POLICE BHAVAN KALABURAGI

POLICE BHAVAN KALABURAGI

29 May 2016

Kalaburagi District Reported Crimes

ಅಪಘಾತ ಪ್ರಕರಣ :
ಜೇವರಗಿ ಠಾಣೆ : ದಿನಾಂಕ 28.05.2016 ರಂದು ಮುಂಜಾನೆ 05:30 ಗಂಟೆಗೆ ಕೆಲ್ಲೂರು ಗ್ರಾಮದ ಬರ್ಡ್ಸ ಹಿಲ್ಸ ಶಾಲೆಯ ಕ್ರಾಸ್ ಹತ್ತಿರ ಜೇವರಗಿ ಶಹಾಪುರ ರಸ್ತೆಯ ಮೇಲೆ ಕಾರ್‌ ನಂ ಕೆ.ಎ 41 ಝಡ್ 5218 ನೇದ್ದರ ಚಾಲಕನು ತನ್ನ ಕಾರ್‌ ಅನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ರೋಡಿನಲ್ಲಿ ಒಮ್ಮೆಲೆ ಕಟ್ ಹೊಡೆದು ಕಾರ್‌ ಪಲ್ಟಿ ಮಾಡಿದ್ದರಿಂದ ನನಗೆ ಮತ್ತು ಸದರಿ ಕಾರ್‌ ಚಾಲಕನಿಗೆ ಗಾಯ-ಪೆಟ್ಟು ಆಗಿರುತ್ತವೆ ಅಂತ ಶ್ರೀ ಅನೀಸ್ ತಂದೆ ಹಸನಸಾಬ್ ಸಾ|| ನವರತ್ನ ಅಪಾರ್ಟಮೆಂಟ್ ಐವಾನ್‌‌ಶಾಹಿ ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಜೇವರಗಿ ಠಾಣೆ : ದಿನಾಂಕ  28.05.2016 ರಂದು ಸಾಯಂಕಾಲ ಜೇವರಗಿ ಪಟ್ಟಣದ ಕೃಷಿ ಇಲಾಖೆಯ ಕಚೇರಿಯಲ್ಲಿ  ಹತ್ತಿರ ಸಾರ್ವಜನಿಕ ರೋಡನಲ್ಲಿ ಒಬ್ಬ ಮನುಷ್ಯನು ರೋಡಿನಲ್ಲಿ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾರನೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ. ಶ್ರೀಮಂತ ಇಲ್ಲಾಳ ಪಿ.ಎಸ್.ಐ ಜೇವರಗಿ ಠಾಣೆರವರು ಹಾಗು ಸಿಬ್ಬಂದ ಮತ್ತು ಪಂಚರೊಂದಿಗೆ ಕೃಷಿ ಕಚೇರಿ ಸ್ವಲ್ಪ ದೂರು ಇರುವಾಗಲೇ ರೋಡಿನ ಸೈಡಿನಲ್ಲಿ ಮನೆಯ ಗೊಡೆ  ಮರೆಯಲ್ಲಿ ನಿಂತು ನೋಡಲಾಗಿ ಕೃಷಿ ಇಲಾಖೆ ಕಚೇರಿ ಎದರು ಸಾರ್ವಜನಿಕ ರಸ್ತೆ ಮೇಲೆ ಒಬ್ಬ ಮನುಷ್ಯನು ಸಾರ್ವಜನಿಕರಿಗೆ 1-00 ರೂಪಾಯಿಗೆ 80-00 ರೂಪಾಯಿ ಕೊಡುತ್ತೇನೆ ಅಂತಾ ಹೋಗಿ ಬರುವ ಸಾರ್ವಜನಕರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆಯ ಚೀಟಿ ಬರೆದು ಕೊಳ್ಳುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಅವನಿಗೆ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಮಹ್ಮದ್ ಖಾಜಾಸಾಬ ತಂದೆ ಮಹ್ಮದ್ ಜಾಫರ್ ಸಾಬ ಶೇಖ್  ಸಾ: ಶಾಸ್ತ್ರಿ ಚೌಕ :ಜೇವರ್ಗಿ ಅಂತಾ ತಿಳಿಸಿದನು. ನಂತರ ಅವನಿಗೆ ಅಂಗ ಶೋಧ ಮಾಡಲು ಅವನ ಹತ್ತಿರ ನಗದು ಹಣ 1800/-ರೂ. ಒಂದು ಮಟಕಾ ಚೀಟಿ, ಒಂದು ಬಾಲ ಪೆನ್ನು ನೇದ್ದವುಗಳು ಸಿಕ್ಕಿದ್ದು ಅವುಗಳನ್ನು ವಶಪಡಿಸಿಕೊಂಡು ಸದರಿಯವನೊಂದಿಗೆ ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಆತ್ಮ ಹತ್ಯೆ ಪ್ರಕರಣ :
ಜೇವರಗಿ ಠಾಣೆ : ಶ್ರೀಮತಿ ಚಂದ್ರಕಲಾ ಗಂಢ ಹಿರಗಣ್ಣಾ ಹಿರಗಪ್ಪನವರ್ ಸಾ: ಹುಲಗುತ್ತಿ ತಾಃ ಬಸವಕಲ್ಯಾಣ ಜಿಲ್ಲೆಃ ಬಿದರ ರವರ ಮಾವನಿಗೆ ಮೂವರು ಗಂಡು ಮಕ್ಕಳಿರುತ್ತಾರೆ, ಎಲ್ಲರೂ ಬೇರೆ ಬೇರೆಯಾಗಿ ವಾಸಮಾಡಿಕೊಂಡಿರುತ್ತಾರೆ. ನನ್ನ ಗಂಡನ ಹೆಸರಿನಲ್ಲಿ ನಾರಾಯಣಪೂರ ಸೀಮಾಂತರದಲ್ಲಿ ಹೊಲ ಸರ್ವೆ ನಂ 250 ರಲ್ಲಿ ಒಟ್ಟು 1 ಎಕರೆ ಜಮಿನು ಇರುತ್ತದೆ. ನನ್ನ ಗಂಡನು ಡ್ರೈವರ್ ಮತ್ತು ನಮ್ಮ ಹೊಲದಲ್ಲಿ ಕೆಲಸ ಮಾಡಿಕೊಂಡಿದ್ದನು, ಹೋದ ವರ್ಷ ನಮ್ಮ ಹೊಲದಲ್ಲಿನ ಬೆಳೆಗಾಗಿ, ಕ್ರಿಮಿನಾಶ ಔಷದ ಬೀಜ ಇನ್ನಿತರ ಸಾಮಾನುಗಳು ಖರೀದಿ ಸಲುವಾಗಿ ನಮ್ಮೂರಲ್ಲಿ ಖಾಸಗಿಯಾಗಿ 1,50,000/- ರೂ ಸಾಲ  ಮಾಡಿಕೊಂಡಿದ್ದನು, ಅಲ್ಲದೆ ಸದರಿ ಜಮೀನು ಮೇಲೆ ಸಿಂಡಿಕೇಟ್ ಬ್ಯಾಂಕ್ ನಾರಾಯಣಪೂರದಲ್ಲಿ 1,00,000/- ರೂ ಸಾಲ, ಹಾಗೂ ವ್ಯವಸಾಯ ಸೇವಾ ಸಹಕಾರ ಸಂಘ ನಾರಾಯಣಪೂರದಲ್ಲಿ 40,000/- ರೂ ಸಾಲ ಇರುತ್ತದೆ. ಹೀಗೆ ಖಾಸಗಿ ಸಾಲ ಮತ್ತು ಬ್ಯಾಂಕ ಸಾಲ ಕೂಡಿ ಒಟ್ಟು 2,90,000/- ರೂ ಸಾಲ ಮಾಡಿದ್ದನು. ಹೋದ ವರ್ಷ ಮತ್ತು ಈ ವರ್ಷ ಸರಿಯಾಗಿ ಮಳೆ ಬಾರದೆ ಇರುವದರಿಂದ ಹೊಲದಲ್ಲಿ ಬೆಳೆ ಬಂದಿರುವದಿಲ್ಲಾ. ಬೇರೆಯವರ ಹತ್ತಿರ ಖಾಸಗಿ ಸಾಲ ಕೂಡಾ ಕಟ್ಟಲು ಆಗಿರುವದಿಲ್ಲಾ. ಈ ವಿಷಯದಲ್ಲಿ ನನ್ನ ಗಂಡನು ನನ್ನ ಮುಂದೆ ನಾವು ಮಾಡಿದ ಸಾಲ ಹೇಗೆ ತೀರಿಸಬೇಕು ಅಂತ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡಿದ್ದನು. ನಾನು ಮತ್ತು ನಮ್ಮ ಮಾವ ಎಲ್ಲರೂ ನನ್ನ ಗಂಡನಿಗೆ ಮುಂದಿನ ವರ್ಷ ಕಟ್ಟಿದರಾಯಿತು ಅಂತ ಹೇಳುತ್ತಿದ್ದೇವು ಆದರೂ ಕೂಡಾ ಅವನು ನಾನು ಸಾಯುತ್ತೇನೆ ಅಂತ ಅನ್ನುತ್ತಿದ್ದನು. ಈಗ 8 ದಿವಸಗಳ ಹಿಂದೆ ಅಂದರೆ ದಿ: 21.05.2016  ರಂದು ನಾನು ಲಾರಿ ಡ್ರೈವರ್ ಕೆಲಸಕ್ಕೆ ಮೈಸೂರಿಗೆ ಹೋಗುತ್ತೆನೆ ಅಂತಾ ಮನೆಯಲ್ಲಿ ನನಗೆ ಹೇಳಿ ಹೋದನು 3-4 ದಿವಸಗಳ ಹಿಂದೆ ನನ್ನ ಮೊಬೈಲಿಗೆ ಪೊನ ಮಾಡಿ ನಾನು ಮೈಸೂರನಲ್ಲಿದ್ದೆನೆ ನನಗೆ ಕೆಲಸ ಸಿಕ್ಕಿರುವುದಿಲ್ಲಾ ಮರಳಿ ಮನೆಗೆ ಬರುತ್ತಿದ್ದೆನೆ ಅಂತಾ ಹೇಳಿರುತ್ತಾನೆ.  ಇಂದು ದಿ. 28.05.2016 ರಂದು ಮುಂಜಾನೆ 11.00 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿದ್ದಾಗ ಪೋನ ಮೂಲಕ ಗೊತ್ತಾಗಿದ್ದೆನೆಂದರೆ ನನ್ನ ಗಂಡ ಹಿರಗಣ್ಣ ಇತನು ಜೇವರಗಿ ಪಟ್ಟಣದ ಹೊರ ವಲಯದ ಗಡ್ಡಿ ಪೂಲ್ ಹತ್ತಿರ ಗುಂಡೆರಾವ ಕುಲಕರ್ಣಿ ಅನ್ನುವವರ ಹೊಲದಲ್ಲಿ ಗಿಡಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ಅಂತಾ ವಿಷಯ ಗೊತ್ತಾದ ಕೂಡಲೆ ನಾನು ನನ್ನ ಬಾವಂದಿರಾದ ಜಗನ್ನಾಥ ತಂದೆ ಭೀಮಣ್ಣಾ ಹಿರಗಪ್ಪನವರ್, ವೀರಪಣ್ಣ ತಂದೆ ಭೀಮಣ್ಣಾ ಹಿರಗಪ್ಪನವರ್ ನನ್ನ ತಂದೆಯಾದ ವೈಜನಾಥ ತಂದೆ ಮಾಣಿಕಪ್ಪ ಹುಮನಾಬದೆ, ತಾಯಿ ಶಾಂತಾಬಾಯಿ ಹಾಗೂ ಅಣ್ಣತಮ್ಮಕೀಯ ವಾಸುದೇವ ತಂದೆ ಶರಣಪ್ಪ ಹಿರಗಪ್ಪನವರ್ ಇವರಿಗೆ ವಿಷಯ ತಿಳಿಸಿ ನಾವು ಎಲ್ಲರೂ ಕೂಡಿ ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಗಂಡನ ಹೆಣ ಜೇವರಗಿ ಸರಕಾರಿ ಆಸ್ಪತ್ರೆ ಶವಗಾರದಲ್ಲಿ ಹಾಕಿರುತ್ತಾರೆ ಅಂತಾ ಗೊತ್ತಾದ ಮೇಲೆ ನಾವು ಜೇವರಗಿ ಸರಕಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ ನನ್ನ ಗಂಡನ ಹೆಣ ನೊಡಿ ಗುರುತಿಸಿರುತ್ತೆನೆ. ಅವನ ಕೊರಳಿಗೆ ಹಗ್ಗದ ಗಾಯವಾಗಿತ್ತು. ಅಲ್ಲಿಯೇ ಇದ್ದ ಮರೆಪ್ಪ ತಂದೆ ಭೀಮಾಶಂಕರ ಜೆಡಿ ಇವರು ಹೆಳಿದ್ದನೆಂದರೆ ಇಂದು ಮುಂಜಾನೆ 10.45 ಗಂಟೆಯ ಸುಮಾರಿಗೆ ನಾನು ನಮ್ಮೂರಿನಿಂದ ಜೇವರಗಿಗೆ ಹೋಗುವಾಗ ನೀನ್ನ ಗಂಡನು ಹೊಲದಲ್ಲಿನ ಗಿಡಕ್ಕೆ ಹಗ್ಗದಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಸತ್ತಿದ್ದನ್ನು  ನೋಡಿ ನಾನು ಪೊಲೀಸ್ ಠಾಣೆಗೆ ಹೋಗಿ ವಿಷಯ ತಿಳಿಸಿರುತ್ತೆನೆ. ಆಂತಾ ಹೇಳಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

28 May 2016

Kalaburagi District Press Reporte.

ಪತ್ರಿಕಾ ಪ್ರಕಟಣೆ


ದಿನಾಂಕ 05/03/2014 ರಂದು ಶಾಹಬಾದ ಪಟ್ಟಣದಿಂದ ಮಹಮ್ಮದ ಹಾಜಿ ತಂದೆ ಬಾಬುಮಿಯ್ಯ ವಯ -07ವರ್ಷ, ಸಾ|| ಇಂಜಿನ್ ಪೈಲ್ ಶಹಬಾದ ಬಡವಣೆಯಿಂದ ಕಾಣೆಯಾಗಿದ್ದು ಈ ವಿಷಯದಲ್ಲಿ ಮಗುವಿನ ತಾಯಿ ಶ್ರೀಮತಿ ಫಾತಿಮಾ ಗಂಡ ಬಾಬುಮಿಯ್ಯಾ ಸಾ|| ಇಂಜಿನ್ ಪೈಲ್ ಶಾಹಬಾದ ರವರು ಶಾಹಬಾದ ನಗರ ಪೊಲೀಸ್ ಠಾಣೆಯಲ್ಲಿ ಫಿರ್ಯಾದಿ ಸಲ್ಲಿಸಿದರ ಮೇರೆಗೆ ಠಾಣೆ ಗುನ್ನೆ ನಂ 161/2014 ಕಲಂ 363(ಎ)  ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದ್ದು ಇರುತ್ತದೆ. ಸುಮಾರು ದಿನಗಳಾದರೂ ಸದರ ಗುನ್ನೆ ಪತ್ತೆಯಾಗದೆ ಇರುವುದರಿಂದ ಈ ಗುನ್ನೆ ಹೆಚ್ಚಿನ ತನಿಖೆ ಕುರಿತು ಕಲಬುರಗಿಯ ಡಿಸಿಐಬಿ ಘಟಕಕ್ಕೆ ವರ್ಗಾಯಿಸಿದ್ದು ಇರುತ್ತದೆ.

        ಮಾನ್ಯ,ಎಸ್.ಎಸ್.ಹುಲ್ಲೂರು, ಡಿ.ಎಸ್.ಪಿ,  ಡಿ.ಸಿ.ಆರ.ಬಿ ರವರ ನಿರ್ದೇಶನದಲ್ಲಿ ಮತ್ತು ಶ್ರೀ ಕೆ.ಎಮ್ ಸತೀಶ ಪಿ.ಐ,  ಡಿಸಿಐಬಿ ಘಟಕ ಕಲಬುರಗಿ ರವರ ನೇತೃತ್ವದಲ್ಲಿ ಡಿಸಿಐಬಿ ಘಟಕ ಸಿಬ್ಬಂದಿಯವರಾದ ಶ್ರೀ ಬಸವರಾಜ ಎ.ಎಸ್.ಐ. ಶ್ರೀ, ದತ್ತಾತ್ರೇಯ ಎ.ಎಸ್.ಐ, ಶ್ರೀ ಆನಂದ ಪ್ರಸಾದ, ಶ್ರೀ, ಸೈಯದ ಅಯ್ಯುಬ, ಶ್ರೀ.ಪ್ರಕಾಶ, ಶ್ರೀ.ಅಂಬಾರಾಯ, ಶ್ರೀ ಚಂದ್ರಕಾಂತ, ಮತ್ತು ಶ್ರೀಮತಿ ಸವಿತಾ ರವರು ಪತ್ತೆ ಕಾರ್ಯದಲ್ಲಿ ನಿರತರಾಗಿ ಸದರ ಕಾಣೆಯಾದ ಮಗುವಿಗೆ ಇಂದು ದಿನಾಂಕ 28/05/2016 ರಂದು ಯಾದಗಿರ ಪಟ್ಟಣದಲ್ಲಿ ಪತ್ತೆ ಹಚ್ಚಿದ್ದು ಇರುತ್ತದೆ. ಈ ವಿಷಯವನ್ನು ತಿಳಿದ ಮಗುವಿನ ಪಾಲಕರು ಮಗುವನ್ನು ಕಂಡು ಸಂತೋಷಭರಿತರಾಗಿ ಪೊಲೀಸರು ಈ ಶ್ಲಾಘನೀಯ ಕೆಲಸಕ್ಕೆ ಪಾಲಕರು ಕೊಂಡ್ಡಾಡಿದರು. 

Kalaburagi District Reported Crimes

ನ್ಯಾಯಾಲಯದಲ್ಲಿ ಬೆಂಕಿ ಹಚ್ಚಿದ್ದರಿಂದ ವಸ್ತಗಳು ಭಸ್ಮ :
ಅಫಜಲಪೂರ ಠಾಣೆ : ಶ್ರಿ ಗುರುಮೂರ್ತಿ ಆರ್.ಡಿ ಪ್ರಥಮ ದರ್ಜೆ ಸಹಾಯಕ ಪ್ರಭಾರಿ ನ್ಯಾಯಾಲಯ ಸೀರೇಸ್ತೆದಾರ ಮಾನ್ಯ ಸಿ.ಜೆ. ಮತ್ತು ಜೆ.ಎಮ್.ಎಫ್.ಸಿ ಕೋರ್ಟ ಅಫಜಲಪೂರ ನಮ್ಮ ನ್ಯಾಯಾಲಯ ಸೀರೇಸ್ತೇದಾರರಾದ ವೈ.ಕೆ ನಡವೀನಕೇರಿ ಇವರು ದಿನಾಂಕ 27-05-2016 ಮತ್ತು 28-05-2016 ರಂದು ಆಕಸ್ಮಿಕ ರಜೆ ಹಾಕಿದ್ದು ನನಗೆ ಪ್ರಭಾರ ವಹಿಸಿರುತ್ತಾರೆ. ನಾನು ದಿನಾಂಕ 27-05-2016 ರಂದು ರಾತ್ರಿ ನಮ್ಮ ಮನೆಯಲ್ಲಿ ನಾನು ಮಲಗಿದ್ದಾಗ ಅಫಲಪೂರ ಪೊಲೀಸ್ ಠಾಣೆಯ ಪಿಸಿ ಸಂತೋಷ ರವರು ನನ್ನ ಮೋಬಾಯಿಲಗೆ ಕರೆ ಮಾಡಿ ನಿಮ್ಮ ನ್ಯಾಯಾಲಯದಲ್ಲಿ ಬೆಂಕಿ ಹತ್ತಿಕೊಂಡಿದೆ ಬನ್ನಿ ಎಂದು ತಿಳಿಸಿದರು. ಆಗ ನಾನು ತಕ್ಷಣ ಕೋರ್ಟಿ ಬಂದು ನೋಡಲಾಗಿ ನಮ್ಮ ನ್ಯಾಯಾಲಯದ ಸೀಪಾಯಿ ಯಾದ ಅಶೋಕ ಸ್ಥಳದಲ್ಲಿ ಹಾಜರಿದ್ದು ನಾನು ಹೇಗೆ ಆಯಿತು ಎಂದು ಕೇಳಿದಾಗ ನನಗೆ ಗೊತ್ತಿಲ ಎಂದು ತಿಳಿಸಿದರು. ಆಗ ನಾನು ಮತ್ತು ಸೀಪಾಯಿ ಅಶೋಕ ಮತ್ತು ಸಿಪಿಸಿ ಸಂತೋಷ, ಸಿಪಿಸಿ ಅಕ್ತರಪಟೇಲ ಹಾಗೂ ಅಗ್ನಿ ಶಾಮಕದ ಸಿಬ್ಬಂದಿಗಳು ಸೇರಿಕೊಂಡು ಬೆಂಕಿಯನ್ನು ಆರೀಸಿದೇವು ತದನಂತರ ತಿಳಿದು ಬಂದ ವಿಷಯ ಏನೆಂದರೆ ನಮ್ಮ ನ್ಯಾಯಾಲಯದ ಆವರಣದಲ್ಲಿರುವ ಕ್ಯಾಂಟೀನಗೆ ನುಗ್ಗಿ ಸೀಲೇಂಡರ ತಗೆದುಕೊಂಡು ಬಂದು ನ್ಯಾಯಾಲಯದ ನ್ಯಾಯಾದೀಶ ಕೋಣೆ ಬಾಗಿಲನ್ನು ಮುರಿದು  ಒಳ ಪ್ರವೇಶಿಸಿದಾಗ ಯಾರೋ ದುಷ್ಕರ್ಮೀಗಳು ಸಿಲೇಂಡರ ಅನ್ನು ಸ್ಪೋಟಿಸಿ ಬೆಂಕಿ ಹಚ್ಚಿರುವುದು ಕಂಡು ಬಂದಿರುತ್ತೇ ಮತ್ತು ನ್ಯಾಯಾದೀಶರ ಕೋಣೆಯ ಎಲ್ಲಾ ವಸ್ತುಗಳು ಸುಟ್ಟು ಭಸ್ಮ ವಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಕೊಲೆ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ವೆಂಕಯ್ಯ ತಂದೆ ನೌಸಯ್ಯ ದೇವರಮನಿ ಸಾ:ಯಡ್ರಾಮಿ ರವರ ಹಿರಿಯ ಮಗ ಹಣಮಂತ ಇತನ ಹೆಂಡತಿ ಈಗ ಮೂರು ವರ್ಷಗಳಿಂದ ಹೊಟ್ಟೆಪಾಡಿಗಾಗಿ ಮಂಗಳೂರಿಗೆ ಹೋಗಿರುತ್ತಾಳೆ. ಅವರಿಗೆ ಮೂರು ಹೆಣ್ಣು ಮಕ್ಕಳು ಮತ್ತು ಮೂರು ಗಂಡು ಮಕ್ಕಳಿರುತ್ತಾರೆ. ಹಣಮಂತನ ಹಿರಿಯ ಮಗಳಾದ ರೇಣುಖಾ ಇವಳಿಗೆ ಹುಬ್ಬಳ್ಳಿಯ ಶ್ರೀನಿವಾಸ ಪೂಜಾರಿ ಎಂಬುವನಿಗೆ ಕೊಟ್ಟು ಮದುವೆ ಮಾಡಿರುತ್ತೇವೆ. ನನ್ನ ಮೊಮ್ಮಗಳಾದ ರೇಣುಖಾ ಇವಳು ತನ್ನ ಗಂಡನ ಮನೆಯಿಂದ ನಿನ್ನೆ ನಮ್ಮೂರಿಗೆ ಬಂದಿರುತ್ತಾಳೆ. ನನ್ನ ಮಗ ಹಣಮಂತನು ಒಬ್ಬಂಟಿಗ ಇದ್ದು, ಅಲ್ಲಿ ಇಲ್ಲಿ ಬೇಡಿಕೊಂಡು ಉಪಜಿವನ ಮಾಡುತ್ತಿದ್ದನು. ನನ್ನ ಮಗ ಹಣಮಂತ ಇತನು ರಾತ್ರಿ 9 ಗಂಟೆಗೆ ಮನೆಯಿಂದ ಹೋದವನು ಮರಳಿ ಮನೆಗೆ ಬಂದಿರುವದಿಲ್ಲ. ದಿನಾಂಕ: 27-05-16 ರಂದು ಬೆಳಗ್ಗೆ ನಾನು ಮತ್ತು ನನ್ನ ಹೆಂಡತಿ ಮನಯಲ್ಲಿದ್ದಾಗ ಓಣಿಯವರೆಲ್ಲರೂ ನಿನ್ನ ಮಗ ಹಣಮಂತನಿಗೆ ಯಾರೋ ಕೊಲೆ ಮಾಡಿ ಕೋಣಸಿರಸಗಿ ರಸ್ತೆಗೆ ಹೊಂದಿಕೊಂಡಿರುವ ಮಹೆಬೂಬ ಪಟೇಲ ಮೊರಟಗಿ ರವರ ಹೊಲದಲ್ಲಿ ಬಿಸಾಕಿರುತ್ತಾರೆ ಅಂತಾ ಹೆಳಿದ ಕೂಡಲೆ ನಾನು ಮತ್ತು ನನ್ನ ಹೆಂಡತಿ ಗಾಬರಿಗೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಮಗನಿಗೆ ಯಾರೋ ಕೇಲವು ಜನರು ಅವನ ಕೊರಳಲ್ಲಿದ್ದ ಟಾವೆಲನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಡಿರುತ್ತಾರೆ. ನಿನ್ನೆ ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 4 ಗಂಟೆ ಮಧ್ಯದ ಅವಧಿಯಲ್ಲಿ ಯಾರೋ , ಯಾವುದೋ ಉದ್ದೇಶಕ್ಕಾಗಿ ನನ್ನ ಮಗ ಹಣಮಂತನಿಗೆ ಕೊಲೆ ಮಾಡಿರುತ್ತಾರೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.