POLICE BHAVAN KALABURAGI

POLICE BHAVAN KALABURAGI

14 May 2016

Kalaburagi District Reported Crimes

ಮಣ್ಣು ಕುಸಿದು ಬಿದ್ದು ಕುಲಿ ಕಾರ್ಮಿಕರಿಗೆ ಗಾಯವಾದ ಪ್ರಕರಣ :
ದೇವಲಗಾಣಗಾಪೂರ ಠಾಣೆ : ಶ್ರೀ ಶರಣಬಸಪ್ಪ ಜೋಗುರು ಸಾ : ಅವರಳ್ಳಿ ಇವರು ಬಂದರವಾಡ ಗ್ರಾಮದ ಓಗಪ್ಪ ತಂದೆ ಮಲ್ಲಪ್ಪ ಹಿರೇಪೂಜಾರಿ ಇವರ ಹೊಲದಲ್ಲಿ ಹಾಳು ಬಾವಿಯಲ್ಲಿ ತೋಡುವ ಸಲುವಾಗಿ ನನ್ನ ತಾಯಿ ಷಣ್ಮುಕಮ್ಮ ಮತ್ತು ದುಂಡಪ್ಪ ತಂದೆ ಮಲಪ್ಪ ಬಂದರವಾಡ, ಶರಣಪ್ಪ ಜೋಗುರ, ಗುರುಪ್ಪ ತಂದೆ ಜೆಟ್ಟೆಪ್ಪ ಜೋಗುರು ಭಾಗಪ್ಪ ತಂದೆ ಮಲಕಪ್ಪ ಶ್ಯಾದಿಪೂರ, ಬಸಪ್ಪ ತಂದೆ ಮಲಕಪ್ಪ ಶ್ಯಾದಿಪೂರ ಎಲ್ಲರೂ ಕೂಡಿ ಹೋಗಿದ್ದು ದಿನಾಂಕ:12-05-2016 ರಂದು ಸಾಯಂಕಾಲ 4:00 ಗಂಟೆ ಸುಮಾರಿಗೆ ಓಗಪ್ಪ ಇವರ ಹೊಲದಲ್ಲಿಯ ಬಾವಿ ತೋಡುವ ಕೆಲಸ ಮಾಡುತ್ತಿರುವಾಗ ಬಾವಿಯ ಮಣ್ಣು ಮತ್ತು ಕಟಗು ಮೇಲಿಂದ ಕಡಿದು ಬಿದ್ದ ಪ್ರಯುಕ್ತ ನನಗೆ ಎಡಗಾಲು ಮುರಿದಿರುತ್ತದೆ. ಮೊಲಕಾಲಿಗೆ ಬಾರಿ ಗಾಯವಾಗಿರುತ್ತದೆ. ಅಲ್ಲದೆ ದುಂಡಪ್ಪ ತಂದೆ ಮಲಕಪ್ಪ ಬಂದರವಾಡ ಸಾ||ಅವರಳ್ಳಿ ಈತನಿಗೆ ಎರಡು ಕಾಲು ಮುರಿದಿದ್ದು ಕಿವಿಗೆ ಭಾರಿ ಗಾಯವಾಗಿ ರಕ್ತ ಬರುತ್ತಿತ್ತು ಬಲಗಡೆ ಟೊಂಕಕ್ಕೆ ಬಾರಿ ಗಾಯವಾಗಿರುತ್ತದೆ. ಮಾತನಾಡುವ ಸ್ತೀತಿಯಲ್ಲಿ ಇರಲ್ಲಿಲ್ಲ. ಮತ್ತು ಶರಣಪ್ಪ ತಂದೆ ಜೆಟ್ಟೆಪ್ಪ ಇವನಿಗೂ ಸ್ವಲ್ಪ ಗಾಯವಾಗಿರುತ್ತದೆ. ಆಸ್ಪತ್ರೆಗೆ ಬಂದಿರುವುದಿಲ್ಲ. ನಂತರ ನಮಗೆ ಓಗಪ್ಪ ಹಾಗೂ ಗಂಗಪ್ಪ ಭೂತಾಳಿ, ಹಾಗೂ ನಮ್ಮ ಜೊತೆ ಕೆಲಸಕ್ಕೆ ಬಂದ ಗುರಪ್ ಇವರ ಮಣ್ಣಿನಿಂದ ಹೊರಗೆ ತೆಗೆದು ಉಪಚಾರ ಕುರಿತು ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ಓಗಪ್ಪನು ಹಳಯ ಬಾವಿ ಅಂತಾ ತಿಳಿದು ನಮಗೆ ದಿನಕ್ಕೆ 300/- ಕೊಡುವುದಾಗಿ ಹೇಳಿ ಕೆಲಸಕ್ಕೆ ಕರೆದು ಅವನ ಅಲಕ್ಷತನದಿಂದ ಈ ಘಟನೆ ನಡೆದಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ 12/05/16 ರಂದು ರಾತ್ರಿ 10-45 ಗಂಟೆ ಸುಮಾರಿಗೆ ತನ್ನ  ಯಾವುದೋ ಕೆಲಸದ ಕುರಿತು ಹಿರೋಹೊಂಡಾ ಸ್ಪ್ಲೇಂಡರ್ ಮೋಟಾರ್ ಸೈಕಲ್  ನಂ. ಕೆಎ 32-ಇಜಿ-6300 ನೇದ್ದರ ಮೇಲೆ ಕೆರಿಭೋಸಗಾ ಕಡೆಗೆ ಹೋಗಿ ಮರಳಿ ಕಲಬುರಗಿ ಕಡೆಗೆ ಬರುವಾಗ ಮೃತ  ಅಮರನಾಥ ಇತನು ತನ್ನ ವಶದಲ್ಲಿದ್ದ ಮೋಟಾರ್ ಸೈಕಲನ್ನು ಅತಿವೇಗದಿಂದ ಮತ್ತು ನಿಸ್ಕಾಳಿಜಿತನದಿಂದ ನಡೆಸಿಕೊಂಡು ಬಂದು ಆಳಂದ ಚೆಕಪೋಸ್ಟ ಹತ್ತಿರ ಇರುವ ಕೃಷಿ ವಿಶ್ವವಿದ್ಯಾಲಯದ ಎದರುಗಡೆ ರೋಡಿನ ಬದಿಗೆ ನಿಂತಿದ್ದ ಲಾರಿ ನಂ. ಎಮ್.ಹೆಚ್-12-ಹೆಚ್.ಸಿ-2188 ನೇದ್ದಕ್ಕೆ ಹಿಂದುಗಡೆ ಅಪಘಾತ ಪಡಿಸಿದ್ದರಿಂದ ಅಮರನಾಥನ  ತಲೆಗೆ, ಭಾರಿ ರಕ್ತಗಾಯ, ಎಡಗಣ್ಣಿಗೆ ಭಾರಿ ಗುಪ್ತಗಾಯವಾಗಿ ರಕ್ತ ಸ್ರಾವವಾಗಿ , ಅಲ್ಲದೆ ಎಡಭುಜಕ್ಕೆ , ಎದೆಗೆ , ಹೊಟ್ಟೆಯ ಮೇಲ್ಭಾಗಕ್ಕೆ, ಭಾರಿ ಕಂದುಗಟ್ಟಿದ್ದು ಗಾಯಗಳಾಗಿದ್ದು, ಆತನಿಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಯುನೈಟೆಡ್ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆ ಮಾಡಿದ್ದು, ಸದರಿ ಅಮರನಾಥನು  ರಸ್ತೆ ಅಪಘಾತದಲ್ಲಿ ಆದ ಗಾಯಗಳ ಉಪಚಾರ ಪಡೆಯುವ ಕಾಲಕ್ಕೆ ಉಪಚಾರದಲ್ಲಿ ಗುಣಮುಖ ಹೊಂದದೆ ಮೃತಪಟ್ಟಿರುತ್ತಾನೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.
ಮಾಡಬೂಳ ಠಾಣೆ : ಶ್ರೀಮತಿ ಗೀತಾ ಗಂಡ ಸಂಜೀವಕುಮಾರ ಸಾ : ಝಳಕಿ ಕೆ ಇವರ ಗಂಡ  ಈಗ ಸುಮಾರ 5 ತಿಂಗಳಿಂದ ಕಲಬುರಗಿಯ ಘಯಾಜ ಇವರ ಲಾರಿ ನಂ ಕೆಎ-32 -1811 ನೇದ್ದರ ಮೇಲೆ ಚಾಲಕ ಅಂತಾ ಕೆಲಸ ನಿರ್ವಹಿಸಿಕೊಂಡಿದ್ದು. ಹೀಗಿದ್ದು ಫಿರ್ಯಾಧಿ ಗಂಡ ಇಂದು ದಿನಾಂಕ-12/05/2016 ರಂದು ಬೆಳ್ಳಿಗೆ 10 ಗಂಟೆ ಸುಮಾರಿಗೆ ಕಲಬುರಗಿಯಿಂದ ಲಾರಿ ಲೊಡ ಮಾಡಿಕೊಂಡು ಸೇಡಂಕ್ಕ ಹೋಗಿ ಬರುವುದಿದೆ ಅಂತಾ ಹೇಳಿ ಹೊರಟು ಮೃತನು ಕಲಬುರಗಿಯಿಂದ ತಾನು ಚಲಾಯಿಸುತ್ತಿದ್ದ ಲಾರಿ ನಂ ಕೆಎ-32 ಎ-1811 ನೇದ್ದನ್ನು ಚಲಾಯಿಸಿಕೊಂಡು ಸಡಂಕ್ಕೆ ಹೊರಟು ಗುಂಡಗುರ್ತಿ ತಾಂಡಾ ದಾಟಿ ಸ್ವಲ್ಪ ದೂರದಲ್ಲಿ ಕಲಬುರಗಿಯಿಂದ ಸೇಡಂಕ್ಕೆ ಹೋಗುವ ರಾಜ್ಯ ಹೆದ್ದಾರಿಯ ಮೇಲೆ ಹೋಗುತ್ತಿರುವಾಗ ಆ ವೇಳೆಯಲ್ಲಿ ಮಳೆ ಬರುತ್ತಿದ್ದು ಸಮಯ 5 ಪಿ.ಎಮ್ ಸುಮಾರಿಗೆ ಮೃತನು ತನ್ನ ಲಾರಿಯನ್ನು ಅತಿ ವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗುತ್ತಿರುವಾಗ ಲಾರಿಯ ಹಿಂದಿನ ಟೈರ ಒಮ್ಮೆಲೆ ಪಂಚರ ಆದ ಪರಿಣಾಮ ಲಾರಿ ನಿಯಂತ್ರಣ ತಪ್ಪಿದಾಗ ಮೃತನು ಒಮ್ಮೆಲೆ ಲಾರಿಯಿಂದ ಕೆಳಗೆ ಜಿಗಿಯಲು ಆಯ ತಪ್ಪಿ ತನ್ನ ಲಾರಿಯ ಹಿಂದಿನ ಟೈರನಲ್ಲಿ ಸಿಲಿಕಿ ತೆಲೆಗೆ ಹಾಗೂ ಮುಖಕ್ಕೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಸದರಿ ಘಟನೆಯನ್ನು ರೊಡಿನ ಮೇಲೆ ಹೋಗಿ ಬರುವರಲ್ಲಿನ ಒಬ್ಬರನ್ನು ನೋಡಿ ಮೃತ ಮೋಬೈಲನಿಂದ ಮೃತನ ಹೆಂಡತ್ತಿಗೆ ಘಟನೆ ಬಗ್ಗೆ ತಿಳಿಸಿ ಮತನಿಗೆ ಜಿಜಿಹೆಚ್ ಕಲಬುರಗಿಗೆ ಅಂಬುಲೈಸ್ನನಲ್ಲಿ ಹಾಕಿ ಕಳಿಸುತ್ತಿರುವುದಾಗಿ ತಿಳಿಸಿದ ಮರಗೆ ಮೃತನ ಹೆಂಡತ್ತಿ ಹಾಗೂ ತಾಯಿ ಮೃತನ ತಮ್ಮ ಆಸ್ಪತ್ರೆಗೆ ಬಂದು ನೋಡಲು ಮೃತನಿಗ ತೆಲ ಭಾರಿ ರಕ್ತಗಾಯವಾಗಿ ಮೃತ ಪಟ್ಟಿದ್ದು ಸದರಿ ಫಿರ್ಯಾಧಿ ಗಂಡನ ಈ ಘಟನಯನ್ನು ತನ್ನ ನಿರ್ಲಕ್ಷತನದಿಂದ ಜರುಗಿ ಮೃತ ಪಟ್ಟಿರುತ್ತಾನ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಜೇವರಗಿ ಠಾಣೆ : ಕುಮಾರಿ ನಜಮಾ ಬೇಗಂ ತಂದೆ ನಬಿ ಪಟೇಲ್ ಗುಂಜೋಟಿ ಸಾ|| ಮದರಿ ಇವರು ದಿನಾಂಕ 12.05.16 ರಂದು ಮುಂಜಾನೆ ಟ್ಯೂಷನ್ ಸಲುವಾಗಿ ಜೇವರಗಿಗೆ ಬಂದು ಟ್ಯೂಷನ್ ಮುಗಿಸಿಕೊಂಡು ಸಾಯಂಕಾಲದ ಸಮಯದಲ್ಲಿ ನನ್ನ ಮಾವ ಜಾನುಮೀಯಾ ಈತನ ಮೊಟಾರು ಸೈಕಲ್ ನಂ ಕೆ.ಎ32 ಇಜಿ1142 ನೇದ್ದರ ಹಿಂದಿನ ಸಿಟಿನಲ್ಲಿ ಕುಳಿತುಕೊಂಡು ನಮ್ಮೂರಿಗೆ ಹೋಗುತ್ತಿದ್ದಾಗ ಸಾಯಂಕಾಲ 4 ಗಂಟೆಯ ಸುಮಾರಿಗೆ ಜೇವರಗಿ ಕಲಬುರಗಿ ಮೇನ್‌ ರೋಡ ಕೋಳಕೂರ ಕ್ರಾಸ್ ಹತ್ತಿರ ರೋಡಿನಲ್ಲಿ ಹೋಗುತ್ತಿದ್ದಾಗ ನಮ್ಮ ಮಾವ ತನ್ನ ಮೋಟಾರು ಸೈಕಲ್‌ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಿದ್ದಾಗ ಅದೇ ವೇಳೆಗೆ ಕಲಬುರಗಿ ಕಡೆಯಿಂದ ಒಬ್ಬ ಪಲ್ಸರ್‌ ಮೋಟಾರು ಸೈಕಲ್‌ ಸವಾರನು ತನ್ನ ಮೋಟಾರು ಸೈಕಲ್‌ ಅನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಒಬ್ಬರಿಗೊಬ್ಬರು ಸೈಡ್‌ ಕೊಡದೆ ಮುಖಾಮುಖಿಯಾಗಿ ಡಿಕ್ಕಿ ಪಡಿಸಿದ್ದರಿಂದ ಎಲ್ಲರು ಮೋಟಾರು ಸೈಕಲ್‌ದೊಂದಿಗೆ ಕೇಳಗೆ ಬಿದ್ದೆವು. ನಾನು ಸಾವಕಾಶವಾಗಿ ಎದ್ದು ನೋಡಲಾಗಿ ನನ್ನ ಬಲಗಾಲಿಗೆಗುಪ್ತಗಾಯ ಮತ್ತುಬಲಗಾಲಿನ ಬೆರಳಿಗೆ ರಕ್ತಗಾಯವಾಗಿದ್ದು. ನಂತರ ನಮ್ಮ ಮಾವನಿಗೆನೋಡಲಾಗಿ ಅವನ ಬಲಗಾಲ ಬೆರಳಿಗೆ ರಕ್ತಗಾಯವಾಗಿದ್ದು ನಂತರ ಪಲ್ಸರ್‌ ವಾಹನ ಸವಾರನಿಗೆ ನೋಡಲಾಗಿ ಅವನ ತಲೆಗೆ ರಕ್ತ ಮತ್ತು ಗುಪ್ತಗಾಯವಾಗಿದ್ದು ಎಡಭುಜಕ್ಕೆ ನೋಡಲಾಗಿ  ಬಲಗೈಬೆರಳಿಗೆ, ಬಲಗಾಲಿನ ಬೆರಳುಗಳಿಗೆ ಗಾಯವಾಗಿದ್ದು ಅವನ ಹೆಸರನ್ನು ವಿಚಾರಿಸಲಾಗಿ ಉದಯಕುಮಾರ ತಂದೆ ಧೂಳಪ್ಪ ಸಾ|| ಕಲಬುರಗಿ ಅಂತ ತಿಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.
ವರದಕ್ಷಣೆ ಕಿರುಕಳ ನೀಡಿ ಕೊಲೆ ಮಾಡಿದ ಪ್ರಕರಣ :
ಮಹಿಳಾ ಠಾಣೆ : ಶ್ರೀ ನಾಗಯ್ಯ ತಂದೆ ಶಿವಲಿಂಗಯ್ಯ ಮಠಪತಿ ಸಾ:ಶ್ರೀನಿವಾಸ ಸರಡಗಿ ತಾ:ಜಿ: ಕಲಬುರಗಿ ಇವರ ಮಗಳಾದ ಶಾಂತಲಾ ಇವಳಿಗೆ ಒಂದು ವರ್ಷ 6 ತಿಂಗಳ ಹಿಂದೆ ಶಿವಲಿಂಗಯ್ಯ ತಂದೆ ಶಿವಾನಂದ ಸ್ವಾಮಿ ಇವರ ಜೊತೆ ಮದುವೆ ಮಾಡಿಮ ಕೊಟ್ಟಿರುತ್ತೇವೆ. ಮದುವೆ ಸಮಯದಲ್ಲಿ 2 ವರೆ ತೊಲೆ ಬಂಗಾರ 51.000/- ರೂಪಾಯಿ ಹಣ ಬಟ್ಟೆ ಮನೆಗೆ ಬೇಕಾದ ಸಾಮಾನುಗಳು ಕೊಟ್ಟಿರುತ್ತೇವೆ ಮದುವೆಯಾದ ನಂತರ ಸುಮಾರು 2 ತಿಂಗಳು ನನ್ನ ಮಗಳು ಚೆನ್ನಾಗಿದ್ದು ಅಲ್ಲಿಂದ ಇಲ್ಲಿಯವರೆಗೆ ನನ್ನ ಮಗಳಿಗೆ ಅವಳ ಗಂಡ ಅತ್ತೆ ಮಾವ ಮತ್ತು ನಾದಿನಿ ಇವರು ಕಿರುಕುಳ ಕೊಡುತ್ತಲೇ ಇದ್ದಾರೆ. ಹಾಗೆ ಪ್ರತಿಯೊಂದು ಕೆಲಸಕ್ಕೆ ನಿನಗೆ ಸರಿಯಾಗಿ ಕೆಲಸ ಮಾಡಲು ಬರುವದಿಲ್ಲ ನಿನಗೆ ಅಡುಗೆ ಚೆನ್ನಾಗಿ ಮಾಡಲು ಬರುವದಿಲ್ಲ, ನಿನಗೆ ಯಾವುದೇ ವಿಷಯ ಗೊತ್ತಿರುವದಿಲ್ಲ ಎನ್ನುತ್ತಾ ಕಿರುಕುಳ ಕೊಡುತ್ತಿದ್ದರು. ಹಾಗೆಯೇ ನನ್ನ ಅಳಿಯ ಯಾವಾಗಲು ಹೊಡೆ ಬಡೆ ಮಾಡುತ್ತಿದ್ದನು. ನನ್ನ ಮಗಳು ಎಲ್ಲಾ ಕಷ್ಟ ಸಹಿಸುತ್ತಿದ್ದಳು. ಪ್ರತಿಯೊಂದು ವಿಷಯವನ್ನು ತಂದೆ ತಾಯಿಗೆ ಹೇಳಬಾರದೆಂದು ತಾನೇ ಕೊರಗುತ್ತಿದ್ದಳು. ಒಂದು ವಾರದ ಹಿಂದೆ ನನ್ನ ಮಗಳು ನನಗೆ ಪೋನ ಮಾಡಿ ನನ್ನ ಗಂಡನಿಗೆ ಅವನ ಮದುವೆ ಮತ್ತು ತಂಗಿಯ ಮದುವೆ ಮಾಡಲು ಹಣ ಖರ್ಚಾಗಿದ್ದು ಅದಗೋಸ್ಕರ  ತಾವುಗಳು ನನ್ನ ಗಂಡನಿಗೆ 2 ಲಕ್ಷ ರೂಪಾಯಿಗಳು ಹಾಗೂ 3 ತೊಲೆ ಬಂಗಾರ ತರಬೇಕೆಂದು ನನ್ನ ಗಂಡನು ಮತ್ತು ನನ್ನ ಅತ್ತೆ ಮಾವ ನನಗೆ ದಿನನಿತ್ಯ ಕಿರುಕುಳ ಕೊಡುತ್ತಿದ್ದರು. ಹಾಗೆಯೇ ನಿಮ್ಮ ಹತ್ತಿರ ಹಣವನ್ನು ಇದ್ದಿಲ್ಲವಾದರೆ ನಿಮ್ಮ ಮನೆಯನ್ನು ಬೇರೆಯವರಿಗೆ ಒತ್ತಿಯಾಗಿ ಇಟ್ಟು ಆದರೂ ನನ್ನ ಗಂಡನು ಹಣವನ್ನು ತೆಗೆದುಕೊಂಡು ಬರಬೇಕು ಎಂದು ಪದೇ ಪದೇ ಹೇಳುತ್ತಿದ್ದನು. ನಿನ್ನೆ ದಿನಾಂಕ 12.05.2016 ರಂದು ನನ್ನ ಮಗನಾದ ಭಾಗ್ಯವಂತ ನನ್ನ ಮಗಳ ಮನೆಗೆ ಹೋದಾಗ ಅವಳ ಅಕ್ಕಳಾದ ಮೃತ ಶಾಂತಲಾ ಇವಳು ಹಣ ಬಂಗಾರವನ್ನು ತೆಗೆದುಕೊಂಡು ಬಾ ಎಂದು ಹೆಳಿದ್ದು ದಿನಾಂಕ 13.05.2016 ರಂದು ನಾನು ಶ್ರೀನಿವಾಸ ಸರಡಗಿ ಗ್ರಾಮದಲ್ಲಿದ್ದಾಗ ಸುಮಾರು 12 ಗಂಟೆಯ ನನ್ನ ಮಗಳ ಮನೆಯಿಂದ ನನಗೆ ಪೋನ ಬಂದಿದ್ದು ನಿಮ್ಮ ಮಗಳು ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿರುತ್ತಾಳೆ. ಎಂದು ತಿಳಿಸಿರುತ್ತಾರೆ. ತಕ್ಷಣವೇ ನಾನು ನನ್ನ ಹೆಂಡತಿ ರೇಣುಕಾದೇವಿ ಇಬ್ಬರು ಕಲಬುರಗಿ ಸರಕಾರಿ ಆಸ್ಪತ್ರೆಯಲ್ಲಿ ಬಂದಾಗ ನನ್ನ ಮಗಳು ಮೃತಪಟ್ಟಿದ್ದು ನೋಡಿರುತ್ತೇವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ

13 May 2016

Kalaburagi District Reported Crimes

ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದವರ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 12-05-2016 ರಂದು ಯಳಸಂಗಿ ಗ್ರಾಮದ ಎಸ್.ಆರ್.ಜಿ ಧಾಬಾದ ಹತ್ತಿರ ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಕಪೀಲ ದೇವ ಪಿ.ಐ ಡಿ.ಸಿ.ಬಿ ಘಟಕ ಕಲಬುರಗಿ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ 01] ಪ್ರಕಾಶ ತಂದೆ ಸಿದ್ದಯ್ಯ ಗುತ್ತೇದಾರ 02] ರಾಜು ತಂದೆ ಪಂಡಿತ ದುಬಲೆ ಸಾ : ಇಬ್ಬರೂ ಯಳಸಂಗಿ ಇವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ  01] 90 ML 576 ORIGINAL CHOICE WHISKY ಪೌಚಗಳು ಅ.ಕಿ 14976/-,02] 180 ML 133 OLD TAVERN WHISKY ಪೌಚಗಳು ಅ.ಕಿ 9177/-, ಜಪ್ತಿಪಡಿಸಿಕೊಂಡು  ಸದರಿಯವರೊಂದಿಗೆ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ದೇವಲಗಾಣಗಾಪೂರ ಠಾಣೆ : ದಿನಾಂಕ  12-05-2016 ರಂದು 7-45 ಎ.ಎಮ್.ಕ್ಕೆ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ಕಳ್ಳತನದಿಂದ ಮರಳು ಸಾಗಾಣಿಕೆ ಮಾಡುತ್ತಿದ್ದ ಟ್ರ್ಯಾಕ್ಟರ ಚಾಲಕ ಮತ್ತು ಮಾಲೀಕನ ಮೇಲೆ ಕ್ರಮ ಕೈಕೊಳ್ಳುವಂತೆ ಜಪ್ತಿ ಪಂಚನಾಮೆ, ಸಮೇತ ವರದಿ ಹಾಜರಪಡಿಸಿದ್ದರ ಸಾರಾಂಶ ವೇನೆಂದರೆ, ದಿನಾಂಕ 12-05-2016 ರಂದು 6:00 ಎಎಂಕ್ಕೆ ಘೋಳನೂರ ಗ್ರಾಮದ ಭೀಮಾ ನದಿಯಿಂದ ಒಂದು ಟ್ರ್ಯಾಕ್ಟರ್  ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬಿ ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಮೇರೆಗೆ ಪಿ.ಎಸ್.ಐ. ದೇವಲಗಾಣಗಾಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡು ಟ್ರ್ಯಾಕ್ಟರ ಚಾಲಕ ತನ್ನ ಟ್ರ್ಯಾಕ್ಟರನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋದನು ನಂತರ ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರನ್ನು ಚೆಕ್ ಮಾಡಲು ಟ್ರ್ಯಾಕ್ಟರ ನಂ 1) ಟ್ರ್ಯಾಕ್ಟರ ನಂ ಕೆಎ 32 ಟಿ-9223 ನೇದ್ದು ಇದ್ದು ಸದರಿ ಟ್ರ್ಯಾಕ್ಟರದಲ್ಲಿ ಮರಳು ತುಂಬಿದ್ದು ಸದರಿಯವನು ಅನದಿಕೃತವಾಗಿ ಕಳ್ಳತನದಿಂದ ಮರಳು ತುಂಬಿಕೊಂಡು ಸಾಗಿಸುತ್ತಿದ್ದ ಟ್ರ್ಯಾಕ್ಟರನ್ನು ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡೆನು. ಸದರಿ ಟ್ರ್ಯಾಕ್ಟರದಲ್ಲಿನ ಮರಳಿನ ಅ.ಕಿ.3000/-ರೂ ಟ್ರ್ಯಾಕ್ಟರಿನ ಅ.ಕಿ 2,00.000/-ರೂಪಾಯಿ ನೇದ್ದನ್ನು ವಶಪಡಿಸಿಕೊಂಡು ದೇವಲಗಾಣಗಾಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

12 May 2016

Kalaburagi District Reported Crimes

ಕೊಲೆ ಪ್ರಕರಣ :
ಚೌಕ ಠಾಣೆ : ಶ್ರೀಮತಿ ಜಯಶ್ರೀ ಗಂಡ ಶಂಕರ ಜಮಾದಾರ ಸಾಃ ಸುಲ್ತಾನಪೂರ ಹಾಃವಃ ರಾಜೀವಗಾಂದಿ ನಗರ ಫಿಲ್ಟರ್ ಬೇಡ ಕಲಬುರಗಿ ಇವರ ಗಂಡ ಶಂಕರ ತಂದೆ ಬಾಬುರಾವ ಜಮಾದಾರ ಇವರು ದಿನಾಂಕಃ 11.05.2016 ರಂದು ಬೆಳಿಗ್ಗೆ 7.30 ಗಂಟೆಯ ಸುಮಾರಿಗೆ ನನ್ನ ಗಂಡ ನಾನು ಕೆಲಸಕ್ಕೆ ಹೋಗಿ ಸೈಟ ನೋಡಿಕೊಂಡು  ಬರುತ್ತೇನೆ ಅಂತಾ ಹೇಳಿ ಹೋಗಿದ್ದು ಅಂದಾಜು 12.30 ಗಂಟೆಯ ಸುಮಾರಿಗೆ ಮತ್ತೆ ಮರಳಿ ಮನೆಗೆ ಬಂದು ಊಟ ಮಾಡಿ ಮತ್ತೆ ಅಂದಾಜು 1.00 ಗಂಟೆಯ ಸುಮಾರಿಗೆ ನಾನು ಹೋಟೆಲ್ ಹತ್ತಿರ ಹೋಗಿ ಬರುತ್ತೇನೆ ಅಂತಾ ಹೇಳಿ ಹೋಗಿರುತ್ತಾರೆ. ನಾನು ನನ್ನ ಮಕ್ಕಳೊಂದಿಗೆ ನಮ್ಮ ಮನೆಯಲ್ಲೆ ಇದ್ದೆನು.  ಹೀಗೆ ಇರುವಾಗ  ಸುಮಾರ 15-20 ದಿವಸಗಳ ಹಿಂದೆ ನನ್ನ ಗಂಡನ ಗೆಳೆಯರೆ ಆಗಿರುವ ತಾಂಡ ಶಿವುಚಂಡುಲ, ಉಮೇಶ, ಸೈನಿಕ  ಹಾಗೂ ಅವರ ಇತರೆ 3-4 ಜನರೊಂದಿಗೆ ಯಾವದೂ ಹಳೆ ವೈಮನಸ್ಸಿನಿಂದ ಜಗಳ ಮಾಡಿಕೊಂಡು ನಂತರ ತಮ್ಮ ತಮ್ಮಲ್ಲೇ ರಾಜಿ ಮಾಡಿಕೊಂಡು ಸಹ ನನ್ನ ಗಂಡನ ಮೇಲೆ ಹಗೆತನ, ದ್ವೇಶ ಸಾಧಿಸುತ್ತಾ ಬಂದಿರುತ್ತಾರೆ.  ದಿನಾಂಕಃ 11.05.2016 ರಂದು ಸಾಯಾಂಕಾಲ 6.30 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿ ನೀರು ತುಂಬುತ್ತಿರುವಾಗ ನಮ್ಮ ಬಡಾವಣೆಯ ಕೆಲವು ಜನರು ಓಡುತ್ತಾ ಬಂದು ಶಂಕರ ಇತನಿಗೆ ಕೊಲೆ ಮಾಡಿರುತ್ತಾರೆ ಅಂತಾ ನನಗೆ ಹೇಳಿದ್ದರಿಂದ ಒಮ್ಮೇಲೆ ನಾನು ಗಾಭರಿಯಾಗಿ ನನ್ನ  ನಾದಿನಿ ನಾಗಮ್ಮ ಇವರಿಗೂ ನಾನು ವಿಷಯ ತಿಳಿಸಿ ಅವಳೊಂದಿಗೆ ತಾಜ ನಗರದ ಗುಮ್ಮಾಸಾಬ ಮಜೀದ ಹಿಂದೆಗಡೆ ಇರುವ ಒಂದು ಮನೆಯಲ್ಲಿ ನನ್ನ ಗಂಡನಿಗೆ ಹೊಡೆದ ಜಾಗಕ್ಕೆ ಹೋಗಿ ನೋಡಲಾಗಿ, ನನ್ನ ಗಂಡನಿಗೆ ಮಾರಾಕಸ್ತ್ರಗಳಿಂದ ಎದೆಯ ಮೇಲೆ, ಕೈಗಳ ಮೇಲೆ ಹೊಡೆದು ಮತ್ತು ಕಲ್ಲುಗಳಿಂದ  ತೆಲೆಯ ಮೇಲೆ ಎತ್ತಿ ಹಾಕಿ ಬಾರಿ ರಕ್ತಗಾಯಪಡಿಸಿ ಕೊಲೆ ಮಾಡಿ ನನ್ನ ಗಂಡನ ಶವ ಅಲ್ಲೇ ಬಿಟ್ಟು ಹೋಗಿರುತ್ತಾರೆ. ಸದರಿ ನನ್ನ ಗಂಡನಿಗೆ ಈ ರೀತಿ ಕೊಲೆ ಮಾಡಲು ಕಾರಣವೆಂದರೆ ಸುಮಾರ 15-20 ದಿವಸಗಳ ಹಿಂದೆ ಆದ ಜಗಳದ ವೈಮನಸಿನಿಂದಲ್ಲೇ ನನ್ನ ಗಂಡನ ಗೆಳೆಯರಾದ ತಾಂಡ ಶಿವುಚಂಡುಲ, ಉಮೇಶ, ಸೈನಿಕ ಹಾಗೂ ಅವರ ಇತರೆ 3-4 ಸ್ನೇಹಿತರು ಕೂಡಿಕೊಂಡು ನನ್ನ ಗಂಡ ಶಂಕರ ಇತನಿಗೆ ಮಾರಾಕಸ್ತ್ರಗಳಿಂದ ಎದೆಯ ಮೇಲೆ, ಕೈಗಳ ಮೇಲೆ ಹೊಡೆದು ಮತ್ತು ಕಲ್ಲುಗಳಿಂದ  ತೆಲೆಯ ಮೇಲೆ ಎತ್ತಿ ಹಾಕಿ ಬಾರಿ ರಕ್ತಗಾಯಪಡಿಸಿ ಕೊಲೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.
ದರೊಡೆ ಮಾಡಿದ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಅನೀಲ ತಂದೆ ಬಾಲು ರಾಠೋಡ ಸಾ: ಹೋತಪೇಠ ತಾ: ಶಹಾಪೂರ ಜಿ: ಯಾದಗೀರ ಹಾ: :ಮನಂ 784 ಪಲ್ಸಪೇ ಗಣೇಶವಾಡಿ ತಾ:ಪನವೇಲ ಜಿ:ರಾಯಘಡ.ಮಹಾರಾಷ್ಟ್ರ ರಾಜ್ಯ ರವರು ತನ್ನ ತಂಗಿ ಮಂಜುಳಾ ಕುಡಿಕೊಂಡು ನಮ್ಮ ಮಾವನ ಊರಾದ ಗೂಡುರ ಗ್ರಾಮಕ್ಕೆ ದೇವಿಯ ಪೂಜೆಗೆ ಹೋಗಿ ಪೂಜೆ ಮುಗಿಸಿಕೊಂಡು ದಿನಾಂಕ 11-05-2016 ರಂದು ಬೆಳಗಿನ ಜಾವ 4 ಗಂಟೆಗೆ ನನ್ನ ಮೊಟಾರ ಸೈಕಲ್ ನಂ ಎಮ್ ಎಚ್ -46 ಎಎಸ್-1127 ನೇದ್ದರ ಮೇಲೆ ನಾನು ಮತ್ತು ನ್ನ ತಂಗಿ ನಮ್ಮೂರಾದ ಹೂತಪೇಟದಿಂದ ಮಾಹಾರಾಷ್ಟ್ರ ರಾಜ್ಯದ ಪನವೇಲಗೆ ಹೊರಟಿದ್ದು ಬೆಳಗಿನ ಜಾವ 5-30 ಗಂಟೆಯ ಸುಮಾರಿಗೆ  ಎನ್ ಎಚ್ 218 ರಸ್ತೆಯಲ್ಲಿ  ಸರಡಗಿ ಕ್ರಾಸ ದಾಟಿ ಹೊಗುತ್ತಿರುವಾಗ ಒಂದು ಸಿಲ್ವರ ಕಲರ ಕಾರ ಬಂದು ನಮ್ಮ ಮೋಟಾರ ಸೈಕಲ್ ಗೆ ಅಡ್ಡ ನಿಲ್ಲಿಸಿ ಕಾರಿನಿಂದ ಇಳಿದು ಬಂದ 4-5 ಜನರು ನನ್ನ ಹೆಲ್ಮೇಟ ತೆಗೆದು ಕೈಯಿಂದ ಕಪಾಳಕ್ಕೆ ಹೊಡೆದು ನನಗೆ ಮತ್ತು ನನ್ನ ತಂಗಿಗೆ ಕಾರ ಮೇ ಬೈಟ ಅಂತಾ ಅಂದರು ಆಗಾ ನಾನು ಅವರಿಗೆ ಏಲ್ಲಿಗೆ ಹೋಗಬೇಕು ಅಂತಾ ಕೇಳಿದಾಗ ಅವರು ನೀನು ಮೊದಲು ಕಾರಲ್ಲಿ ಕುಳಿತಿಕೋ ಅಂತಾ ಕೈಯಿಂದ ಹೊಡೆದು ನಮ್ಮಿಬ್ಬರನ್ನು ಕಾರಿನಲ್ಲಿ ಕೂಡಿಸಿದಾಗ ನಾನು ನನ್ನ ಮೊಟಾರ ಸೈಕಲ್ ಅಂತಾ ಕೆಳಲು  ಅವರು ನನಗೆ ನಿನ್ನ ಮೋಟಾರ ಸೈಕಲ ಹಿಂದೆ ಬರುತ್ತದೆ ಅಂತಾ ಹೇಳಿ ಕಾರಿನಲ್ಲಿದ್ದ ಒಬ್ಬ ವ್ಯಕ್ತಿ ಇಳಿದು ಹೋಗಿ ನಮ್ಮ ಹಿಂದೆ ಮೋಟಾರ ಸೈಕಲ ತೆಗೆದುಕೊಂಡು ಬರುತ್ತಿದ್ದನು ನಮ್ಮನ್ನು ಅವರ ಕಾರಿನಲ್ಲಿ ಮಧ್ಯದ ಶೀಟನಲ್ಲಿ ಕೂಡಿಸಿದ್ದು ದಾರಿ ಮಧ್ಯದಲ್ಲಿ ನಮಗೆ ಚಾಕು ತೋರಿಸಿ ಹೆದರಿಸಿ ನಮ್ಮ ಹತ್ತಿರ ಇದ್ದ ನಗದು ಹಣ 7,500/- ರೂ, ಎರಡು ಮೊಬೈಲ್, ಒಂದು ಯಮಹಾ ಮೋಟರ ಸೈಕಲ್  ಕಸಿದುಕೊಂಡು ನಮಗೆ ಹಾಗೆ ವಾಹನದಲ್ಲಿ ಸಿಂದಗಿ ತಾಲೂಕಿನ ಇಬ್ರಾಹಿಂಪೂರ ಸಿಮಾಂತರದಲ್ಲಿ ಇರುವ ಒಂದು ಖನಿ ಹತ್ತಿರ ಬಿಟ್ಟು ಅಲ್ಲಿಂದ ಹೋಗುವಾಗ ನಿವು ಯಾರಿಗಾದರು ಹೇಳಿದರೆ ನಿಮಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಹೆದರಿಸಿ ಹೋಗಿರುತ್ತಾರೆ ಸದರ ಕಾರ ನಂಬರ ಕೆಎ – 36 ಎನ್ – 3957 ಇದ್ದು ಸದರಿಯವರು 25 ರಿಂದ 30 ವರ್ಷ ವಯಸ್ಸಿನವರಿದ್ದು  ಹಿಂದಿ ಮರಾಠಿ ಭಾಷೆ ಮಾತನಾಡುತ್ತಿದ್ದರು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.   
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 11-05-2016 ರಂದು ಅಫಜಲಪೂರ ಪಟ್ಟಣದ ಅಕ್ಕಮಾಹಾದೇವಿಯ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಅಕ್ಕ ಮಾಹಾದೇವಿಯ ಗುಡಿಯ ಹತ್ತಿರ ಹೋಗಿ ಮರೆಯಾಗಿ ನಿಂತು ನೊಡಲು ಅಕ್ಕಮಾಹಾದೇವಿಯ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ 04 ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ಮೇಲೆ ದಾಳಿ ಮಾಡಿ ಜೂಜಾಡುತಿದ್ದ 04 ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ಬಿಂದು ತಂದೆ ಗುಂಡೇರಾವ ಕುಲಕರ್ಣಿ ಸಾ|| ಬ್ರಾಹ್ಮಣ ಗಲ್ಲಿ ಅಫಜಲಪೂರ 2) ರಾಜು ತಂದೆ ಶಂಕರ ಬಡಿಗೇರ ಸಾ|| ಅಫಜಲಪೂರ 3) ಮಂಜೂರ ತಂದೆ ಮುಸ್ತಾಪ್ ಪಟೇಲ ಸಾ|| ಲಿಂಬಿ ತೋಟ ಅಫಜಲಪೂರ 4) ರಾಜಶೇಖ ತಂದೆ ನೂರುದ್ದಿನ್ ಶೇಖ ಸಾ|| ಲಿಂಬಿತೋಟ ಅಫಜಲಪೂರ ಅಂತ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 2200/- ರೂ ಮತ್ತು 52 ಇಸ್ಪೆಟ ಎಲೆಗಳನ್ನು ವಶಪಡಿಸಿಕೊಂಡು ಅಫಜಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಸುರಕ್ಷತಾ ಕ್ರಮ ಕೈಕೊಳ್ಳದ ಕಾರಣ ಕೂಲಿ ಕಾರ್ಮಿಕ ಸಾವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಉತ್ಲಾಲ ತಂದೆ ರಬಿ ಹಲಾದಾರ ಸಾ:ಪಬ್ನಾಪಾಡಾ ತಾ:ಕಿಸಮತ್ ಸುಲ್ತಾನಪುರ ಜಿ:ಮಲದಾ ರಾಜ್ಯ ಪಶ್ಚಮ ಬಂಗಾಳ ಇವರು ಮತ್ತು ತಮ್ಮ ಕಿತಿಸ್ ಹಾಗು ಪ್ರಪುಲ @ ಗೋಪಿ 03 ಜನ ಕೂಡಿ ಕೂಲಿಕೆಲಸದ ಕುರಿತು ಕಲಬುರಗಿ ನಗರದ ಹೈಕೊರ್ಟ ಮುಂದುಗಡೆ ಇರುವ ಅಶೋಕಕುಮಾರ ಇವರ ಮನೆ ಕಟ್ಟುವ ಕೆಲದ ಕುರಿತು ಬಂದಿದ್ದು ದಿನಾಂಕ 11-05-2016 ರಂದು ಮುಂಜಾನೆ 10 ಗಂಟೆಯ ಸುಮಾರಿಗೆ ಪ್ರತಿ ದಿವಸದಂತೆ ಕೆಲಸಕ್ಕೆ ಬಂದು ಹಾಜರಾಘಿ ನಾನು ಮತ್ತು ನನ್ನ ತಮ್ಮ ಕಿತ್ತೇಶ ಇಬ್ಬರೂ ಮೊದಲು ಸ್ಟೇರ್ ಕೇಸ್ ಏರಿ ಮೇಲಿನ ಮಹಡಿಗೆ ಹೋಗಿದ್ದು ಅನಂತರ ಪ್ರಪುಲ್ಲ @ ಗೋಪಿ ಇತನು ಹಿಂದೆ ಸಾವಕಾಶವಾಗಿ  ಸಿಡಿ ಏರಿ ಬರುತ್ತಿದ್ದನು. ಅದೇ ವೇಳೆಗೆ ಬಿಲ್ಡಿಂಗ್ ನಲ್ಲಿ ಕೆಲಸ ಮಾಡುತ್ತಿದ್ದ ಜಯಚಂದ್ರ ರಾಠೋಡ ಇತನು ಲಿಫ್ಟ್ ಎಂಗಲ್ ಮೇಲೆ ಹತ್ತುವಾಗ ಮೇಲಿನ ಲೆಂಟಲಗೆ ತಾಗಿ ಲೆಂಟಲ್ ಉರುಳಿ ಕೆಳಗೆ ಬಿದಿದ್ದು ಈ ಲೆಂಟಲ್ ಸಿಡಿ ಏರಿ ಮೇಲೆ ಬರುತ್ತಿದ್ದ ಪ್ರಫೂಲ್ @ ಗೋಪಿಯ ತಲೆಯ ಹಿಂಬಾಗ ಯಡಕಿವಿಯ ಪಕ್ಕದಲ್ಲಿ ಪೆಟ್ಟು ಬಿದ್ದಿದ್ದು, ಆಗ ಅವನು ಚೀರಾಡುವಾಗ ನಾನು ಮತ್ತು ನನ್ನ ತಮ್ಮ ರಿತೇಶ ಓಡಿ ಬಂದೆವು ಮತ್ತು ಜಯ ಚಂದ್ರ ರಾಠೋಡ ಹಾಗೂ ಕಾಂಟ್ರೆಕ್ಟರ್ ( ಇಂಜೀನಿಯರ್) ವಿಶ್ವನಾಥ ಕಂಡೇರಪಲ್ಲಿ ಇವರೆಲ್ಲರೂ ಬಂದರು ಆಗ ಪ್ರಫೂಲ @ ಗೋಪಿಗೆ ನೋಡಲಾಗಿ ಎಡ ಕಿವಿಯ ಹಿಂದುಗಡೆ ತಲೆಯ ಹಿಂಬಾಗದಲ್ಲಿ ಭಾರಿ ರಕ್ತಗಾಯ ಯಡ ಮತ್ತು ಬಲಗಣ್ಣಿನ ಹತ್ತಿರ ಪೆಟ್ಟಾಗಿ ರಕ್ತ ಬಂದಿರುತ್ತದೆ. ಎಡಭುಜ ಹಾಗೂ ಬಲ ಭೂಜಕ್ಕೆ ಪೆಟ್ಟಗಿರುತ್ತದೆ. ಆಗ ಸುಮಾರು 10-15 ಗಂಟೆ ಎ.ಎಂ ಆಗಿತ್ತು ನಂತರ ನಮ್ಮ ಇಂಜಿನಿಯರ್ (ಕಾಂಟ್ರೆಕ್ಟರ್ ) ಇವರು ಒಂದು ಆಂಬುಲೆನ್ಸ ತರಿಸಿ ಪ್ರಫೂಲ್ @ ಗೋಪಿಗೆ ಕರೆದುಕೊಂಡು ಉಪಚಾರ ಕುರಿತು ಕಲಬುಗರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬಂದು ವೈದ್ಯಾಧಿಕಾರಿಗಳಿಗೆ ಬಂದು ತೋರಿಸಲಾಗಿ ಮೃತ ಪಟ್ಟಿರುವುದಾಗಿ ತಿಳಿಸಿದರು. ಪ್ರಫೂಲ್ @ ಗೋಪಿ ತಂದೆ ಗೋವಿಂದ ಅಲ್ದಾರ ಸದ್ಯ ನವಲಗಿ ಲೇಔಟ್, ಹೈಕೋರ್ಟ ಎದುರು ಕಲಬುರಗಿ, ಇತನು ಕೆಲಸಕ್ಕೆ ಬಂದು ಮೇಲಂತಸಕ್ಕೆ ಹೋಗುವಾಗ ಸಿಡಿ ಏರುತ್ತಿರುವಾಗ ಜಯಚಂದ್ರ ರಾಠೋಡ ಇತನು ಲಿಪ್ಟ್ ಎಂಗಲ್ ಎಳೆಯುತ್ತಿರುವಾಗ ಲಿಪ್ಟ ಎಂಗಲ್ ತಾಗಿ ಲಿಂಟಲ್ ಉರುಳಿ ಬಿದ್ದು ಪ್ರಫೂಲ್ @ ಗೋಪಿಯ ತೆಲೆಗೆ ಬಿದ್ದು, ಭಾರಿ ಘಾಯಗೊಂಡ  ಮೃತಪಟ್ಟಿರುತ್ತಾನೆ. ಸದರಿ ಜಯಚಂದ್ರನು ಲಿಪ್ಟ್ ಎಂಗಲ್ ಜಗ್ಗುವಾಗಿ ನಿಷ್ಕಾಳಜಿತನ ತೋರಿಸಿದ್ದು ಅಲ್ಲದೇ ಇಂಜೀನಿಯರ್ ಸಾಹೇಬರಾದ ವಿಶ್ವನಾಥ ಕಂಡೇರಪಲ್ಲಿ ಹಾಗೂ ಮನೆಯ ಮಾಲಿಕರಾದ ಅಶೋಕಕುಮಾರ  ತಂದೆ ಅಣ್ಣಾರಾವ ಹೋಳಕುಂದಿ ಇವರು ಕೆಲಸ ಮಾಡುವ ಕೂಲಿ ಕಾರ್ಮಿಮಕರಿಗೆ ಸರಿಯಾದ ಸುರಕ್ಷತಾ ವಿಧಾನಗಳನ್ನು ಕೈಕೊಳ್ಳದ್ದರಿಂದ   ಈ ಘಟನೆ ಸಂಭವಿಸಿರುತ್ತದೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.