POLICE BHAVAN KALABURAGI

POLICE BHAVAN KALABURAGI

16 November 2016

KALABURAGI DISTRICT REPORTED CRIMES

ಕೊಲೆ ಪ್ರಕರಣ:
ಯಡ್ರಾಮಿ ಪೊಲೀಸ್ ಠಾಣೆ:ದಿನಾಂಕ: 15-11-2016 ರಂದು ಶ್ರೀ ಪರಮಾನಂದ ತಂದೆ ಆನಂದಪ್ಪ ಚಾಂದ ಕವಟೆ ಸಾ:ಕೊಣಶಿರಸಗಿ ಇವರು ಠಾಣೆಗೆ ಹಾಜರಾಗಿ ಗ 4-5 ವರ್ಷದ ಹಿಂದೆ ನಾವು ಅಣ್ಣ ತಮ್ಮಂದಿರರು ಬೇರೆಯಾಗಿದ್ದರಿಂದ ನಮ್ಮ ತಂದೆಗೆ ನಮ್ಮ ಮೇಲೆ ಸಿಟ್ಟು ಮಾಡಿಕೊಂಡು  ನಮ್ಮ ಮನೆಗೆ ಊಟ ಮಾಡಲು ಬರುತ್ತಿರಲಿಲ್ಲ. ಅವರು ಗ್ರಾಮದ  ಸಿದ್ರಾಮಪ್ಪಗೌಡ ಇವರ ಮನೆಯಲ್ಲಿ ಊಟ ಮಾಡುತ್ತಾ. ಗೊಲ್ಲಾಳಪ್ಪಗೌಡ ಇವರ ಹೊಲದಲ್ಲಿ ಕಡಕೋಳ ಮಡಿವಾಳೇಶ್ವರ ತಾತನವರು ಕುಳಿತು ಹೋಗಿದ್ದ ಜಾಗದಲ್ಲಿ ನಮ್ಮ ತಂದೆ ಆನಂದಪ್ಪನವರು  ಗದ್ದುಗೆ ಮಾಡಿಕೊಂಡು ಪೂಜೆ ಪುನಸ್ಕಾರ ಮಾಡುತ್ತಾ ಅಲ್ಲಿಯೇ ವಾಸವಾಗಿದ್ದು.  ಹೀಗಿದ್ದು, ದಿ: 14-11-16 ರಂದು ಬೆಳಿಗ್ಗೆ ಎಂದಿನಂತೆ ನನ್ನ ತಂದೆ ಸಿದ್ರಾಮಪ್ಪಗೌಡನ ಮನೆಯಲ್ಲಿ ಊಟ ಮಾಡಿ ಬುತ್ತಿ ಕಟ್ಟಿಕೊಂಡು ತಾನು ಇರುವ ಗದ್ದುಗೆ ಸ್ಥಳಕ್ಕೆ ಹೋಗಿದ್ದು. ಇಂದು ದಿನಾಂಕ: 15-11-2016 ರಂದು ನನಗೆ ಶಾಂತಪ್ಪ ಇತನು ಪೋನ್ ಮಾಡಿ ನಿನ್ನ ತಂದೆಗೆ ಗವಿಯಲ್ಲಿ ಯಾರೋ ಹೊಡೆದು ಕೊಲೆ ಮಾಡಿರುತ್ತಾರೆ ಅಂತಾ ಹೇಳಿದ ಕೂಡಲೆ ನಾನು ಮತ್ತು ಬನ್ನೆಪ್ಪ ತಂದೆ ಮಲ್ಲೇಶಪ್ಪ ಕೂಡಲಗಿ, ಬಸವರಾಜ ತಂದೆ ಮಡಿವಾಳಪ್ಪ ಬಿರಾದಾರ ಹೀಗೆಲ್ಲರೂ ಕೂಡಿಕೊಂಡು ನನ್ನ ತಂದೆ ಇರುವ ಗವಿಯಲ್ಲಿ ಹೋಗಿ ನೋಡಲಾಗಿ ನನ್ನ ತಂದೆ ಗವಿಯಲ್ಲಿದ್ದ ಪಲಂಗಿನ ಮೇಲೆ ಬೋರಲಾಗಿ ಬಿದ್ದಿದ್ದು, ಹೊರಳಿಸಿ ನೋಡಲಾಗಿ ಹಣೆಯ ಮೇಲೆ ಗಾಯವಾಗಿ ಮುಖ ಉಬ್ಬಿದಂತಾಗಿ ರಕ್ತ ಬಂದಿತ್ತು. ಅಲ್ಲದೆ ಗುಪ್ತಾಂಗದ  ಹತ್ತಿರ ರಕ್ತಗಾಯವಾಗಿದ್ದು. ಗವಿಯಲ್ಲಿ ನೋಡಲಾಗಿ ಗವಿಯಲ್ಲಿದ್ದ  ಪೆಟ್ಟಿಗೆ ಹೊರಗೆ ತಂದು ಅದರಲ್ಲಿನ ಕಾಗದ ಪತ್ರಗಳು ಸುಟ್ಟು ಹಾಕಿದ್ದು. ಈ ಕೊಲೆ ದಿ: 14-11-16 ರಂದು ಬೆಳಿಗ್ಗೆ 11 ಗಂಟೆಯಿಂದ ಸಾಯಂಕಾಲ 6 ಗಂಟೆಯ ಅವಧಿಯಲ್ಲಿ ಆಗಿರಬಹುದು       ನಮ್ಮ ತಂಧೆ ವಾಸವಾಗಿದ್ದ ಸ್ಳಳದಲ್ಲಿ ಕಡಕೋಳ ಮಡಿವಾಳೇಶ್ವರ ಮೂರ್ತಿ ಪ್ರತಿಷ್ಟಾಪನೆ ಮಾಡುವ ಸಲುವಾಗಿ ಹೊಲ ಕೊಡಬಾರದೆಂಬ ಉದ್ದೇಶದಿಂದ ನನ್ನ ತಂದೆಗೆ ಮಡಿವಾಳಪ್ಪಗೌಡ ತಂದೆ ಮುತ್ತಣ್ಣಗೌಡ ಮಾಲಿಪಾಟೀಲನು. ಗವಿಯಲ್ಲಿದ್ದ ನನ್ನ ತಂದೆಗೆ ಕೊಲೆ ಮಾಡಿ ಕಾಗದ ಪತ್ರಗಳನ್ನು ಸುಟ್ಟು ಹಾಕಿರುತ್ತಾರೆ ಕಾರಣ ಮೇಲ್ಕಂಡ ಮಡಿವಾಳಪ್ಪಗೌಡನ ವಿರುದ್ದ ಕಾನೂನು ರೀತಿ ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ,
ಮಟಕಾ ಜೂಜು ಕೋರನ ಬಂಧನ:
ಜೇವರ್ಗಿ ಪೊಲೀಸ್ ಠಾಣೆ: ದಿ 14.11.2016 ರಂದು ಶ್ರೀ ನಾಗಭೂಷಣ ಎ.ಎಸ್.ಐ ಜೇವರಗಿ ಪೊಲೀಸ್ ಠಾಣೆ ರವರು ಜೇವರಗಿ ಪಟ್ಟಣದ ಸರಕಾರಿ ಆಸ್ಪತ್ರೆ ಪಕ್ಕದ ಮುಖ್ಯ ರಸ್ತೆಯಲ್ಲಿ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ರಾಮಣ್ಣ ತಂದೆ ಕರಣಪ್ಪ ಅವಂಟಿ ಸಾ: ಗುಡೂರ ಎಸ್.ಎ  ತಾ: ಜೇವರಗಿ ರವರ ಮೇಲೆ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆತನಿಂದ ನಗದು ಹಣ ರೂ 4,375/-  ಮತ್ತು  ಒಂದು ಮಟಕಾ ಚೀಟಿ ಹಾಗೂ ಒಂದು ಬಾಲ ಪೆನ್ನು ಜಪ್ತಿ ಮಾಡಿ ಸದರಿಯವನ ವಿರುದ್ದ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಕ್ರಮ ಮರಳು ಸಾರಾಟ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ: ದಿನಾಂಕ 14-11-2016 ರಂದು ಫರಹತಾಬಾದ ಪೊಲೀಸ್ ಠಾಣೆ ವ್ಯಾಪ್ತಿಯ ನದಿಸಿನ್ನೂರ ಗ್ರಾಮದ ಸೀಮಾಂತರ ಭೀಮಾನದಿಯಲ್ಲಿ ಟೆಂಡರುದಾರನಾದ ವಿಜಯಕುಮಾರ ಚವ್ಹಾಣ ಈತನು ನಿಯಮ ಬಾಹೀರವಾಗಿ  ಮರಳನ್ನು ಟಿಪ್ಪರಗಳಲ್ಲಿ ತುಂಬುತ್ತಿರುವಾಗ ದಾಳಿ ಮಾಡಿ ಅಕರಮ ಮರಳು ತುಂಬುತ್ತಿರುವ ಬಗ್ಗೆ ಶ್ರೀ ಕಿರಣಕುಮಾರ ಗ್ರಾಮ ಲೆಕ್ಕಿಗ ನದಿಸಿನ್ನೂರ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಜಯಕುಮಾಋ ಚವ್ಹಾಣ ಮತ್ತು ಟಿಪ್ಪರ ಚಾಲಕರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

14 November 2016

Kalaburagi District Reported Crimes

ಅಪಘಾತ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಸಚೀನ್ ತಂದೆ ಶ್ರೀಕಾಂತ ಎಂದೆ ಸಾ : ವಿ.ಪಿ ಚೌಕ ಶಹಾಬಾದ ಇವರು ದಿನಾಂಕ  12-11-2016 ರಂದು ಹುಣಸಗಿ ಗ್ರಾಮದಲ್ಲಿ ತನ್ನ ಮಾವ ಮರಣ ಹೊಂದಿದ ಪ್ರಯುಕ್ತ ಅಂತ್ಯಕ್ರಿಯೇಯಲ್ಲಿ ಬಾಗವಹಿಸಲು ತಾನು, ತನ್ನ ತಾಯಿ ಸರೋಜಾ, ತಮ್ಮ ನಿತೀನ್ ಹಾಗು ತಮ್ಮ ಅಂಗಡಿಯಲ್ಲಿ ಕೆಲಸ ಮಾಡುವ ಸುನೀಲ್ ದಂಡಗುಂಡಕರ ಎಲ್ಲರೂ ಕೂಡಿ ತಮ್ಮ ಕಾರ ನಂ ಎಂ.ಹಚ್ 14 ಬಿ.ಕೆ 5540 ನೇದ್ದರಲ್ಲಿ ಕುಳಿತು ಹೋಗಿದ್ದು ಅಂತ್ಯ ಸಂಸ್ಕಾರ ಮುಗಿಸಿಕೊಂಡು ಮರಳಿ ನಾವೇಲ್ಲರೂ ಶಹಾಬಾದಕ್ಕೆ ಬರುವ ಕುರಿತು ಸದರಿ ನಮ್ಮ ಕಾರನಲ್ಲಿ ಕುಳಿತುಕೊಂಡು ಹೋರಟಿದ್ದು ಈ ಕಾರನ್ನು ನನ್ನ ತಮ್ಮ ನಿತೀನ್ ಇತನು ಚಲಾಯಿಸುತ್ತಿದ್ದನು. ಸಾಯಂಕಾಲ 5-30 ಗಂಟೆಯ ಸುಮಾರಿಗೆ ಶಹಾಬಾದ ಇನ್ನೂ 10 ಕಿ.ಮಿ ದೂರ ಇರುವಾಗ ನಡುವಿನ ಹಳ್ಳಿ ಕ್ರಾಸ ಹತ್ತಿರ ರೋಡಿನ ಮೇಲೆ ನನ್ನ ತಮ್ಮ ನಿತಿನನು ಸದರಿ ಕಾರನ್ನು ಅತೀ ವೇಗ ಮತ್ತು ಮತ್ತು ಅಜಾಗೃತೆಯಿಂದ ಚಲಾಯಿಸಿ ಪಲ್ಟಿ ಮಾಡಿದ್ದರಿಂದ ನನ್ನ ತಾಯಿ ಸರೋಜಾ ಇವಳಿಗೆ ಮೂಗಿನಿಂದ ಮತ್ತು ಬಾಯಿಯಿಂದ ರಕ್ತ ಬಂದು ದೇಹದ ಇತರೆ ಭಾಗಕ್ಕೆ ಚಿಕ್ಕ ಪುಟ್ಟ ಮತ್ತು ಭಾರಿ ರಕ್ತಗಾಯಗಳು ಆಗಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮದ್ಯದಲ್ಲಿ ಮೃತ ಪಟ್ಟಿರುತ್ತಾಳೆ. ಇನ್ನೂಳಿದ ನಮಗೂ ಕೂಡಾ ಚಿಕ್ಕ ಪುಟ್ಟ ಮತ್ತು ಭಾರಿ ರಕ್ತಗಾಯಗಳು ಆಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಶಾಂತಪ್ಪ ತಂದೆ ರಾಮಚಂದ್ರ ರೂಪನೂರ ಸಾ|| ದುತ್ತರಗಾಂವ ತಾ||ಆಳಂದ ಹಾ|||| ಬಾಲಗಂಧರ್ವ ಪೆಜಾಹಾರ್ಟ ಅವಿತಾ ಬ್ಯಾಂಕ್  ರಮಾರತ್ನ ಬಿಲ್ಡಿಂಗ್ ಪುಣೆ ಇವರು ಈಗ 20 ವರ್ಷಗಳಿಂದ ನಾನು ಪುಣೆಯಲ್ಲಿ ವಾಸವಾಗಿದ್ದು ಆಗಾಗ ನಮ್ಮ ಸ್ವಂತ ಗ್ರಾಮವಾದ ದುತ್ತರಗಾಂವಕ್ಕೆ ಬಂದು ಹೋಗುವದು ಮಾಡುತ್ತೇನೆ. ನಾನು ಈಗ ಸುಮಾರು 15 ದಿವಸಗಳ ಹಿಂದೆ  ದುತ್ತರಗಾಂವ ಗ್ರಾಮಕ್ಕೆ ಬಂದಿರುತ್ತೇನೆ. ದಿನಾಂಕ 06/11/2016 ರಂದು ಅಮಾವಾಸೆ ಇದ್ದ ಪ್ರಯುಕ್ತ ನಾನು ಘತ್ತರಗಾ ಗ್ರಾಮದಲ್ಲಿರುವ ಶ್ರೀ ಭಾಗ್ಯವಂತಿ ದೇವಿ ದರ್ಶನಕ್ಕಾಗಿ ನಮ್ಮ ಗ್ರಾಮದ ಕುಮಾರ ತಂದೆ ಪೀರಪ್ಪ ಭಜಂತ್ರಿ ಈತನ ಮೋಟಾರ ಸೈಕಲ ನಂ ಕೆಎ-01 ಇಎಲ್ -7683 ನೇದ್ದನ್ನು ತಗೆದುಕೊಂಡು ನಾನು ಹಾಗು ಕುಮಾರ ಇಬ್ಬರು ಸದರಿ ಮೋಟಾರ ಸೈಕಲ್ ಮೇಲೆ ಘತ್ತರಗಾ ಗ್ರಾಮಕ್ಕೆ ಬಂದಿರುತ್ತೇವೆ. ದೇವರ ದರ್ಶನ ಮಾಡಿಕೊಂಡು ಮರಳಿ ನಮ್ಮ ಊರಿಗೆ ಹೋಗಲು ಸಾಯಂಕಾಲ ಘತ್ತರಗಾದಿಂದ ಹೊರಟಿರುತ್ತೇವೆ ಆಗ ಕುಮಾರ ಮೋಟಾರ ಸೈಕಲ್ ನಡೆಸುತಿದ್ದು ನಾನು ಆತನ ಹಿಂದೆ ಕುಳಿತಿದ್ದೇನು. ನಾನು ಕುಮಾರನಿಗೆ ತುಂಬಾ ಆಯಾಸವಾಗಿದೆ ಅಫಜಲಪೂರದಲ್ಲಿ ವಸತಿ ಮಾಡೋಣ ಅಂತ ಅಂದಾಗ ಕುಮಾರ ಇತನು ಮುಂದೆ ಜಾಗ ಸಿಕ್ಕರೆ ವಸತಿ ಮಾಡಿ ಬೆಳಿಗ್ಗೆ ಹೋಗೊಣ ಅಂತ ಅಂದಾಗ  ಸಾಯಂಕಾಲ 7.30 ಗಂಟೆಯ ಸುಮಾರಿಗೆ ಅಫಜಲಪುರ ದಾಟಿ ಕಲಬುರಗಿ ರೋಡಿಗೆ ಇರುವ ಕಾರ್ಯದ ಲಕ್ಷ್ಮಿ ಗುಡಿ ಹತ್ತಿರ ಇಬ್ಬರು ವ್ಯಕ್ತಿಗಳು ಕುಳಿತಿದ್ದರು ನಾನು ಕುಮಾರನಿಗೆ ಇಲ್ಲೆ ನಿಲ್ಲಿಸು ಅಂತ ಅಂದಾಗ ಕುಮಾರ ಇತನು ಸದರಿ ವ್ಯಕ್ತಿಗಳಿಗೆ ನೋಡಿ ಇವರು ನನ್ನಗೆ ಪರಿಚಯದವರು ಇರುತ್ತಾರೆ ಅಂತ ಹೇಳಿ ಮೋಟಾರ ಸೈಕಲ್ ಇಲ್ಲಿಸಿದನು ನಂತರ ನಾವು ಅವರೊಂದಿಗೆ ಮಾತನಾಡುತ್ತಾ ಅವರಿಗೆ ಕುಮಾರನು ನನ್ನ ಪರಿಚಯ ಮಾಡಿಸಿದನು ಆಗ ನಾನು  ಅವರ ಹೆಸರು ವಿಚಾರಿಸಿದಾಗ 1) ಗಂಗಾಧರ ತಂದೆ ಭಿಮಶ್ಯಾ ಭಜಂತ್ರಿ ಸಾ||ಧುದನಿ ಹಾ|||| ತಾವರಗೇರಾ ತಾ||ಜಿ|| ಕಲಬುರಗಿ 2) ಸುರೇಶ ಪೂಜಾರಿ ಸಾ||ನಾಗೂರ ಹಾ||||ತಾವರಗೇರಾ ತಾ||ಜಿ|| ಕಲಬುರಗಿ ಅಂತ ಹೇಳಿ ಅಮವಾಸೆ ಪ್ರಯುಕ್ತ ಘತ್ತರಗಾ ಗ್ರಾಮ ದೇವರ ದರ್ಶನಕ್ಕೆ ಹೋಗಿದ ಬಗ್ಗೆ ಹೆಳಿದರು ಎಲ್ಲರು ಅಲ್ಲೆ ಮಾತನಾಡುತ್ತಾ ಗುಡಿಯ ಕಟ್ಟೆಯ ಮೇಲೆ ಮಲಗಿಕೊಂಡಿರುತ್ತೇವೆ ನಂತರ ನಾನು ಬೆಳಿಗ್ಗೆ 6.00 ಗಂಟೆ ಸುಮಾರಿಗೆ ಎದ್ದು ನೋಡಿದಾಗ ನನ್ನ ಬಲಕೈ ಬೆರಳುಗಳಲ್ಲಿ ಇದ್ದ ಒಂದು ತೊಲೆಯ(10 ಗ್ರಾಂ) ಒಂದು ಬಂಗಾರದ ಉಂಗುರ ಅ.ಕಿ 30,000/-ಇರಲಿಲ್ಲ ಗಾಬರಿಯಿಂದ  ನೋಡಲಾಗಿ ನಾನು ಕುಮಾರ ಇಬ್ಬರೆ ಇದ್ದು ಗಂಗಾಧರ ಹಾಗೂ ಸುರೇಶ ಇರಲಿಲ್ಲ. ನಮಗೆ  ಏನು ದಿಕ್ಕು ತೊಚದಂತಾಗಿ ನಮ್ಮ ಗ್ರಾಮಕ್ಕೆ ಹೋಗಿ ನಂತರ ತಡವಾಗಿ ಠಾಣೆಗೆ ಬಂದಿರುತ್ತೇನೆ . ದಿನಾಂಕ 06/11/2016 ರಂದು 9.30 ಪಿಎಮ್ ದಿಂದ ದಿನಾಂಕ 07/11/2016 ರಂದು 06.00 ಎಎಮ್ ಮದ್ಯದ ಅವದಿಯಲ್ಲಿ ನನ್ನ ಬಲಗೈ ಬೆರಳುಗಳಲಿದ್ದ ಒಂದು ತೊಲೆಯ(10 ಗ್ರಾಂ) ಬಂಗಾರದ ಒಂದು ಉಂಗುರ (ಅ.ಕಿ 30,000/-ರೂ) ಗಂಗಾಧರ ತಂದೆ ಭಿಮಶ್ಯಾ ಭಜಂತ್ರಿ ಹಾಗೂ ಸುರೇಶ ಪೂಜಾರಿ ಇವರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

09 November 2016

KALABURAGI DISTRICT REPORTED CRIMES

ಕೊಲೆ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ: ದಿನಾಂಕ:07.11.2016 ರಂದು ಶ್ರೀಮತಿ ಮಹಾದೇವಿ ಗಂಡ ಶಿವರುದ್ರಪ್ಪ ಕಲಕುಟಗಿ ಸಾ: ಜೀವಣಗಿ ತಾ:ಜಿ: ಕಲಬುರಗಿ ಇವರು ಠಾಣೆಗೆ ಹಾಜರಾಗಿ ತಾನು ತನ್ನ ಗಂಡ ಸುಮಾರು 30 ವರ್ಷಗಳಿಂದ ಜೀವಣಗಿ ಗ್ರಾಮದಲ್ಲಿ ಮನೆ ಮಾಡಿ ಕಿರಾಣ ಅಂಗಡಿ ಮತ್ತು ಹಿಟ್ಟಿನ ಗಿರಿಣಿ ಹಾಕಿಕೊಂಡು ವ್ಯಾಪಾರ ಮಾಡಿಕೊಂಡು ಬಂದಿದ್ದು ಇರುತ್ತದೆ. ಎಂದಿನಂತೆ ದಿನಾಂಕ 07-11-2016 ರಂದು ನನ್ನ ಗಂಡ ಎದ್ದು ಬೆಳ್ಳಿಗ್ಗೆ 5:00 ಗಂಟೆಯ ಸುಮಾರಿಗೆ ಮಲ ವಿಸರ್ಜನೆಗೆ ಹೋಗಿ ಬರುತ್ತೆನೆ ಅಂತ ಹೇಳಿ ನಮ್ಮ ಗ್ರಾಮದಿಂದ ಬ್ಯೂಯಾರ ಕಡೆಗೆ ಹೊಗುವ ರಸ್ತೆಯ ಕಡೆಗೆ ಮಲ ವಿಸರ್ಜನೆಗೆ ಹೋಗಿದ್ದು ನಾನು ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದು. ಬೆಳ್ಳಿಗ್ಗೆ 6:00 ಗಂಟೆಯ ಸುಮಾರಿಗೆ ನಮ್ಮ ಗ್ರಾಮದ ಮಲ್ಲಪ್ಪ ತಂದೆ ಈರಣ್ಣ ಒಳದೊಡ್ಡಿ ಇವರು ನಮ್ಮ ಮನೆಗೆ ಬಂದು ಬೆಳ್ಳಿಗ್ಗೆ 5:30 ಗಂಟೆಯ ಸುಮಾರಿಗೆ ನಾನು ಹೊಲದಲ್ಲಿ ಇದ್ದಾಗ ಗುತ್ತಪ್ಪ ಸಾಲಹಳ್ಳಿ ಇವರ ಹೊಲದ ಹತ್ತಿರ ಯಾರೊ ಚಿರಾಡುವ ಸಪ್ಪಳ ಕೇಳಿ ನಾನು ಹೋಗಿ ನೋಡಲು ಯಾರೊ ಒಬ್ಬ ವ್ಯಕ್ತಿ ಶಿವರುದ್ರಪ್ಪನ ಸಂಗಡ ಜಗಳ ಮಾಡುತ್ತಿದ್ದು ಜಗಳದ ಸಪ್ಪಳ ಕೇಳಿ ಹೊಲದಲ್ಲಿದ್ದ ಗುತ್ತಪ ಸಹ ಅಲ್ಲಿಗೆ ಬಂದಿದ್ದು ಆಗ ನಾನು ಮತ್ತು ಗುತ್ತಪ್ಪ ಇಬ್ಬರು ಶಿವರುದ್ರಪ್ಪನ ಹತ್ತಿರ ಹೊಗಿ ಶಿವರುದ್ರಪ್ಪನಿಗೆ ಬಿಡಿಸಿಕೊಳ್ಳಬೇಕು ಎನ್ನುವಷ್ಠರಲ್ಲಿ ಶಿವರುದ್ರಪ್ಪನ ಸಂಗಡ ಜಗಳ ಮಾಡುತ್ತಿದ್ದ ವ್ಯಕ್ತಿ ತನ್ನ ಹತ್ತಿರ ಇದ್ದ ಚಾಕು ತೆಗೆದು ಶಿವರುದ್ರಪ್ಪನಿಗೆ ಚಾಕುದಿಂದ ಎಡಭಾಗದ ಎದೆಯ ಮೇಲೆ ಜೋರಾಗಿ ಚುಚ್ಚಿ ಭಾರಿ ರಕ್ತಗಾಯ ಪಡಿಸಿ ಬಿಡಿಸಲು ಹೋದ ನನಗೆ ಮತ್ತು ಗುತ್ತಪ್ಪನಿಗೆ ಆ ವ್ಯಕ್ತಿ ಚಾಕು ದಿಂದ ನನಗೆ ಹೊಡೆಯಲು ಬಂದಿದ್ದು ಆಗ ನನಗೆ ಸಹ ಚಾಕು ನನ್ನ ಹಣೆಯ ಹತ್ತಿರ ಹತ್ತಿ ಸಣ್ಣ ರಕ್ತಗಾಯವಾಗಿದ್ದು ಇರುತ್ತದೆ . ನಂತೆ ಆ ವ್ಯಕ್ತಿಗೆ ಹಿಡಿಯಬೇಕು ಎನ್ನುವಷ್ಠರಲ್ಲಿ ಅವನು ಅಲ್ಲಿಂದ ಓಡಿ ಹೋಗಿದ್ದು. ಶಿವರುದ್ರಪ್ಪನು ಅಲ್ಲೆ ರಸ್ತೆಯ ಮೇಲೆ ಬಿದ್ದಿರುತ್ತಾನೆ ಅಂತ ತಿಳಿಸಿದ್ದು ಗಾಬರಿಗೊಂಡ ನಾನು, ನನ್ನ ಮಕ್ಕಳು ಪಕ್ಕದ ಮನೆಯವರು ಹೋಗಿ ನೋಡಲು ನನ್ನ ಗಂಡ ನರಳಾಡುತ್ತಾ ರಸ್ತೆಯ ಮೇಲೆ ಬಿದ್ದಿದ್ದು ನನ್ನ ಗಂಡನ ಎಡಭಾಗದ ಎದೆಯ ಮೇಲೆ ಭಾರಿ ರಕ್ತಗಾಯವಾಗಿದ್ದು, ಮತ್ತು ಎಡಗೈ ಮುಂಗೈ ಹತ್ತಿರ ರಕ್ತಗಾಯವಾಗಿದ್ದು ನನ್ನ ಗಂಡನ ಉಟ್ಟಿಕೊಂಡು ಬಟ್ಟೆಗಳ ಮೇಲೆ ರಕ್ತ ಕಲೆಗಳಾಗಿದ್ದು ಇರುತ್ತದೆ. ಉಪಚಾರ ಕುರಿತು ಜೀಪಿನಲ್ಲಿ ನನ್ನ ಗಂಡನಿಗೆ ಕಮಲಾಪೂರ ಸರಕಾರಿ ಆಸ್ಪತ್ರೇಗೆ ತರುವಾಗ ಮಾರ್ಗ ಮಧ್ಯದಲ್ಲಿ ಮೃತ ಪಟ್ಟಿದ್ದು.  ನನ್ನ ಗಂಡನಿಗೆ ಚಾಕುದಿಂದ ಎದೆಗೆ ಚೂಚ್ಚಿ ಭಾರಿ ರಕ್ತಗಾಯ ಪಡಿಸಿ ಕೊಲೆ ಮಾಡಿದ ಅಪರಿಚಿತ ವ್ಯಕ್ತಿಯ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಜೂಜುಕೋರರ ಬಂಧನ:
ಮಹಾಗಾಂವ ಪೊಲೀಸ್ ಠಾಣೆ : ದಿನಾಂಕ- 07-11-2016  ರಂದು ಶ್ರೀ ಮಂಜುನಾಥ ಜಿ. ಹೂಗಾರ ಪಿಎಸ್ಐ ಮಹಾಗಾಂವ ಪೊಲೀಸ ಠಾಣೆ ರವರು ಠಾಣೆಯಲ್ಲಿರುವಾಗ  ಠಾಣೆಯ ವ್ಯಾಪ್ತಿಯ ನಾಗೂರ ತಾಂಡಾದ ಸರ್ಕಾರಿ ಹಳೆಯ ಶಾಲೆ ಎದುರುಗಡೆ ಸಾರ್ವಜನಿಕ ರಸ್ತೆಯಲ್ಲಿ ಕೆಲವು ಜನರೂ ಗುಂಪಾಗಿ ಕುಳಿತುಕೊಂಡು ಇಸ್ಪಿಟ ಎಲೆಗಳ ಸಹಾಯದಿಂದ ಜೂಜಾಟ ಆಡುತ್ತಿರುವ ಬಾತ್ಮಿ ಬಂದ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರಾದ 1)ಅಶೋಕ ಪಿಸಿ. 2) ಲಕ್ಷ್ಮೀಕಾಂತ ಪಿಸಿ. 3) ರೇವಣಸಿದ್ದಪ್ಪಾ ಪಿಸಿ. 4) ಭೀಮಾಶಂಕರ ಪಿಸಿ, ವರರೊಂದಿಗೆ, ನಾಗೂರ ತಾಂಡಾದ ಸರ್ಕಾರಿ ಶಾಲೆ ಎದುರುಗಡೆ ಸಾರ್ವಜನಿಕ ರಸ್ತೆಯಲ್ಲಿ ಕೆಲವು ಜನರೂ ಗುಂಪಾಗಿ ಕುಳಿತುಕೊಂಡು ಇಸ್ಪಿಟ ಎಲೆಗಳ ಸಹಾಯದಿಂದ ಜೂಜಾಟ ಆಡುತ್ತಿದ್ದದ್ದನ್ನು ನೋಡಿ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಜೂಜಾಟ ಆಡುತ್ತಿದ್ದ 1) ಬಸವರಾಜ ತಂದೆ ಮಲ್ಲಿನಾಥ ಸಾಲಿ, 2) ಸುರೇಶ ತಂದೆ ರೇಖು ರಾಠೋಡ, 3) ಮೋಹನ ತಂದೆ ದಶರಥ ಪವಾರ, 4) ರಾಜು ತಂದೆ ಗೋವಿಂದ ಚವ್ಹಾಣ, 5) ಜೈರಾಮ ತಂದೆ ಕಿಶನ ಚವ್ಹಾಣ, 6) ವೆಂಕಟ ತಂದೆ ರೇಖು ಚವ್ಹಾಣ, 7) ಮನೋಹರ ತಂದೆ ಗುರಣ್ಣಾ ರಾಠೋಡ, 8) ಸುರೇಶ ತಂದೆ ಶ್ರೀಮಂತ ಪವಾರ, 9)ಮಿಥುನ ತಂದೆ ಬಾಬು ರಾಠೋಡ, 10) ಸಿದ್ದಪ್ಪಾ ತಂದೆ ಗಿರಿಮಲ್ಲಪ್ಪಾ ಹೆರೂರ, 11)ದೇವಿಂದ್ರ ತಂದೆ ಲಕ್ಷ್ಮಣ ಬೀರನೂರ ಇವರನ್ನು ವಶಕ್ಕೆ ತೆಗೆದುಕೊಂಡು, ಜೂಜಾಟದಲ್ಲಿ ಬಳಸಿದ 52 ಇಸ್ಪೀಟ ಎಲೆಗಳು ಹಾಗೂ ನಗದು ಹಣ 6,111/- ರೂ ಗಳನ್ನು ಜಪ್ತಿ ಮಾಡಿಕೊಂಡು ಆರೋಪಿತರ ವಿರುದ್ಧ ಮಹಾಗಾವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕಳವು ಪ್ರಕರಣ:

ಯಡ್ರಾಮಿ ಪೊಲೀಸ್ ಠಾಣೆ: ದಿನಾಂಕ 08-11-2016 ರಂದು ಶ್ರೀ ನಿಂಗಣ್ಣ ತಂದೆ ಖ್ಯಾತಪ್ಪ ಹೂಗಾರ ಸಾ: ಅರಳಗುಂಡಗಿ ರವರು ಠಾಣೆಗೆ ಹಾಜರಾಗಿ ಸುಮಾರು ವರ್ಷಗಳ ಹಿಂದೆ ತಮ್ಮ ಗ್ರಾಮದ ಬಸವೇಶ್ವರ ದೇವಾಲಯದಲ್ಲಿ ಶಿವಲಿಂಗೇಶ್ವರ ಮತ್ತು ಖ್ಯಾತಲಿಂಗೇಶ್ವರ ದೇವರ ಪಂಚ ಲೋಹದ ಮೂರ್ತಿಗಳು ಪ್ರತಿಷ್ಠಾಪಿಸಿದ್ದು. ದಿನಾಲು ತಾನು ಗುಡಿಗೆ ಹೋಗಿ ಮೂರ್ತಿಗಳ ಪೂಜೆ ಮಾಡಿ ನಂತರ ಬಾಗಿಲ ಕೀಲಿ ಹಾಕಿಕೊಂಡು ಮನೆಗೆ ಹೊಗುತ್ತೇನೆ ಗುಡಿಯಲ್ಲಿ ರಾತ್ರಿ ವೇಳೆಯಲ್ಲಿ ಗ್ರಾಮದ ಕೆಲವು ಜನರು ಮಲಗಿಕೊಳ್ಳುತ್ತಿದ್ದು. ಎಂದಿನಂತೆ ದಿನಾಂಕ 08-11-2016 ರಂದು ಬೆಳಿಗ್ಗೆ 06;00 ಗಂಟೆಗೆ ನಾನು ಗುಡಿಗೆ ಹೋಗಿ ನೋಡುವಷ್ಟರಲ್ಲಿ ಗುಡಿ ಬಾಗಿಲಿಗೆ ಹಾಕಿದ ಕೀಲಿ ಮುರಿದಿದ್ದು ಓಳಗೆ ನೋಡಲಾಗಿ ಶಿವಲಿಂಗೇಶ್ವರ ಮತ್ತು ಖ್ಯಾತಲಿಂಗೇಶ್ವರ ದೇವರ ಮೂರ್ತಿಗಳು ಇರಲಿಲ್ಲಾ. ಆಗ ಅಲ್ಲೆ ಮಲಗಿಕೊಂಡ ಗ್ರಾಮದ 1) ಗುರುಸಿದ್ದಪ್ಪ ತಂದೆ ನಾಗಪ್ಪ ದಾದಾಗೋಳ, 2) ಶೀವಶರಣಪ್ಪ ತಂದೆ ಶಿವರಾಯ ಕುಕ್ಕನೂರ, 3) ಗುರುಲಿಂಗಪ್ಪ ತಂದೆ ಕಲ್ಲಪ್ಪ ತಮ್ಮಾಗೋಳ, 4) ಸುನೀಲ ತಂದೆ ಮಲ್ಲೇಶಪ್ಪ ಬಳೂರಗಿ ರವರಿಗೆ ಎಬ್ಬಿಸಿ ವಿಚಾರಿಸಿದಾಗ ಈ ಘಟನೆಯ ಬಗ್ಗೆ ಗೊತ್ತಿರುವುದಿಲ್ಲಾ ಅಂತಾ ತಿಳಿಸಿದರು. ದೇವಸ್ಥಾನದಲ್ಲಿ ಕಳುವಾದ 1) ಶಿವಲಿಂಗೇಶ್ವರ ದೇವರ ಪಂಚ ಲೋಹದ ಮೂರ್ತಿ ಅಂದಾಜ 5 ಕೆ.ಜಿ ಇದ್ದು, ಅದರ ಅದಾಜ ಕಿಮ್ಮತ್ತ 50,000/- ರೂ, 2) ಖ್ಯಾತಲಿಂಗೇಶ್ವರ ದೇವರ ಪಂಚ ಲೋಹದ ಮೂರ್ತಿ ಅಂದಾಜ 4 ಕೆ.ಜಿ ಇದ್ದು, ಅದರ ಅದಾಜ ಕಿಮ್ಮತ್ತ 40,000/- ರೂ ಹೀಗೆ ಒಟ್ಟು 90,000/- ರೂ ಕಿಮ್ಮತ್ತಿನ ದೇವರ ಪಂಚ ಲೋಹದ ಮೂರ್ತಿಗಳನ್ನು ಯಾರೋ ಕಳ್ಳರು ದಿನಾಂಕ 07-11-2016 ರಂದು ರಾತ್ರಿ 11;30 ಪಿ.ಎಂ ದಿಂದ ದಿನಾಂಕ 08-11-2016 ರಂದು ಬೆಳಗಿನ ಜಾವ 04;00 ಗಂಟೆ ಮದ್ಯದಲ್ಲಿ ಕಳ್ಳತನ ಮಾಡಿಕೊಂಡು ಹೋಗಿದ್ದು. ಕಳುವಾದ ದೇವರ ಮೂರ್ತಿಗಳನ್ನು ಪತ್ತೆ ಮಾಡಿ ಕಳ್ಳತನ ಮಾಡಿದವರ ವಿರುದ್ದ ಕಾನೂನು ರೀತಿ ಕ್ರಮ ಕೈಕೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.