POLICE BHAVAN KALABURAGI

POLICE BHAVAN KALABURAGI

23 July 2016

Kalaburagi District Reported Crimes

ಅಪಘಾತ ಪ್ರಕರಣಗಳು :
ಮಾಹಾಗಾಂವ ಠಾಣೆ : ದಿನಾಂಕ:21/07/2016 ರಂದು ಬೆಳಿಗ್ಗೆ ಮೃತ ಗುರುಸಿದ್ದಪ್ಪಾ ದಿನಸಿ ಈತನು ಎಂದಿನಂತೆ ಕುರಿಕೋಟಾದ ಸ್ವಾಮಿ ಇವರ ಟ್ರ್ಯಾಕ್ಟರ ನಂ. ಕೆಎ:32ಟಿಎ6202 ನೇದ್ದರ ಮೇಲೆ ವಟಿವಟಿ ಗ್ರಾಮಕ್ಕೆ ಮರಳು ಖಾಲಿ ಮಾಡಿ ಮರಳಿ 4-00 ಗಂಟೆ ಸುಮಾರಿಗೆ ವಟವಟಿಯಿಂದ ಮಹಾಗಾಂವ ಕಡೆಗೆ ಬರುವಾಗ ತಡಕಲ್ ಕ್ರಾಸ ಹತ್ತಿರ ಸದರಿ ಟ್ರ್ಯಾಕ್ಟರದಲ್ಲಿ ಕುಳಿತುಕೊಂಡು ಬರುವಾಗ ಟ್ರ್ಯಾಕ್ಟರ್ ಚಾಲಕನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಒಮ್ಮೇಲೆ ಕಟ್ ಹೊಡೆದಿದ್ದರಿಂದ ಟ್ರ್ಯಾಕ್ಟರ್ ದಲ್ಲಿ ಕುಳಿತ ಗುರುಸಿದ್ದಪ್ಪಾ ಇವರು ಕೆಳಗೆ ಬಿದಿದ್ದರಿಂದ ಸೊಂಟಕ್ಕೆ ಮತ್ತು ತಲೆಗೆ ಭಾರಿ ಗುಪ್ತಗಾಯಗಳಾಗಿರುತ್ತವೆ. ಸದರಿ ಅಪಘಾತ ಪಡಿಸಿದ ಚಾಲಕನು ಗುರುಸಿದ್ದಪ್ಪನಿಗೆ ಅದೇ ಟ್ರ್ಯಾಕ್ಟರದಲ್ಲಿ ಹಾಕಿಕೊಂಡು ಫಿರ್ಯಾದಿ ಮನೆಗೆ ತಂದು ಕೆಳಗೆ ಇಳಿಸಿ ತನ್ನ ಟ್ರ್ಯಕ್ಟರ್ ತೆಗೆದುಕೊಂಡು ಹೋಗಿದ್ದು. ನಂತರ ಫಿರ್ಯಾಧಿ ಮತ್ತು ತನ್ನ ಸಂಬಂಧಿಕರು ಕೂಡಿಕೊಂಡು ಉಪಚಾರ ಕುರಿತು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಕಲಬುರಗಿ ಕಾಮರೆಡ್ಡಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ. ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಾ ರಸ್ತೆ ಅಪಘಾತದಿಂದ ಆದ ಗಾಯಗಳಿಂದಾಗಿ ಗುಣಮುಖರಾಗದೇ ನನ್ನ ಗಂಡನು ರಾತ್ರಿ 9-30 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾರೆ. ಟ್ರ್ಯಾಕ್ಟರ್ ಚಾಲಕನ ಹೆಸರು ವಗೈರೆ ಗೊತ್ತಿರುವುದಿಲ್ಲಾ. ಆತನಿಗೆ ಪುನಃ ನೋಡಿದರೆ ಗುರ್ತಿಸುತ್ತೇನೆ. ಅಂತಾ ಶ್ರೀಮತಿ ಮಲ್ಲಮ್ಮಾ ಗಂಡ ಗುರುಸಿದ್ದಪ್ಪಾ ದಿನಸಿ ಸಾ: ಮಹಾಗಾಂವ ತಾ:ಜಿ: ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ :ಶ್ರೀ ಶಿವಪ್ರತಾಪ ತಂದೆ ಟೀಕಾರಾಮ ಕಲ್ಯಾಣಕಾರಿ ಸಾ: ಮನೆ ನಂ 1-3-290/210 ವಿಜಯನಗರ ಲೇಔಟ ಆಸಾಪೂರ ರೋಡ ರಾಯಚೂರ ಇವರು ದಿನಾಂಕ 21/07/2016 ರಂದು ತಮ್ಮ ಖಸಗಿ ಕೆಲಸಕ್ಕಾಗಿ ಕಲಬುರಗಿ ನಗಕ್ಕೆ ತಾನು ಮತ್ತು ಸಂಬಂದಿರಾದ ಭನುರಾಜ ತಂದೆ ಸೋಮನಾಥ ನಿಜಾಮಕರ, ಸತೀಶಕುಮಾರ ತಂದೆ ಲಕ್ಷ್ಮಣರಾವ ಮೈದರಕಾರಿ, ಅಮೀತ ತಂದೆ ಪ್ರಮೋದ ಶುಕ್ಲಾ, ಕಾರ ಚಾಲಕ ವೆಂಕಟೇಶ ನಾಯಕ ತಂದೆ ಭೀಮಣ್ಣ  ಎಲ್ಲರೂ ಕೂಡಿಕೊಂಡು ಕಾರ ನಂ ಕೆ-36 ಎನ್-4502 ನೆದ್ದರಲ್ಲಿ ಬಂದು ಕೆಲಸ ಮುಗಿಸಿಕೊಂಡು ಮರಳಿ ರಾಯಚೂರಕ್ಕೆ ಇಂದು ದಿನಾಂಕ 22/7/16 ರಂದು ರಾತ್ರಿ 1-30 ಗಂಟೆಯ ಸುಮಾರಿ ಹೋಗುತ್ತೀರುವಾಗ  ಫರಹತಾಬಾದ ಗ್ರಮ ದಾಟಿದ ಬಳಿಕ ಎನ್.ಹೆಚ್.218 ರೋಡಿನ ಮೇಲೆ ಸರಡಗಿ(ಬಿ) ಕ್ರಾಸ್ ಹತ್ತೀರ ಎದುರುಗಡೆಯಿಂದ ಒಂದು ಲಾರಿ ನಂ ಎಮ್.ಹೆಚ್-25,ಬಿ-7806ನೇದ್ದರ ಚಾಲಕ ತನ್ನ ಲರಿ ಅತೀವೇಗ ಮತ್ತು ಅಜಾಗುರಕತೆಯಿಂದ ಚಲಾಯಿಸಿ ನಿಯಂತ್ರಣ ಕಳೆದುಕೊಂಡು ನಮ್ಮ ಕಾರ ನಂ ಕೆ-36 ಎನ್-4502 ನೇದ್ದಕ್ಕೆ ಡಿಕ್ಕಿ ಪಡಿಸಿ ತನ್ನ ಲಾರಿ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತನೆ ಈ ಘಟನೆಯಿಂದ ತನಗೆ ಎದೆಗೆ ಮತ್ತು ಎರಡು ಕಲುಗಳಿಗೆ ಗುಪ್ತಗಾಯ ವಾಗಿದ್ದು ಇನ್ನೂಳಿದ ಭನುರಾಜ ಇತನಿಗೆ ಬಲಗೈ ಗೆ ಮತ್ತು ಹೊಟ್ಟೆಗೆ , ಬೆನ್ನೆಗೆ ಮುಖದ ಮೇಲೆ ರಕ್ತಗಾಯ ಮತ್ತು ಗುಪ್ತಗಾಯ ವಾಗಿದ್ದು , ಸತೀಶಕುಮಾರ ಇವರಿಗೆ ಮುಕದ ಮೆಲೆ ಮತ್ತು ತುಟಿಗೆ ರಕ್ತಗಾಯ ಹಾಗೂ ಗುಪ್ತಗಾಯ ವಾಗಿದ್ದು, ಅಮೀತ ಇತನಿಗೆ ಎರಡು ಕಾಲುಗಳಿಗೆ ಗುಪ್ತಗಾಯ ವಾಗಿದ್ದು ಹಾಗೂ ನಮ್ಮ ಕಾರ ಚಾಲಕ ವೆಂಕಟೇಶ ನಾಯಕ ಇತನಿಗೆ ಹೊಟ್ಟೆಗೆ,ಎದೆಗೆ ಹಾಗೂ ಸೊಂಟಕ್ಕೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಾಳಿಗಿದ್ದು  ನಾವು ಈ ಘಟನೆಟಯ ನಂತರ ಚಿಕಿತ್ಸೆಗಾಗಿ 108 ವಹಾನದಲ್ಲಿ ಚಿಕಿತ್ಸೆಗಾಗಿ ಬಸವೇಶ್ವರ ಆಸ್ಪತ್ರೆ ಕಲಬುರಗಿಗೆ ಹೋಗೆ ಸೇರಿಕೆ ಆಗಿ ಚಿಕಿತ್ಸೆ ಪಡೆದುಕೋಂಡಿರುತ್ತೆವೆ . ನಮ್ಮ ಕಾರಿಗೆ ಡಿಕ್ಕಿ ಪಡಿಸಿದ ಲಾರಿ ನಂ ಎಮ್.ಹೆಚ್-25,ಬಿ-7806ನೇದ್ದರ  ಚಾಲಕನ ಹೇಸರು ಮತ್ತು ವಿಳಸ ನಮಗೆ ಗೊತ್ತಾಗಿರುವದಿಲ್ಲಾ ನಾವು ಅವನನ್ನು ನೋಡಿದರೆ ಗುರುತಿಸುತ್ತೆವೆ ಅಂತಾ ಇತ್ಯಾದಿ ಸಾರಾಂಶದ ಮೆಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಶೇಖಜಿಲಾನಿ ತಂದೆ ಶೇಖಮಹೀಬೂಬಸಾಬ ಸಾ|| ಕನಕನಗರ ಖಣಿಏರಿಯಾ ಬ್ರಹ್ಮಪೂರ ಕಲಬುರಗಿ ಇವರು 5 ಜನ ಅಣ್ಣ ತಮ್ಮಂದಿರು ಇರುತ್ತೇವೆ 1) ಇಜಾಜ 2) ಪರೀದ 3) ನಾನು ಶೇಖಜಿಲಾನಿ 4) ರಿಯಾಜ 5) ಫಯಾಜ ಅಂತಾ ಇದ್ದು ನಾವು ರೀಯಾಜ ಮತ್ತು ಫಯಾಜ ಎಲ್ಲರೂ ಒಂದೆ ಕಡೆ ಇರುತ್ತೇವೆ ಫರೀದ ಮತ್ತು ಇಜಾಜ ಬೇರೆಕಡೆ ಇರುತ್ತಾರೆ ನನಗು ಫಯಾಜ ಮತ್ತು ರೀಯಾಜನಿಗೂ ನಡುವೆ ಮನೆಯ ಸಂಭಂದ ತಕರಾರು ಇರುತ್ತದೆ ಈ ಬಗ್ಗೆ ನನ್ನ ತಮ್ಮ ಫಯಾಜ ಇತನು ಮನೆ ಖಾಲಿ ಮಾಡಬೇಕು ಅಂತಾ ಅಗಾಗ ನನ್ನ ಜೋತೆಯಲ್ಲಿ ತಂಟೆತಕರಾರು ಮಾಡುತ್ತಾ ಬರುತ್ತಿದ್ದನು ನಿನ್ನೆ ದಿ||22/07/16 ರಂದು ರಾತ್ರಿ 8 ಗಂಟೆಯ ಸೂಮಾರಿಗೆ ನಾನು ಮತ್ತು ನನ್ನ ಹೆಂಡತಿ ರೇಸ್ಮಾ ನಮ್ಮ ಮನೆಯ ಮುಂದೆ ಮಾತನಾಡುತ್ತಾ ಕುಳಿತಾಗ ನನ್ನ ತಮ್ಮ ಫಯಾಜ ಇತನು ಬಂದು ನಮ್ಮ ಮ ನೆಯ ಕರೆಂಟ ಬಿಲ್ಲಿನ ಸಂಬಂದ ನನ್ನ ಜೋತೆಯಲ್ಲಿ ಜಗಳ ತೆಗೆದು ಮನೆ ಕರೆಂಟ ಕಟ್ಟಮಾಡಿದ್ದಾರೆ ನಿನ್ನ ಪಾಲಿನ ಹಣ ಕೊಡಬೇಕು ಅಂತಾ ನನಗೆ ಕೆಳಿದಾಗ ನಾನು ನಾಳೆ ಬೆಳಗ್ಗೆ ಕೊಡುತ್ತೇನೆ ಅಂತಾ ಹೇಳಿದ್ದು ಅವನು ಏ ಮಾದರಚೋದ ಸಾಲೆ ಶೇಖಜಿಲಾನಿ ತೂ ಕಬೀಬಿ ಐಸೈಯಿ ಹಮಾರಸೆ ತಕರಾರು ಕರತೆ ತೇರಾ ಕ್ಯಾ ಹಾಲ ಹೈ ತೇರೆಕೋ ಛೋಡತಾ ನೈಹಿ ಖಲಾಸ ಕರತು ಅಂತಾ ಕೋಲೆ ಮಾಡುವ ಉದ್ದೇಶದಿಂದ ತನ್ನ ಟೊಂಕ್ಕದಲ್ಲಿದ್ದ ಒಂದು ಚಾಕು ತೆಗೆದು ನನ್ನ ಎಡಗಡೆ ಎದೆಯ ಮೇಲೆ ಹೊಡೆದು ಭಾರಿ ರಕ್ತಗಾಯ ಮಾಡಿರುತ್ತಾನೆ ಆಗ ನನ್ನ ಹೆಂಡತಿ ರೇಸ್ಮಾ ಇವಳು ಬೀಡಿಸಲು ಬಂದಾಗ ಅವಳಿಗೂ ಕೂಡಾ ಅದೆ ಚಾಕುವಿನಿಂದ ಬಲಗೈ ಮೇಲೆ ಹೊಡೆದು ರಕ್ತಗಾಯ ಮಾಡಿರುತ್ತಾನೆ ಆಗ ನನ್ನ ತಮ್ಮ ರೀಯಾಜ ಇತನು ಬಂದು ಅಭೀಮಾರೋ ಸಾಲೇಕೋ ಅಂತಾ ಫಯಾಜನಿಗೆ ಪ್ರಚೋದನೆ ಕೊಡುತ್ತಿದ್ದನು ಇದನ್ನು ನೋಡಿ ಪಕ್ಕದ ಮನೆಯವನಾದ ಅಬ್ದುಲ ರಹೇಮಾನ ಮತ್ತು ನನ್ನ ಹೆಂಡತಿಯ ತಮ್ಮ ಮಹ್ಮದ ಅಜಾದ ಇವರು ಬಂದು ಜಗಳ ಬೀಡಿಸಿರುತ್ತಾರೆ ನನಗೆ ಭಾರಿ ರಕ್ತಗಾಯವಾಗಿದ್ದರಿಂದ ಉಪಚಾರ ಕುರಿತು ನನ್ನ ಹೆಂಡತಿ ಮತ್ತು ತೋಲು ತಂದೆ ನಜೀರ ಅಹ್ಮದ ಇವರು ಕಲಬುರಗಿ ನಗರದ ಜಿಲ್ಲಾ ಸರಕಾರಿ ಅಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣಮಾಡಿ ಅತ್ಯಚಾರ ಮಾಡಿದ ಪ್ರಕರಣ :
ಆಳಂದ ಠಾಣೆ : ಶ್ರೀಮತಿ ಸುನಂದಾ ಗಂಡ ಬಾಬುರಾವ ಕಡಗಂಚಿ ಮು:ಜಮಗಾ(ಜೆ) ತಾ:ಆಳಂದ ಗ್ರಾಮದ ಶಶಿಕಾಂತ ತಂದೆ ಕಲ್ಲಪ್ಪ ಆರ್ಯೆ ಇತನು ಮಲ್ಲಮ್ಮಾ ಎಂಬೂವಳೊಂದಿಗೆ ಮದುವೆಯಾಗಿದ್ದು ಅವನಿಗೆ ಒಂದು ಗಂಡು ಮಗು ಇದ್ದು ಸದ್ಯ ಅವನ ಹೆಂಡತಿ ಅವರ ತವರು ಮನೆಯಾದ ತಿರ್ಥ ಗ್ರಾಮದಲ್ಲಿ  ಇರುತ್ತಾಳೆ. ಹೀಗಿದ್ದು ದಿನಾಂಕ 22/06/2016 ರಂದು ರಾತ್ರಿ 9:30 ಗಂಟೆ  ಸುಮಾರಿಗೆ ಗ್ರಾಮದಲ್ಲಿ ನೀರಿನ ಬರ ಇದ್ದರಿಂದ ನೀರು ತರಲು ಹೋಗುವಾಗ ನಮ್ಮ ಮಗಳು ಟಿವಿ ನೋಡುತ್ತಾ ಕುಳಿತಿದ್ದರಿಂದ ನಾನು ನೀರು ತೆಗೆದುಕೊಂಡು ಮರಳಿ ಮನೆಗೆ ಬರುವಷ್ಟರಲ್ಲಿ ನನ್ನ ಮಗಳು ಕಾಣಿಸಲಿಲ್ಲಾ . ನಂತರ ನನ್ನ ಮಕ್ಕಳಾದ ಆರತಿ, ಹಾಗು ನಾಗೇಶ ಇವರಿಗೆ ವಿಚಾರಿಸಲು ನಮಗೆ ಏನು ಹೇಳದೆ ಕೇಳದೆ ಮನೆಯಿಂದ ಹೊರಗಡೆ ಹೋಗಿರುತ್ತಾಳೆ ಅಂತಾ ತಿಳಿಸಿದ್ದರಿಂದ ನಾನು ಆಕೆ ಬರಬಹುದು ಅಂತಾ ಸ್ವಲ್ಪ ಸಮಯ  ಕಳೆದಾಗ ಅಷ್ಟರಲ್ಲಿ ನಮ್ಮ ಅಣ್ಣತಮ್ಮಕೀಯ ತಮ್ಮನಾದ ಶಾಂತಪ್ಪ ತಂದೆ ಸೋಮಲಿಂಗ ಆರ್ಯೆ ಇತನು ತಿಳಿಸಿದ್ದೆನೆಂದರೆ ತಾನು ಬೈರ್ಯದೇಶಗೆ ಹೋಗಿ ಮರಳಿ ಬರುವಾಗ ನಿಮ್ಮ ಮಗಳು ನಮ್ಮ ಜಾತಿಯ ಶಶಿಕಾಂತ ತಂದೆ ಕಲ್ಲಪ್ಪ ಆರ್ಯ ಇತನೊಂದಿಗೆ ಹೋದಳು ಅಂತಾ ತಿಳಿಸಿದಾಗ ಈ ಬಗ್ಗೆ ಆಳಂದ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸದ್ದು ದಿನಾಂಕ:22/07/2016 ರಂದು ಕಲಬುರಗಿಯಲ್ಲಿ ಅಪಹರಣಕ್ಕೋಳಗಾದ ಬಾಲಕಿ ಇವಳು ಪತ್ತೆಯಾಗಿದ್ದು,  ಸರ್ಕಾರಿ ಪ್ರೌಢ ಶಾಲೆ ಜಿಡಗಾದಲ್ಲಿ ಈ ವರ್ಷ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡಿಕೊಂಡು ತಂದೆ-ತಾಯಿ ಯೊಂದಿಗೆ ವಾಸವಾಗಿರುತ್ತೇನೆ, ನಮ್ಮೂರಿನ ನಮ್ಮ ಸಂಬಂಧಿಯಾದ  ಶಶಿಕಾಂತ ತಂದೆ ಕಲ್ಲಪ್ಪಾ ಆರ್ಯ ಈತನ ಮನೆಯು ನಮ್ಮ ಮನೆಯ ಪಕ್ಕದಲ್ಲಿದ್ದು ಇತನು ನಮ್ಮ ಮನೆಗೆ ಬಂದು ಹೋಗುವದು ಮಾಡುತ್ತಿದ್ದರಿಂದ ನನ್ನ ಅವನ ಮಧ್ಯ ಸ್ನೇಹ ಬೆಳೆದಿದ್ದು ಇರುತ್ತದೆ.ದಿನಾಂಕ:22/06/2016 ರಂದು ರಾತ್ರಿ 09:30 ಗಂಟೆಯ ಸುಮಾರಿಗೆ ನನಗೆ ಶಶಿಕಾಂತನು ಪೋನ್ ಮಾಡಿ ನಿನ್ನ ಜೊತೆಗೆ ಮಾತನಾಡುವದಿದೆ ಜಿಡಗಾ ಕಮಾನ ಹತ್ತಿರ ಬಾ ಅಂತಾ ಹೇಳಿದಾಗ ನಾನು ಮನೆಯಲ್ಲಿ ಯಾರಿಗೂ ಹೇಳದೆ ಜಿಡಗಾ ಕಮಾನ ಹತ್ತಿರ ಹೋದಾಗ ಆಗ ಶಶಿಕಾಂತನು ನಿನಗೆ ಪ್ರೀತಿ ಮಾಡುತ್ತಿದ್ದೇನೆ ನಿನಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ನನಗೆ ಪುಸಲಾಯಿಸಿ ತಲೆ ಕೆಡೆಸಿ ನನಗೆ ರಾತ್ರಿ 09:45 ಗಂಟೆಗೆ ಮುಖಕ್ಕೆ ಸ್ಕಾರ್ಫ ಕಟ್ಟಿಕೊಳ್ಳು ಅಂತಾ ತಿಳಿಸಿ ಅಲ್ಲಿಂದ ರೋಡಿಗೆ ಹೋಗುವ ಒಂದು ವಾಹನದಲ್ಲಿ ಆಳಂದ ಬಸ್‌ ನಿಲ್ದಾಣಕ್ಕೆ ಬಂದು ನಂತರ ಯಾವುದೊ ಒಂದು ಬಸ್‌ ಮೂಲಕ ಕಲಬುರಗಿಗೆ ಹೋಗಿ ಶಶಿಕಾಂತ ಆರ್ಯ ಇತನು ತನ್ನ ಸಂಬಂದಿಕರ ಮನೆಗೆ ರಾತ್ರಿ ಕರೆದುಕೊಂಡು ಹೋಗಿದ್ದು ಆ ರಾತ್ರಿ ಅವರ ಮನೆಯಲ್ಲಿಯೇ ಉಳಿದುಕೊಂಡು ಒಂದು ವಾರದವರೆಗೆ ಅವರ ಮನೆಯಲ್ಲಿಯೇ ಇದ್ದೆವು. ನಂತರ ಶಶಿಕಾಂತ ಆರ್ಯ ಇತನು ಕಲಬುರಗಿ ನಗರದ ಸಿ.ಐ..ಬಿ. ಕಾಲೋನಿಯಲ್ಲಿ ಒಂದು ಬಾಡಿಗೆ ಮನೆ ಹಿಡಿದು ನನಗೆ ದಿನಾಂಕ:29/06/2016 ರಂದು ಅವನು ಅಲ್ಲಿಗೆ ಕರೆದುಕೊಂಡು ಹೋಗಿ ಆ ರಾತ್ರಿ ಸುಮಾರು 11:00 ಗಂಟೆಯ ಸುಮಾರಿಗೆ ನನಗೆ ಮದುವೆ ಮಾಡಿಕೊಳ್ಳುತ್ತೇನೆ ಎಂದು ಪುಸಲಾಯಿಸಿ  ನನಗೆ ಒತ್ತಾಯ ಪೂರ್ವಕವಾಗಿ ಸಂಬೋಗ ಮಾಡಿರುತ್ತಾನೆ. ಇದಲ್ಲದೇ ಹೀಗೆಯೇ ಎರಡು-ಮೂರು ಬಾರಿ ನನಗೆ ಜಬರಿ ಸಂಬೋಗ ಮಾಡಿರುತ್ತಾನೆ. ಈ ವಿಷಯ ಯಾರಿಗಾದರೂ ತಿಳಿಸಿದರೆ ನಿನಗೆ ಮದುವೆ ಆಗುವದಿಲ್ಲ ಅಂತಾ ಹೆದರಿಸಿರುತ್ತಾನೆ. ನನ್ನ ಸಂಬಂಧಿಯಾದ ಶಶಿಕಾಂತ ಆರ್ಯ ಇತನು ನನ್ನದೊಂದಿಗೆ ಸ್ನೇಹ ಬೆಳಸಿ ಮದುವೆಯಾಗುತ್ತೇನೆ ಅಂತಾ ಪುಸಲಾಯಿಸಿ ಸಂಗಡ ಕರೆದುಕೊಂಡು ಹೊಗಿ ನನ್ನ ಮೇಲೆ ಜಬರಿ ಸಂಬೋಗ ಮಾಡಿರುತ್ತಾನೆ. ನಂತರ ದಿನಾಂಕ:25/06/2016 ರಂದು ನನಗೆ ಅಪಹರಿಸಿಕೊಂಡು ಹೋಗಿರುತ್ತಾರೆ ಅಂತಾ ನಮ್ಮ ತಾಯಿ ಠಾಣೆಯಲ್ಲಿ ದೂರು ನೀಡಿರುತ್ತಾಳೆ ಅಂತಾ  ಶಶಿಕಾಂತ ಆರ್ಯ ಇತನಿಗೆ ಆತನ ಸಂಬಂಧಿಯಾದ ದಯಾನಂದ ಸಿಂಗೆ ಸಾ:ಶಕಾಪೂರ ಇವರು ತಿಳಿಸಿರುತ್ತಾರೆ ಅಂತಾ ಶಶಿಕಾಂತ ಆರ್ಯ ನನಗೆ ತಿಳಿಸಿದ್ದು ಇರುತ್ತದೆ. ಇಂದು ಆಳಂದ ಪೊಲೀಸ್ ಠಾಣೆಯ ಮಹಿಳಾ ಪೊಲೀಸರು ನಾನು ಇದ್ದ ವಿಳಾಸಕ್ಕೆ ಬಂದು ನನಗೆ ಹಿಡಿದು ಕರೆದು ತಂದಿರುತ್ತಾರೆ. ಅಂತಾ ತಿಳಿಸಿದ ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ದೇವಲಗಾಣಗಾಪೂರ ಠಾಣೆ : ದಿನಾಂಕ 22-07-2016 ರಂದು ಬಂದರವಾಡ ಗ್ರಾಮದ ಅಂಬಿಗರ ಚೌಡಯ್ಯ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ಬಾತ್ಮಿ ಮೇರೇಗೆ ಪಿ.ಎಸ್.ಐ. ಗಾಣಗಾಪೂರ ಹಾಗು ಸಿಬ್ಬಂದಿ ಮತ್ತು ಪಂಚರು ಸ್ಥಳಕ್ಕೆ ಹೋಗಿ ದಾಳಿ ಮಾಡಿ ಒಬ್ಬನನ್ನು ಹಿಡಿದು ವಿಚಾರಿಸಲು ಅವನು ತ್ನ್ನ ಹೆಸರು  ಮಾಳಪ್ಪ ತಂದೆ ಸಾವಿರಪ್ಪ ಪೂಜಾರಿ ಸಾ|| ಬಂದರವಾಡ ಅಂತಾ ತಿಳಿಸಿದ್ದು ಸದರಿಯವನಿಂದ ಜೂಜಾಟಕ್ಕೆ ಬಳಸಿದ ನಗದು ಹಣ  ಹಣ 1710/- ರೂಪಾಯಿ, ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ, ಒಂದು ಬಾಲ ಪೆನ್ನು ವಶಪಡಿಸಿಕೊಂಡು ಸದರಿಯವನೊಂದಿಗೆ ದೇವಲಗಾಣಗಾಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ. 

22 July 2016

Kalaburagi District Reported Crimes

ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಡಾ ಚಂದ್ರಶೇಖರ ತಂದೆ ದುಂಡಪ್ಪ ಕಡಗಂಚಿ ಇವರು ದಿನಾಂಕ 30.05.16 ರಂದು ಬೆಳಿಗ್ಗೆ 8-45 ಗಂಟೆ ಸುಮಾರಿಗೆ ನಾನು  ಕೆಲಸ ಮಾಡುವ ಬಸವೇಶ್ವರ ಆಸ್ಪತ್ರೆಗೆ ಮನೆಯಿಂದ ನನ್ನ ಮೋಟಾರ ಸೈಕಲ ನಂಬರ ಕೆಎ32/ಇಜಿ-0372 ನೇದ್ದನ್ನು ಚಲಾಯಿಸಿಕೊಂಡು ಐವಾನ ಇ ಶಾಹಿ ರೋಡದಿಂದ ಹೋಗುವಾಗ ಏಶಿಯನ ಮಾಲ ಎದುರು  ರೋಡ ಮೇಲೆ ಎದುರುಗಡೆಯಿಂದ ಮೋಟಾರ ಸೈಕಲ ನಂಬರ ಕೆಎ32/ಎಲ-0032 ನೇದ್ದರ ಸವಾರನು ತನ್ನ ಮೋಟಾರ ಸೈಕಲ ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ನನ್ನ ಎಡಗೈ  ರಿಸ್ಟ ಹತ್ತಿರ ಭಾರಿ ಗುಪ್ತ ಪೇಟ್ಟು , ಎಡ ಮತ್ತು ಬಲ ಪೇಕ್ಕೆಲುಬಿಗೆ ಭಾರಿ ಗುಪ್ತ ಪೇಟ್ಟು ಗುಪ್ತ ಅಂಗಳಿಗೆ ಭಾರಿ ಪೇಟ್ಟು ಗೊಳಿಸಿ ತನ್ನ  ಮೋಟಾರ  ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶಂಕರ ತಂದ ರೇವಣಸಿದ್ದಪ್ಪಾ ನಂದೇಣಿ ಇವರು ದಿನಾಂಕ 20-07-2016 ರಂದು ರಾತ್ರಿ 11-25 ಗಂಟೆ ಸುಮಾರಿಗೆ ನಾನು ನಮ್ಮ  ಮುತ್ತುತ ಪೀನ್ಕ್ರಾಪ ಪೈನಾನ್ಸ ಗಳಿಗೆ ನೇಮಿಸಿದ ಸಿಬ್ಬಂದಿ ಜನರಿಗೆ ಚೆಕ್ ಮಾಡುವ ಸಲುವಾಗಿ ನಾನು ಚಲಾಯಿಸುತ್ತಿರುವ ನಮ್ಮ ಪೈನಾನ್ಸ ಕಾರ ನಂಬರ ಕೆಎ03/ಎಮ.ಎಕ್ಷ 1747 ನೇದ್ದರಲ್ಲಿ ಸೆಕ್ಯೂರಿಟಿ ಸುಪರವೈಸರ್ ಸಿದ್ದರಾಮ ತಂದೆ ಮಹಾದೇವಪ್ಪ ಸಿರಗುಂಡೆ ಹಾಗೂ ರಾಜಶೇಖರ ತಂದೆ ಶಿವಶರಣಪ್ಪ ಹೂವಿನಬಾಯಿ ರವರನ್ನು ಕೂಡಿಸಿಕೊಂಡು ಪಸ್ತಾಪೂರ ಆಸ್ಪತ್ರೆ ಹತ್ತಿರ ಬರುವ ಹಾಗೂ ಆನಂದ ಹೋಟೆಲ ಹತ್ತಿರ ಬರುವ ಪೈನಾನ್ಸಗಳನ್ನು ಚೆಕ್ ಮಾಡಿಕೊಂಡು ಸುಪರ್ ಮಾರ್ಕೆಟನಲ್ಲಿರುವ ಪೈನಾನ್ಸ ಚೆಕ್ ಮಾಡುವ ಸಲುವಾಗಿ ಗೋವಾ ಹೋಟೆಲ ಮುಖಾಂತರ ನಾನು ಜಗತ್ ಸರ್ಕಲ್ ಕಡೆಗೆ ಕಾರ ಚಲಾಯಿಸಿಕೊಂಡು ಹೋಗುವಾಗ ದಾರಿ ಮದ್ಯ ಯಲ್ಲಮ್ಮಾ ಟೆಂಪಲ ಹತ್ತೀರ ರೋಡ ಮೇಲೆ ಶರಣಪ್ಪ ತಂದೆ ವಿಠ್ಠಲ ಪಾಟೀಲ ಸಾ: ಸಮತಾ ಕಾಲೋನಿ ಇತನು ಮೋಟಾರ ಸೈಕಲ ನಂಬರ ಕೆಎ32/ಅರ 1240 ನೇದ್ದನ್ನು ಜಗತ ಸರ್ಕಲ್ ಕಡೆಯಿಂದ ಅಡ್ಡದಿಡ್ಡಿಯಾಗಿ ಚಲಾಯಿಸುತ್ತಾ ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಎದುರಿನಿಂದ ಬಂದು ನಮ್ಮ ಕಾರಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ನಮ್ಮ ಕಾರ ಬಲ್ಬ ಎದುರಿನ ಲ್ಯಾಂಪ ಅದರ ವ್ಹಿಲ್ವ ಕವರ, ಬಲಗಡೆ ಸೈಡಿನ ಲ್ಯಾಂಪ ಬಲ ಸೈಡಿನ ಹೆಡ್ ಲ್ಯಾಂಪ, ಬ್ರಾಕೇಟ್ ಕವರ, ವ್ಹಿಲ್ ಹೌಸ ಕವರ ಬಂಪರ ಬಾರ ಹಾಗೂ ಇತರ ಕಡೆಗೆ ಡ್ಯಾಮೇಜ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ  ಪ್ರಕರಣ ಧಾಖಲಾಗಿದೆ.
ಕಿರುಕಳ ನೀಡಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದನೆ ಮಾಡಿದ ಪ್ರಕರಣ :
ಕಮಲಾಪೂರ ಠಾಣೆ : ಶ್ರೀಮತಿ ಲಕ್ಷ್ಮಿಬಾಯಿ ಗಂಡ ಬಸಪ್ಪ ಪೂಜಾರಿ ಸಾ: ಘೊಗ್ಗಾ ತಾ: ಬಸವಕಲ್ಯಾಣ ಜಿ: ಬೀದರ ಇವರ 2ನೇ ಮಗಳಾದ ಮುನ್ನಾಬಾಯಿ ಇವಳಿಗೆ ಈಗ 5 ವರ್ಷಗಳ ಹಿಂದೆ ಡೊರಜಂಬಗಾ ಗ್ರಾಮದ ನಮ್ಮ ಸಂಬಂದಿಕರಾದ ಅಂಬಾರಾಯ ಪೂಜಾರಿ ಇವರ ದೊಡ್ಡ ಮಗನಾದ ಮಲ್ಲಿಕಾರ್ಜುನ  ಇತನಿಗೆ ಕೊಟ್ಟು ಮದುವೆ ಮಾಡಿ ಕೊಟ್ಟಿದ್ದು ನನ್ನ ಮಗಳಾದ ಮುನ್ನಾಬಾಯಿ ಇವಳಿಗೆ ಅಂಬಿಕಾ ವಯ 4 ವರ್ಷ ಮತ್ತು ಅಂಜಲಿ ವಯ: 10 ತಿಂಗಳು ಅಂತ ಇಬ್ಬರು ಹೆಣ್ಣು ಮಕ್ಕಳಿದ್ದು. ನನ್ನ ಮಗಳು ಆಗಾಗ ಹಬ್ಬಕ್ಕೆ ನಮ್ಮಲ್ಲಿಗೆ ಬಂದಾಗ ನಮಗೆ ತಿಳಿಸಿದ್ದೆನೆಂದರೆ ತನ್ನ ಅತ್ತೆ ರಂಗಮ್ಮ, ಅಜ್ಜಿ ರ್ಯಾವಮ್ಮ ಮತ್ತು ಗಂಡನ ಮನೆಯವರು ತನಗೆ ಚೆನ್ನಾಗಿ ನೋಡಿಕೊಳ್ಳುತ್ತಾರೆ ಆದರೆ ತನ್ನ ಗಂಡ ಆಗಾಗ ಕುಡಿದು ಬಂದು ತನ್ನೊಂದಿಗೆ ಜಗಳ ಮಾಡಿ ತನಗೆ ಹೊಡೆಬಡೆ ಮಾಡುತ್ತಾನೆ ಮತ್ತು ಮನೆಗೆ ಸಾಮಾನುಗಳನ್ನು ಹಾಗೂ ಮಕ್ಕಳಿಗೆ ಬಟ್ಟೆ ಇತರೆ ವಸ್ತುಗಳನ್ನು ತೆಗೆದುಕೊಂಡು ಬರಲು ಹೇಳಿದರೆ ಜಗಳ ಮಾಡಿ ಹೊಡೆಬಡೆ ಮಾಡುತ್ತಾನೆ ಅಂತ ತಿಳಿಸುತ್ತಾ ಬಂದಿದ್ದು ಇರುತ್ತದೆ. ನಾನು ನನ್ನ ಅಳಿಯನಿಗೆ ಮುನ್ನಾಬಾಯಿಯೊಂದಿಗೆ ಜಗಳ ಮಾಡಬೇಡ ಅವಳಿಗೆ ತೊಂದರೆ ಕುಡಬೇಡ ಅಂತ ತಿಳಿ ಹೇಳಿದ್ದು ಇರುತ್ತದೆ. ಮತ್ತು ಅವನ ಮನೆಯವರು ಕುಡಾ ಅವನಿಗೆ ತಿಳಿ ಹೇಳಿದ್ದು ಆದರು ಕೂಡಾ ಸದರಿಯವನು ಕುಡಿದು ಬಂದು ನನ್ನ ಮಗಳ ಸಂಗಡ ಜಗಳ ಮಾಡುತ್ತಾ ಬಂದಿದ್ದು ದಿನಾಂಕ 21.07.2016 ರಂದು ಸಾಯಂಕಾಲ 4:00 ಗಂಟೆಯ ಸುಮಾರಿಗೆ ಡೊರ ಜಂಬಗಾ ಗ್ರಾಮದ ಅಂದಪ್ಪ ಇವರು ನಮಗೆ ಪೋನ ಮಾಡಿ ತಿಳಿಸಿದ್ದೆನೆಂದರೆ ನನ್ನ ಮಗಳಾದ ಮುನ್ನಾಬಾಯಿ ಇವಳು ಮೈ ಮೇಲೆ ಸಿಮೇ ಎಣ್ಣಿ ಹಾಕಿಕೊಂಡು ಬೆಂಕಿ ಹಚ್ಚಿಕೊಂಡು ಮೃತ ಪಟ್ಟಿದ್ದಾಳೆ ಮತ್ತು ಅವಳ ಇಬ್ಬರ ಮಕ್ಕಳಿಗೆ ಬೆಂಕಿ ಹತ್ತಿದ್ದು ಅವರಲ್ಲಿ ಅಂಬಿಕಾ ಇವಳು ಮೃತ ಪಟ್ಟಿದ್ದು ಅಂಜಲಿ ಇವಳಿಗೆ ಉಪಚಾರ ಕುರಿತು ಕಲಬುರಗಿಗೆ ಕರೆದುಕೊಂಡು ಹೋಗಿದ್ದಾರೆ ಅಂತ ತಿಳಿಸಿದ್ದು. ಆಗ ಗಾಬರಿಗೊಂಡು ನಾನು ನನ್ನ ಮೈದುನ, ಮಲ್ಲಿಕಾರ್ಜುನ, ನೇಗೆಣಿಯರಾದ ಗೌರಮ್ಮ ದೈವಿತಾ, ನನ್ನ ಮಕ್ಕಳಾದ ಬೀರಪ್ಪ, ಶಿವರಾಮ ಮತ್ತು ನಮ್ಮ ಸಂಬಂದಿಕರಾದ ಸಾಯಿಬಣ್ಣ, ಸಂಗೀತಾ, ಸಂಪತಬಾಯಿ ಕೂಡಿಕೊಂಡು ಡೊರಜಂಬಗಾ ಗ್ರಾಮಕ್ಕೆ ಬಂದು ನೋಡಲು ನನ್ನ ಮಗಳಾದ ಮುನ್ನಾಬಾಯಿ ಮತ್ತು ಮೊಮ್ಮಗಳಾದ ಅಂಬಿಕಾ ಇಬ್ಬರು ಮನೆಯಲ್ಲಿ ಸುಟ್ಟಗಾಯಗಳಿಂದ ಮೃತ ಪಟ್ಟಿದ್ದು ಆಗ ನಾನು ರಂಗಮ್ಮಳಿಗೆ ವಿಚಾರಿಸಲು ಅವಳು ತಿಳಿಸಿದ್ದೆನೆಂದರೆ, ಮುಂಜಾನೆ ಮನೆಯಲ್ಲಿ ಎಲ್ಲರು ಹೊಲಕ್ಕೆ ಮತ್ತು ಶಾಲೆಗೆ ಹೋಗಿದ್ದು ಮನೆಯಲ್ಲಿ ನಾನು ಮುನ್ನಾಬಾಯಿ ಮತ್ತು ಅವಳ ಮಕ್ಕಳು ಮಾತ್ರ ಇದ್ದು ಮಧ್ಯಾನ 2 ಗಂಟೆಯ ಸುಮಾರಿಗೆ ಮಲ್ಲಿಕಾರ್ಜುನ ಇತನು ಕುಡಿದು ಮನೆಗೆ ಬಂದಿದ್ದು ಆಗ ಮುನ್ನಾಬಾಯಿ ಇವಳು ಮಲ್ಲಿಕಾರ್ಜುನನಿಗೆ ಕುಡಿದು ಮನೆಗೆ ಬರಬೇಡ ಕುಡಿಯಲ್ಲಿಕ್ಕೆ ಎಲ್ಲಿಂದ ಹಣ ಬರುತ್ತದೆ. ಮನೆಗೆ ಯಾವುದೆ ಸಾಮಾನುಗಳು ತರುವದಿಲ್ಲ ಮತ್ತು ಮಕ್ಕಳಿಗೆ ಬಟ್ಟೆ ಬರೆ ಎನು ತಂದು ಕುಡುವದಿಲ್ಲ ಹೀಗೆ ಆದರೆ ನಾವು ಹೇಗೆ ಬದುಕಬೇಕು ಅಂತ ಕೇಳಿದ್ದು ಆಗ ಮಲ್ಲಿಕಾರ್ಜುನ ಇತನು ಮುನ್ನಾಬಾಯಿಯೊಂದಿಗೆ ಜಗಳ ಮಾಡಿ ಅವಳಿಗೆ ಹೊಡೆಬಡೆ ಮಾಡಿದ್ದು ಆಗ ನಾನು ಹೋಗಿ ಮಲ್ಲಿಕಾರ್ಜುನನಿಗೆ ಬೈದು ಕಳುಹಿಸಿದ್ದು ಇರುತ್ತದೆ. ಅವನು ಹೋದ ನಂತರ ನಾನು ಮನೆಯ ಅಂಗಳದಲ್ಲಿ ಕೇಲಸ ಮಾಡಿಕೊಂಡಿದ್ದು ಮುನ್ನಾಬಾಯಿ ಮತ್ತು ಅವಳ ಮಕ್ಕಳು ಮನೆಯ ಒಳಗೆ ಇದ್ದು. ಮಧ್ಯಾನ 3 ಗಂಟೆಯ ಸುಮಾರಿಗೆ ಮನೆಯಿಂದ ಒಮ್ಮಲೆ ಚಿರಾಡುವ ಸಪ್ಪಳ ಕೇಳಿ ಬರುತ್ತಿದ್ದು ಗಾಬರಿಗೊಂಡು ನಾನು ಮನೆಯ ಒಳಗೆ ಬಂದು ನೋಡಲು ಮುನ್ನಾಬಾಯಿ ಇವಳು ತನ್ನ ಮೈ ಮೇಲೆ ಸಿಮೇ ಎಣ್ಣಿ ಹಾಕಿಕೊಂಡು ಬೆಂಕಿ ಹಚ್ಚಿಕೊಂಡಿದ್ದು. ಮುನ್ನಾಬಾಯಿ ಚಿರಾಡುತ್ತಿದ್ದಾಗ ಅಂಬಿಕಾ ಮತ್ತು ಅಂಜಲಿ ಇಬ್ಬರು ಮುನ್ನಾಬಾಯಿಗೆ ಹಿಡಿದುಕೊಂಡಿದ್ದರಿಂದ ಮಕ್ಕಳಿಗು ಬೆಂಕಿ ಹತ್ತಿದ್ದು ಇರುತ್ತದೆ. ಬೆಂಕಿ ಹತ್ತಿದ್ದನ್ನು ನೋಡಿ ನಾನು ಪಕ್ಕದ ಮನೆಯರನ್ನು ಕರೆದಿದ್ದು ಎಲ್ಲರು ಕೂಡಿ ನೀರು ಹಾಕಿ ಬೆಂಕಿಯನ್ನು ಆರಿಸಿದ್ದು ಮುನ್ನಾಬಾಯಿ, ಅಂಬಿಕಾ ಮತ್ತು ಅಂಜಲಿಗೆ ಮೈ ತುಂಬಾ ಸುಟ್ಟಗಾಯಗಳಾಗಿದ್ದು ಮುನ್ನಾಬಾಯಿ ಮತ್ತು ಅಂಬಿಕಾ ಇಬ್ಬರು ಸ್ವಲ್ಪ ಸಮಯ ನರಳಾಡುತ್ತಾ ಸ್ಥಳದಲ್ಲಿ ಮೃತ ಪಟ್ಟಿದ್ದು ಅದೆ ವೇಳೆಗೆ ರಂಗಮ್ಮ ಇವಳು ಮನೆಗೆ ಬಂದಿದ್ದು, ರಂಗಮ್ಮ ಇವಳು ಅಂಜಲಿ ಇವಳಿಗೆ ಉಪಚಾರ ಕುರಿತು 108 ಅಂಬುಲೇನ್ಸದಲ್ಲಿ ಕಲಬುರಗಿಗೆ ತೆಗೆದುಕೊಂಡು ಹೋಗಿದ್ದು. ಅಂಜಲಿ ಇವಳಿಗೆ ಕಲಬುರಗಿ ಆಸ್ಪತ್ರೇಯಲ್ಲಿ ಸೇರಿಕೆ ಮಾಡಿದ ಸ್ವಲ್ಪ ಸಮಯದಲ್ಲಿ ಆಸ್ಪತ್ರೇಯಲ್ಲಿ ಮೃತ ಪಟ್ಟಿರುತ್ತಾಳೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಮಾಹಾಂಗಾವ ಠಾಣೆ : ಶ್ರೀ ಶಾಂತಕುಮಾರ ತಂದೆ ಗೌರಿಶಂಕರ ಚಕ್ಕಿ ಸಾ : ಸಿರಗಾಪೂರ ರವರ ಹೋಲವು ಸಿರಗಾಪೂರ ಗ್ರಾಮದಲ್ಲಿದ್ದು 1) ಜಗನ್ನಾಥ ತಂದೆ ಸಿದ್ರಾಮಪ್ಪಾ ಚಕ್ಕಿ 2) ಸಿದ್ರಾಮಪ್ಪಾ ತಂದೆ ಜಗನ್ನಾಥ ಚಕ್ಕಿ 3) ಪ್ರಭು ತಂದೆ ಸಿದ್ರಾಮಪ್ಪಾ ಚಕ್ಕಿ 4) ಮಹಾರುದ್ರಪ್ಪಾ ತಂದೆ ಸಿದ್ರಾಮಪ್ಪಾ ಚಕ್ಕಿ 5) ಸದಾಶಿವ ತಂದೆ ಸಿದ್ರಾಮಪ್ಪಾ ಚಕ್ಕಿ 6) ವಿರೇಶ ತಂದೆ ಸದಾಶಿವ ಚಕ್ಕಿ 7) ಶಿವಶಂಕರ ತಂದೆ ಸಿದ್ರಾಮಪ್ಪಾ ಚಕ್ಕಿ 8) ವಿಜಯಕುಮಾರ ತಂದೆ ಅಣ್ಣಾರಾವ ಚಕ್ಕಿ ಸಾ ಕಲಬುರಗಿ  ರವರು ಹೋಲದಲ್ಲಿ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಹೋಲದಲ್ಲಿ ಬೆಳೆಯನ್ನು ಪೂರ್ಣವಾಗಿ ಕಿತ್ತು ಹಾಕಿದ್ದು ನಾಶಮಾಡಿರುತ್ತಾರೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

18 July 2016

Kalaburagi District Reported Crimes

ಹಲ್ಲೆ ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ದಿನಾಂಕ:16/07/2016 ರಂದು ಶ್ರೀಮತಿ  ಭಾಗ್ಯಶ್ರೀ ಗಂಡ ವಿಠ್ಠಲ ಗಾಣಗಾಪೂರ ಸಾ:ಸ್ವಾಮಿ ವಿವೇಕಾನಂದ ಕಾಲೋನಿ ಆಳಂದ ರಸ್ತೆ ಕಲಬುರಗಿ ಇವರ ಇಸ್ತ್ರೀ ಅಂಗಡಿಗೆ ನಮ್ಮ ಬಡಾವಣೆಯ ರವಿ ತಂದೆ ರಾಮಣ್ಣಾ ಗಣೇರ ಎಂಬುವನು ಬಂದು ತನ್ನ ಮೈಮೇಲಿನಿಂದ ಅಂಗಿ ತಗೆದು ಇಸ್ತ್ರೀ ಹೊಡೆದು ಕೊಡು ಅಂತಾ ಹೇಳಿದಾಗ ನಾನು ಮೈಮೇಲೆ ಹಾಕಿಕೊಂಡು ಬಟ್ಟೆಯನ್ನು ಇಸ್ತ್ರೀ ಹೊಡೆಯುವದಿಲ್ಲಾ ನೀವು ಒಗೆದಿರುವ ಬಟ್ಟೆಯನ್ನು ಕೊಡಿರಿ ನಾನು ಇಸ್ತ್ರೀ ಹೊಡೆದು ಕೊಡುತ್ತೇನೆ ಅಂತಾ ಹೇಳಿದಾಗ ಅವನು ಏ ರಂಡಿ ಭೋಸಡಿ ನೀನು ಏಕೆ ನನ್ನ ಮೈಮೇಲಿನ ಶರ್ಟಗೆ ಏಕೆ ಇಸ್ತ್ರಿ ಹೊಡೆಯುವದಿಲ್ಲಾ ಅಂತಾ ನನ್ನ ಜೊತೆ ಜಗಳಕ್ಕೆ ಬಿದ್ದು ಕೈಯಿಂದ ಬೆನ್ನಿನ ಮೇಲೆ ಹೊಟ್ಟೆಯ ಮೇಲೆ ಹೊಡೆದು ಕೈ ಹಿಡಿದು ಎಳೆದಾಡಿ ಮತ್ತು ತಲೆ ಕೂದಲು ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿದ್ದಾನೆ. ಮತ್ತು ಒಂದು ಬಡಿಗೆಯಿಂದ ನನ್ನ ಎರಡು ಮೊಳಕಾಲುಗಳ ಮೇಲೆ ಹೊಡೆದು ರಕ್ತಗಾಯ ಮಾಡಿರುತ್ತಾನೆ. ಮತ್ತು ಕೈಯಿಂದ ಬಲ ಗಲ್ಲದ ಮೇಲೆ ಹೊಡೆದಿರುತ್ತಾನೆ ಆಗ ಇದನ್ನು ನೋಡಿ ರಸ್ತೆಗೆ ನಡೆದುಕೊಂಡು ಹೋಗುತ್ತಿರುವ ಚಿದಾನಂದ ಹೊಡ್ಡಿನ ಮನಿ ಮತ್ತು ನನ್ನ ತಮ್ಮ ಇವರು ಬಿಡಿಸಲು ಬಂದಾಗ ನನ್ನ ತಮ್ಮನಿಗೆ ಏ ಭೋಸಡಿ ಮಗನೆ ಮಲ್ಲಿಕಾರ್ಜುನ ನಿನ್ನ ಸುದ್ದಿ ಏನಿದೆ ಸೂಳೆ ಮಗನೆ ಅಂತಾ ಒಂದು ಕಲ್ಲು ತೆಗೆದುಕೊಂಡು ನನ್ನ ಬಲ ಗಲ್ಲದ ಮೇಲೆ ಹೊಡೆದು ರಕ್ತಗಾಯ ಮಾಡಿರುತ್ತಾನೆ. ಮತ್ತೆ ನನಗೆ ಕೈಯಿಂದ ಹೊಡೆಬಡೆ ಮಾಡುತ್ತಿರುವಾಗ ಚಿದಾನಂದ ಹೊಡ್ಡಿನ ಮನಿ ಇವನು ಬಿಡಿಸಿರುತ್ತಾನೆ. ಇಲ್ಲದಿದ್ದರೆ ಅವನು ನನಗೆ ಮತ್ತು ನನ್ನ ತಮ್ಮನಿಗೆ ಬಹಳ ಹೊಡೆಬಡೆ ಮಾಡುತ್ತಿದ್ದನು. ಕಾರಣ ನನಗೆ ಮತ್ತು ನನ್ನ ತಮ್ಮನಿಗೆ ರಕ್ತಗಾಯ ಮತ್ತು ಗುಪ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಫರತಾಬಾದ ಠಾಣೆ : ಶ್ರೀ ದೇವಿಂದ್ರಪ್ಪಾ  ತಂದೆ ಸೈಬಣ್ಣಾ ದೊಡ್ಡಮನಿ ಸಾ:ಮಿಣಜಗಿ ಇವರ  ಕಿರಿಯ ಮಗನಾದ  ಸೂರ್ಯಕಾಂತ ಈತನು  4 ವರ್ಷಗಳ ಹಿಂದೆ ಅಕಾಲಿಕವಾಗಿ ಮರಣ ಹೊಂದಿರುತ್ತಾನೆ.  ಈತನ ಹೆಂಡತಿಯಾದ ಭಾಗ್ಯಶ್ರೀ ಇವಳಿಗೆ ನಾನು  ಅವಳ ಪಾಲಿಗೆ ಬರುವ ಹೊಲ (ಜಮೀನು) ಹಂಚಿಕೊಟ್ಟಿರುತ್ತೇನೆ & ನನ್ನ ಹಾಗೂ ನನ್ನ ಹೆಂಡತಿಯ ಉಪಜೀವನಕ್ಕಾಗಿ ನಾನು 3 ಎಕರೆ ಹೊಲ ನನ್ನ ಹೆಸರಿಗೆ ಇಟ್ಟುಕೊಂಡಿರುತ್ತೇನೆ.ಆದರೆ ನನ್ನ ಸೊಸೆಯಾದ ಭಾಗ್ಯಶ್ರೀ  ಇವಳು ಆಗಾಗ ನನ್ನ ಹೆಸರಿಗೆ ಇರುವ 3 ಎಕರೆ ಹೊಲದಲ್ಲಿ  ಅರ್ದ ಹೊಲ ತನ್ನ ಹೆಸರಿಗೆ ಮಾಡು ಅಂತಾ ತಕರಾರು ಮಾಡುತ್ತಾ ಬಂದಿರುತ್ತಾಳೆ ಆದರೆ ನಾನು ಅವಳಿಗೆ ನಾನು ನನ್ನ ಹೆಂಡತಿ ಇರುವವರಗೆ 3 ಎಕರೆ ಹೊಲನಮ್ಮ ಹೆಸರಿಗೆ ಇಟ್ಟುಕೊಳ್ಳುತ್ತೇವೆ ನಮ್ಮ ಮರಣದ ನಂತರ ಇಬ್ಬರು ಹಂಚಿಕೊಳ್ಳಿರಿ ಅಂತಾ ಹೇಳುತ್ತಾ  ಬಂದಿರುತ್ತೇನೆ. ಮೊನ್ನೆ ದಿನಾಂಕ 14/07/2016 ರಂದು ರಾತ್ರಿ 8 ಪಿಎಮ ಸುಮಾರಿಗೆ ನಾನು ನಮ್ಮ ಮನೆಯಲ್ಲಿ ಇದ್ದಾಗ ಸದರಿ ನ್ನ ಸೊಸೊ ಭಾಗ್ಯಶ್ರೀ  ಇವನು ತನ್ನ ಸಹೋದರರಾದ ಶರಣಪ್ಪ ತಂದೆ ರಾಮಣ್ಣ ನಿಂಬರ್ಗಿ, ಶಂಖಪ್ಪಾ ತಂದೆ ರಾಮಣ್ಣ ನಿಂಬರ್ಗಿ , ಮಿಠಾಬಾಯಿ ಗಂಡ ಶಂಖಪ್ಪಾ, ಮಲ್ಲಮ್ಮ ಗಂಡ ರಾಮಣ್ಣಾ ನಿಂಬರ್ಗಿ ಸಾ: ಎಲ್ಲರೂ ಕಡಣಿ (ಕಣ್ಣಿ)  ತನ್ನ ಅಕ್ಕ ಶೆಟ್ಟೆಮ್ಮಾ ಗಂಡ ಹಣಮಂತ ಸಾ: ಸುಲ್ತಾನಪೂರ ಇವರನ್ನು ಕರೆದುಕೊಂಡು ನಮ್ಮ ಮನೆಗೆ ಬಂದವಳೇ ನನಗೆ ಏ ರಂಡಿ ಮಗನೇ  ದೇವ್ಯಾ ನೀನು ನಿನ್ನ ಹೆಸರಿಗೆ ಇರುವ  3 ಎಕರೆ  ಹೊಲದಲ್ಲಿ  ಅರ್ದ ಭಾಗ್ಯಶ್ರೀ  ಇವಳ ಹೆಸರಿಗೆ ಮಾಡಿದರೆ ಸರಿ ಇಲ್ಲಾ ಅಂದ್ರ ನಿನಗೆ ಜೀವ ಸಹಿತ ಬಿಡುವುದಿಲ್ಲಾ  ಅಂತಾ ಜೀವದ ಬೆದರಿಕೆ ಹಾಕಿ ನನ್ನನ್ನು ಮನೆಯಿಂದ  ಎಳೆದು ಹೊರಗೆ ತಂದು ಭಾಗ್ಯಶ್ರೀ & ಶಂಕಪ್ಪಾ ಇವರು ನನಗೆ ಹಿಡಿದಿದ್ದು ಶೇಖಪ್ಪಾ ಇತನು ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿರುತ್ತಾನೆ.  ಮಿಠಾಬಾಯಿ ಇವಳು ನನಗೆ ಕೈಯಿಂದ ಕಪಾಳಕ್ಕೆ ಹೊಡೆದಿದ್ದಾಳೆ ಮಲ್ಲಮ್ಮಾ  & ಶೆಟ್ಟೆಮ್ಮಾ  ಇವರಿಬ್ಬರೂ  ಹೋಡಿರಿ ಈ ಹಂಟ್ಯಾನಿಗೆ ಅಂತಾ ಪ್ರಚೋದನೇ  ನೀಡಿರುತ್ತಾರೆ  ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ದಿನಾಂಕ 16/07/16 ರಂದು ಮನೆಯಲ್ಲಿ ಊಟ ಮಾಡಿಕೊಂಡು ಮನೆಯ ಮುಂದೆ ಕಟ್ಟೆಯ ಮೇಲೆ ಕುಳಿತ್ತಾಗ ನನಗೆ ಪರಿಚಯದವನಾದ ವಿಜಯಕುಮಾರ ಎಂಬುವವನು ತನ್ನ ಮೋಟಾರ ಸೈಕಲ ಮೇಲೆ ನನ್ನಲ್ಲಿಗೆ ಬಂದು ನಿನ್ನ ಹತ್ತಿರ 5 ನಿಮಿಷ್ಯ ಮಾತಾಡುವುದು ಇದೆ ನನ್ನ ಜೋತೆಯಲ್ಲಿ ಬನ್ನಿರಿ ಎಂದು ಹೇಳಿದನು ನಾನು ಏನು ಮಾತಾಡುವುದು ಇದೆ ಎಂದು ಕೆಳಿದಕ್ಕೆ ನಾನು ಅವನ ಹಿಂದೆ ಮೋಟಾರ ಸೈಕಲ ಮೇಲೆ ಕುಳಿತು ಅವನ ಗೆಳೆಯರೊಂದಿಗೆ ಹೊರಟೇವು ನನಗೆ ಶಹಾಬಜಾರದ ಲಾಲಹನುಮಾನ ಗುಡಿಯ ಹಿಂದುಗಡೆ ರುದ್ರಭೂಮಿಯಲ್ಲಿ ಕರೆದುಕೊಂಡು ಹೋಗಿ ಭೋಸಡಿ ಮಗನೆ ನಿಮ್ಮಗೆ ಸೊಕ್ಕು ಬಹಳ ಬಂದಿದೆ ಎಂದು ವಿಜಯಕುಮಾರ ಹೇಳಿ ಬೈಯುತ್ತಿದ್ದಾಗ ಅವನ ಹಿಂದೆ ಇದ್ದ ಸಂದೀಪ ಎಂಬುವವನು ಕೈಮುಷ್ಠಿಮಾಡಿ ನನ್ನ ಮುಖದ ಎಡಗಡೆ ಜೋರಾಗಿ ಹೊಡೆದು ರಕ್ತಾಗಾಯ ಮಾಡಿದನು ಅವನ ಇನ್ನೊಬ್ಬ ಗೆಳೆಯನಾದ ಕರಿಚಿರತೆ ಎಂಬುವವನು ಜೋರಾಗಿ ಎಡಗಡೆ ಟೊಂಕದ ಮೇಲೆ ಕಲ್ಲಿನಿಂದ  ಹೊಡೆದು ಗುಪ್ತಗಾಯ ಮಾಡಿರುತ್ತಾನೆ ಮತ್ತು ವಿಜಯಕುಮಾರ ಎಂಬುವವನು ಬಿಡಬೇಡ ಈ ಮಗನಿಗೆ ಎಂದು ಹೇಳಿ ಕಲ್ಲಿನಿಂದ ಬೆನ್ನಲ್ಲಿ ಜೋರಾಗಿ ಹೊಡೆದು ಗುಪ್ತಗಾಯ ಮಾಡಿರುತ್ತಾನೆ ಆಗ ನಾನು ಕೂಗಾಡುವುದು ಚಿರಾಡುವುದು ಮಾಡುತ್ತಿದ್ದಾಗ ಬೋಸಡಿ ಮಗನೆ ಇಲ್ಲಿ ನಿನಗೆ ಯಾರು ಬಿಡಿಸಲು ಬರುವುದಿಲ್ಲಾ ಎಷ್ಟು ಕೂಗಾಡುತ್ತಿ  ಕೂಗಾಡು ಅಂತಾ ಹೇಳುತ್ತಾ ನನ್ನ ಜೇಬಿನಲ್ಲಿದ್ದ 2 ಸ್ಯಾಮಸಾಂಗ ಮೋಬಾಯಿಲ ಮತ್ತು 2300 ರೂ ಗಳು ವಿಜಯಕುಮಾರ ಎಂಬುವವನು ತೆಗೆದುಕೊಂಡು ಎಡ ಕಪಾಳ ಮೇಲೆ ಹೊಡೆಯುತ್ತಿದ್ದಾಗ ಅಷ್ಟರಲ್ಲಿ ನನ್ನ ಅಣ್ಣಂದಿರಾದ ಶರಣಬಸಪ್ಪ ತಂದೆ ವೀರಣ್ಣ ಕಲಶೇಟ್ಟಿ ಮತ್ತು ಶಾಂತಯ್ಯಾ ತಂದೆ ಶಂಕ್ರಯ್ಯಾ ಭಾಸಗಿಮಠ ಇವರು ನಮ್ಮ ತಮ್ಮನಿಗೆ ಏಕೆ ಹೊಡೆಯುತ್ತಿದ್ದಿರಿ ಎಂದು ಹೇಳುತ್ತಾ ಬರುತ್ತಿದ್ದಾಗ ನನಗೆ ವಿಜಯಕುಮಾರ ಮಗನೆ ನೀನು ಹೇಗೆ ನಿನ್ನ ಓಣೆಯಲ್ಲಿ ಸಂಸಾರ ಮಾಡುತ್ತಿ ಎಂದು ಜೀವದ ಬೇದರಿಕೆ ಹಾಕಿ  ಅಲ್ಲಿಂದ ಓಡಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಫರತಾಬಾದ ಠಾಣೆ :ಶ್ರೀ ಬಿಂದುಪ್ರಸಾದ ತಂದೆ ಕಮತಪ್ರಸಾದ ಸಾ : ಶಾಹಾಬಾದ ರವರು ದಿನಾಂಕ 17-07-2016 ರಂದು ಜೇವರಗಿಗೆ ಹೋಗುವಾಗ  ಮೊಟಾರ ಸೈಕಲ್ ನಂ ಕೆಎ – 32 ಓ – 124 ನೇದ್ದರ ಸವಾರನಾದ ಪ್ರೇಮಜಿ ಆನಂದರಾವ ಡಗೋಡೆ ಸಾ ಶಾಹಾಬಾದ ರವರು ತನ್ನ ವಶದಲ್ಲಿದ್ದ ಮೋಟಾರ ಸೈಕಲ್ ನ್ನು ಅತೀವೇಗ ಅಜಾಗರುಕತೆಯಿಂದ ನಡೆಸಿ ಸ್ಕಿಡ್ ಆಗಿ ಬಿದ್ದು ತಲೆಗೆ ಬಾರಿಪೆಟ್ಟಾಗಿದ್ದು  ಉಪಚಾರ ಕುರಿತು ಆಸ್ಪತ್ರೆಗೆ ದಾಖಲಿಸಲಾಗಿದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.