POLICE BHAVAN KALABURAGI

POLICE BHAVAN KALABURAGI

01 June 2016

Kalaburagi District Reported Crimes

ಅಪಘಾತ ಪ್ರಕರಣ :
ಮಾಡಬೂಳ ಠಾಣೆ : ಶ್ರೀ ಅಶೋಕ ತಂದೆ ಮಲ್ಲಿಕಾರ್ಜುನ ಸಾ:ಮಳಖೇಡ ಇವರು ದಿನಾಂಕ: 31-05-2016 ರಂದು ಕಲಬುರಗಿಗೆ ಹೋಗಿ ಬರೋಣ ಅಂತ ಮನೆಯಿಂದ ಕಲಬುರಗಿಗೆ ಹೋಗಿ ಕಲಬುರಗಿಯಲ್ಲಿ ಕೆಲಸ ಮುಗಿಸಿಕೊಂಡು ಮರಳಿ ಊರಿಗೆ ಹೋಗೋಣ ಅಂತ ಮಧ್ಯಾಹ್ನ 2-30 ಪಿಎಂ ಸುಮಾರಿಗೆ ಖರ್ಗೆ ಪೆಟ್ರೋಲ ಪಂಪ ಹತ್ತಿರ ಬಂದು ನಿಂತಾಗ ಅಲ್ಲಿ ಸೇಡಂಕ್ಕೆ ಹೋಗುವ ಸಲುವಾಗಿ ಸಮ್ಮೂರಿನ ಪರಿಚಯದವನಾದ ಮಲ್ಲಿಕಾರ್ಜುನ ತಂದೆ ಶರಣಪ್ಪಾ ಮತ್ತಿಮೂಡ ಇತನೂ ಕೆಎ-32 ಸಿ-2912 ನೇದ್ದರ ಕ್ರೂಜರನ್ನು ನಿಲ್ಲಿಸಿದ್ದು ಅದರಲ್ಲಿ ಊರಿಗೆ ಹೋಗುವ ಸಲುವಾಗಿ ನಾನು ಕುಳಿತುಕೊಂಡೆ ನನ್ನಂತೆ ಸುಮಾರು 8 ಜನರೂ ಕುಳಿತುಕೊಂಡರು. ನಾವು ಕುಳಿತುಕೊಂಡು ಹೊರಟ ಕ್ರೂಜರನ್ನು ಮಲ್ಲಿಕಾರ್ಜುನ ತಂದೆ ಶರಣಪ್ಪಾ ಮತ್ತಿಮೂಡ ಇತನೂ ಚಲಾಯಿಸುತ್ತಿದ್ದು  ನಾವು ಕುಳಿತುಕೊಂಡ ಕ್ರೂಜರ ಕಲಬುರಗಿಯಿಂದ ಸೇಡಂಕ್ಕೆ ಹೋಗುವ ರೋಡಿನ ಮುಖಾಂತರ ಹೊರಟು ಗುಂಡಗುರ್ತಿ ಗ್ರಾಮ ಕ್ರಾಸ ದಾಟಿ ಮುಂದಿರುವ ತಾಂಡಾದ ಸಮೀಪ ಹೋಗುತ್ತಿದಂತೆ ನಮ್ಮ ಎದುರುಗಡೆಯಿಂದ ಅಂದರೆ ಸೇಡಂ ಕಡೆಯಿಂದ ಒಬ್ಬ ಲಾರಿ ಚಾಲಕನು ತನ್ನ ಲಾರಿಯನ್ನು ಅತೀವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದವನೆ ನಾವು ಕುಳಿತುಕೊಂಡು ಹೊರಟ ಕ್ರೂಜರಕ್ಕೆ ಒಮ್ಮೇಲೆ ಸೈಡಿನಿಂದ ಡಿಕ್ಕಿ ಪಡಿಸಿದ ಪರಿಣಾಮ ಕ್ರೂಜರನ್ನು ರೋಡಿನ ಪಕ್ಕದಲ್ಲಿನ ಗಿಡಗಳಿಗೆ ಹೋಗಿ ಡಿಕ್ಕಿ ಪಡಿಸಿ ನಿಂತಿತು. ಈ ಅಪಘಾತದಲ್ಲಿ ನನಗೆ ಬಲಗಾಲಿಗೆ ಗುಪ್ತಗಾಯ ಹಾಗೂ ರಕ್ತಗಾಯವಾಗಿದ್ದು ಇತರೆ ಕಡೆ ತೆರಚಿದ ಗಾಯಗಳಾಗಿದ್ದು ಕ್ರೂಜರನಲ್ಲಿ ನನ್ನಂತೆ ಕುಳಿತು ಹೊರಟ  ಪ್ಯಾಸೆಂಜರಗಳಿಗೆ ಅವರ ಹೆಸರು ಕೇಳಿ ತಿಳಿಯಲು 1) ಶಿವುಕುಮಾರ ತಂದೆ ನಾಗಯ್ಯಾ ಸ್ವಾಮಿ ಸಾ:ಕಲಬುರಗಿ ಇತನಿಗೆ ಎದೆಯ ಮೇಲೆ ಹಾಗೂ ಡಕಿನ ಮೇಲೆ ಭಾರಿ ಗುಪ್ತ ಒಳಪೆಟ್ಟಾಗೊರುತ್ತದೆ. 2) ಎಂ.ಡಿ ಸೈದೊದ್ದೀನ ತಂದೆ ಸಿರಾಜೋದ್ದೀನ ಸಾ:ಪೂಜಾ ಕಾಲೋನಿ ಕಲಬುರಗಿ ಇತನಿಗೆ ಬಾಯಿಯಲ್ಲಿನ ಹಲ್ಲುಗಳು ಮುರಿದಿದ್ದು ಬಲ ಎದೆಯ ಪಕ್ಕದಲ್ಲಿ ಭಾರಿ ಗುಪ್ತಗಾಯವಾಗಿರುತ್ತದೆ. 3) ಪ್ರವೀಣ ತಂದೆ ಹರಿದೇವ ಚಾಳಿ ಸಾ:ಟೆಂಗಳಿ ಇತನಿಗೆ ಮೂಗಿನ ಮೇಲೆ ರಕ್ತಗಾಯ ಹಾಗೂ ಇತರೆ ಕಡೆ ತೆರಚಿದ ಗಾಯಗಳಾಗಿರುತ್ತವೆ. 4) ಸೈಬಣ್ಣಾ ತಂದೆ ನಾಗಪ್ಪ ಸಾ:ಗುಂಡಗುರ್ತಿ ಇತನಿಗೆ ಎಡಗಣ್ಣಿನ ಮೇಲೆ ಗುಪ್ತಗಾಯ ಹಾಗೂ ಬಲಗಣ್ಣಿನ ಪಕ್ಕದಲ್ಲಿ ತೆರಚಿದ ಗಾಯ ಮೂಗಿನ ಹತ್ತಿರ ರಕ್ತಗಾಯ ಎದೆಯ ಬಲ ಪಕ್ಕದಲ್ಲಿ ಭಾರಿ ರಕ್ತಗಾಯವಾಗಿದ್ದು ಅಲ್ಲದೇ ತಲೆಯಲ್ಲಿ ಭಾರಿ ಗುಪ್ತಗಾಯವಾಗಿದ್ದು ಬೆಹೋಶಾಗಿರುತ್ತಾನೆ. ನಂತರ ಕ್ರೂಜರ ಚಾಲಕನಿಗೆ ನೋಡಲಾಗಿ ಬಲಗೈಗೆ ಭಾರಿ ರಕ್ತಗಾಯವಾಗಿ ಕೈ ಮುರಿದಂತಾಗಿರುತ್ತದೆ. ಬಾಯಿಯಲ್ಲಿನ ಹಲ್ಲುಗಳು ಮುರಿದು ಭಾರಿ ರಕ್ತಗಾಯವಾಗಿರುತ್ತದೆ. ಎಡಗೈಗೆ ತೆರಚಿದ ಗಾಯವಾಗಿದ್ದು ತಲೆಗೆ ಗುಪ್ತಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ನಂತರ ಇನ್ನೊಬ ನಮ್ಮ ಕ್ರೂಜರನಲ್ಲಿನ ವ್ಯಕ್ತಿಗೆ ನೋಡಲಾಗಿ ಬಲ ತಲೆಯಲ್ಲಿ ಭಾರಿ ರಕ್ತಗಾಯ ಬಲಗಣ್ಣಿನ ಹತ್ತಿರ ಭಾರಿ ಗುಪ್ತಗಾಯಗಳಾಗಿದ್ದು ಬಲಗೈ ಮುರಿದಂತಾಗಿರುತ್ತದೆ. ಎಡಗೈಗೆ ಗುಪ್ತಗಾಯ ಹಾಗೂ ತೆರಚಿದ ಗಾಯಗಳಾಗಿದ್ದು ಎದೆಯ ಎಡಭಾಗದ ಮೇಲೆ ಭಾರಿ ರಕ್ತಗಾಯವಾಗಿದ್ದು ಹಾಗೂ ಬಲಗಾಲಿನ ಮಂಡಿಯ ಹತ್ತಿರ ರಕ್ತಗಾಯ ಎಡಗಾಲಿಗೆ ತೆರಚಿದ ಗಾಯಗಳಾಗಿ ಬೆಹೋಶಾಗಿರುತ್ತಾನೆ. ನಂತರ ಲಾರಿ ಚಾಲಕನು ತನ್ನ ಲಾರಿಯನ್ನು ಸ್ವಲ್ಪ ಮುಂದಕ್ಕೆ ರೋಡಿನ ಮೇಲೆ ನಿಲ್ಲಿಸಿ ಓಡಿ ಹೋಗಿದ್ದು ಸದರಿ ಲಾರಿ ನಂಬರ ನೋಡಲಾಗಿ ಎಪಿ-26 ಟಿಎ-3139 ಅಂತ ಇದ್ದು ನಾನು ಈ ಅಪಘಾತದ ಬಗ್ಗೆ ಮಲ್ಲಿಕಾರ್ಜುನ ತಂದೆ ಶರಣಪ್ಪಾ ಇವರಿಗೆ ಫೋನ ಮಾಡಿ ವಿಷಯ ತಿಳಿಸಿ ಜಿಜಿಎಚ ಆಸ್ಪತ್ರೆಗೆ ಬರಲು ತಿಳಿಸಿ  ನಂತರ ಅಂಬುಲೇನ್ಸಕ್ಕೆ ಫೋನ ಮಾಡಿ ಸ್ಥಳಕ್ಕೆ ಕರೆಯಿಸಿ ಅದರಲ್ಲಿ ನಮ್ಮೆಲ್ಲರಿಗೂ ಹಾಕಿಕೊಂಡು ಚಿಕಿತ್ಸೆ ಕುರಿತು ಕಲಬುರಗಿಯ ಜಿಜಿಎಚ ಆಸ್ಪತ್ರೆಗೆ ಬರುವ ಮಾರ್ಗ ಮಧ್ಯದಲ್ಲಿ ಮಲ್ಲಿಕಾರ್ಜುನ ತಂದೆ ಶರಣಪ್ಪ ಮತ್ತಿಮೂಡ ವ:25 ಉ:ಕ್ರೂಜರ ಚಾಲಕ ಇತನೂ ಮೃತಪಟ್ಟಿರುತ್ತಾನೆ. ನನಗೆ ಹಾಗೂ ಇನ್ನೊಬ್ಬ ವ್ಯಕ್ತಿ ಆತನ ಹೆಸರು ವಿಳಾಸ ಗೊತ್ತಿರುವುದಿಲ್ಲ ನಾವು ಜಿಜಿಎಚ ಆಸ್ಪತ್ರೆಯಲ್ಲಿ ಇನ್ನುಳಿದವರಿಗೆ ಬಸವೇಶ್ವರ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರಗಳ ವಶ :
ಜೇವರಗಿ ಠಾಣೆ : ದಿನಾಂಕ 01.06.2016 ರಂದು ರಾತ್ರಿ ಕೊಳಕೂರ ಗ್ರಾಮದ ಸಿಮಾಂತರದಲ್ಲಿ ಭೀಮಾ ನದಿಯ ದಡದಲ್ಲಿ ಟ್ರ್ಯಾಕ್ಟರ್ಗಳಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಮಾರಾಟಕ್ಕಾಗಿ ಸಾಗಿಸುತ್ತಿದ್ದಾರೆ ಅಂತ ಬಾತ್ಮಿ ತಿಳಿದು ಶ್ರೀ. ಶ್ರೀಮಂತ ಇಲ್ಲಾಳ ಪಿ.ಎಸ್.ಐ ಜೇವರಗಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಕೊಳಕೂರ ಗ್ರಾಮದ ಭೀಮಾ ನದಿಯ ದಡದ ಹತ್ತಿರ ಜೀಪನ್ನು ಮರೆಯಾಗಿ ನಿಲ್ಲಿಸಿ ಎಲ್ಲರೂ ಜೀಪಿನಿಂದ ಕೆಳಗೆ ಇಳಿದು ನಮ್ಮ ಹತ್ತಿರ ಇದ್ದ ಬ್ಯಾಟರಿ ಬೆಳಕಿನಲ್ಲಿ ನೊಡಲಾಗಿ ಟ್ರ್ಯಾಕ್ಟರ್ಗಳಲ್ಲಿ ಭೀಮಾ ನದಿಯಿಂದ ಮರಳು ತುಂಬುತ್ತಿದ್ದರು ನಾವು ನೋಡಿ ಖಚಿತಪಡಿಸಿಕೊಂಡು ದಾಳಿ ಮಾಡಲು ಹೋದಾಗ ಅಲ್ಲಿದ್ದ ಟ್ರ್ಯಾಕ್ಟರ್ ಚಾಲಕರು  ಓಡಿ ಹೋಗ ಹತ್ತಿದರು ನಾವು ಬೆನ್ನಟ್ಟಿ ಹಿಡಿಯಲು ಪ್ರಯತ್ನ ಮಾಡಿದರು ಅವರು ಕತ್ತಲ್ಲಿ ಓಡಿ ಹೋದರು ಸಿಕ್ಕಿರುವದಿಲ್ಲಾ. ನಂತರ ಸ್ಥಳದಲ್ಲಿ ಇದ್ದ ಟ್ರ್ಯಾಕ್ಟರ್ ಪರಿಶೀಲಿಸಲು 1. ಟ್ರ್ಯಾಕ್ಟರ್ ನಂ ಕೆ.ಎ-32-ಟಿಎ-5001 ನೇದ್ದು ಇದ್ದು ಅದರಲ್ಲಿ ಒಂದು ಬ್ರಾಸ್ ಮರಳು ಇದ್ದು ಅ.ಕಿ 1000=00, ಟ್ರ್ಯಾಕ್ಟರ ಅ.ಕಿ. 2,00,000/- ಆಗಬಹುದು 2. ಜಾನಡೀರ್ ಕಂಪನಿಯ ಒಂದು ಹಸಿರು ಬಣ್ಣದ ಟ್ರ್ಯಾಕ್ಟರ್ ಇದ್ದು ಅದರ ಮೇಲೆ ನಂಬರ ಇರುವುದಿಲ್ಲಾ ಅದರ ಮೇಲೆ ಇಂಜೀನ್ ನಂ py3029d346328  ಚೆಸ್ಸಿ ನಂ 1py5045dada015684, ನೇದ್ದು ಇದ್ದು ಅದರಲ್ಲಿ ಒಂದು ಬ್ರಾಸ್ ಮರಳು ಇದ್ದು ಅ.ಕಿ 1000=00 ಆಗಬಹುದು ಟ್ರ್ಯಾಕ್ಟರ ಅ.ಕಿ. 2,00,000/- ಆಗಬಹುದು. ನೋಡಿದರೆ ಸದರಿ ಟ್ರ್ಯಾಕ್ಟರಗಳ ಚಾಲಕರು ಮತ್ತು ಮಾಲಿಕರು ಸರಕಾದಿಂದ ಯಾವುದೇ ಪರವಾನಿಗೆ ಪಡೆದುಕೊಳ್ಳದೇ ಕಳ್ಳತನದಿಂದ ಮರಳು ಮಾರಾಟ ಮಾಡಲು ಸಾಗಿಸುತ್ತಿದ್ದ ಬಗ್ಗೆ ಕಂಡು ಬಂದಿದ್ದರಿಂದ ಸದರಿ ಎರಡು ಟ್ರ್ಯಾಕ್ಟರ್ ಗಳನ್ನು  ಪಂಚರ ಸಮಕ್ಷಮದಲ್ಲಿ ವಶಪಡಿಸಿಕೊಂಡು ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 31-05-2016 ರಂದು ಮಣೂರ ಗ್ರಾಮದ ಭಿಮಾ ನದಿಯ ಹತ್ತಿರ ಇರುವ ಯಲ್ಲಮ್ಮನ ಗುಡಿಯ ಹತ್ತಿರ ಕೆಲವು ಜನರು ದೇವಸ್ಥಾನಕ್ಕೆ ಬಂದ ಭಕ್ತಾದಿಗಳಿಗೆ 10/- ರೂಪಾಯಿಗೆ 100/- ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರನ್ನು ಕರೆದು ತನ್ನ ಹತ್ತಿರ ಇದ್ದ ಒಂದು ಪೇಪರದಲ್ಲಿನ ಚಿತ್ರಗಳನ್ನು ತೋರಿಸಿ ಈ ಚಿತ್ರಗಳಿಗೆ ಪಣಕ್ಕೆ ಹಣ ಕಟ್ಟಿ, ಯಾವ ಚಿತ್ರ ಬರುತ್ತದೊ ಆ ಚಿತ್ರಕ್ಕೆ ಹಣ ಹಚ್ಚಿದವರಿಗೆ 10/- ರೂಪಾಯಿಗಳಿಗೆ 100/- ರೂಪಾಯಿಗಳನ್ನು ಕೊಡುತ್ತೇನೆ ಅಂತಾ ಹೇಳಿ ಜನರ ಮನವೋಲಿಸಿ ಅವರಿಂದ ಹಣ ಪಡೆದು ಜೂಜಾಟ ಆಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಶ್ರೀ ಸಿದರಾಯ ಭೋಸಗಿ ಪಿ.ಎಸ್.ಐ ಅಫಜಲಪೂರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಸಿ.ಪಿ.ಐ ಸಾಹೇಬರು ಅಫಜಲಪೂರ ಮಾರ್ಗದರ್ಶನದಲ್ಲಿ ಮಣೂರ ಗ್ರಾಮದಲ್ಲಿ ನದಿಯಲ್ಲಿರುವ ಯಲ್ಲಮ್ಮ ದೇವಿಯ ಗುಡಿಯಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಗುಡಿಯ ಹತ್ತಿರ ಇರುವ ನದಿಯ ಬಾಜು ಸಾರ್ವಜನಿಕ ಸ್ಥಳದಲ್ಲಿ ಮೂರು ಜನರು ಕುಳಿತುಕೊಂಡು ತಮ್ಮ ತಮ್ಮ ಮುಂದೆ ಒಂದು ಪೇಪರನ್ನು ಇಟ್ಟುಕೊಂಡು ದೇವಸ್ಥಾನಕ್ಕೆ ಬಂದ ಭಕ್ತಾದಿಗಳಿಗೆ 10/- ರೂಪಾಯಿಗೆ 100/- ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರನ್ನು ಕರೆದು ತನ್ನ ಹತ್ತಿರ ಇದ್ದ ಒಂದು ಪೇಪರದಲ್ಲಿನ ಚಿತ್ರಗಳನ್ನು ತೋರಿಸಿ ಈ ಚಿತ್ರಗಳಿಗೆ ಪಣಕ್ಕೆ ಹಣ ಕಟ್ಟಿ, ಯಾವ ಚಿತ್ರ ಬರುತ್ತದೊ ಆ ಚಿತ್ರಕ್ಕೆ ಹಣ ಹಚ್ಚಿದವರಿಗೆ 10/- ರೂಪಾಯಿಗಳಿಗೆ 100/- ರೂಪಾಯಿಗಳನ್ನು ಕೊಡುತ್ತೇನೆ ಅಂತಾ ಹೇಳಿ ಜನರ ಮನವೋಲಿಸಿ ಅವರಿಂದ ಹಣ ಪಡೆದು ಜೂಜಾಟ ಆಡುತ್ತಿದ್ದರು. ಆಗ ನಾನು ಹಾಗೂ ನಮ್ಮ ಸಿಬ್ಬಂದಿ ದಾಳಿ ಮಾಡಿ ಹಿಡಿದು ಸದರಿಯವರ ಹೆಸರು ವಿಳಾಸ ವಿಚಾರಿಸಲಾಗಿ 1) ಸಂತೋಷ ತಂದೆ ಗೋವಿಂದ ನಾವಡೆ ಸಾ : ಮಣೂರ ಗ್ರಾಮ 2) ಮೌಲಾ ತಂದೆ ಮಹಿಬೂಬ ಶೇಖ್ ಸಾ|| ಹಿರೆ ಬೇನೂರ ಹಾ|| ವ| ಹೈದ್ರಾ ತಾ|| ಅಕ್ಕಲಕೋಟ.3) ಶಿವು ತಂದೆ ಗಡ್ಡೆಪ್ಪ ಪೂಜಾರಿ ಸಾ|| ಮಣೂರ ಗ್ರಾಮ ಅಂತಾ ತಿಳಿಸಿದ್ದು, ಸದರಿಯವರ ವಶದಿಂದ ನಗದು ಹಣ ಒಟ್ಟು 810/- ರೂಪಾಯಿ ನಗದು ಹಣ ಹಾಗೂ 03 ಜೂಜಾಟದ ಪಪ್ಪು ಪ್ಲೇಯಿಂಗ ಪಿಕ್ಚರಸ್ ಅಂತಾ ಬರೆದ ಪೇಪರಗಳು ದೊರೆತಿರುತ್ತವೆ. ಸದರಿಯವುಗಳನ್ನು ಜಪ್ತಿಮಾಡಿಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ  ಚಂದ್ರಪ್ರಭಾ ಗಂಡ ಅವಿನಾಶ ನಾಗರಾಳೆ ಸಾ: ಪಿ&ಟಿ ಕಾಲನಿ ಜೆವರ್ಗಿ  ರಸ್ತೆ ಕಲಬುರಗಿ ಇವರನ್ನು  ದಿನಾಂಕ 18.02.2013 ರಂದು ನಮ್ಮ ತಂದೆ ತಾಯಿಯವರು ಬಸವಕಲ್ಯಾಣ ಗ್ರಾಮದ ಅವಿನಾಶ ಇತನೊಂದಿಗೆ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು, ಮದುವೆಯಲ್ಲಿ ವರನಿಗೆ ವರೋಪಚಾರ ಅಂತಾ 1 ವರೆ ಲಕ್ಷ ರೂಪಾಯಿ 15 ತೊಲೆ ಬಂಗಾರ ಹಾಗೂ ಗೃಹಪಯೋಗಿ ಸಾಮಾನುಗಳು ಕೊಟ್ಟು ಮದುವೆ ಮಾಡಿದ್ದು ಇರುತ್ತದೆ. ನನ್ನ ಮದುವೆ ಆದ ಎರಡೇ ದಿವಸದಲ್ಲಿ ನನ್ನ ಗಂಡ ಅತ್ತೆ ಮಾವ ಎಲ್ಲರೂ ಕೂಡಿ ನೀನು ಬೆಳ್ಳಿ ಸಾಮಾನುಗಳು ತಂದಿರುವದಿಲ್ಲ ಕಡಿಮೆ ವರದಕ್ಷಿಣೆ ಹಣ ತಂದಿರುತ್ತೀ ಅಂತಾ ಹಿಂಸೆ ಕೊಟ್ಟಿರುವದರಿಂದ ನಾನು ನನ್ನ ತಂದೆ ತಾಯಿಗೆ ಹೇಳಿ ಮತ್ತೆ ತವರು ಮನೆಯಿಂದ 50 ಸಾವಿರ ರೂಪಾಯಿ ಕೊಡಿಸಿರುತ್ತೇನೆ.. ದಿನಾಂಕ 28.05.2016 ರಂದು ಬೆಳಗ್ಗೆ 4 ಗಂಟೆಯ ಸುಮಾರಿಗೆ ನನ್ನ ಗಂಡ ರಂಡಿ ನೀನು ನಿನ್ನ ತವರು ಮನೆಯಿಂದ 50 ಸಾವಿರ ರೂಪಾಯಿ ಮತ್ತು 2 ತೊಲೆ ಬಂಗಾರ ತೆಗೆದುಕೊಂಡು ಬಾ ಅಂದರ ತರುತ್ತಿಲ್ಲ ಇವತ್ತು ನಿನಗೆ ಖಲಾಸ ಮಾಡಿಯೇ ಬಿಡುತ್ತೇನೆ ಅಂತಾ ಅಂದವನೇ ಮನೆಯಲ್ಲಿರುವ ಚಾಕುವನ್ನು ತೆಗೆದುಕೊಂಡು ನನ್ನ ಗದ್ದದ ಕೆಳಗಡೆ ಎಡ ಎದೆಯ ಮೇಲ್ಬಾಗಕ್ಕೆ ಮತ್ತು ಕೆಳಗಡೆ ಹಾಗೂ ಬೆನ್ನಿಗೆ ಮತ್ತು ತಲೆಯ ಹಿಂಬಾಗಕ್ಕೆ ಹೊಡೆದಿರುತ್ತಾನೆ ಆಗ ನಾನು ಚೀರಾಡುವದನ್ನು ಕಂಡು ನಮ್ಮ ಅಕ್ಕಪಕ್ಕದ ಮನೆಯವರು ಬಂದು ಅವನಿಂದ ನನಗೆ ಬಿಡಿಸಿಕೊಂಡು ನನಗೆ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ.  ಕಾರಣ ನನಗೆ ಮದುವೆ ಆದಾಗಿನಿಂದಲೂ ತವರು ಮನೆಯಿಂದ 50 ಸಾವಿರ ರೂಪಾಯಿ 2 ತೊಲೆ ಬಂಗಾರ ತೆಗೆದುಕೊಂಡು ಬಾ ಅಂತಾ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಟ್ಟ ನನ್ನ ಅತ್ತೆ ಮಾವ ಹಾಗೂ ಚಾಕುವಿನಿಂದ ನನ್ನ ದೇಹದ ಎಲ್ಲಾ ಭಾಗಕ್ಕೆ ಚುಚ್ಚಿ ಕೊಲೆ ಮಾಡಲು ಪ್ರಯತ್ನಿದ ನನ್ನ ಗಂಡ ಅವಿನಾಶ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

31 May 2016

Kalaburagi District Reported Crimes

ಅಪಹರಿಸಿ ಅತ್ಯಾಚಾರವೇಸಗಿದ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ:-08-05-2016 ರಂದು ಸಂಜೆ 08-30 ಗಂಟೆ ಸುಮಾರಿಗೆ ಫಿರ್ಯಾದಿ ಅಪ್ರಾಪ್ತ ಮಗಳು ತನ್ನ ಮನೆಯ ಮುಂದೆ ನಿಂತಾಗ ಗಂಗಾನಗರದ ನಿವಾಸಿಯಾದ 1) ನಾರಾಯಣ ಮತ್ತು ಅವಳ ತಾಯಿಯಾದ 2) ವಿಮಲಾಬಾಯಿ ಇಬ್ಬರು ಕೂಡಿಕೊಂಡು ಫಿರ್ಯಾದಿ ಮಗಳಿಗೆ ಬಜರದಸ್ತಯಿಂದ ಒತ್ತಾಯಪೂರ್ವಕವಾಗಿ ಬಾಯಿ ಒತ್ತಿ ಹಿಡಿದು ಮೋಟಾರ ಸೈಕಲದ ಮೇಲೆ ಕೂಡಿಸಿಕೊಂಡು ಅಪಹರಣ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದು:ಖಾಪತಗೊಂಡ ನನ್ನ ಮಗಳು ದಿನಾಂಕ:- 08-05-2016ರಂದು ರಾತ್ರಿ 08-30 ಗಂಟೆ ಸುಮಾರಿಗೆ ನೀರು ತುಂಬಲು ಬಂದಾಗ ಆರೋಪಿತರಾದ 1) ನಾರಾಯಣ ಮತ್ತು 2) ವಿಮಲಾಬಾಯಿ ಇವರು ಜಬರದಸ್ತಯಿಂದ ಅಪಹರಿಸಿಕೊಂಡು ಹೋಗಿ ಕೇಂದ್ರ ಬಸ ನಿಲ್ದಾಣದಿಂದ ಭಯ ಹಾಕಿ ಪೂನಾ ಪಟ್ಟಣಕ್ಕೆ ಕರೆದುಕೊಂಡು ಹೋಗಿ ಯಾವುದೋ ಒಂದು ರೂಮಿನಲ್ಲಿ ಅಕ್ರಮವಾಗಿ ಇಟ್ಟು ದಿನಾಲು ಹಗಲು ಮತ್ತು ರಾತ್ರಿ ಅನ್ನದೇ ಅತ್ಯಾಚಾರ ಮತ್ತು ಹಟಸಂಭೋಗವೆಸಗಿರುತ್ತಾನೆ ಅಂತಾ ಹೇಳಿಕೆ ಕೊಟ್ಟಿದ್ದರ ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡೆತಡೆ ಮಾಡಿ ಜಾತಿನಿಂದನೆ ಮಾಡಿದ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಚಂದ್ರಶೇಖರ ತಂದೆ ಮರಿಯಪ್ಪಾ ಬಿಳೆಯಲಿ ಸಾ: ಮನೆ ನಂ 11-864 ಬಸವನಗರ ಎಮ್ಎಸ್‌‌‌ಕೆಮಿಲ್ ರೋಡ ಕಲಬುರಗಿ ಇವರು ಕಂದಾಯ ನಿರೀಕ್ಷಕರು ಫರಹತಾಬಾದ ಹಾಗೂ  ಗ್ರಾಮಲೆಕ್ಕಿಗನಾದ ನಾನು ಮಾನ್ಯ ತಹಸೀಲ್ದಾರವರು ಕಲಬುರಗಿರವರ ಆದೇಶ ಸಂ/ಕಂ/ಆರ್ ಓ ಆರ್/2015-16/34 ದಿನಾಂಕ: 29/03/2016 ರ ಪ್ರಕಾರ ಮೈನಾಳ ಸರ್ವೆ ನಂ 80/2,4,5 ಹಾಗೂ ಸರ್ವೇ ನಂಬರ 2/9 83 ರ ಜಮೀನಿನ ಮೇಲೆ ಸ್ಥಳಿಯ ವಿಚಾರಣೆ ಹಾಗೂ ಪಂಚನಾಮೆ ಜರುಗಿಸಲು ಇಂದು ದಿನಾಂಕ; 27/05/2016 ರ ಅಪರಾಹ್ನ 4.30 ರ ಸುಮಾರು ಮೈನಾಳ ಗ್ರಾಮಕ್ಕೆ ತೆರಳಿದ್ದು ಗ್ರಾಮಕ್ಕೆ ಪ್ರವೇಶಿಸುತ್ತಿದ್ದಂತೆ. ಶ್ರೀ ಮಲ್ಲಯ್ಯಾ ತಂದೆ ರಾಚಯ್ಯಾ ಇವರು ನಮ್ಮ ಹತ್ತಿರ ಬಂದು ನೀವು ಯಾರು, ಎಲ್ಲಿಂದ ಬಂದಿದ್ದಿರಿ ನಿಮ್ಮ ಕೆಲಸವೇನು ಎಂದು ಪ್ರಶ್ನೀಸಿದರು. ಆಗ ನಾನು ಗ್ರಾಮ ಲೆಕ್ಕಿಗ ಇವರು ಕಂದಾಯ ನಿರೀಕ್ಷಕರು ವಾಸ್ತವ ಸ್ಥಿತಿ ತಿಳಿಸಿ ಇಲ್ಲಿ ಜಮೀನಿನ ಪಂಚನಾಮೆಗಾಗಿ ಬಂದಿರುವುದಾಗಿ ತಿಳಿಸಿದ್ದೇನೆ. ಆವಾಗ ಮಲ್ಲಯ್ಯಾ ಅವರ ಬೆಂಬಲಿಗ ಸಹೋದರ ಗುರುಪಾದಯ್ಯಾ ಇವರು ತಲಾಟಿಯೆಂದು ಪರಿಚಯಿಸಿದರು ಅವರು ನಮ್ಮ ಪರಿಚಯ ಮಾಡುತ್ತಿದ್ದಂತೆ ಮಲ್ಲಯ್ಯಾ ತಂದೆ ರಾಚಯ್ಯಾ ಇವರು ನೀನು ಗ್ರಾಮ ಲೆಕ್ಕಿಗನಾಗಿದ್ದರೆ ನನ್ನ ಕೆಲಸ ಯಾಕೆ ಮಾಡಿಲ್ಲಾ ಎಂದು ಕೋಪದಿಂದ ಕೇಳಿದರು ಆಗ ನಾನು ನನ್ನ ಹತ್ತಿರ ಯಾವುದು ಬಾಕಿ ಕೆಲಸ ಇಲ್ಲಾ ಏನಿದೆ ನಿಮ್ಮ ಕೆಲಸವೆಂದು ಕೇಳಿದೆ ಅದಕ್ಕೆ ಅವರು ನಮ್ಮ ತಂದೆಯವರ ಹೆಸರಿನಲ್ಲಿದ್ದ ಜಮೀನು ನನ್ನ ಹೆಸರಿಗೆ ವರ್ಗಾವಣೆ ಮಾಡಲು ನಿನ್ನ ಕಛೇರಿಗೆ ಅರ್ಜಿ ಸಲ್ಲಿಸಿದೆ ಅದನ್ನು ಏನು ಮಾಡಿದೆ.ಫರಹತಾಭಾದ ಕಛೇರಿಗೆ ಯಾಕೇ ಕಳಿಸಿದೆ ಎಂದು ಕೇಳಿದರು.ಆಗ ನಾನು ನಿಮ್ಮ ವರ್ಗಾವಣೆ ನಮ್ಮ ಕಛೇರಿಗೆ ಬಂದಿತ್ತು ಕಡತದಲ್ಲಿ ಮಾನ್ಯ ಭೂಮಿ ಕೇಂದ್ರದ ಉಪ-ತಹಸಿಲ್ದಾರರವರು ನಿಮ್ಮ ವಂಶಾವಳಿಯ ಪ್ರಕಾರ ನೀವು ಇಬ್ಬರೂ ಮಕ್ಕಳಿದ್ದು ನಿಮ್ಮಿಬ್ಬರ ಹೆಸರಿಗೆ ಜಂಟಿಯಾಗಿ ವಿರಾಸತ ವರ್ಗಾವಣೆ ಮಾಡಲು ಸೂಚಿದ್ದು ಅದರಂತೆ ಮಾನ್ಯ ಕಂದಾಯ ನಿರೀಕ್ಷಕರು ವಿಚಾರಣೆಗಾಗಿ ಉಪತಹಸೀಲ್ದಾರರು ಫರಹತಾಬಾದರವರಿಗೆ ಕಡತ ಸಲ್ಲಿಸಿದ್ದು ಅವರ ವಿಚಾರಣೆ ನೋಟಿಸ್ ಈಗಾಗಲೇ ತಮ್ಮಗೆ ನೀಡಿದ್ದು ಮಾನ್ಯ ಉಪತಹಸೀಲ್ದಾರ ರವರ ಆದೇಶಕ್ಕಾಗಿ ನಾವು ಕಾಯುತ್ತಿದ್ದೆವೆ ಎಂದು ಹೇಳಿದ ತಕ್ಷಣ ಶ್ರೀ ಮಲ್ಲಯ್ಯಾರವರು ನನ್ನ ಕಪಾಳ ಮೋಕ್ಷ ಮಾಡಿದರು. ನಂತರ ನಾನು ಅವರಿಗೆ ಸರ್ ನೀವು ಬೆಂಗಳೂರಿನಲ್ಲಿ ಇರುವವರು ನಿಮ್ಮ ವರ್ಗಾವಣೆ ಪ್ರಗತಿಯಲ್ಲಿದೆ  ಅನ್ನುವಷ್ಟರಲ್ಲಿ ಮತ್ತೋಮ್ಮೆ ನನ್ನ ಕಪಾಳಕ್ಕೆ ಜೋರಾಗಿ ಹೊಡೆದರು. ಇದೆಲ್ಲಾ ತಲಾಟೆ ಮಾಡುವ ಕೆಲಸ ಉಪ ತಹಸೀಲ್ದಾರ ಏನು ಬದನೆಕಾಯಿ ಮಾಡಬೇಕು ನೀನು ಸುಳ್ಳು ಹೇಳುತ್ತಿದ್ದಿಯ್ಯಾ ಅಂತಾ ಕಾಲಿನಿಂದ ಒದ್ದರು. ಅಷ್ಟರಲ್ಲಿ ಕಂದಾಯ ನಿರೀಕ್ಷಕರು ಅವರನ್ನು ಸಮಜಾಯಿಸಿ ತಿಳಿಸಿದರು ನೀವು ಯಾರು ನನಗೆ ಗೊತ್ತಿಲ್ಲಾ ಇದರಲ್ಲಿ ಮಧ್ಯೆಪ್ರವೆಶ ಮಾಡಬೇಡಿ ಎಂದು ಗದರಿಸಿದರು. ಆಗ ಮಾನ್ಯ ಕಂದಾಯ ನಿರೀಕ್ಷಕರು ನಾನು ಈ ಗ್ರಾಮಕ್ಕೆ ಸಂಬಂಧಪಟ್ಟ ಆರ್‌‌‌ಐ ಫರಹತಾಬಾದ ವಲಯದ ಆರ್ ಐ ಎಂದು ತಿಳಿಸುತ್ತಿದಂತೆ ಗ್ರಾಮದ ಕೆಲ ಜನ ನನ್ನನ್ನು ಶಾಲೆಯ ಒಳಗಡೆ ಕರೆದು ಕೂಡಿಸಿದರು. ಆದರೂ ಸಹ ಸುಮ್ಮನ್ನಿರದ ಶ್ರೀ ಮಲ್ಲಯ್ಯಾ ಇವರು ಶಾಲೆಯ ಕೊಠಡಿಯ ಒಳಗಡೆ ನುಗ್ಗಿ ಶಾಲೆಯಲ್ಲಿ ಕುಳಿತ್ತಿದ್ದ ನನ್ನ ಹಿಂದಿನಿಂದ ಬಂದು ಬೆನ್ನಿಗೆ ಜೋರಾಗಿ ಒದ್ದರು. ಹಾಗೂ ನಾನು ಕುರ್ಚಿಯಿಂದ ಕೆಳಗೆ ಬೀಳುತ್ತಿದ್ದಂತೆ ಇಂವ ಹೊಲೆಯ ರಂಡಿ ಮಗ ದುಡ್ಡು ಕೊಟ್ಟರೆ ಮಾತ್ರ ಕೆಲಸ ಮಾಡುತ್ತಾನೆ ನಾನು ದುಡ್ಡು ಕೊಟ್ಟಿಲ್ಲಾ ಅಂತಾ ನನ್ನ ಕೆಲಸ ಮಾಡಿಲ್ಲಾ ಬೊಳಿಮಗ ನಾನು ಬೆಂಗಳೂರಿನಲ್ಲಿ 5 ವರ್ಷ ಫಿಲ್ಮ ಎಕ್ಟರ ಆಗಿ ಕೆಲಸ ಮಾಡಿ ಬಂದಿದ್ದಿನಿ ಇಂತಹ ಎಷ್ಟು ಜನರಿಗೆ ನೋಡಿದ್ದೆನೆ ಇವನು ಯಾರಿಗೆ ಹೇಳುತ್ತಾನೋ ಹೇಳಲ್ಲಿ ಯಾರನ್ನು ಕರೆಯಿಸುತ್ತಾನೋ ಕರೆಯಿಸಲಿ ಇವನಿಗೆ ಕಲಬುರಗಿಯಲ್ಲಿ ಎಲ್ಲಿಯಾದರೂ ಇರಲಿ ಹೋಗಿ ಒದ್ದೆಯುತ್ತೆನೆ ಎಂದರು. ಅಷ್ಟರಲ್ಲಿ ಕಂದಾಯ ನಿರೀಕ್ಷಕರು ನನ್ನನ್ನು ಬಿಡಿಸಲು ಪ್ರಯತ್ನಿಸುವಾಗ ಇವರ ಸಹೋದರ ಹಾಗೂ ಬೆಂಬಲಿಗರಾದ ಶಕೀಲ ಅಹ್ಮದ ಮಾನ್ಯ ಕಂದಾಯ ನಿರೀಕ್ಷಕರನ್ನು ಅಡ್ಡಗಟ್ಟಿ ನೀನು ಬಿಡಿಸಲು ಹೋದರೆ ನಿನಗೂ ಅದೇ ರೀತಿ ಹೊಡೆಯುತ್ತೆವೆ ಎಂದು ಅವರನ್ನು ನಿಲ್ಲಿಸಿದರು ನಂತರ ಸಾರ್ವಜನಿಕರು ಕಂದಾಯ ನಿರೀಕ್ಷಕರುನ್ನು ನನ್ನ ಹತ್ತಿರ ಕರೆದು ಕೂಡಿಸಿದರು. ತದನಂತರ ನಾವು ಬಂದ ಕೆಲಸ ಸರ್ವೆ ನಂ 80/2,4,5 ರ ಜಮೀನಿನ ಪಂಚನಾಮೆ ಜರೂಗಿಸಿ ಸರ್ವೇ ನಂ 2/9 ಮತ್ತು 83 ಜಮೀನುಗಳ ವಿಕ್ಷಣೆಗೆಂದು ಹೋಗುವಾಗ ಮತ್ತೆ ನನ್ನನ್ನು ಶ್ರೀ ಮಲ್ಲಯ್ಯಾರವರು ತಡೆದು ನನ್ನ ಕರ್ತವ್ಯಕ್ಕೆ ಅಡ್ಡಮಾಡಿ ಮತ್ತೆ ನನ್ನನ್ನು ನಾನು ಬೆಂಗಳೂರಿನಲ್ಲಿ ಎಲ್ಲವನ್ನು ಮಾಡಿದ್ದೆನೆ ಪೊಲೀಸ ಕಂಪ್ಲೇಟ ಅಂತಾ ಹೋದರೆ ಯಾವುದೇ ಸಾಕ್ಷಿವು ಸುಳ್ಳಿವು ಸಿಗದ ಹಾಗೇ ನಿನ್ನನ್ನು ಮೇಲೆ ಕಳುಹಿಸುತ್ತೆನೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣಯಲ್ಲಿ ಪ್ರಕರಣ ದಾಖಲಾಗಿದೆ. 

29 May 2016

Kalaburagi District Reported Crimes

ಅಪಘಾತ ಪ್ರಕರಣ :
ಜೇವರಗಿ ಠಾಣೆ : ದಿನಾಂಕ 28.05.2016 ರಂದು ಮುಂಜಾನೆ 05:30 ಗಂಟೆಗೆ ಕೆಲ್ಲೂರು ಗ್ರಾಮದ ಬರ್ಡ್ಸ ಹಿಲ್ಸ ಶಾಲೆಯ ಕ್ರಾಸ್ ಹತ್ತಿರ ಜೇವರಗಿ ಶಹಾಪುರ ರಸ್ತೆಯ ಮೇಲೆ ಕಾರ್‌ ನಂ ಕೆ.ಎ 41 ಝಡ್ 5218 ನೇದ್ದರ ಚಾಲಕನು ತನ್ನ ಕಾರ್‌ ಅನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ರೋಡಿನಲ್ಲಿ ಒಮ್ಮೆಲೆ ಕಟ್ ಹೊಡೆದು ಕಾರ್‌ ಪಲ್ಟಿ ಮಾಡಿದ್ದರಿಂದ ನನಗೆ ಮತ್ತು ಸದರಿ ಕಾರ್‌ ಚಾಲಕನಿಗೆ ಗಾಯ-ಪೆಟ್ಟು ಆಗಿರುತ್ತವೆ ಅಂತ ಶ್ರೀ ಅನೀಸ್ ತಂದೆ ಹಸನಸಾಬ್ ಸಾ|| ನವರತ್ನ ಅಪಾರ್ಟಮೆಂಟ್ ಐವಾನ್‌‌ಶಾಹಿ ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಜೇವರಗಿ ಠಾಣೆ : ದಿನಾಂಕ  28.05.2016 ರಂದು ಸಾಯಂಕಾಲ ಜೇವರಗಿ ಪಟ್ಟಣದ ಕೃಷಿ ಇಲಾಖೆಯ ಕಚೇರಿಯಲ್ಲಿ  ಹತ್ತಿರ ಸಾರ್ವಜನಿಕ ರೋಡನಲ್ಲಿ ಒಬ್ಬ ಮನುಷ್ಯನು ರೋಡಿನಲ್ಲಿ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾರನೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ. ಶ್ರೀಮಂತ ಇಲ್ಲಾಳ ಪಿ.ಎಸ್.ಐ ಜೇವರಗಿ ಠಾಣೆರವರು ಹಾಗು ಸಿಬ್ಬಂದ ಮತ್ತು ಪಂಚರೊಂದಿಗೆ ಕೃಷಿ ಕಚೇರಿ ಸ್ವಲ್ಪ ದೂರು ಇರುವಾಗಲೇ ರೋಡಿನ ಸೈಡಿನಲ್ಲಿ ಮನೆಯ ಗೊಡೆ  ಮರೆಯಲ್ಲಿ ನಿಂತು ನೋಡಲಾಗಿ ಕೃಷಿ ಇಲಾಖೆ ಕಚೇರಿ ಎದರು ಸಾರ್ವಜನಿಕ ರಸ್ತೆ ಮೇಲೆ ಒಬ್ಬ ಮನುಷ್ಯನು ಸಾರ್ವಜನಿಕರಿಗೆ 1-00 ರೂಪಾಯಿಗೆ 80-00 ರೂಪಾಯಿ ಕೊಡುತ್ತೇನೆ ಅಂತಾ ಹೋಗಿ ಬರುವ ಸಾರ್ವಜನಕರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆಯ ಚೀಟಿ ಬರೆದು ಕೊಳ್ಳುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಅವನಿಗೆ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಮಹ್ಮದ್ ಖಾಜಾಸಾಬ ತಂದೆ ಮಹ್ಮದ್ ಜಾಫರ್ ಸಾಬ ಶೇಖ್  ಸಾ: ಶಾಸ್ತ್ರಿ ಚೌಕ :ಜೇವರ್ಗಿ ಅಂತಾ ತಿಳಿಸಿದನು. ನಂತರ ಅವನಿಗೆ ಅಂಗ ಶೋಧ ಮಾಡಲು ಅವನ ಹತ್ತಿರ ನಗದು ಹಣ 1800/-ರೂ. ಒಂದು ಮಟಕಾ ಚೀಟಿ, ಒಂದು ಬಾಲ ಪೆನ್ನು ನೇದ್ದವುಗಳು ಸಿಕ್ಕಿದ್ದು ಅವುಗಳನ್ನು ವಶಪಡಿಸಿಕೊಂಡು ಸದರಿಯವನೊಂದಿಗೆ ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಆತ್ಮ ಹತ್ಯೆ ಪ್ರಕರಣ :
ಜೇವರಗಿ ಠಾಣೆ : ಶ್ರೀಮತಿ ಚಂದ್ರಕಲಾ ಗಂಢ ಹಿರಗಣ್ಣಾ ಹಿರಗಪ್ಪನವರ್ ಸಾ: ಹುಲಗುತ್ತಿ ತಾಃ ಬಸವಕಲ್ಯಾಣ ಜಿಲ್ಲೆಃ ಬಿದರ ರವರ ಮಾವನಿಗೆ ಮೂವರು ಗಂಡು ಮಕ್ಕಳಿರುತ್ತಾರೆ, ಎಲ್ಲರೂ ಬೇರೆ ಬೇರೆಯಾಗಿ ವಾಸಮಾಡಿಕೊಂಡಿರುತ್ತಾರೆ. ನನ್ನ ಗಂಡನ ಹೆಸರಿನಲ್ಲಿ ನಾರಾಯಣಪೂರ ಸೀಮಾಂತರದಲ್ಲಿ ಹೊಲ ಸರ್ವೆ ನಂ 250 ರಲ್ಲಿ ಒಟ್ಟು 1 ಎಕರೆ ಜಮಿನು ಇರುತ್ತದೆ. ನನ್ನ ಗಂಡನು ಡ್ರೈವರ್ ಮತ್ತು ನಮ್ಮ ಹೊಲದಲ್ಲಿ ಕೆಲಸ ಮಾಡಿಕೊಂಡಿದ್ದನು, ಹೋದ ವರ್ಷ ನಮ್ಮ ಹೊಲದಲ್ಲಿನ ಬೆಳೆಗಾಗಿ, ಕ್ರಿಮಿನಾಶ ಔಷದ ಬೀಜ ಇನ್ನಿತರ ಸಾಮಾನುಗಳು ಖರೀದಿ ಸಲುವಾಗಿ ನಮ್ಮೂರಲ್ಲಿ ಖಾಸಗಿಯಾಗಿ 1,50,000/- ರೂ ಸಾಲ  ಮಾಡಿಕೊಂಡಿದ್ದನು, ಅಲ್ಲದೆ ಸದರಿ ಜಮೀನು ಮೇಲೆ ಸಿಂಡಿಕೇಟ್ ಬ್ಯಾಂಕ್ ನಾರಾಯಣಪೂರದಲ್ಲಿ 1,00,000/- ರೂ ಸಾಲ, ಹಾಗೂ ವ್ಯವಸಾಯ ಸೇವಾ ಸಹಕಾರ ಸಂಘ ನಾರಾಯಣಪೂರದಲ್ಲಿ 40,000/- ರೂ ಸಾಲ ಇರುತ್ತದೆ. ಹೀಗೆ ಖಾಸಗಿ ಸಾಲ ಮತ್ತು ಬ್ಯಾಂಕ ಸಾಲ ಕೂಡಿ ಒಟ್ಟು 2,90,000/- ರೂ ಸಾಲ ಮಾಡಿದ್ದನು. ಹೋದ ವರ್ಷ ಮತ್ತು ಈ ವರ್ಷ ಸರಿಯಾಗಿ ಮಳೆ ಬಾರದೆ ಇರುವದರಿಂದ ಹೊಲದಲ್ಲಿ ಬೆಳೆ ಬಂದಿರುವದಿಲ್ಲಾ. ಬೇರೆಯವರ ಹತ್ತಿರ ಖಾಸಗಿ ಸಾಲ ಕೂಡಾ ಕಟ್ಟಲು ಆಗಿರುವದಿಲ್ಲಾ. ಈ ವಿಷಯದಲ್ಲಿ ನನ್ನ ಗಂಡನು ನನ್ನ ಮುಂದೆ ನಾವು ಮಾಡಿದ ಸಾಲ ಹೇಗೆ ತೀರಿಸಬೇಕು ಅಂತ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡಿದ್ದನು. ನಾನು ಮತ್ತು ನಮ್ಮ ಮಾವ ಎಲ್ಲರೂ ನನ್ನ ಗಂಡನಿಗೆ ಮುಂದಿನ ವರ್ಷ ಕಟ್ಟಿದರಾಯಿತು ಅಂತ ಹೇಳುತ್ತಿದ್ದೇವು ಆದರೂ ಕೂಡಾ ಅವನು ನಾನು ಸಾಯುತ್ತೇನೆ ಅಂತ ಅನ್ನುತ್ತಿದ್ದನು. ಈಗ 8 ದಿವಸಗಳ ಹಿಂದೆ ಅಂದರೆ ದಿ: 21.05.2016  ರಂದು ನಾನು ಲಾರಿ ಡ್ರೈವರ್ ಕೆಲಸಕ್ಕೆ ಮೈಸೂರಿಗೆ ಹೋಗುತ್ತೆನೆ ಅಂತಾ ಮನೆಯಲ್ಲಿ ನನಗೆ ಹೇಳಿ ಹೋದನು 3-4 ದಿವಸಗಳ ಹಿಂದೆ ನನ್ನ ಮೊಬೈಲಿಗೆ ಪೊನ ಮಾಡಿ ನಾನು ಮೈಸೂರನಲ್ಲಿದ್ದೆನೆ ನನಗೆ ಕೆಲಸ ಸಿಕ್ಕಿರುವುದಿಲ್ಲಾ ಮರಳಿ ಮನೆಗೆ ಬರುತ್ತಿದ್ದೆನೆ ಅಂತಾ ಹೇಳಿರುತ್ತಾನೆ.  ಇಂದು ದಿ. 28.05.2016 ರಂದು ಮುಂಜಾನೆ 11.00 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿದ್ದಾಗ ಪೋನ ಮೂಲಕ ಗೊತ್ತಾಗಿದ್ದೆನೆಂದರೆ ನನ್ನ ಗಂಡ ಹಿರಗಣ್ಣ ಇತನು ಜೇವರಗಿ ಪಟ್ಟಣದ ಹೊರ ವಲಯದ ಗಡ್ಡಿ ಪೂಲ್ ಹತ್ತಿರ ಗುಂಡೆರಾವ ಕುಲಕರ್ಣಿ ಅನ್ನುವವರ ಹೊಲದಲ್ಲಿ ಗಿಡಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ಅಂತಾ ವಿಷಯ ಗೊತ್ತಾದ ಕೂಡಲೆ ನಾನು ನನ್ನ ಬಾವಂದಿರಾದ ಜಗನ್ನಾಥ ತಂದೆ ಭೀಮಣ್ಣಾ ಹಿರಗಪ್ಪನವರ್, ವೀರಪಣ್ಣ ತಂದೆ ಭೀಮಣ್ಣಾ ಹಿರಗಪ್ಪನವರ್ ನನ್ನ ತಂದೆಯಾದ ವೈಜನಾಥ ತಂದೆ ಮಾಣಿಕಪ್ಪ ಹುಮನಾಬದೆ, ತಾಯಿ ಶಾಂತಾಬಾಯಿ ಹಾಗೂ ಅಣ್ಣತಮ್ಮಕೀಯ ವಾಸುದೇವ ತಂದೆ ಶರಣಪ್ಪ ಹಿರಗಪ್ಪನವರ್ ಇವರಿಗೆ ವಿಷಯ ತಿಳಿಸಿ ನಾವು ಎಲ್ಲರೂ ಕೂಡಿ ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಗಂಡನ ಹೆಣ ಜೇವರಗಿ ಸರಕಾರಿ ಆಸ್ಪತ್ರೆ ಶವಗಾರದಲ್ಲಿ ಹಾಕಿರುತ್ತಾರೆ ಅಂತಾ ಗೊತ್ತಾದ ಮೇಲೆ ನಾವು ಜೇವರಗಿ ಸರಕಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ ನನ್ನ ಗಂಡನ ಹೆಣ ನೊಡಿ ಗುರುತಿಸಿರುತ್ತೆನೆ. ಅವನ ಕೊರಳಿಗೆ ಹಗ್ಗದ ಗಾಯವಾಗಿತ್ತು. ಅಲ್ಲಿಯೇ ಇದ್ದ ಮರೆಪ್ಪ ತಂದೆ ಭೀಮಾಶಂಕರ ಜೆಡಿ ಇವರು ಹೆಳಿದ್ದನೆಂದರೆ ಇಂದು ಮುಂಜಾನೆ 10.45 ಗಂಟೆಯ ಸುಮಾರಿಗೆ ನಾನು ನಮ್ಮೂರಿನಿಂದ ಜೇವರಗಿಗೆ ಹೋಗುವಾಗ ನೀನ್ನ ಗಂಡನು ಹೊಲದಲ್ಲಿನ ಗಿಡಕ್ಕೆ ಹಗ್ಗದಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಸತ್ತಿದ್ದನ್ನು  ನೋಡಿ ನಾನು ಪೊಲೀಸ್ ಠಾಣೆಗೆ ಹೋಗಿ ವಿಷಯ ತಿಳಿಸಿರುತ್ತೆನೆ. ಆಂತಾ ಹೇಳಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.