POLICE BHAVAN KALABURAGI

POLICE BHAVAN KALABURAGI

12 September 2016

Kalaburagi District Reported Crimes

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಈರಣ್ಣಾ ತಂದೆ ನಿಂಗಣ್ಣಾ ಗುಗ್ಗರಿ  ಸಾ: ಮಾಹಾದೇವ ಗುಡಿ ಹತ್ತಿರ ಭವಾನಿ ನಗರ ಕಲಬುರಗಿ ರವರ ತಮ್ಮನಾದ ಶರಣು ಇತನು  ಬಿ.ಕಾಂ. ಅಂತಿಮ ವರ್ಷದಲ್ಲಿ  ಕೆಲವು ವಿಷಯಗಳಲ್ಲಿ ಫೇಲಾಗಿದ್ದು, ಯಾವದೇ ಕೆಲಸ ಮಾಡದೇ ಊಡಾಳ ಗೆಳೆಯರಾದ  ವಿಶ್ವನಾಥ ಕೋನಕಟ್ಟಿ, ಶಿವಶರಣಪ್ಪ ಚಿಂಚನಸೂರ, ಶ್ರೀಕಾಂತ ಬೆಂಗಳೂರೆ, ಅಂಬರೀಷ ರಾಮ ನಗರ, ರೇವಣಸಿದ್ಧ ಬಸವ ನಗರ, ಶಂಕರ ಪಾಟೀಲ ಓಂ ನಗರ, ಸಂದೀಪ ರಾಮ ನಗರ, ಪ್ರಭು ಶಹಾಬಜಾರ, ಗ್ಯಾಸ ನಾಗು, ಶ್ರವಣ ಮತ್ತು ನಾಗು ಗೌಡರ, ಇವರೊಂದಿಗೆ ಹೆಚ್ಚಾಗಿ ಓಡಾಡಿಕೊಂಡು ಇದ್ದು ದಿನಾಂಕ  10/09/2016 ರಂದು ರಾತ್ರಿ  11-00  ಗಂಟೆ ಸುಮಾರಿಗೆ  ನಾನು ಮನೆಯಲ್ಲಿ ಇದ್ದಾಗ  ನನ್ನ ತಮ್ಮನಾದ ಶರಣು ಇತನ ಗೆಳೆಯರು ಯಾರೋ ಒಬ್ಬರು ನಮ್ಮ ಮನೆಗೆ ಬಂದು  ನಮ್ಮ ತಮ್ಮ ಶರಣು ಇತನಿಗೆ ಕರೆದುಕೊಂಡು ಹೋಗಿರುತ್ತಾರೆ. ರಾತ್ರಿಯಾದರೂ ಸಹಾ ನನ್ನ ತಮ್ಮ ಶರಣು  ಮನೆಗೆ ಮರಳಿ ಬಂದಿರುವುದಿಲ್ಲಾದಿನಾಂಕ 11/09/2016  ರಂದು ಬೆಳಿಗ್ಗೆ 06-30  ಗಂಟೆ ಸುಮಾರಿಗೆ ನಮ್ಮ ಪಕ್ಕದ ಮನೆಯ ಮೌನೇಶ ಇತನು ನಮ್ಮ ಮನೆಗೆ ಬಂದು ತಿಳಿಸಿದ್ದೆನೆಂದೆರೆ, ನನ್ನ ತಮ್ಮನಾದ ಶರಣು ಇತನಿಗೆ ರಾಮ ನಗರದ ವಿನಾಯಕ ಸಲಗರ ಇವರ ಮನೆ ಹಿಂದೆ ಇರುವ  ಖುಲ್ಲಾ ಜಾಗೆಯಲ್ಲಿ  ಯಾರೋ ಕಲ್ಲುಗಳು ತಲೆಯ ಮೇಲೆ ಎತ್ತಿ ಹಾಕಿ ಕೊಲೆ ಮಾಡಿರುತ್ತಾರೆ ಅಂತಾ ತಿಳಿಸಿದನು. ಆಗ  ನಾನು ಮತ್ತು ನಮ್ಮ ಮನೆಯವರು ಕೂಡಿಕೊಂಡು ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ತಮ್ಮ ಶರಣು ಇತನು ಕೊಲೆಯಾಗಿ ಬೋರಲಾಗಿ ಬಿದ್ದಿದ್ದು, ತಲೆಯ ಪಕ್ಕದಲ್ಲಿ ಒಂದು ದೊಡ್ಡ  ಶಹಾಬಾದ  ಪೇಚಿಂಗ ಕಲ್ಲು ಮತ್ತು ಒಂದು ದೊಡ್ಡ ಕಲ್ಲು ಬಿದ್ದಿದ್ದು. ಶರಣು ಇತನಿಗೆ ನೋಡಲಾಗಿ ಅವನ ತಲೆಯ ಹಿಂಭಾಗದಲ್ಲಿ ಬಲ ಕಿವಿಯ ಹಿಂದೆ ಭಾರಿ ರಕ್ತಗಾಯ, ನಡು ತಲೆಯಲ್ಲಿ ಭಾರಿ ರಕ್ತಗಾಯ, ಬಲಭುಜದ ಹಿಂಭಾಗದಲ್ಲಿ  ರಕ್ತಗಾಯ, ಬಲಗೈ ರಟ್ಟೆಗೆ ರಕ್ತಗಾಯ, ಬಲಗೈ ಮೊಳಕೈ ಕೆಳೆಗೆ  ರಕ್ತಗಾಯ, ಬಲಗೈ ಹಸ್ತದ ಒಳಭಾಗದಲ್ಲಿ  ರಕ್ತಗಾಯ, ಎಡಗೈ ಮುಂಗೈಗೆ ರಕ್ತಗಾಯ, ಗದ್ದಕ್ಕೆ ಭಾರಿ ರಕ್ತಗಾಯ, ಎಡ ಹಣೆಗೆ ಭಾರಿ ರಕ್ತಗಾಯ, ಎದೆಗೆ ಭಾರಿ ರಕ್ತಗಾಯ, ಮುಖ ಜಜ್ಜಿದ್ದು ಚಪ್ಪಟೆಯಾಗಿರುತ್ತದೆ. ಇದನ್ನೆಲ್ಲಾ ನೋಡಲಾಗಿ ನನ್ನ ತಮ್ಮ  ಶರಣು ಇತನ ಜೊತೆಯಲ್ಲಿ ಓಡಾಡುತ್ತಿದ್ದವರಲ್ಲಿ  ಯಾರೋ ಜನರು  ಯಾವುದೋ ಕಾರಣಕ್ಕಾಗಿ ಮತ್ತು ಯಾವುದೋ ದ್ವೇಷದಿಂದ ಕಲ್ಲುಗಳನ್ನು ತಲೆಯ ಮೇಲೆ. ಎದೆಯ ಮೇಲೆ, ಕೈ ಕಾಲುಗಳ ಮೇಲೆ ಎತ್ತಿ  ಹಾಕಿ  ಹೊಡೆದು ಕೊಲೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.     
ಅಸ್ವಾಭಾವಿಕ ಸಾವು ಪ್ರಕರಣಗಳು :
ಫರತಾಬಾದ ಠಾಣೆ : ದಿನಾಂಕ 11/09/16 ರಂದು ಮುಂಜಾನೆ 11 ಗಂಟೆಯ ಸುಮಾರಿಗೆ  ನಮ್ಮೂರಿನಲ್ಲಿ ಕೆಲವು ಜನರು  ನನ್ನ ಹೊಲದ ಹತ್ತಿರ ಹಳ್ಳದ ನೀರಿನಲ್ಲಿ  ಒಬ್ಬ ವ್ಯಕ್ತಿಯ ಶವ ನೀರಿನಲ್ಲಿ ಹರಿದು ಬಂದು  ಹಳ್ಳದ ದಡದಲ್ಲಿ ಪೋದೆಗಳಲ್ಲಿ  ತಟ್ಟಿ ನೀತಿರುತ್ತದೆ ಅಂತಾ ಅಂದಾಡುವುದನ್ನು ಕೇಳಿ ನಾನು ಮತ್ತು ನನ್ನ ಪಕ್ಕದ ಹೊಲದವರಾದ ಉಸ್ಮಾಸಾಬ ಮೋಜಿನ್ಅಮೀರಪಟೇಲ  ಮಾಲಿ ಪಾಟೀಲ ಇವರೊಂದಿಗೆ ಹೋಗಿ ನೋಡಲಾಗಿ ವಿಷಯ ನಿಜವಿದ್ದು ಸುಮಾರು 40-45 ವರ್ಷದ ಗಂಡು ಮನುಷ್ಯನ ಶವ ಇದ್ದು ಶವ ಪೂರ್ತಿಯಾಗಿ ಕೊಳೆತು ಹೋಗಿ ಎಲಬು & ತಲೆ ಬುರೆ ಇದ್ದು ಶವದ ಮೈಮೇಲೆ ಒಂದು ದೋತ್ರ & ಒಂದು ನೆಹರು ಶರ್ಟ ಬಟ್ಟೆಗಳಿರುತ್ತವೆ ವ್ಯಕ್ತಿ  ಮೃತಪಟ್ಟಿದ್ದು  ಸುಮಾರು ಒಂದು ತಿಂಗಳ  ಗತಿಸಿರಬಹುದು ಇತನು ಯಾರು ಎಲ್ಲಿಂದ ಬಂದ ಹೇಗೆ ಮೃತಪಟ್ಟ ಎಂಬುವದು ನನಗೆ ಗೋತ್ತಾಗಿರುವುದಿಲ್ಲಾ.  ಹಳ್ಳದ ನೀರಿನಲ್ಲಿ  ಮುಳಗಿ ಮೃತಪಟ್ಟಂತೆ  ಕಂಡುಬರುತ್ತದೆ ಈತನ ಸಾವಿನಲ್ಲಿ  ನನಗೆ ಸಂಶಯ ಕಂಡುಬರುತ್ತದೆ ಅಂತಾ ಶ್ರೀ  ಸಂಗನಗೌಡ ತಂದೆ ಭೀಮರಾಯಗೌಡ ಅಲ್ಲಾಪೂರ ಸಾ:ಸೀತನೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ನರೋಣಾ ಠಾಣೆ : ದಿನಾಂಕ:- 10/09/2016 ರಂದು ರಾತ್ರಿ ನಮ್ಮ ಚಿಕ್ಕಪ್ಪನ ಮಗನಾದ ವಿಜಯಬಹದ್ದೂರ ಈತನು ಬಹಳಷ್ಟು ಸರಾಯಿ ಕೂಡಿದು ಬಂದು ಊಟ ಮಾಡದೆ ಹಾಗೇ ಪತ್ರಾ ಶೆಡ್ಡಿನ ಹೊರಗೆ ಜೋಡಿಸಿದ ಸಿಮೆಂಟ್ ಕಂಬಗಳ ಮೇಲೆ ಮಲಗಿಕೊಂಡಿದ್ದು ನಾವೇಲ್ಲರು ಸೇರಿ ರಾತ್ರಿ 9:00 ಗಂಟೆಯ ಸುಮಾರಿಗೆ ಅವನನ್ನು ಊಟಕ್ಕೆ ಎಬ್ಬಿಸಿದೇವು ಆದರೆ ಅವನು ಊಟ ಮಾಡದೆ ಹಾಗೇ ಮಲಗಿಕೊಂಡನು ಅಲ್ಲದೆ ವಿಜಯಬಹದ್ದೂರ ಈತನು ಹಿಂದೆಯು ಆಗಾಗ ವಿಪರೀತ ಸರಾಯಿ ಕೂಡಿದು ಬಸ್ ನಿಲ್ದಾಣದ ಹತ್ತಿರ ದಾಬಾಗಳ ಹತ್ತಿರ ಮತ್ತು ರಸ್ತೆಯ ಪಕ್ಕದ ಹತ್ತಿರ ಇರುವ ಗಿಡಗಳ ಕೆಳಗೆ ಮಲಗುವುದು ಮಾಡುತ್ತಿದ್ದನು ನಾವು ಅವನಿಗೆ ರೀತಿ ಕೂಡಿಯುವುದು ಸರಿ ಅಲ್ಲಾ ಇದರಿಂದ ಆರೋಗ್ಯ ಕೆಡುತ್ತದೆ ಮತ್ತು ಹಣವುಕೂಡಾ ತುಂಬಾ ಕರ್ಚಾಗುತ್ತದೆ ಎಂದು ತಿಳಿಸಿ ಹೇಳಿದರು ಸಹ ನಿನ್ನೆ ರಾತ್ರಿ ವಿಪರಿತವಾಗಿ ಸರಾಯಿ ಕುಡಿದು ಬಂದು ಊಟಮಾಡದೆ ಹಾಗೇ ಮಲಗಿಕೊಂಡಿದ್ದನು ಮುಂಜಾನೆ 06:00 ಗಂಟೆಯ ಸುಮಾರಿಗೆ ನಾವೆಲ್ಲರು ಎದ್ದು ಅವನಿಗೂ ಕೂಡಾ ಎಬ್ಬಿಸಬೇಕೆಂದು ಸಿಮೆಂಟ್ ಕಂಬಗಳು ಜೊಡಿಸಿ ಇಟ್ಟಿದ್ದ ಜಾಗಕ್ಕೆ ಹೋಗಿ ನೋಡಲು ವಿಜಯಬಹದ್ದೂರನು ಕಂಬಗಳ ಪಕ್ಕದಲ್ಲಿ ಇಟ್ಟಿರುವ ಚಿಕ್ಕ ನೀರಿನ ಹೌಜ್ಗಳ ಮದ್ಯದಲ್ಲಿ ತಲೆ ಕೆಳಗೆ ಮಾಡಿಕೊಂಡು ಬಿದ್ದಿದ್ದನು ನಾವೆಲ್ಲರು ಅವನನ್ನು ಎತ್ತಿ ಪಕ್ಕದಲ್ಲಿ ಇರುವ ಕಂಬಗಳ ಮೇಲೆ ಹಾಕಿ ಮಾತನಾಡಿಸಿದ್ದು ಆದರೆ ಅವನು ಮಾತನಾಡಲಿಲ್ಲ ಅಲ್ಲದೆ ಉಸಿರು ಕೂಡಾ ನಿಂತು ಹೋಗಿ ಮೃತಪಟ್ಟಿದ್ದನು ಅವನ ತಲೆಯ ಮೇಲೆ ಒಳಪೆಟ್ಟು ಆದಂತೆ & ಎರಡು ಭುಜಗಳಿಗೆ ಹಾಗೂ ಕಣ್ಣ ರೆಪ್ಪೆಗೆ ಮತ್ತು ಎಡಕಿವಿಗೆ ತರಚಿದ ಗಾಯಗಳಾಗಿದ್ದವು. ವಿಜಯಬಹದ್ದೂರ ಈತನು ಸರಾಯಿ ಕೂಡಿತದ ಚಟಕ್ಕೆ ಅಂಟಿಕೊಂಡು ಸರಿಯಾಗಿ ಊಟಮಾಡದೆ ಆಕಡೆ ಇಕಡೆಗೆ ಮಲಗುವುದು ಮಾಡುತ್ತಾ ನಿನ್ನೆ ದಿನಾಂಕ:- 10/09/2016 ರಂದು ರಾತ್ರಿ ವಿಪರೀತ ಸರಾಯಿ ಕೂಡಿದು ಬಂದು ಊಟಮಾಡದೆ ಹಾಗೇ ಮಲಗಿಕೊಂಡಿದ್ದು ಸರಾಯಿ ಕೂಡಿದ ಅಮಲಿನಲ್ಲಿ ಹಾಗೂ ನಿದ್ರೆಯಲ್ಲಿ ಸಿಮೆಂಟ್ ಕಂಬ್ಗಳು ಸಂಗ್ರಹಿಸಿ ಇಟ್ಟಿದ್ದ ಕಂಬಗಳ ಮೇಲಿಂದ ತಲೆ ಕೆಳಗಾಗಿ ಬಿದ್ದು ಇದರಿಂದ ಅವನ ತಲೆಗೆ ಭಾರಿ ಒಳಪೆಟ್ಟಾಗಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ನರೋಣಾ ಠಾಣೆ : ದಿನಾಂಕ: 10/09/2016 ರಂದು ಬೆಳಿಗ್ಗೆ 09-30 ಗಂಟೆ ಸುಮಾರಿಗೆ ನಾನು ನನ್ನ ಹೆಂಡತಿಯಾದ ಮಲ್ಲಮ್ಮ ಹಾಗೂ ನನ್ನ ಮಗನಾದ ಬಸವರಾಜ ಮುಲಗೆ ಹಾಗೂ ನನ್ನ ಅಕ್ಕಳಾದ ನಜಮುನ್ ಅಲಿಯಾಸ್ ಅಬೇದಾ ನಾವೆಲ್ಲರೂ ಕೂಡಿಕೊಂಡು ಅಂಬಲಗಾ ಗ್ರಾಮದ ಸಂತೆ ಇದ್ದ ಪ್ರಯುಕ್ತ ತರಕಾರಿ ವ್ಯಾಪಾರಿಗಳಾದ ನಾವುಗಳು ಅಂಬಲಗಾ ಕ್ರಾಸ್ ಕಮಾನನಿಂದ ಎಲ್ಲರೂ ಕೂಡಿಕೊಂಡು ಎಡಬದಿಯಿಂದ ನಡೆದುಕೊಂಡು ಹೋಗುತ್ತಿದ್ದಾಗ ಸುಮಾರು ನಾವು ಕಮಾನದಿಂದ 1. 1/2 ಕಿ.ಮೀ ದೂರ ಅಂಬಲಗಾ ಗ್ರಾಮದ ಕಡೆಗೆ ನಡೆದುಕೊಂಡು ಹೊಗುತ್ತಿರುವಾಗ ನಮ್ಮ ಹಿಂದುಗಡೆಯಿಂದ ಅಂದರೆ ಅಂಬಲಗಾ ಕ್ರಾಸ್ ಕಮಾನಕಡೆಯಿಂದ ಒಬ್ಬ ಟಂಟಂ ಚಾಲಕನು ತನ್ನ ವಾಹನವನ್ನು ಅತೀವೇಗದಿಂದ ಹಾಗೂ ಅಲಕ್ಷತನದಿಂದ ನಿಮ್ಮ ಅಕ್ಕಳಾದ ನಜಮುನ್  ಹಾಗೂ ನನ್ನ ಮಗನಾದ ಬಸವರಾಜ ಇವರಿಗೆ ಜೋರಾಗಿ ಡಿಕ್ಕಿಹೊಡಿಸಿದ್ದು ನಿಮ್ಮ ಅಕ್ಕಳಾದ ನಜಮುನ್ ಇವಳು ಮಾತನಾಡುವ ಸ್ಥಿತಿಯಲ್ಲಿ ಇಲ್ಲ ಹಾಗೂ ನನ್ನ ಮಗನಿಗೆ ಎಡಗಾಲಿನ ತೋಡೆಗೆ ಭಾರಿ ಗುಪ್ತಗಾಯವಾಗಿ ಹಾಗೂ ಬಲ ಕಾಲಿನ ಕೆಳಗೆ ರಕ್ತಗಾಯ ವಾಗಿರುತ್ತದೆ ಅಂತಾ ತಿಳಿಸಿರುವುದರಿಂದ ನಾನು ಗಾಭರಿಗೊಂಡು ಘಟನಾ ಸ್ಥಳಕ್ಕೆ ಬಂದು ನೋಡಲಾಗಿ ನಮ್ಮ ಅಕ್ಕಳಾದ ಅಪಘಾತದಿಂದ ಆದ ಗಾಯ ನಿಜವಿದ್ದು ನಮ್ಮ ಅಕ್ಕಳಾದ ನಜಮುನ್  ಇವಳು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಹಾಗೂ ಸಿದ್ದಲಿಂಗಪ್ಪ ಮುಲಗೆ ರವರ ಮಗನಾದ ಶ್ರೀ ಬಸವರಾಜ ಮುಲಗೆ ಇತನಿಗೆ ಎಡತೊಡಗೆ ಭಾರಿಗುಪತ್ತ ಗಾಯವಾಗಿದ್ದು ಮತ್ತು ಬಲಗಾಲಿನ ಮೊಳಕಾಲು ಕೇಳಗೆ ರಕ್ತಗಾಯವಾಗಿದ್ದು ಇರುತ್ತದೆ ಅಘಾತಪಡಿಸಿದ ಟಂಟಂ ಸಂಖ್ಯೆ ನೋಡಲಾಗಿ ಏಂ 32 4877 ಆಗಿದ್ದು ಅದರ ಚಾಲಕನು ತನ್ನ ವಾಹನವನ್ನು ಅಲ್ಲೆ ಬಿಟ್ಟು ಓಡಿಹೋಗಿರುತ್ತಾನೆ ಅಂತಾ ಸಿದ್ದಲಿಂಗಪ್ಪ ಮುಲಗೆ & ಆತನ ಹೆಂಡತಿಯಾದ ಶ್ರೀಮತಿ ಮಲ್ಲಮ್ಮ ರವರು ತಿಳಿಸಿರುತ್ತಾರೆ. ಘಟನೆಯಾದಗ ಬೆಳಿಗ್ಗೆ ಸುಮಾರು 9-30 ಗಂಟೆ [.ಎಂ] ಆಗಿರುತ್ತದೆ ಎಂದು ತಿಳಿಸಿದ್ದು ನಂತರ ಘಟನಾ ಸ್ಥಳಕ್ಕೆ ಆ್ಯಂಬೂಲೆನ್ಸ್ ಬಂದಿದ್ದರಿಂದ ನನ್ನ ಅಕ್ಕಳಿಗೆ ಹಾಗೂ ಬಸವರಾಜ ಮುಲಗೆ ಇತನಿಗೆ ಉಪಚಾರ ಕುರಿತು ಕಲಬುರಗಿಗೆ ತರುವಾಗ ದಾರಿ ಮಧ್ಯದಲ್ಲಿ ಮಹಾಗಾಂವ ಕ್ರಾಸ ಹತ್ತಿರ ಮೃತಪಟ್ಟಿದ್ದು ನಂತರ ನಾವು ಗಾಯವಳು ಆದ ಬಸವರಾಜ ಈತನಿಗೆ .ಎಸ್.ಎಂ ಆಸ್ಪತ್ರೆಗೆ ದಾಖಲುಮಾಡಿದ್ದು ನನ್ನ ಅಕ್ಕಳಾದ ನಜಮುನ ಇವಳು ಅಂದಾಜು 11-00 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾಳೆ. ಅಂತಾ ಶ್ರೀ ಅಜಮೀರ್ ತಂ ಮೌಲಾಸಾಬ ನದಾಫ್ ಮು:ತಂಬಾಕವಾಡಿ, ತಾ:ಆಳಂದ, ಜಿ:ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

11 September 2016

Kalaburagi District Reported Crimes

ಅಪಘಾತ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಯುನುಸ್ ಪಾಶಾ ಮುಲ್ಲಾ  ಇವರ ಹೆಂಡತಿಯಾದ ಶ್ರೀಮತಿ ಯಾಸ್ಮೀನ  ಗಂಡ ಯುನುಸ್ ಪಾಶಾ  ಮುಲ್ಲಾ ಸಾ// ಇಂದಿರಾ ನಗರ ಕಲಬುರಗಿ ಹಾ : : ಸಿಂದಗಿ ಜಿ: ವಿಜಪೂರ ಇವರ ಗಂಡ  ಯುನುಸ್ ಪಾಶಾ ತಂದೆ ಶರ್ಪೊದ್ದಿನ ಮುಲ್ಲಾ ಇವರು ವಿಜಯಪೂರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಗ್ಯಾರೇಜ ಕೆಲಸ ಮಾಡುತ್ತಿದ್ದರಿಂದ ತಾವು ಕುಟುಂಬ ಸಮೇತವಾಗಿ ಸಿಂದಗಿ ನಗರದಲ್ಲಿ ವಾಸವಾಗಿದ್ದು ಇಂದು ದಿನಾಂಕ 28/8/2016 ರಂದು ಬೆಳಿಗ್ಗೆ  ತನ್ನ ಗಂಡ ಯುನುಸ್ ಪಾಶಾ ಇವರು ಕಲಬುರಗಿ ನಗರದಲ್ಲಿ ಇರುವ ತನ್ನ ತಾಯಿಯ ಯೋಗಕ್ಷೇಮ ನೋಡಿಕೊಂಡು ಬರಲೆಂದು  ಮೋ/ಸೈ ನಂ ಕೆಎ-32 ಜೆ-5608  ನೇದ್ದರ ಮೇಲೆ ಹೋಗಿ ತನ್ನ ತಾಯಿಯ ಯೋಗಕ್ಷೇಮ  ವಿಚಾರಿಸಿ ಮರಳಿ ಸಿಂದಗಿಗೆ ಸದರಿ ಮೋ/ಸೈ ನಂ ನಂ ಕೆಎ-32 ಜೆ-5608  ನೇದ್ದರಮೇಲೆ ಸಾಯಂಕಾಲ 5 ಗಂಟೆಯ ಸುಮಾರಿಗೆ ಬರುತ್ತೀರುವಾಗ ಕಲಬುರಗಿ ನಗರ ದಾಟಿದ ನಂತರ ನಂದಿಕೂರ ತಾಂಡಾದ ಹತ್ತೀರ  ಎನ್.ಹೆಚ್-218 ರೋಡಿನ ಮೇಲೆ  ಎದುರುಗಡೆಯಿಂದ ಒಂದು ಕ್ರುಜರ ಜೀಪ ನಂ ಕೆಎ- 28 ಎಮ್- 3412 ನೆದ್ದರ ಚಾಲಕ ಅತೀ ವೇಗ ಮತ್ತು ಅಜಾಗುರಕತೆಯಿಂದ ಚಲಾಯಿಸಿಕೊಂಡು ಬಂದು ನನ್ನ ಗಂಡನ ಮೋ/ಸೈಗೆ ಡಿಕ್ಕಿ ಹೋಡೆದ ಪರಿಣಾಮ ನನ್ನ ಗಂಡನಿಗೆ ಬಲಗಾಲ ,ಬಲಗೈ,ಎದೆಗೆ, ತಲೆಗೆ  ಭಾರಿ ಮತ್ತು ಚಿಕ್ಕಪುಟ್ಟ ರಕ್ತಗಾಯ ಮತ್ತು ಗುಪ್ತಗಾಯ ಗಳಾಗಿರುತ್ತವೆ ಈ ಗಟನೆಯ ನಂತರ ಸದರಿ ಕ್ರುಜರ ಜೀಪ ನಂ ಕೆಎ- 28 ಎಮ್- 3412 ನೆದ್ದರ ಚಾಲಕ  ತನ್ನ ಕ್ರುಜರ ಜೀಪ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸದರ ಪ್ರಕರಣದಲ್ಲಿ ಗಾಯ ಹೊಂದಿ ತಿಕಿತ್ಸೆ ಪಡೆಯುತ್ತಿರುವ ಯುನುಸ ಪಾಶಾ ತಂದೆ ಶಫೋದ್ದಿನ್ ಮುಲ್ಲಾ ಸಾ; ಇಂದಿರಾ ನಗರ ಕಲಬುರಗಿ ಹಾ: ವ: ಸಿಂದಗಿ ಜಿ: ವಿಜಯಪೂರ ಇತನು ಚಿಕಿತ್ಸೆ ಫಲಕಾರಿಯಾಗದೆ ಸದರಿ ಯವನು ದಿನಾಂಕ 30/08/2016 ಮೃತಪಟ್ಟಿರುತ್ತಾರೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಜೇವರಗಿ ಠಾಣೆ : ಶ್ರೀ ಷಣ್ಮೂಖಪ್ಪ ತಂದೆ ಬಾಬು ಐಗೊಳ ಸಾ: ಬುದ್ದ ನಗರ ಜೇವರಗಿ ಇವರು  ದಿನಾಂಕ 10.09.2016 ರಂದು ಮುಂಜಾನೆ ನಾನು ಕಚೇರಿಯಲ್ಲಿದ್ದಾಗ ಸಾಹೇಬಗೌಡ ಕಲ್ಲಾ ಇವರು ಪೊನ ಮಾಡಿ ತಿಳಿಸಿದ್ದೆನೆಂದರೆ ನಮ್ಮ ಹೊಲಕ್ಕೆ ಹಾಕಿದ ವಿದ್ಯೂತ ಕಂಬದ ವೈಯರ್ (ತಂತಿ) ಸ್ವಲ್ಪ ಕಡಿದು ಬಿದ್ದಿರುತ್ತದೆ ಉಳಿದ ವೈಯರ್ ಕಳುವಾಗಿರುತ್ತದೆ.ಅಂತಾ ತಿಳಿಸಿದ್ದು . ವಿಷಯ ಗೊತ್ತಾದ ಕೂಡಲೆ ನಾನು ಮತ್ತು ಜೇಸ್ಕಂ ಶಾಖಾಧಿಕಾರಿಯಾದ ಅರುಣಕುಮಾರ ತಂದೆ ಮಹಾದೇವರಾವ ಸಲಗರ, ಮಲ್ಲಿನಾಥಗೌಡ ಪೊಲೀಸ್ ಪಾಟೀಲ ಲೈನಮ್ಯಾನ ಮೂವರು ಕೂಡಿಕೊಂಡು ಸ್ಥಳಕ್ಕೆ ಹೋಗಿ ನೊಡಲಾಗಿ ಜೇವರಗಿ ಪಟ್ಟಣದ ಹೊರವಲಯದ ಷಣ್ಮೂಖ ಶಿವಯೋಗಿ ಕಾಲೇಜ್ ದಿಂದ ಸಾಹೇಬಗೌಡ ಕಲ್ಲಾ ಇವರ ಹೊಲದವರೆಗೆ ವಿದ್ಯುತ ಕಂಬಕ್ಕೆ ಹಾಕಿದ ಅಲೂಮೀನಿಯಮ್ ವಿದ್ಯುತ  ವೈಯರ್ ( ವಿದ್ಯುತ ವಾಹಕ) ಅಂದಾಜು 2400 ಮೀಟರ್ ಉದ್ದದ ಅ.ಕಿ. 95000/- ಕಿಮ್ಮತ್ತಿನ ವೈಯರ್ ಕಳ್ಳತನವಾಗಿದ್ದು  ಅಲ್ಲಿ ಅಕ್ಕಪಕ್ಕದ ಹೊಲದವರಿಗೆ ವಿಚಾರಿಸಲು ಪತ್ತೆ ಹತ್ತಿರುವುದಿಲ್ಲಾ. ಅಲ್ಲಿಯೇ ಇದ್ದ ಸಾಹೇಬಗೌಡ ಕಲ್ಲಾ ಇವರು ಹೇಳಿದ್ದೆನೆಂದರೆ ದಿ. 9.09.2016 ರಂದು ಸಾಯಂಕಾಲ ನಾನು ನಮ್ಮ ಹೊಲಕ್ಕೆ ಹೊದಾಗ ನಮ್ಮ ಹೊಲಕ್ಕೆ ವಿದ್ಯುತ ಸಂಪರ್ಕ ಇದ್ದ ಕಂಬದ ವಿದ್ಯುತ ವೈಯರ್ ಇರಲಿಲ್ಲಾ ಅದು ದಿ. 08.09.2016 ರಂದು ರಾತ್ರಿ ಕಳ್ಳತವಾಗಿರುತ್ತದೆ ಅಂತಾ ಹೇಳಿದರು. ವಿದ್ಯುತ ವೈಯರ್ ಕಳುವಾದ ವಿಷಯವನ್ನು ನಾನು ನಮ್ಮ ಇಲಾಖೆಯ ಮೇಲಾಧಿಕಾರಿಗಳಿಗೆ ತಿಳಿಸಿ ನಂತರ ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ನಿಂಬರ್ಗಾ  ಠಾಣೆ : ಶ್ರೀ ಸೂಯಱಕಾಂತ ತಂದೆ ಗುರುಶಾಂತಪ್ಪ ಜಿಡಗೆ ಸಾಃ ಭೂಸನೂರ ಇವರು  ಭೂಸನೂರ ಗ್ರಾಮದ ಹೊಲ ಸವೆಱ ನಂ. 258/4 ನೇದ್ದರ ಸಂಭಂಧ ಆಪಾದಿತರಾದ ಮಲ್ಲಿನಾಥ ತಂದೆ ಆನಂದರಾವ ಮಾಲಿಪಾಟೀಲ ಮತ್ತು ಆತನ ಕಡೆಯವರು ದಿನಾಂಕ ದಿನಾಂಕ 08/09/2016 ರಂದು 2030 ಗಂಟೆಗೆ ಕೆ.ಜಿಬಿ ಬ್ಯಾಂಕ ಹತ್ತಿರ ಇವರು ನಗರ ಖಾನೆ ಹತ್ತಿರ ಫಿರ್ಯಾದಿಗೆ ಮತ್ತು ಆತನ ಕಡೆಯವರಿಗೆ ಕೊಲೆ ಮಾಡುವ ಉದ್ದೇಶದಿಂದ ಅಕ್ರಮ ಕೂಟ ರಚಿಸಿಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ, ಕಲ್ಲಿನಿಂದ, ಕಟ್ಟಿಗೆಯಿಂದ ಮಾರಣಾಂತಿಕ ಹಲ್ಲೆ ಮಾಡಿ ಹೊಡೆ ಬಡೆ ಮಾಡಿ ಜೀವ ಭಯಪಡಿಸಿ ಹೋಗಿರುತ್ತಾರೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

09 September 2016

Kalaburagi District Reported Crimes

ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀಮತಿ ಜಗದೇವಿ ಗಂಡ ಮಲ್ಲಿಕಾರ್ಜುನ ಕಪ್ಪರಗಿ ಸಾ; ಡೊಂಗರಗಾಂವ ತಾ;ಜಿ; ಕಲಬುರಗಿ  ರವರ ಗಂಡ ಮಲ್ಲಿಕಾರ್ಜುನ ನನ್ನ ಮಗ ಮಹೇಶ ಮತ್ತು ಸೊಸೆ ಪ್ರಿಯಾಂಕ ಇರುತ್ತೆವೆ ನನ್ನ ಗಂಡನಾದ ಮಲ್ಲಿಕಾರ್ಜುನ ಇತನು ಸ್ವಲ್ಪ ಬುದ್ದಿಮಾಂದ್ಯನಿದ್ದು ಜನರ ಸಂಗಡ ಹೇಗೆ ವರ್ತನೆ ಮಾಡಬೇಕು ಎನ್ನುವ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದವನಾಗಿರುತ್ತಾನೆ.ನಮ್ಮ ಮನೆಯ ಪಕ್ಕದಲ್ಲಿರುವ ಬಂಡೆಪ್ಪ ರಾಸೂರ, ಮತ್ತು ಸಂಗಪ್ಪ ರಾಸೂರ ಇವರು ಸುಮಾರು ದಿವಸಗಳಿಂದ ನಮ್ಮ ಸಂಗಡ ವೈರತ್ವ ಬೇಳೆಯಿಸಿಕೊಂಡು ಬಂದಿದ್ದು. ಇರುತ್ತದೆ. ನನ್ನ ಗಂಡನು ಬುದ್ದಿ ಮಾಂಧ್ಯನಾಗಿದ್ದು ಬಂಡೆಪ್ಪನ ಮಕ್ಕಳಾದ ಸುರೇಶ @ ಸುರ್ಯಕಾಂತ, ಸಂಜು, ಮತ್ತು ಸಂಗಪ್ಪ ರಸೂರೆ ಇವರ ಮಗ ಸತೀಶ ಇವರು ನನ್ನ ಗಂಡನಿಗೆ ಕರೆದುಕೊಂಡು ಹೋಗಿ ಮಧ್ಯ ಕುಡಿಸಿ ಮಾಡಿಸಿ ಅವನಿಂದ ಕೆಲಸ ಮಾಡಿಸಿಕೊಳ್ಳುತ್ತಾ ಬಂದಿದ್ದು. ನಾನು, ನನ್ನ ಮಗ ಹಾಗೂ ನಮ್ಮ ಅಣ್ಣತಮ್ಮಕಿಯವರು ಕೂಡಿಕೊಂಡು ಸದರಿಯವರ ಮನೆಗೆ ಹೋಗಿ ನನ್ನ ಗಂಡನಿಗೆ ಮಧ್ಯ ಕುಡಿಸಿ ಅವನಿಂದ ಕೆಲಸ ಮಾಡಿಸಿಕೊಳ್ಳಬೇಡಿರಿ ಅಂತ ತಿಳಿಹೇಳಿದ್ದು, ಆದರು ಕೂಡಾ ಸದರಿಯವರು ನನ್ನ ಗಂಡನಿಗೆ ಮಧ್ಯ ಕುಡಿಸಿ ಅವನಿಂದ ಕೆಲಸ ಮಾಡಿಸುತ್ತಾ ಬಂದಿದ್ದು ಇರುತ್ತದೆ. ಮೊನ್ನೆ ದಿನಾಂಕ 06.09.2016 ರಂದು ರಾತ್ರಿ ಸಮಯದಲ್ಲಿ ಸುರ್ಯಕಾಂತ, ಮತ್ತು ಅವನ ಗೇಳೆಯ ಅಪ್ಪು ಮಠಪತಿ ಕೂಡಿಕೊಂಡು ನನ್ನ ಗಂಡನಿಗೆ ಮಧ್ಯ ಕುಡಿಸಿದ್ದು, ನನ್ನ ಗಂಡ ಅವರು ಹೇಳಿದ ಕೇಲಸ ಮಾಡದಕ್ಕೆ ಸದರಿಯವರು ನನ್ನ ಗಂಡನಿಗೆ  ಹೊಡಬಡೆ ಮಾಡಿದ್ದು ಇರುತ್ತದೆ. ನಿನ್ನೆ ದಿನಾಂಕ 07.09.2016 ರಂದು ಬೆಳ್ಳಿಗ್ಗೆ 10 ಗಂಟೆಯ ಸುಮಾರಿಗೆ ನಾನು, ನನ್ನ ಮಗ ಮಹೇಶ, ನಮ್ಮ ಮೈದುನ ರಾಜಕುಮಾರ ಕೂಡಿಕೊಂಡು ಬಂಡೆಪ್ಪ ರಾಸೂರ ಇವರ ಮನೆಗೆ ಹೋಗಿ ನನ್ನ ಗಂಡನಿಗೆ ಮಧ್ಯ ಕುಡಿಸಿ ಯಾಕೆ ಹೊಡೆದಿದ್ದಿರಿ ಇನ್ನೂಮ್ಮೆ ನನ್ನ ಗಂಡನಿಗೆ ಮಧ್ಯ ಕುಡಿಸಬೇಡಿರಿ ಅಂತ ಹೇಳಿದ್ದು ಈಗೆ ಆದರೆ ಪೊಲೀಸ ಠಾಣೆಗೆ ಹೋಗಿ ದೂರು ನೀಡುತ್ತೆವೆ ಅಂತ ಹೇಳಿ ಬಂದಿದ್ದು ಇರುತ್ತದೆ. ನಂತರ ನನ್ನ ಮಗ ಹೋಲಕ್ಕೆ ಹೋಗಿದ್ದು ನಿನ್ನೆ ರಾತ್ರಿ 8 ಗಂಟೆಯ ಸುಮಾರಿಗೆ ನಾನು ನನ್ನ ಸೊಸೆ ಪ್ರಿಯಾಂಕ ನಮ್ಮ ಮನೆಯ ಮುಂದೆ ಕುಳಿತ್ತಿದ್ದು ಅದೆ ವೇಳೆಗೆ ಬಂಡೆಪ್ಪ ಇವರ ಮನೆಯ ಮುಂದಿನಿಂದ ನನ್ನ ಮಗ ಮಹೇಶ ಇತನು ನಮ್ಮ ಮನೆಗೆ ಬರುತ್ತಿದ್ದು. ನನ್ನ ಮಗ ಬರುತ್ತಿರುವದನ್ನು ನೋಡಿ ಬಂಡೆಪ್ಪ ಮತ್ತು ಮಕ್ಕಳಾದ ಸುರೇಶ @ ಸುರ್ಯಕಾಂತ, ಸಂಜು, ಮತ್ತು ಸಂಗಪ್ಪ ರಸೂರೆ, ಸತೀಶ ರಾಸೂರೆ ಹಾಗೂ ಅಪ್ಪು ಮಠಪತಿ ಕೂಡಿಕೊಂಡು ನನ್ನ ಮಗನಿಗೆ ತಡೆದು ನಿಲ್ಲಿಸಿ ರಂಡಿ ಮಗನೆ ನೀನು ನಮ್ಮ ಮನೆಗೆ ಬಂದು ನಿಮ್ಮ ಅಪ್ಪನಿಗೆ ಸೇರಿ ಕುಡಿಸಿ ಕೇಲಸ ಮಾಡಿಸಿಕೊಳ್ಳಬೇಡ ಅಂತ ಹೇಳುತ್ತಿ ಸೂಳಿ ಮಗನೆ ನಿನ್ನ ಸೊಕ್ಕು ಬಹಳ ಆಗಿದೆ, ನೀನಗೆ ಮೊದಲು ಖಲಾಸ ಮಾಡುತ್ತೆವೆ ಯಾರು ನಮ್ಮ ಸೆಂಟಾ ಕಿತ್ತುತ್ತಾರೆ ನೋಡುತ್ತೇವೆ ಅಂತ ಎಲ್ಲರು ಕೂಡಿಕೊಂಡು ಬೈಯುತ್ತಾ ಬಂಡೆಪ್ಪ, ಸಂಜು ಮತ್ತು ಸತೀಶ ಇವರು ನನ್ನ ಮಗನಿಗೆ ಹಿಡಿದುಕೊಂಡಿದ್ದು, ಸಂಗಪ್ಪ ಇತನು ಜನರು ಬರುತ್ತಿದ್ದಾರೆ ಇಲ್ಲ ಅಂತ ನೋಡುತ್ತಿದ್ದು, ಅದೆ ವೇಳೆಗೆ ಅಪ್ಪು ಮಠಪತಿ ಇತನು ತನ್ನ ಹತ್ತಿದ ಇದ್ದ ಚಾಕುವನ್ನು ಸುರೇಶ ಇತನ ಕೈಯಲ್ಲಿ ಕೊಟ್ಟಿದ್ದು ಆಗ ಎಲ್ಲರು ಕೂಡಿಕೊಂಡು ಸರೇಶ ಇತನಿಗೆ ಈ ರಂಡಿ ಮಗನಿಗೆ ಖಲಾಸ ಮಾಡು ಅಂತ ಹೇಳಿದ್ದು. ಆಗ ಸುರೇಶ ಇತನು ನನ್ನ ಮಗನಿಗೆ ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿದ ಚಾಕುನಿಂದ ನನ್ನ ಮಗನ ಹೊಟ್ಟೆಗೆ ಜೋರಾಗಿ ಹೊಡಿದಿದ್ದು ಆಗ ನನ್ನ ಮಗ ಚೀರಾಡ ನೇಲದ ಮೇಲೆ ಬಿದಿದ್ದು. ನನ್ನ ಮಗ ಸತ್ತಿದ್ದಾನೆ ಅಂತ ತಿಳಿದು ಸದರಿಯವರು ನನ್ನ ಮಗನಿಗೆ ಅಲ್ಲೆ ಬಿಟ್ಟು ಹೋಗಿದ್ದುನಂತರ ನಾನು, ನನ್ನ ಸೊಸೆ ಮತ್ತು ನಮ್ಮ ಮೈದುನ ರಾಜಕುಮಾರ ಕೂಡಿಕೊಂಡು ನನ್ನ ಮಗನ ಹತ್ತಿರ ಹೋಗಿ ನೋಡಲು ನನ್ನ ಮಗನ ಹೊಟ್ಟೆಯ ಕೇಳ ಭಾಗಕ್ಕೆ ಭಾರಿ ರಕ್ತಗಾಯವಾಗಿ ಕರಳು ಹೊರಗೆ ಬಂದಿದ್ದು, ನನ್ನ ಮಗ ಬೇಹುಸ ಆದಂತೆ ಆಗಿದ್ದು, ಅದೆ ವೇಳೆಗೆ ನಮ್ಮ ನೇಗೆಣಿ ಕಸ್ತೂರಬಾಯಿ, ಮೈದುನ ಹಣಮಂತ ಮತ್ತು ಇತರರು ಅಲ್ಲಿಗೆ ಬಂದಿದ್ದು. ನನ್ನ ಮೈದು ರಾಜಕುಮಾರ ಇತನು 108 ಅಂಬುಲೇನ್ಸ ವಾಹನಕ್ಕೆ ಕರೆ ಮಾಡಿದ್ದು ಸ್ವಲ್ಪ ಸಮಯದಲ್ಲಿ ಅಂಬುಲೇನ್ಸ ಸ್ಥಳಕ್ಕೆ ಬಂದಿದ್ದು ನಾನು, ರಾಜಕುಮಾರ ಮತ್ತು ನೇಗೆಣಿ ಕಸ್ತೂರಬಾಯಿ ಕೂಡಿಕೊಂಡು ನನ್ನ ಮಗನಿಗೆ ಅಂಬುಲೇನ್ಸದಲ್ಲಿ ಹಾಕಿಕೊಂಡು ಉಪಚಾರ ಕುರಿತು ಕಲಬುರಗಿ ಬಸವೇಶ್ವರ ಆಸ್ಪತ್ರೇಗೆ ಸೇರಿಕೆ ಮಾಡಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ರಿಮಿನಾಶಕ ಸೇವಿಸಿ ಆತ್ಮ ಹತ್ಯೆ ಮಾಡಿಕೊಂಡ ಪ್ರಕರಣ :
ನೆಲೋಗಿ ಠಾಣೆ : ಶ್ರೀಮತಿ ಸುಸಲಾಬಾಯಿ ಗಂಡ ಗುರುಶಾಂತಪ್ಪಗೌಡ ಮಾಲಿಪಾಟೀಲ ಸಾ|| ಯಾತನೂರ ಕುರನಳ್ಳಿ ತಾ|| ಜೇವರ್ಗಿ ಇವರ ಗಂಡ ಗುರುಶಾಂತಪ್ಪಗೌಡ ಇವರ ಹೆಸರಿನಿಂದ ನಮ್ಮೂರ ಸೀಮಾಂತರ ಜಮೀನು ಸರ್ವೇ ನಂ. 14 ರಲ್ಲಿ 2 ಎಕರೆ 6 ಗುಂಟೆ ಮತ್ತು ಸರ್ವೇ ನಂ. 3 ರಲ್ಲಿ 2 ಎಕರೆ 14 ಗುಂಟೆ ಜಮೀನು ಇರುತ್ತದೆ. ನನ್ನ ಗಂಡನು ಕೃಷಿಗಾಗಿ ಹಾಗೂ ಸಂಸಾರದ ಅಡಚಣೆಗಾಗಿ ನಮ್ಮ ಹೊಲಗಳ ಮೇಲೆ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ ಅರಳಗುಂಡಗಿಯಲ್ಲಿ 2,00,000=00 ರೂಪಾಯಿ ಮತ್ತು ಕಾಸರಬೋಸಗಾ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 15,000=00 ರೂಪಾಯಿ ಸಾಲ ಮಾಡದ್ದು, ಅಲ್ಲದೆ ಊರ ಮನೆಯವರ ಹತ್ತಿರ 2,85,000=00 ರೂಪಾಯಿ ಕೈಗಡದ ಹಾಗೆ ತಗೆದುಕೊಂಡಿದ್ದು ಇರುತ್ತದೆ. ಹೊದ ವರ್ಷ ಮಳೆ ಆಗದೆ ಬೆಳೆ ಬೆಳೆಯದೆ ಇದ್ದುದ್ದರಿಂದ ಮಾಡಿದ ಸಾಲ ಹೇಗೆ ತೀರಿಸಬೇಕು ಅಂತಾ  ನನ್ನ ಗಂಡನು ಯಾವಾಗಲು ಒಬ್ಬನೆ ಚಿಂತೆ ಮಾಡುತ್ತಾ ಕುಳಿತುಕೊಳ್ಳುತಿದ್ದನು, ನನ್ನ  ಗಂಡನಿಗೆ ನಾನು ನನ್ನ ಮಗ ಸಿದ್ದಲಿಂಗಪ್ಪ ಇಬ್ಬರೂ ಕೂಡಿ ಈ ವರ್ಷ ಸಾಲ ತೀರಿಸಿದರಾಯುತು ಅದಕ್ಕೆ ಯಾಕೆ ಚಿಂತೆ ಮಾಡುತ್ತಿ ಅಂತಾ ಸಾಂತ್ವನ ಹೇಳಿದ್ದೆವು.ದಿನಾಂಕ: 08/09/2016 ರಂದು ಬೆಳಿಗ್ಗೆ 06-00 ಗಂಟೆಗೆ ನನ್ನ ಗಂಡ ಗುರುಶಾಂತಪ್ಪಗೌಡ  ಹೊಲಕ್ಕೆ ಹೋಗುತ್ತೇನೆ ಅಂತಾ ಮನೆಯಿಂದ ಹೋಗಿದ್ದನು. ಬೆಳಿಗ್ಗೆ 07-30 ಗಂಟೆಯ ಸುಮಾರಿಗೆ ನಮ್ಮೂರ ಸಿದ್ದಪ್ಪ ಜೋಗೂರ ಈತನು ನಮ್ಮ ಸಂಭಂದಿ ಶರಣಗೌಡನಿಗೆ ಪೋನ ಮಾಡಿ ತಿಳಿಸಿದ್ದೆನೆಂದರೆ, ನಿಮ್ಮ ದೊಡ್ಡಪ್ಪ ಅವನ ಹೊಲದಲ್ಲಿ ಕ್ರೀಮಿನಾಶಕ ಔಷದಿ ಸೇವನೆ ಮಾಡಿ ಮೃತಪಟ್ಟಿದ್ದಾನೆ ಅಂತಾ ತಿಳಿಸಿರುತ್ತಾನೆ ಅಂತಾ  ನನಗೆ ಹೇಳಿದಾಗ ಗಾಬರಿಯಾಗಿ ನಾನು, ನನ್ನ ಸೊಸೆ ರೇಣುಕಾ, ಶರಣಗೌಡ ಎಲ್ಲರೂ ಕೂಡಿ ನಮ್ಮ ಹೊಲಕ್ಕೆ ಹೋಗಿ ನೋಡುವಷ್ಟರಲ್ಲಿ ನನ್ನ ಗಂಡ ಮೃತ ಪಟ್ಟಿದ್ದನು, ನನ್ನ ಗಂಡನು ಹೋದ ವರ್ಷ ಮಳೆ ಆಗದೆ ಇದುದ್ದರಿಂದ ಬೆಳೆ ಬೆಳೆಯದೆ ಇದ್ದುದ್ದರಿಂದ ಕೃಷಿಗಾಗಿ ಹಾಗೂ ಸಂಸಾರದ ಅಡಚಣೆಗಾಗಿ ಮಾಡಿದ ಸಾಲ ತೀರಿಸಲಾಗದೆ ಮಾಡಿದ ಸಾಲ ಹೇಗೆ ತೀರಿಸಬೇಕು? ಅಂತಾ ಮನಃನೊಂದು ನಮ್ಮ ಹೊಲದಲ್ಲಿ ಕ್ರಿಮಿನಾಶಕ ಔಷದಿ ಸೇವನೆ ಮಾಡಿ ಆತ್ಮ ಹತ್ಯ ಮಾಡಿಕೊಂಡಿರುತ್ತಾನೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಜೇವರಗಿ ಠಾಣೆ : ಶ್ರೀ ಬಸವರಾಜ ತಂದೆ ದೊಡ್ಡಪಗೌಡ ಮಂದರವಾಡ ಸಾ: ಮಂದರವಾಡ ಹಾ.ವ ದುಗ್ಗನಕಟ್ಟಿ ಜೇವರಗಿ ಇವರು ದಿನಾಂಕ: 22.08.2016 ರಂದು ರಾತ್ರಿ ವೇಳೆಯಲ್ಲಿ ತನ್ನ ಮೊಟಾರ ಸೈಕಲ ನಂ ಕೆಎ-32 ಇಜಿ-2993 ಅದರ ಚಸ್ಸಿ ನಂ MBLHA10AMEHC06454 ಇಂಜಿನ ನಂ HA01EJEHC31678 ನೇದ್ದು ಅ.ಕಿ 25,000/-ರೂ ಕಿಮ್ಮತಿನದು ಮನೆ ಮುಂದೆ ನಿಲ್ಲಿಸಿ, ಮನೆಯಲ್ಲಿ ಮಲಗಿಕೊಂಡಿದ್ದೇನು. ಬೆಳಿಗ್ಗೆ ಅಂದರೆ ದಿನಾಂಕ: 23.08.2016 ರಂದು ಮುಂಜಾನೆ 06.00 ಗಂಟೆಗೆ ಎದ್ದು ಹೊರಗೆ ಬಂದು ನೋಡಲು ಮನೆಯ ಮುಂದೆ ನಿಲ್ಲಿಸಿದ ನನ್ನ ಮೋಟಾರ ಸೈಕಲ ಕಾಣಲಿಲ್ಲಾ, ನಾನು ಗಾಬರಿಯಾಗಿ ಮನೆಯೊಳಗೆ ಹೋಗಿ ನನ್ನ ಹೆಂಡತಿ ಬಸಮ್ಮ ಇವಳಿಗೆ ವಿಷಯ ತಿಳಿಸಿ ನಂತರ ಪಕ್ಕದ ಮನೆಯವರಿಗೆ ವಿಚಾರಿಸಿದ್ದೇವು. ಆದರು ಮೊಟಾರ ಸೈಕಲ ಸಿಗಲಿಲ್ಲಾ. ಆ ನಂತರ ನಾನು ಮತ್ತು ನಮ್ಮ ಅಳಿಯ ನಾನಾಗೌಡ ತಂದೆ ಪ್ರಭುರಾವ ಹಳಿಮನಿ, ಮಾವ ನಿಂಗಣ್ಣ ಹಳಿಮನಿ ಮೂವರು ಕೂಡಿ ಜೇವರಗಿ ಪಟ್ಟಣದಲ್ಲಿ ಹುಡುಕಾಡಿದ್ದೇವು. ಆದರೂ   ಮೊಟಾರ ಸೈಕಲ ಸಿಕ್ಕಿರುವದಿಲ್ಲ, ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.