POLICE BHAVAN KALABURAGI

POLICE BHAVAN KALABURAGI

21 September 2016

KALABURAGI DISTRICT REPORTED CRIMES

ಗಾಂಜಾ ಜಪ್ತಿ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ : ದಿನಾಂಕ 19.09.2016 ರಂದು ಶ್ರೀ ಶ್ರೀಮಂತ ಇಲ್ಲಾಳ ಪಿ.ಎಸ್.ಐ ಜೇವರಗಿ ಪೊಲೀಸ್  ಠಾಣೆ ರವರು ಮಧ್ಯಾಹ್ನ 02:00 ಗಂಟೆಯ ಸುಮಾರಿಗೆ ಅವರಾದ ಸಿಮಾಂತರ  ಹೊಲದಲ್ಲಿ ಹತ್ತಿ ಬೆಳೆ ಇದ್ದ ಹೊಲದಲ್ಲಿ ಯಾವುದೆ ಪರವಾನಿಗೆ ಇಲ್ಲದೆ ಅಕ್ರಮವಾಗಿ ಗಾಂಜಾದ ಗಿಡಗಳನ್ನು ಬೆಳೆಸಿರುತ್ತಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪೊಲೀಸ್ ಉಪಾಧೀಕ್ಷಕರು ಗ್ರಾಮೀಣ ಉಪ ವಿಭಾಗ ಕಲಬುರಗಿ ರವರಿಗೆ ದಾಳಿ ಮಾಡಲು ಪರವಾನಿಗೆ ಪಡೆದುಕೊಂಡು ಮಾನ್ಯ ತಹಶೀಲದಾರ ರವರಿಗೆ ಮಾಹಿತಿ ತಿಳಿಸಿ ಜೇವರಗಿ ಪೊಲೀಸ್ ಠಾಣೆಗೆ ಬರಮಾಡಿಕೊಂಡು ಪಂಚರಾದ 1) ಶ್ರೀ ಕಲ್ಲಪ್ಪಗೌಡ ಮಾಲಿ ಪಾಟೀಲ ಗ್ರಾಮ ಲೇಖ ಪಾಲಕರು ಕೋಳಕೂರ ಮತ್ತು 2) ಶ್ರೀ ನಾಗಣ್ಣ ವಾಲಿಕಾರ್ ಸಾ|| ಅವರಾದ್ ಇವರಿಗೆ ಬರಮಾಡಿಕೊಂಡು ಠಾಣೆಯ ಸಿಬ್ಬಂದಿರವರಾದ ಶ್ರೀ ಮಲ್ಲಿಕಾರ್ಜುನ, ಶ್ರೀ ಗುರುಬಸಪ್ಪ , ಶ್ರೀ ಮಲ್ಲಿಕಾರ್ಜುನ ಭಾಸಗಿ, ಶ್ರೀ ರಾಜಕುಮಾರ, ಶ್ರೀ ಶಿವರಾಜ ರವರೊಂದಿಗೆ ಸಿಪಿಐ ಜೇವರಗಿ ವೃತ್ತ ರವರ ಮಾರ್ಗದರ್ಶನದಲ್ಲಿ ದಾಳಿ ಮಾಡಿ  ಅಂದಾಜು 200 ಗ್ರಾಂದಷ್ಟು ಹಸಿ ಗಾಂಜಾದ ಎಲೆಗಳು ಅಂ.ಕಿ 1000/- ರೂ ಜಪ್ತಿ ಮಾಡಿ ಜಪ್ತಿ ಪಂಚನಾಮೆಯೊಂದಿಗೆ ಠಾಣೆಗೆ ಬಂದು ಶಾಂತಪ್ಪ ತಂದೆ ಮಲ್ಲೇಶಪ್ಪ ತೆಗ್ಗಳ್ಳಿ ಸಾ|| ಚೆನ್ನೂರ ಈತನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕಳವು ಪ್ರಕರಣ:

ಮಹಾಗಾಂವ ಪೊಲೀಸ್ ಠಾಣೆ: ದಿನಾಂಕ:20/09/2016 ರಂದು ಮಹಾಗಾಂವ ಕ್ರಾಸನಲ್ಲಿ 2 ಜನರು ಒಂದು ಹೋರಿಯನ್ನು ಹೊಡೆದು ಕೊಂಡು ಬಂದು ಜಾವಿದ್ ಕುರೇಶಿ ಸಾ: ಮಹಾಗಾಂವ ರವರಿಗೆ ಮಾರಾಟ ಮಾಡುವುದಿದೆ ಎಂದು ಹೇಳಿದಾಗ  ಈ ಹೋರಿಯು ಯಾರದು ಎಂದು ಕೇಳಿದಾಗ ಅದಕ್ಕೆ ಆ ಇಬ್ಬರು ಅನುಮಾನಸ್ಪದವಾಗಿ ಉತ್ತರಿಸಿದ್ದರಿಂದ ಸಂಶಯ ಬಂದು ಹೋರಿಗೆ ಸಂಬಂಧಿಸಿದ ದಾಖಲಾತಿ ವಿಚಾರಿಸಿದಾಗ ಅದಕ್ಕೆ ಅವರು ನಮಗೆ ಖರ್ಚಿಗೆ ಹಣವಿಲ್ಲದ ಸಲುವಾಗಿ ಇಂದು ದಿನಾಂಕ:20/09/2016 ರಂದು ಬೆಳಿಗ್ಗೆ 6-00 ಗಂಟೆ ಸುಮಾರಿಗೆ ಕಲಬುರಗಿ ನಗರದ ಬಸವೇಶ್ವರ ಆಸ್ಪತ್ರೆ ಎದುರುಗಡೆ ಇರುವ ವಿದ್ಯಾ ನಗರದಲ್ಲಿನ ಮಲ್ಲಿಕಾರ್ಜುನ ದೇವಸ್ಥಾನದ ಅವರಣದಲ್ಲಿದ್ದ ಈ ಗೂಳಿಯನ್ನು ಕಳ್ಳತನ ಮಾಡಿಕೊಂಡು ಬಂದಿರುತ್ತೇವೆ. ಅಂತಾ ತಿಳಿಸಿದ್ದು ಸರಿದಯವರ ವಿರುದ್ದ ಕ್ರಮ ಕೈಕೊಳ್ಳಿವಂತೆ ಪೊಲೀಸ್ ಠಾಣೆಗೆ ಹಾಜರುಪಡಿಸಿದ ಮೇರೆಗೆ ಆ ಇಬ್ಬರ ವಿರುದ್ದ ಮಹಾಗಾಂವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

19 September 2016

Kalaburagi District Reported Crimes

ಅಪಘಾತ  ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ. 18-9-2016 ರಂದು ಸಂಜೆ 6-00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಗೆಳೆಯ ಗುಂಡಪ್ಪಾ ತಂದೆ ಗುರಣ್ಣ ಮರಗುತ್ತಿ ಇಬ್ಬರು ಕೂಡಿಕೊಂಡು  ಶಿರಗಾಪೂರ ಕ್ರಾಸವರಗೆ ನನ್ನ ಮೋಟಾರ ಸೈಕಲ್ ಮೇಲೆ ಹೋಗುವಾಗ ನಮ್ಮ ಗ್ರಾಮದ ಈರಣ್ಣಾ ತಂದೆ ಗುರುಶಾಂತ ಚೌಡಶಟ್ಟಿ ಇವರ ಹೊಲದ ಎದರುಗಡೆ ಹುಮನಾಬಾದ ರೋಡಿಗೆ ಸದರಿ ಮಾನಸಿಕ ಅಶ್ವಸ್ಥ  ಹುಚ್ಚ ಮಹಿಳೆ ವಯಸ್ಸು ಅಂದಾಜು 60-65 ವರ್ಷದವಳು ನಿಂತಿದ್ದಳು ರೋಡಿಗೆ ನಿಲ್ಲಬೇಡ ಪಕ್ಕದಲ್ಲಿ ರೋಡಿನ ಸೈಡಿಗೆ ನಿಲ್ಲು ಅಂತಾ ಹೇಳಿ ಹೋಗಿದ್ದು, ಕೆಲಸಮುಗಿಸಿಕೊಂಡು ಮರಳಿಊರಿಗೆ ಬರುತ್ತಿರುವಾಗ ಸದರಿ ಈರಣ್ಣಾ ಚೌಡಶಟ್ಟಿ ಹತ್ತಿರ ನಿಂತಿದ್ದ ಸದರಿ ಭಿಕ್ಷುಕಿ ಮಹಿಳೆಗೆ ಯಾವುದೋ ಭಾರಿ ವಾಹನವು ವೇಗವಾಗಿ ಬಂದು ನಿಸ್ಕಾಳಜಿ ತನದಿಂದ ಓಡಿಸಿಕೊಂಡು ಬಂದು ಅವಳಿಗೆ ಡಿಕ್ಕಿ ಹೊಡೆದು ಅವಳ ಮೈ ಮೇಲಿಂದ ಹಾಯಿಸಿಕೊಂಡು ಹೊಗಿದ್ದು ಅಲ್ಲದೆರೋಡಿಗೆ ಹೋಗುವ ವಾಹನಗಳು ಅವಳಮೈಮೆಲಿಂದ ಹೋಗಿದ್ದರಿಂದತಲೆಪೂರ್ತಿ ಚಚ್ಚಿ ಹೊಗಿದ್ದು ಮಾಂಸಖಂಡಗಳು ಕಾಣುತಿದ್ದು,ಎದೆಕಾಣುತಿದ್ದು  ಎಡಗಲುಸಾಬಿತಿದು ,ಬಲಗಾಲು ಪಾದ ಮಾತ್ರ ಕಾಣುತಿದೆ. ಉಳಿದೆ ಲ್ಲಾಬಾಗಗಳು ಮಾಸಖಂಡಗಳು ಹೊರಬಂದು ಪೂರ್ತಿ ಜಜ್ಜಿ ಹೋಗಿದ್ದು ಇರುತ್ತದೆ. ಈ ಘಟನೆಯು ರಾತ್ರಿ 8-30 ಪಿ.ಎಂ.ಕ್ಕೆ. ಸಂಭವಿಸಿರಬಹುದು. ಆದುದರಿಂದ ಸದರಿ ಮಾನಸಿಕ ಅಶ್ವಸ್ಥ,ಭಿಕ್ಷುಕಿ ಮಹಿಳೆ ವಯಸ್ಸು ಅಂದಾಜು 60-65 ವರ್ಷದವಳು ಹೆಸರು ವಿಳಾಸ ಗೊತ್ತಾಗಿರುವದಿಲ್ಲಾ,ಇವಳು ಸೋಮನಾಧ ತಂದೆ ರೇವಣಸಿದ್ದಪ್ಪಾ ಹತ್ತಕಂಕಣ ಪೂಜಾರಿ  ಹೊಲದ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ ಕಲಬುರಗಿ ಕಡೆಯಿಂದ ಯಾವುದೋಭಾರಿವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ನಿಸ್ಕಾಳಜಿ ತನದಿಂದ ನಡೆಯಿಸಿ ಕೊಂಡು ಬಂದು ಅವಳ ಮೈಮೇಲೆ ಹಾಯಿಸಿಕೊಂಡು ಹೋಗಿದ್ದು ಅವಳು ಸ್ಥಳದಲ್ಲಿ ಮೃತ ಪಟ್ಟಿದ್ದು ಅವಳ ಮೈ ಮೇಲೆ  ರೋಡಿಗೆ ಹೋಗುವ ವಾಹನಗಳು ಹೋಗಿದ್ದರಿಂದ ದೇಹವು ಪೂರ್ತಿ ಜಜ್ಜಿ ಹೋಗಿ ಮಾಂಸ ಖಂಡಗಳು ಹೋರ ಬಂದು ಮೃತಪಟ್ಟಿರುತ್ತಾಳೆ ಅಂತಾ  ಶ್ರೀ ಸೂರ್ಯಕಾಂತ ತಂದೆ ರೇವಣಸಿದ್ದಪ್ಪಾ ತೆಗನೂರ  ಸಾ;ಅವರಾಧ (ಬಿ) ತಾ;ಜಿ;ಕಲುಬರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

16 September 2016

Kalaburagi District Police.

ಪತ್ರಿಕಾ ಪ್ರಕಟಣೆ
          ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಬ್‌‌-ಇನ್ಸಪೆಕ್ಟರ್‌ ವೃಂದದ ವಿವಿಧ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಅಧಿಸೂಚನೆಗಳನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿ. ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿರುತ್ತದೆ. ಅರ್ಹ ಅಭ್ಯರ್ಥಿಗಳಿಂದ ದಿನಾಂಕ;19-09-2016 ರಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದ್ದು, ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸುವ ವಿಧಾನ, ವಯೋಮಿತಿ, ವಿದ್ಯಾರ್ಹತೆ ಸಹಿಷ್ಣತೆ ಮತ್ತು ದೇಹದಾರ್ಡೃತೆ ಪರೀಕ್ಷೆ, ಲಿಖಿತ ಪರೀಕ್ಷೆ, ಮೌಖಿಕ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಯ ಕುರಿತು ಮಾಹಿತಿಗಾಗಿ ಇಲಾಖೆಯ ಅಧಿಕೃತ ವೆಬ್‌ಸೈಟ್‌‌ www.ksp.gov.in ನಲ್ಲಿ ನೋಡಬಹುದಾಗಿರುತ್ತದೆ.
ಈ ಕೆಳಕಂಡ ಸಬ್‌-ಇನ್ಸ್‌ಪೆಕ್ಟರ್‌‌ ವೃಂದದ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಾಗಿರುತ್ತದೆ.
ಕ್ರಮ
ಸಂಖ್ಯೆ
ಹುದ್ದೆ
ಹುದ್ದೆಗಳ ಸಂಖ್ಯೆ
1.        
ಸಶಸ್ತ್ರ ಮೀಸಲು ಪೊಲೀಸ್ ಸಬ್‌‌-ಇನ್ಸ್‌ಪೆಕ್ಟರ್‌ (ಸಿ.ಎ.ಆರ್‌‌/ಡಿಎಆರ್‌) (ಪುರುಷ)
90
2.        
ಪೊಲೀಸ್ ಸಬ್‌‌-ಇನ್ಸ್‌ಪೆಕ್ಟರ್‌ (ವೈರ್‌ಲೆಸ್‌‌) (ಪುರುಷ&ಮಹಿಳಾ)
28
3.        
ಪೊಲೀಸ್ ಸಬ್‌‌-ಇನ್ಸ್‌ಪೆಕ್ಟರ್‌ (ಸಿವಿಲ್‌) (ಪುರುಷ&ಮಹಿಳಾ)
398
4.        
ವಿಶೇಷ ಮೀಸಲು ಸಬ್‌‌-ಇನ್ಸ್‌ಪೆಕ್ಟರ್‌ (ಕೆ.ಎಸ್‌.ಆರ್‌.ಪಿ ) (ಪುರುಷ)
28

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ದೂರವಾಣಿ ಸಂಖ್ಯೆ: 080-22943346 ಸಂಪರ್ಕಿಸಬಹುದಾಗಿರುತ್ತದೆ.

ಸಬ್- ಇನ್ಸಪೆಕ್ಟರ ಮತ್ತು ಕಾನ್ಸಟೇಬಲ್ ಹುದ್ದೆಗಳ ನೇಮಕಾತಿಗೆ ಸಂಬಂದಿಸಿದಂತೆ ಅಭ್ಯರ್ಥಿಗಳು ಈ ಕೆಳಕಂಡ ವಿಷಯಗಳ ಬಗ್ಗೆ ಗಮನವಹಿಸತಕ್ಕದ್ದು
1) ಅಬ್ಯರ್ಥಿಗಳು ನೇಮಕಾತಿ ಸಲುವಾಗಿ ಪ್ರಕಟಿಸಲಾದ ಅಧಿಸೂಚನೆಯನ್ನು ಓದಿಕೊಳ್ಳತಕ್ಕದ್ದು.
2) ಅರ್ಜಿಯನ್ನು ಭರ್ತಿ ಮಾಡುವ ಮುನ್ನ ಅಧಿಸೂಚನೆಯಲ್ಲಿ ತಿಳಿಸಲಾಗಿರುವ ಅಂಶಗಳನ್ನು ಓದಿಕೊಂಡು ಅರ್ಜಿಯನ್ನು ಸರಿಯಾಗಿ ಭರ್ತಿ ಮಾಡತಕ್ಕದ್ದು.
3) ಪವರ್ಗ, ಗ್ರಾಮೀಣ, ಕನ್ನಡ.ಪಿಡಿಪಿ  ಹಾಗು ಇತರೆ ಪ್ರಮಾಣ ಪತ್ರಗಳನ್ನು ಅರ್ಜಿ ಸಲ್ಲಿಸಲು ನಿಗದಿಡಿಸಿರುವ ಕೊನೆಯ ದಿನಾಂಕದೊಳಗಾಗಿ ಪಡೆದುಕೊಂಡು ಅರ್ಜಿಯನ್ನು ಸಲ್ಲಿಸತಕ್ಕದ್ದು ನಿಗದಿತ ದಿನಾಂಕದ ನಂತರ ಪಡೆದ ಪ್ರಮಾಣ ಪತ್ರಗಳನ್ನು ಪರಿಗಣಿಸುಲಾಗುವದಿಲ್ಲ.
4) ಅರ್ಹತಾ ಪರೀಕ್ಷೆಯ ಅಂಕಗಳನ್ನು ಅರ್ಜಿಯಲ್ಲಿ ನಿಗದಿಪಡಿಸಿರುವ ಸ್ಥಳದಲ್ಲಿ ಸರಿಯಾಗಿ ಭರ್ತಿ ಮಾಡತಕ್ಕದ್ದು ಒಂದು ವೇಳೆ ಅಂಕಗಳನ್ನು ತಪ್ಪಾಗಿ ಭರ್ತಿ ಮಾಡಿ ನಂತರ ಬದಲವಣೆಗೆ ಕೋರಿದಲ್ಲಿ ಬದಲಾವಣೆ ಮಾಡಲು ಅವಕಾಶವಿರುವದಿಲ್ಲ.
5)  ಸಹಿಷ್ಣುತೆ ಪರೀಕ್ಷೆಗೆ ಹಾಜರಾಗುವ ಮುನ್ನ ಅಭ್ಯರ್ಥಿಗಳು ದೈಹಿಕವಾಗಿ ಸದೃಡರಿರಬೇಕು. ಎಲ್ಲಾ ರೀತಿಯಿಂದಲು ಪೂರ್ವ ತಯ್ಯಾರಿ ನಡಿಸಿಕೊಂಡಿರಬೇಕು. ಸಹಿಷ್ಣುತೆ ಪರೀಕ್ಷೆಯ ಸಂದರ್ಭದಲ್ಲಿ  ಸಂಬವಿಸುವ ಯಾವದೇ ರೀತಿಯ ಅನಾಹುತ/ ತೊಂದರೆಗೆಳಿಗೆ ಪೊಲೀಸ ಇಲಾಖೆ/ ನೇಮಕಾತಿ ಸಮೀತಿಯುವ ಜವಾಬ್ದಾರರಾಗಿರುವದಿಲ್ಲ.
6) ನೇಮಕಾತಿ ಪ್ರಕ್ರಿಯನ್ನು ಸಂಪೂರ್ಣವಾಗಿ ಪಾರದರ್ಶಕ , ಗಣಕಿಕೃತ , ವಸ್ತು ನಿಷ್ಟ, ಅರ್ಹತೆ , ಮತ್ತು ಮಿಸಲಾತಿಯ ಆಧಾರದ ಮೇಲೆ ನಡೆಸಲಾಗುವುದು. ಆದ್ದರಿಂದ ಅಬ್ಯರ್ಥಿಗಳು ಯಾವದೇ ಪ್ರಭಾವಿ ವ್ಯಕ್ತಿಗಳ ಒತ್ತಡಕ್ಕೆ ಒಳಗಾಗಬಾರದು. ಈ ರೀತಿಯ ಒತ್ತಡಗಳು ಬಂದಲ್ಲಿ ಸ್ಥಳಿಯ ಪೊಲೀಸರಿಗೆ ದೂರು ನೀಡತಕ್ಕದ್ದು. ಯಾವದೇ ಪ್ರಭಾವಿ ವ್ಯಕ್ತಿಗಳಿಂದ ಒತ್ತಡ ತಂದಲ್ಲಿ ಅದನ್ನು ಈ ಇಲಾಖೆಯ ಕಾರ್ಯನಿರ್ವಹಣೆಯ ಅಡಚಣೆಯೆಂದು ಪರಿಗಣಿಸಲಾಗುವುದು.
ನೇಮಕಾತಿ ಪ್ರಕ್ರಿಯೆಗಳಿಗೆ ಸಂಬಂದಿಸಿದಂತೆ ಹೆಚ್ಚಿನ ಮಾಹಿತಿಯ ಸಲುವಾಗಿ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡತಕ್ಕದ್ದು.
ಸಹಾಯವಾಣಿ ಸಂಖ್ಯೆ  080-22943356/22943345