POLICE BHAVAN KALABURAGI

POLICE BHAVAN KALABURAGI

25 September 2015

KALABURAGI DISTRICT REPORTED CRIMES

ಮಟಕಾ ಜೂಜು ಕೋರರರ ಬಂಧನ :
 ದೇವಲಗಾಣಗಾಪುರ ಪೊಲೀಸ್ ಠಾಣೆ : ದಿನಾಂಕ 23-09-2015 ರಂದು ಸಾಯಾಂಕಾಲ 06-00 ಗಂಟೆ ಸುಮಾರಿಗೆ  ದೇವಲ ಗಾಣಗಾಪುರರದ ಶಾಂತಿ ನಗರದ ಸಾರ್ವಜನಿಕ ಸ್ಥಳದಲ್ಲಿ ನಬಿಸಾಬ ತಂದೆ ಪಕೀರಸಾಬ @ ಅಬ್ಬಾಸಾಬ ತಾಂಬೋಳಿ ವಯ ; 55 ವರ್ಷ, ಸಾ|| ದೇವಲಗಾಣಗಾಪುರು ತಾ|| ಅಫಜಲಪೂರು, ಇತನು ಸಾರ್ವಜನಿಕ ಸ್ಥಳದಲ್ಲಿ ಕುಳಿತುಕೊಂಡು ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟ ನಡೆಸುತ್ತಿರುವ ಬಗ್ಗೆ ಕಲಬುರಗಿ ಡಿಸಿಐಬಿ ಘಟಕದ ಸಿಬ್ಬಂದಿಯವರು ಮಾಹಿತಿ ಸಂಗ್ರಹಣೆ ಮಾಡಿ. ದಾಳಿ ಮಾಡಿ ಸದರಿಯವನಿಗೆ ಹಿಡಿದು ಅವನ ಕಡೆಯಿಂದ  ಮಟಕಾ ಅಂಕಿ ಸಂಖ್ಯೆ ಬರೆದ ಒಂದು ಚೀಟಿ, ಒಂದು ಬಾಲ್ ಪೆನ್ನು ಮತ್ತು ನಗದು ಹಣ 4950/- ರೂಪಾಯಿ ಹಣವನ್ನು ಜಪ್ತು ಮಾಡಿಕೊಂಡು ದೇವಲಗಾಣಗಾಪುರ ಪೊಲೀಸ್ ಠಾಣೆಯಲ್ಲಿ  ಗುನ್ನೆ ದಾಖಲಾಯಿಸಿದ್ದು ಇರುತ್ತದೆ.
ಇಸ್ಪೀಟ್ ಜೂಜಾಟ ಪ್ರಕರಣ:
ಅಫಜಲಪೂರ ಪೊಲೀಶ್ ಠಾಣೆ : ದಿನಾಂಕ 24-09-2015 ರಂದು ಮಾದಾಬಾಳ ತಾಂಡಾದ ಹತ್ತಿರ  ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರು ಮತ್ತು ಠಾಣೆಯ ಸಿಬ್ಬಂದಿ ಜನರಾದ 1) ಜಗನ್ನಾಥ 2) ಸುರೇಶ 3) ಪಾಂಡುರಂಗ 4) ನಿಂಗಣ್ಣ ರವರನ್ನು ಸಂಗಡ ಕರೆದುಕೊಂಡು ದಾಳಿ ಮಾಡಲಾಗಿ ಜೂಜಾಡುತ್ತಿದ್ದ ನಾಲ್ಕು ಜನರು ಪಣಕ್ಕೆ ಇಟ್ಟ ಹಣವನ್ನು ಸ್ಥಳದಲ್ಲಿಯೆ ಬಿಟ್ಟು  ಓಡಿ ಹೋಗಿದ್ದು , ಅವರಲ್ಲಿ ಇಬ್ಬರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲಾಗಿ 1) ಮಹಾಂತೇಶ ತಂದೆ ಸಿದ್ದಪ್ಪ ಜಮಾದಾರ ಸಾ||ಚಿಂಚೋಳಿ ತಾ||ಅಫಜಲಪೂರ  2) ಶ್ರೀಶೈಲ ತಂದೆ ಸಿದ್ರಾಮಪ್ಪ ಕಲಕೇರಿ ಸಾ|| ಅಫಜಲಪೂರ  ಅಂತಾ ತಿಳಿಸಿದ್ದು, ನಂತರ ಓಡಿ ಹೋದ ನಾಲ್ಕು ಜನರ ಹೆಸರು ವಿಳಾಸ ಸದರಿಯವರಿಗೆ ವಿಚಾರಿಸಲಾಗಿ 1) ಶಿವಾನಂದ ತಂದೆ ನಿಂಗರಾಜ ಬಿರಾದಾರ ಸಾ||ಅಫಜಲಪೂರ  2) ಶರಣು ತಂದೆ ಗಂಗಾಧರ ಕೂಡಮುಳೆ ಸಾ|| ಅಫಜಲಪೂರ 3) ಶ್ರೀಶೈಲ ತಂದೆ ಮಳೇಪ್ಪ ಅಂದೊಡಗಿ ಸಾ|| ಅಫಜಲಪೂರ 4) ಪ್ರಶಾಂತ ತಂದೆ ಶರಣಬಸಪ್ಪ ನಂದಿ ಸಾ|| ಅಫಜಲಪೂರ ಅಂತ  ತಿಳಿಸಿದ್ದು. ಇಸ್ಪೇಟ ಜೂಜಾಟಕ್ಕೆ ಒಟ್ಟು 1890/- ರೂ ಮತ್ತು 52 ಇಸ್ಪೆಟ ಎಲೆಗಳು ಮುಂದಿನ ಪುರಾವೆಗಾಗಿ ವಶಕ್ಕೆ ತೆಗೆದುಕೊಂಡು ಆರೋಪಿತರ ವಿರುದ್ದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕಳವು ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ದಿನಾಂಕ 24/09/2015 ರಂದು ಶ್ರೀಮತಿ. ಅರ್ಚನಾ ಗಂಡ ಸುರೇಶ ಗಾಯಕವಾಡ ಸಾ: ವಿದ್ಯಾನಗರ ರವರು ಠಾಣೆಗೆ ಹಾಜರಾಗಿ ನಮ್ಮ ಮನೆಯ ಕೆಳಗಡೆ ವಾಸವಾಗಿರುವ   ನಮ್ಮ ಅಕ್ಕ ಗೊದಾವರಿ ರವರು ಊರಿಗೆ ಹೊಗಿರುತ್ತಾರೆ. ನಿನ್ನೆ ದಿನಾಂಕ 23/09/2015 ರಂದು ರಾತ್ರಿ 9-30 ಗಂಟೆಗೆ  ನನ್ನ ಪತಿ ಸುರೇಶ ರವರು ಡ್ಯೂಟಿಗೆ ಹೋದ ನಣತರ ನಾನು ಮನೆ ಬಾಗಿಲು ಮುಂದೆ ಮಾಡಿ ಮಲಗಿದ್ದು ದಿನಾಂಕ 24/09/2015 ರಂದು ಬೆಳಿಗ್ಗೆ 5 ಗಂಟೆಗೆ ಎದ್ದು ನೊಡಲು ನಮ್ಮ ಮನೆಯ ಬೇಡ ರೂಮ ಅಲಮಾರಾ ಬಾಗಿಲು ತೆರೆದಿದ್ದು  ರಾತ್ರಿ ವೇಳೆಯಲ್ಲಿ  ಯಾರೋ ಕಳ್ಳರು ಅತಿಕ್ರಮ ಪ್ರವೇಶ ಮಾಡಿ  1) ಬಂಗಾರದ 20 ಗ್ರಾಂ ಲಾಕೇಟ  ಅದಕ್ಕೆ S ಆಕಾರದ ಪದಕವುಳ್ಳದ್ದು  ಅ:ಕಿ: 50,000/- ರೂ 2)  ಪರ್ಸದಲ್ಲಿದ್ದ  ನಗದು 2000/- ರೂಪಾಯಿ ಮತ್ತು 3) ಸ್ಯಾಮಸಂಗ ಮೊಬೈಲ ಹೀಗೆ ಒಟ್ಟು 60,000/- ರೂ ಮೌಲ್ಯದ ಬಂಗಾರ, ಮೊಬೈಲ ಹಣವನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಅಶೋಕ ನಗರ ಠಾಣೆಯಲಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ. 

24 September 2015

Kalaburagi District Reported Crimes

ಅತ್ಯಾಚಾರ ಮಾಡಿದ ಪ್ರಕರಣ :
ಮಹಿಳಾ ಠಾಣೆ : ಕುಮಾರಿ ಇವರಿಗೆ ಸಂಬಂಧಿಕನಾದ ಪ್ರವೀಣ ತಂದೆ ಅಣ್ಣಪ್ಪಾ ರಾಜನಾಳ ಎಂಬುವನು ದಿನಾಂಕ 10-05-2010 ರಂದು ಸುಮಾರು ರಾತ್ರಿ 9-30 ಗಂಟೆಗೆ ಸಿ.ಐ.ಬಿ ಕಾಲೋನಿಯಲ್ಲಿರುವ ಅವರ ಮನೆಯಲ್ಲಿ ನನಗೆ ಬಲವಂತವಾಗಿ ಅತ್ಯಾಚಾರ ಮಾಡಿದನು. ಈ ವಿಷಯ ನಿಮ್ಮ ಮನೆಯಲ್ಲಿ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುತ್ತೇನೆ ಅಂತಾ ಹೆದರಿಸಿದ್ದಾನೆ. ಅಲ್ಲಿಂದ ಇಲ್ಲಿಯವರೆಗೆ ನನಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಹೇಳಿ ನನಗೆ ಬಲವಂತವಾಗಿ ಅತ್ಯಾಚಾರ ಮಾಡುತ್ತಾ ಬಂದಿದ್ದಾನೆ. 2013  ರಲ್ಲಿ ಸತ್ಯದರ್ಶಿನಿ ಲಾಡ್ಜಗೆ ಕರೆದುಕೊಂಡು ಹೋಗಿ 8 ದಿವಸ  ಅತ್ಯಾಚಾರ ಮಾಡಿರುತ್ತಾನೆ.2014 ನೇ ಸಾಲಿನ ನವೆಂಬರ ತಿಂಗಳಲ್ಲಿ ಕಲಬುರಗಿ ಕಾಂತಾ ಕಾಲೋನಿಯಲ್ಲಿ ಮನೆ ಮಾಡಿ ಇಟ್ಟು  ಬಲವಂತವಾಗಿ ಸಂಭೋಗ ಮಾಡಿರುತ್ತಾನೆ ನಾನು ಗರ್ಭೀಣಿ ಇರುತ್ತೇನೆ. ಅಂತಾ ತಿಳಿಸಿದಾಗ ಯಾವುದೇ ಮಾತ್ರಗಳನ್ನು ಕೊಟ್ಟು ಗರ್ಭಪಾತ ಮಾಡಿಸಿರುತ್ತಾನೆ ಇದೇ ರೀತಿಯಾಗಿ 3-4 ಸಲ ಗರ್ಭಪಾತ ಮಾಡಿಸಿರುತ್ತಾನೆ ನಾನು ಮಾನಸಿಕವಾಗಿ ದೈಹಿಕವಾಗಿ ಕುಗ್ಗಿರುತ್ತೇನೆ ಇದೆ ವರ್ಷದ ಜನವರೆ,ಪೆಬ್ರುವರಿ ,ಮಾರ್ಚ ತಿಂಗಳಲ್ಲಿ ಕೂಡಾ ಸತ್ಯದರ್ಶಿನಿ ಲಾಡ್ಜನಲ್ಲಿ ರೂಮ ಮಾಡಿ ನನ್ನ ಇಚ್ಛೆ ವಿರುಧ್ದ ಬಲವಂತವಾಗಿ ಸಂಭೋಗ ಮಾಡಿರುತ್ತಾನೆ. 2010 ರಿಂದ ಇಲ್ಲಿಯವರೆಗೆ  ಸತತವಾಗಿ ದೈಹಿಕ ಸಂಬೋಗ ಮಾಡಿ  ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿ  ಗರ್ಭಪಾತ ಮಾಡಿಸಿದ  ಪ್ರವೀಣ ಇತನ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ: 22/09/2015 ರಂದು  ನಾನು ನನ್ನ ಗಂಡ ಮಗು ಮತ್ತು ನನ್ನ ಅಜ್ಜಿಯೊಂದಿಗೆ ರಾಮತೀರ್ಥನಗರದಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಿರುತ್ತೇನೆ. ನನ್ನ ಗಂಡ ಮಲ್ಲಿಕಾರ್ಜುನ ಇವರು ದುತ್ತರಗಾಂವ ಪ್ರೌಡಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದು ಅಂಗವಿಕಲರಾಗಿರುತ್ತಾರೆ. ಈಗ್ಗೆ ಒಂದು ವಾರದ ಹಿಂದೆ ನನ್ನ ಅಜ್ಜಿ ನನ್ನ ಬಾಣಂತನಕ್ಕೆಂದು ನಮ್ಮ ಮನೆಗೆ ಬಂದು ನಮ್ಮಲ್ಲಿಯೇ ಉಳಿದಿರುತ್ತಾರೆ. ಹೀಗಿದ್ದು ದಿನಾಂಕ: 22/09/2015 ರಂದು ನಮ್ಮ ಅಜ್ಜಿ ಮಹಾದೇವಿ ಇವರು ಸಂಡಾಸಕ್ಕೆಂದು ಬೆಳಿಗ್ಗೆ 4-20 ಗಂಟೆ ಸುಮಾರಿಗೆ ಎದ್ದು ಬಾಗಿಲು ತೆರೆದು ಸಂಡಾಸಕ್ಕೆ ಹೋದಾಗ ಯಾರೋ ಒಬ್ಬ ಅಪರಿಚಿ ಗಂಡಸು ಅಂದಾಜು 35 ರಿಂದ 42 ವರ್ಷದ ವ್ಯೆಕ್ತಿ ಬಾಗಿಲು ತೆರೆದ ನಮ್ಮ ಮನೆಯೊಳಗೆ ಬಂದವನೇ ನಾವು ಮಲಗಿದ್ದ ಅಲಮಾರಾದ ಬಾಗಿಲು ತೆಗೆದು ಅಲಮಾರಾದಲ್ಲಿಟ್ಟ ಬಂಗಾರ ಬೆಳ್ಳಿ ಹಣ ತೆಗೆದುಕೊಳ್ಲುತ್ತಿದ್ದಾಗ ನನಗೆ ಎಚ್ಚರಚಾವಾಗಿ ನಾನು ಅವನನ್ನು ತಡೆದು ಯಾರೆಂದು ಚಿರಾಡುತ್ತಾ ಅವನ ಕಾಲು ಹಿಡಿದು ಎಳೆದುಕೊಂಡಾಗ ಅವನು ನನ್ನ ಎಳೆಯುತ್ತಲೇ ಹೊಸ್ತಿಲವರೆಗೆ ತಂದು ನನ್ನಿಂದ ಬಿಡಿಸಿಕೊಂಡು ಓಡಿ ಹೋದನು. ನಾನು ಚಿರಾಡುತ್ತಿದ್ದನ್ನು ಕೇಳಿ ನನ್ನ ಗಂಡ ಅಜ್ಜಿ ಬಂದು ನೋಡಲು ಅವನು ಓಡಿಹೋದನು. ನಂತರ ಅಲಮಾರಾದಲ್ಲಿ ನೋಡಲು ಅಲಮಾರಾದಲ್ಲಿ ಇಟ್ಟಿದ್ದ ಬಂಗಾರದ ಆಭರಣಗಳು, ಬೆಳ್ಳಿಯ ಆಭರಣಗಳು ಹಾಗು ನಗದು ಹಣ ಹೀಗೆ ಒಟ್ಟು 1,49,400/- ಕಿಮ್ಮತ್ತಿನದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾನೆ ಅಂತಾ ಶ್ರೀಮತಿ ಸುಖದೇವಿ ಗಂಡ ಮಲ್ಲಿಕಾರ್ಜುನ ಕೊರಳ್ಳಿ ಸಾ: ಗುಡುರ ತಾ: ಅಫಜಲಪೂರ ಹಾ:ವ: ರಾಮತೀರ್ಥನಗರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಯಲ್ಲಾಲಿಂಗ ತಂದೆ ಶರಣಪ್ಪಾ ಗೌಡಪ್ಪಗೋಳ ಸಾ|| ದೇವಂತಗಿ, ಹಾ|| || ಕಡಗಂಚಿ ಗ್ರಾಮ ರವರು ಹಾಗೂ ಅವರ ಅಣ್ಣಂದಿರಾದ 01] ಬೀರಪ್ಪಾ ತಂದೆ ಶರಣಪ್ಪ ಗೌಡಪ್ಪಗೋಳ, 02] ತುಕಾರಾಮ ತಂದೆ ಶರಣಪ್ಪ ಗೌಡಪ್ಪಗೋಳ ಇವರ ಮಧ್ಯೆ ಹೊಲದ ಬಗ್ಗೆ ಬಹಳ ದಿನದಿಂದ ತಕರಾರು ಇರುತ್ತದೆ. ಫಿರ್ಯಾದಿಯು ದೇವಂತಗಿಯ ತನ್ನ ಹೊಲದಲ್ಲಿ ಬಿತ್ತನೆ ಮಾಡಲು ದಿನಾಂಕ 22/09/2015 ರಂದು ಬೆಳಿಗ್ಗೆ ಹೊಲಕ್ಕೆ ಹೋಗಿದ್ದು ಆಗ ಆರೋಪಿತರು ಗಳೆ ಹೊಡೆಯುತ್ತಿದ್ದರು ಅದನ್ನು ನೋಡಿ ಅವರಿಗೆ ನನ್ನ ಹೊಲದಲ್ಲಿ ಏಕೆ ಗಳೆ ಹೊಡೆಯುತ್ತಿರಿ ಅಂತ ಕೇಳಿದ್ದಕ್ಕೆ ಆರೋಪಿತರಿಬ್ಬರೂ ಏ ಸೂಳೆ ಮಗನೆ ನಿನ್ನದು ಎಲ್ಲಿ ಹೊಲ ಬರುತ್ತದೆ ಎಲ್ಲಾ ಹೊಲ ನಮ್ಮದು ಇರುತ್ತದೆ ಈ ಹೊಲದಲ್ಲಿ ಬಂದರೆ ನಿನಗೆ ಖಲಾಸ ಮಾಡುತ್ತೆವೆಂದು ಜೀವ ಭಯ ಹಾಕಿ ಕಲ್ಲು ಮತ್ತು ಬಡಿಗೆಗಳಿಂದ ಹೊಡೆ ಬಡೆ ಮಾಡಿ ಸಾದಾ, ಭಾರಿ & ಗುಪ್ತಗಾಯಗಳು ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣುಮಗಳು ಕಾಣೆಯಾದ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 05-09-2015 ರಂದು ಶ್ರೀ ಈರಪ್ಪಾ ತಂದೆ ಜಂಪಣ್ಣಾ ಮಾಶಾಳ ಸಾ : ಚಿಂಚೋಳಿ ರವರು ಮತ್ತು ಹೆಂಡತಿ ಭಾಗ್ಯಶ್ರೀ ನನ್ನ ತಾಯಿ ಮಾಹಂತಪ್ಪ ನಮ್ಮ ಮಕ್ಕಳೊಂದಿಗೆ ನಮ್ಮ  ಮನೆಯಲ್ಲಿದ್ದಾಗ ನನ್ನ ಹೆಂಡತಿ ಭಾಗ್ಯಶ್ರೀ ಇವಳು ನಮ್ಮ ಗ್ರಾಮದ ನನ್ನ ಹೆಂಡತಿಯ ತವರು ಮನೆಗೆ ಹೋಗಿ ಬರುತ್ತೇವೆ  ಅಂತಾ ಹೇಳಿ ಮನೆಯಿಂದ ಹೋಗಿರುತ್ತಾಳೆ. ಎಷ್ಟೊತ್ತಾದರು ನನ್ನ ಹೆಂಡತಿ ಮರಳಿ ಮನೆಗೆ ಬರಲಿಲ್ಲದ ನಂತರ  ನಾನು ಮತ್ತು ನಮ್ಮ ತಾಯಿ ಕೂಡಿ ನಮ್ಮ ಬಿಗರ ಮನೆಗೆ ಹೋಗಿ ನನ್ನ ಹೆಂಡತಿಯ ತಾಯಿಯಾದ ಸುಸಲಾಬಾಯಿ ಇವಳಿಗೆ  ನನ್ನ ಹೆಂಡತಿ ಬಗ್ಗೆ ವಿಚಾರಿಸಿದಾಗ ನಮ್ಮ ಮನೆಗೆ ಬಂದಿರುವುದಿಲ್ಲ ಅಂತ ತಿಳಿಸಿದ್ದು ನಂತರ ನಾನು ಎಲ್ಲಾ ಕಡೆ ಹುಡುಕಿದರು ಸಹ ನನ್ನ ಹೆಂಡತಿ ಎಲ್ಲಿಯೂ ಸಿಕ್ಕಿರುವುದಿಲ್ಲ. ನಂತರ ನನ್ನ ಹೆಂಡತಿ ಕಾಣೆಯಾದ ಬಗ್ಗೆ ನಮ್ಮ ಸಂಭಂದಿಕರುಗಳಿಗೆ ಪೋನ ಮಾಡಿ ವಿಚಾರಿಸಿರುತ್ತೆನೆ. ಅವರು ಸಹ ಬಂದಿರುವುದಿಲ್ಲ ಅಂತಾ ತಿಳಿಸಿರುತ್ತಾರೆ. ಸದರಿ ನನ್ನ ಹೆಂಡತಿಯನ್ನು ಹುಡುಕಾಡಿ ಎಲ್ಲಿಯೂ ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೃಹಿಣಿಗೆ ಕಿರುಕಳ ನೀಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಮಾಹಾದೇವಿ ಗಂಡ ಶಿವಶರಣ ಕುಂಬಾರ ಸಾ : ಹಿಂಚಗೇರಾ ತಾ : ಅಫಜಲಪೂರ ರವರನ್ನು ಸುಮಾರು 18 ವರ್ಷದ ಹಿಂದೆ ಅಫಜಲಪೂರ ತಾಲೂಕಿನ ಹಿಂಚಗೇರಾ ಗ್ರಾಮದ ಶಿವಶರಣ ತಂದೆ ದೌಲಪ್ಪ ಕುಂಬಾರ ಇವರೊಂದಿಗೆ ಮದುವೆ ಮಾಡಿಕೊಟ್ಟಿರುತ್ತಾರೆ. ನನಗೆ ಈಗ ಇಬ್ಬರು ಮಕ್ಕಳಿದ್ದು 1) ಮಲ್ಲಿಕಾರ್ಜುನ ವ|| 16 ವರ್ಷ 2) ಭಾಗ್ಯಶ್ರೀ ವ||14 ವರ್ಷ ಅಂತ ಮಕ್ಕಳಿರುತ್ತಾರೆ.ನಮ್ಮ ಊರಲ್ಲಿನ ಮನೆಯಲ್ಲಿ ನಮ್ಮ ಅತ್ತೆ ಮಾವ ಇರುತ್ತಾರೆ ನಾನು ನನ್ನ ಗಂಡ ಹಾಗೂ ನನ್ನ ಮಕ್ಕಳು ನಮ್ಮ ಹೊಲದಲ್ಲಿನ ಮನೆಯಲ್ಲಿ ಇರುತ್ತೇವೆಈಗ  ಒಂದು ವರ್ಷದಿಂದ  ನನಗೆ ನನ್ನ ಗಂಡ ನೀನು ಸರಿಯಾಗಿಲ್ಲ, ನೀನು ಸಿಗದಿದ್ದರೆ ನಾನು ಬೇರೆ ಮದುವೆ ಮಾಡಿಕೊಳ್ಳುತ್ತಿದ್ದೆ ನಿನಗೆ ಸರಿಯಾಗಿ ಅಡುಗೆ ಮಾಡಲು ಬರಲ್ಲಾ ರಂಡಿ ಅಂತಾ ವಿಕಾರಣ ನನಗೆ ಬೈಯುವುದು, ಹೊಡೆಯುವುದು ಮಾಡಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಾ ಬಂದಿರುತ್ತಾನೆ.ನಾನು ಸದರಿ ವಿಷಯವನ್ನು ನನ್ನ ತವರುಮನೆಯಾದ ಕೆರಕನಹಳ್ಳಿಯ ನಮ್ಮ ತಂದೆ ತಾಯಿಯವರಿಗೆ  ತಿಳಿಸಿರುತ್ತೆನೆ.ನನ್ನ ತವರು ಮನೆಯಿಂದ ನಮ್ಮ ತಂದೆ ತಾಯಿ ಹಾಗೂ ಕೆರಕನಹಳ್ಳಿ ಗ್ರಾಮದ ಪ್ರಮುಖರಾದ ಹಣಮಂತ್ರಾಯ ಬಂದರವಾಡ, ಭೀರಣ್ಣ ಕಿರಸಾವಳಗಿ ಇವರೆಲ್ಲರು ನಮ್ಮ ಗ್ರಾಮಕ್ಕೆ ಬಂದು ನನ್ನ ಗಂಡನಿಗೆ ಸರಿಯಾಗಿ ಇರು ಮಕ್ಕಳು ದೊಡ್ಡವರಾಗಿದ್ದಾರೆ ಈ ರೀತಿ ಹೆಂಡತಿಗೆ ಕಿರುಕುಳ ಕೊಡುವದು ಸರಿ ಅಲ್ಲ ಅಂತ ಬುದ್ದಿಮಾತು ಹೇಳಿ ಹೋಗಿದ್ದು ದಿನಾಂಕ 14-09-2015 ನಾನು ನನ್ನ ಮಕ್ಕಳಾದ ಮಲ್ಲಿಕಾರ್ಜುನ, ಭಾಗ್ಯಶ್ರೀ ಇಬ್ಬರು ನಮ್ಮ ಹೊಲದಲ್ಲಿನ ಮನೆಯಲಿದ್ದಾಗ ನನ್ನ ಗಂಡನಾದ ಶಿವಶರಣ ಇವರು ಬಂದು ನನಗೆ ಏ ರಂಡಿ ನೀನು ಸರಿ ಇಲ್ಲಾ ನಿನಗ ಅಡುಗೆ ಮಾಡಲು ಬರಲ್ಲಾ ಅಂತ ಬೈಯುತಿದ್ದಾಗ ನಾನು ನನ್ನ ಗಂಡನಿಗೆ ಯಾಕ್ರಿ ಮಕ್ಕಳು ದೊಡ್ಡು ಆಗ್ಯಾವ ಈ ರೀತಿ ಮನೆಯಲ್ಲಿ ಜಗಳ ತಗೆದು ಸುಮ್ನೆ ಬೈಯುವದು ಸರಿ ಅಲ್ಲಾ ಅಂತ ಅನ್ನುತಿದ್ದಾಗ ನನ್ನ ಗಂಡ ರಂಡಿ ಬೋಸಡಿ ನನಗೆ ಬುದ್ದಿ ಹೇಳ್ತಿ ಅಂತ ಏರು ಧ್ವನಿಯಲ್ಲಿ ಬೈಯುತಿದ್ದಾಗ ನನ್ನ ಗಂಡ ಬೈಯುವದನ್ನು ಕೇಳಿ ನಮ್ಮ ಬಾಜು ಹೊಲವರಾದ ಕಾಂತಪ್ಪ ಮಾಂಗ ಹಾಗೂ ಅವರ ಹೆಂಡತಿಯಾದ ಶೋಭಾ ಇವರು ಬಂದು ನನ್ನ ಗಂಡನಿಗೆ ಯಾಕ್ರಿ ದಿನಾ ಮನ್ಯಾಗ ಹೆಂಡ್ತಿ ಜೋತಿ ಕಿರಿಕಿರಿ ಮಾಡ್ತಿರಿ ಅಂತ ಬುದ್ದಿ ಮಾತು ಹೇಳುತಿದ್ದಾಗ ನನ್ನ ಗಂಡ ಈ ರಂಡಿಗಿ ಇವತ್ತ ಬಿಡಲ್ಲಾ ಅಂತ ಅಂದು ತನ್ನ ಕೈಯಿಂದ ನನ್ನ ಬೆನ್ನ ಮೇಲೆ ಹೊಟ್ಟೆಗೆ ಹೋಡೆಯುತಿದ್ದಾಗ ನನ್ನ ಮಕ್ಕಳಾದ ಮಲ್ಲಿಕಾರ್ಜುನ, ಭಾಗ್ಯಶ್ರೀ ಹಾಗೂ ಕಾಂತಪ್ಪ ಮಾಂಗ, ಶೋಭಾ ಮಾಂಗ ಇವರು ನನಗೆ ಹೊಡೆಯುವದನ್ನು ಬಿಡಿಸುತಿದ್ದಾಗ ನನ್ನ ಗಂಡ ಬಿಡದೆ ನನಗೆ ತನ್ನ ಕಾಲಿನಿಂದ ನನ್ನ ಹೊಟ್ಟೆಗೆ ತಲೆಗೆ ಒದೆಯುತಿದ್ದಾಗ ಕಾಂತಪ್ಪ ಮಾಂಗ ಹಾಗೂ ನನ್ನ ಮಗ ಮಲ್ಲಿಕಾರ್ಜುನ ಇಬ್ಬರು ನನ್ನ ಗಂಡನಿಗೆ ಹಿಡಿದು ನನಗೆ ಹೊಡೆಯುವದನ್ನು ಬಿಡಿಸಿರುತ್ತಾರೆ ನನ್ನ ಗಂಡ ನನಗೆ ರಂಡಿ ಇವತ್ತ ಇವ್ರು ಬಿಡಶಾರ ಅಂತ ಉಳಿದಿ ನಿನಗ ಇಷ್ಟಕೆ ಬಿಡಲ್ಲಾ ನಿನ್ನ ಜೇವಾ ಹೊಡಿತಿನಿ ಅಂತಾ ಭಯ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

22 September 2015

KALABURAGI DISTRICT REPORTED CRIMES

ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣ:  

ಚೌಕ ಪೊಲೀಸ್ ಠಾಣೆ : ದಿನಾಂಕ: 21.09.2015 ರಂದು ಶ್ರೀ, ಅಬ್ದುಲ್ ರಹೀಮ್. ತಂದೆ ಅಬ್ದುಲ ರಹಿಮಾನ ಮುಲ್ಲಾ  ಸಾ: ಮನೆ ನಂ. 9-616/2, ಖಾದ್ರಿ ಚೌಕ್  ಶೇಖ ರೋಜಾ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಇಂದು ದಿನಾಂಕ: 21.09.2015 ರಂದು ಸಾಯಂಕಾಲ 06-30 ಗಂಟೆಯ ಸುಮಾರಿಗೆ ನಾನು ಖಾದ್ರಿ ಚೌಕ್ ಹತ್ತಿರ ಇದ್ದಾಗ ವಿಜಯ ನಗರ ಕಾಲೂನಿ ಕಡೆಗೆ ಕೆಲವು ಜನರು ಓಡುತ್ತಾ ಹೋಗುತ್ತಿರುವದನ್ನು ನೋಡಿ ನಾನು ಅವರಿಗೆ ವಿಚಾರಿಸಲಾಗಿ ವಿಜಯ ನಗರ ಕಾಲೂನಿಯ ಸನ್ ರೈಜ್ ಕನ್ನಡ ಕಾನ್ವೆಂಟ್ ಶಾಲೆಯ ಹತ್ತಿರ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯನ್ನು ಕೊಲೆ ಮಾಡಿರುವ ಬಗ್ಗೆ ತಿಳಿಸಲು ನಾನು ಸಹ ವಿಜಯ ನಗರ ಕಾಲೂನಿಯ ಸನ್ ರೈಜ್ ಶಾಲೆಯ ಹತ್ತಿರ ಹೋಗಿ ನೋಡಲಾಗಿ ರಸ್ತೆಯ ಬದಿಯಲ್ಲಿ ಒಬ್ಬ ಅಂದಾಜು 20 ರಿಂದ  26 ವರ್ಷ ವಯಸ್ಸಿನ ವ್ಯಕ್ತಿಗೆ ಯಾರೋ ಅಪರಿಚಿತ ದುಷ್ಕರ್ಮಿಗಳು ಯಾವುದೋ ಕಾರಣಕ್ಕಾಗಿ ತೆಲೆಯ ಮೇಲೆ ಗದ್ದದ ಮೇಲೆ , ಎಡಗಣ್ಣಿನ ಹುಬ್ಬಿನ ಮೇಲೆ, ಹಣೆಯ ಮೇಲೆ ಮಧ್ಯಭಾಗದಲ್ಲಿ ಮಾರಕಾಸ್ತ್ರಗಳಿಂದ ಹೊಡೆದಿದ್ದು ಅಲ್ಲದೇ  ಸಾಕ್ಷಿ ನಾಶ ಪಡಿಸುವ ಉದ್ದೇಶದಿಂದ ಯಾವುದೋ ಭಾರವಾದ ವಸ್ತುವಿನಿಂದ ಸಹ ತೆಲೆಯ ಮೇಲೆ ಭಾರಿ ಗಾಯ ಪಡಿಸಿ ಕೊಲೆ ಮಾಡಿ ರಸ್ತೆಯ ಬದಿಯಲ್ಲಿಯೇ ಬಿಸಾಡಿ ಓಡಿ ಹೋಗಿದ್ದು. ಈ ಅಪರಿಚಿತ ವ್ಯಕ್ತಿಯ ಹೆಸರು ಮತ್ತು ವಿಳಾಸ ಗೊತ್ತಾಗಿರುವದಿಲ್ಲ . ಕೊಲೆಯಾದ ಅಪರಿಚಿತ ವ್ಯಕ್ತಿ  ಅಂದಾಜು 5 ಫೀಟ್ 4 ಇಂಚ ಎತ್ತರ , ಸಾಧಾರಣ ಸಧೃಡವಾದ ತೆಳ್ಳನೆಯ ಮೈಕಟ್ಟು, ದುಂಡು ಮುಖ, ಚಪ್ಪಟೆ ಮೂಗು, ಸಾಧಾ ಗೋಧಿ ಬಣ್ಣ ಮತ್ತು ತೆಲೆಯಲ್ಲಿ ಗುಂಗುರು ಕಪ್ಪು ಕೂದಲು ಇದ್ದು, ಆತನ  ಮೈ ಮೇಲೆ ಒಂದು ನೀಲಿ ಬಣ್ಣದ ಜೀನ್ಸ್ ಪ್ಯಾಂಟು, ಹಸಿರು ಬಿಳಿ ಮಿಶ್ರಿತ ಚೆಕ್ಸ್ ಶರ್ಟ ಮತ್ತು ಚಾಕಲೇಟ ಬಣ್ಣದ ಅಂಡರವೇರ ಹಾಕಿದ್ದು. ಆತನ ಎಡಗೈ ಮೇಲೆ ದಿಲ್ ಚಿನ್ನೆ ಇದ್ದು ಅದರಲ್ಲಿ ಹೆಚ್. ಮತ್ತು ಎಸ್. ಅಂತಾ ಹಚ್ಚೆ ಹಾಕಿಸಿಕೊಂಡಿರುತ್ತಾನೆ. ಈ ಘಟನೆಯು ಇಂದು ದಿನಾಂಕ: 21.09.2015 ರಂದು ಸಾಯಂಕಾಲ 05-30 ರಿಂದ 06-00 ಗಂಟೆಯ ಮಧ್ಯದ ಅವಧಿಯಲ್ಲಿ ಜರುಗಿದ ಬಗ್ಗೆ ತಿಳಿದು ಬಂದಿದ್ದು. ಈ ಕೊಲೆ ಪ್ರಕರಣದ ಬಗ್ಗೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಕ್ರಮ ಮರಳು ಸಾಗಾಣಿಕೆ ದಾರರ ಬಂಧನ
ಅಫಜಲಪೂರ ಪೊಲೀಸ್ ಠಾಣೆ: ದಿನಾಂಕ 21-09-2015 ರಂದು ಶ್ರೀ ಸುರೇಶ ಬೆಂಡೆಗುಂಬಳ ಪಿ.ಎಸ್.ಐ ಅಫಜಲಪೂರ ಠಾಣೆ ರವರು ಅಫಜಲಪೂರ ಪಟ್ಟಣದಲ್ಲಿ ಪೆಟ್ರೊಲಿಂಗ ಕರ್ತವ್ಯದಲ್ಲಿರುವಾಗ ಸೊನ್ನ ಭೀಮಾನದಿಯಿಂದ ಅಕ್ರಮವಾಗಿ ಹಿಟಾಚಿಯಿಂದ ಮರಳು ತಗೆದು ಟಿಪ್ಪರದಲ್ಲಿ ತುಂಬುತ್ತಿರುವ ಬಗ್ಗೆ ಮಾಹಿತಿ ದೊರೆತ ಮೇರೆಗೆ ಠಾಣಾ ಸಿಬ್ಬಂದಿಯವರಾದ ವಿಠ್ಠಲ, ಸಿದ್ರಾಮ, ಇನಿಯುಸ ಹಾಗೂ ಪಂಚರಾದ 1) ಶಿವಪ್ಪ 2) ಚಂದಪ್ಪ ಇವರನ್ನು ಕರೆಸಿಕೊಂಡು ಸೊನ್ನ ಗ್ರಾಮದ ಭೀಮಾನದಿಯಲ್ಲಿ ಬ್ರೀಜ ಹತ್ತಿರ ಬೃಹತ ಮರಳು ಎತ್ತುವ ಯಂತ್ರದಿಂದ ಮರಳು ತಗೆದು ಟಿಪ್ಪರನಲ್ಲಿ ತುಂಬುತ್ತಿರುವಾಗ ದಾಳಿ ಮಾಡಿ ಮರಳು ತುಂಬುವ ಯಂತ್ರದ ಚಾಲಕನಿಗೆ ಮರಳು ತುಂಬಲು ಮತ್ತು ಸಾಗಾಣಿಕೆ ಮಾಡಲು ಸಂಬಂಧಪಟ್ಟ ಅಧೀಕಾರಿಯವರಿಂದ ಪರವಾನಿಗೆ ಪಡೆದುಕೊಂಡ ಬಗ್ಗೆ ದಾಖಲಾತಿಗಳನ್ನು ವಿಚಾರಿಸಲಾಗಿ ಯಾವುದೆ ದಾಖಲಾತಿಗಳು ಇರುವುದಿಲ್ಲ. ತನಗೆ ರುದ್ರಗೌಡ ಪಾಟೀಲ ಸಾ: ಸೊನ್ನ ಈತನು ಮುಂದೆ ನಿಂತು ಮರಳು ತುಂಬಿಸುತ್ತಿದ್ದರು. ಅವರು ಹೇಳಿದಂತೆ ಮರಳು ತುಂಬುತ್ತಿದ್ದೇವು ಎಂದು ತಿಳಿಸಿದ್ದು . ಸದರಿಯವರು ಅನದಿಕೃತವಾಗಿ ಕಳ್ಳತನದಿಂದ ಸೋನ್ನ ಭಿಮಾನದಿಯಿಂದ ಭೃಹತ ಯಂತ್ರದಿಂದ  ಮರಳು ತಗೆದು ಟಿಪ್ಪರದಲ್ಲಿ ತುಂಬುತ್ತಿದ್ದರಿಂದ ಅಕ್ರಮ ಮರಳು ತುಂಬುತ್ತಿದ್ದ ಟಿಪ್ಪರ, ಮತ್ತು ಮರಳು ತುಂಬುವ ಯಂತ್ರ, ಟಿಪ್ಪರಿನಲಿದ್ದ ಅಂದಾಜ ರೂ 5000/- ಬೆಲೆಬಾಳುವ ಮರಳನ್ನು ಜಪ್ತಿ ಮಾಡಿ . ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬುತ್ತಿದ್ದ 1) ದತ್ತಪ್ಪ ತಂದೆ ಭೀಮಶಾ ಹೊಸಮನಿ 2) ರುದ್ರಗೌಡ ತಂದೆ ದೇವೆಂದ್ರಪ್ಪ ಪಾಟೀಲ 3) ಹಾಗೂ ಟಿಪ್ಪರ ಚಾಲಕ ಇವರ ವಿರುದ್ದ ಅಫಜಲಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ಶಹಾಬಾದ ನಗರ ಠಾಣೆ : ದಿನಾಂಕಃ  21.09.2015 ರಂದು  ಭಂಕೂರ ಶಾಖೆಯ ಜೇಸ್ಕಾಂ ಲೈನಮ್ಯಾನ ಶ್ರೀ  ಶಕೀಲ  ಅಹ್ಮದ ತಂದೆ  ಇಸ್ಮಾಯಿಲ್ ಸಾಃ ಕೆಇಬಿ ಕಾಲೋನಿ ಶಹಾಬಾದರವರು ಠಾಣೆಗೆ ಹಾಜರಾಗಿ  ದಿನಾಂಕಃ  21.09.2015 ರಂದು  ಮುಂಜಾನೆಯಿಂದ ಬಂಕೂರ ಶಾಖೆಯಿಂದ  ವಿವಿಧ  ಲೈನ ಕೆಲಸ ಮಾಡಿ ರಾತ್ರಿ  8.00  ಗಂಟೆಗೆ  ಮನೆಗೆ ಊಟಕ್ಕೆ ಹೋದಾಗ  ಅಂದಾಜು  9.30  ಗಂಟೆಗೆ  ನನ್ನ  ಮೊಬಾಯಿಲ್  ನಂ  994544404 ನೇದ್ದಕ್ಕೆ 9986471633  ದಿಂದ ಫೋನ ಮಾಡಿ  ಅವಙಚ್ಯ ಶಬ್ದಗಳಿಂದ ಬಯ್ದು ಶಿಬಿರಕಟ್ಟಾದಲ್ಲಿ  ಕರೆಂಟ  ಇಲ್ಲಾ ನೀ ಏನು  ಮಾಡಕತ್ತಿ  ಎಂದು  ಬೈಯ್ದು  ಜಲ್ದಿ  ಕರೆಂಟು  ಹಾಕು  ಅಂತಾ ಹೇಳಿ  ಫೋನ ಕಟ್ ಮಾಡಿದರು. ನಂತರ ನಾನು  ಫಾಲ್ಟ ಲೈನ  ಅಟೆಂಡ ಮಾಡುವ ಕುರಿತು  ಕೆಇಬಿ  ಕಾಲೋನಿಯಿಂದ  ನನ್ನ  ಮೊಟಾರ ಸೈಕಲ ಮೇಲೆ ನಾನು  ಮತ್ತು ಅಹ್ಮದ ಹುಸೆನ  ಇಬ್ಬರೊ ಹೋಗುತ್ತಿದ್ದಾಗ  ಶಹಾಬಾದ  ಪಟ್ಟಣದ  ಬಸವೇಶ್ವರ ಸರ್ಕಲ್  ಹತ್ತಿರ ಹಳೆ ಶಹಾಬಾದ ಕಡೆಯಿಂದ ಬರುತ್ತಿದ್ದ  ಗಣೇಶ  ಮೆರವಣಿಗೆಯಲ್ಲಿದ್ದ  5-6 ಜನರು  ಕೂಡಿ  ನನ್ನ  ಮೊಟಾರ  ಸೈಕಲಗೆ  ತಡೆದು  ನಿಲ್ಲಿಸಿ  ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ  ಮಗನೆ  ಕರೆಂಟ ಹಾಕು ಅಂದರೆ ಹಾಕಲ್ಲಾ  ಇಗೇನು  ಹೋಗಿ  ಮಾಡುತ್ತಿ  ಎನ್ನುತ್ತಾ   ಅವರಲ್ಲಿಯ  3-4 ಜನರು  ಒಮ್ಮೆಲೆ ನನ್ನ  ಮೈ ಮೇಲೆ  ಬಿದ್ದು  ಕೈಯಿಂದ ಹೊಡೆದು  ಗುಪ್ತಗಾಯ  ಮಾಡಿದ್ದು  ಇನ್ನೊಬ್ಬನು  ಆತನ ಕೈಯಲ್ಲಿದ್ದ ಲೇಜಿಮ್ ನಿಂದ  ಹೊಡೆದು  ರಕ್ತಗಾಯ ಪಡಿಸಿದ್ದು ಇರುತ್ತದೆ.   ಎಲ್ಲರೊ ಸೇರಿ ನನಗೆ ಈ ಮಗ  ಕರೆಂಟ ಹಾಕು ಅಂದರೆ ಹಾಕದೆ ಈಗ  ಬರುತ್ತಿದ್ದಾನೆ ಅಂತಾ ಎನ್ನುತ್ತಾ  ನನ್ನ  ಕರ್ತವ್ಯಕ್ಕೆ ಹೋಗದಂತೆ  ಅಡೆ ತಡೆ ಮಾಡುತ್ತಿದ್ದಾಗ  ಅಲ್ಲಿಯೇ ಇದ್ದ ಅಹ್ಮದ  ಹುಸೆನ  ಮತ್ತು  ಅಯೂಬ  ಬಂದು ನನಗೆ  ಬಿಡಿಸಿರುತ್ತಾರೆ.   ಕಾರಣ  ನನಗೆ  ವಿನಾ ಕಾರಣ ಜಗಳ  ಮಾಡಿ ಹೊಡೆ ಬಡೆ ಮಾಡಿ  ಕರ್ತವ್ಯಕ್ಕೆ ಅಡೆ ತಡೆ ಮಾಡಿದವರ ವಿರುದ್ಧ  ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಶಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.