POLICE BHAVAN KALABURAGI

POLICE BHAVAN KALABURAGI

06 May 2015

Kalaburagi District Reported Crimes

ಮಟಕಾ ಜೂಜುಕೋರರ ಬಂಧನ :
ಸ್ಟೇಷನ ಬಜಾರ ಪೊಲೀಸ್ ಠಾಣೆ: ದಿನಾಂಕ 04/05/2015 ರಂದು ಸ್ಟೇಷನ ಬಜಾರ ಠಾಣೆಯ ಶ್ರೀ ಅಖಂಡಪ್ಪಾ ಎ.ಎಸ್.ಐ ರವರು ಠಾಣಾ ವ್ಯಾಪ್ತಿಯ ಪಿ&ಟಿ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ಬರೆದುಕೊಳ್ಳತ್ತಿರುವ ಬಗ್ಗೆ ಖಚಿತ ಬಾತ್ಮಿ ಪಡೆದು ಪಂಚರ ಸಮಕ್ಷಮ ಸಿಬ್ಬಂದಿಯವರಾದ ರಾಜಕುಮಾರ ಸಿ.ಪಿ.ಸಿ 1100, ಶಿವಾನಂದ ಸಿ.ಪಿ.ಸಿ 1240, ಚನ್ನಮಲ್ಲಪ್ಪಾ ಸಿ.ಪಿ.ಸಿ 241 ರವರೊಂದಿಗೆ ಪಿ&ಟಿ ಕ್ರಾಸ್ ಹತ್ತಿರ ರಸ್ತೆಯ ಪಕ್ಕದಲ್ಲಿ ಹೋಗಿ ಬರುವ ಸಾರ್ವಜನಿಕರಿಂದ 1/- ರೂ ಗೆ 80/-ರೂ ಕೊಡುವುದಾಗಿ ಹೇಳಿ ಅಂಕಿ ಸಂಖ್ಯೆ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ಅನಿಲ ತಂದೆ ನಿಲಕಂಠ ಭಾಸಗಿ ಸಾಃ ಪಿ&ಟಿ ಕಾಲೋನಿ ಕಲಬುರಗಿ ಈತನನ್ನು ದಸ್ತಗೀರ ಮಾಡಿ ಆತನಿಂದ ನಗದು ಹಣ 340/- ರೂ ಮತ್ತು ಒಂದು ಬಾಲ ಪೆನ್ನು ಅ.ಕಿ 00 ಹಾಗು ಒಂದು ಮಟಕಾ ಬರೆದ ಚೀಟಿ ಅ.ಕಿ 00 ಜಪ್ತಿ ಮಾಡಿಕೊಂಡು ಆತನ ವಿರುದ್ದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ಸ್ಟೇಷನ ಬಜಾರ ಪೊಲೀಸ್ ಠಾಣೆ: ದಿನಾಂಕ 04/05/2015 ರಂದು ಸ್ಟೇಷನ ಬಜಾರ ಠಾಣೆಯ ಶ್ರೀ ಅಖಂಡಪ್ಪಾ ಎ.ಎಸ್.ಐ ರವರು ಠಾಣಾ ವ್ಯಾಪ್ತಿಯ ಹಳೇ ಜೇವರ್ಗಿ ರಸ್ತೆಯ ಪೆಟ್ರೋಲ ಪಂಪ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ಬರೆದುಕೊಳ್ಳತ್ತಿರುವ ಬಗ್ಗೆ ಖಚಿತ ಬಾತ್ಮಿ ಪಡೆದು ಪಂಚರ ಸಮಕ್ಷಮ ಸಿಬ್ಬಂದಿಯವರಾದ ರಾಜಕುಮಾರ ಸಿ.ಪಿ.ಸಿ 1100, ಶಿವಾನಂದ ಸಿ.ಪಿ.ಸಿ 1240, ಚನ್ನಮಲ್ಲಪ್ಪಾ ಸಿ.ಪಿ.ಸಿ 241 ರವರೊಂದಿಗೆ ದಾಲಿ ಮಾಡಿ ಸಾರ್ವಜನಿಕರಿಂದ 1/- ರೂ ಗೆ 80/-ರೂ ಕೊಡುವುದಾಗಿ ಹೇಳಿ ಅಂಕಿ ಸಂಖ್ಯೆ ಮಟಕಾ ಚೀಟಿ ಬರೆದುಕೊಡುಳ್ಳುತ್ತಿದ್ದ ಹಣಮಂತ ತಂದೆ ಖತಲಸಾಬ ಛತ್ರಿ ಸಾಃ ಕೊಠಾರಿ ಭವನ ಹತ್ತಿರ ಕಲಬುರಗಿ ಈತನನ್ನು ದಸ್ತಗೀರ ಮಾಡಿ ಆತನಿಂದ ನಗದು ಹಣ 1270/- ರೂ ಮತ್ತು ಒಂದು ಬಾಲ ಪೆನ್ನು ಅ.ಕಿ 00 ಹಾಗು ಒಂದು ಮಟಕಾ ಬರೆದ ಚೀಟಿ ಅ.ಕಿ 00 ಜಪ್ತಿ ಮಾಡಿಕೊಂಡು ಆತನ ವಿರುದ್ದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

04 May 2015

KALABURAGI DISTRICT REPORTED CRIMES

ಕಳವು ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ: ದಿ: ೦3.05.2015 ರಂದು ಸುಖದೇವ ತಂದೆ ಸತ್ತುಬಾ ಕೊಡ್ಲೇಕರ್ ಸಾ: ಡ್ಯಾಬೇರಿ ಜಿ:ವಿಜಯಪುರ ಠಾಣೆಗೆ ಹಾಜರಾಗಿ ತಾನು ಜೇವರ್ಗಿ ತಾಲ್ಲೂಕಿನ ರೇವನೂರ ಸಿಮಾಂತರದ ಹೊಲಗಳಲ್ಲಿ ನಮ್ಮ ಕುರಿಗಳನ್ನು ಮೇಯಿಸಿ ವಿಜಯಪುರ ಜೇವರಗಿ ರೋಡಿನ ಪಕ್ಕದ ಹೆಲಿಕ್ಯಾಕ್ಟರ್ ಇಳಿಯು ಜಾಗದ ಮುಂದಿನ ಹೊಲದಲ್ಲಿ ನಾವು ನಿಲ್ಲಿಸಿದ್ದ ನಮ್ಮ ಕುರಿಗಳಲ್ಲಿ ಯಾರೋ ಅಪರಿಚಿತ ಕಳ್ಳರು 3 ಆಡುಗಳು ಮತ್ತು 17 ಕುರಿಗಳು ಒಟ್ಟು ಅ.ಕಿ.41.000/- ರೂ ನೇದ್ದವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಸದರಿ ಕಳ್ಳತನವಾದ ಕುರಿಗಳನ್ನು ಮತ್ತು ಕಳ್ಳರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ :
ಸೇಡಂ ಪೊಲೀಸ್ ಠಾಣೆ: ದಿ:03-05-2015 ನಾಚವಾರ ಗ್ರಾಮದ ‘ಬೋವಿ ಹಣಮಂತ’ ಅನ್ನುವವರು ತೀರಿಕೊಂಡಿದ್ದರಿಂದ, ನಾಚವಾರ ಗ್ರಾಮಕ್ಕೆ ದ್ಯಾವಣ್ಣ ತಳವಾರ ಇವರ ಟ್ರಾಕ್ಟರ್ ನಂ-KA-32-TA-2435 ಅದರ ಟ್ರ್ಯಾಲಿ ನಂ-KA-32-TA-2439 ನೇದ್ದರಲ್ಲಿ ಹೋಗಿ ಮರಳಿ ಬರುವಾಗ, ಟ್ರಾಕ್ಟರ್ ಚಾಲಕ ಸಿದ್ದಪ್ಪ ತಂದೆ ವಿಠಲ್ ಹಡಪದ್ ಸಾ:ಗೌಡನಳ್ಳಿ ಇತನು ಟ್ರಾಕ್ಟರನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ನಾಚವಾರ ಕ್ರಾಸನ ಬಲ ತಿರುವಿನಲ್ಲಿ ಕಟ್ ಹೊಡೆದಾಗ ಟ್ರಾಕ್ಟರ್ ಟ್ರ್ಯಾಲಿ ಪಲ್ಟಿಯಾಗಿದ್ದರಿಂದ, ಟ್ರಾಕ್ಟರ್ ಚಾಲಕ 1.ಸಿದ್ದಪ್ಪ ತಂದೆ ವಿಠಲ್ ಹಡಪದ್, 2.ದೇವಿಂದ್ರಪ್ಪ ತಂದೆ ಸಿದ್ರಾಮಪ್ಪ ಬೆಳಗೇರಿ, 3.ಭೀಮರಾಯ ತಂದೆ ಮೊನಪ್ಪ ಬಡಿಗೇರ, 4.ಶಿವರಾಯ ತಂದೆ ರಾಮಯ್ಯ ಕಲಾಲ, 5.ದೇವಪ್ಪ ತಂದೆ ದ್ಯಾವಣ್ಣ ಜುಟಲಾರ ಎಲ್ಲರೂ ಸಾ:ಗೌಡನಳ್ಳಿ ಗ್ರಾಮದವರು ಇವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಅಲ್ಲದೇ ಟ್ರಾಕ್ಟರ್ ದಲ್ಲಿ ಕುಳತಿದ್ದ 18 ಜನರಿಗೆ ಸಾದಾ ಹಾಗೂ ಭಾರಿ ಗುಪ್ತ ಮತ್ತು ರಕ್ತಗಾಯಗಳಾದ ಬಗ್ಗೆ ಭೀಮರೆಡ್ಡಿ ತಂದೆ ಮಲರೆಡ್ಡಿ ಮೂನೂರ, ಸಾ:ಗೌಡನಳ್ಳಿ ಕೊಟ್ಟ ಹೇಳಿಕೆ ಸಾರಂಶದ ಮೇಲಿಂಧ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

02 May 2015

Kalaburagi Disrtict Reported Crimes

ಪತ್ರಿಕಾ ಪ್ರಕಟಣೆ

 ಮನೆಗಳ್ಳತನ ಮಾಡುವ ಅಂಬರೀಶ @ ಅಂಬ್ರಾ ತಂದೆ ನಾಗಪ್ಪ ಬೋವಿ ಆರೋಪಿಗೆ 3 ವರ್ಷ ಶಿಕ್ಷೆ
      ದಿನಾಂಕ 03-08-12 ರಂದು ಕಲಬುರಗಿ  ನಗರದ ವಡ್ಡರಗಲ್ಲಿಯಲ್ಲಿರುವ ಶಿವುಕುಮಾರ ಲಸ್ಕರ ಎನ್ನುವವರ ಮನೆಯಲ್ಲಿದ್ದ ಒಟ್ಟು 60,000/- ರೂ ಮೌಲ್ಯದ ಚಿನ್ನಾಭರಣ ಮೊಬಾಯಲ್ ಕಳ್ಳತನ ಆಗಿರುವ  ಬಗ್ಗೆ ಅಶೋಕ ನಗರ ಪೊಲೀಸ ಠಾಣೆ ಗುನ್ನೆ ನಂ 64/12 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದ್ದು ಈ ಪ್ರಕರಣದ ತನಿಖೆ ಕೈಕೊಂಡ ಅಂದಿನ ಎ.ಎಸ್.ಪಿ  ಭೂಷಣ ಬೋರ್ಸೆ, ಪಿಐ ಟಿ.ಹೆಚ್. ಕರಿಕಲ್ ರವರ ನೇತ್ರತ್ವದಲ್ಲಿ ಸಿಬ್ಬಂದಿ ಸುರೇಶ, ಶಿವಪ್ರಕಾಶ, ರಪೀಕ ರವರು ಮನೆ ಕಳ್ಳತನ ಪ್ರಕರಣವನ್ನು ಬೇದಿಸಿ ಆರೋಪಿ ಅಂಬರೀಶ @ ಅಂಬ್ರಾ ತಂದೆ ನಾಗಪ್ಪಾ ಭೋವಿ ಸಾ: ಭೋವಿಗಲ್ಲಿ ಸರಾಫ ಬಜಾರ ಕಲಬುರಗಿ  ಇತನಿಗೆ ದಸ್ತಗಿರಿ ಮಾಡಿ ಕಳುವಾದ ಮಾಲನ್ನು ವಶಪಡಿಸಿಕೊಂಡು ಎಲ್ಲಾ ಹಂತದ ತನಿಖೆ ಪೂರ್ಣಗೊಳಿಸಿ ಆರೋಪಿತನ ವಿರುದ್ದ ದಿ: 20-01-13 ರಂದು ದೊಷಾರೊಪಣೆ ಪತ್ರ ಸಲ್ಲಿಸಿದ್ದು.  ಮಾನ್ಯ 5 ನೇ ಅಪರ ಜೆ.ಎಂ.ಎಪ್.ಸಿ ನ್ಯಾಯಾಲಯ ಕಲಬುರಗಿ ದಲ್ಲಿ ನ್ಯಾಯಾಲಯದ ವಿಚಾರಣೆ ನಡೆದಿದ್ದು.  ಸರಕಾರದ ಪರವಾಗಿ ಸರಕಾರಿ ಅಬಿಯೋಜಕರಾದ ಶರಣೇಗೌಡರವರು ವಾದಮಂಡಿಸಿದ್ದು.  ದಿನಾಂಕ 27-04-15 ರಂದು 5 ನೇ ಜೆ.ಎಂ.ಎಪ್.ಸಿ ನ್ಯಾಯಾಲಯದ ನ್ಯಾಯಾಧಿಶರಾದ ಕು|| ಸೌಭಾಗ್ಯ ರವರು ಆರೋಪಿ ಅಂಬರೀಶ @ ಅಂಬ್ರಾ ಇತನಿಗೆ 3 ವರ್ಷ ಕಠೀಣ ಶಿಕ್ಷೆ ಮತ್ತು 2000/- ರೂ ದಂಡವನ್ನು ವಿಧಿಸಿರುತ್ತಾರೆ. 
                                                         
    ಕಲಬುರಗಿ  ಬಸ್ಸ ಸ್ಟಾಂಡದಲ್ಲಿ ಹುಸಿ ಬಾಂಬ್ ಸ್ಫೋಟದ ಬೆದರಿಕೆ ಪತ್ರ ಬರೆದ ಆರೋಪಿಗೆ ಶಿಕ್ಷೆ
    ದಿನಾಂಕ 6-05-2012 ರಂದು ಕಲಬುರಗಿ  ಕೇಂದ್ರ ಬಸ್ಸ ನಿಲ್ದಾಣದಲ್ಲಿ ಅನಾಮದೇಯ ಬಾಂಬ್ ಸ್ಪೋಟದ ಬೆದರಿಕೆ ಪತ್ರ ಸಿಕ್ಕಿದ್ದು ಅದರಲ್ಲಿ ಕಲಬುರಗಿ  ಹೈದ್ರಾಬಾದ ಬೆಂಗಳೂರು ನಗರದ ಬಸ್ಸ ಸ್ಟಾಂಡ ರೇಲ್ವೆ ನಿಲ್ದಾಣಗಳಲ್ಲಿ ಬಾಂಬ್ ಸ್ಪೋಟಗೊಳ್ಳಿಲಿದೆ ಎಂದು ಅನಾಮದೇಯ ಬೆದರಿಕೆ ಪತ್ರ ಸಿಕ್ಕಿದ್ದು.  ಈ ಬಗ್ಗೆ ಅಶೋಕ ನಗರ ಪೊಲೀಸ ಠಾಣೆ ಗುನ್ನೆ ನಂ 39/2012 ಕಲಂ 507 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದ್ದು.   ಈ ಬಗ್ಗೆ ಅಂದಿನ ಎ.ಎಸ್.ಪಿ  ಭೂಷಣ ಬೋರ್ಸೆ, ಪಿಐ ಟಿ.ಹೆಚ್. ಕರಿಕಲ್ ರವರ ನೇತ್ರತ್ವದಲ್ಲಿ ಸಿಬ್ಬಂದಿ ಸುರೇಶ ರವರು ಪ್ರಕರಣದ ಗಂಬೀರತೆಯಿಂದ ಪರಿಗಣಿಸಿ ಪೊಲೀಸ ತಂತ್ರಂಶಾದ ಮುಖಾಂತರ ಬಾಂಬ್ ಸ್ಪೋಟ ಬೆದರಿಕೆ ಪತ್ರ ಇಟ್ಟಿದ್ದ ಆರೋಪಿ ಶ್ರವಣಕುಮಾರ ತಂದೆ ಪಂಡಿತ ಸಾ: ಗೌಸ ನಗರ ತಾರಪೈಲ ಇತನಿಗೆ ಪತ್ತೆ ಹಚ್ಚಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ. ಆರೋಪಿತನ ವಿರುದ್ದ 12-03-2013 ರಂದು ಮಾನ್ಯ ನ್ಯಾಯಾಲಯಕ್ಕೆ ದೋಷಾರೊಪಣೆ ಪತ್ರ ಸಲ್ಲಿಸಿದ್ದು.  ಈ ಪ್ರಕರಣವು ಮಾನ್ಯ 5 ನೇ ಅಪರ ಜೆ.ಎಂ.ಎಪ.ಸಿ ನ್ಯಾಯಾಲಯ ಕಲಬುರಗಿದಲ್ಲಿ ವಿಚಾರಣೆ ನಡೆದು ಸರಕಾರಿ ವಕೀಲರಾದ ಶರಣೇಗೌಡರು ಸರಕಾರದ ಪರವಾಗಿ ವಾದಮಂಡಿಸಿದ್ದು, ದಿನಾಂಕ 28-04-2015 ರಂದು  5 ನೇ ಜೆ.ಎಂ.ಎಪ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಕು|| ಸೌಭಾಗ್ಯ ರವರು ಆರೋಪಿ ಶ್ರವಣಕುಮಾರ ತಂದೆ ಪಂಡಿತ ಇತನಿಗೆ 2 ವರ್ಷ ಕಠಿಣ ಶಿಕ್ಷೆ ವಿದಿಸಿರುತ್ತಾರೆ
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ ಠಾಣೆ: ದಿನಾಂಕ 01-05-2015 ರಂದು ಕುಮಾರಿ. ನಾಗೇಶ್ವರಿ ತಂದೆ ರತ್ನಾಕರ್ ಕದಮ ಸಾ: ಆನಂದ ನಗರ ಕಲಬುರಗಿ ರವರು ತಮ್ಮ ನೂವಾ ಮೋಟಾರ ಸೈಕಲ ನಂಬರ ಕೆಎ-32 ಎಲ್-9478 ನೇದ್ದರ ಮೇಲೆ ಲಾಹೋಟಿ ಕ್ರಾಸ ಮುಖಾಂತರ ಹೋಗುವಾಗ ಐವಾನ ಈ ಷಾಯಿ ಹತ್ತಿರ ಮೋ/ಸೈಕಲ ನಂಬರ ಕೆಎ-32 ಇಇ-2765 ರ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ನನ್ನ ಮೋ/ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿದರಿಂದ ನನ್ನ  ಬಲಗಾಲು ಪಾದಕ್ಕೆ ರಕ್ತಗಾಯ, ಬಲಗಾಲು ಮೊಳಕಾಲಿಗೆ ತರಚಿದ ಗಾಯ ಹಾಗು ಗುಪ್ತಪೆಟ್ಟುಗೊಳಿಸಿ ತನ್ನ ಮೋ/ಸೈಕಲ ಅಲ್ಲೆ ಬಿಟ್ಟು ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ  ತನಿಖೆ ಕೈಕೊಳ್ಳಲಾಗಿದೆ.
ಹೆಚ್ಚುವರಿ ಸಂಚಾರಿ ಪೊಲೀಸ ಠಾಣೆ :ದಿನಾಂಕ 01-05-2015 ರಂದು ಶ್ರೀ ಗುರುನಾಥರಾವ ತಂದೆ ಭಿಮಸೇನರಾವ ಪಟವಾರಿ ಇವರು ಠಾಣೆಗೆ ಹಾಜರಾಗಿ ದಿನಾಂಕ ತಾನು ಜಿಲ್ಲಾ ನ್ಯಾಯಾಲಯದಿಂದ ಎಸ್.ವಿ.ಪಿ. ಸರ್ಕಲ ಹತ್ತಿರವಿರುವ ಕೋಮಲ ಹೋಟಲದಲ್ಲಿ ಚಹಾ ಕುಡಿಯುವ ಸಂಬಂದ ನಡೆದುಕೊಂಡು ಹೋಗುತ್ತಿರುವಾಗ ಎಸ್.ವಿ.ಪಿ. ಸರ್ಕಲ ಹತ್ತಿರ ಕೇಂದ್ರ ಬಸ್ ನಿಲ್ದಾಣ ಕಡೆಯಿಂದ ಅಟೋರಿಕ್ಷಾ ನಂಬರ ಕೆಎ-32 7348 ರ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ನನಗೆ ಅಪಘಾತ ಮಾಡಿ ತನ್ನ ಅಟೋರಿಕ್ಷಾ ವಾಹನವನ್ನು ನಿಲ್ಲಿಸಿದೆ ಓಡಿ ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ  ತನಿಖೆ ಕೈಕೊಳ್ಳಲಾಗಿದೆ.