POLICE BHAVAN KALABURAGI

POLICE BHAVAN KALABURAGI

24 September 2016

Kalaburagi District Reported Crimes

ಆತ್ಮ ಹತ್ಯೆ ಮಾಡಿಕೊಳ್ಳಲು ಪ್ರಚೋದನೆ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ ನಿಂಗಮ್ಮ ಗಂ ಜಗದೇವಪ್ಪ ಹಚ್ಚಡ ಸಾ: ಕುಮ್ಮನಸಿರಸಗಿ ರವರ ಮಗಳಾದ ವಿಧ್ಯಾಶ್ರೀ ವ: 20 ವರ್ಷ ಇವಳಿಗೆ ಈಗ 11 ತಿಂಗಳುಗಳ ಹಿಂದೆ ಕುಕನೂರ ಗ್ರಾಮದ ಹುಲೆಪ್ಪ ತಂ ಗೊಲ್ಲಾಳಪ್ಪ ರಾಯಗೋಳ ರವರೊಂದಿಗೆ ಗುರು ಹಿರಿಯರ ಸಮ್ಮುಖದಲ್ಲಿ ಮದುವೆ ಮಾಡಿ ಕೊಟ್ಟಿದ್ದು ಹುಲೆಪ್ಪನಿಗೆ 6 ಜನ ಅಣ್ಣತಮ್ಮಂದಿರಿದ್ದು, ಅವರಲ್ಲಿ ನಿಂಗಪ್ಪ ಎಂಬುವನು ತಿರಿಕೊಂಡಿರುತ್ತಾರೆ. ಅರಳಗುಂಡಗಿ ಸಿಮೆಯಲ್ಲಿ ಹುಲೆಪ್ಪನ ಪಿರ್ತಾರ್ಜಿತ ಆಸ್ತಿ ಇದ್ದು, ಅವರಿಗೆ ತಲಾ 7 ಎಕರೆ ಜಮೀನು ಬಂದಿರುತ್ತದೆ ನನ್ನ ಅಳಿಯ ಸ್ವಲ್ಪ ಎತಾರ್ಥನಿದ್ದು, ಅವನ ಹೆಸರಿಗೆ ಇದ್ದ ಆಸ್ತಿಯನ್ನು ಅವರ ತಮ್ಮಂದಿರರಾದ ಬೀಮಣ್ಣ ತಂದೆ ಗೊಲ್ಲಾಳಪ್ಪ, ಮಂಜೂನಾಥ ತಂ ಗೊಲ್ಲಾಳಪ್ಪ , ದೇವಿಂದ್ರ ತಂದೆ ಗೊಲ್ಲಾಳಪ್ಪ ಹಾಗೂ ಹುಲೆಪ್ಪನ ಅಕ್ಕ ಉಮಾಶ್ರೀ ತಂದೆ ಗೊಲ್ಲಾಳಪ್ಪ ರವರು ಹೇಗಾದರೂ ಮಾಡಿ ಆಸ್ತಿ ಹೊಡೆಯಬೇಕಂತ ಆಗಾಗ ಮನೆಯಲ್ಲಿ ಮಾತಾಡುತ್ತಿದ್ದನ್ನು ನನ್ನ ಮಗಳು ವಿಧ್ಯಾಶ್ರೀ ನನ್ನ ಮುಂದೆ ಹೇಳುತ್ತಿದ್ದಳು ಈ ವಿಷಯದ ಬಗ್ಗೆ ನನ್ನ ಮಗಳು ಅವರಿಗೆ ಎದುರು ಮಾತಾಡಿದಕ್ಕೆ ಕಿರುಕುಳ ಕೊಡುತ್ತಾ ಬಂದಿದ್ದು, ನನ್ನ ಮಗಳೂ ಆಗಾಗ ಹೆಳುತ್ತಿದ್ದಳು. ನನ್ನ ಮಗಳು ತಿಳಿದವಳಿದ್ದು, ಹುಲೆಪ್ಪನ ಹೆಸರಿಗಿದ್ದ ಹೊಲವನ್ನು ತನ್ನ ಹೆಸರಿಗೆ ಮಾಡಿಕೊಡಲು ಆಗುವದಿಲ್ಲ ಅದಕ್ಕೆ ನನ್ನ ಮಗಳಿಗೆ ಚಿತ್ರ ಹಿಂಸೆ ಕೊಟ್ಟರೆ ನಮ್ಮ ಮಾತು ಕೇಳುತ್ತಾಳೆ ಅಂತಾ ತಿಳಿದು ಅವಳಿಗೆ ದಿನಾಲು ಕಿರುಕುಳ ಕೊಡುತ್ತಿದ್ದರು. ದಿನಾಂಕ: 22-09-2016 ರಂದು 4 ಪಿ.ಎಂ ಸುಮಾರಿಗೆ ನಮ್ಮ ಸಂಬಂದಿಕನಾದ ಶರಣಪ್ಪ ಉಮ್ಮರಗಿ ರವರು ನನಗೆ ಪೋನ ಮಾಡಿ ನಿಮ್ಮ ಮಗಳು ವಿಧ್ಯಾಶ್ರೀ ತಮ್ಮ ಹೊಲದ ಬಾವಿಯಲ್ಲಿ ಬಿದ್ದು, ಮೃತಪಟ್ಟಿರುತ್ತಾಳೆ ಅಂತಾ ಹೇಳಿದರು. ನಂತರ ನಾನು ಮತ್ತು ನಮ್ಮ ಸಂಬಂದಿಕರಾದ ರಮೇಶ ಉಮಗರಗಿ , ಶಂಕಲಿಂಗ ಮೊರಟಗಿ, ಸಿದ್ದಲಿಂಗಪ್ಪ ಕೋಟೆ ರವರೆಲ್ಲರೂ ಕೂಡಿಕೊಂಡು ಸ್ಥಳಕ್ಕೆ ಹೋಗಿ ನೋಡುವಷ್ಟರಲ್ಲಿ ನನ್ನ ಮಗಳ ಶವ ಬಾವಿ ನಿರಿನಿಂದ ಶರಣಪ್ಪ ಉಮ್ಮರಗಿ ಮತ್ತು ರಮೇಶ ಮುದಾದಮ್ಮ ರವರ ಹೊರಗೆ ತೆಗೆದು ತಂಡೆಯ ಮೇಲೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತ್ಯಾಚಾರ ಪ್ರಕರಣ :
ಆಳಂದ ಠಾಣೆ : ಶ್ರೀಮತಿ ರವರು ದಿನಾಂಕ:22/09/2016 ರಂದು ಬೇಳಿಗ್ಗೆ 10:00 ಗಂಟೆ ಸುಮಾರಿಗೆ ಎಂದಿನಂತೆ ಮನೆಯಿಂದ ಕುರಿಗಳನ್ನು ತಗೆದುಕೊಂಡು ಕೇಶವ ಕೊರಳ್ಳಿ ಸಾಹುಕಾರರವರ ಹೊಲದ ಕಡೆಗೆ ಮೇಯಿಸಲು ಹೋಗಿದ್ದು ಸದರಿ ಹೊಲವನ್ನು ನಮ್ಮ ಗ್ರಾಮದ ಗುಲಾಬಸಾಬ ಮುಲ್ಲಾರವರು ಹೊಲ ಮಾಡಿದ್ದು ಮದ್ಯಾಹ್ನ 03:00 ಗಂಟೆ ಸುಮಾರಿಗೆ ಅವರ ಹೊಲದ ಬಂದಾರಿ ಹತ್ತಿರ ಕುರಿ ಮೇಯಿಸುತ್ತಿರುವಾಗ ಗುಲಾಬಸಾಬ ಮುಲ್ಲಾರವರ ಮಗನಾದ ಫಕ್ರೋದ್ದಿನ್ ಮುಲ್ಲಾ ಇತನು ನನ್ನ ಹತ್ತಿರ ಬಂದು ನನಗೆ ಮಾತನಾಡಿಸುತ್ತಾ ಒಮ್ಮಲೇ ನನ್ನ ಎರಡು ಕೈಗಳು ಹಿಡಿದು ನೆಲಕ್ಕೆ ನೂಕಿಸಿಕೊಟ್ಟಾಗ ನಾನು ಯಾಕೇ ನನ್ನ ಕೈಹಿಡಿದು ನೆಲಕ್ಕೆ ಕೆಡವಿದಿ ಎಂದು ಚೀರಾಡುತ್ತಿರುವಾಗ ಬಾಯಿಗೆ ಬಟ್ಟೆ ಒತ್ತಿ ಕುತ್ತಿಗೆ ಹಿಡಿದು ಚೀರಾಡಿದರೆ ಜೀವ ಖಲಾಸ ಮಾಡುತ್ತೇನೆ ಅಂತಾ ನನಗೆ ಜಬರದಸ್ತಿಯಿಂದ ಒಂದು ಬಾರಿ ಜಬರಿ ಸಂಭೋಗ ಮಾಡಿರುತ್ತಾನೆ. ನಂತರ ನಾನು ಕೆಡಸಿರುವ ವಿಷಯ ಯಾರಿಗಾದರೂ ತಿಳಿಸಿದರೆ ನಿನಗೆ ಖಲಾಸ ಮಾಡುತ್ತೇನೆ ಅಂದು ಅವನು ಅಲ್ಲಿಂದ ಓಡಿ ಹೋಗಿರುತ್ತಾನೆ. ನಂತರ ನಾನು ಬೇಹೋಷಾಗಿ ಬಿದ್ದಾಗ ಪಕ್ಕದ ಹೊಲದ ನಾಗಣ್ಣಾ ಪುಜಾರಿ ಆತನ ಹೆಂಡತಿ ಮಲ್ಲಮ್ಮ ಪುಜಾರಿ ಹಾಗು ರವಿ ಕಲಶೇಟ್ಟಿ ರವರು ಬಂದು ನನಗೆ ಎಬ್ಬಿಸಿ ನಮ್ಮ ಮನೆಗೆ ಕರೆದುಕೊಂಡು ಬಂದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

21 September 2016

KALABURAGI DISTRICT REPORTED CRIMES

ಗಾಂಜಾ ಜಪ್ತಿ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ : ದಿನಾಂಕ 19.09.2016 ರಂದು ಶ್ರೀ ಶ್ರೀಮಂತ ಇಲ್ಲಾಳ ಪಿ.ಎಸ್.ಐ ಜೇವರಗಿ ಪೊಲೀಸ್  ಠಾಣೆ ರವರು ಮಧ್ಯಾಹ್ನ 02:00 ಗಂಟೆಯ ಸುಮಾರಿಗೆ ಅವರಾದ ಸಿಮಾಂತರ  ಹೊಲದಲ್ಲಿ ಹತ್ತಿ ಬೆಳೆ ಇದ್ದ ಹೊಲದಲ್ಲಿ ಯಾವುದೆ ಪರವಾನಿಗೆ ಇಲ್ಲದೆ ಅಕ್ರಮವಾಗಿ ಗಾಂಜಾದ ಗಿಡಗಳನ್ನು ಬೆಳೆಸಿರುತ್ತಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪೊಲೀಸ್ ಉಪಾಧೀಕ್ಷಕರು ಗ್ರಾಮೀಣ ಉಪ ವಿಭಾಗ ಕಲಬುರಗಿ ರವರಿಗೆ ದಾಳಿ ಮಾಡಲು ಪರವಾನಿಗೆ ಪಡೆದುಕೊಂಡು ಮಾನ್ಯ ತಹಶೀಲದಾರ ರವರಿಗೆ ಮಾಹಿತಿ ತಿಳಿಸಿ ಜೇವರಗಿ ಪೊಲೀಸ್ ಠಾಣೆಗೆ ಬರಮಾಡಿಕೊಂಡು ಪಂಚರಾದ 1) ಶ್ರೀ ಕಲ್ಲಪ್ಪಗೌಡ ಮಾಲಿ ಪಾಟೀಲ ಗ್ರಾಮ ಲೇಖ ಪಾಲಕರು ಕೋಳಕೂರ ಮತ್ತು 2) ಶ್ರೀ ನಾಗಣ್ಣ ವಾಲಿಕಾರ್ ಸಾ|| ಅವರಾದ್ ಇವರಿಗೆ ಬರಮಾಡಿಕೊಂಡು ಠಾಣೆಯ ಸಿಬ್ಬಂದಿರವರಾದ ಶ್ರೀ ಮಲ್ಲಿಕಾರ್ಜುನ, ಶ್ರೀ ಗುರುಬಸಪ್ಪ , ಶ್ರೀ ಮಲ್ಲಿಕಾರ್ಜುನ ಭಾಸಗಿ, ಶ್ರೀ ರಾಜಕುಮಾರ, ಶ್ರೀ ಶಿವರಾಜ ರವರೊಂದಿಗೆ ಸಿಪಿಐ ಜೇವರಗಿ ವೃತ್ತ ರವರ ಮಾರ್ಗದರ್ಶನದಲ್ಲಿ ದಾಳಿ ಮಾಡಿ  ಅಂದಾಜು 200 ಗ್ರಾಂದಷ್ಟು ಹಸಿ ಗಾಂಜಾದ ಎಲೆಗಳು ಅಂ.ಕಿ 1000/- ರೂ ಜಪ್ತಿ ಮಾಡಿ ಜಪ್ತಿ ಪಂಚನಾಮೆಯೊಂದಿಗೆ ಠಾಣೆಗೆ ಬಂದು ಶಾಂತಪ್ಪ ತಂದೆ ಮಲ್ಲೇಶಪ್ಪ ತೆಗ್ಗಳ್ಳಿ ಸಾ|| ಚೆನ್ನೂರ ಈತನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕಳವು ಪ್ರಕರಣ:

ಮಹಾಗಾಂವ ಪೊಲೀಸ್ ಠಾಣೆ: ದಿನಾಂಕ:20/09/2016 ರಂದು ಮಹಾಗಾಂವ ಕ್ರಾಸನಲ್ಲಿ 2 ಜನರು ಒಂದು ಹೋರಿಯನ್ನು ಹೊಡೆದು ಕೊಂಡು ಬಂದು ಜಾವಿದ್ ಕುರೇಶಿ ಸಾ: ಮಹಾಗಾಂವ ರವರಿಗೆ ಮಾರಾಟ ಮಾಡುವುದಿದೆ ಎಂದು ಹೇಳಿದಾಗ  ಈ ಹೋರಿಯು ಯಾರದು ಎಂದು ಕೇಳಿದಾಗ ಅದಕ್ಕೆ ಆ ಇಬ್ಬರು ಅನುಮಾನಸ್ಪದವಾಗಿ ಉತ್ತರಿಸಿದ್ದರಿಂದ ಸಂಶಯ ಬಂದು ಹೋರಿಗೆ ಸಂಬಂಧಿಸಿದ ದಾಖಲಾತಿ ವಿಚಾರಿಸಿದಾಗ ಅದಕ್ಕೆ ಅವರು ನಮಗೆ ಖರ್ಚಿಗೆ ಹಣವಿಲ್ಲದ ಸಲುವಾಗಿ ಇಂದು ದಿನಾಂಕ:20/09/2016 ರಂದು ಬೆಳಿಗ್ಗೆ 6-00 ಗಂಟೆ ಸುಮಾರಿಗೆ ಕಲಬುರಗಿ ನಗರದ ಬಸವೇಶ್ವರ ಆಸ್ಪತ್ರೆ ಎದುರುಗಡೆ ಇರುವ ವಿದ್ಯಾ ನಗರದಲ್ಲಿನ ಮಲ್ಲಿಕಾರ್ಜುನ ದೇವಸ್ಥಾನದ ಅವರಣದಲ್ಲಿದ್ದ ಈ ಗೂಳಿಯನ್ನು ಕಳ್ಳತನ ಮಾಡಿಕೊಂಡು ಬಂದಿರುತ್ತೇವೆ. ಅಂತಾ ತಿಳಿಸಿದ್ದು ಸರಿದಯವರ ವಿರುದ್ದ ಕ್ರಮ ಕೈಕೊಳ್ಳಿವಂತೆ ಪೊಲೀಸ್ ಠಾಣೆಗೆ ಹಾಜರುಪಡಿಸಿದ ಮೇರೆಗೆ ಆ ಇಬ್ಬರ ವಿರುದ್ದ ಮಹಾಗಾಂವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

19 September 2016

Kalaburagi District Reported Crimes

ಅಪಘಾತ  ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ. 18-9-2016 ರಂದು ಸಂಜೆ 6-00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಗೆಳೆಯ ಗುಂಡಪ್ಪಾ ತಂದೆ ಗುರಣ್ಣ ಮರಗುತ್ತಿ ಇಬ್ಬರು ಕೂಡಿಕೊಂಡು  ಶಿರಗಾಪೂರ ಕ್ರಾಸವರಗೆ ನನ್ನ ಮೋಟಾರ ಸೈಕಲ್ ಮೇಲೆ ಹೋಗುವಾಗ ನಮ್ಮ ಗ್ರಾಮದ ಈರಣ್ಣಾ ತಂದೆ ಗುರುಶಾಂತ ಚೌಡಶಟ್ಟಿ ಇವರ ಹೊಲದ ಎದರುಗಡೆ ಹುಮನಾಬಾದ ರೋಡಿಗೆ ಸದರಿ ಮಾನಸಿಕ ಅಶ್ವಸ್ಥ  ಹುಚ್ಚ ಮಹಿಳೆ ವಯಸ್ಸು ಅಂದಾಜು 60-65 ವರ್ಷದವಳು ನಿಂತಿದ್ದಳು ರೋಡಿಗೆ ನಿಲ್ಲಬೇಡ ಪಕ್ಕದಲ್ಲಿ ರೋಡಿನ ಸೈಡಿಗೆ ನಿಲ್ಲು ಅಂತಾ ಹೇಳಿ ಹೋಗಿದ್ದು, ಕೆಲಸಮುಗಿಸಿಕೊಂಡು ಮರಳಿಊರಿಗೆ ಬರುತ್ತಿರುವಾಗ ಸದರಿ ಈರಣ್ಣಾ ಚೌಡಶಟ್ಟಿ ಹತ್ತಿರ ನಿಂತಿದ್ದ ಸದರಿ ಭಿಕ್ಷುಕಿ ಮಹಿಳೆಗೆ ಯಾವುದೋ ಭಾರಿ ವಾಹನವು ವೇಗವಾಗಿ ಬಂದು ನಿಸ್ಕಾಳಜಿ ತನದಿಂದ ಓಡಿಸಿಕೊಂಡು ಬಂದು ಅವಳಿಗೆ ಡಿಕ್ಕಿ ಹೊಡೆದು ಅವಳ ಮೈ ಮೇಲಿಂದ ಹಾಯಿಸಿಕೊಂಡು ಹೊಗಿದ್ದು ಅಲ್ಲದೆರೋಡಿಗೆ ಹೋಗುವ ವಾಹನಗಳು ಅವಳಮೈಮೆಲಿಂದ ಹೋಗಿದ್ದರಿಂದತಲೆಪೂರ್ತಿ ಚಚ್ಚಿ ಹೊಗಿದ್ದು ಮಾಂಸಖಂಡಗಳು ಕಾಣುತಿದ್ದು,ಎದೆಕಾಣುತಿದ್ದು  ಎಡಗಲುಸಾಬಿತಿದು ,ಬಲಗಾಲು ಪಾದ ಮಾತ್ರ ಕಾಣುತಿದೆ. ಉಳಿದೆ ಲ್ಲಾಬಾಗಗಳು ಮಾಸಖಂಡಗಳು ಹೊರಬಂದು ಪೂರ್ತಿ ಜಜ್ಜಿ ಹೋಗಿದ್ದು ಇರುತ್ತದೆ. ಈ ಘಟನೆಯು ರಾತ್ರಿ 8-30 ಪಿ.ಎಂ.ಕ್ಕೆ. ಸಂಭವಿಸಿರಬಹುದು. ಆದುದರಿಂದ ಸದರಿ ಮಾನಸಿಕ ಅಶ್ವಸ್ಥ,ಭಿಕ್ಷುಕಿ ಮಹಿಳೆ ವಯಸ್ಸು ಅಂದಾಜು 60-65 ವರ್ಷದವಳು ಹೆಸರು ವಿಳಾಸ ಗೊತ್ತಾಗಿರುವದಿಲ್ಲಾ,ಇವಳು ಸೋಮನಾಧ ತಂದೆ ರೇವಣಸಿದ್ದಪ್ಪಾ ಹತ್ತಕಂಕಣ ಪೂಜಾರಿ  ಹೊಲದ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ ಕಲಬುರಗಿ ಕಡೆಯಿಂದ ಯಾವುದೋಭಾರಿವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ನಿಸ್ಕಾಳಜಿ ತನದಿಂದ ನಡೆಯಿಸಿ ಕೊಂಡು ಬಂದು ಅವಳ ಮೈಮೇಲೆ ಹಾಯಿಸಿಕೊಂಡು ಹೋಗಿದ್ದು ಅವಳು ಸ್ಥಳದಲ್ಲಿ ಮೃತ ಪಟ್ಟಿದ್ದು ಅವಳ ಮೈ ಮೇಲೆ  ರೋಡಿಗೆ ಹೋಗುವ ವಾಹನಗಳು ಹೋಗಿದ್ದರಿಂದ ದೇಹವು ಪೂರ್ತಿ ಜಜ್ಜಿ ಹೋಗಿ ಮಾಂಸ ಖಂಡಗಳು ಹೋರ ಬಂದು ಮೃತಪಟ್ಟಿರುತ್ತಾಳೆ ಅಂತಾ  ಶ್ರೀ ಸೂರ್ಯಕಾಂತ ತಂದೆ ರೇವಣಸಿದ್ದಪ್ಪಾ ತೆಗನೂರ  ಸಾ;ಅವರಾಧ (ಬಿ) ತಾ;ಜಿ;ಕಲುಬರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.