POLICE BHAVAN KALABURAGI

POLICE BHAVAN KALABURAGI

13 January 2016

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಜೇವರಗಿ ಠಾಣೆ : ದಿನಾಂಕ 12.01.2016 ರಂದು ಇಜೇರಿ ಗ್ರಾಮದ ಸಾಥಖೇಡ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ಬಗ್ಗೆ ಬಾತ್ಮಿ ಬಂದ ಮೇರೆಗೆ ಶ್ರೀ. ವಿಧ್ಯಾಸಾಗರ ಎ.ಎಸ್.ಐ ಜೇವರಗಿ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿ ಬಂದ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲು ಒಂದು ರುಪಾಯಿಗೆ 80 ರೂಪಾಯಿ ಕೊಡುತ್ತೆವೆ ಅಂತ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಬರೆದುಕೊಳ್ಳುತ್ತಿದ್ದುದನ್ನು ಖಚಿತ ಪಡಿಸಿಕೊಂಡು ಅವರ ಮೇಲೆ ದಾಳಿ ಮೂರು ಜನರನ್ನು ವಶಕ್ಕೆ ತೆಗೆದುಕೊಂಡು ಅವರ ಹೆಸರನ್ನು ವಿಚಾರಿಸಲು 1. ಮಲಕಲಣ್ಣ ತಂದೆ ಮಲ್ಲಪ್ಪ ಮಡಿವಾಳಕರ್ ಸಾ : ಶಹಾಪುರ 2.  ಮಲ್ಲಣ್ಣ ತಂದೆ ನರಸಿಂಗಪ್ಪ ಸಗರ ಸಾ : ಇಜೇರಿ 3. ಗುರಪ್ಪ ತಂದೆ ಶಿವಪ್ಪ ಮಡಿವಾಳಕರ್ ಸಾ : ಇಜೇರಿ ಅಂತಾ ತಿಳಿಸಿದ್ದು ಸದರಿಯವರಿಂದ  ಜೂಜಾಟಕ್ಕೆ  ಬಳಸಿದ ನಗದು ಹಣ 4.000/- ರೂ, 3 ಬಾಲ್‌ ಪೆನ್ ಮತ್ತು 3 ಮಟಕಾ ಚೀಟಿ ಗಳನ್ನು ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಜೇವರ್ಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ವಂಚನೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಕುಮಾರಿ ವಿಜಯಲಕ್ಷ್ಮೀ ಕೋಬಾಳಕರ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಕಲಬುರಗಿ ಇವರು ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ಮೇಲಾಧಿಕಾರಿಗಳಿಂದ ಅನುಮೋದನೆ ಪಡೆಯಲು ಮಂಡಿಸದೆ ಅಪ್ರಾಮಾಣಿಕತೆಯಿಂದ ಉದ್ದೇಶಪೂರ್ವಕವಾಗಿ ವಂಚನೆ ಮಾಡಿರುವದು ಹಾಗೂ ತಪ್ಪು ದಸ್ತಾ ವೇಜುಗಳನ್ನು ತಯಾರಿಸಿ ಸರ್ಕಾರದ ಅನುದಾನ ದೂರುಪಯೋಗ ಪಡಿಸಿಕೊಂಡಿದ್ದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ಮಾನ್ಯ ಪ್ರಾದೇಶಿಕ ಆಯುಕ್ತಕರು ತಿಳಿಸಿ ಸದರಿಯವರ ವಿರುದ್ದ ಕ್ರಿಮಿನಲ್‌ ಮೂಕದ್ದಮೆ ದಾಖಲಿಸುವಂತೆ ಸೂಚಿಸಿರುತ್ತಾರೆ ಆದ್ದರಿಂದ ಸದರಿಯವರು ಸರ್ಕಾರದ ಅನುದಾನ ರೂಪಾಯಿ 10098110 (ಒಂದು ಕೋಟಿ 98 ಸಾವಿರ110/-ರೂ) ಮಾತ್ರ ದುರ್ಬಳಕೆ ಮಾಡಿ ತೀರ್ವ ತರಹದ ಕರ್ತವ್ಯ ಲೋಪವೆಸಗಿ ಸರ್ಕಾರಿ ದಾಖಲಾತಿಗಳನ್ನು ಪೋರ್ಜರಿ ಮಾಡಿರುತ್ತಾರೆ ಆದ್ದರಿಂದ ಕುಮಾರಿ ವಿಜಯಲಕ್ಷ್ಮೀ ಕೋಬಾಳಕರ ಇವರ ವಿರುದ್ದ ಸೆಕ್ಷನ 420 ಅಡಿ ತಕ್ಷಣ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ಶ್ರೀ ಚಂದ್ರಾಮಪ್ಪಾ ತಂದೆ ಹುಚ್ಚಪ್ಪಾ ಯೋಜನಾ ನಿರ್ದೇಶಕರು ಡಿ.ಆರ್‌‌.ಡಿ.ಎ ಜಿಲ್ಲಾ ಪಂಚಾಯತ ಕಲಬುರಗಿ ರವರು ಸಲ್ಲಿಸಿದ  ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ಹನಮಂತರಾಯ್  ತಂದೆ ಕಲ್ಯಾಣರಾವ್ ಮಲಾಜೀ ಸಾ: ಬೆಳಮಗಿ ತಾ: ಆಳಂದ ಜಿ: ಕಲಬುರಗಿ ಹಾ:ವ: ಮನೆ ನಂ ಹೆಚ್.ಐ.ಜಿ- 140 ಹೈಕೋರ್ಟ ಎದರುಗಡೆ ಕೆಹೆಚ್.ಬಿ ಕಾಲನಿ ಕಲಬುಗಿ ರವರು  ಹೆಂಡತಿ ಮಕ್ಕಳೊಂದಿಗೆ ಎಳ್ಳಾಮಸೆ ಹಬ್ಬದ ಪ್ರಯುಕ್ತ ನಾನು ಕುಟುಂಬ ಸಮೇತನಾಗಿ ದಿನಾಂಕ: 09/01/2016 ರಂದು ಸಾಯಂಕಾಲ 06-00 ಗಂಟೆ ಸುಮಾರಿಗೆ ಕೆ.ಹೆಚ್.ಬಿ ಕಾಲನಿಯ ಮನೆ ಮುಂದಿನ ಬಾಗಿಲನ್ನು ಕೊಂಡಿ ಹಾಕಿ ಹಿಂದಿನ ಬಾಗಿಲ  ಕೀಲಿ ಹಾಕಿಕೊಂಡು ಬೆಳಮಗಿ ಊರಿಗೆ ಹೋಗಿದ್ದು ದಿನಾಂಕ: 11/01/2016 ರಂದು 12-30 ಪಿಎಮ್ ಕ್ಕೆ ಊರಿನಿಂದ ಮನೆಗೆ ಬಂದು ನೋಡಲು ನಮ್ಮ ಮನೆಯ ಹಿಂದಿನ ಬಾಗಿಲ ಚಾನಲ ಗೇಟಗೆ ಹಾಕಿದ್ದ ಕೀಲಿ ಮುರಿದಿದ್ದು ಚಾನಲ ಗೇಟ ತೆಗೆದಿದ್ದು ಒಳಗಡೆ ಬಾಗಿಲಿಗೆ ಹಾಕಿದ್ದ ಕೀಲಿ ಕೊಂಡಿ ಮುರಿದಿದ್ದು ಬಾಗಿಲು ಸ್ವಲ್ಪ ತೆರೆದಿದ್ದು ನಾನು ಗಾಬರಿಯಿಂದ ಒಳಗೆ ಹೋಗಿ ನೋಡಲು ಮನೆಯ ಬೆಡರೂಮ್ ನಲ್ಲಿದ್ದ ಎರಡು ಅಲಮಾರಿಗಳು ಕೆಳಗೆ ಖುಲ್ಲಾ ಬಾಗಿಲು ತೆರೆದು ಬಿದ್ದಿದ್ದು ಅಲಮಾರಾದ ಲಾಕ ಮುರಿದಿದ್ದು ನಾನು ಅಲಮಾರದಲ್ಲಿ ನೋಡಲು ಅಲಮಾರದ ಲಾಕರನಲ್ಲಿಟ್ಟ 1,65,000/-ರೂ ನಗದು ಹಣ  ಕಾಣಿಸಲಿಲ್ಲಿ. ಮತ್ತು ಇನ್ನೊಂದು ಅಲಮಾರದ ಲಾಕರನಲ್ಲಿಟ್ಟ 12ತೊಲೆ ಬೆಳ್ಳಿ ಆರತಿ ಸೆಟ್ ಅ.ಕಿ 4800/-ರೂ 11 ತೊಲೆ ಬೆಳ್ಳಿ ಗಣಪತಿ ಅ.ಕಿ= 4400/-ರೂ ಪ್ರತಿ 4 ತೊಲೆ ಬೆಳ್ಳಿಯ 2 ಗ್ಲಾಸ್ ( 8 ತೊಲೆ ) ಅ.ಕಿ = 3200/-ರೂ ಹಾಗೂ ಒಂದು ಸ್ಯಾಮಸಂಗ ಮೋಬೈಲ್ ಅ.ಕಿ= 4000/-ರೂ ಹೀಗೆ ಒಟ್ಟು 1,81,400/- ರೂ ಕಿಮ್ಮತ್ತಿನ ನಗದು ಹಣ ಬೆಳ್ಳಿ ಆಭರಣಗಳನ್ನು ಯಾರೋ ಕಳ್ಳರು ದಿನಾಂಕ: 09/01/2016 ರಂದು ಸಾಯಂಕಾಲ 06-00 ಗಂಟೆಯಿಂದ ದಿನಾಂಕ: 11/01/2016ರ ಮಧ್ಯಾಹ್ನ 12-30 ಗಂಟೆಯ ಮಧ್ಯದ ಅವಧಿಯಲ್ಲಿ ನಮ್ಮ ಮನೆ ಹಿಂದಿನ ಬಾಗಿಲ ಕೀಲಿ ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಶೋಕ ನಗರ ಠಾಣೆ : ದಿನಾಂಕ:11/01/2016 ರಂದು ಮದ್ಯಾಹ್ನ ನಾನು ಬಸ್‌ ಮೂಲಕ ಕಲಬುರಗಿಗೆ ಬಂದಿದ್ದು ಬರುವಾಗ ನನ್ನ ವ್ಯವಹಾರದ ಸಲುವಾಗಿ 1,00,000/- ರೂಪಾಯಿಗಳು ತೆಗದುಕೊಂಡು ಬಂದಿದ್ದು ಸಾಯಂಕಾಲ 6 ಗಂಠೆಯ ಸುಮಾರಿಗೆ ನಾನು ನಮ್ಮ ಪೆಟ್ರೊಲ್‌ ಬಂಕನಿಂದ ಜಮಾ ಆದ ಒಟ್ಟು 30,000/- ರೂಪಾಯಿಗಳನ್ನು ತೆಗದುಕೊಂಡು ಕೇಂದ್ರ ಬಸ್‌ ನಿಲ್ದಾಣಕ್ಕೆ ಬಂದಿದ್ದು ಆ ಸಮಯದಲ್ಲಿ ನನ್ನ ಹತ್ತಿರ ಒಟ್ಟು 1,30,000/- ಇದ್ದವು. ರಾತ್ರಿ 7:30 ಗಂಟೆಯ ಸುಮಾರಿಗೆ ನನಗೆ ಪರಿಚಯದವರಾದ ಅಂಬಾದಾಸ ಎನ್ನುವವರು ನನ್ನ ಹತ್ತಿರ ಬಂದು ನನಗೆ 30,000/- ರೂಪಾಯಿ ಕೈಗಡ ಕೇಳಿದ್ದು ಆಗ ನಾನು ಆ ವ್ಯಕ್ತಿಗೆ ನನ್ನ ಹತ್ತಿರ ಇದ್ದ ಹಣದಲ್ಲಿ 30,000/-ರೂಪಾಯಿಗಳನ್ನು ಕೊಟ್ಟಿದ್ದು  ಇರುತ್ತದೆ. ಉಳಿದ ಹಣ 1 ಲಕ್ಷ ರೂಪಾಯಿ ನನ್ನ ಪ್ಯಾಂಟಿನ ಜೇಬಿನಲ್ಲಿ ಇಟ್ಟುಕೊಂಡಿದ್ದೆನು. ರಾತ್ರಿ 8 ಗಂಟೆಯ ಸುಮಾರಿಗೆ ನಾನು ಬಿ.ಗುಡಿಗೆ ಹೋಗುವ ಸಲುವಾಗಿ ಕಲಬುರಗಿ ಬೆಂಗಳೂರ ಬಸ್ಸಿಗೆ ಹತ್ತಿದೆನು. ನಾನು ಹತ್ತುವ ಸಮಯದಲ್ಲಿ ನನ್ನ ಹತ್ತಿರ  ಇದ್ದ 1 ಲಕ್ಷ ರೂಪಾಯಿ ಹಣ ನನ್ನ ಪ್ಯಾಂಟಿನ ಜೇಬಿನಲ್ಲಿದ್ದವು. ನಂತರ ರಾತ್ರಿ 9:30 ಗಂಟೆಯ ಸುಮಾರಿಗೆ ನಾನು ಬಿ. ಗುಡಿಯಲ್ಲಿ ಬಸ್‌ ಇಳಿದ ನಂತರ ನನ್ನ ಜೇಬಿನಲ್ಲಿದ್ದ ಹಣ ನೋಡಲು ಇದ್ದಿರುವದಿಲ್ಲ. ಬಸ್‌ ಇಳಿಯುವ ಸಮಯದಲ್ಲಿ ಯಾರೋ ಕಳ್ಳರು ನನ್ನ ಪ್ಯಾಂಟಿನ ಜೇಬನ್ನು ಕತ್ತರಿಸಿ 1 ಲಕ್ಷ ರುಪಾಯಿಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.  ಅಂತಾ  ಶ್ರೀ  ವಾಯ್‌.ಟಿ.ಲಿಂಗಣ್ಣಾ ತಂದೆ ತಿಮ್ಮಣ್ಣಾ ಸಾ||ಮನೆ ನಂ. 23/2 ಭಲಬಿಮೇಶ್ವರ ಕಲ್ಯಾಣ ಮಂಟಪ್ಪ ಹತ್ತಿರ ಬಿಮರಾಯನ ಗುಡಿ ತಾ|| ಶಹಾಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ದ್ವೀಚಕ್ರ ವಾಹನ ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ದಿನಾಂಕ: 12-06-2016 ರಂದು ಮಧ್ಯಾನ ನನ್ನ ಹೀರೊ ಹೊಂಡಾ ಸ್ಪೆಂಡರ್‌‌ ಪ್ಲಸ್‌‌ ಮೋಟಾರ ಸೈಕಲ ನಂ.ಕೆಎ.32 ಯು.6407 ನೇದ್ದನ್ನು ಮನೆಯ ಮುಂದೆ ನಿಲ್ಲಿಸಿ ಹೊರಗಡೆ ಹೋಗಿದ್ದು ಮರಳಿ 4 ಗಂಟೆಗೆ ಮನೆಗೆ ಬಂದಾಗ ನನ್ನ ಮನೆಯ ಮುಂದೆ ನನ್ನ ಮೋಟಾರ ಸೈಕಲ ಇರಲಿಲ್ಲ ಕಾರಣ ನನ್ನ ಮೋಟಾರ ಸೈಕಲ ಕಪ್ಪು ಬಣ್ಣವುಳ್ಳದ್ದು ನಂ.KA32 U6407, CHASSIS NO. MBLHA10EE8HH03236, ENGINE NO.HA10EA8HH07824 ಅ.ಕಿ. .30000/-ರೂ ಬೆಲೆ ಬಾಳುವದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಶ್ರೀ ಚನ್ನಬಸಪ್ಪಾ ಪಾಟೀಲ ತಂದೆ ಶರಣಪ್ಪಾ ಪಾಟೀಲ್‌ ಸಾ:ಮಹಾಲಕ್ಷ್ಮೀ ಲೇ ಔಟ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 10/01/2016 ರಂದು ನಾನು ನನ್ನ ಹೆಂಡತಿಯಾದ ಗಂಗುಬಾಯಿ ನನ್ನ ಮಕ್ಕಳಾದ ರಾಹುಲ,ರೇಷ್ಮಾ ಎಲ್ಲರು ನಮ್ಮ ಹೊಲ ಸರ್ವೇ ನಂ 101 ನೇದ್ದರಲ್ಲಿನ ನಮ್ಮ ಮನೆಯಲ್ಲಿದ್ದಾಗ ಯಾರೋ ಬೈಯುವುದನ್ನು ಕೇಳಿ ನಾನು ನನ್ನ ಹೆಂಡತಿ ನನ್ನ ಮಕ್ಕಳು ಮನೆಯಿಂದ ಹೊರಗೆ ಬಂದು ನೋಡಲಾಗಿ ನಮ್ಮ ಅಣ್ಣನ ಮಗನಾದ 1) ಸಚೀನ ತಂದೆ ಛತ್ರು ರಾರೋಡ ಹಾಗೂ ನಮ್ಮ ಅಣ್ಣಂದಿರಾದ 2) ಛತ್ರು ತಂದೆ ರತ್ನು ರಾಠೋಡ 3)ಹೀರೂ ತಂದೆ ರತ್ನು ರಾಠೋಡ ಮತ್ತು 4) ಭದ್ರು ತಂದೆ ಹೀರೂ ರಾಠೋಡ 5)ಶಾಂತಾಬಾಯಿ ಗಂಡ ಛತ್ರು ರಾಠೋಡ 6) ಲಲಿತಾಬಾಯಿ ಗಂಡ ಹೀರೂ ರಾಠೋಡ 7)ರವಿನಾಬಾಯಿ ಗಂಡ ಭದ್ರು ರಾಠೋಡ ಸಾ||ಎಲ್ಲರು ಬಳೂರ್ಗಿ ತಾಂಡಾ ಇವರೇಲ್ಲರು ಗುಂಪು ಕಟ್ಟಿಕೊಂಡು ಅತಿಕ್ರಮವಾಗಿ ನಮ್ಮ ಹೊಲದಲ್ಲಿ ಪ್ರವೇಶ ಮಾಡಿ ನಮ್ಮ ಮನೆಯ ಮುಂದೆ ಬಂದು ನನಗೆ ಛತ್ರು ಇತನು ರಂಡಿಮಗನೆ ಹೊಲ ಮನಿ ಇನ್ನೂ ಸರಿಯಾಗಿ ಪಾಲ ಆಗಿಲ್ಲಾ ಈ ಹೊಲದಲ್ಲಿ ನಮಗ ಇನ್ನೂ ಪಾಲ ಬರ್ತಾದ ಅಂತ ಅನ್ನುತಿದ್ದಾಗ ಅದೇ ಸಮಯಕ್ಕೆ ಅಲ್ಲಿಂದ ತಮ್ಮ ಹೊಲಗಳಿಗೆ ಹೋಗುತಿದ್ದ ನಮ್ಮ ಗ್ರಾಮದ ಆನಂದ ತಂದೆ ಲಸ್ಕರ ರಾಠೋಡ , ಸುರೇಶ ತಂದೆ ಚಂದ್ರಶ್ಯಾ ಸಕ್ಕರಗಿ , ಮಲ್ಲಪ್ಪ ತಂದೆ ಚಂದ್ರಮಾ ಕೋತಿ ಇವರು ನಮ್ಮ ಹತ್ತಿರ ಬಂದು ನಮ್ಮ ಅಣ್ಣನಾದ ಛತ್ರು ಹಾಗೂ ಹೀರೂ ಇವರಿಗೆ ಯಾಕೆ ಸುಮ್ಮನೆ ಬೈದಾಡುತ್ತಿರಿ ಅಂತ ಅನ್ನುತಿದ್ದಾಗ ಹೀರೂ ಇತನು ನನಗೆ ಈ ರಂಡಿಮಗಂದು ಸೊಕ್ಕ ಬಾಳ ಅದಾ ಅಂತ ಅಂದು ನನ್ನ ಎದೆಯ ಮೇಲಿನ ಅಂಗಿ ಹಿಡಿದು ನನ್ನ ಕಪಾಳದ ಮೇಲೆ ಹೊಡೆದಾಗ ನನ್ನ ಹೆಂಡತಿ ಬಿಡಿಸಲು ಬಂದರೆ ಲಲಿತಾಬಾಯಿ, ಶಾಂತಾಬಾಯಿ, ರವಿನಾಬಾಯಿ ಇವರು ನನ್ನ ಹೆಂಡತಿಗೆ ನಿನು ಬರ್ತಿ ರಂಡಿ ಅಂತ ಅಂದು ನನ್ನ ಹೆಂಡತಿಗೆ ಹಿಡಿದು ಕೈಯಿಂದ ಹೊಡೆಯುತಿದ್ದಾಗ ಸಚೀನ ಇತನು ಅಲ್ಲೆ ಬಿದ್ದ ಒಂದು ಬಡಿಗೆ ತಗೆದುಕೊಂಡು ನನ್ನ ಹೆಂಡತಿಯ ತಲೆಗೆ ಜೋರಾಗಿ ಹೊಡೆದು ರಕ್ತಗಾಯ ಪಡಿಸಿ ಕುದಲು ಹಿಡಿದು ಜಗ್ಗಾಡುತಿದ್ದನು ಆಗ ನನಗೆ ಛತ್ರು ಇತನು ಕಲ್ಲಿನಿಂದ ನನ್ನ ಕಡೆ ಬಿಸಿ ಹೊಡೆದಾಗ ಸದರಿ ಕಲ್ಲು ನನ್ನ ಬಲಗೈ ಹೆಬ್ಬೆರಳಿಗೆ ಬಡಿದು ರಕ್ತಗಾಯವಾಗಿರುತ್ತದೆ. ನನ್ನ ಮಗ ರಾಹುಲ ಹಾಗೂ ರೇಷ್ಮಾ ನಮಗೆ ಹೊಡೆಯುವದನ್ನು ಬಿಡಿಸಲು ಬಂದರೆ ಶಾಂತಾಬಾಯಿ ಇವಳು ಸಚೀನನ ಕೈಯಲಿದ್ದ ಬಡಿಗೆ ತಗೆದುಕೊಂಡು ಅದೇ ಬಡಿಗೆಯಿಂದ  ನನ್ನ ಮಗಳ ಏಡಗೈ ಮುಗೈ ಕೆಳಗೆ ಹೊಡೆದು ರಕ್ತಗಾಯ ಪಡಿಸಿ ಜೀವದ ಭಯ ಹಾಕಿರುತ್ತಾರೆ ಅಂತಾ ಶ್ರೀ ಮನೋಹರ ತಂದೆ ರತ್ನು ರಾಠೋಡ ಸಾ|| ಬಳೂರ್ಗಿ ತಾಂಡಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

12 January 2016

Kalaburagi District Reported Crimes

ಅಪಘಾತ ಪ್ರಕರಣ :
ವಾಡಿ ಠಾಣೆ : ದಿನಾಂಕ 26-12-2015 ರಂದು ಗಾಯಾಳು ಛತ್ರು @ ಪಪ್ಪು ತಂದೆ ವಿಠಲ ರಾಠೋಡ ಈತನು ವಾಡಿ ಪಟ್ಟಣದ ತನ್ನ ದೊಡ್ಡಮ್ಮ ಇವರ ಮನೆಯಿಂದ ಅವರ ಸಂಬಂದಿಯ ಮೋಟರ್ ಸೈಕಲ ನಂ ಕೆಎ-32 ಡಬ್ಲ್ಯೂ -7470 ನೇದ್ದರ ಮೇಲೆ ನಾಲವಾರದಲ್ಲಿದ್ದ ತಮ್ಮ ಅಕ್ಕಳಿಗೆ ಕರೆದುಕೊಂಡು ಬರಲು ಹೊರಟಾಗ ಮುಂದೆ ಹಲಕಟ್ಟಾ ಆಚೆ ಮೋಟರ್ ಸೈಕಲ್ ಅತಿವೇಗಾ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಹೊರಟು ಮುಂದೆ ರೋಡಿಗೆ ಹೊರಟ ಯಾವುದೋ ಒಂದು ಎತ್ತಿನ ಬಂಡಿಗೆ 7-00 ಪಿಎಮ್ ಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಆತನ ತಲೆಯ ಹಿಂದೆ ಭಾರಿ ರಕ್ತಗಾಯವಾಗಿ ಎಡಗೈ ಮುಷ್ಠಿ ಹತ್ತಿರ ಸಹ ರಕ್ತಗಾಯವಾಗಿದ್ದು ಅಲ್ಲದೆ ಮೈಗೆ ಅಲ್ಲಲ್ಲಿ ತರಚಿದ ರಕ್ತಗಾಯವಾಗಿರುತ್ತದೆ. ಶ್ರೀ ವಿಠಲ @ ಇಟ್ಟು ತಂದೆ ಧರ್ಮಾ ನಾಯಕ ಸಾ|| ಧರ್ಮಾಪೂರ ಸದ್ಯ ಘಾಟಕೋಪರ ಮುಂಬಾಯಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಗಾಯಾಳು ಛತ್ರು ಈತನು ಉಪಚಾರ ಕುರಿತು ಸೋಲ್ಲಾಪೂರ ಗಂಗಾಮಯಿ ಆಸ್ಪತ್ರೆಯಲ್ಲಿ ಸೇರಿಕೆಯಾಗಿದ್ದು ನಂತರ ಇಂದು ದಿನಾಂಕ 11-01-2016 ರಂದು 12-00 ಪಿಎಮ್ ಕ್ಕೆ ಧರ್ಮಾಪೂರ ತಾಂಡಾದಿಂದ ವಿಠಲ್ ಈತನು ಪೋನ್ ಮಾಡಿ ತನ್ನ ಮಗ ಛತ್ರು ಈತನಿಗೆ ಸೋಲ್ಲಾಪೂರ ಗಂಗಾಮಯಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿಕೊಂಡು ತರುವ ಕಾಲಕ್ಕೆ 11-00 ಎಎಮ್ ಸುಮಾರು ಮೃತಪಟ್ಟಿರುತ್ತಾನೆ ಅಂತಾ ತಿಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತ್ಯಾಚಾರ ಮಾಡಲು ಪ್ರಯತ್ನ ಮಾಡಿದ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ವಿಜಯಲಕ್ಷ್ಮೀ  ಗಂಡ ಮಲ್ಲಿಕಾರ್ಜುನ ಟಾಂಗ್ ಸಾ: ಕೋರಿ ಮಠದ ಹತ್ತಿರ ಬ್ರಹ್ಮಪೂರ ಧನಗರ ಗಲ್ಲಿ ಕಲಬುರಗಿ ಇವರ ಮಗಳಾದ ಕುಮಾರಿ ಇವಳು 8ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿ ಮನೆಯಲ್ಲಿಯೇ ಇರುತ್ತಿದ್ದು. ದಿನಾಂಕ 29-12-2015 ರಂದು ನಾನು ನನ್ನ ಖಾಸಗಿ ಕೆಲಸದ ನಿಮಿತ್ಯ ಕಾಳನೂರ ಗ್ರಾಮಕ್ಕೆ ಹೋಗಿದ್ದು, ನಾನು ಕಾಳನೂರಿಯಲ್ಲಿದ್ದಾಗಲೇ ಮಧ್ಯಾಹ್ನ 2-00 ಗಂಟೆ ಸುಮಾರಿಗೆ ನನ್ನ ನೆಗೇಣಿಯಾದ ಹೇಮಾವತಿ ಇವರು ನನಗೆ ಫೋನ ಮಾಡಿ ನಿನ್ನ ಮಗಳಾದ ಕಾವೇರಿ ಇವಳು ಯಾವದೋ ವಿಷ ತೆಗೆದುಕೊಂಡಿರುತ್ತಾಳೆ ಅವಳಿಗೆ ಉಪಚಾರ ಕುರಿತು ಜೇವರ್ಗಿ ಕ್ರಾಸ ಹತ್ತಿರ ಇರುವ ಸ್ಪರ್ಶ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೇವೆ ಅಂತಾ ತಿಳಿಸಿದಳು. ನಾನೂ ಕೂಡಲೇ ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ಮಗಳಾದ ಕಾವೇರಿ ಇವಳು ಮಾತನ್ನಾಡುವ ಸ್ಥಿತಿಯಲ್ಲಿರಲಿಲ್ಲ. ಆದ್ದರಿಂದ ನಾನು ರಾಘವೇಂದ್ರ ನಗರ ಪೊಲೀಸರಿಗೆ ನನ್ನ ಮಗಳು ಮಾನಸಿಕ ಮಾಡಿಕೊಂಡು ಮನೆಯ ಬಾತರೂಮ ಕ್ಲೀನ ಮಾಡುವ ಯಾಸಿಡ ಕುಡಿದು ಅಸ್ವಸ್ಥಳಾಗಿರುತ್ತಾಳೆ ಅಂತಾ ತಿಳಿಸಿರುತ್ತೇನೆ. ನನ್ನ ಮಗಳ ದೇಹ ತುಂಬಾ ಕ್ಷೀಣಿಸುತ್ತಿರುವದರಿಂದ ಹೆಚ್ಚಿನ ಉಪಚಾರ ಕುರಿತು ಹೈದ್ರಾಬಾದ ಆಸ್ಪತ್ರೆಗೆ ತೆಗೆದುಕೊಂಡು ಹೋದಾಗ ಅಲ್ಲಿ 5, 6 ಲಕ್ಷ ರೂಪಾಯಿ ಖರ್ಚಾಗುತ್ತದೆ ಅಂತಾ ತಿಳಿಸಿದ್ದರಿಂದ ಮರಳಿ ನನ್ನ ಮಗಳಿಗೆ ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ತಂದು ಉಪಚಾರ ಕುರಿತು ಸೇರಿಕೆ ಮಾಡಿರುತ್ತೇನೆ. ಈಗ ನನ್ನ ಮಗಳು ಸ್ವಲ್ಪ ಸುಧಾರಿಸಿಕೊಂಡಿದ್ದು, ಅವಳು ವಿಚಾರಿಸಿದಾಗ ತಿಳಿಸಿದ್ದೇನೆಂದರೆ, ದಿನಾಂಕ 29-12-2015 ರಂದು 1-30 ಗಂಟೆ ಸುಮಾರಿಗೆ ಮಂಜುನಾಥ ಸೊಂತ ಎಂಬುವನು ನಮ್ಮ ಮನೆಗೆ ಬಂದು ನನಗೆ ಹೆದರಿಸಿ ಬಲತ್ಕಾರ ಮಾಡಲು ಪ್ರಯತ್ನಿಸುತ್ತಿದ್ದನು. ಆಗ ನಾನು ಚಿರಾಡಿದಾಗ ನಮ್ಮ ಮನೆಯ ಅಕ್ಕ ಪಕ್ಕದವರು ಬಂದಿದ್ದು, ಅವರನ್ನು ನೋಡಿ ಮಂಜುನಾಥ ಇತನು ಈ ವಿಷಯ ಯಾರಿಗಾದರೂ ತಿಳಿಸಿದರೆ ನಿನಗೆ ಜೀವ ಸಹಿತ  ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಓಡಿ ಹೋಗಿರುತ್ತಾನೆ ಅಂತಾ ತಿಳಿಸಿರುತ್ತಾಳೆ. ಕಾರಣ ನನ್ನ ಅಪ್ರಾಪ್ತ ವಯಸ್ಸಿನ ಮಗಳಾದ ಕುಮಾರಿ ಇವಳಿಗೆ ಹೆದರಿಸಿ ಬಲತ್ಕಾರ ಮಾಡಲು ಪ್ರಯತ್ನ ಪಟ್ಟ ಮಂಜುನಾಥ ಇತನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   

11 January 2016

KALABURAGI DISTRICT REPORTED CRIMES

ಕೊಲೆ ಪ್ರಕರಣ:
ಗ್ರಾಮೀಣ ಠಾಣೆ  ಕಲಬುರಗಿ : ದಿನಾಂಕ: 11/01/2016 ರಂದು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಗಾಯಾಳು ನಿತೀನ ತಂದೆ ನಾನಾಗೌಡ ರೆಡ್ಡಿ ಸಾ; ಶಾಂತಿ ನಗರ ಕಲಬುರಗಿ  ಇವರು ದಿನಾಂಕ.10-1-2016 ರಂದು ತಮ್ಮ ಗೆಳೆಯರಾದ  ರಾಜೇಂದ್ರ  ತಂದೆ ರವಿ ಕಾವಲೆ , ರಾಘು ಭಾರತಿ , ದಯಾನಂದ  ಹಾಗೂ ಗೋಪಾಲ ಜಾಪೂರಕರ ಎಲ್ಲರೂ ಕೂಡಿಕೊಂಡು ಸಾಯಂಕಾಲ ರಾಜೇಂದ್ರ ಕಾವಲೆ ಇವರ ಮನೆಯ ಛತ್ತಿನ ಮೇಲೆ ಮಾತನಾಡುತ್ತಾ ಕುಳಿತುಕೊಂಡು ರಾತ್ರಿ  9-00ಕ್ಕೆ ಗೆಳಗೆಯರಾದ ರಾಘು ಭಾರತಿ , ದಯಾನಂದ ಹಾಗೂ ಜಾಪೂರಕ ಇವರು ತಮ್ಮ ಮನೆಗೆ ಹೋದ  ನಂತರ ರಾತ್ರಿ 10-00 ಸುಮಾರಿಗೆ ರಾಜೇಂದ್ರ ಕಾವಲೆ ಇತನು ನನಗೆ ಮನೆಗೆ ಬಿಡಲು ತನ್ನ ಡಿಯೋ ಸ್ಕೂಟಿ ನಂ. ಕೆ.ಎ.32.ಇಬಿ.1880  ನೆದ್ದರ ಹೀರಾಪೂರ ಕ್ರಾಸ ಪೆಟ್ರೋಲ್ ಪಂಪಕಡೆಗೆ ಬರುತ್ತಿರುವಾಗ ಅಲ್ಲಿ ನಿಂತಿದ್ದ ಹೀರಾಪೂರಆನಂದ ರಾಂಪೂರೆ ಆನಂದ ರಾಂಪೂರೆ ಇತನನ್ನು ನೋಡಿ ನಮ್ಮ ಮೋಟಾರ ಸೈಕಲನ್ನು ನಿಲ್ಲಿಸಿದಾಗ ಆನಂದ ರಾಂಪೂರೆ ಮಜೀದ ಕಡೆಗೆ ಕೈ ಮಾಡಿದಾಗ ಮಲ್ಲುಗೌಡಾ , ಹೀರಾಪೂರ ಇರಫಾನ  ಇವರು ಬಂದು ನನ್ನೊಂದಿಗೆ ಇದ್ದ ರಾಜೇಂದ್ರನೊಂದಿಗೆ ಜಗಳ ತೆಗದು ಏನೋ ನೀನು ರಾಘು ಭಾರತಿಗೆ ಸಪೋರ್ಟ ಮಾಡಿ ನಮ್ಮ ವಿರುದ್ದ ಕೇಸು ಮಾಡಿಸುತಿಯಾ ಅಂತಾಬೈಯುತ್ತಾ ಟ್ರಾನ್ಸಫಾರಂ ಕಡೆಗೆ ಕರೆದುಕೊಂಡು ಹೋಗಿ ಹೋಡೆಯುತ್ತಿದ್ದು ನಾನು ಬಿಡಿಸಲು ಹೋದಾಗ ವಾಜೀದ ಪಟೇಲನು ಮತ್ತು ಸಂಗಡ ಇನ್ನು 3 ಜನರು ನನಗೆ ತಡೆದು ನನಗೆ ಹೊಡೆಯ ಹತ್ತಿದ್ದರು. ಆ ಕಡೆ ರಾಜೆಂದ್ರನಿಗೆ ಆನಂದ ರಾಂಪೂರೆ ತನು ಕಲ್ಲಿನಿಂದ ಮತ್ತು ಹರಿತವಾದ ಚಾಕುವಿನಿಂದ ರಾಜೆಂದ್ರನ ತಲೆಯ ಹಿಂದುಗಡೆ ಮತ್ತು , ತಲೆಯ ಮೇಲೆ ಹೊಡೆದಾಗ ಆತನು ಕೆಳಗೆ ಬಿದ್ದನು ಆಗ ನಾನು ರಾಜೆಂದ್ರನ ತಮ್ಮ ಜ್ವಾಲೆಂದರನಿಗೆ ಫೋನ ಮಾಡಿ ವಿಷಯ ತಿಳಿಸಿದಾಗ ಜ್ವಾಲೆಂದ್ರ , ರಾಘು ಹಾಗೂ ದಯಾನಂದ , ಅರುಣಕುಮಾರ ತಂದೆ ಅಂಬರಾಯ ಬಸವನಗರ,ಶಿವರಾಜ ತಂದೆ ರಾಜೆಂದ್ರ ಸೀನೂರ , ಮೊಹನ ತಂದೆ ದೇವಿಂದ್ರ ಸಿ.ಐ.ಬಿ.ಕಾಲೂನಿ ಇವರೆಲ್ಲರೂ ಬರುತ್ತಿರುವದನ್ನು ನೋಡಿ ಆನಂದ ರಾಂಪೂರೆ ,  ಇರಫಾನ, ಮಲ್ಲುಗೌಡ, ವಾಜೀದ ಪಟೇಲ್ ಮತ್ತು ಇನ್ನೂ 3 ಜನ ಓಡಿಹೋಗಿದ್ದು ಎಲ್ಲರೂ ಕೂಡಿಕೊಂಡು ರಾಜೇಂದ್ರನಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಲು ಮೃತ ಪಟ್ಟಿರುತ್ತಾನೆ ಅಂತಾ ತಿಳಿಸಿದ್ದು, ನಾನು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಕುರಿತು ಸೇರಿಕೆಯಾಗಿರುತ್ತೇನೆ. ಹೊಸ ವರ್ಷದಿನದಂದು  ಆನಂದ ರಾಂಪೂರೆ ಮತ್ತು ರಾಘು ಭಾರತಿ ಇತನೊಂದಿಗೆ ಜಗಳ ಮಾಡಿ ಹೊಡೆಬಡಿ ಮಾಡಿದ್ದು , ಈ ವಿಷಯದಲ್ಲಿ ಪೊಲೀಸ್ ಠಾಣೆಯಲ್ಲಿ ಕೇಸು ಮಾಡಿದ್ದು ಇದಕ್ಕೆ  ರಾಜೇಂದ್ರ ಕಾವಲೆ ಇತನೆ ಕಾರಣ ಎಂದು ರಾಜೆಂದ್ರನ ಮೇಲೆ ಸೇಡು ತಿರಿಸಿಕೊಳ್ಳುವ ಕುರಿತು ಕೊಲೆ ಮಾಡುವ ಉದ್ದೇಶದ ದಿನಾಂಕ.10-1-2016 ರಂದು ಹೀರಾಪೂರ ಮಜೀದ ಹತ್ತಿರ 1) ಆನಂದ ರಾಂಪೂರೆ, 2) ಇರಫಾನ 3)  ಮಲ್ಲುಗೌಡ ಸಾಹುಕಾರ 4)ಜಾವೇದ ಮತ್ತು ಇನ್ನೂ 3 ಜನರು ಕಲ್ಲಿನಿಂದ, ಹರಿತವಾದ ಚಾಕುದಿಂದ ರಾಜೆಂದ್ರನ ತಲೆಗೆ ಹೊಡೆದು ಭಾರಿಗಾಯಗೊಳಿಸಿ ಕೊಲೆ ಮಾಡಿದ್ದು ಸದರಿ ಆಪಾದಿತರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲಸಲಿಸಿದ ಹೇಳಿಕೆ ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಗ್ರಾಮೀಣ ಠಾಣೆ  ಕಲಬುರಗಿ: ದಿನಾಂಕ 10-01-16 ರಂದು ರಾತ್ರಿ 08-00 ಗಂಟೆ ಸುಮಾರಿಗೆ ಶ್ರೀ ಜಿತೇಂದ್ರ ತಂ. ಗಣೇಶ ಸಾ: ಬೆಲೂರ (ಜೆ) ಕ್ರಾಸ್ ಮತ್ತು ಆತನ ಗೆಳೆಯರಾದ ಅಶೋಕ, ರಂಜಿತ, ಮಹೇಶ ಎಲ್ಲರೂ ಸಫಾರಿ ದಾಬಾದ ಹತ್ತಿರ ಮಾತಾಡುತ್ತಿದ್ದಾಗ ಜಿತೇಂದ್ರನು ತನ್ನ ದಾಲಮಿಲ್ಲಕ್ಕೆ ಹೋಗುತ್ತೇನೆಂದು ಹೇಳಿ ಕಲಬುರಗಿ-ಹುಮನಾಬಾದ ಮುಖ್ಯ ರಸ್ತೆ ದಾಟಲು ರೋಡ ಬದಿಯಲ್ಲಿ ನಿಂತಾಗ ಆಗ ಹುಮನಾಬಾದ ಕಡೆಯಿಂದ ಬರುತ್ತಿದ್ದ ಕೆ.ಎಸ್.ಅರ್.ಟಿ.ಸಿ. ಬಸ್ಸು ಕೆಎ 33 ಎಫ 210 ಚಾಲಕ ನಾಗನಾಥನು ಬಸ್ಸನ್ನು ಅತಿವೇಗ ಮತ್ತು ನಿಷ್ಕಾಳಿಜಿತನದಿಂದ ಹಾಗೂ ಅಡ್ಡಾತಿಡ್ಡಿಯಾಗಿ ನಡೆಸುತ್ತಾ ಬಂದವನೇ ರೋಡ ಬದಿಯಲ್ಲಿ ನಿಂತ ಮೃತ ಜಿತೇಂದ್ರನಿಗೆ ಅಪಘಾತಪಡಿಸಿದನು. ಜಿತೇಂದ್ರ ಇತನು ನೆಲಕ್ಕೆ ಬೀದ್ದಾಗ ಬಸ್ಸಿನ ಹಿಂದಿನ ಟಾಯರ ಮೃತ ಜಿತೇಂದ್ರನ ತಲೆಯ ಮೇಲಿಂದ ಹಾಯ್ದು ಹೋಗಿದ್ದರಿಂದ ಭಾರಿ ರಕ್ತಸ್ರಾವವಾಗಿ ಸ್ಥಳದಲ್ಲಿ ಮೃತಪಟ್ಟಿದ್ದು. ಕೆ.ಎಸ್.ಅರ್.ಟಿ.ಸಿ. ಬಸ್ಸು ಕೆಎ 33 ಎಫ 210 ಚಾಲಕ ನಾಗನಾಥನ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶ ಮೇಲಿಂಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಗ್ರಾಮೀಣ ಠಾಣೆ  ಕಲಬುರಗಿ: ದಿನಾಂಕ: 10/01/2016 ರಂದು ಶ್ರೀ ಯಶವಂತ ತಂದೆ ಗುರುಲಿಂಗಪ್ಪ ಹತಗುಂದ ಸಾ: ಆರ್.ಎಸ್. ಕಾಲೋನಿ ಕಲಬುರಗಿ ರವರು ಎಳ್ಳೆ ಅಮಾವಾಸ್ಯ ಹಬ್ಬದ ಸಲುವಾಗಿ  ತಮ್ಮ ಹೆಂಡತಿ ಸಂಗೀತಾ ಮಕ್ಕಳಾದ ಭಾಗ್ಯಶ್ರೀ, ಪ್ರಿಯಾಂಕ, ಸಿದ್ದು, ಪ್ರಸಾದ್, ಮತ್ತು ಅವರ ಮನೆಯಲ್ಲಿ ಭಾಡಿಗೆ ಇರು ಪ್ರಿಯಾಂಕಾ ತಡಕಲ್ ಲ್ಲರೂ ಕೂಡಿಕೊಂಡು ಊರಿಗೆ ಹೋಗುವ ಕುರಿತು ಮುಂಜಾನೆ 9-30 ಗಂಟೆ ಸುಮಾರಿಗೆ ನೆಹರೂ ಗಂಜ್ ಬಸ್‌ ಸ್ಟಾಂಡ್‌ ನಲ್ಲಿ ಕಲಬುರಗಿಯಿಂದ ಸ್ವಂತ ಕಡೆ ಹೋಗುವ ಮ್ಯಾಕ್ಷಿಕ್ಯಾಬ್‌ ಟೆಂಪೋ ನಂ ಕೆಎ 39 – 162 ರಲ್ಲಿ ಮಹಾಗಾಂವ ಕ್ರಾಸ್‌ ನ ವರೆಗೆ ಹೋಗುವ ಕುರಿತು ಟೆಂಪೋದಲ್ಲಿ ಹೋಗುತ್ತಿರುವಾಗ ಟೆಂಪೋದ ಚಾಲಕನು ನಿಧಾನವಾಗಿ ನಡೆಯಿಸಿಕೊಂಡು ಹೋಗುತ್ತಿರುವಾಗ ಅವರಾಧ ಧಾಟಿ ಹೊಡಲ್‌ ತೋಟದ ಹತ್ತಿರ ಹೋಗುತ್ತಿರುವಾಗ ಎದರುಗಡೆಯಿಂದ ಒಂದು ಕಾರಿನ ಚಾಲಕನು ತನ್ನ ಕಾರನ್ನು ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ರೋಡಿನ ಮೇಲೆ ಅಡ್ಡಾದಿಡ್ಡಿಯಾಗಿ ನಡೆಯಿಸಿಕೊಂಡು ಬಂದವನೇ ನಮ್ಮ ಟೆಂಪೋಗೆ ಅಪಘಾತಪಡಿಸಿದ್ದರಿಂದ ಟೆಂಪೋ ಪಲ್ಟಿಯಾಗಿ ಬಿದ್ದಿದ್ದು ನಾವೆಲ್ಲಾ ಪ್ರಯಾಣಿಕರು ಒಳಗೆ ಬಿದ್ದು ಗಾಯಗಳಾಗಿದ್ದು ಟೆಂಪೋದಿಂದ ಹೊರ ಬಂದು ನೋಡಲಾಗಿ ನನಗೆ ಅಲ್ಲಲ್ಲಿ ರಕ್ತಗಾಯಗಳಾಗಿದ್ದು ನನ್ನ ಹೆಂಡತಿ ಟೊಂಕಕ್ಕೆ, ಕಾಲಿಗೆ ರಕ್ತಗಾಯವಾಗಿದ್ದು ನನ್ನ ಮಕ್ಕಳಾದ ಭಾಗ್ಯಶ್ರೀ, ಪ್ರಿಯಾಂಕ, ಸಿದ್ದು, ಪ್ರಸಾದ್, ಹಾಗೂ ಬಾಡಿಗೆ ಇರುವ ಪ್ರಿಯಾಂಕಳಿಗೆ ಕೈಕಾಲುಗಳಿಗೆ ಮುಖಕ್ಕೆ ಅಲ್ಲಲ್ಲಿ ರಕ್ತಗಾಯಗಳೂ ಮತ್ತು ಗುಪ್ತ ಗಾಯಗಳಾಗಿದ್ದು ಳಿದ ಕೆಲ ಪ್ರಯಾಣಿಕರಿಗೆ ಕೂಡಾ ರಕ್ತಗಾಯ ಮತ್ತು ಭಾರಿ ಗಾಯಗಳಾಗಿದ್ದು, ಕಾರಿನಲ್ಲಿದ್ದವರಿಗೆ ನೋಡಲಾಗಿ ಅವರಲ್ಲಿ ಇಬ್ಬರು ಭಾರಿ ಗಾಯದಿಂದ ಸ್ಥಳದಲ್ಲಿ ಮೃತಪಟ್ಟಿದ್ದು, ಹಾಗೂ ಇನ್ನೋಬ್ಬನಿಗೆ ಭಾರಿ ಪ್ರಮಾಣದ ಗಾಯಗಳಾಗಿದ್ದು ಕಾರ್ ನಂ ಕೆಎ 53 ಝಡ್‌ 2132 ನೇದ್ದು ಇತ್ತು, ಪೂರ್ತಿಯಾಗಿ ಕಾರು ಜಖಂ ಗೊಂಡಿರುತ್ತದೆ. ವಿಚಾರಣೆಯಲ್ಲಿ ಕಾರಿನ ಚಾಲಕ, ರಮೇಶ ತಂದೆ ಶಾಂತಕುಮಾರ್ ತೊನಸಳ್ಳಿ / ಆಲಗೂಡ ಸಾ: ಅಷ್ಟಗಾ ಮತ್ತು ಶಿವಾನಂದ ತಂದೆ ಮಲ್ಲೇಶಪ್ಪ ಬೆನಕನಳ್ಳಿ ಸಾ: ಅಷ್ಟಗಾ (ಭಿ) ಇವರಿಬ್ಬರೂ ಸ್ಥಳದಲ್ಲೇ ಮೃತಪಟ್ಟವರಿದ್ದು , ಶರಣಬಸಪ್ಪ ತಂದೆ ಸಾಯಿಬಣ್ಣ ಯರಬಾಗ ಸಾ: ಅಷ್ಟಗಾ ಈತನು ಗಾಯಗೊಂಡಿದ್ದು ಮತ್ತು ಬಸವರಾಜ ತಂದೆ ಶಾಂತವೀರಪ್ಪ ಮಾಲಿಪಾಟೀಲ್ ಸಾ: ಸಾವಳಗಿ (ಬಿ) ಈತನು ಟೆಂಪೋದಲ್ಲಿದ್ದವನು ಭಾರಿ ಗಾಯಹೊಂದಿ ಮೃತಪಟ್ಟಿರುತ್ತಾನೆ. ಮತ್ತು ಟೆಂಪೋದಲ್ಲಿರುವ ಇತರರಿಗೆ ಭಾರಿ ಗಾಯ ಮತ್ತು ರಕ್ತಗಾಯ ಹೊಂದಿದ್ದು .ಕಾರಣ ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಅಪಘಾತಕ್ಕೆ ಕಾರಣನಾದ ಕಾರ್ ನಂ ಕೆಎ 53 ಝಡ್‌ 2132 ನೇದ್ದರ ಚಾಲಕ ರಮೇಶ ತಂದೆ ಶಾಂತಕುಮಾರ್ ಸಾ: ಅಷ್ಟಗಾ  ಈತನ ವಿರುದ್ದ ಕ್ರಮ ಕೈಗೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ವರದಕ್ಷಿಣೆ ಕಿರುಕುಳ ಪ್ರಕರಣ:
ಮಹಿಳಾ ಪೊಲೀಸ ಠಾಣೆ :  ದಿನಾಂಕ 09-01-2016 ರಂದು ಶ್ರೀಮತಿ ವೇದಾ ಗಂಡ ಸಂತೋಷ ಹೊಸಮನಿ ಸಾ: ನ್ಯೂ ಜಿ.ಡಿ.ಎ ಕಾಲೋನಿ ಘಾಟಗೇ ಲೇಔಟ ಕಲಬುರಗಿರವರು ಠಾಣೆಗೆ ಹಾಜರಾಗಿ  ದಿನಾಂಕ 14-02-13 ರಂದು ಕಲಬುರಗಿಯ ಸಂತೋಷ ಇತನ್ನೊಂದಿಗೆ ಸಂಪ್ರದಾಯದಂತೆ ಮದುವೆಯಾಗಿದ್ದು, ಮದುವೆ ಕಾಲದಲ್ಲಿ ವರದಕ್ಷಿಣೆ ರೂಪದಲ್ಲಿ  1 ಲಕ್ಷ ರೂ. ಹಣ , 5 ತೊಲೆ ಬಂಗಾರ, ಮತ್ತು ಗೃಹ ಬಳಕೆಯ ಸಾಮಾನುಗಳು ಕೊಟ್ಟಿದ್ದು,. ನನ್ನ ಅತ್ತೆ ಜಗದೇವಿ ನನ್ನ ಗಂಡ ಸತ್ತಿದ್ದರಿಂದ ನಿನ್ನ ಗಂಡನಿಗೆ ನೌಕರಿ ಬಂದಿದೆ ಅಂತಾ ಯಾವಾಗಲೂ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡುತ್ತಿದ್ದಳು. ನನ್ನ ಮೈದುನರಾದ ಸುನೀಲ ಮತ್ತು ಅಂಬರೀಷ ಇವರು ಕೂಡ ನಿನ್ನ ಗಂಡ ಸಾಲ ಮಾಡಿದ್ದಾನೆ ನಿಮ್ಮ ತವರು ಮನೆಯಿಂದ  2 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ ಅಂತಾ ಹಿಂಸಿಸುತ್ತಿದ್ದರು. ನನ್ನ ಗಂಡ ಸಂತೋಷನು ಕೂಡ ತನ್ನ ತಾಯಿ ಮತ್ತು ತಮ್ಮಂದಿರಂತೆಯೇ ನನಗೆ ಸಾಲವಾಗಿದೆ ನನಗೆ ಸಾಲಗಾರರು ಕೆಲಸ ಮಾಡಲು ಬಿಡುತ್ತಿಲ್ಲ ನಿನಗೆ ಗಂಡ ಬೇಕಾದರೆ ನಿನ್ನ ತವರು ಮನೆಯಿಂದ 2 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಇಲ್ಲವಾದರೇ ನನಗೆ ಡೈವೋರ್ಸ ಕೊಡು ಅಂತಾ ಹಿಂಸೆ ಕೊಡುತ್ತಿದ್ದರು. ಅವರು ಕೊಡುವ ಹಿಂಸೆಯನ್ನು ನಾನು ತಾಳಲಾರದೇ ದಿನಾಂಕ 29-12-2015 ರಂದು ಸಾಂತ್ವಾನಾ ಮಹಿಳಾ ಸಹಾಯ ವಾಣಿ ಕೇಂದ್ರದಲ್ಲಿ ನನ್ನ ಗಂಡ ,ಅತ್ತೆ, ಮೈದುನರಿಗೆ ಕರೆಯಿಸಿ ಬುದ್ದಿವಾದ ಹೇಳುವಂತೆ ಅರ್ಜಿ  ಸಲ್ಲಿಸಿದ್ದು, ಇರುತ್ತದೆ.  ಇಂದು ದಿನಾಂಕ 09-01-16 ರಂದು ಬೆಳಿಗ್ಗೆ ನಾನು ಸ್ನಾನ ಮಾಡಿಕೊಳ್ಳಲು ಬಾತರೂಮಿಗೆ ಹೋದಾಗ ನನ್ನ ಅತ್ತೆ ಜಗದೇವಿ, ಗಂಡ ಸಂತೋಷ, ಮೈದುನ ಅಂಬರೀಷ, ಸುನೀಲ ಇವರೆಲ್ಲರೂ ಕೂಡಿ ಮನೆಯ ಬಾಗಿಲು ಹಾಕಿಕೊಂಡು ಇವಳು ನಮ್ಮ ವಿರುದ್ದ ಪೊಲೀಸ ಠಾಣೆಗೆ ಹೋಗಿದ್ದಾಳೆ ನಾವು ಹೇಗಾದರೂ ಪೊಲೀಸ ಠಾಣೆಗೆ ಹೋಗಲೇ ಬೇಕು ಇವಳಿಗೆ ಖಲಾಸ ಮಾಡಿ ಜೈಲಿಗೆ ಹೋಗೋಣಾ ಅಂತಾ ಮಾತನ್ನಾಡಿದ್ದನ್ನು ನಾನು ಕೇಳಿಸಿಕೊಂಡಿದ್ದು, ನಾನು ಕೂಡಲೇ ನಮ್ಮ ತಂದೆ ತಾಯಿಗೆ ಫೋನ ಮಾಡಿ ಮನೆಯಲ್ಲಿ ನಡೆದಿರುವ ವಿಷಯ ತಿಳಿಸಿದೆನು. ಅಷ್ಟರಲ್ಲಿಯೇ ನನ್ನ ಗಂಡ ಅತ್ತೆ ಮೈದುನರು ನೀನು ನಮ್ಮ ವಿರುದ್ದ ಪೊಲೀಸ ಠಾಣೆಯಲ್ಲಿ ಅರ್ಜಿ ಸಲ್ಲಿಸಿರುವಿ ನಮಗೆ ಪೊಲೀಸ ಠಾಣೆಗೆ ಕರೆಯಿಸಿಕೊಳ್ಳುತ್ತಿಯಾ ನಾವೇ ಇಂದು ನಿನಗೆ ಖಲಾಸ ಮಾಡಿ ಪೊಲೀಸರಿಗೆ ಶರಣಾಗುತ್ತೇವೆ ಎನ್ನುತ್ತಾ ನನ್ನ ಗಂಡ ನನಗೆ ಕೈಯಿಂದ ಹೊಡೆದಿದ್ದು, ನನ್ನ ಅತ್ತೆ ಚಪ್ಪಲಿಯಿಂದ ಹೊಡೆದು ಕೂದಲು ಹಿಡಿದು ಜಗ್ಗಾಡಿದ್ದು, ಮೈದುನನಾದ ಅಂಬರೀಷ ಮತ್ತು ಸುನೀಲ ಕೈಯಿಂದ ಹೊಡೆದರು. ಈ ನಾಲ್ಕು ಜನರು ಕೂಡಿ ಅವಾಚ್ಯ ಶಬ್ದಗಳಿಂದ ಬೈದು  ಹೊಡೆ ಬಡೆ ಮಾಡಿ ನನ್ನ ದುಪ್ಪಟ್ಟಾದಿಂದ ನನ್ನ ಕುತ್ತಿಗೆಗೆ ಸುತ್ತಿ ಕೊಲೆ ಮಾಡಲು ಪ್ರಯತ್ನಿಸುತ್ತಿದ್ದಾಗ ನಮ್ಮ ತಂದೆ ತಾಯಿ , ತಮ್ಮ ನಮ್ಮ ಮನೆಗೆ ಬಂದು ನನಗೆ ಅವರಿಂದ ಬಿಡಿಸಿಕೊಂಡರು..ಮದುವೆಯಾದಾಗಿನಿಂದ ನನ್ನ ಗಂಡ ಸಂತೋಷ, ಅತ್ತೆ ಜಗದೇವಿ, ಮೈದುನರಾದ ಅಂಬರೀಷ, ಸುನೀಲ ಇವರೆಲ್ಲರೂ ಕೂಡಿ ತವರು ಮನೆಯಿಂದ 2 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ ಅಂತಾ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಟ್ಟು ಕೈಯಿಂದ ಮತ್ತು ಚಪ್ಪಲಿಯಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ನನ್ನ ಓಡಣಿಯಿಂದ ಕುತ್ತಿಗೆಗೆ ಸುತ್ತಿ ಜಗ್ಗಾಡಿ ಕೊಲೆ ಮಾಡಲು ಪ್ರಯತ್ನಿಸಿದವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹುಡುಗ ಕಾಣೆ ಪ್ರಕರಣ:
ಅಶೋಕ ನಗರ ಠಾಣೆ: ದಿನಾಂಕ 09/01/2016 ರಂದು ಶ್ರೀ ದಯಾನಂದ ತಂದೆ ಶಾಮರಾವ ಭಾವಿಕಟ್ಟಿ  ಸಾ: ಕರುಣೇಶ್ವರ ನಗರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ನಮ್ಮ ಸ್ವಂತ ಊರು ಹುಮನಾಬಾದ ತಾಲೂಕಿನ ರಾಮಪೂರ ಗ್ರಾಮ ಇದ್ದು ನಾನು ಕಳೆದ 2 ವರ್ಷಗಳಿಂದ ಕಲಬುರಗಿ ನಗರದ ಕರುಣೇಶ್ವರ ನಗರದಲ್ಲಿ ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದು. 14 ವರ್ಷದ ನಮ್ಮ ತಮ್ಮನಾದ ಗಜಾನಂದನಿಗೆ ನಾನು ವಿದ್ಯಾಬ್ಯಾಸದ ಸಲುವಾಗಿ ಕಲಬುರಗಿಗೆ ಕರೆದುಕೊಂಡು ಬಂದಿದ್ದು ಇರುತ್ತದೆ. ಅವನು ವಿದ್ಯಾ ನಗರ ಬಡಾವಣೆಯಲ್ಲಿರುವ ಪಂಚಶೀಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7 ನೇ ತರಗತಿಯಲ್ಲಿ ವಿದ್ಯಾಬ್ಯಾಸ ಮಾಡಿಕೊಂಡಿರುತ್ತಾನೆ. ದಿನಾಂಕ 24/12/2015 ರಂದು ನಾನು ಮತ್ತು ನನ್ನ ತಮ್ಮ ಇಬ್ಬರೂ ಕೂಡಿ ನಮ್ಮ ಸ್ವಂತಗ್ರಾಮ ರಾಮಪೂರಕ್ಕೆ ಹೋಗಿದ್ದು ಇರುತ್ತದೆ. ನಾನು ಎರಡು ದಿವಸ ಊರಿನಲ್ಲಿ ಉಳಿದು ನಾನೊಬ್ಬನೆ ಮರಳಿ ಕಲಬುರಗಿಗೆ ಬಂದಿದ್ದು.  ನಂತರ ದಿನಾಂಕ 05/01/2016 ರಂದು ತಮ್ಮನನ್ನು ಕಲಬುರಗಿಗೆ ಕರೆದುಕೊಂಡು ಬಂದಿದ್ದು. ಅಂದು ಮದ್ಯಾನ 12:00 ಗಂಟೆಯ ಸುಮಾರಿಗೆ ನಾನು ನಮ್ಮ ತಮ್ಮ ಗಜಾನಂದನಿಗೆ ಕರುಣೇಶ್ವರ ನಗರದಲ್ಲಿ ಇರುವ ಮನೆಯಲ್ಲಿ ಬಿಟ್ಟು ನಾನು ಕೆಲಸಕ್ಕೆ ಹೋಗಿಮರಳಿ ಸಾಯಂಕಾಲ 7:00 ಮನೆಗೆ ಬಂದು ನೋಡಲು ನಮ್ಮ ತಮ್ಮ ಗಜಾನಂದ ಈತನು ಮನೆಯಲ್ಲಿ ಇರದೇ ಕಾಣೆಯಾಗಿದ್ದು ಇರುತ್ತದೆ. ಎಲ್ಲಾ ಕಡೆ ಹುಡುಕಾಡಲಾಗು ಸಿಕ್ಕಿರುವುದಿಲ್ಲ. ನನ್ನ ತಮ್ಮನು ಮನೆಯಿಂದ ಹೋಗುವಾಗ ನೀಲಿ ಬಣ್ಣದ ಜೀನ್ಸಪ್ಯಾಂಟ , ಕೆಂಪುಬಣ್ಣದ ಲೈನಿಂಗ ಶರ್ಟ ಧರಿಸಿದ್ದು, ಕನ್ನಡ ಭಾಷೆ ಮಾತನಾಡುತ್ತಾನೆ. ನನ್ನ ತಮ್ಮನು ಕಾಣೆಯಾದ ಬಗ್ಗೆ ನಾನು ನಮ್ಮ ಸಂಬಂದಿಕರಿಗೆ ಹಾಗೂ ಅವನ ಗೆಳೆಯರಿಗೆ ವಿಚಾರಿಸಲು ಯಾವುದೇ ಸುಳಿವು ಸಿಕ್ಕಿರುವುದಿಲ್ಲ. ಈ ಬಗ್ಗೆ ನಾನು ನಮ್ಮ ತಂದೆಯವರಿಗೆ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ನನ್ನ ತಮ್ಮ ಕಾಣೆಯಾದ ಬಗ್ಗೆ ದೂರು ಸಲ್ಲಿಸಿದ್ದು. ಕಾಣೆಯಾದ ನನ್ನ ತಮ್ಮನನ್ನು ಹುಡುಕಿಕೊಡುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮಟಕಾ ಜೂಜು ಕೋರನ ಬಂಧನ
ನಿಂಬರ್ಗಾ ಪೊಲೀಸ ಠಾಣೆ: ದಿನಾಂಕ 09/01/2016 ರಂದು ಶ್ರೀ ಗೋಪಾಲ ರಾಠೋಡ ಪಿ.ಎಸ್.ಐ ನಿಂಬರ್ಗಾ ಪೊಲೀಸ ಠಾಣೆ ರವರು ಠಾಣೆಯ ಸಿಬ್ಬಂಧಿಯವರಾದ ಶ್ರೀ ದತ್ತಾತ್ರೇಯ ಸಿಪಿಸಿ 887, ಶ್ರೀ ಚಂದ್ರಶೇಖರ ಸಿಪಿಸಿ 670 ರವರೊಂದಿಗೆ ಪೆಟ್ರೊಲಿಂಗ ಕರ್ತವ್ಯದಲ್ಲಿದ್ದಾಗ ಧಂಗಾಪೂರ ಗ್ರಾಮದ ಶಿವಪುತ್ರಪ್ಪ ಯಳಸಂಗಿ ಇವರ ಹೊಟೇಲ ಮುಂದೆ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಸುತ್ತಾ ಸಾರ್ವಜನಿಕರಿಂದ ಹಣ ಪಡೆದು ಮೋಸ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪಂಚರಾದ 01) ಶ್ರೀ ಬಸವರಾಜ ತಂದೆ ನಾಗಪ್ಪ ಕೋರೆ ಸಾ: ನಿಂಬರ್ಗಾ , 02) ಶ್ರೀ ಈರಯ್ಯ ತಂದೆ ಶರಣಯ್ಯ ಹಿರೇಮಠ ಸಾ: ನಿಂಬರ್ಗಾ  ಇವರನ್ನು ಬರ ಮಾಡಿಕೊಂಡು ಸಿಬ್ಬಂಧಿ ಹಾಗೂ ಇಬ್ಬರು ಪಂಚರೊಂದಿಗೆ ಧಂಗಾಪೂರ ಗ್ರಾಮಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ರೋಡಿನ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿದ್ದುದ್ದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ವಿಚಾರಿಸಲು ಆತನ ಹೆಸರು ಶರಣಯ್ಯ ತಂದೆ ಕಲ್ಲಯ್ಯ ಸಾಲಿಮಠ ಸಾ|| ಧಂಗಾಪೂರ ಅಂತ ತಿಳಿಸಿದ್ದು ಆತನನ್ನು ಚಕ್ ಮಾಡಲಾಗಿ ಇತನ ಹತ್ತಿರ ನಗದು ಹಣ 1110/- ರೂಪಾಯಿ ಮತ್ತು ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ ನೇದ್ದವುಗಳನ್ನು ವಶಪಡಿಸಿಕೊಂಡು ಸದರಿಯವನ ವಿರುದ್ದ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮಟಕಾ ಜೂಜು ಕೋರನ ಬಂಧನ
ನಿಂಬರ್ಗಾ ಪೊಲೀಸ ಠಾಣೆ:  ದಿನಾಂಕ 09/01/2016 ರಂದು ಶ್ರೀ ಗೋಪಾಲ ರಾಠೋಡ ಪಿ.ಎಸ್.ಐ ನಿಂಬರ್ಗಾ ಪೊಲೀಸ ಠಾಣೆ ರವರು ಠಾಣೆಯ ಸಿಬ್ಬಂದಿಯವರಾದ ಶ್ರೀ ದತ್ತಾತ್ರೇಯ ಸಿಪಿಸಿ 887, ಶ್ರೀ ಶಿವಪುತ್ರ ಸಿಪಿಸಿ 1139 ರವರೊಂದಿಗೆ ಪೆಟ್ರೊಲಿಂಗ ಕರ್ತವ್ಯದಲ್ಲಿದ್ದಾಗ ಖಚಿತ ಬಾತ್ಮಿ ಬಂದಿದ್ದೇನೆಂದರೆ ನಿಂಬರ್ಗಾ ಗ್ರಾಮದ ಅಂಬೇಡ್ಕರ ವೃತ್ತದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಸುತ್ತಾ ಸಾರ್ವಜನಿಕರಿಂದ ಹಣ ಪಡೆದು ಮೋಸ ಮಾಡುತ್ತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಪಂಚರೊಂದಿಗೆ ಅಲ್ಲಿಗೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ರೋಡಿನ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಾ ಸಾರ್ವಜನಿಕರಿಗೆ ಮೋಸ ಮಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ವಿಚಾರಿಸಲು ಆತನ ಹೆಸರು ಮಲ್ಲಿಕಾರ್ಜುನ ತಂದೆ ಶರಣಪ್ಪ ಬಿದನಕರ ಸಾ|| ನಿಂಬರ್ಗಾ ಅಂತ ತಿಳಿಸಿದ್ದು ಚಕ್ ಮಾಡಲಾಗಿ ಆತನ ಹತ್ತಿರ ನಗದು ಹಣ 530/- ರೂಪಾಯಿ ಮತ್ತು ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ ನೇದ್ದವುಗಳನ್ನು ವಶಪಡಿಸಿಕೊಂಸು ಆತನ ವಿರುದ್ದ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.