಯ್ಯಾ ತಂದೆ ಶರಣಪ್ಪ ಒಡ್ಡರ ಸಾ:ಸೂಗುರ ತಾ:ಚಿತ್ತಾಪುರ ಇತನು  ಗುಣ ಮುಖ ಹೊಂದದೇ ದಿನಾಂಕ 25-12-2016 ರಂದು ಸಾಯಂಕಾಲ ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ ರತ್ನಮ್ಮಾ ಗಂಡ ತಿಪ್ಪಯ್ಯಾ ಒಡ್ಡರ ಸಾ ಸೂಗುರ ತಾ : ಚಿತ್ತಾಪೂರ ರವರು ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಕಳವು ಪ್ರಕರಣ :
ಜೇವರಗಿ ಠಾಣೆ : ಜೇವರಗಿ ಠಾಣೆ : ದಿನಾಂಕ 24/12/16 ರಂದು ಬೆಳಗಿನ ಜಾವ 1-00 ಯಿಂದ 3-00 ಗಂಟೆಯ ಅವಧಿಯ ಮಧ್ಯದಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಕೀಲಿ ಮುರಿದು ಒಳಗೆ ಪ್ರವೇಶ ಮಾಡಿ ಮನೆಯಲ್ಲಿದ್ದ 6 ಚೀಲ ಹತ್ತಿ ಅಂ.ಕಿ. 21,000/- ರೂ ಕಿಮ್ಮತ್ತಿನದ್ದು ಕಳವು ಮಾಡಿಕೊಂಡು ಹೋಗಿರುತ್ತಾರೆ  ಅಂತಾ ಶ್ರೀ ರುದ್ರಮುನಿ ತಂದೆ ಅಮರಯ್ಯ ಹಿರೆಮಠ ಸಾ: ಆಂದೋಲಾ ಇವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

25 December 2016

Kalaburagi District Reported Crimes

ಅಪಘಾತ ಪ್ರಕರಣ :
ಆಳಂದ ಠಾಣೆ : ಶ್ರೀ ಅಣ್ಣರಾವ ತಂದೆ ಭೀಮಶ್ಯಾ ಪೊಲೀಸ್ ಪಾಟಿಲ್‌ ಸಾ: ಬಂಗರಗಾ ತಾ: ಆಳಂದ ಜಿ: ಕಲಬುರಗಿರವರ ಮಗ  ಭೀಮಾ @ ಭೀಮಶ್ಯಾ ತಂದೆ ಅಣ್ಣರಾವ 5 ದಿವಸ ಶಾಲೆಗಳು ರಜೆ ಇರುವದರಿಂದ ಮದ್ಯಾಹ್ನ ನನ್ನೊಂದಿಗೆ ಪೋನಿನಲ್ಲಿ ಮಾತಾಡಿ ಊರಿಗೆ ಬರುತ್ತೇನೆ ಎಂದು ಹೇಳಿ ಊರಿಗೆ ಹೊರಟಿದ್ದು ದಿನಾಂಕ: 24/12/2016 ರಂದು ಸಾಯಂಕಾಲ 06-30 ಗಂಟೆಗೆ ನಮ್ಮ ಸಂಬಂದಿಯಾದ ಬಸವರಾಜ ತಂದೆ ಗುಂಡಪ್ಪ ನಗದೆ ಸಾ: ಕೊಡಲ ಹಂಗರಗಾ ಇವರು ಪೋನ್‌ ಮಾಡಿ ವಿಷಯ ತಿಳಿಸಿದೆನೆಂದರೆ ಸಾಯಂಕಾಲ 05-45 ಗಂಟೆಯ ಸುಮಾರಿಗೆ ನಿಮ್ಮ ಮಗ ಭೀಮಾ @ ಭೀಮಶ್ಯಾ ಈತನು ಆಳಂದ ಪಟ್ಟಣದಲ್ಲಿ ರೇವಣಸಿದ್ದೇಶ್ವರ ಕ್ರಾಸ್‌ ಹತ್ತಿರ ರಜವಿ ರೋಡಿನ ಮೇಲೆ ಬಸ್‌ ನಿಲ್ದಾಣದ ಕಡೆಗೆ ಬರಲು ರೋಹನ್‌ ಮೆಡಿಕಲ್‌ ಎದುರಿಗೆ ನಡೆದುಕೊಂಡು ಬರುವಾಗ ಅವನ ಹಿಂದಿನಿಂದ ಅಂದರೆ ಉಮರ್ಗಾ ಕಡೆಯಿಂದ ಒಬ್ಬ ಲಾರಿ ನಂ: MH-16 AY-3639 ನೇದ್ದರ ಚಾಲಕನು ತನ್ನ ವಶದಲ್ಲಿದ್ದ ಲಾರಿಯನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಓಡಿಸುತ್ತಾ ಬಂದು ಡಿಕ್ಕಿ ಪಡಿಸಿದ್ದರಿಂದ ಅವನು ಕೆಳಗಡೆ ಬಿದ್ದಾಗ ಅವನ ತಲೆ ಮೇಲೆ ಲಾರಿ ಹಾದು ಭಾರಿ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಮುಖ ಎಲ್ಲಾ ಜೆಜ್ಜಿದಂತೆ ಆಗಿರುತ್ತದೆ. ಸದ್ಯ ಶವ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುತ್ತಾರೆ. ನಿಮ್ಮ ಮಗನಿಗೆ ಡಿಕ್ಕಿ ಪಡಿಸಿದ ಚಾಲಕನ ಹೆಸರು ವಿಚಾರಿಸಲು ತನ್ನ ಹೆಸರು ಬಾಳಾಸಾಬ ತಂದೆ ಕುಂಡಲಿಕ್ ವೀರ  ಸಾ: ಆನಪಟವಾಡಿ ತಾ: ಪಾಟೋದಾ ಜಿ: ಬೀಡ ಎಂದು ಗೊತ್ತಾಗಿರುತ್ತದೆ. ಸದರ ಘಟನೆಯನ್ನು ರೋಡಿನ ಮೇಲೆ ಹೋಗುವ ಜನರು ಮತ್ತು ಅಕ್ಕ ಪಕ್ಕದವರು ನೋಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶೆಡ್ಡಿಗೆ ಬೆಂಕಿ ಹಚ್ಚಿದ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 23/12/16 ರಂದು ಮದ್ಯಾಹ್ನ 2:30 ಗಂಟೆಯ ಸುಮಾರಿಗೆ ಶ್ರೀ ಶಿವರಾಯ  ತಂದೆ ಹಣಮಂತ ರಾಯ ಮಾಲಿ ಪಾಟೀಲ ಸಾ: ಸೀತನೂರ  ತಾ: ಕಲಬುರಗಿ ರವರಿಗೆ ಸಂಬಂದ ಪಟ್ಟ ಗ್ರಾಮದ ಮುಂದೆ ಇರುವ ಹೊಲದಲ್ಲಿರುವ ಪತ್ರಾಸ ಶೆಡ್ಡಿಗೆ ಶರಣಪ್ಪ ತಂದೆ ಬಸಣ್ಣ ಇನ್ನೂ 7 ಜನರು ಸಾ: ಎಲ್ಲರೂ ಸೀತನೂರ ಗ್ರಾನ ರವರು ಬೆಂಕಿ ಹಚ್ಚಿ ಅದರಲ್ಲಿದ್ದ ಒಕ್ಕಲುತನಕ್ಕೆ ಸಂಬಂದಿಸಿದ್ದ ವಸ್ತುಗಳು ಹಾಗೂ ಫರಸಿ, ಫತ್ರಾಸ ಇತರೆ ಸಾಮಾನುಗಳು ಹೀಗೆ ಒಟ್ಟು 70,000/- ರೂಪಾಯಿಗಳು ಕಿಮ್ಮತ್ತಿನ ವುಗಳನ್ನು ಸುಟ್ಟಿರುತ್ತಾರೆ ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.