POLICE BHAVAN KALABURAGI

POLICE BHAVAN KALABURAGI

18 July 2016

Kalaburagi District Reported Crimes

ಹಲ್ಲೆ ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ದಿನಾಂಕ:16/07/2016 ರಂದು ಶ್ರೀಮತಿ  ಭಾಗ್ಯಶ್ರೀ ಗಂಡ ವಿಠ್ಠಲ ಗಾಣಗಾಪೂರ ಸಾ:ಸ್ವಾಮಿ ವಿವೇಕಾನಂದ ಕಾಲೋನಿ ಆಳಂದ ರಸ್ತೆ ಕಲಬುರಗಿ ಇವರ ಇಸ್ತ್ರೀ ಅಂಗಡಿಗೆ ನಮ್ಮ ಬಡಾವಣೆಯ ರವಿ ತಂದೆ ರಾಮಣ್ಣಾ ಗಣೇರ ಎಂಬುವನು ಬಂದು ತನ್ನ ಮೈಮೇಲಿನಿಂದ ಅಂಗಿ ತಗೆದು ಇಸ್ತ್ರೀ ಹೊಡೆದು ಕೊಡು ಅಂತಾ ಹೇಳಿದಾಗ ನಾನು ಮೈಮೇಲೆ ಹಾಕಿಕೊಂಡು ಬಟ್ಟೆಯನ್ನು ಇಸ್ತ್ರೀ ಹೊಡೆಯುವದಿಲ್ಲಾ ನೀವು ಒಗೆದಿರುವ ಬಟ್ಟೆಯನ್ನು ಕೊಡಿರಿ ನಾನು ಇಸ್ತ್ರೀ ಹೊಡೆದು ಕೊಡುತ್ತೇನೆ ಅಂತಾ ಹೇಳಿದಾಗ ಅವನು ಏ ರಂಡಿ ಭೋಸಡಿ ನೀನು ಏಕೆ ನನ್ನ ಮೈಮೇಲಿನ ಶರ್ಟಗೆ ಏಕೆ ಇಸ್ತ್ರಿ ಹೊಡೆಯುವದಿಲ್ಲಾ ಅಂತಾ ನನ್ನ ಜೊತೆ ಜಗಳಕ್ಕೆ ಬಿದ್ದು ಕೈಯಿಂದ ಬೆನ್ನಿನ ಮೇಲೆ ಹೊಟ್ಟೆಯ ಮೇಲೆ ಹೊಡೆದು ಕೈ ಹಿಡಿದು ಎಳೆದಾಡಿ ಮತ್ತು ತಲೆ ಕೂದಲು ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿದ್ದಾನೆ. ಮತ್ತು ಒಂದು ಬಡಿಗೆಯಿಂದ ನನ್ನ ಎರಡು ಮೊಳಕಾಲುಗಳ ಮೇಲೆ ಹೊಡೆದು ರಕ್ತಗಾಯ ಮಾಡಿರುತ್ತಾನೆ. ಮತ್ತು ಕೈಯಿಂದ ಬಲ ಗಲ್ಲದ ಮೇಲೆ ಹೊಡೆದಿರುತ್ತಾನೆ ಆಗ ಇದನ್ನು ನೋಡಿ ರಸ್ತೆಗೆ ನಡೆದುಕೊಂಡು ಹೋಗುತ್ತಿರುವ ಚಿದಾನಂದ ಹೊಡ್ಡಿನ ಮನಿ ಮತ್ತು ನನ್ನ ತಮ್ಮ ಇವರು ಬಿಡಿಸಲು ಬಂದಾಗ ನನ್ನ ತಮ್ಮನಿಗೆ ಏ ಭೋಸಡಿ ಮಗನೆ ಮಲ್ಲಿಕಾರ್ಜುನ ನಿನ್ನ ಸುದ್ದಿ ಏನಿದೆ ಸೂಳೆ ಮಗನೆ ಅಂತಾ ಒಂದು ಕಲ್ಲು ತೆಗೆದುಕೊಂಡು ನನ್ನ ಬಲ ಗಲ್ಲದ ಮೇಲೆ ಹೊಡೆದು ರಕ್ತಗಾಯ ಮಾಡಿರುತ್ತಾನೆ. ಮತ್ತೆ ನನಗೆ ಕೈಯಿಂದ ಹೊಡೆಬಡೆ ಮಾಡುತ್ತಿರುವಾಗ ಚಿದಾನಂದ ಹೊಡ್ಡಿನ ಮನಿ ಇವನು ಬಿಡಿಸಿರುತ್ತಾನೆ. ಇಲ್ಲದಿದ್ದರೆ ಅವನು ನನಗೆ ಮತ್ತು ನನ್ನ ತಮ್ಮನಿಗೆ ಬಹಳ ಹೊಡೆಬಡೆ ಮಾಡುತ್ತಿದ್ದನು. ಕಾರಣ ನನಗೆ ಮತ್ತು ನನ್ನ ತಮ್ಮನಿಗೆ ರಕ್ತಗಾಯ ಮತ್ತು ಗುಪ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಫರತಾಬಾದ ಠಾಣೆ : ಶ್ರೀ ದೇವಿಂದ್ರಪ್ಪಾ  ತಂದೆ ಸೈಬಣ್ಣಾ ದೊಡ್ಡಮನಿ ಸಾ:ಮಿಣಜಗಿ ಇವರ  ಕಿರಿಯ ಮಗನಾದ  ಸೂರ್ಯಕಾಂತ ಈತನು  4 ವರ್ಷಗಳ ಹಿಂದೆ ಅಕಾಲಿಕವಾಗಿ ಮರಣ ಹೊಂದಿರುತ್ತಾನೆ.  ಈತನ ಹೆಂಡತಿಯಾದ ಭಾಗ್ಯಶ್ರೀ ಇವಳಿಗೆ ನಾನು  ಅವಳ ಪಾಲಿಗೆ ಬರುವ ಹೊಲ (ಜಮೀನು) ಹಂಚಿಕೊಟ್ಟಿರುತ್ತೇನೆ & ನನ್ನ ಹಾಗೂ ನನ್ನ ಹೆಂಡತಿಯ ಉಪಜೀವನಕ್ಕಾಗಿ ನಾನು 3 ಎಕರೆ ಹೊಲ ನನ್ನ ಹೆಸರಿಗೆ ಇಟ್ಟುಕೊಂಡಿರುತ್ತೇನೆ.ಆದರೆ ನನ್ನ ಸೊಸೆಯಾದ ಭಾಗ್ಯಶ್ರೀ  ಇವಳು ಆಗಾಗ ನನ್ನ ಹೆಸರಿಗೆ ಇರುವ 3 ಎಕರೆ ಹೊಲದಲ್ಲಿ  ಅರ್ದ ಹೊಲ ತನ್ನ ಹೆಸರಿಗೆ ಮಾಡು ಅಂತಾ ತಕರಾರು ಮಾಡುತ್ತಾ ಬಂದಿರುತ್ತಾಳೆ ಆದರೆ ನಾನು ಅವಳಿಗೆ ನಾನು ನನ್ನ ಹೆಂಡತಿ ಇರುವವರಗೆ 3 ಎಕರೆ ಹೊಲನಮ್ಮ ಹೆಸರಿಗೆ ಇಟ್ಟುಕೊಳ್ಳುತ್ತೇವೆ ನಮ್ಮ ಮರಣದ ನಂತರ ಇಬ್ಬರು ಹಂಚಿಕೊಳ್ಳಿರಿ ಅಂತಾ ಹೇಳುತ್ತಾ  ಬಂದಿರುತ್ತೇನೆ. ಮೊನ್ನೆ ದಿನಾಂಕ 14/07/2016 ರಂದು ರಾತ್ರಿ 8 ಪಿಎಮ ಸುಮಾರಿಗೆ ನಾನು ನಮ್ಮ ಮನೆಯಲ್ಲಿ ಇದ್ದಾಗ ಸದರಿ ನ್ನ ಸೊಸೊ ಭಾಗ್ಯಶ್ರೀ  ಇವನು ತನ್ನ ಸಹೋದರರಾದ ಶರಣಪ್ಪ ತಂದೆ ರಾಮಣ್ಣ ನಿಂಬರ್ಗಿ, ಶಂಖಪ್ಪಾ ತಂದೆ ರಾಮಣ್ಣ ನಿಂಬರ್ಗಿ , ಮಿಠಾಬಾಯಿ ಗಂಡ ಶಂಖಪ್ಪಾ, ಮಲ್ಲಮ್ಮ ಗಂಡ ರಾಮಣ್ಣಾ ನಿಂಬರ್ಗಿ ಸಾ: ಎಲ್ಲರೂ ಕಡಣಿ (ಕಣ್ಣಿ)  ತನ್ನ ಅಕ್ಕ ಶೆಟ್ಟೆಮ್ಮಾ ಗಂಡ ಹಣಮಂತ ಸಾ: ಸುಲ್ತಾನಪೂರ ಇವರನ್ನು ಕರೆದುಕೊಂಡು ನಮ್ಮ ಮನೆಗೆ ಬಂದವಳೇ ನನಗೆ ಏ ರಂಡಿ ಮಗನೇ  ದೇವ್ಯಾ ನೀನು ನಿನ್ನ ಹೆಸರಿಗೆ ಇರುವ  3 ಎಕರೆ  ಹೊಲದಲ್ಲಿ  ಅರ್ದ ಭಾಗ್ಯಶ್ರೀ  ಇವಳ ಹೆಸರಿಗೆ ಮಾಡಿದರೆ ಸರಿ ಇಲ್ಲಾ ಅಂದ್ರ ನಿನಗೆ ಜೀವ ಸಹಿತ ಬಿಡುವುದಿಲ್ಲಾ  ಅಂತಾ ಜೀವದ ಬೆದರಿಕೆ ಹಾಕಿ ನನ್ನನ್ನು ಮನೆಯಿಂದ  ಎಳೆದು ಹೊರಗೆ ತಂದು ಭಾಗ್ಯಶ್ರೀ & ಶಂಕಪ್ಪಾ ಇವರು ನನಗೆ ಹಿಡಿದಿದ್ದು ಶೇಖಪ್ಪಾ ಇತನು ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿರುತ್ತಾನೆ.  ಮಿಠಾಬಾಯಿ ಇವಳು ನನಗೆ ಕೈಯಿಂದ ಕಪಾಳಕ್ಕೆ ಹೊಡೆದಿದ್ದಾಳೆ ಮಲ್ಲಮ್ಮಾ  & ಶೆಟ್ಟೆಮ್ಮಾ  ಇವರಿಬ್ಬರೂ  ಹೋಡಿರಿ ಈ ಹಂಟ್ಯಾನಿಗೆ ಅಂತಾ ಪ್ರಚೋದನೇ  ನೀಡಿರುತ್ತಾರೆ  ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ದಿನಾಂಕ 16/07/16 ರಂದು ಮನೆಯಲ್ಲಿ ಊಟ ಮಾಡಿಕೊಂಡು ಮನೆಯ ಮುಂದೆ ಕಟ್ಟೆಯ ಮೇಲೆ ಕುಳಿತ್ತಾಗ ನನಗೆ ಪರಿಚಯದವನಾದ ವಿಜಯಕುಮಾರ ಎಂಬುವವನು ತನ್ನ ಮೋಟಾರ ಸೈಕಲ ಮೇಲೆ ನನ್ನಲ್ಲಿಗೆ ಬಂದು ನಿನ್ನ ಹತ್ತಿರ 5 ನಿಮಿಷ್ಯ ಮಾತಾಡುವುದು ಇದೆ ನನ್ನ ಜೋತೆಯಲ್ಲಿ ಬನ್ನಿರಿ ಎಂದು ಹೇಳಿದನು ನಾನು ಏನು ಮಾತಾಡುವುದು ಇದೆ ಎಂದು ಕೆಳಿದಕ್ಕೆ ನಾನು ಅವನ ಹಿಂದೆ ಮೋಟಾರ ಸೈಕಲ ಮೇಲೆ ಕುಳಿತು ಅವನ ಗೆಳೆಯರೊಂದಿಗೆ ಹೊರಟೇವು ನನಗೆ ಶಹಾಬಜಾರದ ಲಾಲಹನುಮಾನ ಗುಡಿಯ ಹಿಂದುಗಡೆ ರುದ್ರಭೂಮಿಯಲ್ಲಿ ಕರೆದುಕೊಂಡು ಹೋಗಿ ಭೋಸಡಿ ಮಗನೆ ನಿಮ್ಮಗೆ ಸೊಕ್ಕು ಬಹಳ ಬಂದಿದೆ ಎಂದು ವಿಜಯಕುಮಾರ ಹೇಳಿ ಬೈಯುತ್ತಿದ್ದಾಗ ಅವನ ಹಿಂದೆ ಇದ್ದ ಸಂದೀಪ ಎಂಬುವವನು ಕೈಮುಷ್ಠಿಮಾಡಿ ನನ್ನ ಮುಖದ ಎಡಗಡೆ ಜೋರಾಗಿ ಹೊಡೆದು ರಕ್ತಾಗಾಯ ಮಾಡಿದನು ಅವನ ಇನ್ನೊಬ್ಬ ಗೆಳೆಯನಾದ ಕರಿಚಿರತೆ ಎಂಬುವವನು ಜೋರಾಗಿ ಎಡಗಡೆ ಟೊಂಕದ ಮೇಲೆ ಕಲ್ಲಿನಿಂದ  ಹೊಡೆದು ಗುಪ್ತಗಾಯ ಮಾಡಿರುತ್ತಾನೆ ಮತ್ತು ವಿಜಯಕುಮಾರ ಎಂಬುವವನು ಬಿಡಬೇಡ ಈ ಮಗನಿಗೆ ಎಂದು ಹೇಳಿ ಕಲ್ಲಿನಿಂದ ಬೆನ್ನಲ್ಲಿ ಜೋರಾಗಿ ಹೊಡೆದು ಗುಪ್ತಗಾಯ ಮಾಡಿರುತ್ತಾನೆ ಆಗ ನಾನು ಕೂಗಾಡುವುದು ಚಿರಾಡುವುದು ಮಾಡುತ್ತಿದ್ದಾಗ ಬೋಸಡಿ ಮಗನೆ ಇಲ್ಲಿ ನಿನಗೆ ಯಾರು ಬಿಡಿಸಲು ಬರುವುದಿಲ್ಲಾ ಎಷ್ಟು ಕೂಗಾಡುತ್ತಿ  ಕೂಗಾಡು ಅಂತಾ ಹೇಳುತ್ತಾ ನನ್ನ ಜೇಬಿನಲ್ಲಿದ್ದ 2 ಸ್ಯಾಮಸಾಂಗ ಮೋಬಾಯಿಲ ಮತ್ತು 2300 ರೂ ಗಳು ವಿಜಯಕುಮಾರ ಎಂಬುವವನು ತೆಗೆದುಕೊಂಡು ಎಡ ಕಪಾಳ ಮೇಲೆ ಹೊಡೆಯುತ್ತಿದ್ದಾಗ ಅಷ್ಟರಲ್ಲಿ ನನ್ನ ಅಣ್ಣಂದಿರಾದ ಶರಣಬಸಪ್ಪ ತಂದೆ ವೀರಣ್ಣ ಕಲಶೇಟ್ಟಿ ಮತ್ತು ಶಾಂತಯ್ಯಾ ತಂದೆ ಶಂಕ್ರಯ್ಯಾ ಭಾಸಗಿಮಠ ಇವರು ನಮ್ಮ ತಮ್ಮನಿಗೆ ಏಕೆ ಹೊಡೆಯುತ್ತಿದ್ದಿರಿ ಎಂದು ಹೇಳುತ್ತಾ ಬರುತ್ತಿದ್ದಾಗ ನನಗೆ ವಿಜಯಕುಮಾರ ಮಗನೆ ನೀನು ಹೇಗೆ ನಿನ್ನ ಓಣೆಯಲ್ಲಿ ಸಂಸಾರ ಮಾಡುತ್ತಿ ಎಂದು ಜೀವದ ಬೇದರಿಕೆ ಹಾಕಿ  ಅಲ್ಲಿಂದ ಓಡಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಫರತಾಬಾದ ಠಾಣೆ :ಶ್ರೀ ಬಿಂದುಪ್ರಸಾದ ತಂದೆ ಕಮತಪ್ರಸಾದ ಸಾ : ಶಾಹಾಬಾದ ರವರು ದಿನಾಂಕ 17-07-2016 ರಂದು ಜೇವರಗಿಗೆ ಹೋಗುವಾಗ  ಮೊಟಾರ ಸೈಕಲ್ ನಂ ಕೆಎ – 32 ಓ – 124 ನೇದ್ದರ ಸವಾರನಾದ ಪ್ರೇಮಜಿ ಆನಂದರಾವ ಡಗೋಡೆ ಸಾ ಶಾಹಾಬಾದ ರವರು ತನ್ನ ವಶದಲ್ಲಿದ್ದ ಮೋಟಾರ ಸೈಕಲ್ ನ್ನು ಅತೀವೇಗ ಅಜಾಗರುಕತೆಯಿಂದ ನಡೆಸಿ ಸ್ಕಿಡ್ ಆಗಿ ಬಿದ್ದು ತಲೆಗೆ ಬಾರಿಪೆಟ್ಟಾಗಿದ್ದು  ಉಪಚಾರ ಕುರಿತು ಆಸ್ಪತ್ರೆಗೆ ದಾಖಲಿಸಲಾಗಿದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

16 July 2016

Kalaburagi Dsitrict Reported Crimes

ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ಶ್ರೀಮತಿ ಭಾಗ್ಯಶ್ರಿ ಗಂಡ ದಿ: ಮಲ್ಲಿಕಾರ್ಜುನ ದೊಡ್ಡಮನಿ ಸಾ:ಮಿಣಜಗಿ ಇವರ ಗಂಡ ಮಲ್ಲಿಕಾರ್ಜುನ ದೊಡ್ಡಮನಿ  ಇವರು ಈಗ ಸುಮಾರು 4 ವರ್ಷಗಳ ಹಿಂದೆ ಅಕಾಲಿಕವಾಗಿ ಮರಣ ಹೊಂದಿರುತ್ತಾರೆ, ಅಂದಿನಿಂದ ನಾನೂ ಕೂಲಿಕೆಲಸ ಮಾಡಿಕೊಂಡು ನನ್ನ 4 ಜನ ಮಕ್ಕಳನ್ನು ಸಾಕು ತ್ತಿದ್ದೇನೆ, ಆದರೆ ನಾನು ನನ್ನ ಗಂಡ ಸತ್ತ ನಂತರ ನಮ್ಮ ಪಾಲಿಗೆ ಬರುವ 7 ಎಕರೆ ಜಮೀನು ಕೋಡಿರಿ ಅಂತಾ ನನ್ನ ಭಾವ ಸೂರ್ಯಕಾಂತ  ತಂದೆ ದೆವೇಂದ್ರಪ್ಪಾ ದೊಡ್ಡಮನಿ ,ಹಾಗೂ ನನ್ನ ಅತ್ತೆ ತಾರಾಬಾಯಿ ಗಂಡ ದೇವೆಂದ್ರಪ್ಪಾ ದೋಡ್ಡಮನಿ, ಮಾವ ದೇವೇಂದ್ರಪ್ಪಾ ತಂದೆ ಸಾಬಣ್ಣಾ ದೋಡ್ಡ ಮನಿ ಇವರಿಗೆ ಕೇಳುತ್ತಾ ಬಂದಿದ್ದು ಆದರೆ ಅವರು ನನಗೆ ಜಮೀನು ಕೊಡದೆ ತಕರಾರು ಮಾಡುತ್ತಾ ಬಂದಿರುತ್ತಾರೆ. ನಿನ್ನೆ ದಿನಾಂಕ 14/07/2016 ರಾತ್ರಿ 8 ಗಂಟೆಯಸುಮಾರಿಗೆ ನಾನು ಎಂದಿನಂತೆ  ನನ್ನ ಭಾವ, ಅತ್ತೆ,ಮಾವ ಇವರಿಗೆ ನನಗೂ 4 ಜನ ಮಕ್ಕಳಿದ್ದಾರೆ  ಅವರಿಗೆ ನಾನು ಸಾಕಬೇಕು ನೀವು ನಮ್ಮ ಪಾಲಿನ ಹೋಲ, ಕೋಡಿರಿ ಅಂತಾ ಅವರಿಗೆ ಕೇಳಿದಾಗ ನನ್ನ ಭಾವ ಸೂರ್ಯಕಾಂತ, ಅತ್ತೆ ತಾರಾಬಾಯಿ, ಮಾವ ದೇವೇಂದ್ರಪ್ಪಾ , ನೆಗೆಣಿ ( ಗಂಡನ ತಂಗಿ) ಮಳವ್ವ ಗಂಡ ಶ್ರೀಮಂತ ನಡುವಿನಕೇರಿ ಹಾಗೂ ಇವಳ ಮಕ್ಕಳಾದ ಅಶೊಕ ನಡುವಿನಕೇರಿ, ಶಿವಪ್ಪಾ ನಡುವಿನಕೇರಿ, ವಿಜಯಕುಮಾರ ನಡುವಿನಕೇರಿ ,ಸುಧೀರ ನಡಿವಿನಕೇರಿ ಇವರೆಲ್ಲರೂ ಕೂಡಿಕೊಂಡು ನನಗೆ ರಂಡಿ ನೀನು ದಿನಾಲು ಹೋಲ ಬೆಕಂತಾ ಕಿರಿಕಿರಿ ಮಾಡುಕತ್ತಿದ್ದಿ ಇಂದು ನಿನಗ ಜೀವ ಸಹಿತ ಬಿಡುವದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿ  ನನ್ನ ಅತ್ತೆ ತಾರಾಬಾರಿ ಮತ್ತು ನೆಗೆಣಿ  ಮಾಳವ್ವ ಇವರು ನನಗೆ ಗಟ್ಟಿಯಾಗಿ ಹಿಡಿದುಕೊಂಡಿದ್ದು ಇವಳ ಮಗ ಅಶೊಕ ಇತನು ನನಗೆ ಬಡಿಗೆಯಿಂದ ಎಡ ಮತ್ತು ಬಲ ಭುಜಕ್ಕೆ ಹೋಡೆದು ತರಚಿದ ಗಾಯ ಮಾಡಿದ್ದು ,ಶಿವಪ್ಪ ಇತನು ಕೈಯಿಂದ ಮುಸ್ಷಿಮಾಡಿ  ಬಲಗಣ್ಣಿಗೆ ಗುದ್ದಿ ಗುಪ್ತಗಾಯ ಮಾಡಿರುತ್ತಾನೆ. ವಿಜಯಕುಮಾರ ಇತನು ಕಲ್ಲಿನಿಂದ ಬೆನ್ನಿಗೆ ಮತ್ತು ಬಲಗಾಲಿನ ಮೊಳಕಲಿನ ಕೆಳಗೆ ಹೊಡೆದು ಗುಪ್ತಗಾಯ ಮಾಡಿರುತ್ತಾನೆ . ನನ್ನ ಮಾವ,ಭಾವ,ಹಾಗೂ ಸುಧೀರ ನಡುವಿನಕೇರಿ ಇವರೆಲ್ಲರೂ ಅಲ್ಲಿಯೇ ನಿಂತುಕೊಂಡು ಈ ರಂಡೀಗಿ ಬಿಡಬ್ಯಾಡರಿ ಹೋಡಿರಿ ಅಂತಾ ಪ್ರಚೋದನೆ ನೀಡಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ 13/07/16 ರಂದು ರಾತ್ರಿ ಉದನೂರ ರಿಂಗ ರೋಡ ಕ್ರಾಸನಲ್ಲಿ ಸಿಕ್ಕ ಸಾಗರ ತಂದೆ ಲಕ್ಷ್ಮಣ ಚವ್ಹಾಣ ಇತನ  ಬಜಾಜ ಪಲ್ಸರ ಕೆಎ 25 EL 5193 ನೇದ್ದರ ಹಿಂದೆ ಕುಳಿತುಕೊಂಡು ಅದೇ ರೋಡಿಗೆ ಮುಸ್ತಾಕ ಲೇಔಟದಲ್ಲಿ ಇರುವ ತನ್ನ ಮನೆಯವರೆಗೆ ಬಿಡು ಅಂತಾ ಹೇಳಿದ್ದು. ಸಾಗರ ಚವ್ಹಾಣ ಇತನು ತನ್ನ ವಶದಲ್ಲಿದ್ದ ಬಜಾಜ ಪಲ್ಸರ ಕೆಎ 25 EL 5193 ನೇದ್ದು ಅತಿವೇಗದಿಂದ ಮತ್ತು ನಿರ್ಲಕ್ಷತನದಿಂದ ನಡೆಯಿಸುತ್ತಾ ರಾತ್ರಿ 08-30 ಗಂಟೆ ಸುಮಾರಿಗೆ ಉದನೂರ ರೋಡಿನ ಹಾದಿ ಬಸವಣ್ಣ ಗುಡಿ ಇನ್ನೂ ಸ್ವಲ್ಪ ಮುಂದೆ ಇರುವಂತೆ  ಮುಸ್ತಾಕ ಲೇಔಟಗೆ ಹೋಗುವ ದಾರಿ ಎದುರಿನ ರೋಡಿನ ಮೇಲೆ ವೇಗದಲ್ಲಿ ಬ್ರೇಕ ಹಾಕಿದಾಗ ವೇಗದ ನಿಯಂತ್ರಣ ತಪ್ಪಿ ರೋಡಿನ ಎಡ ಬದಿಯಲ್ಲಿ ಇರುವ ಮುಳ್ಳಿನ ಕಂಟಿಯಲ್ಲಿ ಮೋಟಾರ ಸೈಕಲದೊಂದಿಗೆ ಬಿದ್ದಿದ್ದು. ಇದರಿಂದಾಗಿ ಸಾಗರ ಮತ್ತು ಬಸವರಾಜ ಇಬ್ಬರಿಗೂ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು, ಅವರಿಬ್ಬರಿಗೆ ಉಪಚಾರ ಕುರಿತು 108 ಅಂಬುಲೈನ್ಸ ಗಾಡಿಯಲ್ಲಿ ಹಾಕಿಕೊಂಡು ಸರಕಾರಿ  ಅಸ್ಪತ್ರೆ ಕಲಬುರಗಿಗೆ ಒಯ್ದು ಸೇರಿಕೆ ಮಾಡಿದ್ದು ಬಸವರಾಜ ಇತನು ತನಗೆ ಆದ ರಸ್ತೆ ಅಪಘಾತ ಗಾಯಗಳಿಂದ ಉಪಚಾರ ಹೊಂದುತ್ತಾ ಗುಣ ಮುಖ ಹೊಂದದೇ ದಿನಾಂಕ 13/07/2016 ರಂದು ರಾತ್ರಿ 11-25 ಗಂಟೆಗೆ ಮೃತ ಪಟ್ಟಿರುತ್ತಾನೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಲೋಗಿ ಠಾಣೆ : ದಿನಾಂಕ: 15/07/2016 ರಂದು ಕ್ಲಲೂರ[ಬಿ] ಸೀಮಾಂತರ ಮಲ್ಲೇಶಿ ಯರಗಲ್ ಇವರ ಹೊಲದ ಹತ್ತೀರ ಹೋದಾಗ ಅಲ್ಲಿ ಬಲಗಡೆ ತಗ್ಗಿನಲ್ಲಿ ಒಂದು ಭಾರತ ಬೆಂಜ ಟಿಪ್ಪರ್ ನಂ ಕೆಎ-28 ಸಿ-2581 ನೇದ್ದು ಬಿದ್ದಿದ್ದು, ಮತ್ತು ಮಗ್ಗಲಲ್ಲಿ ಇದ್ದ ಒಂದು ಲೈಟಿನ ಕಂಬ ಕೂಡಾ ಮುರಿದು ಬಿದ್ದಿದ್ದು, ನಿನ್ನೆ ದಿನಾಂಕ: 14/07/2016 ರಂದು ರಾತ್ರಿ ವೇಳೆಯಲ್ಲಿ ಕೆನಾಲ ಕೆಲಸ ಮುಗಿಸಿಕೊಂಡು ಬರುವಾಗ ತನ್ನ ಟಿಪ್ಪರನ್ನು ಅತೀ ವೇಗ ಹಾಗೂ ಅಲಕ್ಷತನದಿಂದ ನಡೆಯಿಸಿ ಮಗ್ಗಲಲ್ಲಿ ಕೆಡವಿ ವಾಹನ ಬಿಟ್ಟು ಹೋಗಿದ್ದು ಅದರ ಚಾಲಕ ಗೌಡಪ್ಪ ನಂದಗೇರಿ ಅಂತಾ ತಿಳಿದು ಬಂದಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ನೆಲೋಗಿ ಠಾಣೆ : ದಿನಾಂಕ: 15/07/2016 ರಂದು  , ಮಂದೇವಾಲ ಬಸ್ಸ ನಿಲ್ದಾಣದ ಹತ್ತಿರ ಒಬ್ಬನು ಕುಳಿತು ಸಾರ್ವಜನಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ನೆಲೋಗಿ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾಹಿತಿ ಇದ್ದ ಮಂದೇವಾಲ ಬಸ್ಸ ನಿಲ್ದಾಣದ ಹತ್ತೀರ ಹೋಗಿ ನೋಡಲಾಗಿ ಬಸ್ ನಿಲ್ದಾಣದ ಮುಂದುಗಡೆ ಒಬ್ಬನು ಕುಳಿತು  ಒಂದು ರೂಪಾಯಿಗೆ ಎಂಬತ್ತು  ರೂಪಾಯಿ ಬರುತ್ತವೆ  ಮಟಕಾ ನಂಬರ ಬರೆಯಿಸಿರಿ ಅಂತ ಜನರಿಗೆ  ಒದರಿ ಹೇಳಿ ಅವರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿದ್ದುದನ್ನು ಖಚಿತಪಡಿಕೊಂಡು ದಾಳಿ ಂಆಡಿ ಅವನನ್ನು ಹಿಡಿದು ಅವನ ಹೆಸರು ವಿಚಾರಿಸಲು ಫಕೀರಸಾಬ ತಂದೆ ಇಮಾಮಸಾಬ ಭಾಗವಾನ ಸಾ|| ಮಂದೇವಾಲ ಅಂತ ಹೇಳಿದನು. ಅವನ ಹತ್ತಿರ 1480-00 ರೂಪಾಯಿ,  ಮಟಕಾ ಬರೆದ ಚೀಟಿ, ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ನೆಲೋಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

ನೆಲೋಗಿ ಠಾಣೆ : ದಿನಾಂಕ: 14/07/2016 ರಂದು  ಜೇರಟಗಿ ಬಸ್ಸ ನಿಲ್ದಾಣದ ಹತ್ತಿರ ಒಬ್ಬನು ಕುಳಿತು ಸಾರ್ವಜನಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ.ನೆಲೋಗಿ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾಹಿತಿ ಇದ್ದ ಜೇರಟಗಿ ಬಸ್ಸ ನಿಲ್ದಾಣದ ಹತ್ತಿರ ಹೊಗಿ ನೊಡಲಾಗಿ ಅಲ್ಲಿ ಕಟ್ಟೆಯ ಮೇಲೆ ಒಬ್ಬನು ಕುಳಿತು  ಒಂದು ರೂಪಾಯಿಗೆ ಎಂಬತ್ತು  ರೂಪಾಯಿ ಬರುತ್ತವೆ  ಮಟಕಾ ನಂಬರ ಬರೆಯಿಸಿರಿ ಅಂತ ಜನರಿಗೆ  ಒದರಿ ಹೇಳಿ ಅವರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿದ್ದಾಗ  ಅವನನ್ನು ಹಿಡಿದು  ಅವನ ಹೆಸರು ವಿಚಾರಿಸಲು ಶಿವಾನಂದ ತಂದೆ ಮುತ್ತಪ್ಪ ಹಡಪಾದ ಸಾ|| ಜೇರಟಗಿ ಅಂತ ಹೇಳಿದನು ಅವನ ಹತ್ತಿರ 1200-00 ರೂಪಾಯಿ  ಮಟಕಾ ಬರೆದ ಚೀಟಿ , ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದಿಯವನೊಂದಿಗೆ ನೆಲೋಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ. 

14 July 2016

Kalaburagi District Reported Crimes

ಆಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 13/07/2016 ರಂದು ಮದ್ಯಾಹ್ನ ಗೌರ(ಬಿ) ಸೀಮಾಂತರದ ಬಸಯ್ಯ ತಂದೆ ಮಹಾದೇವಯ್ಯ ಹಿರೇಮಠ ಇವರ ಹೊಲದಲ್ಲಿ ಅನದಿಕೃತವಾಗಿ ಗಾಂಜಾ ಗಿಡಗಳನ್ನು ಬೆಳೆಸಿ, ಗಾಂಜಾ ಮಾರಾಟ ಮಾಡುತ್ತಾನೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ, ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮತ್ತು ಮಾನ್ಯ ತಾಲೂಕಾ ದಂಡಾಧಿಕಾರಿಗಳು ಹಾಗೂ ಮಾನ್ಯ ತಹಸಿಲ್ದಾರರು ಆದ ಶ್ರೀ ದಯಾನಂದ ಪಾಟೀಲ ಸಾಹೇಬರಿಗೆ ದಾಳಿ ಮಾಡುವ ಸಂದರ್ಬದಲ್ಲಿ ಹಾಜರಿರುವಂತೆ ಮಾನ್ಯ ತಹಸಿಲ್ದಾರ ಸಾಹೇಬರು ಇಬ್ಬರು ಪಂಚರಾದ 1) ಸಂಗಪ್ಪ ತಂದೆ ಕಲ್ಲಪ್ಪ ಬಗಲಿ ಉ|| ಗ್ರಾಮ ಲೆಕ್ಕಾದಿಕಾರಿ ಗೌರ (ಬಿ) ಗ್ರಾಮ ಸಾ|| ಮನ್ನಿಕೇರಿ ತಾ|| ಬಿಳಗಿ ಜಿ|| ಬಾಗಲಕೋಟ ಹಾ|| ವ|| ಅಫಜಲಪೂರ 2) ದೇವಾನಂದ ತಂದೆ ದತ್ತಪ್ಪ ಜಮಾದಾರ ಉ| ಗ್ರಾಮ ಸೆವಕ ಗೌರ (ಬಿ) ಗ್ರಾಮ ಸಾ|| ಗೌರ (ಬಿ) ಇವರೊಂದಿಗೆ ಗೌರ (ಬಿ) ಗ್ರಾಮಕ್ಕೆ ಹೋಗಿ ಗ್ರಾಮದ ಬಾತ್ಮಿದಾರರಿಗೆ ಸದರಿ ಬಸಯ್ಯ ಹಿರೆಮಠ ಈತನ ಹೊಲದ ಬಗ್ಗೆ ಹಾಗೂ ಸದರಿಯವನ ಬಗ್ಗೆ ವಿಚಾರಿಸಿದಾಗ ಬಾತ್ಮಿದಾರನು ನಮ್ಮ ಜೊತೆಗೆ ಬಂದು ದೂರದಿಂದ ಬಸಯ್ಯ ಹಿರೆಮಠ ಈತನ ಹೊಲವನ್ನು ತೊರಿಸಿದ ಮೇರೆಗೆ, ಸದರಿ ಬಸಯ್ಯ ಹಿರೆಮಠ ಈತನ ಹೊಲದಲ್ಲಿ ತಲಾಸ ಮಾಡುತ್ತಾ ಹೊಗುತ್ತಿದ್ದಾಗ ಸದರಿ ಹೊಲದಲ್ಲಿ ತರಕಾರಿ ಬೆಳೆಗಳ ಸಮೀಪ ಹೋಗುತ್ತಿದ್ದಂತೆ ತರಕಾರಿ ಬೆಳೆಯಲ್ಲಿ ಗಾಂಜಾ ಗಿಡಗಳು ಕಂಡವು ಆಗ ನಾವು ಗಾಂಜಾ ಗಿಡಗಳ ಸಮೀಪ ಹೋಗುತ್ತಿದ್ದಂತೆ ಅಲ್ಲೆ ಸಮೀಪದಲ್ಲಿದ್ದ ಒಬ್ಬ ವ್ಯೆಕ್ತಿ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡ ತೊಡಗಿದನು, ಆಗ ನಾವು ಸದರಿಯವನ ಮೇಲೆ ಸಂಶಯ ಬಂದು, ಅವನನ್ನು ಬೆನ್ನಟ್ಟಿ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಬಸಯ್ಯ ತಂದೆ ಮಹಾದೇವಯ್ಯ ಹಿರೇಮಠ ಸಾ|| ಗೌರ (ಬಿ) ಅಂತಾ ತಿಳಿಸಿದನು, ನಾವು ತಲಾಸ ಮಾಡುತ್ತಿದ್ದ ಹೊಲದ ಮಾಲಿಕ ಹಾಗೂ ವ್ಯೆಕ್ತಿ ಸದರಿಯವನೆ ಆಗಿದ್ದರಿಂದ, ಸದರಿ ಬಸಯ್ಯ ಹಿರೆಮಠ ಈತನಿಗೆ ವಿಚಾರಿಸಿದಾಗ ಸದರಿಯವನು ಸದರಿ ಗಾಂಜ ಬೆಳೆದ ಹೊಲದ ಸರ್ವೆ ನಂಬರ 56 ಇದ್ದು ಗೌರ (ಬಿ) ಸೀಮಾಂತರದಲ್ಲಿ ಇರುತ್ತದೆ. ನಾನು ಸದರಿ ನನ್ನ ಹೊಲದಲ್ಲಿ ಸುಮಾರು ದಿನಗಳಿಂದ ಗಾಂಜಾ ಗಿಡಗಳನ್ನು ಬೆಳೆದು ಅದನ್ನು ನನ್ನ ಸ್ವಂತ ಲಾಬಕ್ಕಾಗಿ ಮಾಹಾರಾಷ್ಟ್ರದ ಬೇರೆ ಬೇರೆ ಕಡೆಗೆ ತಗೆದುಕೊಂಡು ಹೋಗಿ ಮಾರಾಟ ಮಾಡುತ್ತೇನೆ ಅಂತಾ ತಿಳಿಸಿದನು. ನಂತರ ಸದರಿ ವ್ಯೆಕ್ತಿಯನ್ನು ವಶಕ್ಕೆ ಪಡೆದುಕೊಂಡು, ಸದರ ಗಾಂಜಾ ಗಿಡಗಳನ್ನು ಕಾಂಡ ಸಮೇತ ಕಿತ್ತಿಸಿ ನಂತರ ಸದರಿ ಹಾಜರಿದ್ದ ಪಂಚರ ಸಮಕ್ಷಮ ನಾನು ಮತ್ತು ಮಾನ್ಯ ತಹಸಿಲ್ದಾರ ಸಾಹೇಬರು ಇಬ್ಬರು ಗಾಂಜ ಗಿಡಗಳನ್ನು ವಶಪಡಿಸಿಕೊಂಡಿದ್ದು, ಸದರಿ ಗಾಂಜಾ ಗಿಡಗಳನ್ನು ಕಾಂಡ ಸಮೇತವಾಗಿ ಕಿತ್ತಿದ್ದು, ಒಟ್ಟು ಕಾಂಡ ಸಮೇತವಾದ 45 ಹಸಿ ಗಾಂಜಾ ಗಿಡಗಳು ಇರುತ್ತವೆ. ಅವುಗಳನ್ನು ತೂಕ ಮಾಡಿಸಲು ಅಂದಾಜು 40 ಕೆಜಿ ತೂಕಿನವುಗಳು ಇರುತ್ತವೆ. ಸದರಿ ಕಾಂಡ ಸಮೇತವಾದ ಹಸಿ ಗಾಂಜಾ ಗಿಡಗಳು  ಅಂದಾಜು 2,00,000/- ರೂ ಕಿಮ್ಮತ್ತಿನವು ಇರಬಹುದು. ಅಂಥಾ ತಿಳಿಸಿಜಪ್ತಿ ಪಂಚನಾಮೆ ಮಾಡಿಕೊಂಡು ನಚಿತರ ಸದರಿ ಜಪ್ತ ಮಾಡಿಕೊಂಡ ಎಲ್ಲಾ ಗಾಂಜಾ ಗಿಡಗಳನ್ನು ಹಾಗೂ ಗಾಂಜಾ ಗಿಡಗಳನ್ನು ಬೆಳೆದ ಬಸಯ್ಯಾ ಹಿರೆಮಠ ಈತನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಹರಣ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ.8-7-2016 ರಂದು ಮುಂಜಾನೆ 8-00 ಗಂಟೆಯ ಸುಮಾರಿಗೆ  ನಮ್ಮ ಗ್ರಾಮದ ನಮ್ಮ ಓಣಿಯ ನಮ್ಮ ಜನಾಂಗದವನೆಯಾದ ಕುಮಾರ ತಂದೆ ಬಂಡೆಪ್ಪಾ ನಂದಿಕೂರ  ಸಾ;ಉದನೂರ ಗ್ರಾಮ ಇತನು ತನ್ನ ಮಗಳು ಅಪ್ರಾಪ್ತ ಬಾಲಕಿ ಚಿನ್ನಮ್ಮಾ ತಂದೆ ಜೈಭೀಮ ಕಟ್ಟಿ ವಯ;17 ವರ್ಷ ಇವಳನ್ನು ಮದುವೆಯಾಗುತ್ತೇನೆ ಅಂತಾ ಹೇಳಿ ಪುಸಲಾಯಿಸಿ ಅಪಹರಿಸಿಕೊಂಡು ಹೋಗಿರುತ್ತಾನೆ ಅಂತಾ ಶ್ರೀಮತಿ ಭಾರತಿ ಗಂಡ ಜೈಭೀಮ ಕಟ್ಟಿ ಸಾ :;ಉದನೂರ ಗ್ರಾಮ ತಾ;ಜಿ;ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಡುಗ ಕಾಣೆಯಾದ ಪ್ರಕರಣ :
ನೆಲೋಗಿ ಠಾಣೆ : ಶ್ರೀ ಶಿವಪ್ಪ ತಂದೆ ಗೋಪಾಲ, ಮಾನವರ್ ಸಾ: ಅರಕೇರಿ ತಾ : ಜಿ : ವಿಜಯಪೂರ ಇವರ ಎರಡನೆ ಮಗ ಸಿದ್ದಪ್ಪ ಇವನು ಈಗ ಸುಮಾರು 2 ತಿಂಗಳ ಹಿಂದೆ ನಮ್ಮ ಕುರಿಗಳನ್ನು ಹೊಡೆದುಕೊಂಡು ನಾನು ನನ್ನ ಹೆಂಡತಿ ಮಗ ಅಜೀತ, ಸಿದ್ದಪ್ಪ ಕೂಡಿಕೊಂಡು ಮಂದೇವಾಲ ಸೀಮಾಂತರದಲ್ಲಿ ಕುರಿಗಳನ್ನು ಮೈಸುತ್ತಾ ರಾತ್ರಿ ಅಲ್ಲೇ ಹೊಲಗಳಲ್ಲಿ ರಾತ್ರಿ ವಸ್ತಿ ಮಾಡುತ್ತಿದ್ದೇವು.ನನ್ನ ಮಗ ಅಜೀತನಿಗೆ ಸ್ವಲ್ಪು ಆರಾಮವಿಲ್ಲದ ಕಾರಣ ಅವನಿಗೆ ದೇವರ ಕೇಳಿದ್ದರಿಂದ ಅವನಿಗೆ 7 ಶನಿವಾರ ನಮ್ಮ ಹನುಮಾನ ದೇವರಿಗೆ ಹೊಗಿ ಬರುಲು ಹೇಳಿದ್ದರಿಂದ ಅವನು 2 ಶನಿವಾರ ಹನುಮಾನ ದೇವರಿಗೆ ಮಂದೇವಾಲಕ್ಕೆ ಹೋಗಿದ್ದ ದಿನಾಂಕ: 11/06/2016 ರಂದು ಮುಂಜಾನೆ 7:30 ಎ.ಎಂ ಸುಮಾರಿಗೆ ನಾವು ವಸ್ತಿ ಮಾಡಿದ ಮಂದೇವಾಲ ಸೀಮಾಂತರದ ಶೇಟ್ಟಿಯವರ ಹೊಲದಿಂದ ದೇವರಿಗೆ ಹೋಗಿ ಬರುತ್ತೇನೆ ಅಂತ ನನ್ನ ಮಗ ಅಜೀತನು ಹೊದನು ನಂತರ 12:00 ಗಂಟೆ ಆದರು ನನ್ನ ಮಗ ನಾವು ಇದ್ದ ಹೊಲಕ್ಕೆ ಬರಲಿಲ್ಲಾ ನಂತರ ನಾವು ಮಂದೇವಾಲ ಹಾಗೂ ಇತರೆ ಕಡೆಗಳಲ್ಲಿ ಹುಡಿಕಾಡಿದರು ಸಿಗಲಿಲ್ಲಾ ನಂತರ ನಾವು ನಮ್ಮ ಸಂಬಂಧಿಕರಲ್ಲಿ ಹೊಗಿರಬಹುದೆಂದು ನಮ್ಮೂರಿಗೆ ಹೋಗಿ ನಮ್ಮ ಸುತ್ತಿಲಿನ ಸಂಬಂಧಿಕರ ಊರಲ್ಲಿ ಪತ್ತೆ ಮಾಡಲಾಗಿ ಎಲ್ಲಿಯೂ ನನ್ನ ಮಗನು ಸಿಕ್ಕರುವದಿಲ್ಲಾ ಕಾಣೆಯಾದ ನನ್ನ ಮಗನನ್ನೂ ಪತ್ತೆ ಮಾಡಿಕೊಡಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಶಿವಾನಂದ ತಂದೆ ಧರ್ಮಣ್ಣ ಉ|| ಪ್ರಭಾರಿ ಮುಖ್ಯ ಗುರುಗಳು ಸರ್ಕಾರಿ ಪ್ರೌಢ ಶಾಲೆ ಯಳಸಂಗಿ, ಸಾ|| ಮೋಘಾ (ಕೆ), ತಾ|| ಆಳಂದ ಇವರು ದಿನಾಂಕ 28/06/2016 ರಂದು ಎಸ್.ಎಸ.ಎಲ.ಸಿ ಜೂನ – 2016 ರ ಪರೀಕ್ಷಾ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಕರ್ತವ್ಯ ಕುರಿತು ಹೊರಟು ಶಾಲೆಯ ಪೂರ್ಣ ಪ್ರಭಾರವನ್ನು ದೈಹಿಕ ಶಿಕ್ಷಕರಾದ ಶ್ರೀ ಸಿದ್ದಾರಾಮ ತಂದೆ ಪರಮೇಶ್ವರ ಪಾಳೆದ ಇವರಿಗೆ ವಹಿಸಿಕೊಟ್ಟಿರುತ್ತೇನೆ. ದಿನಾಂಕ 30/06/2016 ರಂದು 0500 ಪಿ.ಎಮದಿಂದ ಮತ್ತು ದಿನಾಂಕ 01/07/2016 ರ 0600 ಎ.ಎಮ ಮಧ್ಯದ ಅವಧಿಯಲ್ಲಿ ನಮ್ಮ ಶಾಲೆಯ ಹಳೆಯ ಕಟ್ಟಡದ ಮಧ್ಯದ ಕಂಪ್ಯೂಟರ ಕೋಣೆಯಲ್ಲಿರುವ ಒಟ್ಟು 16 ಬ್ಯಾಟರಿಗಳ ಅಂದಾಜು ಬೆಲೆ 24,900/- ಮೌಲ್ಯದವುಗಳನ್ನು ಯಾರೋ ಕಳ್ಳರು ಬಾಗಿಲಿನ ಕೊಣೆಯ ಬೀಗದ ಕೈ ಮತ್ತು ಕಬ್ಬಿಣದ ಶಟರ ಮುರಿದು ಒಳಗೆ ನುಗ್ಗಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.