POLICE BHAVAN KALABURAGI

POLICE BHAVAN KALABURAGI

06 April 2016

Kalaburagi District Reported Crimes

ಅಪಘಾತ ಪ್ರಕರಣ :
ಸಂಚಾರಿ ಠಾಣೆ : ದಿನಾಂಕ 08-02-2016 ರಂದು ಸಾಯುಂಕಾಲ 6=00 ಗಂಟೆ ಸುಮಾರಿಗೆ ರೇವಣಸಿದ್ದಯ್ಯಾ ಸ್ವಾಮಿ ಈತನು ತನ್ನ ಮೊ/ಸೈಕಲ್ ನಂ; ಕೆಎ 32 ಡಬ್ಲೂ 9856 ನೆದ್ದರ ಮೇಲೆ ಹಿಂದುಗಡೆ ಸಚೀನ ಈತನಿಗೆ ಕೂಡಿಸಿಕೊಂಡು ಗಂಜ ಬಸ್ ನಿಲ್ದಾಣ ದಿಂದ ಸುಪರ ಮಾರ್ಕೇಟ ರೋಡ ಕಡೆಗೆ ರೇವಣಸಿದ್ದಯ್ಯಾ ಈತನು ತನ್ನ ಮೋ/ಸೈಕಲ್ ನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ನೆಹರು ಗಂಜ ಎಸ್.ಬಿ.ಹೆಚ್. ಬ್ಯಾಂಕ ಹತ್ತಿರ ಇರುವ ಶಿವಾಜಿ ಕಟ್ಟಿಗೆ ಅಡ್ಡಾ ಎದುರಿನ ರೋಡ ಮೇಲೆ ಮೋ/ಸೈಕಲ್ ಸ್ಕಿಡ್ಡಾಗಿ ಮೋ/ಸೈಕಲ್ ಸಮೇತ ಕೆಳಗೆ ಬಿದ್ದಿದರಿಂದ ಸದರ ಅಪಘಾತದಲ್ಲಿ ಸಚೀನ ಈತನ  ತಲೆಗೆ ಭಾರಿ ರಕ್ತಗಾಯವಾಗಿ ಮೂಗಿನಿಂದ ಮತ್ತು ಕಿವಿಯಿಂದ ರಕ್ತ ಸ್ರಾವ ಆಗುತ್ತಿದ್ದರಿಂದ ಉಪಚಾರ ಕುರಿತು ಆನಂದ ತಂದೆ ಅಣ್ಣಪ್ಪಾ ಮತ್ತು ಸತ್ಯನಾರಾಯಣ ಇಬ್ಬರು ಕೂಡಿ ಒಂದು ಅಟೋರೀಕ್ಷಾದಲ್ಲಿ ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆಮಾಡಿರುತ್ತಾರೆ. ಸಚೀನ ಈತನು ರಸ್ತೆ ಅಪಘಾತದಲ್ಲಿ ಭಾರಿ ಗಾಯಹೊಂದಿ  ದಿನಾಂಕ: 08-02-2016 ರಿಂದ ಬಸವೇಶ್ವರ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ಇಂದು ದಿನಾಂಕ: 05/04/2016 ರಂದು ಬೆಳಿಗ್ಗೆ 5=30 ಎ.ಎಮ್.ಕ್ಕೆ ಅಪಘಾತದಲ್ಲಿ ಆದ ಗಾಯವು ಉಪಚಾರ ಫಲಕಾರಿಯಾಗದೆ ಮೃತ ಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 02-04-2016 ರಂದು ಕೆರಕನಹಳ್ಳಿ ಗ್ರಾಮದ ಅಗಸಿ ಹತ್ತಿರ ಇರುವ ಶಾಂತಾಬಾಯಿ ರವರ ಹೊಟೇಲ್ ಮುಂದೆ ನಾನು ನಿಂತಿದ್ದು ಅದೇ ಸಮಯಕ್ಕೆ ಸದರಿ ಮಹಾರಾಜ ಈತನು ತನ್ನ ಮೊ.ಸೈ ಮೇಲೆ ಬಂದು ಸದರಿ ಶಾಂತಾಬಾಯಿ ರವರ ಹೊಟೇಲ್ ಮುಂದೆ ನಿಲ್ಲಿಸಿ ನಿಂತಿದ್ದು ನಾನು ಅವನ ಹತ್ತಿರ ಹೋಗಿ ನಮಗೆ ಕೆಳದೆ ನಮ್ಮ ಹೊಲದ ಬಾಂದಾರಿ ಯಾಕೆ ಜೆ.ಸಿ.ಬಿ ಯಿಂದ ಹಡ್ಡಿದಿ ಅಂತ ಕೇಳಿದಕ್ಕೆ ನಾ ಏನಾದ್ರು ಮಾಡ್ತಿನಿ ಲೇ ಭೋಸಡಿ ಮಗನೆ ನೀ ಯಾರಲೆ ಕೇಳಕ್ಕೆ ಮಗನಾ ನಿಂದು ಬಾಳ ನಡದದ ಅಂತ ಅವಾಚ್ಯವಾಗಿ ಬೈಯುತ್ತಿದ್ದು ಆಗ ನಾನು ಊರಿನ ಹಿರಯರಿಗೆ ಕರೆದುಕೊಂಡು ಹೋಗಿ ತೊರಿಸ್ತಿನಿ ಅಂತ ಹೇಳಿದಕ್ಕೆ ತನ್ನ ಹತ್ತಿರ ಇರುವ ಸೈಕಲ್ ಚೈನ್ ದಿಂದ ಏಕಾ ಏಕಿ ನನ್ನ ತಲೆಗೆ & ಬೆನ್ನಿಗೆ ಹೊಡೆದು ರಕ್ತಗಾಯ & ಗುಪ್ತಗಾಯ ಪಡಿಸಿರುತ್ತಾರೆ ಆಗ ಅಲ್ಲೆ ಇದ್ದ ಶರಣಪ್ಪ ಹೂಗಾರ & ಭಾಗಪ್ಪ ಜಮಾದಾರ ಇವರು ಸದರಿ ಜಗಳವನ್ನು ಬಿಡಿಸಿದ್ದು ನಂತರ ಸದರಿ ಮಹಾರಾಜನು ಸುಳೆ ಮಗನೆ ಈಗ ನೀ ಉಳಕ್ಕೊಂಡಿದಿ ನೀನಗ ಜೀವ ಸಹಿತಾ ಬಿಡುವುದಿಲ್ಲ ಮಗನಾ ನಿನ್ನ ಸಾಯಿಸ್ತಿನಿ ಅಂತ ನನಗೆ ಜೀವ ಭಯ ಹಾಕಿರುತ್ತಾನೆ ಅಂತಾ ಶ್ರೀ ಟಾಘವೇಂದ್ರ ತಂದೆ ದತ್ತಪ್ಪಾ ಜಮಾದಾರ ಸಾ : ಕೆರಕನಳ್ಳಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ ವಶ :
ದೇವಲಗಾಣಗಾಪೂರ ಠಾಣೆ : ದಿನಾಂಕ 05-04-2016 ರಂದು ದೇವಲಗಾಣಗಾಪೂರದ ಗ್ರಾಮದ ಮಾಣಿಕೇಶ್ವರಿ ಚೌಕ ಮುಖಾಂತರ ಅಕ್ರಮವಾಗಿ 01 ಟಿಪ್ಪರ ಕಳ್ಳತನದಿಂದ ಮರಳು ತುಂಬಿ ಕೊಂಡು ಸಾಗಾಣಿಕೆ ಮಾಡುತ್ತಿದ್ದ ಬಗ್ಗೆ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ದೇವಲಗಾಣಗಾಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾಣಿಕೇಶ್ವವರಿ ಚೌಕ ಸಮೀಪ ಜೀಪ ನಿಲ್ಲಿಸಿ ನೋಡಲು ತೆಲ್ಲೂರ ಗ್ರಾಮದ ರೋಡಿನ ಮುಂದಿನಿಂದ 1) ಟಿಪ್ಪರ ನಂ ಕೆಎ 32 ಸಿ 5433 ನೇದ್ದರಲ್ಲಿ ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬಿ ಸಾಗಾಣಿಕೆ ಮಾಡುತ್ತಿದ್ದಾಗ ಟಿಪ್ಪರ ಮೇಲೆ ದಾಳಿ ಮಾಡಲು ಟಿಪ್ಪರ ಚಾಲಕ ತನ್ನ ಟಿಪ್ಪರನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋದನು . ನಂತರ ಪಂಚರ ಸಮಕ್ಷಮ ಸದರಿ ಟಿಪ್ಪರನ್ನು ಚೆಕ್ ಮಾಡಲು ಟಿಪ್ಪರ ನಂ 1) ಟಿಪ್ಪರ ನಂ ಕೆಎ 32 ಸಿ 5433 ಇದ್ದು ಸದರಿ ಟಿಪ್ಪರದಲ್ಲಿ ಮರಳು ತುಂಬಿದ್ದು ಸದರಿಯವನು ಅನದಿಕೃತವಾಗಿ ಕಳ್ಳತನದಿಂದ ಮರಳು ತಗೆದು ಟಿಪ್ಪರದಲ್ಲಿ ಸಾಗಿಸುತ್ತಿದ್ದಾಗ ಟಿಪ್ಪರನ್ನು ಪಂಚರ ಸಮಕ್ಷಮ 5-45 ಪಿ.ಎಂ ದಿಂದ 6-45 ಪಿ.ಎಂ ವರೆಗೆ ಟಿಪ್ಪರಗಳ ಜಪ್ತಿ ಪಂಚ ನಾಮೆ ಮೂಲಕ ವಶಕ್ಕೆ ತೆಗೆದುಕೊಂಡೆನು. ಸದರಿ ಟಿಪ್ಪರದಲ್ಲಿನ ಟಿಪ್ಪರ ಮರಳಿನ ಅಂದಾಜ ಕಿಮ್ಮತ್ತು 5000/- ರೂ ಟಿಪ್ಪರಿನ ವಾಹನದ ಅಂದಾಜು ಕಿಮ್ಮತ್ತು 6,0000/- ಲಕ್ಷ ರೂಪಾಯಿ ನೇದ್ದನ್ನು ವಶಪಡಿಸಿಕೊಂಡು ದೇವಲಗಾಣಗಾಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

05 April 2016

Kalaburagi District Reported Crimes

ಅಪಹರಣ ಪ್ರಕರಣ :
ಮಹಿಳಾ ಠಾಣೆ : ಶ್ರೀ ಶಿವಶಂಕರ ತಂದೆ ಶರಣಪ್ಪ ಪಾಸೋಡಿ ಪಾಟೀಲ ಸಾ: ಹಾವನೂರ ಹಾ;; ಶಾಂತಿ ನಗರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಲಿಖಿತ ಪಿರ್ಯಾದಿ ಸಲ್ಲಿಸಿದ ಸಾರಾಂಶವೆನೆಂದರೆ  ನಮ್ಮದು ಅವಿಭಕ್ತ ಕುಟುಂಬವಿದ್ದು ಒಟ್ಟು 6 ಜನ ಅಣ್ಣ ತಮ್ಮಂದಿರುತ್ತೇವೆ. 6 ಜನರಲ್ಲಿ ಬಸವರಾಜ ಮತ್ತು ಮಹಾಂತ ಇವರು ಮೃತಪಟ್ಟಿರುತ್ತಾರೆ. ಮಹಾಂತ ಇವರಿಗೆ ಪಾರ್ವತಿ ಮತ್ತು ಅನಿತಾ ಅಂತಾ ಇಬ್ಬರು ಹೆಣ್ಣು ಮಕ್ಕಳಿರುತ್ತಾರೆ. ಅನಿತಾ ಇವಳು ಗೋದುತಾಯಿ ಕಾಲೇಜಿನಲ್ಲಿ ಪಿ.ಯು.ಸಿ ಪ್ರಥಮ ವರ್ಷದಲ್ಲಿ ವಿದ್ಯಾಬ್ಯಾಸ ಮಾಡಿಕೊಂಡು ಶಾಂತಿ ನಗರದ ನಮ್ಮ ಮನೆಯಲ್ಲಿಯೇ ಇರುತ್ತಿದ್ದಳು. ನಮ್ಮ ಊರಿನ ಶಿವಯೋಗಪ್ಪ  ಕಲಶೆಟ್ಟಿ ಇತನ ಮಗನಾದ ಪ್ರಭಾಕರ ಇತನು ಯಾವಾಗಲು ನಮ್ಮ ಮನೆಯ ಮುಂದೆ ತಿರುಗಾಡುವುದು ನಮ್ಮ ಮನೆಯ ಸುತ್ತ ಮುತ್ತ ಅಡ್ಡಾಡುತ್ತಿದ್ದನು. ಈ ವಿಷಯ ಬಗ್ಗೆ ನಾವು ಎರಡು ಮೂರು ಸಲ ನಾನು ಪ್ರಭಾಕರ ಇತನಿಗೆ ನಮ್ಮ ಮನೆಯ ಮುಂದೆ ಏಕೆ ಅಡ್ಡಾಡುತ್ತಿಯಾ ಅಂತಾ ಕೇಳಿ ಬುದ್ದಿವಾದ ಹೇಳಿದ್ದು ಕೂಡ ಇರುತ್ತದೆ, ಪ್ರಭಾಕರ ಇತನು ನನ್ನ ಇನ್ನೊಬ್ಬ ತಮ್ಮನ ಮಕ್ಕಳಾದ ಶರಣಗೌಡ ವಿನೋದ ಮತ್ತು ವಿಶಾಲ ಇತನಿಗೆ ನೀನು ರಸ್ತೆ ಕಟ್ಟಿ ಆಳುತ್ತಿ ನಿಮಗೆ ನೋಡಿ ಕೊಳ್ಳುತ್ತೇನೆ ಅಂತಾ ಹೆದರಿಸಿದ್ದು ಕೂಡ ಇರುತ್ತದೆ.         ದಿನಾಂಕ 03.04.2016 ರಂದು  ತಮ್ಮ ಮಹಾಂತ  ಇತನ ಮಗಳಾದ ಅನಿತಾ ಇವಳು ಮದ್ಯಾಹ್ನ 3 ಗಂಟೆಯ ಸುಮಾರಿಗೆ ನಮ್ಮ ಮನೆಯ ಮುಂದೆ ಹೊರಗಡೆ ಗೇಟ ಹತ್ತಿರ ನಿಂತುಕೊಂಡಾಗ ಪ್ರಭಾಕರ ಇತನು ಬಂದವನೇ ತನ್ನ ಯಾವುದೋ ಮೋಟಾರ ಸೈಕಲ ಮೇಲೆ ಅನಿತಾ ಇವಳಿಗೆ ಕೂಡಿಸಿಕೊಂಡು ಹೊರಟು ಹೋದನು.  ನಾನು ಕೂಡಲೇ ಅವನಿಗೆ  ಹಿಂಬಾಲಿಸಿದಾಗ ಅವನು  ನನ್ನಿಂದ ತಪ್ಪಿಸಿಕೊಂಡು ಓಡಿ ಹೋದನು  ಕಾರಣ ಅಪ್ರಾಪ್ತ ವಯಸ್ಸಿನ ನನ್ನ ತಮ್ಮನ ಮಗಳಾದ ಅನಿತಾ ಇವಳಿಗೆ ಅಪಹರಿಸಿಕೊಂಡು ಹೋದ ಪ್ರಭಾಕರ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣಗಳು :
ಮಾಡಬೂಳ ಠಾಣೆ : ಶ್ರೀ ಮಲ್ಲಪ್ಪ ತಂದೆ ಕಲ್ಲಪ್ಪಾ ಮರಗುtiತಿ ಸಾ:ತೆಲಕೂರ ಇವರ ತಾಯಿ ಫೋನ ಮಾಡಿ ಊರಲ್ಲಿಯ ಜೀಪ ಮಾಡಿಕೊಂಡು ಬಾ ಕಾಮರೆಡ್ಡಿ ಆಸ್ಪತ್ರೆಗೆ ಹೋಗಿ ನಿಮ್ಮ ಅಣ್ಣ ನಾಗಪ್ಪ ಇತನಿಗೆ ಕರೆದುಕೊಂಡು  ಬರೋಣ ಅಂತ ತಿಳಿಸಿದ ಮೇರೆಗೆ ನಮ್ಮ ಗ್ರಾಮದ ಬಸವರಾಜ ಕೊಂಡಂಪಳ್ಳಿ ಇವರ ಜೀಪ ನಂ.ಎಂಎಚ-26-5146 ನೇದ್ದನ್ನು ಕಿರಾಯಿ ಮಾಡಿಕೊಂಡು ಫೀರ್ಯಾದಿ ಹಾಗೂ ಆತನ ಗೆಳೆಯನಾದ ಯಲ್ಲಾಲಿಂಗ ಹಾಗೂ ಜೀಪ ಚಾಲಕ ಶರಣಪ್ಪ ಆತನ ಗೆಳೆಯ ಅಂಬರೀಶ 4 ಜನರೂ ಕೂಡಿ 6 ಪಿಎಂಕ್ಕೆ ಕಾಮರೆಡ್ಡಿ ಆಸ್ಪತ್ರೆ ಕಲಬುರಗಿಗೆ ಬಂದು ನಂತರ 9 ಪಿಎಂದ ಸುಮಾರಿಗೆ ಫಿರ್ಯಾದಿಯ ಅಣ್ಣ ನಾಗಪ್ಪ ತಾಯಿ ಸರಸ್ವತಿ ಹಾಗೂ ಗೆಳೆಯ ಯಲ್ಲಾಲಿಂಗ ಹಾಗೂ ಅವರ ಸಂಗಡ ಬಂದಿದ ಅಂಬರೀಶ ಎಲ್ಲರೂ ಕೂಡಿ ಸದರಿ ಜೀಪನಲ್ಲಿ ಕುಳಿತುಕೊಂಡು ಹೊರಟಾಗ ಜೀಪನು ಶರಣಪ್ಪ ಇತನೂ ಚಲಾಯಿಸುತ್ತಿದ್ದು ಅಂದಾಜು 10 ಪಿಎಂದ ಸುಮಾರಿಗೆ ಮಲಕೂಡ ಹದ್ದಿಯ ಪೆಟ್ರೋಲ ಪಂಪ ಸ್ವಲ್ಪ ದಾಟಿದ ನಂತರ ಸದರಿ ಜೀಪ ಚಾಲಕನು ತನ್ನ ಜೀಪನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ನಡೆಸಿಕೊಂಡು ಹೋಗಿ ಎದುರಿಗೆ ಹೋಗುತ್ತಿದ್ದ ಒಂದು ಟ್ರ್ಯಾಕ್ಟರಗೆ ಹಿಂದುಗಡೆಯಿಂದ ಜೋರಾಗಿ ಡಿಕ್ಕಿ ಪಡಿಸಿ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಪಡಿಸಿ ನಿಲ್ಲಿಸಿ ಆಗ ಫಿರ್ಯಾದಿದಾರನಾದ ಮಲ್ಲಪ್ಪ ಇತನಿಗೆ ಬಲಭುಜಕ್ಕೆ,ಎಡಗಾಲ ತೊಡೆಗೆ ಗುಪ್ತಗಾಯವಾಗಿದ್ದು ಅವರ ತಾಯಿ ಸರಸ್ವತಿ ಇವಳಿಗೆ ತಲೆಯ ಹಿಂದೆ ಭಾರಿ ರಕ್ತಗಾಯ ಮತ್ತು ಎಡಗಣ್ಣಿಗೆ,ಎಡಕಪ್ಪಾಳಕ್ಕೆ ಕಂದುಗಟ್ಟಿದ ತೆರಚಿದ ಗಾಯಗಳಾಗಿದ್ದು, ಅಣ್ಣ ನಾಗಪ್ಪನಿಗೆ ಬಲ ಮುಖಕ್ಕೆ,ಹಣೆಗೆ ತಲೆಯ ಮಧ್ಯ ಭಾರಿ ರಕ್ತಗಾಯವಾಗಿದ್ದು, ಯಲ್ಲಾಲಿಂಗ ಇತನಿಗೆ ಎಡಗಾಲಿನ ತೊಡೆಯ ಮೂಳೆ ಮುರಿದು ಭಾರಿರಕ್ತಗಾಯ ಹಾಗೂ ಗುಪ್ತಗಾಯಗಳಾಗಿದ್ದು, ಅಂಬರೀಶನಿಗೆ ಎರಡು ಹಲ್ಲುಗಳು ಮುರಿದು ರಕ್ತಗಾಯವಾಗಿದ್ದು ಬಲ ತೊಡೆಗೆ ರಕ್ತಗಾಯವಾಗಿದ್ದು ನಂತರ ಟ್ರ್ಯಾಕ್ಟರನಲ್ಲಿ ಕುಳಿತ ಹೆಣ್ಣುಮಗಳಾದ ಲಕ್ಷ್ಮಿ ಸಾ:ಹೂಡಾ(ಬಿ) ಇವಳಿಗೆ ಬೆನ್ನಿಗೆ,ಟೊಂಕಕ್ಕೆ ಒಳಪೆಟ್ಟಾಗಿದ್ದು, ಹಾಗೂ ಕಾರಿನಲ್ಲಿ ಕುಳಿತ ಹೆಣ್ಣು ಮಗಳಾದ ಕಾಂಚನಾ ಗುತ್ತೆದಾರ ಇವಳಿಗೆ ಬಲ ತೊಡೆಗೆ ಎಡಪಾದಕ್ಕೆ ರಕ್ತಗಾಯವಾಗಿದ್ದು ನಂತರ ರಸ್ತೆಗೆ ಹೋಗಿ ಬರುವವರು ಜಿವಿಆರ ಅಂಬುಲೇನ್ಸ ಹಾಗೂ 108ಗೆ ಫೋನ ಮಾಡಿ ತಿಳಿಸಿದರಿಂದ ನಮ್ಮಗೆಲ್ಲರಿಗೂ ಅದರಲ್ಲಿ ಹಾಕಿಕೊಂಡು ಸರರ್ಕಾರಿ ಆಸ್ಪತ್ರೆ ಕಲಬುರಗಿಗೆ ಬಂದಾಗ ಮಾನ್ಯ ವೈದ್ಯಾಧಿಕಾರಿಗಳು ಫಿರ್ಯಾದಿದಾರನ ತಾಯಿ ಸರಸ್ವತಿ ಹಾಗೂ ಅಣ್ಣನಾದ ನಾಗಪ್ಪ ಇವರನ್ನು ಚಕ್ ಮಾಡಿ ನೋಡಲಾಗಿ ಸದರಿಯವರು ಮೃತಪಟ್ಟಿರುತ್ತಾರೆ ಅಂತ ತಿಳಿಸಿದ್ದು  ಫಿರ್ಯಾದಿದಾರನಾದ ಮಲ್ಲಪ್ಪ ಇತನೂ ಹೋರ ರೋಗಿ ಅಂತ ಚಿಕಿತ್ಸೆ ಪಡೆದುಕೊಂಡಿದ್ದು ಅಂಬರೀಶ,ಯಲ್ಲಾಲಿಂಗ ಮತ್ತು ಲಕ್ಷ್ಮಿ ಸದರಿಯವರು ಆಸ್ಪತ್ರೆಯಲ್ಲಿ ದಾಖಲಾಗಿದ್ದು ಯಲ್ಲಾಲಿಂಗ ಹೆಚ್ಚಿನ ಉಪಚಾರ ಕುರಿತು ಕಾಮರೆಡ್ಡಿ ಆಸ್ಪತ್ರೆಗೆ ಕಳಿಸಿದ್ದು ಕಾಂಚನಾ ಎಂಬುವವರಿ ಬಸವೇಶ್ವರ ಆಸ್ಪತ್ರೆಗೆ ಸೇರಿಕೆಯಾಗಿದ್ದು ಇರುತ್ತದೆ. ಸದರಿ ಜೀಪ ಚಾಲಕನು ತನ್ನ ಜೀಪನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ನಡೆಸಿಕೊಂಡು ಹೋಗಿ ಎದುರಿಗೆ ಹೋಗುತ್ತಿದ್ದ ಒಂದು ಟ್ರ್ಯಾಕ್ಟರ ನಂ ಕೆಎ-32 ಟಿಎ-7401 ನೇದ್ದಕ್ಕೆ ಹಿಂದುಗಡೆಯಿಂದ ಜೋರಾಗಿ ಡಿಕ್ಕಿ ಪಡಿಸಿ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಮತ್ತೊಂದು ಕಾರ ನಂ.ಕೆಎ-32 ಎನ-4757 ನೇದ್ದಕ್ಕೆ  ಡಿಕ್ಕಿ ಪಡಿಸಿ ಭಾರಿ ರಕ್ತಗಾಯ,ಗುಪ್ತಗಾಯ,ಸಾದಾಗಾಯ ಪಡಿಸಿ ತನ್ನ ಜೀಪನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ದಿನಾಂಕ 03.04.2016 ರಂದು ಸಾಯಂಕಾಲ 06:30 ಗಂಟೆಯ ಸುಮಾರಿಗೆ ಜೇವರಗಿಯ ಕಡೆಗೆ ಬರುವ ಕುರಿತು ಬಿ.ಎನ್. ಪಾಟೀಲ್ ಇವರ ದಾಲ್‌ ಮಿಲ್‌ ಎದುರುಗಡೆ ಜೇವರಗಿ ಶಹಾಪುರ ರಸ್ತೆ ಮೆಲೆ ಕಿರಣ ಈತನು ನಡೆಸುತ್ತಿದ್ದ ಮೋಟಾರು ಸೈಕಲ್ ನಂ ಕೆ.ಎ32ಈಕೆ1767 ನೇದ್ದರ ಮೇಲೆ  ನಾನು ಮತ್ತು ಈಶ್ವರ ಮೂವರು ಕುಳಿತುಕೊಂಡು ಬರುತ್ತಿದ್ದಾಗ ಅದೇ ವೇಳೆಗೆ ಜೇವರಗಿ ಕಡೆಯಿಂದ ಒಂದು ಮಿನಿ ಲಾರಿ ನಂ ಕೆ.ಎ37ಎ3370 ನೇದ್ದರ ಚಾಲಕನ ತನ್ನ ಮಿನಿ ಲಾರಿಯನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನಾವು ಕುಳಿತುಕೊಂಡುಹೋಗುತ್ತಿದ್ದ ಮೋಟಾರು ಸೈಕಲ್‌ಗೆ ಎದುರಾಗಿ ಡಿಕ್ಕಿ ಪಡಿಸಿದ್ದರಿಂದ ನಮ್ಮೆಲ್ಲರಿಗೆ ಭಾರಿ ಗಾಯಗಳಾಗಿದ್ದು ಅಪಘಾತದ ನಂತರ ಸದರಿ ಮಿನಿ ಲಾರಿ ಚಾಲಕನು ತನ್ನ ಲಾರಿಯನ್ನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಶ್ರೀ ಗೌತಮ ತಮದೆ ಲೋಕೇಶ ಕೊಡಚಿ ಸಾ : ಶಾಸ್ತ್ರಿ ಚೌಕ್ ಜೇವರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

04 April 2016

Kalaburagi District Reported Crimes

ಸಿಡಿಲು ಬಡಿದು ಸಾವು ಪ್ರಕರಣ :
ಫರತಾಬಾದ ಠಾಣೆ : ದಿನಾಂಕ: 03/04/2016 ರಂದು ಸಾಯಂಕಾಲ 4:15 ಗಂಟೆಯ ಸುಮಾರಿಗೆ ಸೀತನೂರ ಗ್ರಾಮದ  ಹೊಲ ಸರ್ವೇ ನಂ 3 ರಲ್ಲಿ ಬೇವಿನ ಗಿಡದ ಕೆಳೆಗೆ ಹಾಕಿರುವ ಉಳ್ಳಾಗಡ್ಡಿಯ ಮೇಲೆ ತಾಡಪತ್ರಿ ಹಾಕಲು ಹೋದಾಗ ಅದೇ ವೇಳೆಗೆ ಒಮ್ಮೇಲೆ ಅಕಾಲಿಕವಾಗಿ ಮಳೇ ಗಾಳಿ  ಗುಡುಗು ಸಿಡಿಲು ಬಂದು. ಅಲ್ಲಿ ಕೆಲಸ ಮಾಡುತ್ತಿದ್ದ ಸದರಿ ಮೃತ ಭೀಮ್ಮಪ್ಪಾ ತಂದೆ ಶರಣಪ್ಪ ನಾಯ್ಕೋಡಿ ಇವರಿಗೆ ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಶರಣಪ್ಪಾ ತಂದೆ ಮರೇಣ್ಣಾ ನಾಯ್ಕೋಡಿ ಸಾ:ಕದ್ದರಗಿ ತಾ:ಚಿತ್ತಾಪೂರ ಹಾ::ಸೀತನೂರ ತಾ: ಜಿ: ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಸ ಮಾಡಿದ ಪ್ರಕರಣ :
ಜೇವರಗಿ ಠಾಣೆ : ದಿನಾಂಕ 22.03.2016 ರಂದು 10:30 ಗಂಟೆಯಿಂದ 16:00 ಗಂಟೆಯ ಮಧ್ಯದ ಅವಧಿಯಲ್ಲಿ 1) ಸೋಮಲಿಂಗಪ್ಪ ತಂದೆ ಬಸವಂತರಾಯ ಹೇರೂರ 2) ಹುಲಕಂಠರಾಯ ತಂದೆ ಬಸವಂತರಾಯ ಹೇರೂರ 3) ಚಂದ್ರಾಮಪ್ಪ ತಂದೆ ರಾವುತಪ್ಪ ಚೀರಲದಿನ್ನಿ ಸಾ|| ಮೂರು ಜನರು ಮುರಗಾನುರ 4) ಪ್ರೇಮನಗೌಡ ತಂದೆ ಕುಪ್ಪನಗೌಡ ಸಾ|| ನೆಲೋಗಿ  ಎಲ್ಲರು ಕೂಡಿಕೊಂಡು ಜೇವರಗಿ ಪಟ್ಟಣದ ಉಪ ನೊಂದವಣಾಧೀಕಾರಿ ಕಾರ್ಯಾಲಯದಲ್ಲಿ ವಂಚನೆಯಿಂದ ಮತ್ತು ನಂಬಿಕೆ ದ್ರೋಹ ಮಾಡಿ ಬೇರೆಯವರಂತೆ ನಟನೆ ಮಾಡಿ ನನಗೆ ಮೋಸ ಮಾಡಿ ನನ್ನ ಹೆಸರಿನಲ್ಲಿ ಇದ್ದ ಮುರಗಾನೂರ ಸೀಮಾಂತರದ ಹೊಲದ ಸರ್ವೇ ನಂ 3/4 ನೇದ್ದರಲ್ಲಿನ 3 ಎಕರೆ 3 ಗುಂಟೆ ಜಮಿನನ್ನು ತಮ್ಮ ಹೆಸರಿಗೆ ನೊಂದಾವಣೆ ಮಾಡಿಕೊಂಡು ಮೋಸ ಮಾಡಿರುತ್ತಾರೆ ಅಂತಾ ಶ್ರೀ ಕಾಮಣ್ಣ ತಂದೆ ಸಾಯಬಣ್ಣ ಮಾದರ್ ಸಾ : ಮುರಗಾನೂರ ತಾ: ಜೇವರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣುಮಗಳು ಕಾಣೆಯಾದ ಪ್ರಕರಣ :
ಆಳಂದ ಠಾಣೆ : ಶ್ರೀ ಪ್ರಭುಲಿಂಗ  ತಂದೆ ಮಲ್ಲಪ್ಪ ದೊಡ್ಡಮನಿ ಸಾ:ಜಂಬಗಾ(ಜೆ) ತಾ: ಆಳಂದ ರವರ ಚಿಕ್ಕ ಮಗಳಾದ  ಕಾಂಚನಾ ವಯ: 19 ವರ್ಷ ಇವಳು 10ನೇ ತರಗತಿಯಲ್ಲಿ ಅನುತಿರ್ಣ ವಾಗಿದ್ದರಿಂದ ಶಾಲೆ ಬಿಡಿಸಿ ನಮ್ಮೂಂದಿಗೆ ಕೂಲಿ ಕೆಲಸ ಮಾಡುತ್ತಾ ಬಂದಿದ್ದು ದಿನಾಂಕ:30/03/2016 ರಂದು  ಬುಧುವಾರ ಬೆಳಿಗ್ಗೆ 10.30 ಗಂಟೆ ಸುಮಾರಿಗೆ ಮಗಳು ಕಾಂಚನಾ ಇವಳು ಮನೆಯಿಂದ ಸಂಡಾಸಕ್ಕೆ ಹೋಗಿ ಬರುತ್ತೇನೆ ಅಂತಾ ನನ್ನ ಹೆಂಡತಿ ನಂದಾಬಾಯಿಗೆ ತಿಳಿಸಿ ಹೋದಳು  ಆಕೆಯ ಹೋಗಿ 2 ಗಂಟೆ ಆದರೂ ಮನೆಗೆ ಬರದಿದ್ದರಿಂದ ನಾನು ನಮ್ಮ ಊರಲ್ಲಿ ಆಕೆಯ ಗೆಳತಿಯ ಮನೆಗೆ ಹೋಗಿ ವಿಚಾರಿಸಿದ್ದು ಬಂದಿರುವುದಿಲ್ಲ ಅಂತಾ ತಿಳಿಸಿರುತ್ತಾರೆ. ನಾನು ಹಾಗೂ ನನ್ನ ಹೆಂಡತಿ ಕೂಡಿ ಸಂಬಂಧಿಕರಿಗೆ ಪೋನ ಮುಖಾಂತರ ವಿಚಾರಿಸಿದ್ದು ಬಂದಿರುವುದಿಲ್ಲಾ. ಅಂತಾ ತಿಳಿಸಿರುತ್ತಾರೆ. ನಾವು ಎಲ್ಲಾ ಕಡೆಗೆ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.