POLICE BHAVAN KALABURAGI

POLICE BHAVAN KALABURAGI

21 March 2016

Kalaburagi District Reported Crimes

ಅ ಸ್ವಾಭಾವಿಕ ಸಾವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ. ಬಸವರಾಜ ತಂದೆ ವಿಠಲರಾವ ಬಿರಾದರ ವಿಳಾಸ; ಆಳಂದ ಚಕ್ಕ ಪೋಸ್ಟ ಹತ್ತಿರ ಕಲಬುರಗಿ ಇವರು ದಿನಾಂಕ.1-3-2016 ರಂದು  ತಾನು ತನ್ನ ಗೆಳೆಯಸಾಹೇಬ ಪಾಶಾ ತಂದೆ ನಬಿಶಾ ಮಕನದಾರ ಇಬ್ಬರುಮೋಟಾರ ಸೈಕಲ್ ಮೇಲೆ ಮುಂಜಾನೆ ಸಾವಳಗಿ ಗ್ರಾಮಕ್ಕೆ  ಹೋಗಿ ಮರಳಿ ಬರುತ್ತಿರುವಾಗ ಬಬಲಾದ ಗ್ರಾಮದ ಮುಖಾಂತರ ಬರುತ್ತಿರುವಾಗ ಬಬಲಾದ ಊರ ಸಮೀಪ ಮಠದ ಮುಂದುಗಡೆ ಮೇನ ರೋಡಿನ ಪಕ್ಕದಲ್ಲಿ ಒಬ್ಬ ವಯಸ್ಸಾದ ಮುದುಕ ಅಪರಿಚಿತ ವ್ಯಕ್ತಿ ವಯಸ್ಸು ಅಂದಾಜು 60-65 ವರ್ಷ ಹೆಸರು ವಿಳಾಸ ಗೊತ್ತಾಗಿ ರುವದಿಲ್ಲಾ ಸದರಿ ವ್ಯಕ್ತಿಯು ಯಾವುದೋ ಕಾಯಿಲೆಯಿಂದ ಬಳಲುತಿದ್ದು  ದಿನಾಂಕ. 1-3-2016 ರಂದು ಉಪಚಾರ ಕುರಿತು ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಸಿದ್ದು,ಉಪಚಾರದಲ್ಲಿ ಗುಣ ಮುಖನಾಗೆದೆ ದಿನಾಂಕ 19-3-2016ರಂದು4-20 ಪಿ.ಎಂ.ಕ್ಕೆ. ಮೃತ ಪಟ್ಟಿರುತ್ತಾನೆ, ಸದರಿ ಅಪರಿಚಿತ ವ್ಯಕ್ತಿಯ ಮರಣದಲ್ಲಿ ಯಾರ ಮೇಲೆ ಯಾವುದೇ ರೀತಿಯ ಸಂಶಯ ಫಿರ್ಯಾದಿ ಇರುವದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಕೊಟ್ಟ ಫಿರ್ಯಾದಿ ಸಾರಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಮುಧೋಳ ಠಾಣೆ : ದಿನಾಂಕ: 20-03-2016 ರಂದು ಸಾಯಂಕಾಲ 5:30 ಗಂಟೆ ಸುಮಾರಿಗೆ ನಾನು ನನ್ನ ಅಂಗಡಿಯಲ್ಲಿ ಇದ್ದಾಗ ನನ್ನ ಹೆಂಡತಿಯ ಅಣ್ಣನಾದ ಮೊಹಮ್ಮದ ನಜಮೊದ್ದೀನ ತಂದೆ ಅಬ್ದುಲ್ ಖಾದರ ಇತನು ಕಲಬುರಗಿಯಿಂದ ನನಗೆ ಪೋನ ಮಾಡಿ ತಿಳಿಸಿದ್ದೇನೆಂದರೆ, ನಮ್ಮ ತಮ್ಮನಾದ ಮೊಹಮ್ಮದ ಅಬ್ದುಲ್ ಕರೀಮ ಇತನಿಗೆ ಮೊತಕಪಲ್ಲಿ ಗಾಡದಾನ ಕ್ರಾಸ ಹತ್ತಿರ ಎಕ್ಸಿಡೆಂಟ ಆಗಿ ಇತನಿಗೆ ಗಾಯ ಆಗಿರುತ್ತದೆ ಅಂತಾ ಗೊತ್ತಾಗಿರುತ್ತದೆ ಆದ್ದರಿಂದ ನೀನು ಬೇಗೆ ಅಲ್ಲಿಗೆ ಹೋಗು ಅಂತಾ ಪೋನ ಮಾಡಿ ತಿಳಿಸಿದ್ದು, ತಕ್ಷಣ ನಾನು ಗುರುಮಿಠಕಲ್ ದಿಂದ ಇಂದು ಸಾಯಂಕಾಲ 6:15 ಗಂಟೆ ಸುಮಾರಿಗೆ ಮೋತಕಪಲ್ಲಿ ಗಾಡದಾನ ಕ್ರಾಸ ಹತ್ತಿರ ಬಂದು ನೋಡಲಾಗಿ ಜನರು ನೇರೆದಿದ್ದು ರಸ್ತೆಯ ಪಕ್ಕದ ತೆಗ್ಗಿನಲ್ಲಿ ನನ್ನ ಹೆಂಡತಿಯ ತಮ್ಮನಾದ ಮೊಹಮ್ಮದ ಅಬ್ದುಲ್ ಕರೀಮ ತಂದೆ ಅಬ್ದುಲ್ ಖಾದರ ಇತನು ಗಾಯಹೊಂದಿ ಬಿದ್ದಿದ್ದು ನಾನು ಹತ್ತಿರ ಹೋಗಿ ನೊಡಲಾಗಿ ಇತನಿಗೆ ಬಲಗಾಲ ತೊಡೆಗೆ ಹಾಗೂ ಇತರೆ ಕಡೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿದ್ದು ಅಲ್ಲಿಯೆ ರಸ್ತೆಯಲ್ಲಿಯೆ ಅಪಘಾತಪಡಿಸಿದ ಟಿಪ್ಪರ ನಿಂತಿದ್ದು ಅದರ ನಂಬರ ನೊಡಲಾಗಿ ಕೆಎ-33-1290 ಅಂತಾ ಇದ್ದಿದ್ದು ಹಾಗೂ ಸದರಿ ಮೃತ ಮೊಹಮ್ಮದ ಅಬ್ದುಲ್ ಕರೀಮ ಇತನ ಮೊ ಸೈ ನಂಬರ ಕೆಎ-33 ಜೆ-1196 ನೇದ್ದು ಅಲ್ಲಿಯೆ ರಸ್ತೆಯ ಬದಿಯಲ್ಲಿ ಬಿದ್ದಿದ್ದು ಈ ಬಗ್ಗೆ ಅಲ್ಲಿದ್ದ ಜನರಿಗೆ ವಿಚಾರಿಸಲಾಗಿ ಪ್ರತ್ಯಕ್ಷ ದರ್ಶಿಗಳಾದ ವೆಂಕ್ಯಾನಾಯಕ ತಂದೆ ಚಂದ್ರ್ಯಾನಾಯಕ ಚವ್ಹಾಣ ಸಾ|| ಮೋತಕಪಲ್ಲಿ ತಾಂಡಾ ಇತನು ತಿಳಿಸಿದ್ದೇನೆಂದರೆ, ಇಂದು ಸಾಯಂಕಾಲ 5:15 ಗಂಟೆ ಸುಮಾರಿಗೆ ನಾನು ಹಾಗೂ ನಮ್ಮೂರ ಶ್ರೀನಿವಾಸ ತಂದೆ ಹುಸೇನಪ್ಪ ಹಡಪದ ಇಬ್ಬರೂ ಇಲ್ಲಿ ಗಾಡದಾನ ಕ್ರಾಸ ಹತ್ತಿರ ಇರುವ ಪಾಂಡುನಾಯಕ ತಂದೆ ರಾಮುನಾಯಕ ಇವರ ಹೊಟೇಲ ಮುಂದುಗಡೆ ಚಹಾ ಕುಡಿಯುತ್ತಾ ನಿಂತಿದ್ದಾಗ ವೆಂಕಟಾಪೂರ ಕಡೆಯಿಂದ ಮೃತ ವ್ಯಕ್ತಿಯು ತನ್ನ ಮೊಟಾರ ಸೈಕಲ ಮೇಲೆ ಗುರುಮಿಠಕಲ್ ಕಡೆಗೆ ಹೋಗುತ್ತಿದ್ದನು ಗಾಡದಾನ ಕಡೆಯಿಂದ  ಒಂದು ಟಿಪ್ಪರ ನಂಬರ ಕೆ ಎ-33-1290 ನೇದ್ದರ ಚಾಲಕನು ತನ್ನ ಟಿಪ್ಪರನ್ನು ಅತೀ ವೇಗವಾಗಿ ಮತ್ತು ನಿಸ್ಕಾಳಜಿತನದಿಂದ ನಡೆಸುತ್ತಾ ಬಂದು ಮೊತಕಪಲ್ಲಿ ಗಾಡದಾನ ಕ್ರಾಸ ಹತ್ತಿರ ರಸ್ತೆಯ ಎಡಬದಿಯಿಂದ ಹೊಗುತ್ತಿದ್ದ ಸದರಿ ಮೊಟಾರ ಸೈಕಲ ಚಾಲಕನಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿದ್ದು ಇದರಿಂದ ಮೊಟಾರ ಸೈಕಲ ಚಾಲಕನು ಮೊಟಾರ ಸೈಕಲ ಸಮೇತ ರಸ್ತೆಯ ಬದಿಯ ತೆಗ್ಗಿನಲ್ಲಿ ಬಿದ್ದಿದ್ದು ನಾವು ಓಡುತ್ತಾ ಹೋಗಿ ಸದರಿ ವ್ಯಕ್ತಿಗೆ ನೊಡಲಾಗಿ ಇತನಿಗೆ ಬಲಗಾಲ ತೊಡೆಗೆ ಹಾಗೂ ಎಡಗಾಲಿಗೆ ಹೊಟ್ಟೆಗೆ ಇತರೆ ಕಡೆಗಳಲ್ಲಿ ಭಾರಿ ರಕ್ತಗಾಯ ಗುಪ್ತಗಾಯಗಳಾಗಿ ಒದ್ದಾಡುತ್ತಿದ್ದು ನಾವು 108 ಅಂಬುಲೇನ್ಸಗೆ ಪೋನ ಮಾಡಿ ಕರೆಸುವಷ್ಟರಲ್ಲಿ ಸದರಿ ವ್ಯಕ್ತಿಯು ಇಲ್ಲಿಯೆ ಸ್ಥಳದಲ್ಲಿ ಮೃತಪಟ್ಟಿದ್ದು ಇರುತ್ತದೆ. ಅಂತಾ  ಅಸ್ಪಕಅಹೀಮದ ತಂದೆ ಅಬ್ದುಲ್ ಸಲಾಮ ಚಾಂದ ಸಾ|| ಪಂಚಾಯತ ಮೊಹಲ್ಲಾ ಗುರುಮಿಠಕಲ್  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

20 March 2016

Kalaburagi District Press Note


Kalaburagi District Reported Crimes

ಕೊಲೆ ಪ್ರಕರಣ :
ಕಾಳಗಿ ಠಾಣೆ : ಶ್ರೀಮತಿ ಶೋಭಾಬಾಯಿ ಗಂಡ ರಮೇಶ ಜಾಧವ ಸಾ:ಕಿಂಡಿ ತಾಂಡಾ ಕಾಳಗಿ ಇವರು ನನ್ನ ತವರು ಮನೆ ಚಿಂಚೋಳಿ ತಾಲೂಕಿನ ಐನೋಳ್ಳಿ ತಾಂಡಾ ಇದ್ದು, ನನ್ನ ತಂದೆ, ತಾಯಿ ಸುಮಾರು 10 ವರ್ಷಗಳ ಹಿಂದೆ ಕಾಳಗಿಯ ಕಿಂಡಿ ತಾಂಡಾದ ರಮೇಶ ಜಾಧವ ರವರಿಗೆ ಕೊಟ್ಟು ಮದುವೆ ಮಾಡಿದ್ದು, ಈಗ ನನಗೆ 1) ದೇವಿದಾಸ ವಯ 8 ವರ್ಷ 2) ದಿವ್ಯಾ ವಯ 6 ವರ್ಷ ಹಾಗೂ 3) ದರ್ಶನ ವಯ 2 ವರ್ಷ ಹೀಗೆ 2 ಗಂಡು, 1 ಹೆಣ್ಣು ಮಗು ಇದ್ದು, ನಾವು ಗಂಡ, ಮಕ್ಕಳು ಮತ್ತು ಅತ್ತೆ ಮಾವಂದಿರೊಂದಿಗೆ ಸಂಸಾರದಲ್ಲಿ ಅನೋನ್ಯವಾಗಿ ಇರುತ್ತೆವೆ. ನನ್ನ ಗಂಡನ ಅಣ್ಣ ತಮ್ಮಕೀ ಫೈಕಿ ರತನ ಎಂಬಾತನು ಬೆಂಗಳೂರಿನಲ್ಲಿ ಜೆ.ಸಿ.ಬಿ ಮೇಲೆ ಚಾಲಕ ಕೆಲಸ ಮಾಡಿಕೊಂಡಿದ್ದು, ಆಗಾಗ ನಮ್ಮ ಮನೆಗೆ ಬಂದು ಹೊಗುತ್ತಿದ್ದ. ಹೀಗಾಗಿ ಮಾತಿಗೆ ಮಾತು ಬೆಳೆಸಿ ಸುಮಾರು 3 ತಿಂಗಳಿಂದ ಅನೈತಿಕವಾಗಿ ಸಂಬಂಧ ಮಾಡಿಕೊಂಡಿದ್ದು ದಿನಾಂಕ 03/03/2016 ರಂದು ರಾತ್ರಿ 10-00 ಘಂಟೆ ಸುಮಾರಿಗೆ ನಾನು ನನ್ನ ಗಂಡ ಮಕ್ಕಳು ಒಂದು ಕಡೆ ಹಾಗೂ ಅತ್ತೆ ಮಾವ ಹೊರಗಡೆ ಮಲಗಿಕೊಂಡಿದ್ದು, ನಿದ್ರಾವಸ್ಥೆಯಲ್ಲಿದ್ದೆವು. ರಾತ್ರಿ 11-00 ಘಂಟೆ ಸುಮಾರಿಗೆ ರತನ ತಂದೆ ಪೋಮು ಜಾಧವ ಇತನು ನಮ್ಮ ಮನೆ ಒಳಗಡೆ ಬಂದು ನನ್ನ ಕೈ ಹಿಡಿದು ಬಾಜು ಎಳೆದುಕೊಂಡಾಗ ನನ್ನ ಗಂಡ ಎಚ್ಚೆತ್ತು ನೋಡಿ ಬೋಸಡಿ ಮಗನೆ ಇದರ ಸಲುವಾಗಿ ನೀನು ನನಗೆ ಸರಾಯಿ ಕುಡಿಸಿದ್ದು, ಬೋಸಡಿ ಮಗನೆ ಅಂತ ಬೈಹತ್ತಿದಾಗ ನನ್ನ ಗಂಡನಿಗೆ ಕೆಳಗಡೆ ಹಾಕಿ ಆತನ ಎದೆ ಮೇಲೆ ಕುಳಿತು ತಲೆ ದಿಂಬು ನನ್ನ ಗಂಡನ ಮುಖದ ಮೇಲೆ ಒತ್ತಿ ಹಿಡಿದ ಅದಕ್ಕೆ ನಾನು ಬಿಡಿಸಲು ಹೋದರೆ ನನಗೆ ಜೋರಾಗಿ ಬಲಗೈಯಿಂದ ದಬ್ಬಿ ಏ ರಂಡಿ ನೀನು ಬಿಡಿಸಲು ಬಂದರೆ ನಿನ್ನ ಜೀವ ತೆಗೆಯುತ್ತೆನೆ ಅಂತ ಅಲ್ಲಿಯೇ ಚೂರಿ ತೆಗೆದುಕೊಂಡು ಈ ವಿಷಯ ಏನಾದರೂ ಹೇಳಿದ್ದಿ ಅಂದರೆ ಜೀವ ತೆಗೆಯುತ್ತೆನೆ ಅಂತ ಜೀವದ ಭಯ ಹಾಕಿದ ಅಷ್ಟೊತಿಗೆ ನನ್ನ ಗಂಡ ಉಸಿರು ಗಟ್ಟಿ ಮೃತಪಟ್ಟಿದ್ದನು. ನನ್ನ ಗಂಡ ವಾಂತಿ ಮಾಡಿಕೊಂಡು ಸತ್ತಿರುವಂತೆ ರತನ ಇತನು ಆತನ ಬಳಿ ಅನ್ನ ಸಾಂಬಾರ ಕಲಿಸಿ ಗಂಡನ ಬಾಯಿ ಮೇಲೆ ಹಾಕಿದನು.ನನ್ನ ಗಂಡ ಸರಾಯಿ ಕುಡಿದು ವಾಂತಿ ಮಾಡಿಕೊಂಡು ಸತ್ತಿರುತ್ತಾನೆ ಅಂತ ಹೇಳು ಈ ವಿಷಯ ಯಾರಿಗಾದರೂ ಹೇಳಿದರೆ ನಿನಗೆ ಮತ್ತು ನಿನ್ನ ಮಕ್ಕಳಿಗೂ ಜೀವಂತ ಬಿಡುವದಿಲ್ಲ ಅಂತ ವದರಾಡುತ್ತಾ ಇರುವಾಗ ಗದ್ದಲ ಕೇಳಿ.ನನ್ನ ಹಿರಿ ಮಗ ದೇವಿದಾಸ ಮತ್ತು ನಮ್ಮ ಅತ್ತೆ ಭೀಮಬಾಯಿ ಎದ್ದು ಏನಾಗಿದೇ ಏನಾಗಿದೆ ಅಂತ ಕೆಳಲು ರತನ ಇತನು ಓಡಿ ಹೋಗಿದ್ದು. ಹೋರಗಡೆ ರಾಜು ತಂದೆ ಕಾಸು, ಗೋಪಾಲ ತಂದೆ ಶಂಕರ ಮತ್ತು ಉಮೇಶ ತಂದೆ ಶಂಕರ ರವರು ನೋಡಿದ್ದು ಇರುತ್ತದೆ.  ಮರುದಿನ ಬೆಳಿಗ್ಗೆ ಜೀವದ ಭಯದಿಂದ ನನ್ನ ಗಂಡ ಸರಾಯಿ ಕುಡಿದ ಅಮಲಿನಲ್ಲಿ ವಾಂತಿ ಮಾಡಿಕೊಂಡಿರುವ ಬಗ್ಗೆ ತಿಳಿಸಿದ್ದರಿಂದ ಸಹಜ ಸಾವು ಎಂದು ತಿಳಿದು ನಮ್ಮ ತಾಂಡಾದವರು ಸಾಂಪ್ರದಾಯಿಕವಾಗಿ ಹೆಣ (ಸುಟ್ಟು) ಅಂತ್ಯಕ್ರಿಯೇ ಮಾಡಿ ಮುಗಿಸಿದರು 4-5 ದಿನಗಳು ಬಿಟ್ಟು ರತನ ಇತನೇ ತನ್ನ ಗಂಡನ ಕೊಲೆ ಮಾಡಿರುತ್ತಾನೆ ಅಂತ ಹೇಳುತ್ತಿದ್ದಿ ಅಂತ ಈಗ ನಾನು ಬಂದರೆ ನಿನ್ನ ಮತ್ತು ನಿನ್ನ ಮಕ್ಕಳ ಜೀವ ತೆಗೆಯುತ್ತೆನೆ ಅಂತ ಪೋನ ಮಾಡಿ ಅಂಜಿಕೆ ಹಾಕಿರುತ್ತಾನೆ. ನಾನು ಅನೈತಿಕ ಸಂಬಂಧಕ್ಕೆ ಅಂಜಿ ಸುಮ್ಮನೆ ಕುಳಿತಿರುವದಕ್ಕೆ ಇತನು ನನ್ನ ಗಂಡ ರಮೇಶ ಇತನ ಜೀವ ತೆಗೆದುಕೊಂಡಿದ್ದು, ಅಲ್ಲದೇ ನನ್ನ ಮತ್ತು ಮಕ್ಕಳ ಜೀವ ತೆಗೆಯುತ್ತೆನೆ ಅಂತ ಕೊಲೆ ಮಾಡುವ ಭಯ ಹಾಕುತ್ತಿದ್ದಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಕಾಳಗಿ ಠಾಣೆಯಲ್ಲಿ ಪ್ರಕರಣ  ದಾಖಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 19-03-16 ರಂದು ಬೆಳಿಗ್ಗೆ ಸಮಯದಲ್ಲಿ ನಮ್ಮ ಹಿರೋ ಹೊಂಡಾ ಸಿಡಿ 100 ಕೆಎ 32 ಜೆ 9570 ಮೇಲೆ ಒಬ್ಬನೇ ಕುಳಿತುಕೊಂಡು ಗಂಜಿಗೆ ಹೋಗಿ ನಮ್ಮ ಮನೆಯಲ್ಲಿ ರೊಟ್ಟಿ ಮಾಡಲು ಸೆಡ್ಡ ತಯಾರಿಸುವ ಕುರಿತು  ಬೆಲ್ಗ್, ಪತ್ರಾ ಇತರೇ ಸಾಮಾನುಗಳು ಖರೀದಿ ಮಾಡಿಕೊಂಡು 4-00 ಗಂಟೆ (ಪಿ.ಎಂ.) ಸುಮಾರಿಗೆ ಮನೆಗೆ ಬಂದನು. ಸ್ವಲ್ಪ ಸಮಯ ಮನೆಯಲ್ಲಿದ್ದು ಪ್ರೆಶ ಆಗಿ ಅಣ್ಣ ಮನೆಯಿಂದ ಹಿರೋ ಹೊಂಡಾ ಮೋಟಾರ ಸೈಕಲ ಕೆಎ 32 ಜೆ 9570 ಮೇಲೆ ಒಬ್ಬನೇ ಕುಳಿತುಕೊಂಡು  ಎ.ಟಿ.ಎಂ.ದಲ್ಲಿ ಪಾರ್ಟಿ ಜನರು ಹಣ ಹಾಕಿದ್ದಾರೆ ಇಲ್ಲ ಎಂಬುದು  ಎಂ.ಟಿ.ಎಂ. ಗೆ ಹೋಗಿ ನೋಡಿಕೊಂಡು ಬರುತ್ತೇನೆಂದು ಹೇಳಿ ಮನೆಯಿಂದ ಹೋದನು. ರಾತ್ರಿ 10-10 ಗಂಟೆ ಸುಮಾರಿಗೆ  ನಾನು ಮನೆಯಲ್ಲಿದ್ದಾಗ ಯರೋ ಒಬ್ಬರು ನನ್ನ ಅಣ್ಣನ ಮೋಬೈಲನಿಂದ ನನ್ನ ಮೋಬೈಲ್ ನಂಬರಿಗೆ ಪೋನ ಮಾಡಿ  ತಿಳಿಸಿದ್ದೆನೆಂದೆರೆ, ಈ ಮೋಬೈಲ ಹೊಂದಿದವರು ಆಳಂದ ಚೆಕ್ಕ ಪೋಸ್ಟ ರೋಡ ಕಡೆಯಿಂದ ಹಿರೋ ಹೊಂಡಾ ಸಿಡಿ 100 ಕೆಎ 32 ಜೆ 9570 ಮೇಲೆ ಒಬ್ಬನೇ ಕುಳಿತುಕೊಂಡು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ನಡೆಸುತ್ತಾ ರಾತ್ರಿ 9-30  ಗಂಟೆ ಸುಮಾರಿಗೆ ಬಬಲಾದ ಮಠದ ಎದುರಿನ ರಿಂಗ ರೋಡಿನ ಡಿವಾಡರಕ್ಕೆ ಜೋರಾಗಿ ಡಿಕ್ಕಿ ಹೊಡೆದಿದ್ದರಿಂದ ಡಿವಾಡರ ಮೆಲೆ ಮೋಟಾರ ಸೈಕಲದೊಂದಿಗೆ ಬೇಹುಷ ಆಗಿ ಬಿದ್ದಿರುತ್ತಾನೆ. ಅಂತಾ ತಿಳಿಸಿದಾಗ ನಾನು ಗಾಬರಿಗೊಂಡು ಈ ವಿಷಯ ನಮ್ಮ ತಂದೆ, ತಾಯಿಗೆ ತಿಳಿಸಿ ಘಟನೆ ಸ್ಥಳಕ್ಕೆ ಹೋಗಿ ನೋಡಲಾಗಿ ಸುತ್ತ ಮುತ್ತಲಿನ ಜನರು ನೆರೆದಿದ್ದು  ನನ್ನ ಅಣ್ಣ ಸಚಿನಕುಮಾರ ರೋಡಿನ ಡಿವಾಡರ ಹತ್ತಿರ ಬೇಹುಷ ಸ್ಥಿತಿಯಲ್ಲಿ ಬಿದ್ದಿದ್ದನು. ಘಟನೆ ಸ್ಥಳದಲ್ಲಿದ್ದ ನನ್ನ ಗೆಳೆಯರಾದ ಕಿರಣ ತಂದೆ ಧನರಾಜ ರಾಠೋಡ ಮತ್ತು ಚಂದ್ರಶೇಖರ ತಂದೆ ಮಲ್ಲಿಕಾರ್ಜುನ ಪಾಟೀಲ ಇವರಿಗೆ ವಿಚಾರಿಸಲೂ  ನನಗೆ ಈ ಮೇಲೆ ಅಪರಿಚಿತ ವ್ಯಕ್ತಿ ಪೋನ ಮಾಡಿ ತಿಳಿಸಿದಂತೆ ವಿಷಯ  ತಿಳಿಸಿದರು. ನನ್ನ ಅಣ್ಣನಿಗೆ ನೋಡಲಾಗಿ ನನ್ನ ಅಣ್ಣನ ಹಣೆಯ ಮೇಲೆ ರಕ್ತಗಾಯ, ಬಲಗಣ್ಣಿನ ಮತ್ತು ಎಡಗಣ್ಣಿನ ಹುಬ್ಬಿನ ಹತ್ತಿರ ರಕ್ತಗಾಯಗಳಾಗಿದ್ದು, ಮೂಗಿನ ಹತ್ತಿರ ರಕ್ತಗಾಯ ತಲೆಗೆ,ಎದೆಗೆ ಹೊಟ್ಟೆಗೆ, ಭಾರಿ ಗುಪ್ತಗಾಯಗಳಾಗಿದ್ದು, ಎಡಗೈಯ ಮೇಲೆ ಅಲ್ಲಿಲ್ಲಿ ತರಚಿದ ರಕ್ತಗಾಯಗಳಾಗಿದ್ದು, ಯಾರೋ ಜನರು 108 ಅಂಬುಲೈನ್ಸಗೆ ಪೋನ ಮಾಡಿದ್ದು, 108 ಗಾಡಿ ಬರಲು ಅದರಲ್ಲಿ ನಮ್ಮ ಅಣ್ಣ ಸಚಿನನಿಗೆ ಹಾಕಿಕೊಂಡು ಉಪಚಾರ ಕುರಿತು  ಯುನೈಟೆಡ ಆಸ್ಪತ್ರ್ರೆಗೆ ಒಯ್ದು ಸೇರಿಕೆ ಮಾಡಿದ್ದು, ನನ್ನ ಅಣ್ಣ ಸಚಿನಗೆ ವೈದ್ಯರು ಉಪಚಾರ ಮಾಡುತ್ತಿರುವ ಕಾಲಕ್ಕೆ ರಸ್ತೆ ಅಪಘಾತ ಗಾಯಗಳಿಂದ ಗುಣ ಮುಖ ಹೊಂದದೇ ರಾತ್ರಿ 12-50  ಎ.ಎಂ.ಕ್ಕೆ ಮೃತಪಟ್ಟಿರುತ್ತಾನೆ. ಅಂತಾ ಶ್ರೀ ಪ್ರವೀಣಕುಮಾರ ತಂದೆ ಮಲ್ಲಿಕಾರ್ಜುನ ತಂಬಾಕೆ ಸಾ : ರಾಮ ನಗರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಸೂರ್ಯಕಾಂತ ತಂದೆ ಹಣಮಂತಪ್ಪ ಹೋಸಪೇಟ ಸಾ :ಕೊಂಡೆದಗಲ್ಲಿ ಬ್ರಹ್ಮಪೂರ ಇವರು ದಿನಾಂಕ 18/3/16 ರಂದು ಮದ್ಯಾನ 3.05 ಗಂಟೆಗೆ ಅಪರಿಚಿತ ಇಬ್ಬರೂ ವ್ಯಕ್ತಿಗಳು ಬೈಕ ಮೇಲೆ ಬಂದು ನನ್ನ ಮಗನಾದ ಅಶೋಕ ವ:29 ವರ್ಷ ಉ:ವಿದ್ಯಾರ್ಥಿ ಇತನ ಮೊಬೈಲ್‌ ನಂ.9916252555, 9686605672  ಗೆ ಕರೆಮಾಡಿ ಗೋವಾ ಹೊಟೇಲಗೆ ಬಾ ಅಂತಾ ಹೇಳಿ 10 ನಿಮೀಷದಲ್ಲಿ ನಾನು ಬರುತ್ತೇನೆ ಎಂದು ತಿಳಿಸಿದಾಗ ಅವರು ಮತ್ತೆ ಕರೆಮಾಡಿ ಅಡ್ರಸ ಕೇಳಿದಾಗ ನಮ್ಮ ಮನೆಯ ಅಡ್ರಸ ಕೊಟ್ಟಿರುತ್ತಾನೆ. ನಮ್ಮ ಮನೆಯ ಕೆಳಗಡೆ ಬಂದು ಪುನ:ಹ ಮಳಖೇಡ ದಿಂದ ಕೋರಿಯರ ಬಂದಿರುತ್ತದೆ ಕೆಳಗಡೆ ಬಾ ಅಂತಾ ತಿಳಿಸಿ ಕೆಳಗಡೆ ಕರೆಯಿಸಿಕೊಂಡು ವಿಚಾರಿಸದೆ ಆತನನ್ನು ಇಬ್ಬರೂ ಸೇರಿ ಬೈಕ ಮೇಲೆ ಕೂಡಿಸಿಕೊಂಡು ಹೋಗಿರುತ್ತಾರೆ. ಹೋಗುವಾಗ ಅಲ್ಲಿ ಇದ್ದ ಹೆಣ್ಣು ಮಕ್ಕಳು ವಿಚಾರಿಸಿದಾಗ ನಾವು ಪೊಲೀಸರು ಎಂದು ಹೇಳಿ ಕರೆದುಕೊಂಡು ಹೋಗಿರುತ್ತಾರೆ ನಂತರ ರಾತ್ರಿ 7.30 ಪಿ.ಎಂಕ್ಕೆ ನನಗೆ ಕರೆಮಾಡಿ ನಾನು ಮುಂಜಾನೆ ಬರುತ್ತೇನೆ ನಾನು ನನ್ನ ಗೆಳೆಯನ ಹತ್ತಿರ ಇದ್ದೆನೆಂದು ತಿಳಿಸಿರುವನು ಇಲ್ಲಿಯವರೆಗೂ ಮತ್ತೆ ಕರೆ ಮಾಡಿರುವದಿಲ್ಲಾ ದಯವಿಟ್ಟು ನನ್ನ ಮಗನನ್ನು ಹುಡುಕಿ ಕೊಡಬೇಕು ಅಂತಾ ಅರ್ಜಿ ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮ ಹತ್ಯೆ ಪ್ರಕರಣ :
ಆಳಂದ ಠಾಣೆ : ಶ್ರೀಮತಿ ಜ್ಯೋತಿ ಗಂಡ ರಾಜೇಂದ್ರ ಕೊರಳ್ಳಿ ಸಾ : ಪಡಸಾವಳಿ ಇವರ ಗಂಡನಿಗೆ ಹಿಡಿದು 4 ಜನ ಅಣ್ಣ ತಮ್ಮಂದಿರು ಇದ್ದು ಎಲ್ಲರೂ ಕೂಡಿ ಇದ್ದು ನಮ್ಮ ಮಾವನವರು.ಮೊದಲೆ ಮರಣ ಹೊಂದಿರುತ್ತಾರೆ. ನಮ್ಮ ಅತ್ತೆ ಸರುಬಾಯಿ ಇವರ ಹೆಸರಿನಲ್ಲಿ ಇದ್ದ ಸರ್ವೆ.ನಂ 71 ರಲ್ಲಿ 2 ಎಕರೆ  ಹೊಲ ಇದ್ದು ನನ್ನ ಗಂಡನೆ ದೊಡ್ಡ ಮಗನಿದ್ದು ಮನೆಯ ಆಗು ಹೋಗುಗಳ ಬಗ್ಗೆ ಅವನೆ ನೋಡುತ್ತಾ ಬಂದಿರುತ್ತಾನೆ. ನನ್ನ ಇಬ್ಬರ ಮೈದುನರು ಹೊಟ್ಟೆ ಪಾಡಿಗಾಗಿ ಪುನಾಕ್ಕೆ ಹೋಗಿರುತ್ತಾರೆ. ನನಗೆ ಮೂರು  ಜನ   ಹೆಣ್ಣು ಮಕ್ಕಳು ಇದ್ದು ಅವರು ಚಿಕ್ಕವರು ಇರುತ್ತಾರೆ. ಈ ವರ್ಷ ಸರಿಯಾಗಿ ಮಳೆ ಬಾರದೇ ಬೆಳೆಯಾಗದೆ.ಇರುವದಿದರಿಂದ ನನ್ನ ಗಂಡನ್ನು ಊರಲ್ಲಿ ಇತರೆ ಜನರ ಹೊಲಗಳನ್ನು ಪಾಲಿನಿಂದ ಮಾಡಿರುತ್ತಾನೆ. ಹೊಲಗಳಿಗೆ ಹಾಕಬೇಕಾದ  ಗೊಬ್ಬರ  ಇತರೆ ವಸ್ತುಗಳನ್ನು ಸಾಲ ಮಾಡಿ ಹಾಕಿರುತ್ತಾರೆ.  ಸರಕಾರದಿಂದ ಹಾಗೂ ಖಾಸಗಿಯವರಿಂದ 05 ಲಕ್ಷ ಸಾಲ ಮಾಡಿದ್ದು ಹೇಗೆ ತೀರಿಸುವುದೆಂದು ಚಿಂತಿಸುತ್ತಿದ್ದರು. ದಿನಾಂಕ:19/03/2016 ರಂದು ಬೆಳಗ್ಗಿನ ಜಾವ 4 ಗಂಟೆಗೆ ಸುಮಾರಿಗೆ ನನ್ನ ಗಂಡ ಎದ್ದು ಮನೆಯಿಂದ  ಹೋಗಿ ಸಾಲ ತಿರಿಸುವದು ಹೇಗೆ ಅಂತಾ ಚಿಂತಿಸಿ ಬೆಳಗಿನ ಜಾವ 05 ರಿಂದ 06 ಗಂಟೆ ಮಧ್ಯದ ಅವಧಿಯಲ್ಲಿ ನಮ್ಮೂರ ಸೀಮಾಂತರ ಮಾಹಾದೇವ ಪತ್ರಿಗಿಡ ಇವರ ಹೊಲದಲ್ಲಿ ಇದ್ದ ಹುಣಸಿ ಮರಕ್ಕೆ ಉರುಳು ಹಾಕಿಕೊಂಡು  ಮರಣ ಹೊಂದಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.