POLICE BHAVAN KALABURAGI

POLICE BHAVAN KALABURAGI

18 June 2016

Kalaburagi District Reported Crimes

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರಗಳ ಜಪ್ತಿ :
ಜೇವರಗಿ ಠಾಣೆ : ದಿನಾಂಕ 17.06.2016 ರಂದು ಕೊಳಕೂರ ಸೀಮಾಂತರ ಭೀಮಾ ನದಿ ದಂಡೆಯಿಂದ ಟಿಪ್ಪರಗಳಲ್ಲಿ ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬುತ್ತಿದ್ದಾರೆ ಅಂತಾ ಬಾತ್ಮೀ ಮೇರೆಗೆ ಶ್ರೀ. ಶ್ರೀಮಂತ ಇಲ್ಲಾಳ ಪಿ.ಎಸ್.ಐ ಜೇವರಗಿ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಕೊಳಕೂರ ಸೀಮಾಂತರ ಭೀಮಾ ನದಿಯ ದಂಡೆಯ ದೂರ ಇರುವಾಲೆ ಜೀಪನ್ನು ಮರೆಯಾಗಿ ನಿಲ್ಲಿಸಿ, ಎಲ್ಲರೂ ಜೀಪಿನಿಂದ ಕೆಳಗೆ ಇಳಿದು ಬೀಮಾ ನದಿ ದಡದ ಕಡೆಗೆ ಹೋಗಿ ಗಿಡಗಂಟೀಗಳ ಮರೆಯಲ್ಲಿ ನಿಂತು ನೋಡಲಾಗಿ  ಭೀಮಾ ನದಿಯಿಂದ ಟಿಪ್ಪರಗಳಲ್ಲಿ ಮರಳು ತುಂಬುತ್ತಿದ್ದನ್ನು ನೋಡಿ ಖಚಿತಪಡಿಸಿಕೊಂಡು ಸಾಯಂಕಾಲ 7.00 ಗಂಟೆಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಲು ಹೋದಾಗ ಟಿಪ್ಪರ ಚಾಲಕರು ಟಿಪ್ಪರಗಳು ಬಿಟ್ಟು ಓಡಿ ಹೋಗಹತ್ತಿದರು ನಾವು ಅವರಿಗೆ ಬೆನ್ನು ಹತ್ತಿ ಹಿಡಿಯಲು ಪ್ರಯತ್ನ ಮಾಡಿದರು ಸಿಕ್ಕಿರುವದಿಲ್ಲಾ. ನಂತರ ಟಿಪ್ಪರ ನಿಂತ ಸ್ಥಳಕ್ಕೆ ಬಂದು ನೋಡಲಾಗಿ 1. ಟಿಪ್ಪರ ನಂಬರ ಕೆಎ-32-ಸಿ-4787 ಇತ್ತು ಅದರಲ್ಲಿ ಅಂದಾಜು 1 ಬ್ರಾಸನಷ್ಟು ಉಸುಕು ಇದ್ದು ಅದರ ಅ.ಕಿ 1000/-ರೂ ಆಗಬಹುದು ಟಿಪ್ಪರನ ಅ.ಕಿ 3,00,000/-ರೂ ಆಗಬಹುದು. 2. ಟಿಪ್ಪರ ನಂಬರ ಎಮ್.ಹೆಚ್.-12-ಈಏಪ್-2387  ಇತ್ತು ಅದರಲ್ಲಿ ಅಂದಾಜು 1 ಬ್ರಾಸನಷ್ಟು ಉಸುಕು ಇದ್ದು ಅದರ ಅ.ಕಿ 1000/-ರೂ ಆಗಬಹುದು ಟಿಪ್ಪರನ ಅ.ಕಿ 3,00,000/-ರೂ ಆಗಬಹುದು. ನೋಡಿದರೆ ಸದರಿ ಟಿಪ್ಪರ ಚಾಲಕರು ಸಂಭಂದಪಟ್ಟ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆದುಕೊಳ್ಳದೇ ಕಳ್ಳತನದಿಂದ ಮರಳು ಮಾರಾಟ ಮಾಡಲು ತುಂಬುತ್ತಿದ್ದ  ಬಗ್ಗೆ  ಕಂಡು ಬಂದಿದ್ದರಿಂದ ಸದರಿ ಮರಳು ಮತ್ತು ಟಿಪ್ಪರಗಳೊಂದಿಗೆ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಜೇವರಗಿ ಠಾಣೆ : ದಿನಾಂಕ 17.06.2016 ರಂದು ಸಾಯಂಕಾಲ ಜೇವರಗಿ ಪಟ್ಟಣದ ರಿಲಾಯಿನ್ಸ್ ಪೆಟ್ರೊಲ್ ಪಂಪ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಒಬ್ಬ ಮನುಷ್ಯನು ರೋಡಿನಲ್ಲಿ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ. ಶ್ರೀಮಂತ ಇಲ್ಲಾಳ ಪಿ.ಎಸ್.ಐ ಜೇವರಗಿ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮೀ ಇದ್ದ ಸ್ಥಳಕ್ಕೆ ಕಾಲು ನಡಿಗೆಯಲ್ಲಿ ಹೊರಟು ಬಾತ್ಮೀ ಸ್ಥಳ  ದೂರು ಇರುವಾಗಲೇ ರೋಡಿನ ಸೈಡಿನಲ್ಲಿ ಹೊಟೇಲ ಗೊಡೆ ಮರೆಯಲ್ಲಿ ನಿಂತು ನೋಡಲಾಗಿ ರಿಲಾಯನ್ಸ್ ಪೆಟ್ರೊಲ್ ಪಂಪ  ಹತ್ತಿರ  ಸಾರ್ವಜನಿಕ ರಸ್ತೆ ಮೇಲೆ ಒಬ್ಬ ಮನುಷ್ಯನು ಸಾರ್ವಜನಿಕರಿಗೆ 1-00 ರೂಪಾಯಿಗೆ 80-00 ರೂಪಾಯಿ ಕೊಡುತ್ತೇನೆ ಅಂತಾ ಹೋಗಿ ಬರುವ ಸಾರ್ವಜನಕರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆ ಚೀಟಿ ಬರೆದು ಕೊಳ್ಳುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಅವನಿಗೆ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ವಿಶ್ವನಾಥ ತಂದೆ ಸಿದ್ರಾಮಪ್ಪ ಶಿವಣಕರ ಸಾಃ ಲಕ್ಮೀಚೌಕ ಜೇವರಗಿ ಅಂತಾ ತಿಳಿಸಿದನು. ನಂತರ ಅವನಿಗೆ ಅಂಗ ಶೋಧ ಮಾಡಲು ಅವನ ಹತ್ತಿರ ನಗದು ಹಣ 4540/-ರೂ. ಒಂದು ಮಟಕಾ ಚೀಟಿ, ಒಂದು ಬಾಲ ಪೆನ್ನು, ಮತ್ತು ಒಂದು ಮೊಬೈಲ್ ಅ.ಕಿ. 500=00 ರೂ ನೇದ್ದವುಗಳು ದೊರೆತಿದ್ದು ಸದರಿಯವನೊಂದಿಗೆ ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣಗಳು :
ನಿಂಬರ್ಗಾ ಠಾಣೆ : ದಿನಾಂಕ 17/06/2016 ರಂದು 0740 ಗಂಟೆಗೆ ನಾನು ನಮ್ಮ ತಾಂಡಾದ ಖೇಮು ಇತನ ಹೊಟೇಲ ಮುಂದೆ ನಾನು ಹೊರಟಾಗ ನನಗೆ 01] ರಂಗನಾಥ ತಂದೆ ಶಾಮರಾವ ಚವ್ಹಾಣ, 02] ದಿಲೀಪ ತಂದೆ ಶಾಮರಾವ ಚವ್ಹಾಣ, 03] ಪ್ರಕಾಶ ತಂದೆ ಜಾಪು ಚವ್ಹಾಣ, 04] ಗೊವಿಂದ ತಂದೆ ಸುಭಾಷ ರಾಠೋಡ ಎಲ್ಲರೂ ತಡೆದು ನಿಲ್ಲಿಸಿ ಏ ರಂಡಿ ಮಗನೆ ನಮ್ಮ ತಾಂಡಾದಾಗ ನಿನ್ನದು ಬಹಳ ನಡದಾದ ಒಂದು ಕೈ ನೋಡೆ ಬಿಡತೇವು ಅಂತ ಬೈದು ರಂಗನಾಥನು ನನಗೆ ಕಲ್ಲಿನಿಂದ ಬೆನ್ನ ಮೇಲೆ ಹೊಡೆದನು, ಮಲ್ಲಿನಾಥ ತಂದೆ ಭೋಜು ಚವ್ಹಾಣ ಇತನು ಬಿಡಿಸಲು ಬಂದಾಗ ಆತನಿಗೆ ರಂಗನಾಥನು ತನ್ನ ಕೈಯಲ್ಲಿದ್ದ ಚೂಪಾದ ಕಟ್ಟಿಗೆಯಿಂದ ಹಣೆಗೆ ತಿವಿದನು, ನನಗೆ ಎಡಗಾಲಿಗೆ ತಿವಿದನು, ನಂತರ ಅನ್ನುಬಾಯಿ ಇವಳು ಬಿಡಿಸಲು ಬಂದಾಗ ಅವಳಿಗೆ ಬೇಬಿಬಾಯಿ ಗಂಡ ಸುಭಾಷ ರಾಠೋಡ ಇವಳು ಕಲ್ಲಿನಿಂದ ಜೋರಾಗಿ ಹಣೆಗೆ ಹೊಡೆದಳು, ನನ್ನ ತಂದೆಯಾದ ಜಗನ್ನಾಥ ಇವರು ಬಿಡಿಸಲು ಬಂದಾಗ ಪ್ರಕಾಶನು ಕಲ್ಲಿನಿಂದ ಎದೆಗೆ ಹೊಡೆದನು, ನನ್ನ ತಾಯಿಯಾದ ಪಾರ್ವತಿ ಇವಳು ಬಿಡಿಸಲು ಬಂದಾಗ ಕವಿತಾಬಾಯಿ ಗಂಡ ಬಸು ರಾಠೊಡ ಇವಳು ಕಾಲಿನಿಂದ, ಹೊಟ್ಟೆ, ಸೊಂಟಕ್ಕೆ ಒದ್ದು ರಂಡಿ ನಿಮ್ಮ ಸೊಕ್ಕು ಬಹಳ ಅದ ಒಂದ ಕೈ ನೋಡತೆವು ಅಂತ ಬೈದು ತಲೆಯ ಮೇಲಿನ ಕೂದಲು ಹಿಡಿದು ಜಗ್ಗಾಡಿ ಕೈಯಿಂದ ಕಪಾಳಕ್ಕೆ ಹೊಡೆದಳು, ದಿಲೀಪನು ನನಗೆ ಕಾಲಿನಿಂದ ಹೊಟ್ಟೆಗೆ ಒದ್ದಿರುತ್ತಾನೆ, ಗೊವಿಂದನು ಈ ರಂಡಿ ಮಕ್ಕಳಿಗೆ ಇಡಬಾಡದು ಅಂತ ಅನ್ನುತ್ತಿದ್ದಾಗ ನಮ್ಮ ತಾಂಡಾದವರಾದ ಖೇಮು ತಂದೆ ಸೇವು ಚವ್ಹಾಣ, ಶಾಮರಾವ ತಂದೆ ರಾಮಚಂದ್ರ ಚವ್ಹಾಣ, ದಾಮು ತಂದೆ ನಾಮದೇವ ಚವ್ಹಾಣ ಇವರು ನೊಡಿ ಬಿಡಿಸಿರುತ್ತಾರೆ. ಅಂತಾ ಶ್ರೀ ಅನೀಲ ತಂದೆ ಜಗನ್ನಾಥ ಚವ್ಹಾಣ ಸಾ|| ನಿಂಬರ್ಗಾ ತಾಂಡಾ, ತಾ|| ಆಳಂದ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ನರೋಣಾ ಠಾಣೆ : ದಿನಾಂಕ 16/06/2016 ರಂದು ಶ್ರೀ ಮಂಜುಳಾ ಎಸ್. ಬಾನಿ ಉ: ಪಿಡಿಓ ಕಡಗಂಚಿ ಗ್ರಾಮ ಪಂಚಾಯತ ಇವರು ಸುಮಾರು ಒಂದುವರೆ ವರ್ಷದಿಂದ ಕಡಗಂಚಿ ಗ್ರಾಮ ಪಂಚಾಯತನಲ್ಲಿ ಪಿ.ಡಿ.ಓ ಅಂತಾ ಕರ್ತವ್ಯ ನಿರ್ವಹಿಸಿಕೊಂಡು ಬರುತ್ತಿದ್ದೆನೆ. ನಮ್ಮ ಗ್ರಾಮ ಪಂಚಾಯತನ ಅಧ್ಯಕ್ಷರಾಗಿ ಸದ್ಯ ಅಂಬಿಕಾ ಗಂಡ ಶಾಂತಪ್ಪ ದುತ್ತರಗಾಂವ ಅಂತಾ ಇದ್ದು ಇವರ ಗಂಡನಾದ ಶಾಂತಪ್ಪ ದುತ್ತರಗಾಂವ ಇವರು ಪಂಚಾಯತನ ಕೆಲಸಕಾರ್ಯಗಳ ಬಗ್ಗೆ ತಕರಾರು ಮಾಡುತ್ತಾ ನನ್ನೊಂದಿಗೆ ಆಗಾಗ ಜಗಳಮಾಡುತ್ತಾ ಬಂದಿರುತ್ತಾರೆ. ನಾನು ದಿನಾಂಕ 14/06/2016 ರಂದು ಪ್ರತಿದಿವಸದಂತೆ ಬೆಳಗ್ಗೆ ಕರ್ತವ್ಯ ಕುರಿತು ಕಡಗಂಚಿ ಪಂಚಾಯತ ಕಾರ್ಯಾಲಯಕ್ಕೆ ಬಂದು ಮಿಟಿಂಗ್ ಹಾಲನಲ್ಲಿ ಕುಳಿತು ಸಿಬ್ಬಂದಿಯವರಾದ ಕಂಪ್ಯೂಟರ ಆಪರೇಟರ್ ವಿಜಯಲಕ್ಷ್ಮಿ, ಬಿಲ್ ಕಲೇಕ್ಟರ್ ಪುರುಶೋತ್ತಮ್ ಹಾಗೂ ಪಂಪ ಆಪರೇಟರ್ ಅಶೋಕ ಚಿಂದೆ ರವರೊಂದಿಗೆ ಪಂಚಾಯತ ಕಛೇರಿಗೆ ಸಂಬಂದಿಸಿದ ಲ್ಯಾಪಟಾಪ ಕಂಪ್ಯೂಟರನಲ್ಲಿ  ಉದ್ಯೂಗ ಖಾತರಿ ಯೋಜನೆಗೆ ಸಂಬಂಧಿಸಿದಂತೆ ಕೂಲಿಕೆಲಸ ಮಾಡಿದ ಕೂಲಿಕಾರ್ಮಿಕರಿಗೆ ಅವರ ಖಾತೆಗೆ ಕೂಲಿ ಹಣವನ್ನು ಆನಲೈನ ಮುಖಾಂತರ ಪಾವತಿ ಮಾಡುವ ಕಾರ್ಯದಲ್ಲಿ ತೊಡಗಿದ್ದಾಗ ಅದೆ ದಿವಸ ರಾತ್ರಿ 9-00 ಗಂಟೆ ಸುಮಾರಿಗೆ ಕಡಗಂಚಿ ಗ್ರಾಮದ ಶಾಂತಪ್ಪ ದುತ್ತರಗಾಂವ ಇವರು ಗ್ರಾಮ ಪಂಚಾಯತ ಕಾರ್ಯಾಲಯಕ್ಕೆ ಬಂದು ಏಕವಚನದಲ್ಲಿ ಏ ನಿನಗೆ ಕೂಲಿ ಕಾರ್ಮಿಕರಿಗೆ ಹಣ ಪಾವತಿ ಮಾಡುವುದು ಬೇಡಾ ಅಂತಾ ಹೇಳಿದ್ದರು ಕೂಲಿಕಾರ್ಮಿಕರಿಗೆ ಹಣ ಪಾವತಿ ಕೆಲಸ ಮಾಡುತ್ತಿದ್ದಿಯಾ ಆ ಲ್ಯಾಪಟಾಪ ಕೊಡು ಅಂತಾ ಚೀರಾಡುತ್ತಿದ್ದಾಗ ಆ ಶಬ್ದಕೇಳಿ ಅಲ್ಲಿಯೇ ಇದ್ದ ಕಡಗಂಚಿ ಗ್ರಾಮದ ದತ್ತರಾಜ ತಂದೆ ಕರಬಸಪ್ಪ ಬೊಮ್ಮನಳ್ಳಿ, ಗಣೇಶತಂದೆ ಸುಭಾಷ ಸದಾಪುಲೆ, ಪ್ರಮೋದ ತಂದೆ ಯಶ್ವಂತ ಡೋಣಿ, ಭೀಮರಾವ ತಂದೆ ಸೈಬಣ್ಣ ನರೋಣಾ ಇವರುಗಳು ಬಂದು ಕರ್ತವ್ಯದಲ್ಲಿದ್ದ ಮೇಡಮವರಿಗೆ ಏಕೆ ತೊಂದರೆ ಕೊಡುತ್ತಿದ್ದಿಯಾ ಹೊರಗೆ ಬಾ ಅಂತಾ ಶಾಂತಪ್ಪ ಇವರಿಗೆ ಹೇಳುತ್ತಿದ್ದಾಗ ಶಾಂತಪ್ಪ ಇವರು ನನ್ನ ಹತ್ತಿರವಿದ್ದ ಲ್ಯಾಪಟಾಪ ಕಂಪ್ಯೂಟರ, ಕಛೇರಿಗೆ ನೀಡಿದ ಡೊಂಗಲ್ ಹಾಗೂ ಲ್ಯಾಪಟಾಪ ಚಾರ್ಜರಗಳನ್ನು ಜಬರದಸ್ತಿಯಿಂದ ಕಸಿದುಕೊಂಡು ನೀನು ಈ ಲ್ಯಾಪಟಾಪ ಕೇಳಿದರೆ ನೀನಗೆ ಜೀವಸಹಿತ ಬಿಡುವುದಿಲ್ಲಾ ಈಗ ಅದು ಹ್ಯಾಗೆ ಬಿಲ್ ಮಾಡುತ್ತಿ ನಾನು ನೋಡುತ್ತೇನೆ ಅಂತಾ ಜೀವಭೇದರಿಕೆ ಹಾಕುತ್ತಾ ಅಲ್ಲಿಂದ ಹೊರಟು ಹೋಗಿರುತ್ತಾನೆ.  ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

16 June 2016

Kalaburagi District Reported Crimes

ಹಲ್ಲೆ ಪ್ರಕರಣಗಳು :
ದೇವಲಗಾಣಗಾಪೂರ ಠಾಣೆ : ಶ್ರೀ ಚಂದ್ರಶಾ ತಂದೆ ದೇವಿಂದ್ರಪ್ಪ ಹಳ್ಳಿ ಸಾ||ದೇವಲಗಾಣ ಗಾಪುರ ಇವರು ದಿನಾಂಕ:14-06-2016 ರಂದು ರಾತ್ರಿ 8:00 ಗಂಟೆ ಸುಮಾರಿಗೆ ನಾನು ನನ್ನ ಗೆಳೆಯನಾದ ಅಂಬಾರಾಯ ತಂದೆ ಮರೆಪ್ಪ ಹಳ್ಳಿ ಇತನೊಂದಿಗೆ ನಮ್ಮೂರಿನ ಕಮಿಟಿ ಹಾಲ ಹತ್ತಿರ ಇರುವ ರಾಕೇಶ ತಂದೆ ಸುಕಾಂತ ದೊಡ್ಡಮನಿ ಇವರ ಕಿರಾಣಾ ಅಂಗಡಿಯ ಮುಂದೆ ಕಟ್ಟೆಯ ಮೇಲೆ ಕುಳಿತಾಗ  ಆ ಸಮಯಕ್ಕೆ ಚಂದ್ರಶಾ ತಂದೆ ಅಂಬಣ್ಣ ನಡಗಟ್ಟಿ ಈತನು ಕುಡಿದು ಬಂದು ಏ ರಂಡಿ ಮಗನೇ ಬೋಸಡಿ ಮಗನೆ ನಿಂದು ಜಾಸ್ತಿಯಾಗಿದೆ ಅಂತಾ ಅವಾಚ್ಯ ಬೈಯುತ್ತಿರುವಾಗ ನಾನು ಅಲ್ಲಿಂದ ಎದ್ದು ಮನೆಗೆ ಹೋಗುತ್ತಿರುವಾಗ ಚಂದ್ರಶಾ ಈತನು ಹಿಂದಿನಿಂದ ಬಂದು ಚಪ್ಪಲಿಯಿಂದ ನನಗೆ ಹೊಡೆದು ತೆಕ್ಕೆ ಕುಸ್ತಿಗೆ ಮಾಡುತ್ತಿರುವಾಗ ಚಂದ್ರಶಾ ಈತನ ಮಗ ಅಂಬಣ್ಣ ಈತನು ತಮ್ಮ ಮನೆಯಲ್ಲಿದ್ದ ತಲವಾರ ತೆಗದುಕೊಂಡು ಬಂದು ನಮ್ಮ ಅಪ್ಪನೊಂದಿಗೆ ಜಗಳ ಮಾಡುತ್ತಿ ಅಂತಾ ಅವಾಚ್ಯ ಬೈದು ತನ್ನ ಕೈಯಲ್ಲಿದ್ದ ತಲವಾರದಿಂದ ನನ್ನ ತಲೆಗೆ ಬಲಗೈ ಅಂಗೈಗೆ ಬಲಗೈ ಮೋಣಗೈಗೆ ಬಲಗೈ ಭುಜದ ಮೇಲೆ ಹಾಗು ಎಡಗೈಯ ಅಂಗೈಗೆ ಹೊಡೆದು ಭಾರಿ ರಕ್ತಗಾಯ ಪಡಿಸಿ ಜೀವದ ಬೆದರಿಕೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಡ್ರಾಮಿ ಠಾಣೆ : ಶ್ರೀಮತಿ ಶಿವಮ್ಮ ತಂದೆ ಚೋಳಪ್ಪ ದಾಸರ ಸಾ|| ಯಲಗೋಡ ಗ್ರಾಮ ತಾ|| ಜೇವರಗಿ ರವರ ಗಂಡ ಸುಮಾರು 20 ವರ್ಷ ಗಳ ಹಿಂದೆ ತೀರಿಕೊಂಡಿದ್ದು, ಅಂದಿನಿಂದ ನಾನು ಯಲಗೋಡ ಗ್ರಾಮದಲ್ಲಿರುವ ನಮ್ಮ ತವರು ಮನೆಯಲ್ಲೇ ಇದ್ದಿರುತ್ತೇನೆ, ನಮ್ಮ ತಮ್ಮನಾದ ಬಸವರಾಜ ಇವನಿಗೆ 6 ಜನ ಗಂಡು ಮಕ್ಕಳಿರುತ್ತಾರೆ ಈಗ 04 ವರ್ಷಗಳ ಹಿಂದೆ ನಮ್ಮ ತಮ್ಮ ಬಸವರಾಜ ಇವನು ತೀರಿಕೊಂಡಿರುತ್ತಾನೆ.  ದಿನಾಂಕ 14-06-2016 ರಂದು ಸಾಯಂಕಾಲ 6;00 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ತಮ್ಮನ ಮಗನಾದ ಪ್ರಭುರಾಯ ಮನೆಯ ಮುಂದೆ ಮಾತಾಡುತ್ತಾ ಕುಳಿತಾಗ ನಮ್ಮೂರ 1] ಹಣಮಂತ ತಂದೆ ರಾಮಣ್ಣ ಕುರಡೇಕರ, 2] ರಾಮಣ್ಣ ಕುರಡೆಕರ, ಹಾಗು ಯಡ್ರಾಮಿ ಗ್ರಾಮದ 3] ಅವಿನಾಶ ತಂದೆ ಶಿವಕಾಂತ ಕುಸ್ತಿ, 4] ಗಣೇಶ ತಂದೆ ಶಿವಕಾಂತ ಕುಸ್ತಿ, 5] ರಘು ತಂದೆ ಬಸಣ್ಣ ಕುಸ್ತಿ, 6] ಶರಣಪ್ಪ ತಂದೆ ಲವಕುಶ ಕಲಬುರಗಿ ರವರೆಲ್ಲರು ಗುಂಪು ಕಟ್ಟಿಕೊಂಡು ಪ್ರಭುರಾಯನ ಹತ್ತಿರ ಬಂದು ಅವನಿಗೆ ಹಣಮಂತ ಇವನು ಏ ಸುಳಿಮಗನೆ ಪ್ರಬ್ಯಾ ಇವತ್ತ ಮರಗಮ್ಮ ಗುಡಿ ಹತ್ತಿರ ಚಕ್ಕಾರ ಆಡುವಾಗ ನಿನ್ನ ಎದಿರಿನವನಿಗೆ ಆಟದ ಬಗ್ಗೆ ಹೇಳಿದ್ದಕ್ಕೆ ನನ್ನೊಂದಿಗೆ ಜಗಳಮಾಡಿದಿ, ನಿನಗ ಸೊಕ್ಕ ಬಹಳಾಗ್ಯಾದ ಇವತ್ತ ನಿನಗ ಖಲಾಸೆ ಮಾಡುತ್ತೇವೆ ಅಂತಾ ಅಂದು ಅವನ ಕೈಯಲ್ಲಿದ್ದ ಬಡಿಗೆಯಿಂದ ಪ್ರಭುರಾಯನ ತೆಲೆಗೆ ಜೋರಾಗಿಹೊಡೆದನು ಆಗ ಪ್ರಭುರಾಯ ನೆಲದ ಮೇಲೆ ಬಿದ್ದಾಗ ರಾಮಣ್ಣ, ಅವಿನಾಶ, ರವರು ತಮ್ಮ ಕೈಯಲ್ಲಿದ್ದ ಬಡಿಗೆಗಳಿಂದ ಪ್ರಭುರಾಯನ ಬೆನ್ನಿನ ಮೇಲೆ ಮುಂಡಿಯ ಮೇಲೆ ಹೊಡೆದು ಗುಪ್ತ ಪೆಟ್ಟು ಪಡಿಸಿರುತ್ತಾರೆ, ರಘು ಇವನು ಪ್ರಭುರಾಯನಿಗೆ ಅಲ್ಲೆ  ಬಿದ್ದಿದ್ದ ಕಲ್ಲಿನಿಂದ ಬೆನ್ನಿನ ಮೇಲೆ ಗುದ್ದಿದ್ದನು, ಗಣೇಶ ಮತ್ತು ಶರಣಪ್ಪ ರವರು ಕೈಯಿಂದ ಮೈ ಕೈಗೆ ಹೊಡೆ ಬಡೆ ಮಾಡಿರುತ್ತಾರೆ, ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅಪಘಾತ ಪ್ರಕರಣ :
ದೇವಲಗಾಣಗಾಪೂರ ಠಾಣೆ : ಶ್ರೀ ಚಂದ್ರಶೇಖರ ಪೊಲೀಸ್ ಪಾಟೀಲ್ ಸಾ||ಅವರಳ್ಳಿ ಇವರು ದಿನಾಂಕ 14-06-2016 ರಂದು ಮದ್ಯಾಹ್ನ ನಾನು ಮತ್ತು ನನ್ನ ಗೆಳೆಯ ಸಿದ್ದರಾಮ ಚಿಕ್ಕೌಲಗಿ ಇಬ್ಬುರ ಕೂಡಿ ವ್ಯಯಕ್ತಿಕ ಕೆಲಸ ನಿಮಿತ್ಯ ತನ್ನ ಮೊಟರ್ ಸೈಕಲ ನಂ. KA 34 W-5439 ನೇದ್ದರ ಮೇಲೆ ಅವರಳ್ಳಿಯಿಂದ  ಗೊಬ್ಲುರ (ಬಿ)  ಗ್ರಾಮದ ಹತ್ತಿರ ಬಲ ಇಂಡಿಕೇಟರ ಹಾಕಿಕೊಂಡು ರೋಡ ಕ್ರಾಸ ಮಾಡುತ್ತಿದ್ದಾಗ ಸಾಯಂಕಾಲ 5:30 ಗಂಟೆ ಸುಮಾರಿಗೆ ಹಿಂದುಗಡೆಯಿಂದ ಮೊಟರ್ ಸೈಕಲ ನಂ. KA-32 EH 3327 ನೇದ್ದರ ಸವಾರ ತನ್ನ ಮೊಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ನನ್ನ ಮೊಟರ್ ಸೈಕಲಗೆ ಡಿಕ್ಕಿ ಪಡಿಸಿದ್ದರಿಂದ ಕೆಳಗೆ ಬಿದ್ದು ನನ್ನ ಬಲಗಾಲ ಹಿಂಬಡಿಯ ಮೇಲೆ ಭಾರಿ ಪೆಟ್ಟಾಗಿ ಕಾಲು ಮುರಿದಿರುತ್ತದೆ. ಮತ್ತು ಎಡಗೈ ಅಂಗೈ ಹತ್ತಿರ ತರಚಿದ ಗಾಯವಾಗಿರುತ್ತದೆ. ನನ್ನ ಗೆಳೆಯ ಸಿದ್ದರಾಮ ಈತನಿಗೆ ತಲೆಗೆ ಸ್ವಲ್ಪ ರಕ್ತಗಾಯವಾಗಿದ್ದು  ತಲೆ, ಬೆನ್ನು ಎದೆ ಹಾಗೂ ಎಡಗಡೆ ಬುಜಕ್ಕೆ ಗುಪ್ತಗಾಯವಾಗಿರುತ್ತವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

15 June 2016

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 14/06/2016 ರಂದು ಧುತ್ತರಗಾಂವ ಗ್ರಾಮದಲ್ಲಿ ಭೀಮಶಾ ರಾಜೋಳ ಇವರ ಹೊಟೇಲ ಮುಂದುಗಡೆ ಸಾರ್ವಜನಿಕ ರೋಡಿನ ಮೇಲೆ ಮಟಕಾ ಜೂಜಾಟ ನಡೆಯುತ್ತಿದೆ ಅಂತ ಮಾಹಿತಿ ಬಂದ ಮೇರೆಗೆ ಶ್ರೀ ಮಲ್ಲಿಕಾರ್ಜುನ ಎ.ಎಸ್.ಐ ನಿಂಬರ್ಗಾ ಪೊಲೀಸ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಧುತ್ತರಗಾಂವ ಗ್ರಾಮಕ್ಕೆ ಹೋಗಿ ಭೀಮಶಾ ರಾಜೋಳ ಇವರ ಹೊಟೇಲ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಹೊಟೇಲ ಮುಂದುಗಡೆ ಸಾರ್ವಜನಿಕ ರೋಡಿನ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವನಿಗೆ ವಿಚಾರಿಸಲು ಆತನು ತನ್ನ ಹೆಸರು ಅರುಣ ತಂದೆ ಸಿದ್ದಲಿಂಗಯ್ಯ ವಿಶ್ವನಾಥ ಮಠ ವ|| 19 ವರ್ಷ, ಜಾ|| ಜಂಗಮ, || ಕೂಲಿ ಕೆಲಸ, ಸಾ|| ಧುತ್ತರಗಾಂವ ಅಂತ ತಿಳಿಸಿದ್ದು ಇತನನ್ನು ಚಕ್ ಮಾಡಲಾಗಿ ಇತನ ಹತ್ತಿರ ನಗದು ಹಣ 480/- ರೂಪಾಯಿ ಮತ್ತು ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ ನೇದ್ದವುಗಳನ್ನು ವಶಪಡಿಸಿಕೊಂಡು ಸದರಿಯವನೊಂದಿಗೆ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ವಾಡಿ ಠಾಣೆ : ಶ್ರೀಮತಿ ಶಾಂತಮ್ಮ ಗಂಡ ಹಣಮಂತ ಬಳಿಚಕ್ರ  ಇವಳು ತನ್ನ ಮನೆಯ ಮುಂದಿನ ರೋಡ ಆಚೆ ಎಸಿಸಿ ಕಂಪೌಂಡ ಪಕ್ಕದಲ್ಲಿ ಸಂಡಸ್ ಮಾಡಿ ಬರಲು ಹೋಗಿ ರೋಡ ಪಕ್ಕದಲ್ಲಿ  ಕುಳಿತು ಕೊಂಡಾಗ 5-00 ಪಿ.ಎಮ್ ಸುಮಾರು ಬಲರಾಮ ಚೌಕ ಕಡೆಯಿಂದ ಒಬ್ಬನು ಲಾರಿಯನ್ನು ಚಲಾಯಿಸಿಕೊಂಡು ಬಂದು ರೋಡ ಸೈಡಿಗೆ ನಿಲ್ಲಿಸಲು ಹೋಗಿ ಶಾಂತಮ್ಮ ಇವಳ ಎರಡು ಪಾದದ ಮೇಲಿಂದ ಲಾರಿಯನ್ನು ಚಲಾಯಿಸಿಕೊಂಡು ಹೋಗಿದ್ದರಿಂದ ಅವಳ ಎರಡು ಕಾಲು ಪಾದಗಳಿಗೆ ಭಾರಿ ರಕ್ತ ಹಾಗೂ ಗುಪ್ತಗಾಯಗಳಾಗಿದ್ದು ಈ ವಿಷಯ ಹುಡುಗರಿಂದ  ಶಾಂತಮ್ಮಳ ಮಗಳು ರುಬೀ ಇವಳಿಗೆ ಗೋತ್ತಾಗಿ ಸ್ಥಳಕ್ಕೆ ಹೋಗಿ ಶಾಂತಮ್ಮಳಿಗೆ ವಾಡಿ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಹೋಗಿ ಉಪಚರಿಸಿಕೊಂಡು ನಂತರ ಹೆಚ್ಚಿನ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಹೋಗಿ ಸೇರಿಕೆ ಮಾಡಿದ್ದು ಇರುತ್ತದೆ. ಲಾರಿ ನಂಬರ ನೋಡಿರುವುದಿಲ್ಲ ಅಂತಾ ತಿಳಿಸಿದ್ದು  ದಿನಾಂಕ:13/06/2016 ರಂದು ಮೃತಳ ಮಗಳಾದ ಪಿರ್ಯಾದಿ ರೂಬಿ ಗಂಡ ವಿಜಯಕುಮಾರ ಬಳಿಚಕ್ರ ರವರ ಪುರವಣಿ ಹೇಳಿಕೆ ನೀಡಿದ್ದನೇಂದರೆ ನನ್ನ ತಾಯಿ ಶಾಂತಮ್ಮ ಇವಳು ದಿನಾಂಕ:10/06/2016 ರಂದು 5.00 ಪಿಎಮ್ ಸುಮಾರಿಗೆ ಯಾವೊದೊ ಒಂದು ಲಾರಿ ಅಪಘಾತಪಡಿಸಿದ್ದರಿಂದ ನನ್ನ ತಾಯಿಗೆ ಎಡ ಮತ್ತು ಬಲಗಾಲಿಗೆ ಭಾರಿ ಒಳಪೆಟ್ಟಾಗ ರಕ್ತಗಾಯವಾಗಿ ಉಪಚಾರ ಒಂದು ಇಂದು ದಿನಾಂಕ:13/06/2016 ರಂದು 11.50 ಎಎಮ್ ಸುಮಾರಿಗೆ ಮೃತ ಪಟ್ಟಿರುತ್ತಾಳೆ . ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.