POLICE BHAVAN KALABURAGI

POLICE BHAVAN KALABURAGI

10 July 2015

Kalaburagi District Reported Crimes

ಕಳವು ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 09-07-15 ರಂದು ರಾತ್ರಿ 1-00 ಗಂಟೆಯಿಂದ ಬೆಳಗಿನ 6-30 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಉಪಳಾಂವ ಸೀಮಾಂತರದ ಮದರತೇರಿಸಾ ಆಸ್ಪತ್ರೆ  ಹತ್ತಿರ ಗ್ಯಾಲಕ್ಸಿ ಆಗ್ರೀಟೆಕ್ಕ್ ಪುಡ್ಡ್ ಗ್ರೇನ್  ಪ್ರೋಸೆಸಿಂಗ್ ಕಾರ್ಖಾನೆ, ಶೆಟರಿಗೆ ಕಲ್ಲು ಹಾಕಿ ಮತ್ತು ಕಟ್ಟಿಗೆಯಿಂದ ಬೆಂಡ ಮಾಡಿ ಮಣಿಸಿ ಆಫೀಸನ ರೂಮಿನಲ್ಲಿಟ್ಟ್ ಕಬ್ಬಿಣದ ಅಲಮಾರಿ ಮತ್ತು ಟೇಬಲದ ಬಲ ಮತ್ತು ಎಡಭಾಗದ  ಡ್ರಾಗಳ ಲಾಕ ಬ್ರೇಕ ಮಾಡಿ , ಅಲಮಾರಿಯಲ್ಲಿದ್ದ 1)ಅರ್ಧ ತೊಲಿಯ ಮೂರು  ಬಂಗಾರದ ನ್ಯಾಣಗಳು ಅ:ಕಿ:30,000/- ರೂ. 2)ಎರಡು ತೊಲಿಯ 5 ಬೆಳ್ಳಿಯ ನ್ಯಾಣಗಳು ಅ:ಕಿ: 4,000/-ರೂ. 3) ಹಳೆಯ 6 ಮೋಬಾಯಿಲಗಳು ಅ:ಕಿ: 6,000/-ರೂ.  ಟೇಬಲ ಡ್ರಾದಲ್ಲಿದ್ದ 4) ನಗದು ಹಣ  15,000/- ರೂ.ದೇವರು ಪೂಜೆ ಮಾಡಲು ಇಟ್ಟ 5)ಗಣಪತಿ ಮತ್ತು ಲಕ್ಷ್ಮೀ  ಬೆಳ್ಳಿಯ ಒಂದೊಂದು ವಿಗ್ರಹ  ಅ:ಕಿ: 4,000 /-ರೂ. 6) ಸಿ.ಸಿ. ಕ್ಯಾಮರಾ ಅ:ಕಿ:12,000/- ರೂ. 7)25ಕೆ.ಜಿಯ 10 ಪಾಕೇಟ್ ಅಕ್ಕಿ ಚೀಲಗಳು ಅ:ಕಿ:10,000/- ರೂ. 8)50ಕೆ.ಜಿ.ಯು 2 ತೊಗರಿ ಪಾಕೇಟಗಳು ಅ:ಕಿ:10,000/- ರೂ. ಹೀಗೆ ಒಟ್ಟು 91,000/- ರೂ. ಮಾಲನ್ನು ಕಳ್ಳತನಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ರಾಘವೇಂದ್ರ ತಂದೆ ಲಕ್ಷ್ಮೀನಾರಾಯಣ ಗುಪ್ತಾ ಮು: ಉಪಳಾಂವ ಗ್ರಾಮ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಚೌಕ ಠಾಣೆ : ಶ್ರೀಮತಿ ಅಂಜನಮ್ಮಾ ಗಂಡ ದೇವಿಂದ್ರಪ್ಪ ಭಾಲ್ಕೆನವರ ಸಾ: ಮನೆ ನಂ. 82 ಆಶ್ರಯ ಕಾಲೋನಿ ಫೀಲ್ಟರ ಬೆಡ್ ಕಲಬುರಗಿ ಇವರಿಗೆ ಕಳೆದ 10 ವರ್ಷಗಳ ಹಿಂದೆ ಆಶ್ರಯ ಕಾಲೋನಿಯಲ್ಲಿ ಇದ್ದಾಗಲೇ ದೇವಿಂದ್ರಪ್ಪ ಬಾಲ್ಕೆನವರ ಅನ್ನುವವರೊಂದಿಗೆ ಪರಿಚಯವಾಗಿ ಈ ಪರಿಚಯು ಮುಂದೆ ಪ್ರೇಮದಲ್ಲಿ ತಿರುಗಿ ದೇವಿಂದ್ರಪ್ಪ ಇತನು ನನಗೆ ನನ್ನ ಹೆಂಡತಿ ಗೋದಾವರಿ ನನಗೆ ಸರಿಯಾಗಿ ನೋಡಿಕೊಳ್ಳದೆ ಇರುವುದ್ದರಿಂದ ನಾನು ಅವಳಿಗೆ ಡೈವರ್ಸ ಕೊಟ್ಟಿರುತ್ತೇನೆ. ನೀನು ನನಗೆ ಮದುವೆ ಮಾಡಿಕೋ ಅಂತಾ ಹೇಳಿದ್ದರಿಂದ ನಾನು ಅವನ ಮಾತಿಗೆ ಬೇಲೆ ಕೊಟ್ಟು ಪ್ರೇಮಿಸಿ ಮದುವೆ ಮಾಡಿಕೊಂಡಿರುತ್ತೇನೆ. ನನಗೆ ಸುಮಾರು 5-6 ವರ್ಷಗಳ ಕಾಲ ಸದರಿ ದೇವಿಂದ್ರಪ್ಪ ಇತನು ಸರಿಯಾಗಿ ನೋಡಿಕೊಂಡಿದ್ದು ಆ ವೇಳೆಯಲ್ಲಿ ದೇವಿಂದ್ರಪ್ಪನ ಹೆಂಡತಿ ಗೋದಾವರಿ ಇವಳಿಗೆ ತನ್ನ ಗಂಡ ನನಗೆ ಸಂಬಂಧ ಇಟ್ಟುಕೊಂಡು ಬೇರೆ ಮನೆ ಮಾಡಿರುವ ಬಗ್ಗೆ ವಿಷಯ ಗೊತ್ತಾಗಿ ಅವಳು ಆಗಾಗ್ಗೆ ತನ್ನ ಗಂಡನೊಂದಿಗೆ ಮತ್ತು ನನ್ನೊಂದಿಗೆ ಬಂದು ತಕರಾರು ಮಾಡಿ ಹೊಡೆಬಡೆ ಮಾಡಿ ಬೆದರಿಕೆ ಹಾಕಿ ನೀನು ಒಂದು ವೇಳೆ ನನ್ನ ಗಂಡನ ಜೊತೆಗೆ ಸಂಬಂಧ ಇಟ್ಟುಕೊಂಡರೇ ನಿನಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಬೆದರಿಕೆ ಹಾಕಿದ್ದು ಆದರೋ ಸಹ ನಾನು ಸಹನೆ ಮಾಡಿಕೊಂಡು ಆಶ್ರಯ ಕಾಲೋನಿಯಲ್ಲಿ ಮನೆ ಮಾಡಿಕೊಂಡು ಇರುತ್ತೇನೆ. ದೇವಿಂದ್ರಪ್ಪ ಇತನು ನನ್ನೊಂದಿಗೆ ಆಗಾಗ್ಗೆ ಇನ್ನೂ ಅವಳಿಗೆ ಗೊತ್ತಾಗದೇ ಹಾಗೇ ನನ್ನೊಂದಿಗೆ ಸಂಬಂಧ ಇಟ್ಟುಕೊಂಡು ಆಗಾಗ್ಗೆ ನಮ್ಮ ಮನೆಗೆ ಬಂದು ಹೋಗುವುದು ಮಾಡುತ್ತಿರುತ್ತಾನೆ. ನಾನು ವಾಸವಿರುವ ಸದ್ಯದ ಮನೆ ತುಳಜಮ್ಮಾ ಇವರುದು ಇದ್ದು ಆ ಮನೆಯನ್ನು ನಾನು 4 ವರ್ಷದ ಹಿಂದೆ 1 ಲಕ್ಷ 60 ಸಾವಿರ ರೂಪಾಯಿಗೆ ಖರೀಧಿ ಮಾಡಿರುತ್ತೇನೆ. ತುಳಜಮ್ಮಾ ಇವಳು ನನಗೆ ಅಗ್ರಿಮೆಂಟ ಆಫ್ ಸೇಲ್ ಬರೆದುಕೊಟ್ಟಿರುತ್ತಾಳೆ. ಇತ್ತಿಚಿನ ದಿನಗಳಲ್ಲಿ ನಾನು ಆ ಮನೆಯಲ್ಲಿ ಇರುವುದನ್ನು ನೋಡಿರುವ ಗೋದಾವರಿ ಇವಳು ತನ್ನ ಗಂಡ ದೇವಿಂಧ್ರಪ್ಪ ಇವಳಿಗೆ ಮನೆ ಖರೀಧಿ ಮಾಡಿಕೊಟ್ಟಿರುತ್ತಾನೆ. ಅಂತಾ ಅವನಿಗೆ ತೊಂದರೆ ನೀಡಿದ್ದರಿಂದ ಅವನು ಆ ಮನೆಯನ್ನು ನಾನೇ ಖರೀಧಿ ಮಾಡಿಕೊಂಡಿದ್ದು ಅವಳು ಒತ್ತಾಯದಿಂದ ಆ ಮನೆಯಲ್ಲಿ ವಾಸವಾಗಿರುತ್ತಾಳೆ. ಅಂತಾ ದೇವಿಂದ್ರಪ್ಪ ಇತನು ತನ್ನ ಹೆಂಡತಿಗೆ ಹೇಳಿದ್ದು ಈ ಆಸ್ತಿ ತನ್ನ ಗಂಡ ದೇವಿಂದ್ರಪ್ಪನದೇ ಇರುತ್ತದೆ. ಈ ಮನೆ ಅವನಿಗೆ ಸೇರಿದ್ದು ಇರುತ್ತದೆ. ಅಂತಾ ಈ ಮನೆ ಖಾಲಿ ಮಾಡು ಅಂತಾ ದೇವಿಂದ್ರಪ್ಪ ಇತನ ಹೆಂಡತಿ ಗೋದಾವರಿ ಅವನ ಸಂಗಡ ಲೀಡರ ಆಗಿರುವ ಶರಣಪ್ಪ ಸಿಂಗೆ @ ಅಂಕಲಗಿ ಮತ್ತು ಇನ್ನೊಬ್ಬ ವಿ.ಕೆ. ಸಲಗರದವನು ಇವರೆಲ್ಲರೂ ಕೂಡಿಕೊಂಡು ನನಗೆ ಮನೆ ಖಾಲಿ ಮಾಡಿಕೊಡುವಂತೆ ಒತ್ತಾಯ ಮಾಡಿರುತ್ತಾರೆ. ಸದರಿ ಮನೆ ನಾನು ಖರೀಧಿಸಿದ್ದು ಆ ಮನೆಯಲ್ಲಿಯೆ ವಾಸವಾಗಿರುತ್ತೇನೆ. ದಿನಾಂಕ 09.07.2015 ರಂದು ಮದ್ಯರಾತ್ರಿ ನಾನು ಮನೆಯಲ್ಲಿ ಮಲಗಿಕೊಂಡಾಗ ನನ್ನೊಂದಿಗೆ ಸಂಬಂಧ ಇಟ್ಟುಕೊಂಡಿರುವ ದೇವಿಂದ್ರಪ್ಪ ತಂದೆ ಶಿವರಾಮಪ್ಪ ಭಾಲ್ಕೆನವರ  ಅವನ ಹೆಂಡತಿ ಗೋದಾವರಿ ಗಂಡ ದೇವಿಂದ್ರಪ್ಪ ಬಾಲ್ಕೆನವರ, ಲೀಡರ ಶರಣಪ್ಪ ಸಿಂಗೆ @ ಅಂಕಲಗಿ, ಮತ್ತು ವಿ.ಕೆ.ಸಲಗರದ ಹುಡುಗ ಈ 4 ಜನರು ನನ್ನ ಮನೆಗೆ ಬಂದು ರಾತ್ರಿ ವೇಳೆಯಲ್ಲಿ ಬಾಗಿಲು ಬಡೆದು ಬಾಗಿಲು ತೆರೆಯಿಸಿ ನನ್ನ ಮನೆಯಲ್ಲಿ ಬಂದು ದೇವಿಂದ್ರಪ್ಪ ಇತನು ಮನೆ ಖಾಲಿ ಮಾಡು ಅಂತಾ ಹೇಳಿದರೂ ಮನೆ ಯಾಕೆ ಖಾಲಿ ಮಾಡಿಲ್ಲಾ ಈ ಮನೆ ನನ್ನದೇ ಇರುತ್ತದೆ. ನಿನಗೆ ಬಹಳ ಸೋಕ್ಕು ಬಂದಿದ್ದೆ ರಂಡಿ ಅಂತಾ ಅವಾಚ್ಯವಾಗಿ ಬೈಯಲು ಅವನ ಹೆಂಡತಿ ಗೋದಾವರಿ ಇವಳು ಅಲ್ಲಿಯೆ ಹೊರಗಡೆ ಬಿದ್ದ ಒಂದು ಕಲ್ಲು ಎತ್ತಿಕೊಂಡು ಬಂದು ನನ್ನ ಮನೆಯ ಕಿಟಕಿಯ ಗ್ಲಾಜುಗಳನ್ನು ಒಡೆದು ಹಾಕು ಮಾಡಿರುತ್ತಾಳೆ. ಮತ್ತು ನನಗೆ ಅದೇ ಕಲ್ಲಿನಿಂದ ಹಣೆಯ ಮೇಲೆ ಹೊಡೆದು ರಕ್ತಗಾಯ ಮಾಡಿದ್ದು ಅಲ್ಲದೆ ಬಲಗಾಲ ತೊಡೆಯ ಮೇಲೆ ಕಲ್ಲಿನಿಂದ ಹೊಡೆದು ಗುಪ್ತಗಾಯ ಮಾಡಿರುತ್ತಾಳೆ. ಶರಣಪ್ಪ ಸಿಂಗೆ ಮತ್ತು ವಿ.ಕೆ. ಸಲಗರ ಹುಡುಗ ಈ ರಂಡಿಗೆ ಜೀವ ಸಹಿತ ಬಿಡಬೇಡಿರಿ ಖಲಾಸ ಮಾಡಿರಿ ಅಂತಾ ಜೀವ ಬೆದರಿಕೆ ಹಾಕುತ್ತಾ ಇವಳಿಗೆ ಮನೆಯಿಂದ ಹೊರ ಹಾಕಿರಿ ಅಂತಾ ಅವರಿಗೆ ಕುಮ್ಮಕ್ಕು ನೀಡಿದ್ದರಿಂದ ಗೋದಾವರಿ ಇವಳು ನನಗೆ ಕೈಹಿಡಿದು ಹೊರಗಡೆ ದೂಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

09 July 2015

Kalaburagi District Reported Crimes

ಅತ್ಯಾಚಾರ ಮಾಡಲು ಪ್ರಯತ್ನಿಸಿದ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಚಂದ್ರಕಾಂತ ತಂದೆ ಶರಣಪ್ಪಾ ಜಮದಾರ ಸಾ; ಜಮದಾರ ರವರ ಮಗಳಾದ ಕುಮಾರಿ ಇವಳು ನಮ್ಮ ಗ್ರಾಮದಲ್ಲಿರುವ ಶ್ರೀ ಶಾರದಾ ದೇವಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 5ನೇ ತರಗತಿಯಲ್ಲಿ ಒದುತ್ತಿದ್ದು. ಸದರಿ ನನ್ನ ಮಗಳು ಬೆಳ್ಳಿಗ್ಗೆ 9:30 ಗಂಟೆಗೆ ಮನೆಯಿಂದ ಶಾಲೆಗೆ ಹೋಗಿ ಸಾಯಂಕಾಲ 4:30 ಗಂಟೆಯ ಸುಮಾರಿಗೆ ಶಾಲೆಯಿಂದ ಮನೆಗೆ ಬರುತ್ತಿದ್ದು ಎಂದಿನಂತೆ ದಿನಾಂಕ 08.07.2015 ರಂದು ಬೆಳ್ಳಿಗ್ಗೆ 9:30 ಗಂಟೆಯ ಸುಮಾರಿಗೆ ನನ್ನ ಮಗಳು ಶಾಲೆಗೆ ಹೋಗಿದ್ದು ಸಾಯಂಕಾಲ 4 ಗಂಟೆಯ ಸುಮಾರಿಗೆ ನಾನು ನನ್ನ ಕೆಲಸ ಮುಗಿಸಕೊಂಡು ಮನೆಗೆ ಬಂದಿದ್ದು ಮನೆಯಲ್ಲಿ ನಾನು ನನ್ನ ಹೆಂಡತಿಯಾದ ಅನೀತಾ ಕೂಡಿಕೊಂಡು ನಮ್ಮ ಮನೆಯಲ್ಲಿದ್ದು ಸಾಯಂಕಾಲ 4:30 ಗಂಟೆಯ ಸುಮಾರಿಗೆ ನನ್ನ ಮಗಳು ಅಳುತ್ತಾ ಮನೆಗೆ ಬಂದಿದ್ದು ಆಗ ನಾನು ನನ್ನ ಮಗಳಿಗೆ ವಿಚಾರಿಸಲು ನನ್ನ ಮಗಳು ನನಗೆ ತಿಳಿಸಿದ್ದೆನೆಂದರೆ ಶಾಲೆ ಬಿಟ್ಟನಂತರ ನಾನು ನನ್ನ ಗೆಳತಿಯಾದ ರಾಜೇಶ್ವರಿ ಕೂಡಿಕೊಂಡು ಶಾಲೆಯಿಂದ ಮನೆಗೆ ಬರುವ ದಾರಿಯಲ್ಲಿರುವ ಶ್ರೀ ಶಾಂತಲಿಂಗೇಶ್ವರ ಮಠಕ್ಕೆ ಹೋಗಿದ್ದು ಮಠದಲ್ಲಿದ್ದ ದೇವರಿಗೆ ನಮಸ್ಕಾರ ಮಾಡಿ ನಂತರ ನಾನು ನನ್ನ ಗೆಳತಿ ಕೂಡಿಕೊಂಡು ಹೊರಗೆ ಬರುತ್ತಿದ್ದಾಗ ಮಠದಲ್ಲಿದ್ದ ಶಾಂತವೀರಪ್ಪ ಸ್ವಾಮಿ ಇವರು ನಮಗೆ ತಮ್ಮ ಹತ್ತಿರ ಕರೆದಿದ್ದು ಆಗ ನಾವು ಶಾಂತವೀರಪ್ಪ ಸ್ವಾಮಿ ಇವರ ಹತ್ತಿರ ಹೋದಾಗ ಸದರಿಯವರು ನನಗೆ ಹಿಡಿದುಕೊಂಡು ನನ್ನ ಎಡಗಲ್ಲಕ್ಕೆ ಮುತ್ತು ಕೊಟ್ಟಿದ್ದು ಮತ್ತು ನನ್ನ ಗಲ್ಲ ಕಚ್ಚಿದ್ದು ಆಗ ಸದರಿಯವರು ನಾನು ನೀನಗೆ ಮುತ್ತು ಕೊಟ್ಟಿದ್ದೆನೆ ನೀನು ಮರಳಿ ನನಗೆ ಮುತ್ತು ಕುಡು ಅಂತ ಹೇಳಿದ್ದು ಅದೇ ವೇಳೆಗೆ ರಾಜೇಶ್ವರಿ ಇವಳು ಅಲ್ಲಿಂದ ಓಡಿ ಹೋಗಿದ್ದು ನಾನು ಸ್ವಾಮಿಯವರಿಗೆ ಮತ್ತು ಕುಡಲು ನೀರಾಕರಿಸಿದಾಗ ಸದರಿಯವರು ನನ್ನ ಎದೆಯ ಮೇಲೆ ಕೈಯಾಡಿಸುತ್ತಾ ನೀನು ಪ್ರತಿ ದಿವಸ ಮಠಕ್ಕೆ ಬಾ ಅಂತ ಹೇಳಿ ನನಗೆ ಹಿಡಿದುಕೊಳ್ಳಲು ಬಂದಿದ್ದು ಆಗ ನಾನು ಸ್ವಾಮಿಯವರಿಂದ ತಪ್ಪಿಸಿಕೊಂಡು ಒಡುತ್ತಾ ಮನೆಗೆ ಬಂದಿದ್ದು ಇರುತ್ತದೆ ಅಂತ ನನ್ನ ಮಗಳು ಅಳುತ್ತಾ ನನಗೆ ಹೇಳಿದ್ದು ಇರುತ್ತದೆ. ನಂತರ ನಾನು ನನ್ನ ಮಗಳಿಗೆ ಸಮಾದಾನ ಮಾಡಿ ನಮ್ಮ ಸಂಬಂದಿಕನಾದ ಸತೀಶ ಇವರಿಗೆ ಕರೆದು ಘಟನೆಯ ಬಗ್ಗೆ ತಿಳಿಸಿದ್ದು ನಂತರ ನಾನು ಮತ್ತು ಸತೀಶ ಕೂಡಿಕೊಂಡು ಸಾಯಂಕಾಲ 6 ಗಂಟೆಯ ಸುಮಾರಿಗೆ ಶಾಂತವೀರಪ್ಪ ಸ್ವಾಮಿ ಇವರ ಸಂಗಡ ಮಾತನಾಡಲು ಮಠಕ್ಕೆ ಹೋಗಿದ್ದು ಸದರಿ ಶಾಂತವೀರ ಸ್ವಾಮಿ ಇವರಿಗೆ ನನ್ನ ಮಗಳ ಮುತ್ತು ಕೊಟ್ಟಿ ಗಲ್ಲ ಕಚ್ಚಿದ್ದು ಅಲ್ಲದೆ ಅವಳಿ ಮರಳಿ ಮುತ್ತು ಕುಡಲು ಯಾಕೆ ಹೇಳಿದ್ದಿರಿ ಅಂತ ಕೇಳಿದಾಗ ಸದರಿ ಶಾಂತವೀರ ಸ್ವಾಮಿ ಇವರು ನನ್ನಿಂದ ತಪ್ಪಾಗಿದೆ ಅಂತ ಹೇಳಿದ್ದು ಇರುತ್ತದೆ. ಶಾಂತಲಿಂಗೇಶ್ವರ ಮಠದ ಉತ್ತರಾಧಿಕಾರಿಯಾದ ಶಾಂತವೀರ ತಂದೆ ಶಿವಲಿಂಗಯ್ಯ ಹಿರೇಮಠ ಸಾ: ಕಮಲಾಪೂರ ಇವರು ನನ್ನ ಮಗಳಾದ ನಾಗವೇಣಿ ಇವಳಿಗೆ ಒತ್ತಾಯ ಪೂರ್ವಕವಾಗಿ ಮುತ್ತು ಕೊಟ್ಟು ಅವಳ ಗಲ್ಲ ಕಚ್ಚಿ ಅವಳಿಗೆ ಮರಳಿ ಮುತ್ತು ಕೂಡು ಅಂತ ಒತ್ತಾಯ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತ 7 ಜನರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ: 08-07-2015 ಜೆ.ಆರ್‌ ನಗರ ಬಡಾವಣೆಯ ಶ್ರೀ ವೀರಭದ್ರೇಶ್ವರ ಟೆಂಟಹೌಸ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್‌ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಜೆ.ಆರ್‌ ನಗರ ಬಡಾವಣೆಯ ಶ್ರೀ ಸಾಯಿ ಶಾಲೆಯ ಮರೆಯಲ್ಲಿ ನಿಂತು ನೋಡಲು ಅಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೀಟ್‌ ಎಲೆಗಳ ಸಹಾಯದಿಂದ ಪಣಕ್ಕೆ ಹಣ ಹಚ್ಚಿ ಅಂದರ-ಬಾಹರ ಇಸ್ಪೀಟ್‌ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಿ 7 ಜನರನ್ನು ಹಿಡಿದು ನಮ್ಮ ಸಮಕ್ಷಮದಲ್ಲಿ ಅವರ ಹೆಸರು ವಿಳಾಸ ವಿಚಾರಿಸಿದ್ದು ಅವರು ತಮ್ಮ ಹೆಸರು 1) ಮಾರುತಿ ತಂದೆ ಪಾಂಡಪ್ಪಾ ಯಾದವ ಸಾ:ಮಾಣಿಕೇಶ್ವರಿ ಕಾಲೋನಿ ಕಲಬುರಗಿ 2) ವಿಠ್ಠಲ ತಂದೆ ಸದಾಶಿವ ಭಂಕೂರ ಸಾ:ಲಾಲಗೇರಿ ಬ್ರಹ್ಮಪೂರ ಕಲಬುರಗಿ 3) ಬಸವರಾಜ ತಂದೆ ಗುಂಡಪ್ಪಾ ಬಿರಾದಾರ ಸಾ:ಲಾಲಗೇರಿ ಬ್ರಹ್ಮಪೂರ ಕಲಬುರಗಿ 4) ಶಿವಾನಂದ ತಂದೆ ಸಿದ್ದಪ್ಪಾ ಕಂಬಾರ ಸಾ:ಮಾಣಿಕೇಶ್ವರಿ ಕಾಲೋನಿ ಕಲಬುರಗಿ 5) ಲಕ್ಷ್ಮೀಕಾಂತ ತಂದೆ ಶಿವಶರಣಪ್ಪಾ ಮಳ್ಳಿ ಸಾ:ವಿಶ್ವರಾಧ್ಯ ಕಾಲೋನಿ ಆಳಂದ ರಸ್ತೆ ಕಲಬುರಗಿ 6) ನಾಗರಾಜ ತಂದೆ ಕರಣಪ್ಪಾ ಗುಲಬರ್ಗಾ ಸಾ:ಕೈಲಾಸ ನಗರ ಕಲಬುರಗಿ 7) ಗೋಪಾಲ ತಂದೆ ಕಾಶಪ್ಪಾ ಮುಖಿ ಸಾ:ಲಾಲಗೇರಿ ಬ್ರಹ್ಮಪೂರ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವರಿಂದ ಇಸ್ಪೀಟ್‌ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 14740/-ರೂ ಹಾಗು 52 ಇಸ್ಪೀಟ ಎಲೆಗಳನ್ನು ಜಪ್ತಿಪಡಿಸಿಕೊಂಡು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ :
ಮುಧೋಳ ಠಾಣೆ : ದಿನಾಂಕ 08-07-2015 ರಂದು ಮದ್ಯಾನ 3-00 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನಗೆ ತಿಳುದು ಬಂದಿದ್ದೆನಂದರೆ ನಮ್ಮುರ ಹಿಂದುಗಡೆ ಇರುವ ಲಕ್ಷ್ಮಿದೇವಿಯ ದೇವರ ಮುರ್ತಿ ಕಳ್ಳತನವಾಗಿದೆ ಅಂತಾ ತಿಳಿದು ಬಂದು ನಾನು ಹಾಗು ನಮ್ಮುರ  ಹಿರಿಯರಾದ ಮಾಹಾದೆವಪ್ಪಾ ತಂ/ ಬಸಪ್ಪ ಮದ್ದುರ ದಳಪತಿ , ಭೀಮಶಪ್ಪಾ ತಂ/ ಹಣಮಪ್ಪಾ ಧ್ಯಾನಬೊಯಿನ, ಚಂದ್ರಪ್ಪಾ ತಂ/ ಯಲ್ಲಪ್ಪಾ ಅಂಬಾಟಿ, ಗೀರಿಶ ತಂ/ ಬಾಲಚೆಂದ್ರ ಗೊಲ್ಲಾ ಇತರರು ಕೂಡಿ ನಮ್ಮುರ ಲಕ್ಷ್ಮಿ ದೇವರ ಗುಡಿಗೆ ಹೊಗಿ ನೊಡಲಾಗಿ ಗುಡಿಯಲ್ಲಿ ಹಿತ್ತಾಳೆಯ ಕುದರೆ ಮೆಲೆ ಕುಡಿಸಿದ ಲಕ್ಷ್ಮಿ ದೇವರ ಹಿತ್ತಾಳೆ ಮುರ್ತಿ ಇರಲಿಲ್ಲಾ ನಾವು ಅಲ್ಲಿ ಗುಡಿಯ ಸಮೀಪದಲ್ಲಿರುವ ಮನೆಯರಿಗೆ ಹಾಗು ಸಾರ್ವಜನಿಕರಿಗೆ ವಿಚಾರಸಲಾಗಿ ತಿಳಿದು ಬಂದಿದ್ದೆನಂದರೆ ಇಂದು ಮುಂಜಾನೆ 10-00 ಗಂಟೆ ಸುಮಾರಿಗೆ ಯಾರೊ ಇಬ್ಬರು ವ್ಯಕ್ತಿಗಳು ಕಾವಿವೇಶದಲ್ಲಿ  ಊರಲ್ಲಿ ಬಂದು ತಿರುಗಾಡಿ ಮದ್ಯಾನ 2-00 ಗಂಟೆ ಸುಮಾರಿಗೆ ನಮ್ಮುರ ಹಿಂದುಗಡೆ ಇರುವ ಲಕ್ಷ್ಮಿದೇವರ ಗುಡಿಯ ಹತ್ತಿರ ಕುಳಿತಿದ್ದು ಇವರು ಅಲ್ಲಿಂದ ಹೊದ ಮೇಲೆ ಸದರಿ ಗುಡಿ ಇದ್ದ ಹೊಲದವರ ಮಗಳಾದ ಕು. ಲಕ್ಷ್ಮಿ ತಂ/ ಕಿಷ್ಟಪ್ಪಾ ಜೋಗಿ ಇವಳು ಗುಡಿಯ ಬಾಗಿಲು ತರೆದಿದೆ ಅಂತಾ ಮುಚ್ಚಲು ಹೊದಾಗ ಗುಡಿಯಲ್ಲಿ ಇದ್ದ ಲಕ್ಷ್ಮಿ ದೇವರ ಮುರ್ತಿ ಕಾಣಿಸದಿದ್ದರಿಂದ ಇವಳು ಒಡುತ್ತಾ ಬಂದು ಊರಲ್ಲಿ ಜನರಿಗೆ ತಿಳಿಸಿದ್ದು ಇರುತ್ತದೆ. ಅಂತಾ ತಿಳಿಸಿದರು  ನಾವು ಊರಿನ ಜನರು ಕೂಡಿ ನಮ್ಮುರ ಸೂತ್ತ ಮುತ್ತ ತಿರುಗಾಡಿ ಸಾದು ವೇಶದಾರಿಗಳಿಗೆ ಹುಡುಕಾಡಿದ್ದು ಅವರು ನಮಗೆ ಸಿಕ್ಕಿರುವದಿಲ್ಲಾ. ನಮ್ಮುರ ಲಕ್ಷ್ಮಿದೇವರ ಗುಡಿಯಲ್ಲಿ ಹಿತ್ತಳೆಯ ಕುದರೆಯ ಮೆಲೆ ಕುಡಿಸಿದ್ದ ಹಿತ್ತಾಳೆಯ ಲಕ್ಷ್ಮಿ ದೇವರ ಮುರ್ತಿ ಸುಮಾರು 3 ಅಡಿ ಎತ್ತರವಿದ್ದು ಇದರ ತೂಕ ಸುಮಾರು 30 ಕೆ.ಜಿ ಇರಬಹುದು . ಈ ಮುರ್ತಿಯ ಅಕಿ; 24,000/- ರೂ ಇದ್ದು ಸದರಿ ಹಿತ್ತಾಳೆಯ ಲಕ್ಷ್ಮಿ ದೇವರ ಮುರ್ತಿಯನ್ನು ಯಾರೋ ಇಬ್ಬರು ಸಾದುವೇಶಧಾರಿಗಳು ಇಂದು ಮದ್ಯಾನ 2-30 ಗಂಟೆ ಸುಮಾರಿಗೆ ಪೂಜೆ ಮಾಡುವ ನೇಪದಲ್ಲಿ ಗುಡಿಯ ಕೀಲಿ ಮುರಿದು  ಲಕ್ಷ್ಮಿ ದೇವರ ಮುರ್ತಿ ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ ಅಂತಾ ಶ್ರೀ ರಾಮುಲು ತಂ/ಹಣಮಂತ ಗೋಲ್ಲಾ ಸಾ|| ಕೋನಾಪೂರ ಗ್ರಾಮ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

08 July 2015

Kalaburagi District Reported Crimes

ಅಪಘಾತ ಪ್ರಕರಣ :
ಸಂಚಾರಿ ಠಾಣೆ : ದಿನಾಂಕ: 07/07/2015  ರಂದು ರಾತ್ರಿ 10=00 ಗಂಟೆ ಸುಮಾರಿಗೆ ಆರ್.ಟಿ.ಓ ಕ್ರಾಸ್ ದಿಂದ ಸೇಡಂ ರಿಂಗರೋಡ ಮಧ್ಯದಲ್ಲಿ ಬರುವ ಸುಷ್ಮಾ ವೈನ್ಸ ಶಾಪ ಎದುರಿನ ರೋಡ ಮೇಲೆ ಒಬ್ಬ ಅಪರಿಚಿತ ಮನುಷ್ನ ಅಂದಾಜು ವಯಾ: 30 ರಿಂದ 35 ವರ್ಷ ಇತನು ನಡೆದುಕೊಂಡು ರೋಡ ದಾಟುತ್ತಿದ್ದಾಗ ಆರ್.ಟಿ.ಓ ಕ್ರಾಸ್ ರೋಡ ಕಡೆಯಿಂದ ಆರೋಪಿ ನಾಗರಾಜ ಇತನು ತನ್ನ ಮೋ/ಸೈಕಲ್ ನಂ: ಕೆಎ 32 ಎಲ್ 3896 ನೆದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಅಪರಚಿತ ಮನುಷ್ಯನಿಗೆ ಡಿಕ್ಕಿ ಪಡಿಸಿ ಅಪಘಾತಮಾಡಿ ತಲೆಗೆ ಭಾರಿ ಗಾಯಗೊಳಿಸಿ ಮೋ/ಸೈಕಲ್ ಸ್ಥಳದಲ್ಲೆ ಬಿಟ್ಟು ಸವಾರ ಹೊರಟು ಹೋಗಿದ್ದು. ಅಪರಿಚಿತ ಮನುಷ್ಯನು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ಇಂದು ದಿನಾಂಕ: 08/08/2015 ರಂದು ಬೆಳಿಗೆ 6=10 ಗಂಟೆಗೆ ಮೃತ ಪಟ್ಟಿರುತ್ತಾನೆ ಅಂತಾ  ಶ್ರೀ ರಾಜಶೇಖರ  ತಂದೆ ಶಿವಶರಣಪ್ಪಾ ಪಾಟೀಲ  ಸಾ: ಗುಬ್ಬಿ ಕಾಲೋನಿ ಅಂಬಾ ಬಾಯಿ ಗುಡಿ ಹತ್ತಿರ ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.