POLICE BHAVAN KALABURAGI

POLICE BHAVAN KALABURAGI

05 November 2016

KALABURAGI DISTRICT REPORTED CRIMES.

ಸ್ಟೇಷನ್ ಬಜಾರ ಠಾಣೆ : ದಿನಾಂಕ. 04/11/2016 ರಂದು 11-00 ಎ ಎಮ್ ಕ್ಕೆ ಶ್ರೀ ರಾಮನಗೌಡ ತಂದೆ ಶರಣಪ್ಪ ಹಳಿಮನಿ ವ: 43 ಉ: ಮೇಡಿಕಲ್ ಶಾಫ್ ( ವ್ಯಾಪಾರ) ಜಾತಿ: ಹಿಂದು ರಡ್ಡಿ ಸಾ: ಮನೆ ನಂ. 10-2/100 ‘’ ಶ್ರೀದೇವಿ ನಿಲಯ’’ ಆನಂದ ನಗರ  ಕಲಬುರಗಿ ರವರು ಠಾಣೆಗೆ ಹಾಜರಾಗಿ ಒಂದು ಟೈಪ್ ಮಾಡಿದ ಫೀರ್ಯಾಧಿ ಅರ್ಜಿ ಸಲ್ಲಿಸಿದ್ದು ಸಾರಾಂಶವೆನೆಂದರೆ, ದಿನಾಂಕ. 09/10/2016  ರಂದು 2.30 ಪಿ.ಎಂ ಸುಮಾರಿಗೆ ನಾನು ನನ್ನ ಹಿರೋ ಹೊಂಡಾ ಸ್ಪ್ಲೆಂಡರ್ ಪ್ರೋ ನಂ. KA-32 EA-0385 ಚೆಸ್ಸಿನಂ. MBLHA10ADB9H15904, .ನಂ. HA10EHB9H19015 ,ಕಿ|| 30,000/- ರೂ ನೇದ್ದು ಮನೆಯ ಮುಂದಿನ ರೋಡಿನ ಬದಿಯಲ್ಲಿ ನಿಲ್ಲಿಸಿ ಮನೆಯಲ್ಲಿ ಹೋಗಿ ನಂತರ 4:00 ಪಿಎಮ್ ಸುಮಾರಿಗೆ ಬಂದು ನೋಡಲಾಗಿ ನನ್ನ ಹಿರೋ ಹೊಂಡಾ ಸ್ಪ್ಲೆಂಡರ್ ಪ್ರೋ ನಂ. KA-32 EA- 0385 ಮೋಟರ ಸೈಕಲ್ ಇರಲಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇಲ್ಲಿಯವರೆಗೆ ಹುಡುಕಾಡಿದರು ಸಿಕ್ಕಿರುವುದಿಲ್ಲ. ಕಾರಣ ಸದರಿ ಹಿರೋ ಹೊಂಡಾ ಸ್ಪ್ಲೆಂಡರ್ ಪ್ರೋ ಮೊಟರ ಸೈಕಲ್ ಪತ್ತೆ ಮಾಡಿ ಕಳ್ಳತನ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೆಕೆಂದು ವರದಿಯಾದ ಬಗ್ಗ.
ºÉZÀÄѪÀj ¸ÀAZÁj oÁuÉ : ದಿನಾಂಕ 04-11-2016 ರಂದು ಬೆಳಿಗ್ಗೆ 7-30 ಗಂಟೆಗೆ ಯುನೈಟೆಡ ಆಸ್ಪತ್ರೆಯ ಸಿಬ್ಬಂದಿಯವರು ಠಾಣೆಗೆ ಪೋನ ಮಾಡಿ ರಘು, ವೀಣಾ, ಹಾಗು ಹರ್ಷಾ ಇವರು ರಸ್ತೆ ಅಪಘಾತ ಹೊಂದಿ ಉಪಚಾರ ಕುರಿತು ಬಂದಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಆಸ್ಪತ್ರೆಗೆ ಭೆಟಿಕೊಟ್ಟು ಗಾಯಾಳು ರಘು ಇವರನ್ನು ವಿಚಾರಿಸಲು ಅವರು ಹೇಳಿಕೆ ಕೊಟ್ಟ ಸಾರಂಶವೆನೆಂದರೆ ದಿನಾಂಕ: 04-11-2016 ರಂದು 1-30 ಎ.ಎಮ್ ಸುಮಾರಿಗೆ ಕಲಬುರಗಿ ರೈಲ್ವೆ ಸ್ಟೇಷನದಿಂದ ಓಂ ನಗರದಲ್ಲಿರುವ ತನ್ನ ಮನೆಗೆ ಹೋಗುವ ಕುರಿತು ಆಟೋರಿಕ್ಷಾ ನಂ ಕೆಎ-32-ಎ-8757 ನೇದ್ದರಲ್ಲಿ ಫಿರ್ಯಾದಿ ಹಾಗೂ ಫಿರ್ಯಾದಿ ಹೆಂಡತಿ ವೀಣಾ ಫಿರ್ಯಾದಿ ಮಗ ಹರ್ಷಾ ಹಾಗೂ ಫಿರ್ಯಾದಿ ಅಜ್ಜಿ ಒಬಳಮ್ಮಾ ನಾಲ್ಕು ಜನರು ಕುಳಿತು ಹೋಗುವಾಗ ಅಟೋರಿಕ್ಷಾ ಚಾಲಕ ಎಸ.ವಿ.ಪಿ.ಸರ್ಕಲ ಟೌನ ಹಾಲ ಕ್ರಾಸ ಮುಖಾಂತರವಾಗಿ ಆಟೋರಿಕ್ಷಾ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ರೋಡ ಎಡ ಬಲ ಕಟ್ ಹೊಡೆಯುತ್ತಾ ಸರ್ಕಾರಿ ಆಸ್ಪತ್ರೆ ಎದುರುಗಡೆ ಬರುವ ಗುಮ್ಮಜ್ ಹತ್ತೀರ ರೋಡ ಮೇಲೆ ಒಮ್ಮಲೆ ಬ್ರೇಕ ಹಾಕಿ ಆಟೋರಿಕ್ಷಾ ವಾಹನ ಪಲ್ಟಿ ಮಾಡಿ ಫಿರ್ಯಾದಿ ರಘು ಹಾಗೂ ಆತನ ಮಗ ಹರ್ಷಾ ಇವರಿಗೆ ಸಾಧಾ ಗಾಯ ಅವರ ಹೆಂಡತಿ ವೀಣಾ ಇವರಿಗೆ ಭಾರಿಗಾಯಗೊಳಿಸಿ ಆಟೋರಿಕ್ಷಾ ವಾಹನ ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ವರದಿ.

ºÉZÀÄѪÀj ¸ÀAZÁj oÁuÉ : ದಿನಾಂಕ 04-11-2016 ರಂದು ಮದ್ಯಾಹ್ನ 12-00 ಗಂಟೆಗೆ ಪಾಟೀಲ ಆಸ್ಪತ್ರೆಯಿಂದ ಠಾಣೆಗೆ ಪೋನ ಮಾಡಿ ಸತೀಶಕುಮಾರ ಇವರು ನಿನ್ನೆ ರಸ್ತೆ ಅಪಘಾತ ಹೊಂದಿ ಉಪಚಾರ ಕುರಿತು ಬಂದಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಆಸ್ಪತ್ರೆಗೆ ಭೆಟಿಕೊಟ್ಟು ಗಾಯಾಳು ಸತೀಶಕುಮಾರ ಇವರನ್ನು ವಿಚಾರಿಸಲು ಅವರು ಹೇಳಿಕೆ ಕೊಟ್ಟ ಸಾರಂಶವೆನೆಂದರೆ ದಿನಾಂಕ: 03-11-2016 ಸಾಯಂಕಾಲ 7-30 ಗಂಟೆ ಸುಮಾರಿಗೆ ಕೇಂಧ್ರ ಬಸ್ಸ ನಿಲ್ದಾಣಕ್ಕೆ ಹೋಗುವ ಕುರಿತು ನಾನು ಮನೆಯಿಂದ ನಡೆದುಕೊಂಡು ಹೋಗುವಾಗ ಬಂಜಾರಾ ಕ್ರಾಸ ಮತ್ತು ರೈಲ್ವೆ ಅಂಡರ ಬ್ರೀಡ್ಜ್ ಮದ್ಯದ ರೋಡ ಮೇಲೆ ಹಿಂದಿನಿಂದ ಮೋಟಾರ ಸೈಕಲ ನಂ ಕೆಎ-32-ಇಎಲ್-9858 ನೇದ್ದರ ಸವಾರ ತನ್ನ ಮೋಟಾರ ಸೈಕಲ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನ್ನ ಬಲ ಭುಜಕ್ಕೆ ಭಾರಿ ಗುಪ್ತ ಪೆಟ್ಟು ಹಾಗೂ ಎಡ ಹಣೆಗೆ ರಕ್ತಗಾಯಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ವರದಿ. 

04 November 2016

KALABURAGI DISTRICT REPORTED CRIMES.

ಯಡ್ರಾಮಿ ಠಾಣೆ : ದಿನಾಂಕ 03-11-2016 ರಂದು 5-30 ಪಿ.ಎಂ ಕ್ಕೆ ಪಿರ್ಯಾದಿ ಶ್ರೀಮತಿ ಮಾಶಾಬಿ ತಂದೆ ಪೀರಸಾಬ ನದಾಫ ಸಾ|| ಯಡ್ರಾಮಿ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕಿಕೃತ ಮಾಡಿದ ಅರ್ಜಿಯನ್ನು ತಂದು ಹಾಜರುಪಡಿಸಿದ್ದರ ಸಾರಾಂಶವೆನೇಂದರೆ ದಿನಾಂಕ: 28-10-2016 ರಂದು 11;00 ಪಿ.ಎಂ ದಿಂದ ದಿನಾಂಕ 29-10-2016 ರಂದು 05;00 .ಎಂ ಮದ್ಯದಲ್ಲಿ ಯಾರೋ ಕಳ್ಳರು ಯಡ್ರಾಮಿ ಗ್ರಾಮದಲ್ಲಿರುವ ಕಸ್ತೂರಬಾ ಗಾಂಧಿ ಬಾಲಕಿಯ ವಿದ್ಯಾಲಯದ ಡೈನಿಮಗ  ಹಾಲ ಬಾಗಿಲ ಕೊಂಡಿ ಮುರಿದು ಒಳಗೆ ಹೋಗಿ ವಿಡಿಯೋಕಾನ ಟಿವಿ ಅ;ಕಿ; 9,200/- ರೂ ನೇದ್ದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ವರದಿ ಇರುತ್ತದೆ.
ಫರಹತಾಬಾದ ಪೊಲೀಸ್ : ದಿನಾಂಕ: 03/11/16 ರಂದು 2 ಪಿಎಮಕ್ಕೆ ಕಾಮರೆಡ್ಡಿ ಆಸ್ಪತ್ರೆ ಕಲಬುರಗಿಯಿಂದ ಮರಳಿ ಠಾಣೆಗೆ ಬಂದು ಸದರಿ ಪಿರ್ಯಾದಿದಾರರಾದ ಶ್ರೀ ಗುಂಡುರಾವ @ ಗುಂಡಪ್ಪಾ ತಂದೆ ವೀರಬದ್ರಪ್ಪಾ ಹೊಸಗೌಡರ ವ: 39 ವರ್ಷ ಜಾ: ಲಿಂಗಾಯತ ಉ: ಚಾಲಕ ಸಾ: ಖಾದ್ರಿಚೌಕ ಜೆ, ಆರ್‌ ನಗರ ಆಳಂದ ರೋಡ ಕಲಬುರಗಿ  ಹೇಳಿಕೆಯ ಸಾರಾಂಶವೆನೆಂದರೆ. ನಾನು ಈ ಮೇಲಿನ ವಿಳಾಸದವನಿದ್ದು ಚಾಲಕ ಕೆಲಸ ಮಾಡಿಕೊಂಡು ಪರಿವಾರದೊಂದಿಗೆ ಉಪಯೋಗಿಸುತ್ತೇನೆ. ನಮ್ಮದೊಂದು ಇನೋವಾ ಕಾರ ನಂಬರ ಕೆಎ-32 ಎನ್‌‌-8310 ಇದ್ದು ಅದನ್ನು ನಾನೇ ಚಲಾ ಯಿಸುತ್ತಾ ಬಂದಿರುತ್ತೇನೆ.  ಹೀಗಿದ್ದು ದಿನಾಂಕ: 02/11/16 ರಂದು ಬಿಜಾಪೂರದಲ್ಲಿ ನಮ್ಮ ಸಂಬಂದಿಕರ ಗೃಹ ಪ್ರವೇಶ ಕಾರ್ಯ ಕ್ರಮವಿದ್ದ ಪ್ರಯುಕ್ತ ನಾನು ಹಾಗೂ ನನ್ನ ಗೆಳೆಯ ಕವಿರಾಜ ಪೊಲೀಸ ಪಾಟೀಲ ಕೂಡಿ ಸದರಿ ಕಾರಿನಲ್ಲಿ ಹೋಗಿ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಕಲಬುರಗಿಗೆ ಬರುವಾಗ ನಾನು ಕಾರು ಚಲಾಯಿಸುತ್ತಿದ್ದು ಕವಿರಾಜ ಪಕ್ಕದಲ್ಲಿ ಕುಳಿತ್ತಿದ್ದು ದಿನಾಂಕ:03/11/16 ರಂದು ಬೆಳಗಿನ ಜಾವ ಜೇವರ್ಗಿ ಮುಖಾಂತರ ಬರುವಾಗ ನಾನು ರೋಡಿನ ಎಡಬದಿಯಿಂದ ಸಾವಕಾಶವಾಗಿ ಸರಡಗಿ (ಬಿ) ಕ್ರಾಸದಾಟಿ ½ ಕಿಮಿ ಎನ್‌ಹೆಚ್‌-218 ನೇದ್ದರ ಮೇಲೆ ಬಂದಾಗ ಎದುರಿನಿಂದ  ಅಂದರೆ ಕಲಬುರಗಿ ಕಡೆಯಿಂದ ಒಬ್ಬ ಟವರಸ್‌‌ ಲಾರಿ ಚಾಲಕನು ತನ್ನ ವಾಹನ ಅತೀವೇಗದಿಂದ ಅಲಕ್ಷತನದಿಂದ ಓಡಿಸುತ್ತಾ ಬಂದು ನಮ್ಮ ಕಾರಿನ ಬಲಭಾಗಕ್ಕೆ ಹಾಯಿಸಿ ಅಫಘಾತಪಡಿಸಿದಾಗ ನಮ್ಮ ಕಾರು ಮಗ್ಗಲಾಗಿ ಬಿದಿದ್ದು ಅಫಘಾತದಿಂದ ನನ್ನ ಬಲಬುಜಕ್ಕೆ ಭಾರಿಗಾಯವಾಗಿ ಬೆರಳುಗಳಿಗೆ ರಕ್ತಗಾಯವಾಗಿದ್ದು ಎದೆಗೆ ಗುಪ್ತಗಾಯವಾಗಿದ್ದು ಸದರಿ ಘಟನೆ ಆದಾಗ ಬೆಳಗಿನ ಜಾವ 3 ಗಂಟೆಯಾಗಿತ್ತು ಕವಿರಾಜನಿಗೆ ಯಾವುದೇ ಗಾಯವಾಗಿರುವುದಿಲ್ಲಾ. ಅಫಘಾತಪಡಿಸಿದ ಲಾರಿ ಚಾಲಕನು ತನ್ನ ವಾಹನವನ್ನು ಸ್ವಲ್ಪ ಮುಂದೆ ಒಯ್ದು ನಿಲ್ಲಿಸಿದ್ದು ಅದರ ನಂಬರ ಎಪಿ-24 ಎಕ್ಸ್‌‌‌-1133 ಇದ್ದು. ಚಾಲಕ ಸೈಯ್ಯದ ಸುಭಾನ ಸಾ: ನಿರ್ದೆವಲ್ಲಿ ತಾ: ಶಾದ ನಗರ ಮಹಿಬೂಬ ನಗರ ಜಿಲ್ಲೆ ಎಂದು ಗೋತ್ತಾಗಿದ್ದು ನಂತರ ಯಾರೋ ಅಂಬುಲೈನ್ಸ್‌ ವಾಹನಕ್ಕೆ ಮಾಹಿತಿ ನೀಡಿದ್ದರಿಂದ ಅಂಬುಲೈನ್ಸ್‌ ಬಂದು ಉಪಚಾರಕ್ಕಾಗಿ ಇ್ಲಲಿಗೆ ತಂದು ಸೇರಿಕೆ ಮಾಡಿರುತ್ತಾರೆ. ಕಾರಣ ನಮ್ಮ ಇನೋವಾ ಕಾರ ನಂಬರ ಕೆಎ- 32 ಎನ್‌‌- 8310 ನೇದ್ದಕ್ಕೆ ಲಾರಿ ನಂ ಎಪಿ- 24 ಎಕ್ಸ್‌‌- 1133 ನೇದ್ದರ ಚಾಲಕ ಅತೀವೇಗದಿಂದ ಮತ್ತು ಅಲಕ್ಷತನದಿಂದ ಓಡಿಸಿ ಡಿಕ್ಕಿ ಪಡೆಯಿಸಿ ಭಾರಿಗಾಯವಾಗಿದ್ದು ಸದರಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ವರದಿ ಇರುತ್ತದೆ.
ಫರಹತಾಬಾದ ಪೊಲೀಸ್ : ದಿನಾಂಕ: 03/11/2016 ರಂದು ರಾತ್ರಿ 10 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಎಮ್‌ ಸೋಮಶೇಖರ ಮುಖ್ಯ ಅಧೀಕ್ಷಕರು ತಮ್ಮ ಸಿಬ್ಬಂಧಿಯಾದ ಶ್ರೀ  ಸೂರ್ಯಕಾಂತ ಡುಮ್ಮಾ ಚೀಪ್‌ ವಾರ್ಡರ ಕೇಂದ್ರ ಕಾರಾಗೃಹ ಕಲಬುರಗಿ ರವರ ಮುಖಾಂತರ ಕಳುಹಿಸಿಕೊಟ್ಟ ಲಿಖಿತ ಪಿರ್ಯಾದಿ ಸಾರಾಂಶವೇನೆಂದರೆ  ಈ ಸಂಸ್ಥೆಯ ಶಿಕ್ಷಾ ಬಂಧಿ ಸಂಖ್ಯೆ 17691 ಮಹೇಶ ತಂಧೆ ಲಕ್ಷ್ಮಣರಾವ ಎಂಬಾತನು  ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಲಬುರಗಿರವರು ಸದರಿ  ಬಂದಿಗೆ ದಿನಾಂಕ: 13/12/207 ರಂದು ಎಸ್‌ಸಿ ನಂ 533/06 ಬಾ. ದ. ಸ365 ಮತ್ತು 302 ಅಡಿಯಲ್ಲಿ ಜೀವಾಧಿ ಶಿಕ್ಷೆ ವಿಧಿಸಿರುತ್ತಾರೆ.  ಮುಂದುವರೆದಿದ್ದು ಒಪ್ಪಿಸುವುದೆನೆಂದರೆ, ಸದರಿ ಬಂಧಿಯನ್ನು ಹೊರ ತೋಟದ ಕೆಲಸಕ್ಕೆ ನೇಮಿಸಲಾಗಿರುತ್ತದೆ. ಬಂಧಿಯು ಎರಡು(02) ತಿಂಗಳಿಂದ ಹೊರ ತೋಟದಲ್ಲಿ ಕೆಲಸ ಮಾಡುತ್ತಿದ್ದನು ಇಂದು ದಿನಾಂಕ: 03/11/2016 ರಂದು ಹೊರಗಡೆ ತೋಟದ ಕೆಲಸಕ್ಕೆ  ಇನ್ನೂಳಿದು 18 ಶಿಕ್ಷಾ ಬಂಧಿಗಳೊಂದಿಗೆ  ಶ್ರೀಸೂರ್ಯಕಾಂತ ಡುಮ್ಮಾ ಪ್ರಧಾನ ವೀಕ್ಷಕರು ಹಾಗೂ ಶ್ರೀಕಾಂತ ಎಸ್‌, ಆರ್‌‌ ವೀಕ್ಷಕ ಇವರ ಬೆಂಗಾವಲಿನಲ್ಲಿ ಕಳುಹಿಸಲಾಗಿರುತ್ತದೆ. ಎಂದಿನಂತೆ ಎಲ್ಲಾ ಬಂಧಿಗಳು ಸಮಯ ಸುಮಾರು 5:30 ಕ್ಕೆ ಮುಖ್ಯ ದ್ವಾರಕ್ಕೆ ಬಂದು ಜಮಾ ಮಾಡುತ್ತಿರುವ ಸಮಯದಲ್ಲಿ ಸದರಿ ಶಿಕ್ಷಾ ಬಂದಿಯು ಬಹಿರದೇಶೆಗೆ  ಹೋಗಿ ಬರುತ್ತೇನೆ ಎಂದು ಹೇಳಿ ಹೋದವ ಮರಳಿ ಬಾರದೆ ಇರುವಾಗ ಶ್ರೀಕಾಂತ ವೀಕ್ಷಕರು  ಅನುಮಾನಗೊಂಡು  ತೋಟವೆಲ್ಲಾ ಹುಡುಕಾಡಿ ಬಂಧಿಯ ಸುಳಿವು ಸಿಗದೆ ಇದ್ದಾಗಸಾಯಂಕಾಳ 6 ಗಂಟೆಗೆ ಗೇಟಿಗೆ ಬಂದು ತಿಳಿಸಿರುತ್ತಾರೆ ನಂತರ ಇತರೆ ಸಿಬ್ಬಂದಿಗಳೊಂದಿಗೆ ಜೈಲಿನ ಹೋರಾವರಣ ಹಾಗೂ ತೋಟದಲ್ಲಿಹುಡುಕಾಡಿ ಬಂಧಿಯು ಕಾಣದೆ ಇದ್ದಾಗ ಫರಾರಿಯಾಗಿರುತ್ತಾನೆ ಎಂದು ಖಚಿತವಾಗಿರುತ್ತದೆ  ಸದರಿ  ಬಂಧಿಯು ಫರಾರಿ ಕುರಿತು ದೂರು ದಾಖಲಿಸಿಕೊಂಡು  ಮರು ಬಂಧಿಸಲು ವಿನಂತಿಸಿದೆ ಸದರಿ ಹೆಸರಿನ ವಿವರಣಾ ಪಟ್ಟಿಯನ್ನು ಈ ಪತ್ರದೊಂದಿಗೆ ಲಗತ್ತಿಸಿ ತಮ್ಮ ದಯಾಪರ ಮಾಹಿತಿಗಾಗಿ ಒಪ್ಪಿಸಿದೆ ಅಂತಾ ಇತ್ಯಾದಿ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲಿಸಿಕೊಂಡೆನು ಬಗ್ಗೆ ವರದಿ ಇರುತ್ತದೆ.

01 November 2016

KALABURAGI DISTRICT REPORTED CRIMES

ಫರಹತಾಬಾದ ಪೊಲೀಸ್ ಠಾಣೆ:
ಹಾವು ಕಚ್ಚಿ ಸಾವು: ದಿನಾಂಕ 30/10/2016 ರಂದು ಶ್ರೀ ಮಲ್ಲಪ್ಪಾ ತಂದೆ ಪವಾಡೆಪ್ಪಾ ಕರಗರ ಸಾ: ಹಸನಪೂರ ಇವರು ಠಾಣೆಗೆ ಹಾಜರಾಗಿ ತನ್ನ ಮಗಳು ಮಹಾದೇವಿಯ ಮಗಳಾದ ವಿಜಯಲಕ್ಷ್ಮೀ ವ:14 ವರ್ಷ ಇವಳಿಗೆ ತಮ್ಮ ಮನೆಯಲ್ಲಿ ಇಟ್ಟುಕೊಂಡು ಸಾಕುತ್ತಿದ್ದು. ನಿನ್ನೆ ದಿನಾಂಕ 29/10/2016 ರಂದು ಸಾಯಂಕಾಲ 4 ಗಂಟೆಯ ಸುಮಾರಿಗೆ ನನ್ನ ಮೊಮ್ಮಗಳು ವಿಜಯಲಕ್ಷ್ಮೀ ತಂದೆ ಶಿವಪ್ಪಾ ಪೂಜಾರಿ ಇವಳು ನಮ್ಮ ನೆಯಲ್ಲಿ ಇಟ್ಟಿದ್ದ  ಗೋಬ್ಬರದ ಚೀಲದ ಸಂದಿಯಲ್ಲಿ ಇಟ್ಟಿದ್ದ ಕಸಬಾರಿಗೆ ತೆಗೆದುಕೊಳ್ಳುತ್ತಿದ್ದಾಗ ಗೊಬ್ಬರದ ಚೀಲಿನ ಸಂದಿಯಲ್ಲಿ ಕುಳಿತಿದ್ದ ಹಾವು ಕಚ್ಚಿದ್ದರಿಂದ ಕೋಡಲೆ ನನ್ನ ಮಗ ಸುಭಾಷ ಹಾಗೂ ನಮ್ಮೂರಿನ ಸಕ್ಕಪ್ಪ,ನಂದಪ್ಪಾ ಇವರು ವಿಜಯಲಕ್ಷ್ಮೀಯನ್ನು ನದಿ ಶಿನ್ನೂರ ಗ್ರಾಮಕ್ಕೆ ಕರೆದುಕೊಂಡು ಹೋಗಿ  ಅಲ್ಲಿ ನಾಟಿ ಔಷದೋಪಚಾರ ಮಾಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆ  ಕಲಬುರಗಿಗೆ ತೆಗೆದುಕೊಂಡು ಹೋಗುತ್ತಿರುವಾಗ  ಮಾರ್ಗ ಮದ್ಯದಲ್ಲಿ ಮೃತ ಪಟ್ಟಿರುತ್ತಾಳೆ  ಇದೊಂದು ಆಕಸ್ಮಿಕವಾಗಿ ನಡೆದ ಘಟನೆ ಯಾಗಿದ್ದು  ನನ್ನ ಮೋಮ್ಮಗಳ ಸಾವಿನಲ್ಲಿ ಸಂಶಯ ಇತ್ಯಾದಿ ಇರುವದಿಲ್ಲಾ ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಫರಹತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ,
ಫರಹತಾಬಾದ ಪೊಲೀಸ್ ಠಾಣೆ:
ಸರ್ಕಾರಿ ಕರ್ತವ್ಯಕ್ಕೆ ಅಡೆ ತಡೆ ಪ್ರಕರಣ: ದಿನಾಂಕ 30/10/2016 ಶ್ರೀ ಶ್ರೀಪಾದ ನಾಲತವಾಡಕರ್‌‌‌ ಕಂದಾಯ ನಿರೀಕ್ಷಕರು ಪಟ್ಟಣ ಹೋಬಳಿ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶವೇನೆಂದರೆ ಕಲಬುರಗಿ ತಾಲ್ಲೂಕಿನ ಮೇಳಕುಂದಾ (ಬಿ) ಗ್ರಾಮದ ವಿವಾದಿತ ಸಿದ್ದೇಶ್ವರ ದೇವಸ್ಥಾನದ ಜಾತ್ರೆಯ ನಿಮಿತ್ಯ ಗ್ರಾಮದ ಸಿದ್ದೇಶ್ವರ ದೇವಸ್ಥಾನ ಕಮಿಟಿ ಮತ್ತು ಮಾಳಿಂಗರಾಯ ದೇವಸ್ಥಾನ ಕಮಿಟಿ ಎರಡು ಗುಂಪಿನಲ್ಲಿ ವಿವಾದ ಉಂಟಾಗಿರುವ ನಿಮಿತ್ಯ ಇಂದು ದಿನಾಂಕ 30/10/16 ರಂದು ದೇವಸ್ಥಾನದ ಜಾತ್ರಾ ಪಲ್ಲಕ್ಕಿ ಹಾಗೂ ಯಾವುದೇ ಕಾರ್ಯಾಕ್ರಮ ನಡೆಸಕೂಡದು ಎಂದು ತಿಳಿಸಿ ಕಲಂ 145 ಸಿಆರ್‌ಪಿಸಿ ರಂತೆ ದೇವಸ್ಥಾನವನ್ನು ಸರ್ಕಾರದ ವಶಕ್ಕೆ ಪಡೆದುಕೊಂಡಿದ್ದು ಇರುತ್ತದೆ. ಆದರೆ ಇಂದು ಬೆಳ್ಳಿಗ್ಗೆ 6 ಗಂಟೆಯ ಸುಮಾರಿಗೆ ಗ್ರಾಮದ ದೇವಸ್ಥಾನ ಕಮಿಟಿ ಸದಸ್ಯರು ಮತ್ತು ಗ್ರಾಮಸ್ಥರಾದ ಭೀಮರಾಯ ಕೊಳ್ಳುರ, ಬಾಬುರಾವ, ವಿದ್ಯಾಸಾಗರ ಕಲಬುರಗಿ ಸಿದ್ದಣ್ಣಗೌಡ ಪಾಟೀಲ ಮತ್ತು ನೂರಾರು ಸ್ತ್ರೀ ಪುರುಷರೊಂದಿಗೆ ಏಕಕಾಲಕ್ಕೆ ದೇವಸ್ಥಾನದ ಒಳಗೆ ಬಂದು ನಮ್ಮ ಹಾಗೂ ಪೊಲೀಸ ಬಂದೋಬಸ್ತ ನಡುವೆ ನಮ್ಮ ಆದೇಶವನ್ನು ದಿಕ್ಕರಿಸಿ ಕರ್ತವ್ಯಕ್ಕೆ ಅಡ್ಡಿ ಪಡೆಯಿಸಿ ಕರ್ತವ್ಯ ನಿರಿತ ಸಿಬ್ಬಂದಿಯವರನ್ನು ತಳ್ಳುತ್ತಾ ದೇವಸ್ಥಾನದ ಪಲ್ಲಕ್ಕಿಗಳನ್ನು ತೆಗೆದುಕೊಂಡು ಹೋಗಿರುತ್ತಾರೆ. ಆದ್ದರಿಂದ ವಿವಾದಿತ ಸಿದ್ದೇಶ್ವರ ದೇವಸ್ಥಾನದ ಕಮಿಟಿ ಸದಸ್ಯರು ಮತ್ತು ಮಾಳಿಂಗರಾಯ ದೇವ ಸ್ಥಾನ ಕಮಿಟಿ ಸದಸ್ಯರು ಅಲ್ಲದೇ ಗ್ರಾಮಸ್ಥರಾದ ಬಾಬುರಾವ, ಭೀಮರಾಯ ಕೊಳ್ಳುರ, ಸಿದ್ದಣ್ಣಗೌಡ ಪಾಟೀಲ ವಿದ್ಯಾಸಾಗರ ಕಲಬುರಗಿ ಹಾಗೂ ಗ್ರಾಮಸ್ಥರ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಹತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಫರಹತಾಬಾದ ಪೊಲೀಸ್ ಠಾಣೆ:
ಸಮಾಧಿಯಿಂಧ ಶವದ ಅವಯವ ಕಳವು ಪ್ರಕರಣ:  ಇಂದು ದಿನಾಂಕ 30/10/2016 ರಂದು ಶ್ರೀ ಚನ್ನಬಸಪ್ಪಾ ತಂದೆ ದಿ: ವೀರುಪಾಕ್ಷಪ್ಪಾ ಸಜ್ಜನ ಸಾ: ಫರಹತಾಬಾದ ಇವರು ಠಾಣೆಗೆ ಹಾಜರಾಗಿ ನನ್ನ ತಂದೆ ದಿ. ವೀರುಪಾಕ್ಷಪ್ಪಾ ತಂದೆ ಶರಣಪ್ಪಾ ಸಜ್ಜನ ಇವರು 7 ತಿಂಗಳ ಹಿಂದೆ  ಮೃತಪಟ್ಟಿದ್ದು ಅವರ ದೇಹವನ್ನು ನಮ್ಮ ಸ್ವಂತ ಹೊಲ (ಸರ್ವೆ ನಂ .225 ರಲ್ಲಿ  ಸುಮಾರು 7 ತಿಂಗಳ ಹಿಂದೆಯೇ  ಶವ ಸಂಸ್ಕಾರ ಮಾಡಿದ್ದು ಆ ಸಮಾಧಿಯನ್ನು ನಿನ್ನೆ ರಾತ್ರಿ ಯಾರೊ ಅಗೆದು  ಶವದ ರುಂಡವನ್ನು ಕಳವು ಮಾಡಿರುತ್ತಾರೆ.  ಈ ಅಪರಾಧದ ಕೃತ್ಯ ಮಾಡಿದ ಆರೋಪಿತರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಳ್ಳಬೆಕೆಂದು ವಿನಂತಿಸುತ್ತೇನೆ ಅಂತಾ ಲಿಖಿತ ಪಿರ್ಯಾದಿಯ ಸಾರಾಂಶದ ಮೇಲಿಂದ ಫರಹತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.