POLICE BHAVAN KALABURAGI

POLICE BHAVAN KALABURAGI

13 August 2015

Kalaburagi District Reported Crimes.

ಗ್ರಾಮೀಣ  ಪೊಲೀಸ ಠಾಣೆ : ದಿನಾಂಕ: 12/08/2015 ರಂದು ಅರ್ಜಿದಾರರು 2-15 ಪಿ.ಎಮ್ ಕ್ಕೆ ಠಾಣೆಗೆ ಹಾಜರಾಗಿ ನೀಡಿದ ಒಂದು ಲಿಖಿತ ದೂರಿನ ಸಾರಾಂಶವೆನೆಂದರೆ, ತಾನು ಟೆಂಟ ಹೌಸ್ ಕೆಲಸ ಮಾಡಿಕೊಂಡು ಉಪಜೀವಿಸುತ್ತಿದ್ದು ಈಗ್ಗೆ 3 ತಿಂಗಳ ಹಿಂದೆ ನಂ ಕೆಎ-32 ಇಜೆ-5759 ಬಜಾಜ ಪಲ್ಸರ 220 ಮೋಟರ ಸೈಕಲನ್ನು ಖರೀದಿಸಿರುತ್ತೇನೆ. ಹೀಗಿದ್ದು  ದಿನಾಂಕ: 17/06/2015 ರಂದು ಸಾಯಂಕಾಲ ಮಿಲ್ಲತನಗರದಲ್ಲಿರುವ ನನ್ನ ಸಂಬಂಧಿಕರ ಮನೆಗೆ ಹೋಗಿ ತನ್ನ ಮೋ/ಸೈಕಲನ್ನು ಹೊರಗಡೆ ನಿಲ್ಲಿಸಿದ್ದು  ಅಂದು ತಡರಾತ್ರಿಯಾಗಿದ್ದರಿಂದ ಊಟ ಮುಗಿಸಿ ತನ್ನ ಮೋ/ಸೈಕಲನ್ನು ಕಂಪೌಂಡ ಒಳಗಡೆ ನಿಲ್ಲಿಸಿ ಲಾಕ ಮಾಡಿಕೊಂಡು ಹೋಗಿ ಮಲಗಿಕೊಂಡಿರುತ್ತಾನೆ. . ನಂತರ ದಿ: 17/06/2015 ರಂದು ಬೆಳಿಗ್ಗೆ 06-30 ಎಎಮ್ ಕ್ಕೆ ಎದ್ದು ಹೊರಗೆ ಬಂದು ನೋಡಲು ತಾನು ರಾತ್ರಿ ನಿಲ್ಲಿಸಿದ್ದ ತನ್ನ ಕೆಎ-32 ಇಜೆ-5759 ಬಜಾಜ ಪಲ್ಸರ 220 ಕಪ್ಪು ಬಣ್ಣದ ಚೆಸ್ಸಿ ನಂ- MD2A13EZ2FCK02074 ಇಂಜಿನ ನಂ- DKZCFK89891 ಇರುವ ಅ.ಕಿ= 105000/-ರೂ ಕಿಮ್ಮತ್ತಿನ ಮೋಟರಸೈಕಲ ಕಾಣಿಸಲಿಲ್ಲ. ತಕ್ಷಣ ತಾನು ಮತ್ತು ಸಂಬಂಧಿಕನೊಂದಿಗೆ ಏರಿಯಾದಲ್ಲಿ ಸುತ್ತ ಮುತ್ತ ಮತ್ತು ನಗರದ ಇತರೆ ಕಡೆ ಎಲ್ಲಾ ಹುಡುಕಾಡಿದರೂ ಸಿಗಲಿಲ್ಲ. ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ಫೀರ್ಯಾದಿ ಸಲ್ಲಿಸುತ್ತಿರುತ್ತೇನೆ ಕಾರಣ ದಿ: 17/06/2015 ರಂದು 00-30 ರಿಂದ 17/06/2015 ರಂದು 6-30 ಎಎಮ್ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಲಾಕ ಮಾಡಿ ನಿಲ್ಲಿಸಿದ್ದ ತನ್ನ ಬಜಾಜ ಪಲ್ಸರ 220 ಮೋಟರ ಸೈಕಲ ಅ.ಕಿ= 105000/-ರೂ ನೇದ್ದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.. ಕಾರಣ ಕಳ್ಳತನವಾದ  ನನ್ನ ಮೋಟರ ಸೈಕಲನ್ನು  ಪತ್ತೆ ಹಚ್ಚಿ ಕಳ್ಳತನ ಮಾಡಿದ ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ವಗೈರೆ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 319/2015 ಕಲಂ 379 ಐಪಿಸಿ ಪ್ರಕಾರ ಪ್ರಕರಣ ಪ್ರಕರಣ ದಾಖಲಾಗಿರುತ್ತದೆ.
ನಿಂಬರ್ಗಾ ಪೊಲೀಸ ಠಾಣೆ : ದಿನಾಂಕ 12/08/2015 ರಂದು 1630 ಗಂಟೆಗೆ ಫಿರ್ಯಾದಿದಾರರಾದ ಶ್ರೀ ರವಿ ತಂದೆ ಲಗಮಣ್ಣ ಅತ್ತೆ ವ|| 30 ವರ್ಷ, ಜಾ|| ಮಾಲಗಾರ, || ಒಕ್ಕಲುತನ, ಸಾ|| ಹಡಲಗಿ ಇವರು ಠಾಣೆಗೆ ಬಂದು ಲಿಖಿತ ಫಿರ್ಯಾದಿ ಸಲ್ಲಿಸಿದ್ದೇನೆಂದರೆ ದಿನಾಂಕ 11/08/2015 ರಂದು 0800 ಗಂಟೆಗೆ ಹಳೆಯ ವೈಷಮ್ಯ ಕಟ್ಟಿಕೊಂಡು ಗುರಪ್ಪ ತಂದೆ ಮಹಾಂತಪ್ಪ ಕಲ್ಲೂರ ಮತ್ತು ಇತರರೂ ಕೂಡಿ ಹೊಲ ಸರ್ವೆ ನಂ. 50/3 ರಲ್ಲಿ ಅಕ್ರಮ ಕೂಟ ಕಟ್ಟಿಕೊಂಡು ಜಗಳ ತೆಗೆಯುವ ಉದ್ದೇಶದಿಂದ ಕೈಯಲ್ಲಿ ಕೊಡಲಿಯೊಂದಿಗೆ ನುಗ್ಗಿ ಫಿರ್ಯಾದಿ ಮತ್ತು ಆತನ ಅಣ್ಣನಿಗೆ ಅವಾಚ್ಯವಾಗಿ ಬೈದು ಕೊಡಲಿಯಿಂದ ಬೆನ್ನ ಮೇಲೆ ಮತ್ತು ಕೈಯಿಂದ ಹೊಟ್ಟೆಯ ಮೇಲೆ ಗುದ್ದಿ ಹಲ್ಲೆ ಮಾಡಿದ್ದಲ್ಲದೆ ಜೀವ ಭಯ ಪಡಿಸಿದ್ದು ಅಲ್ಲದೆ ಹೊಲದಲ್ಲಿನ ಬೋರವೇಲ ಮತ್ತು ಹನಿ ನೀರಾವರಿಯ ಪೈಪಗಳನ್ನು ನಾಶಪಡಿಸಿ 1,25,000/- ರೂಪಾಯಿಯಷ್ಟು ನಷ್ಟವುಂಟುಮಾಡಿರುತ್ತಾರೆ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಕೊಟ್ಟು ಲೀಖಿತ ಫಿರ್ಯಾದಿ ಸಾರಾಂಶದ ಮೇಲಿಂದ  ನಿಂಬರ್ಗಾ ಪೊಲೀಸ್ ಠಾಣೆಯ ಗುನ್ನೆ ನಂ 94/2015 ಕಲಂ 447, 143, 147, 148, 323, 324, 427, 504, 506, ಸಂ 149 ಐಪಿಸಿ ನೇದ್ದರಲ್ಲಿ  ಪ್ರಕರಣ ಪ್ರಕರಣ ದಾಖಲಾಗಿರುತ್ತದೆ.
ರಾಘವೇಂದ್ರ ನಗರ ಪೊಲೀಸ್ ಠಾಣೆ : ದಿನಾಂಕ:12/08/2015 ರಂದು ಸಾಯಂಕಾಲ 7.00 ಗಂಟೆಗೆ ಪಿರ್ಯಾದಿ ಶ್ರೀ ಅಮೃತ ತಂದೆ ಹಣಮಂತ ಡಿಗ್ಗಿ ವ||53 ಸಾ|| ಗಂಗಾನಗರ ಶ್ರೀ ನಿಜಶರಣ ಅಂಬಿಗರ ಚೌಡಯ್ಯಾ ಸಂಘದ ಜೀರ್ಣೋದ್ದಾರದ ಅದ್ಯಕ್ಷರು ಬ್ರಹ್ಮಪೂರ ಕಲಬುರಗಿ ಇವರು ಠಾಣೆಗೆ ಹಾಜರಾಗಿ  ಲೀಖಿತ ಪಿರ್ಯಾದಿ ಸಲ್ಲಿಸಿದ್ದು ಎನೆಂದರೆ ಗಂಗಾನಗರದ ಜೈ ಹನುಮಾನದ ದೇವಸ್ಥಾನದ ದೇಣಿಗೆ ಹುಂಡಿಯನ್ನು ದಿ|| 11/08/15 ಹಾಗೂ 12/08/15 ರ ಮದ್ಯ ರಾತ್ರಿಯಲ್ಲಿ ದೇವಸ್ಥಾನದ ಮೇನ ಚನಾಲಿಗೇಟಿನ ಒಂದು ಕೀಲಿ ಮುರಿದು ಹಾಗೂ ದೇಣಿಗೆ ಹುಂಡಿಯ ಎರಡು ಕೀಲಿ ಮುರಿದು ಅದರಲ್ಲಿಯ ಸುಮಾರು 20,ರಿಂದ 23 ಸಾವೀರ ರೂಪಾಯಿಗಳಷ್ಟು ಹಣ ಯಾರೊ ಕಳ್ಳರು ಕಳುವ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಹಚ್ಚಿ ಕೊಡಬೇಕು ಅಂತಾ ಲೀಖಿತ ಪಿರ್ಯಾದಿ ಸಲ್ಲಿಸಿದ್ದರ ಸಾರಂಶದ ಮೇಲಿಂದ ಠಾಣೆ ಗುನ್ನೆ.ನಂ.114/15 ಕಲಂ: 457,380 ಐ,ಪಿ,ಸಿ, ನೇದ್ದಕ್ಕೆ ಪ್ರಕರಣ ದಾಖಲಾಗಿರುತ್ತದೆ.
ರಾಘವೇಂದ್ರ ನಗರ ಪೊಲೀಸ್ ಠಾಣೆ: ದಿನಾಂಕ:11/08/2015 ರಂದು ರಾತ್ರಿ 10.00 ಗಂಟೆಯ ವರೆಗೆ ಪಿರ್ಯಾದಿ ಶ್ರೀಮತಿ ಸುಮೀತ್ರಾಬಾಯಿ ಗಂಡ ಶಿವಶರಣಪ್ಪಾ ಅಣಕಲ ವ:50 ವರ್ಷ ಇವರ ಹೇಳಿಕೆ ಕಲಬುರಗಿ ನಗರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಪಡೆದುಕೊಂಡಿದ್ದು ಸದರಿ ಹೇಳಿಕೆಯ ಸಂಕ್ಷಿಪ್ತ ಸಾರಾಂಶವೆನೆಂದರೆದಿನಾಂಕ:10/08/2015 ರಂದು ಸಾಯಂಕಾಲ 5.30 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನ್ನ ಮಗ ಬಸವರಾಜ ಇತನು ತನ್ನ ಜೊತೆಯಲ್ಲಿ 2-3 ಜನರೊಂದಿಗೆ ಬಂದವನೆ ಏ ಅವ್ವಾ ನಿನ್ನ ಹೆಸರಿನಲ್ಲಿ ಕೇರಿಭೊಸಗಾ ಗ್ರಾಮದಲ್ಲಿರುವ 16 ಎಕರೆ ಭೂಮಿ ನನ್ನ ಹೆಸರಿಗೆ ಮಾಡಿಸಿ ಕೊಡುತ್ತಿ ಇಲ್ಲಾ ಏನು ಈಗ ನಿನ್ನ ಸುದ್ದಿ ಏನಿದೆ ಅಂತಾ ಹೇಳಿದಾಗ ನಾನು ನನ್ನ ಮೂರು ಮಕ್ಕಳ ಹೆಸರಿನಿಂದ ಮಾಡುತ್ತೇನೆ. ನಿನ್ನ ಒಬ್ಬನ ಹೆಸರಿನಿಂದ ಏಕೆ ಮಾಡಬೇಕು ಅಂತಾ ಹೇಳಿದಾಗ ನನ್ನ ಮಗ ಬಸವರಾಜ ಇತನು ನನಗೆ ಕೊಲೆ ಮಾಡುವ ಉದ್ದೇಶದಿಂದ ಒಂದು ಚಾಕುವಿನಿಂದ ನನ್ನ ಕುತ್ತಿಗೆಯ ಮೇಲೆ ಏರಡು ಸಲ ಹೊಡೆದು ಭಾರಿ ರಕ್ತಗಾಯ ಮಾಡಿರುತ್ತಾನೆ. ಇನ್ನೂಳಿದ 2-3 ಜನರು ನನಗೆ ಕಲ್ಲಿನಿಂದ ಮತ್ತು ಕೈಯಿಂದ ಬಲ ಹಣೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿದ್ದು ಮತ್ತು ಗುಪ್ತಗಾಯಪಡಿಸಿರುತ್ತಾರೆ. ಆಗ ನಾನು ಚಿರಾಡಲು ನಮ್ಮ ಮನೆಯ ಅಕ್ಕಪಕ್ಕದ ಜನರು ಬಂದು ಜಗಳ ಬಿಡಿಸಿರುತ್ತಾರೆ. ನನ್ನ ಮಗನ ಜೊತೆಯಲ್ಲಿ ಬಂದ 2-3 ಜನರಿಗೆ ನಾನು ನೋಡಿದರೆ ಗುರುತಿಸುತ್ತೇನೆ. ಅವರ ಹೆಸರು ವಿಳಾಸ ಗೊತ್ತಿರುವದಿಲ್ಲಾ. ನನಗೆ ರಕ್ತಗಾಯ ಹಾಗೂ ಗುಪ್ತಗಾಯ ಆಗಿರುವದರಿಂದ ಅಲ್ಲಿಂದ ಸಾರ್ವಜನಿಕರು ಒಂದು ಅಂಬುಲೇನ್ಸ ವಾಹನ ಕರೆಯಿಸಿ ಅದರಲ್ಲಿ ಹಾಕಿ ಉಪಚಾರ ಕುರಿತು ಕಲಬುರಗಿ ನಗರದ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದು ಇರುತ್ತದೆ. ಕಾರಣ ನನ್ನ ಮಗ ಬಸವರಾಜ ಇತನು ಆಸ್ತಿಯ ಸಂಬಂಧ ತನ್ನ ಜೊತೆಯಲ್ಲಿ 2-3 ಜನರೊಂದಿಗೆ ಬಂದು ಕೊಲೆ ಮಾಡುವ ಉದ್ದೇಶದಿಂದ ನನಗೆ ಚಾಕುವಿನಿಂದ ಹಾಗೂ ಕಲ್ಲಿನಿಂದ ಹೊಡೆದು ಭಾರಿ ರಕ್ತಗಾಯ ಪಡಿಸಿದ್ದು ಅವರ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಬೇಕು ಅಂತಾ ಪಿರ್ಯಾದಿ ಹೇಳಿಕೆ ಪಡೆದುಕೊಂಡು ಮರಳಿ ರಾತ್ರಿ 10.30 ಗಂಟೆಗೆ ಠಾಣೆಗೆ ಬಂದು ಹೇಳಿಕೆ ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಪೊಲೀಸ ಠಾಣೆ ಗುನ್ನೆ.ನಂ.113/2015 ಕಲಂ:323,324,307,448 ಸಂ:34 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.

10 August 2015

Kalaburagi District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ: 09-08-2015 ರಂದು ಸಾಯಂಕಾಲ ರಾಘವೇಂದ್ರ ನಗರ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಬರುವ ದೇವರದಾಸಿಮಯ್ಯ ನಗರದಲ್ಲಿ ಇಸ್ಪೇಟ್‌ ಜೂಜಾಟ ನಡೆದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶ್ರೀ ಕೆ.ಎಂ ಸತೀಶ ಪಿ.ಐ ಬ್ರಹ್ಮಪೂರ ಠಾಣೆ, ರಾಘವೇಂದ್ರ ನಗರ ಪೊಲೀಸ ಠಾಣೆಯ ಡಬ್ಲೂ.ಹೆಚ್‌.ಕೊತ್ವಾಲ್‌‌ ಪಿಎಸ್‌ಐ ಹಾಗೂ ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿದಾಳಿ ಮಾಡಿ 5 ಜನರನ್ನು  ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿದ್ದು ಅವರು ತಮ್ಮ ತಮ್ಮ ಹೆಸರು 1) ಮಲ್ಲಿಕಾರ್ಜುನ ತಂದೆ ಶಿವಶಂಕರ ವನ್ನಾಸಡೆ ಸಾ:ದೇವಿನಗರ ಆಳಂದ ರಸ್ತೆ ಕಲಬುರಗಿ 2) ಅಜೀತ ಕುಮಾರ ತಂದೆ ರಾಜೇಂದ್ರ ಹುಣಸಗಿ ಸಾ:ಮಾಲಗತ್ತಿ ತಾ:ಚಿತ್ತಾಪುರ ಜಿ:ಕಲಬುರಗಿ 3) ಬಸವರಾಜ ತಂದೆ ಗೋಪಾಲ ರಾವ ಕಾಳಂಗೆ ಸಾ:ಆಳಂದ ಚಕಪೋಸ್ಟ್‌ ಹತ್ತಿರ ಕಲಬುರಗಿ 4) ಬಾಬುಮೀಯ್ಯಾ ತಂದೆ ಚಾಂದಸಾಬ ಶೇಖ ಸಾ:ರಾಣೇಶ ಪೀರ ದರ್ಗಾ ಹತ್ತಿರ ಕಲಬುರಗಿ 5) ಶಿವಾನಂದ ತಂದೆ ಶಂಕರ ಪಾಟೀಲ ಸಾ:ದೇವಿನಗರ ಕಲಬುರಗಿ 52 ಇಸ್ಪೀಟ್‌ ಎಲೆಗಳು ಮತ್ತು  ನಗದು ಹಣ 32120/-ರೂ ದೊರೆತಿದ್ದು ಇರುತ್ತದೆ. ಸದರಿ 5 ಜನ ಆರೋಪಿ ಹಾಗೂ ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ವಶಕ್ಕೆ ತೆಗೆದುಕೊಂಡು ಋಆಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ರೈತರ ಹೊಲದಲ್ಲಿ ಹಾಕಿದ ಬೋರವಲಗಳಲ್ಲಿಯ  ಸಬ್ಮರಿಶಿಬಲ್ ಮೋಟರ ಕಳ್ಳತನ ಮಾಡಿದ 3 ಜನ ಆರೋಪಿತರ ಬಂಧನ :
ವಿಶ್ವವಿದ್ಯಾಲಯ ಠಾಣೆ : ದಿನಾಂಕ: 08/08/2015 ರಂದು ಶ್ರೀ  ಚಂದ್ರಕಾಂತ ತಂದೆ ಶಿವಶರಣಪ್ಪ ನಾಗನಹಳ್ಳಿ, ಸಾ: ನಂದೂರ (ಬಿ) ಗ್ರಾಮ ರವರ ಹೊಲದ ಸರ್ವೆ ನಂ: 97/5 ರಲ್ಲಿ 10 ಎಕರೆ ಜಮೀನು ಇದ್ದು, ಸದರಿ ಜಮೀನಿನಲ್ಲಿ ಬಾಳೆ ತೊಗರೆ, ಹಾಗೂ ಸೂರ್ಯಪಾನ ಬೆಳೆ ಬೆಳೆದಿದ್ದು ಇರುತ್ತದೆ ಹೊಲದ ಆಕಾರ ಮಾಡುವ ಸಲುವಾಗಿ ಸದರಿ ಹೊಲದಲ್ಲಿ ಒಂದು ಕೊಳವೆ ಭಾವಿ ತೋಡಿಸಿದ್ದು ಅದಕ್ಕೆ ಸಬ್ಮರಿಶಿಬಲ್ ಮೋಟರ ಅ||ಕಿ|| 15,000/- ರೂ. ಕೂಡಿಸಿದ್ದು ಇರುತ್ತದೆ. ದಿನಾಂಕ: 07/08/2015 ರಂದು ಸಾಯಂಕಾಲ 7:00 ಗಂಟೆಯ ವರೆಗೆ ಹೊಲದಲ್ಲಿ ಕೆಲಸ ಮಾಡಿ ರಾತ್ರಿ ನನ್ನ ಹೊಲದ ಮೊಟರ ಬಂದ್ ಮಾಡಿ ಮನೆಗೆ ಬಂದಿರುತ್ತೇನೆ. ಇಂದು ದಿನಾಂಕ: 08/08/2015 ರಂದು ಬೆಳಿಗ್ಗೆ 0800 ಗಂಟೆಗೆ ಹೊಲಕ್ಕೆ ಹೋಗಿ ನೋಡಲು ಕೊಳೆವೆ ಬಾವಿಯಿಂದ ಯಾರೋ ರಾತ್ರಿ ವೇಳೆಯಲ್ಲಿ ಪೈಪನ್ನು ಎತ್ತಿ ಒಳಗೆ ಇದ್ದ ಸಬ್ಮರಿಶಿಬಲ್ ಮೋಟರ ಅ||ಕಿ||15,000/- ಮತ್ತು 250 ಪೀಟ್ ಕೆಬಲ್ ವೈಯರ್ ಅ||ಕಿ||4800/- ಅದನ್ನು ಹೊರಗೆ ತೆಗೆದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ನನ್ನಂತೆ ನಮ್ಮ ನಮ್ಮೂರ ಸೀಮೆಯಲ್ಲಿದ್ದ 1)ಸೈಯದ ನಯಿಮ್ ಹುಸೇನಿ 2)ಬಸಪ್ಪ ಭಜಂತ್ರಿ, 3)ಪ್ರಭುಗೌಡ ಬಿರಾದಾರ, 4)ಶ್ರೀಮಂತ ನಾಟೀಕಾರ, 5)ಮಳ್ಳೇಪ್ಪಗೌಡ ಬಿರಾದಾರ, 6)ನೀಲಕಂಠಪ್ಪ ಗೌಡ ಬಿರಾದಾರ, 7)ಮಾನಸಿಂಗ್ ನಾಮು, 8)ಸೈದಪ್ಪ ನಾಟೀಕಾರ, 9)ಮಾಪ್ಪಣ್ಣ ಹದನೂರ, 10)ವಿಶ್ವನಾಥ ಜಾಧವ ಇವರ ಹೊಲದಿಂದ ಕಳೆದ 1 ತಿಂಗಳಿಂದ ಆಗಾಗ ರಾತ್ರಿ ವೇಳೆಯಲ್ಲಿ 11 ಸಬ್ಮರಿಶಿಬಲ್ ಮೋಟರಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಕಳ್ಳತನವಾದ ನನ್ನ ಸಬ್ಮಿರಿಶಿಬಲ್ ಮೋಟರ ಮತ್ತು ಕೇಬಲ್ ವೈಯರ್ ಎಲ್ಲಾ ಸೇರಿ 19800/- ಬೆಲೆಬಾಳುವ ವಸ್ತುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ದಿನಾಂಕ: 09/08/2015 ರಂದು ಮದ್ಯಾಹ್ನ 1:00 ಗಂಟೆಯ ಸುಮರಿಗೆ ಪೆಟ್ರೋಲಿಂಗ ಕರ್ತವ್ಯದ ಮೇಲೆ ಇರುವಾಗ ಮೊಟರ ಸೈಕಲ ನಂ:ಕೆಎ 32 ಇಹೆಚ್ 8452   ನೇದ್ದರ ಮೇಲೆ ಮುರು ಜನರು ನಮ್ಮ ಜೀಪ ಎದುರು ಬಂದು ನಮ್ಮನ್ನು ನೋಡಿ ಒಮ್ಮಿಂದೊಮ್ಮಲೆ ಸದರಿ ಮೊಟರ ಸೈಕಲನ್ನು ತಿರುವಿಕೊಂಡು ಅತೀವೇಗವಾಗಿ ಹೋಗುತ್ತಿರುವಾಗ ನಮಗೆ ಅನುಮಾನ ಬಂದು ಬೆನ್ನತ್ತಿ ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲು ಸಮರ್ಪಕವಾಗಿ ಉತ್ತರ ಕೊಡದೆ ಇದುದ್ದರಿಂದ ಹೆಚ್ಚಿನ ವಿಚಾರಣೆಗಾಗಿ ಠಾಣೆಗೆ ತಂದು ಕುಲಂಕುಶವಾಗಿ ವಿಚಾರಣೆ ಮಾಡಲು ಅವರು ತಮ್ಮ ಹೆಸರು 1) ಮರಲಿಂಗಯ್ಯ ತಂದೆ ಮಲಕಯ್ಯ ಕಲಾಲ, ಸಾ|| ನಂದೂರ ಬಿ ಗ್ರಾಮ, 2) ಮಂಜುನಾಥ ತಂದೆ ಹಣಮಂತ ಮಾಶಾಳ, ಸಾ|| ನಂದೂರ ಬಿ ಗ್ರಾಮ, 3) ಸಿದ್ದು@ಸಿದ್ರ್ಯಾ ತಂದೆ ಸಾಬಣ್ಣ ನಾಟೀಕಾರ, ಸಾ|| ನಂದೂರ ಬಿ ಗ್ರಾಮ  ಅಂತಾ ತಿಳಿಸಿದ್ದು, ನಾವು ಕಳೆದ 1 ತಿಂಗಳಿಂದ ನಮ್ಮೂರ ಸೀಮೆಯಲ್ಲಿ ಹೊಲದಲ್ಲಿ ಹಾಕಿರುವ ಬೋರವೆಲಗಳಿಂದ  ರಾತ್ರಿ ವೇಳೆಯಲ್ಲಿ ಮೊಟರ ತೆಗೆದು ಒಂದು ಜಾಗೆಯಲ್ಲಿ ಅವುಗಳನ್ನು ಮಾರಾಟ ಮಾಡಲು ಬಚ್ಚಿಟ್ಟಿದ್ದನ್ನು ತಪ್ಪು ಒಪಿಕೊಂಡಿದ್ದು ನಂತರ ನಂದೂರ ಗ್ರಾಮದ ಬಳಗಾರ ಹಳ್ಳದ ಹತ್ತಿರ ಗಿಡಗಂಟೆಗಳಲ್ಲಿ ಕಳ್ಳತನ ಮಾಡಿ ಮಾರಾಟ ಮಾಡಲು ಮುಚ್ಚಿಟ್ಟಿದ್ದ 11 ಬೋರವೇಲ್ ಮೋಟರ ಅ||ಕಿ|| 1,65,000 ಮತ್ತು 250 ಫೀಟ್ ಕೇಬಲ್ ವೈಯರ ಅ||ಕಿ|| 4800/- ಹೀಗೆ ಒಟ್ಟು 1,69,800/- ಬೆಲೆಬಾಳುವ ವಸ್ತುಗಳನ್ನು ಜಪ್ತ ಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ,
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಸಫಿಯಾ ಬೇಗಂ ಗಂಡ ಮಿರ್ಜಾ ಫೆರೋಜ ಬೇಗ ಸಾ: ಮನೆ ನಂ 6-22 ಮುಸ್ಲಿಂ ಚೌಕ ಗಂಜ ರಸ್ತೆ  ಕಲಬುರಗಿ ಇವರು ದಿನಾಂಕ 03.08.2014 ರಂದು ನಮ್ಮ ತಂದೆ ತಾಯಿಯವರು ಮಿರ್ಜಾ ಪೇರೋಜ ಬೇಗ ಇತನೊಂದಿಗೆ ಸಂಪ್ರದಾಯದಂತೆ ಮದುವೆ ಮಾಢಿಕೊಟ್ಟಿದ್ದು ಮದುವೆ ಕಾಲಕ್ಕೆ ಪಲ್ಸರ್ ಬೈಕ್ ಒಂದು ವರೆ ತೊಲೆ ಬಂಗಾರ ಮತ್ತು ಇತರೇ ಗ್ರಹ ಬಳಕೆಯ ಸಾಮಾನುಗಳು ಕೊಟ್ಟು ಸುಮಾರು 10 ಲಕ್ಷ ರೂಪಾಯಿ ಖರ್ಚು ಮಾಢಿ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ಮದುವೆಯಾದ 3 ದಿವಸಗಳ ನಂತರ ನನ್ನ ಗಂಡ ಪೇರೋಜ ಬೇಗ್,ಮಾವ ಮಿರ್ಜಾ ಅಸ್ಲಂ ಬೇಗ್  ಅತ್ತೆ ಜಕಿಯಾ ಬೇಗಂ, ನಾದಿನಿಯರಾದ ತಬಸ್ಸುಮ್   ಅಸ್ಮಾ ಹಾಗೂ ನೌಶಿನ್ ಹಾಗೂ ನಾದಿಯಾದ ತಬಸ್ಸುಮ ಇವರ ಗಂಡ ಖದೀರ ಹಾಗೂ ನನ್ನ ಗಂಡನ ಸೋದರ ಮಾವನಾದ ಖಯ್ಯೂಮ್ ಇವರೆಲ್ಲರೂ ಕೂಡಿಕೊಂಡು ಯೆ ಶಾದಿ ಕರ್ಕೆ ಹಮ್ ಲುಕ್ಸಾನ್ ಮೆ ಹೈ ಶಾದಿ ಸೇ ಪಹಲೇ ಹಮ್ ಲೋಗ್ ಕಾರ್ ಔರ್ ಪ್ಲಾಟ್ ಮಾಂಗೆಥೇ ಮಗರ ತೇರಾ ಬಾಪ್ ನೇ ಶಾದಿ ಹೋನೆಕೆ ಬಾದ ದೇತೆ ಬೊಲಕೆ ಅಬಿ ನಹಿ ದಿಯೇ ಅಂತಾ ನನಗೆ ಹೊಡೆಯತೊಡಗಿದರು ನಾನು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ನಾದಿನಿಯರಾದ ಆಸ್ಮಾ, ನೌಸಿನ ಇವರು ನನ್ನ ಕೈ ಕಾಲು ಹಿಡಿದು ನನ್ನ ಗಂಡ ಮಾವ, ಅತ್ತೆ ಮನ ಬಂದಂತೆ ಹೊಡೆದರು. ಮರುದಿವಸ ಈ ವಿಷಯವನ್ನು ನಮ್ಮ ತಂದೆ ತಾಯಿಯವರಿಗೆ ತಿಳಿಸಿದಾಗ ಅವರು ಬಂದು ನನ್ನ ಗಂಡ ಹಾಗೂ ಅವರ ಮನೆಯವರಿಗೆ ಬುದ್ದಿವಾದ ಹೇಳಿದರು. ಸ್ವಲ್ಪ ದಿವಸ ಚೆನ್ನಾಗಿದ್ದು ಮತ್ತೆ ಅದೇ ರೀತಿ ತವರು ಮನೆಯಿಂದ ಒಂದು ಪ್ಲಾಟು ಮತ್ತು ಮನೆ ಕಟ್ಟಲು 10 ಲಕ್ಷ ಹಣ , ಹಾಗೂ ಕಾರು ತೆಗೆದುಕೊಂಡು ಬಾ ಅಂತಾ ನನಗೆ ಮಾನಸಿಕ ಹಾಗೂ ದೈಹಿಕ  ಹಿಂಸೆ ಕೊಟ್ಟು ಕೈಯಿಂದ ಮತ್ತು ಕಟ್ಟಿಗೆಯಿಂದ ಹೊಡೆ ಬಡೆ ಮಾಡಿದರು.ದಿನಾಂಕ 03-08-2015 ರಂದು 5-30 ಪಿ.ಎಮ್ ಕ್ಕೆ ನನ್ನ ಅತ್ತೆ, ಮಾವ, ನಾದಿನಿಯರೆಲ್ಲರೂ ಹಾಗೂ ನಾದಿನಿ ಗಂಡ ಮತ್ತು ನನ್ನ ಗಂಡನ ಸೋದರ ಮಾವ ಇವರೆಲ್ಲರೂ ಸೇರಿಕೊಂಡು ಮದುವೆಯಾಗಿ  ಒಂದು ವರ್ಷವಾದರೂ ನಿನ್ನ ತವರು ಮನೆಯಿಂದ ನಾವು ಕೇಳಿರುವ ಒಂದು ಪ್ಲಾಟು ಮತ್ತು ಮನೆ ಕಟ್ಟಲು 10 ಲಕ್ಷ ರೂ. ಹಣ , ಹಾಗೂ ಕಾರು ತೆಗೆದುಕೊಂಡು ಬಾ ಅಂತಾ ನನಗೆ ಮಾನಸಿಕ ಹಾಗೂ ದೈಹಿಕ  ಹಿಂಸೆ ಕೊಟ್ಟು ನನಗೆ ನೆಲಕ್ಕೆ ಕೆಡವಿ ಕತ್ತು ಹಿಡಿದು ಹೊಡೆಯುತ್ತಿದ್ದರು ಆಗ ನಾನು ತಪ್ಪಿಸಿಕೊಂಡು ನನ್ನ ತವರು ಮನೆಗೆ ಬಂದಿರುತ್ತೇನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹುಡುಗ ಕಾಣೆಯಾದ ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಪರಶುರಾಮ ತಂದೆ ಹೇಮಲು ರಾಠೋಡ ಉ: ಗ್ರಾಮ ಪಂಚಾಯತ ಸದಸ್ಯ ಇಟಗಾ [ಕೆ] ರವರು ಹಿರಿಯ ಮಗನಾದ ಸುನಿಲ ಇವನು ಕಲಬುರಗಿಯ ಎಸ್.ಬಿ ಕಾಲೇಜದಲ್ಲಿ ಬಿ.ಎ 3ನೇ ಸೆಮಿಸ್ಟರ ದಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದಾನೆ ದಿನಾಲು ನಮ್ಮೂರ ಇಟಗಾ[ಕೆ] ದಿಂದ ಕಾಲೇಜಗೆ ಹೋಗಿ ಬರುತ್ತಾನೆ. ದಿನಾಂಕ 28/07/2015 ರಂದು ಮುಂಜಾನೆ 8:30 ಗಂಟೆಗೆ ನನ್ನ ಹಿರಿಯ ಮಗ ಸುನಿಲನು ಕಾಲೇಜಿಗೆ ಹೋಗುವದಿದೆ ಎಂದು ಹೇಳಿ ನಡುವಿನ ಮಗ ಅನೀಲನಿಗೆ ಕರೆದುಕೊಂಡು ಮೊಟರ ಸೈಕಲ ಮೇಲೆ ಕಲಬುರಗಿಯ ಎಸ್.ಬಿ ಕಾಲೇಜಗೆ ಹೋಗಿದ್ದರು. ರಾಮ ಮಂದಿರ ಹತ್ತಿರ ಅವನು ತನ್ನ ಬ್ಯಾಂಕ ಖಾತೆಯಲ್ಲಿದ್ದ 18000/-ರೂಪಾಯಿಯನ್ನು ಎ.ಟಿ.ಎಮ್ ದಿಂದ ವಿಡ್ರಾಲ್ ಮಾಡಿಸಿ ಅನೀಲನಿಗೆ ಕೊಟ್ಟು ಮನೆಯಲ್ಲಿ ಕೊಡುವಂತೆ ಹೇಳಿರುತ್ತಾನೆ. ನಂತರ ಎಸ.ಬಿ. ಕಾಲೇಜ ಒಳಗಡೆ ಹೋಗುವಾಗ ಕೇವಲ 20 ರೂಪಾಯಿ ಇಟ್ಟುಕೊಂಡಿದ್ದು ಸಂಜೆ 4:30 ಗಂಟೆ ಫೊನ ಮಾಡುತ್ತೇನೆ ಎಂದು ಹೇಳಿ ಅನೀಲನಿಗೆ ಕಳುಹಿಸಿರುತ್ತಾನೆ ಎಂದು ಅನೀಲ ಬಂದು ನನಗೆ ಹೇಳಿದ್ದು ಆ ದಿವಸ ಸುನೀಲನು ಸಂಜೆ ವೇಳೆಗೆ ಫೋನ ಮಾಡಿರುವುದಿಲ್ಲಾ . ರಾತ್ರಿ 10 ಗಂಟೆಯಾದರೂ ಮನೆಗೆ ಬರಲಾರದಕ್ಕೆ ನಾನು ಅವನ ಗೆಳೆಯರಿಗೆ ಫೋನ ಮಾಡಿ ಕೇಳಿದ್ದು ಎಲ್ಲೂ ಸಿಕ್ಕಿರುವುದಿಲ್ಲಾ. ಈಗ ಸುಮಾರು 4-5 ದಿವಸಗಳಿಂದ ಎಲ್ಲಾ ಕಡೆ ಹುಡುಕಾಡುತ್ತಿರುವಾಗ ನಮ್ಮೂರ ಕಿಶನ ಬದ್ದು ಎನ್ನವರು ಫೋನ ಮಾಡಿ ಎಲ್ಲಿ ಯಾಕ್ ಹುಡುಕುತ್ತಿದ್ದಿ ನಿನ್ನ ಮಗ ಬಾಂಬೆಯಲ್ಲಿದ್ದಾನೆ. ಗೀತಾ ಎನ್ನುವಳ ಜೊತೆ ಮಧುವೆ ಮಾಡುತ್ತಿದ್ದೇವೆ ಬೇಕಾದರೆ ಹೋಗಿ ನಿಲ್ಲಿಸು ಎಂದು ಹೇಳಿರುತ್ತಾನೆ. ಯಾಕೆಂದರೆ ನಾನು ಈ ವರ್ಷ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಸ್ವರ್ದಿಸಿದಾಗ ಅವನು ಬಾಂಬೆಯಿಂದ ಬಂದು ನನ್ನ ವಿರುದ್ದ ತನ್ನ ಅಣ್ಣನ ಮಗನಿಗೆ ನಿಲ್ಲಿಸಿದ್ದು ಚುನಾವಣೆಯಲ್ಲಿ ಸೊತಿದ್ದರಿಂದ ಇದರ ಸೇಡು ತೀರಿಸುತ್ತೇನೆ ಎಂದು ಹೇಳಿದನು. ಅದಕ್ಕೆ ನನ್ನ ಮಗ ಕಾಣೆಯಾಗಿರುವ ಹಿಂದೆ ಕಿಶನ ಬದ್ದು, ರಾಮಿಬಾಯಿ ಗಣಪತಿ, ಗೀತಾ ಗಣಪತಿ ರವರ ಕೈವಾಡ ಇರುವ ಬಗ್ಗೆ ಸಂಶಯ ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೊಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

09 August 2015

Kalaburagi District Reported Crimes

ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 06-08-2015 ರಂದು ರಾತ್ರಿ 8.00 ಗಂಟೆಯ ಸುಮಾರಿಗೆ ಶ್ರೀ ಮಲ್ಲಪ್ಪ ತಂದೆ ಹಾವಪ್ಪ ಹೊಸಮನಿ ಸಾ : ವರ್ಚನಳ್ಳಿ ಮತ್ತು ನನ್ನ ಹೆಂಡತಿ ಕಮಲಾಬಾಯಿ ಮಗನಾದ ಅಂಬರೇಶ ಮೂರು ಜನರು ನಮ್ಮ ಮನೆಯ ಎದುರು ಕುಳಿತುಕೊಂಡಿದ್ದೆವು. ಅದೇ ವೇಳೆಗೆ ನಮ್ಮೂರ ಅಬ್ದುಲ್ ಬಾಷಾ ಜಮಾದಾರ ಇತನು ತನ್ನ ಕೈಯಲ್ಲಿ ಕೊಡಲಿ ಹಿಡಿದುಕೊಂಡು ನನ್ನ ಮನೆಯ ಎದುರುಗಡೆ ಬಂದು ಏ ಮಲ್ಯಾ ಮಾದಿಗ ಸೂಳೆ ಮಗನೆ ನಮ್ಮ ಸಂಭಂಧಿಕರೊಂದಿಗೆ ಹೊಲದ ದಾರಿ ವಿಷಯದಲ್ಲಿ ತಕರಾರು ಮಾಡುತ್ತಿ ರಂಡಿ ಮಗನೆ ಅಂತಾ ಅವಾಚ್ಯವಾಗಿ ಬೈಯ ತೊಡಗಿದನು. ನಾನು ಅವನಿಗೆ ನಮಗೆ ಯಾಕೆ? ಬೈಯುತ್ತಿದ್ದಿ ಅಂತಾ ಕೇಳಿದಾಗ ಏ ಸೂಳಿಮಗನೆ ನನಗೆ ಎದುರು ಮಾತಾಡುತಿ ಅಂತಾ ಅಂದವನೆ ತನ್ನ ಕೈಯಲ್ಲಿನ ಕೊಡಲಿಯಿಂದ ಹೊಡೆಯುತ್ತೇನೆ ಅಂತಾ ಕೊಡಲಿ ತೋರಿಸ ಹತ್ತಿದ್ದನು ಆಗ ನನ್ನ ಹೆಂಡತಿ ಅವನಿಗೆ ಯಾಕೆ ನಮ್ಮ ಸಂಗಡ ಜಗಳ ಮಾಡುತ್ತಿ ಅಂತಾ ಕೇಳಲು ಬಂದಾಗ ಅವಳಿಗೂ ಅವನು ಏ ರಂಡಿ ಬೊಸಡಿ ಅಂತಾ ಬೈದಿರುತ್ತಾನೆ, ಹಾಗೂ ನನಗೆ ಮುಂದಕ್ಕೆ ಹೊಗದಂತೆ ತಡೆದು ನಿಲ್ಲಿಸಿ ಹೊಲದ ದಾರಿಯ ವಿಷಯದಲ್ಲಿ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಸ ಮಾಡಿ ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ ವಶ :
ಜೇವರ್ಗಿ ಠಾಣೆ : ದಿನಾಂಕ 08.08.2015 ರಂದು ಮಧ್ಯಾಹ್ನ ನರಿಬೋಳ ಗ್ರಾಮದ ಹತ್ತಿರ ರಾಜವಾಳ ನರಿಬೋಳ ರಸ್ತೆಯ ಮೇಲೆ ಸಂಬಂದಪಟ್ಟ ಇಲಾಖೆಯಿಂದ ಯಾವುದೆ ಪರವಾನಿಗೆಯನ್ನು ಪಡೆದುಕೊಳ್ಳದೆ ಸಂಭಂದಪಟ್ಟ ಇಲಾಖೆಗೆ ಮತ್ತು ಸರಕಾರಕ್ಕೆ ಮೊಸ ಮಾಡಿ ಕಳ್ಳತನದಿಂದ ಮರಳು ಸಾಗಾಣಿಗೆ ಮಾಡುತ್ತಿದ್ದ ಬಗ್ಗೆ ಬಾತ್ಮಿ ಬಂದ ಮೇರೆಗೆ ಶ್ರೀ. ಪಂಡಿತ ವಿ ಸಗರ ಪಿ.ಎಸ್.ಐ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಹೋಗಿ ದಾಳಿ ಮಾಡಿ ಟಿಪ್ಪರ್ ನಂ ಜಿ.ಎ05ಟಿ1739 ನೇದ್ಧನ್ನು ಮತ್ತು 3 ಬ್ರಾಸ್ ಮರಳು ಅಂ.ಕಿ 1.500/- ರೂ ನೇದ್ದನ್ನು ಪಂಚರ ಸಮಕ್ಷಮದಲ್ಲಿ ಜಪ್ತ ಮಾಡಿಕೊಂಡಿದ್ದು ದಾಳಿಯ ಕಾಲಕ್ಕೆ ಸದರಿ ಟಿಪ್ಪರ್ ಚಾಲಕನು ಓಡಿ ಹೋಗಿದ್ದು  ಸದರಿ ಟಿಪ್ಪರನೊಂದಿಗೆ ಜೇವರ್ಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹೆಣ್ಣು ಮಗಳು ಕಾಣೆಯಾದ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ ೦2.08.2015 ರಂದು ಮುಂಜಾನೆ ನನ್ನ ಹೆಂಡತಿಯಾದ ಮಹಾನಂದ ಗಂಡ ಮರೆಪ್ಪ ಭಜಂತ್ರಿ ವಯಾ : 22 ಇವಳು ಜೇವರಗಿಯ ಶಾಸ್ತ್ರಿ ಚೌಕ್‌ ನಗರದಲ್ಲಿನ ನನ್ನ ಮನೆಯಿಂದ ಕಲಬುರಗಿಯ ನ್ಯಾಷನಲ್ ಬಿ.ಎಡ್ ಕಾಲೇಜಿಗೆ ಹೋಗಿ ಬರುವದಾಗಿ ಹೇಳಿ ಹೋಗಿದ್ದು ಮರಳಿ ಮನೆಗೆ ಬಂದಿರುವದಿಲ್ಲ, ಕಾಣೆಯಾಗಿರುತ್ತಾಳೆ ಅಂತ ನಮ್ಮ ಸಂಭಂದಿಕರಲ್ಲಿ ಅವಳ ಗೆಳತಿಯರಲ್ಲಿ ಮತ್ತು ಎಲ್ಲಾ ಕಡೆ  ಹುಡುಕಾಡಿದರು ಸಿಕ್ಕಿರುವದಿಲ್ಲ ಅಂತಾ ಶ್ರೀ ಮರೆಪ್ಪ ತಂದೆ ಭಾಗಪ್ಪ ಭಜಂತ್ರಿ ಸಾ : ಶಾಸ್ತ್ರಿ ಚೌಕ್ ಜೇವರಗಿ. ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.