POLICE BHAVAN KALABURAGI

POLICE BHAVAN KALABURAGI

06 September 2016

Kalaburagi District Reported Crimes

ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ಮಾಡಿದ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಬಸವರಾಜ ಪ್ರಭಾರಿ ಆರೋಗ್ಯ ನಿರೀಕ್ಷಕರು ಮಹಾನಗರ ಪಾಲಿಕೆ ಕಲಬುರಗಿ ಇವರು ದಿನಾಂಕ:04/09/2016 ರಂದು ಶ್ರೀ ಬಾಬುರಾವ ಪರಿಸರ ಅಭಿಯಂತರರು ವಾಟ್ಸ ಆಪ್‌‌‌ ಮುಖಾಂತರ ನೀಡಿರುವ ಆದೇಶದಂತೆ ದಿನಾಂಕ:05/09/2016 ರಂದು ಬೆಳಗ್ಗೆ 12.30 ಗಂಟೆಗೆ ನಗರದ ವಾರ್ಡ ನಂ.37 ರಲ್ಲಿ ಎಂ.ಎಸ್‌‌.ಕೆ.ಮೀಲ್‌ ಖದೀರ ಚೌಕ ರಸ್ತೆಯಲ್ಲಿರುವ ಅಂಗಡಿಗಳಲ್ಲಿ ನಾನು ಮತ್ತು ಬಸವರಾಜ ಪ್ರಭಾರಿ ಆರೋಗ್ಯ ನಿರೀಕ್ಷಕರು ಕಲಬುರಗಿ ಮಹಾನಗರ ಪಾಲಿಕೆ ಹಾಗೂ ನನ್ನ ಸಿಬ್ಬಂದಿಯವರೊಂದಿಗೆ ಕಾನೂನು ಬಾಹಿರವಾಗಿ ಪ್ಲಾಸ್ಟಿಕ ಮಾರಾಟ ಮಾಡುತ್ತಿರುವ ಅಂಗಡಿಗಳಲ್ಲಿನ ಪ್ಲಾಸ್ಟೀಕ ಜಪ್ತಿ ಮಾಡುತ್ತಿರುವಾಗ ಜಲೀಲ ಕ್ಲಾಥ್‌ ಸ್ಟೋರ ಹಾಗೂ ನೂರ ಫೂಟ್‌‌ವೇರ ಅಂಗಡಿಯ ಮಾಲಿಕರು ನನಗೆ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿದರು. ಹಾಗೂ ಇವರ ಜೊತೆಗೆ ಸ್ಥಳದಲ್ಲಿಯೇ ಇದ್ದ 5-6 ಜನ ಸೇರಿ ನನ್ನ ಮೇಲೆ ಮರಣಾಂತಿಕ ಹಲ್ಲೆ ಮಾಡಿರುತ್ತಾರೆ. ಈ ಹಲ್ಲೆಯಿಂದಾಗಿ ನನಗೆ ನನ್ನ ಕುತ್ತಿಗೆಗೆ ಹಾಗೂ ಎಡ ಕೈಗಳ ಮೇಲೆ ರಕ್ತಗಾಯವಾಗಿರುತ್ತದೆ. ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತ್ಯಾಚಾರ ಮಾಡಿದ ಪ್ರಕರಣ :
ಫರತಾಬಾದ ಠಾಣೆ : ಕುನಾರಿ ವಿದ್ಯಾವತಿ ತಂದೆ ಚಂದಪ್ಪಾ ಪಟ್ಟೇದಾರ ಸಾ: ಅವರಾದ (ಕೆ) ತಾ: ಕಲಬುರಗಿ  ಇವರಿಗೆ  ಸುಮಾರು 3 ವರ್ಷಗಳ ಹಿಂದೆ ಜೇವರ್ಗಿ ತಾಲ್ಲೂಕಿನ ಮದರಿ ಗ್ರಾಮದ ಶಿವು ತಂದೆ ಬಸವರಾಜ ಬುಕ್ಕನವರ ಈತನೊಂದಿಗೆ ಮದುವೆ ಮಾಡಿ ಕೊಟ್ಟಿದ್ದು ನಾನು ನನ್ನ ಗಂಡನ ಮನೆಯಲ್ಲಿ 15 ದಿನಗಳವರೆಗೆ ಇದ್ದು ಮರಳಿ ತವರು ಮನೆಗೆ ಬಂದು ನನ್ನ ತವರು ಮನೆಯಲ್ಲಿಯೇ ಉಳಿದುಕೊಂಡೇನು. ನಾವು ಆರ್ಥಿಕವಾಗಿ ಬಹಳ ಬಡವರಾಗಿದ್ದರಿಂದ ಸುಮಾರು 5-6 ವರ್ಷಗಳಿಂದ ನಮ್ಮೂರಿನ ಶಂಕರ ತಂದೆ ಕುಪೇಂದ್ರ ಸಾಹು ರವರ ಹೊಲದಲ್ಲಿ  ಕೂಲಿ ಕೆಲಸ ಮಾಡುತ್ತಾ ಬಂದಿರುತ್ತೇನೆ.  ಹೀಗೆ ನಾನು ಕೂಲಿ ಕೆಲಸ ಮಾಡುತ್ತಿರುವಾಗ 4 ವರ್ಷಗಳಿಂದ  ಸದರಿ ಶಂಕರ ಈತನು ನನ್ನನ್ನು ಮದುವೆಯಾಗುವದಾಗಿ ತಿಳೀಸಿದನು ಅದಕ್ಕೆ ನಾನು ಪರಿಶಿಷ್ಟ್ ಜಾತಿಗೆ ಸೇರಿದ್ದೇನೆ  ನೀವು ಲಿಂಗಾಯತ ಜಾತಿಗೆ ಸೇರಿದ್ದಿರಿ ನಮಿಬ್ಬರ ಮದುವೆ ಸಾದ್ಯವಿಲ್ಲ ಎಂದು ಹೇಳಿರುತ್ತೆನೆ. ಅದಕ್ಕೆ ಅವನು ನನಗೆ ಯಾವುದೇ ಜಾತಿ ಬೇದ ಇಲ್ಲ ನಾನು ನಿನಗೆ ಮದುವೆಯಾಗತ್ತೇನೆ ಅಂತಾ ಹೇಳಿದನು. ನಂತರ ಒಂದು ದಿವಸ ನಾನು ಅವರ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ನನಗೆ ಶಂಕರ ಈತನು ನಿನಗೆ ಬಿಟ್ಟು ಇರಲು ಆಗುತ್ತಿಲ್ಲ ನನ್ನನ್ನು ನಂಬಿ ಎಂದು ಪರಿಪರಿಯಾಗಿ ಬೇಡಿಕೊಂಡನು. ಅದೇ ಸಮಯದಲ್ಲಿ ಹೊಲದಲ್ಲಿ ಯಾರು ಇಲ್ಲದನ್ನು ನೋಡಿ ನಾನು ಬೇಡ ಅಂತಾ ಅಂದರು ಸಹಿತ ಒತ್ತಾಯಪೂರ್ವಕವಾಗಿ ನನ್ನ ಮೇಲೆ ಲೈಂಗಿಕ ಅತ್ಯಾಚಾರ ವೇಸಗಿರುತ್ತಾನೆ. ಇದೇ ರೀತಿ ನಾನು ಅವರ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ನಾನು ನಿನಗೆ ಮದುವೆಯಾಗುತ್ತೇನೆ ಅಂತಾ ನಂಬಿಸಿ ನನ್ನ ಮೇಲೆ ಲೈಂಗಿಕವಾಗಿ ಬಲತ್ಕಾರ ಮಾಡುತ್ತಾ ಬಂದಿರುತ್ತಾನೆ. ನಾನು ಶಂಕರನಿಗೆ ಎಷ್ಟು ದಿನ ಹೀಗೆ ಇರೋಣ ಮದುವೆ ಆಗೋಣ ಅಂತಾ ಕೇಳಿದಾಗ ಆತನು ಇಂದು ನಾಳೆ ಅನ್ನುತ್ತಾ ಮುಂದಕ್ಕೆ ಹಾಕುತ್ತಾ ಬಂದಿರುತ್ತಾನೆ. ಈಗ ಸುಮಾರು 3 ತಿಂಗಳ ಹಿಂದೆ ಅಂದರೆ ದಿನಾಂಕ: 10/06/2016 ರಂದು ರಾತ್ರಿ 10 ಗಂಟೆಯ ಸುಮಾರಿಗೆ ನನಗೆ ಯಾರು ಇಲ್ಲದ ಸಮಯದಲ್ಲಿ ತನ್ನ ಮನೆಗೆ ಕರೆಯಿಸಿ ಇನ್ನೂ 8 ದಿನಗಳಲ್ಲಿ ಮದುವೆಯಾಗುವದಾಗಿ ನಂಬಿಸಿ ಒತ್ತಾಯ ಪೂರ್ವಕವಾಗಿ ನನ್ನ ಮೇಲೆ  ಜಬರಿ ಸಂಭೋಗ ಮಾಡಿರುತ್ತಾನೆ. ಅದರ ಪರಿಣಾಮವಾಗಿ ನಾನು ಈಗ 3 ತಿಂಗಳ ಗರ್ಭಿಣಿ ಆಗಿರುತ್ತೆನೆ .  ನಂತರ ಅವನಿಗೆ ನಾನು ಈಗ ಗರ್ಭಿಣಿ ಯಾಗಿದ್ದೇನೆ ಮದುವೆ ಮಾಡಿಕೊ ಅಂತಾ ಹೇಳಿದಾಗ  ಅವನು ನನಗೆ ನಾನು ಲಿಂಗಾಯತ ಸಮಾಜದವನಿದ್ದು ನನಗೆ ಸಮಾಜದಲ್ಲಿ ಗೌರವ ಇದೇ  ನೀನು ಹೊಲೇಯ ಜಾತಿಗೆ ಸೇರಿದ್ದಿ ನಾನು ನಿನಗೆ ಮದುವೆ ಆಗುವದಿಲ್ಲಾ ಅಂತಾ ನಿರಾಕರಿಸಿರುತ್ತಾನೆ. ಇದಕ್ಕೆ ಶಂಕರನ ಅಣ್ಣನಾದ ಮಲ್ಲಿಕಾರ್ಜುನ ತಂದೆ ಕುಪೇಂದ್ರ ಸಾಹು, ಶರಣಗೌಡ ತಂದೆ ಕುಪೇಂದ್ರ  ಸಾಹು ಮತ್ತು ಶರಣಮ್ಮ ಗಂಡ ದಿ: ಕುಪೇಂದ್ರ ಸಾಹು ರವರು ಇದಕ್ಕೆ ಪ್ರಚೋದನೆ ನೀಡಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

04 September 2016

Kalaburagi District Reported Crimes

ಅಪಘಾತ ಪ್ರಕರಣಗಳು :
ಕಮಾಲಾಪೂರ ಠಾಣೆ :ದಿನಾಂಕ 02-09-2016 ರಂದು ಸಾಯಂಕಾಲ 4 ಗಂಟೆ ಸುಮಾರಿಗೆ ನಾನು ನನ್ನ ಗಂಡ ಮಕ್ಕಳೊಂದಿಗೆ ಮನೆಯಲ್ಲಿದ್ದಾಗ ನಮ್ಮ ತಾಂಡಾದ ಶಂಕರ ತಂದೆ ಧನಸಿಂಗ ಜಾಧವ ಇತನು ಮನೆಯ ಹತ್ತಿರ ಒಂದು ಕೆಂಪು ಬಣ್ಣದ ಮೋಟಾರ ಸೈಕಲನ್ನು ತೆಗೆದುಕೊಂಡು ಬಂದು ನನ್ನ ಗಂಡ ಸುಭಾಷನಿಗೆ ಕಮಲಾಪೂರ ಹೋಗಿ ಕೆಲವು ಸಾಮಾನುಗಳನ್ನು ಖರೀದಿ ಮಾಡಿಕೊಂಡು ಬರೋಣ ಎಂದು ಹೇಳಿ ಮನೆಯಿಂದ ನನ್ನ ಗಂಡನಿಗೆ ತಾನು ತಂದ ಮೋ.ಸೈಕಲದ ಹಿಂದೆ ಕೂಡಿಸಿಕೊಂಡು ತಾಂಡಾದಿಂದ ಕಮಲಾಪೂರ ಕಡೆಗೆ ಹೋದರು ರಾತ್ರಿ 8 ಗಂಟೆ ಸುಮಾರಿಗೆ ನನ್ನ ಮೈದುನ ಎಮನಾಥ ತಂದೆ ಗನ್ನು ಚವ್ಹಾಣ ಇತನು ಮನೆಗೆ ಬಂದು ತಿಳಿಸಿದೆನೆಂದರೆ ಈಗ ತಾನೆ ಕಲ್ಮೂಡ ತಾಂಡಾದ ಸೋನಾಬಾಯಿ ಗಂಡ ಬಳಿರಾಮ ರಾಠೋಡ ಇವಳು ಪೊ:ನ ಮಾಡಿ ತಿಳಿಸಿದೆಂದರೆ ಕಲ್ಮೂಡ ಮತ್ತು ಅಂತಪನಾಳ ಇಳಿಜಾರಿನ ಹತ್ತಿರ ಸುಭಾಷ ಮತ್ತು ಶಂಕರ ಜಾಧವ ಇಬ್ಬರಿಬ್ಬರು ಮೋ ಸೈಕಲದ ಮೇಲೆ ಬಿದ್ದಿದ್ದರಿಂದ ಸುಭಾಷನಿಗೆ ಬಾಯಿಗೆ ಹಾಗೂ ಇತರ ಕಡೆಗೆ ಮತ್ತು ತೆಲೆಗೆ ರಕ್ತಗಾಯ , ಗುಪ್ತಗಾಯವಾಗಿ ಅಲ್ಲೆ ಬಿದ್ದಿರುವ ಬಗ್ಗೆ ಜನರು ಮಾತನಾಡುತ್ತಿರುತ್ತಾರೆ ಅಂತ ತಿಳಿಸಿದ್ದು ಕೂಡಲೆ ನಾನು ತಾಂಡಾ ಚೇತನ @ ಚಿತಂಬರಾಯ ತಂದೆ ಪೋನ್ನು ರಾಠೋಡ ಹಾಗೂ ಜೈರಾಮ ತಂದೆ ಮನ್ನು ರಾಠೋಡ ಎಲ್ಲರು ಕೂಡಿಕೊಂಡು ಘಟನೆ ಸ್ಥಳಕ್ಕೆ ರಾತ್ರಿ ಹೋಗಿ ನೋಡಲಾಗಿ ಅಲ್ಲಿ ಬರಿ ಬಜಾಜ ಪ್ಲಾಟಿನಾ ಕೆಂಪು ಬಣ್ಣದ ಮೋಸೈಕಲ್ ನಂ ಎಮ್.ಹೆಚ್-02-ಬಿಕೆ-7066 ನೇದ್ದು ಬಿದಿದ್ದು, ನನ್ನ ಗಂಡ ಮತ್ತು ಶಂಕರನಿಗೆ 108 ಅಂಬುಲೆನ್ಸದಲ್ಲಿ ಕಲಬುರಗಿ ಆಸ್ಪತ್ರೆ ಕಡೆಗೆ ತೆಗೆದುಕೊಂಡು ಹೋಗಿರುವ ವಿಷಯ ಗೋತ್ತಾಗಿ ನಾವು ನೇರವಾಗಿ ನನ್ನ ಗಂಡ ಸುಭಾಷ ತಂದೆ ಗನ್ನು ಚವ್ಹಾಣ ಇವರ ಮುಖಕ್ಕೆ ಹಾಗೂ ತೆಲೆಗೆ ಮತ್ತು ಇತರ ಕಡೆಗಳಲ್ಲಿ ಗುಪ್ತಗಾಯ, ರಕ್ತಗಾಯವಾಗಿದ್ದು, ಮಾತನಾಡಿದರೆ ಮಾತನಾಡಲಿಲ್ಲ ಗಂಡನು ಮೃತ ಪಟ್ಟಿದನು, ನಂತರ ಶಂಕರ ಜಾಧವ ಹತ್ತೀರ ಹೋಗಿ ನೋಡಿದ್ದು, ಅವನ ಎಡಗಲ್ಲಕ್ಕೆ ತರಚಿದ ಗಾಯವಾಗಿದ್ದು, ಬಲ ಕಿವಿ ಹತ್ತೀರ ತರಚಿದ ಗಾಯವಾಗಿ ರಕ್ತಬಂದ ಹಾಗೆ ಕಾಣುತಿದೆ ಆತನಿಗೆ ನಾವೆಲ್ಲರೂ ವಿಚಾರಿಸಲಾಗಿ ಸದರಿಯವನು ತಿಳಿಸಿದೆನೆಂದರೆ ತಾನು ಮತ್ತು ಸುಭಾಷ ಇಬ್ಬರು ಕೂಡಿ ತಾಂಡಾದಿಂದ ಮೋ.ಸೈಕಲ್ ನಂ ಎಮ್.ಹೆಚ್-02-ಬಿಕೆ-7066 ನೇದ್ದರ ಮೇಲೆ ಕಮಲಾಪೂರಕ್ಕೆ ಬಂದು ಕೆಲವು ಸಾಮುನುಗಳನ್ನು ಖರೀದಿ ಮಾಡಿ ಮರಳಿ ತಾಂಡಕ್ಕೆ ಹೋಗುವಾಗ ಮೋ.ಸೈಕಲನ್ನು ನಾನೆ ನಡೆಸಿಕೊಂಡು ಹೋಗುವಾಗ ರಾತ್ರಿ 7 ಗಂಟೆ ಸುಮಾರಿಗೆ ಅಂತಪನಾಳ-ಕಲ್ಮೂಡ ಮಧ್ಯದಲ್ಲಿ ಇರುವ ಇಳಿಜಾರಿನಲ್ಲಿ ವೇಗವಾಗಿ ಹೋಗುವಾಗ ಒಮ್ಮಲೆ ಬ್ರೇಕ ಹಾಕಿದಕ್ಕೆ ಮೋ.ಸೈಕಲ್ ಪಲ್ಟಿಯಾಗಿ ಬಿದಿದ್ದರಿಂದ ನಮ್ಮಬ್ಬರಿಗೆ ರಕ್ತಗಾಯ ಮತ್ತು ಗುಪ್ತಗಾಯಗಳು ಆಗಿರುತ್ತವೆ, ಅಂತಾ ತಿಳಿಸಿರುತ್ತಾನೆ ಅಂತಾ ಶ್ರೀಮತಿ ಶಾರದಾಬಾಯಿ @ ಸಾಂಬಾಯಿಗೆ ಗಂಡ ಸುಭಾಷ ಚವ್ಹಾಣ ಸಾ; ಅಣಕಲ ಬುಗಡಿ ತಾಂಡಾ ತಾ; ಚಿತ್ತಾಪೂರ ಜಿ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪೂರ ಠಾಣೆ : ಶ್ರೀ ಸೈಯದ ದಸ್ತಗೀರ ತಂಧೆ ಸೈಯದ ಅಬ್ದುಲ ಹಮೀದ್ ಸಾ:ಗುಬ್ಬಿಕಾಲೂನಿ ಕಲಬುರಗಿ ತಾ:ಜಿ:ಕಲಬುರಗಿ ರವರು ದಿನಾಂಕ:02.09.2016 ರಂದು ರಾತ್ರಿ ವೇಳೆಯಲ್ಲಿ ನನ್ನ ತಮ್ಮನಾದ ಸೈಯದ ಖ್ವಾಜಾ ಸೈಯಿದ್ ಇವರು ಬಸವಕಲ್ಯಾಣ ತಾಲೂಕಿನ ರಾಜೋಳ ಗ್ರಾಮದ ತನ್ನ ತೋಟವನ್ನು ನೋಡಿಕೊಂಡು ಬರಲು ನನಗೆ ತಮ್ಮ ಸಂಗಡ ತನ್ನ  ಸ್ವೀಫ್ಟ ಕಾರ ನಂಬರ.ಕೆಎ.53 ಸಿ.0786 ನೇದ್ದರಲ್ಲಿ ಕರೆದುಕೊಂಡು ಹೋಗಿದ್ದು. ರಾತ್ರಿ ನಾವು ಅಲ್ಲೆ ಉಳಿದುಕೊಂಡಿದ್ದು ದಿನಾಂಕ:03.09.2016 ರಂದು ಮುಂಜಾನೆ 08.00 ಗಂಟೆಯ ಸೂಮಾರಿಗೆ ನಾವು ವಾಪಸ್ಸ ಕಲಬುರಗಿಗೆ ಬರುವ ಕುರಿತು ನಾನು ಮೇಲ್ಕಂಡ ಟಾಟಾ ಸ್ವಿಫ್ಟ ಕಾರ ನಂಬರ ಕೆಎ.53 ಸಿ.0786 ನೇದ್ದರಲ್ಲಿ ಹಿಂದಿನ ಶೀಟನಲ್ಲಿ ಕುಳಿತು ಹೋರಟಿದ್ದು. ನನ್ನ ತಮ್ಮ ಸೈಯದ ಖ್ವಾಜಾ ಸೈಯಿದ್ ಇವರು ಕಾರನ್ನು ನಿಧಾನವಾಗಿ ನಡೆಸಿಕೊಂಡು ಹೋರಟಿದ್ದು. ನಾನು ಕುಳಿತು ಹೋರಟ ಕಾರ ಹುಮನಾಬಾದ ಕಲಬುರಗಿ ಹೆದ್ದಾರಿಯ ಕಿಣ್ಣಿಸಡಕ ಗ್ರಾಮ ದಾಟಿ ಮುಂಜಾನೆ 09.30 ಗಂಟೆ ಸೂಮಾರಿಗೆ ಬರುವಾಗ ಮಹಿಬೂಬಸುಬಾನಿ ದರ್ಗಾ ಇನ್ನೂ 100 ಮೀಟರ ದೂರವಿದ್ದಾಗ ಅದೇ ವೇಳೆಗೆ ಕಲಬುರಗಿ ಕಡೆಯಿಂದ ಒಬ್ಬ ಲಾರಿ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ಅಡ್ಡಾತಿಡ್ಡಿಯಾಗಿ ನಡೆಸುತ್ತ ಬಂದು ನಾನು ಕುಳಿತು ಬರುತಿದ್ದ ಕಾರಗೆ ಎದುರಿನಿಂದ ಜೋರಾಗಿ ಡಿಕ್ಕಿ ಹೋಡೆದು ಅಪಘಾತ ಪಡಿಸಿದನು. ನಂತರ ನಾನು ಕಾರನಿಂದ ಕೆಳಗೆ ಇಳಿದು ನೋಡಲು ನನಗೆ ದವಾಖಾನೆಗೆ ತೋರಿಸುವಂತ ಯಾವುದೇ ಗಾಯಗಳು ಆಗಿರಲಿಲ್ಲ ಕಾರ ನಡೆಸುತ್ತಿದ್ದ ನನ್ನ ತಮ್ಮನಿಗೆ ನೋಡಲು ಅವನ ಬಲಗಡೆ ಮೇಲಕಿಗೆ ಭಾರಿ ರಕ್ತಗಾಯವಾಗಿದ್ದು. ತಲೆಯ ಹಿಂಭಾಗಕ್ಕೆ ರಕ್ತಗಾಯವಾಗಿದ್ದು. ಎಡಗೈ ಮುಂಗೈಗೆ ಭಾರಿ ಗುಪ್ತಗಾಯವಾಗಿದ್ದು. ಸ್ವಂಟಕ್ಕೆ ಗುಪ್ತಗಾಯವಾಗಿದ್ದು. ಎಡಕಾಲ ಮೋಣಕಾಲ ಕೆಳಗೆ ರಕ್ತಗಾಯ ಹಾಗೂ ಅಲ್ಲಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದು. ಅಲ್ಲದೆ ನಮ್ಮ ಕಾರ ಕೂಡಾ ಜಖಂಗೊಂಡಿರುತ್ತದೆ. ನಂತರ ನಮಗೆ ಅಪಘಾತ ಪಡಿಸಿದ ಲಾರಿ ನೋಡಲು ಅದರ ನಂಬರ ಯು.ಪಿ-32 ಸಿ.ಎನ್-6344 ನೇದ್ದುಇದ್ದು ಅಪಘಾತ ನಂತರ ಅದರ ಚಾಲಕನು ಲಾರಿಯನ್ನು ರೋಡಿನ ಮೇಲೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರುಕಳದಿಂದ ಹತ್ಯೆ ಮಾಡಿಕೊಂಡ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಅಂಜುಮ್ ಗಂಡ ಮಹಮ್ಮದ ಜಾವೀದ್ ಸಾ : ಮಿಜಬಾ ನಗರ ಕಲಬುರಗಿ ರವರ ಮದುವೆಯು ಸುಮಾರು 5 ವರ್ಷಗಳ ಹಿಂದೆ ಮಹಮ್ಮದ ಜಾವೀದ ಇವನೊಂದಿಗೆ ನಮ್ಮ ಸಂಪ್ರದಾಯದಂತೆ ನಮ್ಮ ತಂದೆ ತಾಯಿವರು  ಹಾಗು ಸಂಸಾರಕ್ಕೆ ಬೇಕಾಗುವ ಸಾಮಾನುಗಳು ಕೊಟ್ಟು ಮದುವೆ ಮಾಡಿಕೊಟ್ಟಿದ್ದು .ನಾನು ಮತ್ತು ನನ್ನ ಗಂಡ ಮಿಜಬಾ ನಗರದ ಮಮತಾಜ ಎಂಬುವವರ ಮನೆಯಲ್ಲಿ ಬಾಡಿಗೆಯಿಂದ ಇದ್ದೇವು. ನನ್ನ ಗಂಡ ಮಹಮ್ಮದ ಜಾವೀದ್ ಇತನು ಮದುವೆ ಆಗಿ ಕೆಲವು ತಿಂಗಳವರೆಗೆ ಚೆನ್ನಾಗಿ ನೋಡಿಕೊಂಡು ನಂತರ ನನ್ನ ಗಂಡ ಮಹಮ್ಮದ ಜಾವೀದ ಇತನು ನನಗೆ ಸರಾಯಿ ಕುಡಿಯಲು ಹಣ ಕೊಡು ಇಲ್ಲದಿದ್ದರೇ ನೀನು ಹಣ ಕಟ್ಟಿದ ಮಹಿಳಾ ಸಂಘದಿಂದ ಸಾಲದ ರೂಪದಲ್ಲಿ ಹಣ ತಂದು ಕೊಡು ಇಲ್ಲದಿದ್ದರೇ ನನ್ನ ಮನೆ ಬಿಟ್ಟು ಹೋಗು ಅಂತಾ ದಿನಾಲು ಹೊಡೆ ಬಡೆ ಮಾಡಿ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡಲು ಪ್ರಾರಂಬಿಸಿದನು. ಈ ವಿಷಯದ ಬಗ್ಗೆ ನಮ್ಮ ಓಣಿಯಲ್ಲಿ ಇರುವ ನನ್ನ ತಾಯಿ ಜರೀನಾ ಬೇಗಂ ಇವಳಿಗೆ ತಿಳಿಸಿದಾಗ ನನ್ನ ದೊಡ್ಡಪ್ಪ ಸೈಯ್ಯದ ಸಾಬ ಇವರು ನಮ್ಮ ಮನೆಗೆ ಬಂದು ಪಂಚಾಯತಿ ಮಾಡಿರು ಕೂಡಾ ನನ್ನ ಗಂಡ  ದಿನಾಲು ಹೊಡೆ ಬಡೆ ಮಾಡಿ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡಲು ಪ್ರಾರಂಬಿಸಿದನು  ದಿನಾಂಕ:-20/08/2016 ರಂದು ಬೆಳಗ್ಗೆ  ನಾನು ಪ್ರತಿ ದಿವಸದಂತೆ ಎದ್ದು ಮನೆಯಲ್ಲಿ ಕಸಾಗೂಡಿಸುತ್ತಿದ್ದಾಗ ಆಗ ನನ್ನ ಗಂಡ ಮಹಮ್ಮದ ಜಾವೀದ ಇತನು ನನಗೆ ಎದ್ದು ನನಗೆ ಏ ರಂಡಿ ನನಗೆ ಸರಾಯಿ ಕುಡಿಯಲು ಹಣ ಕೊಡು ಅಂತಾ ಕೇಳಿದಾಗ ಆಗ ನನ್ನ ಹತ್ತಿರ ಹಣ ಇಲ್ಲಾ ಅಂತಾ ಅಂದೇನು ಆಗ ನೀನು ಕಟ್ಟುತ್ತಿದ್ದ ಮಹಿಳಾ ಸಂಘದಿಂದ ಸಾಲ ತೆಗೆದುಕೊಂಡು ಬಾ ಅಂತಾ ಅಂದಾಗ ಆಗ ಈ ಮೊದಲು ಸಾಲ ತೆಗೆದುಕೊಂಡು ಹಣ ಇನ್ನು ಕಟ್ಟಿರುವುದಿಲ್ಲಾ ಅದೇ ಸಾಲ ಇನ್ನು ಬಾಕಿ ಇದೆ ಸಂಘದವರು ಸಾಲ ಕೊಡುವುದಿಲ್ಲಾ ಅಂತಾ ಅಂದಾಗ ಏ ಬೋಸಡಿ ಹಣ ತರದೇ ಇದ್ದರೇ ಎಲ್ಲಿಯಾದರೂ ಹೋಗಿ ಸಾಯಿ ನನ್ನ ಮನೆಯಲ್ಲಿ ಇರಬೇಡಾ ಮನೆಯಿಂದ ಹೊರಗೆ ನಡೆ ಅಂತಾ ಅವಾಚ್ಯವಾಗಿ ಬೈಯ್ದು ಕೈಯಿಂದ ಮೈಮೇಲೆ ಒಂದೆ ಸವನೇ ಹೊಡೆಯುತ್ತಿದ್ದಾಗ ಆಗ ನಮ್ಮ ಮನೆಯ ಮಾಲಕಿ ಮಮತಾಜ, ಹಾಗು ಪರಿಚಯದ ಮೆಹಿಬೂಬಸಾಬ ಡಾಂಗೇ ಇವರು ಬಂದು ನನಗೆ ಹೊಡೆವುದನ್ನು ಬೀಡಿಸಿ  ನನ್ನ ಗಂಡನಿಗೆ ಹೊರಗೆ ಕಳಿಸಿದರು ನಂತರ ನಾನು ನನ್ನ ಗಂಡ ದಿನಾಲು  ಬೆಂಕಿ ಹತ್ತಿದ್ದರ ತ್ರಾಸ ಕೊಡುತ್ತಿದ್ದ ತ್ರಾಸ ತಾಳಲಾರದೇ ಮನೆಯಲ್ಲಿಟ್ಟಿದ್ದ ಸೀಮೆ ಎಣ್ಣೆ ಮೇಮೈಲೆ ಹಾಕಿಕೊಂಡು ಮೈಗೆ ಬೆಂಕಿ ತಾಳಲಾರದೆ ಒಂದೆ ಸವನೇ ಚೀರಾಡುತ್ತಿದ್ದಾಗ ಆಗ ಮನೆಯ ಮಾಲಕಿ ಮಮತಾಜ ಹಾಗು ಮೆಹಿಬೂಬಸಾಬ ಡಾಂಗೆ ಇವರು ಬಂದು ನನ್ನ ಮೈಮೇಲೆ ನೀರು ಹಾಕಿ ಮೈಗೆ ಹತ್ತಿದ ಬೆಂಕಿಯನ್ನು ಆರಿಸಿದ್ದು  ನನ್ನ ಮೈಯ ಎಲ್ಲಾ ಕಡೆ ಸುಟ್ಟಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದಿನಾಂಕ: 03/09/2016 ರಂದು ಬೆಳಿಗ್ಗೆ 7-00 ಗಂಟೆಗೆ ಮೃತಳ ತಂದೆಯಾದ ಹುಸೇನ್‌ಬಾಷಾ ತಂದೆ ಹೈದರ್‌ಸಾಬ್ ಹದರೆಸಾಬ್ ಮೊಮಿನ್‌ ಸಾ: ಮಿಜಬಾ ನಗರ ಕಲಬುರಗಿ ಮೃತ ಅಂಜುಮ ಗಂಡ ಮಹ್ದದ್‌‌ ಜಾವೇದ್‌ ಸಾ: ಮಿಜಬಾ ನಗರ ಇವಳು ದಿನಾಂಕ: 20/08/2016 ರಿಂದ ದಿನಾಂಕ: 03/09/2016 ರ ವರೆಗೆ ಮೈಸುಟ್ಟ ಗಾಯಗಳ ಉಪಚಾರ ಪಡೆಯುತ್ತಾ ಉಪಚಾರದಲ್ಲಿ ಗುಣಮುಖವಾಗದೇ ದಿನಾಂಕ: 03/09/2016 ರಂದು ಬೆಳಿಗ್ಗೆ  1-00 ಎಎಂ ಕ್ಕೆ ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

03 September 2016

Kalaburagi District Reported Crimes

ಅಪಘಾತ ಪ್ರಕರಣಗಳು :
ಫರತಾಬಾದ ಠಾಣೆ : ಶ್ರೀ ರಾಹುಲ ತಂದೆ ರಾಮಚಂದ್ರ ಸರ್ವೋದೆ ಸಾ : ಸೋಲಾಪೂರ ಹೋಟೆಲ ಹತ್ತೀರ ಶಹಾಬಾದ ಇವರ ಚಿಕ್ಕಪ್ಪನಾದ ಅಶೋಕ ತಂದೆ ರಾಮಚಂದ್ರ ಸರ್ವೋದೆ ಇವರು ತಮ್ಮ ಹೆಂಡತಿ ಮಕ್ಕಳೊಂದಿಗೆ ಶಹಾಪೂರ ನಗರದಲ್ಲಿ ವಾಸವಾಗಿದ್ದು ಈಗ 8 ದಿನಗಳ ಹಿಂದೆ ಶಹಾಬಾದಕ್ಕೆ ಬಂದು ನಮ್ಮ ಹತ್ತೀರ ಉಳಿದುಕೊಂಡು ಇಂದು ದಿನಾಂಕ 01/09/2016 ರಂದು ಮದ್ಯಾನ್ಹ 03 ಗಂಟೆಯ ಸುಮಾರಿಗೆ ಶಹಾಪೂರಕ್ಕೆ ಹೋಗುವದಾಗಿ ಹೇಳಿ ಹೋಗಿರುತ್ತಾರೆ ನಂತರ ರಾತ್ರಿ 08 ಗಂಟೆಯ ಸುಮಾರಿಗೆ ಯಾರೊ ದಾರಿಗೆ ಹೋಗುವವರು ನನಗೆ ಪೋನ ಮಾಡಿ ವಿಷಯ ತಿಳಿಸಿದ್ದೇನೆಂದರೆ ಜೇವರ್ಗಿಯಿಂದ ಕಲಬುರಗಿ ಕಡೆಗೆ ಹೋಗುವ ಎನ್.ಹೆಚ್-218 ರೋಡಿನ ಮೇಲೆ ಹಸನಾಪೂರ ಕ್ರಾಸ್ ದಿಂದ ಸುಮಾರು ಅರ್ದ ಕಿ.ಮಿ ಅಂತರದಲ್ಲಿ ಕಲಬುರಗಿ  ಕಡೆಗೆ ಯಾವುದೋ ಒಂದು ವಾಹನದ ಚಾಲಕ ತನ್ನ ವಾಹನವನ್ನು ಅತಿ ವೇಗ ಮತ್ತು ಅಜಾಗುರೂಕತೆಯಿಂದ ಚಲಾಯಿಸಿ ರೋಡಿಗೆ ನಡೆದುಕೊಂಡು ಹೋಗು ತ್ತೀರುವ ಅಶೋಕ ಸರ್ವೋದೆ ಅನ್ನುವವರೆಗೆ ಡಿಕ್ಕಿ ಪಡಿಸಿದ್ದರಿಂದ ತಲೆಗೆ ಭಾರಿ ರಕ್ತಗಾಯ ಮತ್ತು ಹೋಟ್ಟೆಯ ಮೇಲೆ ವಾಹನದ ಟಾಯರ ಹಾಯಿದ ಪರಿಣಾಮವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಈ ಘಟನೆಯ ನಂತರ ಸದರಿ ವಾಹನದ ಚಾಲಕ ತನ್ನ ವಾಹನ ಸಮೇತ ಅಲ್ಲಿಂದ ಓಡಿ ಹೋಗಿರುತ್ತಾನೆ .ಅಂತಾ ತಿಳಿಸಿದ ಕೂಡಲೆ ನಾವು ಗಾಬರಿಯಾಗಿ ಸದರಿ ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ ವಿಷಯ ನಿಜವಿದ್ದು.  ನಾನು ನನ್ನ ಚಿಕ್ಕಪ್ಪನ ಶವ ನೋಡಿ ಗುರುತಿಸಿರುತ್ತೇನೆ. ಕಾರಣ ಮಾನ್ಯರು ನನ್ನ ಚಿಕ್ಕಪ್ಪ ಅಶೋಕ ತಂದೆ ವಾಸುದೇವ ಸರ್ವೋದೆ ಇವರಿಗೆ ಡಿಕ್ಕಿ ಪಡಿಸಿ  ಓಡಿ ಹೋದ ವಾಹನ ಚಾಲಕ ನನ್ನು ಪತ್ತೆ ಹಚ್ಚಿ ಅವನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸ ಬೇಕು ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ಶ್ರೀ ಅರುಣಕುಮಾರ ತಂದೆ ಮಲ್ಲೇಶಪ್ಪಾ ಹಾಗರಗುಂಡಗಿ ಸಾ: ಸರಸ್ವತಿ ಫಾರಂ ಕಲಬುರಗಿ  ಯುನಿವರ್ಶಿಟಿ  ಹಿಂದುಗಡೆ ಕಲಬುರಗಿ ರವರು ದಿನಾಂಕ:  02/09/2016 ರಂದು ಬೆಳ್ಳಿಗ್ಗೆ  ನಮ್ಮ ಸಂಬಂಧಿಕರ ಜಮಖಂಡಿಯಲ್ಲಿ ಕಾರ್ಯಕ್ರಮ ವಿದ್ದ ಪ್ರಯುಕ್ತ ಸದರಿ ಕಾರಿನಲ್ಲಿ  ನಾನು, ನನ್ನ ಹೆಂಡತಿ ಸರೋಜಾ ನನ್ನ ಮಗಳಾದ ಸುಮಾರಾಣಿ ಕೂಡಿ ಬೆಳ್ಳಿಗ್ಗೆ 5 ಎಎಮಕ್ಕೆ ಕಲಬುರಿಗಿಯ ಮನೆಯಿಂದ ಬಿಟ್ಟು ಸದರಿ ಕಾರಿನಲ್ಲಿ ಎಲ್ಲರೂ ಕುಳಿತು ಹೋಗುವಾಗ  ನಮ್ಮ ಚಾಲಕ ಶರಣು ತಳವಾರ  ಈತನು ಸದರ ಕಾರ ಅತಿವೇಗದಿಂದ ಹಾಗೂ ಅಲಕ್ಷತನದಿಂದ  ನಡೆಸುತ್ತಾ  ಜೇವರ್ಗಿ ಕಡೆಗೆ ಹೋಗುವಾಗ  ಸದರಿ ಕಾರು ಫರಹತಾಬಾದ ಇನ್ನೂ ಅಂದಾಜು 200 ಮೀಟರ  ದೂರ ಇರುವಾಗ ಕಾರಿನ ಟೈರ ಬಸ್ಟ ಆಗಿ ಎದುರಿನಿಂದ  ಬರುತ್ತಿದ್ದ   ಐಶ್ಚರ ಗೂಡ್ಸ್‌‌‌ ವಾಹನ ನಂಬರ ಕೆಎ 36 ಎ- 7906 ನೇದ್ದಕ್ಕೆ ಹಾಯಿದ  ಪರಿಣಾಮ ಒಳಗಿದ್ದ  ನನಗೆ ಎಡಗೈ ಮಣಿಕಟ್ಟಿಗಿ ಗುಪ್ತಪೆಟ್ಟಾಗಿದ್ದು ನನ್ನ ಹೆಂಡತಿ  ಸರೋಜಾಳಿಗೆ  ಹೊಟ್ಟೆಗೆ ಗುಪ್ತ ಪೆಟ್ಟಾಗಿದ್ದು ನನ್ನ ಮಗಳಾದ ಸುಮಾ ರಾಣೀಗೆ ಎಡಗಲ್ಲಕ್ಕೆ ತರಚಿದ ಗಾಯವಾಗಿದ್ದು  ಸದರ ಘಟನೆಯಾದಾಗ ಬೆಳಗಿನ ಜಾವ 5:30 ಗಂಟೆಯಾಗಿದ್ದು  ರಸ್ತೆಗೆ ಹೋಗಿ ಬರುವ ವಾಹನದವರು  ನೋಡಿ ನಮಗೆ ಕಾರಿನಿಂದ ಹೊರತೆಗೆದರು ನಂತರ ಸದರ ಘಟನೆ ಬಗ್ಗೆ ಮಾಹಿತಿ  ಮನೆಗೆ ತಿಳಿಸಿದಾಗ  ಯಾವುದೋ ಒಂದು ಕಾರ ಬಂದು ನಮ್ಮೆಲ್ಲರಿಗೆ  ಉಪಚಾರಕ್ಕಾಗಿ ಬಸವೇಶ್ವರ  ಆಸ್ಪತ್ರೆಗೆ  ತಂದು ಸೇರಿಕೆ ಮಾಡಿದ್ದು ನಮ್ಮ ಕಾರ ಚಾಲಕ ಶರಣು ಈತನ ಹಣೆಗೆ ತರಚಿದ ರಕ್ತಗಾಯವಾಗಿದ್ದು ನಮ್ಮ ಕಾರು ಬಲಭಾಗಕ್ಕೆ ಹೆಚ್ಚಿ ಪ್ರಮಾಣದಲ್ಲಿ ಹಾನಿಯಾಗಿರುತ್ತದೆ. ಕಾರಣ ಅತೀವೇಗದಿಂದ  ಹಾಗೂ ಅಲಕ್ಷತನದಿಂದ  ನಮ್ಮ ಕಾರ ನಂ ಕೆಎ 32 ಎನ್‌ 3011 ನೇದ್ದು ಓಡಿಸಿ ಟೈರ ಬಸ್ಟ್‌‌ ಆಗಿ ಐಚರ ವಾಹನಕ್ಕೆ ಡಿಕ್ಕಿ ಪಡಿಸಿ ಹಾಯಿಸಿದ  ಸದರ ಕಾರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸ ಬೇಕು ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.