POLICE BHAVAN KALABURAGI

POLICE BHAVAN KALABURAGI

07 June 2016

Kalaburagi District Reported Crimes

ಅಪಘಾತ ಪ್ರಕರಣಗಳು :
ಜೇವರಗಿ ಠಾಣೆ : ದಿನಾಂಕ 06.06.2016 ರಂದು ಮುಂಜಾನೆ 11.15 ಗಂಟೆಗೆ ನಮ್ಮ ಠಾಣೆಯ ಸಿಪಿಸಿ 513 ರವರು ಕಲಬುರಗಿ ಗಂಗಾ ಆಸ್ಪ್ಪತ್ರೆಯಿಂದ ಮರಳಿ ಠಾಣೆಗೆ ಬಂದು, ಶ್ರೀಮಂತ ಇಲ್ಲಾಳ ಪಿ.ಎಸ್.ಐ ಜೇವರಗಿ ಠಾಣೆ ರವರು  ಸದರಿ ಗಂಗಾ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಗಾಯಾಳು ಶ್ರೀ ನಾಗೇಶ ತಂದೆ ಲಕ್ಷ್ಮಣ ಒಡೆಯರಾಜ ಇವರ ಮಗನ ಜಾವಳ ಕಾರ್ಯಕ್ರಮ ಸೊಂತ ಗ್ರಾಮದಲ್ಲಿ ಇರುವುದಿರಿಂದ ದಿನಾಂಕ 05.06.2016 ರಂದು ಬೆಂಗಳೂರಿನಿಂದ ನಾನು ಮತ್ತು ಗಣೇಶ ತಂದೆ ಕಚುರು ಪವಾರ, ಈಶ್ವರ ತಂದೆ ರಾಮಚಂದ್ರ ಒಡೆಯರ, ಅನೀಲ ತಂದೆ ನಾಗರಾಜ ಒಡೆಯರ ಎಲ್ಲರೂ ಕೂಡಿ ಕಾರ ನಂ ಕೆಎ-01-ಝಡ್-6255 ನೇದ್ದರಲ್ಲಿ ಕುಳಿತುಕೊಂಡು ಸೊಂತ ಗ್ರಾಮಕ್ಕೆ ಜಾವಳ ಕಾರ್ಯಕ್ರಮದ ನಿಮಿತ್ಯವಾಗಿ ಬರುತ್ತಿದ್ದೆವು. ಕಾರನ್ನು ಗಣೇಶ ಪವಾರ ನಡೆಸುತ್ತಿದ್ದನು. ಇಂದು ದಿ. 06.06.2016 ರಂದು ಬೆಳಗಿನ ಜಾವ 5.30 ಗಂಟೆಯ ಸುಮಾರಿಗೆ ಜೇವರಗಿ ಪಟ್ಟಣದ ಹೊರ ವಲಯದ ದಾರೂಲ್ ವೂಲುಮ ಮಹ್ಮದಿ ಉರ್ದು ಶಾಲೆಯ ಹತ್ತಿರ ಜೇವರಗಿ ಕಲಬುರಗಿ ಮುಖ್ಯ ರಸ್ತೆಯ ಮೇಲೆ ಬರುತ್ತಿದ್ದಾಗ ಅದೇ ವೇಳೆಗೆ ಎದುರಿನಿಂದ ಒಂದು ಕೆ.ಎಸ್.ಆರ್.ಟಿ. ಬಸ್ಸ ನಂ ಕೆ.ಎ36 ಎಫ್ 1035 ನೇದ್ದರ ಚಾಲಕನಾದ ಮಲ್ಲಪ್ಪ ಸುಂಕದ ಇತನು ಬಸ್ಸ ಅನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮ ಕಾರಿಗೆ ಎದುರಾಗಿ ಡಿಕ್ಕಿಪಡಿಸಿ ಅಫಘಾತ ಮಾಡಿದನು. ಈ ಅಫಘಾತದಲ್ಲಿ ಕಾರಿನಲ್ಲಿದ್ದ ನನಗೆ ಮತ್ತು ಈಶ್ವರ ಒಡೆಯರ್, ಅನೀಲ ಒಡೆಯರ ಇವರಿಗೆ ಬಾರಿ ಮತ್ತು ಸಾದಾ ಗಾಯಗಳಾಗಿದ್ದು ಅಲ್ಲದೆ ಕಾರ ಚಾಲಕ ಗಣೇಶಯನ ತಲೆಗೆ, ಹಣೆಯ ಮೇಲೆ, ಬಲ ಕಣ್ಣಿನ ಹತ್ತಿರ, ಮೂಗಿನ ಹತ್ತಿರ ತುಟಿಯ ಹತ್ತಿರ, ಎಡಭುಜ ಕೇಳಗೆ ಬಾರಿ ಪೆಟ್ಟಾಗಿದ್ದು ಮುರಿದಿದ್ದು,  ಅವನಿಗೆ ಉಪಚಾರ ಕುರಿತು ಕಲಬುರಗಿ ಗಂಗಾ ಆಸ್ಪತ್ರೆಯಲ್ಲಿ ತಂದು ಸೇರಿಕೆ ಮಾಡಿದ್ದು. ಅವನಿಗೆ ಆಸ್ಪತ್ರೆಯಲ್ಲಿ ಉಪಚಾರ ಫಲಕಾರಿಯಾಗದೆ ಇಂದು ಮುಂಜಾನೆ 7.40 ಗಂಟೆಗೆ ಮೃತಪಟ್ಟಿರುತ್ತಾನೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಡಬೂಳ ಠಾಣೆ : ದಿನಾಂಕ-05/06/2016 ರಂದು ರಾತ್ರಿ 10 ಪಿ.ಎಮ್ ಕ್ಕೆ ನಾನು ಹಾಗೂ ನನ್ನ ಮಗಾ ಆಕಾಶ ಹಾಗೂ ಅಕ್ಕನ ಮಗ ರಾಕೇಶ ಮನೆಯಲ್ಲಿರುವಾಗ ನನ್ನ  ಮೋಬೈಲ್‌ಗೆ ನನ್ನ ಮಗಾ ಜಗದೀಶ ಕೆಲಸ ಮಾಡುವ ಟೆಲರಿಂಗ್ ಅಂಗಡಿಯ ಮಾಲಿಕನಾದ ಆನಂದ ಪೋನ್ ಮಾಡಿ ತಿಳಿಸಿದೆನೆಂದರೆ ನಾನು ಮತ್ತು ನಿಮ್ಮ ಮಗಾ ಜಗ್ಗದೀಶ ಹಾಗೂ ರಾಘವೇಂದ್ರ ಮೂವರು ಕೊಡಿಕೊಂಡು ನನ್ನ ಹತ್ತಿರ ಇರುವ ಮೋ.ಸೈಕಲ ನಂ ಕೆಎ-32 ಯು-8841 ನೇದ್ದರ ಮೇಲೆ ಕಲಬುರಗಿಗೆ ಹೋಗಿ ಮರಳಿ ಬರುತ್ತಿರುವಾಗ ರಾತ್ರಿ 9 ಪಿ.ಎಮ್ ಕ್ಕೆ ಗುಂಡಗುರ್ತಿ ಸರಕಾರಿ ಆಸ್ಪತ್ರೆಯ ಸಮೀಪ ನಿನ್ನ ಮಗ ಮೋಟಾರ ಸೈಕಲ ಹಿಂದುಗಡೆಯಿಂದ ಬಿದ್ದ ಪ್ರಯುಕ್ತ ತೆಲೆಯ ಹಿಮ್ಮದಿಯಲ್ಲಿ ಹಾಗೂ ಬಲಗಾಲಿನ ಮಂಡಿ ಹತ್ತಿರ ಭಾರಿ ಗುಪ್ತಗಾಯವಾಗಿ ಬೇಹೊಷಾ ಆಗಿರುದರಿಂದ ಆತನಿಗೆ ನಾವಿಬ್ಬರೂ ಅಂಬುಲೈಸ್ಸನಲ್ಲಿ ಹಾಕಿಕೊಂಡು ಕಲಬುರಗಿಯ ಯುನೈಟೇಡ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ ಅಂತಾ ತಿಳಿಸಿದ ಮೇರೆಗೆ ನಾನು ನನ್ನ ಮಗ ಹಾಗೂ ನನ್ನ ಅಕ್ಕನ ಮಗ ರಾಕೇಶ ಸೇರಿ ಕಲಬುರಗಿಯ ಯುನೈಟೇಡ ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ಮಗಾ ಇತನ ತೆಲೆಯ ಹಿಮ್ಮದಿಯಲ್ಲಿ ಭಾರಿ ಗುಪ್ತಗಾಯ ಹಾಗೂ ಬಲಗಾಲಿನ ಮಂಡಿ ಹತ್ತಿರ ಗುಪ್ತಗಾಯ ಹಾಗೂ ತರಿಚಿದ ಗಾಯಗಳಾಗಿದ್ದು ಮಾತನಾಡುವ ಸ್ಥಿತಿಯಲ್ಲಿರಲ್ಲಿಲ್ಲಾ ಅಲ್ಲೆ ಹಾಜರಿದ್ದ ಆನಂದ ಇತನಿಗೆ ಘಟನೆ ಬಗ್ಗೆ ವಿಚಾರಿಸಲು ನಿನ್ನೆ ದಿನಾಂಕ-05/06/2016 ರಂದು 7 ಪಿ.ಎಮ್ ಕ್ಕೆ ನನ್ನ ಹತ್ತಿರುವ ಕೆಎ-32 ಯು-8841 ನೇದ್ದರ ನಾನು ಮತ್ತು ನಿಮ್ಮ ಮಗಾ ಜಗ್ಗದೀಶ ಹಾಗೂ ರಾಘವೇಂದ್ರ ಮೂವರು ಕೊಡಿಕೊಂಡು ಕಲಬುರಗಿಗೆ ಹೋಗಿ ಮರಳಿ ಬರುತ್ತಿರುವಾಗ ಮೋಟಾರ ಸೈಕಲ ರಾಘವೇಂದ್ರ ಈತನು ಚಲಾಯಿಸುತ್ತಿದ್ದು ನಾನು ಮದ್ಯದಲ್ಲಿ ಕುಳಿತ್ತಿದ್ದು ಹಿಂದುಗಡೆ ನಿಮ್ಮ ಮಗಾ ಜಗದೀಶ ಕುಳಿತ್ತಿದ್ದು ಗುಂಡಗುರ್ತಿ ಗ್ರಾಮದ ಸರಕಾರಿ ಆಸ್ಪತ್ರೆ ಸಮೀಪ ಹೋಗುತ್ತಿರುವಾಗ ರಾಘವೇದ್ರ ಇತನು ಅತಿ ವೇಗ ಹಾಗೂ ಅಲಕ್ಷತನದಿಂದ ಚಲಾಯಿಸುತ್ತಿರುವಾಗ ಆತನಿಗೆ ನಿದಾನವಾಗಿ ಚಲಾಯಿಸು ಅಂತಾ ಹೇಳಲು ಆತನು ಹಾಗೆ ವೇಗವಾಗಿ ಚಲಾಯಿಸಿಕೊಂಡು ಹೋಗಿದರಿಂದ ನನ್ನ ಹಿಂದುಗಡೆ ಕುಳಿತ ಜಗ್ಗದೀಶ ಒಮ್ಮೆಲೆ ಮೋಟಾರ ಸೈಕಲ ಹಿಮ್ಮದ್ದಿಯಿಂದ ಆಯಾತಪ್ಪಿ ಬಿದ್ದ ಪ್ರಯುಕ್ತ ನಾವು ಮೋ.ಸೈಕಲ ನಿಲ್ಲಿಸಿ ಅವನ ಹತ್ತಿರ ಹೋಗಿ ನೋಡಲಾಗಿ ತೆಲೆಗೆ ಬಲಗಾಲಿನ ಮಂಡಿ ಹತ್ತಿರ ಭಾರಿ ಗುಪ್ತಗಾಯವಾಗಿ ಬೇಹೋಷಾಗಿ ಬಿದ್ದಿರುತ್ತಾನೆ ನಂತರ ಆತನಿಗೆ ಚಿಕಿತ್ಸೆ ಕುರಿತು ಅಂಬುಲೈನ್ಸನಲ್ಲಿ ಹಾಕಿಕೊಂಡು ಆಸ್ಪತ್ರೆಗೆ ತಂದು ಸೇರಿಕೆ ಮಾಡಿ ನಿಮಗೆ ವಿಷಯ ತಿಳಿಸಿರುದಾಗಿ ತಿಳಿಸಿದ್ದು. ಸದರಿ ಘಟನೆ ನಿನ್ನೆ ರಾತ್ರಿ9-30 ಗಂಟೆಗೆ ನಡೆಇರುತ್ತದೆ. ನನ್ನ ಮಗನಿಗೆ ಉಪಚಾರ ಫಲಕಾರಿಯಾಗದೆ ನಿನ್ನೆ ರಾತ್ರಿಯೇ ಅಂದರೆ ದಿನಾಂಕ-06/06/2016 ರಂದು 1-20 ಎ.ಎಮ್ ಕ್ಕೆ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

05 June 2016

Kalaburagi District Reported Crimes

ಮನುಷ್ಯ ಕಾಣೆಯಾದ ಪ್ರಕರಣ :
ಅಶೋಕ ನಗರ ಠಾಣೆ : ಶ್ರೀಮತಿ. ಫಾಕೀಯಾ ತಬಸ್ಸುಂ  ಗಂಡ  ಮಂಜುನಾಥ ವಾಡಿ  ಸಾ: ದತ್ತ ನಿಲಯ ಬನಶಂಕರಿ ಲೇಔಟ ದೇವಾ ನಗರ ಕಲಬುರಗಿ ರವರು ದಿನಾಂಕ 12/05/2014 ರಂದು ಸಬ್‌ ರಜಿಸ್ಟಾರ ಆಫೀಸನಲ್ಲಿ ನಾವಿಬ್ಬರು ಮದುವೆಯಾಗಿದ್ದು  ನನ್ನ ಪತಿ ಮಂಜುನಾಥ ವಾಡಿ  ಸ.ಪ.ಪೂ ಕಾಲೇಜು ಬಿ.ಗುಡಿ ನಲ್ಲಿ ಭೌತಶಾಸ್ತ್ರ ಉಪನ್ಯಾಸಕರಾಗಿದ್ದಾರೆ.  ದಿನಾಂಕ 04/07/2015 ರಂದು ಪ್ಯಾರಲೈಸಿಸ್‌ ಆಗಿದ್ದು ಒಂದು ವರ್ಷದಿಂದ ಚಿಕಿತ್ಸೆ ಜರುಗುತ್ತಿದ್ದು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದರು.  ಚಿಕಿತ್ಸೆಯ 4 ತಿಂಗಳು ಪೂರ್ಣಗೊಂಡು ನಂತರ ನೌಕರಿಗೆ ಹಾಜರಾಗಿದ್ದು ದಿನಾಲು ಅವರ ತಂದೆಯವರ ಜೋತೆ ಹೋಗುತ್ತಿದ್ದರು. ಇವತ್ತು ದಿನಾಂಕ 03/06/2016 ರಂದು ಯಥಾವತ್ತಾಗಿ  ಕಾಲೇಜಿಗೆ ಹೊಗಲು ಎದ್ದು 7:30 ಎಎಂ ಸುಮಾರಿಗೆ ಅಟೊ ಅಂಕಲ ಜೋತೆ ನನ್ನ ಎ.ಟಿ.ಎಂ ಹಾಗು ಅವರ ಎ.ಟಿ.ಎಂ ಎರಡನ್ನು ತೆಗೆದುಕೊಂಡು ಹೊದರು. ಇತ್ತಿಚ್ಚಿಗೆ ಅವರು ಕಾಯಿಲೆಯಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದು ನಾನು ನಿನ್ನ ಮೇಲೆ ಭಾರವಾಗಿದ್ದೆನೆ ಎನ್ನುವ ಮಾತನ್ನು ಹೇಳಿದರು. ಬೆಳಿಗ್ಗೆ ಕಾಲೇಜಿಗೆಂದು ಹೊದವರು ಕಾಲೇಜಿಗೂ ಮುಟ್ಟದೇ ಮನೆಗೂ ಬಂದಿರುವುದಿಲ್ಲಾ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೀಪಗಳ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 04-06-2016 ರಂದು ಅಫಜಲಪೂರ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಎರಡು ಕ್ರೂಜರ ವಾಹನಗಳು ಮತ್ತು ಒಂದು ಕಮಾಂಡ ಜೀಪ ವಾಹನಗಳ ಚಾಲಕರು ತಮ್ಮ ತಮ್ಮ ವಾಹನಗಳನ್ನು ಬಸ್ ನಿಲ್ದಾಣದ ಎದರುಗಡೆ ಇರುವ ರಸ್ತೆಯ ಮದ್ಯದಲ್ಲಿ ನಿಲ್ಲಿಸಿಕೊಂಡಿದ್ದರು ಇದರಿಂದ ಬಸ್ ನಿಲ್ದಾಣದಲ್ಲಿ ಹೋಗಿ ಬರುವ ಕೆ.ಎಸ್.ಆರ್.ಟಿ.ಸಿ ಬಸಗಳಿಗೂ, ಸಂಚಾರಕ್ಕು ಮತ್ತು ಹೋಗಿ ಬರುವ ಸಾರ್ವಜನಿಕರಿಗೂ ಹಾಗೂ ಪ್ರಯಾಣಿಕರಿಗೂ ತೊಂದರೆ ಯಾಗುತ್ತಿತ್ತು.ಸದರಿ ವಾಹನಗಳಿಂದ ಸಾರ್ವಜನಿಕರಿಗೆ ಹಾಗೂ ಸಂಚಾರಕ್ಕೆ ತೊಂದರೆಯಾಗುತ್ತಿದ್ದರಿಂದ ಸದರಿ ವಾಹನಗಳನ್ನು ವಶಪಡಿಸಿಕೊಳ್ಳುವ ಕುರಿತು ಸದರಿ ವಾಹನಗಳನ್ನು ನೊಡಲಾಗಿ ಒಂದು ಕ್ರೂಜರ ವಾಹನ ನಂಬರ ಕೆಎ-22 ಎನ್-6037 ಅಂತಾ ಇದ್ದು ಸದರಿ ವಾಹನದಲ್ಲಿದ್ದ ವಾಹನದ ಚಾಲಕನ ಹೆಸರು ವಿಳಾಸ ವಿಚಾರಿಸಲಾಗಿ 1) ಮುತ್ತಪ್ಪ ತಂದೆ ಭಾಗಪ್ಪ ತೇಲಕರ ಉ: ಕ್ರೂಜರ ನಂ ಕೆಎ-22 ಎನ್-6037 ನೆದ್ದರ ಚಾಲಕ ಸಾ: ಗುಡ್ಡೆವಾಡಿ (ಗುಡ್ಡಡಗಿ) ತಾ: ಅಫಜಲಪೂರ ಅಂತಾ ತಿಳಿಸಿದ್ದು, ಹಾಗೂ ಇನ್ನೊಂದು ಕ್ರೂಜರ ವಾಹನ ನಂಬರ ನೋಡಿದ್ದು ಅದರ ನಂಬರ ಕೆಎ-32 ಎಮ್-4368 ಅಂತಾ ಇದ್ದು, ಸದರಿ ವಾಹನದಲ್ಲಿದ್ದ ಸದರ ವಾಹನದ ಚಾಲಕನ ಹೆಸರು 2) ಖಾಜಾಬಾಯ ತಂದೆ ಚಾಂದಸಾಬ ಸೌದರಿ ಉ: ಕ್ರೂಜರ ಚಾಲಕ ಸಾ: ಕರಜಗಿ ಅಂತಾ ತಿಳಿಸಿದ್ದು, ಮತ್ತೊಂದು ಕಮಾಂಡರ ಜೀಪ ಇದ್ದು ಅದರ ನಂ ಕೆಎ-29 ಎಮ್ – 2326 ಅಂತಾ ಇದ್ದು, ಸದರಿ ವಾಹನದಲ್ಲಿದ್ದ ಸದರ ವಾಹನದ ಚಾಲಕನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು 3) ಸಿದ್ದಪ್ಪ ತಂದೆ ಶಿವರಾಯ ನಾವಿ ಉ: ಕಮಾಂಡರ ಜೀಪ ನಂಬರ ಕೆಎ-29 ಎಮ್-2326 ನೇದ್ದರ ಚಾಲಕ ಸಾ : ಘತ್ತರಗಾ ತಾ : ಅಫಜಲಪೂರ ಅಂತಾ ತಿಳಿಸಿದನು. ಸದರಿ ವಾಹನಗಳ ಜನರು ತಮ್ಮ ತಮ್ಮ ವಾಹನಗಳನ್ನು ಅಫಜಲಪೂರ ಪಟ್ಟಣದ ಬಸ್ ನಿಲ್ದಾಣದ ಮುಂದೆ ಸಾರ್ವಜನಿಕ ರಸ್ತೆಯ ಮದ್ಯದಲ್ಲಿ  ನಿಲ್ಲಿಸಿ ಸಂಚಾರಕ್ಕೆ ಹಾಗೂ ಹೋಗಿ ಬರುವ ಜನರಿಗೆ ತೊಂದರೆ ಕೊಡುತ್ತಿದ್ದರಿಂದ ಸದರಿ ವಾಹನಗಳನ್ನು ಹಾಗೂ ಸದರಿ ವಾಹನಗಳ ಚಾಲಕರನ್ನು ವಶಕ್ಕೆ ಪಡೆದುಕೊಂಡು ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಜೇವರಗಿ ಠಾಣೆ : ದಿನಾಂಕ 04.06.2016  ರಂದು ಮುಂಜಾನೆ ಜೇವರಗಿ ಪಟ್ಟಣದ ಅಖಂಡೇಶ್ವರ ಎ.ಪಿ.ಎಮ್.ಸಿ  ತರಕಾರಿ ಮಾರ್ಕೆಟ್ ಯಾರ್ಡ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಕೆಲವು ಜನರು ಗುಂಪಾಗಿ ಕುಳಿತು ಇಸ್ಪೆಟ ಎಲೆಗಳ ಸಹಾಯದಿಂದ ಹಣ ಪಣಕ್ಕೆ ಇಟ್ಟು ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀಮಂತ ಇಲ್ಲಾಳ ಪಿ.ಎಸ್.ಐ ಜೇವರಗಿ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಜೇವರಗಿ ಪಟ್ಟಣದ ಅಖಂಡೆಶ್ವರ್ ಎ.ಪಿ.ಎಮ್.ಸಿ. ಮಾರ್ಕೇಟ್  ಕಡೆಗೆ ಹೊರಟು ಮಾರ್ಕೆಟ್ ತರಕಾರಿ ಮಾರ್ಕೆಟ್ ಯಾರ್ಡ ಕಡೆಗೆ ನಡೆದುಕೊಂಡು ಹೋಗಿ ಅಲ್ಲಿ ಅಡತ ಅಂಗಡಿಯ ಗೋಡೆಯ ಮರೆಯಲ್ಲಿ ನಿಂತು ನೋಡಲಾಗಿ ಕೆಲವು ಜನರು ತರಕಾರಿ ಮಾರ್ಕೆಟ್  ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಗುಂಪಾಗಿ ಕುಳಿತು ಇಸ್ಪೆಟ ಎಲೆಗಳ ಸಹಾಯದಿಂದ ಹಣ ಪಣಕ್ಕೆ ಇಟ್ಟು ಅಂದರ ಬಹಾರ ಇಸ್ಪೆಟ ಜುಜಾಟ ಆಡುತ್ತಿರುವದನ್ನು ನೋಡಿ ಖಚಿತಪಡೆಸಿಕೊಂಡ ದಾಳಿ ಮಾಡಿ ಹಿಡಿದು ಅಂಗಶೋಧನೆ ಮಾಡಿ ಹೆಸರು ವಿಳಾಸ ವಿಚಾರಿಸಲಾಗಿ 1) ಮಹ್ಮದ್ ಗೌಸ್ ತಂದೆ ಅಲೀ ಪಟೇಲ  2) ರಾಘವೇಂದ್ರ ತಂದೆ ಹೂವಣ್ಣಾ ಹನ್ನೂರ  3)   ಬಾವಾಸಾಬ ತಂದೆ ಮಶಾಖಸಾಬ ಕಾಸರಬೊಸಗಾ  ಅಂಥಾ ತಿಳಿಸಿದ್ದು ಸದದರಿಯವರಿಂದ 2300/- ರೂ, 52 ಇಸ್ಪೇಟ ಎಲೆಗಳನ್ನು ವಶಕ್ಕೆ ತೆಗೆದುಕೊಂಡು ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಸುಲಿಗೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಮಾರುತಿ ತಂದೆ ನರಸಿಂಗರಾವ ಬದಾಮಿ ಸಾ: ಮನೆ ನಂ.4-82 ಕಬೀರ ರೋಡ ಬಾವರ್ಚಿ ಗಲ್ಲಿ ಬೀದರ ಹಾ:ವ: ಮಾಸ್ಟರ ಶಿವಶಂಕರ ಹರಸೂರ ಮನೆಯಲ್ಲಿ ಕಿರಾಯಿ ಅರ್.ಎಸ್. ಕಾಲನಿ ಕಲಬುರಗಿ ರವರು ದಿನಾಂಕ 03/06/16 ರಂದು ಮಧ್ಯಾಹ್ನ ನಮ್ಮ ಸಂಬಂಧಿಕರಾದ ಕೊಪ್ಪಣ್ಣಾ ಇವರ ಬಾಬರ ಅಂಗಡಿಗೆ ಹೋಗಿ ಅವರೊಂದಿಗೆ ಸಂಜೆ 07-30 ಗಂಟೆಯವರೆಗೆ ಮಾತಾಡಿದ ನಂತರ ಅಲ್ಲಿಂದ ಒಬ್ಬನೇ ಅಲ್ಲೇ ಪಕ್ಕದಲ್ಲಿ ಇರುವ ರಾಮಕೃಷ್ಣ ಹೋಟಲಕ್ಕೆ ಹೋಗಿ  ಊಟ ಮಾಡಿಕೊಂಡು ಮನೆಗೆ ಹೋಗುವ ಕುರಿತು ಸಿಟಿ ಬಸ್ಟು ಹಿಡಿದುಕೊಂಡು ಹುಮನಾಬಾದ ರಿಂಗ ರೋಡ ಕಲಬುರಗಿ  ವರೆಗೆ ಬಂದು ಸಿಟಿ ಬಸ್ಸಿನಿಂದ ಇಳಿದು,  ಅಲ್ಲಿಂದ ಒಬ್ಬನೇ ನಡೆದುಕೊಂಡು ಅರ್.ಎಸ್. ಕಾಲನಿ ಕಡೆ ಹೊರಟಿದ್ದು. ರಾತ್ರಿ 08-30  ಗಂಟೆ ಸುಮಾರಿಗೆ ಟಿ.ವಿ.ಸ್ಟೇಷನ ಕ್ವಾರ್ಟರ್ಸ  ಹತ್ತಿರ ಬಂದಾಗ ಆಗ ನನ್ನ ಹಿಂದಿನಿಂದ ಒಂದು ಆಟೋದಲ್ಲಿ ಮೂರು ಜನರು ಹುಡುಗುರು ಕುಳಿತುಕೊಂಡು ಬಂದು ನನ್ನ  ಎದುರುಗಡೆ ಆಟೋ ತೆಗೆದುಕೊಂಡು ಬಂದು ಆಟೋದಿಂದ ನನಗೆ ಅಡ್ಡಗಟ್ಟಿ ನಿಲ್ಲಿಸಿ, ಮೂವರು ಆಟೋದಿಂದ ಇಳಿದು ಬಂದವರೇ ನನಗೆ ಸ್ವಲ್ಪ ಮುಂದೆ ಕತ್ತಲಿಲ್ಲಿ ಕರೆದುಕೊಂಡು ಹೋಗಿ, ಅವರಲ್ಲಿ ಒಬ್ಬನು ಹಿಂದಿ ಭಾಷೆಯಲ್ಲಿ ನನಗೆ ನಮ್ಮ ತಮ್ಮನ ಹಣ ಯಾಕೇ ಕಸಿದುಕೊಂಡಿದ್ದೀ ಅಂತಾ ಕೇಳಿದನು. ಅದಕ್ಕೆ ನಾನು ನನಗೇನು ಗೊತ್ತಿಲ್ಲಾ ಅಂತಾ ಹೇಳಿದಾಗ ಅವರಲ್ಲಿ ಇಬ್ಬರು ನನಗೆ ಒತ್ತಿಯಾಗಿ ಹಿಡಿಯಲು ಹಿಂದಿ ಭಾಷೆಯಲ್ಲಿ ಮಾತನಾಡಿದವನು ನನ್ನ ಎದೆಯ ಮೇಲಿನ ಕಿಸೆ ಚಕ್ಕ ಮಾಡಲು ಕಿಸೆಯಲ್ಲಿದ್ದ ನೋಕಿಯಾ ಮೋಬಾಯಿಲ ಅ:ಕಿ:  2000/- ರೂ. ಜಬರದಸ್ತಿಯಿಂದ ಕಸಿದುಕೊಂಡನು. ಮತ್ತು ಪ್ಯಾಂಟಿನ ಜೇಬಿನ ಎರಡು ಕಿಸೆಗಳನ್ನು ಚಕ್ಕ ಮಾಡಲಾಗಿ ಎನೋ  ಸಿಗಲಿಲ್ಲಾ. ತದನಂತರ ನನ್ನ ವಾಚ ಪಾಕೇಟದಲ್ಲಿದ್ದ ನಗದು ಹಣ 3500/- ರೂ.ಜಬರದಸ್ತಿಯಿಂದ ಕಸಿದುಕೊಂಡು ನನ್ನ ಪ್ಯಾಂಟು ಹರಿದು ತಾವು ತಂದಿದ್ದ ಆಟೋದಲ್ಲಿ ಮೂರು ಜನರು ಕುಳಿತುಕೊಂಡು ಅಲ್ಲಿಂದ ಹುಮನಾಬಾದ ರೋಡ ಕಡೆ ಓಡಿ ಹೋದರು. ಕತ್ತಲಿಲ್ಲಿ ಆಟೋ ನಂಬರ ನೋಡಲು ಆಗಿರುವುದಿಲ್ಲಾ. ಸದರಿ ಮೂರು  ಜನರು 18-24 ವರ್ಷ ವಯಸ್ಸಿನವರು ಇರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

03 June 2016

Kalaburagi District Reported Crimes

ಕೊಲೆ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಶಾಂತಪ್ಪ ತಂದೆ ತುಕ್ಕಪ್ಪ ಡಾಲೇರ ಸಾ:ಯಡ್ರಾಮಿ ತಾಂಡಾ ಇವರು ದಿನಾಂಕ 27-05-2016 ರಂದು ನನ್ನ ತಮ್ಮ ಮಾನಸಿಂಗ ಈತನು ದಿನಾಂಕ 26-05-2016 ರಂದು ಕುರಿ ಕಾಯಲು ಹೋಗಿದ್ದು, ಅಂದೆ 12;00 ಗಂಟೆಯಿಂದ 4;00 ಗಂಟೆ ಮದ್ಯಧಲ್ಲಿ ನಮ್ಮ ತಮ್ಮ ನಮ್ಮೂರ ರುಕುಮ ಪಟೇಲ ಚಿಂಚೋಳಿ ರವರ ಬಾವಿಯಲ್ಲಿ ನೀರು ಕುಡಿಯಲು ಹೋಗಿ ಬಾವಿ ನೀರಲ್ಲಿ ಬಿದ್ದು ಪೃತ ಪಟ್ಟಿರಬಹುದು ಅಂತಾ ಸಂಶಯದ ಮೇಲೆ ಅರ್ಜಿ ಕೊಟ್ಟ ಮೇರೆಗೆ ಠಾಣೆಯಲ್ಲಿ ಪ್ರಕರಣದ ದಾಖಲಾಗಿದ್ದು ಇರುತ್ತದೆ. ನಮ್ಮು 15 ಕುರಿಗಳು ಹಾಗು ಇನ್ನಿತರರ 25 ಕುರಿಗಳನ್ನು ನಾವು ಕಾಯುತ್ತಾ ಬಂದಿರುತ್ತೇವೆ. ಇಂದು ನಮ್ಮೂಣಿಯ ಸುಸಲಾಬಾಯಿ ಗಂಡ ಧರ್ಮು ಡಾಲೇರ ಮತ್ತು ರೇಣುಕಾ ಗಂಡ ಅನೀಲ ಡಾಲೇರ ರವರು ತಿಳಿಸಿದ್ದೇನೆಂದರೆ, ದಿನಾಂಕ 26-05-2016 ರಂದು ಮದ್ಯಾಹ್ನ 2;00 ಗಂಟೆ ಸುಮಾರಿಗೆ ನಾವು ರುಕುಮ ಪಟೇಲ ಚಿಂಚೋಳಿ ರವರ ಹೊಲದಲ್ಲಿ ಬಾವಿಯಿಂದ ಸ್ವಲ್ಪ ದೂರದಲ್ಲಿ ಕಟ್ಟಿಗೆ ಕಡಿಯುತ್ತಿದ್ದಾಗ ನಿಮ್ಮ ತಮ್ಮ ಮಾನಸಿಂಗನು ಸಹ ತನ್ನ ಕುರಿಗಳನ್ನು ಅಲ್ಲೆ ಬಾವಿ ಹತ್ತಿರ ಕಾಯುತ್ತಿದ್ದನು. ಆಗ ಅದೇ ಸಮಯಕ್ಕೆ ನಮ್ಮ ತಾಂಡಾದ ಲಕ್ಷ್ಮಣ@ಲಚ್ಯಾ ತಂದೆ ದೀಪಲು ರಾಠೋಡ ಹಾಗು ಅವನೊಂದಿಗೆ ಇನ್ನು 3 ಜನರಿದ್ದರು ಅವರು ಯಾರು ಅಂತಾ ಗೊತ್ತಿರುವುದಿಲ್ಲ, ನಂತರ ಅವರೆಲ್ಲರು ನಿಮ್ಮ ತಮ್ಮನ ಹತ್ತಿರ ಹೋಗಿ ಅವನಿಗೆ ಕೈಯಿಂದ ಹೊಡೆ ಬಡೆ ಮಾಡಿ ಬಾವಿ ನೀರಲ್ಲಿ ನೂಕಿ ಕೊಟ್ಟರು, ಆಗ ನಿಮ್ಮ ತಮ್ಮ ಚಿರಾಡುತ್ತಿದ್ದನು, ನಾವು ಹೆದರಿಕೊಂಡು ಅಲ್ಲೆ ಕಂಟಿಯಲ್ಲಿ ಅಡಗಿಕೊಂಡಿದೇವು. ನಂತರ ಅವರೆಲ್ಲರು ಎಲ್ಲಾ ಕುರಿಗಳನ್ನು ಹೊಡೆದುಕೊಂಡು ಸುಂಬಡ ಗ್ರಾಮದ ಕಡೆಗೆ ಹೋದರು. ಲಕ್ಷ್ಮಣ@ಲಚ್ಯಾ ಈತನ ಜೊತೆಗಿದ್ದ ಇನ್ನು 3 ಜನರನ್ನು ನೋಡಿದರೆ ಗುರುತಿಸುತ್ತೇವೆ. ನಾವು ಅವರನ್ನು ಹೆದರಿಕೊಂಡು ಮೊನ್ನೆಯಾದ ಘಟನೆಯನ್ನು ಹೇಳಿರುವುದಿಲ್ಲ. ಅಥಾ ತಿಳಿಸಿದ ಮೇರೆಗೆ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣಗಳು :
ಜೇವರಗಿ ಠಾಣೆ : ದಿನಾಂಕ 01.06.2016 ರಂದು ಮದ್ಯಾಹ್ನ ಜೇವರಗಿ ಹೊರ ವಲಯದ ಗಡ್ಡಿ ಫೂಲ್‌ ಹತ್ತಿರ ರೋಡಿನಲ್ಲಿ ನಾನು ಮತ್ತು ಭಗವಂತ್ರಾಯ ತಂದೆ ಗುಂಡಪ್ಪ ಶಿವಣ್ಣನವರ್ ಈತನ ಮೊಟಾರು ಸೈಕಲ್‌ ನಂ ಕೆ.ಎ 32 ಇಹೆಚ್‌ 3406 ನೇದ್ದರ ಮೇಲೆ ಹೋಗುತ್ತಿದ್ದಾಗ ಭಗವಂತ್ರಾಯ ಈತನು ಮೋಟಾರು ಸೈಕಲ್‌ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗಿ ರೋಡಿನ ಪಕ್ಕದಲ್ಲಿ ಸತ್ತು ಬಿದ್ದ ಎಮ್ಮೆಗೆ ಡಿಕ್ಕಿ ಪಡಿಸಿದ್ದರಿಂದ ನಾವುಗಳು ಮೊಟಾರು ಸೈಕಲ್‌ದಿಂದ ಕೆಳಗೆ ಬಿದ್ದು ಗಾಯಪೆಟ್ಟುಗಳಾಗಿರುತ್ತವೆ ಅಂತಾ ಶ್ರೀ ವಿಶ್ವನಾಥ ತಂದೆ ಅಖಂಡೆಪ್ಪ ಕಲ್ಲಾ ಸಾ : ಲಕ್ಷ್ಮಿ ಚೌಕ್ ಜೇವರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಜೇವರಗಿ ಠಾಣೆ : ದಿನಾಂಕ 01.06.2016 ರಂದು ಮದ್ಯಾಹ್ನ ಕೃಷಿ ಸಂಶೋಧನಾ ಕೇಂದ್ರದ ಹತ್ತಿರ ಜೇವರಗಿ ಕಲಬುರಗಿ ರಸ್ತೆಯ ಪಕ್ಕದಲ್ಲಿ ನಾನು ಮತ್ತು ನನ್ನ ತಾಯಿ ಸಕ್ಕಮ್ಮ ಹೆಂಡತಿ ಮಹಾನಂದ ಹಾಗು ಜೇವರಗಿ ಪಟ್ಟಣದ ಲಕ್ಷ್ಮಿ ಪುಜಾರಿ ನಾಗಮ್ಮ ಪುಜಾರಿ ಎಲ್ಲರು ಕೂಡಿಕೊಂಡು ನಡೆದುಕೊಂಡು ಜೇವರಗಿ ಕಡೆಗೆ ಬರುತ್ತಿದ್ದಾಗ ಅದೇ ಸಮಯಕ್ಕೆ ಕಲಬುರಗಿ ಕಡೆಯಿಂದ ಮೋಟಾರು ಸೈಕಲ್‌ ನಂ ಕೆ.ಎ 32 ವಿ 2853 ನೇದ್ದರ ಚಾಲಕನು ತನ್ನ ಮೋಟಾರು ಸೈಕಲ್‌ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ನಮ್ಮ ತಾಯಿಗೆ ಡಿಕ್ಕಿ ಹೊಡೆದು ಗಾಯ ಗೊಳಿಸಿ ತನ್ನ ಮೋಟಾರು ಸೈಕಲ್‌ದೊಂದಿಗೆ ಓಡಿ ಹೋಗಿರುತ್ತಾನೆ ಅಂತಾ ಶ್ರೀ ರವಿ ತಂದೆ ಶಂಕ್ರೆಪ್ಪ ಸಿರೂರ ಸಾ : ಶಾಸ್ತ್ರಿ ಚೌಕ್ ಜೇವರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ದಿನಾಂಕ ೦1.06.2016 ರಂದು ಸಾಯಂಕಾಲದ ನಾನು ನನ್ನ ಖಾಸಗಿ ಕೆಲಸದ ಸಲುವಾಗಿ ಮೋಟಾರು ಸೈಕಲ್‌ ನಂ ಕೆಎ 36 ಜೆ 2759 ನೇದ್ದನ್ನು ತೆಗೆದುಕೊಂಡು ಜೇವರಗಿಗೆ ಬರುತ್ತಿದ್ದೆನು ಸಾಯಂಕಾಲ 05:15 ಗಂಟೆಯ ಸುಮಾರಿಗೆ ಜೇವರಗಿ ಪಟ್ಟಣದ ಹೊರವಲಯದ ಸತ್ತರ್‌ ಸಾಬ್‌ ಪೆಟ್ರೋಲ್‌ ಪಂಪ್ ಹತ್ತಿರ ಶಹಾಪುರ ಜೇವರಗಿ ರೋಡಿನಲ್ಲಿ ರೋಡಿನ ಸೈಡಿನಿಂದ ಜೇವರಗಿ ಕಡೆಗೆ ಬರುತ್ತಿದ್ದಾಗ ಅದೇ ವೇಳೆಗೆ ನನ್ನ ಹಿಂದಿನಿಂದ ಒಬ್ಬ ಮೋಟಾರು ಸೈಕಲ್‌ ಸವಾರನು ತನ್ನ ಮೋಟಾರು ಸೈಕಲ್‌ನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನನ್ನ ಮೋಟಾರು ಸೈಕಲ್‌ಗೆ ಮತ್ತು ನನ್ನ ಬಲಗಾಲಿಗೆ ಬಲವಾಗಿ ಡಿಕ್ಕಿಪಡಿಸಿದನು ಆಗ ನಾನು ಮೋಟಾರು ಸೈಕಲ್‌ದೊಂದಿಗೆ ಕೆಳಗೆ ಬಿದ್ದಾಗ ಅಲ್ಲೆ ರೋಡಿನಲ್ಲಿ ಬರುತ್ತಿದ್ದ ಲಕ್ಷ್ಮಿ ಗಂಡ ಆನಂದ ಬಾರಿಗಿಡ ಇವಳು ಬಂದು ನನಗೆ ಎಬ್ಬಿಸಿ ಕೂಡಿಸಿದಳು ಅಫಘಾತದಲ್ಲಿ ನನಗೆ ಬಲಗಾಲ ಮೋಳಕಾಲ ಕೆಳಗೆ ಭಾರಿ ರಕ್ತ ಗಾಯವಾಗಿದ್ದು. ನನಗೆ ಡಿಕ್ಕಿ ಪಡಿಸಿದ ಮೊಟಾರು ಸೈಕಲ್‌ ನಂ ನೋಡಲು ಅದು ಕೆ.ಎ 33 ಎಸ್ 7649 ನೇದ್ದು ಇದ್ದು ಅದರ ಸವಾರನಿಗೆ ಹೆಸರು ಕೇಳುತ್ತಿದ್ದಂತೆ ಅವನು ತನ್ನ ಮೋಟಾರು ಸೈಕಲ್‌ ದೊಂದಿಗೆ ಓಡಿ ಹೋರುತ್ತಾನೆ ಅಂತಾ ಶ್ರೀ ಅರ್ಜುನ್ ತಂದೆ ಯಮನಪ್ಪ ಕೊಂಬಿನ್‌ ಸಾ : ಯಾಳವಾರ್  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ವೆಂಕಟರಾವ ತಂದೆ ಚಂದ್ರಶೇಖರ ವಾಕೂಡೆ ಸಾ; ಜೀವಣಗಿ ತಾ;ಜಿ ಕಲಬುರಗಿ ಇವರು ದಿನಾಂಕ 29-05-2016 ರಂದು ರಾತ್ರಿ 10 ಗಂಟೆಯ ಸುಮಾರಿಗೆ ತನ್ನ  ಟಿ.ವಿ.ಎಸ್ ಮೋಟಾರ ಸೈಕಲ್ ನಂ ಕೆಎ-32-ಇಜೆ-9625 ನೇದ್ದು ಜೀವಣಗಿ ಗ್ರಾಮದ ಪಿರ್ಯಾದಿಯ ಮನೆಯ ಮುಂದೆ ನಿಲ್ಲಿಸಿದ ಟಿ .ವಿ.ಎಸ್ ಮೋಟಾರ ಸೈಕಲ್ ನಂ ಕೆಎ-32-ಇಜೆ-9625 ಇರಲಿಲ್ಲ,  ಸದರಿ ಮೋಟಾರ ಸೈಕಲ್ ಪತ್ತೆ ಕುರಿತು  ಪರಿಚಯಸ್ಥರಲ್ಲಿ  ವಿಚಾರಿಸಿದ್ದು ಪತ್ತೆಯಾಗಿರುವದಿಲ್ಲ. ದಿನಾಂಕ29-05-2016 ರಂದು ರಾತ್ರಿ 10 ಗಂಟೆಯಯಿಂದ  ದಿನಾಂಕ 30-05-2016 ರಂದು ಬೆಳಗ್ಗೆ 3 ಗಂಟೆಯ ಮಧ್ಯದಲ್ಲಿ ಯಾರೋ ಕಳ್ಳರು ಪಿರ್ಯಾದಿಯ ಮನೆಯ ಮುಂದೆ ನಿಲ್ಲಿಸಿದ ಟಿ.ವಿ.ಎಸ್ ಮೋಟಾರ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.
ಹಲ್ಲೆ ಪ್ರಕರಣ :
ಜೇವರಗಿ ಠಾಣೆ : ಶ್ರೀಮತಿ ಹಸೀನಾ ಬೇಗಂ ಗಂಡ ಅಬ್ದುಲ್‌ ಕಂಕರ್‌ ಸಾ :ಗುಡುರ ಎಸ್.ಎ ಇವರ ಗಂಡ ಅಬ್ದುಲ್‌ ರಹೀಮ್ ಈತನು ಮೃತಪಟ್ಟಿದ್ದರಿಂದ ನನ್ನ ಗಂಡನ ಆಸ್ತಿಯಲ್ಲಿ ಪಾಲು ಪಡೆಯುವ ಸಲುವಾಗಿ ನನ್ನ ಮೈದುನರ ಮತ್ತು ಮಾವನವರ ವಿರುದ್ಧ ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯದಲ್ಲಿ ಸಿವಿಲ್ ದಾವೆ ಹಾಕಿದ್ದು ಅದರಂತೆ ನನ್ನ ಗಂಡನ ಆಸ್ತಿಯಲ್ಲಿ ನನಗೆ 20 ಎಕರೆ ಜಮೀನು ಬಂದಿದ್ದು ಇರುತ್ತದೆ. ನಮ್ಮೂರ ಪ್ರಮುಖರು ನನ್ನ ಗಂಡನ ಮೈದುನವರಿಗೆ ಅನ್ಯಾಯವಾಗುತ್ತದೆ ನೀನು 10 ಎಕರೆ ಜಮೀನು ಇಟ್ಟುಕೊಂಡು ಉಳಿದ 10 ಎಕರೆ ಜಮೀನನ್ನು ನಿನ್ನ ಮೈದುನರಿಗೆ ಬಿಟ್ಟು ಕೊಡು ಅಂತ ನ್ಯಾಯ ಪಂಚಾಯತಿ ಮಾಡಿದ್ದರಿಂದ ಅದಕ್ಕೆ ನಾನು ಒಪ್ಪಿಕೊಂಡಿದ್ದು ಅಲ್ಲದೆ ಕೊರ್ಟನಲ್ಲಿ ಹಾಕಿದ ಕೇಸು ಹಿಂಪಡೆಯುವಂತೆ ಹೇಳಿದ್ದರಿಂದ ಅದಕ್ಕುಕೂಡ ಒಪ್ಪಿಕೊಂಡಿರುತ್ತೆನೆ. ದಿನಾಂಕ 31.೦5.2016 ರಂದು ಮಧ್ಯಾಹ್ನ ಸಮಯದಲ್ಲಿ ನಾನು ಕಲಬುರಗಿಯಿಂದ ಜೇವರಗಿಗೆ ಬಂದು ಜೇವರಗಿಯ ನ್ಯಾಯಾಲಯದಲ್ಲಿ ಹಾಕಿದ ಕೇಸು ವಾಪಸ್‌ ಪಡೆಯುವ ಸಲುವಾಗಿ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಜೆ.ಎಮ್.ಎಫ್.ಸಿ ಕೋರ್ಟಎದುರುಗಡೆ ರೋಡಿನಲ್ಲಿ ಬರುತ್ತಿದ್ದಾಗ ಅದೇ ವೇಳೆಗೆ ನಮ್ಮೂರ ನಾಗಣ್ಣ ತಂದೆ ಸಿದ್ದಣ್ಣ ಹೆಗ್ಗಣಿ ಈತನು ತನ್ನ ಬುಲೇರೋ ವಾಹನದೊಂದಿಗೆ ಬಂದು ರೋಡಿನಲ್ಲಿ ವಾಹನ ನಿಲ್ಲಿಸಿ ನಡೆದುಕೊಂಡು ಹೋಗುತ್ತಿದ್ದ ನನಗೆ ತಡೆದು ನಿಲ್ಲಿಸಿ ನೀನು ಕೋರ್ಟ ನಲ್ಲಿನ ಕೇಸ ವಾಪಸ್‌ ತೆಗೆದುಕೊಳ್ಳುವದು ಬೇಡ ನಿನಗೆ ನಿನ್ನ ಗಂಡನ ಆಸ್ತಿ ಪೂರ್ತಿ ಬರುವಂತೆ ಮಾಡುತ್ತೆನೆ. ಆಮೇಲೆ ನಾವಿಬ್ಬರು ಮದುವೆ ಮಾಡಿಕೊಂಡಿದ್ದರಾಯಿತು ಅಂತ ಅಂದಾಗ ನಾನು ಮುಸ್ಲೀಂ ಜಾತಿಯವಳು ಇರುತ್ತೆನೆ. ಅಲ್ಲದೆ ನನಗೆ ಮದುವೆ ಕೂಡ ಆಗಿರುತ್ತದೆ ಹೀಗೆ ನನಗೆ ಮಾತನಾಡುವದು ಸರಿ ಅಲ್ಲ ಅಂತ ಅಂದಾಗ ರಂಡಿ ನಾನೇ ನಿನಗೆ ಕೋರ್ಟನಲ್ಲಿ ಕೇಸ್‌ ಹಾಕಿ ಕೇಸ್‌ ಗೆದಿಸಿ ಕೊಟ್ಟಿರುತ್ತೆನೆ ಮತ್ತು ತಹಶೀಲ ಆಫೀಸಿನಲ್ಲಿ ನಿನ್ನ ಹೆಸರಿಗೆ ಬರುವಂತೆ ಪಹಣಿ ಮಾಡಿಸಿರುತ್ತೆನೆ ಅಂತ ಅಂದಾಗ ನಾನು ಅವನಿಗೆ ನೀನು ಹೀಗೆ ಮಾಡಿದರೆ ನಿನ್ನ ಮೇಲೆ ಕೇಸ್‌ ಮಾಡಿಸುತ್ತೆನೆ ಅಂತ ಅಂದಾಗ ಅವನು ನಿನ್ನ ಬುಲೇರೋ ವಾಹನದಲ್ಲಿನ ರಾಡ್‌ ತೆಗೆದುಕೊಂಡು ಬಂದು ನನಗೆ ಕೂದಲು ಹಿಡಿದು ಜಗ್ಗಾಡಿ ಸೀರೆ ಹಿಡಿದು ಜಗ್ಗಾಡಿ ಮಾನಭಂಗ್ ಮಾಡಲು ಪ್ರಯತ್ನ ಮಾಡುತ್ತಿದ್ದಾಗ ನಾನು ತಪ್ಪಿಸಿಕೊಳ್ಳುತ್ತಿದ್ದಾಗ ತನ್ನ ಹತ್ತಿರ ಇದ್ದ ರಾಡಿನಿಂದ ನನ್ನ ಬೆನ್ನು ಮೇಲೆ ಭುಜದ ಮೇಲೆ ಬೆನ್ನ ಮೇಲೆ ಎರಡು ಹಸ್ತದ ಮೇಲೆ ರಾಡಿನಿಂದ ಜೋರಾಗಿ ಹೊಡೆದನು. ಅಸ್ಟರಲ್ಲಿ ಜೇವರಗಿ ಕಡೆಯಿಂದ ನಮ್ಮ ಮೈದುನರಾದ ಸಿಲಾರೋದ್ದಿನ್ ಕಂಕರ್‌, ಬಾಬಾ ಕಂಕರ್‌ ಹಾಗು ನೂರೋದ್ದಿನ್ ತಂದೆ ನಬಿಸಾಬ್‌ ತೇಲಿ ಇವರು ಬಂದು ಇವರು ಬಂದು ನನಗೆ ಹೊಡೆಯುವದನ್ನು ಬಿಡಿಸಿರುತ್ತಾರೆ. ನಂತರ ಅವನು ರಂಡಿ ಇವತ್ತು ನೀನು ಉಳಿದಿದ್ದಿ, ಇನ್ನೊಮ್ಮೆ ನೀನು ಸಿಕ್ಕರೆ ನಿನಗೆ ಜೀವದ ಸಮೇತ ಬಿಡುವದಿಲ್ಲ ಅಂತ ಜೀವದ ಬೇದರಿಕೆ ಹಾಕಿ ತನ್ನ ವಾಹನದೊಂದಿಗೆ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.